Headlines

ನಾಗರಹೊಳೆ, ಬಂಡೀಪುರದಲ್ಲಿ ಹೆಚ್ಚಿದ ವ್ಯಾಘ್ರಗಳ ಗರ್ಜನೆ: ಪ್ರವಾಸಿಗರ ಕ್ಯಾಮೆರಾಗೆ ಬಿಂದಾಸ್ ಪೋಸ್ ನೀಡಿದ ಜೋಡಿ ಹುಲಿಗಳು! – Kannada News | Karnataka’s Tiger Conservation Success: Nagarahole, Bandipur Boost Wildlife Tourism

ಮೈಸೂರು, ಮೇ,21: ಪ್ರಕೃತಿ ಪ್ರೇಮಿಗಳು ಹಾಗೂ ವನ್ಯಜೀವಿ ಆಸಕ್ತರಿಗೆ ಒಂದು ಸಂತಸದ ಸುದ್ದಿಯೊಂದು ಇದೆ. ಇತ್ತೀಚಿನ ವರ್ಷಗಳಲ್ಲಿ ಅರಣ್ಯ ಇಲಾಖೆಯ ಕಠಿಣ ಸುರಕ್ಷತಾ ಕ್ರಮಗಳು ಮತ್ತು ಪೂರಕ ವಾತಾವರಣದಿಂದಾಗಿ ಈ ಉದ್ಯಾನವನಗಳಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳ (Increase in Tiger Population) ಕಂಡಿದೆ. ಇದರ ಬೆನ್ನಲ್ಲೇ, ಸಫಾರಿಗೆ ತೆರಳುವ ಪ್ರವಾಸಿಗರಿಗೆ ಹುಲಿಗಳ ದರ್ಶನ ಭಾಗ್ಯ ನಿರಂತರವಾಗಿ ಸಿಗುತ್ತಿದೆ. ಇತ್ತೀಚೆಗಷ್ಟೇ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ವಾಹನದಲ್ಲಿ ತೆರಳುತ್ತಿದ್ದ ಪ್ರವಾಸಿಗರಿಗೆ ಅತ್ಯಂತ ಅಪರೂಪದ ಹಾಗೂ ರೋಮಾಂಚನಕಾರಿ ದೃಶ್ಯವೊಂದು…

Read More

ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ಹೀಗಿದೆ ದಳಪತಿಗಳ ಲೆಕ್ಕಾಚಾರ – Kannada News | JDS Aims for Hiriyur By Election Victory with Strategic Candidate Selection

ಚಿತ್ರದುರ್ಗ, ಮೇ 21: ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಜೆಡಿಎಸ್ ಸಿದ್ಧತೆ ನಡೆಸುತ್ತಿದೆ. ಸಚಿವ ಡಿ. ಸುಧಾಕರ್ ಅವರ ನಿಧನದಿಂದ ತೆರವಾಗಿರುವ ಈ ಕ್ಷೇತ್ರವನ್ನು ಗೆಲ್ಲಲು ಜೆಡಿಎಸ್ ಉತ್ಸುಕವಾಗಿದೆ. ಪಕ್ಷದ ವರಿಷ್ಠ ಹೆಚ್.ಡಿ. ಕುಮಾರಸ್ವಾಮಿ ಅವರು ಕ್ಷೇತ್ರದ ಮುಖಂಡರೊಂದಿಗೆ ಸಭೆ ನಡೆಸಿ, ಟಿಕೆಟ್ ತರುವುದು ನನ್ನ ಜವಾಬ್ದಾರಿ, ಗೆಲ್ಲಿಸುವುದು ನಿಮ್ಮ ಜವಾಬ್ದಾರಿ ಎಂದು ಹೇಳಿದ್ದಾರೆ. ಹಿರಿಯೂರು ಕ್ಷೇತ್ರದಲ್ಲಿ ಒಕ್ಕಲಿಗ ಮತ್ತು ಯಾದವ ಸಮುದಾಯದ ಮತಗಳು ನಿರ್ಣಾಯಕವಾಗಿವೆ. ಹೀಗಾಗಿ ಈ ಸಮುದಾಯಗಳಿಂದಲೇ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಲೆಕ್ಕಾಚಾರವಿದೆ. 2023ರ…

