Category Archives: Blog

Your blog category

ಬ್ರಾಹ್ಮಣರ ಬಗ್ಗೆ ಅನುರಾಗ್ ಕಶ್ಯಪ್ ಅವಹೇಳನಕಾರಿ ಹೇಳಿಕೆ: ಎಫ್‌ಐಆರ್ ದಾಖಲಿಸಲು ಕೋರ್ಟ್ ಆದೇಶ – Kannada News | Anurag Kashyap legal trouble Surat Court orders FIR Brahmin Community Remarks

ಸಾಮಾಜಿಕ ಜಾಲತಾಣಗಳಲ್ಲಿ ಬ್ರಾಹ್ಮಣ ಸಮುದಾಯದ (Brahmin Community) ಕುರಿತು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಬಾಲಿವುಡ್‌ನ ಖ್ಯಾತ ನಿರ್ದೇಶಕ ಮತ್ತು ನಟ ಅನುರಾಗ್ ಕಶ್ಯಪ್ (Anurag Kashyap) ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅನುರಾಗ್ ಕಶ್ಯಪ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಗುಜರಾತ್‌ನ ಸೂರತ್ ನ್ಯಾಯಾಲಯವು ಪೊಲೀಸರಿಗೆ ಮಹತ್ವದ ಆದೇಶ ನೀಡಿದೆ. ವಿವಿಧ ಸಮುದಾಯಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು, ಸಾರ್ವಜನಿಕ ಶಾಂತಿಗೆ ಭಂಗ ತರುವುದು, ಉದ್ದೇಶಪೂರ್ವಕ ಅವಮಾನ ಮತ್ತು ದಾರಿ ತಪ್ಪಿಸುವ ಮಾಹಿತಿ ಹರಡುವಿಕೆಗೆ ಸಂಬಂಧಿಸಿದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ನ್ಯಾಯಾಲಯವು ಅಧಿಕಾರಿಗಳಿಗೆ ಸೂಚನೆ ನೀಡಿದೆ.

ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ನಾಯಕ ಮತ್ತು ವಕೀಲ ಕಮಲೇಶ್ ರಾವಲ್ ಸಲ್ಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ ಮ್ಯಾಜಿಸ್ಟ್ರೇಟ್ ಎ.ಎಸ್. ಜಾನಿ ಅವರ ಪೀಠವು ಶನಿವಾರ (ಮೇ 16) ಈ ಆದೇಶವನ್ನು ಹೊರಡಿಸಿದೆ. ನಿರ್ದೇಶಕರ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳು ನಿರ್ದಿಷ್ಟ ಸಮುದಾಯದ ಘನತೆಗೆ ಧಕ್ಕೆ ತಂದಿವೆಯೇ ಮತ್ತು ಸಮಾಜದಲ್ಲಿ ಉದ್ವಿಗ್ನತೆ ಸೃಷ್ಟಿಸಲು ಕಾರಣವಾಗಿವೆಯೇ ಎಂಬುದನ್ನು ಪರಿಶೀಲಿಸಲು ಸಾಕಷ್ಟು ಆಧಾರಗಳಿವೆ ಎಂದು ನ್ಯಾಯಾಲಯ ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿದೆ.

ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಕಮಲೇಶ್ ರಾವಲ್ ಅವರು ಸಲ್ಲಿಸಿದ ದೂರಿನ ಪ್ರಕಾರ, ಅನುರಾಗ್ ಕಶ್ಯಪ್ ಅವರು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಬ್ರಾಹ್ಮಣ ಸಮುದಾಯವನ್ನು ಗುರಿಯಾಗಿಸಿಕೊಂಡು ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಕಳೆದ ವರ್ಷದ ಏಪ್ರಿಲ್‌ನಲ್ಲಿ ಬಿಡುಗಡೆಯಾಗಿದ್ದ ‘ಫುಲೆ’ ಹಿಂದಿ ಸಿನಿಮಾದ ಟ್ರೇಲರ್ ಕುರಿತಾದ ಟೀಕೆಗಳಿಗೆ ಪ್ರತಿಕ್ರಿಯಿಸುವಾಗ ಈ ವಿವಾದ ಆರಂಭವಾಗಿತ್ತು ಎನ್ನಲಾಗಿದೆ.

ತಮ್ಮ ಪೋಸ್ಟ್‌ಗಳಿಗೆ ಆಕ್ಷೇಪ ವ್ಯಕ್ತಪಡಿಸಿದ ಜನರಿಗೆ ಪ್ರತಿಕ್ರಿಯೆ ನೀಡುವಾಗಲೂ ಕಶ್ಯಪ್ ಅವರು ನಿರಂತರವಾಗಿ ಇಂತಹ ಹೇಳಿಕೆಗಳನ್ನು ಮುಂದುವರಿಸಿದ್ದರು ಎಂದು ದೂರುದಾರರು ಆರೋಪಿಸಿದ್ದಾರೆ. ಈ ಹೇಳಿಕೆಗಳು ಇಡೀ ಬ್ರಾಹ್ಮಣ ಸಮುದಾಯವನ್ನು ಅವಮಾನಿಸುವಂತಿವೆ ಮತ್ತು ಸಮುದಾಯಗಳ ನಡುವೆ ಒಡಕು ಮೂಡಿಸುವ ಸಾಮರ್ಥ್ಯ ಹೊಂದಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ‘ಟಾಕ್ಸಿಕ್’ ಸಿನಿಮಾ ಟೀಸರ್ ಬಗ್ಗೆ ಅನುರಾಗ್ ಕಶ್ಯಪ್ ಹೇಳಿದ್ದೇನು?

ಚಿತ್ರರಂಗದ ಪ್ರಭಾವಿ ವ್ಯಕ್ತಿಯಾಗಿರುವ ಅನುರಾಗ್ ಕಶ್ಯಪ್ ಅಂಥವರಿಗೆ ಸಮಾಜದಲ್ಲಿ ದೊಡ್ಡ ಅಭಿಮಾನಿ ಬಳಗ ಇರುತ್ತದೆ. ಹೀಗಾಗಿ ಅವರ ಸಾರ್ವಜನಿಕ ಹೇಳಿಕೆಗಳು ಸಮಾಜದ ಮೇಲೆ ತೀವ್ರ ಪರಿಣಾಮ ಬೀರುತ್ತವೆ ಎಂದು ರಾವಲ್ ವಾದಿಸಿದ್ದಾರೆ. ಇದರೊಂದಿಗೆ, 2020ರ ಜನವರಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಶ್ಯಪ್ ಮಾಡಿದ್ದ ಹಳೆಯ ಪೋಸ್ಟ್ ಒಂದನ್ನು ದೂರಿನಲ್ಲಿ ಪ್ರಸ್ತಾಪಿಸಲಾಗಿದ್ದು, ಅದರಲ್ಲಿ ಹಿಂದೂಗಳ ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಬಳಸಲಾಗಿದೆ ಎಂದು ಆರೋಪಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರಲ್ಲಿ ಲೇಡಿ ಡಾನ್ ಹಾವಳಿ? ರಿಯಲ್ ಎಸ್ಟೇಟ್ ಉದ್ಯಮಿ ಕಚೇರಿಗೆ ನುಗ್ಗಿ ಬೆದರಿಕೆ ಹಾಕಿ 10 ಲಕ್ಷ ರೂ. ಹಫ್ತಾಗೆ ಬೇಡಿಕೆ ಇಟ್ಟ ಮಹಿಳೆ – Kannada News | Bengaluru Real Estate Extortion Case Woman Posing as Youth Wing Chief Threatens Businessman for Rs 10 Lakh Huphta

ಬೆಂಗಳೂರು, ಮೇ 18: ಮಹಿಳೆಯೊಬ್ಬಳು ತಾನು ಸಂಘಟನೆಯೊಂದರ ಪ್ರಮುಖ ನಾಯಕಿ ಎಂದು ಹೇಳಿಕೊಂಡು ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಕಚೇರಿಗೆ ನುಗ್ಗಿ, ಜೀವ ಬೆದರಿಕೆ ಹಾಕಿ ಭಾರಿ ಮೊತ್ತದ ಹಣಕ್ಕೆ ಬೇಡಿಕೆ ಇಟ್ಟಿರುವ ಆಘಾತಕಾರಿ ಘಟನೆ ಬೆಂಗಳೂರಿನ ಕೊಡಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಂಗೀತ ರಾಮ್ ಎಂಬ ಮಹಿಳೆ ಹಾಗೂ ಆಕೆಯೊಂದಿಗೆ ಬಂದಿದ್ದ ಇಬ್ಬರು ಪುರುಷರು ಸೇರಿ ರಿಯಲ್ ಎಸ್ಟೇಟ್ ಉದ್ಯಮಿ ವೆಂಕಟರಾಜು ಅವರಿಗೆ ಈ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಕೊಡಿಗೆಹಳ್ಳಿ ವ್ಯಾಪ್ತಿಯಲ್ಲಿರುವ ವೆಂಕಟರಾಜು ಅವರ ಕಚೇರಿಗೆ ನುಗ್ಗಿದ ಸಂಗೀತ ರಾಮ್, ತಾನು ಸಂಘಟನೆಯೊಂದರ ಯುವಸೇನೆಯ ಮುಖ್ಯಸ್ಥೆ ಹಾಗೂ ಮಹಿಳಾ ಸಂಘದ ಅಧ್ಯಕ್ಷೆ ಎಂದು ಹೇಳಿಕೊಂಡು ಧಮ್ಕಿ ಹಾಕಿದ್ದಾಳೆ ಎಂದು ಆರೋಪಿಸಲಾಗಿದೆ. ಶಿವಾಜಿನಗರದಲ್ಲಿರುವ ಸೈಟ್‌ ಒಂದನ್ನು ವೆಂಕಟರಾಜು ಅವರು ರಿಜಿಸ್ಟರ್ಡ್ ಅಗ್ರಿಮೆಂಟ್ ಮಾಡಿಸಿಕೊಂಡಿದ್ದರು. ಇದೇ ಜಾಗದ ವಿಚಾರವನ್ನು ಮುಂದಿಟ್ಟುಕೊಂಡು ಕಚೇರಿಯಲ್ಲಿ ರಂಪಾಟ ಮಾಡಿರುವ ಮಹಿಳೆ, ‘ನೀನು ಅಗ್ರಿಮೆಂಟ್ ಮಾಡಿಸಿಕೊಂಡಿದ್ದರೂ ಆ ಜಾಗದ ಕಡೆ ತಲೆಹಾಕಬಾರದು. ನಾವು ನಿನ್ನ ತಂಟೆಗೆ ಬರಬಾರದು ಎಂದರೆ ತಕ್ಷಣ 10 ಲಕ್ಷ ರೂಪಾಯಿ ನೀಡಬೇಕು’ ಎಂದು ಹಫ್ತಾಗೆ ಬೇಡಿಕೆ ಇಟ್ಟಿದ್ದಾಳೆ ಎಂದು ಆರೋಪಿಸಲಾಗಿದೆ.

