Category Archives: Blog

Your blog category

Karnataka Weather Forecast: ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದ ಹಲವೆಡೆ ಬಿರುಗಾಳಿ ಸಹಿತ ಮಳೆ ನಿರೀಕ್ಷೆ – Kannada News | Karnataka Weather Forecast: Light to Moderate Rain, Strong Winds Likely Across State in Next 24 Hours

ಬೆಂಗಳೂರು, ಜೂನ್​​ 17: ಕರ್ನಾಟಕದಲ್ಲಿ ಮುಂದಿನ 24 ಗಂಟೆಗಳಲ್ಲಿ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಹಗುರದಿಂದ ಕುಡಿದ ಸಾಧಾರಣ ಮಳೆಯಾಗುವ (Rain) ಸಾಧ್ಯತೆಯಿದೆ ಎಂದು ರಾಜ್ಯ ಹವಾಮಾನ ಇಲಾಖೆಯ (IMD) ಮುನ್ಸೂಚನೆ ನೀಡಿದೆ. ರಾಜ್ಯದ ಕೆಲವು ಭಾಗಗಳಲ್ಲಿ ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಬಲವಾದ ಬಿರುಗಾಳಿ ಬೀಸುವ ಮುನ್ಸೂಚನೆ ನೀಡಲಾಗಿದೆ.

ಮುಖ್ಯಾಂಶಗಳು

  • ಕರಾವಳಿ, ಮಲೆನಾಡು, ದಕ್ಷಿಣ ಒಳನಾಡಿನ ಮಳೆ ಮುನ್ಸೂಚನೆ
  • ಬೆಂಗಳೂರಿನ ಹವಾಮಾನ ಸ್ಥಿತಿ ಮತ್ತು ಬಿರುಗಾಳಿ ಎಚ್ಚರಿಕೆ
  • ಮುಂದಿನ 24 ಗಂಟೆಗಳಲ್ಲಿ ಜಿಲ್ಲಾವಾರು ಮಳೆ ನಿರೀಕ್ಷೆ

ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ

ಮಲೆನಾಡು ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಾದ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು ಮತ್ತು ಹಾಸನ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಹಗುರದಿಂದ ಕುಡಿದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

KSNDMC ಟ್ವೀಟ್​

ಇನ್ನು ಮೈಸೂರು, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು ಹಾಗೂ ಬೆಂಗಳೂರಿನ ಉಭಯ ಜಿಲ್ಲೆಗಳ (ನಗರ ಮತ್ತು ಗ್ರಾಮಾಂತರ) ಒಂದೆರಡು ಕಡೆಗಳಲ್ಲಿ ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಬೆಂಗಳೂರಿನ ಹವಾಮಾನ ಹೇಗಿದೆ?

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಭಾಗಶಃ ಮೋಡ ಕವಿದ ವಾತಾವರಣವಿರಲಿದ್ದು, ನಗರದ ಕೆಲವು ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ನಗರದ ಒಂದೆರಡು ಪ್ರದೇಶದಲ್ಲಿ ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ನಿರ್ಮಾಪಕರಿಗೆ ಹೇಳದೆ ‘ಪೆದ್ದಿ’ ಆದಾಯ ಹಂಚಿಕೆ: ದೂರು ದಾಖಲು – Kannada News | Peddi movie Producers alleged that movie profit sharing model decision taken without his knowledge

ಬುಚ್ಚಿ ಬಾಬು ಸಾನಾ ನಿರ್ದೇಶಿಸಿ, ರಾಮ್ ಚರಣ್ (Ram Charan) ಮತ್ತು ಜಾನ್ವಿ ಕಪೂರ್ ನಟಿಸಿರುವ ‘ಪೆದ್ದಿ’ ಸಿನಿಮಾಕ್ಕೆ ಒಂದರ ಮೇಲೊಂದು ವಿವಾದಗಳು ಎದುರಾಗುತ್ತಲೇ ಇವೆ. ಮೊದಲಿಗೆ ನಟಿ ಜಾನ್ಹವಿ ಕಪೂರ್ ಅವರನ್ನು ಅತಿಯಾಗಿ ಗ್ಲಾಮರಸ್ ಆಗಿ ತೋರಿಸಿರುವ ಬಗ್ಗೆ ತೀವ್ರ ವಿವಾದ ಎದ್ದಿತ್ತು, ಬಳಿಕ ನಿರ್ದೇಶಕ ಬುಚ್ಚಿಬಾಬು ಸನಾ ಕ್ಷಮೆ ಕೋರಿ, ದೃಶ್ಯಗಳಿಗೆ ಕತ್ತರಿ ಹಾಕಿದರು. ಇದೀಗ ಖುದ್ದು, ‘ಪೆದ್ದಿ’ ಸಿನಿಮಾದ ನಿರ್ಮಾಪಕರೇ ಸಿನಿಮಾದ ವಿರುದ್ಧ ದೂರು ನೀಡಿದ್ದಾರೆ. ತಮಗೆ ಹೇಳದೆ, ಲಾಭ ಹಂಚಿಕೆ ವಿಚಾರವಾಗಿ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಆರೋಪ ಮಾಡಿದ್ದಾರೆ.

‘ಪೆದ್ದಿ’ ಸಿನಿಮಾ ವಿಶ್ವದಾದ್ಯಂತ 300 ಕೋಟಿಗೂ ಹೆಚ್ಚು ಗಳಿಕೆ ಕಂಡಿದೆ, ಸಿನಿಮಾ ಯಶಸ್ಸು ಕಂಡಿದೆ. ಆದರೆ ನಿರ್ಮಾಪಕರು ತೃಪ್ತಿಯಾಗಿಲ್ಲ. ಸಿನಿಮಾದ ನಿರ್ಮಾಪಕ ವೃದ್ಧಿ ಸಿನೆಮಾಸ್‌ನ ವೆಂಕಟ ಸತೀಶ್ ಕಿಲಾರು ಅವರು ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ಚಿತ್ರದ ಲಾಭ ಹಂಚಿಕೆ ಸಂಬಂಧಿಸಿದ ನಿರ್ಧಾರಗಳನ್ನು ತಮ್ಮ ಅರಿವಿಗೆ ಬಾರದೆಯೇ ತೆಗೆದುಕೊಳ್ಳಲಾಗಿದೆ ಎಂದು ಅವರು ದೂರಿದ್ದಾರೆ.

‘ಪೆದ್ದಿ’ ಸಿನಿಮಾ ಬಿಡುಗಡೆಗೂ ಮುನ್ನವೇ ತೆಲುಗು ಚಲನಚಿತ್ರ ನಿರ್ಮಾಪಕರು ಮತ್ತು ಪ್ರದರ್ಶಕರ ನಡುವೆ ಆದಾಯ ಹಂಚಿಕೆಯ ವಿಚಾರವಾಗಿ ವಿವಾದ ಉಂಟಾಗಿತ್ತು. ಪ್ರದರ್ಶಕರ ಸಂಘವು ಭವಿಷ್ಯದ ಎಲ್ಲಾ ಚಿತ್ರಗಳಿಗೆ ಶೇಕಡಾವಾರು ಹಂಚಿಕೆ ಪದ್ಧತಿಯನ್ನು ಕಡ್ಡಾಯಗೊಳಿಸಬೇಕೆಂದು ಪಟ್ಟು ಹಿಡಿದಿತ್ತು. ಪ್ರಸ್ತುತ ಜಾರಿಯಲ್ಲಿರುವ ಬಾಡಿಗೆ ಆಧಾರಿತ ಪದ್ಧತಿಯ ಬದಲಿಗೆ ಈ ಹೊಸ ಪದ್ಧತಿಯನ್ನು ಜಾರಿಗೆ ತರಬೇಕೆಂದು ಅವರು ಒತ್ತಾಯಿಸಿದ್ದರು.

