ಜನರೊಂದಿಗಿನ ಎನ್‌ಡಿಎ ಬಾಂಧವ್ಯವನ್ನು ಸೂಚಿಸುತ್ತದೆ; ಬಿಎಂಸಿ ಚುನಾವಣೆಯ ಗೆಲುವಿಗೆ ಪ್ರಧಾನಿ ಮೋದಿ ಧನ್ಯವಾದ – Kannada News | Thank You Maharashtra PM Modi hails Mahayutis Big Win in Municipal Corporation elections
ನವದೆಹಲಿ, ಜನವರಿ 16: ಮಹಾರಾಷ್ಟ್ರದ (Maharashtra) ಪುರಸಭೆ ಚುನಾವಣೆಯಲ್ಲಿ ಎನ್‌ಡಿಎ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ (PM Modi) ಶ್ಲಾಘಿಸಿದ್ದಾರೆ. ಈ ಫಲಿತಾಂಶಗಳು ಎನ್‌ಡಿಎ ಮೈತ್ರಿಕೂಟದ ಜನಪರ ಉತ್ತಮ ಆಡಳಿತಕ್ಕೆ ಹೆಚ್ಚುತ್ತಿರುವ ಸಾರ್ವಜನಿಕ ಬೆಂಬಲವನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳಿದ್ದಾರೆ. ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, “ಧನ್ಯವಾದಗಳು ಮಹಾರಾಷ್ಟ್ರ! ರಾಜ್ಯದ ಕ್ರಿಯಾಶೀಲ ಜನರು ಎನ್‌ಡಿಎಯ ಜನಪರ ಉತ್ತಮ ಆಡಳಿತದ ಕಾರ್ಯಸೂಚಿಯನ್ನು ಆಶೀರ್ವದಿಸಿದ್ದಾರೆ” ಎಂದು ಹೇಳಿದ್ದಾರೆ. ಇನ್ನೊಂದು ಎಕ್ಸ್ ಪೋಸ್ಟ್‌ನಲ್ಲಿ ಪ್ರಧಾನಿ ಮೋದಿ ಜನರ ನಡುವೆ…