Category Archives: Blog

Your blog category

ಬಾಂಗ್ಲಾದೇಶದ ಪ್ರಜೆ ಎಂದು ಆರೋಪಿಸಿ ಕಾರ್ಮಿಕನ ಮೇಲೆ ಮಾರಣಾಂತಿಕ ಹಲ್ಲೆ! – Kannada News | Mangaluru: A fatal attack on a laborer accused of being a Bangladeshi citizen! FIR Filed Against Four Youths

ಬಾಂಗ್ಲಾದೇಶದ ಪ್ರಜೆ ಎಂದು ಆರೋಪಿಸಿ ಕಾರ್ಮಿಕನ ಮೇಲೆ ಮಾರಣಾಂತಿಕ ಹಲ್ಲೆ!

ಮಂಗಳೂರು, ಜನವರಿ 12: ನಗರದ ಕಾವೂರು ಪ್ರದೇಶದಲ್ಲಿ ಬಾಂಗ್ಲಾದೇಶದ ಪ್ರಜೆ ಎಂದು ಆರೋಪಿಸಿ ಕಾರ್ಮಿಕನ ಮೇಲೆ ನಾಲ್ವರು ಯುವಕರು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಿನ್ನೆ (ಜ.11) ಸಂಜೆ ನಡೆದಿದೆ. ಜಾರ್ಖಂಡ್ ಮೂಲದ ಕಾರ್ಮಿಕ ದಿಲ್ಶಾನ್ ಅನ್ಸಾರಿಯನ್ನು ತಡೆದು ಥಳಿಸಿರುವ ಆರೋಪಿಗಳ ಮೇಲೆ FIR ಆಗಿದೆ.

ದಾಖಲೆ ತೋರಿಸುವಂತೆ ಒತ್ತಾಯ

ದಿಲ್ಶಾನ್ ಅನ್ಸಾರಿ ಕಳೆದ 10–15 ವರ್ಷಗಳಿಂದ ವರ್ಷಕ್ಕೆ 4–5 ತಿಂಗಳುಗಳ ಕಾಲ ಮಂಗಳೂರಿನಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ನಿನ್ನೆ ಸಂಜೆ ಕಾವೂರಿನ ಬಳಿ ಸ್ಥಳೀಯರಾದ ಸಾಗರ್, ಧನುಷ್, ಲಾಲು ಅಲಿಯಾಸ್ ರತೀಶ್ ಹಾಗೂ ಮೋಹನ್ ಎಂಬ ನಾಲ್ವರು ಯುವಕರು ದಿಲ್ಶಾನ್​ನನ್ನು ತಡೆದು ನಿಲ್ಲಿಸಿ, ತಾನು ಭಾರತೀಯ ಪ್ರಜೆ ಎಂಬುದಕ್ಕೆ ದಾಖಲೆ ತೋರಿಸುವಂತೆ ಒತ್ತಾಯಿಸಿದ್ದಾರೆ. ದಿಲ್ಶಾನ್ ತಕ್ಷಣ ದಾಖಲೆ ತೋರಿಸದ ಹಿನ್ನೆಲೆಯಲ್ಲಿ ಆರೋಪಿಗಳು ಆತನ ಮೇಲೆ ತಲೆಗೆ ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ. ಪರಿಣಾಮವಾಗಿ ದಿಲ್ಶಾನ್ ಅವರ ತಲೆಗೆ ತೀವ್ರ ಗಾಯಗಳಾಗಿದ್ದು, ರಕ್ತಸ್ರಾವ ಉಂಟಾಗಿದೆ.

ನಾಲ್ವರ ವಿರುದ್ಧ FIR

ಹಲ್ಲೆಯ ವೇಳೆ ಸ್ಥಳದಲ್ಲಿದ್ದ ಒಬ್ಬ ಹಿಂದು ಮಹಿಳೆ ಮಧ್ಯ ಪ್ರವೇಶಿಸಿ ದಿಲ್ಶಾನ್ ಅವರನ್ನು ರಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ. ಹಲ್ಲೆಯ ಬಳಿಕ ದಿಲ್ಶಾನ್ ಮನೆಗೆ ತೆರಳಿದ್ದು, ನಂತರ ಕಾವೂರು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದು, ನಾಪತ್ತೆಯಾಗಿರುವ ನಾಲ್ವರು ಆರೋಪಿಗಳ ಪತ್ತೆಗೆ ಶೋಧ ಕಾರ್ಯ ನಡೆಸುತ್ತಿದ್ದಾರೆ. ಈ ಘಟನೆ ಕುರಿತು ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಸ್ಪಷ್ಟನೆ ನೀಡಿದ್ದು, ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರ ನಿಧಿಯೋ? ಪೂರ್ವಜರ ಆಸ್ತಿಯೋ?, ಗ್ರಾಮಸ್ಥರಲ್ಲಿ ಗೊಂದಲ – Kannada News | Lakkundi Gold Discovery Sparks Confusion: Villagers Demand Clarity from District Collector

