Category Archives: Blog

Your blog category

Inspiring: 9-5 ಸೆಕ್ಯೂರ್ಡ್ ಜಾಬ್ ಬಿಟ್ಟು ಮನಸ್ಸಿನ ಮಾತು ಕೇಳಿ ಹಣ ಮತ್ತು ನೆಮ್ಮದಿ ಕಂಡುಕೊಂಡ ರಿಮ್ಜಿಮ್ ಸೈಕಿಯಾ – Kannada News | Inspiring story of Rimjhim Saikia, the MD of Tatvik Ayurveda and Wellness Pvt Ltd

ಇವತ್ತಿನ ಸಂದರ್ಭದಲ್ಲಿ, ಸಾಮಾನ್ಯವಾಗಿ ಜನರು ಯಶಸ್ಸನ್ನು ಸುರಕ್ಷಿತ ಕೆಲಸದ ಆಧಾರದ ಮೇಲೆ ಪರಿಗಣಿಸುತ್ತಾರೆ. ಆದರೆ ಕೆಲವರು ತಮ್ಮ ಹೃದಯ ತುಡಿತವನ್ನು ಅನುಸರಿಸುತ್ತಾರೆ. ರಿಮ್​ಝಿಮ್ ಸೈಕಿಯಾ ಅಂತಹ ಒಬ್ಬ ಉದ್ಯಮಿ. ಈಕೆ ಕಾರ್ಪೊರೇಟ್ ಜಗತ್ತಿನಲ್ಲಿ ಆರಾಮದಾಯಕವಾದ ಕೆಲಸವನ್ನು ತೊರೆದು ಆಯುರ್ವೇದ ಮತ್ತು ಸ್ವಾಸ್ಥ್ಯದ ಮಾರ್ಗವನ್ನು ಆರಿಸಿಕೊಂಡರು. ಈ ನಿರ್ಧಾರ ಸುಲಭವಾಗಂತೂ ಇರಲಿಲ್ಲ. ಆದರೆ ಅವರು ತಮ್ಮ ವಿಶ್ವಾಸದ ಬಗ್ಗೆ ನಂಬಿಕೆ ಹೊಂದಿದ್ದರು. ಇಂದು, ಅವರು Tatvik Ayurveda and Wellness Pvt Ltd ನ ವ್ಯವಸ್ಥಾಪಕ ನಿರ್ದೇಶಕಿ. ಅವರ ಕಥೆ ಧೈರ್ಯ, ಕಠಿಣ ಪರಿಶ್ರಮ ಮತ್ತು ಸ್ವಾವಲಂಬನೆಯ ಉದಾಹರಣೆಯಾಗಿದೆ.

ಕಾರ್ಪೊರೇಟ್ ವೃತ್ತಿಜೀವನದ ಆರಂಭ

ರಿಮ್ಜಿಮ್ ಸೈಕಿಯಾ ವೃತ್ತಿಪರ ಕಾರ್ಪೊರೇಟ್ ಪರಿಸರದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ಐಐಟಿ ಡೆಲ್ಲಿಯಿಂದ ಡಿಜಿಟಲ್ ಮಾರ್ಕೆಟಿಂಗ್‌ನಲ್ಲಿ ಡಿಪ್ಲೊಮಾ ಪಡೆದರು. ನಂತರ ಅವರು ಎಚ್‌ಎಸ್‌ಬಿಸಿ ಮತ್ತು ವೊಡಾಫೋನ್‌ನಂತಹ ದೊಡ್ಡ ಅಂತರರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡಿದರು. ಸ್ಥಿರವಾದ ಸಂಬಳ ಮತ್ತು ಸ್ಥಿರವಾದ ಕೆಲಸದ ಹೊರತಾಗಿಯೂ, ಅವರಿಗೆ ಅದೇಕೋ ಜೀವನ ತೃಪ್ತಿ ತರುತ್ತಿಲ್ಲ ಎಂಬುದನ್ನು ಕಂಡುಕೊಂಡರು. ಸಮಾಜದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಏನನ್ನಾದರೂ ಮಾಡಲು ಅವರು ಬಯಸಿದ್ದರು.

ಆಯುರ್ವೇದದತ್ತ ಒಲವು

ತನ್ನ ಕಾರ್ಪೊರೇಟ್ ವೃತ್ತಿಜೀವನದ ಸಮಯದಲ್ಲಿಯೇ ರಿಮ್​ಝಿಮ್‌ಗೆ ಆಯುರ್ವೇದ ಮತ್ತು ಸ್ವಾಸ್ಥ್ಯದ ಕಡೆಗೆ ಒಲವು ಪ್ರಾರಂಭವಾಯಿತು. ಅದು ಕೇವಲ ಆಸಕ್ತಿಯಾಗಿರಲಿಲ್ಲ, ಕ್ರಮೇಣ ಅದು ಒಂದು ಗುರಿಯಾಗಿ ಮಾರ್ಪಟ್ಟಿತು. ಸಾಂಪ್ರದಾಯಿಕ ಆಯುರ್ವೇದ ಜ್ಞಾನವನ್ನು ಆಧುನಿಕ ಅಗತ್ಯಗಳಿಗೆ ಹೊಂದಿಕೊಳ್ಳಬಹುದು ಎಂದು ಈಕೆ ಅರಿತುಕೊಂಡರು. ಈ ಆಲೋಚನೆಯು ಅವರನ್ನು ದಿಟ್ಟ ಹೆಜ್ಜೆ ಇಡಲು ಪ್ರೇರೇಪಿಸಿತು. ತನ್ನ ಸೆಕ್ಯೂರ್ಡ್ ಜಾಬ್ ಅನ್ನು ತೊರೆಯುವ ದಿಟ್ಟ ನಿರ್ಧಾರ ತೆಗೆದುಕೊಂಡರು.

Tatvik Ayurveda ಪ್ರತಿಷ್ಠಾನ

9 ರಿಂದ 5ರ ಉದ್ಯೋಗವನ್ನು ತೊರೆದ ನಂತರ, ರಿಮಜಿಮ್ ಅವರು Tatvik Ayurveda and Wellness Pvt Ltd ಅನ್ನು ಸ್ಥಾಪಿಸಿದರು. ಸಾಂಪ್ರದಾಯಿಕ ಆಯುರ್ವೇದ ಮತ್ತು ಆಧುನಿಕ ವಿಜ್ಞಾನದ ಸಮ್ಮಿಲನದ ಮೇಲೆ ಈ ಬ್ರ್ಯಾಂಡ್ ಅನ್ನು ಸ್ಥಾಪಿಸಲಾಯಿತು. ಆರಂಭದಲ್ಲಿ ಸವಾಲುಗಳಿದ್ದರೂ, ಅವರು ತಮ್ಮ ತಾಳ್ಮೆ ಮತ್ತು ಶಿಸ್ತನ್ನು ಉಳಿಸಿಕೊಂಡರು. ಕ್ರಮೇಣ, Tatvik ತನ್ನ ಗುರುತನ್ನು ಸ್ಥಾಪಿಸಲು ಪ್ರಾರಂಭಿಸಿತು. ಇಂದು, ಬ್ರ್ಯಾಂಡ್ ತನ್ನ ಗುಣಮಟ್ಟದ ಆಯುರ್ವೇದ ಸ್ಕಿನ್​ಕೇರ್ ಉತ್ಪನ್ನಗಳಿಗೆ ಹೆಸರುವಾಸಿಯಾಗಿದೆ.

