Category Archives: Blog

Your blog category

‘ದೃಶ್ಯಂ 3’ ಹೇಗಿದೆ? ನೆಟ್ಟಿಗರು ಕೊಟ್ಟ ಪಾರದರ್ಶಕ ವಿಮರ್ಶೆ ಇಲ್ಲಿದೆ – Kannada News | Drishyam 3 X Review Mohanlal Movie Get mixed reviews on Twitter

ಮಲಯಾಳಂ ಚಿತ್ರರಂಗದ ಅತ್ಯಂತ ಯಶಸ್ವಿ ಫ್ರಾಂಚೈಸಿಗಳಲ್ಲಿ ಒಂದಾದ ‘ದೃಶ್ಯಂ’ ಸರಣಿಯ ಮೂರನೇ ಭಾಗ ‘ದೃಶ್ಯಂ 3’ ಇಂದು (ಮೇ 21) ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಜೀತು ಜೋಸೆಫ್ ನಿರ್ದೇಶನದ ಈ ಚಿತ್ರದಲ್ಲಿ ಮೋಹನ್‌ಲಾಲ್ ಮತ್ತೊಮ್ಮೆ ಜಾರ್ಜ್‌ಕುಟ್ಟಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರೊಂದಿಗೆ ಮೀನಾ, ಅನ್ಸಿಬಾ ಹಸನ್, ಎಸ್ತರ್ ಅನಿಲ್ ಮತ್ತು ಆಶಾ ಶರತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ಬಿಡುಗಡೆಯಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ಸಿನಿಮಾ ವೀಕ್ಷಿಸಿದ ಒಂದು ವರ್ಗದ ಪ್ರೇಕ್ಷಕರು ಚಿತ್ರದ ಕಥೆ ಮತ್ತು ನಿರೂಪಣೆಯನ್ನು ಮೆಚ್ಚಿಕೊಂಡಿದ್ದಾರೆ. ಚಿತ್ರದ ಮೊದಲಾರ್ಧವು ನಿಧಾನಗತಿಯಲ್ಲಿ ಸಾಗಿದರೂ, ಇಂಟರ್ವೆಲ್ ಬ್ಲಾಕ್‌ನಲ್ಲಿ ಬರುವ ಟ್ವಿಸ್ಟ್ ದ್ವಿತೀಯಾರ್ಧದ ಬಗ್ಗೆ ಕುತೂಹಲ ಮೂಡಿಸುತ್ತದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಜಾರ್ಜ್‌ಕುಟ್ಟಿ ಪಾತ್ರದಲ್ಲಿ ಮೋಹನ್‌ಲಾಲ್ ಅವರ ಶಾಂತ ಹಾಗೂ ತೀಕ್ಷ್ಣ ಅಭಿನಯ ಪ್ರೇಕ್ಷಕರ ಗಮನ ಸೆಳೆದಿದೆ. ಕಥೆಯಲ್ಲಿನ ಸಸ್ಪೆನ್ಸ್ ಹಾಗೂ ಎಮೋಷನಲ್ ಸನ್ನಿವೇಶಗಳು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿವೆ ಎಂಬುದು ಇವರ ವಾದ.

ಆದರೆ, ಚಿತ್ರದ ಬಗ್ಗೆ ನೆಗೆಟಿವ್ ವಿಮರ್ಶೆಗಳೂ ಕೇಳಿಬರುತ್ತಿವೆ. ಕೆಲವು ಪ್ರೇಕ್ಷಕರು ಚಿತ್ರದ ದ್ವಿತೀಯಾರ್ಧ ಹಾಗೂ ಕ್ಲೈಮ್ಯಾಕ್ಸ್ ಭಾಗವು ನಿರೀಕ್ಷಿತ ಮಟ್ಟದಲ್ಲಿ ಮೂಡಿಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಥೆಯು ಮೊದಲ ಎರಡು ಭಾಗಗಳಿಗಿಂತ ದುರ್ಬಲವಾಗಿದೆ ಮತ್ತು ಪಾತ್ರಗಳ ವಿನ್ಯಾಸದಲ್ಲಿ ಗೊಂದಲವಿದೆ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಹಿಂದಿ ‘ದೃಶ್ಯಂ 3’ ಮಲಯಾಳಂಗಿಂತ ಸಾಕಷ್ಟು ಭಿನ್ನ: ಬಿಡುಗಡೆಯಲ್ಲಿ ಗೊಂದಲ

2013 ರಲ್ಲಿ ಆರಂಭವಾದ ಈ ಸರಣಿಯು ಭಾರತದಾದ್ಯಂತ ದೊಡ್ಡ ಯಶಸ್ಸು ಕಂಡಿತ್ತು. ಇದರ ಹಿಂದಿ ಆವೃತ್ತಿಯಲ್ಲಿ ಅಜಯ್ ದೇವಗನ್ ನಟಿಸುತ್ತಿದ್ದು, ‘ದೃಶ್ಯಂ 3’ ಹಿಂದಿ ಆವೃತ್ತಿಯು ಇದೇ ವರ್ಷ ಅಕ್ಟೋಬರ್ 2 ರಂದು ಬಿಡುಗಡೆಯಾಗಲು ಸಜ್ಜಾಗಿದೆ. ಅದರ ಕ್ಲೈಮ್ಯಾಕ್ಸ್ ಸಂಪೂರ್ಣವಾಗಿ ಬೇರೆಯೇ ಇರಲಿದೆಯಂತೆ. ಮುಂದಿನ ದಿನಗಳಲ್ಲಿ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಇದು ಹೇಗೆ ಪ್ರದರ್ಶನ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 1:13 pm, Thu, 21 May 26

Source link

ಮೊಬೈಲ್ ನೋಡೋದು ಬಿಟ್ಟು ಸ್ನಾನ ಮಾಡು ಎಂದು ಗದರಿದ್ದಕ್ಕೆ ಬಾವಿಗೆ ಹಾರಿದ ಬಾಲಕಿ – Kannada News | Teen Rescued After Jumping Into Well Following Argument Over Mobile Use in Telangana

ಆಸಿಫಾಬಾದ್, ಮೇ 21: ಮೊಬೈಲ್(Mobile) ನೋಡುವುದು ಬಿಟ್ಟು ಸ್ನಾನ ಮಾಡು ಎಂದು ಪೋಷಕರು ಗದರಿದ್ದಕ್ಕೆ 17 ವರ್ಷದ ಬಾಲಕಿ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತೆಲಂಗಾಣದ ಆಸಿಫಾಬಾದ್​ನ ಸಂದೀಪ್​ ನಗರದಲ್ಲಿ ನಡೆದಿದೆ. ಸ್ವರ್ಣಲತಾ ಮತ್ತು ಪೋಚಿರಾಮ್ ದಂಪತಿಯ 17 ವರ್ಷದ ಮಗಳು ಸಾತ್ವಿಕಾ ಇಂಟರ್ಮೀಡಿಯೇಟ್ (ಪಿಯುಸಿ) ಮೊದಲ ವರ್ಷ ಮುಗಿಸಿ ದ್ವಿತೀಯ ವರ್ಷಕ್ಕೆ ಕಾಲಿಟ್ಟಿದ್ದಾಳೆ.