ಗದಗ, ಜನವರಿ 12: ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಚಿನ್ನ ಪತ್ತೆಯಾದ ಪ್ರಕರಣದಲ್ಲಿ ಹಲವು ಗೊಂದಲಗಳು ಉಂಟಾಗಿವೆ. ಮನೆ ನಿರ್ಮಾಣದ ಅಡಿಪಾಯದ ಕೆಲಸದ ವೇಳೆ ಸುಮಾರು 1 ಕೆ.ಜಿ. ಚಿನ್ನ ಪತ್ತೆಯಾದ ಬಳಿಕ, ಪುರಾತತ್ವ ಇಲಾಖೆಯ ಅಧಿಕಾರಿಗಳು ಇದು ನಿಧಿ ಅಲ್ಲ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಬೆನ್ನಲ್ಲೇ ಇದು ನಿಧಿ ಅಲ್ಲದಿದ್ದರೆ ನಮ್ಮ ಬಂಗಾರ ನಮಗೆ ವಾಪಸ್ ಕೊಡಿ ಎಂದು ಕುಟುಂಬಸ್ಥರು ಆಗ್ರಹಿಸುತ್ತಿದ್ದಾರೆ. ಈ ವಿಷಯ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದರೂ ಜಿಲ್ಲಾಡಳಿತ, ವಿಶೇಷವಾಗಿ ಗದಗ ಜಿಲ್ಲಾಧಿಕಾರಿಗಳು ಈವರೆಗೂ ಗ್ರಾಮಕ್ಕೆ ಭೇಟಿ ನೀಡಿಲ್ಲ ಅಥವಾ ಈ ಬಗ್ಗೆ ಸ್ಪಷ್ಟನೆ ನೀಡಿಲ್ಲ ಎನ್ನಲಾಗಿದೆ. ಇದರಿಂದಾಗಿ ಗ್ರಾಮಸ್ಥರು ಆಕ್ರೋಶಗೊಂಡಿದ್ದು, ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಇದು ನಿಧಿಯೋ ಅಥವಾ ಪೂರ್ವಜರ ಆಸ್ತಿಯೋ ಎಂಬುದನ್ನು ತಿಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

PSLV-C62: 16 ಉಪಗ್ರಹಗಳನ್ನು ಹೊತ್ತು ಹೊರಟಿದ್ದ ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ – Kannada News | ISRO PSLV C62 Launch: Anomaly Detected in Third Stage, Data Analysis Underway

ಶ್ರೀಹರಿಕೋಟ, ಜನವರಿ 12: ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 16 ಉಪಗ್ರಹಗಳನ್ನು ಹೊತ್ತು ಹೊರಟಿದ್ದ PSLV-C62 ರಾಕೆಟ್​ನಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಇಸ್ರೋದ ಮಹತ್ವಾಕಾಂಕ್ಷೆಯ ಪಿಎಸ್‌ಎಲ್‌ವಿ ಸಿ-62 ರಾಕೆಟ್ ಉಡಾವಣೆಯ ಮೂರನೇ ಹಂತದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ರಾಕೆಟ್ ಪಥ ಬದಲಾಯಿಸಿದೆ.

16 ಉಪಗ್ರಹಗಳನ್ನು ಹೊತ್ತೊಯ್ದಿದ್ದ ಈ ರಾಕೆಟ್‌ನ ದತ್ತಾಂಶವನ್ನು ಇಸ್ರೋ ವಿಶ್ಲೇಷಿಸುತ್ತಿದೆ. ಡಿಆರ್​ಡಿಒ ನಿರ್ಮಿತ ಅನ್ವೇಷ ಉಪಗ್ರಹ ಸೇರಿದಂತೆ ಈ ವರ್ಷದ ಇಸ್ರೋದ ಮೊದಲ ಉಡಾವಣೆ ಇದಾಗಿದೆ. ಬೆಳಗ್ಗೆ 10:17ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆಗೊಂಡ ಈ ರಾಕೆಟ್ 16 ಉಪಗ್ರಹಗಳನ್ನು ಹೊತ್ತೊಯ್ಯುತ್ತಿತ್ತು. ಡಿಆರ್‌ಡಿಒ ನಿರ್ಮಿತ ಅನ್ವೇಷ ಹೆಸರಿನ ಭೂ ವೀಕ್ಷಣಾ ಉಪಗ್ರಹ (EOS-N) ಮತ್ತು ವಿವಿಧ ದೇಶಗಳಿಗೆ ಸೇರಿದ ಒಟ್ಟು 15 ಉಪಗ್ರಹಗಳು ಈ ರಾಕೆಟ್‌ನಲ್ಲಿ ಅಂತರಿಕ್ಷಕ್ಕೆ ಸೇರ್ಪಡೆಯಾಗಬೇಕಿತ್ತು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಟೀಮ್ ಇಂಡಿಯಾದಿಂದ ಮತ್ತೋರ್ವ ಆಟಗಾರ ಔಟ್..!

Source link

ಬಿಗ್ ಬಾಸ್: ಮಂಗಳವಾರ ಸಂಜೆವರೆಗೆ ಮಾತ್ರ ವೋಟ್ ಹಾಕಲು ಅವಕಾಶ – Kannada News | Bigg Boss Kannada Season 12 Voting Lines open for mid week elimination

‘ಬಿಗ್ ಬಾಸ್ ಕನ್ನಡ’ 12ನೇ (BBK 12) ಸೀಸನ್​ನ ಕೊನೆಯ ವಾರ ಬಂದಿದೆ. ಈಗ ದೊಡ್ಮನೆಯಲ್ಲಿ ಉಳಿದುಕೊಂಡಿರೋದು ಕೇವಲ ಏಳು ಜನರು ಮಾತ್ರ. ರಾಶಿಕಾ ಶೆಟ್ಟಿ ಅವರು ಎಲಿಮಿನೇಟ್ ಆಗಿ ಹೊರ ಹೋಗಿದ್ದಾರೆ.ಈಗ ಜಿಯೋ ಹಾಟ್​ಸ್ಟಾರ್​​ನಲ್ಲಿ ವೋಟ್ ಹಾಕಲು ಅವಕಾಶ ನಿಡಲಾಗಿದೆ. ಈ ವೋಟಿಂಗ್ ಲೈನ್ ಜನವರಿ 13ರ ಸಂಜೆವರೆಗೆ ತೆರೆದಿರಲಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಈಗ ರಕ್ಷಿತಾ ಶೆಟ್ಟಿ, ಗಿಲ್ಲಿ ನಟ, ಕಾವ್ಯಾ ಶೈವ, ಧನುಶ್, ಧ್ರುವಂತ್, ರಘು ಹಾಗೂ ಅಶ್ವಿನಿ ಗೌಡ ಇದ್ದಾರೆ. ಇವರ ಪೈಕಿ ಧನುಶ್ ನೇರವಾಗಿ ಟಾಪ್ 6ಕ್ಕೆ ಏರಿದ್ದಾರೆ. ಉಳಿದಿರೋದು ಆರು ಮಂದಿ ಮಾತ್ರ. ಅವರೆಲ್ಲರೂ ನೇರವಾಗಿ ನಾಮಿನೇಟ್ ಆಗಿದ್ದಾರೆ.