ಮಹಿಳಾ ಸಬಲೀಕರಣಕ್ಕೆ ಒಂದು ಉದಾಹರಣೆ

Tatvik Ayurvedaವು ಕೇವಲ ವ್ಯವಹಾರವಲ್ಲ, ಮಹಿಳಾ ಸಬಲೀಕರಣದ ಉದಾಹರಣೆಯೂ ಆಗಿದೆ. ರಿಮಝಿಮ್ ಅವರ ಕಂಪನಿಯು ಸುಮಾರು 80 ಪ್ರತಿಶತ ಮಹಿಳೆಯರನ್ನು ನೇಮಿಸಿಕೊಂಡಿದೆ. ಅವರು ಮಹಿಳೆಯರಿಗೆ ಉದ್ಯೋಗ ಮತ್ತು ಸ್ವಾವಲಂಬನೆ ಅವಕಾಶಗಳನ್ನು ಒದಗಿಸುತ್ತಾರೆ. ಮಹಿಳೆಯರು ಮುಂದುವರೆದಾಗ ಸಮಾಜವು ಬಲಗೊಳ್ಳುತ್ತದೆ ಎಂಬುದು ಅವರ ನಂಬಿಕೆ. ಈ ಆಲೋಚನೆಯು ಅವರ ಕಂಪನಿಯ ಕೆಲಸದ ಸಂಸ್ಕೃತಿಯಲ್ಲೂ (ವರ್ಕ್ ಕಲ್ಚರ್) ಪ್ರತಿಫಲಿಸುತ್ತದೆ.

ರಾಷ್ಟ್ರೀಯ ಮನ್ನಣೆ

ರಿಮ್ಜಿಮ್ ಸೈಕಿಯಾ ಅವರ ಕೆಲಸವನ್ನು ರಾಷ್ಟ್ರೀಯ ಮಟ್ಟದಲ್ಲಿಯೂ ಗುರುತಿಸಲಾಗಿದೆ. 2023 ರಲ್ಲಿ, ಕೇಂದ್ರ MSME ಸಚಿವರು ರಿಮಝಿಮ್ ಅವರನ್ನು ಟಾಪ್-12 ಉದಯೋನ್ಮುಖ ಮಹಿಳಾ ಉದ್ಯಮಿಗಳಲ್ಲಿ ಒಬ್ಬರೆಂದು ಗುರುತಿಸಿದರು. ಈ ಗೌರವವು ಅವರ ಕಠಿಣ ಪರಿಶ್ರಮಕ್ಕೆ ಸಾಕ್ಷಿಯಾಗಿದೆ.

ಯಶಸ್ಸಿಗೆ ಬಲವಾದ ದೃಢಸಂಕಲ್ಪ ಅತ್ಯಗತ್ಯ

ಕೇವಲ ಹಣ ಸಂಪಾದನೆಯಿಂದ ಫೈನಾನ್ಷಿಯಲ್ ಫ್ರೀಡಂ ಅಥವಾ ಹಣಕಾಸು ಸ್ವಾತಂತ್ರ್ಯ ಸಿಕ್ಕೋದಿಲ್ಲ ಎನ್ನುವ ಸತ್ಯವನ್ನು ರಿಮ್​ಝಿಮ್ ಸೈಕಿಯಾ ಅವರ ಜೀವನಕಥೆಯಿಂದ ತಿಳಿಯಬಹುದು. ತನ್ನ ಸ್ವಂತ ನಿರ್ಧಾರಗಳನ್ನು ನಂಬಿ ಮತ್ತು ಅವುಗಳನ್ನು ಶ್ರದ್ಧೆಯಿಂದ ಅನುಸರಿಸುವ ಮೂಲಕ ಅದನ್ನು ಸಾಧಿಸಬಹುದು. ಬಲವಾದ ದೃಢಸಂಕಲ್ಪದಿಂದ, ಸುರಕ್ಷಿತ ಮಾರ್ಗ ಅಲ್ಲದಿದ್ದರೂ ದೃಢಸಂಕಲ್ಪದಿಂದಲೇ ಯಶಸ್ಸನ್ನು ಸಾಧಿಸಬಹುದು ಎಂಬುದನ್ನು ಈ ಮಹಿಳೆಯನ್ನು ನೋಡಿ ಕಲಿಯಬಹುದು. ತಮ್ಮ ಕನಸ್ಸನ್ನು ಬೆಂಬತ್ತಿ ಹೋತಿ ನನಸಾಗಿಸಲು ಮನಸ್ಸು ಮಾಡಿರುವ ಯಾರಿಗಾದರೂ ಸರಿ ರಿಮ್​ಝಿಮ್ ಸ್ಫೂರ್ತಿಯಾಗುತ್ತಾರೆ.

ರಿಮ್ಜಿಮ್ ಸೈಕಿಯಾ

ಹೂಡಿಕೆದಾರರ ಶಿಕ್ಷಣ ಮತ್ತು ಜಾಗೃತಿ ಉಪಕ್ರಮಗಳು

ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಒಂದು ಬಾರಿಯ KYC (Know Your Customer) ಪ್ರಕ್ರಿಯೆಯ ಅಗತ್ಯವಿದೆ. SEBI ವೆಬ್​ಸೈಟ್​ನಲ್ಲಿ ವಿವರ ಹೊಂದಿರುವ ಹಾಗೂ ನೊಂದಾಯಿತವಾಗಿರುವ ಮ್ಯೂಚುವಲ್ ಫಂಡ್ ಕಂಪನಿಗಳೊಂದಿಗೆ ಮಾತ್ರ ಮಾಡಬೇಕು. ಹೂಡಿಕೆದಾರರು ಯಾವುದೇ ದೂರುಗಳಿಗಾಗಿ ನೇರವಾಗಿ AMC ಅನ್ನು ಸಂಪರ್ಕಿಸಬಹುದು ಅಥವಾ SCORES ಪೋರ್ಟಲ್‌ನಲ್ಲಿ (https://scores.gov.in) ದೂರು ಸಲ್ಲಿಸಬಹುದು. ಪರಿಹಾರವು ತೃಪ್ತಿಕರವಾಗಿಲ್ಲದಿದ್ದರೆ, Smart ODR ಪೋರ್ಟಲ್ (https://smartodr.in/login) ಅನ್ನು ಬಳಸಬಹುದು.

HDFC AMC ಬಗ್ಗೆ

HDFC ಅಸೆಟ್ ಮ್ಯಾನೇಜ್ಮೆಂಟ್ ಕಂಪನಿ ಲಿಮಿಟೆಡ್ ಭಾರತದ ಅತಿದೊಡ್ಡ ಮ್ಯೂಚುವಲ್ ಫಂಡ್ ಕಂಪನಿಗಳಲ್ಲಿ ಒಂದಾಗಿದೆ. ಇದನ್ನು 1999 ರಲ್ಲಿ ಸ್ಥಾಪಿಸಲಾಯಿತು ಮತ್ತು SEBI ಅನುಮೋದನೆ ಪಡೆದ ನಂತರ 2000 ರಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಇದು ಈಕ್ವಿಟಿ, ಫಿಕ್ಸೆಡ್ ಇನ್ಕಮ್ ಮತ್ತು ಇತರ ಹೂಡಿಕೆ ಆಯ್ಕೆಗಳನ್ನು ನಿರ್ವಹಿಸುತ್ತದೆ. ಮತ್ತು ದೇಶಾದ್ಯಂತ ಶಾಖೆಗಳನ್ನು ಹೊಂದಿದೆ. ಬ್ಯಾಂಕುಗಳು, ಸ್ವತಂತ್ರ ಹಣಕಾಸು ಸಲಹೆಗಾರರು ಮತ್ತು ರಾಷ್ಟ್ರೀಯ ವಿತರಕರ ಮೂಲಕ ಸೇವೆಗಳನ್ನು ಒದಗಿಸುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕೊನೆಗೂ ಕೂಡಿಬಂತು ಟೈಮ್: ರಾಹುಲ್ ಗಾಂಧಿ ಭೇಟಿ ಮಾಡಿದ್ದಕ್ಕೆ ಡಿಕೆಶಿ ಫುಲ್ ಖುಷ್ – Kannada News | Karnataka Power Tussle: DK Shivakumar Talks after Rahul Gandhi Met at Delhi