ಅಲ್ಲದೆ, ಒಂದು ವೇಳೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ಕಚೇರಿಗೆ ನುಗ್ಗಿ ಹೊಡೆಯುವುದಾಗಿ ಮತ್ತು 15 ರಿಂದ 20 ಜನರನ್ನು ಕರೆಸಿ ಕೊಲೆ ಮಾಡಿಸುವುದಾಗಿ ದರ್ಪ ತೋರಿದ್ದಾಳೆ ಎಂದು ಉದ್ಯಮಿ ವೆಂಕಟರಾಜು ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದರ ಆಧಾರದಲ್ಲಿ ಕೊಡಿಗೆಹಳ್ಳಿ ಪೊಲೀಸಲು ಪ್ರಕರಣ ದಾಖಲಿಸಿದ್ದು, ತನಿಖೆ ಕೈಗೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೊಟ್ಟಿರೋ 11 ಲಕ್ಷ ರೂ. ಸ್ಕಾರ್ಪಿಯೋ ಕಾರು ಸಾಕಾಗಿಲ್ಲ, ಹೆಚ್ಚು ಹಣ ತರುವಂತೆ ಕಿರುಕುಳ, ಮಹಡಿಯಿಂದ ಬಿದ್ದು ಮಹಿಳೆ ಸಾವು – Kannada News | Family Raises Dowry Harassment Allegations After Greater Noida Woman Found Dead

ನೋಯ್ಡಾ, ಮೇ 18: ಮಗಳ ಮದುವೆ(Marriage)ಗಾಗಿ ಆಕೆಯ ತಂದೆ ಬರೋಬ್ಬರಿ ಒಂದು ಕೋಟಿ ರೂಪಾಯಿ ಖರ್ಚು ಮಾಡಿದ್ದರು. ಕೇಳಿದ್ದೆಲ್ಲವನ್ನು ವರದಕ್ಷಿಣೆ ರೂಪದಲ್ಲಿ ಕೊಟ್ಟಿದ್ದರು. ಆದರೆ ವರದಕ್ಷಿಣೆಯ ರಕ್ಕಸ ಹಪಾಹಪಿಗೆ ಕೇವಲ 25 ವರ್ಷದ ದೀಪಿಕಾ ನಾರಂಗ್ ಎಂಬಾಕೆ ಪ್ರಾಣ ಕಳೆದುಕೊಂಡಿದ್ದಾಳೆ. ಮದುವೆಯಾಗಿ 17 ತಿಂಗಳಿಗೆ ಮೂರನೇ ಮಹಡಿಯಿಂದ ಹಾರಿ ಪ್ರಾಣ ಕಳೆದುಕೊಂಡಿದ್ದಾಳೆ. ಈ ಘಟನೆ ನೋಯ್ಡಾದಲ್ಲಿ ನಡೆದಿದೆ.

ಈಕೆಯ ತಂದೆ ಸಂಜಯ್ ನಾರಂಗ್ ಇದು ಆತ್ಮಹತ್ಯೆಯಲ್ಲ, ಇದೊಂದು ಭೀಕರ ಕೊಲೆ ಎಂದು ಕಣ್ಣೀರು ಹಾಕಿದ್ದಾರೆ. 2024ರ ಡಿಸೆಂಬರ್​​ನಲ್ಲಿ ದೀಪಿಕಾ ಮದುವೆ ಅದ್ದೂರಿಯಾಗಿ ನೆರವೇರಿತ್ತು. ಮಗಳು ಚೆನ್ನಾಗಿರಲೆಂದು ಸಂಜಯ್ 11 ಲಕ್ಷ ರೂ. ಹಾಗೂ ಐಷಾರಾಮಿ ಸ್ಕಾರ್ಪಿಯೋ ಕಾರು ಕೊಟ್ಟಿದ್ದರು. ಮದುವೆಯಾಗಿ ಮೂರ್ನಾಲ್ಕು ತಿಂಗಳಲ್ಲೇ ಅತ್ತೆ, ಮಾವ ಮತ್ತು ಪತಿ ರಿತಿಕ್ ವರದಕ್ಷಿಣೆ ಕೊಟ್ಟಿದ್ದು ಸಾಲದೆಂದು ಆಕೆಗೆ ಕಿರುಕುಳ ಕೊಡಲು ಶುರು ಮಾಡಿದ್ದರು.

ಭಾನುವಾರ ಮಧ್ಯಾಹ್ನ ದೀಪಿಕಾ ತನ್ನ ತಂದೆಗೆ ಅಳುತ್ತಾ ಕರೆ ಮಾಡಿದ್ದಳು, ಪತಿ ಮತ್ತು ಅತ್ತೆ ಮಾವ ಸೇರಿ ನನಗೆ ಹೊಡೆಯುತ್ತಾರೆ ಎಂದು ಅಳಲು ತೋಡಿಕೊಂಡಿದ್ದಳು. ಮಗಳ ಸ್ಥಿತಿ ಕೇಳಿ ಕಳವಳಗೊಂಡ ಸಂಜಯ್ ಅದೇ ದಿನ ಸಂಜೆ ಸಂಬಂಧಿಕರೊಟ್ಟಿಗೆ ಅತ್ತೆಯ ಮನೆಗೆ ಹೋಗಿ ಸಮಾಧಾನ ಮಾಡಲು ಪ್ರಯತ್ನಿಸಿದ್ದರು. ಬಳಿಕ ಮನೆಗೆ ವಾಪಸಾಗಿದ್ದರು. ಅವರು ಮನೆಗೆ ಬಂದ ಕೆಲವೇ ಗಂಟೆಗಳಲ್ಲಿ ರಾತ್ರಿ 12.30ರ ಸುಮಾರಿಗೆ ದೀಪಿಕಾ ಛಾವಣಿಯಿಂದ ಬಿದ್ದಿದ್ದಾಳೆ ಎನ್ನುವ ಆಘಾತಕಾರಿ ಕರೆ ಬಂದಿತ್ತು.

ಮತ್ತಷ್ಟು ಓದಿ: ಮದುವೆ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಆಘಾತ: ಆಮಂತ್ರಣ ಕೊಡಲು ಹೋದ ವೇಳೆ ಮನೆಗೆ ಕನ್ನ, ವಧುವಿಗೆಂದು ತಂದಿದ್ದ ಆಭರಣ ಕದ್ದ ಕಳ್ಳರು

ಅದು ಆತ್ಮಹತ್ಯೆಯಲ್ಲ ಆಕೆಯ ಹೊಟ್ಟೆಗೆ ಚಾಕು ಅಥವಾ ಸ್ಕ್ರೂಡ್ರೈವರ್​ನಿಂದ ಇರಿದು ಕೊಲೆ ಮಾಡಿ ಬಳಿಕ ಮೇಲಿಂದ ತಳ್ಳಿ, ಸಾಕ್ಷ್ಯ ನಾಶಪಡಿಸಲು ಪ್ರಯತ್ನಿಸಿದ್ದಾರೆ ಎಂದು ತಂದೆ ದೂರು ಕೊಟ್ಟಿದ್ದಾರೆ. ಕಳೆದ 10 ತಿಂಗಳಿನಿಂದ ಇವರ ಕಿರುಕುಳ ಹೆಚ್ಚಾಗಿತ್ತು. ಮಗಳ ಸಂಸಾರ ಹಾಳಾಗಬಾರದೆಂದು ನಾವು ಸುಮ್ಮನಿದ್ದೆವು , ಈಗ ಎಲ್ಲವೂ ಮುಗಿದುಹೋಗಿದೆ ಎಂದು ತಂದೆ ಆಕ್ರೋಶ ಹೊರಹಾಕಿದ್ದಾರೆ. ಆಸ್ಪತ್ರೆಯಲ್ಲಿದ್ದ ದೀಪಿಕಾ ದೇಹದ ಮೇಲೆ ಕೆಲವು ಗಾಯದ ಗುರುತುಗಳಿದ್ದು, ಮೂಗು ಮತ್ತು ಕಿವಿಗಳಿಂದ ರಕ್ತ ಬರುತ್ತಿತ್ತು ಎಂದು ಕುಟುಂಬಸ್ಥರು ಹೇಳಿದ್ದಾರೆ.