ಇದನ್ನೂ ಓದಿ:ರಾಮ್ ಚರಣ್ ಬಾಡಿಗಾರ್ಡ್ ಕೆವಿನ್ ಭರ್ಜರಿ ಕಸರತ್ತು; ವಿಡಿಯೋ ವೈರಲ್

ಮೇ 27ರಂದು ತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿಯ (TFCC) ಪತ್ರದ ಪ್ರಕಾರ, ಮೇ 15ರಂದು ನಡೆದ ಸಭೆಯಲ್ಲಿ ಆದಾಯ ಹಂಚಿಕೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಅದರಂತೆ, ‘ಪೆದ್ದಿ’ ಚಿತ್ರದ ಬಿಡುಗಡೆಗೆ ಯಾವುದೇ ಅಡಚಣೆ ಉಂಟಾಗದಂತೆ ನೋಡಿಕೊಳ್ಳಲು ಮತ್ತು ಆಂಧ್ರಪ್ರದೇಶದಲ್ಲಿ ಟಿಕೆಟ್ ದರ ಹೆಚ್ಚಳವಾದರೆ ಶೇ. 7.5 ರಷ್ಟು ಹಂಚಿಕೆ ನೀಡಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈ ಸಂಬಂಧ ಜೂನ್ 13ರಂದು ವಾಣಿಜ್ಯ ಮಂಡಳಿಗೆ ಪತ್ರ ಬರೆದಿರುವ ನಿರ್ಮಾಪಕ ವೆಂಕಟ ಸತೀಶ್, ಮೇ 15ರ ಸಭೆಗೆ ತಮ್ಮನ್ನು ಆಹ್ವಾನಿಸಿರಲಿಲ್ಲ ಮತ್ತು ಯಾವುದೇ ಮಾಹಿತಿ ನೀಡಿರಲಿಲ್ಲ ಎಂದು ತಿಳಿಸಿದ್ದಾರೆ. ತಾವು ಈ ಹಿಂದೆ ಪಾಲ್ಗೊಂಡಿದ್ದ ಸಭೆಗಳಲ್ಲಿ, ತಮ್ಮ ಚಿತ್ರವನ್ನು ಈಗಾಗಲೇ ವಿತರಕರಿಗೆ ಮಾರಾಟ ಮಾಡಿರುವುದರಿಂದ, ಈ ಶೇಕಡಾವಾರು ಹಂಚಿಕೆ ಪದ್ಧತಿಯು ತಮಗೆ ಸ್ವೀಕಾರಾರ್ಹವಲ್ಲ ಎಂದು ಸ್ಪಷ್ಟಪಡಿಸಿದ್ದಾಗಿ ಹೇಳಿದ್ದಾರೆ.

ತಮ್ಮ ಭಾಗವಹಿಸುವಿಕೆ ಇಲ್ಲದೆ ಮತ್ತು ವಾಸ್ತವಿಕ ಅಂಶಗಳನ್ನು ಪರಿಗಣಿಸದೆ ಇಂತಹ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸರಿಯಲ್ಲ ಎಂದು ವೆಂಕಟ ಸತೀಶ್ ಅಭಿಪ್ರಾಯಪಟ್ಟಿದ್ದಾರೆ. ‘ವಿತರಕರು ಮತ್ತು ಪ್ರದರ್ಶಕರ ನಡುವಿನ ಒಪ್ಪಂದಗಳು ಈಗಾಗಲೇ ಅಂತಿಮಗೊಂಡಿವೆ. ಈ ಹಂತದಲ್ಲಿ ಯಾವುದೇ ಏಕಪಕ್ಷೀಯ ನಿರ್ಧಾರವು ಒಳಗೊಂಡಿರುವ ಎಲ್ಲಾ ಪಕ್ಷಗಳಿಗೆ ಗಂಭೀರ ಆರ್ಥಿಕ ಮತ್ತು ವಾಣಿಜ್ಯ ತೊಂದರೆಗಳನ್ನು ಉಂಟುಮಾಡುತ್ತದೆ’ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಅಡ್ಡ ಮತದಾನದ ಭೀತಿ: ರೆಸಾರ್ಟ್​​​ನಲ್ಲಿ ಕಾಂಗ್ರೆಸ್ ಶಾಸಕರಿಗೆ ಮತದಾನದ ತರಬೇತಿ – Kannada News | Karnataka MLC Elections 2026: Voting Training To Congress MLAs In Resort

ರಾಮನಗರ, (ಜೂನ್ 17): ವಿಧಾನ ಪರಿಷತ್ ಚುನಾವಣೆ (MLC polls) ನಾಳೆ ಅಂದರೆ ಜೂನ್ 18ರಂದು ನಡೆಯಲಿದ್ದು, ಆಡಳಿತಾರೂಢ ಕಾಂಗ್ರೆಸ್ ಶಾಸಕರು ರೆಸಾರ್ಟ್ ಸೇರಿಕೊಂಡಿದ್ದಾರೆ. ಪರಿಷತ್ ಕಣದಲ್ಲಿ ಏಳನೇ ಅಭ್ಯರ್ಥಿ ಅಖಾಡಕ್ಕಿಳಿಸಿರುವುದು ಮೇಲ್ಮನೆ ಚುನಾವಣೆ ರಂಗೇರಿದೆ. 7 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ 5 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಬಿಜೆಪಿ 2 ಹಾಗೂ ಜೆಡಿಎಸ್ ಓರ್ವ ಅಭ್ಯರ್ಥಿ ಕಣಕ್ಕಿಳ ಸಿದೆ. ಕಾಂಗ್ರೆಸ್‌ನ 4 ಹಾಗೂ ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ಸರಾಗವಾಗಿ ಗೆಲುವು ಸಾಧಿಸಲಿದ್ದಾರೆ. ಏಳನೇ ಸ್ಥಾನಕ್ಕೆ ಜಟಾಪಟಿ ಜೋರಾಗಿದೆ. ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕಾರ್ತಿಕ್ ಹಾಗೂ ಜೆಡಿಎಸ್ ಅಭ್ಯರ್ಥಿ ನಡುವೆ ಸ್ಪರ್ಧೆ ಗೋವಿಂದ ಏರ್ಪಟ್ಟಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಅಡ್ಡ ಮತದಾನ ಆಗಬಾರದು ಹಾಗೂ ಮತ ಅಸಿಂಧುಗೊಳ್ಳದಂತೆ ಕಾಂಗ್ರೆಸ್ ಎಚ್ಚರಿಕೆ ವಹಿಸಿದ್ದು, ಈ ಸಂಬಂಧ ಡಿಕೆ ಶಿವಕುಮಾರ್ ಸಮ್ಮುಖದಲ್ಲೇ ಅಣುಕು ಮತದಾನ ಪ್ರಕ್ರಿಯೆ ನಡೆಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಈ ವಸ್ತುಗಳನ್ನು ಬೆರೆಸಿದ ನೀರಿನಲ್ಲಿ ನೆಲ ಒರೆಸುವುದರಿಂದ ಜಿರಳೆ, ಹಲ್ಲಿಗಳ ಕಾಟದಿಂದ ಮುಕ್ತಿ ಪಡೆಯಬಹುದು‌ – Kannada News | Use these simple cleaning tricks to get rid of lizards and cockroaches