ಈ ಆರು ಮಂದಿ ಪೈಕಿ ಒಬ್ಬರು ಈ ವಾರ ಮನೆಯಿಂದ ಹೊರಕ್ಕೆ ಹೋಗಲಿದ್ದಾರೆ. ಮಂಗಳವಾರ ರಾತ್ರಿ ಎಲಿಮಿನೇಷನ್ ನಡೆಯಲಿದ್ದು, ಬುಧವಾರದ ಎಪಿಸೋಡ್​​ನಲ್ಲಿ ಇದು ಪ್ರಸಾರ ಕಾಣುವ ಸಾಧ್ಯತೆ ಇದೆ. ಅವರು ಯಾರು ಎನ್ನುವ ಪ್ರಶ್ನೆ ಮೂಡಿದೆ.

ಸದ್ಯ ವೋಟಿಂಗ್​ ಲೈನ್ ಓಪನ್ ಆಗಿದ್ದು, ರಕ್ಷಿತಾ ಶೆಟ್ಟಿ, ಗಿಲ್ಲಿ ನಟ, ಕಾವ್ಯಾ ಶೈವ, ಧ್ರುವಂತ್, ರಘು ಹಾಗೂ ಅಶ್ವಿನಿ ಗೌಡ ಹೆಸರು ಇದೆ. ಇವರಿಗೆ ವೋಟ್ ಮಾಡಬೇಕು. ಮಂಗಳವಾರ ಸಂಜೆ 6 ಗಂಟೆವರೆಗೆ ಮಾತ್ರ ವೋಟ್ ಮಾಡಲು ಅವಕಾಶ ಇದೆ.

ಇದನ್ನೂ ಓದಿ: ಬಿಗ್ ಬಾಸ್​ಗೆ ಮರಳಿದ ಮಲ್ಲಮ್ಮ; ಅಟ್ಯಾಚ್​​ಮೆಂಟ್ ಈಗ ಉಳಿದಿಲ್ಲ ಎಂದ ಧ್ರುವಂತ್

ಹಾಗಂದ ಮಾತ್ರಕ್ಕೆ ಈ ಮತಗಳನ್ನು ಫಿನಾಲೆಗೆ ಪರಿಗಣಿಸೋದಿಲ್ಲ. ಈ ಮತಗಳು ಪರಿಗಣನೆಗೆ ಬರೋದು ಕೇವಲ ಮಧ್ಯವಾರದ ಎಲಿಮಿನೇಷನ್​ಗೆ ಮಾತ್ರ. ಆ ಬಳಿಕ ಬುಧವಾರ ರಾತ್ರಿ ಫಿನಾಲೆ ವಾರಕ್ಕೆ ವೋಟಿಂಗ್ ಲೈನ್ ಆರಂಭ ಆಗುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮೆಟ್ರೋ ಪ್ರಯಾಣಿಕರಿಗೆ ಶಾಕಿಂಗ್​​ ಸುದ್ದಿ: ಫೆಬ್ರವರಿಯಿಂದ ಟಿಕೆಟ್​​ ದರ ಹೆಚ್ಚಳ? – Kannada News | Bangalore Metro Fare Hike: Namma Metro Ticket Prices to Rise in Feb 2025?

ಬೆಂಗಳೂರು, ಜನವರಿ 12: ನೀವು ಮೆಟ್ರೋ ಪ್ರಿಯರಾ? ಪ್ರತಿನಿತ್ಯ ಅವುಗಳಲ್ಲೇ ಓಡಾಡ್ತೀರಾ? ಹಾಗಿದ್ರೆ ಹೆಚ್ಚಿನ ದರ ನೀಡಲು ಸಿದ್ಧರಾಗಿ. ಹೌದು, ಫೆಬ್ರವರಿಯಿಂದ ನಮ್ಮ ಮೆಟ್ರೋ ರೈಲುಗಳ ಪ್ರಯಾಣದರ ಏರಿಕೆ ಸಾಧ್ಯತೆ ಇದೆ. ಮೆಟ್ರೋ ಟಿಕೆಟ್​​ ದರವನ್ನು ಪ್ರತಿವರ್ಷ ಗರಿಷ್ಠ ಶೇ.5ರಷ್ಟು ಹೆಚ್ಚಿಸಲು ಫೇರ್​​ ಫಿಕ್ಸೇಶನ್​​ ಕಮಿಟಿ (FFC) ಶಿಫಾರಸ್ಸು ಮಾಡಿರುವ ಕಾರಣ, ದಿನನಿತ್ಯದ ಪ್ರಯಾಣಕ್ಕೆ ಮೆಟ್ರೋ ರೈಲು ಅವಲಂಬಿಸಿರುವವರಿಗೆ ಮತ್ತಷ್ಟು ಹೊರೆಯಾಗುವ ಸಾಧ್ಯತೆ ಇದೆ.

