ತುಂಗಭದ್ರಾ ಜಲಾಶಯದ ಮೊದಲ ಕ್ರಸ್ಟ್ ಗೇಟ್ ಅಳವಡಿಕೆ ಯಶಸ್ವಿ: ಅದರ ಭಾರ, ಅಗಲ-ಉದ್ದ ಎಷ್ಟು ಗೊತ್ತಾ? – Kannada News | Koppal: Tungabhadra dam first crust gate Installation successful
ಕೊಪ್ಪಳ, ಜನವರಿ 11: ತುಂಗಭದ್ರಾ ಜಲಾಶಯ (Tungabhadra Dam) ನಾಲ್ಕು ಜಿಲ್ಲೆಯ ಜೀವನಾಡಿ. ಈ ಜಲಾಶಯ ನಂಬಿ ನಾಲ್ಕು ಜಿಲ್ಲೆಯ ರೈತರು ಬದಕು ಕಟ್ಟಿಕೊಂಡಿದ್ದಾರೆ. ಆದರೆ ಕಳೆದ ವರ್ಷ ಜಲಾಶಯದ ಕ್ರಸ್ಟ್ ಗೇಟ್ (crest gate) ಕೊಚ್ಚಿ ಹೋಗುವ ಮೂಲಕ ರೈತರಲ್ಲಿ ದೊಡ್ಡ ಆತಂಕ ಎದುರಾಗಿತ್ತು. ಸರ್ಕಾರ ಜಲಾಶಯದ 33 ಗೇಟ್ ಬದಲಾವಣೆಗೆ ಮುಂದಾಗಿತ್ತು. ಸುಮಾರು 54 ಕೋಟಿ ರೂ ವೆಚ್ಚದಲ್ಲಿ ಸರ್ಕಾರ ಗೇಟ್ಗಳ ಬದಲಾವಣೆಗೆ ಮುಂದಾಗಿದೆ. ಗುತ್ತಿಗೆ ಪಡೆದ ಟೆಂಡರ್ ಕಂಪನಿ ಇದೀಗ ರೈತರಿಗೆ ಸಿಹಿ…