Category Archives: Blog

Your blog category

IND vs NZ: 85ನೇ ಶತಕದಂಚಿನಲ್ಲಿ ಎಡವಿದ ವಿರಾಟ್ ಕೊಹ್ಲಿ

Source link

ಚಿತ್ರದುರ್ಗದಲ್ಲೊಂದು ವಿಶೇಷ ಗ್ರಾಮ: ಮಾರಮ್ಮ ಜಾತ್ರೆಗೆ ಪ್ರತಿ ರಸ್ತೆಗೆ ಮುಳ್ಳಿನ ಬೇಲಿ ಹಾಕಿ ದಿಗ್ಭಂಧನ – Kannada News | Chitradurga: Unique Thorn Fence Festival; Nagaragere Ancient Marikamba Utsava

ಚಿತ್ರದುರ್ಗ, ಜನವರಿ 11: ಗ್ರಾಮ ದೇವತೆಯ ಜಾತ್ರೆ, ಉತ್ಸವದಂದು ವಿಶೇಷ ಸಂಭ್ರಮ ಕಳೆಗಟ್ಟುವುದು ಸಹಜ. ಆದರೆ ಕೋಟೆನಾಡಿನ ಅದೊಂದು ಗ್ರಾಮದಲ್ಲಿ ಮಾತ್ರ ಜಾತ್ರೆ ವೇಳೆ ಗ್ರಾಮದ ಪ್ರತಿ ದಿಕ್ಕಿಗೂ ಮುಳ್ಳು ಬೇಲಿ ಹಾಕಿ ದಿಗ್ಭಂಧನ ಹಾಕಲಾಗುತ್ತದೆ. ಇದು ಬುಡಕಟ್ಟು ಸಂಸ್ಕೃತಿಯ (Tribal Culture) ಆಚರಣೆ ಆಗಿದ್ದು, ಚಿತ್ರದುರ್ಗ (Chitradurga) ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಗರಂಗೆರೆ ಗ್ರಾಮ ಈ ವಿಶಿಷ್ಟ ಆಚರಣೆಗೆ ಸಾಕ್ಷಿಯಾಗಿದೆ.

ಮುಳ್ಳು ಬೇಲಿ ಹಾಕಿ ದಿಗ್ಭಂಧನ

ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಗರಂಗೆರೆ ಗ್ರಾಮದಲ್ಲಿ ಈ ವಿಶಿಷ್ಟ ಆಚರಣೆ ಕಾಣಸಿಗುತ್ತದೆ. ಈ ಗ್ರಾಮದ ಜನರು ಐದು ವರ್ಷಕ್ಕೊಮ್ಮೆ ಗ್ರಾಮ ದೇವತೆ ಶೂನ್ಯದ ಮಾರಮ್ಮ ಜಾತ್ರೆ ಮಾಡುತ್ತಿದ್ದಾರೆ. ಜನವರಿ 12ರಿಂದ 17ರವರೆಗೆ ಬುಡಕಟ್ಟು ಸಂಸ್ಕೃತಿಯ ಉತ್ಸವ ನಡೆಯಲಿದೆ. ಅದಕ್ಕೂ ಮುನ್ನ ಮೂರು ದಿನಗಳ ಕಾಲ ಗ್ರಾಮದ ಪ್ರತಿ ದಿಕ್ಕಿನ ಮಾರ್ಗಗಳಿಗೂ ಮುಳ್ಳು ಬೇಲಿ ಹಾಕಿ ದಿಗ್ಭಂಧನ ಹಾಕಲಾಗುತ್ತದೆ.

ಇದನ್ನೂ ಓದಿ: ಚಿತ್ರದುರ್ಗದಲ್ಲಿ ಮಸೀದಿ ಕಟ್ಟಡ ನಿರ್ಮಾಣ ವಿವಾದ: ಸಿಡಿದೆದ್ದ ಹಿಂದೂ ಸಂಘಟನೆಗಳು, ಮುಸ್ಲಿಮರ ವಾದವೇನು?​​

ಶುಕ್ರವಾರ ಸಂಜೆ ಸಾರು (ಮುಳ್ಳು ಬೇಲಿ) ಹಾಕಲಾಗಿದ್ದು, ಜನವರಿ 12ರವರೆಗೆ ಮಾರ್ಗಗಳು ಬಂದ್ ಆಗಿರುತ್ತವೆ. ಗ್ರಾಮದಿಂದ ಯಾವುದೇ ವಸ್ತುಗಳನ್ನು ಹೊರಕ್ಕೆ ತೆಗೆದುಕೊಂಡು ಹೋಗುವಂತಿಲ್ಲ. ವಾಹನಗಳು ಸಂಚರಿಸುವಂತಿಲ್ಲ ಎಂಬ ನಿಯಮಗಳಿವೆ. ಉತ್ಸವದ ಸಂದರ್ಭದಲ್ಲಿ ಆರೋಗ್ಯ, ಶಾಂತಿ, ಸುವ್ಯವಸ್ಥೆ ಮತ್ತು ದೈವ ಭಾವನೆ, ನೆಮ್ಮದಿಗಾಗಿ ಈ ಆಚರಣೆ ಜಾರಿಯಲ್ಲಿದೆ ಎಂದು ಗ್ರಾಮ ಪಂಚಾಯತ್ ಸದಸ್ಯ ರಮೇಶ್​​ ಹೇಳುತ್ತಾರೆ.

ಯಾರೂ ಹೊರಗೆ, ಒಳಗೆ ಬರುವಂತ್ತಿಲ್ಲ

ನಗರಂಗೆರೆ ಗ್ರಾಮದ ಶೂನ್ಯದ ಮಾರಮ್ಮ ಉತ್ಸವವನ್ನು ಐದು ವರ್ಷಗಳಿಗೊಮ್ಮೆ ಆಚರಿಸಲಾಗುತ್ತದೆ. ಈ ವಿಶಿಷ್ಟ ಆಚರಣೆ ನೂರಾರು ವರ್ಷಗಳಿಂದ ಪೂರ್ವಿಕರು ಆಚರಿಸಿಕೊಂಡು ಬಂದಿದ್ದಾರೆ. ಪ್ರತಿ ರಸ್ತೆಗೆ ಸಾರು (ಮುಳ್ಳು ಬೇಲಿ) ಹಾಕಿ ಸರದಿ ಪ್ರಕಾರ ಕಾವಲುಗಾರರು ಇರುತ್ತಾರೆ. ಊರಿನಿಂದ ಯಾವುದೇ ವಸ್ತು ಹೊರಗೆ ಹೋಗುವಂತಿಲ್ಲ. ಹೊರಗಿನವರು ಊರೊಳಕ್ಕೆ ಬರುವಂತಿಲ್ಲ. ಪ್ರತಿಯೊಬ್ಬರನ್ನು ಸಹ ಚೆಕ್ ಮಾಡಿ ಬಿಡಲಾಗುತ್ತದೆ. ಜ.13ರಂದು ಮಂಗಳವಾರ ಮಾರಮ್ಮ ದೇವಿಯ ಪ್ರತಿಷ್ಠಾಪನೆ ಬಳಿಕ ಭಕ್ತರು ಬಂದು ದರ್ಶನ ಪಡೆಯುತ್ತಾರೆ.