ನವದೆಹಲಿ, (ಜನವರಿ 16): ಸಂಕ್ರಾಂತಿಗೆ ಸೂರ್ಯ ಪಥ ಬದಲಾಗಿದೆ. ಹಾಗೆಯೇ ಕರ್ನಾಟಕ ಕಾಂಗ್ರೆಸ್​ನೊಳಗೂ ನಾಯಕತ್ವ ಬದಲಾವಣೆಯ ಚರ್ಚೆ ಗರಿಗೆದರಿದೆ. ಸಂಕ್ರಾಂತಿ ಕಳೆದು ಶಿವರಾತ್ರಿ ಬಂದರೂ ಕುರ್ಚಿ ಕಾಳಗ ಮುಂದುವರೆಯೋ ಎಲ್ಲ ಲಕ್ಷಣಗಳು ಗೋಚರಿಸ್ತಿವೆ. ಯಾಕಂದ್ರೆ ಅಸ್ಸಾಂ ಚುನಾವಣೆ ನೆಪದಲ್ಲಿ ದೆಹಲಿಗೆ ತೆರಳಿರುವ ಡಿಕೆ ಶಿವಕುಮಾರ್ ಅವರಿಗೆ ರಾಹುಲ್ ಗಾಂಧಿ ಭೇಟಿಗೆ ಅವಕಾಶ ಸಿಕ್ಕಿದೆ. ಹೌದು….ಕಳೆದ ಹಲವು ದಿನಗಳಿಂದ ರಾಹುಲ್ ಭೇಟಿಗೆ ಡಿಕೆ ಶಿವಕುಮಾರ್ ಕಸರತ್ತು ನಡೆಸಿದ್ದರು. ಆದ್ರೆ, ಅದು ಸಾಧ್ಯವಾಗದಕ್ಕೆ ದೆಹಲಿಯಿಂದ ಬರಿಗೈನಲ್ಲಿ ವಾಪಸ್ ಆಗುತ್ತಿದ್ದರು. ಆದ್ರೆ, ಇಂದು(ಜನವರಿ 16) ರಾಹುಲ್ ಗಾಂಧಿ ಭೇಟಿಗೆ ಸಮಯ ಕೂಡಿಬಂದಿದೆ. ಅಸ್ಸಾಂ ಚುನಾವಣೆ ಸಭೆ ಬಳಿಕ ಡಿಕೆ ಶಿವಕುಮಾರ್ ಅವರು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದ್ದು, ಖುಷಿ ಖುಷಿಯಲ್ಲೇ ರಾಹುಲ್ ನಿವಾಸದಿಂದ ವಾಪಸ್ ಆಗಿದ್ದಾರೆ.

ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಅಸ್ಸಾಂ ಚುನಾವಣೆ ಸಂಬಂಧ ಗಂಟೆಗಟ್ಟಲೇ ಸಭೆ ನಡೆಸಿ ಚರ್ಚಿಸಿದ್ದೇವೆ ಎಂದರು. ಇನ್ನು ಇದೇ ವೇಳೆ ರಾಹುಲ್ ಗಾಂಧಿ ಭೇಟಿ ‌ಮಾಡಿ ಚರ್ಚೆ ಮಾಡಿದ್ರಾ ಎಂದು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆಶಿ, ಅದೆಲ್ಲಾ ಹೇಳಲು ಆಗಲ್ಲ, ರಾಷ್ಟ್ರ ರಾಜಕಾರಣದ ಬಗ್ಗೆ ಚರ್ಚಿಸಿದ್ದೇವೆ. ಬೇರೆ ಏನೂ ಮಾತನಾಡಲು ನಾನು ತಯಾರಿಲ್ಲ. ಮಲ್ಲಿಕಾರ್ಜುನ ಖರ್ಗೆ ನಮ್ಮ ಅಧ್ಯಕ್ಷರು ಭೇಟಿಯಾಗುವುದು ಸಹಜ. ಪ್ರತಿ ನಿತ್ಯವೂ ಒಳ್ಳೆಯದೇ ಎಂದಿ ಹೇಳುತ್ತಿದ್ದೇನೆ ಅಲ್ವಾ? ಎಂದು ಹೇಳಿದರು.

ಇದನ್ನೂ ನೋಡಿ: ಕಾಂಗ್ರೆಸ್​​ನಲ್ಲಿ ಮಹತ್ವದ ಬೆಳವಣಿಗೆ: ಡಿಕೆಶಿಗೂ ಮೊದಲೇ ರಾಹುಲ್ ಗಾಂಧಿ ಭೇಟಿಯಾದ ಕೆಜೆ ಜಾರ್ಜ್

Source link

WPL 2026: ಡಬ್ಲ್ಯುಪಿಎಲ್ ಇತಿಹಾಸದಲ್ಲಿ ಮೊದಲ ಹ್ಯಾಟ್ರಿಕ್ ಗೆಲುವು ದಾಖಲಿಸಿದ ಆರ್​ಸಿಬಿ – Kannada News | RCB Dominates Gujarat Giants in WPL: Shreyanka Patil Shines, Creates New History with 3rd Consecutive Win

ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್​ನ 9ನೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಜೈಂಟ್ಸ್ ತಂಡಗಳು ಮುಖಾಮುಖಿಯಾದ್ದವು. ಬಲಿಷ್ಠ ತಂಡಗಳ ನಡುವಿನ ಈ ಕಾಳಗ ಸಾಕಷ್ಟು ಕುತೂಹಲ ಕೆರಳಿಸಿತ್ತು. ಅಂತಿಮವಾಗಿ ಸ್ಮೃತಿ ಮಂಧಾನ ಪಡೆ, ಗುಜರಾತ್ ತಂಡವನ್ನು ಮಣಿಸಿ ಈ ಆವೃತ್ತಿಯಲ್ಲಿ ಸತತ ಮೂರನೇ ಜಯ ದಾಖಲಿಸಿದೆ. ಈ ಮೂಲಕ ಮಹಿಳಾ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಆವೃತ್ತಿಯ ಮೊದಲ ಮೂರು ಪಂದ್ಯಗಳನ್ನು ಗೆದ್ದ ದಾಖಲೆಯನ್ನು ಆರ್​ಸಿಬಿ ನಿರ್ಮಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಆರ್​ಸಿಬಿ 183 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಗುಜರಾತ್ ಕನ್ನಡತಿ ಶ್ರೇಯಾಂಕ ಪಾಟೀಲ್ ಅವರ ಮಾರಕ ದಾಳಿಗೆ ನಲುಗಿ 150 ರನ್​ಗಳಿಗೆ ಆಲೌಟ್ ಆಯಿತು. ಈ ಮೂಲಕ ಆರ್​ಸಿಬಿ ಈ ಪಂದ್ಯವನ್ನು 32 ರನ್​ಗಳಿಂದ ಗೆದ್ದುಕೊಂಡಿತು.