2025ರ ಫೆಬ್ರವರಿಯಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ದರಗಳನ್ನು ಭಾರಿ ಪ್ರಮಾಣದಲ್ಲಿ ಪರಿಷ್ಕರಿಸಿತ್ತು. ಕೆಲ ಮಾರ್ಗಗಳಲ್ಲಿ ಶೇ.71ರಷ್ಟು ದರ ಹೆಚ್ಚಿಸಿ ಒಂದು ವರ್ಷ ಇನ್ನೇನು ಕಳೆಯುತ್ತಿದೆ. ಈ ಹೊತ್ತಲ್ಲಿ ಬಿಎಂಆರ್​​ಸಿಎಲ್​​ ಮತ್ತೊಂದು ಶಾಕ್​​ ಕೊಡುತ್ತಾ ಎನ್ನವ ಪ್ರಶ್ನೆಯೀಗ ಉದ್ಭವಿಸಿದೆ. ಈಗಿರುವ ದರಗಳಿಂದಲೇ ನಮ್ಮ ಮೆಟ್ರೋ ದೇಶದಲ್ಲೇ ಅತ್ಯಂತ ದುಬಾರಿ ಮೆಟ್ರೋ ವ್ಯವಸ್ಥೆ ಎನಿಸಿಕೊಂಡಿದೆ. ಈ ನಡುವೆ ಮತ್ತೆ ದರ ಏರಿಕೆಯಾದಲ್ಲಿ ಪ್ರಯಾಣಿಕರ ಜೇಬಿಗೆ ಮತ್ತಷ್ಟು ಕತ್ತರಿ ಬೀಳೋದು ಗ್ಯಾರಂಟಿ.

ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಡಬಲ್​​ ಗುಡ್​​ನ್ಯೂಸ್​​

ಪ್ರತಿವರ್ಷ ನಮ್ಮ ಮೆಟ್ರೋ ರೈಲುಗಳ ಟಿಕೆಟ್​​ ದರ ಪರಿಷ್ಕರಣೆಗೆ ಪ್ರಯಾಣಿಕರಿಂದ ತಿವ್ರ ಆಕ್ಷೇಪ ವ್ಯಕ್ತವಾಗಿದೆ. ಸಾರ್ವಜನಿಕ ಸಾರಿಗೆ ಸಾಮಾನ್ಯ ನಾಗರಿಕರ ಕೈಗೆಟಕದಂತಾಗುತ್ತಿದೆ. ಮೆಟ್ರೋ ಪ್ರಯಾಣ ಅಗ್ಗವಾಗಿರಬೇಕು, ಐಷಾರಾಮಿ ಸೇವೆಯಾಗಬಾರದು ಎಂದು ದಿನನಿತ್ಯದ ಪ್ರಯಾಣಿಕರು ಅಭಿಪ್ರಾಯಪಟ್ಟಿದ್ದಾರೆ. ಮತ್ತೆ ಟಿಕೆಟ್​​ ದರ ಹೆಚ್ಚಳವಾದ್ರೆ ಇದು ಗಾಯದ ಮೇಲೆ ಉಪ್ಪು ಎರಚಿದಂತೆ ಎಂದು ಮತ್ತೊಬ್ಬರು ಹೇಳಿದ್ದಾರೆ. ತುಂಬಿ ತುಳುಕುತ್ತಿರುವ ರೈಲುಗಳು, ಆಮೆ ಗತಿಯಲ್ಲಿ ಸಾಗುತ್ತಿರುವ ಹೊಸ ಮೆಟ್ರೋ ರೈಲು ಮಾರ್ಗಗಳ ನಿರ್ಮಾಣದ ನಡುವೆ ದರ ಏರಿಕೆ ಮಾತ್ರ ಆಗುತ್ತಲೇ ಇರುವುದು ಪ್ರಯಾಣಿಕರನ್ನುಕೆರಳಿಸಿದೆ.

ಮೆಟ್ರೋ ಸೇವೆ ಅಗ್ಗವಲ್ಲದೇ ಇರಬಹುದು, ಆದರೆ ರೈಲುಗಳು ಸಾಮರ್ಥ್ಯಕ್ಕಿಂತ ಹೆಚ್ಚಾಗಿ ತುಂಬಿ ಓಡಾಡುವಾಗ ಇದನ್ನು ಐಷಾರಾಮಿ ಸೇವೆ ಎಂದು ಕರೆಯುವುದು ಹಾಸ್ಯಾಸ್ಪದ. ಈಗಾಗಲೇ ಸುಮಾರು ಶೇ. 32ರಷ್ಟು ಹೆಚ್ಚುವರಿ ಹಣವನ್ನು ಪ್ರಯಾಣಿಕರು ಪಾವತಿಸುತ್ತಿದ್ದಾರೆ. ಅನ್ಯಾಯಕರ ದರಗಳನ್ನು ಮೌನವಾಗಿ ಒಪ್ಪಿಕೊಳ್ಳುತ್ತಿರುವುದೇ ಮತ್ತೊಮ್ಮೆ ದರ ಏರಿಕೆಗೆ ಬಿಎಂಆರ್‌ಸಿಎಲ್‌ಗೆ ಧೈರ್ಯ ನೀಡುತ್ತಿದೆ. ಮೆಟ್ರೋಗೆ ಹೆಚ್ಚು ಹಣ ಕೊಡಿ, ಇಲ್ಲವೇ ಟ್ರಾಫಿಕ್‌ನಲ್ಲಿ ಗಂಟೆಗಳ ಕಾಲ ಸಿಲುಕಿರಿ ಎಂಬ ಸ್ಥಿತಿ ಸದ್ಯ ಬೆಂಗಳೂರಲ್ಲಿದ್ದು, ಇವೆರಡು ಸನ್ನಿವೇಶಗಳಲ್ಲಿಯೂ ಬೆಲೆ ತೆರುತ್ತಿರೋದು ಮಾತ್ರ ಸಾರ್ವಜನಿಕರೇ ಎಂದು ಪ್ರಯಾಣಿಕರು ಕಿಡಿ ಕಾರಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬಳ್ಳಾರಿ ಗಲಭೆ: ರೆಡ್ಡಿ ಬೆನ್ನಿಗೆ ನಿಂತ ಬಿಜೆಪಿ ಹೈಕಮಾಂಡ್, ದೆಹಲಿಯಿಂದ ಬಂತು ಮಹತ್ವದ ಸೂಚನೆ – Kannada News | Ballari Clash: BJP High Command Backs Janardhana Reddy, Issues Key Directions from Delhi

