Category Archives: Blog

Your blog category

ತುಂಗಭದ್ರಾ ಜಲಾಶಯದ ಮೊದಲ ಕ್ರಸ್ಟ್ ಗೇಟ್ ಅಳವಡಿಕೆ ಯಶಸ್ವಿ: ಅದರ ಭಾರ, ಅಗಲ-ಉದ್ದ ಎಷ್ಟು ಗೊತ್ತಾ? – Kannada News | Koppal: Tungabhadra dam first crust gate Installation successful

ಕೊಪ್ಪಳ, ಜನವರಿ 11: ತುಂಗಭದ್ರಾ ಜಲಾಶಯ (Tungabhadra Dam) ನಾಲ್ಕು ಜಿಲ್ಲೆಯ ಜೀವನಾಡಿ. ಈ ಜಲಾಶಯ ನಂಬಿ ನಾಲ್ಕು ಜಿಲ್ಲೆಯ ರೈತರು ಬದಕು ಕಟ್ಟಿಕೊಂಡಿದ್ದಾರೆ. ಆದರೆ ಕಳೆದ ವರ್ಷ ಜಲಾಶಯದ ಕ್ರಸ್ಟ್ ಗೇಟ್ (crest gate) ಕೊಚ್ಚಿ ಹೋಗುವ ಮೂಲಕ ರೈತರಲ್ಲಿ ದೊಡ್ಡ ಆತಂಕ ಎದುರಾಗಿತ್ತು. ಸರ್ಕಾರ ಜಲಾಶಯದ 33 ಗೇಟ್ ಬದಲಾವಣೆಗೆ ಮುಂದಾಗಿತ್ತು. ಸುಮಾರು 54 ಕೋಟಿ ರೂ ವೆಚ್ಚದಲ್ಲಿ ಸರ್ಕಾರ ಗೇಟ್​ಗಳ ಬದಲಾವಣೆಗೆ ಮುಂದಾಗಿದೆ. ಗುತ್ತಿಗೆ ಪಡೆದ ಟೆಂಡರ್ ಕಂಪನಿ ಇದೀಗ ರೈತರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಅದೇನೆಂದರೆ 33 ಗೇಟ್​ಗಳ ಪೈಕಿ ಜಲಾಶಯದ ಒಂದು ಗೇಟ್ ಅಳವಡಿಕೆ ಕಾರ್ಯ ಯಶಸ್ವಿಯಾಗಿದೆ. ಆ ಮೂಲಕ ರೈತರು ಸಂತಸ ಪಟ್ಟಿದ್ದಾರೆ.

ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯ ನಾಲ್ಕು ಜಿಲ್ಲೆಯ ಜೀವನಾಡಿ. ಕೊಪ್ಪಳ, ಬಳ್ಳಾರಿ, ರಾಯಚೂರು ಹಾಗೂ ವಿಜಯನಗರ ಜಿಲ್ಲೆಯ ರೈತರು ಈ ಜಲಾಶಯ ನಂಬಿ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುತ್ತಾರೆ. ಆದರೆ ಕಳೆದ ವರ್ಷ ಅಗಸ್ಟ್​ನಲ್ಲಿ ಜಲಾಶಯದ ಕ್ರಸ್ಟ್ ಗೇಟ್ 19 ಕೊಚ್ಚಿಕೊಂಡು ಹೋಗಿ ದೊಡ್ಡ ಆತಂಕ ಸೃಷ್ಟಿ ಮಾಡಿತ್ತು. ಅಲ್ಲದೆ ಜಲಾಶಯದ ಏಳು ಗೇಟ್ ಡ್ಯಾಮೇಜ್ ಆಗಿದ್ದವು. ಇದನ್ನು ಅರಿತ ಸರ್ಕಾರ ಜಲಾಶಯದ 33 ಗೇಟ್​ಗಳ ಬದಲಾವಣೆಗೆ ಮುಂದಾಗಿತ್ತು.

ಇದನ್ನೂ ಓದಿ: ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ: ಹೇಗೆ ನಡೆದಿದೆ ನೋಡಿ

ಸದ್ಯ 54 ಕೋಟಿ ರೂ ವೆಚ್ಚದಲ್ಲಿ ಗೇಟ್ ನಿರ್ಮಾಣಕ್ಕೆ ಗುಜರಾತ್ ಮೂಲದ ಕಂಪನಿಗೆ ಸರ್ಕಾರ ಟೆಂಡರ್ ನೀಡಿತ್ತು. ಇದೀಗ ಜಲಾಶಯದ ಕ್ರಸ್ಟ್ ಗೇಟ್​ಗಳ ಬದಲಾವಣೆ ಕಾರ್ಯ ಆರಂಭವಾಗಿದೆ. ಕಳೆದ ತಿಂಗಳು ಜಲಾಶಯಕ್ಕೆ ಹೊಸ ಗೇಟ್ ಅಳವಡಿಕೆ ಕಾರ್ಯ ಶುರುಮಾಡಲಾಗಿತ್ತು. ಮೊದಲ ಹಂತವಾಗಿ ಜಲಾಶಯದ ಕ್ರಸ್ಟ್ ಗೇಟ್ 18ನ್ನು ಹೊಸದಾಗಿ ಅಳವಡಿಕೆ ಮಾಡಲಾಗಿದೆ. 33 ಗೇಟ್​ಗಳ ಪೈಕಿ ಒಂದು ಹಳೆ ಗೇಟ್​ನ್ನು ಸಂಪೂರ್ಣ ತೆಗೆದು ಹೊಸ ಗೇಟ್ ಅಳವಡಿಕೆ ಮಾಡಲಾಗಿದೆ. ಸುಮಾರು 10 ದಿನದಲ್ಲಿ ಈ ಗೇಟ್ ಅಳವಡಿಕೆ ಮಾಡಲಾಗಿದ್ದು, ತಜ್ಞರ ಪರಿಶೀಲನೆ ಬಾಕಿಯಿದೆ. ಹೊಸ ಗೇಟ್ ಸುಮಾರು 49 ಟನ್ ಇದೆ. ಹಳೆ ಗೇಟ್ 48.5 ಟನ್ ಇತ್ತು. ಸುಮಾರು 500 ಕೆಜಿ ತೂಕ ಹೆಚ್ಚಾಗಿದೆ. 20 ಪುಟ್ ಎತ್ತರ, 60 ಮೀಟರ್ ಅಗಲ ಇರುವ ಗೇಟ್ ಸಂಪೂರ್ಣ ಹೊಸದಾಗಿ ಅಳವಡಿಕೆ ಮಾಡಲಾಗಿದೆ.

