Headlines

ಎಣ್ಣೆ ಕೊಡಿಸಿಲ್ಲವೆಂದು ಮಚ್ಚು ಹಿಡಿದು ನಡುರಸ್ತೆಯಲ್ಲೇ ವ್ಯಕ್ತಿ ಪುಂಡಾಟ – Kannada News | Man Roams Middle of Road with Machete After Refuses to Give alcohol

ಬೆಂಗಳೂರು, ಜನವರಿ 17: ಪರಿಚಯಸ್ಥ ಎಣ್ಣೆ ಕೊಡಿಸಿಲ್ಲ ಎಂದು ಮಚ್ಚು ಹಿಡಿದು ವ್ಯಕ್ತಿ ಓರ್ವ ನಡುರಸ್ತೆಯಲ್ಲೇ ಪುಂಡಾಟ ಮೆರೆದಿರುವಂತಹ ಘಟನೆ ಬೆಂಗಳೂರು ಬಳಿಯ ಆನೇಕಲ್ ತಾಲೂಕಿನ ಗೌರೇನಹಳ್ಳಿಯಲ್ಲಿ ನಡೆದಿದೆ. ಗೌರೇನಾಹಳ್ಳಿ ಗ್ರಾಮದ ಬಸವರಾಜ್​​​​ ಎಂಬಾತ ಕುಡಿದ ಅಮಲಿನಲ್ಲಿ ಮಚ್ಚು ಹಿಡಿದು ದಾಂದಲೆ ಮಾಡಿದ್ದಾರೆ. ಪರಿಚಯಸ್ಥ ಪ್ರಕಾಶ್​ಗೆ ಬಸವರಾಜ್​​ ಮಚ್ಚು ಹಿಡಿದು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಬಸವರಾಜ್ ಮಚ್ಚುಹಿಡಿದು ಓಡಾಡುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ಸ್ಥಳಕ್ಕೆ ಆನೇಕಲ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು,…

Read More

Viral: ಬೆಂಗಳೂರಿಗೆ ಬಂದ ಬಳಿಕ ಸ್ನೇಹಿತರನ್ನು ಮಾಡಿಕೊಳ್ಳಲು ಈ ಟ್ರಿಕ್ಸ್‌ ಬಳಸಿದೆ ಎಂದ ಯುವತಿ – Kannada News | Bengaluru: Founder reveals the secret to making friends in Bengaluru

ಬೆಂಗಳೂರು, ಜನವರಿ 17: ಓದು ಮುಗಿಸಿ ಉದ್ಯೋಗಕ್ಕೆಂದು ದೂರದ ಊರಿಗೆ ಹೋದಾಗ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಸಮಯ ಬೇಕು. ಹೊಸ ಊರ ಜನರು ಹೇಗಿರುತ್ತದೆ ಎಂದು ಹೇಳುವುದು ಕಷ್ಟ. ಹೀಗಾಗಿ ಅಪರಿಚಿತರ ಜತೆಗೆ ಸ್ನೇಹ (friendship) ಬೆಳೆಸಿಕೊಳ್ಳಲು ಹಿಂದೇಟು ಹಾಕುವುದಿದೆ. ಪ್ರಾರಂಭದ ದಿನಗಳಲ್ಲಿ ಒಂಟಿ ಭಾವ ಕಾಡುತ್ತದೆ. ಬೆಂಗಳೂರಿಗೆ (Bengaluru) ಸ್ಥಳಾಂತರಗೊಂಡ ಸಂಸ್ಥಾಪಕಿಯೊಬ್ಬರಿಗೆ ಅದೇ ರೀತಿಯ ಅನುಭವವಾಗಿತ್ತಂತೆ. ಈ ಬಗ್ಗೆ ಪೋಸ್ಟ್ ಹಂಚಿಕೊಂಡು ತಮ್ಮ ಅನುಭವವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಸುರಭಿ ಜೈನ್ (Surbhi Jain) ಹೆಸರಿನ…