ಪ್ರತಿನಿತ್ಯ ಮನೆಯನ್ನು ಸ್ವಚ್ಛಗೊಳಿಸುವುದರಿಂದ ಕೊಳಕು ಮತ್ತು ಧೂಳು ಮಾತ್ರವಲ್ಲ ಹಲ್ಲಿ, ಕೀಟಗಳು ಮನೆಯೊಳಗೆ ಪ್ರವೇಶಿಸದಂತೆ ನೋಡಿಕೊಳ್ಳಬಹುದು. ಹಲ್ಲಿಗಳು (lizards) ಮತ್ತು ಜಿರಳೆಗಳ ಕಾಟ ಬಹುತೇಕ ಹೆಚ್ಚಿನ ಮನೆಗಳಲ್ಲಿ ಇದ್ದೇ ಇರುತ್ತವೆ. ಇವುಗಳನ್ನು ಓಡಿಸಲು ಮಾರುಕಟ್ಟೆಯಲ್ಲಿ ಲಭ್ಯವಿರುವ ರಾಸಾಯನಿಕ ಉತ್ಪನ್ನಗಳನ್ನು ಹೆಚ್ಚಿನವರು ಬಳಕೆ ಮಾಡುತ್ತಾರೆ. ಈ ಉತ್ಪನ್ನಗಳು ಆರೋಗ್ಯ ಮತ್ತು ಪರಿಸರ ಎರಡಕ್ಕೂ ಹಾನಿಕಾರಕ. ಆದ್ದರಿಂದ, ಪ್ರತಿನಿತ್ಯ ನೆಲ ಒರೆಸುವಾಗ ಆ ನೀರಿಗೆ ಈ ಕೆಲವೊಂದು ವಸ್ತುಗಳನ್ನು ಬೆರೆಸಿ, ಆ ನೀರಿನಲ್ಲಿ ನೆಲವನ್ನು ಒರೆಸಿ.  ಇದು ನಿಮ್ಮ ಮನೆಯನ್ನು ಸ್ವಚ್ಛವಾಗಿಡುವುದು ಮಾತ್ರವಲ್ಲದೆ ಹಲ್ಲಿಗಳು ಮತ್ತು ಜಿರಳೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತವೆ. ಈ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಮನೆಯಿಂದ ಕೀಟಗಳನ್ನು ಓಡಿಸಲು ನೆಲ ಒರೆಸುವ ನೀರಿಗೆ ಏನು ಬೆರೆಸಬೇಕು?

ನಿಂಬೆ ರಸ: ಹಲ್ಲಿಗಳು ಮತ್ತು ಜಿರಳೆಗಳು ನಿಂಬೆಹಣ್ಣಿನಲ್ಲಿರುವ ಬಲವಾದ ಸಿಟ್ರಿಕ್ ಆಮ್ಲದ ವಾಸನೆಯನ್ನು ಇಷ್ಟಪಡುವುದಿಲ್ಲ. ಎರಡು ಚಮಚ ನಿಂಬೆ ರಸವನ್ನು ಒರೆಸುವ ನೀರಿನಲ್ಲಿ ಬೆರೆಸಿ ನೆಲವನ್ನು ಸ್ವಚ್ಛಗೊಳಿಸುವುದರಿಂದ ಮನೆಯೂ ತಾಜಾವಾಗಿರುತ್ತದೆ, ಕೀಟಗಳ ಕಾಟವೂ ಇರೋದಿಲ್ಲ.

ಪುದೀನಾ ಎಣ್ಣೆ: ಈ ಎಣ್ಣೆ ಅತ್ಯುತ್ತಮ ನೈಸರ್ಗಿಕ ಕೀಟ ನಿವಾರಕವಾಗಿದೆ. ಹಲ್ಲಿಗಳು ಮತ್ತು ಜಿರಳೆಗಳು ಇದರ ವಾಸನೆಯನ್ನು ಸಹಿಸುವುದಿಲ್ಲ. ನೆಲ ಒರೆಸುವ ನೀರಿಗೆ 8-10 ಹನಿ ಪುದೀನಾ ಎಣ್ಣೆಯನ್ನು ಸೇರಿಸಿ ನೆಲ ಒರೆಸಿ, ಇದು ಕೂಡ ಹಲ್ಲಿ, ಜಿರಳೆ, ಕೀಟಗಳನ್ನು ದೂರವಿಡಲು ಸಹಕಾರಿ.

ಕರ್ಪೂರ: ಕರ್ಪೂರದ ಪರಿಮಳವು ಕೀಟಗಳು ಮತ್ತು ಹಲ್ಲಿಗಳು ಮನೆಯೊಳಗೆ ಬರುವುದನ್ನು ತಡೆಯುತ್ತದೆ. ಅದಕ್ಕಾಗಿ ಕರ್ಪೂರ ಬೆರೆಸಿದ ನೀರಿನಲ್ಲಿ ನೆಲ ಒರೆಸಿ.

ವಿನೆಗರ್: ವಿನೆಗರ್ ಬ್ಯಾಕ್ಟೀರಿಯಾ ವಿರೋಧಿ ಮತ್ತು ನಂಜುನಿರೋಧಕ ಗುಣಗಳಿಂದ ಸಮೃದ್ಧವಾಗಿದೆ. ಜಿರಳೆಗಳು ಅದರ ಬಲವಾದ ವಾಸನೆಯನ್ನು ಇಷ್ಟಪಡುವುದಿಲ್ಲ. ಮನೆಯನ್ನು ಸ್ವಚ್ಛಗೊಳಿಸಲು ಬಳಸುವ ಮಾಪ್ ನೀರಿಗೆ ಅರ್ಧ ಕಪ್ ವಿನೆಗರ್ ಸೇರಿಸುವುದರಿಂದ ಹಲ್ಲಿಗಳು ಮತ್ತು ಜಿರಳೆಗಳನ್ನು ದೂರವಿಡಲು ಸಹಾಯ ಮಾಡುತ್ತದೆ.

ಬೇವಿನ ಎಣ್ಣೆ:  ಬೇವಿನ ಎಣ್ಣೆ ನೈಸರ್ಗಿಕ ಕೀಟ ನಿವಾರಕವಾಗಿದೆ. ನೀರಿಗೆ ಕೆಲವು ಹನಿ ಬೇವಿನ ಎಣ್ಣೆಯನ್ನು ಸೇರಿಸಿ ಅದರಲ್ಲಿ ನೆಲವನ್ನು ಒರೆಸುವುದರಿಂದ ಜಿರಳೆಗಳು ಮತ್ತು ಇತರ ಕೀಟಗಳ ಕಾಟದಿಂದ ಮುಕ್ತಿ ಪಡೆಯಬಹುದು.

ಇದನ್ನೂ ಓದಿ: ನಿಮ್ಮನೆಯಲ್ಲೂ ನೊಣಗಳ ಕಾಟ ಹೆಚ್ಚಿದ್ಯಾ? ಇವುಗಳನ್ನು ತೊಡೆದು ಹಾಕಲು ಇಲ್ಲಿದೆ ಸುಲಭ ಪರಿಹಾರ

ನೀಲಗಿರಿ ಎಣ್ಣೆ: ನೀಲಗಿರಿ ಎಣ್ಣೆಯ ಪರಿಮಳವು ಹಲ್ಲಿಗಳು ಮತ್ತು ಜಿರಳೆಗಳಿಗೆ ಇಷ್ಟವಾಗುವುದಿಲ್ಲ. 10-12 ಹನಿಗಳನ್ನು ನೀರಿನೊಂದಿಗೆ ಬೆರೆಸಿ ಅದರಲ್ಲಿ ನೆಲವನ್ನು ಒರೆಸುವುದರಿಂದ ಮನೆ ತಾಜಾವಾಗಿರುತ್ತದೆ ಮತ್ತು ಕೀಟಗಳ ಕಾಟವೂ ಇರೋದಿಲ್ಲ.