Source link

ತಮಿಳುನಾಡಿನ ವೆಲ್ಲೂರಿನಲ್ಲಿ ಜಲ್ಲಿಕಟ್ಟು ಸ್ಪರ್ಧೆ; 200ಕ್ಕೂ ಹೆಚ್ಚು ಹೋರಿಗಳು ಭಾಗಿ – Kannada News | First annual bull race organised in Vellore watch video

ವೆಲ್ಲೂರು, ಜನವರಿ 16: ಪೊಂಗಲ್ ಹಬ್ಬದ ಸಂದರ್ಭದಲ್ಲಿ ತಮಿಳುನಾಡಿನಾದ್ಯಂತ ಸರ್ಕಾರ ಮತ್ತು ಸಾರ್ವಜನಿಕರು ಜಲ್ಲಿಕಟ್ಟು (Jallikattu), ಮಂಜು ವಿರಾಟು ಮತ್ತು ಹೋರಿ ಓಟದ ಸ್ಪರ್ಧೆಗಳನ್ನು ಆಯೋಜಿಸುತ್ತಾರೆ. ಇಂದು ವೆಲ್ಲೂರಿನಲ್ಲಿ ಹೋರಿ ಓಟ ಸ್ಪರ್ಧೆಯನ್ನು ನಡೆಸಲಾಯಿತು. ಇದರಲ್ಲಿ 200ಕ್ಕೂ ಹೆಚ್ಚು ಎತ್ತುಗಳು ಭಾಗವಹಿಸಿದ್ದವು. 2026ರ ಋತುವಿನ ಮೊದಲ ವಾರ್ಷಿಕ ಬುಲ್ ರೇಸ್ ಇಂದು ವೆಲ್ಲೂರಿನ ಪನಾಮದಂಗಿ, ಶಿವನಾಥಪುರಂ ಮತ್ತು ಗುಡಲವರಿಪಲ್ಲಿಯಲ್ಲಿ ಪ್ರಾರಂಭವಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

6 ಅಡಿ ಉದ್ದದ ಹಾವನ್ನು ಹಿಡಿದು ಆಟವಾಡುತ್ತಿದ್ದ ವೃದ್ಧನ ಕತೆ ಏನಾಯ್ತು? – Kannada News | Aged man dies after snake bitten 3 times while showing off with a 6 foot black cobra

ನವದೆಹಲಿ, ಜನವರಿ 16: ವೃದ್ಧನೊಬ್ಬ 6 ಅಡಿ ಉದ್ದದ ವಿಷಪೂರಿತ ಹಾವನ್ನು ಕೈಯಲ್ಲಿ ಹಿಡಿದು ಜನರೆದುರು ಹುಡುಗಾಟವಾಡುತ್ತಿದ್ದರು. ಆಗ ಆ ಹಾವು (Snake) 3 ಬಾರಿ ಆ ವ್ಯಕ್ತಿಗೆ ಕಚ್ಚಿದೆ. ಆದರೂ ಆ ವೃದ್ಧ ಹಾವನ್ನು ಕೆಳಗೆ ಬಿಡಲಿಲ್ಲ. ಅದನ್ನು ತಮ್ಮ ಕುತ್ತಿಗೆಯ ಸುತ್ತ ಹಿಡಿದುಕೊಂಡು ಜನರಿಂದ ಫೋಟೋ ತೆಗೆಸಿಕೊಳ್ಳುತ್ತಲೇ ಇದ್ದರು. ಕೊನೆಗೆ ಆ ಹಾವಿನ ವಿಷ ಮೈ ಪೂರ್ತಿ ಆವರಿಸಿಕೊಳ್ಳುತ್ತಿದ್ದಂತೆ ನಿತ್ರಾಣರಾದ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಅಲ್ಲಿ ಅವರು ಸಾವನ್ನಪ್ಪಿದರು. ಹಾವಿನೊಂದಿಗೆ ಆ ವೃದ್ಧ ಇರುವ ವೈರಲ್ ವಿಡಿಯೋ ಇಲ್ಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗಿಲ್ಲಿ ಎಂದರೆ ಯಾಕೆ ಅಷ್ಟು ಇಷ್ಟ? ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ ಹೇಳಿದ್ದಿಷ್ಟು.. – Kannada News | Gilli Nata fan reveals why he got Bigg Boss Kannada Season 12 Contestant Tattoo

ಕಾಮಿಡಿ ಕಲಾವಿದ ಗಿಲ್ಲಿ ನಟ (Gilli Nata) ಅವರಿಗೆ ಇರುವ ಅಭಿಮಾನಿ ಬಳಗ ಬಹಳ ದೊಡ್ಡದು. ಎಷ್ಟರಮಟ್ಟಿಗೆ ಎಂದರೆ ಗಿಲ್ಲಿ ಅವರ ಭಾವಚಿತ್ರವನ್ನು ಅನೇಕರು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಗಿಲ್ಲಿ ಅವರೇ ಈ ಬಾರಿ ಟ್ರೋಫಿ ಗೆಲ್ಲುತ್ತಾರೆ ಎಂಬುದು ಅಭಿಮಾನಿಗಳ ನಂಬಿಕೆ. ಟ್ಯಾಟೂ (Gilli Nata Tattoo) ಹಾಕಿಸಿಕೊಂಡ ಅಭಿಮಾನಿ ಗಿರೀಶ್ ಈಗ ಟಿವಿ9 ಜೊತೆ ಮಾತನಾಡಿದ್ದಾರೆ. ‘ನಾನು ಡ್ರೈವರ್. ಕೆಲಸ ಮುಗಿಸಿ ಬಂದು ಗಿಲ್ಲಿಯ ವಿಡಿಯೋ ನೋಡಿದರೆ ಮತ್ತೆ ಕೆಲಸ ಮಾಡಬೇಕು ಎಂಬ ಚೈತನ್ಯ ಬರುತ್ತದೆ. ಅವರು ರೈತನ ಮಗ. ಹಾಗಾಗಿ ಅವರು ಬೆಳೆಯಬೇಕು. ಕಾಮಿಡಿ ಕಿಲಾಡಿಗಳು ಶೋ ನೋಡಿ ನಾನು ಅವರ ಅಭಿಮಾನಿ ಆದೆ. ಅವರು ಬಿಗ್ ಬಾಸ್ ಫಿನಾಲೆಯಲ್ಲಿ ಗೆದ್ದೇ ಗೆಲ್ಲುತ್ತಾರೆ’ ಎಂದು ಗಿರೀಶ್ ಅವರು ಹೇಳಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಫಿನಾಲೆ ಜನವರಿ 18ರಂದು ನಡೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕರ್ನಾಟಕದಲ್ಲಿ ಮತ್ತೆ ಕಾಲೇಜ, ವಿಶ್ವವಿದ್ಯಾಲಯಗಳಲ್ಲಿ ಎಲೆಕ್ಷನ್: ವಿದ್ಯಾರ್ಥಿ ಚುನಾವಣೆ ಬೇಕಾ? ಬೇಡ್ವಾ? – Kannada News | Karnataka Government To Plan Students elections In College And universities

ಬೆಂಗಳೂರು, (ಜನವರಿ 16): ಕರ್ನಾಟಕದಲ್ಲಿ  (Karnataka) ಮತ್ತೆ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಚುನಾವಣೆಗಳನ್ನು (Students elections) ನಡೆಸುವ ಸಂಬಂಧ ರಾಜ್ಯ ಸರ್ಕಾರ ಮುಂದಾಗಿದೆ. ಇದಕ್ಕೆ ಪೂರಕವೆಂಬಂತೆ ಮೊದಲ ಹಂತದ ಸಭೆ ಸಹ ಆಗಿದೆ. ಉನ್ನತ್ತ ಶಿಕ್ಷಣ ಇಲಾಖೆಯು ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ವಿಶ್ವವಿದ್ಯಾಲಯಗಳಲ್ಲಿ ಚುನಾವಣೆ ನಡೆಸಲು ಗ್ರೀನ್ ಸಿಗ್ನಲ್ ಕೊಟ್ಟಿದೆ. ಆದ್ರೆ ಈ ಕಾಲೇಜುಗಳಲ್ಲಿ ಹಾಗೂ ವಿವಿಗಳಲ್ಲಿ ಚುನಾವಣೆ ಬೇಕಾ ?ಬೇಡ್ವಾ ಎನ್ನುವ ಬಗ್ಗೆ ಅಭಿಪ್ರಾಯ ಕೇಳಲಾಗಿದೆ.