ಮೇ ಅಂತ್ಯದೊಳಗೆ ಕೆಲಸ ಪೂರ್ಣ ಎಂದ ಸಚಿವ ಶಿವರಾಜ್ ತಂಗಡಗಿ 

ಇನ್ನು ಡಿಸೆಂಬರ್ ಕೊನೆಯ ವಾರದಿಂದ ಗೇಟ್ ಬದಲಾವಣೆ ಕಾರ್ಯಕ್ಕೆ ಗುತ್ತಿಗೆ ಪಡೆದ ಕಂಪನಿ ಮುಂದಾಗಿದೆ. ಈಗಾಗಲೇ ಜಲಾಶಯದ ನಾಲ್ಕು ಗೇಟ್​ಗಳನ್ನ ಸಂಪೂರ್ಣವಾಗಿ ತೆಗೆಯಲಾಗಿದೆ. ಇನ್ನು ಗೇಟ್ ಬದಲಾವಣೆ ವಿಚಾರ ತಿಳಿದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಇಂದು ಜಲಾಶಯಕ್ಕೆ ಭೇಟಿ ನೀಡಿದರು. ಜಲಾಶಯದಲ್ಲಿ ಗುತ್ತಿಗೆ ಪಡೆದ ಅಧಿಕಾರಿಗಳಿಂದ ಗೇಟ್ ಬದಲಾವಣೆ ಕುರಿತು ಮಾಹಿತಿ ಪಡೆದುಕೊಂಡರು. ಈ ವೇಳೆ ಮಾತನಾಡಿದ ಅವರು, ಮೇ ಅಂತ್ಯದೊಳಗೆ ಕೆಲಸ ಮುಗಿಯತ್ತೆ ಎಂದರು.

ಇದನ್ನೂ ಓದಿ: ನವೆಂಬರ್​​ನಿಂದ ತುಂಗಭದ್ರಾ ಡ್ಯಾಂ ಗೇಟ್ ಬದಲಾವಣೆ ಕಾರ್ಯ: ಈ ವರ್ಷ ಒಂದೇ ಬೆಳೆಗೆ ನೀರು, ಆತಂಕದಲ್ಲಿ ರೈತರು

ಒಟ್ಟಾರೆ ಜಲಾಶಯದ ಕ್ರಸ್ಟ್ ಗೇಟ್ 18 ಅಳವಡಿಕೆ ಯಶಸ್ವಿಯಾಗಿದೆ. 10 ದಿನದಲ್ಲಿ ಗೇಟ್ ಅಳವಡಿಕೆ ಮಾಡಲಾಗಿದ್ದು, ಇನ್ನು 32 ಗೇಟ್ ಅಳವಡಿಕೆ ಕೆಲಸ ಆಗಬೇಕಿದೆ. ವಿಜಯನಗರ, ಗದಗ ಜಿಲ್ಲೆಯಲ್ಲಿ ಗೇಟ್ ಅಳಡವಿಕೆ ಕೆಲಸ ನಡೆಯುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 8:12 pm, Sun, 11 January 26

Source link

‘ಜನ ನಾಯಗನ್’ ಬಿಡುಗಡೆ ಆಗದಿದ್ದರೂ ಚಿತ್ರಮಂದಿರಕ್ಕೆ ಬರಲಿರುವ ವಿಜಯ್ – Kannada News | Thalapathy Vijay starrer Theri movie re releasing on January 15

ದಳಪತಿ ವಿಜಯ್ (Thalapathy Vijay) ನಟನೆಯ ‘ಜನ ನಾಯಗನ್’ ಸಿನಿಮಾ ಜನವರಿ 09 ರಂದು ಬಿಡುಗಡೆ ಆಗಬೇಕಿತ್ತು. ಆದರೆ ಸೆನ್ಸಾರ್ ಮಂಡಳಿಯು ಸಿನಿಮಾಕ್ಕೆ ಸಿಬಿಎಫ್​​ಸಿ ಪ್ರಮಾಣ ಪತ್ರ ನೀಡಲು ನಿರಾಕರಿಸಿದ ಕಾರಣ ಸಿನಿಮಾ ಬಿಡುಗಡೆ ಕೋರ್ಟ್ ಮೆಟ್ಟಿಲೇರಿದೆ. ಇದರಿಂದಾಗಿ ಅನಿವಾರ್ಯವಾಗಿ ಸಿನಿಮಾ ಬಿಡುಗಡೆ ಮುಂದೂಡಲ್ಪಟ್ಟಿದೆ. ‘ಜನ ನಾಯನಗನ್’ ಸಿನಿಮಾಕ್ಕೆ ಕಾತರದಿಂದ ಕಾಯುತ್ತಿದ್ದ ವಿಜಯ್ ಅಭಿಮಾನಿಗಳಿಗೆ ಇದರಿಂದ ತೀವ್ರ ಬೇಸರ ಸಹ ಆಗಿದೆ. ಆದರೆ ‘ಜನ ನಾಯಗನ್’ ಬಿಡುಗಡೆ ಆಗದಿದ್ದರೆ ಏನಂತೆ ಈ ಸಂಕ್ರಾಂತಿ ಅಥವಾ ತಮಿಳುನಾಡಿನಲ್ಲಿ ಪೊಂಗಲ್ ಹಬ್ಬಕ್ಕೆ ಚಿತ್ರಮಂದಿರಕ್ಕೆ ವಿಜಯ್ ಬರುತ್ತಿದ್ದಾರೆ.

ವಿಜಯ್ ನಟನೆಯ ಬ್ಲಾಕ್ ಬಸ್ಟರ್ ಸಿನಿಮಾ ‘ಥೇರಿ’ ಮರು ಬಿಡುಗಡೆ ಆಗುತ್ತಿದೆ. 2016 ರಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಆಗ ಬ್ಲಾಕ್ ಬಸ್ಟರ್ ಆಗಿತ್ತು. ಅಟ್ಲಿ ನಿರ್ದೇಶನದ ಈ ಸಿನಿಮಾನಲ್ಲಿ ವಿಜಯ್ ಮೂರು ಭಿನ್ನ ಶೇಡ್​ನ ಪಾತ್ರದಲ್ಲಿ ನಟಿಸಿದ್ದರು. ಸಿನಿಮಾಕ್ಕೆ ಸಮಂತಾ ಮತ್ತು ಆಮಿ ಜಾಕ್ಸನ್ ನಾಯಕಿಯಾಗಿದ್ದರು. ಆಕ್ಷನ್, ಸಸ್ಪೆನ್ಸ್, ಕಾಮಿಡಿ ಮತ್ತು ರೊಮ್ಯಾನ್ಸ್ ತುಂಬಿದ್ದ ಈ ಸಿನಿಮಾ ಆಗ ಬ್ಲಾಕ್ ಬಸ್ಟರ್ ಆಗಿತ್ತು. ಇದೀಗ ಈ ಸಿನಿಮಾ ಮತ್ತೆ ಬಿಡುಗಡೆ ಆಗುತ್ತಿದೆ.

