Category Archives: Blog

Your blog category

ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿ.ಕೆ. ಶಿವಕುಮಾರ್​​ – Kannada News | DyCM DK Shivakumar Visits Historic Madhyaranga Temple in Chamarajanagar’s Kollegal

ಚಾಮರಾಜನಗರ, ಮೇ 21: ಕೊಳ್ಳೇಗಾಲ ತಾಲೂಕಿನಲ್ಲಿರುವ ಐತಿಹಾಸಿಕ ಮಧ್ಯರಂಗ ದೇವಾಲಯದ ಜೀರ್ಣೋದ್ಧಾರ ಕಾರ್ಯಗಳು ಪೂರ್ಣಗೊಂಡಿವೆ. ಈ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡಿದ್ದಾರೆ. ಕಾವೇರಿ ನದಿಯ ತೀರದಲ್ಲಿರುವ ಈ ಪುಣ್ಯಕ್ಷೇತ್ರವು ಧಾರ್ಮಿಕ ಮಹತ್ವವನ್ನು ಹೊಂದಿದೆ. ರಾಜಕಾರಣದಲ್ಲಿ ಈ ಪ್ರದೇಶಕ್ಕೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೌಢ್ಯ ನಂಬಿಕೆ ಇದೆ. ಆದರೆ ಡಿ.ಕೆ.ಶಿವಕುಮಾರ್ ಅವರು ಇದು ಭಕ್ತಿ ಮತ್ತು ಭಗವಂತನ ನಡುವಿನ ಸಂಬಂಧಕ್ಕೆ ಸಂಬಂಧಿಸಿದ್ದು ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸರಯು ನದಿಗೆ ಅತ್ತೆಯ ಅಂತ್ಯಕ್ರಿಯೆಗೆ ಬಂದಿದ್ದ ಅಳಿಯನನ್ನು ಎಳೆದೊಯ್ದ ಮೊಸಳೆ – Kannada News | Man Reportedly Dragged Away by Crocodile During Funeral Rituals in Uttar Pradesh

ಮೊಸಳೆ ದಾಳಿಗೆ ಬಲಿಯಾದ ವ್ಯಕ್ತಿImage Credit source: India Today

ಲಕ್ನೋ, ಮೇ 21: ಅತ್ತೆಯ ಅಂತ್ಯಕ್ರಿಯೆಗೆಂದು ಬಂದಿದ್ದ ಅಳಿಯನನ್ನು ಮೊಸಳೆ(Crocodile)ಯೊಂದು ಎಳೆದೊಯ್ದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಬುಧವಾರ ಉತ್ತರ ಪ್ರದೇಶದ ಸರಯು ನದಿಯ ದಡದಲ್ಲಿ 30 ವರ್ಷದ ಯುವಕನೊಬ್ಬನ ಮೇಲೆ ಮೊಸಳೆ ದಾಳಿ ನಡೆಸಿ, ನದಿಯ ಆಳಕ್ಕೆ ಎಳೆದೊಯ್ದಿರುವ ಅತ್ಯಂತ ದಾರುಣ ಘಟನೆ ವರದಿಯಾಗಿದೆ. ಗ್ರೇಟರ್ ನೋಯ್ಡಾ ನಿವಾಸಿಯಾದ ದೀಪಕ್ ಶರ್ಮಾ ಎಂಬ ವ್ಯಕ್ತಿ, ತಮ್ಮ ಅತ್ತೆಯ ನಿಧನದ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಗೊಂಡಾ ಜಿಲ್ಲೆಯ ಉಮ್ರಿ ಗ್ರಾಮಕ್ಕೆ ಬಂದಿದ್ದರು.

ನದಿಯ ದಡದಲ್ಲಿ ಅಂತ್ಯಕ್ರಿಯೆಯ ಚಿತೆಯನ್ನು ಸಿದ್ಧಪಡಿಸಲು ಸಹಾಯ ಮಾಡಿದ ನಂತರ, ಅವರು ಸ್ನಾನ ಮಾಡಲು ಸರಯು ನದಿಗೆ ಇಳಿದಿದ್ದಾರೆ. ಅವರು ನೀರಿನಲ್ಲಿದ್ದಾಗ ಹಠಾತ್ ಆಗಿ ಬಂದ ದೊಡ್ಡ ಮೊಸಳೆಯೊಂದು, ದೀಪಕ್ ಅವರ ತಲೆಯನ್ನು ತನ್ನ ಬಲವಾದ ದವಡೆಗಳಿಂದ ಕಚ್ಚಿ ಹಿಡಿದು ಕೆಲವೇ ಸೆಕೆಂಡುಗಳಲ್ಲಿ ನದಿಯೊಳಗೆ ಎಳೆದೊಯ್ದಿದೆ.

ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಸ್ಥಳೀಯರು ನದಿಯಲ್ಲಿ ಮೊಸಳೆಗಳ ಕಾಟ ಇರುವುದರಿಂದ ನೀರಿಗೆ ಇಳಿಯದಂತೆ ದೀಪಕ್ ಅವರಿಗೆ ಮೊದಲೇ ಎಚ್ಚರಿಕೆ ನೀಡಿದ್ದರು. ಆದರೆ, ಅವರು ಈ ಮುನ್ನೆಚ್ಚರಿಕೆಯನ್ನು ನಿರ್ಲಕ್ಷಿಸಿ ನೀರಿಗೆ ಇಳಿದಿದ್ದೇ ದುರಂತಕ್ಕೆ ಕಾರಣವಾಯಿತು ಎಂದು ಪ್ರತ್ಯಕ್ಷದರ್ಶಿ ರಾಜೇಶ್ ಶುಕ್ಲಾ ತಿಳಿಸಿದ್ದಾರೆ.

ಮತ್ತಷ್ಟು ಓದಿ: ದಾಂಡೇಲಿ: ಶೌಚಕ್ಕೆ ಕುಳಿತಿದ್ದ ವ್ಯಕ್ತಿ ಮೇಲೆ ಮೊಸಳೆ ದಾಳಿ; ಸ್ಥಳೀಯರ ಸಮಯಪ್ರಜ್ಞೆಯಿಂದ ಬಚಾವ್!