ಅರಿಶಿನ: ಅರಿಶಿನವು ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ನೆಲ ಒರೆಸುವ ನೀರಿಗೆ ಸ್ವಲ್ಪ ಅರಿಶಿನವನ್ನು ಸೇರಿಸುವುದರಿಂದ ನಿಮ್ಮ ಮನೆ ಸ್ವಚ್ಛವಾಗಿರುವುದಲ್ಲದೆ ಮತ್ತು ಹಲ್ಲಿ, ಕೀಟಗಳ ಕಾಟವೂ ಇರೋದಿಲ್ಲ.

ಕಲ್ಲು ಉಪ್ಪು: ಕಲ್ಲು ಉಪ್ಪು ಹಲ್ಲಿಗಳು ಮತ್ತು ಜಿರಳೆಗಳು ಇಷ್ಟಪಡದ ಬಲವಾದ ವಾಸನೆಯನ್ನು ಹೊಂದಿರುತ್ತದೆ. ಇದು ಅವುಗಳ ವಾಸನೆಯ ಪ್ರಜ್ಞೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅವು ಆ ಪ್ರದೇಶದಿಂದ ದೂರವಿರುವಂತೆ ಮಾಡುತ್ತದೆ. ಹಾಗಾಗಿ ನೆಲ ಒರೆಸುವ ನೀರಿಗೆ ಕಲ್ಲು ಉಪ್ಪು ಸೇರಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಯೂಟ್ಯೂಬ್​​ನ ಜನಪ್ರಿಯ ಮತ್ತು ವಿವಾದಾತ್ಮಕ ಶೋಗೆ ಗಾಳ ಹಾಕಿದ ಒಟಿಟಿ – Kannada News | Samay Raina’s India got latent season 2 be stream on Netflix

ಸಾಕಷ್ಟು ಜನಪ್ರಿಯತೆ ಗಳಿಸಿ ಬಳಿಕ ದೊಡ್ಡ ವಿವಾದವಾಗಿ ನಿಂತು ಹೋಗಿದ್ದ ‘ಇಂಡಿಯಾ ಗಾಡ್ ಲೇಟೆಂಟ್’ (India Got Latent) ಹಾಸ್ಯ ಪ್ರಧಾನ ರಿಯಾಲಿಟಿ ಶೋ ಇದೀಗ ಮತ್ತೆ ಬರುತ್ತಿದೆ. ಶೋ ಅನ್ನು ಪ್ರಾರಂಭಿಸಿದ್ದ ಸಮಯ್ ರೈನಾ ಕೆಲ ತಿಂಗಳ ಹಿಂದಷ್ಟೆ ಬೆಂಗಳೂರಿನಲ್ಲಿ ನಡೆದ ಶೋನಲ್ಲಿ ತಾವು ಮತ್ತೆ ಇಂಡಿಯಾ ಗಾಟ್ ಲೇಟೆಂಟ್ ಪ್ರಾರಂಭಿಸುತ್ತಿರುವುದಾಗಿ ಹೇಳಿದ್ದರು. ಹೊಸ ಸೀಸನ್​​ನ ಚಿತ್ರೀಕರಣ ಆಗುತ್ತಿರುವ ಫೋಟೊಗಳು ಸಹ ಕೆಲವು ವೈರಲ್ ಆಗಿದ್ದವು. ಸಮಯ್ ರೈನಾ ಅಭಿಮಾನಿಗಳು ಸಹ ಶೋನ ಹೊಸ ಸೀಸನ್ ನೋಡಲು ಉತ್ಸುಕರಾಗಿದ್ದರು. ಆದರೆ ಈ ಶೋ ಈ ಬಾರಿ ಯೂಟ್ಯೂಬ್​​ನಲ್ಲಿ ಬರುತ್ತಿಲ್ಲ ಬದಲಿಗೆ ನೇರವಾಗಿ ಒಟಿಟಿಗೆ ಬರಲಿದೆ.

‘ಇಂಡಿಯಾ ಗಾಟ್ ಲೇಟೆಂಟ್’ ಸೀಸನ್ 2 ನೆಟ್​​ಫ್ಲಿಕ್ಸ್​​ನಲ್ಲಿ ಬಿಡುಗಡೆ ಆಗಲಿದೆ. ಲೇಟೆಂಟ್ ಶೋ ತನ್ನ ಅನ್​​ಫಿಲ್ಟರ್ಡ್ ಮಾತುಗಳು, ವಿಪರೀತ ತರ್ಲೆ, ಕಾಲೆಳೆತಗಳಿಂದಾಗಿ ಭಾರಿ ಜನಪ್ರಿಯತೆ ಗಳಿಸಿತ್ತು. ಕೊನೆಗೆ ಈ ಅನ್​ಫಿಲ್ಟರ್ಡ್ ಮಾತಿನಿಂದಲೇ ಶೋ ವಿರುದ್ಧ ದೂರು ದಾಖಲಾಗಿ ಶೋ ಬಂದ್ ಆಗಿತ್ತು. ಸ್ಟಾಂಡಪ್ ಶೋನಲ್ಲಿ ಮಾತನಾಡಿದ್ದ ಸಮಯ್ ರೈನಾ, ಎರಡನೇ ಸೀಸನ್ ಅನ್ನು ಅದ್ಧೂರಿಯಾಗಿ ತೆರೆಗೆ ತರುವುದಾಗಿ ಹೇಳಿದ್ದರು. ಆದರೆ ಈಗ ಶೋ ನೆಟ್​​ಫ್ಲಿಕ್ಸ್​ ಕೈಸೇರಿದೆ. ಯೂಟ್ಯೂಬ್​​ನಲ್ಲಿ ಉಚಿತವಾಗಿ ನೋಡಬಹುದಾಗಿದ್ದ ಈ ಶೋ ಅನ್ನು ಈಗ ಹಣ ಕೊಟ್ಟ ನೋಡಬೇಕಿದೆ.

ಸಮಯ್ ರೈನಾ ತಮ್ಮ ಶೋ ಅನ್ನು ನೆಟ್​​ಫ್ಲಿಕ್ಸ್​​ಗೆ ನೀಡಿರುವುದನ್ನು ಅವರ ಅಭಿಮಾನಿಗಳು ವಿರೋಧಿಸಿದ್ದಾರೆ. ಹಲವರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಮಯ್ ರೈನಾ ಹಣದ ಹಿಂದೆ ಹೋಗುತ್ತಿದ್ದಾರೆ ಎಂದೆಲ್ಲ ಟೀಕೆ ಮಾಡಿದ್ದಾರೆ. ಇದರ ಜೊತೆಗೆ ಕೆಲವರು ಶೋನ ಬಗ್ಗೆ ಕಳವಳ ಸಹ ವ್ಯಕ್ತಪಡಿಸಿದ್ದಾರೆ, ‘ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದರೆ ಇದು ಸೆನ್ಸಾರ್ ಆಗುತ್ತದೆಯೇ?”, “ಯೂಟ್ಯೂಬ್‌ನಲ್ಲಿ ಇದ್ದ ಅನ್‌ಫಿಲ್ಟರ್ಡ್ ಹಾಸ್ಯ ಇಲ್ಲಿ ಇರುತ್ತದೆಯೇ?” ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಯೂಟ್ಯೂಬ್‌ನಲ್ಲಿ ಪ್ರಸಾರ ಆಗುತ್ತಿದ್ದಾಗ ಇದ್ದಿದ್ದ ಮುಕ್ತ ವಾತಾವರಣದಂತೆಯೇ ಈ ಶೋ ಇರಬೇಕೆಂದು ಪ್ರೇಕ್ಷಕರು ಅಪೇಕ್ಷಿಸುತ್ತಿದ್ದಾರೆ.

