Category Archives: Blog

Your blog category

ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಇರುಮುಡಿ ಹೊತ್ತು ಸಾಗಿದ ಶಿವಣ್ಣ ದಂಪತಿ – Kannada News | Shivarajkumar carries sacred Irumudi in Bejjavalli Ayyappa Temple

ನಟ ಶಿವರಾಜ್​ಕುಮಾರ್ (Shivarajkumar) ಅವರು ಅಯ್ಯಪ್ಪ ಸ್ವಾಮಿಯ ಭಕ್ತರು. ಹಲವು ಬಾರಿ ಅವರು ಮಾಲೆ ಧರಿಸಿದ್ದರು. ಈ ವರ್ಷವೂ ಅವರು ಮಾಲೆ ಧರಿಸಿ ಇರುಮುಡಿ (Irumudi) ಹೊತ್ತಿದ್ದಾರೆ. ಅವರ ಜೊತೆ ಪತ್ನಿ ಗೀತಾ ಕೂಡ ಸಾಥ್ ನೀಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಶ್ರೀಕ್ಷೇತ್ರ ಬೆಜ್ಜವಳ್ಳಿ ಅಯ್ಯಪ್ಪ ಸ್ವಾಮಿ (Bejjavalli Ayyappa Temple) ದೇವಾಲಯಕ್ಕೆ ಅವರು ಇರುಮುಡಿ ಹೊತ್ತು ಸಾಗಿದ್ದಾರೆ. ವಿಶ್ವ ಸಂತೋಷ ಭಾರತಿ ಗುರೂಜಿ ನೇತೃತ್ವದಲ್ಲಿ ಮೆರವಣಿಗೆ ಸಾಗಿದೆ. ಮಕರ ಸಂಕ್ರಮಣದ ಅಂಗವಾಗಿ ಅಯ್ಯಪ್ಪನ ಪೂಜೆಗೂ ಮುನ್ನ ಮೆರವಣಿಗೆ ಮಾಡಲಾಗಿದೆ. ವಿವಿಧ ಆಭರಣಗಳ ಸಮೇತ, ಉತ್ಸವ ಮೂರ್ತಿಯನ್ನ ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ತರಲಾಗಿದೆ. ಬೆಜ್ಜವಳ್ಳಿ ಅಯ್ಯಪ್ಪನ ಉತ್ಸವದ ಹಿನ್ನೆಲೆಯಲ್ಲಿ ಇಂದು (ಜನವರಿ 14) ಭಕ್ತರ ದಂಡು ನೆರೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಭಾರತದ ಆಹಾರಕ್ಕೆ ಅವಮಾನ: ಅಮೆರಿಕ ವಿಶ್ವವಿದ್ಯಾಲಯದ ವಿರುದ್ಧ ಗುಡುಗಿದ ಭಾರತೀಯ ವಿದ್ಯಾರ್ಥಿಗಳಿಗೆ ಬಂತು 1.8 ಕೋಟಿ ರೂ. – Kannada News | Colorado Boulder Racial Bias: Indian Scholars Win Landmark Food Discrimination Case

ಅಮೆರಿಕದ ಕೊಲೊರಾಡೋ ಬೌಲ್ಡರ್ ವಿಶ್ವವಿದ್ಯಾಲಯದಲ್ಲಿ (University of Colorado Boulder) 2023ರಲ್ಲಿ ಆಹಾರ ಕ್ರಮದ ವಿಚಾರವನ್ನು ಇಟ್ಟುಕೊಂಡು ಜನಾಂಗೀಯ ತಾರತಮ್ಯ ಮಾಡಲಾಗಿದೆ ಎಂದು ದೊಡ್ಡ ಗಲಾಟೆ ನಡೆದಿತ್ತು. ಈ ವಿಚಾರವಾಗಿ ಭಾರತೀಯ ಮೂಲದ ಇಬ್ಬರು ವಿದ್ಯಾರ್ಥಿಗಳು ಅಮೆರಿಕದ ಫೆಡರಲ್ ಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ಅರ್ಜಿ ಸಲ್ಲಿಸಿದರು. ಇದೀಗ ಈ ವಿಚಾರವಾಗಿ ಕೋರ್ಟ್​ ಮಹತ್ವದ ತೀರ್ಪು ನೀಡಿದೆ. ಭಾರತೀಯ ವಿದ್ಯಾರ್ಥಿಗಳಿಗೆ $200,000 (ಅಂದಾಜು ₹1.8 ಕೋಟಿ) ಪರಿಹಾರ ನೀಡಲು ಹೇಳಿದೆ. ಸಾಮಾಜಿಕ ಜಾಲತಾಣದಲ್ಲಿ ಹಾಗೂ ಅಲ್ಲಿನ ಮಾಧ್ಯಮಗಳಲ್ಲಿ ಈ ಬಗ್ಗೆ ಭಾರೀ ಚರ್ಚೆಯಾಗಿದೆ. ವಿದೇಶದಲ್ಲಿ ಇಂದಿಗೂ ಆಹಾರ ವಿಚಾರದಲ್ಲಿ ದೊಡ್ಡ ತಾರತಮ್ಯಗಳು ನಡೆಯುತ್ತಿಯೇ ಎಂಬ ವಿಚಾರ ಚರ್ಚೆ ಬಂದಿದೆ.

ಈ ಘಟನೆ 2023 ಸೆ.5ರಂದು ನಡೆದಿದೆ. ಮಾನವಶಾಸ್ತ್ರ ವಿಭಾಗದಲ್ಲಿ ಪಿಎಚ್‌ಡಿ ಮಾಡುತ್ತಿದ್ದ ಆದಿತ್ಯ ಪ್ರಕಾಶ್ ಅವರು ವಿಶ್ವವಿದ್ಯಾಲಯದ ಸಾಮಾನ್ಯ ಮೈಕ್ರೋವೇವ್‌ನಲ್ಲಿ ತಮ್ಮ ಮಧ್ಯಾಹ್ನದ ಊಟವಾದ ‘ಪಾಲಕ್ ಪನೀರ್’ ಅನ್ನು ಬಿಸಿ ಮಾಡುತ್ತಿದ್ದರು. ಆಗ ಅಲ್ಲಿಗೆ ಬಂದ ವಿದೇಶಿ ಸಿಬ್ಬಂದಿಯೊಬ್ಬರು ಏನು ಮಾಡುತ್ತಿದ್ದೀರಾ? ಎಂದು ಕೇಳಿದ್ದಾರೆ. ಅದಕ್ಕೆ ಆದಿತ್ಯ ಪ್ರಕಾಶ್ ಪಾಲಕ್ ಪನೀರ್ ಬಿಸಿ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ. ಇದಕ್ಕೆ ಆ ವಿದೇಶಿ ಸಿಬ್ಬಂದಿ, ಇದು ತುಂಬಾ ವಾಸನೆ ಬರುತ್ತಿದೆ ಎಂದು ಹೇಳಿದ್ದಾನೆ. ಆದಿತ್ಯ ಪ್ರಕಾಶ್ ಇಲ್ಲ ಸರ್​ ಅದು ಭಾರತದ ಆಹಾರ ಪದ್ಧತಿ, ಹಾಗೂ ತುಂಬಾ ಫ್ರೆಶ್​ ಆಗಿದೆ ಎಂದು ಹೇಳಿದ್ದಾರೆ. ಇಲ್ಲ ಇದು ಕೆಟ್ಟಾಗಿದೆ. ಇದನ್ನು ನೀವು ಹೇಗೆ ತಿನ್ನುತ್ತೀರಾ ಎಂದು ಕೇಳಿದ್ದಾರೆ. ಕೊನೆಗೆ ನನ್ನ ವಾದವೇ ಸರಿ ಎಂದು ಹೇಳಿಕೊಳ್ಳಲು ಸಿಬ್ಬಂದಿ ಆಡಳಿತ ಮಂಡಳಿ ದೂರು ನೀಡಿದ್ದಾನೆ. ಜತೆಗೆ ತನ್ನ ಪ್ರಭಾವವನ್ನು ಕೂಡ ಬಳಸಿಕೊಂಡು ಆದಿತ್ಯ ಪ್ರಕಾಶ್ ವಿರುದ್ಧ ಮಾತನಾಡುವಂತೆ ಮಾಡಿದ್ದಾನೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ತಾಯಿ ಮುಂದೆ ಗೋಡೆಗೆ ಎಸೆದು ಚಿತ್ರಹಿಂಸೆ ನೀಡಿ ನಾಯಿ ಮರಿಯನ್ನು ಕೊಂದ ವ್ಯಕ್ತಿ