ಸಂತ್ರಸ್ತೆಯ ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ ವರದಕ್ಷಿಣೆ ಕಿರುಕುಳ ಮತ್ತು ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮೃತಳ ಪತಿ ರಿತಿಕ್ ತನ್ವರ್ ಮತ್ತು ಮಾವ ಮನೋಜ್‌ನನ್ನು ಈಗಾಗಲೇ ಬಂಧಿಸಲಾಗಿದೆ” ಎಂದು ತಿಳಿಸಿದ್ದಾರೆ. ಸದ್ಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಸಾವಿನ ಅಸಲಿ ರಹಸ್ಯ ಹೊರಬರಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಅತ್ಯಂತ ಮೌಲ್ಯಯುತ ಭಾರತೀಯ ಕಂಪನಿಗಳು; ರಿಲಾಯನ್ಸ್ ನಂತರ ಏರ್ಟೆಲ್; ಎಚ್​ಡಿಎಫ್​ಸಿಯನ್ನು ಹಿಂದಿಕ್ಕಿದ ಭಾರತೀಯ ಟೆಲಿಕಾಂ ಕಂಪನಿ – Kannada News | Bharti Airtel briefly edges HDFC Bank to Become India’s 2nd Most Valued Company

ನವದೆಹಲಿ, ಮೇ 18: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಟೆಲಿಕಾಂ ದೈತ್ಯ ಭಾರ್ತಿ ಏರ್‌ಟೆಲ್ (Bharti Airtel) ಐತಿಹಾಸಿಕ ಸಾಧನೆ ಮಾಡಿದೆ. ದೇಶದ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕ್ ಆದ ಎಚ್‌ಡಿಎಫ್‌ಸಿ (HDFC Bank) ಅನ್ನು ಹಿಂದಿಕ್ಕುವ ಮೂಲಕ ಭಾರ್ತಿ ಏರ್‌ಟೆಲ್ ಮಾರುಕಟ್ಟೆ ಬಂಡವಾಳೀಕರಣದಲ್ಲಿ (Market Capitalisation) ಭಾರತದ ಎರಡನೇ ಅತ್ಯಂತ ಮೌಲ್ಯಯುತ ಕಂಪನಿಯಾಗಿ ಹೊರಹೊಮ್ಮಿದೆ. ಕಳೆದ ಕೆಲವು ದಿನಗಳಿಂದ ಏರ್‌ಟೆಲ್ ಷೇರುಗಳು ಸತತವಾಗಿ ಏರಿಕೆ ಕಾಣುತ್ತಿರುವುದು ಈ ಸಾಧನೆಗೆ ಕಾರಣವಾಗಿದೆ. ಮುಕೇಶ್ ಅಂಬಾನಿ ಅವರ ರಿಲಾಯನ್ಸ್ ಇಂಡಸ್ಟ್ರೀಸ್ ಅತಿಹೆಚ್ಚು ಮಾರುಕಟ್ಟೆ ಬಂಡವಾಳ ಹೊಂದಿರುವ ಭಾರತೀಯ ಕಂಪನಿ ಎನಿಸಿದೆ. ಆ ನಂತರದ ಸ್ಥಾನ ಎಚ್ಡಿಎಫ್​ಸಿ ಬ್ಯಾಂಕ್​ನದ್ದಾಗಿದೆ. ಇವತ್ತು ಒಂದು ಸಂದರ್ಭದಲ್ಲಿ ಭಾರ್ತಿ ಏರ್ಟೆಲ್ ಎರಡನೇ ಸ್ಥಾನ ಪಡೆದಿತ್ತು.

ಈ ಸುದ್ದಿಯ ಮುಖ್ಯಾಂಶಗಳು

  • ಸೋಮವಾರದ (ಮೇ 18) ವಹಿವಾಟಿನಲ್ಲಿ ಭಾರ್ತಿ ಏರ್‌ಟೆಲ್ ಕಂಪನಿಯ ಒಟ್ಟು ಮಾರುಕಟ್ಟೆ ಮೌಲ್ಯವು 11.80 ಲಕ್ಷ ಕೋಟಿ ರೂ ದಾಟಿದೆ.
  • ಈ ಭಾರಿ ಜಿಗಿತದೊಂದಿಗೆ ಕಂಪನಿಯು ಎಚ್‌ಡಿಎಫ್‌ಸಿ ಬ್ಯಾಂಕ್‌ನ 11.74 ಲಕ್ಷ ಕೋಟಿ ರೂ ಮೌಲ್ಯವನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಿದೆ.
  • ಏರ್‌ಟೆಲ್ ಸಂಸ್ಥೆಯ ಷೇರುಗಳು ಕೇವಲ 4 ಸೆಷನ್​ಗಳಲ್ಲಿ (ಟ್ರೇಡಿಂಗ್ ದಿನಗಳು) ಶೇ. 11ರಷ್ಟು ಮೌಲ್ಯ ಹೆಚ್ಚಳ ಕಂಡಿವೆ.

ಇದನ್ನೂ ಓದಿ: ಪೇಟಿಎಂನಲ್ಲಿ ಹೊಸ ಫೀಚರ್; ಪೋಷಕರಿಂದ ಮಕ್ಕಳು ಪಡೆಯಬಹುದು ಆನ್​ಲೈನ್ ಪಾಕೆಟ್ ಮನಿ

ಏರ್‌ಟೆಲ್ ಷೇರುಗಳ ಭಾರಿ ಏರಿಕೆಗೆ ಕಾರಣವೇನು?

ಭಾರ್ತಿ ಏರ್‌ಟೆಲ್ ಇತ್ತೀಚೆಗೆ ಪ್ರಕಟಿಸಿದ ಮಾರ್ಚ್ ತ್ರೈಮಾಸಿಕದ ಬಲವಾದ ಆರ್ಥಿಕ ಫಲಿತಾಂಶಗಳು ಹೂಡಿಕೆದಾರರಲ್ಲಿ ಭರವಸೆ ಮೂಡಿಸಿವೆ. ಕಂಪನಿಯು ತನ್ನ ಪ್ರತಿ ಗ್ರಾಹಕರಿಂದ ಬರುವ ಸರಾಸರಿ ಆದಾಯವನ್ನು (ARPU) ಹೆಚ್ಚಿಸಲು ಪ್ರೀಮಿಯಂ ಯೋಜನೆಗಳು ಮತ್ತು ಪೋಸ್ಟ್‌ಪೇಯ್ಡ್ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸುವತ್ತ ವಿಶೇಷ ಗಮನ ಹರಿಸಿದೆ. ಇದರೊಂದಿಗೆ ಏರ್‌ಟೆಲ್‌ನ ಆಫ್ರಿಕಾ ಉದ್ಯಮ ಮತ್ತು ದೇಶೀಯ ಹೋಮ್ ಬ್ರಾಡ್‌ಬ್ಯಾಂಡ್ ವಿಭಾಗಗಳು ಅತ್ಯುತ್ತಮ ಬೆಳವಣಿಗೆಯನ್ನು ದಾಖಲಿಸಿರುವುದು ಷೇರುಗಳ ಸತತ ಏರಿಕೆಗೆ ವೇಗ ನೀಡಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್ ಹಿನ್ನಡೆಗೆ ಕಾರಣ

ಮತ್ತೊಂದೆಡೆ, ಎಚ್‌ಡಿಎಫ್‌ಸಿ ಬ್ಯಾಂಕ್‌ನ ಷೇರುಗಳು ಇತ್ತೀಚಿನ ದಿನಗಳಲ್ಲಿ ತೀವ್ರ ಒತ್ತಡವನ್ನು ಎದುರಿಸುತ್ತಿವೆ. ಬ್ಯಾಂಕ್‌ನ ಅರೆಕಾಲಿಕ ಅಧ್ಯಕ್ಷ ಅತಾನು ಚಕ್ರವರ್ತಿ ಅವರ ಹಠಾತ್ ರಾಜೀನಾಮೆಯ ನಂತರ, ಮುಂದಿನ ನಾಯಕತ್ವದ ಉತ್ತರಾಧಿಕಾರ ಯೋಜನೆಯ ಕುರಿತು ಹೂಡಿಕೆದಾರರಲ್ಲಿ ಗೊಂದಲ ಮೂಡಿದೆ. ಆಡಳಿತ ಮಂಡಳಿಯು ಯಾವುದೇ ಆಡಳಿತಾತ್ಮಕ ದೋಷಗಳಿಲ್ಲ ಎಂದು ಸ್ಪಷ್ಟಪಡಿಸಿದ್ದರೂ, ಹೂಡಿಕೆದಾರರ ವಿಶ್ವಾಸದ ಕೊರತೆಯಿಂದಾಗಿ ಬ್ಯಾಂಕ್ ಷೇರುಗಳು ಈ ವರ್ಷ ಸುಮಾರು ಶೇ. 22 ರಷ್ಟು ಕುಸಿತ ಕಂಡಿವೆ.

ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ 18 ಲಕ್ಷ ಕೋಟಿ ರೂಗೂ ಅಧಿಕ ಮಾರುಕಟ್ಟೆ ಮೌಲ್ಯ ಹೊಂದಿರುವ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಈ ವರದಿ ಬರೆಯುವ ವೇಳೆ, ಎಚ್​ಡಿಎಫ್​ಸಿ ಬ್ಯಾಂಕ್ ಷೇರುಗಳು ಚೇತರಿಕೆ ಕಂಡು, ಸಂಸ್ಥೆ ಎರಡನೇ ಸ್ಥಾನ ಮರಳಿಗಿಟ್ಟಿಸಿದೆ. 11.83 ಲಕ್ಷ ಕೋಟಿ ರೂ ಮಾರ್ಕೆಟ್ ಕ್ಯಾಪ್ ಹೊಂದಿದೆ. ಏರ್ಟೆಲ್ 11.81 ಲಕ್ಷ ಕೋಟಿ ರೂ ಮಾರುಕಟ್ಟೆ ಬಂಡವಾಳೀಕರಣವಾಗಿದೆ. ಆದರೆ, ಒಂದಷ್ಟು ಹೊತ್ತು ಏರ್ಟೆಲ್ ಎರಡನೇ ಸ್ಥಾನ ಆಕ್ರಮಿಸಿದ್ದು ಗಮನಾರ್ಹ.