ಇದನ್ನೂ ಓದಿ:ಟಾಸ್ ಗೆದ್ದ ಅಫ್ಘಾನಿಸ್ತಾನ್: ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್​ನಲ್ಲಿ 3 ಬದಲಾವಣೆ

ಕಪಿಲ್ ಶರ್ಮಾ ಶೋ ಟಿವಿಯಲ್ಲಿ ಪ್ರಸಾರ ಆಗುತ್ತಿದ್ದಷ್ಟು ಸಮಯ ಭಾರಿ ಜನಪ್ರಿಯತೆ ಗಳಿಸಿತ್ತು. ಮನೆ-ಮನೆಯಲ್ಲೂ ಶೋ ನೋಡುತ್ತಿದ್ದರು. ಆದರೆ ಕೆಲ ವರ್ಷದ ಹಿಂದೆ ಶೋ ಅನ್ನು ನೆಟ್​​ಫ್ಲಿಕ್ಸ್​​ಗೆ ಸ್ಥಳಾಂತರಿಸಲಾಯ್ತು ಬಳಿಕ ಆ ಶೋನ ಜನಪ್ರಿಯತೆ ಧಾರುಣವಾಗಿ ಕುಸಿಯಿತು. ‘ಇಂಡಿಯಾಸ್ ಗಾಟ್ ಲೇಟೆಂಟ್​​’ಗೆ ಈಗ ಭಾರಿ ಜನಪ್ರಿಯತೆ ಇದೆ, ನೆಟ್​​ಫ್ಲಿಕ್ಸ್​ಗೆ ಹೋದ ಬಳಿಕ ಆ ಶೋನ ಜನಪ್ರಿಯತೆಯೂ ಕಡಿಮೆ ಆಗುತ್ತದೆಯೇ ಎಂಬ ಆತಂಕ ಅಭಿಮಾನಿಗಳದ್ದು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸಿಗರೇಟ್ ಬಿಟ್ಟ ಮೆಲೋನಿ, ವಾಚ್ ಮರೆತ ಮ್ಯಾಕ್ರನ್, ಮತ್ತೆ ಮೆಲೋಡಿ ಮೋಡಿ; ಜಿ7 ಶೃಂಗಸಭೆಯ ವೈರಲ್ ಕ್ಷಣಗಳಿವು – Kannada News | Giorgia Meloni Reveals She Quit Smoking Macron Loses Watch G7 Summit Hot mics catch World leaders talks

ಎವಿಯಾನ್, ಜೂನ್ 17: ಫ್ರಾನ್ಸ್​ನಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ (G7 Summit) ಅನೇಕ ಗಂಭೀರ ವಿಚಾರಗಳು ಚರ್ಚೆಯಾಗಿವೆ. ಇದರ ಜೊತೆಗೆ ಹಾಸ್ಯಮಯ ಸನ್ನಿವೇಶವೂ ನಡೆಯಿತು. ಈ ಸಭೆಯಲ್ಲಿ ಭಾಗವಹಿಸಿದ್ದ ಜಾಗತಿಕ ನಾಯಕರ ತಮಾಷೆಯ ಕ್ಷಣಗಳು ಕೂಡ ರೆಕಾರ್ಡ್ ಆಗಿದೆ. ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಧೂಮಪಾನ ತ್ಯಜಿಸಿದ ರಹಸ್ಯ ಬಿಚ್ಚಿಟ್ಟಿರುವುದು, ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಮರೆತುಹೋದ ವಾಚ್ ಮೇಲೆ ಟ್ರಂಪ್ ಕಣ್ಣು, ಫಿಫಾ ವಿಶ್ವಕಪ್ ಕುರಿತ ನಾಯಕರ ಹರಟೆ ಮುಂತಾದ ಕ್ಷಣಗಳು ಸೆರೆಯಾಗಿವೆ.

ಮಂಗಳವಾರದ ಜಿ7 ಸಭೆಯ ಮುನ್ನ ಜರ್ಮನ್ ಚಾನ್ಸಲರ್ ಫ್ರೆಡ್ರಿಕ್ ಮೆರ್ಜ್ ಅವರು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ, “ಇವತ್ತು ಬೆಳಗ್ಗೆ ಸಿಗರೇಟ್ ಸೇದಿದ್ದೀರಾ?” ಎಂದು ತಮಾಷೆಯಾಗಿ ಕೇಳಿದ್ದಾರೆ. ಅದಕ್ಕೆ ಮೆಲೋನಿ, “ನಾನು ಕಳೆದ ಮೇ 1ರಿಂದ ಸಿಗರೇಟ್ ಮುಟ್ಟಿಲ್ಲ, ಧೂಮಪಾನ ಬಿಟ್ಟಿದ್ದೇನೆ!” ಎಂದು ಉತ್ತರಿಸಿದ್ದಾರೆ. ಇದು ಆಕಸ್ಮಿಕವಾಗಿ ಆನ್ ಆಗಿದ್ದ ಅವರ ಮೈಕ್‌ ಮೂಲಕ ಸುತ್ತಲಿದ್ದವರಿಗೆಲ್ಲ ಕೇಳಿದೆ.

ಇದನ್ನು ಕೇಳಿದ ತಕ್ಷಣ ಟೇಬಲ್ ಸುತ್ತ ಕುಳಿತಿದ್ದ ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ, ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್, ಜಪಾನ್ ಪ್ರಧಾನಿ ಸನಾ ಇ ಟಕೈಚಿ ಸೇರಿದಂತೆ ಹಲವರು ಜೋರಾಗಿ ಚಪ್ಪಾಳೆ ತಟ್ಟಿ ಮೆಲೋನಿಗೆ ಅಭಿನಂದನೆ ಸಲ್ಲಿಸಿದರು. ಕಾರ್ನಿ ಅವರು, “ಹಾಗಾದರೆ ಏನಾದರೂ ನಿಕೋಟಿನ್ ಪ್ಯಾಚ್ ಬಳಸುತ್ತಿದ್ದೀರಾ?” ಎಂದು ಕೇಳಿದಾಗ, ಮೆಲೋನಿ ಎರಡು ಕೈಗಳನ್ನು ಎತ್ತಿ ನಗುತ್ತಿರುವ ವಿಡಿಯೋ ವೈರಲ್ ಆಗಿದೆ. ಬ್ರಿಟನ್ ಪ್ರಧಾನಿ ಸ್ಟಾರ್ಮರ್ ಅವರು ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಅವರಿಗೆ ಕೇಳಿದಾಗ, ಕೋಸ್ಟಾ ತಾವು ಕಳೆದ 21 ವರ್ಷಗಳಿಂದ ಸಿಗರೇಟ್ ಮುಟ್ಟಿಲ್ಲ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಫ್ರಾನ್ಸ್‌ನ ಜಿ7 ಶೃಂಗಸಭೆಯ ಗ್ರೂಪ್ ಫೋಟೋ ವೇಳೆಯೂ ಮೌನವಾಗೇ ನಿಂತ ಟ್ರಂಪ್-ಮೋದಿ

ಶೃಂಗಸಭೆಯ ಜಂಟಿ ಮಧ್ಯಾಹ್ನದ ಭೋಜನದ ಬಳಿಕ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ತಮ್ಮ ವಾಚ್ ಅನ್ನು ಟೇಬಲ್ ಮೇಲೆಯೇ ಮರೆತು ಹೊರನಡೆದಿದ್ದಾರೆ. ಇದನ್ನು ಗಮನಿಸಿದ ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ, “ಮ್ಯಾಕ್ರಾನ್ ವಾಚ್ ಇಲ್ಲೇ ಬಿಟ್ಟು ಹೋಗಿದ್ದಾರೆ, ಈಗ ಅದು ನಮ್ಮ ಬಳಿ ಇದೆ” ಎಂದು ತಮಾಷೆ ಮಾಡಿದ್ದಾರೆ. ಕೂಡಲೇ ಅಲ್ಲೇ ಇದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಅವನು ಬಿಟ್ಟು ಹೋಗಿದ್ದರೆ ಅದನ್ನು ನನಗೆ ಕೊಟ್ಟುಬಿಡಿ, ಕೊಡಿ ಇಲ್ಲಿ!” ಎಂದು ತಮಾಷೆಯಾಗಿ ಹೇಳಿದ್ದು ಕೇಳಿ ಸುತ್ತಲಿದ್ದ ನಾಯಕರು ನಗುತ್ತಿರುವುದು ಕೂಡ ರೆಕಾರ್ಡ್ ಆಗಿದೆ.