ಕಾಲೇಜು ಹಾಗೂ ವಿವಿಗಳಲ್ಲಿ ವಿದ್ಯಾರ್ಥಿ ಚುನಾವಣೆ ನಡೆಸುವ ಸಂಬಂಧ ಈಗಾಗಲೇ ಸಮಿತಿ ರಚನೆ ಮಾಡಲಾಗಿದೆ. ಆದ್ರೆ ಇದಕ್ಕೆ ಈಗ ಕಾಲೇಜುಗಳಲ್ಲಿ ಹಾಗೂ ವಿವಿಗಳಲ್ಲಿ ಚುನಾವಣೆ ಬೇಕಾ? ಇದರಿಂದ ವಿದ್ಯಾರ್ಥಿಗಳ ನಡುವೆ ಜಗಳ ಕಿತ್ತಾಟ ಹೊಡೆದಾಟ ರಾಜಕೀಯ ಶುರುವಾಗುತ್ತೆ ಎನ್ನುವ ಪರ ವಿರೋಧ ಅಭಿಪ್ರಾಯ ಕೇಳಿ ಬಂದಿತ್ತು. ಹೀಗಾಗಿ ಸರ್ಕಾರ ಕಾಲೇಜು ಹಾಗೂ ವಿವಿಗಳಲ್ಲಿ ವಿದ್ಯಾರ್ಥಿ ಚುನಾವಣೆ ಬೇಕಾ ಬೇಡ್ವ ಎಂಬುವುದರ ಕುರಿತು ಶಿಕ್ಷಣ ತಜ್ಞರು ಸಾರ್ವಜನಿಕರು ಹಾಗೂ ಪೋಷಕರಿಂದ ಅಭಿಪ್ರಾಯ ಸಂಗ್ರಹಣೆಗೆ ಮುಂದಾಗಿದೆ.

ಇದನ್ನೂ ಓದಿ: CUET PG 2026: CUET PG ಆನ್‌ಲೈನ್ ಅರ್ಜಿ ಸಲ್ಲಿಕೆ ಗಡುವು ವಿಸ್ತರಣೆ; ಜ. 20ರ ವರೆಗೆ ಅವಕಾಶ

ನಿಮ್ಮ ಅಭಿಪ್ರಾಯವನ್ನು ಮೇಲ್ ಮಾಡಿ

ಪೋಷಕರು ಹಾಗೂ ಸಾರ್ವಜನಿಕರ ಅಭಿಪ್ರಾಯ ಏನು ಎಂಬ ಅಭಿಪ್ರಾಯ ಪಡೆದು ಚುನಾವಣೆ ಅಖಾಡಕ್ಕೆ ತಯಾರಿ ತಯಾರಿ ಮಾಡಲಾಗುತ್ತದೆ. ಹೀಗಾಗಿ ಅಭಿಪ್ರಾಯ ಸಂಗ್ರಹಕ್ಕೆ ಪ್ರತ್ಯೇಕ ಮೇಲ್ ಐಡಿ ಕೂಡಾ ನೀಡಿ ಪೋಷಕರ ಅಭಿಪ್ರಾಯ ಕೇಳಿದೆ. ಸಾರ್ವಜನಿಕರು ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ karstudentselections@gmail.com ಇಲ್ಲಿ ಸಲಹೆ ರೂಪದಲ್ಲಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಬಹುದಾಗಿದೆ.

ಸರ್ಕಾರದ ನಿಲುವು ಏನು?

ಯುವಕರಲ್ಲಿ ಪ್ರಜಾಪ್ರಭುತ್ವದ ಬಗ್ಗೆ ತಿಳಿವಳಿಕೆ ಅರಿವು ಇರಬೇಕು. ನಾಯಕತ್ವ ಗುಣ ಅಳವಡಿಸಿಕೊಳ್ಳೋದಕ್ಕೆ ಇದು ಬುನಾದಿ ಆಗತ್ತೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸಬೇಕಾದರೆ ಚುನಾವಣೆ ನಡೆಸುವುದು ಅತ್ಯಗತ್ಯ ಎನ್ನುವುದು ಸರ್ಕಾರದ ಅಭಿಪ್ರಾಯವಾಗಿದೆ.

ಕಮಿಟಿ ಮುಖ್ಯಸ್ಥರು ಹೇಳುವುದೇನು?

ಇನ್ನು ಈ ಬಗ್ಗೆ ಮಾತನಾಡಿರುವ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ರಾಜ್ಯದ ಕಾಲೇಜುಗಳಲ್ಲಿ ಚುನಾವಣೆಗಳು ಆಗಬ್ಬೇಕು. ಅದರ ಬಗ್ಗೆ ಸಾಧಕ ಬಾಧಕಗಳ ಬಗ್ಗೆ ಒಂದು ವರದಿ ಒಪ್ಪಿಸಲಿಕ್ಕೆ ಹೇಳಿದ್ದಾರೆ. ಆ ಕಮಿಟಿ ಮುಖ್ಯಸ್ಥನನ್ನಾಗಿ ನನ್ನನ್ನ ನೇಮಕ ಮಾಡಿದ್ದಾರೆ. ಈಗಾಗಲೇ ಒಂದು ಸಭೆ ಮಾಡಿದ್ದೇವೆ. ಈಗ ಚುನಾವಣೆಗಳನ್ನ ಮಾಡ್ಬೇಕಂದ್ರೆ ಹೇಗೆ ಮಾಡಬೇಕು? ಅದರ ರೂಪುರೇಷೆ ಹೇಗಿರಬೇಕು? ಟರ್ಮ್ಸ್ ಆಫ್ ರೆಫರನ್ಸ್ ಬಗ್ಗೆ ಚರ್ಚೆ ಆಗಿದೆ. ಸಾರ್ವಜನಿಕರ ಅಭಿಪ್ರಾಯದ ಆಧಾರದ ಮೇಲೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ತಿವಿ ಎಂದಿದ್ದಾರೆ.