Read More

ಮತ್ತೊಂದು ‘ಪುಷ್ಪ’ ಚಿತ್ರ? ಆನೆ ದಂತದ ಕಳ್ಳಸಾಗಣೆಯ ಕಥೆ ‘ಕಾಟಾಳನ್’ – Kannada News | Kattalan Movie Teaser: Ivory Smuggling and Action Saga Multi Language Release details

ಅಲ್ಲು ಅರ್ಜುನ್ ನಟನೆಯ ‘ಪುಷ್ಪ’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದಲ್ಲಿ ರಕ್ತ ಚಂದನದ ಕಳ್ಳ ಸಾಗಣೆಯ ಕಥೆಯನ್ನು ಹೇಳಲಾಗಿತ್ತು. ಈಗ ‘ಕಾಟಾಳನ್’ ಹೆಸರಿನ ಮಲಯಾಳಂ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಈ ಚಿತ್ರದ ಆನೆ ದಂತದ ಕಳ್ಳ ಸಾಗಣೆಯ ಕರಾಳ ಜಗತ್ತನ್ನು ತೆರೆದಿಡಲು ನಿರ್ದೇಶಕರು ಪ್ರಯತ್ನಿಸಿದಂತಿದೆ. ಇದರ ಜೊತೆಗೆ ಭರ್ಜರಿ ಆ್ಯಕ್ಷನ್ ಕೂಡ ಸಿನಿಮಾದಲ್ಲಿ ಇರಲಿದೆ. ‘ಕಾಟಾಳನ್’ ಸಿನಿಮಾದ ಟೀಸರ್ ರಿಲೀಸ್ ಬಿಡುಗಡೆ ಕಂಡಿದೆ. ಇದು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚುವಂತೆ ಮಾಡಿದೆ. ಈ…

Read More

‘ಕಲ್ಟ್’ ಟ್ರೈಲರ್ ರಿಲೀಸ್: ಇದು ಭಗ್ನ ಪ್ರೇಮಿಯ ಕತೆ – Kannada News | Zaid Khan starrer Cult Kannada Movie trailer released

ಸಚಿವ ಜಮೀರ್ ಅಹ್ಮದ್ (Zameer Ahmed) ಪುತ್ರ ಝೈದ್ ಖಾನ್ (Zaid Khan) ನಟಿಸಿರುವ ‘ಕಲ್ಟ್’ ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆ ಆಗಿದೆ. ಸಿನಿಮಾದ ಪೋಸ್ಟರ್​​ನಿಂದ ಸಖತ್ ಗಮನ ಸೆಳೆದಿದ್ದ ‘ಕಲ್ಟ್’ ಸಿನಿಮಾಕ್ಕೆ ಮಲೈಕಾ ವಸುಪಾಲ್ ನಾಯಕಿ. ಝೈದ್ ಖಾನ್ ಮತ್ತು ಮಲೈಕಾ ಅವರು ಸಿನಿಮಾಕ್ಕೆ ಭರ್ಜರಿ ಪ್ರಚಾವನ್ನು ಸಹ ಮಾಡಿದ್ದಾರೆ. ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆ ಆಗಿದ್ದು, ಮೇಕಿಂಗ್, ಆಕ್ಷನ್ ದೃಶ್ಯಗಳು ಮತ್ತು ಭಾವುಕ ದೃಶ್ಯಗಳಿಂದ ಟ್ರೈಲರ್ ಗಮನ ಸೆಳೆಯುತ್ತಿದೆ. ‘ಕಲ್ಟ್’ ಟ್ರೈಲರ್ ನೋಡಿದರೆ ಇದು…

Read More

ಟೀಮ್ ಇಂಡಿಯಾ ಪ್ಲೇಯಿಂಗ್ 11: ಬಲಗೈ ಬದಲು ಎಡಗೈ ವೇಗಿಗೆ ಸ್ಥಾನ – Kannada News | India’s Predicted Playing XI For 3rd ODI Against New Zealand

ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಮೂರನೇ ಏಕದಿನ ಪಂದ್ಯವು ಭಾನುವಾರ (ಜ.18) ನಡೆಯಲಿದೆ. ಇಂದೋರ್​ನ ಹೋ್ಲ್ಕರ್ ಸ್ಟೇಡಿಯಂನಲ್ಲಿ ಜರುಗಲಿರುವ ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್​ನಲ್ಲಿ ಒಂದು ಬದಲಾವಣೆ ಕಂಡು ಬರುವುದು ಬಹುತೇಕ ಖಚಿತ. ಅದರಲ್ಲೂ ಬಲಗೈ ವೇಗಿಯನ್ನು ಹೊರಗಿಟ್ಟು ಎಡಗೈ ವೇಗದ ಬೌಲರ್​ಗೆ ಸ್ಥಾನ ನೀಡುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ ಈ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಬಲಗೈ ವೇಗಿಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಅದರಲ್ಲೂ ಮೊಹಮ್ಮದ್ ಸಿರಾಜ್ ಹಾಗೂ ಪ್ರಸಿದ್ಧ್ ಕೃಷ್ಣ ವಿಕೆಟ್…

Read More

‘ನಾನು ಬಿಗ್ ಬಾಸ್​​ಗೆ ಬರಲು ಆ ವ್ಯಕ್ತಿ ಕಾರಣ’; ಮಾಜಿ ಸ್ಪರ್ಧಿಗೆ ಗಿಲ್ಲಿ ಧನ್ಯವಾದ – Kannada News | Thukali Santhosh was The reason to Gilli Nata’s Bigg Boss Kannada 12 Entry

‘ಬಿಗ್ ಬಾಸ್ ಕನ್ನಡ ಸೀಸನ್ 12’ರ (Bigg Boss) ಸ್ಪರ್ಧಿ ಗಿಲ್ಲಿ ನಟಗೆ ಅಭಿಮಾನಿ ಬಳಗ ಹಿರಿದಾಗಿದೆ. ಅವರಿಗೆ ಇನ್​​ಸ್ಟಾಗ್ರಾಮ್​​ನಲ್ಲಿ 1.5 ಮಿಲಿಯನ್ ಅಂದರೆ 15 ಲಕ್ಷ ಹಿಂಬಾಲಕರು ಸಿಕ್ಕಿದ್ದಾರೆ. ಇದು ಅವರ ಜನಪ್ರಿಯತೆಗೆ ಹಿಡಿದ ಕೈಗನ್ನಡಿ. ಈಗ ಅವರು ಬಿಗ್ ಬಾಸ್​​ಗೆ ಬರಲು ಕಾರಣ ಯಾರು ಎಂಬುದನ್ನು ರಿವೀಲ್ ಮಾಡಿದ್ದಾರೆ. ಅವರು ಬಿಗ್ ಬಾಸ್​​ನ ಓರ್ವ ಮಾಜಿ ಸ್ಪರ್ಧಿಗೆ ಧನ್ಯವಾದ ಹೇಳಿದ್ದಾರೆ. ಗಿಲ್ಲಿ ನಟ ಅವರು ಜೀ ಕನ್ನಡದಲ್ಲಿ ಶೋಗಳನ್ನು ನೀಡುತ್ತಾ ಬಂದವರು. ಅವರು ಮೊದಲ…

Read More

ಗದಗ: ಆಂಜನೇಯ ದೇಗುಲದಲ್ಲಿ ಮೂರು ದಿನಗಳಿಂದ ನಿರಂತರ ಕೇಳಿಸುತ್ತಿದೆ ನಿಗೂಢ ಗೆಜ್ಜೆ ಶಬ್ದ! – Kannada News | Mysterious Anklet Sounds Echo for Three Days at Anjaneya Temple in Gadag, Villagers on Night Vigil