Read More

Guru Sanchara 2026: ಗುರು ಸಂಚಾರದಿಂದ ಮಿಥುನ ರಾಶಿಯವರಿಗೆ ಆರ್ಥಿಕ ವೃದ್ಧಿ ಮತ್ತು ಶುಭ ಯೋಗ ಶುರು – Kannada News | Jupiter Transit 2026: Auspicious Outcomes for Gemini or Mithuna Rashi

ಜ್ಯೋತಿಷ್ಯದಲ್ಲಿ ಗುರು ಗ್ರಹದ ಸಂಚಾರವು ಅತ್ಯಂತ ಮಹತ್ವದ್ದಾಗಿದೆ. ಈ ವರ್ಷ ಗುರುವು ಜೂನ್‌ನಲ್ಲಿ ಸ್ಥಾನ ಬದಲಾಯಿಸುತ್ತಿದ್ದು, ಮಿಥುನ ರಾಶಿಯವರಿಗೆ ಗುರು ಸಂಚಾರ ಹೇಗಿರಲಿದೆ ಎಂಬುದನ್ನು ಡಾ. ಬಸವರಾಜ್ ಗುರೂಜಿ ವಿವರಿಸಿದ್ದಾರೆ. ಮಿಥುನ ರಾಶಿಯವರಿಗೆ 2026ರ ಗುರು ಸಂಚಾರವು ಅನೇಕ ಶುಭ ಫಲಗಳನ್ನು ತರಲಿದೆ. ಗುರು ಎರಡನೇ ಮನೆಗೆ ಪ್ರವೇಶಿಸುವುದರಿಂದ ಧನಸ್ಥಾನ, ವಾಕ್ಸ್ಥಾನ ಮತ್ತು ಕುಟುಂಬ ಸ್ಥಾನಗಳಿಗೆ ಬಲ ಸಿಗಲಿದೆ. ಆಕಸ್ಮಿಕ ಧನಯೋಗ, ಹಳೆಯ ಬಾಕಿ ವಸೂಲಿ, ಆರ್ಥಿಕ ಸ್ಥಿರತೆ, ಆಸ್ತಿ ಸಂಪಾದನೆ ಮತ್ತು ಹೂಡಿಕೆಯಿಂದ ಲಾಭಗಳ ನಿರೀಕ್ಷೆ…

Read More

International Tea Day 2026: ಚಹಾದ ಹಿತಮಿತ ಸೇವನೆಯಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳು ಲಭಿಸುತ್ತವೆ ನೋಡಿ – Kannada News | International Tea Day 2026: Health benefits of drinking tea

ಅಂತಾರಾಷ್ಟ್ರೀಯ ಚಹಾ ದಿನImage Credit source: vecteezy ಚಹಾ (tea) ಎಂದರೆ ಬಹುತೇಕರಿಗೆ ಅಮೃತವಿದ್ದಂತೆ. ಈ ಟೀ ಇಲ್ಲದೆ ಅವರ ದಿನವೇ ಆರಂಭವಾಗೋದಿಲ್ಲ. ಒಂದು ಕಪ್‌ ಚಹಾ ಕುಡಿಯುವುದರಿಂದ ನಮ್ಮ ಮನಸ್ಸು ಮತ್ತು ದೇಹ ಉಲ್ಲಾಸಗೊಳ್ಳುತ್ತದೆ. ಅದಕ್ಕಾಗಿಯೇ ಹೆಚ್ಚಿನವರು ಪ್ರತಿನಿತ್ಯ ಟೀ ಕುಡಿಯುತ್ತಾರೆ. ಈ ಟೀ ಮನಸ್ಸು ದೇಹವನ್ನು ರಿಫ್ರೆಶ್‌ ಮಾಡೋದು ಮಾತ್ರವಲ್ಲ, ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನೂ ಹೊಂದಿವೆ. ಹೀಗೆ ದೀರ್ಘ ಇತಿಹಾಸವನ್ನು ಹೊಂದಿರುವ ಹಾಗೂ ವಿವಿಧ ದೇಶಗಳ ಸಂಸ್ಕೃತಿಗಳಲ್ಲಿ ಆಳವಾಗಿ ಬೇರೂರಿರುವ  ಚಹಾದ ಇತಿಹಾಸ ಸಂಸ್ಕೃತಿ…