ಮೆಲೋನಿ-ಮೋದಿ ತಮಾಷೆ:

ಜಾಗತಿಕವಾಗಿ ಸದಾ ಸದ್ದು ಮಾಡುವ ಪ್ರಧಾನಿ ನರೇಂದ್ರ ಮೋದಿ ಮತ್ತು ಜಾರ್ಜಿಯಾ ಮೆಲೋನಿ ಅವರ ‘ಮೆಲೋಡಿ’ (Melodi) ಜುಗಲ್‌ಬಂದಿ ಜಿ7 ಶೃಂಗಸಭೆಯಲ್ಲೂ ಮುಂದುವರಿದಿದೆ. ಗ್ರೂಪ್ ಫೋಟೋಗೂ ಮುನ್ನ ಮೋದಿ ಅವರನ್ನು ಬರಮಾಡಿಕೊಂಡ ಮೆಲೋನಿ, “ನಿಮ್ಮನ್ನು ಮತ್ತೆ ಭೇಟಿಯಾಗಿದ್ದು ಸಂತೋಷ ತಂದಿದೆ” ಎಂದಿದ್ದಾರೆ. ಅದಕ್ಕೆ ಪ್ರಧಾನಿ ಮೋದಿ ಅವರು ನಗುತ್ತಾ ‘ಇನ್‌ಸ್ಟಾಗ್ರಾಮ್’ ಎಂದು ಪ್ರಸ್ತಾಪಿಸಿದಾಗ, ಮೆಲೋನಿ ತಕ್ಷಣವೇ, “ಹೌದು, ನಾವಿಬ್ಬರೂ ಇನ್‌ಸ್ಟಾಗ್ರಾಮ್‌ನಲ್ಲಿ ಅತ್ಯಂತ ಜನಪ್ರಿಯ ಜೋಡಿ!” ಎಂದು ಉತ್ತರಿಸಿ ನಕ್ಕಿದ್ದಾರೆ.

ಇದನ್ನೂ ಓದಿ: ಜಿ7 ಶೃಂಗಸಭೆ: ಫ್ರಾನ್ಸ್‌ಗೆ ಪ್ರಧಾನಿ ಮೋದಿ ಭೇಟಿ, ಇಂದು ಅಮೆರಿಕ ಅಧ್ಯಕ್ಷ ಟ್ರಂಪ್ ಜೊತೆ ಮಹತ್ವದ ಮಾತುಕತೆ

ಪ್ರಸ್ತುತ ಉತ್ತರ ಅಮೆರಿಕದಲ್ಲಿ ನಡೆಯುತ್ತಿರುವ ಫಿಫಾ (FIFA) ವಿಶ್ವಕಪ್ ಕುರಿತು ಕೂಡ ಜಾಗತಿಕ ನಾಯಕರು ಮುಕ್ತವಾಗಿ ಹರಟೆ ಹೊಡೆದಿದ್ದಾರೆ. ಫ್ರಾನ್ಸ್ ತಂಡದ ಬೆಂಬಲದ ಘೋಷಣೆಗಳು ಕೇಳಿಬಂದರೆ, ಸ್ಪೇನ್ ವಿರುದ್ಧ ಕೇಪ್ ವರ್ಡೆ ತಂಡ 0-0 ಗೋಲುಗಳಿಂದ ಪಂದ್ಯ ಡ್ರಾ ಮಾಡಿಕೊಂಡಿದ್ದನ್ನು ಬ್ರಿಟನ್ ಪ್ರಧಾನಿ ಸ್ಟಾರ್ಮರ್ ಆಶ್ಚರ್ಯದಿಂದ ನೆನಪಿಸಿಕೊಂಡಿದ್ದಾರೆ. ಮತ್ತೊಂದೆಡೆ, ಟ್ರಂಪ್ ಅವರು ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷರಾದ ಆಂಟೋನಿಯೊ ಕೋಸ್ಟಾ ಅವರೊಂದಿಗೆ ಮಾತನಾಡುತ್ತಾ, ಡೆನ್ಮಾರ್ಕ್ ಅಡಿಯಲ್ಲಿರುವ ಸ್ವಾಯತ್ತ ಪ್ರದೇಶವಾದ ‘ಗ್ರೀನ್‌ಲ್ಯಾಂಡ್’ ಅನ್ನು ಅಮೆರಿಕ ವಶಪಡಿಸಿಕೊಳ್ಳುವ ಹಳೆಯ ವಿವಾದಾತ್ಮಕ ವಿಷಯವನ್ನು ಮತ್ತೆ ರಹಸ್ಯವಾಗಿ ಪ್ರಸ್ತಾಪಿಸಿ ಕುತೂಹಲ ಮೂಡಿಸಿದ್ದಾರೆ.

ಮುಂದಿನ ವರ್ಷ ಫ್ರೆಂಚ್ ಆಲ್ಪ್ಸ್‌ನಲ್ಲಿ ನಡೆಯಲಿರುವ ವಿಶ್ವ ಸೈಕ್ಲಿಂಗ್ ಚಾಂಪಿಯನ್‌ಶಿಪ್ ಪ್ರಚಾರಕ್ಕಾಗಿ ಅಧ್ಯಕ್ಷ ಮ್ಯಾಕ್ರನ್ ಅವರು ಶೃಂಗಸಭೆಗೆ ಬಂದಿದ್ದ ಎಲ್ಲ 7 ರಾಷ್ಟ್ರಗಳ ನಾಯಕರಿಗೆ ವಿಶಿಷ್ಟ ವಿನ್ಯಾಸದ ಸೈಕಲ್‌ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಗಾಲ್ಫ್ ಹೊರತುಪಡಿಸಿ ಬೇರೆ ಯಾವುದೇ ವ್ಯಾಯಾಮ ಮಾಡದ ಟ್ರಂಪ್ ಈ ಸೈಕಲ್ ಅನ್ನು ಹೇಗೆ ಬಳಸಲಿದ್ದಾರೆ ಎಂಬುದು ಅಲ್ಲಿ ಚರ್ಚೆಗೆ ಗ್ರಾಸವಾಯಿತು. ಇಂತಹ ಹಲವು ಲಘು ಪ್ರಸಂಗಗಳಿಗೆ ಜಿ7 ಶೃಂಗಸಭೆ ಸಾಕ್ಷಿಯಾಯಿತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

‘ದಿ ಡೈಲಿ ಡ್ರಾಪ್’ ಕೋರ್ಟ್ ರೂಮ್ ಸೀರೀಸ್​ಗೆ ಟಿಎನ್‌ ಸೀತಾರಾಮ್‌ ಪುತ್ರಿ ಅಶ್ವಿನಿ ನಿರ್ದೇಶನ

Source link

IND vs AFG: ಅಫ್ಘನ್ ಎ ವಿರುದ್ಧ 101 ರನ್​ಗಳಿಂದ ಗೆದ್ದು ಫೈನಲ್​ಗೇರಿದ ಭಾರತ ಎ – Kannada News | India A Defeats Afghanistan A by 101 Runs, Qualifies for Tri Series Final in Dambulla