ಒಟ್ಟಿನಲ್ಲಿ ದಶಕಗಳ ಬಳಿಕ ಬ್ಯಾನ್ ಮಾಡಿದ್ದ ಎಲೆಕ್ಷನ್ ಈಗ ಮತ್ತೆ ಕಾಲೇಜು ಹಾಗೂ ವಿವಿಗಳಲ್ಲಿ ನಡೆಸಲು ಸರ್ಕಾರ ಮುಂದಾಗಿದೆ. ಈ ಬಗ್ಗೆ ವಿದ್ಯಾರ್ಥಿಗಳು ಸಾರ್ವಜನಿಕರು ಶಿಕ್ಷಕರು ಸೇರಿದಂತೆ ಅನೇಕರ ಅಭಿಪ್ರಾಯಗಳನ್ನು ಸಲಹೆಗಳ ರೂಪದಲ್ಲಿ ಪಡೆಯಲು ಸಮಿತಿ ಮುಂದಾಗಿದ್ದು, ಕಾಲೇಜು ವಿವಿಗಳಲ್ಲಿ ಈ ವರ್ಷದಿಂದಲೇ ಮತ್ತೆ ಚುನಾವಣೆ ಆಂಭವಾಗುತ್ತಾ ಅಂತ ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 10:21 pm, Fri, 16 January 26

Source link

6 ಬೌಂಡರಿ, 3 ಸಿಕ್ಸರ್‌, 66 ರನ್..! ಚೊಚ್ಚಲ ಅರ್ಧಶತಕ ಚಚ್ಚಿದ ರಾಧಾ ಯಾದವ್ – Kannada News | RCB vs GG WPL: Radha Yadav’s Stunning 66, Richa Ghosh’s 44 Guide RCB to 183

ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್​ನ 9ನೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಆರ್​ಸಿಬಿ 183 ರನ್ ಕಲೆಹಾಕಿದೆ. ತಂಡ ಈ ಬೃಹತ್ ಮೊತ್ತ ಕಲೆಹಾಕುವಲ್ಲಿ ಆಲ್‌ರೌಂಡರ್ ರಾಧಾ ಯಾದವ್ ಅವರ ಪ್ರದರ್ಶನ ಪ್ರಮುಖ ಪಾತ್ರವಹಿಸಿತು. ಆರ್​ಸಿಬಿ ಕೇವಲ 43 ರನ್​ಗಳಿಗೆ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾಗ ಬ್ಯಾಟಿಂಗ್​ಗೆ ಬಂದ ರಾಧಾ, ರಿಚಾ ಜೊತೆ ಉತ್ತಮ ಜೊತೆಯಾಟ ಕಟ್ಟಿದರು.

ಈ ಜೋಡಿ ಐದನೇ ವಿಕೆಟ್​ಗೆ 66 ಎಸೆತಗಳಲ್ಲಿ 105 ರನ್​ಗಳ ಜೊತೆಯಾಟವನ್ನಾಡಿ ತಂಡವನ್ನು 148 ರನ್​ಗಳಿಗೆ ಕೊಂಡೊಯ್ಯಿತು. ಈ ಹಂತದಲ್ಲಿ ರಿಚಾ ಘೋಷ್ 28 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ 44 ರನ್ ಗಳಿಸಿದರೆ, ರಾಧಾ ಯಾದವ್ 47 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್‌ಗಳೊಂದಿಗೆ 66 ರನ್ ಗಳಿಸಿದರು. ಇದು ಮಹಿಳಾ ಪ್ರೀಮಿಯರ್ ಲೀಗ್​ನಲ್ಲಿ ರಾಧಾ ಯಾದವ್ ಅವರ ಚೊಚ್ಚಲ ಅರ್ಧಶತಕವಾಗಿದೆ. ಈ ಇಬ್ಬರನ್ನು ಹೊರತುಪಡಿಸಿ ನಾಡಿನ್ ಡಿ ಕ್ಲರ್ಕ್ 12 ಎಸೆತಗಳಲ್ಲಿ 26 ರನ್ ಗಳಿಸಿದರು.

Source link

ಗಿಲ್ಲಿಯಿಂದ ಅಶ್ವಿನಿ ಗೌಡ ತನಕ: ಬಿಗ್ ಬಾಸ್ ಫಿನಾಲೆ ಸ್ಪರ್ಧಿಗಳ ಪ್ಲಸ್ ಏನು? ಮೈನಸ್ ಏನು? – Kannada News | Plus and Minus of Bigg Boss Kannada Season 12 Finale contestants Gilli Nata Ashwini Gowda

ನೋಡನೋಡುತ್ತಿದ್ದಂತೆಯೇ ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಫಿನಾಲೆ ಬಂದೇ ಬಿಟ್ಟಿದೆ. ಎಲ್ಲವೂ ನಿನ್ನೆ ಮೊನ್ನೆ ಶುರು ಆದಂತಿದೆ. ಆದರೆ ಮೂರೂವರೆ ತಿಂಗಳು ಕಳೆದುಹೋಗಿದೆ. ಹಲವಾರು ಸ್ಪರ್ಧಿಗಳಿಂದ ತುಂಬಿದ್ದ ಬಿಗ್ ಬಾಸ್ ಮನೆ ಈಗ ಕೇವಲ 6 ಮಂದಿಗೆ ಬಂದು ನಿಂತಿದೆ. ಅಶ್ವಿನಿ ಗೌಡ, ಕಾವ್ಯಾ ಶೈವ, ಮ್ಯೂಟೆಂಟ್ ರಘು, ಧನುಷ್, ರಕ್ಷಿತಾ ಶೆಟ್ಟಿ ಹಾಗೂ ಗಿಲ್ಲಿ ನಟ (Gilli Nata) ಅವರು ಫಿನಾಲೆ ತಲುಪಿದ್ದಾರೆ. ಜನವರಿ 18ರಂದು ಅದ್ದೂರಿಯಾಗಿ ‘ಬಿಗ್ ಬಾಸ್ ಕನ್ನಡ 12’ ಫಿನಾಲೆ (BBK 12 Finale) ನಡೆಯಲಿದೆ. ಫಿನಾಲೆ ತಲುಪಿದ 6 ಸ್ಪರ್ಧಿಗಳಿಗೆ ಕೆಲವು ಪ್ಲಸ್ ಮತ್ತು ಮೈಸನ್ ಅಂಶಗಳು ಇವೆ.

ಕಾವ್ಯಾ ಶೈವ: ಬಿಗ್ ಬಾಸ್ ಆಟದಲ್ಲಿ ಕಾವ್ಯಾ ಅವರು ಗಿಲ್ಲಿ ನಟ ಜೊತೆ ಜಂಟಿಯಾಗಿ ಎಂಟ್ರಿ ನೀಡಿದ್ದರು. ಅದು ಅವರಿಗೆ ಪ್ಲಸ್ ಆಯಿತು. ಆದರೆ ಅತಿಯಾಗಿ ಗಿಲ್ಲಿ ಜೊತೆ ಕಾಣಿಸಿಕೊಂಡಿದರು. ಕುಟುಂಬದವರು ಬಂದಾಗ ಹೊರಗಿನ ವಿಷಯ ಕೇಳಿ ತಿಳಿದುಕೊಂಡರು. ಗಿಲ್ಲಿ ನೆರಳಲ್ಲಿ ಕಾವ್ಯಾ ಇದ್ದಾರೆ ಎಂಬ ಟೀಕೆ ಇದೆ. ಅದರಿಂದ ಅವರಿಗೆ ಮೈನಸ್ ಆಗಿದೆ. ಎಮೋಷನಲ್ ಆಗಿ ಗಟ್ಟಿಗಿತ್ತಿ. ಟಾಸ್ಕ್ ಚೆನ್ನಾಗಿ ಆಡಿದ್ದಾರೆ. ಇವೆಲ್ಲವೂ ಅವರಿಗೆ ಪ್ಲಸ್ ಆಗಿದೆ.