ಬೆಂಗಳೂರು, ಜನವರಿ 12: ಬಳ್ಳಾರಿಯಲ್ಲಿ (Ballari) ನಡೆದ ಗಲಭೆಗೆ ಸಂಬಂಧಿಸಿದ ಮಾಹಿತಿ ಬಿಜೆಪಿ (BJP) ಕಾರ್ಯಾಧ್ಯಕ್ಷ ನಿತಿನ್ ನಬಿನ್ ಅವರಿಗೆ ತಲುಪಿದ್ದು, ಅವರು ಈ ಪ್ರಕರಣದ ಕುರಿತು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ದೂರವಾಣಿ ಮೂಲಕ ಕರೆ ಮಾಡಿ ಮಾತನಾಡಿದ್ದಾರೆ. ದೂರವಾಣಿ ಸಂಭಾಷಣೆಯಲ್ಲಿ ನಿತಿನ್ ನಬಿನ್ ಪ್ರಕರಣದ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲದೆ, ಇದು ಗಂಭೀರ ವಿಚಾರವಾಗಿದ್ದು ಹೈಕಮಾಂಡ್ ನಿಮ್ಮ ಜತೆಗಿರಲಿದೆ ಎಂದು ಅಭಯ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಜರ್ನಾದನ ರೆಡ್ಡಿ ಜತೆ ನಿತಿನ್ ನಬಿನ್ ಹೇಳಿದ್ದೇನು?

ಜರ್ನಾದನ ರೆಡ್ಡಿ ಮಾತನಾಡಿದ ನಿತಿನ್ ನಬಿನ್, ಪ್ರಕರಣ ಅತ್ಯಂತ ಗಂಭೀರವಾಗಿದೆ. ಯಾವುದೇ ರೀತಿಯ ಹೋರಾಟ ನಡೆಸಲು ಬಿಜೆಪಿ ರಾಷ್ಟ್ರೀಯ ನಾಯಕತ್ವದ ಸಂಪೂರ್ಣ ಬೆಂಬಲ ಇದೆ ಎಂದು ಭರವಸೆ ನೀಡಿದ್ದಾರೆ. ಅಗತ್ಯವಿದ್ದಲ್ಲಿ ಈ ವಿಷಯವನ್ನು ರಾಷ್ಟ್ರೀಯ ಮಟ್ಟದಲ್ಲೂ ಪ್ರಸ್ತಾಪ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ ಎನ್ನಲಾಗಿದೆ.

ಪಾದಯಾತ್ರೆ ಸೇರಿದಂತೆ ಹೋರಾಟದ ರೂಪುರೇಷೆಗಳ ಕುರಿತು ರಾಜ್ಯ ನಾಯಕರೊಂದಿಗೆ ಚರ್ಚೆ ನಡೆಸುವಂತೆ ಜನಾರ್ದನ ರೆಡ್ಡಿಗೆ ನಿತಿನ್ ನಬಿನ್ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆ ರೆಡ್ಡಿ ಹಾಗೂ ಮಾಜಿ ಸಚಿವ ಬಿ. ಶ್ರೀರಾಮುಲು ಬಳ್ಳಾರಿ ಪಾದಯಾತ್ರೆ ನಡೆಸುವ ಬಗ್ಗೆ ಒಲವು ತೋರಿದ್ದಾರೆ ಎನ್ನಲಾಗಿದೆ.

ಬಳ್ಳಾರಿ ಪಾದಯಾತ್ರೆಯ ಕುರಿತು ಇಂದು ಚರ್ಚೆ

ಬಳ್ಳಾರಿ ಪಾದಯಾತ್ರೆಯ ಕುರಿತು ಇಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರೊಂದಿಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಪಾದಯಾತ್ರೆಯ ರೂಪುರೇಷೆಗಳ ಕುರಿತು ಶ್ರೀರಾಮುಲು ಮತ್ತು ವಿಜಯೇಂದ್ರ ನಡುವೆ ಪ್ರತ್ಯೇಕ ಸಭೆ ನಡೆಯಲಿದೆ ಎಂದು ತಿಳಿದುಬಂದಿದೆ.

ಈ ಹಿಂದೆ ವಾಲ್ಮೀಕಿ ನಿಗಮ ಹಗರಣ ನಡೆದಿದ್ದು, ಇದೀಗ ವಾಲ್ಮೀಕಿ ಪುತ್ಥಳಿ ಸಂಬಂಧ ಗಲಾಟೆ ನಡೆದಿರುವುದನ್ನು ಉಲ್ಲೇಖಿಸಿರುವ ಬಿಜೆಪಿ ನಾಯಕರು, ವಾಲ್ಮೀಕಿ ಸಮುದಾಯವನ್ನು ಗುರಿಯಾಗಿಸಿಕೊಂಡು ದಾಳಿ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಈ ವಿಚಾರವನ್ನು ಮುಂದಿಟ್ಟುಕೊಂಡು ಸಮುದಾಯದ ಪರವಾಗಿ ಹೋರಾಟ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಬಳ್ಳಾರಿ ಗಲಭೆ ಖಂಡಿಸಿ ಬಿಜೆಪಿಯಿಂದ ಸಮರ: ಜ 17ರಂದು ಪ್ರತಿಭಟನೆ ಎಂದ ಜನಾರ್ದನ ರೆಡ್ಡಿ