Read More

ಹೊಸ ಹೆಜ್ಜೆ ಇಟ್ಟ ಕೆವಿಎನ್ ಸಂಸ್ಥೆ; ಚಿರಂಜೀವಿ ಜೊತೆ ಬಿಗ್ ಬಜೆಟ್ ಸಿನಿಮಾ – Kannada News | KVN Productions Backs Chiranjeevi’s Mega 158: New Big Budget Action Film

‘ಟಾಕ್ಸಿಕ್’, ‘ಕೆಡಿ’, (KD Movie) ‘ಜನ ನಾಯಗನ್’ ರೀತಿಯ ಬಿಗ್ ಬಜೆಟ್ ಸಿನಿಮಾ ನಿರ್ಮಿಸೋ ಕೆವಿಎನ್ ಸಂಸ್ಥೆ ಈಗ ಹೊಸ ಹೆಜ್ಜೆ ಇಟ್ಟಿದೆ. ಚಿರಂಜೀವಿ ಅವರ 158ನೇ ಸಿನಿಮಾಗೆ ಈ ಸಂಸ್ಥೆ ಬಂಡವಾಳ ಹೂಡುತ್ತಿದೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ ‘ಮೆಗಾ 158’ ಎಂದು ಹೆಸರಿಡಲಾಗಿದೆ. ಸಿನಿಮಾದ ಮುಹೂರ್ತ ಇಂದು (ಮೇ 21) ಅದ್ದೂರಿಯಾಗಿ ನೆರವೇರಿದೆ. ಆಂಧ್ರ ಪ್ರದೇಶದ ಉಪಮುಖ್ಯಮಂಯತ್ರಿ ಪವನ್ ಕಲ್ಯಾಣ್, ಚಿರಂಜೀವಿ ಸಹೋದರ, ನಟ ಪವನ್ ಕಲ್ಯಾಣ್ ಅವರು ಸಿನಿಮಾಗೆ ಕ್ಲ್ಯಾಪ್ ಮಾಡಿದ್ದಾರೆ. ಕೆವಿಎನ್ ಸಂಸ್ಥೆ…

Read More

ನಿಪ್ಪಾಣಿಯಲ್ಲಿ ಬಿಜೆಪಿ, ಕಾಂಗ್ರೆಸ್ ಕಿತ್ತಾಟ: ಶಾಸಕಿ ಶಶಿಕಲಾ ಜೊಲ್ಲೆಯಿದ್ದ ಕಾರ್ಯಮದಲ್ಲಿಯೇ ಗಲಾಟೆ – Kannada News | High Drama In Nippani: Congress BJP Workers Clash At Housing Event, MLA Shashikala Jolle Breaks Down

ನಿಪ್ಪಾಣಿಯಲ್ಲ ಬಿಜೆಪಿ, ಕಾಂಗ್ರೆಸ್ ಕಿತ್ತಾಟImage Credit source: Tv9 Kannada ಬೆಂಗಳೂರು, ಮೇ 21: ನಿಪ್ಪಾಣಿ ಮತಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಕಿತ್ತಾಟ ನಡೆದಿದ್ದು, ಶಾಸಕಿ ಶಶಿಕಲಾ ಜೊಲ್ಲೆ ಕಾರ್ಯಕ್ರಮಕ್ಕೆ ನುಗ್ಗಿ ಕಾಂಗ್ರೆಸ್ ಕಾರ್ಯಕರ್ತರು ಗಲಾಟೆ ನಡೆಸಿರುವ ಆರೋಪ ಕೇಳಿಬಂದಿದೆ. ನಿಪ್ಪಾಣಿ ತಾಲೂಕಿನ ಪಟ್ಟಣಕುಡಿ ಗ್ರಾಮದಲ್ಲಿ ನಡೆಯುತ್ತಿದ್ದ ಮನೆ ಹಂಚಿಕೆ ಕಾರ್ಯಕ್ರಮಕ್ಕೆ ಎಂಟ್ರಿಕೊಟ್ಟ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಹಾಗೂ ಬೆಂಬಲಿಗರು ವಾಗ್ವಾದ ನಡೆಸಿದ್ದಾರೆ. ಪರಿಣಾಮ ಆಶ್ರಯ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ಲಾಟರಿ…