ಗದಗ, ಜನವರಿ 17: ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿಯ ಆಂಜನೇಯ ದೇಗುಲದಲ್ಲಿ ನಿಗೂಢ ಗೆಜ್ಜೆ ಶಬ್ದ ಮೂರು ದಿನಗಳಿಂದ ನಿರಂತರವಾಗಿ ಕೇಳಿಬರುತ್ತಿದ್ದು, ಈ ಅನಿರೀಕ್ಷಿತ ಘಟನೆಯಿಂದ ಗ್ರಾಮಸ್ಥರಲ್ಲಿ ಭೀತಿ ಆವರಿಸಿದೆ. ಮೂಲಗಳ ಪ್ರಕಾರ, ಗ್ರಾಮದಲ್ಲಿ ನಿರ್ಮಿಸಲಾಗುತ್ತಿರುವ ಹೊಸ ದೇವಾಲಯಕ್ಕೆಂದು ತಂದ ದುರ್ಗಮ್ಮ ಮತ್ತು ಮಾಯಮ್ಮ ದೇವಿ ಮೂರ್ತಿಗಳನ್ನು ಆಂಜನೇಯ ದೇಗುಲದಲ್ಲಿ ತಾತ್ಕಾಲಿಕವಾಗಿ ಇರಿಸಿದ ನಂತರ ಗೆಜ್ಜೆನಾದ ಕೇಳಿಸಲು ಪ್ರಾರಂಭಿಸಿದೆ. ಗುರುವಾರ ರಾತ್ರಿ 8 ಗಂಟೆಯಿಂದ ಆರಂಭವಾದ ಈ ಶಬ್ದ ಇದುವರೆಗೆ ನಿಂತಿಲ್ಲ ಎಂದು ಸ್ಥಳೀಯ ನಿವಾಸಿ…

Read More

Video: ಅಜ್ಜ ಅಜ್ಜಿಯನ್ನು ಮೊದಲ ಬಾರಿಗೆ ವಿಮಾನ ಹತ್ತಿಸಿ ದುಬೈಗೆ ಕರೆದೊಯ್ದ ಮೊಮ್ಮಗ – Kannada News | Grandson takes grandparents on a plane for the first time

ತಾನು ಚೆನ್ನಾಗಿ ಓದಿ, ಒಂದೊಳ್ಳೆ ಉದ್ಯೋಗ ಪಡೆದುಕೊಂಡು ತನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಅಮ್ಮ ಅಪ್ಪ, ಅಜ್ಜ, ಅಜ್ಜಿಯೊಂದಿಗೆ (grand parents) ಊರು ಸುತ್ತಬೇಕು. ಅವರ  ಸಣ್ಣ ಪುಟ್ಟ ಆಸೆಗಳನ್ನು ಈಡೇರಿಸಬೇಕು ಹೀಗೆ ಸಾವಿರಾರು ಕನಸುಗಳನ್ನು ಕಂಡಿರುತ್ತಾರೆ. ಆ ಕನಸುಗಳು ನನಸಾಗುವ ಘಳಿಗೆ ಬಂದರೆ ಹೇಗಿರುತ್ತೆ ಎಂದು ನೀವು ಒಮ್ಮೆಯಾದ್ರೂ ಊಹಿಸಿದ್ದೀರಾ. ಆದರೆ ಈ ಹಿರಿಜೀವಗಳು ಮೊಮ್ಮಗನಿಂದಾಗಿ (grandson) ವಿಮಾನ ಹತ್ತುವಂತಾಗಿದೆ. ಹೌದು, ಮೊಮ್ಮಗನು ತನ್ನ ಅಜ್ಜಿಯನ್ನು ಮೊದಲ ಬಾರಿಗೆ ವಿಮಾನದಲ್ಲಿ ಕರೆದೊಯ್ದಿದ್ದು ಈ ವಿಡಿಯೋ ವೈರಲ್…

Read More

ನಿಧಿ ಸಿಕ್ಕ ಲಕ್ಕುಂಡಿಯಲ್ಲಿ ಉತ್ಖನನದ ವೇಳೆ ಪುರಾತನ ವಸ್ತು ಪತ್ತೆ! – Kannada News | Ancient Artifacts Unearthed During Excavation at Treasure Site in Lakkundi, Gadag, Watch Video

