ಬಾಂಗ್ಲಾದೇಶದ ಪ್ರಜೆ ಎಂದು ಆರೋಪಿಸಿ ಕಾರ್ಮಿಕನ ಮೇಲೆ ಮಾರಣಾಂತಿಕ ಹಲ್ಲೆ! – Kannada News | Mangaluru: A fatal attack on a laborer accused of being a Bangladeshi citizen! FIR Filed Against Four Youths

ಬಾಂಗ್ಲಾದೇಶದ ಪ್ರಜೆ ಎಂದು ಆರೋಪಿಸಿ ಕಾರ್ಮಿಕನ ಮೇಲೆ ಮಾರಣಾಂತಿಕ ಹಲ್ಲೆ! ಮಂಗಳೂರು, ಜನವರಿ 12: ನಗರದ ಕಾವೂರು ಪ್ರದೇಶದಲ್ಲಿ ಬಾಂಗ್ಲಾದೇಶದ ಪ್ರಜೆ ಎಂದು ಆರೋಪಿಸಿ ಕಾರ್ಮಿಕನ ಮೇಲೆ ನಾಲ್ವರು ಯುವಕರು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಿನ್ನೆ (ಜ.11) ಸಂಜೆ ನಡೆದಿದೆ. ಜಾರ್ಖಂಡ್ ಮೂಲದ ಕಾರ್ಮಿಕ ದಿಲ್ಶಾನ್ ಅನ್ಸಾರಿಯನ್ನು ತಡೆದು ಥಳಿಸಿರುವ ಆರೋಪಿಗಳ ಮೇಲೆ FIR ಆಗಿದೆ. ದಾಖಲೆ ತೋರಿಸುವಂತೆ ಒತ್ತಾಯ ದಿಲ್ಶಾನ್ ಅನ್ಸಾರಿ ಕಳೆದ 10–15 ವರ್ಷಗಳಿಂದ ವರ್ಷಕ್ಕೆ 4–5 ತಿಂಗಳುಗಳ ಕಾಲ ಮಂಗಳೂರಿನಲ್ಲಿ ಕೆಲಸ…

Read More

ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರ ನಿಧಿಯೋ? ಪೂರ್ವಜರ ಆಸ್ತಿಯೋ?, ಗ್ರಾಮಸ್ಥರಲ್ಲಿ ಗೊಂದಲ – Kannada News | Lakkundi Gold Discovery Sparks Confusion: Villagers Demand Clarity from District Collector

ಗದಗ, ಜನವರಿ 12: ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಚಿನ್ನ ಪತ್ತೆಯಾದ ಪ್ರಕರಣದಲ್ಲಿ ಹಲವು ಗೊಂದಲಗಳು ಉಂಟಾಗಿವೆ. ಮನೆ ನಿರ್ಮಾಣದ ಅಡಿಪಾಯದ ಕೆಲಸದ ವೇಳೆ ಸುಮಾರು 1 ಕೆ.ಜಿ. ಚಿನ್ನ ಪತ್ತೆಯಾದ ಬಳಿಕ, ಪುರಾತತ್ವ ಇಲಾಖೆಯ ಅಧಿಕಾರಿಗಳು ಇದು ನಿಧಿ ಅಲ್ಲ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಬೆನ್ನಲ್ಲೇ ಇದು ನಿಧಿ ಅಲ್ಲದಿದ್ದರೆ ನಮ್ಮ ಬಂಗಾರ ನಮಗೆ ವಾಪಸ್ ಕೊಡಿ ಎಂದು ಕುಟುಂಬಸ್ಥರು ಆಗ್ರಹಿಸುತ್ತಿದ್ದಾರೆ. ಈ ವಿಷಯ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದರೂ ಜಿಲ್ಲಾಡಳಿತ,…

Read More

PSLV-C62: 16 ಉಪಗ್ರಹಗಳನ್ನು ಹೊತ್ತು ಹೊರಟಿದ್ದ ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ – Kannada News | ISRO PSLV C62 Launch: Anomaly Detected in Third Stage, Data Analysis Underway