ಈ ಸಿನಿಮಾವನ್ನು ಜನವರಿ 15ಕ್ಕೆ ಮರು ಬಿಡುಗಡೆ ಮಾಡಲಾಗುತ್ತಿದೆ. ಜನವರಿ 09 ರಂದು ಬಿಡುಗಡೆ ಆಗಬೇಕಿದ್ದ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾದ ಬಿಡುಗಡೆ ಮುಂದೂಡಲ್ಪಟ್ಟ ಕಾರಣದಿಂದಾಗಿ ಇದೀಗ ವಿಜಯ್ ನಟನೆಯ ‘ಥೇರಿ’ ಸಿನಿಮಾವನ್ನು ಮರು ಬಿಡುಗಡೆ ಮಾಡಲಾಗುತ್ತಿದೆ. ಪ್ರತಿ ಪೊಂಗಲ್ ಹಬ್ಬಕ್ಕೂ ವಿಜಯ್ ಅವರ ಸಿನಿಮಾ ಪಕ್ಕಾ ಇರುತ್ತಿತ್ತು. ಆದರೆ ಈ ವರ್ಷ ಅನಿವಾರ್ಯ ಕಾರಣಗಳಿಂದಾಗಿ ಅವರ ಸಿನಿಮಾ ಬಿಡುಗಡೆಗೆ ತಯಾರಿದ್ದರೂ ಬಿಡುಗಡೆ ಆಗುತ್ತಿಲ್ಲ. ಪೊಂಗಲ್​​ಗೆ ವಿಜಯ್ ಸಿನಿಮಾ ಇಲ್ಲ ಎಂಬ ಕೊರತೆ ನೀಗಿಸಲೆಂದು ಇದೀಗ ‘ಥೇರಿ’ ಸಿನಿಮಾವನ್ನು ಮರು ಬಿಡುಗಡೆ ಮಾಡಲಾಗುತ್ತಿದೆ.

ಇದನ್ನೂ ಓದಿ:‘ಜನ ನಾಯಗನ್’ ಸ್ಪರ್ಧೆ ತಪ್ಪಿಸಿಕೊಂಡ ‘ಪರಾಶಕ್ತಿ’ಗೆ ಆರಂಭಿಕ ಗೆಲುವು

‘ಜನ ನಾಯಗನ್’ ಸಿನಿಮಾ ಬಿಡುಗಡೆಗೆ ರೆಡಿಯಾಗಿತ್ತು. ಜನವರಿ 09 ರಂದು ಸಿನಿಮಾ ತೆರೆಗೆ ಬರುವುದು ಖಾತ್ರಿ ಆಗಿತ್ತು. ಆದರೆ ಸೆನ್ಸಾರ್ ಮಂಡಳಿ ಸಿಬಿಎಫ್​​ಸಿ ಪ್ರಮಾಣ ಪತ್ರ ನೀಡಲು ಹಿಂದೇಟು ಹಾಕಿದೆ.ಕೆ ವಿಎನ್ ಪ್ರೊಡಕ್ಷನ್ಸ್​ನ ಮಾಲೀಕರಾದ ವೆಂಕಟ್ ನಾರಾಯಣ್ ವಿಡಿಯೋನಲ್ಲಿ ಹಂಚಿಕೊಂಡಿರುವ ಮಾಹಿತಿಯಂತೆ ‘ಜನ ನಾಯಗನ್’ ಸಿನಿಮಾವನ್ನು 18 ಡಿಸೆಂಬರ್ 2025 ರಂದು ಸಿಬಿಎಫ್​​ಸಿಗೆ ಸಲ್ಲಿಕೆ ಮಾಡಲಾಗಿತ್ತು. 22ರ ಡಿಸೆಂಬರ್ ತಿಂಗಳಲ್ಲಿ ಸಿಬಿಎಫ್​​ಸಿಯು ಇಮೇಲ್ ಮಾಡಿ, ಸಿನಿಮಾಕ್ಕೆ ‘ಯು/ಎ’ ಪ್ರಮಾಣ ಪತ್ರ ನೀಡುವುದಾಗಿ ತಿಳಿಸಿದ್ದು, ಸಿನಿಮಾಕ್ಕೆ ಕೆಲವು ಕಟ್​​ಗಳನ್ನು ಸಹ ಸೂಚಿಸಿತ್ತು. ಅದರಂತೆ ಚಿತ್ರತಂಡವು ಸೆನ್ಸಾರ್ ಮಂಡಳಿ ಸೂಚಿಸಿದ ಬದಲಾವಣೆಗಳನ್ನು ಮಾಡಿ ಡಿಸೆಂಬರ್ 22ಕ್ಕೆ ಮತ್ತೆ ಸಿನಿಮಾವನ್ನು ಸಿಬಿಎಫ್​​ಸಿಗೆ ಸಲ್ಲಿಕೆ ಮಾಡಿತ್ತು. ಇಷ್ಟೆಲ್ಲ ಮಾಡಿದರೂ ಸಹ ಕೇವಲ ಒಂದು ಅಜ್ಞಾತ ದೂರಿನಿಂದಾಗಿ ಸಿನಿಮಾವನ್ನು ರಿವ್ಯೂ ಕಮಿಟಿಗೆ ಕಳಿಸಲಾಗಿತ್ತು. ಇದೇ ಕಾರಣಕ್ಕೆ ನಿರ್ಮಾಪಕರು ನ್ಯಾಯಾಲಯದ ಮೆಟ್ಟಿಲೇರಿದರು. ಅಲ್ಲಿ ಯು/ಎ ಪ್ರಮಾಣ ಪತ್ರ ನೀಡುವಂತೆ ಆದೇಶಿಸಲಾಗಿತ್ತು, ಆದರೆ ಆದೇಶ ಹೊರಬಿದ್ದ ಕೆಲವೇ ಗಂಟೆಗಳಲ್ಲಿ ಅದೇ ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದೆ. ಮುಂದಿನ ವಿಚಾರಣೆ ಜನವರಿ 27ಕ್ಕೆ ನಡೆಯಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IND vs NZ: 650 ಆರು..! ಕ್ರಿಕೆಟ್ ಜಗತ್ತಿನಲ್ಲಿ ಈ ಸಾಧನೆ ಮಾಡಿದ ಏಕೈಕ ಆಟಗಾರ ರೋಹಿತ್ ಶರ್ಮಾ – Kannada News | Rohit Sharma Breaks Gayle’s ODI Opener Sixes Record, Hits 650 Int. Sixes

ವಡೋದರಾದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ರೋಹಿತ್ ಶರ್ಮಾಗೆ ಉತ್ತಮ ಆರಂಭ ಸಿಕ್ಕಿತು. ಆದರೆ ಅದನ್ನು ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸುವಲ್ಲಿ ಎಡವಿದರು. ಎಂದಿನಂತೆ ಆರಂಭಿಕನಾಗಿ ಕಣಕ್ಕಿಳಿದ ರೋಹಿತ್, ಆರಂಭದಲ್ಲಿ ರನ್​ಗಾಗಿ ಪರದಾಡಿದರೂ, ಆ ಬಳಿಕ ಹೊಡಿಬಡಿ ಆಟಕ್ಕೆ ಮುಂದಾದರು.