ದೀಪಕ್ ಅವರ ಕಿರುಚಾಟ ಕೇಳಿ ಸ್ಥಳೀಯರು ತಕ್ಷಣವೇ ನದಿಯಲ್ಲಿ ಹುಡುಕಾಟ ನಡೆಸಿದರೂ ಅವರ ಯಾವುದೇ ಸುಳಿವು ಸಿಕ್ಕಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಧಾವಿಸಿದ್ದಾರೆ. ಸದ್ಯ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಲು ಲಕ್ನೋದಿಂದ ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ತಂಡವನ್ನು ಕರೆಯಿಸಲಾಗಿದೆ. ಇಡೀ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಯುವಕನ ದೇಹಕ್ಕಾಗಿ ನದಿಯ ದಡದಲ್ಲಿ ಕಣ್ಣೀರು ಹಾಕುತ್ತಾ ಕಾಯುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

IPL 2026: ಹೀಗಾದ್ರೆ CSK ಪ್ಲೇಆಫ್​ಗೇರುವುದು ಖಚಿತ..!

Source link

ಬೆಂಗಳೂರಲ್ಲಿ ತರಕಾರಿ ಮಾರುವ ಹುಡುಗನ ತಲೆಯಲ್ಲಿ ಎಐ ಟೂಲ್; ಗಂಟೆಗೆ 350 ರೂ ಎಕ್ಸ್​ಟ್ರಾ ಇನ್ಕಮ್; ಬೆರಗಾದ ನೆಟ್ಟಿಗರು – Kannada News | Bengaluru Veg Seller Uses AI Tool for Rs 350 per Hr Extra Income & Data Collection

ಬೆಂಗಳೂರಿನ ತರಕಾರಿ ವ್ಯಾಪಾರಿ ತಲೆಯಲ್ಲಿ ಎಐ ಪರಿಕರImage Credit source: Vai.bhaaavvv Insta account

ಬೆಂಗಳೂರು, ಮೇ 21: ಜನರೇಟಿವ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (Artificial Intelligence) ಬೆಳೆಯುತ್ತಾ ಹೋದಂತೆ ಬ್ರಹ್ಮರಾಕ್ಷಸನಂತೆ ಡಾಟಾ ಆಹಾರ ಬಯಸುತ್ತಲೇ ಇರುತ್ತದೆ. ಎಲ್ಲಾ ರೀತಿಯ ದತ್ತಾಂಶಗಳನ್ನು ಅದು ಬಯಸುತ್ತದೆ. ಮನುಷ್ಯರ ವರ್ತನೆ, ಮಾತುಕತೆ, ನಗರಗಳ ವಾತಾವರಣ ಇವೆಲ್ಲವೂ ತುಂಬಾ ಸೂಕ್ಷ್ಮ ರೂಪದಲ್ಲಿ ಎಐಗೆ ಫೀಡ್ ಮಾಡಲಾಗುತ್ತದೆ. ಈ ರೀತಿ ಡಾಟಾ ಕಲೆಹಾಕಲೆಂದೇ ನಾನಾ ಏಜೆನ್ಸಿಗಳಿವೆ. ಇವು ಜನಸಾಮಾನ್ಯರ ಮೂಲಕ ದತ್ತಾಂಶ ಕಲೆಹಾಕುತ್ತವೆ. ಸೋಷಿಯಲ್ ಮೀಡಿಯಾದಲ್ಲಿ ಒಬ್ಬ ಬಳಕೆದಾರ ಒಂದು ಪೋಸ್ಟ್ ಹಾಕಿದ್ದು, ಅದರಲ್ಲಿ ಬೆಂಗಳೂರಿನ ಬೀದಿಬದಿಯಲ್ಲಿ ತರಕಾರಿ ವ್ಯಾಪಾರ ಮಾಡುವ ಹುಡುಗ (Street vendor) ತಲೆಗೆ ಎಐ ಪರಿಕರಣಗಳನ್ನು ಸಿಕ್ಕಿಸಿಕೊಂಡಿರುವ ದೃಶ್ಯ ಕಾಣುತ್ತದೆ. ಆ ಹುಡುಗ ತರಕಾರಿ ವ್ಯಾಪಾರ ಮಾಡಿ ಹಣ ಮಾಡುವುದರ ಜೊತೆಗೆ, ಎಐ ಪರಿಕರ ಸಿಕ್ಕಿಸಿಕೊಂಡು ಗಂಟೆಗೆ 350 ರೂ ಹೆಚ್ಚುವರಿ ಆದಾಯ ಗಳಿಸುತ್ತಾನಂತೆ.

ವೈಭವ್ ಎನ್ನುವ ಇನ್ಸ್​ಟಾ ಯೂಸರ್ ಈ ಪೋಸ್ಟ್ ಹಾಕಿದ್ದಾರೆ. ರಸ್ತೆಯಲ್ಲಿ ವಾಹನದಲ್ಲಿ ಹೋಗುವಾಗ ತಲೆಗೆ ಎಐ ಪರಿಕರವನ್ನು ಸಿಕ್ಕಿಸಿಕೊಂಡಿರುವ ತರಕಾರಿ ವ್ಯಾಪಾರಿಯೊಬ್ಬನನ್ನು ನೋಡಿದೆ ಎಂದು ವಿವರಿಸಿದ್ದಾರೆ. ಗಾಡಿ ನಿಲ್ಲಿ ಅದು ಏನೆಂದು ವಿಚಾರಿಸಿದೆ ಎಂದು ತಿಳಿಸಿರುವ ವೈಭವ್, ಆ ಯುವಕನಿಗೆ ಗಂಟೆಗೆ 350 ರೂ ಕೊಡಲಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ಕೆಲಸ ಸಿಕ್ಕಿತೆಂದು ಖುಷಿಯಿಂದ ಸಾವಿರಾರು ರೂಪಾಯಿ ಖರ್ಚು ಮಾಡಿ ದೆಹಲಿಗೆ ಹೋದ್ರೆ ಅಲ್ಲಿ ಆಫೀಸೇ ಇರ್ಲಿಲ್ವಂತೆ

ಗಂಟೆಗೆ 350 ರೂ ಸಿಕ್ಕರೆ ಒಂದು ದಿನದಲ್ಲಿ 10 ಗಂಟೆಯಲ್ಲಿ ಆತ 3,500 ರೂ ಗಳಿಸುತ್ತಾನೆ. ತಿಂಗಳಿಗೆ 1,05,000 ರೂ ಆಗುತ್ತದೆ. ಅರ್ಧದಷ್ಟು ಕಾರ್ಪೊರೇಟ್ ಉದ್ಯೋಗಿಗಳ ಸಂಬಳವನ್ನು ಈತ ಮೀರಿಸುತ್ತಾನೆ ಎಂದು ವೈಭವ್ ಅವರು ಚರ್ಚೆ ಹುಟ್ಟುಹಾಕಿದ್ದಾರೆ.