ಇದನ್ನೂ ಓದಿ: ಆಧುನಿಕ ಪ್ರಪಂಚದಿಂದ ಬಲು ದೂರು ಉಳಿದ ಗ್ರಾಮ: ಈ ಹಳ್ಳಿಗೆ ಮೊಬೈಲ್ ಸಿಗ್ನಲ್, ಇಂಟರ್​ನೆಟ್ ಇಲ್ಲ

ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದ ನಗರಂಗೆರೆ ಗ್ರಾಮದಲ್ಲಿ ಕಾಲಾನುಕಾಲದಿಂದ ಐದು ವರ್ಷಕ್ಕೊಮ್ಮೆ ದೇವಿಯ ಉತ್ಸವ ನಡೆದುಕೊಂಡು ಬಂದಿದೆ. ಅಲ್ಲದೆ ಇಡೀ ಊರಿಗೆ ಮುಳ್ಳು ಬೇಲಿ ಹಾಕುವ ವಿಶಿಷ್ಟ ಆಚರಣೆಯನ್ನೂ ಆಚರಿಸಲಾಗುತ್ತಿದೆ. ಆ ಮೂಲಕ ಈ ವಿಶಿಷ್ಟ ಮಾರಿಕಾಂಬ ದೇವಿಯ ಉತ್ಸವ ನಾಡಿನ ಗಮನ ಸೆಳೆದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 9:34 pm, Sun, 11 January 26

Source link

IND vs NZ: ಏಕಪಕ್ಷೀಯವಾಗಿ ಗೆಲ್ಲುವ ಪಂದ್ಯವನ್ನು ರೋಚಕಗೊಳಿಸಿ ಗೆದ್ದ ಟೀಂ ಇಂಡಿಯಾ – Kannada News | India Beats NZ by 4 Wickets in Vadodara ODI: Kohli Shines with 93 Runs

ವಡೋದರಾದಲ್ಲಿ ನಡೆದ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವನ್ನು 4 ವಿಕೆಟ್​ಗಳಿಂದ ಗೆದ್ದುಕೊಳ್ಳುವ ಮೂಲಕ ಆತಿಥೇಯ ಟೀಂ ಇಂಡಿಯಾ ಸರಣಿಯಲ್ಲಿ ಗೆಲುವಿನ ಶುಭಾರಂಭ ಮಾಡಿದೆ. ಸುಮಾರು 15 ವರ್ಷಗಳ ನಂತರ ವಡೋದರಾದಲ್ಲಿ ಏಕದಿನ ಪಂದ್ಯವನ್ನಾಡಿದ ಟೀಮ್ ಇಂಡಿಯಾ ಮತ್ತೊಮ್ಮೆ ವಿರಾಟ್ ಕೊಹ್ಲಿ ಅವರ ಅದ್ಭುತ ಬ್ಯಾಟಿಂಗ್‌ನಿಂದ 301 ರನ್‌ಗಳ ಗುರಿಯನ್ನು ಇನ್ನೊಂದು ಓವರ್ ಬಾಕಿ ಇರುವಂತೆಯೇ ಬೆನ್ನಟ್ಟಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಆದಾಗ್ಯೂ ಕೊಹ್ಲಿ ಕೇವಲ 7 ರನ್​ಗಳಿಂದ ಶತಕ ವಂಚಿತರಾದರೂ ತಂಡದ ಗೆಲುವಿಗೆ ಅಡಿಪಾಯ ಹಾಕಿದರು.

Source link

ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಶಿರಸಿಯಲ್ಲಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಖಡಕ್ ಎಚ್ಚರಿಕೆ – Kannada News | Sri Gangadharendra Saraswati Swamiji Strongly opposes to bedti varada river linking project

ಶಿರಸಿ, (ಜನವರಿ 11): ವರದಾ-ಬೇಡ್ತಿ ನದಿ ಜೋಡಣೆ ವಿವಾದ ಇದೀಗ ಮತ್ತೊಮ್ಮೆ ಮುನ್ನಲೆಗೆ ಬಂದಿದೆ. ವ್ಯಾಪಕ ವಿರೋಧದ ನಡುವೆಯೂ ಬೇಡ್ತಿ ಹಾಗೂ ವರದಾ ನದಿಗಳ ಜೋಡಣೆಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಲು ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ. ಇದರ ಬೆನ್ನಲ್ಲೇ ಉತ್ತರ ಕನ್ನಡದ ಜನರ, ಅದರಲ್ಲೂ ಯಲ್ಲಾಪುರ-ಶಿರಸಿ ಭಾಗದ ಜನರ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಯೋಜನೆಯನ್ನ ವಿರೋಧಿಸಿ ​ಸೋಂದಾ ಸ್ವರ್ಣವಲ್ಲಿ ಮಠಾಧೀಶರಾದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ನೇತೃತ್ವದಲ್ಲಿ ಇಂದು (ಜನವರಿ 11) ಜನಜಾಗೃತಿ ಸಮಾವೇಶವೂ ನಡೆದಿದ್ದು, ಹೋರಾಟ ತೀವ್ರಗತಿ ಪಡೆದುಕೊಂಡಿದೆ. ಈ ಯೋಜನೆ ಜಿಲ್ಲೆಗೆ ಮಾರಕ ಎಂದು ಒಕ್ಕೊರಲಿನಿಂದ ಖಂಡಿಸಲಾಗಿದ್ದು, ಯೋಜನೆಯನ್ನು ಕೈ ಬಿಡುವಂತೆ ಒತ್ತಾಯಿಸಲಾಗಿದೆ.

ಇನ್ನು ಇಂದು ಸಮಾವೇಶದಲ್ಲಿ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಸ್ವಾಮೀಜಿ ಮಾತನಾಡಿ, ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಸ್ವಾಮೀಜಿ ಈ ಯೋಜನೆ ಬಗ್ಗೆ ಏನೆಲ್ಲಾ ಮಾತನಾಡಿದ್ದಾರೆ ಎನ್ನುವುದನ್ನು ಅವರ ಬಾಯಿಂದಲೇ ಕೇಳಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕೆಲಸಕ್ಕೆ ಬೇಕು, ಆದ್ರೆ ಕನ್ನಡಿಗರು ಬೇಡ್ವಂತೆ: ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ – Kannada News | requires Non Kannada HR: Bengaluru Skillsonics Company Vacancy Post Triggers Kannadiga

ಬೆಂಗಳೂರು, (ಜನವರಿ 11): ಖಾಸಗಿ ಕಂಪನಿಗಳು ಕನ್ನಡ (Kannada) ನೆಲದಲ್ಲಿದ್ರೂ, ಕನ್ನಡಿಗರನ್ನ ಕಡೆಗಣಿಸೋದ್ರಲ್ಲಿ ಮುಂದಾಗಿದ್ದಾರೆ. ಕಳೆದ ವಾರ ಕಾಲೇಜ್ ನಲ್ಲಿ ಕನ್ನಡ ಮಾತನಾಡುವುದಕ್ಕೆ ದೊಡ್ಡ ಗಲಾಟೆಯೇ ನಡೆದಿತ್ತು. ಇದೀಗ ಬೆಂಗಳೂರಿನ (Bengaluru) ಜೆ ಪಿ ನಗರದಲ್ಲಿರುವ ‘ಸ್ಕಿಲ್ಸ್ ಸೋನಿಕ್ಸ್’ ಅನ್ನೋ ಖಾಸಗಿ ಕಂಪನಿಯಿಂದ ನೌಕ್ರಿ ಡಾಟ್ ಕಾಂ ನಲ್ಲಿ ನೌಕರಿಗಾಗಿ ಪ್ರಕಟಣೆ ಹೊರಡಿಸಿದ್ದು, ಕನ್ನಡ ಗೊತ್ತಿಲ್ಲದ ಅಭ್ಯರ್ಥಿಗಳಿಗೆ ಆದ್ಯತೆ “NON KANNADA HR” ಬೇಕು ಅಂತ ಪ್ರಕಟಣೆ ಕೊಟ್ಟದ್ದಾರೆ. ಈ ಪ್ರಕಟಣೆ ಕನ್ನಡಿಗರನ್ನ ಕೆರಳಿಸಿದ್ದು, ಎಕ್ಸ್ ನಲ್ಲಿ ಭಾರೀ ಟೀಕೆಗೆಗೆ ಗುರಿಯಾಗಿದೆ. ಕೂಡಲೇ ಈ ಪೋಸ್ಟ್ ವಾಪಸ್ಸು ತೆಗೆದುಕೊಳ್ಳಬೇಕು ಇಲ್ಲವಾದ್ರೆ ಉಗ್ರ ಹೋರಾಟ ಮಾಡಲಾಗುತ್ತೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಖಾಸಗಿ ಕಂಪನಿಗಳಿಗೆ ಬದುಕೋಕೆ ಕನ್ನಡ ನೆಲ ಬೇಕು ಆದ್ರೆ ಉದ್ಯೋಗ ಮಾಡಲು ಕನ್ನಡಿಗರು ಬೇಡವಾ? ಕನ್ನಡ ನಾಡಿನಲ್ಲಿ ಬಂದು ಕನ್ನಡಿಗರಿಗೆ ಈ ರೀತಿ ಇವರು ಪೋಸ್ಟ್ ಹಾಕಿರೋದು ಕನ್ನಡಿಗರನ್ನ ಕೆರಳಿಸುವಂತೆ ಮಾಡಿದೆ. ಅನ್ಯ ಭಾಷಿಕರಿಗೆ ಜಾಗ ಕೊಟ್ಟಿದ್ದು ತಪ್ಪಾಯ್ತಾ? ಕೂಡಲೇ ಕನ್ನಡಿಗರನ್ನ ಕ್ಷಮೆ ಕೇಳ್ಬೇಕು ಎಂದು ಕನ್ನಡ ಪರ ಸಂಘಟನೆಗಳು ಒತ್ತಾಯಿಸಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಶಿವಮೊಗ್ಗ: ಅಳಿಯನನ್ನೇ ಕೊಂದ ಹೆಣ್ಣು ಕೊಟ್ಟ ಮಾವ: ಅಸಲಿಗೆ ಆಗಿದ್ದೇನು? – Kannada News | Shivamogga: Father in law kills son in law; What really happened