ಶ್ರೀಹರಿಕೋಟ, ಜನವರಿ 12: ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 16 ಉಪಗ್ರಹಗಳನ್ನು ಹೊತ್ತು ಹೊರಟಿದ್ದ PSLV-C62 ರಾಕೆಟ್​ನಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಇಸ್ರೋದ ಮಹತ್ವಾಕಾಂಕ್ಷೆಯ ಪಿಎಸ್‌ಎಲ್‌ವಿ ಸಿ-62 ರಾಕೆಟ್ ಉಡಾವಣೆಯ ಮೂರನೇ ಹಂತದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ರಾಕೆಟ್ ಪಥ ಬದಲಾಯಿಸಿದೆ. 16 ಉಪಗ್ರಹಗಳನ್ನು ಹೊತ್ತೊಯ್ದಿದ್ದ ಈ ರಾಕೆಟ್‌ನ ದತ್ತಾಂಶವನ್ನು ಇಸ್ರೋ ವಿಶ್ಲೇಷಿಸುತ್ತಿದೆ. ಡಿಆರ್​ಡಿಒ ನಿರ್ಮಿತ ಅನ್ವೇಷ ಉಪಗ್ರಹ ಸೇರಿದಂತೆ ಈ ವರ್ಷದ ಇಸ್ರೋದ ಮೊದಲ ಉಡಾವಣೆ ಇದಾಗಿದೆ. ಬೆಳಗ್ಗೆ 10:17ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ…

Read More

ಟೀಮ್ ಇಂಡಿಯಾದಿಂದ ಮತ್ತೋರ್ವ ಆಟಗಾರ ಔಟ್..!

India vs New Zealand: ನ್ಯೂಝಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದ ಗೆಲುವಿನ ಬೆನ್ನಲ್ಲೇ ಟೀಮ್ ಇಂಡಿಯಾಗೆ ಆಘಾತ ಎದುರಾಗಿದೆ. ತಂಡದಲ್ಲಿದ್ದ ಪ್ರಮುಖ ಆಲ್​ರೌಂಡರ್ ಗಾಯಗೊಂಡು ಇದೀಗ ಇಡೀ ಸರಣಿಯಿಂದಲೇ ಹೊರಬಿದ್ದಿದ್ದಾರೆ. ವಡೋದರಾದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಕಣಕ್ಕಿಳಿದಿದ್ದ ವಾಷಿಂಗ್ಟನ್ ಸುಂದರ್ ಗಾಯಗೊಂಡಿದ್ದರು. ಹೀಗಾಗಿ ಬೌಲಿಂಗ್ ವೇಳೆ ಅರ್ಧದಲ್ಲೇ ಮೈದಾನ ತೊರೆದಿದ್ದರು. ಇದಾಗ್ಯೂ ಅವರು ಬ್ಯಾಟಿಂಗ್​ಗೆ ಆಗಮಿಸಿದ್ದರು. ಇದೀಗ ಸುಂದರ್ ಅವರ ಗಾಯದ ವೈದ್ಯಕೀಯ ವರದಿ ಬಂದಿದೆ. ಸ್ಕ್ಯಾನಿಂಗ್​ ರಿಪೋರ್ಟ್​ನಲ್ಲಿ ವಾಷಿಂಗ್ಟನ್ ಸುಂದರ್​ ಅವರ ಪೆಕ್ಕೆಲುಬಿನಲ್ಲಿ…

Read More

ಬಿಗ್ ಬಾಸ್: ಮಂಗಳವಾರ ಸಂಜೆವರೆಗೆ ಮಾತ್ರ ವೋಟ್ ಹಾಕಲು ಅವಕಾಶ – Kannada News | Bigg Boss Kannada Season 12 Voting Lines open for mid week elimination

