Category Archives: Blog

Your blog category

ಪೊಲೀಸರ ಕೊರಳ ಪಟ್ಟಿ ಹಿಡಿದು ರಂಪಾಟ: ಜೀಪ್​​​​​​​ನಿಂದ ಇಳಿಯದ PSI ಸಸ್ಪೆಂಡ್, 8 ಜನ ಸಿಬ್ಬಂದಿ ಎತ್ತಂಗಡಿ – Kannada News | Haliyala PSI Suspended and Other 8 Staff Transfer Over rowdy manja video viral

ಕಾರವಾರ, (ಜೂನ್ 17): ಜಿಲ್ಲೆಯ ಹಳಿಯಾಳದಲ್ಲಿ (haliyala) ಮಾಜಿ ರೌಡಿ ಶೀಟರ್ ‘ಮಚ್ಚುಮಂಜ’ ಎಂಬಾತ ಪೊಲೀಸರ ಕೊರಳ ಪಟ್ಟಿ ಹಿಡಿದು, ಅವಾಚ್ಯ ಶಬ್ದಗಳಿಂದ ನಿಂದಿಸಿದರೂ ಸಹ ಜೀಪ್​​​​​​​ನಲ್ಲೇ ಕುಳಿತು ನೋಡುತ್ತಿದ್ದ ಪಿಎಸ್​​​​ಐ ಸಸ್ಪೆಂಡ್ ಆಗಿದ್ದಾರೆ. ಸಾರ್ವಜನಿಕರ ಎದುರೇ ತಮ್ಮ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಬೈಯುತ್ತಿದ್ದರೂ ಜೀಪಿನಿಂದ ಇಳಿಯದೇ ನೋಡುತ್ತ ಕುಳಿತ್ತಿದ್ದ ಹಳಿಯಾಳ PSI ಬಸವರಾಜ್ ಮಬನೂರ ಅವರನ್ನ ಅಮಾನತು ಮಾಡಿ ಉತ್ತರ ಕನ್ನಡ (Uttara Kannada) ಎಸ್ಪಿ ದೀಪನ್ ಆದೇಶ ಹೊರಡಿಸಿದ್ದಾರೆ. ಜೊತೆಗೆ ಹಳಿಯಾಳ ಪೊಲೀಸ್ ಠಾಣೆಯ 8 ಜನ ಸಿಬ್ಬಂದಿಯನ್ನು ಎತ್ತಂಗಡಿ ಮಾಡಿದ್ದಾರೆ.

ಮುಖ್ಯಾಂಶಗಳು

  • ಉತ್ತರ ಕನ್ನಡದಲ್ಲಿ ಪೊಲೀಸರ ಮೇಲೆ ಮಾಜಿ ರೌಡಿ ದುರ್ವತನೆ ಪ್ರಕರಣ.
  •  ಹಳಿಯಾಳ PSI ಬಸವರಾಜ್ ಮಬನೂರ ಅಮಾನತು.
  • ಠಾಣೆಯ 8 ಜನ ಸಿಬ್ಬಂದಿ ವರ್ಗಾವಣೆ ಮಾಡಿ ಆದೇಶ.
  • ಉತ್ತರ ಕನ್ನಡ ಎಸ್ಪಿ ದೀಪನ್ ಆದೇಶ.
  • ಮಾಜಿ ರೌಡಿ ಸಿಬ್ಬಂದಿಗೆ ನಿಂದಿಸಿದ್ರು ಜೀಪ್ ನಿಂದ ಇಳಿಯದೇ ದುವರ್ತನೆ ತೋರಿದ್ದ PSI

ಜೀಪ್​​ನಿಂದ ಇಳಯದೇ ಪಿಎಸ್​​ಐ ದುವರ್ತನೆ

ನಡು ರಸ್ತೆಯಲ್ಲೇ ಮಾಜಿ ರೌಡಿ ಶೀಟರ್ ಮಚ್ ಮಂಜ ಎಣ್ಣೆ ಮತ್ತಿನಲ್ಲಿ ಗಲಾಟೆ ಮಾಡುತ್ತಿದ್ದ. ಗಲಾಟೆ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದಿದ್ದ ಪೊಲೀಸ್ ಸಿಬ್ಬಂದಿ ಆಗಮಿಸಿದ್ದರು. ಪೊಲೀಸರನ್ನು ಕಂಡು ಮತ್ತಷ್ಟು ಫುಲ್ ಗರಂ ಆಗಿದ್ದ ಮಂಜಾ, ಪೊಲೀಸರಿಗೆ ಅವಾಚ್ಯವಾಗಿ ನಿಂದಿಸಿ ಹಲ್ಲೆ ಮಾಡಿದ್ದ. ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ರು PSI ಬಸವರಾಜ್ ಸುಮ್ಮನೆ ಜೀಪಿನಲ್ಲೇ ಕುಳಿತ್ತಿದ್ದರು. ಈ ವಿಡಿಯೋ ಫುಲ್ ವೈರಲ್ ಅಗಿದ ಬೆನ್ನಲ್ಲೇ ಪಿಎಸ್​​ಐ ಬಸವರಾಜ್ ಮಬನೂರ ಅವರನ್ನ ಸಸ್ಪೆಂಡ್ ಮಾಡಲಾಗಿದೆ.

ಇದನ್ನೂ ಓದಿ: ಸಿಎಂ ಡಿಕೆಶಿ ಸೂಚನೆ ಬೆನ್ನಲ್ಲೇ ಪ್ರತಿ ಪೊಲೀಸ್ ಠಾಣೆಯಲ್ಲಿ ರೌಡಿ ಸ್ಕ್ವಾಡ್ ರಚನೆಗೆ ಆದೇಶ

ಪೊಲೀಸರ ಕೊರಳ ಪಟ್ಟಿ ಹಿಡಿದು, ಅವಾಚ್ಯ ಶಬ್ದಗಳಿಂದ ನಿಂದನೆ

ಹಳಿಯಾಳ ನಗರದ ಮೌರ್ಯ ಬಾರ್ ಆಂಡ್ ರೆಸ್ಟೋರೆಂಟ್ ನಲ್ಲಿ ಭಾನುವಾರ ಕುಡಿದ ಅಮಲಿನಲ್ಲಿ ಮಾಜಿ  ರೌಡಿ ಶೀಟರ್ ‘ಮಚ್ಚುಮಂಜ’ ಎಂಬಾತ ಪೊಲೀಸರ ಕೊರಳ ಪಟ್ಟಿ ಹಿಡಿದು, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರೂ ಆರು ಜನ ಪೊಲೀಸರು ಅಸಹಾಯಕರಾಗಿ ನಿಂತು ನೋಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಹೆಂಡತಿಯ ವಿಚ್ಛೇದನಕ್ಕೆ ಪೊಲೀಸರೇ ಕಾರಣ ಎಂಬ ಸಿಟ್ಟಿನಲ್ಲಿ ಈ ರೌಡಿ ಸಾರ್ವಜನಿಕವಾಗಿ ಆಟಾಟೋಪ ನಡೆಸಿದ್ದು, ಪೊಲೀಸರ ಈ ಅಸಹಾಯಕ ನಡೆ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

ಸಿಎಂ ಆಗುತ್ತಿದ್ದಂತೆಯೇ ಡಿಕೆ ಶಿವಕುಮಾರ್ ಅವರು ಕಾನೂನು ಸುವ್ಯವಸ್ಥೆ ಕಾಪಾಡುವ ಕುರಿತು ಪೊಲೀಸ್ ಇಲಾಖೆಗೆ ಸೂಚನೆಗಳನ್ನ ನೀಡಿದ್ದಾರೆ. ಅದರಲ್ಲೂ ಮುಖ್ಯವಾಗಿ ರೌಡಿಸಂ ನಿಯಂತ್ರಣಕ್ಕೆ ಸ್ಕ್ವಾಡ್ ರಚಿಸುವಂತೆ ಹೇಳಿದ್ದರು. ಅದರಂತೆ ಇದೀಗ ರಾಜ್ಯಾದಾದ್ಯಂತ ರೌಡಿಸಂ ನಿಯಂತ್ರಣಕ್ಕೆ ಗೃಹ ಇಲಾಖೆ ಹೊಸ ಕ್ರಮ ಕೈಗೊಂಡಿದ್ದು, ಈ ಬಗ್ಗೆ ಮಹತ್ವದ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ ಮಾಜಿ ರೌಡಿಶೀಟರ್ ಮಂಜುನ ಹುಚ್ಚಾಟ ವಿಡಿಯೋ ವೈರಲ್ ಆಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ; ಹತ್ತಾರು ಮನೆಗಳಿಗೆ ಹಾನಿ – Kannada News | Massive cloudburst in North Kashmir’s Bandipora several houses damaged

ಶ್ರೀನಗರ, ಜೂನ್ 17: ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಗಿರಿಧಾಮ ಪ್ರದೇಶಗಳಲ್ಲಿ ನಿನ್ನೆ ನಡುರಾತ್ರಿ ಸಂಭವಿಸಿದ ಭೀಕರ ಮೇಘಸ್ಫೋಟದಿಂದಾಗಿ ಭಾರಿ ಪ್ರವಾಹ (Flood) ಉಂಟಾಗಿದೆ. ಪರ್ವತಗಳಿಂದ ಹರಿದುಬಂದ ಭಾರಿ ಪ್ರಮಾಣದ ನೀರು ಮತ್ತು ಕೆಸರು ವಸತಿ ಪ್ರದೇಶಗಳಿಗೆ ನುಗ್ಗಿದ್ದು, ಮನೆಗಳು ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ತೀವ್ರ ಹಾನಿಯಾಗಿದೆ. ಅದೃಷ್ಟವಶಾತ್ ಪ್ರಾಣಾಪಾಯ ಸಂಭವಿಸಿಲ್ಲವಾದರೂ, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಮೇಲ್ಭಾಗದ ಪರ್ವತ ಪ್ರದೇಶಗಳಲ್ಲಿ ತಡರಾತ್ರಿ ಹಠಾತ್ತಾಗಿ ಭಾರಿ ಮೇಘಸ್ಫೋಟ ಸಂಭವಿಸಿದೆ. ಇದರ ಪರಿಣಾಮವಾಗಿ ಸ್ಥಳೀಯ ನದಿ ಮತ್ತು ತೊರೆಗಳಲ್ಲಿ ನೀರಿನ ಮಟ್ಟ ದಿಢೀರನೆ ಏರಿಕೆಯಾಗಿ, ತಗ್ಗು ಪ್ರದೇಶದ ಹಳ್ಳಿಗಳಿಗೆ ಪ್ರವಾಹದ ನೀರು ನುಗ್ಗಿದೆ. ನಡುರಾತ್ರಿ ಜನರು ಗಾಢ ನಿದ್ರೆಯಲ್ಲಿದ್ದಾಗ ಈ ದುರಂತ ಸಂಭವಿಸಿದ್ದರಿಂದ ಇಡೀ ಭಾಗದಲ್ಲಿ ತೀವ್ರ ಆತಂಕ ಮತ್ತು ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಪ್ರವಾಹದ ಅಬ್ಬರಕ್ಕೆ ಸಿಲುಕಿ ಹಲವು ಕಾಂಕ್ರೀಟ್ ಮತ್ತು ಮರದ ಮನೆಗಳ ಗೋಡೆಗಳು ಕುಸಿದಿವೆ. ಪ್ರಮುಖ ರಸ್ತೆಗಳ ಮೇಲೆ ಕೆಸರು ಮತ್ತು ಕಲ್ಲುಗಳು ಬಂದು ಬಿದ್ದಿರುವುದರಿಂದ ಬಂಡಿಪೋರಾದ ಹಲವು ಗ್ರಾಮಗಳ ನಡುವಿನ ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಂತೋಷದಿಂದ ಜೀವನ ನಡೆಸಲು ನೀವು ಮಾಡಬೇಕಾದದ್ದು ಇಷ್ಟೆ – Kannada News | What to do to live a happy life

