Headlines

SRH vs RCB: ಸನ್‌ರೈಸರ್ಸ್ ವಿರುದ್ಧ ಸೋತರೂ ಅಗ್ರಸ್ಥಾನದಲ್ಲೇ ಉಳಿದ ಆರ್​ಸಿಬಿ

ಐಪಿಎಲ್ 2026 ರ 67ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಿದ್ದವು. ಪಾಯಿಂಟ್ ಪಟ್ಟಿಯಲ್ಲಿ ಅಗ್ರ 2ರಲ್ಲಿ ಸ್ಥಾನ ಪಡೆಯಲು ಈ ಪಂದ್ಯದಲ್ಲಿ ಗೆಲ್ಲುವುದು ಉಭಯ ತಂಡಗಳಿಗೆ ಅತ್ಯಂತ ಮುಖ್ಯವಾಗಿತ್ತು. ಅದರಲ್ಲೂ ಸನ್‌ರೈಸರ್ಸ್ ಅಗ್ರಸ್ಥಾನಕ್ಕೇರಬೇಕೆಂದರೆ ಆರ್​ಸಿಬಿ ವಿರುದ್ಧ ಭಾರೀ ಅಂತರದ ಗೆಲುವು ದಾಖಲಿಸಬೇಕಿತ್ತು. ಆದರೆ ಈ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಗೆಲುವು ಸಾಧಿಸಿತ್ತಾದರೂ ಅಗ್ರ 2ರಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಸನ್‌ರೈಸರ್ಸ್ ತಂಡ…

Read More

ಚಂದನವನದಲ್ಲಿ ಹತ್ತು ಹಲವು ಸಮಸ್ಯೆ: ಪರಿಹಾರ ಹುಡುಕಲು ಮುಂದಾದ ವಾಣಿಜ್ಯ ಮಂಡಳಿ – Kannada News | KFCC President Jayamala announces Chandanavana Andu Indu Mundu Seminar to solve Kannada Cinema issues

ಕನ್ನಡ ಚಿತ್ರರಂಗಕ್ಕೆ (Kannada Film Industry) ಸಾಕಷ್ಟು ಸಮಸ್ಯೆಗಳು ಎದುರಾಗಿವೆ. ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಅನಿವಾರ್ಯತೆ ಇದೆ. ಅದಕ್ಕಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (KFCC) ವತಿಯಿಂದ ಮೇ 24ರಂದು ‘ಚಂದನವನ ಅಂದು ಇಂದು ಮುಂದು’ ಎಂಬ ವಿಚಾರ ಸಂಕಿರಣವನ್ನು ಕಲಾವಿದರ ಸಂಘದಲ್ಲಿ ಹಮ್ಮಿಕೊಂಡಿದೆ. ಆ ಬಗ್ಗೆ ಮಂಡಳಿ ಅಧ್ಯಕ್ಷೆ ಜಯಮಾಲಾ (Jayamala) ಅವರು ಮಾಹಿತಿ ನೀಡಿದ್ದಾರೆ. ‘ಸಬ್ಸಿಡಿ, ಪ್ರಶಸ್ತಿ, ಪೈರಸಿ, ಒಟಿಟಿ, ಕಿರುತೆರೆ ಹಕ್ಕು ಮಾರಾಟ, ಚಿತ್ರಮಂದಿರಗಳು ಸೇರಿದಂತೆ ಅನೇಕ ವಿಚಾರಗಳಿಗೆ ಸಂಬಂಧಿಸಿದಂತೆ ಸಮಸ್ಯೆಗಳು ಇವೆ….

Read More

ಅಧಿಕ ಮಾಸದ ಎಫೆಕ್ಟ್: ಶುಭ ಸಮಾರಂಭಗಳಿಗೆ ಬ್ರೇಕ್; ಚಿಕ್ಕಬಳ್ಳಾಪುರದಲ್ಲಿ ತರಕಾರಿ ಬೆಲೆ ದಿಢೀರ್ ಕುಸಿತ – Kannada News | Adhika Masa Impact: Vegetable Prices Crash, Farmers Suffer Losses