ಇದನ್ನೂ ಓದಿ: ಜನಸಾಮಾನ್ಯರಿಗೆ ಕಾದಿದೆಯಾ ವಿದ್ಯುತ್ ಆಘಾತ; ನಿಗದಿತ ಶುಲ್ಕ ಏರಿಸಲು ಪ್ರಸ್ತಾಪ

ಅತಿಹೆಚ್ಚು ಮಾರುಕಟ್ಟೆ ಬಂಡವಾಳವಿರುವ ಭಾರತೀಯ ಕಂಪನಿಗಳು

  1. ರಿಲಾಯನ್ಸ್ ಇಂಡಸ್ಟ್ರೀಸ್: 18 ಲಕ್ಷಕೋಟಿ ರೂ
  2. ಎಚ್​ಡಿಎಫ್​ಸಿ ಬ್ಯಾಂಕ್: 11.84 ಲಕ್ಷ ಕೋಟಿ ರೂ
  3. ಭಾರ್ತಿ ಏರ್ಟೆಲ್: 11.81 ಲಕ್ಷ ಕೋಟಿ ರೂ
  4. ಐಸಿಐಸಿಐ ಬ್ಯಾಂಕ್: 8.85 ಲಕ್ಷ ಕೋಟಿ ರೂ
  5. ಎಸ್​ಬಿಐ: 8.68 ಲಕ್ಷ ಕೋಟಿ ರೂ
  6. ಟಿಸಿಎಸ್: 8.24 ಲಕ್ಷ ಕೋಟಿ ರೂ
  7. ಬಜಾಜ್ ಫೈನಾನ್ಸ್: 5.71 ಲಕ್ಷ ಕೋಟಿ ರೂ
  8. ಎಲ್ ಅಂಡ್ ಟಿ: 5.37 ಲಕ್ಷ ಕೋಟಿ ರೂ
  9. ಹಿಂದುಸ್ತಾನ್ ಯುನಿಲಿವರ್: 5.28 ಲಕ್ಷ ಕೋಟಿ ರೂ
  10. ಎಲ್​ಐಸಿ: 4.99 ಲಕ್ಷ ಕೋಟಿ ರೂ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ದೇಶಕ್ಕೆ ಅನ್ನ ನೀಡುವ ರೈತರಿಗೂ ತಟ್ಟಿದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಿಸಿ – Kannada News | Petrol, Diesel Price Hike Affects Farmers: agricultural machinery Price Rise In Bidar

ಬೀದರ್, (ಮೇ 18): ಮಧ್ಯಪ್ರಾಚ್ಯ ಯುದ್ಧದ (War) ಪರಿಣಾಮ ಕಚ್ಚಾ ತೈಲ ಬೆಲೆ ಏರಿಕೆ, ವಿದೇಶಿ ವಿನಿಮಮ ಕೊರತೆ ಸೇರಿದಂತೆ ಹಲವು ಆರ್ಥಿಕ ಸಂಕಷ್ಟಗಳು ಎದುರಾಗಿದೆ. ಪರಿಣಾಮ ಭಾರತದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಾಗಿದೆ (Petrol, Diesel Price Hike). ಇದರ ಬೆನ್ನಲ್ಲೇ ಅಗತ್ಯ ವಸ್ತಗಳು ಬೆಲೆ ಹೆಚ್ಚಳವಾಗುತ್ತಿದೆ. ಹೌದು…ಈಗಾಗಲೇ ಖಾಸಗಿ ಬಸ್, ಸ್ಕೂಲ್ ಬಸ್, ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ದರ ಏರಿಯಾಗುತ್ತಿದ್ದು, ಇದೀಗ ತೈಲ ಬೆಲೆ ಏರಿಕೆ ಬಿಸಿ ಅನ್ನದಾತರಿಗೂ ತಟ್ಟಿದೆ. ಯಂತ್ರೋಪಕರಣಗಳಿಂದ ಕೃಷಿ ಚಟುವಟಿಕೆ ಮಾಡುತ್ತಿದ್ದ ರೈತರಿಗೆ ತೈಲ ಬೆಲೆ ಬಿಸಿ ತಟ್ಟಿದ್ದು, ರೈತರು ಬಿತ್ತನೆ ಹೊಲ ಹದಗೊಳಿಸುವ ಯಂತ್ರದ ಬಾಡಿಕೆ ದರ ಹೆಚ್ಚಳವಾಗಿದೆ. ಹೀಗಾಗಿ ರೈತರು ಕೃಷಿ ಚಟುವಟಿಕೆಗೆ ಎತ್ತುಗಳನ್ನ ಖರೀದಿಸಲು ಮುಂದಾಗಿದ್ದಾರೆ. ಎತ್ತು ಖರೀದಿಸಲು ತೆಲಂಗಾಣ ಮಹಾರಾಷ್ಟ್ರ ಬೀದರ್ ನಿಂದ ಔರಾದ್ ನ APMC ಜಾನುವಾರು ಮಾರುಕಟ್ಟೆ ಬರುತ್ತಿದ್ದು, ಒಂದು ಜೋಡಿ ಎತ್ತು ಒಂದೂವರೆ ಲಕ್ಷದಿಂದ ನಾಲ್ಕು ಲಕ್ಷ ರೂ, ವರೆಗೆ ಮಾರಾಟವಾಗುತ್ತಿವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

4,500 ಕೋಟಿ ರೂ. ವಂಚನೆ ಕೇಸ್​​: ಆರೋಪಿ ಶಿವಾನಂದ ನೀಲಣ್ಣವರ್​​ 10 ದಿನ ಸಿಐಡಿ ಕಸ್ಟಡಿಗೆ – Kannada News | Belagavi 4,500 Crore Fraud Case: Accused Shivanand Neelannavar Remanded to 10 Days CID Custody

ಬೆಳಗಾವಿ, ಮೇ 18: 4,500 ಕೋಟಿ ರೂ. ವಂಚನೆ ಆರೋಪ ಪ್ರಕರಣ ಸಂಬಂಧ ಆರೋಪಿ ಶಿವಾನಂದ ನೀಲಣ್ಣವರ್​​ನ 10 ದಿನಗಳ ಕಾಲ ಸಿಐಡಿ ಕಸ್ಟಡಿಗೆ ನೀಡಿ ಬೆಳಗಾವಿಯ 2ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ. ಬೆಂಗಳೂರಿನ ಕಚೇರಿಗೆ ಆರೋಪಿ ಕರೆದೊಯ್ದು ವಿಚಾರಣೆ ಮಾಡಬೇಕಿದೆ. ಶಿವಾನಂದ ನೀಲಣ್ಣವರ್ ಬಳಿ 35,000 ಜನ ಹೂಡಿಕೆ ಮಾಡಿದ್ದು, ಒಂದು ಸಾವಿರ ಕೋಟಿಗೂ ಅಧಿಕ ಹಣದ ವ್ಯವಹಾರ ಆಗಿದೆ. ಹೀಗಾಗಿ 10 ದಿನ ಕಸ್ಟಡಿಗೆ ನೀಡುವಂತೆ ಸಿಐಡಿ ಅಧಿಕಾರಿಗಳು ಕೋರ್ಟ್​​ಗೆ ಮನವಿ ಮಾಡಿದ್ದರು. ಸಿಐಡಿ ವಕೀಲರ ಮನವಿ ಮೇರೆಗೆ ಆರೋಪಿಯನ್ನು ಕಸ್ಟಡಿಗೆ ನೀಡಿ 2ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್​ ಜಡ್ಜ್ ಗಂಗಾಧರ ಅವರು ಆದೇಶಿಸಿದ್ದಾರೆ.

ಮುಖ್ಯಾಂಶಗಳು

  • 4,500 ಕೋಟಿ ರೂ. ವಂಚನೆ ಆರೋಪ ಪ್ರಕರಣ
  • ಆರೋಪಿ ಶಿವಾನಂದ ನೀಲಣ್ಣವರ್​​ ಸಿಐಡಿ ಕಸ್ಟಡಿಗೆ
  • 2ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ಆದೇಶ

ಇನ್ನು ಆರೋಪಿ ಶಿವಾನಂದ ನೀಲಣ್ಣವರ್ ಆರೋಗ್ಯದ ಬಗ್ಗೆ ನ್ಯಾಯಾಧೀಶರು ವಿಚಾರಿಸಿದ್ದು, ತನಗೆ ಬಿಪಿ ಇದೆ ಎಂದು ನ್ಯಾಯಾಧೀಶರ ಮುಂದೆ ನೀಲಣ್ಣವರ್ ಹೇಳಿಕೊಂಡಿದ್ದಾರೆ. ಆಗ, ಸಂಬಂಧಪಟ್ಟ ವೈದ್ಯರಿಂದ ನಿಮಗೆ ಮಾತ್ರೆ ಸೇರಿ ಎಲ್ಲಾ ವ್ಯವಸ್ಥೆ ಮಾಡ್ತಾರೆ ಎಂದು ನ್ಯಾಯಾಧೀಶರು ಆರೋಪಿಗೆ ತಿಳಿಸಿದ್ದಾರೆ. ಅಲ್ಲದೆ, ಈ ವೇಳೆ 35,000 ಜನರಿಗೆ ಹಣ ಬೇಕಿಲ್ಲ, ನಾನು ಬೇಕಾಗಿದ್ದೇನೆ ಎಂದು ನೀಲಣ್ಣವರ್ ಹೇಳಿದ್ದು, ಇದಕ್ಕೆ ಮಧ್ಯಪ್ರವೇಶಿಸಿದ ನ್ಯಾಯಾಧೀಶರು ಅಮಾಯಕರಿಗೆ ಅನ್ಯಾಯ ಆಗಬಾರದು. ಸರ್ಕಾರ ಜನರ ತಂದೆ-ತಾಯಿ ಇದ್ದಂತೆ. ಅವರ ರಕ್ಷಣೆ ಮಾಡಬೇಕಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಖಾತೆಯಲ್ಲಿ ನೂರಾರು ಕೋಟಿ ಪತ್ತೆಯಾದ್ರೂ ಬ್ಯಾಂಕ್ ಗಪ್‌ಚುಪ್; ಶಿವಾನಂದನೊಂದಿಗೆ ಅಧಿಕಾರಿಗಳು ಶಾಮೀಲು?