ಇಂದಿನ ಬ್ಯುಸಿ ಜೀವನದಲ್ಲಿ, ಪ್ರತಿಯೊಬ್ಬರೂ ಸಂತೋಷವಾಗಿರಲು (happy) ಬಯಸುತ್ತಾರೆ. ಕೆಲವರು ದುಡ್ಡಿದ್ದರೆ ಮಾತ್ರ ಸಂತೋಷ ಸಿಗುವುದು ಎಂದು ಭಾವಿಸಿ, ದುಡ್ಡು ಸಂಪಾದಿಸುವುದರ ಹಿಂದೆ ಓಡಿ ಒತ್ತಡ ಮತ್ತು ಆಯಾಸ ತಂದುಕೊಳ್ಳುತ್ತಾರೆ. ಆದ್ರೆ ಏನು ಗೊತ್ತಾ ನಿಜವಾದ ಸಂತೋಷ ಎನ್ನುವಂತಹದ್ದು ಆಸ್ತಿ, ಹಣದಂತಹ ವಿಷಯಗಳಲ್ಲಿ ಅಲ್ಲ, ಬದಲಾಗಿ ನಮ್ಮ ದೈನಂದಿನ ಜೀವನಶೈಲಿ ಮತ್ತು ಸಣ್ಣ ಅಭ್ಯಾಸಗಳಿಂದ ಲಭಿಸುತ್ತದೆ. ನೀವು ಕೂಡ ಖುಷಿಯಿಂದ ಜೀವನ ನಡೆಸಲು, ಸಕಾರಾತ್ಮಕವಾಗಿರು ಬಯಸಿದರೆ ಸಂತೋಷದ ಜೀವನದ ಈ ರಹಸ್ಯಗಳನ್ನು ಪಾಲಿಸಿ. ಅವು ಯಾವುವು ಎಂಬ ಸಂಪೂರ್ಣ ವಿವರ ಇಲ್ಲಿದೆ.

ಸಂತೋಷದ ಜೀವನದ ರಹಸ್ಯಗಳಿವು:

ಸಕಾರಾತ್ಮಕತೆಯಿಂದ ದಿನವನ್ನು ಆರಂಭಿಸುವುದು: ಸಂತೋಷವಾಗಿರುವ  ಜನರು ತಮ್ಮ ದಿನವನ್ನು ಎಂದಿಗೂ ಆತುರದಿಂದ ಅಥವಾ ಒತ್ತಡದಿಂದ ಪ್ರಾರಂಭಿಸುವುದಿಲ್ಲ. ಬೆಳಗ್ಗೆ ಎದ್ದ ತಕ್ಷಣ ಫೋನ್‌ ನೋಡುವುದಿಲ್ಲ ಬದಲಾಗಿ  ಅವರು ತಮಗಾಗಿ ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾರೆ. ಶಾಂತವಾಗಿ ಕುಳಿತು ಸಮಯ ಕಳೆಯುತ್ತಾರೆ, ಸುಂದರವಾದ, ಸಕಾರಾತ್ಮಕ ದಿನಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾರೆ. ಹೀಗೆ ಸಕಾರಾತ್ಮಕತೆಯಿಂದ ದಿನವನ್ನು ಆರಂಭಿಸುವ ಅಭ್ಯಾಸ ಬೆಳೆಸಿಕೊಂಡರೆ ನೀವು ಕೂಡ ಖುಷಿ ಖುಷಿಯಾಗಿ ಜೀವನವನ್ನು ಸಾಗಿಸಬಹುದು.

ಸಣ್ಣ ವಿಷಯಗಳಲ್ಲಿ ಸಂತೋಷವನ್ನು ಕಂಡುಕೊಳ್ಳುವ ಅಭ್ಯಾಸ: ಯಾವಾಗಲೂ ಸಂತೋಷವಾಗಿರು  ಜನರು ದೊಡ್ಡ ಸಂತೋಷಕ್ಕಾಗಿ ಕಾಯುವುದಿಲ್ಲ. ಅವರಿಗೆ, ರಸ್ತೆಯ ಬದಿಯಲ್ಲಿ ಅರಳುವ ಸುಂದರವಾದ ಹೂವು, ಮಗುವಿನ ಮುದ್ದಾದ ನಗು ಅಥವಾ ಸ್ನೇಹಿತರೊಂದಿಗೆ ಕಳೆದ ಒಂದು  ಸಣ್ಣ ಕ್ಷಣವೂ ಸುಂದರವಾಗಿ ಕಾಣುತ್ತದೆ. ಅವರು ಇಂತಹ ಸಣ್ಣ ವಿಷಯಗಳಲ್ಲಿ ಹೆಚ್ಚಿನ ಸಂತೋಷವನ್ನು ಕಾಣುತ್ತಾರೆ. ಜೊತೆಗೆ ಅವರು ನಿನ್ನೆಯ ಬಗ್ಗೆ ವಿಷಾದ ಪಡುವುದಿಲ್ಲ ಅಥವಾ ನಾಳೆಯ ಬಗ್ಗೆ ಚಿಂತೆಯನ್ನೂ ಮಾಡುವುದಿಲ್ಲ ವರ್ತಮಾನದಲ್ಲಿ ಬದುಕುತ್ತಾರೆ, ಸಣ್ಣ ವಿಷಯಗಳಲ್ಲೂ ಖುಷಿಯನ್ನು ಕಾಣುತ್ತಾರೆ. ಈ ಒಂದು ಅಭ್ಯಾಸವನ್ನು ಅಳವಡಿಸಿಕೊಳ್ಳುವ ಮೂಲಕ ನೀವು ಸಹ ಸಂತೋಷದಾಯಕ ಜೀವನವನ್ನು ನಡೆಸಬಹುದು.

ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು: ಸಂತೋಷವಾಗಿರುವ ಜನರು ಪ್ರತಿದಿನ ತಮಗಾಗಿ ಸ್ವಲ್ಪ ಸಮಯವನ್ನು ಮೀಸಲಿಡುತ್ತಾರೆ.  20 ನಿಮಿಷಗಳ ವಾಕಿಂಗ್, ಯೋಗ ಅಥವಾ ಲಘು ವ್ಯಾಯಾಮವನ್ನು ಮಾಡುತ್ತಾರೆ. ಈ ದೈಹಿಕ ಚಟುವಟಿಕೆಗಳು ನಮ್ಮ ದೇಹದಲ್ಲಿ ಸಂತೋಷದ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ, ಇದು ತಕ್ಷಣವೇ ಒತ್ತಡವನ್ನು ಕಡಿಮೆ ಮಾಡುತ್ತದೆ. ಹೆಚ್ಚುವರಿಯಾಗಿ ಸಂತೋಷವಾಗಿರುವ ಜನರು ಉತ್ತಮ, ಪೌಷ್ಟಿಕ ಆಹಾರವನ್ನು ಸೇವಿಸುತ್ತಾರೆ ಮತ್ತು ಸಾಕಷ್ಟು ನಿದ್ರೆ ಪಡೆಯುತ್ತಾರೆ. ಇವನ್ನೆಲ್ಲಾ ಪಾಲಿಸಿದರೆ ನೀವು ಕೂಡ ಸಂತೋಷದ ಜೀವನವನ್ನು ನಡೆಸಬಹುದು.

ಇತರರಿಗೆ ಸಹಾಯ ಮಾಡುವುದು: ಸಂತೋಷವು ಹಂಚಿಕೊಳ್ಳುವ ಮೂಲಕ ಬೆಳೆಯುತ್ತದೆ. ನಿಜವಾದ ಸಂತೋಷವು ಇತರರಿಗೆ ಸಹಾಯ ಮೂಡುವ ಮೂಲಕ ಲಭಿಸುತ್ತದೆ.ಯಾರಿಗಾದರೂ ದಾರಿ ತೋರಿಸುವುದು, ಇನ್ನೊಬ್ಬರ ಕೆಲಸವನ್ನು ಹೊಗಳುವುದು ಅಥವಾ ಒಂದು ಸಣ್ಣ ನಗುವನ್ನು ಬೀರುವುದು ಮಾಡಿ. ಇವು ಸಣ್ಣದಾಗಿ ಕಂಡರೂ ಮನಸ್ಸಿಗೆ ಹೆಚ್ಚಿನ ಸಂತೋಷವನ್ನು ನೀಡುತ್ತದೆ.

ಇದನ್ನೂ ಓದಿ: ಜಪಾನೀಯರ ಅಭ್ಯಾಸಗಳನ್ನು ಪಾಲಿಸುವ ಮೂಲಕ ಆರೋಗ್ಯವಂತರಾಗಿ ನೂರ್ಕಾಲ ಬಾಳಿ

ಪ್ರತಿಯೊಂದು ಸನ್ನಿವೇಶದಲ್ಲೂ ಒಳ್ಳೆಯದನ್ನು ನೋಡುವುದು: ಜೀವನದಲ್ಲಿ ಏರಿಳಿತಗಳಿರುವುದು ಸಾಮಾನ್ಯ. ಹೀಗಿರುವಾಗ ಕಷ್ಟಗಳು ಎದುರಾದಾಗ ಅದನ್ನು ನೆನೆದು ಅಳುವ ಬದಲು ಪರಿಹಾರಗಳತ್ತ ಗಮನ ಹರಿಸಿ. ಪ್ರತಿಯೊಂದು ಕಠಿಣ ಪರಿಸ್ಥಿತಿಯಲ್ಲೂ ಸಕಾರಾತ್ಮಕ ವಿಚಾರಗಳನ್ನು ಕಂಡುಕೊಳ್ಳಿ. ಇದು ನಿಮ್ಮನ್ನು ಒಳಗಿನಿಂದ ಬಲಪಡಿಸುತ್ತದೆ ಮತ್ತು ಇದರಿಂದ ನೀವು ಯಾವಾಗಲೂ ಸಂತೋಷವಾಗಿರಬಹುದು.

ಸಂಬಂಧಗಳಿಗೆ ಮಹತ್ವ ನೀಡಿ: ಸಂತೋಷ ಹೆಚ್ಚು ಹಣ ಗಳಿಸುವುದರಿಂದ ಬರುವುದಿಲ್ಲ. ಸಂತೋಷವು ಸಕಾರಾತ್ಮಕತೆ, ಪ್ರೀತಿಪಾತ್ರರೊಂದಿಗೆ ಸಮಯ ಕಳೆಯುವುದರಿಂದಲೂ ಬರುತ್ತದೆ. ಆದ್ದರಿಂದ, ನಿಮ್ಮ ಜೀವನ ಎಷ್ಟೇ ಕಾರ್ಯನಿರತವಾಗಿದ್ದರೂ, ನಿಮ್ಮ ಸಂಬಂಧಗಳಿಗೆ ಸಮಯ ಮತ್ತು ಪ್ರಾಮುಖ್ಯತೆಯನ್ನು ವಿನಿಯೋಗಿಸಲು ಮರೆಯಬೇಡಿ. ಅದು ನಿಮ್ಮ ಹೆತ್ತವರಾಗಿರಲಿ, ನಿಮ್ಮ ಸಂಗಾತಿಯಾಗಿರಲಿ ಅಥವಾ ನಿಮ್ಮ ಸ್ನೇಹಿತರಾಗಿರಲಿ ಎಲ್ಲರೊಂದಿಗೆ ಉತ್ತಮ ಮತ್ತು ಸೌಹಾರ್ದಯುತ ಸಂಬಂಧವನ್ನು ಕಾಪಾಡಿಕೊಳ್ಳಿ. ಕಾಲಕಾಲಕ್ಕೆ ಅವರೊಂದಿಗೆ ಮಾತನಾಡಿ ಮತ್ತು ಅವರೊಂದಿಗೆ ಸಮಯ ಕಳೆಯಿರಿ. ಇದು ನಿಮಗೆ ಖಂಡಿತವಾಗಿಯೂ ಸಂತೋಷವನ್ನು ನೀಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಧುಮೇಹಿಗಳೇ ಊಟಕ್ಕೂ ಮುನ್ನ ಒಂದು ನೆಲ್ಲಿಕಾಯಿ ತಿಂದು ನೋಡಿ! ದೇಹದಲ್ಲಾಗುವ ಬದಲಾವಣೆ ನಿಮಗೆ ತಿಳಿಯುತ್ತೆ – Kannada News | Can Amla Control Blood Sugar? Expert Insights for Diabetics

ನೆಲ್ಲಿಕಾಯಿ (Amla) ಆರೋಗ್ಯಕ್ಕೆ ಅತ್ಯಂತ ಉಪಯುಕ್ತವಾದ ನೈಸರ್ಗಿಕ ಸೂಪರ್‌ಫುಡ್‌ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಅದರಲ್ಲಿಯೂ ವಿಶೇಷವಾಗಿ ಮಧುಮೇಹ (ಡಯಾಬಿಟಿಸ್) ಇರುವವರಿಗೆ ಇದು ವರದಾನವೆಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹೌದು, ಊಟಕ್ಕೆ 20- 30 ನಿಮಿಷಗಳ ಮೊದಲು ನೆಲ್ಲಿಕಾಯಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯವಾಗಬಹುದು. ಅಷ್ಟೇ ಅಲ್ಲ, ಈ ಒಂದು ಅಭ್ಯಾಸದಿಂದ ಅನೇಕ ರೀತಿಯ ಲಾಭಗಳಿವೆ. ಹಾಗಾದರೆ ಯಾವ ರೀತಿಯಲ್ಲಿ ಪ್ರಯೋಜನಕಾರಿ, ನೆಲ್ಲಿಕಾಯಿ ಸೇವನೆ ಹೇಗೆ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ರಕ್ತದ ಸಕ್ಕರೆ ನಿಯಂತ್ರಣಕ್ಕೆ ಸಹಕಾರಿ:

ಕೆಲವು ಅಧ್ಯಯನಗಳ ಪ್ರಕಾರ, ನೆಲ್ಲಿಕಾಯಿಯಲ್ಲಿ ಕ್ರೋಮಿಯಂ (Chromium) ಎಂಬ ಖನಿಜಾಂಶವಿದೆ. ಇದು ದೇಹದಲ್ಲಿ ಇನ್ಸುಲಿನ್ ಕಾರ್ಯಕ್ಷಮತೆಯನ್ನು ಸುಧಾರಿಸಲು ನೆರವಾಗುತ್ತದೆ. ಊಟಕ್ಕೂ ಮುನ್ನ ನೆಲ್ಲಿಕಾಯಿ ತಿಂದರೆ ಆಹಾರದಲ್ಲಿನ ಕಾರ್ಬೋಹೈಡ್ರೇಟ್‌ಗಳು ನಿಧಾನವಾಗಿ ಜೀರ್ಣವಾಗಿ ಗ್ಲೂಕೋಸ್ ಆಗಿ ಪರಿವರ್ತನೆಯಾಗುತ್ತವೆ. ಇದರಿಂದ ಊಟದ ನಂತರ ರಕ್ತದಲ್ಲಿನ ಸಕ್ಕರೆ ಮಟ್ಟ ಹಠಾತ್ ಏರಿಕೆಯಾಗುವ ಸಾಧ್ಯತೆ ಕಡಿಮೆಯಾಗುತ್ತದೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ:

ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸಿ, ಜ್ವರ, ಶೀತ ಹಾಗೂ ಸೋಂಕುಗಳ ವಿರುದ್ಧ ರಕ್ಷಣೆ ನೀಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಪ್ರತಿದಿನ ಒಂದು ಗ್ಲಾಸ್ ಬೀಟ್ರೂಟ್ ಜ್ಯೂಸ್ ಕುಡಿಯುವುದರಿಂದ ದೇಹದಲ್ಲಿ ಎಷ್ಟೆಲ್ಲಾ ಬದಲಾವಣೆಯಾಗುತ್ತೆ ಗೊತ್ತಾ?

ಹೃದಯದ ಆರೋಗ್ಯಕ್ಕೂ ಉತ್ತಮ:

ನೆಲ್ಲಿಕಾಯಿಯಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಕೆಟ್ಟ ಕೊಲೆಸ್ಟ್ರಾಲ್ (LDL) ಮಟ್ಟವನ್ನು ಕಡಿಮೆ ಮಾಡಲು ನೆರವಾಗುತ್ತವೆ. ಇದರಿಂದ ರಕ್ತನಾಳಗಳ ಆರೋಗ್ಯ ಸುಧಾರಿಸಿ, ಹೃದಯ ಸಂಬಂಧಿತ ಸಮಸ್ಯೆಗಳ ಅಪಾಯ ಕಡಿಮೆಯಾಗಬಹುದು.

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ:

ನೆಲ್ಲಿಕಾಯಿಯಲ್ಲಿರುವ ನಾರಿನಾಂಶ (Fiber) ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ. ಗ್ಯಾಸ್ಟ್ರಿಕ್, ಅಜೀರ್ಣ ಹಾಗೂ ಮಲಬದ್ಧತೆ ಸಮಸ್ಯೆಗಳಿಂದ ಬಳಲುವವರಿಗೆ ಇದು ಸಹಕಾರಿ.

ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ಒಳ್ಳೆಯದು:

ನೆಲ್ಲಿಕಾಯಿ ರಕ್ತವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಇದರಿಂದ ಚರ್ಮ ಕಾಂತಿಯುತವಾಗಲು ನೆರವಾಗುತ್ತದೆ. ಜೊತೆಗೆ ಕೂದಲು ಉದುರುವಿಕೆಯನ್ನು ಕಡಿಮೆ ಮಾಡಿ, ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ಹೇಗೆ ಸೇವಿಸಬೇಕು?

ಮಧುಮೇಹ ಇರುವವರು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ಊಟಕ್ಕೂ ಮುನ್ನ ತಾಜಾ ನೆಲ್ಲಿಕಾಯಿ ತುಂಡುಗಳನ್ನು ಸೇವಿಸಬಹುದು. ಹಾಗೆಯೇ ತಿನ್ನಲು ಸಾಧ್ಯವಾಗದಿದ್ದರೆ, ನೆಲ್ಲಿಕಾಯಿ ರಸಕ್ಕೆ ಸಲ್ಪ ಸಕ್ಕರೆ ಸೇರಿಸಿ ಉಗುರುಬೆಚ್ಚಗಿನ ನೀರಿನಲ್ಲಿ ಬೆರೆಸಿ ಕುಡಿಯಬಹುದು. ಆದರೆ ಸಕ್ಕರೆ ಸೇರಿಸಿದ ನೆಲ್ಲಿಕಾಯಿ ಮಿಠಾಯಿ, ಕ್ಯಾಂಡಿಯನ್ನು ತಪ್ಪಿಸುವುದು ಉತ್ತಮ.

ಆದರೆ ಮಧುಮೇಹದ ಔಷಧಿಗಳನ್ನು ತೆಗೆದುಕೊಳ್ಳುತ್ತಿರುವವರು ಆಹಾರದಲ್ಲಿ ದೊಡ್ಡ ಬದಲಾವಣೆ ಮಾಡುವ ಮೊದಲು ವೈದ್ಯರ ಸಲಹೆ ಪಡೆಯುವುದು ಒಳಿತು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಾಯಿ ಬದಲಾಗಿ ಜೀವಂತ ಮಗಳ ಹೆಸರಲ್ಲಿ ಡೆತ್ ಸರ್ಟಿಫಿಕೇಟ್ ನೀಡಿದ ಅಧಿಕಾರಿಗಳು: ತುತ್ತು ಅನ್ನಕ್ಕೂ ಪರದಾಟ – Kannada News | Death Certificate Issued in Living Daughter’s Name Instead of Mother’s: Leaving Family in Crisis

ಹಾವೇರಿ, ಜೂನ್​ 17: ಸರ್ಕಾರಿ ಅಧಿಕಾರಿಗಳ ಬೇಜವಾಬ್ದಾರಿತನ ಮತ್ತು ನಿರ್ಲಕ್ಷ್ಯಕ್ಕೆ ಬಡಪಾಯಿ ವೃದ್ಧೆ ಯೊಬ್ಬರು ಜೀವಂತವಾಗಿದ್ದರೂ ಸರ್ಕಾರಿ ದಾಖಲೆಗಳಲ್ಲಿ ಮಾತ್ರ ಮೃತಪಟ್ಟಿದ್ದಾರೆ. ತಾಯಿ ಬದಲು ಮಗಳ ಹೆಸರಲ್ಲಿ ಮರಣ ಪ್ರಮಾಣ ಪತ್ರ (Death Certificate) ನೀಡುವ ಮೂಲಕ ದೊಡ್ಡ ಎಡವಟ್ಟು ಮಾಡಿದ್ದಾರೆ. ಇದೀಗ ವೃದ್ಧೆ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದು, ತುತ್ತು ಅನ್ನಕ್ಕೂ ಪರದಾಡುತ್ತಿದ್ದಾರೆ. ಇಂತಹದೊಂದು ದಾರುಣ ಘಟನೆ ಹಾವೇರಿ (haveri) ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಅತ್ತಿಗೇರಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಮುಖ್ಯಾಂಶಗಳು

  • ಜೀವಂತ ವೃದ್ಧೆಗೆ ಮರಣ ಪ್ರಮಾಣಪತ್ರ ನೀಡಿದ ಅಧಿಕಾರಿಗಳು
  • ಸರ್ಕಾರಿ ಸೌಲಭ್ಯಗಳಿಂದ ವಂಚಿತರಾದ ವೃದ್ಧೆ
  • ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರು ಆಕ್ರೋಶ

ನಡೆದಿದ್ದೇನು?

ಅತ್ತಿಗೇರಿ ಗ್ರಾಮದ ಶಿವಗಂಗವ್ವ ತಳಳ್ಳಿ ಎಂಬ ವೃದ್ಧ ಮಹಿಳೆಯ ತಾಯಿ ಶಂಕ್ರವ್ವ ಮೀಳ್ಳಿ ಇತ್ತೀಚೆಗೆ ನಿಧನರಾಗಿದ್ದರು. ಹೀಗಾಗಿ ತಾಯಿಯ ಮರಣ ಪ್ರಮಾಣ ಪತ್ರಕ್ಕೆ ಮಗಳು ಶಿವಗಂಗವ್ವ ಅರ್ಜಿ ಸಲ್ಲಿಸಿದ್ದರು. ಆದರೆ, ಶಿಗ್ಗಾಂವಿ ತಾಲೂಕಾಡಳಿತ ಮತ್ತು ಅತ್ತಿಗೇರಿ ಗ್ರಾಮದ ಅಧಿಕಾರಿಗಳು ಎಡವಟ್ಟು ಮಾಡಿದ್ದಾರೆ. ಮೃತಪಟ್ಟ ತಾಯಿಯ ಹೆಸರಿನಲ್ಲಿ ಪ್ರಮಾಣ ಪತ್ರ ನೀಡುವ ಬದಲು, ಜೀವಂತವಾಗಿರುವ ಮಗಳು ಶಿವಗಂಗವ್ವಳ ಹೆಸರಲ್ಲೇ ಮರಣ ಪ್ರಮಾಣ ಪತ್ರ ಸೃಷ್ಟಿಸಿ ಕೈಗಿಟ್ಟಿದ್ದಾರೆ.

ಆಧಾರ್, ರೇಷನ್ ಕಾರ್ಡ್ ರದ್ದು

ಇನ್ನು ತಮ್ಮ ಹೆಸರಲ್ಲೇ ಡೆತ್ ಸರ್ಟಿಫಿಕೇಟ್ ಸೃಷ್ಟಿಯಾಗಿರುವ ವಿಷಯ ಶಿವಗಂಗವ್ವರಿಗೆ ಗೊತ್ತೇ ಇರಲಿಲ್ಲ. ಇತ್ತೀಚೆಗೆ ಬ್ಯಾಂಕಿನಲ್ಲಿ ಹಣ ತೆಗೆಯಲು ಹೋದಾಗ ವಿಷಯ ತಿಳಿದು ಆಕಾಶವೇ ಬಿದ್ದಂತಾಗಿದೆ. ಅಧಿಕಾರಿಗಳು ಮಾಡಿದ ಈ ಒಂದೇ ಒಂದು ತಪ್ಪಿನಿಂದಾಗಿ ಶಿವಗಂಗವ್ವ ಸದ್ಯ ಸರ್ಕಾರದ ಎಲ್ಲಾ ಸೌಲಭ್ಯಗಳಿಂದ ವಂಚಿತಳಾಗಿದ್ದಾರೆ. ಆಧಾರ್ ಕಾರ್ಡ್, ರೇಷನ್ ಕಾರ್ಡ್ ಅಷ್ಟೇ ಅಲ್ಲದೆ, ಅವರಿಗೆ ಬರುತ್ತಿದ್ದ ವೃದ್ಧಾಪ್ಯ ವೇತನ ಹಾಗೂ ಗಂಡನ ಪೀಚಣಿ ಹಣವೂ ಸಹ ರದ್ದಾಗಿದೆ. ರೇಷನ್ ಮತ್ತು ಹಣ ಎರಡೂ ಇಲ್ಲದೆ ಮಹಿಳೆ ತುತ್ತು ಅನ್ನಕ್ಕೂ ಪರದಾಡುವಂತಾಗಿದೆ.

ಇನ್ನು ತಮಗೆ ಅನ್ಯಾಯವಾಗಿರುವುದು ತಿಳಿಯುತ್ತಿದ್ದಂತೆಯೇ ಶಿವಗಂಗವ್ವ ಮತ್ತು ಕುಟುಂಬಸ್ಥರು ತಕ್ಷಣವೇ ಗ್ರಾಮ ಪಂಚಾಯತಿ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಡೋಂಟ್ ಕೇರ್ ಎಂದಿದ್ದಾರೆ. ಬಳಿಕ ಒಂದೇ ವಾರದಲ್ಲಿ ಎರಡು ಮರಣ ಪ್ರಮಾಣ ಪತ್ರಗಳನ್ನು ಸೃಷ್ಟಿಸಿದ್ದಾರೆ. ಮೊದಲು ಮಗಳ ಹೆಸರಿನಲ್ಲಿ ನೀಡಿದ್ದ ಅಧಿಕಾರಿಗಳು, ಬಳಿಕ ತಾಯಿಯ ಹೆಸರಿನಲ್ಲಿ ಮರಣ ಪ್ರಮಾಣ ಪತ್ರವನ್ನು ನೀಡಿದ್ದಾರೆ.

ಇದನ್ನೂ ಓದಿ: ಹಾಸನ: ಆಸ್ತಿ ಕಬಳಿಸಲು ಬದುಕಿದ ವೃದ್ಧೆ ಮರಣ ಪ್ರಮಾಣ ಪತ್ರ ಮಾಡಿಸಿದ ಸಂಬಂಧಿಕರು, ದೂರು ದಾಖಲಿಸಿದ ಮಗ

ಸದ್ಯ ಅಧಿಕಾರಿಗಳ ಈ ಬೇಜವಾಬ್ದಾರಿ ನಡೆಗೆ ಅತ್ತಿಗೇರಿ ಗ್ರಾಮಸ್ಥರು ಹಾಗೂ ವೃದ್ಧೆ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಬಡ ವೃದ್ಧೆಗೆ ನ್ಯಾಯ ಕೊಡಿಸಬೇಕು ಮತ್ತು ಎಡವಟ್ಟಿಗೆ ಕಾರಣರಾದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ವರದಿ: ಅಣ್ಣಪ್ಪ ಬಾರ್ಕಿ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬೆಂಗಳೂರಿನ ಐಐಎಂ ಕ್ಯಾಂಪಸ್​ನಲ್ಲಿ ಹೊಸ ಕಾಲೇಜು; ಎರಡು ಪದವಿ ಕೋರ್ಸ್​ಗಳು ಆಫರ್; ಟಾಟಾ ಟ್ರಸ್ಟ್ಸ್​ನಿಂದ ಅನುದಾನ – Kannada News | IIM Bangalore starts new undergraduate college backed by Tata Trusts

ಬೆಂಗಳೂರಿನ ಐಐಎಂImage Credit source: Vasuki Rao via Getty Images

ಬೆಂಗಳೂರು, ಜೂನ್ 17: ಬೆಂಗಳೂರಿನ ಪ್ರತಿಷ್ಠಿತ ಐಐಎಂ ಬೆಂಗಳೂರು (IIM Bangalore – IIMB) ಸಂಸ್ಥೆಯು ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ಪದವಿ (Undergraduate) ಶಿಕ್ಷಣ ವಿಭಾಗಕ್ಕೆ ಕಾಲಿಡುತ್ತಿದೆ. ಟಾಟಾ ಟ್ರಸ್ಟ್ಸ್ (Tata Trusts) ಬೆಂಬಲದೊಂದಿಗೆ ಐಐಎಂ ಕಾಂಪಸ್‌ನಲ್ಲಿ ಹೊಸ ಪದವಿ ಕಾಲೇಜನ್ನು ಆರಂಭಿಸಲಾಗುತ್ತಿದ್ದು, 2026ರ ಆಗಸ್ಟ್ ತಿಂಗಳಿಂದ ಮೊದಲ ವಸತಿ ಸಹಿತ ಬಿಎಸ್‌ಸಿ (B.Sc.) ಬ್ಯಾಚ್ ಪ್ರಾರಂಭವಾಗಲಿದೆ. ಇದುವರೆಗೆ ಕೇವಲ ಎಂಬಿಎ (MBA), ಪಿಎಚ್‌ಡಿ ಮತ್ತು ಉನ್ನತ ಮ್ಯಾನೇಜ್‌ಮೆಂಟ್ ಕೋರ್ಸ್‌ಗಳಿಗೆ ಮಾತ್ರ ಸೀಮಿತವಾಗಿದ್ದ ಐಐಎಂ ಬೆಂಗಳೂರು, ಈಗ ಪ್ಲಸ್ ಟು (12ನೇ ತರಗತಿ) ಮುಗಿಸಿದ ವಿದ್ಯಾರ್ಥಿಗಳಿಗಾಗಿ ಮೊದಲ ಬಾರಿಗೆ ಪದವಿ ಶಿಕ್ಷಣವನ್ನು ಪರಿಚಯಿಸುತ್ತಿದೆ.

ಈ ಕಾಲೇಜಿನಲ್ಲಿ ಸದ್ಯಕ್ಕೆ ಎರಡು ಕೋರ್ಸ್​ಗಳನ್ನು ಆಫರ್ ಮಾಡಲಾಗುತ್ತಿದೆ:

  1. ಬಿಎಸ್​ಸಿ ಎಕನಾಮಿಕ್ಸ್ (ಆನರ್ಸ್)
  2. ಬಿಎಸ್​ಸಿ ಡಾಟಾ ಸೈನ್ಸ್ (ಆನರ್ಸ್)

ಬಿಎಸ್​ಸಿ ಎಕನಾಮಿಕ್ಸ್​ನಲ್ಲಿ ಡಾಟಾ ಸೈನ್ಸ್ ಮೈನರ್ ಸಬ್ಜೆಕ್ಟ್ ಇರುತ್ತದೆ. ಬಿಎಸ್​ಸಿ ಡಾಟಾ ಸೈನ್ಸ್ ಕೋರ್ಸ್​ನಲ್ಲಿ ಎಕನಾಮಿಕ್ಸ್ ಮೈನರ್ ಸಬ್ಜೆಕ್ಟ್ ಇರುತ್ತದೆ. ಈ ಎರಡೂ ಕೋರ್ಸ್​ಗಳು ತಲಾ ನಾಲ್ಕು ವರ್ಷದ್ದಾಗಿರುತ್ತದೆ. ಈ ಎರಡೂ ಕೋರ್ಸ್​ನಲ್ಲಿ ಡಾಟಾ ಸೈನ್ಸ್, ಎಕನಾಮಿಕ್ಸ್ ಮತ್ತು ಬ್ಯುಸಿನೆಸ್ ಸ್ಟಡೀಸ್ ವಿಷಯಗಳು ವಿವಿಧ ರೀತಿಯಲ್ಲಿ ಮಿಶ್ರವಾಗಿರುತ್ತದೆ. ಇವು 4 ವರ್ಷಗಳ ಸಂಪೂರ್ಣ ವಸತಿ ಸಹಿತ (Residential) ಪದವಿ ಕೋರ್ಸ್ ಆಗಿದ್ದು, ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲೇ ಉಳಿದು ಓದಬೇಕಾಗುತ್ತದೆ.

ಟಾಟಾ ಟ್ರಸ್ಟ್ಸ್ ನೀಡಿದ ಬೃಹತ್ ಕೊಡುಗೆ

ಈ ಹೊಸ ಪದವಿ ಶಾಲೆಗೆ (Undergraduate School) ದೇಶದ ಪ್ರತಿಷ್ಠಿತ ಟಾಟಾ ಟ್ರಸ್ಟ್ಸ್ ಸಂಸ್ಥೆ ಭಾರಿ ಧನಸಹಾಯ ನೀಡಿದೆ. ಐಐಎಂ ಬೆಂಗಳೂರು ಸಂಸ್ಥೆಯು ತನ್ನ ಸುವರ್ಣ ಮಹೋತ್ಸವದ (Golden Jubilee) ಅಂಗವಾಗಿ ಹಮ್ಮಿಕೊಂಡಿದ್ದ ನಿಧಿ ಸಂಗ್ರಹಣೆ ಅಭಿಯಾನದಲ್ಲಿ ಟಾಟಾ ಟ್ರಸ್ಟ್ಸ್ ಅತ್ಯಂತ ದೊಡ್ಡ ಮೊತ್ತದ ಕೊಡುಗೆಯನ್ನು ನೀಡುವ ಮೂಲಕ ಈ ಯೋಜನೆಗೆ ಬೆನ್ನೆಲುಬಾಗಿ ನಿಂತಿದೆ.

ಕೋರ್ಸ್‌ನ ವಿಶೇಷತೆಗಳೇನು?

ಬಿಎಸ್​ಸಿ ಬ್ಯುಸಿನೆಸ್ ಅಂಡ್ ಡೇಟಾ ಸೈನ್ಸ್ ಹೆಸರಿನ ಈ ಕೋರ್ಸ್ ಕೇವಲ ಸಾಂಪ್ರದಾಯಿಕ ಮ್ಯಾನೇಜ್‌ಮೆಂಟ್ ಶಿಕ್ಷಣಕ್ಕೆ ಸೀಮಿತವಾಗಿರದೆ, ಇಂದಿನ ಕಾರ್ಪೊರೇಟ್ ಜಗತ್ತಿಗೆ ಅತ್ಯಗತ್ಯವಾಗಿರುವ ಡೇಟಾ ಸೈನ್ಸ್ (Data Science) ಮತ್ತು ಕೃತಕ ಬುದ್ಧಿಮತ್ತೆಯ (AI) ತತ್ವಗಳನ್ನು ಒಳಗೊಂಡಿರುತ್ತದೆ.

ರಾಷ್ಟ್ರೀಯ ಶಿಕ್ಷಣ ನೀತಿಯಂತೆ, ವಿದ್ಯಾರ್ಥಿಗಳು 3 ವರ್ಷ ಮುಗಿಸಿ ಡಿಗ್ರಿ ಸರ್ಟಿಫಿಕೇಟ್‌ನೊಂದಿಗೆ ಹೊರಹೋಗಬಹುದು ಅಥವಾ 4 ವರ್ಷಗಳನ್ನು ಪೂರ್ಣಗೊಳಿಸಿ ಆನರ್ಸ್ (Honours) ಪದವಿ ಪಡೆಯಬಹುದು.

ಪ್ರವೇಶ ಪ್ರಕ್ರಿಯೆ ಮತ್ತು ಕ್ಯಾಂಪಸ್ ವಿವರ

  • ಸೀಟುಗಳ ಸಂಖ್ಯೆ: ಮೊದಲ ವರ್ಷದ (2026ರ ಬ್ಯಾಚ್) ಕೋರ್ಸ್‌ಗೆ ಕೇವಲ 120 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗುತ್ತದೆ.
  • ಹೊಸ ಕ್ಯಾಂಪಸ್: ಈ ಹೊಸ ಪದವಿ ಶಾಲೆಯು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಐಐಎಂಬಿಯ ಪ್ರಮುಖ ಕ್ಯಾಂಪಸ್‌ನಲ್ಲೇ ಕಾರ್ಯನಿರ್ವಹಿಸಲಿದೆ. ವಿದ್ಯಾರ್ಥಿಗಳಿಗೆ ವಿಶ್ವದರ್ಜೆಯ ಹಾಸ್ಟೆಲ್ ಮತ್ತು ಪ್ರಯೋಗಾಲಯದ ಸೌಲಭ್ಯಗಳನ್ನು ಒದಗಿಸಲು ಸಂಸ್ಥೆ ಸಜ್ಜಾಗುತ್ತಿದೆ.
  • ಅರ್ಜಿ ಸಲ್ಲಿಕೆ: ಪ್ರವೇಶ ಪರೀಕ್ಷೆ ಹಾಗೂ ಅರ್ಜಿ ಸಲ್ಲಿಕೆಯ ಸಂಪೂರ್ಣ ಅಧಿಕೃತ ವಿವರಗಳನ್ನು ಶೀಘ್ರದಲ್ಲೇ ಐಐಎಂ ಬೆಂಗಳೂರಿನ ಅಧಿಕೃತ ವೆಬ್‌ಸೈಟ್ (`iimb.ac.in`) ನಲ್ಲಿ ಪ್ರಕಟಿಸಲಾಗುವುದು.

ಇದನ್ನೂ ಓದಿ: ಸಾಫ್ಟ್‌ವೇರ್ ಮತ್ತು ಸೇವೆಗಳ ರಫ್ತಿನಲ್ಲಿ ಕರ್ನಾಟಕವೇ ಅಗ್ರಗಣ್ಯ: 2025-26ನೇ ಹಣಕಾಸು ವರ್ಷದಲ್ಲಿ 173 ಬಿಲಿಯನ್ ಡಾಲರ್‌ ವಹಿವಾಟು

ಐಐಎಂಬಿ ನಿರ್ದೇಶಕ ಪ್ರೊ| ಹೃಷಿಕೇಶ್ ಹೇಳಿಕೆ

ಐಐಎಂ ಬೆಂಗಳೂರು ಸಂಸ್ಥೆಯ ನಿರ್ದೇಶಕರಾದ ಪ್ರೊ. ಹೃಷಿಕೇಶ್ ಟಿ. ಕೃಷ್ಣನ್ ಅವರು, “ಟಾಟಾ ಟ್ರಸ್ಟ್ಸ್ ಬೆಂಬಲದೊಂದಿಗೆ ಆರಂಭವಾಗುತ್ತಿರುವ ಈ ಪದವಿ ಶಾಲೆಯು ಭಾರತದ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಹೊಸ ಕ್ರಾಂತಿ ಸೃಷ್ಟಿಸಲಿದೆ. ಉದ್ಯಮ ರಂಗದ ಇಂದಿನ ಜಾಗತಿಕ ಸವಾಲುಗಳನ್ನು ಎದುರಿಸಬಲ್ಲ ಯುವ ನಾಯಕರನ್ನು ಸಿದ್ಧಪಡಿಸುವುದು ನಮ್ಮ ಗುರಿ” ಎಂದು ತಿಳಿಸಿದ್ದಾರೆ.

ಟಾಟಾ ಟ್ರಸ್ಟ್ಸ್ ಅಧ್ಯಕ್ಷ ನೋಯೆಲ್ ಟಾಟಾ ಹೇಳಿಕೆ

ಈ ಐತಿಹಾಸಿಕ ಸಂದರ್ಭದಲ್ಲಿ ಮಾತನಾಡಿದ ಟಾಟಾ ಟ್ರಸ್ಟ್ಸ್ ಅಧ್ಯಕ್ಷ ನೋಯೆಲ್ ಟಾಟಾ ಅವರು, “ಟಾಟಾ ಟ್ರಸ್ಟ್ಸ್ ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ ಟಾಟಾ ಮೆಮೋರಿಯಲ್ ಆಸ್ಪತ್ರೆ ಮತ್ತು ಇಂಡಿಯನ್ ಇನ್‌ ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ನಂತಹ ಭಾರತದ ಅತ್ಯಂತ ಪ್ರತಿಷ್ಠಿತ ಸಂಸ್ಥೆಗಳನ್ನು ಬೆಂಬಲಿಸುತ್ತಾ ಬಂದಿದೆ. ಐಐಎಂಬಿಯ ಈ ಹೊಸ ಪ್ರಯತ್ನಕ್ಕೆ ನಾವು ನೀಡುತ್ತಿರುವ ಬೆಂಬಲವೂ ಅದೇ ಆಶಯವನ್ನು ಪ್ರತಿಬಿಂಬಿಸುತ್ತದೆ. ಯಾವುದೇ ಒಂದು ಸಂಸ್ಥೆಯು ಆರಂಭಿಕ ಹಾಗೂ ರೂಪುಗೊಳ್ಳುವ ಹಂತದಲ್ಲಿರುವಾಗ ದೊರೆಯುವ ಬಂಡವಾಳವು ಕೇವಲ ಒಂದು ಕಟ್ಟಡ ಅಥವಾ ಬಜೆಟ್ ಅನ್ನು ಮಾತ್ರ ರೂಪಿಸುವುದಿಲ್ಲ; ಬದಲಿಗೆ ಆ ಸಂಸ್ಥೆಯ ಚಾರಿತ್ರ್ಯ ಮತ್ತು ಮಹತ್ವಾಕಾಂಕ್ಷೆಯನ್ನೇ ಸೃಷ್ಟಿಸುತ್ತದೆ. ಅಂತಹ ಶಾಶ್ವತ ಮೌಲ್ಯವುಳ್ಳ ಸಂಸ್ಥೆಗಳನ್ನು ಕಟ್ಟುವುದು ನಮ್ಮ ಉದ್ದೇಶವಾಗಿದೆ” ಎಂದರು.

ಟಾಟಾ ಟ್ರಸ್ಟ್ಸ್ ಕೊಡುಗೆಯನ್ನು ಸ್ವಾಗತಿಸಿದ ಡಾ. ದೇವಿ ಶೆಟ್ಟಿ

ಟಾಟಾ ಟ್ರಸ್ಟ್ಸ್‌ನ ಈ ಮಹತ್ವದ ಕೊಡುಗೆಯನ್ನು ಸ್ವಾಗತಿಸಿದ ಐಐಎಂ ಬೆಂಗಳೂರಿನ ಆಡಳಿತ ಮಂಡಳಿ (ಬೋರ್ಡ್ ಆಫ್ ಗವರ್ನರ್ಸ್) ಅಧ್ಯಕ್ಷ ಡಾ. ದೇವಿ ಶೆಟ್ಟಿ ಅವರು, “ಟಾಟಾ ಟ್ರಸ್ಟ್ಸ್ ನೀಡಿರುವಂತಹ ಅಭೂತಪೂರ್ವ ಆರ್ಥಿಕ ನೆರವು, ಐಐಎಂ ಬೆಂಗಳೂರಿನಂತಹ ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಗಳನ್ನು ಜಾಗತಿಕ ನಾಯಕತ್ವದ ಹಾದಿಯಲ್ಲಿ ದೃಢವಾಗಿ ಮುನ್ನಡೆಸಲು ಅತ್ಯಗತ್ಯವಾಗಿವೆ. ಪದವಿಪೂರ್ವ ಹಂತದಲ್ಲೇ ಪ್ರತಿಭೆಗಳನ್ನು ಪೋಷಿಸಲು ಮತ್ತು ದತ್ತಾಂಶ ಆಧಾರಿತ ಜಗತ್ತಿನ ಸವಾಲುಗಳನ್ನು ಸಮರ್ಥವಾಗಿ ಎದುರಿಸಬಲ್ಲ ಚಿಂತಕರ ದಂಡನ್ನು ಸೃಷ್ಟಿಸಲು ನಾವು ಬದ್ಧರಾಗಿದ್ದೇವೆ” ಎಂದು ಹೇಳಿದರು.

ಈ ಜಂಟಿ ಸಹಭಾಗಿತ್ವದ ಕುರಿತು ಮಾತನಾಡಿದ ಟಾಟಾ ಟ್ರಸ್ಟ್ಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸಿದ್ದಾರ್ಥ್ ಶರ್ಮಾ ಅವರು, “ಟಾಟಾ ಟ್ರಸ್ಟ್ಸ್‌ನಲ್ಲಿ ನಾವು ಯಾವಾಗಲೂ ಮಹತ್ವಾಕಾಂಕ್ಷಿ ದೃಷ್ಟಿಕೋನ ಹಾಗೂ ವಾಸ್ತವಿಕ ಸವಾಲುಗಳಿಗೆ ಪರಿಹಾರ ನೀಡುವಂತಹ ಯೋಜನೆಗಳನ್ನು ಪ್ರೋತ್ಸಾಹಿಸಲು ಬಯಸುತ್ತೇವೆ. ಐಐಎಂ ಬೆಂಗಳೂರು ಸಂಸ್ಥೆಯು ತನ್ನ ಶೈಕ್ಷಣಿಕ ಶಿಸ್ತು ಮತ್ತು ಉತ್ಕೃಷ್ಟತೆಯನ್ನು ಪದವಿಪೂರ್ವ ಶಿಕ್ಷಣಕ್ಕೂ ವಿಸ್ತರಿಸುತ್ತಿರುವ ಈ ಸಂದರ್ಭದಲ್ಲಿ ಅದಕ್ಕೆ ಬೆಂಬಲ ನೀಡುತ್ತಿರುವುದು ನಮ್ಮ ಈ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ. ಜ್ಞಾನದ ಮೇಲೆ ಹಾಗೂ ಭಾರತದ ಭವಿಷ್ಯವನ್ನು ರೂಪಿಸುವ ಯುವ ಪೀಳಿಗೆಯ ಮೇಲೆ ಹೂಡಿಕೆ ಮಾಡುವುದು ನಾವು ಮಾಡಬಹುದಾದ ಅತ್ಯಂತ ಅರ್ಥಪೂರ್ಣ ಕೆಲಸಗಳಲ್ಲಿ ಒಂದಾಗಿದೆ” ಎಂದು ಅಭಿಪ್ರಾಯಪಟ್ಟರು.

ನೂತನ ಪಠ್ಯಕ್ರಮದ ವಿನ್ಯಾಸದ ಕುರಿತು ವಿವರಿಸಿದ ಐಐಎಂ ಬೆಂಗಳೂರಿನ ಪ್ರಭಾರ ನಿರ್ದೇಶಕ ಪ್ರೊ. ಯು. ದಿನೇಶ್ ಕುಮಾರ್ ಅವರು, “ನಾವು ರೂಪಿಸಿರುವ ಕೋರ್ಸ್‌ ಗಳು ವಿದ್ಯಾರ್ಥಿಗಳಿಗೆ ಕೇವಲ ತಾಂತ್ರಿಕ ನೈಪುಣ್ಯತೆಯನ್ನು ನೀಡುವುದಷ್ಟೇ ಅಲ್ಲದೆ, ಯುವ ಮನಸ್ಸುಗಳು ಸೂಕ್ತ ಪ್ರಶ್ನೆಗಳನ್ನು ಕೇಳುವಂತೆ, ಸಂಕೀರ್ಣತೆಗಳನ್ನು ಅರ್ಥೈಸಿಕೊಳ್ಳುವಂತೆ ಮತ್ತು ಪುರಾವೆಗಳ ಆಧಾರದ ಮೇಲೆ ಮುನ್ನಡೆಯುವಂತೆ ಸಜ್ಜುಗೊಳಿಸುತ್ತವೆ. ಟಾಟಾ ಟ್ರಸ್ಟ್ಸ್ ನೀಡಿರುವ ಈ ಬೆಂಬಲವು ನಮಗೆ ಅತ್ಯುತ್ತಮ ಪ್ರಾಧ್ಯಾಪಕರು, ಸಂಶೋಧನಾ ಮೂಲಸೌಕರ್ಯ ಮತ್ತು ಕ್ಯಾಂಪಸ್ ವಾತಾವರಣದ ಮೇಲೆ ಬಂಡವಾಳ ಹೂಡಲು ಅನುವು ಮಾಡಿಕೊಡುತ್ತದೆ. ಇದು ಭಾರತದ ಅಭಿವೃದ್ಧಿಯ ಆದ್ಯತೆಗಳ ಮೇಲೆ ಗಮನ ಕೇಂದ್ರೀಕರಿಸುವ ಮತ್ತು ಜಾಗತಿಕ ಸಾಮರ್ಥ್ಯಗಳನ್ನು ಬಲಪಡಿಸಲು ಬದ್ಧವಾಗಿರುವ ಅತ್ಯಾಧುನಿಕ ಕಲಿಕಾ ವ್ಯವಸ್ಥೆಯನ್ನು ನಿರ್ಮಿಸಲು ನೆರವಾಗಲಿದೆ” ಎಂದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 6:56 pm, Wed, 17 June 26

Source link

ವ್ಯಾಯಾಮದ ಮೊದಲು ವಾರ್ಮ್‌ಅಪ್‌ ಮಾಡೋದು ಎಷ್ಟು ಮುಖ್ಯ? ಅದರ ಪ್ರಯೋಜನಗಳೇನು? – Kannada News | Why is it important to warm up before body workout?

ಇಂದಿನ ಬ್ಯುಸಿ, ಒತ್ತಡದ ಜೀವನದಲ್ಲಿ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳುವುದು ತುಂಬಾನೇ ಮುಖ್ಯ. ಹಾಗಾಗಿ ಹೆಚ್ಚಿನವರು ಯೋಗ, ವ್ಯಾಯಾಮವನ್ನು (exercise) ಅಭ್ಯಾಸ ಮಾಡುತ್ತಾರೆ. ಬಹುಪಾಲು ಜನ ವ್ಯಾಯಾಮಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಹೌದು ತೂಕ ಇಳಿಸಿಕೊಳ್ಳಲು, ದೇಹವನ್ನು ಫಿಟ್‌ ಆಗಿರಿಸಲು ಪ್ರತಿನಿತ್ಯ ವ್ಯಾಯಾಮ ಮಾಡುತ್ತಾರೆ. ಆದರೆ ಒಂದಷ್ಟು ಜನ ಔರ್ಕ್‌ಔಟ್‌ ಮಾಡುವ ಮುನ್ನ ದೇಹವನ್ನು ವಾರ್ಮ್‌ಅಪ್‌ ಮಾಡೋದಿಲ್ಲ. ನೇರವಾಗಿ ವ್ಯಾಯಾಮವನ್ನೇ ಮಾಡುತ್ತಾರೆ. ವ್ಯಾಯಾಮಕ್ಕೂ ಮುನ್ನ ವಾರ್ಮ್‌ಅಪ್‌ ಮಾಡದಿದ್ದರೆ ಏನಾಗುತ್ತದೆ, ವಾರ್ಮ್‌ಅಪ್‌ ಮಾಡುವುದು ಏಕೆ ಮುಖ್ಯ, ಅದರ ಪ್ರಯೋಜನಗಳೇನು ಎಂಬುದನ್ನು ತಿಳಿದುಕೊಳ್ಳಿ.

ವ್ಯಾಯಾಮಕ್ಕೂ ಮುನ್ನ ವಾರ್ಮ್‌ಅಪ್‌ ಮಾಡೋದು ಏಕೆ ಮುಖ್ಯ?

ವಾಹನವನ್ನು ಪ್ರಾರಂಭಿಸುವ ಮೊದಲು ಎಂಜಿನ್ ಅನ್ನು ಸ್ವಲ್ಪ ಸಮಯದವರೆಗೆ ಬೆಚ್ಚಗಾಗಿಸುತ್ತೇವೆ. ಅದೇ ರೀತಿ, ವ್ಯಾಯಾಮದಂತಹ ಯಾವುದೇ ಕಠಿಣ ದೈಹಿಕ ಚಟುವಟಿಕೆಗೆ ನಮ್ಮ ದೇಹವನ್ನು ಸಿದ್ಧಪಡಿಸುವಾಗ, ಲಘು ವ್ಯಾಯಾಮದೊಂದಿಗೆ ದೇಹವನ್ನು ಬೆಚ್ಚಗಾಗುವುದು ಮುಖ್ಯ. ವಾರ್ಮ್ ಅಪ್ ಎಂದರೆ ದೇಹವನ್ನು ತೀವ್ರವಾದ ವ್ಯಾಯಾಮ ಅಥವಾ ವ್ಯಾಯಾಮಗಳಿಗೆ ಕ್ರಮೇಣ ಸಿದ್ಧಪಡಿಸಲು ಹಗುರವಾದ ದೈಹಿಕ ಚಟುವಟಿಕೆ ಅಥವಾ ಸ್ಟ್ರೆಚಿಂಗ್‌ ಆಗಿದೆ. ಇದು ದೇಹವು ವಿಶ್ರಾಂತಿ ಸ್ಥಿತಿಯಿಂದ ವ್ಯಾಯಾಮಕ್ಕೆ ಸಿದ್ಧ ಸ್ಥಿತಿಗೆ ಪರಿವರ್ತನೆಗೊಳ್ಳಲು ಸಹಾಯ ಮಾಡುತ್ತದೆ. ಇದರಲ್ಲಿ ಜಾಗಿಂಗ್, ಸ್ಟ್ರೆಚಿಂಗ್, ಜಂಪಿಂಗ್ ಜ್ಯಾಕ್ಸ್ ಅಥವಾ ತೋಳನ್ನು ತಿರುಗಿಸುವಂತ 5-10 ನಿಮಿಷಗಳ ಲಘು ವ್ಯಾಯಾಮಗಳು ಸೇರಿವೆ.

ಈ ವಾರ್ಮ್ ಅಪ್ ದೇಹವನ್ನು ಹಠಾತ್ ದೈಹಿಕ ಒತ್ತಡಕ್ಕೆ ಸಿದ್ಧಪಡಿಸುತ್ತದೆ. ಕ್ರಮೇಣ ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ, ಸ್ನಾಯುಗಳಿಗೆ ರಕ್ತದ ಹರಿವನ್ನು ಸುಧಾರಿಸುತ್ತದೆ, ಶಕ್ತಿಯನ್ನು ಒದಗಿಸುತ್ತದೆ ಮತ್ತು ಹೆಚ್ಚು ಸಮಯ ವ್ಯಾಯಾಮ ಮಾಡಲು ಅನುವು ಮಾಡಿಕೊಡುತ್ತದೆ. ಇದು ನಮ್ಯತೆಯನ್ನು ಸುಧಾರಿಸುತ್ತದೆ, ಗಾಯಗಳಾಗುವ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಸರಿಯಾದ ವಾರ್ಮ್ ಅಪ್ ಗಾಯಗಳನ್ನು ತಡೆಯುವುದಲ್ಲದೆ, ವ್ಯಾಯಾಮದ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ.

ಇದನ್ನೂ ಓದಿ: ಜಪಾನೀಯರ ಅಭ್ಯಾಸಗಳನ್ನು ಪಾಲಿಸುವ ಮೂಲಕ ಆರೋಗ್ಯವಂತರಾಗಿ ನೂರ್ಕಾಲ ಬಾಳಿ

ವಾರ್ಮ್ ಅಪ್ ಮಾಡದೆ ವ್ಯಾಯಾಮ ಮಾಡಿದರೆ ಏನಾಗುತ್ತದೆ?

ಫಿಟ್ನೆಸ್ ತರಬೇತುದಾರರು ಹೇಳುವಂತೆ ವಾರ್ಮ್ ಅಪ್ ಮಾಡದೆ ತೀವ್ರವಾದ ವ್ಯಾಯಾಮ ಮಾಡುವುದರಿಂದ ಸ್ನಾಯುಗಳು ತಣ್ಣಗಾಗುತ್ತವೆ. ಇದು ಸ್ನಾಯು ಸೆಳೆತ, ಗಾಯಗಳು ಅಥವಾ ಹೆಚ್ಚಿದ ನೋವಿಗೆ ಕಾರಣವಾಗಬಹುದು. ಆದ್ದರಿಂದ, ವ್ಯಾಯಾಮದ ಮೊದಲು ವಾರ್ಮ್ ಅಪ್ ಮಾಡುವುದು ಬಹಳ ಮುಖ್ಯ.

ವಾರ್ಮ್‌ಅಪ್‌ ಮಾಡುವುದರ ಪ್ರಯೋಜನಗಳೇನು?

  • ಸ್ನಾಯುಗಳು ತಣ್ಣಗಿರುವಾಗ, ಅವು ಒತ್ತಡ ಅಥವಾ ಗಾಯಕ್ಕೆ ಹೆಚ್ಚು ಒಳಗಾಗುತ್ತವೆ. ವಾರ್ಮ್‌ಅಪ್  ಸ್ನಾಯುಗಳನ್ನು ಬೆಚ್ಚಗಾಗಿಸುತ್ತದೆ ಮತ್ತು ಅವುಗಳನ್ನು ಹೊಂದಿಕೊಳ್ಳುವಂತೆ ಮಾಡುತ್ತದೆ, ಗಾಯದ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.
  • ವಾರ್ಮ್‌ಅಪ್ ಸ್ನಾಯುಗಳ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಇದು ಸ್ನಾಯುಗಳಿಗೆ ಹೆಚ್ಚಿನ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಒದಗಿಸುತ್ತದೆ ಮತ್ತು ಅವು ಉತ್ತಮವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ.
  • ವಾರ್ಮ್ ಅಪ್ ಮಾಡುವುದರಿಂದ ನಿಮ್ಮ ದೇಹವು ವ್ಯಾಯಾಮಕ್ಕೆ ಸಿದ್ಧವಾಗುವುದಲ್ಲದೆ, ನಿಮ್ಮ ಮನಸ್ಸೂ ಸಿದ್ಧವಾಗುತ್ತದೆ. ಇದು ನಿಮ್ಮ ಗಮನವನ್ನು ಕೇಂದ್ರೀಕರಿಸಲು ಮತ್ತು ಮುಂಬರುವ ವ್ಯಾಯಾಮಕ್ಕೆ ಸಿದ್ಧರಾಗಲು ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೀದಿ ಬದಿಯ ತಿಂಡಿ ತಿನ್ನುವಾಗ ಎಚ್ಚರ; ಪಾನಿಪುರಿ ತಿಂದ 20ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು – Kannada News | Over 20 children hospitalised in Telangana after eating Pani puri food poisoning

ಹೈದರಾಬಾದ್, ಜೂನ್ 17: ತೆಲಂಗಾಣದ ರಾಜಣ್ಣ ಸಿರಿಸಿಲ್ಲಾ ಜಿಲ್ಲೆಯಲ್ಲಿ ಗಂಭೀರ ದುರಂತವೊಂದು ಬೆಳಕಿಗೆ ಬಂದಿದೆ. ತಂಗಲ್ಲಪಲ್ಲಿ ಮಂಡಲದ ಕೆಸಿಆರ್ ನಗರ ಕಾಲೋನಿಯಲ್ಲಿ ಪಾನಿಪುರಿ (Panipuri) ತಿಂದು 18 ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಮಂಗಳವಾರ ಸಂಜೆ ಸ್ಥಳೀಯ ಪಾನಿಪುರಿ ವ್ಯಾನ್‌ನಲ್ಲಿ ಕೆಲವು ಮಕ್ಕಳು ಪಾನಿಪುರಿ ತಿಂದರು. ಅದನ್ನು ತಿಂದ ಸ್ವಲ್ಪ ಸಮಯದ ನಂತರ ಕೆಲವು ಮಕ್ಕಳು ಅಸ್ವಸ್ಥರಾದರು. ಅವರಲ್ಲಿ ಕೆಲವರು ತೀವ್ರ ಜ್ವರದಿಂದ ಬಳಲುತ್ತಿದ್ದರು. ಇನ್ನು ಕೆಲವರು ವಾಂತಿ, ಅತಿಸಾರ ಮತ್ತು ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಇದರಿಂದಾಗಿ, ಕುಟುಂಬ ಸದಸ್ಯರು ಅವರನ್ನು ಚಿಕಿತ್ಸೆಗಾಗಿ ಸಿರಿಸಿಲ್ಲಾ ಸರ್ಕಾರಿ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಕರೆದೊಯ್ದರು.

ಸ್ಥಳೀಯ ನಿವಾಸಿಗಳ ಪ್ರಕಾರ, ಮಂಗಳವಾರ ಸಂಜೆ ಕಾಲೋನಿಗೆ ಬಂದಿದ್ದ ಚಾಟ್ಸ್ ವ್ಯಾಪಾರಿಯೊಬ್ಬನ ಬಳಿ ಮಕ್ಕಳು ಹಾಗೂ ಅವರ ಕುಟುಂಬಸ್ಥರು ಪಾನಿಪುರಿ ಸೇವಿಸಿದ್ದರು. ಆದರೆ, ಇಂದು ಮುಂಜಾನೆ ವೇಳೆ ಮಕ್ಕಳಿಗೆ ತೀವ್ರ ಹೊಟ್ಟೆನೋವು, ನಿರಂತರ ವಾಂತಿ ಮತ್ತು ಭೇದಿ ಆರಂಭವಾಗಿದೆ. ಒಬ್ಬರಾದ ಮೇಲೊಬ್ಬರಂತೆ ಕಾಲೋನಿಯ ಹಲವು ಮಕ್ಕಳು ಇದೇ ರೋಗಲಕ್ಷಣಗಳಿಂದ ಬಳಲಲು ಆರಂಭಿಸಿದಾಗ ಗಾಬರಿಗೊಂಡ ಪಾಲಕರು ತಕ್ಷಣವೇ ಅವರನ್ನು ರಾಜಣ್ಣ ಸಿರ್ಸಿಲ್ಲಾ ಜಿಲ್ಲಾ ಸರ್ಕಾರಿ ಆಸ್ಪತ್ರೆ ಹಾಗೂ ಹತ್ತಿರದ ಖಾಸಗಿ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿದ್ದಾರೆ. ಇಂದು ಸಂಜೆ ವೇಳೆಗೆ ಆಸ್ಪತ್ರೆಗೆ ದಾಖಲಾದ ಮಕ್ಕಳ ಸಂಖ್ಯೆ 20 ದಾಟಿದೆ ಎನ್ನಲಾಗಿದೆ. ಸದ್ಯ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಎಲ್ಲರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಪಾನಿಪುರಿಯಲ್ಲಿ ಮೂಳೆ ಪತ್ತೆ; ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಿದ್ದ ಯುವತಿಗೆ ಶಾಕ್

ಈ ಘಟನೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದ ತಂಗಲ್ಲಪಲ್ಲಿ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಪಾಲಕರು ಮತ್ತು ನಿವಾಸಿಗಳ ಪ್ರಾಥಮಿಕ ಹೇಳಿಕೆಗಳ ಆಧಾರದ ಮೇಲೆ ಸದ್ಯ ಪಾನಿಪುರಿ ವ್ಯಾಪಾರಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮಕ್ಕಳು ಬೀದಿಬದಿಯ ಪಾನಿಪುರಿ ತಿಂದ ಬಳಿಕವೇ ಅಸ್ವಸ್ಥಗೊಂಡಿದ್ದಾರೆ ಎಂದು ಪಾಲಕರು ಆರೋಪಿಸುತ್ತಿದ್ದಾರೆ. ಸದ್ಯ ವ್ಯಾಪಾರಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಚಿಕ್ಕೋಡಿ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಮತ್ತೊಮ್ಮೆ ಫುಡ್ ಪಾಯ್ಸನಿಂಗ್: 12 ವಿದ್ಯಾರ್ಥಿಗಳು ಅಸ್ವಸ್ಥ