ಗದಗ, ಜನವರಿ 17: ಗದಗದ ಐತಿಹಾಸಿಕ ತಾಣ ಲಕ್ಕುಂಡಿಯಲ್ಲಿ ಪ್ರಸ್ತುತ ನಡೆಯುತ್ತಿರುವ ಉತ್ಖನನದಲ್ಲಿ ಶಿವಲಿಂಗಕ್ಕೆ ಸಂಬಂಧಿಸಿದ ಪುರಾತನ ವಸ್ತುವೊಂದು ಪತ್ತೆಯಾಗಿದೆ. ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರ ಪ್ರಕಾರ, ಈ ವಸ್ತು ನೀರು ಹರಿಯಲು ಮಾಡಿದ ರೀತಿಯಲ್ಲಿ ಕಂಡುಬರುತ್ತಿದ್ದು, ಶಿವಲಿಂಗ ಪೂಜೆಯ ಸಂದರ್ಭದಲ್ಲಿ ಬಳಸಲಾಗುವ ವಸ್ತು ಎನ್ನಲಾಗಿದೆ. ಈ ಉತ್ಖನನ ಕಾರ್ಯಕ್ಕೆ ಯಾವುದೇ ಯಂತ್ರೋಪಕರಣಗಳನ್ನು ಬಳಸದೆ, ಪುರುಷ ಮತ್ತು ಮಹಿಳಾ ಕಾರ್ಮಿಕರಿಂದ ಮಾನವ ಸಂಪನ್ಮೂಲವನ್ನು ಬಳಸಲಾಗುತ್ತಿದೆ. ಹಿಂದೆ ಮನೆಯ ಅಡಿಪಾಯ ಅಗೆಯುವಾಗ ನಿಧಿ ಪತ್ತೆಯಾದ ನಂತರ ಉತ್ಖನನ ಕಾರ್ಯ…

Read More

ಬೆಂಗಳೂರಿನಲ್ಲಿ ಮುಗಿಯುತ್ತಿಲ್ಲ ರಸ್ತೆ ಗುಂಡಿ ಗೋಳು; ಗುಂಡಿಗೆ ಬಿದ್ದು ಕೈ ಮುರಿದುಕೊಂಡ ಟೆಕ್ಕಿ – Kannada News | Bengaluru Pothole Menace: Techie Suffers Fractured Hand in Varthur Accident

ಬೆಂಗಳೂರು, ಜನವರಿ 17: ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳ ಸಮಸ್ಯೆ ಮತ್ತೆ ಮುನ್ನೆಲೆಗೆ ಬಂದಿದೆ. ವರ್ತೂರಿನಲ್ಲಿ ಜನವರಿ 12ರಂದು ಸಂಜೆ ಸುಮಾರು 5 ಗಂಟೆಗೆ ನಡೆದ ಅಪಘಾತದಲ್ಲಿ ಟೆಕ್ಕಿ ಶ್ರೀಧರ್ ಅವರು ರಸ್ತೆ ಗುಂಡಿಗೆ ಬಿದ್ದು ತಮ್ಮ ಕೈ ಮುರಿದುಕೊಂಡಿದ್ದಾರೆ. ಗುಂಜೂರು ಪಾಳ್ಯ ಸಿಡಿಪಿ ರಸ್ತೆಯಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಅವರ ಗಾಡಿ ಗುಂಡಿಯಿಂದ ಸ್ಕಿಡ್ ಆಗಿ, ಬಲಗೈಗೆ ಫ್ರ್ಯಾಕ್ಚರ್ ಆಗಿದೆ. ವೈದ್ಯರು ಶಸ್ತ್ರಚಿಕಿತ್ಸೆಗೆ ಸಲಹೆ ನೀಡಿದ್ದಾರೆಂದು ತಿಳಿದುಬಂದಿದೆ. ನಗರದ ರಸ್ತೆ ಗುಂಡಿಗಳಿಗೆ…

Read More