ಶಿವಮೊಗ್ಗ, ಜನವರಿ 11: ಗಂಡ-ಹೆಂಡತಿ (Husband and wife) ಜಗಳ ಉಂಡು ಮಲಗುವ ತನಕ ಎನ್ನುವ ಗಾದೆಯಿದೆ. ಆದರೆ ಇಲ್ಲಿ ಗಂಡ ತನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎನ್ನುವುದು ಪತ್ನಿಯ ತಂದೆಗೆ ಗೊತ್ತಾಗಿದೆ. ಹೀಗಾಗಿ ಪ್ರೀತಿಸಿ ಮಗಳಿಗೆ ವಂಚನೆ ಮಾಡಿದ್ದಾನೆಂದು ಅಳಿಯ ಮೇಲೆ ಮಾವ ಸೇಡು ತೀರಿಸಿಕೊಂಡಿದ್ದಾರೆ. ಆ ಮೂಲಕ ಅಳಿಯನ ಮರ್ಡರ್ ಕೇಸ್ (murde case) ಬಿಗ್ ಟ್ವಿಸ್ಟ್ ಸಿಕ್ಕಿದೆ.

ನಡೆದದ್ದೇನು?

ಶಿವಮೊಗ್ಗದ ವಿನೋಬ ನಗರದ ಎಪಿಎಂಸಿ ತರಕಾರಿ ಮಾರುಕಟ್ಟೆ ಬಳಿಯ ಶ್ರೀನಿಧಿ ವೈನ್ ಶಾಪ್ ಮುಂದೆ ಡಿ. 29 ರಂದು ಯುವಕನ ಕೊಲೆ ನಡೆದಿತ್ತು. ಅರುಣ ಎನ್ನುವ ಯುವಕ ವೈನ್ ಶಾಪ್ ಮುಂದೆ ನಿಂತಿದ್ದ. ದಿಢೀರ್​​ ಎಂಟ್ರಿಕೊಟ್ಟಿದ್ದ ಇಬ್ಬರು ವ್ಯಕ್ತಿಗಳು​ ರಾಡ್​ನಿಂದ ಅರುಣ್​​ ಮೇಲೆ ದಾಳಿ ಮಾಡಿದ್ದರು. ಈ ದಾಳಿಯಲ್ಲಿ ಅರುಣ್​ ಸ್ಥಳದಲ್ಲೇ ಮೃತಪಟ್ಟಿದ್ದ. ಈ ಕೊಲೆ ನಡೆದು 10 ರಿಂದ 12 ದಿನಗಳಾದರೂ ಆರೋಪಿಗಳು ಪತ್ತೆಯಾಗಿರಲಿಲ್ಲ. ಕೊಲೆ ಮಾಡಿದ ಹಂತಕರು ಮತ್ತು ಅವರ ಕುಟುಂಬಸ್ಥರು ಮನೆಗೆ ಬೀಗ ಹಾಕಿ ಎಸ್ಕೇಪ್ ಆಗಿದ್ದರು. ಕೊನೆಗೆ ಇಬ್ಬರು ಆರೋಪಿಗಳು ಕೋರ್ಟ್​ಗೆ ಶರಣಾಗಿದ್ದಾರೆ. ಇಬ್ಬರನ್ನು ವಿನೋಬ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮಹಿಳಾ ಟೆಕ್ಕಿ ನಿಗೂಢ ಸಾವು ಪ್ರಕರಣಕ್ಕೆ ಟ್ವಿಸ್ಟ್​: ತನಿಖೆಯಲ್ಲಿ ಕೊಲೆ ರಹಸ್ಯ ಬಯಲು!

ಅಷ್ಟಕ್ಕೂ ಕೊಲೆಯಾದ ಅರುಣ್​ನನ್ನು ಕೊಲೆ ಮಾಡಿದ್ದು ಯಾರು, ಏಕೆ ಅಂತಾ ನೋಡುವುದಾರೆ, ಕೊಲೆ ಮಾಡಿದ್ದು ಬೇರೆ ಯಾರು ಅಲ್ಲ, ಅರುಣ್​ ಹೆಣ್ಣು ಕೊಟ್ಟ ಮಾವ ತಿಪ್ಪೇಶ್ ಮತ್ತು ಸೋದರ ಮಾವ ಲೋಕೇಶ್. ಈ ಇಬ್ಬರು ಸೇರಿ ಅಂದು ಕೊಲೆ ಮಾಡಿದ್ದರು. ಕೊಲೆಗೆ ಪತ್ನಿ ಯಶಸ್ವಿನಿ ಮತ್ತು ಅತ್ತೆ ಕಮಲಾಕ್ಷಿ ಸಾಥ್ ಕೊಟ್ಟಿದ್ದರು. ಅರುಣ್​ ಕೊಲೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳಲ್ಲಿ ಇಬ್ಬರ ಬಂಧನವಾಗಿದೆ. ಅತ್ತೆ ಮತ್ತು ಪತ್ನಿ ಪೊಲೀಸ್​ರ ಕೈಗೆ ಸಿಕ್ಕಿಲ್ಲ. ವಿನೋಬ ನಗರ ಪೊಲೀಸರು ಅರುಣ್​ ಮರ್ಡರ್ ಕೇಸ್​ ತನಿಖೆ ಮತ್ತಷ್ಟು ಚುರುಕುಗೊಳಿಸಿದ್ದಾರೆ. ಕೊಲೆಯಲ್ಲಿ ಶಾಮೀಲಾಗಿರುವ ಪತ್ನಿ ಮತ್ತು ಅತ್ತೆಯ ಶೋಧ ಕಾರ್ಯ ಮುಂದುವರೆಸಿದ್ದಾರೆ. ಕೊಲೆ ಮಾಡಿದ ಮಾವ ಮತ್ತು ಸಂಬಂಧಿ ಇಬ್ಬರನ್ನು ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ತನಿಖೆಯ ಸಾಕ್ಷಿಗಳನ್ನು ಕಲೆ ಹಾಕುತ್ತಿದ್ದಾರೆ.