‘ಬಿಗ್ ಬಾಸ್ ಕನ್ನಡ’ 12ನೇ (BBK 12) ಸೀಸನ್​ನ ಕೊನೆಯ ವಾರ ಬಂದಿದೆ. ಈಗ ದೊಡ್ಮನೆಯಲ್ಲಿ ಉಳಿದುಕೊಂಡಿರೋದು ಕೇವಲ ಏಳು ಜನರು ಮಾತ್ರ. ರಾಶಿಕಾ ಶೆಟ್ಟಿ ಅವರು ಎಲಿಮಿನೇಟ್ ಆಗಿ ಹೊರ ಹೋಗಿದ್ದಾರೆ.ಈಗ ಜಿಯೋ ಹಾಟ್​ಸ್ಟಾರ್​​ನಲ್ಲಿ ವೋಟ್ ಹಾಕಲು ಅವಕಾಶ ನಿಡಲಾಗಿದೆ. ಈ ವೋಟಿಂಗ್ ಲೈನ್ ಜನವರಿ 13ರ ಸಂಜೆವರೆಗೆ ತೆರೆದಿರಲಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಈಗ ರಕ್ಷಿತಾ ಶೆಟ್ಟಿ, ಗಿಲ್ಲಿ ನಟ, ಕಾವ್ಯಾ ಶೈವ, ಧನುಶ್, ಧ್ರುವಂತ್, ರಘು ಹಾಗೂ ಅಶ್ವಿನಿ ಗೌಡ…

Read More

ಮೆಟ್ರೋ ಪ್ರಯಾಣಿಕರಿಗೆ ಶಾಕಿಂಗ್​​ ಸುದ್ದಿ: ಫೆಬ್ರವರಿಯಿಂದ ಟಿಕೆಟ್​​ ದರ ಹೆಚ್ಚಳ? – Kannada News | Bangalore Metro Fare Hike: Namma Metro Ticket Prices to Rise in Feb 2025?

ಬೆಂಗಳೂರು, ಜನವರಿ 12: ನೀವು ಮೆಟ್ರೋ ಪ್ರಿಯರಾ? ಪ್ರತಿನಿತ್ಯ ಅವುಗಳಲ್ಲೇ ಓಡಾಡ್ತೀರಾ? ಹಾಗಿದ್ರೆ ಹೆಚ್ಚಿನ ದರ ನೀಡಲು ಸಿದ್ಧರಾಗಿ. ಹೌದು, ಫೆಬ್ರವರಿಯಿಂದ ನಮ್ಮ ಮೆಟ್ರೋ ರೈಲುಗಳ ಪ್ರಯಾಣದರ ಏರಿಕೆ ಸಾಧ್ಯತೆ ಇದೆ. ಮೆಟ್ರೋ ಟಿಕೆಟ್​​ ದರವನ್ನು ಪ್ರತಿವರ್ಷ ಗರಿಷ್ಠ ಶೇ.5ರಷ್ಟು ಹೆಚ್ಚಿಸಲು ಫೇರ್​​ ಫಿಕ್ಸೇಶನ್​​ ಕಮಿಟಿ (FFC) ಶಿಫಾರಸ್ಸು ಮಾಡಿರುವ ಕಾರಣ, ದಿನನಿತ್ಯದ ಪ್ರಯಾಣಕ್ಕೆ ಮೆಟ್ರೋ ರೈಲು ಅವಲಂಬಿಸಿರುವವರಿಗೆ ಮತ್ತಷ್ಟು ಹೊರೆಯಾಗುವ ಸಾಧ್ಯತೆ ಇದೆ. 2025ರ ಫೆಬ್ರವರಿಯಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ದರಗಳನ್ನು…

Read More

ಬಳ್ಳಾರಿ ಗಲಭೆ: ರೆಡ್ಡಿ ಬೆನ್ನಿಗೆ ನಿಂತ ಬಿಜೆಪಿ ಹೈಕಮಾಂಡ್, ದೆಹಲಿಯಿಂದ ಬಂತು ಮಹತ್ವದ ಸೂಚನೆ – Kannada News | Ballari Clash: BJP High Command Backs Janardhana Reddy, Issues Key Directions from Delhi