ಬುಧವಾರದಂದು ಸಾತ್ವಿಕಾ ಮನೆಯಲ್ಲಿ ಸ್ನಾನ ಮಾಡದೆ ಗಂಟೆಗಟ್ಟಲೆ ಮೊಬೈಲ್ ಫೋನ್ ನೋಡುತ್ತಾ ಕುಳಿತಿದ್ದಳು. ಇದನ್ನು ಗಮನಿಸಿದ ಕುಟುಂಬಸ್ಥರು ಆಕೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು, ತಕ್ಷಣ ಹೋಗಿ ಸ್ನಾನ ಮಾಡುವಂತೆ ಗದರಿಸಿದ್ದಾರೆ. ಇದರಿಂದ ತೀವ್ರವಾಗಿ ನೊಂದ ಮತ್ತು ಕೋಪಗೊಂಡ ಬಾಲಕಿ, ಮನೆಯಿಂದ ಹೊರಗೆ ಓಡಿಹೋಗಿ ಮುಂದಿನ ಬೀದಿಯಲ್ಲಿದ್ದ ಬಾವಿಗೆ ಧುಮುಕಿದ್ದಾಳೆ.

ಜೀವಭಯದಿಂದ ಕಿರುಚಾಟ, ನೆರವಾದ ಕಾಲೋನಿ ನಿವಾಸಿಗಳು
ಕೋಪದಲ್ಲಿ ಬಾವಿಗಂತೂ ಹಾರಿದ ಬಾಲಕಿಗೆ ನೀರಿನಲ್ಲಿ ಮುಳುಗುತ್ತಿದ್ದಂತೆ ಜೀವಭಯ ಶುರುವಾಗಿದೆ. ಆಕೆ ಬಾವಿಯ ನೀರಿನಲ್ಲಿ ಒದ್ದಾಡುತ್ತಾ ಜೋರಾಗಿ ಕಿರುಚಲು ಆರಂಭಿಸಿದ್ದಾಳೆ. ಬಾಲಕಿಯ ಕೂಗು ಕೇಳಿ ಓಡಿಬಂದ ಕಾಲೋನಿ ನಿವಾಸಿಗಳು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮತ್ತಷ್ಟು ಓದಿ: ಗೆಳೆಯನ ಮೊಬೈಲ್ ಬಚ್ಚಿಟ್ಟು ಮಜಾಕ್: ತಮಾಷೆಯಲ್ಲೇ ಹೋಯ್ತು ಸ್ನೇಹಿತನ ಜೀವ, ಆಗಿದ್ದೇನು?

ಮಾಹಿತಿ ಸಿಗುತ್ತಿದ್ದಂತೆ ಎಸ್‌ಎಚ್‌ಒ (SHO) ಬಾಲಾಜಿ ವರಪ್ರಸಾದ್ ಅವರ ನೇತೃತ್ವದ ಪೊಲೀಸ್ ತಂಡ ಅಗ್ನಿಶಾಮಕ ದಳದೊಂದಿಗೆ ಸ್ಥಳಕ್ಕೆ ಧಾವಿಸಿತು. ಅಗ್ನಿಶಾಮಕ ಸಿಬ್ಬಂದಿಗಳಾದ ನರೇಶ್, ರಾಮು ಮತ್ತು ಚಾಲಕ ಪ್ರವೀಣ್ ಕುಮಾರ್ ಅವರು ಸಮಯಪ್ರಜ್ಞೆ ಮೆರೆದು ಹಗ್ಗದ ಸಹಾಯದಿಂದ ಬಾವಿಗೆ ಇಳಿದಿದ್ದಾರೆ. ಬಾಲಕಿಗೆ ಲೈಫ್ ಜಾಕೆಟ್ ಧರಿಸಿ, ಆಕೆಯನ್ನು ಅತ್ಯಂತ ಸುರಕ್ಷಿತವಾಗಿ ಬಾವಿಯಿಂದ ಹೊರಗೆ ತಂದಿದ್ದಾರೆ.

ಸಕಾಲದಲ್ಲಿ ಸ್ಪಂದಿಸಿ ಬಾಲಕಿಯ ಜೀವ ಉಳಿಸಿದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಯ ಕಾರ್ಯವನ್ನು ಉನ್ನತ ಅಧಿಕಾರಿಗಳು ಹಾಗೂ ಸಾರ್ವಜನಿಕರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಬಾವಿಗೆ ಹಾರಿದ ರಭಸಕ್ಕೆ ಬಾಲಕಿಯ ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಕೆಯನ್ನು ಚಿಕಿತ್ಸೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಷ್ಟು ಸಣ್ಣ ವಿಷಯಕ್ಕೆ ಪ್ರಾಣ ಕಳೆದುಕೊಳ್ಳಲು ಮುಂದಾದ ಬಾಲಕಿಗೆ ಪೊಲೀಸರು ಬುದ್ಧಿವಾದ ಹೇಳಿ ಕೌನ್ಸೆಲಿಂಗ್ (Counseling) ನಡೆಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 1:15 pm, Thu, 21 May 26

Source link

TTD Vedic University Admission 2026: ಟಿಟಿಡಿ ಶ್ರೀ ವೆಂಕಟೇಶ್ವರ ವೈದಿಕ ವಿವಿ ಪ್ರವೇಶಾತಿ ಆರಂಭ; ವಿವಿಧ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನ – Kannada News | Apply for SVVU Vedic Courses 2026 27: Tirumala Tirupati Devasthanams University Admissions Open

ತಿರುಪತಿಯ ಪ್ರಸಿದ್ಧ ತಿರುಮಲ ತಿರುಪತಿ ದೇವಸ್ಥಾನಂಗಳ (ಟಿಟಿಡಿ) ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ವೆಂಕಟೇಶ್ವರ ವೈದಿಕ ವಿಶ್ವವಿದ್ಯಾನಿಲಯವು 2026-27ನೇ ಶೈಕ್ಷಣಿಕ ವರ್ಷದ ವಿವಿಧ ಕೋರ್ಸ್‌ಗಳ ಪ್ರವೇಶಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ವೈದಿಕ ಶಿಕ್ಷಣದಲ್ಲಿ ಆಸಕ್ತಿಯಿರುವ ವಿದ್ಯಾರ್ಥಿಗಳಿಗೆ ಇದೊಂದು ಸುವರ್ಣ ಅವಕಾಶವಾಗಿದೆ. ಈ ಪ್ರವೇಶಾತಿ ಕುರಿತಾದ ಸಂಪೂರ್ಣ ವಿವರಗಳು ಈ ಕೆಳಗಿನಂತಿವೆ.

ಮುಖ್ಯ ಅರ್ಹತೆ ಮತ್ತು ನಿಯಮಗಳು:

  • ಉಪನಯನ ಸಂಸ್ಕಾರ: ಸಾಂಪ್ರದಾಯಿಕ ವೈದಿಕ ಕೋರ್ಸ್‌ಗಳಿಗೆ ಸೇರಬಯಸುವ ಅಭ್ಯರ್ಥಿಗಳು ತಮ್ಮ ತಮ್ಮ ವೈದಿಕ ಸಂಪ್ರದಾಯದ ಪ್ರಕಾರ ಕಡ್ಡಾಯವಾಗಿ ಉಪನಯನ ಸಂಸ್ಕಾರವನ್ನು (ಮುಂಜಿ) ಹೊಂದಿರಬೇಕು.
  • ಉಚಿತ ಸೌಲಭ್ಯಗಳು: ಟಿಟಿಡಿ ಮತ್ತು ವಿಶ್ವವಿದ್ಯಾನಿಲಯದ ನಿಯಮಾವಳಿಗಳ ಪ್ರಕಾರ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಉಚಿತ ವಸತಿ ಮತ್ತು ಉಚಿತ ಆಹಾರದ ಸೌಲಭ್ಯವನ್ನು ಒದಗಿಸಲಾಗುತ್ತದೆ.