ಶ್ರೀಲಂಕಾದ ದಂಬಲ್ಲಾದಲ್ಲಿ ನಡೆದ ತ್ರಿಕೋನ ಸರಣಿಯ 5ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ಎ ಹಾಗೂ ಭಾರತ ಎ ತಂಡಗಳು ಮುಖಾಮುಖಿಯಾಗಿದ್ದವು. ಫೈನಲ್​ಗೆ ತನ್ನ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಉಭಯ ತಂಡಗಳಿಗೆ ಈ ಪಂದ್ಯದಲ್ಲಿನ ಗೆಲುವು ಅತ್ಯವಶ್ಯಕವಾಗಿತ್ತು. ಅದರಲ್ಲೂ ಸತತ ಎರಡು ಪಂದ್ಯಗಳನ್ನು ಸೋತಿದ್ದ ಭಾರತ ಎ ತಂಡ ಫೈನಲ್ ರೇಸ್​ನಲ್ಲಿ ಉಳಿಯಬೇಕೆಂದರೆ ಈ ಪಂದ್ಯವನ್ನು ಗೆಲ್ಲಲೇಬೇಕಿತ್ತು. ಅದರಂತೆ ಈ ನಿರ್ಣಾಯಕ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಭಾರತ ಎ ತಂಡ 101 ರನ್​ಗಳಿಂದ ಅಫ್ಘಾನಿಸ್ತಾನ ಎ ತಂಡವನ್ನು ಸೋಲಿಸುವ ಮೂಲಕ ಹಿಂದಿನ ಸೋಲಿಗೆ ಸೇಡು ತೀರಿಸಿಕೊಂಡಿದ್ದಲ್ಲದೆ ಅಧಿಕೃತವಾಗಿ ಫೈನಲ್​ಗೂ ಟಿಕೆಟ್ ಪಡೆದುಕೊಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ಎ 319 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಅಫ್ಘನ್ ಎ ಕೇವಲ218 ರನ್​ಗಳಿಗೆ ಆಲೌಟ್ ಆಯಿತು.

Source link

ಇನ್​ಸ್ಟಾ, ಫೇಸ್​ಬುಕ್, ವಾಟ್ಸಾಪ್​ಗೆ ಪೇಡ್ ಸಬ್​ಸ್ಕ್ರಿಶನ್ಸ್ ಆರಂಭಿಸಲು ಮೆಟಾ ನಿರ್ಧಾರ; ತಿಂಗಳಿಗೆ ಎಷ್ಟಿರುತ್ತೆ ಚಂದಾದಾರಿಕೆ? – Kannada News | Meta announces subscription plans for Facebook, WhatsApp, Instagram premium service

ವಾಷಿಂಗ್ಟನ್, ಜೂನ್ 17: ಮೆಟಾ ಸಂಸ್ಥೆ ತನ್ನ ಪ್ರಸಿದ್ಧ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್ ಬಳಕೆಗೆ ಹಣ ವಿಧಿಸಲು (Paid Subscriptions) ದಿಢೀರ್ ನಿರ್ಧಾರ ಮಾಡಿದೆ. ಮೆಟಾ ಕಂಪನಿಯ ಪ್ರಾಡಕ್ಟ್ ವಿಭಾಗದ ಮುಖ್ಯಸ್ಥರಾದ ನವೋಮಿ ಗ್ಲೈಟ್ (Naomi Gleit) ಅವರು ಜಾಗತಿಕವಾಗಿ ಹೊಸ “ಪ್ಲಸ್” (Plus) ಸಬ್‌ಸ್ಕ್ರಿಪ್ಷನ್ ಯೋಜನೆಗಳನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಅದರ ಪ್ರಕಾರ, ಸಬ್​ಸ್ಕ್ರಿಪ್ಷನ್ ದರಗಳು ಈ ಕೆಳಕಂಡಂತಿವೆ:

  • ಇನ್‌ಸ್ಟಾಗ್ರಾಮ್ ಪ್ಲಸ್ (Instagram Plus): ತಿಂಗಳಿಗೆ ಸುಮಾರು $3.99 (ಸುಮಾರು ₹377)
  • ಫೇಸ್‌ಬುಕ್ ಪ್ಲಸ್ (Facebook Plus): ತಿಂಗಳಿಗೆ ಸುಮಾರು $3.99 (ಸುಮಾರು ₹377)
  • ವಾಟ್ಸಾಪ್ ಪ್ಲಸ್ (WhatsApp Plus): ತಿಂಗಳಿಗೆ ಸುಮಾರು $2.99 (ಸುಮಾರು ₹282)

ನಿಮ್ಮ ಸದ್ಯದ ಸಾಮಾನ್ಯ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಹಾಗೂ ವಾಟ್ಸಾಪ್ ಆ್ಯಪ್‌ಗಳು ಎಂದಿನಂತೆ ಉಚಿತವಾಗಿಯೇ ಇರಲಿವೆ. ಎಕ್ಸ್​ನಲ್ಲಿ ಇರುವ ರೀತಿಯಲ್ಲಿ ಈ ಪ್ಲಾನ್‌ಗಳು ಕೇವಲ ಕೆಲವು ವಿಶೇಷ ಮತ್ತು ಪ್ರೀಮಿಯಂ ಫೀಚರ್‌ಗಳನ್ನು ಬಳಸಬಯಸುವವರಿಗಾಗಿ ಮಾತ್ರ ತರಲಾಗಿರುವ ಐಚ್ಛಿಕ (Optional) ಯೋಜನೆಗಳಾಗಿವೆ.

ಇದನ್ನೂ ಓದಿ: ಜಿ7 ಸಭೆಯಲ್ಲಿ ನಾವಿಕರ ರಕ್ಷಣೆ ಬಗ್ಗೆ ಮೋದಿ ಮಾತನಾಡಿದ್ದು ಸುಮ್ಮನೆ ಅಲ್ಲ; ಜೀವದ ಹಂಗು ತೊರೆದು ದುಡಿಯುತ್ತಿದ್ದಾರೆ ಭಾರತೀಯ ನಾವಿಕರು

ಮೆಟಾ ಇದ್ದಕ್ಕಿದ್ದಂತೆ ಹಣ ವಿಧಿಸುತ್ತಿರುವುದಕ್ಕೆ ಪ್ರಮುಖ ಕಾರಣಗಳೇನು?

ಮೆಟಾ ಸಂಸ್ಥೆಯು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ರೇಸ್‌ನಲ್ಲಿ ಮುಂಚೂಣಿಯಲ್ಲಿರಲು ತನ್ನ AI ಡೇಟಾ ಸೆಂಟರ್‌ಗಳು ಮತ್ತು ಮೂಲಸೌಕರ್ಯಗಳಿಗಾಗಿ ಈ ವರ್ಷವೊಂದರಲ್ಲೇ ಬರೋಬ್ಬರಿ $125 ಬಿಲಿಯನ್‌ನಿಂದ $145 ಬಿಲಿಯನ್ (ಸುಮಾರು ₹10 ಲಕ್ಷ ಕೋಟಿಗೂ ಅಧಿಕ) ಬಂಡವಾಳ ಹೂಡಿಕೆ ಮಾಡುತ್ತಿದೆ. ಈ ಭಾರಿ ವೆಚ್ಚವನ್ನು ಸರಿದೂಗಿಸಲು ಕಂಪನಿಗೆ ಹೊಸ ಆದಾಯದ ಮೂಲಗಳ ಅಗತ್ಯವಿದೆ.