ಗಲಭೆ ವಿರುದ್ಧದ ಹೋರಾಟದಲ್ಲಿ ರೆಡ್ಡಿ, ರಾಮುಲು ನಡುವೆ ಭಿನ್ನಾಭಿಪ್ರಾಯ ಇದೆ ಎನ್ನಲಾಗಿತ್ತು. ಗಲಭೆ ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಲು ಜನಾರ್ದನ ರೆಡ್ಡಿ ಪ್ಲ್ಯಾನ್​ ಮಾಡಿದ್ದರೆ, ಈ ವಿಚಾರವನ್ನು ಇಟ್ಟುಕೊಂಡು ಪಾದಯಾತ್ರೆಗೆ ಶ್ರೀರಾಮುಲು ಚಿಂತನೆ ನಡೆಸಿದ್ದರು. ಇದರಿಂದ ರಾಜ್ಯ ಬಿಜೆಪಿ ನಾಯಕರು ಪೇಚಿಗೆ ಸಿಲುಕಿದ್ದರು ಎನ್ನಲಾಗಿತ್ತು. ಆದರೆ, ಇದೀಗ ಪಾದಯಾತ್ರೆ ಬಗ್ಗೆ ಮಾತುಕತೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಒಟ್ಟಿನಲ್ಲಿ ಬಳ್ಳಾರಿ ಗಲಭೆ ವಿಚಾರದಲ್ಲಿ ಬಿಜೆಪಿ ರಾಜ್ಯ ಹಾಗೂ ರಾಷ್ಟ್ರೀಯ ನಾಯಕತ್ವ ಸಕ್ರಿಯಗೊಂಡಿದ್ದು, ಮುಂದಿನ ಹೋರಾಟದ ತಂತ್ರದ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು: ಧರ್ಮಸ್ಥಳ ಸಂಘಕ್ಕೆ ಕಟ್ಟಲು ಇಟ್ಟಿದ್ದ 200 ರೂ. ಹಣವನ್ನು ತೆಗೆದ ಗಂಡ, ಬೇಸರದಿಂದ ಪತ್ನಿ ಆತ್ಮಹತ್ಯೆ – Kannada News | Bengaluru Tragedy: Byadarahalli Woman’s Suicide Sparks Financial Stress Debate

ಬೆಂಗಳೂರು, ಜ.12: ಬೆಂಗಳೂರಿನಿಂದ (Bengaluru) 30 ಕಿ.ಲೋ ದೂರದಲ್ಲಿರುವ ಬ್ಯಾಡರಹಳ್ಳಿ ಗ್ರಾಮದಲ್ಲಿ ಒಂದು ಅಘಾತಕಾರಿ​​ ಘಟನೆಯೊಂದು ನಡೆದಿದೆ. ಸುಂದರ ಕುಟುಂಬದಲ್ಲಿ ಕತ್ತಲೆ ಆವರಿಸಿದೆ. ಮನೆಗೆ ಬೆಳಕಾಗಿದ್ದ ಮನೆಯ ಯಜಮಾನಿಯ ತಪ್ಪು ನಿರ್ಧಾರದಿಂದ, ಗಂಡ, ಮಕ್ಕಳು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದೆ. ಇದೀಗ ಈ ಘಟನೆಯಿಂದ ಮನೆಯವರು ಮಾತ್ರವಲ್ಲದೆ ಇಡೀ ಗ್ರಾಮವೂ ಕೂಡ ಮರುಗಿದೆ. 200 ರೂ.ಗಾಗಿ ಸಣ್ಣ ಜಗಳದಿಂದ ಶುರುವಾಗಿ ಸಾವಿನಲ್ಲಿ ಕೊನೆಯಾಗಿದೆ. 30 ವರ್ಷದ ಮಹಿಳೆಯೊಬ್ಬರು ತನ್ನ ಮನೆಯೊಳಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ನಡೆದಿದೆ. ಎರಡು ಮಕ್ಕಳ ತಾಯಿಯಾಗಿದ್ದ ಸುಮಾ, ಚಂದ್ರಶೇಖರ್ ಎಂಬುವವರನ್ನು ಸುಮಾರು ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗಳು ತಮ್ಮ ಮಕ್ಕಳು ಮತ್ತು ಮನೆಯ ಹಿರಿಯರ ಜತೆಗೆ ಸುಂದರ ಜೀವನ ನಡೆಸುತ್ತಿದ್ದರು. ಈ ಕುಟುಂಬಕ್ಕೆ ಯಾರ ಕಣ್ಣು ಬಿತ್ತೋ ಗೊತ್ತಿಲ್ಲ. ಇದೀಗ ಈ ಕುಟುಂಬಕ್ಕೆ ಸಾವಿನ ದುಃಖ ಕಾಡಿದೆ.

ದಿನಗೂಲಿ ಕೆಲಸ ಮಾಡಿಕೊಂಡು ಬದುಕಿದ್ದ ಈ ಕುಟುಂಬದ ಬಗ್ಗೆ ನೆರೆಹೊರೆಯವರಿಗೆ ಬಹಳ ಪ್ರೀತಿ. ಏಷ್ಯಾನೆಟ್ ನ್ಯೂಸ್ ವರದಿಯ ಪ್ರಕಾರ ಸಾಮಾನ್ಯವಾಗಿ ಜೀವನ ನಡೆಸುತ್ತಿದ್ದ ಈ ಕುಟುಂಬ ಯಾರೊಬ್ಬರ ಸುದ್ದಿಗೂ ಹೋಗುತ್ತಿರುಲಿಲ್ಲ. ಅವರ ಖರ್ಚು ಕೂಡ ಅಷ್ಟೇ ಎಚ್ಚರಿಕೆಯಿಂದ ಮಾಡುತ್ತಿದ್ದರು. ಹೀಗೆ ದಿನ ಕಳೆಯುತ್ತಿದ್ದಂತೆ, ಒಂದು ದಿನ ಬೆಳಿಗ್ಗೆ, ಧರ್ಮಸ್ಥಳದ ಸ್ವಸಹಾಯ ಗುಂಪಿನ ಸಾಲದ ಕಂತಿಗೆ ಸುಮಾ ತೆಗೆದಿಟ್ಟಿದ್ದ ಹಣದ ಬಗ್ಗೆ ಜಗಳ ಶುರುವಾಗಿದೆ. ಧರ್ಮಸ್ಥಳದ ಸ್ವಸಹಾಯ ಗುಂಪಿನ ಸಾಲದ ಕಂತಿಗಾಗಿ ತೆಗೆದಿಟ್ಟಿದ್ದ 1,300 ರೂ.ನಲ್ಲಿ 200 ರೂ. ಇರಲಿಲ್ಲ. ಸುಮಾ ಅವರ ಗಂಡ ಚಂದ್ರಶೇಖರ್ ಅವರು ವೈಯಕ್ತಿಕ ಕಾರಣಕ್ಕೆ ತೆಗೆದುಕೊಂಡಿದ್ದರು.