ಲಭ್ಯವಿರುವ ಕೋರ್ಸ್‌ಗಳ ವಿಭಾಗಗಳು

ವಿಶ್ವವಿದ್ಯಾನಿಲಯವು ಮುಖ್ಯವಾಗಿ ಈ ಕೆಳಗಿನ ವಿಭಾಗಗಳಲ್ಲಿ ಡಿಪ್ಲೊಮಾ, ಪದವಿ ಮತ್ತು ಪ್ರಮಾಣಪತ್ರ ಕೋರ್ಸ್‌ಗಳನ್ನು ನೀಡುತ್ತದೆ:

  • ವೇದಗಳು: ಋಗ್ವೇದ, ಶುಕ್ಲಯಜುರ್ವೇದ, ಕೃಷ್ಣಯಜುರ್ವೇದ, ಸಾಮವೇದ ಮತ್ತು ಅಥರ್ವಣವೇದ.

  • ಆಗಮ ಮತ್ತು ಶಾಸ್ತ್ರ: ವೈಖಾನಸಾಗಮ, ಪಂಚರಾತ್ರಾಗಮ, ತಂತ್ರಸಾರಾಗಮ, ಕೃಷ್ಣಯಜುರ್ವೇದ ಸ್ಮಾರ್ತಂ ಮತ್ತು ಪುರೋಹಿತ್ಯಂ.

  • ಇತರ ವಿಷಯಗಳು: ದಿವ್ಯಪ್ರಬಂಧಂ ಮತ್ತು ವಾಗಮವಾಸ್ತು (ದೇವಸ್ಥಾನ ವಾಸ್ತುಶಿಲ್ಪ).

ಅರ್ಜಿ ಸಲ್ಲಿಸುವ ಪ್ರಕ್ರಿಯೆ:

ಪ್ರಮುಖ ದಿನಾಂಕ: ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಮೇ 31, 2026 ಕೊನೆಯ ದಿನವಾಗಿದೆ.

  • ಅರ್ಜಿ ಪಡೆಯುವ ವಿಧಾನ: ಅಭ್ಯರ್ಥಿಗಳು ತಿರುಮಲ ತಿರುಪತಿ ದೇವಸ್ಥಾನಗಳ ಅಧಿಕೃತ ವೆಬ್‌ಸೈಟ್ (www.tirumala.org) ಅಥವಾ ಶ್ರೀ ವೆಂಕಟೇಶ್ವರ ವೈದಿಕ ವಿಶ್ವವಿದ್ಯಾನಿಲಯದ ವೆಬ್‌ಸೈಟ್ (svvedicuniversity) ಮೂಲಕ ಪ್ರವೇಶಾತಿಗೆ ಸಂಬಂಧಿಸಿದ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.

  • ಸಲ್ಲಿಕೆ ವಿಧಾನ: ಇದು ಸಂಪೂರ್ಣವಾಗಿ ಆಫ್‌ಲೈನ್ ಪ್ರಕ್ರಿಯೆಯಾಗಿದ್ದು, ಅರ್ಜಿಯನ್ನು ಭರ್ತಿ ಮಾಡಿ ಅಗತ್ಯ ಪ್ರಮಾಣಪತ್ರಗಳ ನಕಲು ಪ್ರತಿಯೊಂದಿಗೆ ಆಯಾ ಜಿಲ್ಲೆಯ (ಧರ್ಮಗಿರಿ-ತಿರುಮಲ, ಕೋಟಪ್ಪಕೊಂಡ, ಐ.ಭೀಮಾವರಂ, ವಿಜಯನಗರಂ, ಕೀಸರಗುಟ್ಟ-ಮೇಡ್ಚಲ್, ನಲ್ಗೊಂಡ) ಎಸ್.ವಿ. ವೇದ ವಿಜ್ಞಾನ ಪೀಠದ ವಿಳಾಸಕ್ಕೆ ರಿಜಿಸ್ಟರ್ಡ್ ಪೋಸ್ಟ್ ಅಥವಾ ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಬೇಕು.\

ಇದನ್ನೂ ಓದಿ: ಕಾಶಿಯಲ್ಲಿ 9 ರಾತ್ರಿಗಳು ಕಳೆದರೆ ಮೋಕ್ಷ ಸಿಗುತ್ತಾ? ಇದರ ಹಿಂದಿರುವ ಆಚರಣೆಗಳೇನು?

ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ:

ಈ ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಐದು ಅಥವಾ ಏಳನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು (ಹಾಗೂ ಸಂಬಂಧಪಟ್ಟ ಉನ್ನತ ವ್ಯಾಸಂಗದ ಕೋರ್ಸ್‌ಗಳಿಗೆ ಪದವೀಧರರೂ ಆಗಿರಬೇಕು).

ವಯೋಮಿತಿಯ ವಿವರಗಳು ಹೀಗಿವೆ:

  • 5ನೇ ತರಗತಿ ಅಭ್ಯರ್ಥಿಗಳಿಗೆ: ಜುಲೈ 1, 2014 ಮತ್ತು ಜೂನ್ 30, 2016 ರ ನಡುವೆ ಜನಿಸಿರಬೇಕು.
  • 7ನೇ ತರಗತಿ ಅಭ್ಯರ್ಥಿಗಳಿಗೆ: ಜುಲೈ 1, 2012 ಮತ್ತು ಜೂನ್ 30, 2014 ರ ನಡುವೆ ಜನಿಸಿರಬೇಕು.

ಅರ್ಹ ಅಭ್ಯರ್ಥಿಗಳು ಟಿಟಿಡಿ (TTD) ಅಧಿಕೃತ ವೆಬ್‌ಸೈಟ್‌ನಿಂದ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು, ಅದನ್ನು ಸಂಪೂರ್ಣವಾಗಿ ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಮೇ 31ರ ಒಳಗೆ ಅಂಚೆ ಮೂಲಕ ತಲುಪಿಸಬೇಕಾಗಿ ವಿನಂತಿಸಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 1:30 pm, Thu, 21 May 26

Source link

ಹಿಂದಿ ಟಿವಿ ಚಾನೆಲ್​​ಗಳ ಉಳಿಸಿದ್ದು ಮೆಗಾಸ್ಟಾರ್ ಚಿರಂಜೀವಿ: ಕ್ರೇಜ್ ಹೇಗಿತ್ತು ಗೊತ್ತೆ? – Kannada News | Chiranjeevi’s Indra Movie saved some Hindi Tv

ಈಗ ದಕ್ಷಿಣದ ಪ್ಯಾನ್ ಇಂಡಿಯಾ (Pan India) ಸ್ಟಾರ್​ಗಳೆಂದರೆ ಪ್ರಭಾಸ್, ಅಲ್ಲು ಅರ್ಜುನ್, ರಾಮ್ ಚರಣ್, ಜೂ ಎನ್​​ಟಿಆರ್ ಎನ್ನಲಾಗುತ್ತದೆ. ಆದರೆ ತೆಲುಗಿನ ಓಜಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದವರು ಮೆಗಾಸ್ಟಾರ್ ಚಿರಂಜೀವಿ. ಒಂದು ಸಮಯದಲ್ಲಿ ಇಡೀ ದೇಶದಲ್ಲಿ ಇನ್ಯಾವ ನಟನೂ ಪಡೆಯದಷ್ಟು ಸಂಭಾವನೆ ಪಡೆಯುತ್ತಿದ್ದ ಚಿರಂಜೀವಿ, ನಟಿಸಿರುವುದು ತೆಲುಗು ಸಿನಿಮಾಗಳಲ್ಲಿ ಮಾತ್ರವಾದರೂ ಅವರ ಹವಾ ಆಗಿನ ಸಮಯದಲ್ಲೇ ಉತ್ತರ ಭಾರತದಲ್ಲೆಲ್ಲ ಹಬ್ಬಿತ್ತು. ಯಾವ ಮಟ್ಟಿಗೆಂದರೆ ಕೆಲವಾರು ಮುಳುಗುತ್ತಿದ್ದ ಟಿವಿ ಚಾನೆಲ್​​ಗಳನ್ನು ಮೆಗಾಸ್ಟಾರ್ ಚಿರಂಜೀವಿಯ ಚಾರ್ಮ್ ಎತ್ತಿ ಹಿಡಿದಿತ್ತು.