Source link

IND vs NZ: 28 ಸಾವಿರ ರನ್​ಗಳ ಸರದಾರ ನಮ್ಮ ಕಿಂಗ್ ಕೊಹ್ಲಿ; ಸಂಗಕ್ಕಾರ ದಾಖಲೆ ಧ್ವಂಸ – Kannada News | IND vs NZ: Virat Kohli Surpasses Sangakkara, Becomes 2nd Highest Scorer

ವಡೋದರಾದ ಕೋಟಂಬಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ನ್ಯೂಜಿಲೆಂಡ್ ತಂಡ, ಆತಿಥೇಯ ಭಾರತಕ್ಕೆ 301 ರನ್​ಗಳ ಸ್ಪರ್ಧಾತ್ಮಕ ಗುರಿ ನೀಡಿದೆ. ಈ ಗುರಿ ಬೆನ್ನಟ್ಟಿರುವ ಭಾರತ ಕೂಡ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸುತ್ತಿದೆ.

Source link

ರಮ್ಯಾ, ವಿಜಯಲಕ್ಷ್ಮಿ ಬೆನ್ನಲ್ಲೇ ಕಾಂಗ್ರೆಸ್ ಶಾಸಕಿಗೂ ಅಶ್ಲೀಲ ಕಾಮೆಂಟ್ ಕಾಟ – Kannada News | Mudigere Congress MLA Nayana Motamma Targeted by Obscene Comments on Instagram

ಶಾಸಕಿಗೆ ಬಂದ ಅಶ್ಲೀಲ ಕಾಮೆಂಟ್​​ಗಳು

ಬೆಂಗಳೂರು, ಜನವರಿ 11: ಇತ್ತೀಚೆಗೆ ನಟಿ ರಮ್ಯಾ ಬಳಿಕ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಅಶ್ಲೀಲ ಮೆಸೇಜ್ ಮಾಡುವವರ ವಿರುದ್ಧ ಸಿಡಿದೆದ್ದಿದ್ದರು. ಅಶ್ಲೀಲವಾಗಿ ಕಾಮೆಂಟ್ (Obscene comment)
ಮಾಡಿದವರ ವಿರುದ್ಧ ದೂರು ನೀಡುವ ಮೂಲಕ ಕಾನೂನು ಸಮರ ಸಾರಿದ್ದರು. ಇದು ಸಾಕಷ್ಟು ಚರ್ಚೆಗೂ ಕಾರಣವಾಗಿತ್ತು. ಆದರೆ ಇದೀಗ ಕಾಂಗ್ರೆಸ್​ ಶಾಸಕಿ ನಯನಾ ಮೋಟಮ್ಮರಿಗೂ (Nayana Motamma) ಅಶ್ಲೀಲ ಕಾಮೆಂಟ್ ಕಾಟ ಶುರುವಾಗಿದೆ. ವೈಯಕ್ತಿಕ ಇನ್ಸ್ಟಾಗ್ರಾಮ್ ಖಾತೆಯಲ್ಲಿನ ಪೋಸ್ಟ್‌ಗೆ ವೇಶ್ಯೆ ಎಂದು ಕಾಮೆಂಟ್ ಮಾಡಿದ್ದಾರೆಂದು ನಯನಾ ಮೋಟಮ್ಮ ಆರೋಪಿಸಿದ್ದಾರೆ.

ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್

ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಎರಡು ಅಧಿಕೃತ ಖಾತೆ ಹೊಂದಿದ್ದಾರೆ. ವೈಯಕ್ತಿಕ ವಿಚಾರ ಹಂಚಿಕೊಳ್ಳಲು ಒಂದು ಖಾತೆ, ರಾಜಕೀಯ ವಿಚಾರದ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಮತ್ತೊಂದು ಪ್ರತ್ಯೇಕ ಖಾತೆಗಳನ್ನು ಹೊಂದಿದ್ದಾರೆ. ಖಾಸಗಿ ಪ್ರವಾಸ, ವೈಯಕ್ತಿಕ ವಿಚಾರ ಹಂಚಿಕೊಳ್ಳುವ ಖಾತೆಯಲ್ಲಿ ಬಟ್ಟೆ ಬಗ್ಗೆ ಕಿಡಿಗೇಡಿಗಳು ಅಶ್ಲೀಲ ಕಾಮೆಂಟ್​​ ಮಾಡಿದ್ದಾರೆ.

ಅಶ್ಲೀಲ ಕಾಮೆಂಟ್‌ ಮಾಡಿರುವವರ ಮನಸ್ಥಿತಿ ಬಗ್ಗೆ ಶಾಸಕಿ ನಯನಾ ಮೋಟಮ್ಮ ಬೇಸರ

ಇನ್ನು ರೀತಿ ಅಶ್ಲೀಲ ಕಾಮೆಂಟ್‌ ಮಾಡಿರುವವರ ಮನಸ್ಥಿತಿ ಬಗ್ಗೆ ಶಾಸಕಿ ನಯನಾ ಮೋಟಮ್ಮ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪೋಸ್ಟ್‌ ಹಂಚಿಕೊಂಡಿರುವ ಅವರು, ಮಹಿಳಾ ವಿರೋಧಿ ಮನೋಭಾವವನ್ನು ನಾನು ವಿರೋಧಿಸುತ್ತಿದ್ದೇನೆ. ಸ್ಲೀವ್ ಲೆಸ್ ಬಟ್ಟೆ ಹಾಕಿದರೆ ಕೆಲಸ ಮಾಡದ ರಾಜಕಾರಣಿ ಎನ್ನುತ್ತಾರೆ. ವೇಶ್ಯೆ ಎನ್ನುವ ಮಟ್ಟಕ್ಕೂ ಇಳಿಯುತ್ತಾರೆ. ಡಿಪಿ ಇಲ್ಲದ ಪ್ರೊಫೈಲ್ ಇಟ್ಟುಕೊಂಡು ಕಾಮೆಂಟ್ ಮಾಡುತ್ತಾರೆ. ಬಹುಶಃ ಒಂದು ದಿನ ನಾನವರನ್ನು ಎದುರಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ಭಾಷೆಯ ಸೂಚನಾ ಬರಹ: ಸಾರ್ವಜನಿಕರು ಆಕ್ರೋಶ