ಎಪಿಎಂಸಿ ತರಕಾರಿ ಮಾರುಕಟ್ಟೆImage Credit source: tv9 kannada ಚಿಕ್ಕಬಳ್ಳಾಪುರ, ಮೇ 22: ಅಧಿಕ ಮಾಸ (adhika masa) ಹಿನ್ನೆಲೆ ಮದುವೆ, ಮುಂಜಿ ಸೇರಿದಂತೆ ಶುಭ ಸಮಾರಂಭಗಳು ಕಡಿಮೆಯಾಗಿವೆ. ಇದರಿಂದ ತರಕಾರಿಗಳಿಗೆ ಬೇಡಿಕೆ ಕಡಿಮೆಯಾಗಿದೆ. ಹೀಗಾಗಿ ಚಿಕ್ಕಬಳ್ಳಾಪುರದ (chikkaballapur) ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ಬಹುತೇಕ ತರಕಾರಿಗಳ ಬೆಲೆ ಕುಸಿದಿದೆ (Vegetable Prices Down). ಯಾಕಾದರೂ ಈ ಅಧಿಕ ಮಾಸ ಬಂತೋ ಎಂದು ರೈತರು ಕಣ್ಣೀರಿಡುವಂತಾಗಿದೆ. ಮುಖ್ಯಾಂಶಗಳು ಅಧಿಕ ಮಾಸದ ಪರಿಣಾಮ ಚಿಕ್ಕಬಳ್ಳಾಪುರ ಮಾರುಕಟ್ಟೆ ಮೇಲೆ ಪ್ರಭಾವ ತರಕಾರಿ…

Read More

ಹಾವು ಕಚ್ಚಿದರೆ ಜೀವ ಉಳಿಸಲು ಮೊದಲು ಏನು ಮಾಡಬೇಕು? ಏನು ಮಾಡಬಾರದು? – Kannada News | What is the first thing to do to save a life if a snake bites? What should not be done?

ನವದೆಹಲಿ, ಮೇ 22: ನಮ್ಮ ದೇಶದಲ್ಲಿ, ವಿಶೇಷವಾಗಿ ಬೇಸಿಗೆ ಮತ್ತು ಮಳೆಗಾಲದಲ್ಲಿ ಹಾವು ಕಡಿತದ (Snake Bite) ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತವೆ. ಹಾವುಗಳ ವಿಷಯಕ್ಕೆ ಬಂದರೆ, ಹಲವರಿಗೆ ಮೊದಲು ನೆನಪಿಗೆ ಬರುವುದು ವಿಪರೀತ ಭಯ. ಆದರೆ, ಎಲ್ಲಾ ಹಾವುಗಳು ವಿಷಕಾರಿಯಲ್ಲ. ಹೆಚ್ಚಿನ ಜನರು ಅರಿವಿನ ಕೊರತೆ ಮತ್ತು ಸರಿಯಾದ ಸಮಯದಲ್ಲಿ ಪ್ರಥಮ ಚಿಕಿತ್ಸೆ ಪಡೆಯದ ಕಾರಣ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಾರೆ. ಹಾವು ಕಚ್ಚಿದರೆ ತಕ್ಷಣ ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಮತ್ತು ಏನು ಮಾಡಬಾರದು? ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕು….

Read More

ರೋಜ್​ಗಾರ್ ಮೇಳದಡಿ ನಾಳೆ ಪ್ರಧಾನಿ ಮೋದಿಯಿಂದ 51,000ಕ್ಕೂ ಅಧಿಕ ಯುವಕರಿಗೆ ನೇಮಕಾತಿ ದಾಖಲೆ ಹಸ್ತಾಂತರ – Kannada News | Under Rozgar Mela PM Modi To Virtually Distribute more than 51,000 Job Letters on May 23

ನವದೆಹಲಿ, ಮೇ 22: ದೇಶಾದ್ಯಂತ ಯುವಕರಿಗೆ ಉದ್ಯೋಗಾವಕಾಶಗಳನ್ನು ಒದಗಿಸಲು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ರೋಜ್‌ಗಾರ್ ಮೇಳ’ದ (Rozgar Mela) ಭಾಗವಾಗಿ, ಪ್ರಧಾನಿ ನರೇಂದ್ರ ಮೋದಿ (PM Modi) ಮೇ 23ರಂದು ದೇಶಾದ್ಯಂತ ಹೊಸದಾಗಿ ಆಯ್ಕೆಯಾದ 51,000ಕ್ಕೂ ಹೆಚ್ಚು ಯುವಕರಿಗೆ ಸರ್ಕಾರಿ ಉದ್ಯೋಗ ನೇಮಕಾತಿ ದಾಖಲೆಗಳನ್ನು ವಿತರಿಸಲಿದ್ದಾರೆ. ಈ ಕಾರ್ಯಕ್ರಮವು ಬೆಳಿಗ್ಗೆ 11 ಗಂಟೆಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ನಡೆಯಲಿದೆ. ಈ ಸಂದರ್ಭದಲ್ಲಿ ಪ್ರಧಾನಿ ಯುವಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದುವರೆಗೂ ದೇಶಾದ್ಯಂತ ಆಯೋಜಿಸಲಾದ 18 ರೋಜ್‌ಗಾರ್ ಮೇಳಗಳ ಮೂಲಕ…

Read More

ಕಾಕ್ರೋಚ್‌ ಪಕ್ಷದ ಸಂಸ್ಥಾಪಕ ಯಾರು? ಏನಿದು CJP? ಅಮೆರಿಕದಲ್ಲಿದ್ದು ಭಾರತದ ಬಗ್ಗೆ ಧ್ವನಿ ಎತ್ತಿದ್ದೇಕೆ?