Read More

‘ಕರ್ಣ’ ಧಾರಾವಾಹಿ; ನೆರವೇರಿತು ಕರ್ಣ-ನಿಧಿ ಮದುವೆ – Kannada News | Karna Nidhi Wedding: Zee Kannada’s ‘Karna’ Serial Sees Major Twist

ಝೀ ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ ಮತ್ತು ಕುತೂಹಲ ಕೆರಳಿಸಿರುವ ‘ಕರ್ಣ’ ಧಾರಾವಾಹಿಯಲ್ಲಿ ಕೊನೆಗೂ ವೀಕ್ಷಕರು ಬಹುದಿನಗಳಿಂದ ಕಾಯುತ್ತಿದ್ದ ಮಹಾ ತಿರುವು ಎದುರಾಗಿದೆ. ಕಥೆಯ ನಾಯಕ ಕರ್ಣ ಹಾಗೂ ನಿಧಿ ನಡುವಿನ ವಿವಾಹ ಮಹೋತ್ಸವವು ಹಿರಿಯರ ಸಮ್ಮುಖದಲ್ಲಿ ಅತ್ಯಂತ ನಾಟಕೀಯವಾಗಿ ಮತ್ತು ಯಶಸ್ವಿಯಾಗಿ ಸಂಪೂರ್ಣಗೊಂಡಿದೆ. ಈ ಮಹತ್ವದ ಬೆಳವಣಿಗೆಯು ಸೀರಿಯಲ್ ಪ್ರೇಕ್ಷಕರಲ್ಲಿ ಭಾರಿ ರೋಮಾಂಚನ ಉಂಟುಮಾಡಿದೆ. ಈ ಹಿಂದೆ ಕಥೆಯಲ್ಲಿ ಕರ್ಣ ಮತ್ತು ನಿತ್ಯಾ ಮದುವೆ ನಡೆದಂತೆ ಬಿಂಬಿಸಲಾಗಿದ್ದರೂ, ಅದು ಕೇವಲ ಪರಿಸ್ಥಿತಿಯ ಒತ್ತಡಕ್ಕೆ ಮಣಿದು ನಡೆದ…

Read More

ಅಪಘಾತದಲ್ಲಿ ಕಾಲು ಹೋದರೂ ಸ್ಟ್ರೇಚರ್‌ನಲ್ಲೇ ಮಲಗಿ SSLC ಪರೀಕ್ಷೆ ಬರೆದು ಪಾಸ್ ಆದ ಕುಸುಮಾಗೆ ಶಾಸಕಿ ರೂಪಕಲಾ ಬಂಪರ್ ಗಿಫ್ಟ್! – Kannada News | Inspiring Kolar Girl Kusuma Overcomes Tragedy, Achieves SSLC Success

ಕುಸುಮಾಕ್ಕೆ ರೋಬೋಟಿಕ್ ಕಾಲುಗಳು ನೀಡಿದ ಶಾಸಕಿ ಕೋಲಾರ, ಮೇ.21: ಸಂಕಲ್ಪ ಬಲವೊಂದಿದ್ದರೆ ಎಂತಹ ಕಠಿಣ ಪರಿಸ್ಥಿತಿಯನ್ನೂ ಗೆದ್ದು ಬರಬಹುದು ಎಂಬುದನ್ನು ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಚಿನ್ನನಾಗನಹಳ್ಳಿಯ ಹೆಣ್ಣುಮಗಳು ಕುಸುಮಾ ಇಡೀ ಸಮಾಜಕ್ಕೆ ಸಾಬೀತುಪಡಿಸಿದ್ದಾಳೆ. ರಸ್ತೆ ಅಪಘಾತವೊಂದರಲ್ಲಿ ತನ್ನ ಕಾಲನ್ನೇ ಕಳೆದುಕೊಂಡರೂ ಧೃತಿಗೆಡದ ಈಕೆ, ಇತ್ತೀಚೆಗಷ್ಟೇ ಪ್ರಕಟವಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ (First Class) ತೇರ್ಗಡೆಯಾಗುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾಳೆ. ಕೆಲವು ತಿಂಗಳ ಮುನ್ನ ನಡೆದ ಭೀಕರ ಅಪಘಾತದಲ್ಲಿ ಕುಸುಮಾ ತನ್ನ ಒಂದು ಕಾಲನ್ನು ಕಳೆದುಕೊಂಡಿದ್ದಳು….

