Category Archives: Blog

Your blog category

ಬಿಗ್ ಬಾಸ್ ವಿನ್ನರ್​​ಗಳ ಕರೆಸಿ ಹೊಸ ಸೀಸನ್ ಮಾಡಿದ್ರೂ ಗಿಲ್ಲಿನೇ ಗೆಲ್ಲೋದು; ಭವಿಷ್ಯ ನುಡಿದ ಕಿರುತೆರೆ ನಟ – Kannada News | Gilli Nata Will Win if All Bigg Boss Kannada Winners In Race Says Abhishek Ramdas

ಬಿಗ್ ಬಾಸ್ ಕನ್ನಡ ಸೀಸನ್ 12ರ (BBk 12) ಸ್ಪರ್ಧಿ ಗಿಲ್ಲಿ ನಟ ಕ್ರೇಜ್ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಇವರು ಸ್ಟ್ರಾಂಗ್ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಹೊರಗೆ ಇವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಗಿಲ್ಲಿಗೆ ಜನಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಅಭಿಮಾನಿಗಳಿದ್ದಾರೆ. ಈಗ ಕಿರುತೆರೆ ನಟನೋರ್ವ ಗಿಲ್ಲಿಯನ್ನು ಹೊಗಳಿದ್ದಾರೆ. ಎಲ್ಲಾ ಸೀಸನ್​​ಗಳ ವಿನ್ನರ್​ ಕರೆಸಿ ಶೋ ಮಾಡಿದರೂ ಗೆಲ್ಲೋದು ಗಿಲ್ಲಿ ಎಂದಿದ್ದಾರೆ.

ಗಿಲ್ಲಿ ಎಲ್ಲರಿಗೂ ಇಷ್ಟ ಆಗೋಕೆ ಕಾರಣ ಅವರ ಮಾತು. ತಮ್ಮ ಮಾತುಗಳ ಮೂಲಕ, ಖಡಕ್ ತಿರುಗೇಟುಗಳ ಮೂಲಕ ಗಿಲ್ಲಿ ಗಮನ ಸೆಳೆದರು. ಅಶ್ವಿನಿ ಅವರನ್ನು ಯಾರೂ ಎದುರು ಹಾಕಿಕೊಳ್ಳಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣ ಆದಾಗ ಗಿಲ್ಲಿ ಅವರು ತಿರುಗೇಟು ಕೊಡಲು ಆರಂಭಿಸಿದರು. ಹೀಗಾಗಿಯೇ ಅವರ ಅಭಿಮಾನಿ ಬಳಗ ಹಿರಿದಾಯಿತು. ಈಗ ಗಿಲ್ಲಿಗೆ ದೊಡ್ಡ ಫ್ಯಾನ್​​ಬೇಸ್ ಸೃಷ್ಟಿ ಆಗಿದೆ.

‘ನಂದ ಗೋಕುಲ’ ಧಾರಾವಾಹಿಯಲ್ಲಿ ವಲ್ಲಭ ಹೆಸರಿನ ಪಾತ್ರ ಮಾಡುತ್ತಿರುವ ಅಭಿಷೇಕ್ ರಾಮ್​​ದಾಸ್ ಅವರು ಗಿಲ್ಲಿ ಅಭಿಮಾನಿಯಾಗಿದ್ದಾರೆ. ಅವರು ಗಿಲ್ಲಿ ಬಗ್ಗೆ ಮಾತನಾಡಿದ್ದಾರೆ. ಅವರು ಒಂದು ಓಪನ್ ಚಾಲೆಂಜ್ ಹಾಕಿದ್ದಾರೆ. ‘ಹನುಮಂತ ಸೇರಿದಂತೆ ಎಲ್ಲಾ ಸೀಸನ್​​​ಗಳ ವಿನ್ನರ್ ಕರೆಸಿ ಶೋ ಮಾಡಿದರೂ ಅಲ್ಲಿ ಗೆಲ್ಲೋದು ಗಿಲ್ಲಿ. ಪೊಟೆನ್ಶಿಯಲ್ ಶಬ್ದದ ಅರ್ಥವೇ ಗಿಲ್ಲಿ ’ ಎಂದು ಹೇಳಿದ್ದಾರೆ ಅಭಿಷೇಕ್​​. ಅಭಿಷೇಕ್ ಹೇಳಿದ ಈ ಮಾತನ್ನು ವೈರಲ್ ಮಾಡಲಾಗುತ್ತಿದೆ. ಗಿಲ್ಲಿ ಕ್ರೇಜ್ ಎನು ಎಂಬುದನ್ನು ಇವು ತೋರಿಸುತ್ತವೆ ಎಂದು ಅನೇಕರು ಹೇಳಿದ್ದಾರೆ.

ಇದನ್ನೂ ಓದಿ: ಗಿಲ್ಲಿ ಗೆಲ್ಲೋ ಸೂಚನೆ ಕೊಟ್ರಾ ಬಿಗ್ ಬಾಸ್? ಅಭಿಮಾನಿಗಳ ಮುಂದೆಯೇ ಘೋಷಣೆ

ಈ ಮೊದಲು ಸಂಗೀತಾ ಶೃಂಗೇರಿ ಕೂಡ ಗಿಲ್ಲಿ ಬಗ್ಗೆ ಮಾತನಾಡಿದ್ದರು. ‘ಗಿಲ್ಲಿ ಸಖತ್ ಇಷ್ಟ’ ಎಂದು ಅವರು ಹೇಳಿದ್ದರು. ಅನೇಕ ಸೆಲೆಬ್ರಿಟಿಗಳು ಗಿಲ್ಲಿ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಶೀಘ್ರವೇ ಫಿನಾಲೆಗೆ ವೋಟಿಂಗ್ ಲೈನ್ ಓಪನ್ ಆಗಲಿದ್ದು, ಶನಿವಾರದವರೆಗೆ ವೋಟ್ ಮಾಡಲು ಅವಕಾಶ ಇರುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 3:10 pm, Wed, 14 January 26

Source link

ಶಾಲೆಯೋ, ಹಳ್ಳಿಯೋ! ಹೇಗಿತ್ತು ನೋಡಿ ಮಯೂರ ಗ್ಲೋಬಲ್ ಸ್ಕೂಲ್ ಸಂಕ್ರಾಂತಿ ಸಂಭ್ರಮ

Source link

Makar Sankranti 2026: ಸಂಕ್ರಾಂತಿಯಂದು ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ; ವರ್ಷವಿಡೀ ಕಷ್ಟ ತಪ್ಪಿದ್ದಲ್ಲ! – Kannada News | Makar Sankranti 2026: 5 Crucial Things to AVOID for a Prosperous Year