ಈ ವಿಚಾರ ಸುಮಾಗೆ ತಿಳಿದು ಗಂಡ ಚಂದ್ರಶೇಖರ್ ಜತೆಗೆ ಜಗಳಕ್ಕೆ ಇಳಿದಿದ್ದರು.ಇದರಿಂದ ಸುಮಾ ಕೂಡ ಬೇಸರದಲ್ಲಿದ್ದರು. ಕುಟುಂಬದ ಪರಿಚಯದವರು ಹೇಳುವಂತೆ ಜಗಳವು ಸಣ್ಣ ಪ್ರಮಾಣದಲ್ಲಿ ನಡೆದಿದೆ ಎಂದು ಹೇಳಿದ್ದಾರೆ. ಚಂದ್ರಶೇಖರ್ ಮತ್ತು ಅವರ ತಾಯಿ ಈ ವಿಷಯದ ಬಗ್ಗೆ ಇತ್ಯರ್ಥ ಮಾಡಿ ಸುಮಾ ಅವರನ್ನು ಸಮಾಧಾನ ಮಾಡಿದ್ದಾರೆ. ಆದರೆ ಸುಮಾ ಇದರ ನೋವಿನಲ್ಲೇ ಇದ್ದರು. ಅವರಲ್ಲಿ ಆರ್ಥಿಕ ಒತ್ತಡ ಹೆಚ್ಚಾಗಿತ್ತು. ಈ ಕಾರಣಕ್ಕೆ ಈ ವಿಷಯ ಸಾಯುವ ಹಂತಕ್ಕೆ ಬಂದಿದೆ ಎಂದು ಕುಟುಂಬದವರು ಹೇಳುತ್ತಾರೆ.

ಇದನ್ನೂ ಓದಿ: “ಸರಿಯಾಗಿರೋ ಬಟ್ಟೆ ಧರಿಸಿ” ಎಂದ ಹೋಮ್​​ ಗಾರ್ಡ್​​​​ಗೆ ರಕ್ತ ಬರುವಂತೆ ಹೊಡೆದ ಬೆಂಗಳೂರಿನ ಯುವತಿ

ಈ ಇತ್ಯರ್ಥ ನಂತರ ಚಂದ್ರಶೇಖರ್​​​ ಕೆಲಸಕ್ಕೆ ಹೋಗಿದ್ದಾರೆ. ಮನೆಯಲ್ಲೂ ಯಾರೂ ಇಲ್ಲದ ಕಾರಣ ಸುಮಾ ಕೂಡ ಮನೆಯಲ್ಲಿ ಒಬ್ಬಂಟಿಯಾಗಿದ್ದರು. ಘಟನೆಯ ಬಗ್ಗೆ ಮರಗುತ್ತಿದ್ದರು. ಚಂದ್ರಶೇಖರ್​​​​ ಮಧ್ಯಾಹ್ನ ಊಟಕ್ಕೆಂದು ಮನೆಗೆ ಬಂದ ವೇಳೆ ಸುಮಾ ನೇಣು ಹಾಕಿಕೊಂಡ ಸ್ಥಿತಿಯಲ್ಲಿದ್ದರು. ಆ ದೃಶ್ಯವು ಮನೆ ಮತ್ತು ಹಳ್ಳಿಯಲ್ಲಿ ದೊಡ್ಡ ಅಘಾತವನ್ನು ಸೃಷ್ಟಿಸಿತ್ತು. ಇದೀಗ ಸುಮಾ 200 ರೂ. ಕಾರಣಕ್ಕೆ ಇಬ್ಬರು ಚಿಕ್ಕ ಮಕ್ಕಳನ್ನು ಅನಾಥ ಮಾಡಿದ್ದಾರೆ. ನೆಲಮಂಗಲ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಸುಮಾ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲದ ಶವಾಗಾರಕ್ಕೆ ರವಾನಿಸಲಾಗಿತ್ತು. ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Gold Rate Today Bangalore: 13,000 ರೂ ದಾಟಿದ 22 ಕ್ಯಾರಟ್ ಚಿನ್ನದ ಬೆಲೆ – Kannada News | Gold Price Today on 12th January 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಜನವರಿ 12: ಜಾಗತಿಕವಾಗಿ ಅನಿಶ್ಚಿತ ರಾಜಕೀಯ ವಾತಾವರಣ ತೀವ್ರಗೊಂಡಷ್ಟೂ ಚಿನ್ನ, ಬೆಳ್ಳಿಯಂತಹ ಅಮೂಲ್ಯ ಲೋಹಗಳಿಗೆ ಬೇಡಿಕೆ ಹೆಚ್ಚುತ್ತಲೇ ಇದೆ. ಇಂದು ಸೋಮವಾರ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಹೆಚ್ಚಿವೆ. ಆಭರಣ ಚಿನ್ನದ ಬೆಲೆ (Gold Rate) 13,000 ರೂ ಗಡಿ ದಾಟಿದೆ. ಆದರೆ, ವಿದೇಶಗಳಲ್ಲಿ ಹೆಚ್ಚಿನ ಕಡೆ ಬೆಲೆ ಯಥಾಸ್ಥಿತಿಯಲ್ಲಿದೆ. ಇನ್ನು, ಬೆಳ್ಳಿ ಬೆಲೆಯ ನಾಗಾಲೋಟ ಮುಂದುವರಿಯುತ್ತಿದೆ. ಸೋಮವಾರದ ಇದರ ಬೆಲೆ 10-12 ರೂ ಹೆಚ್ಚಿದೆ. ಚೆನ್ನೈ ಮೊದಲಾದ ಕಡೆ ಬೆಲೆ 287 ರೂ ತಲುಪಿದ್ದು, ಈ ವಾರದಲ್ಲೇ ಬೆಲೆ 300 ರೂ ದಾಟಿದರೆ ಆಶ್ಚರ್ಯ ಇಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,30,300 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,42,150 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 27,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,30,300 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 27,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 28,700 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜನವರಿ 12ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,215 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,030 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,661 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 270 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,215 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,030 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 270 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,030 ರೂ
  • ಚೆನ್ನೈ: 13,120 ರೂ
  • ಮುಂಬೈ: 13,030 ರೂ
  • ದೆಹಲಿ: 13,045 ರೂ
  • ಕೋಲ್ಕತಾ: 13,030 ರೂ
  • ಕೇರಳ: 13,030 ರೂ
  • ಅಹ್ಮದಾಬಾದ್: 13,035 ರೂ
  • ಜೈಪುರ್: 13,045 ರೂ
  • ಲಕ್ನೋ: 13,045 ರೂ
  • ಭುವನೇಶ್ವರ್: 13,030 ರೂ

