ಪ್ರೀತಿಸಿ ಮದ್ವೆಯಾಗಿದ್ರೂ ಮತ್ತೊಬ್ಬಳ ಜತೆ ಲವ್ವಿಡವ್ವಿ: ಪ್ರಶ್ನಿಸಿದ ಹೆಂಡ್ತಿಗೆ ಚಟ್ಟ ಕಟ್ಟಿದ – Kannada News | Shivamogga: Husband kills wife for opposing second marriage; Arrested
ಶಿವಮೊಗ್ಗ, ಜನವರಿ 15: ಎರಡನೇ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಪತ್ನಿಯ (wife) ಕತ್ತು ಹಿಸುಕಿ ಪತಿ ಕೊಲೆ (murder) ಮಾಡಿರುವಂತಹ ಘಟನೆ ಜಿಲ್ಲೆಯ ಭದ್ರಾವತಿ ತಾಲೂಕಿನ ಪಂಡರಹಳ್ಳಿ ಕ್ಯಾಂಪ್ನಲ್ಲಿ ನಡೆದಿದೆ. ಜ.11ರಂದು ಮನೆಯಲ್ಲಿ ಉಸಿರುಗಟ್ಟಿಸಿ ಚಂದನಾಬಾಯಿ ಅನ್ನು ಪತಿ ಗೋಪಿ ಕೊಲೆ ಮಾಡಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಹೊಳೆಹೊನ್ನೂರು ಪೊಲೀಸರ ತನಿಖೆ ವೇಳೆ ಗೋಪಿ ಸಿಕ್ಕಿಬಿದಿದ್ದು, ಇದೀಗ ಆತನ ಬಂಧನವಾಗಿದೆ. ನಡೆದದ್ದೇನು? ಡಿ.ಬಿ.ಹಳ್ಳಿಯ ಲಂಬಾಣಿ ಸಮುದಾಯದ ಚಂದನಾಬಾಯಿ ಮತ್ತು ಪಂಡರಹಳ್ಳಿಯ ಬೋವಿ ಸಮಾಜದ ಗೋಪಿ ಪರಸ್ಪರ…