ಪ್ರೀತಿಸಿ ಮದುವೆ ಮಾಡಿಕೊಂಡಿದ್ದ ಜೋಡಿ

ಅರುಣ್​ ಕಾಶೀಪುರದಲ್ಲಿ ಯಶಸ್ವಿನಿ ಎಂಬ ಯುವತಿಯನ್ನ ಪ್ರೀತಿಸಿ ಮದುವೆಯಾಗಿದ್ದ. ಗಾರೆ ಕೆಲಸ ಮಾಡಿಕೊಂಡಿದ್ದ ಅರುಣ್​ ಡೊಳ್ಳು ಹೊಡೆಯುತ್ತಿದ್ದ. ಆರ್​ಎಕ್ಸ್ 100 ಬೈಕ್ ಇಟ್ಟುಕೊಂಡಿದ್ದ. ಡೊಳ್ಳು ಮತ್ತು ಆರ್​ಎಕ್ಸ್ 100 ಬೈಕ್​ ಓಡಿಸುವ ಸ್ಟೈಲಿಗೆ ಯುವತಿ ಮನಸೋತಿದ್ದಳು. ಮೂರು ವರ್ಷಗಳ ಹಿಂದೆ ಅರುಣ ಯಶಸ್ವಿಯನ್ನ ಮದುವೆಯಾಗಿದ್ದ.

ದಿನ ಕಳೆದಂತೆ ಇಬ್ಬರ ನಡುವೆ ಕೆಲಸದ ವಿಚಾರದಲ್ಲಿ ಗಲಾಟೆಯಾಗುತ್ತಿತ್ತು. ಹೀಗಾಗಿ ಯಶಸ್ವಿನಿ ತಾಯಿ ಮನೆಗೆ ಹೋಗುತ್ತಿದ್ದಳು. ಪತ್ನಿಯನ್ನು ತವರು ಮನೆಯಿಂದ ಕರೆದುಕೊಂಡು ಬರಲು ಹೋಗುತ್ತಿದ್ದ. ಈ ನಡುವೆ ಪತಿ, ಪತ್ನಿಯ ನಡುವೆ ಗಲಾಟೆ ಹೆಚ್ಚಾದಂತೆ ಅರುಣ್​ ಮದ್ಯಪಾನ ಮಾಡಲು ಶುರು ಮಾಡಿದ್ದ.

ಹೆಂಡತಿಯನ್ನು ಗಂಡನ ಮನೆಗೆ ಕಳುಹಿಸಿ ಎಂದು ಗಲಾಟೆ ಮಾಡುತ್ತಿದ್ದ ಅರುಣ್​ಗೆ ಹೆಂಡತಿ ಮನೆಯವರು ರಾಡಿನಲ್ಲಿ ಹೊಡೆದು ಕಳುಹಿಸಿದ ಉದಾಹರಣೆಗಳಿವೆ. ನಮ್ಮ ಮನೆಯ ಹುಡುಗಿಯನ್ನ ಓಡಿಸಿಕೊಂಡು ಮದುವೆ ಆಗಿರುವುದಕ್ಕೆ ಪತ್ನಿಯ ಕುಟುಂಬಸ್ಥರಿಗೆ ಅಸಮಾಧಾನವಿತ್ತು. ಈ ಹಿನ್ನಲೆಯಲ್ಲಿ ಪತ್ನಿ ಸೇರಿದಂತೆ ಅತ್ತೆ ಮಾವ, ಸಂಬಂಧಿ ನಾಲ್ವರು ಸೇರಿ ಅರುಣ್​ ಕಥೆ ಮುಗಿಸಲು ಸ್ಕೇಚ್ ಹಾಕಿದ್ದರು. ಅದರಂತೆ ಕೊಲೆ ಕೂಡ ಮಾಡಿದ್ದರು.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ: ಆರೋಪಿಗಳಿಗೆ ಥಳಿಸಿದವರ ಮೇಲೂ ಕೇಸ್​

ಪತಿ ಮರ್ಡರ್ ಕೇಸ್​ನಲ್ಲಿ ಮಾವ ಮತ್ತು ಸಂಬಂಧಿ ಇಬ್ಬರ ಬಂಧನವಾಗಿದೆ. ಪತ್ನಿ ಮತ್ತು ಅತ್ತೆ ಇಬ್ಬರು ಶಾಮೀಲು ಆಗಿರುವುದು ತನಿಖೆಯಿಂದ ಬಯಲಾಗಿದೆ. ಪ್ರೀತಿಸಿ ಮದುವೆಯಾದ ಪತಿಯ ಮರ್ಡರ್​ಗೆ ಪತ್ನಿಯೇ ಸ್ಕೇಚ್ ಹಾಕಿರುವುದು ಎಲ್ಲರೂ ಬೆಚ್ಚಿ ಬೀಳುವಂತೆ ಮಾಡಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 8:58 pm, Sun, 11 January 26

Source link

ಅಪರೂಪದ ಗೌರವಕ್ಕೆ ಭಾಜನರಾದ ಪವನ್ ಕಲ್ಯಾಣ್ – Kannada News | Pawan Kalyan Gets Global Recognition in Kenjutsu

ಪವನ್ ಕಲ್ಯಾಣ್ (Pawan Kalyan), ಆಂಧ್ರ ಪ್ರದೇಶ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ. ಜೊತೆಗೆ ಕೆಲವು ಪ್ರಮುಖ ಖಾತೆಗಳಿಗೆ ಸಚಿವರು ಸಹ. ಜೊತೆಗೆ ಜನಸೇನಾ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಸಹ. ಈ ಜವಾಬ್ದಾರಿಗಳ ಜೊತೆಗೆ ಸಿನಿಮಾ ನಟನೆಯನ್ನೂ ಮಾಡುತ್ತಿದ್ದಾರೆ. ಪ್ರಸ್ತುತ ಅವರು ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಅವರು ಶೂಟಿಂಗ್​​ಗಾಗಿ ವಿದೇಶಕ್ಕೆ ಸಹ ಹೋಗಿ ಬಂದಿದ್ದಾರೆ. ಇದೀಗ ಪವನ್ ಕಲ್ಯಾಣ್ ಅವರಿಗೆ ವಿಶೇಷ ಗೌರವವೊಂದು ಧಕ್ಕಿದೆ.

ಪವನ್ ಕಲ್ಯಾಣ್ ಚಿತ್ರರಂಗಕ್ಕೆ ಬಂದಾಗಿನಿಂದಲೂ ಸಮರ ಕಲೆಗಳ ಬಗ್ಗೆ ಅತೀವ ಆಸಕ್ತಿ ಹೊಂದಿರುವವರು. ಪವನ್ ಕಲ್ಯಾಣ್ ಅವರ ಹಲವು ಸಿನಿಮಾಗಳಲ್ಲಿ ಅವರು ತಮ್ಮ ಸಮರ ಕಲಾ ನೈಪುಣ್ಯತೆ ತೋರಿಸಿದ್ದಾರೆ. ‘ಖುಷಿ’, ‘ಜಾನಿ’, ‘ಬದ್ರಿ’, ‘ಗುಡುಂಬ ಶಂಕರ್’ ಸೇರಿದಂತೆ ಇನ್ನು ಹಲವಾರು ಸಿನಿಮಾಗಳಿಗೆ ಸ್ಟಂಟ್ ಕೊರಿಯೋಗ್ರಫಿ ಸಹ ಮಾಡಿದ್ದಾರೆ. ಸ್ವತಃ ಕರಾಟೆ, ಜಿಜುತ್ಸು ಇನ್ನೂ ಕೆಲವು ಸಮರ ಕಲೆಗಳನ್ನು ಕಲಿತಿದ್ದಾರೆ. ಇತ್ತೀಚೆಗೆ ಬಿಡುಗಡೆ ಆದ ‘ಓಜಿ’ ಸಿನಿಮಾನಲ್ಲಿ ಸಹ ಪವನ್ ಕಲ್ಯಾಣ್ ಸಮರ ಕಲಾ ನೈಪುಣ್ಯವುಳ್ಳ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ‘ಪವನ್ ಕಲ್ಯಾಣ್ ಪುತ್ರನಿಗಾಗಿ ನೂರಾರು ಕೋಟಿ ಸುರಿಯಲು ರೆಡಿ’