2026ನೇ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿಯ ಸಡಗರ ಆರಂಭವಾಗಿದೆ. ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ದಿನವೇ ಮಕರ ಸಂಕ್ರಾಂತಿ. ಈ ಪವಿತ್ರ ಸಂದರ್ಭವನ್ನು ಉತ್ತರಾಯಣದ ಆರಂಭವೆಂದು ಕರೆಯಲಾಗುತ್ತದೆ. ಹಬ್ಬದ ಸಮಯದಲ್ಲಿ, ಜನರು ಪೂಜೆ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಭಕ್ತಿ ಮತ್ತು ಆಧ್ಯಾತ್ಮಿಕ ಚಿಂತನೆಯಿಂದ ತಮ್ಮ ಸಮಯವನ್ನು ಕಳೆಯುತ್ತಾರೆ. ಆದಾಗ್ಯೂ, ಮಕರ ಸಂಕ್ರಾಂತಿಯ ದಿನದಂದು ಮಾಡುವ ಸಣ್ಣ ತಪ್ಪು ಕೂಡ ವರ್ಷವಿಡೀ ಪರಿಣಾಮ ಬೀರುತ್ತದೆ. ಆದ್ದರಿಂದ ಮಕರ ಸಂಕ್ರಾಂತಿಯಂದು ಏನು ಮಾಡಬಾರದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ದಕ್ಷಿಣಕ್ಕೆ ಪ್ರಯಾಣಿಸುವುದನ್ನು ತಪ್ಪಿಸಿ:

ಮಕರ ಸಂಕ್ರಾಂತಿಯಂದು ದಕ್ಷಿಣ ದಿಕ್ಕಿನಲ್ಲಿ ಪ್ರಯಾಣಿಸುವುದು ಶುಭವಲ್ಲ. ಈ ಸಮಯದಲ್ಲಿ, ಸೂರ್ಯನು ಉತ್ತರಾಯಣದಲ್ಲಿರುವುದರಿಂದ ದಕ್ಷಿಣ ದಿಕ್ಕಿನಲ್ಲಿ ಪ್ರಯಾಣಿಸುವುದು ಸೂರ್ಯನ ಸಕಾರಾತ್ಮಕ ಶಕ್ತಿಗೆ ವಿರುದ್ಧವೆಂದು ಪರಿಗಣಿಸಲಾಗುತ್ತದೆ. ಅಂತಹ ಪ್ರವಾಸವು ಆರ್ಥಿಕ ನಷ್ಟ, ಕೆಲಸದಲ್ಲಿ ಅಡ್ಡಿ ಅಥವಾ ಅನಗತ್ಯ ತೊಂದರೆಗಳಿಗೆ ಕಾರಣವಾಗಬಹುದು. ನೀವು ತುರ್ತಾಗಿ ಪ್ರಯಾಣಿಸಬೇಕಾದರೆ ಮೊದಲು ಸೂರ್ಯನಿಗೆ ಅರ್ಘ್ಯ ಅರ್ಪಿಸಿ ಮತ್ತು ‘ಓಂ ಸೂರ್ಯಾಯಣಂ:’ ಎಂದು ಜಪಿಸಿ. ವಾಸ್ತು ಶಾಸ್ತ್ರದ ಪ್ರಕಾರ, ಈ ದಿನ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಪ್ರಯಾಣಿಸುವುದು ಹೆಚ್ಚು ಪ್ರಯೋಜನಕಾರಿಯಾಗಿದೆ.

ಕಪ್ಪು ಎಳ್ಳನ್ನು ದಾನ ಮಾಡಬೇಡಿ:

ಸಂಕ್ರಾಂತಿಯ ದಿನದಂದು ಎಳ್ಳುಗೆ ವಿಶೇಷ ಮಹತ್ವವಿದೆ. ಆದಾಗ್ಯೂ, ಈ ದಿನದಂದು ಕಪ್ಪು ಎಳ್ಳನ್ನು ದಾನ ಮಾಡುವುದು ನಿಷಿದ್ಧವೆಂದು ಪರಿಗಣಿಸಲಾಗುತ್ತದೆ. ಕಪ್ಪು ಎಳ್ಳು ಶನಿ ಗ್ರಹಕ್ಕೆ ಸಂಬಂಧಿಸಿದೆ. ಆದಾಗ್ಯೂ, ಮಕರ ಸಂಕ್ರಾಂತಿಯ ದಿನದಂದು ಸೂರ್ಯನ ಪ್ರಭಾವ ಹೆಚ್ಚು. ಅಂತಹ ಪರಿಸ್ಥಿತಿಯಲ್ಲಿ ಕಪ್ಪು ಎಳ್ಳನ್ನು ದಾನ ಮಾಡುವುದರಿಂದ ಸೂರ್ಯ ಮತ್ತು ಶನಿಯ ನಡುವಿನ ಅಸಮತೋಲನ ಹೆಚ್ಚಾಗುತ್ತದೆ. ಇದು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಬದಲಾಗಿ, ಬಿಳಿ ಎಳ್ಳು, ಬೆಲ್ಲ, ಸಕ್ಕರೆ ಅಥವಾ ಖಿಚಡಿಯನ್ನು ದಾನ ಮಾಡುವುದರಿಂದ ಶುಭ ಫಲಿತಾಂಶಗಳು ದೊರೆಯುತ್ತವೆ.

ದಾನ ಮತ್ತು ಪೂಜಾ ವಿಧಾನಗಳಲ್ಲಿ ಜಾಗರೂಕರಾಗಿರಿ:

ಮಕರ ಸಂಕ್ರಾಂತಿಯಂದು ಮಾಡುವ ದಾನಗಳು ಬಹಳ ಫಲಪ್ರದ. ಆದರೆ, ದಾನದ ಆಯ್ಕೆ ಸರಿಯಾಗಿರಬೇಕು. ಈ ದಿನ ಕಪ್ಪು ಬಟ್ಟೆ ಅಥವಾ ಕಪ್ಪು ಎಳ್ಳನ್ನು ದಾನ ಮಾಡಬಾರದು. ಬಿಳಿ ಬಟ್ಟೆ, ಬೆಲ್ಲ, ಎಳ್ಳು ಲಡ್ಡು ಅಥವಾ ಖಿಚಡಿಯನ್ನು ದಾನ ಮಾಡುವುದು ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಸೂರ್ಯನಿಗೆ ಅರ್ಘ್ಯ ಅರ್ಪಿಸುವಾಗ ಕೆಂಪು ಚಂದನ, ಕೆಂಪು ಹೂವುಗಳು ಮತ್ತು ಬೆಲ್ಲವನ್ನು ಬಳಸಬೇಕು.

ಇದನ್ನೂ ಓದಿ: ಮೃತ ವ್ಯಕ್ತಿ ನಿಮ್ಮ ಶತ್ರುವೇ ಆಗಿದ್ದರೂ ಅವರ ಬಗ್ಗೆ ಯಾಕೆ ಕೆಟ್ಟದಾಗಿ ಮಾತನಾಡಬಾರದು?