ಈ ಪೋಸ್ಟ್ ಸಾಕಷ್ಟು ವೀಕ್ಷಣೆ ಪಡೆದಿದೆ. ಮಿಶ್ರ ಪ್ರತಿಕ್ರಿಯೆಗಳು ಬಂದಿವೆ. ಇದೇ ರೀತಿಯ ಎಐ ಗ್ಯಾಜೆಟ್​ಗಳ ಸೆಟಪ್ ಅನ್ನು ತಮ್ಮ ಕಾಲೊನಿಯ ಎಲ್ಲಾ ಗೃಹಿಣಿಯರಿಗೂ ಕೊಡಲಾಗಿತ್ತು. ಅದಾದ ಬಳಿಕ ಎಲ್ಲಾ ಮನೆಗಳು ಎಂದಿಗಿಂತ ಹೆಚ್ಚು ಸ್ವಚ್ಛವಾಗತೊಡಗಿದವು. ಒಂದು ತಿಂಗಳವರೆಗೆ ನಡೆದು ಈಗ ಅದು ನಿಂತಿದೆ ಎಂದು ಒಬ್ಬ ಬಳಕೆದಾರ ಪ್ರತಿಕ್ರಿಯಿಸಿದ್ದಾರೆ.

ಇದನ್ನು ಓದಿ: ಶಾಪಿಂಗ್​ಗೆ ಅಸಿಸ್ಟೆಂಟ್​ಗಳನ್ನು ಕೊಡುತ್ತೆ ಈ ಸ್ಟಾರ್ಟಪ್; ಲಗೇಜ್ ಹೊರೋದ್ರಿಂದ ಹಿಡಿದು, ಗಾಡಿ ಹತ್ತಿಸೋವರೆಗೂ ಎಲ್ಲಾ ನೆರವೂ ಕೊಡ್ತಾರಂತೆ

ಈ ರೀತಿಯ ಡಾಟಾ ಸಂಗ್ರಹಣೆ ನಿರಂತರವಾಗಿ ನಡೆಯುವುದಿಲ್ಲ. ಆ ಹುಡುಗ ಒಂದು ತಿಂಗಳಲ್ಲಿ ಕೆಲ ಗಂಟೆ ಮಾತ್ರ ಈ ಪರಿಕರ ಬಳಸಲು ಅವಕಾಶ ಕೊಡಲಾಗುತ್ತದೆ. ಇಡೀ ಪ್ರಾಜೆಕ್ಟ್ ಅವಧಿಯಲ್ಲಿ ಆ ಹುಡುಗ 10-20 ಗಂಟೆ ಕೆಲಸ ಮಾತ್ರವೇ ಪಡೆಯಬಹುದು ಎಂದು ಮತ್ತೊಬ್ಬ ಬಳಕೆದಾರ ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ನಾಲ್ಕು ದಿನಗಳಿಂದ ವಿದ್ಯುತ್ ಕಡಿತ: ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು – Kannada News | HESCOM Faces Anger as Hubballis Gandhinagar Endures Prolonged Power Cut

ಹುಬ್ಬಳ್ಳಿ, ಮೇ.21: ನಗರದ ಗಾಂಧಿನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ನಾಲ್ಕು ದಿನಗಳಿಂದ ನಿರಂತರ ವಿದ್ಯುತ್ ಕಡಿತದಿಂದಾಗಿ ಸಾರ್ವಜನಿಕರು ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಭಾರಿ ಗಾಳಿ ಮಳೆಗೆ ವಿದ್ಯುತ್ ಕಂಬಗಳು ಮತ್ತು ಮರಗಳು ನೆಲಕ್ಕುರುಳಿದ್ದರಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ವಿದ್ಯುತ್ ಇಲ್ಲದ ಕಾರಣ ಕುಡಿಯುವ ನೀರಿಗೂ, ಶೌಚಾಲಯಕ್ಕೂ ನೀರಿಲ್ಲದೆ ಜನರು ಪರದಾಡುತ್ತಿದ್ದಾರೆ. ಹೆಸ್ಕಾಂ (HESCOM) ಅಧಿಕಾರಿಗಳು ಮತ್ತು ಪಾಲಿಕೆಯ ಅಧಿಕಾರಿಗಳು ಸಮಸ್ಯೆ ಬಗೆಹರಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಮರಗಳನ್ನು ತೆರವುಗೊಳಿಸುವಲ್ಲಿ ಮತ್ತು ವಿದ್ಯುತ್ ಕಂಬಗಳನ್ನು ಸರಿಪಡಿಸುವಲ್ಲಿ ವಿಳಂಬವಾಗಿದೆ. ರಾತ್ರಿ ಹೊತ್ತು ಮನೆಯಲ್ಲಿ ಇರಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ನಿವಾಸಿಗಳು ಗೋಳು ತೋಡಿಕೊಂಡಿದ್ದಾರೆ. ಜನಪ್ರತಿನಿಧಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿ ಜನರ ಅಹವಾಲು ಆಲಿಸಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕೂಡಲೇ ಸಮಸ್ಯೆ ಬಗೆಹರಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Maruti 800 Viral Bill: ಕೇವಲ 60,000 ರೂ.ಗೆ ಸಿಗುತ್ತಿತ್ತು ಮಾರುತಿ 800 ಕಾರು! ಹಳೇ ಬಿಲ್ ನೋಡಿ ನೆಟ್ಟಿಗರು ಶಾಕ್! – Kannada News | Maruti 800 Viral Bill: 1984 Car Price Shocks Internet, Sparks Authenticity Debate