ಕೊಪ್ಪಳ ನಗರದ ಬನ್ನಿಕಟ್ಟೆ ಬಡಾವಣೆಗೆ ಸಮೀಪದ ಪದಕಿ ಲೇಔಟ್‌ನಲ್ಲಿ, ಕೊಪ್ಪಳ ನಗರಸಭೆ ವತಿಯಿಂದ ಎಂದು ಹೇಳಲಾಗಿರುವ ಸೂಚನಾ ಬರಹವೊಂದು ವಿದ್ಯುತ್ ಕಂಬಕ್ಕೆ ಅಂಟಿಸಿರುವುದು ಸಾರ್ವಜನಿಕರಲ್ಲಿ  ತೀವ್ರ ಚರ್ಚೆ ಹಾಗೂ ಆತಂಕಕ್ಕೆ ಕಾರಣವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವವರ ವಿರುದ್ಧ ದಂಡ ವಿಧಿಸುವ ಕುರಿತು ಸೂಚನಾ ಫಲಕ ಅಂಟಿಸುವುದು ಸ್ಥಳೀಯ ಆಡಳಿತದ ಸಾಮಾನ್ಯ ಹಾಗೂ ನಿಯಮಬದ್ಧ ಕ್ರಮವಾಗಿದ್ದರೂ, ಈ ಸ್ಥಳದಲ್ಲಿ ಅಂಟಿಸಿರುವ ಸೂಚನಾ ಬರಹದಲ್ಲಿ ಅಶ್ಲೀಲ ಹಾಗೂ ಅಸಭ್ಯ ಪದಗಳನ್ನು ಬಳಸಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?, ಗಂಡ-ಹೆಂಡ್ತಿ ಜಗಳ ಕೇಸ್​ಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್

ಮಕ್ಕಳು, ಮಹಿಳೆಯರು ಸೇರಿದಂತೆ ಸಾರ್ವಜನಿಕರು ನಿರಂತರವಾಗಿ ಸಂಚರಿಸುವ ಪ್ರದೇಶದಲ್ಲಿ ಈ ರೀತಿಯ ಭಾಷೆಯ ಬಳಕೆ ಅಸಹ್ಯಕರವಾಗಿದೆ ಎಂದು ಸ್ಥಳೀಯ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದ್ದು, ನಗರಸಭೆಯ ಜವಾಬ್ದಾರಿಯುತ ಅಧಿಕಾರಿಗಳು ಈ ಕುರಿತು ಸ್ಪಷ್ಟನೆ ನೀಡಬೇಕು ಹಾಗೂ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 7:08 pm, Sun, 11 January 26

Source link

ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌ – Kannada News | Bellary violence Case: Congress Leaders pre planned And Targets to Sriramulu Says gali janardhan reddy

ಬಳ್ಳಾರಿ, (ಜನವರಿ 11): ಬಳ್ಳಾರಿ ಗಲಭೆ ಪ್ರಕರಣ ಇಡೀ ರಾಜ್ಯದಲ್ಲೇ ಸಂಚಲನ ಸೃಷ್ಟಿಸಿದೆ. ಕಾಂಗ್ರೆಸ್​ ಶಾಸಕ ಭರತ್ ರೆಡ್ಡಿ ಹಾಗೂ ಅವರ ಆಪ್ತ ಸತೀಶ್ ರೆಡ್ಡು ಬಂಧನ ಆಗ್ಬೇಕು ಎಂದು ಜನಾರ್ದನ ರೆಡ್ಡಿ, ರಾಮುಲು ಒತ್ತಾಯ ಮಾಡುತ್ತಿದ್ದಾರೆ. ಆದ್ರೆ ಇದುವರೆಗೂ ಶಾಸಕ ಭರತ್​ ರೆಡ್ಡಿ ಬಂಧನ ಆಗಿಲ್ಲ. ಇನ್ನು ಈ ಪ್ರಕರಣ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿದ್ದು,ಸಿಐಡಿ ಅಧಿಕಾರಿಗಳು ಸಹ ಸ್ಥಳಕ್ಕೆ ಎಂಟ್ರಿ ಕೊಟ್ಟು ತನಿಖೆ ಚುರುಕುಗೊಳಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಜನಾರ್ದನ ರೆಡ್ಡಿ ಸುದ್ದಿಗೋಷ್ಠಿ ನಡೆಸಿ ಗಲಭೆಯ ಮತ್ತಷ್ಟು ವಿಡಿಯೋ ಬಿಡುಗಡೆ ಮಾಡಿದ್ದಾರೆ. ಅಲ್ಲದೇ ಶ್ರೀರಾಮುಲುರನ್ನ ಹೊಡೀರಿ ಎಂದು ಸತೀಶ್ ರೆಡ್ಡಿ ಹೇಳುತ್ತಿದ್ದ. ಪ್ರೀ ಪ್ಲ್ಯಾನ್ಡ್​​​ ಮಾಡಿ ಕಾಂಗ್ರೆಸ್​ನವರು ಈ ಗಲಾಟೆ ಮಾಡಿದ್ದಾರೆ. ಗಲಾಟೆ ವೇಳೆ ಶಾಸಕ ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿ ಹೇಳ್ತಿದ್ದ. ಶ್ರೀರಾಮುಲು ಏನು ದೊಡ್ಡ ಬ್ಯಾಡರ ನಾಯಕನಾ ಅಂತಾ ಹೇಳ್ತಿದ್ರು. ಆ ವಿಡಿಯೋ ಈಗ ಎಲ್ಲಾ ಕಡೆ ಹರಿದಾಡುತ್ತಿದೆ ಎಂದಿದ್ದಾರೆ.

ಇದನ್ನೂ ನೋಡಿ: ಬಳ್ಳಾರಿ ಗಲಭೆ ಖಂಡಿಸಿ ಬಿಜೆಪಿಯಿಂದ ಸಮರ: ಜ 17ರಂದು ಪ್ರತಿಭಟನೆ ಎಂದ ಜನಾರ್ದನ ರೆಡ್ಡಿ

Source link

ನಿರಂತರವಾಗಿ ಕಂಡುಬರುವ ಮಲಬದ್ಧತೆ ಸಮಸ್ಯೆ ಹೊಟ್ಟೆಯ ಕ್ಯಾನ್ಸರ್ ಗೆ ಕಾರಣವಾಗಬಹುದೇ? – Kannada News | Stomach Cancer Causes: Symptoms & Risk Factors