ಸಂಕ್ರಾಂತಿಯಂದು ಈ ಆಹಾರ ಸೇವಿಸಬೇಡಿ:

ಮಕರ ಸಂಕ್ರಾಂತಿಯ ದಿನದಂದು ದೇಹ ಮತ್ತು ಮನಸ್ಸು ಎರಡನ್ನೂ ಶುದ್ಧವಾಗಿಟ್ಟುಕೊಳ್ಳುವುದು ಅಗತ್ಯವೆಂದು ಪರಿಗಣಿಸಲಾಗಿದೆ. ಈ ದಿನದಂದು ಮಾಂಸಾಹಾರ, ಮದ್ಯ, ಬೆಳ್ಳುಳ್ಳಿ, ಈರುಳ್ಳಿ ಅಥವಾ ಭಾರವಾದ ಆಹಾರವನ್ನು ಸೇವಿಸಬಾರದು. ಸೂರ್ಯನು ಸಾತ್ವಿಕ ಶಕ್ತಿಯ ಸಂಕೇತವಾಗಿದ್ದು, ತಾಮಸ ಆಹಾರವು ಈ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಇದು ಆರೋಗ್ಯದ ಮೇಲೆ ಮಾತ್ರವಲ್ಲದೆ ಮಾನಸಿಕ ಶಾಂತಿ ಮತ್ತು ಆರ್ಥಿಕ ಸ್ಥಿತಿಯ ಮೇಲೂ ಪರಿಣಾಮ ಬೀರುತ್ತದೆ.

ಕೋಪ ಮತ್ತು ಸುಳ್ಳುಗಳಿಂದ ದೂರವಿರಿ:

ಈ ಶುಭ ದಿನದಂದು ನಡವಳಿಕೆಯಲ್ಲಿ ವಿಶೇಷ ಸಂಯಮವನ್ನು ಕಾಪಾಡಿಕೊಳ್ಳುವುದು ಸೂಕ್ತ. ಸುಳ್ಳು ಹೇಳುವುದು, ಕೋಪಗೊಳ್ಳುವುದು ಅಥವಾ ಯಾರ ಮೇಲಾದರೂ ನಕಾರಾತ್ಮಕ ಭಾವನೆಗಳನ್ನು ಇಟ್ಟುಕೊಳ್ಳುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಸೂರ್ಯ ದೇವರು ಸತ್ಯ, ಬೆಳಕು ಮತ್ತು ಶಿಸ್ತಿನ ಸಂಕೇತ. ಆದ್ದರಿಂದ, ಮಕರ ಸಂಕ್ರಾಂತಿಯ ದಿನದಂದು ದೇವರನ್ನು ಸ್ಮರಿಸಿ ಶಾಂತವಾಗಿರಿ. ಸಿಹಿಯಾಗಿ ಮಾತನಾಡಿ. ಸಕಾರಾತ್ಮಕ ಆಲೋಚನೆಗಳನ್ನು ಹೊಂದಿರಿ. ‘ಓಂ ಘೃತ ಸೂರ್ಯನಾಮ:’ ಎಂಬ ಮಂತ್ರವನ್ನು ಪಠಿಸುವುದರಿಂದ ವರ್ಷವಿಡೀ ಸೂರ್ಯನ ಆಶೀರ್ವಾದವು ಹಾಗೆಯೇ ಉಳಿಯುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಾಲಿನ ಹೆಬ್ಬೆರಳ ಕಟ್ಟಲಾಗಿತ್ತು, ಮೂಗಲ್ಲಿ ಹತ್ತಿ, ಎಲ್ಲರ ಕಣ್ಣಂಚಲ್ಲಿ ನೀರು, ಪವಾಡವೆಂಬಂತೆ ಬದುಕಿ ಬಂದ 103 ವರ್ಷದ ಮಹಿಳೆ – Kannada News | Declared Dead, Then She Moved: 103 Year Old Woman Stuns Family and Doctors in Nagpur

ರಾಮ್ಟೆಕ್, ಜನವರಿ 14: ಮನೆಯಲ್ಲಿ ನೀರವ ಮೌನ, ಸಮಯ ನಿಂತಂತೆ ಎಲ್ಲರಿಗೂ ಭಾಸ, ಕುರ್ಚಿಗಳನ್ನು ಜೋಡಿಸಲಾಗಿತ್ತು. ಅಂತ್ಯಕ್ರಿಯೆ(Funeral)ಗೆ ಬೇಕಾದ ಸಾಮಗ್ರಿಗಳನ್ನು ಜೋಡಿಸಿ ಇಡಲಾಗಿತ್ತು. ಮತ್ತೊಂದು ಮೂಲೆಯಲ್ಲಿ ಬಿಳಿ ಬಟ್ಟೆಯಲ್ಲಿ ದೇಹವು ಚಲನರಹಿತವಾಗಿ ಮಲಗಿತ್ತು. ಇನ್ನೊಂದು ಮೂಲೆಯಲ್ಲಿ ಸಂಬಂಧಿಕರು ಕಣ್ಣು ಒರೆಸುತ್ತಾ ಮಹಿಳೆಯ ಒಳ್ಳೆಯತನವನ್ನು ಕೊಂಡಾಡುತ್ತಿದ್ದರು. ದೂರದ ಸಂಬಂಧಿಕರು ಒಬ್ಬೊಬ್ಬರಾಗಿ ಅಂತಿಮ ದರ್ಶನಕ್ಕೆಂದು ಬರುತ್ತಿದ್ದರು.

ದೇಹವನ್ನು ಸುತ್ತಿ ಇಡಲಾಗಿತ್ತು, ಹೆಬ್ಬೆರಳುಗಳನ್ನು ಕಟ್ಟಲಾಗಿತ್ತು, ಮೂಗಿನಲ್ಲಿ ಹತ್ತಿ ಇಡಲಾಗಿತ್ತು, ಆದರೆ ಇದ್ದಕ್ಕಿದ್ದಂತೆ ದೇಹ ಚಲಿಸಿದಂತೆ ಅನಿಸಿತ್ತು. ಒಂದೆಡೆ ಖುಷಿಯಾದರೆ ಮತ್ತೊಂದೆಡೆ ನಿಜವೋ ಸುಳ್ಳೋ ಎನ್ನುವ ಆತಂಕ ಕಾಡಿತ್ತು.