ಬೆಂಗಳೂರು, ಮೇ 22): ಕಾಕ್ರೋಚ್‌ ಜನತಾ ಪಾರ್ಟಿ (cockroach Janata party) ಸಾಮಾಜಿಕ ಜಾಲತಾಣದಲ್ಲಿ ಆರಂಭವಾದ ಒಂದು ವಿಡಂಬನಾತ್ಮಕ ಅಭಿಯಾನ. ಇದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರತದ ಅತ್ಯಂತ ಶಕ್ತಿಶಾಲಿ ರಾಜಕೀಯ ಪಕ್ಷಗಳನ್ನು ಹಿಂದಿಕ್ಕುತ್ತಿದೆ. ಅಭಿಜೀತ್‌ ದಿಪ್ಕೆ (abhijeet dipke)  ಎಂಬ ಯುವಕ ಆರಂಭಿಸಿದ ಈ ಅಭಿಯಾನ ಈಗ Gen-Z ಸಂಘಟನೆಯಾಗಿ ಬದಲಾಗುತ್ತಿದೆ. ಭಾರತದ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌ ಅವರು ಭಾರತದ ಯುವಕರ ಬಗ್ಗೆ ಹೇಳಿದ್ದಾರೆ ಎನ್ನಲಾದ ಹೇಳಿಕೆಗೆ ಪ್ರತಿಯಾಗಿ, ಆನ್‌ಲೈನ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಲು ಮತ್ತು…

Read More

ಕೋರ್ಟ್​ ಮುಂದೆ ಶರಣಾದ ತ್ವಿಶಾ ಶರ್ಮಾ ಗಂಡನ ಕಾನೂನು ಲೈಸೆನ್ಸ್ ರದ್ದು

ಜಬಲ್ಪುರ, ಮೇ 22: ರೂಪದರ್ಶಿ ಹಾಗೂ ನಟಿ ತ್ವಿಶಾ ಶರ್ಮಾ (Twisha Sharma) ಅವರ ಸಾವಿನ ಬಳಿಕ ಅವರ ಗಂಡ ಸಮರ್ಥ್ ಸಿಂಗ್ ತಲೆಮರೆಸಿಕೊಂಡಿದ್ದರು. 10 ದಿನಗಳ ಬಳಿಕ ಇಂದು ಅವರು ಮಧ್ಯಪ್ರದೇಶದ ಜಿಲ್ಲಾ ನ್ಯಾಯಾಲಯದ ಮುಂದೆ ಶರಣಾಗಿದ್ದಾರೆ. ಅವರನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಹಾಗೇ, ಅವರ ಬಾರ್ ಲೈಸೆನ್ಸ್ ಅನ್ನು ರದ್ದುಗೊಳಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯದ ಮುಂದೆ ಶರಣಾಗಲು ಅನುಮತಿ ಕೋರಿ ಸಮರ್ಥ್ ಸಿಂಗ್ ದೆಹಲಿ ಹೈಕೋರ್ಟ್ ಅನ್ನು ಸಂಪರ್ಕಿಸಿದ್ದರು. ಕಳೆದ ವರ್ಷ…

Read More

ರಾಜ್ಯ ರಾಜಕಾರಣದಲ್ಲಿ ಮತ್ತೆ ಹನಿಟ್ರ್ಯಾಪ್ ಸಂಚಲನ: ಕಾಂಗ್ರೆಸ್ ಶಾಸಕ, ಪುತ್ರನ ಆಡಿಯೋ ರಿಲೀಸ್ – Kannada News | Tumakuru JDS Leader Nagaraj Serious Allegation Against Congress MLA SR Srinivas and His son with Audio

JDS ಮುಖಂಡ ನಾಗರಾಜ್, ಶಾಸಕ ಎಸ್.ಆರ್.ಶ್ರೀನಿವಾಸ್Image Credit source: tv9 kannada ತುಮಕೂರು, ಮೇ 22: ಜಿಲ್ಲಾ ರಾಜಕೀಯದಲ್ಲಿ ಇದೀಗ ಹನಿಟ್ರ್ಯಾಪ್ ಆರೋಪದ ಮಾತು ಹೊಸ ಸಂಚಲನ ಸೃಷ್ಟಿಸಿದೆ. ಗುಬ್ಬಿ ಕಾಂಗ್ರೆಸ್ ಶಾಸಕ ಎಸ್​ಆರ್ ಶ್ರೀನಿವಾಸ್ (SR Srinivas) ಹಾಗೂ ಪುತ್ರ ದುಷ್ಯಂತ್ ವಿರುದ್ಧ ಜೆಡಿಎಸ್ (JDS) ಮುಖಂಡ ನಾಗರಾಜು ಗಂಭೀರ ಆರೋಪ ಮಾಡಿದ್ದಾರೆ. ತನ್ನ ಚಲನವಲನದ ಮೇಲೆ ಗೂಢಚಾರಿಕೆ ನಡೆಸಲಾಗುತ್ತಿದೆ ಎಂದು ಆರೋಪಿಸಿರುವ ಅವರು ಈ ಸಂಬಂಧ ಕೆಲ ಆಡಿಯೋ ಬಿಡುಗಡೆ ಕೂಡ ಮಾಡಿದ್ದಾರೆ. ಸದ್ಯ…