ಹೊಟ್ಟೆಯ ಕ್ಯಾನ್ಸರ್ ಗೂ ಮಲಬದ್ಧತೆಗೂ ಇರುವ ಸಂಬಂಧImage Credit source: Getty Images

ಇತ್ತೀಚಿನ ದಿನಗಳಲ್ಲಿ, ಹೊಟ್ಟೆಯ ಕ್ಯಾನ್ಸರ್ (Stomach Cancer) ಗೆ ಸಂಬಂಧಪಟ್ಟ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಹೊಟ್ಟೆಯಲ್ಲಿರುವ ಜೀವಕೋಶಗಳು ಅಸಹಜವಾಗಿ ಬೆಳೆಯಲು ಪ್ರಾರಂಭಿಸಿದಾಗ ಮತ್ತು ಅದರ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಿದಾಗ ಈ ರೋಗ ಕಂಡುಬರುತ್ತದೆ. ಪರಿಣಾಮವಾಗಿ, ಹೊಟ್ಟೆಯ ಕಾರ್ಯನಿರ್ವಹಣೆಯು ದುರ್ಬಲಗೊಳ್ಳಬಹುದು, ಅಷ್ಟೇ ಅಲ್ಲ, ಇದು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಇದರ ಜೊತೆಗೆ, ಅನೇಕರು ಮಲಬದ್ಧತೆಯ (Constipation) ಸಮಸ್ಯೆಯಿಂದ ಬಳಲುತ್ತಿರುವುದನ್ನು ನೀವು ನೋಡಿರಬಹುದು, ಇದು ಕೂಡ ಹೊಟ್ಟೆಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಸಮಸ್ಯೆ ನಿರಂತರವಾಗಿ ಕಂಡುಬಂದಲ್ಲಿ ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಹಾಗಾದರೆ ಹೊಟ್ಟೆಯ ಕ್ಯಾನ್ಸರ್ ಗೂ ಮಲಬದ್ಧತೆಗೂ ಸಂಬಂಧವಿದೆಯೇ, ಈ ಸಮಸ್ಯೆ ಕಂಡುಬರುವುದಕ್ಕೆ ಕಾರಣವೇನು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಹೊಟ್ಟೆಯ ಕ್ಯಾನ್ಸರ್ ಕಂಡುಬರುವುದಕ್ಕೆ ಕಾರಣವೇನು?

ಲೇಡಿ ಹಾರ್ಡಿಂಗ್ ಆಸ್ಪತ್ರೆಯ ಡಾ. ಎಲ್.ಎಚ್. ​​ಘೋಟೇಕರ್ ಹೇಳುವ ಪ್ರಕಾರ, ಹೊಟ್ಟೆಯ ಜೀವಕೋಶಗಳು ಅಸಹಜವಾಗಿ ಬೆಳೆಯಲು ಪ್ರಾರಂಭಿಸಿದಾಗ ಹೊಟ್ಟೆಯಲ್ಲಿ ಕ್ಯಾನ್ಸರ್ ಕಂಡುಬರುತ್ತದೆ. ಈ ಜೀವಕೋಶಗಳು ತಮ್ಮ ಸಾಮಾನ್ಯ ಕಾರ್ಯಗಳನ್ನು ನಿರ್ವಹಿಸುವುದಿಲ್ಲ, ಅದಾದ ಬಳಿಕ, ಕ್ರಮೇಣ ಹೊಟ್ಟೆಯ ಹತ್ತಿರದ ಅಂಗಗಳನ್ನು ಹಾನಿಗೊಳಿಸಬಹುದು. ಈ ಬೆಳವಣಿಗೆಗೆ ಹಲವಾರು ಕಾರಣಗಳಿವೆ. ವಯಸ್ಸಾಗುವುದು ಮತ್ತು ಕುಟುಂಬದ ಇತಿಹಾಸವಿರುವುದು ಸೇರಿದಂತೆ ಇನ್ನಿತರ ಕಾರಣಗಳು ಇಂತಹ ಅಪಾಯವನ್ನು ಹೆಚ್ಚಿಸುತ್ತದೆ. ಇದೆಲ್ಲದರ ಜೊತೆಗೆ, ಎಣ್ಣೆಯುಕ್ತ, ಮಸಾಲೆಯುಕ್ತ ಮತ್ತು ಸಂಸ್ಕರಿಸಿದ ಆಹಾರಗಳನ್ನು ನಿರಂತರವಾಗಿ ಸೇವಿಸುವುದರ ಜೊತೆಗೆ ಧೂಮಪಾನ ಮತ್ತು ಮದ್ಯಪಾನವು ಹೊಟ್ಟೆಯ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹೊಟ್ಟೆಯಲ್ಲಿರುವ ಎಚ್. ಪೈಲೋರಿ ಬ್ಯಾಕ್ಟೀರಿಯಾದಂತಹ ಸೋಂಕುಗಳು ಸಹ ಕ್ಯಾನ್ಸರ್‌ಗೆ ಕಾರಣವಾಗಬಹುದು. ನಿಯಮಿತವಾಗಿ ಹೊಟ್ಟೆ ತಪಾಸಣೆ ಮಾಡದಿರುವುದು ಅಥವಾ ಆರಂಭಿಕ ಲಕ್ಷಣಗಳನ್ನು ನಿರ್ಲಕ್ಷಿಸುವುದರಿಂದ ರೋಗವು ತ್ವರಿತವಾಗಿ ಪ್ರಗತಿ ಹೊಂದಲು ಅನುವು ಮಾಡಿಕೊಡುತ್ತದೆ. ಆದ್ದರಿಂದ, ಸಮಯಕ್ಕೆ ಸರಿಯಾಗಿ ತಪಾಸಣೆ ಮಾಡುವುದು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ.

ಮಲಬದ್ಧತೆ ಹೊಟ್ಟೆಯ ಕ್ಯಾನ್ಸರ್‌ಗೆ ಕಾರಣವಾಗಬಹುದೇ?

ಸಾಮಾನ್ಯವಾಗಿ ಮಲಬದ್ಧತೆ ಹೊಟ್ಟೆಯ ಸಾಮಾನ್ಯ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ದೀರ್ಘಕಾಲದ ಮಲಬದ್ಧತೆ ಹೊಟ್ಟೆಗೆ ಒತ್ತಡವನ್ನುಂಟು ಮಾಡುತ್ತದೆ ಮತ್ತು ಆಂತರಿಕ ಸೋಂಕುಗಳ ಅಪಾಯವನ್ನು ಹೆಚ್ಚಿಸುತ್ತದೆ. ಮಲಬದ್ಧತೆಯಿಂದಾಗಿ, ಆಹಾರವು ದೀರ್ಘಕಾಲದವರೆಗೆ ಹೊಟ್ಟೆಯಲ್ಲಿ ಉಳಿಯುತ್ತದೆ, ಇದು ಹೊಟ್ಟೆಯ ಜೀವಕೋಶಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲ, ನಿರಂತರ ಮಲಬದ್ಧತೆ ಅನಿಲ, ಅಜೀರ್ಣ ಮತ್ತು ಉಬ್ಬರದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾಗಿ ಮಲಬದ್ಧತೆ ನೇರವಾಗಿ ಹೊಟ್ಟೆಯ ಕ್ಯಾನ್ಸರ್‌ಗೆ ಕಾರಣವಾಗದಿದ್ದರೂ, ಹೊಟ್ಟೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳನ್ನು ಉಲ್ಬಣಗೊಳಿಸುವ ಮೂಲಕ ಅಪಾಯಗಳನ್ನು ಹೆಚ್ಚಿಸುತ್ತದೆ. ಆದ್ದರಿಂದ, ಮಲಬದ್ಧತೆಯನ್ನು ನಿರ್ಲಕ್ಷಿಸಬೇಡಿ.