Read More

IPL 2026: RCB ತಂಡದ ಅತೀ ದೊಡ್ಡ ಸಮಸ್ಯೆಗೆ ಇಲ್ಲಿದೆ ಪರಿಹಾರ! – Kannada News | IPL 2026: Here is the solution to RCB team’s biggest problem

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 67ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಸನ್​ರೈಸರ್ಸ್ ಹೈದರಾಬಾದ್ (SRH) ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯವು ಉಭಯ ತಂಡಗಳ ಪಾಲಿಗೆ ನಿರ್ಣಾಯಕ. ಏಕೆಂದರೆ ಈ ಮ್ಯಾಚ್​ನಲ್ಲಿ ಗೆಲ್ಲುವ ತಂಡಕ್ಕೆ ಮೊದಲ ಕ್ವಾಲಿಫೈಯರ್ ಆಡಲು ಅವಕಾಶ ಸಿಗಲಿದೆ. ಅಷ್ಟೇ ಅಲ್ಲದೆ ಪ್ಲೇಆಫ್ ಹಂತಕ್ಕೂ ಮುನ್ನ ಆರ್​ಸಿಬಿ ಕಣಕ್ಕಿಳಿಯಲಿರುವ ಕೊನೆಯ ಪಂದ್ಯ ಕೂಡ ಇದಾಗಿದೆ. ಹೀಗಾಗಿ ಈ ಮ್ಯಾಚ್​ ಮೂಲಕ ಆರ್​ಸಿಬಿ ತನ್ನೆಲ್ಲಾ ನೂನ್ಯತೆಗಳನ್ನು ಸರಿಪಡಿಸಿಕೊಳ್ಳಬೇಕಿದೆ. ಇಲ್ಲಿ ಆರ್​ಸಿಬಿ ತಂಡದ…

Read More

ಕಾಂಗ್ರೆಸ್​​ ‘ಪಟ್ಟದಾಟ’ಕ್ಕೆ ತೆರೆ ಯಾವಾಗ?: ಸಾಧ್ಯಾಸಾಧ್ಯತೆ ಬಗ್ಗೆ ‘ಕೈ; ಪಾಳಯದಲ್ಲೇ ಹೀಗೊಂದು ಚರ್ಚೆ – Kannada News | Congress High Command To Settle Karnataka ‘Power Struggle’: Siddaramaiah, DK Shivakumar Likely Summoned To Delhi

ಕಾಂಗ್ರೆಸ್​​ ‘ಪಟ್ಟದಾಟ’ಕ್ಕೆ ತೆರೆ ಯಾವಾಗ?Image Credit source: mathrubhumi.com ಬೆಂಗಳೂರು, ಮೇ 21: ಅಧಿಕಾರ ಹಂಚಿಕೆ ವಿಚಾರ ಕಳೆದ ಕೆಲ ತಿಂಗಳುಗಳಿಂದ ರಾಜ್ಯದಲ್ಲಿ ಸದ್ದು ಮಾಡುತ್ತಲೇ ಬಂದಿದೆ. ಒಂದು ಕಡೆ ಸಿಎಂ ಸಿದ್ದರಾಮಯ್ಯ ಬಣ ಮತ್ತೊಂದೆಡೆ ಡಿ.ಕೆ. ಶಿವಕುಮಾರ್​​ ಬೆಂಬಲಿಗರು ಈ ಸಂಬಂಧ ಪರಸ್ಪರ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದಾರೆ. ಪಟ್ಟದಾಟದ ವಿಚಾರ ಸದ್ಯ ಎಐಸಿಸಿ ಅಂಗಳದಲ್ಲಿದೆ. ಹೀಗಾಗಿ ವರಿಷ್ಠರ ತೀರ್ಮಾನವೇ ಅಂತಿಮ ಎಂಬ ಮಾತುಗಳು ಕಾಂಗ್ರೆಸ್​​ ಪಾಳಯದಿಂದ ಕೇಳಿಬರತೊಡಗಿದೆ. ಪಂಚರಾಜ್ಯ ಚುನಾವಣೆ ಮುಗಿದ ಹಿನ್ನೆಲೆ ಈಗ ವರಿಷ್ಠರು…

Read More