Read More

SRH vs RCB: 1500 ರನ್​ಗಳ ರಾಶಿ ಹಾಕಿದ ಸನ್‌ರೈಸರ್ಸ್ ತ್ರಿಮೂರ್ತಿಗಳು – Kannada News | SRH Batting Blitz: Sharma, Kishan, Klaasen Set IPL 500+ Run Record

ಪ್ರತಿ ಬಾರಿಯಂತೆ ಈ ಐಪಿಎಲ್​ನಲ್ಲಿಯೂ (IPL 2026) ಸನ್‌ರೈಸರ್ಸ್ ಹೈದರಾಬಾದ್ (SRH) ತಂಡದ ಬ್ಯಾಟಿಂಗ್ ಅಬ್ಬರದಿಂದ ಕೂಡಿದೆ. ತಂಡವು ಈಗಾಗಲೇ ಪ್ಲೇಆಫ್‌ಗೆ ಅರ್ಹತೆ ಪಡೆದಿದೆ. ಇದಕ್ಕೆ ಹೆಚ್ಚಿನ ಕಾರಣ ತಂಡದ ಮೂವರು ಆಟಗಾರರಾದ ಅಭಿಷೇಕ್ ಶರ್ಮಾ, ಇಶಾನ್ ಕಿಶನ್ ಮತ್ತು ಹೆನ್ರಿಕ್ ಕ್ಲಾಸೆನ್ ಅವರ ಅತ್ಯುತ್ತಮ ಫಾರ್ಮ್. ಈ ಸೀಸನ್​ನಲ್ಲಿ ಅಮೋಘ ಬ್ಯಾಟಿಂಗ್‌ ಪ್ರದರ್ಶಿಸಿರುವ ಈ ಜೋಡಿ ರನ್​ಗಳ ರಾಶಿ ಹಾಕಿದೆ. ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ತಮ್ಮ ಅಂತಿಮ ಲೀಗ್ ಪಂದ್ಯದಲ್ಲಿಯೂ ಸಹ, ಈ…

Read More

ಕರ್ನಾಟಕದಲ್ಲಿ ಎಬೋಲಾ ಭೀತಿ: ಮಾರ್ಗಸೂಚಿ ಬಿಡುಗಡೆ, ಬೆಂಗಳೂರಿಗೆ ಬರುವವರಿಗೆ 21 ದಿನ ಕ್ವಾರಂಟೈನ್ – Kannada News | Karnataka Health department guidelines: International Travelers note the latest advisory regarding Ebola Disease

ಬೆಂಗಳೂರು, (ಮೇ 22): ಆಫ್ರಿಕಾದಲ್ಲಿ ಎಬೋಲಾ ವೈರಸ್ (Ebola Disease) ಹರಡುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಆರೋಗ್ಯ ಇಲಾಖೆಯು (Karnataka Health department) ರಾಜ್ಯಾದ್ಯಂತ ಹೈ ಅಲರ್ಟ್ ಘೋಷಿಸಿದೆ. ಭಾರತದಲ್ಲಿ ಇದುವರೆಗೆ ಎಬೋಲಾ ಪ್ರಕರಣ ಕಂಡುಬಂದಿಲ್ಲವಾದರೂ ಕರ್ನಾಟಕದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೌದು…ಎಬೋಲಾ ವೈರಸ್ ಹರಡದಂತೆ ತಡೆಯಲು ರಾಜ್ಯ ಆರೋಗ್ಯ ಇಲಾಖೆ ಇಂದು (ಮೇ 22) ಮಾರ್ಗಸೂಚಿ (Ebola guidelines) ಪ್ರಕಟಿಸಿದ್ದು, ಎಬೋಲಾ ಪೀಡಿತ ದೇಶಗಳಿಂದ ಬೆಂಗಳೂರಿಗೆ ಬರುವಪ್ರಯಾಣಿಕರು ಕನಿಷ್ಠ 21 ದಿನಗಳ ಕಾಲ ಕ್ವಾರಂಟೈನ್ ಹಾಗೂ ರೋಗಲಕ್ಷಣ…

Read More