ಸಮೀರ್ ನಾಯರ್, ಭಾರತೀಯ ಟಿವಿ ಕ್ಷೇತ್ರದ ದೊಡ್ಡ ಹೆಸರು. ಭಾರತದ ಟಿವಿ ಕ್ಷೇತ್ರದ ಪ್ರಗತಿಗೆ ದೊಡ್ಡ ಕಾಣ್ಕೆಯನ್ನು ನೀಡಿದವರು ಸಮೀರ್ ನಾಯರ್. ಹಲವು ಐಕಾನಿಕ್ ಟಿವಿ ಶೋಗಳ ಹಿಂದೆ ಸಮೀರ್ ನಾಯರ್ ಅವರ ಪ್ರತಿಭೆ ಕೆಲಸ ಮಾಡಿದೆ. ಇತ್ತೀಚೆಗಷ್ಟೆ ಇವರು ಅನುಪಮಾ ಚೋಪ್ರಾ ನಡೆಸಿಕೊಡುವ ಹಾಲಿವುಡ್ ರಿಪೋರ್ಟರ್ ಇಂಡಿಯಾ ಯೂಟ್ಯೂಬ್ ಚಾನೆಲ್​​ನ ಸಂದರ್ಶನದಲ್ಲಿ ಭಾಗಿ ಆಗಿದ್ದರು. ಈ ವೇಳೆ ಚಿರಂಜೀವಿ ಅವರು ಹೇಗೆ ಹಿಂದಿ ಟಿವಿಗಳ ಪ್ರಗತಿಗೆ ಕಾರಣರಾದರು ಎಂದು ವಿವರಿಸಿದ್ದಾರೆ.

ಸಂದರ್ಶನದಲ್ಲಿ ಮಾತನಾಡಿರುವ ಅವರು, ‘ಹಿಂದಿ ಚಾನೆಲ್​​ಗಳ ಟಿಆರ್​​ಪಿ ಕಡಿಮೆ ಆದಾಗೆಲ್ಲ ನಾವು ಚಿರಂಜೀವಿ ನಟಿಸಿರುವ ‘ಇಂದ್ರ’ ಸಿನಿಮಾದ ಹಿಂದಿ ಡಬ್ ವರ್ಷನ್ ಅನ್ನು ಪ್ರಸಾರ ಮಾಡಿಬಿಡುತ್ತಿದ್ದೆವು, ಪ್ರತಿ ಬಾರಿ ಪ್ರಸಾರ ಮಾಡಿದಾಗಲೂ ಸಹ ನಮ್ಮ ಟಿಆರ್​​ಪಿ ಹೆಚ್ಚಾಗುತ್ತಿತ್ತು. ಹಿಂದಿಯಲ್ಲಿ ಅದನ್ನು ‘ಇಂದ್ರ: ದಿ ಟೈಗರ್’ ಎಂದು ಡಬ್ ಮಾಡಲಾಗಿತ್ತು. ಚಿರಂಜೀವಿ ಸಿನಿಮಾಗಳಿಗೆ ಆಗ ಭಾರಿ ಬೇಡಿಕೆ ಇತ್ತು. ಅವರ ಸಿನಿಮಾಗಳನ್ನು ಜನ ಮುಗಿಬಿದ್ದು ನೋಡುತ್ತಿದ್ದರು’ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ:ಫಿಲ್ಮ್​ಫೇರ್: ಲಂಕೇಶ್, ಇಂದ್ರಜಿತ್ ಬಳಿಕ ಸಮರ್ಜಿತ್​ಗೂ ಒಲಿದ ಪ್ರತಿಷ್ಠಿತ ಪ್ರಶಸ್ತಿ

‘ಇಂದ್ರ’ ಮಾತ್ರವೇ ಅಲ್ಲದೆ ಚಿರಂಜೀವಿ ನಟಿಸಿರುವ ಇನ್ನೂ ಕೆಲವು ಹಿಟ್ ತೆಲುಗು ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡಿ ಬೇರೆ ಬೇರೆ ಟಿವಿ ಚಾನೆಲ್​​ಗಳು ಆಗಾಗ್ಗೆ ಬಿಡುಗಡೆ ಮಾಡುತ್ತಿದ್ದವು. ಪ್ರತಿಬಾರಿ ಚಿರಂಜೀವಿ ಸಿನಿಮಾ ಪ್ರಸಾರ ಮಾಡಿದಾಗಲೂ ಆ ಚಾನೆಲ್​​ಗಳ ಟಿಆರ್​​ಪಿ ಹೆಚ್ಚುತ್ತಿತ್ತಂತೆ. ಹಾಗಿತ್ತು ಮೆಗಾಸ್ಟಾರ್ ಚಿರಂಜೀವಿಯ ಕ್ರೇಜ್.

ಅಸಲಿಗೆ ‘ಇಂದ್ರ’ ಸಿನಿಮಾ ಬಿಡುಗಡೆ ಆಗಿದ್ದು 2002 ರಲ್ಲಿ. ಸಿನಿಮಾನಲ್ಲಿ ಆರತಿ ಅಗರ್ವಾಲ್, ಸೊನಾಲಿ ಬೇಂದ್ರೆ, ಪ್ರಕಾಶ್ ರೈ ಇನ್ನೂ ಕೆಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಸಿನಿಮಾದ ಹಾಡುಗಳು ಭಾರಿ ಹಿಟ್ ಆಗಿದ್ದವು. ಇಂದ್ರ ಸೇನಾ ರೆಡ್ಡಿ ಹೆಸರಿನ ಪಾತ್ರದಲ್ಲಿ ಚಿರಂಜೀವಿ ನಟಿಸಿದ್ದರು. ಸುಮಾರು 10 ಕೋಟಿ ಬಜೆಟ್​​ನಲ್ಲಿ ನಿರ್ಮಾಣವಾಗಿದ್ದ ಆ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ 50 ಕೋಟಿಗೂ ಹೆಚ್ಚು ಮೊತ್ತ ಗಳಿಸಿದ್ದು ಮಾತ್ರವಲ್ಲದೆ ಹಲವು ವರ್ಷಗಳ ಕಾಲ ತೆಲುಗಿನ ಅತಿ ಹೆಚ್ಚು ಹಣ ಗಳಿಸಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈಗಲೂ ಸಹ ಕೆಲವು ಹಿಂದಿ ಚಾನೆಲ್​​ಗಳಲ್ಲಿ ‘ಇಂದ್ರ’ ಸಿನಿಮಾದ ಡಬ್ಬಿಂಗ್ ವರ್ಷನ್ ಪ್ರಸಾರ ಆಗುತ್ತಲೇ ಇರುತ್ತದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ನಿಪ್ಪಾಣಿ ಬೆನ್ನಲ್ಲೇ ಚಿಕ್ಕಮಗಳೂರಲ್ಲೂ ಕೈ, ಕಮಲ ಸಮರ: ಕಾಮಗಾರಿ ವಿಚಾರವಾಗಿ ಸಿ.ಟಿ.ರವಿ ಎದುರೇ ಹೈಡ್ರಾಮಾ – Kannada News | BJP Congress Workers Clash In Chikkamagaluru During MLC CT Ravi’s Visit Rampura