ಇದನ್ನೂ ಓದಿ: ಈ ಆಹಾರಗಳ ಸೇವನೆ ಮಾಡಿದರೆ ಮಲಬದ್ಧತೆ ಕಡಿಮೆಯಾಗಿ ಹೊಟ್ಟೆ ಕ್ಲೀನ್ ಆಗುತ್ತೆ

ಹೊಟ್ಟೆಯ ಆರೋಗ್ಯಕ್ಕೆ ಮುಖ್ಯವಾಗಿ ಸೇವಿಸಬೇಕಾದ ಆಹಾರಗಳು:

  • ತರಕಾರಿಗಳು, ಹಣ್ಣುಗಳು ಮತ್ತು ಧಾನ್ಯಗಳಂತಹ ಫೈಬರ್ ಭರಿತ ಆಹಾರವನ್ನು ಸೇವಿಸಿ.
  • ದಿನವಿಡೀ ಸಾಕಷ್ಟು ನೀರು ಕುಡಿಯಿರಿ.
  • ಲಘು ವ್ಯಾಯಾಮದಂತಹ ನಿಯಮಿತ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ.
  • ಸಂಸ್ಕರಿಸಿದ, ಎಣ್ಣೆಯುಕ್ತ ಮತ್ತು ಮಸಾಲೆಯುಕ್ತ ಆಹಾರ ಸೇವನೆ ಮಾಡುವುದನ್ನು ತಪ್ಪಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಿನಕ್ಕೆ ಕೇವಲ 20 ನಿಮಿಷ ಕಪಾಲಭಾತಿ ಮಾಡಿ ಆರೋಗ್ಯ ಕಾಪಾಡಿ: ಬಾಬಾ ರಾಮದೇವ್ ಸಲಹೆ – Kannada News | Baba Ramdev recommends Kapalabhati pranayama everyday 20 30 mins for healthier life

ಇಂದಿನ ವೇಗದ ಜೀವನದಲ್ಲಿ, ಕಳಪೆ ಆಹಾರ, ಒತ್ತಡ ಮತ್ತು ದೈಹಿಕ ಚಟುವಟಿಕೆಯ ಕೊರತೆಯಿಂದಾಗಿ, ಜನರು ಸಣ್ಣಪುಟ್ಟ ಕಾಯಿಲೆಗಳಿಂದ ಹಿಡಿದು ಗಂಭೀರ ಸಮಸ್ಯೆಗಳವರೆಗೆ ಬಳಲುತ್ತಿದ್ದಾರೆ. ಈ ಸ್ಥಿತಿಯಲ್ಲಿ, ಯೋಗ ಮತ್ತು ಪ್ರಾಣಾಯಾಮವನ್ನು ಆರೋಗ್ಯಕರ ಜೀವನ ನಡೆಸಲು ಸುಲಭ ಮತ್ತು ಪರಿಣಾಮಕಾರಿ ಮಾರ್ಗವೆಂದು ಪರಿಗಣಿಸಲಾಗುತ್ತದೆ. ಒಬ್ಬ ವ್ಯಕ್ತಿಯು ಪ್ರತಿದಿನ ತನ್ನ ದೇಹಕ್ಕೆ ಸ್ವಲ್ಪ ಸಮಯವನ್ನು ಮೀಸಲಿಟ್ಟರೆ, ಔಷಧಿಗಳ ಅಗತ್ಯ ಕಡಿಮೆಯಾಗುತ್ತದೆ ಎಂದು ಯೋಗ ಗುರು ಬಾಬಾ ರಾಮದೇವ್ (Baba Ramdev) ಯಾವಾಗಲೂ ಒತ್ತಿ ಹೇಳುತ್ತಿರುತ್ತಾರೆ. ನೀವು ಆಗಾಗ್ಗೆ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರೆ, ಬಾಬಾ ರಾಮದೇವ್ ಕೆಲ ಆಸನಗಳನ್ನು ಶಿಫಾರಸು ಮಾಡುತ್ತಾರೆ. ಕಪಾಲಭಾತಿಯೂ ಕೂಡ ಅವರು ಶಿಫಾರಸು ಮಾಡುವ ಒಂದು ಪ್ರಾಣಾಯಾಮ ಕ್ರಮ.

ಕಪಾಲಭಾತಿ ಮಾಡುವ ಸರಿಯಾದ ವಿಧಾನವನ್ನು ಬಾಬಾ ತಿಳಿಸಿಕೊಟ್ಟಿದ್ದಾರೆ. ಪ್ರತಿದಿನ 20-30 ನಿಮಿಷಗಳ ಕಾಲ ಇದನ್ನು ಅಭ್ಯಾಸ ಮಾಡುವುದರಿಂದ ವಿವಿಧ ಕಾಯಿಲೆಗಳನ್ನು ಗುಣಪಡಿಸಬಹುದು. ಅದರ ವಿವರ ಇಲ್ಲಿದೆ.

ಪ್ರತಿದಿನ ಕಪಾಲಭಾತಿ ಪ್ರಾಣಾಯಾಮ

ಬಾಬಾ ರಾಮದೇವ್ ತಮ್ಮ ವೀಡಿಯೊಗಳಲ್ಲಿ ಯೋಗಾಸನಗಳನ್ನು ಮಾಡುವ ವಿಧಾನ ಮತ್ತು ಅದರ ಪ್ರಯೋಜನಗಳನ್ನು ಆಗಾಗ್ಗೆ ವಿವರಿಸುತ್ತಾರೆ. ಪ್ರತಿದಿನ 20-30 ನಿಮಿಷಗಳ ಕಾಲ ಕಪಾಲಭಾತಿ ಪ್ರಾಣಾಯಾಮವನ್ನು ಅಭ್ಯಾಸ ಮಾಡುವುದರಿಂದ ಅನೇಕ ಕಾಯಿಲೆಗಳನ್ನು ದೂರವಿಡಬಹುದು ಎಂದು ಒಂದು ವೀಡಿಯೊದಲ್ಲಿ ವಿವರಿಸುತ್ತಾರೆ. ಅವರ ಪ್ರಕಾರ, ಈ ಅಭ್ಯಾಸವು ದೇಹವನ್ನು ಆಂತರಿಕವಾಗಿ ಶುದ್ಧೀಕರಿಸುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಈ ಪ್ರಾಣಾಯಾಮವು ಹೊಟ್ಟೆ, ಯಕೃತ್ತು, ಮೇದೋಜ್ಜೀರಕ ಗ್ರಂಥಿ ಮತ್ತು ಕರುಳಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ದೇಹದಲ್ಲಿ ಸಂಗ್ರಹವಾದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಪತಂಜಲಿ ದಿವ್ಯ ಯೌವನಾಮೃತ ವಟಿ ಔಷಧ ಯಾರಿಗೆ ಉಪಯುಕ್ತ? ಇದರ ಪ್ರಯೋಜನ, ಬಳಕೆ ಇತ್ಯಾದಿ ವಿವರ