ಧನುಷ್ ಗೌಡ: ಕಿರುತೆರೆ ನಟ ಧನುಷ್ ಗೌಡ ಅವರು ಎಲ್ಲರಿಗಿಂತ ಮೊದಲು ಫಿನಾಲೆ ತಲುಪಿ ಭೇಷ್ ಎನಿಸಿಕೊಂಡರು. ಯಾವುದೇ ಸಂದರ್ಭದಲ್ಲಿ ಅವರು ವ್ಯಕ್ತಿತ್ವ ಕಳೆದುಕೊಂಡಿಲ್ಲ. ಎಲ್ಲರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಎಲ್ಲರಿಗಿಂತ ಚೆನ್ನಾಗಿ ಟಾಸ್ಕ್ ಆಡಿದ್ದಾರೆ. ಈ ಗುಣಗಳು ಅವರಿಗೆ ಪ್ಲಸ್ ಆಗಿದೆ. ಆದರೆ ಮನರಂಜನೆ ನೀಡುವಲ್ಲಿ ಅವರು ಹಿಂದೆ ಬಿದ್ದಿದ್ದಾರೆ. ಇದು ಅವರಿಗೆ ಮೈನಸ್ ಆಗುತ್ತದೆ.

ಮ್ಯೂಟೆಂಟ್ ರಘು: ಬಿಗ್ ಬಾಸ್ ಮನೆಯಲ್ಲಿ ರಘು ಅವರು ಹಿರಿಯ ಸ್ಪರ್ಧಿಯಾಗಿ ಘನತೆ ಕಾಪಾಡಿಕೊಂಡಿದ್ದಾರೆ. ಟಾಸ್ಕ್ ಉತ್ತಮವಾಗಿ ಆಡಿದ್ದಾರೆ. ಪ್ರತಿಸ್ಪರ್ಧಿಗಳು ತಮಗಿಂತ ಚೆನ್ನಾಗಿ ಆಟ ಆಡಿದಾಗ ಮೆಚ್ಚುಗೆ ಸೂಚಿಸಿದ್ದಾರೆ. ಇದೆಲ್ಲವೂ ಅವರಿಗೆ ಪ್ಲಸ್ ಆಗಿದೆ. ಆದರೆ ಅವರು ವೈಲ್ಡ್ ಕಾರ್ಡ್ ಸ್ಪರ್ಧಿ. ಆರಂಭದಲ್ಲಿ ಇದ್ದ ಜೋಶ್ ನಂತರದ ದಿನಗಳಲ್ಲಿ ಉಳಿಸಿಕೊಳ್ಳಲಿಲ್ಲ. ವೀಕ್ಷಕರಿಗೆ ಮನರಂಜನೆ ಕೂಡ ಹೆಚ್ಚು ನೀಡಲಿಲ್ಲ. ಇವು ರಘು ಅವರ ಮೈನಸ್ ಪಾಯಿಂಟ್.

ರಕ್ಷಿತಾ ಶೆಟ್ಟಿ: ಚಿಕ್ಕ ಹುಡುಗಿ ಎಂಬ ಕಾರಣಕ್ಕೆ ರಕ್ಷಿತಾ ಶೆಟ್ಟಿಯನ್ನು ಬೆಂಬಲಿಸುವ ವರ್ಗ ಇದೆ. ತುಳುನಾಡಿನ ಪ್ರೇಕ್ಷಕರು ರಕ್ಷಿತಾ ಶೆಟ್ಟಿಗೆ ಬೆಂಬಲ ನೀಡುತ್ತಾರೆ. ನೇರ ನಡೆ-ನುಡಿಯಿಂದ ಅವರು ಗುರುತಿಸಿಕೊಂಡಿದ್ದಾರೆ. ಇದೆಲ್ಲ ಅವರಿಗೆ ಪ್ಲಸ್ ಆಗಲಿದೆ. ಪ್ರಭುದ್ಧತೆ ಇಲ್ಲದ ಕಾರಣ ಅವರು ಕೆಲವೊಮ್ಮೆ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿದ್ದರು. ಕನ್ನಡ ಸರಿಯಾಗಿ ಮಾತನಾಡಲ್ಲ. ಅದು ಅವರಿಗೆ ಮೈಸನ್ ಆಗುತ್ತದೆ.

ಅಶ್ವಿನಿ ಗೌಡ: ಆರಂಭದಲ್ಲಿ ಅಶ್ವಿನಿ ಗೌಡ ಅವರು ಏರು ಧ್ವನಿಯಲ್ಲಿ ಮಾತನಾಡುತ್ತಿದ್ದರು. ಜಾಹ್ನವಿ ಜೊತೆ ಸೇರಿಕೊಂಡು ರಕ್ಷಿತಾ ಶೆಟ್ಟಿ ವಿರುದ್ಧ ಸಂಚು ರೂಪಿಸಿದ್ದರು. ರಕ್ಷಿತಾ, ರಾಶಿಕಾ ಮುಂತಾದ ಮಹಿಳಾ ಸ್ಪರ್ಧಿಗಳ ಬಗ್ಗೆ ಕೀಳಾಗಿ ಮಾತನಾಡಿದ್ದರು. ಈ ಎಲ್ಲ ಅಂಶಗಳು ಅಶ್ವಿನಿ ಗೌಡ ಅವರಿಗೆ ಮೈನಸ್ ಆಗಿವೆ. ನಂತರದ ದಿನಗಳಲ್ಲಿ ಅಶ್ವಿನಿ ಅವರು ತಮ್ಮ ಗುಣ ಬದಲಿಸಿಕೊಂಡರು. ತಾಳ್ಮೆ ರೂಢಿಸಿಕೊಂಡರು. ಮಾಡಿದ್ದ ತಪ್ಪಿಗೆ ಕ್ಷಮೆ ಕೇಳಿದರು. ವಯಸ್ಸಿನ ಮಿತಿ ಬದಿಗಿಟ್ಟು ಟಾಸ್ಕ್ ಚೆನ್ನಾಗಿ ಆಡಿದರು. ಇವು ಅಶ್ವಿನಿ ಗೌಡ ಅವರಿಗೆ ಪ್ಲಸ್ ಆಗಿವೆ.

ಇದನ್ನೂ ಓದಿ: ಗಿಲ್ಲಿ ನಟನ ಹುಟ್ಟೂರಲ್ಲಿ ಬ್ಯಾನರ್, ಕಟೌಟ್: ಹಳ್ಳಿ ಮಂದಿ ಖುಷಿ ನೋಡಿ..

ಗಿಲ್ಲಿ ನಟ: ಕಾಮಿಡಿ ವಿಚಾರದಲ್ಲಿ ಗಿಲ್ಲಿಯೇ ಕಿಂಗ್. ವೀಕ್ಷಕರಿಗೆ ಅವರು ಭರ್ಜರಿ ಮನರಂಜನೆ ನೀಡಿದರು. ಆರಂಭದಿಂದ ಕೊನೇ ತನಕ ಎನರ್ಜಿ ಕಳೆದುಕೊಂಡಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ಭರ್ಜರಿ ಫ್ಯಾನ್ ಫಾಲೋಯಿಂಗ್ ಇದೆ. ಪ್ರತಿ ದಿನವೂ ಗಿಲ್ಲಿ ಹೈಲೈಟ್ ಆದರು. ಇವೆಲ್ಲವೂ ಅವರಿಗೆ ಪ್ಲಸ್ ಆಗಿದೆ. ಆದರೆ ಇತರರನ್ನು ಹೀಯಾಳಿಸಿ ಅವರು ಕಾಮಿಡಿ ಮಾಡಿದ್ದು ಸರಿಯಲ್ಲ. ಟಾಸ್ಕ್ ವಿಚಾರದಲ್ಲಿ ಗಿಲ್ಲಿ ಹೆಚ್ಚು ಸ್ಕೋರ್ ಮಾಡಲಿಲ್ಲ. ಮನೆ ಕೆಲಸದಲ್ಲೂ ಅವರು ಸೋಮಾರಿತನ ತೋರಿಸಿದರು. ಹೆಚ್ಚಿನ ಸಂದರ್ಭದಲ್ಲಿ ಕಾವ್ಯಾ ಪರ ವಹಿಸಿದರು. ಇದೆಲ್ಲವೂ ಗಿಲ್ಲಿ ಅವರಿಗೆ ಮೈನಸ್ ಆಗುತ್ತವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 10:01 pm, Fri, 16 January 26

