Video:ಮಗಳು ಕಾಣೆಯಾಗಿದ್ದಾಳೆ ಸ್ವಾಮಿ ಹುಡುಕಿಕೊಡಿ ಅಂದ್ರೆ, ಗಾಡೀಲಿ ಡೀಸೆಲ್ ಇಲ್ಲ ಹಣ ಕೊಡಿ ಎಂದ ಪೊಲೀಸ್ ಇನ್ಸ್‌ಪೆಕ್ಟರ್ – Kannada News | Viral Video Puts Nagpur Police Under Scrutiny in Missing Girl Case
ನಾಗ್ಪುರ, ಮೇ 21: ಮಹಾರಾಷ್ಟ್ರದ ನಾಗ್ಪುರದಲ್ಲಿ ಇಡೀ ಪೊಲೀಸ್ ವ್ಯವಸ್ಥೆಯೇ ತಲೆತಗ್ಗಿಸುವಂತಹ ಆಘಾತಕಾರಿ ಘಟನೆಯೊಂದು ನಡೆದಿದೆ. ಪಂಚಪಾವೋಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರದಿಂದ ಅಪ್ರಾಪ್ತ ಬಾಲಕಿಯೊಬ್ಬಳು ಕಾಣೆಯಾಗಿದ್ದಳು. ಗಾಬರಿಗೊಂಡ ಕುಟುಂಬಸ್ಥರು ತಕ್ಷಣವೇ ದೂರು ನೀಡಲು ಠಾಣೆಗೆ ಓಡಿ ಬಂದಾಗ, ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಬಾಬುರಾವ್ ರಾವತ್ ಅವರು, ನಮ್ಮ ವಾಹನದಲ್ಲಿ ಡೀಸೆಲ್ ಇಲ್ಲ, ನಿಮ್ಮ ಮಗಳನ್ನು ಹುಡುಕಬೇಕಾದರೆ ಇಂಧನಕ್ಕೆ ಹಣ ಕೊಡಿ ಎಂದು ಉಡಾಫೆಯಾಗಿ ಹೇಳಿದ್ದಾರೆ. ಈ ದಿಗ್ಭ್ರಮೆಗೊಳಿಸುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ…