Category Archives: Blog

Your blog category

ಬಿಡುಗಡೆ ಆಯ್ತು ‘ಸ್ಪೈಡರ್ ಮ್ಯಾನ್’ ಟ್ರೈಲರ್, ಗೆಳೆಯರೇ ಈಗ ಶತ್ರುಗಳು – Kannada News | Spiderman Brand new day movie trailer released

ಹೊಸ ‘ಸ್ಪೈಡರ್​ಮ್ಯಾನ್’ (Spiderman) ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಸಿನಿಮಾಕ್ಕೆ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಎಂದು ಹೆಸರಿಡಲಾಗಿದ್ದು, ಸಿನಿಮಾದ ಎರಡನೇ ಟ್ರೈಲರ್ ಇದೀಗ ಬಿಡುಗಡೆಯಾಗಿದೆ. ಈ ಹಿಂದಿನ ‘ಸ್ಪೈಡರ್​​ಮ್ಯಾನ್: ನೋ ವೇ ಹೋಮ್​’ ಸಿನಿಮಾನಲ್ಲಿ ಸ್ಪೈಡರ್​​ಮ್ಯಾನ್ ಅನ್ನು ಇಡೀ ಜಗತ್ತೇ ಮರೆತು ಹೋಗುತ್ತದೆ. ಅವನ ಗೆಳೆಯರು, ಕುಟುಂಬದವರು ಎಲ್ಲರೂ ಸ್ಪೈಡರ್​​ಮ್ಯಾನ್ ಇದ್ದನೆಂಬುದನ್ನೇ ಮರೆತಿದ್ದಾರೆ. ಹಾಗಾಗಿ ಇದೀಗ ‘ಸ್ಪೈಡರ್​​ಮ್ಯಾನ್​’ ಒಂಟಿಯಾಗಿದ್ದಾನೆ. ಅವನಿಗೆ ಗೆಳೆಯರಿಲ್ಲ, ಅವನ ಗರ್ಲ್​​ಫ್ರೆಂಡ್ ಸಹ ಬೇರೊಬ್ಬನ ಜೊತೆಗಿದ್ದಾಳೆ. ಇದೀಗ ಬಿಡುಗಡೆ ಆಗಿರುವ ಟ್ರೈಲರ್ ನೋಡಿದರೆ ಆತನ ಗೆಳೆಯರೇ ಈಗ ವೈರಿಗಳಾಗಿದ್ದಾರೆ.

ಈಗ ಬಿಡುಗಡೆ ಆಗಿರುವ ಟ್ರೈಲರ್‌ನಲ್ಲಿ ತೋರಿಸಿರುವಂತೆ ಪೀಟರ್ (‘ಸ್ಪೈಡರ್​​ಮ್ಯಾನ್​’) ನ್ಯೂಯಾರ್ಕ್‌ನಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಾ, ಸ್ಪೈಡರ್ ಮ್ಯಾನ್ ಆಗಿ ಬದುಕುತ್ತಿರುವುದು ಕಾಣುತ್ತದೆ. ನಗರವನ್ನು ರಕ್ಷಿಸುತ್ತಿದ್ದರೂ, ತನ್ನ ಸ್ನೇಹಿತರು ಮತ್ತು ಪ್ರೀತಿಪಾತ್ರರೊಂದಿಗಿನ ಸಂಪರ್ಕವನ್ನು ಕಳೆದುಕೊಂಡಿರುವ ನೋವು ಅವನಲ್ಲಿ ಎದ್ದು ಕಾಣುತ್ತದೆ.

ಈ ಟ್ರೈಲರ್‌ನಲ್ಲಿ ಪೀಟರ್‌ಗೆ ಉಂಟಾಗುತ್ತಿರುವ ನಿಗೂಢ ದೈಹಿಕ ಬದಲಾವಣೆ ಅಥವಾ ರೂಪಾಂತರದ ಬಗ್ಗೆ ತೋರಿಸಲಾಗಿದೆ. ಸ್ಪೈಡರ್​​ಮ್ಯಾನ್ ದೇಹದಲ್ಲಿ ಬದಲಾವಣೆ ಆಗುತ್ತಿದ್ದು, ಆತ ಕೆಲ ಬಾರಿ ಒಳ್ಳೆಯವನಾಗಿ ಕೆಲ ಬಾರಿ ಕೆಟ್ಟವನಾಗಿಯೂ ವರ್ತಿಸುತ್ತಿದ್ದಾನೆ​. ಅವನ ಕಣ್ಣುಗಳು ಕಪ್ಪಗಾಗುತ್ತಿದ್ದು, ವಿಲನ್ ಆಗಿ ಬದಲಾಗುತ್ತಿದ್ದಾನೆ. ತನ್ನಲ್ಲಿರುವ ಋಣಾತ್ಮಕ ಅಂಶವನ್ನು ತೆಗೆದು ಹಾಕುವ ಪ್ರಯತ್ನವೂ ಮಾಡುತ್ತಿದ್ದಾನೆ.

ಇದನ್ನೂ ಓದಿ:ಸ್ಪೈಡರ್​ಮ್ಯಾನ್ ವೇಷ ತೊಟ್ಟು ಬೈಕ್​​ನಲ್ಲಿ ಸ್ಟಂಟ್ ಮಾಡಿದ ವ್ಯಕ್ತಿ,15 ಸಾವಿರ ರೂ. ದಂಡ

ಟ್ರೈಲರ್‌ನಲ್ಲಿನ ಅತ್ಯಂತ ಅನಿರೀಕ್ಷಿತ ಕ್ಷಣವೆಂದರೆ ಹಲ್ಕ್ ಮತ್ತು ಸ್ಪೈಡರ್ ಮ್ಯಾನ್ ನಡುವಿನ ಕಾದಾಟ. ತನ್ನ ದೇಹದಲ್ಲಿನ ಬದಲಾವಣೆಗಳ ಬಗ್ಗೆ ಬ್ಯಾನ್ನರ್‌ನ ಸಹಾಯ ಪಡೆಯಲು ಪೀಟರ್ ಹೋಗುತ್ತಾನೆ, ಆದರೆ ವಿಷಯವು ಇಬ್ಬರೂ ಹೀರೋಗಳ ನಡುವಿನ ಭೀಕರ ಕದನಕ್ಕೆ ದಾರಿ ಮಾಡಿಕೊಡುತ್ತದೆ. ಹಲ್ಕ್ ತನ್ನ ಸ್ವಂತ ಇಚ್ಛೆಯಿಂದಲ್ಲದೆ, ಯಾವುದೋ ನಿಗೂಢ ಶಕ್ತಿಯ ಪ್ರಭಾವಕ್ಕೆ ಒಳಗಾಗಿ ಸ್ಪೈಡರ್ ಮ್ಯಾನ್ ಮೇಲೆ ದಾಳಿ ಮಾಡುತ್ತಿರಬಹುದು ಎಂಬ ಸುಳಿವು ಟ್ರೈಲರ್‌ನಲ್ಲಿದೆ. ಅಸಲಿಗೆ ಇಬ್ಬರೂ ಅವೇಂಜರ್ಸ್ ಟೀಮ್​​ನಲ್ಲಿರುವವರು ಆದರೆ ಈಗ ಅವರೇ ವಿರೋಧಿಗಳಾಗಿ ಕಿತ್ತಾಡಿದ್ದಾರೆ.

ಟ್ರೈಲರ್​​ನಲ್ಲಿ ಸಾಕಷ್ಟು ಆಕ್ಷನ್, ಭಾವುಕ ಸನ್ನಿವೇಶಗಳನ್ನು ತೋರಿಸಲಾಗಿದೆ. ಆದರ ಜೊತೆಗೆ ಕೆಲವು ಕುತೂಹಲಗಳನ್ನು ಸಹ ಮೂಡಿಸಲಾಗಿದೆ. ಕೆಲವು ಹೊಸ ಪಾತ್ರಗಳನ್ನು ಈ ಸಿನಿಮಾನಲ್ಲಿ ಪರಿಚಯ ಮಾಡಿಸಲಾಗಿದೆ. ಜನರ ಮನಸ್ಸನ್ನು ಕಬ್ಜ ಮಾಡುವ ಪಾತ್ರ ಒಂದಿದೆ. ಇನ್ನೂ ಕೆಲವು ಹೊಸ ಪಾತ್ರಗಳಿವೆ. ಜಪಾನಿ ಸಮುರಾಯ್ ರೀತಿಯ ಜನರ ವಿರುದ್ಧ ಸ್ಪೈಡರ್ ಮ್ಯಾನ್ ಫೈಟ್ ಮಾಡುತ್ತಿದ್ದಾನೆ. ಇದೆಲ್ಲ ಈ ಹಿಂದಿನ ಸ್ಪೈಡರ್​​ಮ್ಯಾನ್ ಕತೆಗಳಿಂದ ಹೊರತಾಗಿರುವ ಅಂಶಗಳಾಗಿವೆ.

ಈ ಹೊಸ ಟ್ರೈಲರ್‌ಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕತೆಯ ಗಂಭೀರತೆ, ಭಾವನಾತ್ಮಕ ಅಂಶಗಳು ಮತ್ತು ದೊಡ್ಡ ಮಟ್ಟದ ಆಕ್ಷನ್ ದೃಶ್ಯಗಳನ್ನು ಅನೇಕರು ಮೆಚ್ಚಿಕೊಂಡಿದ್ದಾರೆ. ಒಟ್ಟಾರೆಯಾಗಿ, ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ 2026 ರ ಅತೀ ಹೆಚ್ಚು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಡೆಸ್ಟಿನ್ ಡೇನಿಯಲ್ ಕ್ರೆಟನ್ ನಿರ್ದೇಶನದ ಈ ಚಿತ್ರವು ಜುಲೈ 30 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕಾಂಗ್ರೆಸ್ ಜೊತೆ ವಿಲೀನಕ್ಕೆ ಉದ್ಧವ್ ಠಾಕ್ರೆ ಪ್ಲಾನ್; ಶಿವಸೇನೆಯ 6 ಬಂಡಾಯ ಸಂಸದರಿಂದ ಸ್ಪೀಕರ್‌ಗೆ ದೂರು – Kannada News | Shiv Sena Congress Merger Plan 6 Rebel MPs Letter to Lok Sabha Speaker Om Birla

ಮುಂಬೈ, ಜೂನ್ 18: ಮಹಾರಾಷ್ಟ್ರ ರಾಜಕಾರಣದಲ್ಲಿ ಶಿವಸೇನೆ (ಯುಬಿಟಿ) ಪಕ್ಷಕ್ಕೆ ಭಾರಿ ಆಘಾತ ಎದುರಾಗಿದ್ದು, ಉದ್ಧವ್ ಠಾಕ್ರೆ ಬಣದ 9 ಲೋಕಸಭಾ ಸಂಸದರ ಪೈಕಿ 6 ಬಂಡಾಯ ಸಂಸದರು ದೆಹಲಿಯಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿ ಪತ್ರ ಸಲ್ಲಿಸಿದ್ದಾರೆ. ಶಿವಸೇನೆ (UBT) ಪಕ್ಷದಲ್ಲಿ ಮತ್ತೊಮ್ಮೆ ಭಾರಿ ಬಿರುಕು ಉಂಟಾಗಿದ್ದು, 6 ಲೋಕಸಭಾ ಸಂಸದರು ಉದ್ಧವ್ ಠಾಕ್ರೆ (Uddhav Thackeray) ವಿರುದ್ಧ ಬಂಡಾಯವೆದ್ದಿದ್ದಾರೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ 4 ಪುಟಗಳ ಸುದೀರ್ಘ ಪತ್ರ ನೀಡಿರುವ ಬಂಡಾಯ ಸಂಸದರು, “ಉದ್ಧವ್ ಠಾಕ್ರೆ ಅವರು ಶಿವಸೇನೆಯನ್ನು ಕಾಂಗ್ರೆಸ್ ಪಕ್ಷದೊಂದಿಗೆ ವಿಲೀನಗೊಳಿಸಲು ರಹಸ್ಯ ಯೋಜನೆ ರೂಪಿಸಿದ್ದಾರೆ. ನಮಗೆ ಅವರ ನಾಯಕತ್ವದ ಮೇಲೆ ನಂಬಿಕೆಯಿಲ್ಲ. ಹೀಗಾಗಿ, ನಾವು ಆ ಪಕ್ಷದಿಂದ ಹೊರಬರುತ್ತಿದ್ದೇವೆ” ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ, ತಾವು ಏಕನಾಥ್ ಶಿಂಧೆ ನೇತೃತ್ವದ ಅಸಲಿ ಶಿವಸೇನೆಯೊಂದಿಗೆ ವಿಲೀನಗೊಳ್ಳುವುದಾಗಿ ಘೋಷಿಸಿದ್ದಾರೆ.

ಬಂಡಾಯ ಸಂಸದರು ಉದ್ಧವ್ ಠಾಕ್ರೆ ಅವರ ನಾಯಕತ್ವದ ಬಗ್ಗೆ ತೀವ್ರ ಅಸಮಾಧಾನ ಹೊಂದಿದ್ದರು ಎನ್ನಲಾಗಿದೆ. ತಮ್ಮ ಕ್ಷೇತ್ರಗಳಿಗೆ ಭೇಟಿ ನೀಡುವಂತೆ ಪದೇ ಪದೇ ಮನವಿ ಮಾಡಿದರೂ ಉದ್ಧವ್ ಠಾಕ್ರೆ ಅದನ್ನು ನಿರ್ಲಕ್ಷಿಸಿದ್ದರು ಮತ್ತು ಚುನಾವಣಾ ಸಮಯದಲ್ಲಿ ಪಕ್ಷದಿಂದ ಯಾವುದೇ ಬೆಂಬಲ ಸಿಕ್ಕಿರಲಿಲ್ಲ ಎಂದು ಸಂಸದರು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ, ಉದ್ಧವ್ ಠಾಕ್ರೆ ಅವರ ಪುತ್ರ ಆದಿತ್ಯ ಠಾಕ್ರೆ ಅವರನ್ನು ಭೇಟಿಯಾಗಲು ಕೂಡ ತಮಗೆ ಅವಕಾಶ ಸಿಗುತ್ತಿರಲಿಲ್ಲ ಎಂದು ಅವರು ಬೇಸರ ತೋಡಿಕೊಂಡಿದ್ದಾರೆ.

ಉದ್ಧವ್ ಠಾಕ್ರೆ ಬಣದ ಒಟ್ಟು 9 ಲೋಕಸಭಾ ಸಂಸದರ ಪೈಕಿ 6 ಸಂಸದರು ಒಟ್ಟಾಗಿ ಬಂಡಾಯ ಸಾರಿದ್ದಾರೆ. ಪಕ್ಷಾಂತರ ನಿಷೇಧ ಕಾಯ್ದೆಯಿಂದ ಪಾರಾಗಲು ಒಟ್ಟು ಸಂಸದರ ಪೈಕಿ ಮೂರನೇ ಎರಡರಷ್ಟು ಅಂದರೆ ಕನಿಷ್ಠ 6 ಸಂಸದರ ಬೆಂಬಲ ಬೇಕು. ಈ ಸಂಖ್ಯೆಯನ್ನು ತಲುಪಿರುವ ಬಂಡಾಯಗಾರರು ಬಚಾವಾಗಿದ್ದಾರೆ. ನಾವು 6 ಸಂಸದರು ಉದ್ಧವ್ ಬಣದಿಂದ ಹೊರಬಂದು ಪ್ರತ್ಯೇಕ ಗುಂಪನ್ನು ರಚಿಸಿಕೊಂಡಿದ್ದೇವೆ. ಲೋಕಸಭೆಯಲ್ಲಿ ನಮಗೆ ಪ್ರತ್ಯೇಕವಾಗಿ ಆಸನ ವ್ಯವಸ್ಥೆ ಕಲ್ಪಿಸಬೇಕು ಮತ್ತು ನಮ್ಮ ಗುಂಪನ್ನು ಏಕನಾಥ್ ಶಿಂಧೆ ನೇತೃತ್ವದ ಅಧಿಕೃತ ಶಿವಸೇನೆಯೊಂದಿಗೆ ವಿಲೀನಗೊಳಿಸಲು ಅನುಮತಿ ನೀಡಬೇಕು ಎಂದು ಬಂಡಾಯ ಸಂಸದರು ಸ್ಪೀಕರ್​ಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ನಿಯತ್ತಿಲ್ಲದವರು ಪಕ್ಷ ಬಿಟ್ಟು ಹೋಗಬಹುದು; ‘ಆಪರೇಷನ್ ಟೈಗರ್’ ಬೆನ್ನಲ್ಲೇ ಸಂಸದರಿಗೆ ಉದ್ಧವ್ ಠಾಕ್ರೆ ಎಚ್ಚರಿಕೆ

ಕಳೆದ ಕೆಲವು ತಿಂಗಳುಗಳಿಂದ ತೆರೆಮರೆಯಲ್ಲಿ ನಡೆಯುತ್ತಿದ್ದ ಈ ಹೈಡ್ರಾಮಾ ಈಗ ಸಂಪೂರ್ಣವಾಗಿ ಬೀದಿಗೆ ಬಂದಿದೆ. ಉದ್ಧವ್ ಬಣದ ಪ್ರಭಾವಿ ನಾಯಕ ಸಂಜಯ್ ರಾವತ್ ಅವರು ಸರಣಿ ಪತ್ರಿಕಾಗೋಷ್ಠಿಗಳನ್ನು ನಡೆಸಿ ಬಂಡಾಯಗಾರರ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ. ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದ 6 ಸಂಸದರ ಗುರುತು ಈಗ ಅಧಿಕೃತವಾಗಿ ಬಹಿರಂಗಗೊಂಡಿದೆ. ಈ ಹಿಂದಿನ ರಾಜಕೀಯ ಇತಿಹಾಸಗಳನ್ನು ಗಮನಿಸಿದರೆ, ಈ ಸಂಸದರ ಬಂಡಾಯಕ್ಕೆ ಸ್ಪೀಕರ್ ಅಂಗೀಕಾರ ನೀಡುವ ಸಾಧ್ಯತೆ ದಟ್ಟವಾಗಿದೆ. ಇದರಿಂದ ಶಿಂಧೆ ಬಣ ಮತ್ತಷ್ಟು ಬಲಗೊಳ್ಳಲಿದ್ದು, ಮುಂಬರುವ ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಮರುವಿಂಗಡಣೆ ಬಿಲ್‌ಗಳನ್ನು ಪಾಸ್ ಮಾಡಲು ಬಿಜೆಪಿಗೆ ಇನ್ನೂ 6 ಹೆಚ್ಚುವರಿ ಮತಗಳು ಸಿಗಲಿವೆ.

ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾದ ಬಳಿಕ ಈ 6 ಸಂಸದರು ಬೇರೆ ಬೇರೆ ನಗರಗಳಿಗೆ ತೆರಳಿದ್ದಾರೆ. ನಾಗೇಶ್ ಅಸ್ತಿತ್ಕರ್ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಬೌಸಾಹೇಬ್ ವಾಕಚೌರೆ ವಾರಾಣಸಿಗೆ ಪ್ರಯಾಣಿಸಿದ್ದಾರೆ. ಸಂಜಯ್ ದಿನಾ ಪಾಟೀಲ್ ಮುಂಬೈಗೆ ವಾಪಸಾಗಿದ್ದಾರೆ. ಓಂರಾಜೇ ನಿಂಬಾಳ್ಕರ್ ಪುಣೆಗೆ ತೆರಳಿದ್ದಾರೆ. ಸಂಜಯ್ ದೇಶ್‌ಮುಖ್ ಮತ್ತು ಸಂಜಯ್ ಜಾಧವ್ ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಿದ್ದಾರೆ. ಈ ಸಂಸದರು ಅತ್ಯಂತ ರಹಸ್ಯವಾಗಿ, ಬೇರೆ ಬೇರೆ ಸಮಯಗಳಲ್ಲಿ ಖಾಸಗಿ ವಿಮಾನಗಳ ಮೂಲಕ ದೆಹಲಿ ತಲುಪಿದ್ದರು.

ಇದನ್ನೂ ಓದಿ: ಠಾಕ್ರೆ ಬಣದಲ್ಲಿ ಮತ್ತೊಂದು ಬಿರುಕು ದೃಢ, ಉದ್ಧವ್ ಕರೆದಿದ್ದ ಸಭೆಗೆ 6 ಸಂಸದರು ಗೈರು

ಶೋಕಾಸ್ ನೋಟಿಸ್ ಜಾರಿ:

ಮತ್ತೊಂದೆಡೆ, ತೀವ್ರ ಆಕ್ರೋಶಗೊಂಡಿರುವ ಉದ್ಧವ್ ಠಾಕ್ರೆ ಬಣವು ಈ 6 ಬಂಡಾಯ ನಾಯಕರಿಗೆ 7 ದಿನಗಳ ಒಳಗಾಗಿ ಉತ್ತರ ನೀಡುವಂತೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಅಲ್ಲದೆ, ಅವರ ಯಾವುದೇ ಬೇಡಿಕೆಗಳನ್ನು ಅಥವಾ ಆಸನ ಬದಲಾವಣೆಯ ಮನವಿಯನ್ನು ಪುರಸ್ಕರಿಸಬಾರದು ಎಂದು ಸ್ಪೀಕರ್‌ಗೆ ಒತ್ತಾಯಿಸಿದೆ. ಈ ಸಂಸದರು ಪಕ್ಷ ವಿರೋಧಿ ಚಟುವಟಿಕೆ ಎದುರಿಸಲಿದ್ದಾರೆ ಎಂದು ಠಾಕ್ರೆ ಬಣ ಹೇಳಿದೆ. ಇಂದು ಬೆಳಗ್ಗೆ ಉದ್ಧವ್ ಬಣ ಜಾರಿ ಮಾಡಿದ್ದ ತುರ್ತು ಸಭೆಯ ‘ವಿಪ್’ ಅನ್ನು ಈ 6 ಸಂಸದರು ಸಂಪೂರ್ಣವಾಗಿ ಉಲ್ಲಂಘಿಸಿದ್ದಾರೆ. ಒಟ್ಟು 9 ಲೋಕಸಭಾ ಸಂಸದರ ಪೈಕಿ ಕೇವಲ ಮೂವರು ಮಾತ್ರ (ಅರವಿಂದ್ ಸಾವಂತ್, ಅನಿಲ್ ದೇಸಾಯಿ ಮತ್ತು ರಾಜಾಭಾವು ವಾಜೆ) ಸಭೆಗೆ ಹಾಜರಾಗಿದ್ದು, ಉದ್ಧವ್ ಠಾಕ್ರೆ ಬಣಕ್ಕೆ ಭಾರಿ ಮುಖಭಂಗವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದೂರುದಾರರ ಮೊಬೈಲ್​​ ಸಂಖ್ಯೆ ಪೊಲೀಸರಿಂದಲೇ ದುರುಪಯೋಗ?: ಚರ್ಚೆಗೆ ಗ್ರಾಸವಾದ ಮಹಿಳೆಯ ಪೋಸ್ಟ್​​ – Kannada News | Bengaluru Police Under Fire After Woman Alleges Officer Misused Her Complaint Contact for Private WhatsApp Texts

ಬೆಂಗಳೂರು, ಜೂನ್​​ 18: ನೀಡಿದ್ದ ದೂರಿನಲ್ಲಿದ್ದ ಮೊಬೈಲ್​ ಸಂಖ್ಯೆಯನ್ನು ಪೊಲೀಸರೇ ದುರುಪಯೋಗಪಡಿಸಿಕೊಂಡು ವಾಟ್ಸ್ಯಾಪ್​​ನಲ್ಲಿ ಮೆಸೇಜ್​​ ಮಾಡುತ್ತಿರೋದಾಗಿ ಮಹಿಳೆಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ಬೆಂಗಳೂರು ನಿವಾಸಿ ಜಾನ್ಹವಿ ದೇಸಾಯಿ ಅವರು ಜೂನ್ 17ರಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, ತಾವು 2025ರ ಆಗಸ್ಟ್ 31ರಂದು ಪೊಲೀಸ್ ದೂರು ದಾಖಲಿಸಿದ್ದೆ ಎಂದು ತಿಳಿಸಿದ್ದಾರೆ. ದೂರು ದಾಖಲಿಸಿದ ಹಲವು ತಿಂಗಳ ಬಳಿಕ ತಮ್ಮ ಮೊಬೈಲ್ ಸಂಖ್ಯೆಗೆ ವಾಟ್ಸಾಪ್ ಸಂದೇಶ ಬಂದಿರುವುದನ್ನು ಪ್ರಶ್ನಿಸಿರುವ ಅವರು, ತಮ್ಮ ವೈಯಕ್ತಿಕ ಮಾಹಿತಿಯ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಯುವತಿಯ ಆರೋಪವೇನು?

ತಮ್ಮ ಪೋಸ್ಟ್‌ಗೆ ವಾಟ್ಸಾಪ್ ಚಾಟ್‌ನ ಸ್ಕ್ರೀನ್‌ಶಾಟ್‌ಗಳನ್ನು ಲಗತ್ತಿಸಿರುವ ಜಾನ್ಹವಿ, ಸಂಬಂಧಿತ ಪೊಲೀಸ್ ಅಧಿಕಾರಿ ಬಳಿಕ ವಾಟ್ಸಾಪ್‌ನಲ್ಲಿ ಗೌಪ್ಯತಾ ಸೆಟ್ಟಿಂಗ್‌ಗಳನ್ನು ಬದಲಾಯಿಸಿ, ಚಾಟ್‌ನ್ನು ‘ಎಕ್ಸ್‌ಟ್ರಾ ಪ್ರೈವೇಟ್’ ಮತ್ತು ತಾತ್ಕಾಲಿಕ (Temporary) ರೂಪದಲ್ಲಿ ಹೊಂದಿಸಿ ವೈಯಕ್ತಿಕವಾಗಿ ಸಂದೇಶ ಕಳುಹಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಅವರು ಹಂಚಿಕೊಂಡಿರುವ ಚಾಟ್ ಸ್ಕ್ರೀನ್‌ಶಾಟ್‌ನಲ್ಲಿ ಹಾಯ್​​ ಹಾಗೂ ಹೇಗಿದ್ದೀರ ಮೇಡಂ ಎಂಬ ಸಂದೇಶಗಳು ಕಾಣುತ್ತಿದ್ದು, ಅದಕ್ಕೆ ಜಾನ್ಹವಿ ನನಗೆ ಮೆಸೇಜ್ ಮಾಡುತ್ತಿರುವ ಕಾರಣವೇನು? ಎಂದು ಪ್ರಶ್ನಿಸಿರುವುದನ್ನು ಸಹ ಗಮನಿಸಬಹುದಾಗಿದೆ.

ಇದನ್ನೂ ಓದಿ: ಅನುಮತಿ ಇಲ್ಲದೆ ಖಾಸಗಿ ಚಿತ್ರ ಹಂಚಿಕೊಂಡರೆ ಎಫ್‌ಐಆರ್ ಆಗುತ್ತೆ ಹುಷಾರ್!; ಕರ್ನಾಟಕ ಪೊಲೀಸ್ ಮುಖ್ಯಸ್ಥರ ಖಡಕ್ ಆದೇಶ

ಬೆಂಗಳೂರು ನಗರ ಪೊಲೀಸ್ ಇಲಾಖೆಯ ಅಧಿಕೃತ ಖಾತೆಯನ್ನು ಟ್ಯಾಗ್ ಮಾಡಿರುವ ಈ ಪೋಸ್ಟ್​​ಗೆ ಬೆಂಗಳೂರು ನಗರ ಪೊಲೀಸರು ಪ್ರತಿಕ್ರಿಯಿಸಿದ್ದು, ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲು ಸಂಬಂಧಿತ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಆದರೆ ಕೆಲವೇ ಗಂಟೆಗಳ ಬಳಿಕ ಜಾನ್ಹವಿ ಮತ್ತೊಂದು ಪೋಸ್ಟ್ ಮಾಡಿ, ಈವರೆಗೆ ಯಾವ ಕ್ರಮ ಕೈಗೊಳ್ಳಲಾಗಿದೆ? ಯಾರು ಕ್ರಮ ಕೈಗೊಂಡಿದ್ದಾರೆ? ನನಗೆ ಯಾವುದೇ ಪರಿಶೀಲನಾ ಕರೆ ಅಥವಾ ಮಾಹಿತಿ ಬಂದಿಲ್ಲ. ದಯವಿಟ್ಟು ಗಮನಿಸಿ, ಈ ವ್ಯಕ್ತಿಯ ಬಳಿ ನನ್ನ ಮನೆಯ ವಿಳಾಸವೂ ಇದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಪೊಲೀಸ್ ಇಲಾಖೆಯನ್ನು ಟ್ಯಾಗ್ ಮಾಡಿ ಪ್ರಶ್ನಿಸಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ ಮಾಹಿತಿಯ ಗೌಪ್ಯತೆ ಹಾಗೂ ಅಧಿಕೃತವಾಗಿ ಸಂಗ್ರಹಿಸಲಾದ ನಾಗರಿಕರ ಮಾಹಿತಿಯ ದುರುಪಯೋಗದ ಬಗ್ಗೆ ಚರ್ಚೆಗೆ ಕಾರಣವಾಗಿದೆ ಎಂದು ಡೆಕ್ಕನ್​​ ಹೆರಾಲ್ಡ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 5:31 pm, Thu, 18 June 26

Source link

ಒಂದೇ ದಿನ ನಡೆದ 3 ಪಂದ್ಯಗಳನ್ನು ಭಾರಿ ಅಂತರದಲ್ಲಿ ಗೆದ್ದ ಟೀಂ ಇಂಡಿಯಾ

Source link

ಬಿಗ್ ಬಜೆಟ್ ಐತಿಹಾಸಿಕ ಸಿನಿಮಾಗಾಗಿ ಸಲ್ಮಾನ್ ಖಾನ್ ಜತೆ ಕೈ ಜೋಡಿಸಿದ ಫರ್ಹಾನ್ ಅಖ್ತರ್? – Kannada News | Salman Khan and Farhan Akhtar Two Part Historical epic Movie updates

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ (Salman Khan) ಅವರ ಮುಂಬರುವ ಸಿನಿಮಾಗಳ ಲಿಸ್ಟ್ ದಿನದಿಂದ ದಿನಕ್ಕೆ ದೊಡ್ಡದಾಗುತ್ತಲೇ ಇದೆ. ಸದ್ಯ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿಯಾಗಿರುವ ಸಲ್ಲು ಭಾಯ್, ಇದೀಗ ಭಾರತೀಯ ಇತಿಹಾಸದ ಪ್ರಮುಖ ಪುಟಗಳನ್ನು ತೆರೆಯ ಮೇಲೆ ತರಲು ಸಜ್ಜಾಗುತ್ತಿದ್ದಾರೆ ಎಂಬ ಬಿಗ್ ನ್ಯೂಸ್ ಒಂದು ಬಾಲಿವುಡ್ ಅಂಗಳದಿಂದ ಕೇಳಿಬರುತ್ತಿದೆ. ಈ ಸಿನಿಮಾಗಾಗಿ ಖ್ಯಾತ ನಟ ಮತ್ತು ನಿರ್ದೇಶಕ ಫರ್ಹಾನ್ ಅಖ್ತರ್ (Farhan Akhtar) ಜೊತೆ ಸಲ್ಮಾನ್ ಖಾನ್ ಕೈಜೋಡಿಸುತ್ತಾರೆ ಎನ್ನಲಾಗಿದೆ.

ಕೇಳಿಬರುತ್ತಿರುವ ಮಾಹಿತಿ ನಿಜವಾಗಿದ್ದರೆ, ಇದು ಸಲ್ಮಾನ್ ಖಾನ್ ಮತ್ತು ಫರ್ಹಾನ್ ಅಖ್ತರ್ ಅವರ ಕಾಂಬಿನೇಷನ್‌ನ ಮೊದಲ ಸಿನಿಮಾವಾಗಲಿದೆ. ‘ಪಿಂಕ್‌ವಿಲ್ಲಾ’ ವರದಿಯ ಪ್ರಕಾರ, ಇದೊಂದು ಬೃಹತ್ ಮಟ್ಟದ ಐತಿಹಾಸಿಕ ಆ್ಯಕ್ಷನ್ ಡ್ರಾಮಾ ಆಗಿರಲಿದ್ದು, ಕಥೆಯ ವ್ಯಾಪ್ತಿ ದೊಡ್ಡದಾಗಿರುವುದರಿಂದ ಎರಡು ಭಾಗಗಳಲ್ಲಿ ಸಿನಿಮಾವನ್ನು ಕಟ್ಟಿ ಕೊಡುವ ಪ್ಲಾನ್ ನಡೆದಿದೆ.

ಸಿನಿಮಾ ಮೂಲಗಳ ಪ್ರಕಾರ, ಸಲ್ಮಾನ್ ಖಾನ್ ಮತ್ತು ಫರ್ಹಾನ್ ಅಖ್ತರ್ ಕಳೆದ ಒಂದು ತಿಂಗಳಿನಿಂದ ಆಗಾಗ ಭೇಟಿಯಾಗುತ್ತಿದ್ದು, ಈ ಪ್ರಾಜೆಕ್ಟ್ ಬಗ್ಗೆ ಚರ್ಚಿಸುತ್ತಿದ್ದಾರೆ. ಫರ್ಹಾನ್ ಅಖ್ತರ್ ಹೇಳಿದ ಕಥೆ ಮತ್ತು ಅದರ ಸ್ಕೇಲ್ ಸಲ್ಮಾನ್ ಖಾನ್‌ಗೆ ತುಂಬಾನೇ ಇಷ್ಟವಾಗಿದ್ದು, ಸಿನಿಮಾ ಮಾಡಲು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಮಾತುಕತೆ ಆರಂಭಿಕ ಹಂತದಲ್ಲಿದ್ದು, ಇನ್ನೂ ಅಧಿಕೃತ ಒಪ್ಪಂದಕ್ಕೆ ಸಹಿ ಹಾಕಬೇಕಿದೆ.

ಎಲ್ಲವೂ ಅಂದುಕೊಂಡಂತೆ ನಡೆದರೆ, ಫರ್ಹಾನ್ ಅಖ್ತರ್ ಮತ್ತು ರಿತೇಶ್ ಸಿಧ್ವಾನಿ ಅವರ ‘ಎಕ್ಸೆಲ್ ಎಂಟರ್ಟೈನ್ಮೆಂಟ್’ ಬ್ಯಾನರ್ ಅಡಿಯಲ್ಲಿ ಈ ಚಿತ್ರ ಮೂಡಿಬರಲಿದ್ದು, 2027ರ ಬೇಸಿಗೆಯಲ್ಲಿ ಶೂಟಿಂಗ್ ಆರಂಭವಾಗುವ ಸಾಧ್ಯತೆ ಇದೆ. ಪ್ರಸ್ತುತ ಸಲ್ಮಾನ್ ಖಾನ್ ಅವರ ಶೆಡ್ಯೂಲ್ ಸಖತ್ ಬ್ಯುಸಿಯಾಗಿದೆ. ಒಂದರ ಮೇಲೊಂದು ಸಿನಿಮಾವನ್ನು ಅವರು ಒಪ್ಪಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ‘ಕಾಲಾ ಹಿರಣ್’ ಟೀಸರ್: ವಿವಾದಿತ ಸಿನಿಮಾದಲ್ಲಿ ಸಲ್ಮಾನ್ ಖಾನ್ ರೀತಿಯೇ ಕಾಣುವ ನಟ

ಸದ್ಯ ತೆಲುಗಿನ ಖ್ಯಾತ ನಿರ್ದೇಶಕ ವಂಶಿ ಪೈಡಿಪಲ್ಲಿ ನಿರ್ದೇಶನದ ಆ್ಯಕ್ಷನ್ ಎಂಟರ್ಟೈನರ್ ಚಿತ್ರದಲ್ಲಿ ಸಲ್ಮಾನ್ ನಟಿಸುತ್ತಿದ್ದಾರೆ. ಇದರಲ್ಲಿ ಸೌತ್ ಲೇಡಿ ಸೂಪರ್‌ಸ್ಟಾರ್ ನಯನತಾರಾ ನಾಯಕಿಯಾಗಿದ್ದಾರೆ. ಇದರ ಬೆನ್ನಲ್ಲೇ ‘ದಿ ಫ್ಯಾಮಿಲಿ ಮ್ಯಾನ್’ ಖ್ಯಾತಿಯ ರಾಜ್ ಮತ್ತು ಡಿಕೆ ಜೋಡಿಯ ಆ್ಯಕ್ಷನ್-ಕಾಮಿಡಿ ಸಿನಿಮಾದಲ್ಲಿ ಸಲ್ಮಾನ್ ನಟಿಸಲಿದ್ದಾರೆ. ನಿವೃತ್ತ ಸೂಪರ್‌ಹೀರೋ ಕಥೆ ಹೊಂದಿರುವ ಈ ಚಿತ್ರದ ಶೂಟಿಂಗ್ 2026ರ ಅಕ್ಟೋಬರ್ ಆಸುಪಾಸಿನಲ್ಲಿ ಆರಂಭವಾಗಲಿದೆ.

ಮತ್ತೊಂದೆಡೆ, ಅಪೂರ್ವ ಲಖಿಯಾ ನಿರ್ದೇಶನದಲ್ಲಿ ಅನೌನ್ಸ್ ಆಗಿದ್ದ ‘ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್’ ಚಿತ್ರದ ಬಿಡುಗಡೆ ಸದ್ಯಕ್ಕೆ ತಡವಾಗುತ್ತಿದೆ. ಆ ಬಗ್ಗೆ ಮುಂದಿನ ಅಪ್‌ಡೇಟ್‌ಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ. ಈ ನಡುವೆ ಸಲ್ಮಾನ್ ಖಾನ್ ಅವರು ಫರ್ಹಾನ್ ಅಖ್ತರ್ ಜೊತೆ ಹೊಸ ಸಿನಿಮಾಗಾಗಿ ಮಾತುಕಥೆ ನಡೆಸಿರುವುದು ಕುತೂಹಲ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪರಿಷತ್ ಚುನಾವಣೆ: ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಕಾಂಗ್ರೆಸ್​ ನಾಯಕರು – Kannada News | Karnataka MLC Election: Congress Confident of Winning Five Seats Amid Cross Voting Allegations

ಬೆಂಗಳೂರು, ಜೂನ್​ 18: ಪರಿಷತ್​ನ 7 ಸ್ಥಾನ ಗಳಿಗೆ ನಡೆದ ಚುನಾವಣೆ ಮುಕ್ತಾಯಗೊಂಡಿದೆ. 222 ಮತ ಚಲಾವಣೆ ಆಗುವ ಮೂಲಕ ಶೇ.100ರಷ್ಟು ಮತದಾನ ಆಗಿದೆ. ಕೆಲವೇ ಹೊತ್ತಿನಲ್ಲಿ ಮತ ಎಣಿಕೆ ಕಾರ್ಯ ಕೂಡ ಆರಂಭಗೊಳ್ಳಲಿದೆ. ಈ ಮಧ್ಯೆ ಕಾಂಗ್ರೆಸ್​ ನಾಯಕರು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಮಗೆ ಯಾವುದೇ ಅಡ್ಡಮತದಾನ ಭಯವಿಲ್ಲ. ಕಾಂಗ್ರೆಸ್​​​ನ ಐವರು ಅಭ್ಯರ್ಥಿಗಳು ಗೆದ್ದೇ ಗೆಲ್ಲುತ್ತಾರೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ ಐಕ್ಯತೆಯನ್ನು ಎತ್ತಿ ಹಿಡಿದು ನಾಯಕತ್ವದಲ್ಲಿ ಪಕ್ಷವು ಒಗ್ಗಟ್ಟನ್ನು ಪ್ರದರ್ಶಿಸಿದೆ. ಸಿಎಲ್‌ಪಿ ಶಾಸಕಾಂಗ ಸಭೆಗಳಲ್ಲಿ ಅನೇಕ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿದ್ದು, ಪಕ್ಷದಲ್ಲಿ ಯಾವುದೇ ಭಯ ಅಥವಾ ಅಡ್ಡಮತದಾನದ ಆತಂಕವಿಲ್ಲ ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷವು ನಿರೀಕ್ಷೆಗಿಂತ ಹೆಚ್ಚು ಮತಗಳನ್ನು ಪಡೆಯುವ ವಿಶ್ವಾಸದಲ್ಲಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

2025-26ಕ್ಕೆ ಶೇ. 8.25 ಇಪಿಎಫ್ ಬಡ್ಡಿಗೆ ಅನುಮೋದನೆ; ಸಕ್ರಿಯವಲ್ಲದ ಇಪಿಎಫ್ ಖಾತೆಗಳಿಗೂ ಸಿಗುತ್ತಾ ಹಣ? – Kannada News | EPFO update, govt ratifies epf interest rate for 2025 26 fy, know if non merged accounts get interest credit

ನವದೆಹಲಿ, ಜೂನ್ 18: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ (EPFO) ಕೋಟ್ಯಂತರ ಸದಸ್ಯರಿಗೆ ಕೇಂದ್ರ ಸರ್ಕಾರವು ಖುಷಿ ಸುದ್ದಿ ನೀಡಿದೆ. 2025-26ರ ಹಣಕಾಸು ವರ್ಷಕ್ಕೆ (FY26) ನೌಕರರ ಭವಿಷ್ಯ ನಿಧಿ (EPF) ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇ. 8.25 ರಷ್ಟು ನಿಗದಿಪಡಿಸುವ ಪ್ರಸ್ತಾವನೆಗೆ ಕೇಂದ್ರ ಹಣಕಾಸು ಸಚಿವಾಲಯವು ಅಧಿಕೃತವಾಗಿ ಅನುಮೋದನೆ (Ratify) ನೀಡಿದೆ. ಕೇಂದ್ರ ಸರ್ಕಾರದ ಒಪ್ಪಿಗೆ ಸಿಕ್ಕಿರುವುದರಿಂದ, ಇಪಿಎಫ್‌ಒ (EPFO) ಸಂಸ್ಥೆಯು ಕಾರ್ಮಿಕ ಸಚಿವಾಲಯದ ನಿರ್ದೇಶನದಂತೆ 2025-26ರ ಸಾಲಿನ ಬಡ್ಡ ಹಣವನ್ನು ದೇಶದ 7 ಕೋಟಿಗೂ ಅಧಿಕ ಚಂದಾದಾರರ ಖಾತೆಗಳಿಗೆ ಇದೇ ತಿಂಗಳೊಳಗೆ (ಜೂನ್ 2026) ಜಮೆ ಮಾಡುವ ಸಾಧ್ಯತೆಯಿದೆ.

ಹೊಸ ತಂತ್ರಜ್ಞಾನದ ಲಾಭ

ಇಪಿಎಫ್‌ಒ ಅಭಿವೃದ್ಧಿಪಡಿಸಿರುವ ಹೊಸ ತಂತ್ರಜ್ಞಾನ ವ್ಯವಸ್ಥೆಯಿಂದಾಗಿ (New Ecosystem), ಸರ್ಕಾರದಿಂದ ಅನುಮೋದನೆ ಸಿಕ್ಕ ತಕ್ಷಣವೇ ಯಾವುದೇ ವಿಳಂಬವಿಲ್ಲದೆ ಬಡ್ಡಿಯ ಮೊತ್ತವು ನೇರವಾಗಿ ಮತ್ತು ತಕ್ಷಣವೇ ಇಪಿಎಫ್ ಖಾತೆಗಳಿಗೆ ಕ್ರೆಡಿಟ್ ಆಗಲಿದೆ.

ಸತತ ಮೂರನೇ ವರ್ಷವೂ ಒಂದೇ ದರ

ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವೀಯ ಅವರ ನೇತೃತ್ವದಲ್ಲಿ ಮಾರ್ಚ್ 2, 2026 ರಂದು ನಡೆದ ಇಪಿಎಫ್‌ಒನ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಮಂಡಳಿಯಾದ ‘ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟೀಸ್’ (CBT) ಸಭೆಯಲ್ಲಿ 8.25% ಬಡ್ಡಿ ದರವನ್ನು ಶಿಫಾರಸು ಮಾಡಲಾಗಿತ್ತು. ಭಾರತ ಸರ್ಕಾರವು ಇಪಿಎಫ್‌ನ ಗ್ಯಾರಂಟರ್ ಆಗಿರುವುದರಿಂದ ಇದಕ್ಕೆ ಹಣಕಾಸು ಸಚಿವಾಲಯದ ಒಪ್ಪಿಗೆ ಬೇಕಾಗಿತ್ತು. ಪ್ರಸ್ತುತ ಸರ್ಕಾರ ಇದನ್ನು ಯಥಾವತ್ತಾಗಿ ಅಂಗೀಕರಿಸಿದೆ. ಇದರೊಂದಿಗೆ ಸತತ ಮೂರನೇ ವರ್ಷವೂ ಇಪಿಎಫ್ ಬಡ್ಡಿ ದರವನ್ನು 8.25% ನಲ್ಲೇ ಕಾಯ್ದುಕೊಳ್ಳಲಾಗಿದೆ. 2023-24, 2024-25 ರಲ್ಲೂ ಇಪಿಎಫ್ ಬಡ್ಡಿ ದರ 8.25% ಇತ್ತು.

ಇದನ್ನೂ ಓದಿ: ಪಿಎಂ ಕಿಸಾನ್ 23ನೇ ಕಂತು ಬಿಡುಗಡೆ ದಿನಾಂಕ ಪ್ರಕಟ; ಇನ್ನೆರಡು ದಿನದಲ್ಲಿ ರೈತರ ಖಾತೆಗೆ ಬರಲಿದೆ 2,000 ರೂ

ಕೆಲವು ವರ್ಷಗಳಿಂದ ಇರುವ ಇಪಿಎಫ್ ಬಡ್ಡಿ ದರಗಳು

  • 2025-26: 8.25%
  • 2024-25: 8.25%
  • 2023-24: 8.25%
  • 2022-23: 8.15%
  • 2021-22: 8.10%

2021-22ರಲ್ಲಿನ ಶೇ. 8.1 ಬಡ್ಡಿದರವು ಕಳೆದ ನಾಲ್ಕು ದಶಕಗಳಲ್ಲೇ ಅತ್ಯಂತ ಕಡಿಮೆ ಇಪಿಎಫ್ ಬಡ್ಡಿಯಾಗಿದೆ. 90ರ ದಶಕದ ಒಂದು ವರ್ಷದಲ್ಲಿ ಇಪಿಎಫ್ ಬಡ್ಡಿದರ ಶೇ. 12ರಷ್ಟಿತ್ತು. ಇದೂವರೆಗಿನ ಗರಿಷ್ಠ ಬಡ್ಡಿ ದರ ಅದು. 2010-22ರಲ್ಲಿ ಬಡ್ಡಿದರ ಶೇ. 9.50ರಷ್ಟು ಇತ್ತು. ಕುತೂಹಲಕ್ಕೆ ತಿಳಿಸುವುದಾದರೆ, ಇಪಿಎಫ್​ಒ ಸಂಸ್ಥೆ ಸ್ಥಾಪನೆಯಾಗಿದ್ದು 1952ರಲ್ಲಿ. ಅದು ಇಪಿಎಫ್ ಖಾತೆಗಳಿಗೆ ಘೋಷಿಸಿದ ಆರಂಭಿಕ ಬಡ್ಡಿದರ ಶೇ. 3 ಮಾತ್ರ.

ಸಕ್ರಿಯ ಖಾತೆಗಳಿಗೆ ಮಾತ್ರವೇ ಸಿಗುತ್ತಾ ಬಡ್ಡಿ?

ಸದ್ಯ ಸಕ್ರಿಯವಾಗಿರುವ ಖಾತೆಗಳಿಗೆ, ಅಂದರೆ, ಉದ್ಯೋಗಿಗಳು ಹಾಗೂ ಕಂಪನಿಗಳಿಂದ ಪ್ರತೀ ತಿಂಗಳು ಹಣ ಜಮೆಯಾಗುತ್ತಿರುವ ಇಪಿಎಫ್ ಖಾತೆಗಳಿಗೆ ಮಾತ್ರ ಬಡ್ಡಿ ಹಣ ಜಮೆ ಆಗುತ್ತದೆ ಎಂದು ಕೆಲ ಮಾಧ್ಯಮಗಳಲ್ಲಿ ಹೇಳುವುದುಂಟು. ಆದರೆ, ವಾಸ್ತವದಲ್ಲಿ ಹಾಗೇನಿಲ್ಲ. ಎಲ್ಲಾ ಇಪಿಎಫ್ ಖಾತೆಗಳಿಗೂ ಸರ್ಕಾರದ ವತಿಯಿಂದ ಬಡ್ಡಿ ಹಣ ಪ್ರತೀ ವರ್ಷ ಜಮೆ ಆಗುತ್ತಿರುತ್ತದೆ. ಉದ್ಯೋಗಿ ವಯಸ್ಸು 60 ವರ್ಷ ಮುಟ್ಟುವವರೆಗೂ ಇದು ನಿಲ್ಲುವುದಿಲ್ಲ.

ಇದನ್ನೂ ಓದಿ: ಕಚ್ಚಾ ತೈಲ ಬೆಲೆ ಬ್ಯಾರಲ್​ಗೆ 80 ಡಾಲರ್​ಗಿಂತ ಕಡಿಮೆ; ಪೆಟ್ರೋಲ್, ಡೀಸಲ್ ಬೆಲೆ ಕಡಿಮೆಗೊಳ್ಳುತ್ತಾ?

ಉತ್ತಮ ನಿವೃತ್ತಿ ಯೋಜನೆ ಇಪಿಎಫ್

ಖಾಸಗಿ ವಲಯದ ಉದ್ಯೋಗಿಗಳಿಗೆ ದೀರ್ಘಾವಧಿಯ ಉಳಿತಾಯದ ದೃಷ್ಟಿಯಿಂದ ಇಪಿಎಫ್ ಉತ್ತಮ ಸ್ಕೀಮ್ ಆಗಿದೆ. ಈ 8.25% ಬಡ್ಡಿ ದರ ಕಡಿಮೆಯೇನಲ್ಲ. ಫಿಕ್ಸೆಡ್ ಡೆಪಾಸಿಟ್​ಗಳಿಗಿಂತಲೂ ಉತ್ತಮ ರಿಟರ್ನ್ಸ್ ತರಬಲ್ಲುದು ಇಪಿಎಫ್. ಹೀಗಾಗಿ, ಉದ್ಯೋಗಿಗಳು ಇಪಿಎಫ್ ಅಕೌಂಟ್​ನಿಂದ ಹಣ ಹಿಂಪಡೆಯುವ ಬದಲು ವಿಪಿಎಫ್ ಇತ್ಯಾದಿ ಮೂಲಕ ಹೂಡಿಕೆ ಹೆಚ್ಚಿಸಲು ಚಿಂತಿಸುವುದು ಉತ್ತಮ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಯತ್ನಾಳ್​​ಗೆ ಕಾಂಗ್ರೆಸ್​​ನಿಂದ ಆಫರ್​​: ಸ್ಫೋಟಕ ಹೇಳಿಕೆ ಕೊಟ್ಟ ಬಿಜೆಪಿ ಉಚ್ಛಾಟಿತ ಶಾಸಕ – Kannada News | Congress Offered Me an Entry, Claims Expelled BJP MLA Yatnal

ಬೆಂಗಳೂರು, ಜೂನ್​​ 18: ಶಾಸಕ ಬಸನಗೌಡ ಪಾಟೀಲ್​​ ಬಿಜೆಪಿಯಿಂದ ಉಚ್ಛಾಟನೆಗೊಂಡಿದ್ದರೂ ತಾವು ಪಕ್ಷಕ್ಕೆ ತೋರುತ್ತಿರುವ ನಿಷ್ಠೆಯನ್ನು ಮತ್ತೊಮ್ಮೆ ಪ್ರತಿಪಾದಿಸಿದ್ದಾರೆ. ರಾಜಕೀಯದಲ್ಲಿ ತಮ್ಮ ನಿಲುವು ದೃಢವಾಗಿದೆ ಎಂದು ಹೇಳಿದ ಅವರು, ಕರ್ನಾಟಕದಲ್ಲಿ ನಡೆಯುತ್ತಿರುವ ಕುಟುಂಬ ರಾಜಕಾರಣ ಮತ್ತು ಭ್ರಷ್ಟಾಚಾರದಿಂದ ಮುಕ್ತಿ ಸಿಗುವವರೆಗೂ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಿಂದೊಮ್ಮೆ ಎಂಎಲ್‌ಸಿ ಆಗಿದ್ದಾಗ ನಡೆದ ಘಟನೆಯನ್ನು ಯತ್ನಾಳ್ ನೆನಪಿಸಿಕೊಂಡಿದ್ದು, ಶಂಕರ್ ಮೂರ್ತಿ ವಿರುದ್ಧ ಉಗ್ರಪ್ಪನವರು ಮಂಡಿಸಿದ್ದ ಅವಿಶ್ವಾಸ ನಿರ್ಣಯದ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಎಂ.ಬಿ. ಪಾಟೀಲ್ ಅವರು ತಮ್ಮನ್ನು ಭೇಟಿ ಮಾಡಿದ್ದರು. ಸಿಂದಗಿ ಅಥವಾ ದೇವರಿಪ್ಪಳಿ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಹಾಗೂ ಸಾಕಷ್ಟು ಅಭಿವೃದ್ಧಿ ಹಣ ನೀಡುವುದಾಗಿ ಆಮಿಷವೊಡ್ಡಿ, ಅವಿಶ್ವಾಸ ನಿರ್ಣಯಕ್ಕೆ ಬೆಂಬಲ ನೀಡುವಂತೆ ಕೇಳಿದ್ದರು. ಆದರೆ, ತಾವು ಬಿಜೆಪಿ ಚಿಹ್ನೆಯಿಂದ ಆಯ್ಕೆಯಾಗಿದ್ದು, ತಮ್ಮ ನಿಷ್ಠೆ ಬಿಜೆಪಿಗೆ ಮಾತ್ರ ಎಂದು ಸ್ಪಷ್ಟಪಡಿಸಿ ಆ ಪ್ರಸ್ತಾಪವನ್ನು ತಿರಸ್ಕರಿಸಿದ್ದೆ. ಆ ಮತದಿಂದಾಗಿಯೇ ಡಿ.ಎಸ್. ಶಂಕರ್ ಮೂರ್ತಿ ಸಭಾಪತಿಯಾಗಿ ಮುಂದುವರೆಯಲು ಸಾಧ್ಯವಾಯಿತು ಎಂದು ಅವರು ನೆನಪಿಸಿಕೊಂಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬಿಗ್​​ಬಾಸ್​​ಗೆ ಹೋಗಲು ರೆಡಿ ಆಗಿದ್ದಾರಾ ಸೂರಜ್: ಹಾಸ್ಯ ನಟ ಹೇಳಿದ್ದೇನು? – Kannada News | Bigg Boss Kannada, Sooraj may enter Bigg Boss house

ಬಿಗ್​​ಬಾಸ್ ಕನ್ನಡ (Bigg Boss) ಹೊಸ ಸೀಸನ್​​ ಪ್ರೋಮೊ ಈಗಾಗಲೇ ಬಿಡುಗಡೆ ಆಗಿದ್ದು, ಸ್ಪರ್ಧಿಗಳ ಆಯ್ಕೆಯೂ ಬಹುತೇಕ ಪೂರ್ಣಗೊಂಡಿದೆ. ಈ ಬಾರಿ ತುಸು ಮುಂಚಿತವಾಗಿಯೇ ಬಿಗ್​​ಬಾಸ್ ನಡೆಸಲು ಆಯೋಜಕರು ನಿರ್ಧರಿಸಿದ್ದಾರೆ. ಪ್ರತಿ ಬಿಗ್​​ಬಾಸ್​​ ಸೀಸನ್​​ಗೂ ಕಡ್ಡಾಯವಾಗಿ ಹಾಸ್ಯನಟರನ್ನು ಸ್ಪರ್ಧಿಗಳಾಗಿ ಕಳಿಸಲಾಗುತ್ತದೆ. ತುಕಾಲಿ, ಮಂಜು ಇನ್ನೂ ಹಲವು ಕಾಮಿಡಿಯನ್​​ಗಳು ಸ್ಪರ್ಧಿಗಳಾಗಿದ್ದಾರೆ ಒಳ್ಳೆಯ ಪ್ರದರ್ಶನ ಸಹ ಮಾಡಿದ್ದಾರೆ. ಈ ಬಾರಿ ಹಾಸ್ಯ ರಿಯಾಲಿಟಿ ಶೋಗಳಲ್ಲಿ ಹೆಸರು ಮಾಡಿರುವ ಸೂರಜ್, ಬಿಗ್​​ಬಾಸ್​​ಗೆ ಹೋಗಲಿದ್ದಾರೆ ಎನ್ನಲಾಗುತ್ತಿದೆ. ಆ ಬಗ್ಗೆ ಖುದ್ದು ಸೂರಜ್ ಅವರು ಮಾತನಾಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಭಾರತದಲ್ಲಿ ಕ್ಷೀಣಿಸಿದ ಮುಂಗಾರು; ಜೂನ್ 4ರಿಂದ 18ರವರೆಗೆ ಶೇ. 42ಕ್ಕೆ ಏರಿದ ಮಳೆ ಕೊರತೆ ಪ್ರಮಾಣ! – Kannada News | Monsoon 2026 struggle continues why India records 42 percent rainfall deficit

ನವದೆಹಲಿ, ಜೂನ್ 18: ಭಾರತದಲ್ಲಿ ಮುಂಗಾರು ಮಳೆಯ (Monsoon 2026) ಕೊರತೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ದೇಶದ ಕೃಷಿ ವಲಯ ಹಾಗೂ ಜಲಮೂಲಗಳಿಗೆ ಭಾರಿ ಆತಂಕ ಎದುರಾಗಿದೆ. ದೇಶಾದ್ಯಂತ ಮುಂಗಾರು ಮಾರುತಗಳ ಆರ್ಭಟ ಕ್ಷೀಣಿಸಿದ್ದು, ಮಳೆಯ ಕೊರತೆಯ ಪ್ರಮಾಣವು ಆಘಾತಕಾರಿ ರೀತಿಯಲ್ಲಿ ಶೇ. 42ಕ್ಕೆ ತಲುಪಿದೆ. ಜೂನ್ ತಿಂಗಳು ಮುಗಿಯುತ್ತ ಬಂದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ದೇಶದ ಪ್ರಮುಖ ಜಲಾಶಯಗಳು ಬತ್ತುತ್ತಿದ್ದು, ಕೃಷಿ ಚಟುವಟಿಕೆಗಳು ಸಂಪೂರ್ಣ ಕುಂಠಿತಗೊಂಡಿವೆ. ಮುಂದಿನ ದಿನಗಳಲ್ಲಿ ಈ ಕೊರತೆಯನ್ನು ಸರಿದೂಗಿಸುವುದು ಅತ್ಯಂತ ಸವಾಲಿನ ಕೆಲಸ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ.

ಸಾಮಾನ್ಯವಾಗಿ ಜೂನ್ ಮೊದಲ ವಾರದಲ್ಲೇ ದೇಶವನ್ನು ಪ್ರವೇಶಿಸುವ ಮುಂಗಾರು ಮಾರುತಗಳು ಇಷ್ಟು ಹೊತ್ತಿಗಾಗಲೇ ಇಡೀ ದೇಶವನ್ನು ಆವರಿಸಬೇಕಿತ್ತು. ಆದರೆ, ಈ ಬಾರಿ ಆರಂಭಿಕ ಮುನ್ನಡೆಯ ನಂತರ ಮುಂಗಾರು ಮಾರುತಗಳ ಚಲನೆ ಮಂದಗತಿಯಾಗಿದೆ. ಹವಾಮಾನ ಇಲಾಖೆಯ (IMD) ತಾಜಾ ಅಂಕಿ-ಅಂಶಗಳ ಪ್ರಕಾರ, ದೇಶದ ಬಹುತೇಕ ರಾಜ್ಯಗಳಲ್ಲಿ ವಾಡಿಕೆಗಿಂತ ಭಾರಿ ಕಡಿಮೆ ಮಳೆಯಾಗಿದ್ದು, ಒಟ್ಟಾರೆ ಮಳೆ ಕೊರತೆಯ ಗ್ರಾಫ್ ಶೇ. 42ರಷ್ಟು ದಾಖಲಾಗಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಶೇ 21 ರಷ್ಟು ಮುಂಗಾರು ಮಳೆ ಕೊರತೆ: ಪ್ರಮುಖ ಡ್ಯಾಂಗಳಲ್ಲಿ ತಳ ಸೇರಿದ ನೀರು

ಜೂನ್ ತಿಂಗಳು ದೇಶದ ಮುಂಗಾರು ಹಂಗಾಮಿನ ಬಿತ್ತನೆಗೆ ಅತ್ಯಂತ ಪ್ರಮುಖವಾದ ಸಮಯವಾಗಿದೆ. ಲಕ್ಷಾಂತರ ಎಕರೆ ಕೃಷಿ ಭೂಮಿ ಮಳೆಯಿಲ್ಲದೆ ಒಣಗುತ್ತಿದ್ದು, ರೈತರು ಬಿತ್ತನೆ ಕಾರ್ಯವನ್ನು ಮುಂದೂಡುತ್ತಿದ್ದಾರೆ. ದೇಶದ ಪ್ರಮುಖ ನದಿಗಳು, ಕೆರೆಗಳು ಮತ್ತು ಜಲಾಶಯಗಳಲ್ಲಿ ನೀರಿನ ಮಟ್ಟ ಅಪಾಯಕಾರಿ ಮಟ್ಟಕ್ಕೆ ಕುಸಿದಿದೆ. ಇದು ಕೇವಲ ಕೃಷಿಗೆ ಮಾತ್ರವಲ್ಲದೆ ಕುಡಿಯುವ ನೀರಿಗೂ ತತ್ವಾರ ಸೃಷ್ಟಿಸುವ ಮುನ್ಸೂಚನೆ ನೀಡಿದೆ.

ಹವಾಮಾನ ಇಲಾಖೆಯ ವಿಶ್ಲೇಷಕರ ಪ್ರಕಾರ, ಜೂನ್ ತಿಂಗಳಿನಲ್ಲಿ ಉಂಟಾಗಿರುವ ಈ ಭಾರಿ ಪ್ರಮಾಣದ (ಶೇ. 42) ಮಳೆ ಕೊರತೆಯನ್ನು ಮುಂಬರುವ ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಸರಿದೂಗಿಸುವುದು ಅತ್ಯಂತ ಕಠಿಣವಾಗಿದೆ. ಯಾಕೆಂದರೆ, ಮುಂಗಾರು ಮಾರುತಗಳನ್ನು ಬಲಪಡಿಸುವ ಜಾಗತಿಕ ಹವಾಮಾನ ವಿದ್ಯಮಾನಗಳು ಸದ್ಯಕ್ಕೆ ಪೂರಕವಾಗಿ ಕಾಣಿಸುತ್ತಿಲ್ಲ. ಒಂದು ವೇಳೆ ಜುಲೈ ತಿಂಗಳಿನಲ್ಲೂ ಇದೇ ಪರಿಸ್ಥಿತಿ ಮುಂದುವರಿದರೆ ದೇಶವು ತೀವ್ರ ಬರಗಾಲದ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು. ಇದು ಆಹಾರ ಧಾನ್ಯಗಳ ಬೆಲೆ ಏರಿಕೆಗೆ ಕಾರಣವಾಗಬಹುದು ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Karnataka Weather Forecast: ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗಾಳಿ, ಮಳೆಯಬ್ಬರ!

ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ಸೇರಿದಂತೆ ದಕ್ಷಿಣ ಹಾಗೂ ಮಧ್ಯ ಭಾರತದ ರಾಜ್ಯಗಳಲ್ಲಿ ಮುಂಗಾರು ಮಳೆಯ ಕೊರತೆ ತೀವ್ರವಾಗಿದೆ. ಕರಾವಳಿ ಭಾಗಗಳಲ್ಲಿ ಸಾಧಾರಣ ಮಳೆಯಾಗುತ್ತಿದ್ದರೂ, ಒಳನಾಡಿನ ಜಿಲ್ಲೆಗಳಲ್ಲಿ ಧಗೆ ಮುಂದುವರಿದಿದೆ. ಹವಾಮಾನ ಇಲಾಖೆಯು ಮುಂಬರುವ ದಿನಗಳಲ್ಲಿ ವಾಯುಭಾರ ಕುಸಿತ ಉಂಟಾಗಿ ಮಾರುತಗಳು ಚುರುಕಾಗಬಹುದು ಎಂಬ ನಿರೀಕ್ಷೆಯಲ್ಲಿದೆಯಾದರೂ, ಸದ್ಯದ ಪರಿಸ್ಥಿತಿ ಮಾತ್ರ ರೈತರಲ್ಲಿ ಆತಂಕವನ್ನು ಹೆಚ್ಚಿಸಿದೆ.

ಮಳೆಯ ಅಭಾವದ ತೀವ್ರತೆಯು ಈಗಾಗಲೇ ಕೃಷಿ ಮತ್ತು ಜಲಮೂಲಗಳ ಮೇಲೆ ಬೀಳಲಾರಂಭಿಸಿದೆ. ಮಹಾರಾಷ್ಟ್ರದಲ್ಲಿ ಭಾರಿ ಮಳೆ ಕೊರತೆ ದಾಖಲಾಗಿದ್ದು, ಮುಂಬೈ ನಗರವು ಕಳೆದ ಒಂದು ದಶಕದಲ್ಲೇ ಅತ್ಯಂತ ಒಣಹವೆಯ ಜೂನ್ ತಿಂಗಳನ್ನು ಎದುರಿಸುತ್ತಿದೆ. ಇದರಿಂದಾಗಿ ಅಧಿಕಾರಿಗಳು ನೀರು ಸರಬರಾಜಿನಲ್ಲಿ ಕಡಿತ ಅಥವಾ ನಿರ್ಬಂಧಗಳನ್ನು ಹೇರಲು ಉದ್ಯುಕ್ತರಾಗಿದ್ದಾರೆ. ವಿದರ್ಭ ಮತ್ತು ಮಧ್ಯಪ್ರದೇಶ ಸೇರಿದಂತೆ ಮಧ್ಯ ಭಾರತದ ಇತರ ಭಾಗಗಳು ಕೂಡ ಮುಂಗಾರು ಮರುಜೀವ ಪಡೆಯುವುದಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿವೆ.
ಜೂನ್ ತಿಂಗಳ ದ್ವಿತೀಯಾರ್ಧ ಈಗಾಗಲೇ ಆರಂಭವಾಗಿರುವುದರಿಂದ, ಇಲ್ಲಿಯವರೆಗೆ ಉಂಟಾಗಿರುವ ಭಾರಿ ಮಳೆ ಕೊರತೆಯನ್ನು ನೀಗಿಸಲು ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿ ಎರಡೂ ಕಡೆಯಿಂದ ಮುಂಗಾರು ಮಾರುತಗಳು ಭಾರಿ ವೇಗದಲ್ಲಿ ಚುರುಕಾಗಬೇಕಿದೆ. ಆದರೆ, ಸದ್ಯದ ಉಪಗ್ರಹ ಚಿತ್ರಗಳನ್ನು ನೋಡಿದರೆ ಅಂತಹ ದೊಡ್ಡ ಮಟ್ಟದ ಚೇತರಿಕೆಯ ಲಕ್ಷಣಗಳು ಸದ್ಯಕ್ಕೆ ಕಾಣಿಸುತ್ತಿಲ್ಲ. ಮುಂದಿನ ಒಂದು ವಾರದೊಳಗೆ ಸಮುದ್ರದಲ್ಲಿ ಬಲವಾದ ವಾಯುಭಾರ ಕುಸಿತದ ವಾತಾವರಣ ನಿರ್ಮಾಣವಾಗಿ, ತೇವಾಂಶದ ಚಲನೆ ತೀವ್ರಗೊಳ್ಳದಿದ್ದರೆ, ಈ ಮಳೆ ಕೊರತೆಯು ಜೂನ್ ಅಂತ್ಯದವರೆಗೂ ಮುಂದುವರಿಯಲಿದೆ. ಇದರಿಂದ ಈ ವರ್ಷದ ಮಳೆಯ ಪ್ರಮಾಣದ ಮೇಲೆ ಭಾರೀ ಹೊಡೆತ ಬೀಳಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link