Source link

ನಂದಿನಿ ಸೇರಿ ಹಲವು ಕಂಪನಿಗಳ ನಕಲಿ ಹಾಲು ತಯಾರಿಕಾ ಜಾಲ ಪತ್ತೆ – Kannada News | Kolar: KGF Milk Adulteration Exposed; 8 Arrested for Multi Brand Fake Milk Production

ಕೋಲಾರ, ಜನವರಿ 16: ಹಲವು ಬ್ರ್ಯಾಂಡ್‌ ಕಂಪನಿಗಳ ಕಲಬೆರಕೆ ಹಾಲನ್ನು (Fake Milk) ತಯಾರಿಸುತ್ತಿದ್ದ 8 ಜನರನ್ನು ಕೆಜಿಎಫ್ (KGF) ಪೊಲೀಸರು ಬಂಧಿಸಿದ್ದಾರೆ. ಕಳೆದ ರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ ಬಂಧಿಸಿ, ಕಲಬೆರಕೆಗೆ ಉಪಯೋಗಿಸುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಆಂಧ್ರ ಮೂಲದ ವೆಂಕಟೇಶಪ್ಪ (50), ಬಾಲಾಜಿ (35), ದಿಲೀಪ್ (25), ಬಾಲರಾಜ್ (33), ಮನೋಹರ್ (28), ಕಾರ್ತಿಕ್ (29), ಮನೋಜ್ (22) ಮತ್ತು ಮಂಜುನಾಥ್ (55) ಬಂಧಿತ ಆರೋಪಿಗಳು.

ನಕಲಿ ಹಾಲು ತಯಾರಿಕೆ ಅಡ್ಡೆ ಮೇಲೆ ದಾಳಿ

ಕೆಜಿಎಫ್ ನಗರದ ಬಳ್ಳಗೆರೆ ಹೊರವಲಯದ ಗ್ರಾಮದ ತೋಟದ ಮನೆಯಲ್ಲಿ ಪಾಮ್ ಆಯಿಲ್ ಹಾಗೂ ರಾಸಾಯನಿಕ ವಸ್ತುಗಳನ್ನು ಉಪಯೋಗಿಸಿಕೊಂಡು ಅಕ್ರಮವಾಗಿ ನಕಲಿ ಹಾಲು ತಯಾರಿಕೆ ಮಾಡಲಾಗುತ್ತಿದೆ ಎಂಬ ಮಾಹಿತಿ ಪಡೆದ ಅಂಡರ್‌ಸನ್ ಪೇಟೆ ಪೊಲೀಸರು ದಾಳಿ ಮಾಡಿದ್ದಾರೆ.

ಇದನ್ನೂ ಓದಿ: ಮಧುಗಿರಿ: ಕಲಬೆರಕೆ ಸೇಂದಿ ಸೇವಿಸಿ ಕರ್ನಾಟಕ, ಆಂಧ್ರ ಪ್ರದೇಶದ 15 ಮಂದಿ ಅಸ್ವಸ್ಥ

ಒಂದು ಲೀಟರ್ ಮಿಶ್ರಣದಿಂದ 20 ಲೀಟರ್ ಹಾಲು ತಯಾರು ಮಾಡಲಾಗುತ್ತಿತ್ತು. ಹೀಗೆ ತಯಾರು ಮಾಡಿದ ಹಾಲನ್ನು ಬೇತಮಂಗಲ ಸೇರಿದಂತೆ ಇತರೆ ಪ್ರದೇಶದ ಡೈರಿಗಳಿಗೆ ಸರಬರಾಜು ಮಾಡಲಾಗುತ್ತಿತ್ತು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಬಂಧಿತ ಆರೋಪಿಗಳು ನಂದಿನಿ ಸೇರಿದಂತೆ ವಿವಿಧ ಬ್ರ್ಯಾಂಡ್‌ ಹೆಸರಲ್ಲಿ ಕಲಬೆರಕೆ ಹಾಲನ್ನು ತಯಾರು ಮಾಡಿ ಮಾರಾಟ ಮಾಡುತ್ತಿದ್ದರು. ಇನ್ನು ದಾಳಿ ವೇಳೆ 500 ಗ್ರಾಂ ನಂದಿನ ಹಾಲಿನ ಪುಡಿಯ 350 ಪಾಕೆಟ್, ಒಂದು ಕೆಜಿ ತೂಕದ 40 ಪಾಕೆಟ್, ಮಿಲೆಟ್ ಮಿಲ್ಕ್ ಲಡ್ಡು 12 ಪಾಕೆಟ್, 500 ಗ್ರಾಂ ಸಾಮರ್ಥ್ಯದ 7 ಬೆಲ್ಲದ ಪಾಕೆಟ್, 900 ಪಾಕೆಟ್ ಪಾಮ್ ಆಯಿಲ್, ಎರಡು ಮಿಕ್ಸಿ, 38 ಲೀಟರ್ ಸಾಮರ್ಥ್ಯದ 51 ಹಾಲಿನ ಕ್ಯಾನ್, ಹಾಲು ಸರಬರಾಜು ಮಾಡುತ್ತಿದ್ದ ಎರಡು ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ನಕಲಿ ನಂದಿನಿ ತುಪ್ಪ ಕಡಿವಾಣಕ್ಕೆ KMF ಹೊಸ ಪ್ರಯೋಗ: ಕ್ಯೂ ಆರ್ ಕೋಡಿನಲ್ಲೇ ಅಸಲಿ, ನಕಲಿ ಪತ್ತೆ

ನಂದಿನಿ ಸಂಸ್ಥೆ ಹೊರಗಡೆ ಮಾರಾಟ ಮಾಡದ ಹಾಲಿನ ಪೌಡರ್ ಹಾಗೂ ಅಂಗನವಾಡಿ ಕೇಂದ್ರಕ್ಕೆ ನೀಡಲಾಗುವ ಪೌಷ್ಠಿಕ ಆಹಾರದ ಪಾಕೆಟ್‌ಗಳು ಆರೋಪಿಗಳ ಬಳಿಗೆ ಹೇಗೆ ಬಂದವು, ಇದರಲ್ಲಿ ಯಾರಾದರೂ ಸರ್ಕಾರಿ ನೌಕರರು ಶಾಮಿಲಾಗಿದ್ದಾರೆಯೇ ಎಂಬುದರ ಬಗ್ಗೆ ಕೂಡ ತನಿಖೆ ನಡೆಸಲಾಗುತ್ತಿದೆ ಕೆಜಿಎಫ್ ಎಸ್​ಪಿ ಶಿವಾಂಶು ರಜಪೂತ್​​​ ಹೇಳಿದ್ದಾರೆ. ಇನ್ನು ಡಿವೈಎಸ್‌ಪಿ ಲಕ್ಷ್ಮಯ್ಯ, ಸರ್ಕಲ್ ಇನ್‌ಸ್ಪೆಕ್ಟರ್‌ ಪಿಎಂ ನವೀನ್, ಮಾರ್ಕೊಂಡಯ್ಯ ಉಪಸ್ಥಿತರಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link