ನೀವು ಜನರಿಗೆ ಬೇಕಾಗಿರಬಹುದು, ಒಳ್ಳೆಯದು ಮಾಡಿರಬಹುದು ಅದು ನನಗೆ ಗೊತ್ತಿಲ್ಲ.ಆದರೆ ಅಮಾಯಕ ಜನರಿದ್ದಾರೆ, ಅವರನ್ನ ರಕ್ಷಣೆ ಮಾಡೋದು ಸರ್ಕಾರದ ಜವಾಬ್ದಾರಿ. ಸಾಕಷ್ಟು ಜನ ಹಣ ತಗೊಂಡು ಓಡಿ ಹೋಗಿದ್ದಾರೆ. ಇತಿಹಾಸದಿಂದ ಪಾಠ ಕಲಿಯಲು ಈ ಕಾನೂನು ತಂದಿದ್ದಾರೆ. ಕಾನೂನಿನ ಅಡಿಯಲ್ಲಿ ನೀವೇನು ಮಾಡಿದ್ದೀರಿ ಅದು ಉಳಿಯುತ್ತೆ ಎಂದು ತಿಳಿಸಿರುವ ನ್ಯಾಯಾಧೀಶರು, ಧರ್ಮೋ ರಕ್ಷಿತಿ ರಕ್ಷಿತ ಎಂದು ಶ್ಲೋಕದ ಉದಾಹರಣೆ ಕೂಡ ನೀಡಿದ್ದಾರೆ.

ಕಣ್ಣೀರಿಟ್ಟ ಶಿವಾನಂದ ನೀಲಣ್ಣವರ್

10 ದಿನಗಳ ಕಾಲ ಆರೋಪಿಯನ್ನು ಸಿಐಡಿ ಕಸ್ಟಡಿಗೆ ನೀಡಿರುವ ನ್ಯಾಯಾಲಯ ಭದ್ರತೆ ಸೇರಿ ಆರೋಪಿ ಬಗ್ಗೆ ಕಾಳಜಿ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದೆ. ಕೋರ್ಟ್​​ ಹಾಲ್​​ನಿಂದ ಹೊರ ಬರುತ್ತಿದ್ದಂತೆ ಸಹೋದರನ ಕಂಡು ಆರೋಪಿ ಶಿವಾನಂದ ನೀಲಣ್ಣವರ್ ಕಣ್ಣೀರಿಟ್ಟ ಪ್ರಸಂಗವೂ ನಡೆದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

RCB ತಂಡದ ಗೆಲುವಿನ ಗುಟ್ಟು ರಟ್ಟು ಮಾಡಿದ ಜಿತೇಶ್ ಶರ್ಮಾ – Kannada News | Jitesh Sharma’s post match interview After RCB vs PBKS Match

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರಲ್ಲಿ 9 ಪಂದ್ಯಗಳನ್ನು ಗೆಲ್ಲುವ ಮೂಲಕ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಪ್ಲೇಆಫ್​ಗೆ ಲಗ್ಗೆಯಿಟ್ಟಿದೆ. ಧರ್ಮಶಾಲಾದಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್​​ಸಿಬಿ 20 ಓವರ್​ಗಳಲ್ಲಿ 222 ರನ್​ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ 20 ಓವರ್​ಗಳಲ್ಲಿ 199 ರನ್​ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಆರ್​ಸಿಬಿ ತಂಡ 23 ರನ್​ಗಳ ಗೆಲುವು ಸಾಧಿಸಿದೆ.

ಈ ಗೆಲುವಿನ ಬಳಿಕ ಮಾತನಾಡಿದ ಆರ್​ಸಿಬಿ ತಂಡದ ಹಂಗಾಮಿ ನಾಯಕ ಜಿತೇಶ್ ಶರ್ಮಾ,  ಈ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ನಾವು ಸಂಪೂರ್ಣ ನಿಯಂತ್ರಣ ಹೊಂದಿದ್ದೆವು. ಇನಿಂಗ್ಸ್‌ನ ಮಧ್ಯದ ವೇಳೆಗೆ ತಂಡವು ಯಾವುದೇ ಒತ್ತಡದಲ್ಲಿ ಇರಲಿಲ್ಲ. ಮೊದಲು ಬ್ಯಾಟ್ ಮಾಡಿದ ತಮ್ಮದೇ ತಂಡದ ಬ್ಯಾಟರ್‌ಗಳು ಪಿಚ್ ಹೇಗಿದೆ ಎಂಬ ನಿಖರವಾದ ಮಾಹಿತಿ ನೀಡಿದ್ದರು. ಈ ಫೀಡ್‌ಬ್ಯಾಕ್ ಆಧಾರದ ಮೇಲೆ ಎದುರಾಳಿ ಬ್ಯಾಟರ್‌ಗಳಿಗೆ ತಕ್ಕಂತೆ ವಿಶೇಷ ಬೌಲಿಂಗ್ ಯೋಜನೆಗಳನ್ನು ರೂಪಿಸಿ, ಅದನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿದ್ದಾಗಿ ಎಂದು ತಿಳಿಸಿದ್ದಾರೆ.

ಇದೇ ವೇಳೆ ನಾಯಕತ್ವದ ಜವಾಬ್ದಾರಿಯ ಬಗ್ಗೆ ಮಾತನಾಡಿದ ಜಿತೇಶ್ ಶರ್ಮಾ, ಇದು ನನ್ನ ಕೆಲಸದ ಒಂದು ಭಾಗ. ಮ್ಯಾನೇಜ್‌ಮೆಂಟ್ ನೀಡಿದ ಜವಾಬ್ದಾರಿಗೆ ನೂರಕ್ಕೆ ನೂರರಷ್ಟು ಶ್ರಮವನ್ನು ಹಾಕಿದ್ದೇನೆ. ವಿಕೆಟ್ ಕೀಪಿಂಗ್ ಜೊತೆಗೆ ನಾಯಕತ್ವ ನಿಭಾಯಿಸುವಾಗ ತಂಡದಲ್ಲಿದ್ದ ಹಿರಿಯ ಆಟಗಾರರು ತಮಗೆ ಸಾಕಷ್ಟು ಮಾರ್ಗದರ್ಶನ ನೀಡಿದರು. ಹೀಗಾಗಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ.

ಆರ್​ಸಿಬಿ ತಂಡದಲ್ಲಿ  ಅನುಭವಿ ಆಟಗಾರರು ಇರುವುದು ನಮ್ಮ ಸೌಭಾಗ್ಯ. ಮೈದಾನದಲ್ಲಿ ಅವರು ನೀಡಿದ ಬೆಂಬಲ ಅತ್ಯುತ್ತಮ ಅನುಭವವಾಗಿತ್ತು. ಅವರ ಬೆಂಬಲದೊಂದಿಗೆ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದೇನೆ ಎಂದು ಜಿತೇಶ್ ಶರ್ಮಾ ಹೇಳಿದ್ದಾರೆ.

ಇನ್ನು ಮುಂದಿನ ಪಂದ್ಯದಲ್ಲಿ ರಜತ್ ಪಾಟಿದಾರ್ ನಾಯಕನಾಗಿ ಕಣಕ್ಕಿಳಿಯುವುದನ್ನು ಖಚಿತಡಪಡಿಸಿರುವ ಜಿತೇಶ್ ಶರ್ಮಾ, ನಮ್ಮ ಕ್ಯಾಪ್ಟನ್ ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಮುಂದಿನ ಪಂದ್ಯdಲ್ಲಿ ಆರ್​ಸಿಬಿ ತಂಡವನ್ನು ಅವರೇ ಮುನ್ನಡೆಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: IPL 2026: CSK ಗೆದ್ದರೆ RCB ಗೆ ಪ್ಲಸ್ ಪಾಯಿಂಟ್..!

ಕೊನೆಯದಾಗಿ ಆರ್​ಸಿಬಿ ತಂಡದ ಗೆಲುವಿನ ಗುಟ್ಟನ್ನು ಬಹಿರಂಗಪಡಿಸಿದ ಜಿತೇಶ್ ಶರ್ಮಾ, “ಆರ್​ಸಿಬಿ ಮಂತ್ರ ಅತ್ಯಂತ ಸರಳವಾಗಿದೆ. ನಾವು ಮುಂದಿನ ಪಂದ್ಯಗಳ ಬಗ್ಗೆ ಅತಿಯಾಗಿ ಯೋಚಿಸದೆ, ‘ಒಂದೊಂದೇ ಪಂದ್ಯದ ಮೇಲೆ ಗಮನ’ ಹರಿಸುತ್ತೇವೆ. ಅಲ್ಲದೆ ಪ್ರತಿ ಪಂದ್ಯದಲ್ಲೂ ನಮ್ಮ ಅತ್ಯುತ್ತಮ ಕ್ರಿಕೆಟ್ ಆಡಲು ಬಯಸುತ್ತೇವೆ. ಇದುವೇ ನಮ್ಮ ಯಶಸ್ಸಿನ ಗುಟ್ಟು ಎಂದಿದ್ದಾರೆ.