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಆಹಾರ ಸುರಕ್ಷತಾ ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡಿದ್ದಾರೆ. ಮಕ್ಕಳು ಸೇವಿಸಿದ ಪಾನಿಪುರಿ, ಅದಕ್ಕೆ ಬಳಸಲಾದ ಮಸಾಲೆ ನೀರು ಮತ್ತು ಆಲೂಗಡ್ಡೆ ಮಿಶ್ರಣದ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಲು ಸಿದ್ಧತೆ ನಡೆಸಿದ್ದಾರೆ. ಕಲುಷಿತ ನೀರು ಅಥವಾ ಹಳಸಿದ ಆಹಾರ ಪದಾರ್ಥಗಳ ಬಳಕೆಯಿಂದ ಈ ಫುಡ್ ಪಾಯ್ಸನಿಂಗ್ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs AFG: ದಕ್ಷಿಣ ಆಫ್ರಿಕಾದ ವಿಶ್ವ ದಾಖಲೆಯನ್ನು ಸರಿಗಟ್ಟಿದ ಟೀಂ ಇಂಡಿಯಾ – Kannada News | Team India’s Eighth 400+ ODI Score: Gill, Kishan Heroics Match South Africa’s Feat

ಇಂಗ್ಲೆಂಡ್ 7 ಬಾರಿ ಈ ಸಾಧನೆ ಮಾಡಿದ್ದರೆ, ದಕ್ಷಿಣ ಆಫ್ರಿಕಾ 8 ಬಾರಿ 400 ಕ್ಕೂ ಹೆಚ್ಚು ರನ್ ಗಳಿಸಿದೆ. ಇದೀಗ ಭಾರತ ಕೂಡ 8ನೇ ಬಾರಿಗೆ 400 ಕ್ಕೂ ಹೆಚ್ಚು ರನ್ ಕಲೆಹಾಕಿ ದಕ್ಷಿಣ ಆಫ್ರಿಕಾದ ದಾಖಲೆಯನ್ನು ಸರಿಗಟ್ಟಿದೆ. ಏಕದಿನ ಪಂದ್ಯಗಳಲ್ಲಿ ಭಾರತದ ಅತ್ಯಧಿಕ ಸ್ಕೋರ್ 5 ವಿಕೆಟ್‌ಗೆ 418 ರನ್​ಗಳಾಗಿದ್ದು, ಡಿಸೆಂಬರ್ 2011 ರಲ್ಲಿ ಇಂದೋರ್‌ನಲ್ಲಿ ನಡೆದಿದ್ದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಈ ಸ್ಕೋರ್ ಕಲೆಹಾಕಿತ್ತು.

Source link

‘ಆಲ್ಫಾ’ ಟ್ರೇಲರ್ ರಿಲೀಸ್: ಲಂಕೆ ಸುಡಲು ಬಂದ ಆಧುನಿಕ ಸೀತೆ ಆಲಿಯಾ ಭಟ್ – Kannada News | Alia Bhatt Sharvari Bobby Deol YRF Spy Universe Alpha Movie Trailer released

‘ಯಶ್ ರಾಜ್ ಫಿಲ್ಮ್ಸ್’ ನಿರ್ಮಾಣದ ಬಹುನಿರೀಕ್ಷಿತ ‘ಆಲ್ಫಾ’ (Alpha) ಚಿತ್ರದ ಭರ್ಜರಿ ಟ್ರೇಲರ್ ಬುಧವಾರ (ಜೂನ್ 17) ಬಿಡುಗಡೆಯಾಗಿದೆ. ಆಲಿಯಾ ಭಟ್ (Alia Bhatt), ಬಾಬಿ ಡಿಯೋಲ್, ಅನಿಲ್ ಕಪೂರ್ ಮತ್ತು ಶರ್ವರಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಆ್ಯಕ್ಷನ್ ಥ್ರಿಲ್ಲರ್ ಚಿತ್ರದ ಟ್ರೇಲರ್ (Alpha Movie Trailer) ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಧೂಳೆಬ್ಬಿಸುತ್ತಿದೆ. ಇದರೊಂದಿಗೆ ವೈಆರ್‌ಎಫ್‌ ಸ್ಪೈ ಯೂನಿವರ್ಸ್‌ನ ಪ್ರಮುಖ ಕೊಂಡಿಯಾದ ಹೃತಿಕ್ ರೋಷನ್ (ಕಬೀರ್) ಅವರ ವಿಶೇಷ ಅತಿಥಿ ಪಾತ್ರವೂ ಈ ಟ್ರೇಲರ್ ಮೂಲಕ ರಿವೀಲ್ ಆಗಿದೆ.

ಟ್ರೇಲರ್​ನಲ್ಲಿ ಆಲಿಯಾ ಭಟ್ ಅವರನ್ನು ‘ಸೀತಾ’ ಎಂಬ ಅತ್ಯಂತ ಅಪಾಯಕಾರಿ ಹುಡುಗಿಯ ಪಾತ್ರದಲ್ಲಿ ಪರಿಚಯಿಸಲಾಗಿದೆ. ಕೇವಲ ಕೊಲ್ಲುವುದಕ್ಕಾಗಿಯೇ ಬೆಳೆದಿರುವ ಸೀತಾ, ತನ್ನದೇ ಗುರು ಹಾಗೂ ಚಿತ್ರದ ಮುಖ್ಯ ವಿಲನ್ ಬಾಬಿ ಡಿಯೋಲ್ ಎದುರು ಸೆಣಸಾಡಲು ನಿಲ್ಲುತ್ತಾಳೆ. ಉಸಿರು ಬಿಗಿಹಿಡಿಯುವಂತಹ ಆ್ಯಕ್ಷನ್ ಸೀನ್‌ಗಳು, ರೇಸಿಂಗ್ ದೃಶ್ಯಗಳನ್ನು ಹೊಂದಿರುವ ‘ಆಲ್ಫಾ’ ಚಿತ್ರವು ಇಬ್ಬರು ಮಹಿಳಾ ಪಾತ್ರಗಳ ಸುತ್ತ ಸುತ್ತುವ ಪಕ್ಕಾ ಕಮರ್ಷಿಯಲ್ ಎಂಟರ್‌ಟೈನರ್ ಆಗಿರಲಿದೆ.

ಟ್ರೇಲರ್‌ನಲ್ಲಿ ಆಲಿಯಾ ಭಟ್ ಜೊತೆಗೆ ನಟಿ ಶರ್ವರಿ ಕೂಡ ಸಾಹಸ ದೃಶ್ಯಗಳಲ್ಲಿ ಅಬ್ಬರಿಸಿದ್ದಾರೆ. ಶರ್ವರಿ ಅವರ ಪಾತ್ರದ ಹಿನ್ನೆಲೆಯನ್ನು ಸಸ್ಪೆನ್ಸ್ ಆಗಿ ಇಡಲಾಗಿದ್ದರೂ, ಬಾಬಿ ಡಿಯೋಲ್‌ನನ್ನು ಮಟ್ಟಹಾಕಲು ಅವರು ಸೀತಾ ಜೊತೆ ಕೈಜೋಡಿಸುವುದು ಸ್ಪಷ್ಟವಾಗಿದೆ. ಇನ್ನು ‘ವಾರ್ 2’ ಚಿತ್ರದಲ್ಲಿ ರಾ ಮುಖ್ಯಸ್ಥ ವಿಕ್ರಾಂತ್ ಕೌಲ್ ಆಗಿ ಕಾಣಿಸಿಕೊಂಡಿದ್ದ ಅನಿಲ್ ಕಪೂರ್ ಇಲ್ಲೂ ಕಾಣಿಸಿಕೊಂಡಿದ್ದು, ಚಿತ್ರದ ರಹಸ್ಯ ‘ಆಲ್ಫಾ ಪ್ರೋಗ್ರಾಂ’ ಜೊತೆಗೆ ನಂಟು ಹೊಂದಿರುವುದು ಕುತೂಹಲ ಮೂಡಿಸಿದೆ.

‘ಆಲ್ಫಾ’ ಚಿತ್ರದ ಟ್ರೇಲರ್:

ಈ ಚಿತ್ರದ ಕಥೆ ಆಧುನಿಕವಾಗಿದ್ದರೂ, ಟ್ರೇಲರ್ ತುಂಬಾ ರಾಮಾಯಣದ ರೂಪಕಗಳನ್ನು ಬಳಸಲಾಗಿದೆ. ಆಲಿಯಾ ಭಟ್ ತನ್ನನ್ನು ತಾನು ಆಧುನಿಕ ಕಾಲದ ಸೀತೆ ಎಂದು ಬಣ್ಣಿಸಿಕೊಳ್ಳುತ್ತಾರೆ. ಲಂಕೆಯನ್ನು ಸುಡಲು ಮತ್ತು ಅಗ್ನಿಪರೀಕ್ಷೆ ಎದುರಿಸಲು ತಾವು ಸಿದ್ಧ ಎಂದು ಸಾರುತ್ತಾರೆ. ಟ್ರೇಲರ್​ನಲ್ಲಿ ಬರುವ ‘ಈ ಬಾರಿ ಸೀತೆಯೇ ಲಂಕೆ ಸುಡಲು ಬಂದಿದ್ದಾಳೆ’ ಎಂಬ ಡೈಲಾಗ್‌ ಗಮನ ಸೆಳೆದಿದೆ.

ಇದನ್ನೂ ಓದಿ: ‘ಧುರಂಧರ್’ ಬಗ್ಗೆ ಮೌನ, ಆದ್ರೆ ಆಲಿಯಾ ಸಿನಿಮಾಗೆ ಹೊಗಳಿಕೆ: ಟ್ರೋಲ್ ಆದ ಶಾರುಖ್ ಖಾನ್

ಏಕ್ ಥಾ ಟೈಗರ್, ಟೈಗರ್ ಜಿಂದಾ ಹೈ, ಟೈಗರ್ 3, ವಾರ್, ವಾರ್ 2 ಮತ್ತು ಪಠಾಣ್ ಚಿತ್ರಗಳ ನಂತರ ವೈಆರ್‌ಎಫ್ ಸ್ಪೈ ಯೂನಿವರ್ಸ್‌ನ 7ನೇ ಚಿತ್ರವಾಗಿ ‘ಆಲ್ಫಾ’ ಮೂಡಿಬರುತ್ತಿದೆ. ಉದಯ್ ಚೋಪ್ರಾ ಅವರು ಬರೆದ ಕಥೆ ಹೊಂದಿರುವ ಈ ಚಿತ್ರಕ್ಕೆ ಸೌಮಿಲ್ ಶುಕ್ಲಾ ಮತ್ತು ಶ್ರೀಧರ್ ರಾಘವನ್ ಚಿತ್ರಕಥೆ ಬರೆದಿದ್ದಾರೆ. ಹಿರಿಯ ನಿರ್ದೇಶಕ ರಾಹುಲ್ ರವೈಲ್ ಅವರ ಪುತ್ರ ಶಿವ ರವೈಲ್ ಈ ಚಿತ್ರವನ್ನು ನಿರ್ದೇಶಿಸಿದ್ದು, ಜುಲೈ 3ರಂದು ಚಿತ್ರಮಂದಿರಗಳಲ್ಲಿ ಅಬ್ಬರಿಸಲು ಸಜ್ಜಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link