ಪವನ್ ಕಲ್ಯಾಣ್ ಅವರು ಸಮರ ಕಲೆಗಳ ಕ್ಷೇತ್ರದಲ್ಲಿ ಅಪರೂಪದ ಮತ್ತು ವಿಶೇಷ ಗೌರವವನ್ನು ಗಳಿಸಿದ್ದಾರೆ. ಅವರನ್ನು ಅಧಿಕೃತವಾಗಿ ಜಪಾನಿನ ಪ್ರಾಚೀನ ಕತ್ತಿವರಸೆ ಕಲೆಯಾದ ಕೆಂಜುಟ್ಸುಗೆ ಸೇರಿಸಿಕೊಳ್ಳಲಾಗಿದೆ, ಸಮರ ಕಲೆಗೆ ಯಾವುದೇ ವ್ಯಕ್ತಿಯ ದೀರ್ಘ ಕಾಲದ ಸಮರ್ಪಣೆ ಮತ್ತು ಶಿಸ್ತಿಗೆ ಈ ಮನ್ನಣೆ ನೀಡಲಾಗುತ್ತದೆ. ಪವನ್ ಕಲ್ಯಾಣ್ ಅವರಿಗೆ ಕೆಂಜುತ್ಸುಗೆ ಅಧಿಕೃತ ಪ್ರವೇಶ ನೀಡಲಾಗಿದೆ. ಇದನ್ನು ಅಪರೂಪದ ಗೌರವವೆಂದು ಪರಿಗಣಿಸಲಾಗುತ್ತದೆ, ಗೌರವಾನ್ವಿತ ಜಪಾನಿನ ಸಂಸ್ಥೆ ಆಗಿರುವ ಸೊಗೊ ಬುಡೊ ಕನ್ರಿ ಇಂದ, ಪವನ್ ಅವರಿಗೆ ಐದನೇ ಡಾನ್ ಪ್ರಶಸ್ತಿಯನ್ನು ಸಹ ನೀಡಿ ಗೌರವಿಸಲಾಗಿದೆ.

ಮತ್ತೊಂದು ವಿಶೇಷ ಸಾಧನೆ ಸಹ ಪವನ್ ಅವರ ಹೆಸರಿಗೆ ಸೇರಿಕೊಂಡಿದೆ. ಅವರು ಸೋಕೆ ಮುರಮಟ್ಸು ಸೆನ್ಸೈ ಅಡಿಯಲ್ಲಿ ಟಕೆಡಾ ಶಿಂಗೆನ್ ವಿಭಾಗಕ್ಕೆ ಸೇರ್ಪಡೆಗೊಂಡ ಮೊದಲ ತೆಲುಗು ವ್ಯಕ್ತಿ ಎನಿಸಿಕೊಂಡಿದ್ದಾರೆ ಪವನ್ ಕಲ್ಯಾಣ್. ಇದು ಜಪಾನ್‌ನ ಹೊರಗಿನ ವ್ಯಕ್ತಿಗೆ ಅತ್ಯಂತ ವಿರಳವಾಗಿ ನೀಡಲಾಗುವ ಗೌರವ ಆಗಿದೆ. ಗೋಲ್ಡನ್ ಡ್ರಾಗನ್ಸ್ ಸಂಸ್ಥೆಯಿಂದ ಪವನ್ ಕಲ್ಯಾಣ್ ಅವರಿಗೆ ಟೈಗರ್ ಆಫ್ ಮಾರ್ಷಲ್ ಆರ್ಟ್ಸ್ ಎಂಬ ಬಿರುದನ್ನು ಸಹ ನೀಡಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪದೇ ಪದೇ ಶೀತವಾಗುತ್ತಾ, ಕೆಮ್ಮು ಒಮ್ಮೆ ಶುರುವಾದರೆ ಕಡಿಮೆನೇ ಆಗ್ತಾ ಇಲ್ವಾ? ಇದಕ್ಕೆ ಕಾರಣ ಏನು ಗೊತ್ತಾ? – Kannada News | Signs of Weak Immune System

ಚಳಿಗಾಲದಲ್ಲಿ, ಶೀತ, ಕೆಮ್ಮು ಮತ್ತು ಸಣ್ಣಪುಟ್ಟ ಸೋಂಕುಗಳು ಕಂಡುಬರುವುದು ಸಾಮಾನ್ಯ. ಶೀತ ಗಾಳಿ, ಸೂರ್ಯನ ಬೆಳಕು ಸರಿಯಾಗಿ ಸಿಗದಿರುವುದು ಮತ್ತು ಬದಲಾಗುತ್ತಿರುವ ಹವಾಮಾನವು ದೇಹದ ಮೇಲೆ ಬೇಗ ಪರಿಣಾಮ ಬೀರುತ್ತದೆ. ಆದರೆ ಪದೇ ಪದೇ ಶೀತವಾಗುವುದು (Cold) ಕೆಮ್ಮು ಒಮ್ಮೆ ಆರಂಭವಾದರೆ ಅದು ಗುಣವಾಗದಿರುವುದು, ಅಥವಾ ಕಡಿಮೆ ಸಮಯದ ಅಂತರದಲ್ಲಿ ಪದೇ ಪದೇ ಸೋಂಕುಗಳು ಕಂಡುಬರುವುದು ಸಾಮಾನ್ಯವಲ್ಲ. ಇಂತಹ ಲಕ್ಷಣಗಳು ನಿಮ್ಮ ದೇಹ ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿದೆ ಎಂಬುದನ್ನು ಸೂಚಿಸಬಹುದು. ಅನೇಕರು ಈ ರೀತಿಯ ಲಕ್ಷಣಗಳನ್ನು ಹವಾಮಾನದಿಂದ ಕಂಡುಬರುವ ಸಮಸ್ಯೆ ಎಂದು ನಿರ್ಲಕ್ಷಿಸುತ್ತಾರೆ. ಆದರೆ ಆರೋಗ್ಯ ತಜ್ಞರು ಈ ರೀತಿ ಮಾಡುವುದು ಸರಿಯಲ್ಲ ಎನ್ನುತ್ತಾರೆ. ಹಾಗಾದರೆ ರೋಗನಿರೋಧಕ ಶಕ್ತಿ (Immune System) ಕುಂಠಿತಗೊಳ್ಳುವುದಕ್ಕೆ ಕಾರಣವೇನು, ಈ ರೀತಿ ಸಮಸ್ಯೆಯನ್ನು ತಡೆಯಲು ಏನು ಮಾಡಬಹುದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುವುದಕ್ಕೆ ಕಾರಣವೇನು?

ಆರ್‌ಎಂಎಲ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕ ಪ್ರೊಫೆಸರ್ ಡಾ. ಸುಭಾಷ್ ಗಿರಿ ಅವರು ಹೇಳುವ ಪ್ರಕಾರ, ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುವುದಕ್ಕೆ ಹಲವಾರು ಕಾರಣಗಳಿರಬಹುದು ಎನ್ನುತ್ತಾರೆ. ಆಹಾರ ಪದ್ದತಿ ಸರಿಯಾಗಿ ಇಲ್ಲದಿರುವುದು, ಪೋಷಕಾಂಶಗಳ ಕೊರತೆ ಮತ್ತು ನಿದ್ರೆ ಸರಿಯಾಗಿ ಆಗದಿರುವುದು ಕೂಡ ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸಬಹುದು. ಅದರ ಜೊತೆಗೆ ನಿರಂತರ ಒತ್ತಡ ಮತ್ತು ಮಾನಸಿಕ ಒತ್ತಡವು ದೇಹದ ರೋಗನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ ಚಳಿಗಾಲದಲ್ಲಿ, ದೈಹಿಕ ಚಟುವಟಿಕೆ ಕಡಿಮೆಯಾಗುವುದು ಮತ್ತು ಸೂರ್ಯನ ಬೆಳಕು ಸರಿಯಾಗಿ ಸಿಗದಿರುವುದು ಪದೇ ಪದೇ ಆರೋಗ್ಯ ಹದಗೆಡುವುದಕ್ಕೆ ಕಾರಣವಾಗಬಹುದು. ಜೊತೆಗೆ ಆಗಾಗ ಫಾಸ್ಟ್ ಫುಡ್ ತಿನ್ನುವುದು, ನೀರು ಕಡಿಮೆ ಕುಡಿಯುವುದು ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸಬಹುದು.