ಆಡಳಿತ ಮಂಡಳಿ ಮಧ್ಯಪ್ರವೇಶ ಮಾಡಿ, ಇನ್ಮುಂದೆ ಹೊರದೇಶ ಅಥವಾ ಭಾರತ ಆಹಾರಗಳನ್ನು ವಿಶ್ವವಿದ್ಯಾಲಯಕ್ಕೆ ತರವಂತಿಲ್ಲ ಎಂದು ಹೇಳಿದ್ದಾರೆ. ಈ ವಿಚಾರವಾಗಿ ಆದಿತ್ಯ ಪ್ರಕಾಶ್ ಅವರು ವಿಶ್ವವಿದ್ಯಾಲಯ ವಿರುದ್ಧ ಗುಡುಗಿದ್ದಾರೆ. ಆದಿತ್ಯ ಪ್ರಕಾಶ್ ಪರವಾಗಿ ಭಾರತ ಮೂಲದ ಮತ್ತೊಬ್ಬ ವಿದ್ಯಾರ್ಥಿ ಉರ್ಮಿ ಭಟ್ಟಾಚಾರ್ಯ ಕೂಡ ಮಾತನಾಡಿದ್ದಾರೆ. ಇಬ್ಬರು ಜತೆಯಾಗಿ ಸೇರಿ ಈ ವಿಚಾರವಾಗಿ ಹೋರಾಟ ಮಾಡಿದ್ದಾರೆ. ಕೊನೆಗೆ ಈ ಇಬ್ಬರು ವಿದ್ಯಾರ್ಥಿಗಳು ಕೊಲೊರಾಡೋ ಬೌಲ್ಡರ್ ವಿಶ್ವವಿದ್ಯಾಲಯದ ವಿರುದ್ಧ ಅಮೆರಿಕದ ಫೆಡರಲ್ ಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ಅರ್ಜಿ ಸಲ್ಲಿದರು. 2 ವರ್ಷಗಳ ನಂತರ ಇದೀಗ ಕೋರ್ಟ್​​ ಈ ವಿದ್ಯಾರ್ಥಿಗಳ ಪರ ಆದೇಶವನ್ನು ನೀಡಿದೆ. ಆಹಾರ ವಿಚಾರವಾಗಿ ಜನಾಂಗೀಯ ವಿವಾದ ಮಾಡಿದಕ್ಕೆ ವಿಶ್ವವಿದ್ಯಾಲಯ ಇವರಿಗೆ $200,000 (ಅಂದಾಜು ₹1.8 ಕೋಟಿ) ನೀಡಬೇಕು ಹಾಗೂ ಅವರ ಸ್ನಾತಕೋತ್ತರ ಪದವಿಗಳನ್ನು ಅಧಿಕೃತವಾಗಿ ಪ್ರದಾನ ಮಾಡಬೇಕು ಎಂದು ಹೇಳಿದೆ. ಇದಕ್ಕೆ ಕೊಲೊರಾಡೋ ಬೌಲ್ಡರ್ ವಿಶ್ವವಿದ್ಯಾಲಯ ಕೂಡ ಒಪ್ಪಿಕೊಂಡಿದೆ. ಆದರೆ ಇದರ ಜತೆಗೆ ವಿಶ್ವವಿದ್ಯಾಲಯ ಷರತ್ತನ್ನು ಕೂಡ ಹಾಕಿದೆ. ಇನ್ಮುಂದೆ ಇವರು ನಮ್ಮ ವಿಶ್ವವಿದ್ಯಾಲಯದ ಯಾವುದೇ ವಿಭಾಗದಲ್ಲಿ ವಿದ್ಯಾರ್ಥಿಗಳಾಗಿ ಬರಬಾರದು ಹಾಗೂ ಇಲ್ಲಿ ಹುದ್ದೆಗಳಿಗೆ ಸೇರಿಕೊಳ್ಳಬಾದರು ಎಂದು ಹೇಳಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:16 pm, Wed, 14 January 26

Source link

WPL 2026: ಮೊದಲ ಗೆಲುವು ದಾಖಲಿಸಿದ ಡೆಲ್ಲಿ; ಯುಪಿಗೆ ಹ್ಯಾಟ್ರಿಕ್ ಸೋಲು – Kannada News | DC vs UPW: Delhi Capitals Clinch Maiden WPL 2026 Victory in Last Ball Thriller

ಮಹಿಳಾ ಪ್ರೀಮಿಯರ್ ಲೀಗ್‌ನ (WPL 2026) ಏಳನೇ ಪಂದ್ಯ ಇಂದು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಯುಪಿ ವಾರಿಯರ್ಸ್ (Delhi Capitals vs UP Warriorz) ನಡುವೆ ನಡೆಯಿತು. ಉಭಯ ತಂಡಗಳು ಮೊದಲ ಗೆಲುವನ್ನು ಎದುರು ನೋಡುತ್ತಿದ್ದ ಕಾರಣ ಪಂದ್ಯ ಸಾಕಷ್ಟು ಮಹತ್ವದ್ದಾಗಿತ್ತು. ಅಂತಿಮವಾಗಿ ಈ ಪಂದ್ಯದಲ್ಲಿ ಯುಪಿ ವಾರಿಯರ್ಸ್​ ತಂಡವನ್ನು ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್ ಈ ಆವೃತ್ತಿಯಲ್ಲಿ ಮೊದಲ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಯುಪಿ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 154 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ, ದೆಹಲಿ ತಂಡವು ಕೊನೆಯ ಎಸೆತದಲ್ಲಿ 3 ವಿಕೆಟ್‌ಗಳನ್ನು ಕಳೆದುಕೊಂಡು ಗುರಿ ಬೆನ್ನಟ್ಟಿತು.

