Headlines

ಗೋವಾ ಕಾಂಗ್ರೆಸ್‌ನ ಭರವಸೆಯ ನಾಯಕ ಕೇತನ್ ಭಾಟಿಕರ್ ನಿಧನ: ದಾಂಡೇಲಿಗೆ ತೆರಳುತ್ತಿದ್ದಾಗ ಹಾವು ಕಚ್ಚಿ ಘೋರ ದುರಂತ – Kannada News | Goa Congress Leader Ketan Bhatikar Dies of Snakebite Near Karnataka Border

ಕೇತನ್ ಭಾಟಿಕರ್ (ಚಿತ್ರ: ಕೇತನ್ ಭಾಟಿಕರ್ ಅವರ ಫೇಸ್​​ಬುಕ್ ಖಾತೆಯಿಂದ)Image Credit source: Facebook ಪಣಜಿ, ಮೇ 15: ಗೋವಾ ಕಾಂಗ್ರೆಸ್ (Congress) ನಾಯಕ ಕೇತನ್ ಭಾಟಿಕರ್ (38) (Ketan Bhatikar) ಹಾವಿನ ಕಡಿತದಿಂದ ಮೃತಪಟ್ಟಿದ್ದಾರೆ. ಗೋವಾ-ಕರ್ನಾಟಕ ಗಡಿ ಭಾಗದಲ್ಲಿ ಕರ್ಮಲ್ ಘಾಟ್ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದೆ. ಕೇತನ್ ಭಾಟಿಕರ್ ದಾಂಡೇಲಿಗೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ಪಕ್ಷದ ಉದಯೋನ್ಮುಖ ನಾಯಕನ ಅಕಾಲಿಕ ನಿಧನಕ್ಕೆ ಕಾಂಗ್ರೆಸ್ ಮುಖಂಡರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮುಖ್ಯಾಂಶಗಳು ಗೋವಾ-ಕರ್ನಾಟಕ ಗಡಿಯ ಕರ್ಮಲ್…

Read More

Kedarnath Yatra: ಕೇದಾರನಾಥದಲ್ಲಿ 5 ಲಕ್ಷ ದಾಟಿದ ಭಕ್ತರ ಸಂಖ್ಯೆ; ಆರೋಗ್ಯ ಇಲಾಖೆಯಿಂದ ಹೈ ಅಲರ್ಟ್! – Kannada News | Kedarnath Yatra: Record 5 Lakh Pilgrims Spark Health Alert and Safety Measures

ಡೆಹ್ರಾಡೂನ್: ಉತ್ತರಾಖಂಡದ ಪವಿತ್ರ ಚಾರ್ ಧಾಮ್ ಯಾತ್ರೆಗಳಲ್ಲಿ ಒಂದಾದ ಕೇದಾರನಾಥ ಧಾಮಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಈ ಬಾರಿ ದಾಖಲೆ ಮಟ್ಟಕ್ಕೆ ತಲುಪಿದೆ. ಪ್ರಸ್ತುತ ಯಾತ್ರಾ ಋತುವಿನಲ್ಲಿ ಕೇದಾರನಾಥಕ್ಕೆ ಭೇಟಿ ನೀಡಿದ ಭಕ್ತರ ಸಂಖ್ಯೆ ಈಗಾಗಲೇ 5 ಲಕ್ಷದ ಗಡಿ ದಾಟಿದೆ. ಭಕ್ತರ ಸಂಖ್ಯೆ ವಿಪರೀತ ಹೆಚ್ಚಾಗುತ್ತಿರುವ ಬೆನ್ನಲ್ಲೇ, ರುದ್ರಪ್ರಯಾಗ ಜಿಲ್ಲಾ ಆರೋಗ್ಯ ಇಲಾಖೆಯು ಮುನ್ನೆಚ್ಚರಿಕೆ ಕ್ರಮವಾಗಿ ‘ಹೈ ಅಲರ್ಟ್’ ಘೋಷಿಸಿದೆ. ದಾಖಲೆ ಬರೆದ ಭಕ್ತರ ಸಾಗರ: ಹಿಮಾಲಯದ ಮಡಿಲಲ್ಲಿರುವ ಕೇದಾರನಾಥಕ್ಕೆ ಈ ವರ್ಷ ದೇಶದ…