ಒಟ್ಟಾರೆಯಾಗಿ, ಕಠಿಣ ಪರಿಸ್ಥಿತಿಯಲ್ಲೂ ಜಿತೇಶ್ ಶರ್ಮಾ ತೋರಿದ ಪ್ರಬುದ್ಧ ನಾಯಕತ್ವ ಮತ್ತು ಹಿರಿಯ ಆಟಗಾರರ ಒಗ್ಗಟ್ಟು ಆರ್​ಸಿಬಿ ತಂಡದ ಯಶಸ್ಸಿಗೆ ಕಾರಣವಾಗಿದೆ. ಅಲ್ಲದೆ ಮುಂದಿನ ಪಂದ್ಯದಲ್ಲಿ ರಜತ್ ಪಾಟೀದಾರ್ ಅವರ ಸೇರ್ಪಡೆಯೊಂದಿಗೆ ತಂಡವು ಮತ್ತಷ್ಟು ಬಲಗೊಳ್ಳಲಿದ್ದು, ಈ ಮೂಲಕ ಆರ್​ಸಿಬಿ 20 ಅಂಕಗಳೊಂದಿಗೆ ಲೀಗ್ ಹಂತವನ್ನು ಮುಗಿಸುವ ಇರಾದೆಯಲ್ಲಿದೆ.

Published On – 2:24 pm, Mon, 18 May 26

Source link

ಕೆಪಿಸಿಸಿ ಕಚೇರಿಯಲ್ಲಿಯೇ ಯೂತ್​​ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ: ಕಾರಣ ಇಲ್ಲಿದೆ

ಬೆಂಗಳೂರು, ಮೇ 18: ಯೂತ್ ಕಾಂಗ್ರೆಸ್ ಕಾರ್ಯಕರ್ತರ ನಡುವೆಯೇ ಮಾರಾಮಾರಿ ನಡೆದಿರುವ ಘಟನೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದಿದೆ. ರಾಷ್ಟ್ರೀಯ ಯುವ ಕಾಂಗ್ರೆಸ್ ನಿನ್ನೆ ಹಲವು ಮಂದಿ ಪದಾಧಿಕಾರಿಗಳನ್ನು ಸ್ಥಾನದಿಂದ ಕಿತ್ತು ಹಾಕಿತ್ತು. ಇಂದು ಅದೇ ವಿಚಾರಕ್ಕೆ ಯುವ ಕಾಂಗ್ರೆಸ್ ಪದಾಧಿಕಾರಿಗಳು ನಡುವೆ ಗಲಾಟೆ ನಡೆದಿದ್ದು, ಅದು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ ಮತ್ತು ಅಧ್ಯಕ್ಷ ಮಂಜುನಾಥ್ ಗೌಡ ಬೆಂಬಲಿಗರು ಪರಸ್ಪರ ಬಡಿದಾಡಿಕೊಂಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬಿಸಿಸಿಐಗೆ ಇಲ್ಲ ಆರ್‌ಟಿಐ ಬಿಸಿ! – Kannada News | BCCI Exempt From RTI: Landmark CIC Verdict

ಭಾರತದ ಅತ್ಯಂತ ಶ್ರೀಮಂತ ಕ್ರೀಡಾ ಸಂಸ್ಥೆಯಾದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮಾಹಿತಿ ಹಕ್ಕು ಕಾಯ್ದೆಯ (RTI) ವ್ಯಾಪ್ತಿಗೆ ಬರುವುದಿಲ್ಲ ಎಂದು ಕೇಂದ್ರ ಮಾಹಿತಿ ಆಯೋಗ (CIC) ಸೋಮವಾರ ಮಹತ್ವದ ತೀರ್ಪು ನೀಡಿದೆ. ನವ ದೆಹಲಿಯಲ್ಲಿರುವ ಕೇಂದ್ರ ಮಾಹಿತಿ ಆಯೋಗದ ಪ್ರಧಾನ ಕಚೇರಿಯಲ್ಲಿ ಇನ್​​ಫಾರ್ಮೇಷನ್ ಕಮಿಷನರ್ ಪಿ.ಆರ್. ರಮೇಶ್ ಅವರ ನೇತೃತ್ವದ ಪೀಠವು ಈ ಆದೇಶವನ್ನು ಹೊರಡಿಸಿದ್ದು, ಬಿಸಿಸಿಐ ಆರ್‌ಟಿಐ ಕಾಯ್ದೆಯ ಸೆಕ್ಷನ್ 2(h) ಅಡಿಯಲ್ಲಿ ಬರುವ ‘ಸಾರ್ವಜನಿಕ ಪ್ರಾಧಿಕಾರ’ (Public Authority) ಅಲ್ಲ ಎಂದು ಸ್ಪಷ್ಟಪಡಿಸಿದೆ. ಈ ಮೂಲಕ ಕಳೆದ ಹಲವು ವರ್ಷಗಳಿಂದ ನಡೆಯುತ್ತಿದ್ದ ಕಾನೂನು ಹೋರಾಟ ಮತ್ತು ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಈ ತೀರ್ಪಿನ ಹಿನ್ನೆಲೆಯೇನು?

2018 ರಲ್ಲಿ ಸಾರ್ವಜನಿಕರೊಬ್ಬರು ಕೇಂದ್ರ ಕ್ರೀಡಾ ಸಚಿವಾಲಯಕ್ಕೆ ಆರ್‌ಟಿಐ (RTI) ಅರ್ಜಿ ಸಲ್ಲಿಸಿ ಬಿಸಿಸಿಐಗೆ ಸಂಬಂಧಿಸಿದ ಮಾಹಿತಿ ಕೇಳಿದ್ದರು. ಸಚಿವಾಲಯವು ಆ ಮಾಹಿತಿ ತನ್ನ ಬಳಿ ಇಲ್ಲ ಎಂದು ಹೇಳಿದಾಗ, ಈ ಪ್ರಕರಣ ಕೇಂದ್ರ ಮಾಹಿತಿ ಆಯೋಗದ (CIC) ಮೆಟ್ಟಿಲೇರಿತು. 2018ರಲ್ಲಿ ಸಿಐಸಿ, “ಬಿಸಿಸಿಐ ಆರ್‌ಟಿಐ ವ್ಯಾಪ್ತಿಗೆ ಬರುತ್ತದೆ” ಎಂದು ಆದೇಶ ನೀಡಿದ್ದರು.

ಕೇಂದ್ರ ಮಾಹಿತಿ ಆಯೋಗ ನೀಡಿದ ಆ ಆದೇಶವನ್ನು ವಿರೋಧಿಸಿ, ಬಿಸಿಸಿಐ ಮದ್ರಾಸ್ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ದಾಖಲಿಸಿದ್ದರು. “ನಾವು ಸರ್ಕಾರದ ಧನಸಹಾಯ ಪಡೆಯದ ಸ್ವಾಯತ್ತ ಖಾಸಗಿ ಸಂಸ್ಥೆ, ಹಾಗಾಗಿ ನಮಗೆ ಇದು ಅನ್ವಯಿಸುವುದಿಲ್ಲ” ಎಂದು ಬಿಸಿಸಿಐ ವಾದಿಸಿತ್ತು.

ಈ ಅರ್ಜಿಯ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್, ಸುಪ್ರೀಂ ಕೋರ್ಟ್‌ನ ಹಿಂದಿನ ತೀರ್ಪುಗಳ ಅನ್ವಯ ಈ ವಿಷಯವನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಪ್ರಕರಣವನ್ನು ಮರಳಿ ಸಿಐಸಿಗೆ ಕಳುಹಿಸಿಕೊಟ್ಟಿತು.

ಅದರಂತೆ ಇದೀಗ ಮದ್ರಾಸ್ ಹೈಕೋರ್ಟ್ ನೀಡಿದ ನಿರ್ದೇಶನದ ಮೇರೆಗೆ ಕೇಂದ್ರ ಮಾಹಿತಿ ಆಯೋಗವು ಸುಪ್ರೀಂ ಕೋರ್ಟ್‌ನ ಹಳೆಯ ತೀರ್ಪುಗಳು ಮತ್ತು ಪ್ರಸ್ತುತ ನಿಯಮಗಳನ್ನು ಆಧರಿಸಿ  ಹೊಸ ತೀರ್ಪನ್ನು ನೀಡಿದೆ.

ವಿನಾಯಿತಿ ನೀಡಲು ಕಾರಣಗಳೇನು?