ಮಾರುತಿ 800 ಹಳೆಯ ಬಿಲ್ ವೈರಲ್Image Credit source: instagram

ಭಾರತೀಯ ಆಟೋಮೊಬೈಲ್ ಇತಿಹಾಸದಲ್ಲಿ ‘ಮಾರುತಿ 800’ (Maruti 800) ಕಾರಿಗೆ ಎಂದಿಗೂ ವಿಶೇಷ ಸ್ಥಾನವಿದೆ. ಮಧ್ಯಮ ವರ್ಗದ ಕುಟುಂಬಗಳ ಕಾರು ಮಾಲೀಕತ್ವದ ಕನಸನ್ನು ನನಸು ಮಾಡಿದ ಕೀರ್ತಿ ಈ ಪುಟ್ಟ ಕಾರಿಗೆ ಸಲ್ಲುತ್ತದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ದಶಕಗಳಷ್ಟು ಹಳೆಯದಾದ ಕಾರು ಖರೀದಿಯ ರಶೀದಿಯೊಂದು (ಬಿಲ್) ಸಖತ್ ವೈರಲ್ ಆಗುತ್ತಿದ್ದು, ಅಂದಿನ ದಿನಗಳಲ್ಲಿ ವಾಹನಗಳು ಎಷ್ಟು ಅಗ್ಗವಾಗಿದ್ದವು ಎಂಬುದನ್ನು ನೋಡಿ ನೆಟ್ಟಿಗರು ಶಾಕ್​ ಆಗಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆದ 1984ರ ಬಿಲ್:

ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಮ್‌ನ ‘namma_mysuru1994’ ಎಂಬ ಖಾತೆಯಲ್ಲಿ 1984ರ ಜುಲೈ 12ರ ದಿನಾಂಕ ಹೊಂದಿರುವ ಕಾರು ಖರೀದಿಯ ರಶೀದಿಯೊಂದನ್ನು ಹಂಚಿಕೊಳ್ಳಲಾಗಿದೆ. ಈ ಬಿಲ್ ಪ್ರಕಾರ, ಮಧ್ಯಪ್ರದೇಶದ ಬಾಗನ್ ಗ್ರಾಮದ ಶಾಮ್ ರಾವ್ ಎಂಬ ಗ್ರಾಹಕರು ಆಗಿನ ಕಾಲದ ಮಾರುತಿ 800 ಕಾರನ್ನು ಖರೀದಿಸಿದ್ದಾರೆ. ಈ ಕಾರಿನ ಅಂದಿನ ಎಕ್ಸ್ ಶೋರೂಮ್ ಬೆಲೆ ಕೇವಲ 47,500 ರೂಪಾಯಿಗಳಾಗಿತ್ತು! ಇದಕ್ಕೆ ಇನ್ಶೂರೆನ್ಸ್, ತೆರಿಗೆಗಳು ಮತ್ತು ಇತರೆ ಶುಲ್ಕಗಳನ್ನು ಸೇರಿಸಿದ ನಂತರ ಒಟ್ಟು ಆನ್ ರೋಡ್ ಬೆಲೆ ಸುಮಾರು 60,000 ರೂಪಾಯಿಗಳಾಗಿದೆ.

Maruti 800 Viral Bill

ಅಂದಿನ 60 ಸಾವಿರ ಇಂದಿನ 5-6 ಲಕ್ಷಕ್ಕೆ ಸಮಾನ:

ಈ ಬಿಲ್‌ನಲ್ಲಿರುವ ಬೆಲೆಯನ್ನು ನೋಡಿ ಸಾಮಾಜಿಕ ಜಾಲತಾಣಗಳ ಬಳಕೆದಾರರು ಆಶ್ಚರ್ಯಚಕಿತರಾಗಿದ್ದಾರೆ. ಆದರೆ ನೆಟ್ಟಿಗರು ಗಮನಿಸಿದ ಮತ್ತೊಂದು ಪ್ರಮುಖ ಅಂಶವೆಂದರೆ, 1984ರ ಕಾಲದ 60,000 ರೂಪಾಯಿಗಳು ಇಂದಿನ ಹಣದುಬ್ಬರ ಮತ್ತು ಮೌಲ್ಯದ ಲೆಕ್ಕಾಚಾರದಲ್ಲಿ ಸುಮಾರು 5 ರಿಂದ 6 ಲಕ್ಷ ರೂಪಾಯಿಗಳಿಗೆ ಸಮಾನವಾಗಿದೆ. ಅಂದಿನ ದಿನಗಳಲ್ಲಿ ಮಾರುತಿ 800 ಕಾರಿನಲ್ಲಿ ಕನಿಷ್ಠ ಹವಾನಿಯಂತ್ರಣ (AC) ಸೌಲಭ್ಯ ಕೂಡ ಇರುತ್ತಿರಲಿಲ್ಲ. ಆದರೂ ಭಾರತೀಯ ಮಾರುಕಟ್ಟೆಯಲ್ಲಿ ಇದು ಶ್ರೀಮಂತಿಕೆ ಅಥವಾ ಅಂತಸ್ತಿನ ಸಂಕೇತವಾಗಿ ಗುರುತಿಸಲ್ಪಟ್ಟಿತ್ತು.

ಇದನ್ನೂ ಓದಿ: ಬೆಂಗಳೂರಲ್ಲಿ 3BHK ಫ್ಲ್ಯಾಟ್‌ಗೆ ಬರೋಬ್ಬರಿ 6.5 ಕೋಟಿ ರೂ! ಬೆಲೆ ಕೇಳಿ ಬೆಚ್ಚಿಬಿದ್ದ ನೆಟ್ಟಿಗರು

ಹಳೆಯ ನೆನಪುಗಳ ನಡುವೆ ಬಿಲ್‌ನ ಅಸಲಿತನದ ಬಗ್ಗೆ ಸಂಶಯ:

ಈ ವೈರಲ್ ಬಿಲ್ ಅನೇಕರಲ್ಲಿ ಹಳೆಯ ದಿನಗಳ ನೆನಪುಗಳನ್ನು ಮರುಕಳಿಸುವಂತೆ ಮಾಡಿದ್ದರೆ, ಇನ್ನೂ ಕೆಲವು ನೆಟ್ಟಿಗರು ಈ ಬಿಲ್‌ನ ಅಸಲಿತನದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಬಿಲ್‌ನಲ್ಲಿ ಬಳಕೆಯಾಗಿರುವ ಅಕ್ಷರಗಳ ಶೈಲಿ (Font) ಹಾಗೂ ಚಾಸಿಸ್ ವಿವರಗಳಲ್ಲಿ ಕೆಲವು ವ್ಯತ್ಯಾಸಗಳಿರುವುದನ್ನು ಗಮನಿಸಿರುವ ಕೆಲವರು, ಇದು ಕೃತಕ ಬುದ್ಧಿಮತ್ತೆ (AI) ಬಳಸಿ ಸೃಷ್ಟಿಸಲಾದ ನಕಲಿ ಚಿತ್ರವಾಗಿರಬಹುದು ಎಂದು ಕಮೆಂಟ್ ಮಾಡಿದ್ದಾರೆ. ಆದಾಗ್ಯೂ, ಈ ಚಿತ್ರವನ್ನು ಪೋಸ್ಟ್ ಮಾಡಿದ ಮೂಲ ಖಾತೆಯಿಂದ ಈವರೆಗೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತೀಯ ಸಿನಿಮಾ ಇತಿಹಾಸದಲ್ಲೇ ಅತ್ಯಂತ ದುಬಾರಿ ವಿಲನ್ ಈ ನಟ – Kannada News | Prashanth Neel said Jr NTR is the most costliest villain in Indian Cinema history

ಸಿನಿಮಾ (Cinema) ಯಾವಾಗಲೂ ನಾಯಕ ಪ್ರಧಾನ. ನಾಯಕನ ಹೊರತಾಗಿ ಬೇರೆ ಪಾತ್ರಗಳಿಗೆ ಪ್ರಾಧಾನ್ಯತೆ ಸಿಗುವುದು ತೀರಾ ವಿರಳ. ಇದೇ ಕಾರಣಕ್ಕೆ ನಾಯಕ ನಟರಿಗೆ ಭಾರಿ ದೊಡ್ಡ ಸಂಭಾವನೆ. ಕೆಲವು ಸ್ಟಾರ್ ನಟರ ಸಂಭಾವನೆ ಇಡೀ ಸಿನಿಮಾದ ಬಜೆಟ್​ನ 60 ರಿಂದ 70% ಇರುತ್ತದೆ. ಕೆಲವೊಮ್ಮೆ ಇನ್ನೂ ಹೆಚ್ಚು. ಇತ್ತೀಚೆಗೆ ವಿಲನ್​​ಗಳನ್ನು ಸ್ಟೈಲಿಷ್ ಆಗಿ ತೋರಿಸುವುದು, ಖ್ಯಾತ ನಟರನ್ನು ವಿಲನ್​​ಗಳಾಗಿ ಹಾಕಿಕೊಳ್ಳುವ ಪದ್ಧತಿ ಹೆಚ್ಚಾಗಿದೆ. ಆದರೂ ವಿಲನ್​​ಗಳು ನಾಯಕನಿಗಿಂತಲೂ ಹೆಚ್ಚು ಸಂಭಾವನೆ ಪಡೆದ ಉದಾಹರಣೆ ಇಲ್ಲ. ಆದರೆ ಇದೀಗ ‘ವಿಲನ್’ ಒಬ್ಬರಿಗೆ ಭಾರಿ ದೊಡ್ಡ ಸಂಭಾವನೆ ನೀಡಲಾಗಿದೆ. ಆದರೆ ಇಲ್ಲಿ, ‘ನಾಯಕ’ ನಟನೇ ‘ವಿಲನ್’ ಆಗಿದ್ದಾರೆ.

ಪ್ರಶಾಂತ್ ನೀಲ್ ನಿರ್ದೇಶಿಸಿ, ಜೂ ಎನ್​​ಟಿಆರ್ ನಟಿಸುತ್ತಿರುವ ‘ಡ್ರ್ಯಾಗನ್’ ಸಿನಿಮಾದ ಟೀಸರ್ ನಿನ್ನೆಯಷ್ಟೆ ಬಿಡುಗಡೆ ಆಗಿದ್ದು, ಸಖತ್ ವೈರಲ್ ಆಗುತ್ತಿದೆ. ಟೀಸರ್ ರಿಲೀಸ್ ಆದ ಬೆನ್ನಲ್ಲೆ ಸಿನಿಮಾದ ನಿರ್ದೇಶಕ ಪ್ರಶಾಂತ್ ನೀಲ್ ಸಂದರ್ಶನ ನೀಡಿದ್ದು, ಈ ಸಿನಿಮಾನಲ್ಲಿ ಜೂ ಎನ್​​ಟಿಆರ್ ‘ನಾಯಕ’ ಅಲ್ಲ ಬದಲಿಗೆ ‘ವಿಲನ್’ ಎಂದಿದ್ದಾರೆ. ಮಾತ್ರವಲ್ಲದೆ, ಭಾರತೀಯ ಚಿತ್ರರಂಗದ ಅತ್ಯಂತ ದುಬಾರಿ ವಿಲನ್ ಜೂ ಎನ್​​ಟಿಆರ್ ಎಂದು ಸಹ ಹೇಳಿದ್ದಾರೆ.

‘ಡ್ರ್ಯಾಗನ್’ ಸಿನಿಮಾನಲ್ಲಿ ಜೂ ಎನ್​​ಟಿಆರ್ ‘ಲೂಗರ್’ ಹೆಸರಿನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮಾದಕ ವಸ್ತು ಸರಬರಾಜು ಸಾಮ್ರಾಜ್ಯದ ಮೇಲೆ ಹಿಡಿತ ಸಾಧಿಸಲು ಗ್ಯಾಂಗುಗಳು ಪರಸ್ಪರ ಬಡಿದಾಡಿಕೊಳ್ಳುವ ಕತೆಯನ್ನು ‘ಡ್ರ್ಯಾಗನ್’ ಒಳಗೊಂಡಿದ್ದು, ‘ಲೂಗರ್’ ಸಹ ಒಬ್ಬ ಗ್ಯಾಂಗಿನ ಸದಸ್ಯನಾಗಿದ್ದು, ಕಿರಾತಕ ಗ್ಯಾಂಗ್​​​ಸ್ಟರ್​​ಗಳ ನಡುವೆ ಆತನೂ ಒಬ್ಬ ಕಿರಾತಕ ಎನ್ನಲಾಗಿದೆ. ಇದೇ ಕಾರಣಕ್ಕೆ ಪ್ರಶಾಂತ್ ನೀಲ್, ಜೂ ಎನ್​​ಟಿಆರ್, ಭಾರತದ ಅತ್ಯಂತ ದುಬಾರಿ ವಿಲನ್ ಎಂದಿದ್ದಾರೆ.