Read More

ಈ ಮರ್ಡರ್ ಮಿಸ್ಟರಿ ಸಿನಿಮಾ ನೋಡಿದರೆ ಹೊಟ್ಟೆ ಹುಣ್ಣಾಗುವಂತೆ ನಗ್ತೀರಾ; ಕನ್ನಡದಲ್ಲೂ ಲಭ್ಯ – Kannada News | Bharathanatyam 2: Mohiniyattam Netflix Review – Malayalam Dark Comedy Thriller, Kannada Dubbed

ಮಲಯಾಳಂ (Malayalam Movie) ಚಿತ್ರರಂಗವು ಸದಾ ವಿಭಿನ್ನ ಪ್ರಯೋಗಗಳಿಗೆ ಹೆಸರುವಾಸಿ. ಈ ಸಾಲಿಗೆ ಹೊಸ ಸೇರ್ಪಡೆ ‘ಭರತನಾಟ್ಯಂ 2: ಮೋಹಿನಿಯಾಟಂ’. ಕಳೆದ ಏಪ್ರಿಲ್‌ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಬ್ಲಾಕ್‌ಬಸ್ಟರ್ ಎನಿಸಿಕೊಂಡಿದ್ದ ಈ ಸಿನಿಮಾ, ಇದೀಗ ಮೇ 8ರಿಂದ ಜನಪ್ರಿಯ ಒಟಿಟಿ ವೇದಿಕೆ ನೆಟ್‌ಫ್ಲಿಕ್ಸ್​​ನಲ್ಲಿ ಪ್ರಸಾರವಾಗುತ್ತಿದ್ದು, ಟ್ರೆಂಡಿಂಗ್‌ನಲ್ಲಿದೆ. ಇದು 2024ರಲ್ಲಿ ತೆರೆಕಂಡಿದ್ದ ‘ಭರತನಾಟ್ಯಂ’ ಚಿತ್ರದ ಮುಂದುವರಿದ ಭಾಗ. ಹೀಗಾಗಿ, ಮೊದಲ ಭಾಗ ನೋಡಿ ಎರಡನೇ ಭಾಗ ನೋಡಿದರೆ ಸಿನಿಮಾ ಮತ್ತಷ್ಟು ಆಪ್ತವಾಗುತ್ತದೆ. ಮೊದಲ ಭಾಗವು ಕುಟುಂಬದೊಳಗಿನ ಸಣ್ಣಪುಟ್ಟ ಹಾಸ್ಯದ ಮೇಲೆ…

Read More

ಮದ್ಯಪ್ರಿಯರಿಗೆ ಗುಡ್ ನ್ಯೂಸ್: ಬಿಯರ್ ಮತ್ತು ವಿಸ್ಕಿ ದರ ಭಾರಿ ಇಳಿಕೆ! – Kannada News | Karnataka Liquor Price Drop: Beer and Premium Scotch Get Cheaper Under New AiB Policy

ಬಿಯರ್ ಮತ್ತು ವಿಸ್ಕಿ ದರ ಭಾರಿ ಇಳಿಕೆ ಬೆಂಗಳೂರು, ಮೇ 15: ರಾಜ್ಯದ ಮದ್ಯಪ್ರಿಯರಿಗೆ ಅಬಕಾರಿ ಇಲಾಖೆಯು ಸಿಹಿ ಸುದ್ದಿ ಕೊಟ್ಟಿದೆ. ರಾಜ್ಯ ಸರ್ಕಾರವು ಮೇ 11 ರಿಂದ ನೂತನ ‘ಆಲ್ಕೋಹಾಲ್ ಇನ್ ಬೆವರೇಜ್’ (AiB) ನೀತಿಯನ್ನು ಜಾರಿಗೊಳಿಸಿದ್ದು, ಇದರಿಂದ ಪ್ರೀಮಿಯಂ ಬಿಯರ್ (Beer) ಹಾಗೂ ಸ್ಕಾಚ್ ವಿಸ್ಕಿಗಳ ಬೆಲೆಯಲ್ಲಿ ಗಣನೀಯ ಇಳಿಕೆಯಾಗಿದೆ. ಆದರೆ ಸಾಮಾನ್ಯ ಜನರು ಬಳಸುವ ಕಡಿಮೆ ದರದ ಮದ್ಯದ ಬೆಲೆ ಏರಿಕೆಯಾಗಿದೆ. ಮುಖ್ಯಾಂಶಗಳು ನೂತನ ಅಬಕಾರಿ ನೀತಿಯಿಂದ ಬಿಯರ್ ದರದಲ್ಲಿ ಶೇ 25…