ಈ ಘಟನೆ ನಾಗ್ಪುರ ಜಿಲ್ಲೆಯ ರಾಮ್​ಟೆಕ್​ನಲ್ಲಿರುವ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವಾರ್ಡ್​ನಲ್ಲಿ ನಡೆದಿದೆ. ಆ ಮಹಿಳೆಯ ಹೆಸರು ಗಂಗಾ ಬಾಯಿ ಸಾವ್ಜಿ ಸಖ್ರಾ, ಅವರಿ 103 ವರ್ಷ ವಯಸ್ಸಾಗಿದೆ. ಮಗಳೊಂದಿಗೆ ವಾಸವಿದ್ದಾರೆ. ಅವರು ಎರಡು ತಿಂಗಳಿನಿಂದ ಸಂಪೂರ್ಣವಾಗಿ ಹಾಸಿಗೆ ಹಿಡಿದಿದ್ದರು. ಪ್ರತಿದಿನ ಕೇವಲ ಎರಡೇ ಎರಡು ಚಮಚ ನೀರು ಮಾತ್ರ ಸೇವಿಸುತ್ತಿದ್ದರು.

ಮತ್ತಷ್ಟು ಓದಿ:ನಂಜನಗೂಡು: ಯುವಕನ ಬಳಿ ‘ನನ್ನ ಕರ್ಕೊಂಡೋಗಿ ಮದುವೆಯಾಗು’ ಎನ್ನುತ್ತಿದ್ದ ಅಪ್ರಾಪ್ತೆ ನಿಗೂಢ ಸಾವು

ಸೋಮವಾರ ಸಂಜೆ ಅವರ ದೇಹ ಸಂಪೂರ್ಣವಾಗಿ ಚಲನೆಯನ್ನೇ ನಿಲ್ಲಿಸಿತ್ತು. ಆಕೆ ಸತ್ತಿದ್ದಾಳೆಂದು ಪರಿಗಣಿಸಿ ಎಲ್ಲಾ ಅಂತ್ಯಕ್ರಿಯೆ ವಿಧಿ ವಿಧಾನಗಳನ್ನು ಪ್ರಾರಂಭಿಸಲಾಯಿತು. ಮರುದಿನ ಬೆಳಗ್ಗೆ, ಅಂತ್ಯಕ್ರಿಯೆಯ ಮೆರವಣಿಗೆ ನಿಗದಿಯಾಗಿತ್ತು, ಮತ್ತು ಅಂತ್ಯಕ್ರಿಯೆಯ ಸಾಮಗ್ರಿಗಳು ಮತ್ತು ಶವವಾಹನವನ್ನು ಸಹ ಕರೆಯಲಾಗಿತ್ತು.

ಸಂಜೆ 7 ಗಂಟೆಯ ಸುಮಾರಿಗೆ, ಸಂಬಂಧಿಕರು ಮತ್ತು ಪರಿಚಯಸ್ಥರು ಮನೆಯಲ್ಲಿ ಜಮಾಯಿಸಿದ್ದಾಗ, ಗಂಗಾಬಾಯಿಯ ಕಾಲು ಇದ್ದಕ್ಕಿದ್ದಂತೆ ಅಲುಗಾಡಿತ್ತು. ಮೊಮ್ಮಗ ರಾಕೇಶ್ ಸಖ್ರಾ ಇದನ್ನು ಗಮನಿಸಿದ ತಕ್ಷಣ, ಅವನು ಅವರ ಕಾಲಿಗೆ ಕಟ್ಟಿದ್ದ ದಾರವನ್ನು ಕತ್ತರಿಸಿದ್ದಾರೆ. ಗಂಗಾಬಾಯಿ ಭಾರವಾಗಿ ಉಸಿರಾಡಲು ಪ್ರಾರಂಭಿಸಿದ್ದರು.

ಗಂಗಾಬಾಯಿಯವರ ಅಂತ್ಯಕ್ರಿಯೆಗಾಗಿ ಜಮ್ಮು ಮತ್ತು ಕಾಶ್ಮೀರ ಮತ್ತು ಬಾಲಘಾಟ್ ಸೇರಿದಂತೆ ದೂರದ ಸ್ಥಳಗಳಿಂದ ಬಂದಿದ್ದ ಸಂಬಂಧಿಕರು ರಾಮ್ಟೆಕ್ ತಲುಪಿದರು ಮತ್ತು ಅವರು ಜೀವಂತವಾಗಿರುವುದನ್ನು ನೋಡಿ ಅಚ್ಚರಿಪಟ್ಟರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಜನವರಿ 27ರಿಂದ 3 ದಿನ ವಿಶೇಷ ಅಧಿವೇಶನಕ್ಕೆ ಕ್ಯಾಬಿನೆಟ್​​ ನಿರ್ಧಾರ: ಕಾರಣ ಏನು? – Kannada News | Karnataka Cabinet Decides to Call 3 Day Special Session to Oppose MNREGA Renaming

ಸಚಿವ ಸಂಪುಟ ಸಭೆ. (ಫೈಲ್​​ ಫೋಟೋ)

ಬೆಂಗಳೂರು, ಜನವರಿ 14: ಜನವರಿ 27ರಿಂದ ಮೂರು ದಿನ ವಿಶೇಷ ಅಧಿವೇಶನ ನಡೆಸಲು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ​​ ಸಭೆಯಲ್ಲಿ ನಿರ್ಧರಿಸಲಾಗಿದೆ. ಜನವರಿ 27ರಂದು ಉಭಯ ಸದನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದು, ಜ.28, 29ರಂದು  ಚರ್ಚೆ ನಡೆಸಲು ಕ್ಯಾಬಿನೆಟ್ ತೀರ್ಮಾನ ಮಾಡಿದೆ. ಕೇಂದ್ರ ಸರ್ಕಾರ ಮನರೇಗಾ ಯೋಜನೆ ಹೆಸರು ಬದಲಾವಣೆ ಮಾಡಿರುವ ಹಿನ್ನೆಲೆ ವಿಶೇಷ ಅಧಿವೇಶನದಲ್ಲಿ ಈ ಬಗ್ಗೆ ಚರ್ಚಿಸಲು ನಿರ್ಧರಿಸಲಾಗಿದೆ. ಮನ್​ರೇಗಾ ಯೋಜನೆಗೆ ‘ವಿಬಿ ಜೀ ರಾಮ್ ಜೀ’ ಮರುನಾಮಕರಣ ಮಾಡಿರುವುದರ ವಿರುದ್ಧ ಹೋರಾಟಕ್ಕೂ ತೀರ್ಮಾನಿಸಲಾಗಿದೆ.