ಇದನ್ನೂ ಓದಿ: ಉಗುರು ಬೆಚ್ಚಗಿನ ನೀರು ಕುಡಿಯುವ ಅಭ್ಯಾಸ ನಿಮಗಿದ್ಯಾ? ಇದರಿಂದ ದೇಹದಲ್ಲಿ ಎಷ್ಟೆಲ್ಲಾ ಬದಲಾವಣೆಗಳಾಗುತ್ತೆ ಗೊತ್ತಾ?

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ?

ಪ್ರತಿನಿತ್ಯ ಸಮತೋಲಿತ ಮತ್ತು ಪೌಷ್ಟಿಕ ಆಹಾರ ಸೇವನೆ ಮಾಡಿ. ಆಹಾರದಲ್ಲಿ ಹಣ್ಣು, ತರಕಾರಿ ಮತ್ತು ಪ್ರೋಟೀನ್‌ಗಳನ್ನು ಸೇರಿಸಿ. ಬೆಚ್ಚಗಿನ ನೀರು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳಿ. ಲಘು ವ್ಯಾಯಾಮ ಅಥವಾ ಯೋಗ ಮಾಡಿ. ಸರಿಯಾಗಿ ನಿದ್ರೆ ಮಾಡಿ, ಜಂಕ್ ಫುಡ್‌ನಿಂದ ದೂರವಿರಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ಮಹಿಳಾ ಟೆಕ್ಕಿ ನಿಗೂಢ ಸಾವು ಪ್ರಕರಣಕ್ಕೆ ಟ್ವಿಸ್ಟ್​: ತನಿಖೆಯಲ್ಲಿ ಕೊಲೆ ರಹಸ್ಯ ಬಯಲು! – Kannada News | Big Twist To Mangaluru techie Sharmila Death Case: Lover Arrested By Bengaluru Police

ಬೆಂಗಳೂರು, (ಜನವರಿ 11): ರಾಮಮೂರ್ತಿ ನಗರ ಪೊಲೀಸ್ (ramamurthy nagar Police) ಠಾಣಾ ವ್ಯಾಪ್ತಿಯಲ್ಲಿ ನಡೆದ ಮಂಗಳೂರಿನ (Mangaluru) ಟೆಕ್ಕಿ ಶರ್ಮಿಳಾ (Sharmila) ಸಾವಿಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಶರ್ಮಿಳಾ ಶಾರ್ಟ್ ಸರ್ಕ್ಯೂಟ್‌ನಿಂದ ಉಂಟಾದ ಬೆಂಕಿ ಅವಘಡದಲ್ಲಿ ಉಸಿರುಗಟ್ಟಿ ಸಾವನ್ನಪ್ಪಿಲ್ಲ. ಬದಲಾಗಿ ಪ್ರಿಯಕರನೇ ಕೊಲೆ ಮಾಡಿ ಬಳಿಕ ಸಾಕ್ಷ್ಯ ನಾಶ ಮಾಡಲು ಮನೆಗೆ ಬೆಂಕಿ ಇಟ್ಟಿದ್ದಾನೆ ಎನ್ನುವ ಸ್ಫೋಟಕ ಅಂಶ ಪೊಲೀಸ್ ತನಿಖೆಯಲ್ಲಿ ಬಯಲಿಗೆ ಬಂದಿದ್ದು, ಈ ಸಂಬಂಧ ಶರ್ಮಿಳಾ ಪ್ರಿಯಕರ ಕೇರಳ ಮೂಲದ ಕರ್ನಲ್ ಕುರೈ ಎನ್ನುವಾತನನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ರಾಮಮೂರ್ತಿ ನಗರದ ಅಪಾರ್ಟ್‌ಮೆಂಟ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡು, ದಟ್ಟ ಹೊಗೆ ಆವರಿಸಿದ್ದು, ಈ ದುರ್ಘಟನೆಯಲ್ಲಿ ಉಸಿರುಗಟ್ಟಿ ಮಂಗಳೂರು ಮೂಲದ 34 ವರ್ಷದ ಸಾಫ್ಟ್‌ವೇರ್ ಉದ್ಯೋಗಿ ಶರ್ಮಿಳಾ ಮೃತಪಟ್ಟಿದ್ದಾರೆ ಎನ್ನಲಾಗಿತ್ತು. ಈ ಸಂಬಂಧ ರಾಮಮೂರ್ತಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಟೆಕ್ಕಿ ಶರ್ಮಿಳಾ ಸಾವಿನ ರಹಸ್ಯ ಕೊನೆಗೂ ಬಯಲಾಗಿದೆ. ತನಿಖೆ ವೇಳೆ ಟೆಕ್ಕಿ ಶರ್ಮಿಳಾ ಕೊಲೆ (Murder) ಎಂಬುದು ಬೆಳಕಿಗೆ ಬಂದಿದೆ. ಟೆಕ್ಕಿ ಶರ್ಮಿಳಾಳನ್ನ ಓನ್ ಸೈಡ್ ಲವ್ ಮಾಡ್ತಿದ್ದ, ಎದುರು ಮನೆಯ ಕೇರಳ ಮೂಲದ ಯುವಕ ಕರ್ನಲ್ ಕುರೈಕೊಲೆಗಾರ ಎಂದು ಬಯಲಾಗಿದೆ.  ಈತನಿಗೆ ಇನ್ನೂ 18ವರ್ಷವಾಗಿದ್ದು, ಈತ  ಕಾಲೇಜು ಓದುತ್ತಿದ್ದ. ಆದ್ರೆ, ತನ್ನ ವಯಸ್ಸಿಗಿಂತ ದೊಡ್ಡವಳಾಗಿದ್ದ 34 ವರ್ಷದ ಟೆಕ್ಕಿ ಶರ್ಮಿಳಾ ಮೇಲೆ ಲವ್ ಆಗಿದೆ. ಆದ್ರೆ, ಈ ವಿಚಾರವನ್ನು ಶರ್ಮಿಳಾಗೆ ಹೇಳಿರಲಿಲ್ಲ. ತಾನೇ ಮನಸ್ಸಲ್ಲಿ ಇಟ್ಟುಕೊಂಡು ಕೊನೆಗೆ ಆಕೆಯನ್ನು ಭೀಕರವಾಗಿ ಹತ್ಯೆಗೈದಿದ್ದಾನೆ.

ಇದನ್ನೂ ಓದಿ: ಕಟ್ಟಡ ನಿರ್ಮಾಣ ಮಾಡಲು ಬಿಡದ ಪಕ್ಕದ ಮನೆಯವರು: ಕನಸಿನ ಮನೆಯಲ್ಲೇ ಟೆಕ್ಕಿ ಆತ್ಮಹತ್ಯೆ

ಕೊಲೆ ಮಾಡಿದ್ಹೇಗೆ?