ಇಷ್ಟು ವರ್ಷಗಳ ಕಾಲ ಮೆಟಾ ಕೇವಲ ಜಾಹೀರಾತುಗಳ (Ad Revenue) ಮೂಲಕವೇ ಶೇ. 90ಕ್ಕಿಂತ ಹೆಚ್ಚು ಹಣ ಗಳಿಸುತ್ತಿತ್ತು. ಆದರೆ ಈಗ ಮಾರುಕಟ್ಟೆಯ ಏರಿಳಿತಗಳಿಂದ ಸುರಕ್ಷಿತವಾಗಿರಲು ಬಳಕೆದಾರರಿಂದಲೇ ನೇರ ಆದಾಯ ಪಡೆಯುವ ಚಂದಾದಾರಿಕೆ (Subscription Model) ಮಾದರಿಗೆ ಬದಲಾಗುತ್ತಿದೆ.

ಹೂಡಿಕೆದಾರರ ಒತ್ತಡವೂ ಮೆಟಾ ನಿರ್ಧಾರಕ್ಕೆ ಕಾರಣವಾಗಿರಬಹುದು. ಮೆಟಾ ಕಂಪನಿಯು AI ತಂತ್ರಜ್ಞಾನಕ್ಕಾಗಿ ಇಷ್ಟೊಂದು ಹಣ ಸುರಿಯುತ್ತಿರುವುದರ ಬಗ್ಗೆ ಹೂಡಿಕೆದಾರರು ಪ್ರಶ್ನೆ ಎತ್ತಿದ್ದರು. ಆ ಹೂಡಿಕೆಯಿಂದ ತಕ್ಷಣಕ್ಕೆ ಆದಾಯ ಹೇಗೆ ಬರುತ್ತದೆ ಎಂಬುದನ್ನು ತೋರಿಸಲು ಮೆಟಾ ಈ ಹಾದಿ ಹಿಡಿದಿದೆ.

ಹಣ ಪಾವತಿಸುವ ಇನ್​ಸ್ಟಾ, ಫೇಸ್​ಬುಕ್ “ಪ್ಲಸ್” ಬಳಕೆದಾರರಿಗೆ ಏನೆಲ್ಲಾ ಸಿಗಲಿದೆ?

  • ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಪ್ಲಸ್‌ನಲ್ಲಿ ಸ್ಟೋರಿ ರಿವಾಚ್ ಫೀಚರ್ ಇದೆ. ನಿಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯನ್ನು ಯಾರಾದರೂ ಮತ್ತೆ ಮತ್ತೆ ನೋಡಿದ್ದಾರಾ (Rewatched) ಎಂಬುದರ ಅಂಕಿ-ಅಂಶ ತಿಳಿಯಬಹುದು.
  • ಬೇರೆಯವರ ಸ್ಟೋರಿಗಳನ್ನು ಅವರಿಗೆ ತಿಳಿಯದಂತೆ (ವೀಕ್ಷಕರ ಪಟ್ಟಿಯಲ್ಲಿ ನಿಮ್ಮ ಹೆಸರು ಬರದಂತೆ) ರಹಸ್ಯವಾಗಿ (Stealth Mode) ಮೊದಲೇ ವೀಕ್ಷಿಸಬಹುದು (Preview).
  • ಸಾಮಾನ್ಯವಾಗಿ 24 ಗಂಟೆಗಳಲ್ಲಿ ಕಣ್ಮರೆಯಾಗುವ ಸ್ಟೋರಿಗಳನ್ನು ಇನ್ನು ಹೆಚ್ಚು ಸಮಯ ಇಡಬಹುದು.
  • ವಾರಕ್ಕೊಮ್ಮೆ ಒಂದು ನಿರ್ದಿಷ್ಟ ಸ್ಟೋರಿಯನ್ನು ಹೈಲೈಟ್ ಮಾಡುವ ಮೂಲಕ ನಿಮ್ಮ ಪ್ರೊಫೈಲ್ ಹೆಚ್ಚಿನ ಜನರನ್ನು ತಲುಪುವಂತೆ (Reach) ಮಾಡಬಹುದು.

ಇದನ್ನೂ ಓದಿ: ಪಿಜ್ಜಾ ಹಟ್ 2.7 ಬಿಲಿಯನ್ ಡಾಲರ್​ಗೆ ಮಾರಾಟ; ಚೀನಾಯೇತರ ಮಾರುಕಟ್ಟೆಗಳಲ್ಲಿನ ಬ್ಯುಸಿನೆಸ್ ಲಾಂಗ್​ರೇಂಜ್ ಕ್ಯಾಪಿಟಲ್ ಪಾಲು

ವಾಟ್ಸಾಪ್ ಪ್ಲಸ್‌ ಬಳಕೆದಾರರಿಗೆ ಏನು ವಿಶೇಷ?

ವಾಟ್ಸಾಪ್ ಕಸ್ಟಮೈಸ್ ಮಾಡಿಕೊಳ್ಳಬಹುದು. ಆ್ಯಪ್‌ನ ಐಕಾನ್ ಬದಲಾಯಿಸುವುದು, ಪ್ರೀಮಿಯಂ ಚಾಟ್ ಥೀಮ್‌ಗಳು ಹಾಗೂ ಕಸ್ಟಮ್ ರಿಂಗ್‌ಟೋನ್‌ಗಳನ್ನು ಇಟ್ಟುಕೊಳ್ಳಬಹುದು. ಪ್ರೀಮಿಯಂ ಸ್ಟಿಕ್ಕರ್‌ಗಳು ಮತ್ತು ಹೆಚ್ಚುವರಿ ಚಾಟ್‌ಗಳನ್ನು ಪ್ರಮುಖವಾಗಿ ಪಿನ್ (Pin chats) ಮಾಡಿ ಇಟ್ಟುಕೊಳ್ಳುವ ಸೌಲಭ್ಯ ಇರುತ್ತದೆ.

‘ಮೆಟಾ ಒನ್’ (Meta One) ಮತ್ತು ಸುಧಾರಿತ AI ಪ್ಲಾನ್‌ಗಳು

ಭವಿಷ್ಯದಲ್ಲಿ ಈ ಎಲ್ಲಾ ವಿಭಿನ್ನ ಸಬ್‌ಸ್ಕ್ರಿಪ್ಷನ್‌ಗಳನ್ನು ಒಟ್ಟುಗೂಡಿಸಿ ‘ಮೆಟಾ ಒನ್’ (Meta One) ಎಂಬ ಒಂದೇ ಬ್ರಾಂಡ್ ಅಡಿಯಲ್ಲಿ ತರಲು ಕಂಪನಿ ಯೋಜಿಸಿದೆ. ಇದರ ಜೊತೆಗೆ, ಮೆಟಾ AI ಅನ್ನು ಅತಿಯಾಗಿ ಬಳಸುವವರಿಗಾಗಿ ಸುಧಾರಿತ ಇಮೇಜ್/ವಿಡಿಯೋ ಜನರೇಶನ್ ಮತ್ತು ಸಂಕೀರ್ಣ ಪ್ರಶ್ನೆಗಳಿಗೆ ಉತ್ತರಿಸುವ ಪ್ರತ್ಯೇಕ ಪ್ರೀಮಿಯಂ AI ಪ್ಲಾನ್‌ಗಳನ್ನು ಸಹ ತರಲಾಗುತ್ತಿದ್ದು, ಇವುಗಳ ಬೆಲೆ ತಿಂಗಳಿಗೆ $7.99 ರಿಂದ $19.99 ರವರೆಗೆ ಇರಲಿದೆ ಎಂದು ವರದಿ ತಿಳಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

IND vs AFG: 22 ಬೌಂಡರಿ, 154 ರನ್..! ದಿಗ್ಗಜರ ದಾಖಲೆಗಳನ್ನು ಮುರಿದ ಶುಭ್​ಮನ್ ಗಿಲ್

Source link