‘ಕೇಂದ್ರ ಸರ್ಕಾರದಿಂದ ಬಡವರಿಗೆ ದ್ರೋಹ’

ಕೇಂದ್ರದಿಂದ ನರೇಗಾ ಯೋಜನೆ ಹೆಸರು ಬದಲಾವಣೆ ವಿಚಾರ ಸಂಬಂಧ ವಿಧಾನಸೌಧದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದ್ದಾರೆ. ಯೋಜನೆಯಡಿ ಹಿಂದೆ ಕೇಂದ್ರ ಶೇ.100 ಹಣ ಕೊಡ್ತಿತ್ತು, ಆದರೆ ಈಗ ಶೇ.40ರಷ್ಟು ಹಣವನ್ನು ರಾಜ್ಯವೇ ಕೊಡಬೇಕು. ಹೊಸ ಕಾಯ್ದೆ ಪ್ರಕಾರ ಕೇಂದ್ರ ಹೇಳಿದ ಕಡೆ ಕೆಲಸ ಮಾಡಬೇಕಿದ್ದು, ಬಡವರಿಗೆ ದ್ರೋಹ ಮಾಡಲಾಗ್ತಿದೆ ಎಂದು ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ. ಅಲ್ಲದೆ ಬಿಜೆಪಿಗರು ನಕಲಿ ರಾಮನ ಭಕ್ತರಾಗಿದ್ದು, ಮತಕ್ಕಾಗಿ ರಾಮ ಅಂತಾರೆ. ಎಲ್ಲ ದೇವಸ್ಥಾನ ಕಟ್ಟಿದ್ದು ನಾವಾಗಿರುವ ಕಾರಣ ನಿಜವಾದ ರಾಮನ ಭಕ್ತರು ನಾವೇ. ಬಿಜೆಪಿಯವರು ನಕಲಿ ಹಿಂದೂಗಳು ಎಂದು ಕಿಡಿ ಕಾರಿದ್ದಾರೆ.

ಇದನ್ನೂ ಓದಿ:  ‘ವಿಬಿಜಿ ರಾಮ್ ಜಿ ಕಾಯ್ದೆ’ ಭ್ರಷ್ಟಾಚಾರಿ ಕಾಂಗ್ರೆಸ್‌ ಮಧ್ಯವರ್ತಿಗಳಿಗೆ ತೊಡಕು; ಜೋಶಿ ತಿರುಗೇಟು

ಆದರೆ ವಿಬಿ ಜೀ ರಾಮ್ ಜೀ ಯೋಜನೆಗೆ ಕಾಂಗ್ರೆಸ್​​ ವಿರೋಧವನ್ನು ಬಿಜೆಪಿ ಕಟುವಾಗಿ ಟೀಕಿಸಿದೆ. ಕಾಂಗ್ರೆಸ್‌ ಅವಧಿಯಲ್ಲಿ ಮನರೇಗಾದಲ್ಲಿ 11 ಲಕ್ಷ ಕೋಟಿ ರೂಪಾಯಿ ಮೊತ್ತದ ಭ್ರಷ್ಟಾಚಾರ ಆಗಿದೆ. ಈ ಅಕ್ರಮ, ವ್ಯಾಪಕ ಭ್ರಷ್ಟಾಚಾರ ತಡೆಯಲೆಂದೇ ಕೇಂದ್ರ ಸರ್ಕಾರ ʼವಿಬಿಜಿ ರಾಮ್ ಜಿ ಕಾಯ್ದೆʼ ಜಾರಿ ತಂದಿದೆ. ಆದರೆ, ಕಾಂಗ್ರೆಸ್‌ಗೆ ಇದೇ ದೊಡ್ಡ ಸಮಸ್ಯೆಯಾಗಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಈ ಹಿಂದೆ ಆರೋಪಿಸಿದ್ದರು. ವಿಬಿಜಿ ರಾಮ್ ಜಿ ಕಾಯ್ದೆಯಲ್ಲಿ ಎಐ ತಂತ್ರಜ್ಞಾನ, ಜಿಪಿಎಸ್ ಟ್ರ್ಯಾಕಿಂಗ್ ಅಳವಡಿಸಿದ್ದು, ಕೆಲಸದ ಗುಣಮಟ್ಟವನ್ನೂ ಪರೀಕ್ಷಿಸಲಾಗುತ್ತಿದೆ. ಮನರೇಗದಲ್ಲಿ ಹಣ ಹೊಡೆಯುತ್ತಿದ್ದ ಕಾಂಗ್ರೆಸ್‌ನ ಮಧ್ಯವರ್ತಿಗಳಿಗೆ ಇದುವೇ ತಲೆನೋವಾಗಿ ಪರಿಣಮಿಸಿದೆ. ಹಾಗಾಗಿ ವಿರೋಧಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಒಂದೇ ಬಸ್​​ಗೆ ಎರಡು ರಾಜ್ಯಗಳ ನಂಬರ್​​ ಪ್ಲೇಟ್​​ ಕಂಡು RTO ಅಧಿಕಾರಿಗಳೇ ದಂಗು!

ಕೋಲಾರ, ಜನವರಿ 14: ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ಗಡಿಭಾಗದ ಎನ್.ಜಿ. ಹುಲ್ಕೂರು ಗ್ರಾಮದ ಬಳಿ ಸಾರಿಗೆ ಇಲಾಖೆಯ ಅಧಿಕಾರಿಗಳು ಖಾಸಗಿ ಬಸ್​​ ಸಂಸ್ಥೆಯ ತೆರಿಗೆ ವಂಚನೆಯನ್ನು ಬಯಲಿಗೆಳೆದಿದ್ದಾರೆ. ಆಂಧ್ರಪ್ರದೇಶದಿಂದ ಬರುತ್ತಿದ್ದ ಖಾಸಗಿ ಬಸ್ಸನ್ನು ತಪಾಸಣೆ ನಡೆಸಿದಾಗ, ಒಂದೇ ವಾಹನಕ್ಕೆ ಎರಡು ಬೇರೆ ಬೇರೆ ನೋಂದಣಿ ಸಂಖ್ಯೆಗಳಿರುವುದು ಪತ್ತೆಯಾಗಿದೆ. ಬಸ್‌ನ ಹಿಂಭಾಗದಲ್ಲಿ ಆಂಧ್ರಪ್ರದೇಶದ ನೋಂದಣಿ ಸಂಖ್ಯೆ ಇದ್ದರೆ, ಮುಂಭಾಗದಲ್ಲಿ ಮಂಗಳೂರಿನ ನೋಂದಣಿ ಸಂಖ್ಯೆ ಪ್ರದರ್ಶಿಸಲಾಗಿತ್ತು. ಅಲ್ಲದೆ, ಬಸ್‌ನ ಚಾಸಿ ಸಂಖ್ಯೆ ಪರಿಶೀಲಿಸಿದಾಗ ಅದು ಮೈಸೂರಿನ ನೋಂದಣಿಗೆ ಸಂಬಂಧಿಸಿದೆ ಎಂಬುದು ತಿಳಿದುಬಂದಿದೆ. ಬಾಗೇಪಲ್ಲಿಯ ವೈ.ಜಿ.ಎಸ್. ಟೂರ್ಸ್ ಅಂಡ್ ಟ್ರಾವೆಲ್ಸ್​​ ಸಂಸ್ಥೆಗೆ ಸೇರಿದ ಈ ಬಸ್ ತೆರಿಗೆ ವಂಚನೆ ಮಾಡಿ ಸಂಚರಿಸುತ್ತಿದ್ದ ಹಿನ್ನೆಲೆ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಬಸ್ಸನ್ನು ವಶಪಡಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ರಾಹುಲ್​​ ಗಾಂಧಿ ಜೊತೆ ಪ್ರತ್ಯೇಕವಾಗಿ ಏನೇನು ಚರ್ಚೆ? ಡಿಕೆ ಶಿವಕುಮಾರ್ ಹೇಳಿದ್ದೇನು ನೋಡಿ