ಬೆಂಗಳೂರು, ಜನವರಿ 12: ಬಳ್ಳಾರಿಯಲ್ಲಿ (Ballari) ನಡೆದ ಗಲಭೆಗೆ ಸಂಬಂಧಿಸಿದ ಮಾಹಿತಿ ಬಿಜೆಪಿ (BJP) ಕಾರ್ಯಾಧ್ಯಕ್ಷ ನಿತಿನ್ ನಬಿನ್ ಅವರಿಗೆ ತಲುಪಿದ್ದು, ಅವರು ಈ ಪ್ರಕರಣದ ಕುರಿತು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ದೂರವಾಣಿ ಮೂಲಕ ಕರೆ ಮಾಡಿ ಮಾತನಾಡಿದ್ದಾರೆ. ದೂರವಾಣಿ ಸಂಭಾಷಣೆಯಲ್ಲಿ ನಿತಿನ್ ನಬಿನ್ ಪ್ರಕರಣದ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲದೆ, ಇದು ಗಂಭೀರ ವಿಚಾರವಾಗಿದ್ದು ಹೈಕಮಾಂಡ್ ನಿಮ್ಮ ಜತೆಗಿರಲಿದೆ ಎಂದು ಅಭಯ ನೀಡಿದ್ದಾರೆ ಎಂದು ತಿಳಿದುಬಂದಿದೆ. ಜರ್ನಾದನ ರೆಡ್ಡಿ ಜತೆ ನಿತಿನ್ ನಬಿನ್…

Read More

ಬೆಂಗಳೂರು: ಧರ್ಮಸ್ಥಳ ಸಂಘಕ್ಕೆ ಕಟ್ಟಲು ಇಟ್ಟಿದ್ದ 200 ರೂ. ಹಣವನ್ನು ತೆಗೆದ ಗಂಡ, ಬೇಸರದಿಂದ ಪತ್ನಿ ಆತ್ಮಹತ್ಯೆ – Kannada News | Bengaluru Tragedy: Byadarahalli Woman’s Suicide Sparks Financial Stress Debate

ಬೆಂಗಳೂರು, ಜ.12: ಬೆಂಗಳೂರಿನಿಂದ (Bengaluru) 30 ಕಿ.ಲೋ ದೂರದಲ್ಲಿರುವ ಬ್ಯಾಡರಹಳ್ಳಿ ಗ್ರಾಮದಲ್ಲಿ ಒಂದು ಅಘಾತಕಾರಿ​​ ಘಟನೆಯೊಂದು ನಡೆದಿದೆ. ಸುಂದರ ಕುಟುಂಬದಲ್ಲಿ ಕತ್ತಲೆ ಆವರಿಸಿದೆ. ಮನೆಗೆ ಬೆಳಕಾಗಿದ್ದ ಮನೆಯ ಯಜಮಾನಿಯ ತಪ್ಪು ನಿರ್ಧಾರದಿಂದ, ಗಂಡ, ಮಕ್ಕಳು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದೆ. ಇದೀಗ ಈ ಘಟನೆಯಿಂದ ಮನೆಯವರು ಮಾತ್ರವಲ್ಲದೆ ಇಡೀ ಗ್ರಾಮವೂ ಕೂಡ ಮರುಗಿದೆ. 200 ರೂ.ಗಾಗಿ ಸಣ್ಣ ಜಗಳದಿಂದ ಶುರುವಾಗಿ ಸಾವಿನಲ್ಲಿ ಕೊನೆಯಾಗಿದೆ. 30 ವರ್ಷದ ಮಹಿಳೆಯೊಬ್ಬರು ತನ್ನ ಮನೆಯೊಳಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ನಡೆದಿದೆ. ಎರಡು ಮಕ್ಕಳ…