ಕಾಮಗಾರಿ ವಿಚಾರವಾಗಿ ಸಿ.ಟಿ.ರವಿ ಎದುರೇ ಹೈಡ್ರಾಮಾImage Credit source: Tv9 Kannada

ಚಿಕ್ಕಮಗಳೂರು, ಮೇ 21: ಶಾಸಕಿ ಶಶಿಕಲಾ ಜೊಲ್ಲೆ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ-ಕಾಂಗ್ರೆಸ್​​ ಕಾರ್ಯಕರ್ತರು ಕಿತ್ತಾಡಿಕೊಂಡಿರುವ ಘಟನೆ ನಿಪ್ಪಾಣಿಯಲ್ಲಿ ನಡೆದ ಬೆನ್ನಲ್ಲೇ ಇತ್ತ ಚಿಕ್ಕಮಗಳೂರಲ್ಲೂ (Chikkamagaluru) ಅದೇ ಮಾದರಿಯ ಪ್ರಸಂಗ ನಡೆದಿದೆ. ಚಿಕ್ಕಮಗಳೂರು ನಗರದ ರಾಂಪುರ ಗ್ರಾಮದಲ್ಲಿ ಕಾಮಗಾರಿ ವೀಕ್ಷಣೆಗೆ ಬಂದಿದ್ದ ಪರಿಷತ್​​ ಸದಸ್ಯ ಸಿ.ಟಿ ರವಿ ವಿರುದ್ಧ ಗೋಬ್ಯಾಕ್​​ ಘೋಷಣೆ ಕೂಗಿದ ಪರಿಣಾಮ, ಬಿಜೆಪಿ- ಕಾಂಗ್ರೆಸ್ ಕಾರ್ಯಕರ್ತರ ನಡುವೆ ಹೈಡ್ರಾಮಾವೇ ನಡೆದಿದೆ.

ಮುಖ್ಯಾಂಶಗಳು

  • ಪರಿಷತ್​​ ಸದಸ್ಯ ಸಿ.ಟಿ ರವಿ ವಿರುದ್ಧ ಗೋಬ್ಯಾಕ್​​ ಘೋಷಣೆ
  • ಚಿಕ್ಕಮಗಳೂರಲ್ಲಿ ಕಾಂಗ್ರೆಸ್​​-ಬಿಜೆಪಿ ಕಾರ್ಯಕರ್ತರ ಗಲಾಟೆ
  • ಎಂಎಲ್​​ಸಿ ಎದುರೇ ಕೈ ಕೈ ಮಿಲಾಯಿಸಿದ ಕಾರ್ಯಕರ್ತರು

ರಾಂಪುರದಿಂದ ಶಕ್ತಿ ನಗರದವರೆಗೂ ಕಾಮಗಾರಿಗಳ ವೀಕ್ಷಣೆ ಮಾಡಿ ಸಿ.ಟಿ. ರವಿ ವಾಪಸ್​​ ಬರುತ್ತಿದ್ದ ವೇಳೆ ರಾಂಪುರ ಬಳಿ ಕಾಂಗ್ರೆಸ್ ಕಾರ್ಯಕರ್ತರು ಜಮಾವಣೆಯಾಗಿದ್ದಾರೆ. ಈ ವೇಳೆ ಕಾಂಗ್ರೆಸ್​​ ಮತ್ತು ಬಿಜೆಪಿ ಕಾರ್ಯಕರ್ತರು ಪರಸ್ಪರ ಎದುರಾಗಿದ್ದು, ಎರಡೂ ಕಡೆಯಿಂದ ಘೋಷಣೆಗಳು ಮೊಳಗಿವೆ. ಇದು ವಿಕೋಪಕ್ಕೆ ಹೋಗಿ ಸಿ.ಟಿ. ರವಿ ಸಮ್ಮುಖದಲ್ಲಿಯೇ ಕಾರ್ಯಕರ್ತರು ಪರಸ್ಪರ ಕೈ ಕೈ ಮಿಲಾಯಿಸಿದ್ದಾರೆ. ಬಳಿಕ ಬಿಜೆಪಿ ಕಾರ್ಯಕರ್ತರು ಮತ್ತು ಸಿ.ಟಿ ರವಿ ರಸ್ತೆ ಮಧ್ಯೆ ಧರಣಿ ಕುಳಿತ ಪ್ರಸಂಗ ನಡೆದಿದೆ.

ಇದನ್ನೂ ಓದಿ: ನಿಪ್ಪಾಣಿಯಲ್ಲಿ ಬಿಜೆಪಿ, ಕಾಂಗ್ರೆಸ್ ಕಿತ್ತಾಟ, ಶಾಸಕಿ ಶಶಿಕಲಾ ಜೊಲ್ಲೆಯಿದ್ದ ಕಾರ್ಯಮದಲ್ಲಿಯೇ ಗಲಾಟೆ

ಶಾಸಕ ತಮ್ಮಯ್ಯ ವಿರುದ್ಧ ವಾಗ್ದಾಳಿ

ಇನ್ನು ಶಾಕ ತಮ್ಮ ವಿರುದ್ಧ ಸಿ.ಟಿ. ರವಿ ವಾಗ್ದಾಳಿ ನಡೆಸಿದ್ದು, 5800 ಕೋಟಿ ಅನುದಾನ, ಮೆಡಿಕಲ್‌ ಕಾಲೇಜು ತಂದದ್ದು ನಾನು.
2022ರಲ್ಲಿ ಮಂಜೂರಾದ ಕಾಮಗಾರಿಗೆ ಈಗ ವರ್ಕ್ ಆರ್ಡರ್ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಕಾಮಗಾರಿ ವೀಕ್ಷಣೆಗೆ ಬಂದ ವೇಳೆ ಕೆಲ ಚೇಲಾಗಳನ್ನು ಬಿಟ್ಟು ಗಲಾಟೆ ಮಾಡಿಸಿದ್ದಾರೆ. ಈ ಚಿಲ್ಲರೆ ರಾಜಕಾರಣಕ್ಕೆ ಹೆದರಲ್ಲ. ಸತ್ಯವನ್ನು ಹೇಳಿಯೇ ಹೇಳುತ್ತೇವೆ. ಇಂತಹ ಗೂಂಡಾಗಳನ್ನು ಎದರಿಸಿಯೇ ನಾವು ಇಲ್ಲಿಯವರೆಗೆ ಬಂದಿದ್ದೇವೆ. ನನ್ನ ಮೇಲೆ ಹಲ್ಲೆಯ ಪ್ರಯತ್ನವೂ ನಡೆದಿದ್ದು, ಹೆದರಿ ಓಡಿಹೋಗುವ ಜಾಯಮಾನ ನನ್ನದಲ್ಲ ಎಂದವರು ಕಿಡಿ ಕಾರಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 1:17 pm, Thu, 21 May 26