ಬೆಂಗಳೂರು, ಜನವರಿ 14: ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ರಾಹುಲ್ ಗಾಂಧಿ ಜತೆಗೆ ಮಂಗಳವಾರ ಪ್ರತ್ಯೇಕವಾಗಿ ಮಾತನಾಡಿದ್ದಕ್ಕೆ ಸಂಬಂಧಿಸಿ ಡಿಸಿಎಂ ಡಿಕೆ ಶಿವಕುಮಾರ್ ಬುಧವಾರ ಪ್ರತಿಕ್ರಿಯೆ ನೀಡಿದ್ದಾರೆ. ರಾಹುಲ್ ಗಾಂಧಿ ಕಾಂಗ್ರೆಸ್ ಹೈಕಮಾಂಡ್ ನಾಯಕ ಹಾಗೂ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರು ಆಗಿರುವುದರಿಂದ ಅವರನ್ನು ಭೇಟಿ ಮಾಡುವುದು ಮತ್ತು ಗೌರವಿಸುವುದು ಪ್ರೋಟೋಕಾಲ್​​ನ ಭಾಗವಾಗಿದೆ ಎಂದು ಡಿಕೆ ಶಿವಕುಮಾರ್ ಹೇಳಿದರು. ಯಾವುದೇ ವಿಶೇಷ ಸಂದೇಶ ಇರಲಿಲ್ಲ ಎಂದು ತಿಳಿಸಿದ ಅವರು, ಮಾಧ್ಯಮಗಳು ಅನಗತ್ಯ ಗೊಂದಲ ಸೃಷ್ಟಿಸುತ್ತಿವೆ ಎಂದು ಟೀಕಿಸಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಂಕ್ರಾಂತಿ ಸಂಭ್ರಮದಲ್ಲಿ ಸಖತ್ ಸ್ಟೆಪ್ ಹಾಕಿದ ಸೌಮ್ಯ ರೆಡ್ಡಿ! – Kannada News | Bengaluru Celebrates Lohri with Ministers Ramalinga Reddy and Sowmya Reddy

ಬೆಂಗಳೂರು, ಜನವರಿ 14: ನಗರದಲ್ಲಿ ಮಕರ ಸಂಕ್ರಾಂತಿ (Makar Sankranti) ಹಬ್ಬದ ಅಂಗವಾಗಿ ಲೋಹ್ರಿ ಆಚರಣೆಯನ್ನು ವಿಜೃಂಭಣೆಯಿಂದ ಆಯೋಜಿಸಲಾಗಿತ್ತು. ನಗರದ ಪಂಜಾಬಿ ಸಮುದಾಯದ ಮುಖಂಡರು ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಸಚಿವ ರಾಮಲಿಂಗಾರೆಡ್ಡಿ ಹಾಗೂ ಸೌಮ್ಯಾರೆಡ್ಡಿ ಭಾಗವಹಿಸಿ ಸಂಭ್ರಮಪಟ್ಟರು. ಈ ಹಬ್ಬದ ಆಚರಣೆಯು ಕೆಆರ್ ಮಾರುಕಟ್ಟೆ ಪ್ರದೇಶ ಸೇರಿದಂತೆ ಹಲವೆಡೆ ಹಬ್ಬದ ಕಳೆ ಹೆಚ್ಚಿಸಿತ್ತು. ಕಾರ್ಯಕ್ರಮದ ವೇಳೆ ಡೋಲು ಸದ್ದು ಕೇಳುತ್ತಿದ್ದಂತೆ, ಸೌಮ್ಯಾರೆಡ್ಡಿ ಅವರು ಸಖತ್ ಡ್ಯಾನ್ಸ್ ಮಾಡಿ ನೆರೆದಿದ್ದವರ ಗಮನ ಸೆಳೆದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

 

 

Source link

ವೆಂಕಣ್ಣನ ಸನ್ನಿಧಿಯಲ್ಲಿ ಹಸಿವು ಎಂಬ ಪದಕ್ಕೆ ಜಾಗವಿಲ್ಲ, ಇಲ್ಲಿ ಪ್ರತಿದಿನ ಎಷ್ಟು ಜನರಿಗೆ ಅನ್ನದಾನ ನಡೆಯುತ್ತದೆ ಗೊತ್ತಾ? – Kannada News | Venkateswara Swamy’s Tirumala Anna Prasadam: TTD’s Massive Free Food Program Details

ಕಲಿಯುಗದ ವೈಕುಂಠ, ಶ್ರೀಮಾನ್​ ನಾರಾಯಣ ವೆಂಕಟೇಶ್ವರನಾಗಿ (Tirumala Anna Prasadam) ನೆಲೆ ನಿಂತಿರುವ ತಿರುಮಲ ತಿಮ್ಮಪ್ಪನ ಸನ್ನಿಧಿಯಲ್ಲಿ ನಡೆಯುವ ದಿನನಿತ್ಯದ ಅನ್ನಪ್ರಸಾದದ ವಿಶೇಷತೆ ಬಗ್ಗೆ ಕೇಳಿರಲು ಸಾಧ್ಯವಿಲ್ಲ. ಟಿಟಿಡಿ ಪ್ರತಿದಿನ 3 ಲಕ್ಷ ಭಕ್ತರಿಗೆ ಅದ್ಭುತವಾದ ಅನ್ನಪ್ರಸಾದವನ್ನು ನೀಡುಲಾಗುತ್ತದೆ. ಕಲಿಯುಗದ ಜೀವಂತ ದೇವರು ಎಂದು ಕರೆಯಲ್ಪಡುವ ವೆಂಕಟೇಶ್ವರ ಸ್ವಾಮಿಯ ವಾಸಸ್ಥಾನವಾಗಿರುವ ತಿರುಮಲ ದೇಗುಲದಲ್ಲಿ ಭಕ್ತರು ಹಸಿದುಕೊಂಡು ಇರಬಾರದು ಎಂದು ಈ ವ್ಯವಸ್ಥೆಯನ್ನು ಮಾಡಲಾಗಿದೆ. ದೇವರ ದರ್ಶನದ ನಂತರ ಜನರು ಇಲ್ಲಿ ಬಂದು ಅನ್ನ ಪ್ರಸಾದವನ್ನು ಸ್ವೀಕರ ಮಾಡುತ್ತಾರೆ. ಇಲ್ಲಿ ಯಾವುದೇ ಬೇಧ-ಭಾವ ಇಲ್ಲದೆ ಎಲ್ಲರಿಗೂ ಅನ್ನದಾನ ಮಾಡಲಾಗುತ್ತದೆ. ಇದಕ್ಕೆ ಇದನ್ನು ತಿರುಮಲ ಎಂದರೆ ಹೊಟ್ಟೆ ತುಂಬಿದ ಸ್ಥಳ ಎಂದು ಕರೆಯುತ್ತಾರೆ.