Read More

ನೀಟ್ ಆಕಾಂಕ್ಷಿಗಳಿಗೆ ಬಿಗ್ ಅಪ್‌ಡೇಟ್: ಜೂನ್ 21ಕ್ಕೆ ನೀಟ್-ಯುಜಿ ಮರು ಪರೀಕ್ಷೆ ನಿಗದಿ! – Kannada News | NEET Scam: Education Minister’s Emergency Meet, Arrests, and Future of Exam Security

ದೆಹಲಿ, ಮೇ.15: ನೀಟ್-ಯುಜಿ 2026 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವು ದೇಶಾದ್ಯಂತ ಸಂಚಲನ ಮೂಡಿಸಿರುವ ಬೆನ್ನಲ್ಲೇ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಗುರುವಾರ ತಡರಾತ್ರಿ ತಮ್ಮ ನಿವಾಸದಲ್ಲಿ ಉನ್ನತ ಮಟ್ಟದ ತುರ್ತು ಸಭೆ ನಡೆಸಿದರು. ಸಿಬಿಐ (CBI) ತನಿಖೆಯು ಚುರುಕುಗೊಂಡಿದ್ದು, ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (NTA) ಒಳಗಿನವರ ಕೈವಾಡದ ಬಗ್ಗೆಯೂ ತನಿಖೆ ನಡೆಯುತ್ತಿದೆ. ಇನ್ನು ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್-ಯುಜಿಗೆ ಹೊಸ ಪರೀಕ್ಷಾ ದಿನಾಂಕಗಳನ್ನು ಘೋಷಿಸಲಾಗಿದೆ. ಪರೀಕ್ಷೆಯು ಈಗ ಜೂನ್ 21 ರಂದು ನಡೆಯಲಿದೆ. ಮೇ…

Read More

ಪವನ್ ಕಲ್ಯಾಣ್ ಸಿನಿಮಾಗೆ ಕಂಬ್ಯಾಕ್ ತಡವಾಗುತ್ತಿರುವುದಕ್ಕೆ ರಾಜಕೀಯವಲ್ಲ ಕಾರಣ – Kannada News | Pawan Kalyan’s Health Issues: Why He’s Not Returning to Movies

ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಇತ್ತೀಚೆಗೆ ಮೂಗಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಅವರು ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಪವನ್ ನಿವಾಸಕ್ಕೆ ಭೇಟಿ ನೀಡಿದ್ದಾಗ ಪವನ್ ಚೇತರಿಸಿಕೊಳ್ಳುತ್ತಿರುವುದು ಕಾಣಿಸಿದೆ. ಪವನ್ ಕಲ್ಯಾಣ್ ನಟನೆಗೆ ಮರಳಬೇಕು ಎಂಬುದು ಅನೇಕರ ಕೋರಿಕೆ ಆಗಿತ್ತು. ಅವರು ನಟನೆಗೆ ಮರಳದಿರಲು ರಾಜಕೀಯ ಕಾರಣ ಎನ್ನಲಾಗಿತ್ತು. ಆದರೆ, ಇದಕ್ಕೆ ಬೇರೆಯದೇ ಕಾರಣ ಇದೆ. ಪವನ್ ಕಲ್ಯಾಣ್ ಅವರು ಡಿಸಿಎಂ ಆದ ಬಳಿಕ ಸಿನಿಮಾದಿಂದ ಅಂತರ ಕಾಯ್ದುಕೊಂಡರು. ಒಪ್ಪಿಕೊಂಡಿದ್ದ ಕೆಲಸ ಸಿನಿಮಾಗಳ…

Read More

ಪೆಟ್ರೋಲ್​​, ಡೀಸೆಲ್ ದರ ಏರಿಕೆ ಬಗ್ಗೆ ಬೆಂಗಳೂರಿನಲ್ಲಿ ಜನ ಏನಂತಾರೆ ನೋಡಿ!