154 ರನ್ ಕಲೆಹಾಕಿದ ಡೆಲ್ಲಿ

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಯುಪಿ ವಾರಿಯರ್ಸ್​ ಪರ ನಾಯಕಿ ಮೆಗ್ ಲ್ಯಾನಿಂಗ್ (54) ಅರ್ಧಶತಕ ಬಾರಿಸಿದರೆ, ಹರ್ಲೀನ್ ಡಿಯೋಲ್ 47 ರನ್, ಫೋಬೆ ಲಿಚ್‌ಫೀಲ್ಡ್ 27 ರನ್ ಗಳಿಸಿದರು. ಹರ್ಲೀನ್ ಡಿಯೋಲ್ ರಿಟೈರ್ಡ್ ಹರ್ಟ್ ಮತ್ತು ಮೆಗ್ ಲ್ಯಾನಿಂಗ್ (54) ಔಟ್ ಆದ ನಂತರ, ಯುಪಿ ತಂಡದ ಇನ್ನಿಂಗ್ಸ್ ಕುಸಿಯಿತು. ಇದರಿಂದ ತಂಡವು ದೊಡ್ಡ ಸ್ಕೋರ್ ಗಳಿಸುವಲ್ಲಿ ವಿಫಲವಾಯಿತು. ಕೊನೆಯ ಓವರ್‌ನಲ್ಲಿ ಶಫಾಲಿ ವರ್ಮಾ ಎರಡು ವಿಕೆಟ್ ಪಡೆದರೆ, ದೆಹಲಿ ಪರ ಮರಿಜನ್ನೆ ಕಪ್ ಮತ್ತು ಶಫಾಲಿ ತಲಾ ಎರಡು ವಿಕೆಟ್ ಪಡೆದರು. ನಂದನಿ ಶರ್ಮಾ, ಸ್ನೇಹ್ ರಾಣಾ ಮತ್ತು ಶ್ರೀಚರಣಿ ತಲಾ ಒಂದು ವಿಕೆಟ್ ಪಡೆದರು.

ಕೊನೆಯ ಎಸೆತದಲ್ಲಿ ಗೆದ್ದ ಡೆಲ್ಲಿ

ಈ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಲಿಜೆಲ್ ಲೀ ಅವರ 67 ರನ್ ಮತ್ತು ಲಾರಾ ವೋಲ್ವಾರ್ಡ್ ಅವರ ಅಜೇಯ 25 ರನ್‌ಗಳ ನೆರವಿನಿಂದ 20 ಓವರ್‌ಗಳಲ್ಲಿ ಮೂರು ವಿಕೆಟ್‌ಗಳ ನಷ್ಟಕ್ಕೆ 158 ರನ್ ಗಳಿಸಿ ಪಂದ್ಯವನ್ನು ಗೆದ್ದುಕೊಂಡಿತು. ಡೆಲ್ಲಿಯ ಆರಂಭಿಕ ಜೋಡಿ ಅದ್ಭುತವಾಗಿ ಇನ್ನಿಂಗ್ಸ್ ಆರಂಭಿಸಿತು. ಶಫಾಲಿ ಮತ್ತು ಲಿಜೆಲ್ಲೆ ಲೀ 10 ಓವರ್‌ಗಳಲ್ಲಿ ವಿಕೆಟ್ ಕಳೆದುಕೊಳ್ಳದೆ 87 ರನ್ ಗಳಿಸಿದರು. ಇದರ ನಂತರ ಶಫಾಲಿ ವರ್ಮಾ ಮತ್ತು ಲಿಜೆಲ್ಲೆ ಲೀ ತಮ್ಮ ಅದ್ಭುತ ಫಾರ್ಮ್ ಅನ್ನು ಮುಂದುವರಿಸಿದರು. ಲಿಜೆಲ್ಲೆ ಅರ್ಧಶತಕ ಗಳಿಸಿದರೆ, ಶಫಾಲಿ ವರ್ಮಾ 12 ನೇ ಓವರ್‌ನಲ್ಲಿ ಔಟಾದರು. ಹೀಗಾಗಿ ಡೆಲ್ಲಿ 13 ಓವರ್‌ಗಳಲ್ಲಿ 100 ರನ್‌ಗಳ ಗಡಿ ದಾಟಿತು. ಲಿಜೆಲ್ಲೆ ಲೀ 15 ನೇ ಓವರ್‌ನಲ್ಲಿ 67 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಡೆಲ್ಲಿಗೆ ಕೊನೆಯ ಓವರ್‌ನಲ್ಲಿ 6 ರನ್‌ಗಳು ಬೇಕಾಗಿದ್ದವು. ಸೋಫಿ ಎಕ್ಲೆಸ್ಟೋನ್ ಅವರ ಈ ಓವರ್‌ ರೋಚಕತೆ ಸೃಷ್ಟಿಸಿತ್ತಾದರೂ, ದೆಹಲಿ ತಂಡವು ಕೊನೆಯ ಎಸೆತದಲ್ಲಿ ಗೆಲ್ಲುವಲ್ಲಿ ಯಶಸ್ವಿಯಾಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:10 pm, Wed, 14 January 26

Source link

ಬಿಗ್ ಬಾಸ್ ಮಿಡ್ ವೀಕ್ ಎಲಿಮಿನೇಷನ್​ನಲ್ಲಿ ಧ್ರುವಂತ್ ಔಟ್; ಕಿಚ್ಚನ ಚಪ್ಪಾಳೆಯೇ ಮುಳುವಾಯ್ತಾ? – Kannada News | Dhruvanth Evicted in Bigg Boss Kannada Season 12 mid week elimination

‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ರಿಯಾಲಿಟಿ ಶೋನಲ್ಲಿ ಅಂತಿಮ ವಾರಕ್ಕೆ ಅಶ್ವಿನಿ ಗೌಡ, ಗಿಲ್ಲಿ ನಟ, ಕಾವ್ಯಾ ಶೈವ, ಮ್ಯಾಟೆಂಟ್ ರಘು, ಧ್ರುವಂತ್ (Dhruvanth), ಧನುಷ್, ರಕ್ಷಿತಾ ಶೆಟ್ಟಿ ಅವರು ಕಾಲಿಟ್ಟಿದ್ದರು. ಆದರೆ ಇವರಲ್ಲಿ ಒಬ್ಬರ ಆಟ ವಾರದ ಮಧ್ಯೆಯೇ ಅಂತ್ಯ ಆಗಲಿದೆ ಎಂದು ಮೊದಲೇ ಹೇಳಲಾಗಿತ್ತು. ಅದರಂತೆ 108ನೇ ದಿನದಲ್ಲಿ ಮಿಡ್ ವೀಕ್ ಎಲಿಮಿನೇಷನ್ (Mid Week Elimination) ನಡೆದಿದೆ. ಧ್ರುವಂತ್ ಅವರ ಬಿಗ್ ಬಾಸ್ ಆಟ ಅಂತ್ಯವಾಗಿದೆ. ಫಿನಾಲೆಗೆ ಹೋಗಬೇಕು, ಟ್ರೋಫಿ ಗೆಲ್ಲಬೇಕು ಎಂಬ ಅವರ ಕನಸು ಭಗ್ನವಾಗಿದೆ.

ಬಿಗ್ ಬಾಸ್ ಮನೆಯಲ್ಲಿ ಧ್ರುವಂತ್ ಅವರು ಬಹುತೇಕ ಒಂಟಿಯಾಗಿ ಗುರುತಿಸಿಕೊಂಡಿದ್ದರು. ಅವರು ಯಾವುದೇ ರೀತಿಯ ಗುಂಪುಗಾರಿಕೆ ಮಾಡಿರಲಿಲ್ಲ. ಸೀಸನ್ ಮಧ್ಯದಲ್ಲಿ ಅವರು ಸ್ವಲ್ಪ ಕುಗ್ಗಿದ್ದರು. ತಾವಾಗಿಯೇ ಶೋ ತೊರೆಯುವ ನಿರ್ಧಾರ ಕೂಡ ಮಾಡಿದ್ದರು. ಆದರೆ ಸುದೀಪ್ ಅವರು ಧೈರ್ಯ ತುಂಬಿದ ಬಳಿಕ ಮರಳಿ ಆಟವನ್ನು ಚುರುಕುಗೊಳಿಸಿದ್ದರು. ಆದರೆ ಈಗ ಅವರು ಎಲಿಮಿನೇಟ್ ಆಗಿದ್ದಾರೆ.

ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ, ಗಿಲ್ಲ ನಟ, ಧನುಷ್, ಮ್ಯೂಟೆಂಟ್ ರಘು ಮತ್ತು ಕಾವ್ಯಾ ಶೈವ ಅವರು ಈಗ ಬಿಗ್ ಬಾಸ್ ಫಿನಾಲೆಗೆ ಎಂಟ್ರಿ ನೀಡಿದ್ದಾರೆ. ಪೈಪೋಟಿ ಜೋರಾಗಿದೆ. ಆದರೆ ಎಲ್ಲರಿಗಿಂತ ಗಿಲ್ಲಿ ನಟ ಅವರಿಗೆ ಹೆಚ್ಚು ಫ್ಯಾನ್ ಫಾಲೋಯಿಂಗ್ ಇದೆ. ಹಾಗಾಗಿ ಅವರೇ ಬಿಗ್ ಬಾಸ್ ಟ್ರೋಫಿ ಗೆಲ್ಲಬಹುದು ಎಂಬ ಅಭಿಪ್ರಾಯ ಬಲವಾಗಿದೆ. ಅವರ ಪರವಾಗಿ ಭರ್ಜರಿಯಾಗಿ ಪ್ರಚಾರ ಮಾಡಲಾಗುತ್ತಿದೆ.

ಧನುಷ್ ಅವರಿಗೆ ಕಳೆದ ವಾರ ಕಿಚ್ಚ ಸುದೀಪ್ ಅವರು ಚಪ್ಪಾಳೆ ನೀಡಿದ್ದರು. ಇಡೀ ಸೀಸನ್​ನ ಆಟವನ್ನು ಪರಿಗಣಿಸಿ ಅವರಿಗೆ ಕಿಚ್ಚನ ಚಪ್ಪಾಳೆ ನೀಡಲಾಗಿತ್ತು. ಆದರೆ ಅದು ವೀಕ್ಷಕರಿಗೆ ಇಷ್ಟ ಆಗಲಿಲ್ಲ. ಪೂರ್ತಿ ಸೀಸನ್​ನ ಪರಿಗಣಿಸಿ ಧ್ರುವಂತ್​ಗೆ ಕಿಚ್ಚನ ಚಪ್ಪಾಳೆ ನೀಡದ್ದನ್ನು ಖಂಡಿಸಿ ಸೋಶಿಯಲ್ ಮೀಡಿಯಾದಲ್ಲಿ ವೀಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಧ್ರುವಂತ್​ಗೆ ಸೀಸನ್ ಚಪ್ಪಾಳೆ ಬದಲು ವಾರದ ಚಪ್ಪಾಳೆ; ನಿರ್ಧಾರ ಬದಲಿಸಿದ ಬಿಗ್ ಬಾಸ್

ಕಿಚ್ಚನ ಚಪ್ಪಾಳೆ ಪಡೆದ ಬಳಿಕ ಧ್ರುವಂತ್ ಅವರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವ್ ಅಭಿಪ್ರಾಯ ಜಾಸ್ತಿ ಆಯಿತು. ಆ ಕಾರಣದಿಂದಲೂ ಅವರಿಗೆ ಕಡಿಮೆ ವೋಟ್ ಬಂದಿರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಒಂದು ವೇಳೆ ಹಾಗೆ ಆಗದೇ ಇದ್ದಿದ್ದರೆ ಅವರು ಕೊನೇ ಪಕ್ಷ ಫಿನಾಲೆಗಾದರೂ ಬರುತ್ತಿದ್ದರು ಎಂಬುದು ಹಲವರ ಅಭಿಪ್ರಾಯ. ಅಂತಿಮವಾಗಿ ಯಾರು ಟ್ರೋಫಿ ಗೆಲ್ಲುತ್ತಾರೆ ಎಂಬುದನ್ನು ತಿಳಿಯಲು ಕಾತರ ಹೆಚ್ಚಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಉತ್ತರ ಭಾರತದಲ್ಲಿ ಮಹಿಳೆಯರು ಗುಲಾಮರಾಗಿ, ಮಕ್ಕಳನ್ನು ಹೆರಲು ಮಾತ್ರ ಸೀಮಿತರಾಗಿದ್ದಾರೆ; ಡಿಎಂಕೆ ಸಂಸದ ವಿವಾದ – Kannada News | Girls educated in south but North Indian Women kept in kitchen DMK MP Dayanidhi Maran sparks row

ನವದೆಹಲಿ, ಜನವರಿ 14: ಚೆನ್ನೈ, ಜನವರಿ 14: ಡಿಎಂಕೆ ಸಂಸದ ದಯಾನಿಧಿ ಮಾರನ್ ಉತ್ತರ ಭಾರತದ ಮಹಿಳೆಯರು ಮತ್ತು ತಮಿಳುನಾಡಿನ ಮಹಿಳೆಯರನ್ನು ಹೋಲಿಸುವ ಹೇಳಿಕೆ ನೀಡಿ ರಾಜಕೀಯ ವಿವಾದವನ್ನು ಹುಟ್ಟುಹಾಕಿದ್ದಾರೆ. ಚೆನ್ನೈ ಸೆಂಟ್ರಲ್‌ನಿಂದ 4 ಬಾರಿ ಸಂಸದರಾಗಿರುವ ದಯಾನಿಧಿ ಮಾರನ್ (Dayanidhi Maran) ಇಂದು ಸರ್ಕಾರಿ ಮಹಿಳಾ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದು, ತಮಿಳುನಾಡಿನಲ್ಲಿ ಮಹಿಳೆಯರಿಗೆ ಅಧ್ಯಯನ ಮಾಡಲು ಪ್ರೋತ್ಸಾಹ ನೀಡಲಾಗುತ್ತದೆ. ಆದರೆ, ಉತ್ತರ ಭಾರತದಲ್ಲಿ ಮಹಿಳೆಯರನ್ನು ಅಡುಗೆಮನೆಯಲ್ಲಿ ಕೆಲಸ ಮಾಡಲು ಮತ್ತು ಮಕ್ಕಳನ್ನು ಹೆರಲು ಸೀಮಿತಗೊಳಿಸಲಾಗುತ್ತದೆ ಎಂದು ಹೇಳಿದ್ದಾರೆ.