ಟಿಟಿಡಿಯ ಅಡಿಯಲ್ಲಿ ಬರುವ ಅನ್ನ ಪ್ರಸಾದ ಇಲಾಖೆಯು ಈ ಕಾರ್ಯವನ್ನು ನಿಭಾಯಿಸುತ್ತದೆ. ಪ್ರತಿದಿನ ಸುಮಾರು ಮೂರು ಲಕ್ಷ ಭಕ್ತರು ಅನ್ನ ಪ್ರಸಾದವನ್ನು ಸೇವನೆ ಮಾಡುತ್ತಾರೆ ಎಂಬುದೇ ತುಂಬಾ ವಿಶೇಷವಾಗಿರುವುದು. ತಿರುಮಲದಲ್ಲಿ ಮೂರು ಅಡುಗೆಮನೆಗಳು ಇದೆ. ಅದರಲ್ಲಿಯೂ ಮಾತೃಶ್ರೀ ತಾರಿಗೊಂಡ ವೆಂಗಮಾಂಬ ಅನ್ನ ಪ್ರಸಾದ ಕೇಂದ್ರ, ಶ್ರೀ ಅಕ್ಷಯ ಮತ್ತು ವಕುಲಮಠ, ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿವೆ. ಇಲ್ಲಿ ಸರತಿ ಸಾಲಿನಲ್ಲಿ ನಿಂತಿರುವ ಭಕ್ತರಾಗಲಿ, ಊಟದ ಹಾಲ್‌ನಲ್ಲಿ ಕುಳಿತಿರುವ ಯಾತ್ರಿಕರಾಗಲಿ ಅಥವಾ ಹೊರಗೆ ಕಾಯುತ್ತಿರುವವರಾಗಲಿ, ಯಾರೂ ಹಸಿವಿನಿಂದ ಬಳಲದಂತೆ ನೋಡಿಕೊಳ್ಳುವುದು ಟಿಟಿಡಿಯ ಗುರಿಯಾಗಿದೆ.

ತಿರುಮಲದ ತರಿಗೊಂಡ ವೆಂಗಮಾಂಬ ಅನ್ನ ಪ್ರಸಾದ ಕೇಂದ್ರದ ಶ್ರೀ ಅಕ್ಷಯ ಅಡುಗೆಮನೆ ದಿನಕ್ಕೆ 1.48 ಲಕ್ಷ ಭಕ್ತರಿಗೆ ಮತ್ತು ವಕುಲಮಾತಾ ಅಡುಗೆಮನೆಯಲ್ಲಿ ಪ್ರತಿದಿನ 74 ಸಾವಿರ ಭಕ್ತರಿಗೆ ಗುಣಮಟ್ಟದ ಮತ್ತು ರುಚಿಕರವಾದ ಆಹಾರವನ್ನು ತಯಾರಿಸುತ್ತಿದೆ. ಶ್ರೀ ವೆಂಕಟೇಶ್ವರ ನಿತ್ಯಾನಂದ ಯೋಜನೆಯನ್ನು ಮಾಜಿ ಮುಖ್ಯಮಂತ್ರಿ ನಂದಮೂರಿ ತಾರಕ ರಾಮರಾವ್ ಅವರು ಏಪ್ರಿಲ್ 6, 1985 ರಂದು ತಿರುಮಲದಲ್ಲಿ ಪ್ರಾರಂಭಿಸಿದರು. ಈ ಯೋಜನೆಯನ್ನು ಏಪ್ರಿಲ್ 1, 1994 ರಂದು ಟ್ರಸ್ಟ್ ಆಗಿ ಪರಿವರ್ತಿಸಲಾಯಿತು.ಪ್ರಸ್ತುತ ಸಿಎಂ ಚಂದ್ರಬಾಬು ಅವರ ಆದೇಶದಂತೆ, ತಿರುಮಲದಲ್ಲಿ ಮಾತ್ರವಲ್ಲದೆ ದೇಶಾದ್ಯಂತ ಟಿಟಿಡಿ ಅಡಿಯಲ್ಲಿ ಬರುವ ದೇವಾಲಯಗಳಲ್ಲಿಯೂ ಅನ್ನ ಪ್ರಸಾದ ವಿತರಣಾ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ.

ಇದನ್ನೂ ಓದಿ: ಕೇಂದ್ರ ಸಚಿವ ಮುರುಗನ್ ನಿವಾಸದಲ್ಲಿ ಪೊಂಗಲ್ ಆಚರಿಸಿದ ಪ್ರಧಾನಿ ಮೋದಿ

ಪ್ರತಿದಿನ ತಯಾರಿಸುವ ಅನ್ನ ಪ್ರಸಾದಗಳ ವಿವರ:

ಮಾತೃಶ್ರೀ ತಾರಿಗೊಂಡ ವೆಂಗಮಾಂಬ ಅನ್ನ ಪ್ರಸಾದ ಕೇಂದ್ರದಲ್ಲಿ ತಯಾರಿಸಲಾಗುವ ಅನ್ನ ಪ್ರಸಾದಗಳು ಯಾವುದು ಎಂಬುದನ್ನು ಇಲ್ಲಿ ತಿಳಿಸಲಾಗಿದೆ. ಬೆಳಿಗ್ಗೆ ಗೋಧಿ ರವೆ ಉಪ್ಮಾ, ಸೂಜಿ ರವೆ ಉಪ್ಮಾ, ಸೇಮಿಯಾ ಉಪ್ಮಾ, ಪೊಂಗಲಿ, ಚಟ್ನಿ, ಸಾಂಬಾರ್, ಮಧ್ಯಾಹ್ನ ಹೊತ್ತಿಗೆ ಸಿಹಿ ಪೊಂಗಲ್, ಅನ್ನ, ಕರಿ, ಚಟ್ನಿ, ವಡ, ಸಾಂಬಾರ್, ರಸ, ಮಜ್ಜಿಗೆ, ಸಂಜೆಗೆ ಸಿಹಿ ಪೊಂಗಲ್, ಅನ್ನ, ಕರಿ, ಚಟ್ನಿ, ವಡೆ, ಸಾಂಬಾರ್, ರಸ, ಮಜ್ಜಿಗೆ ಮಾಡಲಾಗುತ್ತದೆ.