  • ಖಾಸಗಿ ಸಂಸ್ಥೆ: ಬಿಸಿಸಿಐ ತಮಿಳುನಾಡು ಸೊಸೈಟಿಗಳ ನೋಂದಣಿ ಕಾಯ್ದೆಯಡಿ ನೋಂದಾಯಿಸಲ್ಪಟ್ಟ ಒಂದು ಸ್ವಾಯತ್ತ ಖಾಸಗಿ ಸಂಸ್ಥೆಯಾಗಿದೆ. ಇದನ್ನು ಸಂವಿಧಾನದ ಮೂಲಕವಾಗಲಿ ಅಥವಾ ಸಂಸತ್ತಿನ ಯಾವುದೇ ವಿಶೇಷ ಕಾನೂನಿನ ಮೂಲಕವಾಗಲಿ ಸ್ಥಾಪಿಸಲಾಗಿಲ್ಲ ಎಂದು ಬಿಸಿಸಿಐ ವಕೀಲರು ವಾದ ಮಂಡಿಸಿದ್ದಾರೆ.
  •  ಸರ್ಕಾರದ ನಿಯಂತ್ರಣವಿಲ್ಲ: ಭಾರತೀಯ ಕ್ರಿಕೆಟ್ ಮಂಡಳಿಯ ಆಡಳಿತ, ಪದಾಧಿಕಾರಿಗಳ ಆಯ್ಕೆ ಅಥವಾ ಆಂತರಿಕ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ಯಾವುದೇ ರೀತಿಯ ನೇರ ಅಥವಾ ಪರೋಕ್ಷ ನಿಯಂತ್ರಣವನ್ನು ಹೊಂದಿಲ್ಲ ಎಂದು ಬಿಸಿಸಿಐ ಸ್ಪಷ್ಟ ಪಡಿಸಿದೆ.
  • ಆರ್ಥಿಕ ಸ್ವಾವಲಂಬನೆ: ಬಿಸಿಸಿಐ ತನ್ನ ಆದಾಯವನ್ನು ಪ್ರಸಾರ ಹಕ್ಕುಗಳು (Media Rights), ಕಾರ್ಪೊರೇಟ್ ಪ್ರಾಯೋಜಕತ್ವಗಳು ಮತ್ತು ಟಿಕೆಟ್ ಮಾರಾಟದ ಮೂಲಕ ತಾನೇ ಗಳಿಸುತ್ತದೆ. ಇದು ಸರ್ಕಾರದ ಯಾವುದೇ ಅನುದಾನವನ್ನು ಅವಲಂಬಿಸಿಲ್ಲ ಎಂದು ತಿಳಿಸಲಾಗಿದೆ.
  • ತೆರಿಗೆ ವಿನಾಯಿತಿ ಧನಸಹಾಯವಲ್ಲ: ಸರ್ಕಾರ ನೀಡುವ ಸಾಮಾನ್ಯ ಕರ ವಿನಾಯಿತಿಗಳು ಅಥವಾ ಕಾನೂನುಬದ್ಧ ಸೌಲತ್ತುಗಳನ್ನು ಆರ್‌ಟಿಐ ಕಾಯ್ದೆಯಡಿ ‘ಸರ್ಕಾರದ ಗಣನೀಯ ಧನಸಹಾಯ’ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ.

ಕ್ರೀಡಾ ಆಡಳಿತ ಮಸೂದೆ:

ಈ ತೀರ್ಪು ಭಾರತದ ಹೊಸ ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆಯ ನಿಯಮಗಳಿಗೆ ಪೂರಕವಾಗಿದೆ. ಸರ್ಕಾರದ ನೇರ ಹಣಕಾಸು ನೆರವು ಪಡೆಯದ ಕ್ರೀಡಾ ಸಂಸ್ಥೆಗಳಿಗೆ ಆರ್‌ಟಿಐನಿಂದ ವಿನಾಯಿತಿ ನೀಡಲು ಈ ಮಸೂದೆಯಲ್ಲಿ ಅವಕಾಶವಿದೆ. ಆದಾಗ್ಯೂ, ಬಿಸಿಸಿಐ ರಾಷ್ಟ್ರೀಯ ಕ್ರೀಡಾ ಸಂಸ್ಥೆಯಾಗಿ (NSF) ನೋಂದಾಯಿಸಿಕೊಳ್ಳಬೇಕಾಗುತ್ತದೆ ಮತ್ತು ಸುರಕ್ಷಿತ ಕ್ರೀಡಾ ನೀತಿಗಳು ಹಾಗೂ ಆಂತರಿಕ ನೈತಿಕ ಸಮಿತಿಗಳ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಆದರೆ ಅದರ ಆಂತರಿಕ ಹಣಕಾಸು ದಾಖಲೆಗಳು ಮತ್ತು ಪತ್ರವ್ಯವಹಾರಗಳನ್ನು ಸಾರ್ವಜನಿಕರು ಆರ್‌ಟಿಐ ಮೂಲಕ ಪಡೆಯಲು ಸಾಧ್ಯವಿರುವುದಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ ಕೇಂದ್ರ ಮಾಹಿತಿ ಆಯೋಗದ (CIC) ನೀಡಿರುವ ತೀರ್ಪು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (BCCI) ಕಾನೂನಾತ್ಮಕವಾಗಿ ಅತಿ ದೊಡ್ಡ ಸಮಾಧಾನ ತಂದಿದೆ. ತಾನು ಸರ್ಕಾರದ ಧನಸಹಾಯ ಪಡೆಯದ ಸ್ವಾಯತ್ತ ಖಾಸಗಿ ಸಂಸ್ಥೆ ಎಂದು ಮದ್ರಾಸ್ ಹೈಕೋರ್ಟ್‌ನಲ್ಲಿ ಬಿಸಿಸಿಐ ನಡೆಸಿದ ಸುದೀರ್ಘ ಕಾನೂನು ಹೋರಾಟಕ್ಕೆ ಈಗ ಜಯ ಸಿಕ್ಕಂತಾಗಿದೆ.

ಇದನ್ನೂ ಓದಿ: SRH ತಂಡ ಗೆದ್ದರೆ ಎರಡು ತಂಡಗಳು ಪ್ಲೇಆಫ್​ಗೆ ಎಂಟ್ರಿ..!

ಈ ಆದೇಶದಿಂದಾಗಿ ಬಿಸಿಸಿಐ ತನ್ನ ಆಂತರಿಕ ಹಣಕಾಸು ವ್ಯವಹಾರಗಳು ಮತ್ತು ಆಡಳಿತಾತ್ಮಕ ನಿರ್ಧಾರಗಳನ್ನು ಸಾರ್ವಜನಿಕರ ಆರ್‌ಟಿಐ ಕಣ್ಣಿನಿಂದ ದೂರ ಇಡಲು ಯಶಸ್ವಿಯಾಗಿದೆ. ಆದರೆ, ಕ್ರೀಡಾಡಳಿತದಲ್ಲಿ ಸಂಪೂರ್ಣ ಪಾರದರ್ಶಕತೆ ಬಯಸುವ ಕ್ರೀಡಾ ಪ್ರೇಮಿಗಳು ಮತ್ತು ಆರ್‌ಟಿಐ ಕಾರ್ಯಕರ್ತರಿಗೆ ಇದು ತೀವ್ರ ನಿರಾಶೆ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ಈ ಹೋರಾಟ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಎಲ್ಲಾ ಸಾಧ್ಯತೆಗಳಿವೆ.

Source link

ಕ್ಯಾನ್ಸರ್ ಚಿಕಿತ್ಸೆಯಲ್ಲಿ ಮಹಾ ಕ್ರಾಂತಿ: ಇನ್ನು ಐದು ಗಂಟೆಗಳ ಐವಿ ಡ್ರಿಪ್ ಬೇಕಿಲ್ಲ, ಭಾರತದಲ್ಲಿ ಬಿಡುಗಡೆಯಾಯ್ತು ಹೊಸ ಇಂಜೆಕ್ಷನ್ – Kannada News | New Rapid Cancer Injection Introduced in India, Treatment Takes Just Minutes

ಕ್ಯಾನ್ಸರ್ ಇಂಜೆಕ್ಷನ್ Image Credit source: Cancer treatment Centre of America

ನವದೆಹಲಿ, ಮೇ 18: ಭಾರತದ ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯಂತ ಕ್ರಾಂತಿಕಾರಿ ಹಾಗೂ ಆಶಾದಾಯಕ ಬೆಳವಣಿಗೆಯೊಂದು ನಡೆದಿದೆ. ಶ್ವಾಸಕೋಶದ ಕ್ಯಾನ್ಸರ್(Cancer) ರೋಗಿಗಳಿಗೆ ವರದಾನವಾಗಬಲ್ಲ ಅತ್ಯಾಧುನಿಕ ಚುಚ್ಚುಮದ್ದನ್ನು ದೇಶದಲ್ಲಿ ಪರಿಚಯಿಸಲಾಗಿದೆ. ಈ ಕುರಿತಾದ ಪೂರ್ಣ ವರದಿ ಇಲ್ಲಿದೆ. ಭಾರತದಲ್ಲಿ ಶ್ವಾಸಕೋಶದ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡುವ ವಿಧಾನದಲ್ಲಿ ಅತ್ಯಂತ ಮಹತ್ವದ ಹಾಗೂ ಕ್ರಾಂತಿಕಾರಿ ಬದಲಾವಣೆ ಗಾಳಿ ಬೀಸಿದೆ.

ಗಂಟೆಗಟ್ಟಲೆ ಆಸ್ಪತ್ರೆಯ ಬೆಡ್ ಮೇಲೆ ಮಲಗಿ ಪಡೆಯಬೇಕಿದ್ದ ಸಾಂಪ್ರದಾಯಿಕ ಇಂಟ್ರಾವೆನಸ್ (IV) ಚಿಕಿತ್ಸೆಗೆ ಪರ್ಯಾಯವಾಗಿ, ಕೇವಲ ಏಳು ನಿಮಿಷಗಳಲ್ಲಿ ನೀಡಬಹುದಾದ ಹೊಸ ಕ್ಯಾನ್ಸರ್ ಇಂಜೆಕ್ಷನ್ ಅನ್ನು ಭಾರತದಲ್ಲಿ ಲಾಂಚ್ ಮಾಡಲಾಗಿದೆ. ‘ಟೆಸೆಂಟ್ರಿಕ್’ (Tecentriq) ಹೆಸರಿನ ಈ  ಇಮ್ಯುನೊಥೆರಪಿ ಔಷಧವನ್ನು ರಾಶ್ ಫಾರ್ಮಾ ಇಂಡಿಯಾ (Roche Pharma India) ಸಂಸ್ಥೆ ಮಾರುಕಟ್ಟೆಗೆ ಪರಿಚಯಿಸಿದೆ.