Read More

Gold Rate Today Bangalore: 13,000 ರೂ ದಾಟಿದ 22 ಕ್ಯಾರಟ್ ಚಿನ್ನದ ಬೆಲೆ – Kannada News | Gold Price Today on 12th January 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಜನವರಿ 12: ಜಾಗತಿಕವಾಗಿ ಅನಿಶ್ಚಿತ ರಾಜಕೀಯ ವಾತಾವರಣ ತೀವ್ರಗೊಂಡಷ್ಟೂ ಚಿನ್ನ, ಬೆಳ್ಳಿಯಂತಹ ಅಮೂಲ್ಯ ಲೋಹಗಳಿಗೆ ಬೇಡಿಕೆ ಹೆಚ್ಚುತ್ತಲೇ ಇದೆ. ಇಂದು ಸೋಮವಾರ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಹೆಚ್ಚಿವೆ. ಆಭರಣ ಚಿನ್ನದ ಬೆಲೆ (Gold Rate) 13,000 ರೂ ಗಡಿ ದಾಟಿದೆ. ಆದರೆ, ವಿದೇಶಗಳಲ್ಲಿ ಹೆಚ್ಚಿನ ಕಡೆ ಬೆಲೆ ಯಥಾಸ್ಥಿತಿಯಲ್ಲಿದೆ. ಇನ್ನು, ಬೆಳ್ಳಿ ಬೆಲೆಯ ನಾಗಾಲೋಟ ಮುಂದುವರಿಯುತ್ತಿದೆ. ಸೋಮವಾರದ ಇದರ ಬೆಲೆ 10-12 ರೂ ಹೆಚ್ಚಿದೆ. ಚೆನ್ನೈ ಮೊದಲಾದ ಕಡೆ ಬೆಲೆ 287 ರೂ ತಲುಪಿದ್ದು,…

Read More

Video: ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಪ್ರಧಾನಿ ಮೋದಿ – Kannada News | From Talks to Tails: Modi and Germany’s Chancellor Share a Kite Moment in Ahmedabad

ಅಹಮದಾಬಾದ್, ಜನವರಿ 12: ಪ್ರಧಾನಿ ನರೇಂದ್ರ ಮೋದಿ ಇಂದು ಅಹಮದಾಬಾದಿನಲ್ಲಿರುವ ಸಬರಮತಿ ಆಶ್ರಮದಲ್ಲಿ ನಡೆಯುತ್ತಿರುವ ಗಾಳಿಪಟ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಜರ್ಮನ್ ಚಾನ್ಸೆಲರ್ ಫೆಡ್ರಿಕ್ ಮೆರ್ಜ್​ ಅವರೊಂದಿಗೆ ಗಾಳಿಪಟ ಹಾರಿಸಿದರು. ಆಶ್ರಮಕ್ಕೆ ಆಗಮಿಸಿದ ನಂತರ, ಇಬ್ಬರೂ ನಾಯಕರು ರಾಷ್ಟ್ರಪಿತ ಮಹಾತ್ಮ ಗಾಂಧಿಯವರಿಗೆ ಪುಷ್ಪ ನಮನ ಸಲ್ಲಿಸಿದರು. ಮೆರ್ಜ್ ಅಲ್ಲಿನ ಸಂದರ್ಶಕರ ಪುಸ್ತಕದಲ್ಲಿ ಸಹಿ ಹಾಕಿದರು. ನಂತರ ಇಬ್ಬರೂ ನಾಯಕರು ಸಬರಮತಿ ನದಿ ದಂಡೆಯಲ್ಲಿ ನಡೆದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ 2026 ರಲ್ಲಿ ಭಾಗವಹಿಸಿದ್ದಾರೆ. ಗುಜರಾತ್‌ನ ಗೌರವಾನ್ವಿತ ರಾಜ್ಯಪಾಲ ಆಚಾರ್ಯ…

Read More