ಬಂಧಿತ ಆರೋಪಿ ಕೇರಳ ಮೂಲದವನು ಎಂದು ತಿಳಿದುಬಂದಿದೆ. ಶರ್ಮಿಳಾ ಕಳೆದ ಎರಡು ವರ್ಷಗಳಿಂದ ಸುಬ್ರಹ್ಮಣ್ಯ ಲೇಔಟ್‌ನಲ್ಲಿ ವಾಸವಿದ್ದರು. ಇನ್ನು ಆರೋಪಿ ಕರ್ನಲ್ ಕುರೖ ಪಕ್ಕದ ಮನೆ ವಾಸಿಯಾಗಿದ್ದರಿಂದ ಮುಖ ಪರಿಚಯವಿದ್ದು, ಪ್ರತಿದಿನ ಇಬ್ಬರೂ ಮಾತನಾಡುತ್ತಿದ್ದು, ಇದರ ನಡುವೆ ಕುರೈಗೆ ಶರ್ಮಿಳನ ಮೇಲೆ ಲವ್ ಆಗಿದೆ. ಆದ್ರೆ, ಈ ಲವ್ ವಿಚಾರವನ್ನು ಶರ್ಮಿಳಾಗೆ ಹೇಳಿರಲಿಲ್ಲ. ಹೀಗೆ ಒಂದು ದಿನ ಅಂದರೆ ಜನವರಿ 3ರಂದು ಕರ್ನಲ್ ಕುರೈ, ಬಾಲ್ಕನಿ ಮೂಲಕ ಶರ್ಮಿಳಾಳ ಮನೆಯೊಳಗೆ ನುಗ್ಗಿದ್ದು, ಸಡನ್ ಆಗಿ ಹಿಂಬದಿಯಿಂದ ಶರ್ಮಿಳಾಳನ್ನ ಅಪ್ಪಿಕೊಂಡಿದ್ದ. ಆಗ ಶರ್ಮಿಳಾ ಕರ್ನಲ್ ಕುರೈನಿಂದ ಬಿಡಿಸಿಕೊಳ್ಳಲು ಯತ್ನಿಸಿದ್ದಾಳೆ. ಆ ವೇಳೆ ಕುರೈ, ಶರ್ಮಿಳಾಳ ಕುತ್ತಿಗೆ ಭಾಗಕ್ಕೆ ಬಲವಾಗಿ ಹೊಡೆದಿದ್ದು, ಇದರಿಂದ ಶರ್ಮಿಳಾ, ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಬಳಿಕ ಶರ್ಮಿಳಾಳನ್ನ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಅಲ್ಲದೇ ಸಾಕ್ಷಿ ನಾಶ ಮಾಡಲು ಮನೆಗೆ ಬೆಂಕ್ಕಿ ಹಚ್ಚಿ ಪರಾರಿಯಾಗಿದ್ದ ಎನ್ನುವುದು ಪೊಲೀಸ್ ತನಿಖೆಯಲ್ಲಿ ಬಟಾಬಯಲಾಗಿದೆ.

ಯಾರು ಈ ಶರ್ಮಿಳಾ?

ಮೃತ ಶರ್ಮಿಳಾ (34) ಅವರು ಮಂಗಳೂರಿನ ಕಾವೂರು ಮೂಲದವರು. ಕಳೆದ ಒಂದೂವರೆ ವರ್ಷಗಳಿಂದ ಬೆಂಗಳೂರಿನ ರಾಮಮೂರ್ತಿ ನಗರದ ಸುಬ್ರಹ್ಮಣ್ಯ ಲೇಔಟ್‌ನ ಅಪಾರ್ಟ್‌ಮೆಂಟ್‌ನಲ್ಲಿ ಸ್ನೇಹಿತೆಯೊಂದಿಗೆ ವಾಸವಾಗಿದ್ದರು. ಮನೆ ಸಮೀಪದ ಖಾಸಗಿ ಸಾಫ್ಟ್‌ವೇರ್ ಕಂಪನಿಯಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದರು. ಘಟನೆ ನಡೆದ ದಿನ ಶರ್ಮಿಳಾಗೆ ರಜೆ ಇದ್ದು, ಆಕೆಯ ಸ್ನೇಹಿತೆ ಊರಿಗೆ ತೆರಳಿದ್ದ ಕಾರಣ ಶರ್ಮಿಳಾ ಮನೆಯಲ್ಲಿ ಒಬ್ಬರೇ ಇದ್ದರು. ಇದನ್ನೇ ಗಮನಿಸಿ ಕರ್ನಲ್ ಮನೆಯೊಳಗೆ ನುಗ್ಗಿ ಈ ರೀತಿ ಕೃತ್ಯ ಎಸಗಿದ್ದಾನೆ.

ಹೊಗೆಯಿಂದ ಉಸಿರುಟ್ಟಿ ಸಾವು ಎನ್ನಲಾಗಿತ್ತು

ಜನವರಿ 3ರಂದು ರಾತ್ರಿ ಸುಮಾರು 11 ಗಂಟೆ ಸುಮಾರಿಗೆ ಮನೆಯ ಒಂದು ಕೋಣೆಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ದಟ್ಟವಾದ ಹೊಗೆ ಆವರಿಸಿತ್ತು. ಬೆಂಕಿ ಕಾಣಿಸಿಕೊಂಡ ಕೂಡಲೇ ಶರ್ಮಿಳಾ ಆ ಕೋಣೆಯತ್ತ ತೆರಳಲು ಯತ್ನಿಸಿದ್ದಾರೆ. ಇದೇ ವೇಳೆ ವಿದ್ಯುತ್ ಸಂಪರ್ಕ ಕಡಿತಗೊಂಡ ಪರಿಣಾಮ ಮನೆ ಸಂಪೂರ್ಣ ಕತ್ತಲಲ್ಲಿ ಮುಳುಗಿದೆ. ಕತ್ತಲೆ ಮತ್ತು ದಟ್ಟ ಹೊಗೆಯಿಂದಾಗಿ ಕಿಟಕಿ ಅಥವಾ ಬಾಗಿಲು ತೆರೆಯಲು ಸಾಧ್ಯವಾಗದೆ, ಶರ್ಮಿಳಾ ಉಸಿರುಗಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಹೊರಬಿದ್ದಿತ್ತು. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದರು. ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 8:11 pm, Sun, 11 January 26

Source link

ತುಂಗಭದ್ರಾ ಜಲಾಶಯದ ಮೊದಲ ಕ್ರಸ್ಟ್ ಗೇಟ್ ಅಳವಡಿಕೆ ಯಶಸ್ವಿ: ಅದರ ಭಾರ, ಅಗಲ-ಉದ್ದ ಎಷ್ಟು ಗೊತ್ತಾ? – Kannada News | Koppal: Tungabhadra dam first crust gate Installation successful

ಕೊಪ್ಪಳ, ಜನವರಿ 11: ತುಂಗಭದ್ರಾ ಜಲಾಶಯ (Tungabhadra Dam) ನಾಲ್ಕು ಜಿಲ್ಲೆಯ ಜೀವನಾಡಿ. ಈ ಜಲಾಶಯ ನಂಬಿ ನಾಲ್ಕು ಜಿಲ್ಲೆಯ ರೈತರು ಬದಕು ಕಟ್ಟಿಕೊಂಡಿದ್ದಾರೆ. ಆದರೆ ಕಳೆದ ವರ್ಷ ಜಲಾಶಯದ ಕ್ರಸ್ಟ್ ಗೇಟ್ (crest gate) ಕೊಚ್ಚಿ ಹೋಗುವ ಮೂಲಕ ರೈತರಲ್ಲಿ ದೊಡ್ಡ ಆತಂಕ ಎದುರಾಗಿತ್ತು. ಸರ್ಕಾರ ಜಲಾಶಯದ 33 ಗೇಟ್ ಬದಲಾವಣೆಗೆ ಮುಂದಾಗಿತ್ತು. ಸುಮಾರು 54 ಕೋಟಿ ರೂ ವೆಚ್ಚದಲ್ಲಿ ಸರ್ಕಾರ ಗೇಟ್​ಗಳ ಬದಲಾವಣೆಗೆ ಮುಂದಾಗಿದೆ. ಗುತ್ತಿಗೆ ಪಡೆದ ಟೆಂಡರ್ ಕಂಪನಿ ಇದೀಗ ರೈತರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಅದೇನೆಂದರೆ 33 ಗೇಟ್​ಗಳ ಪೈಕಿ ಜಲಾಶಯದ ಒಂದು ಗೇಟ್ ಅಳವಡಿಕೆ ಕಾರ್ಯ ಯಶಸ್ವಿಯಾಗಿದೆ. ಆ ಮೂಲಕ ರೈತರು ಸಂತಸ ಪಟ್ಟಿದ್ದಾರೆ.

ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯ ನಾಲ್ಕು ಜಿಲ್ಲೆಯ ಜೀವನಾಡಿ. ಕೊಪ್ಪಳ, ಬಳ್ಳಾರಿ, ರಾಯಚೂರು ಹಾಗೂ ವಿಜಯನಗರ ಜಿಲ್ಲೆಯ ರೈತರು ಈ ಜಲಾಶಯ ನಂಬಿ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುತ್ತಾರೆ. ಆದರೆ ಕಳೆದ ವರ್ಷ ಅಗಸ್ಟ್​ನಲ್ಲಿ ಜಲಾಶಯದ ಕ್ರಸ್ಟ್ ಗೇಟ್ 19 ಕೊಚ್ಚಿಕೊಂಡು ಹೋಗಿ ದೊಡ್ಡ ಆತಂಕ ಸೃಷ್ಟಿ ಮಾಡಿತ್ತು. ಅಲ್ಲದೆ ಜಲಾಶಯದ ಏಳು ಗೇಟ್ ಡ್ಯಾಮೇಜ್ ಆಗಿದ್ದವು. ಇದನ್ನು ಅರಿತ ಸರ್ಕಾರ ಜಲಾಶಯದ 33 ಗೇಟ್​ಗಳ ಬದಲಾವಣೆಗೆ ಮುಂದಾಗಿತ್ತು.

ಇದನ್ನೂ ಓದಿ: ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ: ಹೇಗೆ ನಡೆದಿದೆ ನೋಡಿ

ಸದ್ಯ 54 ಕೋಟಿ ರೂ ವೆಚ್ಚದಲ್ಲಿ ಗೇಟ್ ನಿರ್ಮಾಣಕ್ಕೆ ಗುಜರಾತ್ ಮೂಲದ ಕಂಪನಿಗೆ ಸರ್ಕಾರ ಟೆಂಡರ್ ನೀಡಿತ್ತು. ಇದೀಗ ಜಲಾಶಯದ ಕ್ರಸ್ಟ್ ಗೇಟ್​ಗಳ ಬದಲಾವಣೆ ಕಾರ್ಯ ಆರಂಭವಾಗಿದೆ. ಕಳೆದ ತಿಂಗಳು ಜಲಾಶಯಕ್ಕೆ ಹೊಸ ಗೇಟ್ ಅಳವಡಿಕೆ ಕಾರ್ಯ ಶುರುಮಾಡಲಾಗಿತ್ತು. ಮೊದಲ ಹಂತವಾಗಿ ಜಲಾಶಯದ ಕ್ರಸ್ಟ್ ಗೇಟ್ 18ನ್ನು ಹೊಸದಾಗಿ ಅಳವಡಿಕೆ ಮಾಡಲಾಗಿದೆ. 33 ಗೇಟ್​ಗಳ ಪೈಕಿ ಒಂದು ಹಳೆ ಗೇಟ್​ನ್ನು ಸಂಪೂರ್ಣ ತೆಗೆದು ಹೊಸ ಗೇಟ್ ಅಳವಡಿಕೆ ಮಾಡಲಾಗಿದೆ. ಸುಮಾರು 10 ದಿನದಲ್ಲಿ ಈ ಗೇಟ್ ಅಳವಡಿಕೆ ಮಾಡಲಾಗಿದ್ದು, ತಜ್ಞರ ಪರಿಶೀಲನೆ ಬಾಕಿಯಿದೆ. ಹೊಸ ಗೇಟ್ ಸುಮಾರು 49 ಟನ್ ಇದೆ. ಹಳೆ ಗೇಟ್ 48.5 ಟನ್ ಇತ್ತು. ಸುಮಾರು 500 ಕೆಜಿ ತೂಕ ಹೆಚ್ಚಾಗಿದೆ. 20 ಪುಟ್ ಎತ್ತರ, 60 ಮೀಟರ್ ಅಗಲ ಇರುವ ಗೇಟ್ ಸಂಪೂರ್ಣ ಹೊಸದಾಗಿ ಅಳವಡಿಕೆ ಮಾಡಲಾಗಿದೆ.

ಮೇ ಅಂತ್ಯದೊಳಗೆ ಕೆಲಸ ಪೂರ್ಣ ಎಂದ ಸಚಿವ ಶಿವರಾಜ್ ತಂಗಡಗಿ 

ಇನ್ನು ಡಿಸೆಂಬರ್ ಕೊನೆಯ ವಾರದಿಂದ ಗೇಟ್ ಬದಲಾವಣೆ ಕಾರ್ಯಕ್ಕೆ ಗುತ್ತಿಗೆ ಪಡೆದ ಕಂಪನಿ ಮುಂದಾಗಿದೆ. ಈಗಾಗಲೇ ಜಲಾಶಯದ ನಾಲ್ಕು ಗೇಟ್​ಗಳನ್ನ ಸಂಪೂರ್ಣವಾಗಿ ತೆಗೆಯಲಾಗಿದೆ. ಇನ್ನು ಗೇಟ್ ಬದಲಾವಣೆ ವಿಚಾರ ತಿಳಿದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಇಂದು ಜಲಾಶಯಕ್ಕೆ ಭೇಟಿ ನೀಡಿದರು. ಜಲಾಶಯದಲ್ಲಿ ಗುತ್ತಿಗೆ ಪಡೆದ ಅಧಿಕಾರಿಗಳಿಂದ ಗೇಟ್ ಬದಲಾವಣೆ ಕುರಿತು ಮಾಹಿತಿ ಪಡೆದುಕೊಂಡರು. ಈ ವೇಳೆ ಮಾತನಾಡಿದ ಅವರು, ಮೇ ಅಂತ್ಯದೊಳಗೆ ಕೆಲಸ ಮುಗಿಯತ್ತೆ ಎಂದರು.

ಇದನ್ನೂ ಓದಿ: ನವೆಂಬರ್​​ನಿಂದ ತುಂಗಭದ್ರಾ ಡ್ಯಾಂ ಗೇಟ್ ಬದಲಾವಣೆ ಕಾರ್ಯ: ಈ ವರ್ಷ ಒಂದೇ ಬೆಳೆಗೆ ನೀರು, ಆತಂಕದಲ್ಲಿ ರೈತರು

ಒಟ್ಟಾರೆ ಜಲಾಶಯದ ಕ್ರಸ್ಟ್ ಗೇಟ್ 18 ಅಳವಡಿಕೆ ಯಶಸ್ವಿಯಾಗಿದೆ. 10 ದಿನದಲ್ಲಿ ಗೇಟ್ ಅಳವಡಿಕೆ ಮಾಡಲಾಗಿದ್ದು, ಇನ್ನು 32 ಗೇಟ್ ಅಳವಡಿಕೆ ಕೆಲಸ ಆಗಬೇಕಿದೆ. ವಿಜಯನಗರ, ಗದಗ ಜಿಲ್ಲೆಯಲ್ಲಿ ಗೇಟ್ ಅಳಡವಿಕೆ ಕೆಲಸ ನಡೆಯುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 8:12 pm, Sun, 11 January 26

Source link