ಇದನ್ನೂ ಓದಿ: ಭಾರತ ಅತಿವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ: ಗುಜರಾತ್ ಸಮಿಟ್​ನಲ್ಲಿ ಪ್ರಧಾನಿ ಮೋದಿ ಹೇಳಿಕೆ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 577 ರಿಂಗಿಟ್ (12,795 ರುಪಾಯಿ)
  • ದುಬೈ: 503 ಡಿರಾಮ್ (12,350 ರುಪಾಯಿ)
  • ಅಮೆರಿಕ: 140 ಡಾಲರ್ (12,627 ರುಪಾಯಿ)
  • ಸಿಂಗಾಪುರ: 183.10 ಸಿಂಗಾಪುರ್ ಡಾಲರ್ (12,831 ರುಪಾಯಿ)
  • ಕತಾರ್: 501 ಕತಾರಿ ರಿಯಾಲ್ (12,396 ರೂ)
  • ಸೌದಿ ಅರೇಬಿಯಾ: 511 ಸೌದಿ ರಿಯಾಲ್ (12,290 ರುಪಾಯಿ)
  • ಓಮನ್: 53.35 ಒಮಾನಿ ರಿಯಾಲ್ (12,496 ರುಪಾಯಿ)
  • ಕುವೇತ್: 40.97 ಕುವೇತಿ ದಿನಾರ್ (12,082 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 270 ರೂ
  • ಚೆನ್ನೈ: 287 ರೂ
  • ಮುಂಬೈ: 270 ರೂ
  • ದೆಹಲಿ: 270 ರೂ
  • ಕೋಲ್ಕತಾ: 270 ರೂ
  • ಕೇರಳ: 287 ರೂ
  • ಅಹ್ಮದಾಬಾದ್: 270 ರೂ
  • ಜೈಪುರ್: 270 ರೂ
  • ಲಕ್ನೋ: 270 ರೂ
  • ಭುವನೇಶ್ವರ್: 287 ರೂ
  • ಪುಣೆ: 270

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Video: ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಪ್ರಧಾನಿ ಮೋದಿ – Kannada News | From Talks to Tails: Modi and Germany’s Chancellor Share a Kite Moment in Ahmedabad

ಅಹಮದಾಬಾದ್, ಜನವರಿ 12: ಪ್ರಧಾನಿ ನರೇಂದ್ರ ಮೋದಿ ಇಂದು ಅಹಮದಾಬಾದಿನಲ್ಲಿರುವ ಸಬರಮತಿ ಆಶ್ರಮದಲ್ಲಿ ನಡೆಯುತ್ತಿರುವ ಗಾಳಿಪಟ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಜರ್ಮನ್ ಚಾನ್ಸೆಲರ್ ಫೆಡ್ರಿಕ್ ಮೆರ್ಜ್​ ಅವರೊಂದಿಗೆ ಗಾಳಿಪಟ ಹಾರಿಸಿದರು. ಆಶ್ರಮಕ್ಕೆ ಆಗಮಿಸಿದ ನಂತರ, ಇಬ್ಬರೂ ನಾಯಕರು ರಾಷ್ಟ್ರಪಿತ ಮಹಾತ್ಮ ಗಾಂಧಿಯವರಿಗೆ ಪುಷ್ಪ ನಮನ ಸಲ್ಲಿಸಿದರು. ಮೆರ್ಜ್ ಅಲ್ಲಿನ ಸಂದರ್ಶಕರ ಪುಸ್ತಕದಲ್ಲಿ ಸಹಿ ಹಾಕಿದರು. ನಂತರ ಇಬ್ಬರೂ ನಾಯಕರು ಸಬರಮತಿ ನದಿ ದಂಡೆಯಲ್ಲಿ ನಡೆದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ 2026 ರಲ್ಲಿ ಭಾಗವಹಿಸಿದ್ದಾರೆ.

ಗುಜರಾತ್‌ನ ಗೌರವಾನ್ವಿತ ರಾಜ್ಯಪಾಲ ಆಚಾರ್ಯ ದೇವವ್ರತ್ ಅವರು ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಬರಮಾಡಿಕೊಂಡರು .ಭಾರತ ಮತ್ತು ಜರ್ಮನಿ ಭಾರತ-ಜರ್ಮನಿ ರಾಜತಾಂತ್ರಿಕ ಸಂಬಂಧಗಳ 75 ವರ್ಷಗಳನ್ನು ಮತ್ತು ಭಾರತ-ಜರ್ಮನಿ ಕಾರ್ಯತಂತ್ರದ ಪಾಲುದಾರಿಕೆಯ 25 ವರ್ಷಗಳನ್ನು ಆಚರಿಸುತ್ತಿವೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link