Source link

ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್ – Kannada News | Karan Kundra Proposed Shruthi Prakash In Desert

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More

Source link

ಮೈಖಲ್ ಜಾಕ್ಸನ್ ಬಗ್ಗೆ ಮತ್ತೊಂದು ಡಾಕ್ಯುಮೆಂಟರಿ, ಈ ಬಾರಿ ಕರಾಳ ಅಧ್ಯಾಯದ ಮೇಲೆ ಫೋಕಸ್ – Kannada News | Micheal Jackson Darkest Chapter to unvile with explosive Docu Series

ವಿಶ್ವದ ನಂಬರ್ 1 ಪಾಪ್ ಸ್ಟಾರ್, ‘ಕಿಂಗ್ ಆಫ್ ಪಾಪ್’ ಎನಿಸಿಕೊಂಡಿದ್ದ ಮೈಖಲ್ ಜಾಕ್ಸನ್ (Michael jackson) ನಿಧನ ಹೊಂದಿ 17 ವರ್ಷಗಳಾಗಿವೆ. ಆದರೆ ಇಂದಿಗೂ ಅವರ ಹಾಡುಗಳು ಟಾಪ್ ಟ್ರೆಂಡಿಂಗ್​​ನಲ್ಲಿರುತ್ತವೆ. ಇಂದಿಗೂ ಸಹ ಅವರು ವಿಶ್ವದ ಟಾಪ್ ಪಾಪ್ ಸ್ಟಾರ್​​ಗಳಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ. ಹಲವು ಏರಿತಗಳುಳ್ಳ ಜೀವನ ಮೈಖಲ್ ಜಾಕ್ಸನ್ ಅವರದ್ದಾಗಿತ್ತು. ಇತ್ತೀಚೆಗಷ್ಟೆ ಮೈಖಲ್ ಜೀವನದ ಕತೆ ಆಧರಿಸಿದ್ದ ಸಿನಿಮಾ ‘ಮೈಖಲ್’ ಬಿಡುಗಡೆ ಆಗಿ ವಿಶ್ವದಾದ್ಯಂತ ಸೂಪರ್ ಹಿಟ್ ಆಯ್ತು. ಇದೀಗ ಮೈಖಲ್ ಜೀವನ ಆಧರಿಸಿ ಡಾಕ್ಯುಮೆಂಟರಿ ಒಂದು ತೆರೆಗೆ ಬರುತ್ತಿದೆ.

ಇತ್ತೀಚೆಗೆ ಬಿಡುಗಡೆ ಆದ ‘ಮೈಖಲ್’ ಸಿನಿಮಾವು ಮೈಖಲ್ ಜಾಕ್ಸನ್ ಜೀವನದ ಮೊದಲಾರ್ಧದ ಕತೆಯನ್ನು ಮಾತ್ರವೇ ಒಳಗೊಂಡಿದೆ. ಅವರ ಜೀವನದ ಕರಾಳ ಅಧ್ಯಾಯನದ ಕತೆ ಸಿನಿಮಾನಲ್ಲಿಲ್ಲ. ಆದರೆ ಇದೀಗ ಪ್ರಸಿದ್ಧ ಒಟಿಟಿ ಸಂಸ್ಥೆ ನೆಟ್‌ಫ್ಲಿಕ್ಸ್ ಮೈಖಲ್ ಜೀವನದ ಅತ್ಯಂತ ವಿವಾದಾತ್ಮಕ ಮತ್ತು ಕರಾಳ ಅಧ್ಯಾಯವನ್ನು ಆಧರಿಸಿದ ಮೂರು ಭಾಗಗಳ ಸ್ಫೋಟಕ ಸಾಕ್ಷ್ಯಚಿತ್ರ ಸರಣಿಯನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಸರಣಿಗೆ ‘ಮೈಕಲ್ ಜಾಕ್ಸನ್: ದಿ ವರ್ಡಿಕ್ಟ್’ ಎಂದು ಹೆಸರಿಡಲಾಗಿದ್ದು, ಇದರ ಅಧಿಕೃತ ಟ್ರೈಲರ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ.

ಈ ಡಾಕ್ಯು-ಸೀರೀಸ್ ಪ್ರಮುಖವಾಗಿ 2003 ರಲ್ಲಿ ಮೈಕಲ್ ಜಾಕ್ಸನ್ ವಿರುದ್ಧ ಕೇಳಿಬಂದಿದ್ದ ಅಪ್ತಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ಆರೋಪದ ಸುತ್ತ ಸುತ್ತುತ್ತದೆ. ಈ ಆರೋಪಗಳು ಆಗಿನ ಕಾಲದಲ್ಲಿ ವಿಶ್ವಾದ್ಯಂತ ಮಾಧ್ಯಮಗಳಲ್ಲಿ ಭಾರಿ ಸಂಚಲನ ಮೂಡಿಸಿದ್ದವು. ತೀವ್ರ ಕುತೂಹಲ ಕೆರಳಿಸಿದ್ದ ಸುದೀರ್ಘ ನ್ಯಾಯಾಲಯದ ವಿಚಾರಣೆಯ ನಂತರ, 2005 ರಲ್ಲಿ ಮೈಕಲ್ ಜಾಕ್ಸನ್ ಅವರನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿ ಕೋರ್ಟ್ ತೀರ್ಪು ನೀಡಿತ್ತು. ಆದರೆ ಅಷ್ಟರಲ್ಲಾಗಲೆ ಜಾಕ್ಸನ್ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಆರೋಗ್ಯ ಹದತಪ್ಪಿತ್ತು. ಜಾಕ್ಸನ್ ಅವರು ನಿರ್ದೋಷಿ ಎಂದು ಸಾಬೀತಾದರೂ, ಈ ಪ್ರಕರಣದ ಸುತ್ತಲಿನ ವಿವಾದಗಳು ಮತ್ತು ರಹಸ್ಯಗಳು ಇಂದಿಗೂ ಸಾರ್ವಜನಿಕರಲ್ಲಿ ಚರ್ಚೆಯ ವಿಷಯವಾಗಿ ಉಳಿದಿವೆ.

ಇದನ್ನೂ ಓದಿ:ಮೈಖಲ್ ಜಾಕ್ಸನ್ ಅಪಹರಣಕ್ಕೆ ನಡೆದಿತ್ತು ಸಂಚು: ಯತ್ನಿಸಿದವರು ಯಾರು ಗೊತ್ತೆ?