“ನಮ್ಮ ಹುಡುಗಿಯರು ಲ್ಯಾಪ್‌ಟಾಪ್‌ನೊಂದಿಗೆ ಆತ್ಮವಿಶ್ವಾಸ ಮತ್ತು ಹೆಮ್ಮೆಯಿಂದಿರಬೇಕು. ನೀವು ಸಂದರ್ಶನಕ್ಕೆ ಹಾಜರಾಗಲಿ ಅಥವಾ ಸ್ನಾತಕೋತ್ತರ ಪದವಿ ಪಡೆಯಲಿ ನಿಮ್ಮಲ್ಲಿ ಆ ಆತ್ಮವಿಶ್ವಾಸ ಖಂಡಿತ ಇದೆ. ಇಲ್ಲಿ ನಾವು ಹುಡುಗಿಯರಿಗೆ ಹೆಚ್ಚೆಚ್ಚು ಓದಲು ಮತ್ತು ಅಧ್ಯಯನ ಮಾಡಲು ಹೇಳುತ್ತೇವೆ. ಆದರೆ, ಉತ್ತರ ಭಾರತದಲ್ಲಿ ಹುಡುಗಿಯರಿಗೆ ಕೆಲಸಕ್ಕೆ ಹೋಗಬೇಡಿ, ಮನೆಯಲ್ಲಿರಿ, ಅಡುಗೆಮನೆಯಲ್ಲಿರಿ, ಮಗುವನ್ನು ಹೆರುವುದು ಮಾತ್ರ ನಿಮ್ಮ ಕೆಲಸ ಎಂದು ಹೇಳಲಾಗುತ್ತದೆ” ಎಂದು ದಯಾನಿಧಿ ಮಾರನ್ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ತಿರುಪ್ಪರನ್​ಕುಂದ್ರಂ ಬೆಟ್ಟಗಳ ಮೇಲೆ ದರ್ಗಾದ ಬಳಿ ದೀಪ ಬೆಳಗಲು ಹಿಂದೂಗಳಿಗೆ ಅನುಮತಿ, ತಮಿಳುನಾಡು ಸರ್ಕಾರಕ್ಕೆ ತೀವ್ರ ಮುಖಭಂಗ

“ಇಲ್ಲಿನ ನಿಮ್ಮ ಪ್ರಗತಿ ತಮಿಳುನಾಡಿನ ಪ್ರಗತಿಯಾಗಿದೆ. ಅದಕ್ಕಾಗಿಯೇ ಜಾಗತಿಕ ಕಂಪನಿಗಳು ಚೆನ್ನೈಗೆ ಬರುತ್ತವೆ. ಏಕೆಂದರೆ ಇಲ್ಲಿರುವ ಎಲ್ಲರೂ ತಮಿಳಿನಲ್ಲಿ ಮಾತ್ರವಲ್ಲ, ಇಂಗ್ಲಿಷ್‌ನಲ್ಲೂ ಶಿಕ್ಷಣ ಪಡೆದಿದ್ದಾರೆ. ಸರ್ಕಾರವು ಮಹಿಳೆಯರ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸರ್ಕಾರ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಸದಾ ಆದ್ಯತೆ ನೀಡುತ್ತದೆ” ಎಂದು ದಯಾನಿಧಿ ಮಾರನ್ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಬ್ಬದ ಮನೆಯಲ್ಲೀಗ ಸೂತಕ: ಮಗಳು ಮನೆಗೆ ಬರುವ ಖುಷಿಯಲ್ಲಿದ್ದವನ ಜೀವ ತೆಗೆದ ಮಾಂಜಾ ದಾರ! – Kannada News | Bike rider killed by manja thread in Bidar; SP vows strict action against illegal kite thread sales

ಬೀದರ್​​, ಜನವರಿ 14: ಗಾಳಿಪಟದ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ವ್ಯಕ್ತಿ ಮೃತಪಟ್ಟಿರುವ ಘಟನೆ ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಮಂಗಲಗಿ ಗ್ರಾಮದ ಬಳಿ ನಡೆದಿದೆ. ಬಂಬಳಗಿ ಗ್ರಾಮದ ಸಂಜುಕುಮಾರ್ ಹೊಸಮನಿ(48) ಮೃತ ದುರ್ದೈವಿಯಾಗಿದ್ದು, ಪೊಲೀಸ್ ವರದಿಯ ಪ್ರಕಾರ ಸಂಜುಕುಮಾರ್ ಸ್ಥಳೀಯ ಹಾಸ್ಟೆಲ್‌ನಿಂದ ತನ್ನ ಮಗಳನ್ನು ಕರೆತರಲು ತೆರಳುತ್ತಿದ್ದಾಗ ಅವಘಡ ನಡೆದಿದೆ. ಮೃತ ವ್ಯಕ್ತಿ ಲಾರಿ ಕ್ಲೀನರ್ ಆಗಿ ಉದ್ಯೋಗ ಮಾಡಿಕೊಂಡಿದ್ದರು ಎಂಬುದು ಗೊತ್ತಾಗಿದೆ.

ಬೆಳಿಗ್ಗೆ ಸುಮಾರು 11 ಗಂಟೆ ಹೊತ್ತಿಗೆ ಮೋಟರ್ ಸೈಕಲ್‌ನಲ್ಲಿಪ್ರಯಾಣಿಸುತ್ತಿದ್ದ ವೇಳೆ ತಳಮಡಗಿ ಗ್ರಾಮದ ಹತ್ತಿರ ರಾಷ್ಟ್ರೀಯ ಹೆದ್ದಾರಿ ಬಳಿ ಮಾಂಜಾ ದಾರ ಸಂಜುಕುಮಾರ್ ಹೊಸಮನಿ ಕುತ್ತಿಗೆಗೆ ಸುತ್ತಿಕೊಂಡಿದೆ. ಈ ವೇಳೆ ಅರ್ಧ ಕುತ್ತಿಗೆ ಕಟ್ಟಾದ ಪರಿಣಾಮ ತೀವ್ರ ರಕ್ತಸ್ರಾವವಾಗಿದೆ. ಈ ವೇಳೆ ಸಂಜುಕುಮಾರ್ ಬೈಕ್​​ನಿಂದ ರಸ್ತೆಗೆ ಬಿದ್ದಿದ್ದು, ಸ್ಥಳದಲ್ಲೇ ಅಸುನೀಗಿದ್ದಾರೆ. ಆ ಮೂಲಕ ಸಂಕ್ರಾಂತಿ ಸಂಭ್ರಮದಲ್ಲಿದ್ದ ಮನೆಯಲ್ಲಿ ಶೋಕ ಆವರಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.’

ಇದನ್ನೂ ಓದಿ: ಕರ್ನಾಟಕದಲ್ಲಿ ಮಾಂಜಾ ದಾರ ನಿಷೇಧ; ಗಾಳಿಪಟ ಹಾರಿಸಲು ಹತ್ತಿ ದಾರಕ್ಕೆ ಮಾತ್ರ ಅವಕಾಶ

ಮಾಂಜಾ ದಾರ ಮಾರಾಟಗಾರರಿಗೆ ಎಸ್ಪಿ ಎಚ್ಚರಿಕೆ

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಬೀದರ್ ಎಸ್ಪಿ ಪ್ರದೀಪ್ ಗುಂಟಿ, ಮಾಂಜಾ ದಾರ‌ ಮಾರಾಟ ಹಾಗೂ ಬಳಕೆ ಎರಡು ಕೂಡಾ ಅಪರಾಧವಾಗಿದೆ. ಹೀಗಾಗಿ ಇಂತಹ ಸನ್ನಿವೇಶಗಳು ಕಂಡುಬಂದರೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳುವದಾಗಿ ಎಚ್ಚರಿಸಿದ್ದಾರೆ. ಸಂಕ್ರಾಂತಿ ಹಬ್ಬದ ನಿಮಿತ್ತ ಮಾಂಜಾ ದಾರಗಳ ಮಾರಾಟ ನಡೆಯುವ ಸಾಧ್ಯತೆ ಇರುವ ಕಾರಣ ಈಗಾಗಲೇ ನಾವು ಜಿಲ್ಲೆಯಲ್ಲಿ ಹಲವು ಅಂಗಡಿಗಳ ಮೇಲೆ ದಾಳಿ ಮಾಡಿದ್ದೇವೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗಿದ್ದರೂ ಕೆಲವರು ಅವುಗಳ ಮಾರಾಟ ಮುಂದುವರಿಸಿದ್ದಾರೆ.
ಅಂತಹ ಅಂಗಡಿಗಳ ಕುರಿತು ಪರಿಶೀಲನೆ ಮುಂದುವರಿದಿದೆ ಎಂದಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ನಾವು ಹೇಳೊ ಕಲೆಕ್ಷನ್ ಎಲ್ಲ ಸುಳ್ಳು: ನಿರ್ಮಾಪಕ ಬಿಚ್ಚಿಟ್ಟ ಸತ್ಯ – Kannada News | Producer Anil Sunkara said movie collection report is always fake