ಶ್ರೀ ಅಕ್ಷಯ ಅವರ ಅಡುಗೆಮನೆಯಲ್ಲಿ ಗೋಧಿ ರವೆ ಉಪ್ಮಾ/ರವೆ ರವೆ ಉಪ್ಮಾ, ಪೊಂಗಲಿ, ಸಾಂಬಾರನ್ನಂ, ಪೆರುಗನ್ನಂ, ಟೊಮೇಟೊ ರೈಸ್, ಸುಂಡಲ್, ಹಾಲು, ಚಹಾ ಮತ್ತು ಕಾಫಿಯನ್ನು ತಯಾರಿಸಲಾಗುತ್ತದೆ. ಹಬ್ಬಗಳು ಮತ್ತು ಪ್ರಮುಖ ದಿನಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಕಾರಣ ಮಜ್ಜಿಗೆ, ಬಾದಾಮಿ ಹಾಲು, ಬಿಸ್ಕತ್ತು ಮತ್ತು ಜ್ಯೂಸ್ ಪ್ಯಾಕೆಟ್‌ಗಳನ್ನು ಸಹ ಭಕ್ತರಿಗೆ ವಿತರಿಸಲಾಗುತ್ತದೆ.

ಇನ್ನು ವಕುಲಮಾತಾ ಅಡುಗೆಮನೆಯಲ್ಲಿ, ಸಬರನ್ನಂ, ಪೆರುಗನ್ನಂ ಮತ್ತು ಉಪ್ಮಾವನ್ನು ಪಿಲಿಗ್ರಿಮ್ ಅಕೌಂಡೇಶನ್ ಕಾಂಪ್ಲೆಕ್ಸ್ -2, 4 ಮತ್ತು 5 ರಲ್ಲಿರುವ ಊಟದ ಹಾಲ್‌ಗಳಿಗೆ ಮತ್ತು ಹೊರ ಪ್ರದೇಶದಲ್ಲಿರುವ ಕೇಂದ್ರ ವಿಚಾರಣಾ ಕಚೇರಿ, ಪಿಲಿಗ್ರಿಮ್ ಅಕೌಂಡೇಶನ್ ಕಾಂಪ್ಲೆಕ್ಸ್ ಕಾಂಪ್ಲೆಕ್ಸ್ -1, ರಾಮ್ ಭಾಗಿಚಾ ಅತಿಥಿ ಗೃಹ ಮತ್ತು ಅಂಜನಾದ್ರಿ ನಿಲಯಂ ಕಾಟೇಜ್‌ಗಳಲ್ಲಿರುವ ಭಕ್ತರಿಗೆ ವಿತರಿಸಲು ತಯಾರಿಸಲಾಗುತ್ತದೆ. ತಿರುಮಲ ತಿರುಪತಿ ದೇವಸ್ಥಾನದ (TTD) ವತಿಯಿಂದ ಸಹಾಯದಿಂದ ಸುಮಾರು ಸಾವಿರ ಅನ್ನ ಪ್ರಸಾದ ಇಲಾಖೆಯ ಸಿಬ್ಬಂದಿ, ಕಾಲಕಾಲಕ್ಕೆ ಯಾವುದೇ ಅಡೆತಡೆಯಿಲ್ಲದೆ ಭಕ್ತರಿಗೆ ಅನ್ನ ಪ್ರಸಾದವನ್ನು ವಿತರಿಸಲು ಸಹಕಾರಿಯಾಗಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಹಲ್ಲಿಯನ್ನು ಸಲೀಸಾಗಿ ಬರಿಗೈಯಲ್ಲಿ ಹಿಡಿದು ಮುತ್ತು ನೀಡಿದ ಪುಟಾಣಿ – Kannada News | A little boy effortlessly holds a lizard in his bare hands

ಕೆಲ ಪುಟಾಣಿಗಳೇ (little kids) ಹಲ್ಲಿ ಜಿರಳೆಗಳನ್ನು ನೋಡಿದರೆ ಸಾಕು, ಅವುಗಳನ್ನು ಕೈಯಲ್ಲಿ ಹಿಡಿಯುವ ಧೈರ್ಯ ಮಾಡ್ತಾರೆ. ಇನ್ನು ಕೆಲ ಮಕ್ಕಳು ಹಲ್ಲಿಯನ್ನು (lizard) ಕಂಡು ಭಯ ಪಡುವುದಿದೆ. ಆದರೆ ಈ ಪುಟಾಣಿಗೆ ಭಯ ಅನ್ನೋದು ಹೇಗಿರುತ್ತದೆ ಎನ್ನುವುದು ತಿಳಿದೇ ಇಲ್ಲ ಎಂದೆನಿಸುತ್ತದೆ. ಹೌದು, ಈ ಪುಟ್ಟ ಬಾಲಕ ಹಲ್ಲಿಯನ್ನು ಕೈಯಲ್ಲಿ ಹಿಡಿದು ಮುತ್ತು ನೀಡಿರುವ ವಿಡಿಯೋ ಸದ್ಯ ವೈರಲ್‌ ಆಗಿದೆ. ನೆಟ್ಟಿಗರು ಈ ಪುಟಾಣಿಯ ಧೈರ್ಯವನ್ನು ಮೆಚ್ಚಿಕೊಂಡಿದ್ದಾರೆ.

@mithirasmalaii ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಪುಟ್ಟ ಹುಡುಗನು ಬಾಗಿಲ ಸಂದಿಯಲ್ಲಿರುವ ಹಲ್ಲಿಯನ್ನು ಹಿಡಿಯಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಈ  ಪುಟಾಣಿಯೂ ಹಲ್ಲಿಯನ್ನು ಮೆಲ್ಲನೆ ಕೈಯಲ್ಲಿ ಹಿಡಿದು ಮುತ್ತು ನೀಡಿರುವುದನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ:ಪುಟ್ಟ ಹುಡುಗನ ಮಡಿಲಲ್ಲಿ ಹಾಯಾಗಿ ಮಲಗಿದ ನಾಯಿ ಮರಿ

ಈ ವಿಡಿಯೋ ಎಪ್ಪತ್ತಾರು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಏನು ಧೈರ್ಯ ಗುರು ಎಂದು ಹೇಳಿದರೆ, ಮತ್ತೊಬ್ಬರು, ಈ ಪುಟಾಣಿಯ ತಾಯಿ ಕೋಣೆಯ ಮೂಲೆಯಲ್ಲಿ ಕುರ್ಚಿಯ ಮೇಲೆ ನಿಂತಿರಬಹುದು ಎಂದು ಹೇಳಿದ್ದಾರೆ. ಮತ್ತೊಬ್ಬರು, ಬುದ್ಧಿವಂತ ಹುಡುಗ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link