ಮೈಖಲ್ ಕುರಿತಾದ ಹೊಸ ಡಾಕ್ಯು ಸರಣಿಯನ್ನು ‘ಕ್ಯಾಂಡಲ್ ಟ್ರೂ ಸ್ಟೋರೀಸ್’ ಸಂಸ್ಥೆ ನಿರ್ಮಿಸಿದ್ದು, ನಿಕ್ ಗ್ರೀನ್ ನಿರ್ದೇಶನ ಮಾಡಿದ್ದಾರೆ. ಅಂದು ನ್ಯಾಯಾಲಯದ ಒಳಗೆ ಕ್ಯಾಮೆರಾಗಳಿಗೆ ಅನುಮತಿ ಇಲ್ಲದ ಕಾರಣ, ಸಾರ್ವಜನಿಕರಿಗೆ ಕೇವಲ ಮಾಧ್ಯಮಗಳ ವಿಶ್ಲೇಷಣೆ ಮಾತ್ರ ತಿಳಿಯುತ್ತಿತ್ತು. ನಿಜ ಘಟನೆಗಳು, ದೃಶ್ಯಗಳು, ನಿಜ ವ್ಯಕ್ತಿಗಳ ಸಂದರ್ಶನ, ನ್ಯಾಯಾಲಯದಲ್ಲಿ ನಡೆದ ವಿಚಾರಣೆಯ ಮಾಹಿತಿ, ಅಂದಿನ ನ್ಯಾಯಾಧೀಶರು, ಜ್ಯೂರಿ ಸದಸ್ಯರು, ವಕೀಲರು, ಕೋರ್ಟ್‌ನಲ್ಲಿದ್ದ ಪತ್ರಕರ್ತರು ಮತ್ತು ಪ್ರತ್ಯಕ್ಷದರ್ಶಿಗಳ ಹೊಸ ಸಂದರ್ಶನಗಳು ಹಾಗೂ ಆರ್ಕೈವ್ ಮಾಡಲಾದ ನೈಜ ದೃಶ್ಯಗಳನ್ನು ಬಳಸಿಕೊಳ್ಳಲಾಗಿದೆ. ಪ್ರೇಕ್ಷಕರಿಗೆ ಅಂದು ಕೋರ್ಟ್‌ ರೂಂನಲ್ಲಿ ನಿಜವಾಗಿ ಏನಾಗಿತ್ತು ಎಂಬುದರ ಹತ್ತಿರದ ಚಿತ್ರಣವನ್ನು ಈ ಸರಣಿ ನೀಡಲಿದೆ ಎಂದು ಚಿತ್ರತಂಡ ತಿಳಿಸಿದೆ.

ಮೈಕಲ್ ಜಾಕ್ಸನ್ ಅವರ ಜೀವನದ ಈ ರೋಮಾಂಚಕ ಕಥಾಹಂದರವನ್ನು ಹೊಂದಿರುವ ‘ಮೈಕಲ್ ಜಾಕ್ಸನ್: ದಿ ವರ್ಡಿಕ್ಟ್’ ಸಾಕ್ಷ್ಯಚಿತ್ರ ಸರಣಿಯು ಜೂನ್ 3 ರಂದು ನೆಟ್‌ಫ್ಲಿಕ್ಸ್ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಬಯೋಪಿಕ್ ಸಿನಿಮಾ ಮೈಕಲ್ ಜಾಕ್ಸನ್ ಅವರ ಜೀವನದ ಕರಾಳ ಮುಖಗಳನ್ನು ಹೆಚ್ಚಾಗಿ ತೋರಿಸದ ಕಾರಣ, ಈ ಡಾಕ್ಯು-ಸೀರೀಸ್ ಆ ಕೊರತೆಯನ್ನು ನೀಗಿಸಲಿದೆ ಮತ್ತು ಸಾರ್ವಜನಿಕರಲ್ಲಿ ಮತ್ತೊಮ್ಮೆ ಕುತೂಹಲ ಮೂಡಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರಾಜಧಾನಿಯಲ್ಲಿ ಹೈ ಅಲರ್ಟ್: NTA ಮತ್ತು ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ; ಪೊಲೀಸರೊಂದಿಗೆ ವಾಗ್ವಾದ! – Kannada News | NEET Scam: Youth Congress Stages Freedom Park Protest, Plans Lok Bhavan Siege.

ಬೆಂಗಳೂರು, ಮೇ.21: ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳನ್ನು ಖಂಡಿಸಿ ಯುವ ಕಾಂಗ್ರೆಸ್ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದೆ. ಸಾವಿರಕ್ಕೂ ಹೆಚ್ಚು ಪೊಲೀಸರ ಬಿಗಿ ಭದ್ರತೆಯ ನಡುವೆ ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿದ್ದರು. ದೇಶಾದ್ಯಂತ ನೀಟ್ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ, ಅಕ್ರಮಗಳು ಮತ್ತು ಹಗರಣಗಳ ಕುರಿತು ಆತಂಕಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನಾಕಾರರು ನೀಟ್ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಪ್ರತಿಭಟನೆಯ ವಾತಾವರಣವು “ಕಾಂಗ್ರೆಸ್” ಘೋಷಣೆಗಳು ಮತ್ತು ಹಾಡುಗಳಿಂದ ತುಂಬಿತ್ತು, ಇದು ಕಾರ್ಯಕರ್ತರ ಆವೇಶವನ್ನು ಸೂಚಿಸುತ್ತಿತ್ತು. ಯುವ ಕಾಂಗ್ರೆಸ್ ಕಾರ್ಯಕರ್ತರು ಲೋಕಭವನಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದರು, ಅದಕ್ಕಾಗಿ ಫ್ರೀಡಂಪಾರ್ಕ್ ಮತ್ತು ಲೋಕಭವನದ ಸುತ್ತಮುತ್ತ ಹೆಚ್ಚುವರಿ ಭದ್ರತೆಯನ್ನು ನಿಯೋಜಿಸಲಾಗಿತ್ತು. ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ನಡೆಸಿದ ಪರೀಕ್ಷೆಯಲ್ಲಿನ ಅಕ್ರಮಗಳ ವಿರುದ್ಧ ಧ್ವನಿ ಎತ್ತುವುದು ಈ ಪ್ರತಿಭಟನೆಯ ಮುಖ್ಯ ಉದ್ದೇಶವಾಗಿತ್ತು. ಪ್ರತಿಭಟನೆ ವೇಳೆ ಸಂಗೀತ ಮತ್ತು ಉದ್ವಿಗ್ನ ಪರಿಸ್ಥಿತಿ ಕಂಡುಬಂದಿತು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೋದಿ ಅವರ ಪಂಚ ರಾಷ್ಟ್ರ ಪ್ರವಾಸದ ಪರಿಣಾಮ ಭಾರತಕ್ಕೆ ಹರಿದುಬರಲಿರುವ ಹೂಡಿಕೆ ಎಷ್ಟು ಗೊತ್ತಾ? – Kannada News | Modi’s 5 Nation Tour: $40 Billion Investment & Economic Boost for India

ನವದೆಹಲಿ, ಮೇ 21: ಯುಎಇ, ನೆದರ್​ಲ್ಯಾಂಡ್ಸ್, ಸ್ವೀಡನ್, ನಾರ್ವೆ ಮತ್ತು ಇಟಲಿ ಈ ಐದು ದೇಶಗಳಿಗೆ ನರೇಂದ್ರ ಮೋದಿ ನೀಡಿದ ಭೇಟಿ (PM Narendra Modi’s 5 nation tour) ಬಹುತೇಕ ಫಲಪ್ರದವಾಗಿದೆ ಎಂದು ಹೇಳಲಾಗುತ್ತಿದೆ. ಈ ಐದು ದೇಶಗಳ ಪ್ರವಾಸದಿಂದ ಮೋದಿ ಅವರು ಭಾರತಕ್ಕೆ 40 ಬಿಲಿಯನ್ ಡಾಲರ್ (3.5 ಲಕ್ಷ ಕೋಟಿ ರೂ) ಹೂಡಿಕೆ ಹರಿದುಬರಲು ನೆರವಾಗಿದ್ದಾರೆ. ಇದರಲ್ಲಿ ಹೊಸ ಹೂಡಿಕೆಗಳು ಸೇರಿವೆ. ಹಾಗೆಯೇ, ಹೆಚ್ಚುವರಿ ಹೂಡಿಕೆಗಳಿಗೂ ಕೆಲ ಕಂಪನಿಗಳು ಬದ್ಧವಾಗಿವೆ.