ಮೊದಲೆಲ್ಲ ಸಿನಿಮಾಗಳು (Cinema) ಬಿಡುಗಡೆ ಆದ ಮರು ದಿನ, ಕತೆ ಹೇಗಿದೆ? ಹಾಡುಗಳು ಹೇಗಿವೆ, ಕಾಮಿಡಿ ಚೆನ್ನಾಗಿದೆಯಾ? ಫೈಟ್ ಎಷ್ಟು ಇವೆ? ಐಟಂ ಹಾಡು ಇವೆಯಾ? ಫ್ಯಾಮಿಲಿ ನೋಡಬಹುದಾ? ಹೀಗೆಲ್ಲ ಚರ್ಚೆ ಆಗುತ್ತಿತ್ತು. ಆದರೆ ಈಗ ಸಿನಿಮಾ ಬಿಡುಗಡೆ ಆದ ಮರು ದಿನ ಕಲೆಕ್ಷನ್ ವಿಚಾರ ಹೆಚ್ಚು ಚರ್ಚೆ ಆಗುತ್ತದೆ. ಕತೆ, ನಟನೆ, ಸಂಗೀತದ ಬಗ್ಗೆ ಮಾತನಾಡಬೇಕಾದ ಸಾಮಾನ್ಯ ಪ್ರೇಕ್ಷಕ ಸಹ ಸಿನಿಮಾಗಳ ಕಲೆಕ್ಷನ್ ಬಗ್ಗೆ ಚರ್ಚೆ ಮಾಡಲು ಶುರು ಮಾಡಿದ್ದಾನೆ. ಈ ಬಗ್ಗೆ ಕೆಲವು ಸಿನಿಮಾ ಮಂದಿಯೇ ಕಳವಳ ವ್ಯಕ್ತಪಡಿಸಿದ್ದೂ ಸಹ ಇದೆ. ಆದರೆ ಸಿನಿಮಾ ತಂಡಗಳು ಹೇಳುವ ಕಲೆಕ್ಷನ್ ವಿಚಾರ ಬಹುತೇಕ ಸುಳ್ಳೆ ಆಗಿರುತ್ತದೆ. ಈ ಬಗ್ಗೆ ಸ್ವತಃ ನಿರ್ಮಾಪಕರೇ ಒಬ್ಬರು ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ಸಿನಿಮಾ ತಂಡಗಳೇ ತಮ್ಮ ಮೊದಲ ದಿನದ ಕಲೆಕ್ಷನ್ ಅನ್ನು ಘೋಷಿಸಲು ಆರಂಭಿಸಿವೆ. ಸಿನಿಮಾ ಒಂದು ಮೊದಲ ದಿನ ಹೆಚ್ಚು ಗಳಿಕೆ ಮಾಡಿದೆಯೆಂದರೆ ಅದು ಸಾಧನೆಯ ವಿಷಯವಾಗಿ ಪ್ರಚಾರ ಮಾಡಲಾಗುತ್ತದೆ. ಆದರೆ ಹೀಗೆ ಘೋಷಿಸುವ ಅಂಕಿ-ಅಂಶಗಳು ಸುಳ್ಳು ಎಂದು ಇದೀಗ ಹಿರಿಯ ಮತ್ತು ಸಕ್ರಿಯ ಸಿನಿಮಾ ನಿರ್ಮಾಪಕರೇ ಹೇಳಿಕೊಂಡಿದ್ದಾರೆ. ಅಲ್ಲದೆ, ಸಿನಿಮಾ ಒಂದು 100 ಕೋಟಿ ಗಳಿಕೆ ಮಾಡಿದರೆ ಅದರ ಅರ್ಧದಷ್ಟು ಸಹ ನಿರ್ಮಾಪಕನಿಗೆ ಬರುವುದಿಲ್ಲ ಎಂದು ಲೆಕ್ಕಾಚಾರ ನೀಡಿದ್ದಾರೆ.

ಅನಿಲ್ ಸುಂಕರ, ತೆಲುಗು ಚಿತ್ರರಂಗದ ಯಶಸ್ವಿ ಮತ್ತು ಸಕ್ರಿಯ ಸಿನಿಮಾ ನಿರ್ಮಾಪಕ. ಮಹೇಶ್ ಬಾಬುಗಾಗಿ ನಾಲ್ಕು ಸಿನಿಮಾಗಳು ಸೇರಿದಂತೆ, ನಂದಮೂರಿ ಬಾಲಕೃಷ್ಣ, ಮೆಗಾಸ್ಟಾರ್ ಚಿರಂಜೀವಿ ಇನ್ನೂ ಹಲವು ತೆಲುಗು ಸ್ಟಾರ್ ನಟರುಗಳಿಗೆ ಸಿನಿಮಾಗಳನ್ನು ನಿರ್ಮಿಸಿರುವ ಅನಿಲ್ ಸುಂಕರ ಅವರು, ಇದೀಗ ಸಿನಿಮಾಗಳ ಕಲೆಕ್ಷನ್ ಗುಟ್ಟನ್ನು ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ:ಎರಡೇ ದಿನಕ್ಕೆ 100 ಕೋಟಿ ಗಳಿಸಿದ ಚಿರಂಜೀವಿ ಸಿನಿಮಾ; ದೊಡ್ಡ ಕಂಬ್ಯಾಕ್

ಮಹೇಶ್ ಬಾಬು ನಟನೆಯ ಸೂಪರ್ ಹಿಟ್ ‘ದೂಕುಡು’ ಸಿನಿಮಾವನ್ನು ಅನಿಲ್ ನಿರ್ಮಾಣ ಮಾಡಿದ್ದರು. ಅದೇ ಸಿನಿಮಾದ ಉದಾಹರಣೆ ನೀಡಿದ ಅನಿಲ್ ಅವರು, ‘ನಾವು ‘ದೂಕುಡು’ ಸಿನಿಮಾದ ಸಕ್ಸಸ್ ಮೀಟ್ ಸಮಯದಲ್ಲಿ 100 ಕೋಟಿ ಕಲೆಕ್ಷನ್ ಪೋಸ್ಟರ್ ಬಿಡುಗಡೆ ಮಾಡಿದೆವು. ಆದರೆ ಅಸಲಿಗೆ ಆ ಸಿನಿಮಾ ಅಷ್ಟು ಗಳಿಕೆ ಮಾಡಿರಲಿಲ್ಲ. ಆ ನೂರು ಕೋಟಿ ಮೊತ್ತದಲ್ಲಿ ನಿರ್ಮಾಪಕರಿಗೆ ಸೇರಿದ್ದು 40 ಕೋಟಿ ಅಷ್ಟೆ ಅದೂ ತೆರಿಗೆಗೆ ಮುಂಚೆ’ ಎಂದಿದ್ದಾರೆ ಅನಿಲ್.