ಇದನ್ನೂ ಓದಿ:‘ರಾಜ ಶಿವಾಜಿ’ ಚಿತ್ರದಿಂದ ರಿತೇಶ್​​ಗೆ ದೊಡ್ಡ ಗೆಲುವು; ಸಿನಿಮಾ ಕಂಡ ಲಾಭ ಎಷ್ಟು?

ಜೂ ಎನ್​​ಟಿಆರ್ ಈ ಹಿಂದೆ ‘ಲವ-ಕುಶ’ ಸಿನಿಮಾನಲ್ಲಿ ಅಪ್ಪಟ ವಿಲನ್ ರೀತಿಯ ಪಾತ್ರದಲ್ಲಿ ನಟಿಸಿದ್ದರು. ‘ಊಸರವಳ್ಳಿ’ ಸಿನಿಮಾನಲ್ಲಿ ಮೊದಲು ವಿಲನ್ ಆಗಿದ್ದು ಬಳಿಕ ಹೀರೋ ಆಗುವ ರೀತಿಯ ಪಾತ್ರದಲ್ಲೂ ನಟಿಸಿದ್ದಾರೆ. ಆದರೆ ‘ಡ್ರ್ಯಾಗನ್’ ಸಿನಿಮಾನಲ್ಲಿ ಅಪ್ಪಟ ವಿಲನ್ ಆಗಿಯೇ ಕಾಣಿಸಿಕೊಳ್ಳಲಿದ್ದಾರಂತೆ ಜೂ ಎನ್​​ಟಿಆರ್.

‘ಡ್ರ್ಯಾಗನ್’ ಸಿನಿಮಾನಲ್ಲಿ ಜೂ ಎನ್​​ಟಿಆರ್ ಜೊತೆಗೆ ಬಾಲಿವುಡ್ ಸ್ಟಾರ್ ನಟ ಅನಿಲ್ ಕಪೂರ್ ಸಹ ನಟಿಸುತ್ತಿದ್ದಾರೆ. ಸಿನಿಮಾಕ್ಕೆ ರವಿ ಬಸ್ರೂರು ಸಂಗೀತ ನೀಡಿದ್ದಾರೆ. ಸಿನಿಮಾನಲ್ಲಿ ರುಕ್ಮಿಣಿ ವಸಂತ್ ನಾಯಕಿ. ಸಿನಿಮಾದ ಬಿಡುಗಡೆ ದಿನಾಂಕ ಇನ್ನಷ್ಟೆ ಘೋಷಣೆ ಆಗಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 12:07 pm, Thu, 21 May 26

Source link

ತಹಶೀಲ್ದಾರ್​ ಕಚೇರಿಯಲ್ಲಿಯಿದ್ದ ಕಡತಕ್ಕೇ ಇಲ್ಲ ಸೇಫ್ಟಿ: ರಾಜ್ಯ ಮಾಹಿತಿ ಆಯೋಗದ ಸೂಚನೆ ಬೆನ್ನಲ್ಲೇ FIR – Kannada News | RTI Shock in Tumakuru: FIR Filed After Key Land File Goes Missing From Tahsildar Office

ತಹಶೀಲ್ದಾರ್​ ಕಚೇರಿಯಲ್ಲಿಯಿದ್ದ ಕಡತಕ್ಕೇ ಇಲ್ಲ ಸೇಫ್ಟಿImage Credit source: Tv9 Kannada

ತುಮಕೂರು, ಮೇ 21: ತಹಶೀಲ್ದಾರ್​ ಕಚೇರಿಯಲ್ಲಿಯಿದ್ದ ಸರ್ಕಾರಿ ಕಡತ ನಾಪತ್ತೆಯಾಗಿರುವ ಘಟನೆ ತುಮಕೂರಲ್ಲಿ (Tumakuru) ನಡೆದಿದೆ. ಈ ಸಂಬಂಧ ಅರ್ಜಿದಾರ ರಾಜ್ಯ ಮಾಹಿತಿ ಆಯೋಗದ ಮೊರೆಹೋದ ಹಿನ್ನೆಲೆ, ಪರಿಶೀಲಿಸುವಂತೆ ಆಯೋಗ ಖಡಕ್ ಸೂಚನೆ ಕೊಟ್ಟ ಕಾರಣ ತುಮಕೂರು ತಹಶೀಲ್ದಾರ್ ರಾಜೇಶ್ವರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಕಡತ ನಾಪತ್ತೆ ಸಂಬಂಧ ಅವರು ದೂರು ನೀಡಿದ್ದು, ಅದರನ್ವಯ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಹೆಬ್ಬೂರು ಹೋಬಳಿಯ ಜೋಡಿ ಕಲ್ಕರೆ ಗ್ರಾಮದ ದೊಡ್ಡಶಾನಯ್ಯ ಎಂಬುವರ ಸಹಿ ಇದ್ದ ಮೂಲ ಅರ್ಜಿ, ವಂಶವೃಕ್ಷ ಮರಣ ಪ್ರಮಾಣ ಪತ್ರಗಳಿದ್ದ ಕಡತ ನಾಪತ್ತೆಯಾಗಿದ್ದು, ಈ ಬಗ್ಗೆ ಅರ್ಜಿದಾರರು ಹಲವು ಬಾರಿ ಗಮನಕ್ಕೆ ತಂದರು ಅಧಿಕಾರಿಗಳು ತಲೆಕೆಡಿಸಿಕೊಂಡಿರಲಿಲ್ಲ. ಇದರಿಂದ ಬೇಸತ್ತ ಅರ್ಜಿದಾರರಿಂದ ಮಾಹಿತಿ ಆಯೋಗಕ್ಕೆ ದೂರು ನೀಡಿದ್ದರು. ಆ ಬೆನ್ನಲ್ಲೇ ದೂರು ಪರಿಶೀಲಿಸಿದ ನಾಪತ್ತೆಯಾದ ಫೈಲ್‌ಗಳ ಬಗ್ಗೆ ಅಫಿಡವಿಟ್ ಸಲ್ಲಿಸಲು ಆಯೋಗ ಡೆಡ್‌ಲೈನ್ ಕೊಟ್ಟ ಹಿನ್ನೆಲೆ ಎಚ್ಚೆತ್ತ ತಹಶೀಲ್ದಾರ್ ಕಡತ ನಾಪತ್ತೆ ಬಗ್ಗೆ ರಾಜ್ಯ ಸಾರ್ವಜನಿಕ ದಾಖಲೆಗಳ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಉತ್ತರ ಜಿಲ್ಲೆಯಾಗುವುದೇ ತುಮಕೂರು? ಮತ್ತೆ ಮುನ್ನೆಲೆಗೆ ಬರಲು ಕಾರಣವೇನು?