ಬೆಂಗಳೂರು, ಮೇ 15: ಪೆಟ್ರೋಲ್ ಮತ್ತು ಡೀಸೆಲ್ ದರ ದಿಢೀರ್ ಏರಿಕೆಯಾಗಿರುವುದು ಬೆಂಗಳೂರಿನ ಜನರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರತಿ ಲೀಟರ್ ಪೆಟ್ರೋಲ್‌ಗೆ 3.27 ರೂಪಾಯಿ ಹಾಗೂ ಡೀಸೆಲ್‌ಗೆ 3.12 ರೂಪಾಯಿ ಹೆಚ್ಚಳವಾಗಿದ್ದು, ಬೆಳಗ್ಗೆಯೇ ಪೆಟ್ರೋಲ್ ಬಂಕ್‌ಗಳಿಗೆ ಬಂದ ಸವಾರರು ಬೆಲೆ ಏರಿಕೆ ಕಂಡು ಕಂಗಾಲಾಗಿದ್ದಾರೆ. ಡೀಸೆಲ್ ದರ ಏರಿಕೆಯಿಂದಾಗಿ ಸರಕು ಸಾಗಣೆ ವೆಚ್ಚ ಹೆಚ್ಚಾಗಲಿದ್ದು, ಇದರ ನೇರ ಪರಿಣಾಮ ದಿನಸಿ ಮತ್ತು ತರಕಾರಿ ಬೆಲೆಗಳ ಮೇಲೆ ಬೀಳಲಿದೆ ಎಂದು ಸಾರ್ವಜನಿಕರು ಕಳವಳ ವ್ಯಕ್ತಪಡಿಸಿದ್ದಾರೆ. ‘ಟಿವಿ9’ ಬಳಿ…

Read More

ಡಿಕೆ ಶಿ​ವಕುಮಾರ್​ಗೆ 64ನೇ ಹುಟ್ಟುಹಬ್ಬದ ಸಂಭ್ರಮ: ಅಭಿಮಾನಿಗಳ ಜತೆ ಕೇಕ್ ಕಟ್ ಮಾಡಿ ಜನ್ಮದಿನ ಆಚರಿಸಿಕೊಂಡ ಡಿಸಿಎಂ – Kannada News | DCM DK Shivakumar Celebrates 64th Birthday; Priests and Fans Throng Sadashivanagar Residence

ಬೆಂಗಳೂರು, ಮೇ 15: ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಇಂದು (ಮೇ 15) ತಮ್ಮ 64ನೇ ವಸಂತಕ್ಕೆ ಕಾಲಿಟ್ಟಿದ್ದು, ಬೆಂಗಳೂರಿನ ಸದಾಶಿವನಗರದ ಅವರ ನಿವಾಸದ ಬಳಿ ಹುಟ್ಟುಹಬ್ಬದ ಸಂಭ್ರಮ ಮನೆ ಮಾಡಿದೆ. ಮುಂಜಾನೆಯಿಂದಲೇ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಸಮ್ಮುಖದಲ್ಲಿ ಡಿಕೆ ಶಿವಕುಮಾರ್ ಅವರು ಕೇಕ್ ಕತ್ತರಿಸಿ ಸಂಭ್ರಮಿಸಿದರು. ಇದೇ ವೇಳೆ ವಿವಿಧ ಮಠಗಳ ಶ್ರೀಗಳು ಹಾಗೂ ಪುರೋಹಿತರು ಡಿಸಿಎಂ ನಿವಾಸಕ್ಕೆ ಭೇಟಿ ನೀಡಿ, ಮನ್ಯುಸೂಕ್ತ ಮಂತ್ರಗಳ ಪಠಣದೊಂದಿಗೆ…