ಕಪಾಲಭಾತಿಯಿಂದ ಪ್ರಯೋಜನಗಳು

ಬೊಜ್ಜು ನಿವಾರಣೆ: ಕಪಾಲಭಾತಿ ಪ್ರಾಣಾಯಾಮವನ್ನು ಪ್ರತಿದಿನ ಅಭ್ಯಾಸ ಮಾಡುವುದರಿಂದ ಹೊಟ್ಟೆಯ ಕೊಬ್ಬು ಕಡಿಮೆಯಾಗುತ್ತದೆ ಮತ್ತು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಬಾಬಾ ರಾಮದೇವ್ ಹೇಳುತ್ತಾರೆ. ಈ ಪ್ರಾಣಾಯಾಮದಲ್ಲಿ ಉಸಿರು ವೇಗವಾಗಿ ಹೊರಹಾಕುವಾಗ ಹೊಟ್ಟೆಯನ್ನು ಒಳಗೆ ಎಳೆಯಲಾಗುತ್ತದೆ. ಇದರಿಂದ ಫ್ಯಾಟ್ ಬರ್ನ್ ಮಾಡಲು ಸಹಾಯ ಮಾಡುತ್ತದೆ. ಆದಾಗ್ಯೂ, ಇದನ್ನು ಅಭ್ಯಾಸ ಮಾಡುವಾಗ ಸಮತೋಲಿತ ಆಹಾರ ಸೇವನೆ ಸಹ ಮುಖ್ಯವಾಗಿದೆ.

ಮಧುಮೇಹವನ್ನು ನಿಯಂತ್ರಣ: ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಕಪಾಲಭಾತಿ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ವಾಸ್ತವವಾಗಿ, ಕಪಾಲಭಾತಿ ಮೇದೋಜ್ಜೀರಕ ಗ್ರಂಥಿಯ ಬೀಟಾ ಕೋಶಗಳನ್ನು ಸಕ್ರಿಯಗೊಳಿಸುತ್ತದೆ, ಇದು ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಸಮತೋಲನವನ್ನು ಕಾಪಾಡಿಕೊಳ್ಳುತ್ತದೆ.

ಮಲಬದ್ಧತೆ ಮತ್ತು ಗ್ಯಾಸ್ಟ್ರೈಟಿಸ್: ಈ ಪ್ರಾಣಾಯಾಮವನ್ನು ನಿಯಮಿತವಾಗಿ ಮಾಡುವುದರಿಂದ ಜೀರ್ಣಾಂಗ ವ್ಯವಸ್ಥೆ ಬಲಗೊಳ್ಳುತ್ತದೆ. ಕಿಬ್ಬೊಟ್ಟೆಯ ಸ್ನಾಯುಗಳನ್ನು ಸಕ್ರಿಯಗೊಳಿಸುವುದರಿಂದ ಮತ್ತು ಪಚನಾಗ್ನಿಯನ್ನು ಹೆಚ್ಚಿಸುವುದರಿಂದ ಮಲಬದ್ಧತೆ ಮತ್ತು ಆ್ಯಸಿಡಿಟಿ ನಿವಾರಣೆ ಆಗುತ್ತದೆ. ಇದು ಗ್ಯಾಸ್ ಮತ್ತು ಟಾಕ್ಸಿಕ್ ಅನ್ನು ನಿವಾರಿಸಿ, ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ಕರುಳಿನ ಚಲನೆಯನ್ನು ಸುಗಮಗೊಳಿಸುತ್ತದೆ.

ಕೊಬ್ಬಿನ ಪಿತ್ತಜನಕಾಂಗ/ಯಕೃತ್ತಿನ ಸಮಸ್ಯೆ ನಿವಾರಣೆ: ಕಪಾಲಭಾತಿ ಅಭ್ಯಾಸವು ಕೊಬ್ಬಿನ ಪಿತ್ತಜನಕಾಂಗ ಮತ್ತು ಯಕೃತ್ತಿನ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕಪಾಲಭಾತಿ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ, ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ದೇಹದಿಂದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಪತಂಜಲಿ ದಿವ್ಯ ದಂತಮಂಜನ್ ಟೂತ್ ಪೇಸ್ಟ್; ಹಲ್ಲಿನ ಸಮಸ್ಯೆಗಳನ್ನು ನಿವಾರಿಸುವ ಆಯುರ್ವೇದ ಉತ್ಪನ್ನ

ಕಪಾಲಭಾತಿ ಪ್ರಾಣಾಯಾಮ ಮಾಡುವ ಸರಿಯಾದ ಮಾರ್ಗ

ಕಪಾಲಭಾತಿ ಪ್ರಾಣಾಯಾಮ ಮಾಡಲು, ಮೊದಲು ನಿಮ್ಮ ಬೆನ್ನನ್ನು ನೇರವಾಗಿರುವಂತೆ ನೆಲದ ಮೇಲೆ ಕುಳಿತುಕೊಳ್ಳಿ. ಆಳವಾದ ಉಸಿರನ್ನು ತೆಗೆದುಕೊಳ್ಳಿ, ನಂತರ ಉಸಿರನ್ನು ಬಲವಾಗಿ ವೇಗವಾಗಿ ಬಿಡುತ್ತಾ ನಿಮ್ಮ ಹೊಟ್ಟೆಯನ್ನು ಒಳಗೆ ಎಳೆದುಕೊಳ್ಳಿ. ನಂತರ ಸಹಜವಾಗಿ ಉಸಿರು ಒಳಗೆಳೆದುಕೊಳ್ಳಿ. ಈ ಪ್ರಕ್ರಿಯೆಯನ್ನು 20-25 ಬಾರಿ ಪುನರಾವರ್ತಿಸಿ.

ಇನ್ನಷ್ಟು ಆರೋಗ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

IND vs NZ: ನ್ಯೂಜಿಲೆಂಡ್ ತಂಡದಲ್ಲಿ ತಮಿಳುನಾಡು ಮೂಲದ ಆಟಗಾರ; ರಜನಿಯ ಬಿಗ್ ಫ್ಯಾನ್

Source link

ಸೋಮನಾಥಪುರದಲ್ಲಿ ಪ್ರಧಾನಿ ಮೋದಿ ಶೌರ್ಯಯಾತ್ರೆ; 13ನೇ ಶತಮಾನದ ಹುತಾತ್ಮಕರಿಗೆ ಗೌರವ; ಡೋಲು ಡಮರುಗ ಸದ್ದು

Source link