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ತಹಶೀಲ್ದಾರ್​ ರಾಜೇಶ್ವರಿ, ಅರ್ಜಿದಾರರು ವಂಶವೃಕ್ಷದ ಮೂಲ ದಾಖಲಾತಿಗಳನ್ನು ಕೇಳಿ 2023ರ ಮಾರ್ಚ್​​ 11ರಂದು ಅರ್ಜಿ ಸಲ್ಲಿಸಿದ್ದರು. ಆ ವೇಳೆ ಹಿಂದಿನ ತಹಶೀಲ್ದಾರ್​​ ಮತ್ತು ಕಚೇರಿ ಸಿಬ್ಬಂದಿ ಈ ಬಗ್ಗೆ ಹುಡುಕಾಡಿದಾಗ ಕಾಗದಪತ್ತ ನಾಪತ್ತೆ ಆಗಿರುವುದು ಗೊತ್ತಾಗಿದ್ದು, ಈ ಬಗ್ಗೆ ಅರ್ಜಿದಾರರಿಗೆ ಹಿಂಬರಹ ನೀಡಲಾಗಿತ್ತು. ಈ ವಿಚಾರ ಆರ್​​ಟಿಐ ಕಮಿಷನ್​​ಗೆ ಹೋಗಿದ್ದು, ಅವರು ಕಾಗಪತ್ರಗಳನ್ನು ಅರ್ಜಿದಾರರಿಗೆ ಹುಡುಕಿಕೊಡಿ. ಇಲ್ಲದಿದ್ದರೆ ಆ ಬಗ್ಗೆ ಪೊಲೀಸ್​​ ದೂರು ದಾಖಲಿಸುವಂತೆ ನಿರ್ದೇಶನ ಬಂದಿತ್ತು. ಆ ಕಾರಣ ಕಂಪ್ಲೇಂಟ್​​ ನೀಡಿರೋದಾಗಿ ಅವರು ತಿಳಿಸಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಅರ್ಜಿದಾರ ಶ್ರೀನಿವಾಸ ಕಲ್ಕೆರೆ, 4 ಸರ್ವೇ ನಂಬರ್​ಗಳನ್ನು ಹೊಂದಿರುವ ಈ ಜಾಗ ಇನಾಂ ಲ್ಯಾಂಡ್​​ ಆಗಿದ್ದು ಅದು ತನಗೆ ದಕ್ಕಬಾರದು ಎಂದೇ ಕಡತ ನಾಪತ್ತೆ ಆಗಿದೆ ಎಂದು ಸೃಷ್ಟಿಸಿದ್ದಾರೆ. 2020-21 ಆರ್​​ಐ ಮತ್ತು ವಿಎ ಇಬ್ಬರೂ ಈ ಕಡತಗಳನ್ನ ಪರಿಶೀಲನೆ ಮಾಡಿದ್ದಾರೆ. ಆ ಬಳಿಕ ಅವರೇ ಕದ್ದುಹೋಗಿದ್ದು, ಈಗ ಅದು ಕಳವಾಗಿದೆ ಎಂದು ತಹಶೀಲ್ದಾರ್​​ ಪೊಲೀಸ್​​ ದೂರು ನೀಡಿದ್ದಾರೆ. 5 ಎಕ್ರೆ 28 ಗುಂಟೆ ಜಮೀನಿಗೆ ಸೇರಿದ ದಾಖಲೆ ಅದಾಗಿದ್ದು, ನನಗೆ ಈ ಕಡತ ಯಾವ ಕಾರಣಕ್ಕೆ ಬೇಕು ಎಂಬುದನ್ನು ಕೂಡ ಅರ್ಜಿಯಲ್ಲಿ ತಿಳಿಸಿದ್ದೆ ಎಂಬುದಾಗಿ ಅವರು ಮಾಹಿತಿ ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

IPL 2026: ಪ್ಲೇಆಫ್​ಗೂ ಮುನ್ನ RCBಗೆ ಗುಡ್ ನ್ಯೂಸ್..!

Source link

Ebola Virus Threat: ಜಗತ್ತಿಗೆ ಮತ್ತೊಂದು ಮಾರಣಾಂತಿಕ ವೈರಸ್ ಎಂಟ್ರಿ!: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ – Kannada News | Global Ebola Alert: Africa Outbreak Sparks WHO Emergency Declaration, India Prepares

ದೆಹಲಿ, ಮೇ.21: ಜಗತ್ತು ಕೊರೊನಾ ಮಹಾಮಾರಿಯ ಕರಾಳ ದಿನಗಳಿಂದ ಈಗ ತಾನೇ ಹೊರ ಬಂದಿದೆ. ಇದೀಗ ಇದರ ಬೆನ್ನಲ್ಲೇ ಮತ್ತೊಂದು ಭೀಕರ ಸೂಕ್ಷ್ಮಾಣು ಜೀವಿ ಜಾಗತಿಕ ಮಟ್ಟದಲ್ಲಿ ಭಾರಿ ಆತಂಕ ಸೃಷ್ಟಿಸಿದೆ. ಆಫ್ರಿಕಾ ಖಂಡದಲ್ಲಿ ಅತಿ ವೇಗವಾಗಿ ಹರಡುತ್ತಿರುವ ಮಾರಣಾಂತಿಕ ‘ಎಬೋಲಾ ವೈರಸ್’ (Ebola Virus) ತೀವ್ರ ಸ್ವರೂಪ ಪಡೆದುಕೊಂಡಿದ್ದು, ವಿಶ್ವ ಆರೋಗ್ಯ ಸಂಸ್ಥೆಯು (WHO) ಅಂತಾರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯನ್ನು (PHEIC) ಘೋಷಿಸಿದೆ. ಇದರ ಬೆನ್ನಲ್ಲೇ ಭಾರತದಲ್ಲೂ ಸಹ ಮುನ್ನೆಚ್ಚರಿಕೆ ಮತ್ತು ಆತಂಕದ ವಾತಾವರಣ ನಿರ್ಮಾಣವಾಗಿದೆ.