ಗಂಟೆಗಳ ಕಾಯುವಿಕೆಗೆ ಸಿಕ್ಕಿತು ಮುಕ್ತಿ

ಇಲ್ಲಿಯವರೆಗೆ ಕ್ಯಾನ್ಸರ್ ರೋಗಿಗಳು ಆಸ್ಪತ್ರೆ ಅಥವಾ ಕ್ಲಿನಿಕ್‌ಗಳಲ್ಲಿ ಸೂಜಿ ಚುಚ್ಚಿಸಿಕೊಂಡು ಹಲವಾರು ಗಂಟೆಗಳ ಕಾಲ ಇನ್ಫ್ಯೂಷನ್ ಮೂಲಕ ಔಷಧ ಪಡೆಯಬೇಕಿತ್ತು. ಇದು ರೋಗಿಗಳಿಗೆ ದೈಹಿಕ ಹಾಗೂ ಮಾನಸಿಕ ಒತ್ತಡವನ್ನು ಉಂಟುಮಾಡುತ್ತಿತ್ತು. ಆದರೆ, ಈ ಹೊಸ ‘ಸಬ್ಕ್ಯುಟೇನಿಯಸ್ ಇಂಜೆಕ್ಷನ್’ ಅನ್ನು ಅತ್ಯಂತ ಸುಲಭವಾಗಿ ಚರ್ಮದ ಅಡಿಯಲ್ಲಿ (ಸಾಮಾನ್ಯವಾಗಿ ತೊಡೆಯ ಭಾಗದಲ್ಲಿ) ಕೇವಲ 7 ನಿಮಿಷಗಳಲ್ಲಿ ನೀಡಬಹುದು. ಇದು ಆಸ್ಪತ್ರೆಗಳ ಮೇಲಿನ ಹೊರೆಯನ್ನು ತಗ್ಗಿಸುವುದಲ್ಲದೆ, ವಯಸ್ಸಾದ ರೋಗಿಗಳಿಗೆ ಮತ್ತು ದೂರದ ಊರುಗಳಿಂದ ಬರುವವರಿಗೆ ಭಾರಿ ಅನುಕೂಲ ಕಲ್ಪಿಸಲಿದೆ.

ಔಷಧ ಕೆಲಸ ಮಾಡುವುದು ಹೇಗೆ?
ಈ ಇಂಜೆಕ್ಷನ್‌ನಲ್ಲಿ ಅಟೆಜೋಲಿಜುಮಾಬ್ (Atezolizumab) ಎಂಬ ಪ್ರಮುಖ ಔಷಧವನ್ನು ಬಳಸಲಾಗಿದೆ. ಕ್ಯಾನ್ಸರ್ ಕೋಶಗಳು ನಮ್ಮ ದೇಹದ ರೋಗನಿರೋಧಕ ಶಕ್ತಿಯಿಂದ ತಪ್ಪಿಸಿಕೊಳ್ಳಲು PD-L1 ಎಂಬ ಪ್ರೋಟೀನ್ ಅನ್ನು ಕವಚದಂತೆ ಬಳಸುತ್ತವೆ.

ಈ ಹೊಸ ಇಂಜೆಕ್ಷನ್ ಆ ಪ್ರೋಟೀನ್ ಕವಚವನ್ನು ನಿರ್ಬಂಧಿಸುತ್ತದೆ . ಒಮ್ಮೆ ಪ್ರೋಟಿನ್ ಬ್ಲಾಕ್ ಆದ ತಕ್ಷಣ, ದೇಹದ ರೋಗನಿರೋಧಕ ಕೋಶಗಳು ಕ್ಯಾನ್ಸರ್ ಕೋಶಗಳನ್ನು ಸುಲಭವಾಗಿ ಗುರುತಿಸಿ, ಅವುಗಳ ಮೇಲೆ ತೀವ್ರವಾಗಿ ದಾಳಿ ಮಾಡಿ ಧ್ವಂಸಗೊಳಿಸುತ್ತವೆ. ಇದು ಆರೋಗ್ಯಕರ ಕೋಶಗಳಿಗೂ ಹಾನಿ ಮಾಡುವ ಕೀಮೋಥೆರಪಿಗಿಂತ ಭಿನ್ನವಾಗಿದ್ದು, ಅತ್ಯಂತ ಕಡಿಮೆ ಅಡ್ಡಪರಿಣಾಮಗಳನ್ನು ಹೊಂದಿದೆ.

ಮತ್ತಷ್ಟು ಓದಿ: ಮಹಿಳೆಯರಲ್ಲಿ ಕ್ಯಾನ್ಸರ್​​ ಹೆಚ್ಚಳ: ಆಘಾತಕಾರಿ ಮಾಹಿತಿ ಬಿಚ್ಚಿಟ್ಟ ಆಂಕಾಲಜಿಸ್ಟ್‌ಗಳು

ಯಾರಿಗೆ ಇದು ಸಹಕಾರಿ
ಭಾರತದಲ್ಲಿ ಅತಿ ಸಾಮಾನ್ಯ ಶ್ವಾಸಕೋಶದ ಕ್ಯಾನ್ಸರ್ನಿಂದ ಬಳಲುತ್ತಿರುವ ರೋಗಿಗಳಿಗೆ ಈ ಚಿಕಿತ್ಸೆ ನೀಡಲಾಗುತ್ತದೆ. ರೋಗಿಯಗೆಡ್ಡೆಯಲ್ಲಿ ಹೆಚ್ಚಿನ ಮಟ್ಟದ PD-L1 ಪ್ರೋಟಿನ್ ಇದೆಯೇ ಎಂಬುದನ್ನು ವೈದ್ಯರು ಮೊದಲು ಪರೀಕ್ಷಿಸುತ್ತಾರೆ. ತಜ್ಞರ ಪ್ರಕಾರ, ಸುಮಾರು ಅರ್ಧದಷ್ಟು ಶ್ವಾಸಕೋಶದ ಕ್ಯಾನ್ಸರ್ ರೋಗಿಗಳು ಈ ಚಿಕಿತ್ಸೆಗೆ ಅರ್ಹರಾಗಿರುತ್ತಾರೆ.

ಪ್ರತಿ ಡೋಸ್‌ಗೆ 3.7 ಲಕ್ಷ ರೂ. ಆಗಿದ್ದು, ಇದು ರೋಗಿಗಳ ಕುಟುಂಬವನ್ನು ಆತಂಕಕ್ಕೆ ತಳ್ಳಿದೆ. ಚಿಕಿತ್ಸೆಯ ಸಂಪೂರ್ಣ ಅವಧಿಯಲ್ಲಿ ಒಬ್ಬ ರೋಗಿಗೆ ಕನಿಷ್ಠ 6 ಡೋಸ್‌ಗಳು ಬೇಕಾಗುತ್ತವೆ. ಅಂದರೆ ಒಟ್ಟು ವೆಚ್ಚ ಸುಮಾರು 22 ಲಕ್ಷ ರೂ. ದಾಟಲಿದೆ. ಮುಂದುವರೆದ ತಂತ್ರಜ್ಞಾನ ಮತ್ತು ಸುದೀರ್ಘ ಸಂಶೋಧನೆಯ ಕಾರಣದಿಂದಾಗಿ ಈ ಇಮ್ಯುನೊಥೆರಪಿ ಔಷಧಗಳು ದುಬಾರಿಯಾಗಿವೆ ಎನ್ನಲಾಗಿದೆ.

ರೋಗಿಗಳಿಗೆ ಸಿಗಲಿದೆಯೇ ಸಹಾಯ?
ಈ ಭಾರಿ ಆರ್ಥಿಕ ಹೊರೆಯನ್ನು ತಗ್ಗಿಸಲು ರೋಚೆ ಸಂಸ್ಥೆಯು “ಬ್ಲೂ ಟ್ರೀ” ಎಂಬ ವಿಶೇಷ ರೋಗಿ ಸಹಾಯ ಯೋಜನೆಯನ್ನು ತಂದಿದೆ. ಇದರ ಜೊತೆಗೆ, ಈ ಔಷಧವನ್ನು ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (CGHS) ಅಡಿಯಲ್ಲಿ ಸೇರಿಸಲಾಗಿದ್ದು, ಅರ್ಹ ರೋಗಿಗಳಿಗೆ ಹಣ ಮರುಪಾವತಿ (Reimbursement) ಸೌಲಭ್ಯ ಸಿಗಲಿದೆ. ಆದಾಗ್ಯೂ, ಸಾಮಾನ್ಯ ಜನರಿಗೂ ಈ ಚಿಕಿತ್ಸೆ ಸುಲಭವಾಗಿ ಸಿಗುವಂತಾಗಲು ಸರ್ಕಾರದ ಹಸ್ತಕ್ಷೇಪದ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕೈಗೆಟುಕುವ ಬೆಲೆಯ ಸವಾಲುಗಳಿದ್ದರೂ, ಕ್ಯಾನ್ಸರ್ ರೋಗಿಗಳ ಜೀವಿತಾವಧಿ ಹೆಚ್ಚಿಸುವಲ್ಲಿ ಮತ್ತು ಅವರ ಜೀವನದ ಗುಣಮಟ್ಟವನ್ನು ಉತ್ತಮಗೊಳಿಸುವಲ್ಲಿ ಈ 7 ನಿಮಿಷದ ಇಂಜೆಕ್ಷನ್ ಭಾರತೀಯ ವೈದ್ಯಕೀಯ ಇತಿಹಾಸದಲ್ಲೇ ಒಂದು ಮೈಲಿಗಲ್ಲು ಎನ್ನಬಹುದು.

ಡಿಸ್​ಕ್ಲೈಮರ್: ವೈದ್ಯಕೀಯ ಸಲಹೆಯನ್ನು ಒಳಗೊಂಡ ಈ ಸುದ್ದಿಯು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ತಜ್ಞರ ಅಭಿಪ್ರಾಯಕ್ಕೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ವೈದ್ಯರನ್ನು ಅಥವಾ ನಿಮ್ಮ  ಕುಟುಂಬ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಗೆ ಟಿವಿ9 ಕನ್ನಡ ಸಂಸ್ಥೆ ಜವಾಬ್ದಾರರಾಗಿರುವುದಿಲ್ಲ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 11:16 am, Mon, 18 May 26

Source link