ಮೋದಿ ಅವರು ಹೂಡಿಕೆಗಳನ್ನು ಸೆಳೆದಿರುವುದು ಮಾತ್ರವಲ್ಲ, ಇಂಧನ ಭದ್ರತೆಗೂ ವ್ಯವಸ್ಥೆ ಬಿಗಿ ಮಾಡಿದ್ದಾರೆ. ಯುಎಇಗೆ ಮೊದಲು ತೆರಳಿದ ಪ್ರಧಾನಿಗಳು ಅಲ್ಲಿ ದೀರ್ಘಾವಧಿ ಎಲ್​ಪಿಜಿ ಪೂರೈಕೆ ಮತ್ತು ಕಚ್ಚಾ ತೈಲ ಸಂಗ್ರಹಕ್ಕೆ ವಿವಿಧ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.

ಇದನ್ನೂ ಓದಿ: ಒಂದು ರಾಷ್ಟ್ರ, ಒಂದು ಚುನಾವಣೆಯಿಂದ 7 ಲಕ್ಷ ಕೋಟಿ ರೂ ಉಳಿತಾಯ, ಜಿಡಿಪಿ ಶೇ. 1.6 ವೃದ್ಧಿ: ಜೆಪಿಸಿ ಅನಿಸಿಕೆ

ನೆದರ್​ಲ್ಯಾಂಡ್ಸ್​ನಲ್ಲಿ ಮೋದಿ ಅವರು ಅಲ್ಲಿಯ ಪ್ರಧಾನಿ ಜೊತೆಗೂಡಿ ವಿವಿಧ ಕ್ಷೇತ್ರಗಳಲ್ಲಿನ 50ಕ್ಕೂ ಹೆಚ್ಚು ಜಾಗತಿಕ ಕಂಪನಿಗಳ ಸಿಇಒಗಳೊಂದಿಗೆ ಸಭೆ ನಡೆಸಿದ್ದಾರೆ. ಈ ಕಂಪನಿಗಳ ಒಟ್ಟೂ ಮೌಲ್ಯ ಅಂದಾಜು 3 ಟ್ರಿಲಿಯನ್ ಡಾಲರ್​ನಷ್ಟು ಇದೆ. ಈ ಹೆಚ್ಚಿನ ಕಂಪನಿಗಳು ಭಾರತದಲ್ಲಿ ಈಗಾಗಲೇ ಸಾಕಷ್ಟು ಹೂಡಿಕೆ ಮಾಡಿವೆ. ಭಾರತದಲ್ಲಿ ಅವುಗಳು ಮಾಡಿರುವ ಹೂಡಿಕೆ ಒಟ್ಟು 180 ಬಿಲಿಯನ್ ಡಾಲರ್ ಇರಬಹುದು.

ವಿವಿಧ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡಲು 17 ಒಪ್ಪಂದಗಳನ್ನು ಮಾಡಿಕೊಂಡಿವೆ. ಇದರಲ್ಲಿ ಪ್ರಮುಖವಾದುದು ಎಎಸ್​ಎಂಎಲ್ ಮತ್ತು ಟಾಟಾ ಎಲೆಕ್ಟ್ರಾನಿಕ್ಸ್ ನಡುವಿನ ಸೆಮಿಕಂಡಕ್ಟರ್ ಡೀಲ್. ಎಎಸ್​ಎಂಎಲ್ ಭಾರತದಲ್ಲಿ ಸೆಮಿಕಂಡಕ್ಟರ್ ಫ್ಯಾಬ್ ಘಟಕ ಸ್ಥಾಪಿಸಲು ಟಾಟಾ ಎಲೆಕ್ಟ್ರಾನಿಕ್ಸ್​ಗೆ ನೆರವಾಗಲಿದೆ. ಈ ಬೆಳವಣಿಗೆ ಭಾರತದ ಮಟ್ಟಿಗೆ ಐತಿಹಾಸಿಕವೆನಿಸಿದೆ.

ಇದನ್ನೂ ಓದಿ: ಮೆಲೋನಿಗೆ ಮೋದಿಯಿಂದ ಚಾಕೊಲೇಟ್ ಗಿಫ್ಟ್; ಆದರೆ, ಷೇರುಬೆಲೆ ಹೆಚ್ಚಿದ್ದು ರಿಯಲ್ ಎಸ್ಟೇಟ್ ಕಂಪನಿಯದ್ದು; ಯಾಕೆ?

ಪ್ರಧಾನಿ ನರೇಂದ್ರ ಮೋದಿ ಪ್ರವಾಸದ ವೇಳೆ 40 ಬಿಲಿಯನ್ ಡಾಲರ್ ಮೊತ್ತದಷ್ಟು ಹೂಡಿಕೆಗಳು ಭಾರತಕ್ಕೆ ಹರಿದುಬರಲು ಸಿದ್ಧವಾಗಿರುವುದು ಗಮನಾರ್ಹ. ಜಾಗತಿಕ ಹೂಡಿಕೆಗಳಿಗೆ ಭಾರತವು ಆದ್ಯತಾ ರಾಷ್ಟ್ರಗಳಲ್ಲಿ ಒಂದೆನಿಸಿರುವುದು ಗಮನಾರ್ಹ. ಹಾಗೆಯೇ, ವಿದೇಶ ಪ್ರವಾಸ ಮಾಡಬೇಡಿರೆಂದು ಸಾಮಾನ್ಯ ಜನರಿಗೆ ಹೇಳುವ ಪ್ರಧಾನಿಗಳು ತಾವೇ ಖುದ್ದಾಗಿ ವಿದೇಶ ಪ್ರವಾಸಗಳನ್ನು ಮಾಡುತ್ತಾರೆ ಎಂದು ರಾಹುಲ್ ಗಾಂಧಿ ಮಾಡಿದ ಟೀಕೆಗೆ ಈ ಸಂಭಾವ್ಯ ಹೂಡಿಕೆಗಳೇ ಉತ್ತರವೆನಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿ.ಕೆ. ಶಿವಕುಮಾರ್​​ – Kannada News | DyCM DK Shivakumar Visits Historic Madhyaranga Temple in Chamarajanagar’s Kollegal

ಚಾಮರಾಜನಗರ, ಮೇ 21: ಕೊಳ್ಳೇಗಾಲ ತಾಲೂಕಿನಲ್ಲಿರುವ ಐತಿಹಾಸಿಕ ಮಧ್ಯರಂಗ ದೇವಾಲಯದ ಜೀರ್ಣೋದ್ಧಾರ ಕಾರ್ಯಗಳು ಪೂರ್ಣಗೊಂಡಿವೆ. ಈ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡಿದ್ದಾರೆ. ಕಾವೇರಿ ನದಿಯ ತೀರದಲ್ಲಿರುವ ಈ ಪುಣ್ಯಕ್ಷೇತ್ರವು ಧಾರ್ಮಿಕ ಮಹತ್ವವನ್ನು ಹೊಂದಿದೆ. ರಾಜಕಾರಣದಲ್ಲಿ ಈ ಪ್ರದೇಶಕ್ಕೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೌಢ್ಯ ನಂಬಿಕೆ ಇದೆ. ಆದರೆ ಡಿ.ಕೆ.ಶಿವಕುಮಾರ್ ಅವರು ಇದು ಭಕ್ತಿ ಮತ್ತು ಭಗವಂತನ ನಡುವಿನ ಸಂಬಂಧಕ್ಕೆ ಸಂಬಂಧಿಸಿದ್ದು ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link