‘ಹಲವು ನಿರ್ಮಾಪಕರು ಕಲೆಕ್ಷನ್ ಪೋಸ್ಟರ್​​ಗಳನ್ನು ಕೇವಲ ಪ್ರಚಾರಕ್ಕಾಗಿ ಬಳಸುತ್ತಾರೆ. ಅಸಲಿ ಕಲೆಕ್ಷನ್​​ಗೂ ಪೋಸ್ಟರ್​ಗೂ ಬಹಳ ದೊಡ್ಡ ಅಂತರ ಇರುತ್ತದೆ. ಈ ರೀತಿ ಕಲೆಕ್ಷನ್ ಪೋಸ್ಟರ್ ಬಿಡುಗಡೆ ಮಾಡುವುದು ಸಿನಿಮಾಗಳಿಗೆ ಆರಂಭದಲ್ಲಿ ಸಹಾಯ ಮಾಡಬಹುದು ಆದರೆ ಅವು ಸಿನಿಮಾವನ್ನು ಯಶಸ್ವಿ ಗೊಳಿಸುವುದರಲ್ಲಿ ಯಾವುದೇ ಪಾತ್ರವಹಿಸುವುದಿಲ್ಲ. ಬದಲಿಗೆ ಇದರಿಂದ ಕೆಲವೊಮ್ಮೆ ಸಿನಿಮಾ ನಿರ್ಮಾಪಕರಿಗೆ ಸಮಸ್ಯೆ ಸಹ ಆಗುತ್ತದೆ. ಇಂಥಹಾ ಪೋಸ್ಟರ್​​ಗಳಿಂದ ನಿರ್ಮಾಪಕರಿಗೆ ಸಮಸ್ಯೆ ಆದ ಉದಾಹರಣೆಯೂ ಇದೆ’ ಎಂದಿರುವ ಅನಿಲ್, ‘ಇದೇ ಕಾರಣಕ್ಕೆ ನನ್ನ ಯಾವುದೇ ಸಿನಿಮಾಕ್ಕೂ ಇಂಥಹ ಪೋಸ್ಟರ್​​ಗಳನ್ನು ಬಿಡುಗಡೆ ಮಾಡುವುದನ್ನೇ ನಿಲ್ಲಿಸಿದ್ದೇನೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಶಿಡ್ಲಘಟ್ಟ ಕಮಿಷನರ್​​ಗೆ ಅಶ್ಲೀಲವಾಗಿ ನಿಂದಿಸಿ ಬೆದರಿಕೆ: ಕೈ ಮುಖಂಡನಿಗೆ ಶಾಕ್​​ ಕೊಟ್ಟ ಡಿಕೆ ಶಿವಕುಮಾರ್​​​ – Kannada News | Sidlaghatta Commissioner Amrutha Gowda Breaks Down After Alleged Threats from Congress Leader Rajiv Gowda

ಚಿಕ್ಕಬಳ್ಳಾಪುರ, (ಜನವರಿ 14): ಶಿಡ್ಲಘಟ್ಟ ಪೌರಾಯುಕ್ತ ಅಮೃತಾ ಗೌಡ ಅವರಿಗೆ ಕಾಂಗ್ರೆಸ್ ನಾಯಕ ರಾಜೀವ್ ಗೌಡ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಚೇರಿಗೆ ಬೆಂಕಿ ಹಚ್ಚುವ ಬೆದರಿಕೆ ಹಾಕಿದ ಆರೋಪದ ಘಟನೆ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಟಿವಿ9 ಜೊತೆ ಮಾತನಾಡುವಾಗ ಪೌರಾಯುಕ್ತೆ ಅಮೃತಾ ಗೌಡ ಅವರು ಕಣ್ಣೀರಿಟ್ಟಿದ್ದಾರೆ. ಅಕ್ರಮ ಬ್ಯಾನರ್‌ಗಳನ್ನು ತೆರವುಗೊಳಿಸಲು ಹೋಗಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಘಟನೆ ಕುರಿತು ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, “ಯಾರೇ ಆಗಲಿ, ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ” ಎಂದು ಸ್ಪಷ್ಟಪಡಿಸಿದ್ದಾರೆ. ಈ ಪ್ರಕರಣವನ್ನು ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಅಸ್ತ್ರವಾಗಿ ಬಳಸುತ್ತಿದ್ದು, ಕಾಂಗ್ರೆಸ್ ನಾಯಕನ ವರ್ತನೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಘಟನೆ ಸಂಬಂಧ ಅಧಿಕಾರಿಗಳು ಪೊಲೀಸ್ ದೂರು ದಾಖಲಿಸಿದ್ದಾರೆ. ಐದು ವರ್ಷಗಳ ತಮ್ಮ ಸೇವೆಯಲ್ಲಿ ಇಂತಹ ಪರಿಸ್ಥಿತಿ ಎದುರಾಗಿರಲಿಲ್ಲ ಎಂದು ಅಮೃತಾ ಗೌಡ ನೋವು ತೋಡಿಕೊಂಡಿದ್ದಾರೆ. ಮಹಿಳಾ ಅಧಿಕಾರಿಯೊಬ್ಬರಿಗೆ ಇಂತಹ ಬೆದರಿಕೆಗಳು ಬಂದಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಾಡಹಗಲೇ ಸಿನಿಮಾ ಸ್ಟೈಲ್​ನಲ್ಲಿ ಹೆಂಡತಿ, ಮಕ್ಕಳನ್ನು ಅಪಹರಿಸಿದ ಗಂಡ! – Kannada News | Madhya Pradesh Man Kidnapped 2 children and Wife in shivpuri Crime News

ನವದೆಹಲಿ, ಜನವರಿ 14: ಹಣಕ್ಕಾಗಿ, ವೈಯಕ್ತಿಕ ದ್ವೇಷಕ್ಕಾಗಿ, ಉದ್ಯೋಗದ ಕಾರಣಕ್ಕಾಗಿ ಹೀಗೆ ನಾನಾ ಕಾರಣಗಳಿಂದ ಅಪಹರಣದ (Kidnap) ಘಟನೆಗಳು ದಿನನಿತ್ಯ ನಡೆಯುತ್ತಲೇ ಇರುತ್ತವೆ. ಆದರೆ, ಗಂಡನೇ ತನ್ನ ಹೆಂಡತಿ ಮತ್ತು ಮಕ್ಕಳನ್ನು ಕಿಡ್ನಾಪ್ ಮಾಡಿದ್ದನ್ನು ನೀವು ಎಲ್ಲಾದರೂ ಕೇಳಿದ್ದೀರಾ? ಮಧ್ಯಪ್ರದೇಶದಲ್ಲಿ ಈ ರೀತಿಯ ಅಚ್ಚರಿಯ ಮತ್ತು ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಮಂಗಳವಾರ (ಜನವರಿ 13) ಶಿವಪುರಿ ಜಿಲ್ಲೆಯಲ್ಲಿ ಹಾಡಹಗಲೇ ಪತಿಯೊಬ್ಬ ತನ್ನ ಪತ್ನಿ ಮತ್ತು ಮಕ್ಕಳನ್ನು ಅಪಹರಿಸಿದ ಸಿನಿಮೀಯ ಶೈಲಿಯ ಘಟನೆ ನಡೆದಿದೆ.