ಲಸಿಕೆ ಇಲ್ಲದ ಅಪರೂಪದ ತಳಿ; ಕೋವಿಡ್‌ನಂತೆ ಹರಡುವುದಿಲ್ಲ:

ಡಾ. ದಿವ್ಯಾ ಅವರ ಪ್ರಕಾರ, ಪ್ರಸ್ತುತ ಔಟ್‌ಬ್ರೇಕ್ (Outbreak) ಆಗಿರುವ ಎಬೋಲಾ ಬುಂಡಿಬುಗ್ಯೊ ತಳಿಗೆ ಯಾವುದೇ ಅಧಿಕೃತ ಲಸಿಕೆ (Vaccine) ಅಥವಾ ನಿರ್ದಿಷ್ಟ ಚಿಕಿತ್ಸೆ ಲಭ್ಯವಿಲ್ಲ. ಈ ವೈರಸ್ ಸೋಂಕು ತಗುಲಿದರೆ ಸಾವಿನ ಪ್ರಮಾಣ (Mortality Rate) ಅತ್ಯಂತ ಹೆಚ್ಚಾಗಿದೆ. ಆದರೆ, ಇದು ಕೋವಿಡ್ ಮಹಾಮಾರಿಯಂತೆ ಗಾಳಿಯಲ್ಲಿ ಅತಿ ವೇಗವಾಗಿ ಪೆಂಡಾಮಿಕ್ (Pandemic) ಆಗುವ ಸಾಧ್ಯತೆ ತೀರಾ ಕಡಿಮೆ. ಈ ವೈರಸ್ ಮೂಲತಃ ಫ್ರೂಟ್ ಬಾವಲಿಗಳಿಂದ (Fruit Bats) ಮನುಷ್ಯರಿಗೆ ಹರಡುತ್ತದೆ. ಮನುಷ್ಯರಿಂದ ಮನುಷ್ಯರಿಗೆ ಹರಡಲು ಸೋಂಕಿತರ ರಕ್ತ ಅಥವಾ ಶರೀರದ ದ್ರವಗಳ (Blood or Body Fluids) ನೇರ ಸಂಪರ್ಕ ಅಗತ್ಯವಾಗುತ್ತದೆ.

ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ಕಠಿಣ ನಿಗಾ ಅಗತ್ಯ:

ಸದ್ಯಕ್ಕೆ ಭಾರತದಲ್ಲಿ ಯಾವುದೇ ಎಬೋಲಾ ಪ್ರಕರಣಗಳು ವರದಿಯಾಗಿಲ್ಲ. ಆದರೆ, ರಿಸ್ಕ್ (Risk) ಹೆಚ್ಚಿರುವ ಕಾಂಗೋ, ಉಗಾಂಡ ಮತ್ತು ಇತರೆ ಆಫ್ರಿಕಾ ದೇಶಗಳಿಂದ ಭಾರತಕ್ಕೆ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರ ಬಗ್ಗೆ ತೀವ್ರ ಎಚ್ಚರಿಕೆ ವಹಿಸಬೇಕು. ವಿಮಾನ ನಿಲ್ದಾಣಗಳಲ್ಲಿ ಕಡ್ಡಾಯ ಸ್ಕ್ರೀನಿಂಗ್ (Screening at Airports) ನಡೆಸುವ ಜೊತೆಗೆ, ಅಗತ್ಯವಿದ್ದರೆ ಆಫ್ರಿಕಾ ಪ್ರವಾಸಿಗರಿಗೆ ಕ್ವಾರಂಟೈನ್ (Quarantine) ವ್ಯವಸ್ಥೆ ಮಾಡುವುದು ದೇಶದ ಸುರಕ್ಷತೆಯ ದೃಷ್ಟಿಯಿಂದ ಅತ್ಯಂತ ಅವಶ್ಯಕವಾಗಿದೆ ಎಂದು ಡಾ. ದಿವ್ಯಾ ತಿಳಿಸಿದ್ದಾರೆ. ಸಾರ್ವಜನಿಕರು ಆಫ್ರಿಕಾ ದೇಶಗಳ ಪ್ರವಾಸದ ಬಗ್ಗೆ ಸದ್ಯಕ್ಕೆ ಎಚ್ಚರಿಕೆ ವಹಿಸುವುದು ಉತ್ತಮ.

ಇದನ್ನೂ ಓದಿ: ಇಂದಿನಿಂದ ರಾಜ್ಯಾದ್ಯಂತ 4 ದಿನ ಭಾರಿ ಮಳೆ: ವಚನಾನಂದ ಸ್ವಾಮೀಜಿಗೆ ಜೈಲಾ? ಬೇಲಾ? ಇಲ್ಲಿವೆ ಈ ಹೊತ್ತಿನ ಟಾಪ್​​ ಸುದ್ದಿಗಳು

ಎಬೋಲಾ ವೈರಸ್‌ನ ಪ್ರಮುಖ ಲಕ್ಷಣಗಳು:

ಸೋಂಕು ತಗುಲಿದ ನಂತರ ಆರಂಭದಲ್ಲಿ ತೀವ್ರ ಜ್ವರ, ತಲೆನೋವು, ಮೈಕೈನೋವು, ವಾಂತಿ ಮತ್ತು ಭೇದಿ ಕಂಡುಬರುತ್ತದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದರೆ ಲಿವರ್ ಮತ್ತು ಶ್ವಾಸಕೋಶದ ವೈಫಲ್ಯ (Liver and Lungs Failure) ಸಂಭವಿಸಿ ಸಾವು ಸಂಭವಿಸಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link