Read More

ರಮ್ಮಿ ಆಟಗಾರರಿಗೆ ದೊಡ್ಡ ಶಾಕ್! ಗೇಮ್ಸ್‌ಕ್ರಾಫ್ಟ್‌ನಿಂದ 526 ಕೋಟಿ ರೂ. ವಂಚನೆ? ಇಡಿಯಿಂದ ಮೂವರು ಬಿಗ್ ಬಾಸ್‌ಗಳ ಬಂಧನ – Kannada News | Online Rummy Scam: Gameskraft Directors Arrested for Money Laundering, Bot Usage

ಬೆಂಗಳೂರು, ಮೇ.15 : ಆನ್‌ಲೈನ್ ರಮ್ಮಿ ಗೇಮಿಂಗ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದ ಬೆಂಗಳೂರು ಮೂಲದ ‘ಗೇಮ್ಸ್‌ಕ್ರಾಫ್ಟ್ ಟೆಕ್ನಾಲಜೀಸ್’ (Gameskraft Technologies) ಕಂಪನಿಯ ಕರಾಳ ಮುಖ ಅನಾವರಣಗೊಂಡಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಇಡಿ ನಡೆಸಿದ ಸರಣಿ ದಾಳಿಗಳಲ್ಲಿ ಭಾರಿ ಪ್ರಮಾಣದ ಆಸ್ತಿ ಪಾಸ್ತಿಗಳನ್ನು ಜಪ್ತಿ ಮಾಡಲಾಗಿದ್ದು, ಕಂಪನಿಯ ಮೂವರು ನಿರ್ದೇಶಕರನ್ನು ಬಂಧಿಸಲಾಗಿದೆ. ಮೇ 7 ರಿಂದ 13 ರವರೆಗೆ ಬೆಂಗಳೂರು ಮತ್ತು ದೆಹಲಿ ಎನ್‌ಸಿಆರ್‌ನಲ್ಲಿ ನಡೆದ ದಾಳಿಯಲ್ಲಿ ಸುಮಾರು 526.49 ಕೋಟಿ ರೂಪಾಯಿ ಮೌಲ್ಯದ…

Read More

ಮಹಾ ಮಳೆಗೆ ವಿಜಯಪುರದಲ್ಲಿ ಭೀಕರ ದುರಂತ: ಮನೆ ಮೇಲ್ಛಾವಣಿ ಕುಸಿದು ಒಂದೇ ಕುಟುಂಬದ ನಾಲ್ವರು ಜೀವಂತ ಸಮಾಧಿ – Kannada News | Tragedy in Vijayapura: Family of Four Dead as House Roof Collapses Due to Heavy Rain in Moratagi

ವಿಜಯಪುರ, ಮೇ 15: ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಮೊರಟಗಿ ಗ್ರಾಮದಲ್ಲಿ ಭಾರಿ ಗಾಳಿ ಮಳೆಗೆ ಮನೆಯ ಮೇಲ್ಛಾವಣಿ ಕುಸಿದು ಬಿದ್ದ ಪರಿಣಾಮ, ಪತಿ-ಪತ್ನಿ ಹಾಗೂ ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗುರುನಾಥ ಬಡಿಗೇರ (35), ಜ್ಯೋತಿ ಬಡಿಗೇರ (28), ಕಾಳಮ್ಮ ಬಡಿಗೇರ (13) ಹಾಗೂ ಕೀರ್ತಿ ಬಡಿಗೇರ (9) ಮೃತಪಟ್ಟ ದುರ್ದೈವಿಗಳು. ಗುರುನಾಥ್ ಅವರು ತಮ್ಮ ಸ್ವಂತ ಮನೆಯನ್ನು ದುರಸ್ತಿ ಮಾಡುತ್ತಿದ್ದ ಕಾರಣ, ಈ ಕುಟುಂಬವು ಹಳೆಯ ಮನೆಯೊಂದರಲ್ಲಿ ಬಾಡಿಗೆಗೆ ಇತ್ತು. ನಿನ್ನೆ ರಾತ್ರಿ ಸುರಿದ…

Read More