ಈ ವಿಡಿಯೋ ಪ್ರಸ್ತುತ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಆದರೆ, ಈ ಘಟನೆ ನಡೆದು 24 ಗಂಟೆಗಳ ನಂತರವೂ ಯಾವುದೇ ಪುರಾವೆಗಳು ಪತ್ತೆಯಾಗಿಲ್ಲ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಕರೈರಾ ವಿಧಾನಸಭಾ ಕ್ಷೇತ್ರದ ನರವರ್ ಪೊಲೀಸ್ ಠಾಣೆ ವ್ಯಾಪ್ತಿಯ ಅಖಾರ ದೇವಸ್ಥಾನದ ಬಳಿ ಈ ಘಟನೆ ನಡೆದಿದೆ.

ಇದನ್ನೂ ಓದಿ: ಕನಸಲ್ಲಿ ಕಾಡಿದ 3 ಮಹಿಳೆಯರು; ಭಯದಿಂದ ಪ್ರಾಣವನ್ನೇ ಕಳೆದುಕೊಂಡ ಯುವಕ

ಪೊಲೀಸರ ಪ್ರಕಾರ, ನರ್ವಾರ ಪಟ್ಟಣದ ನಿವಾಸಿ ಪಾರ್ವತಿ ಜಾಧವ್, ಮಗರುಣಿ ನಿವಾಸಿ ಜಗನ್ನಾಥ್ ಅಲಿಯಾಸ್ ಜಗತ್ ಸಿಂಗ್ ಜಾಧವ್ ಅವರನ್ನು ವಿವಾಹವಾಗಿದ್ದರು. ಮದುವೆಯ ನಂತರ ಅವರಿಗೆ ಇಬ್ಬರು ಮಕ್ಕಳಾಗಿದ್ದರು. ಸುಮಾರು 6 ವರ್ಷಗಳ ಹಿಂದೆ ಕುಟುಂಬದಲ್ಲಿ ನಿರಂತರ ಜಗಳಗಳ ಕಾರಣದಿಂದ ಪಾರ್ವತಿ ತನ್ನ ಹೆತ್ತವರ ಮನೆಯಲ್ಲಿ ವಾಸಿಸುತ್ತಿದ್ದರು. ತನ್ನ ಪತಿ ಮತ್ತು ಅತ್ತೆ ಮಾವ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು ಎಂದು ಆಕೆ ಆರೋಪಿಸಿದ್ದರು. ಮಂಗಳವಾರ ಮಧ್ಯಾಹ್ನ, ಅವರು ತಮ್ಮ ಮಕ್ಕಳನ್ನು ಶಾಲೆಯಿಂದ ಕರೆತರುತ್ತಿದ್ದಾಗ ಹಿಂದಿನಿಂದ ಒಂದು ಕಾರು ಬಂದಿತು. ಮೂವರು ಯುವಕರು ಕಾರಿನಿಂದ ಇಳಿದು, ಮಹಿಳೆ ಮತ್ತು ಮಕ್ಕಳನ್ನು ಬಲವಂತವಾಗಿ ಕಾರಿಗೆ ಹತ್ತಿಸಿಕೊಂಡು ಪರಾರಿಯಾಗಿದ್ದಾರೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ವಿದೇಶದಿಂದ ಗುಟ್ಟಾಗಿ ಬಂದು ಅಮ್ಮನನ್ನೇ ಕೊಲೆ ಮಾಡಿದ ಮಗ!

ಪೊಲೀಸರು ಈ ಬಗ್ಗೆ ತನಿಖೆ ನಡೆಸಿದಾಗ ಆ ಅಪಹರಣಕಾರ ಬೇರಾರೂ ಅಲ್ಲ, ಆಕೆಯ ಗಂಡನೇ ಎಂಬುದು ಬಯಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಯಿತು. ಪೊಲೀಸರು ಜಗನ್ನಾಥ್ ಅವರನ್ನು ಹುಡುಕುತ್ತಿದ್ದಾರೆ. ಜಗನ್ನಾಥ್ ಪಾರ್ವತಿ ಮತ್ತು ಮಕ್ಕಳನ್ನು ಏಕೆ ಅಪಹರಿಸಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೆಂಪೇಗೌಡ್ರು ಬೆಂಗಳೂರು ಕಟ್ಟಿದ್ದು ಹೇಗೆ? ಸಂಕ್ರಾಂತಿಗೂ ಕೆಂಪೇಗೌಡ್ರಿಗೂ ಇರೋ ನಂಟು ಬಿಚ್ಚಿಟ್ಟ ಧರ್ಮೇಂದ್ರ ಕುಮಾರ್ – Kannada News | Kempegowda Bhoomi Pooja On Sankranthi To Build Bengaluru, here Is Dharmendra Kumar explained about It

ಬೆಂಗಳೂರು, (ಜನವರಿ 14): ಬೆಂಗಳೂರಿಗೆ ಗಾರ್ಡನ್ ಸಿಟಿ, ಸಿಲಿಕಾನ್ ಸಿಟಿ ಎಂಬ ಬಿರುದುಗಳು ಇವೆ. ಇದನ್ನು ಕಟ್ಟಿ ಬೆಳೆಸಿದ್ದು ಕೆಂಪೇಗೌಡರು. ಹೌದು..ಜನವರಿ ಸಂಕ್ರಾಂತಿಯಂದೇ ಕೆಂಪೇಗೌಡರು ಬೆಂಗಳೂರು ಕಟ್ಟಲು ಶುರುಮಾಡಿದ ಪುಣ್ಯ ದಿನ. ಅವಿನ್ಯೂ ರಸ್ತೆಯಲ್ಲೇ ಭೂಮಿ ಪೂಜೆ ಮಾಡಿದ್ದರು. ಬಳಿಕ ಬೆಂಗಳೂರಿನ ಬೆಳವಣಿಗೆಗೆ ಅವರು ನೀಡಿದ ಕೊಡುಗೆಗಳು ಬಹಳ ಮಹತ್ವದ್ದಾಗಿವೆ. ಅಂದಿನ ವಿಜಯನಗರದ ವಾಸ್ತುಶಿಲ್ಪ ಶೈಲಿಯನ್ನು ಅನುಸರಿಸಿ, ಅಚ್ಚುಕಟ್ಟಾದ ಯೋಜನೆಯೊಂದಿಗೆ ಬೆಂಗಳೂರನ್ನು ನಿರ್ಮಿಸಿದರು. ಮುಖ್ಯ ರಸ್ತೆಗಳು, ವ್ಯಾಪಾರಿ ಕೇಂದ್ರಗಳು, ದೇವಾಲಯಗಳು ಮತ್ತು ಕೆರೆಗಳನ್ನು ನಿರ್ಮಿಸಿ, ನಗರಕ್ಕೆ ಒಂದು ವ್ಯವಸ್ಥಿತ ಸ್ವರೂಪವನ್ನು ನೀಡಿದ್ದರು. ಇನ್ನು ಕೆಂಪೇಗೌಡರು ಬೆಂಗಳೂರನ್ನು ಕಟ್ಟಿದ್ದು ಹೇಗೆ? ಸಂಕ್ರಾಂತಿಗೂ ಕೆಂಪೇಗೌಡ್ರಿಗೂ ಇರೋ ನಂಟನ್ನು ಧರ್ಮೇಂದ್ರ ಕುಮಾರ್ ಬಿಚ್ಚಿಟ್ಟಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link