‘ಡ್ರ್ಯಾಗನ್’ ಟೀಸರ್ ರಿಲೀಸ್: ಚಿತ್ರಮಂದಿರದಲ್ಲಿ ಸಂಭ್ರಮಿಸಿದ ಪ್ರಶಾಂತ್ ನೀಲ್ ಪತ್ನಿ
ಪ್ರಶಾಂತ್ ನೀಲ್ (Prashanth Neel) ನಿರ್ದೇಶಿಸಿ ಜೂ ಎನ್ಟಿಆರ್ ನಟಿಸಿರುವ ‘ಡ್ರ್ಯಾಗನ್’ ಸಿನಿಮಾದ ಟೀಸರ್ ನಿನ್ನೆಯಷ್ಟೆ ಬಿಡುಗಡೆ ಆಗಿದೆ. ಸಖತ್ ಮಾಸ್ ಆಗಿರುವ ಟೀಸರ್ನಲ್ಲಿ ಜೂ ಎನ್ಟಿಆರ್ ಸಖತ್ ಆಗಿ ಮಿಂಚಿದ್ದಾರೆ. ಹಲವು ಚಿತ್ರಮಂದಿರಗಳಲ್ಲಿ ಟೀಸರ್ ಅನ್ನು ವಿಶೇಷವಾಗಿ ಪ್ರೀಮಿಯರ್ ಮಾಡಲಾಗಿದೆ. ಪ್ರಶಾಂತ್ ನೀಲ್ ಅವರ ಪತ್ನಿ ಲಿಖಿತಾ ರೆಡ್ಡಿ, ಜೂ ಎನ್ಟಿಆರ್ ಅವರ ಅಪ್ಪಟ ಅಭಿಮಾನಿ. ಲಿಖಿತಾ ರೆಡ್ಡಿ ಅವರು ಖುದ್ದು ಚಿತ್ರಮಂದಿರಕ್ಕೆ ತೆರಳಿ ಅಭಿಮಾನಿಗಳೊಟ್ಟಿಗೆ ಟೀಸರ್ ವೀಕ್ಷಿಸಿದ್ದಲ್ಲದೆ, ಜೂ ಎನ್ಟಿಆರ್ ಗೆ ಜೈಕಾರಗಳನ್ನು ಹಾಕಿದ್ದಾರೆ….