Category Archives: Blog

Your blog category

Video: ಇದು ಟೆಕ್ನಾಲಜಿ ಎಫೆಕ್ಟ್; ಸ್ಮಾರ್ಟ್‌ ವಾಚ್‌ನಲ್ಲೇ ಕ್ಯೂಆರ್ ಕೋಡ್ ಅಳವಡಿಸಿಕೊಂಡ ಬೆಂಗಳೂರಿನ ಆಟೋ ಡ್ರೈವರ್‌ – Kannada News | Bengaluru: Auto driver receives money from passengers by showing QR code on smartwatch

ಬೆಂಗಳೂರು, ಜೂನ್ 17: ಆಧುನಿಕ ತಂತ್ರಜ್ಞಾನಕ್ಕೆ ಒಗ್ಗಿಕೊಂಡಿರುವ ಜನರು ಟೆಕ್ನಾಲಜಿಯನ್ನು ವಿಭಿನ್ನವಾಗಿ ಬಳಸುತ್ತಾರೆ. ಈ ಆಟೋ ಚಾಲಕನ ಐಡಿಯಾ ಮಾತ್ರ ವಿಭಿನ್ನವಾಗಿದೆ. ಹೌದು, ಆಟೋದಲ್ಲಿ ಸೀಟಿನ ಹಿಂದೆ ಕ್ಯೂಆರ್ ಕೋಡ್ ಸ್ಟಿಕ್ಕರ್ ಅಳವಡಿಸಿಕೊಂಡಿರುವುದನ್ನು ನೋಡಿರುತ್ತೀರಿ. ಆದರೆ ತನ್ನ ಆಟೋದಲ್ಲಿ ಡಿಜಿಟಲ್ ಪೇಮೆಂಟ್ ಗಾಗಿ ಹೊಸ ಐಡಿಯಾವನ್ನು ಕಂಡುಕೊಂಡಿದ್ದಾನೆ. ಬೆಂಗಳೂರಿನ (Bengaluru) ಈ ಆಟೋ ಚಾಲಕನ ಕೈಯಲ್ಲಿರುವ ಸ್ಮಾರ್ಟ್ ವಾಚ್ ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ. ಸ್ಮಾರ್ಟ್‌ವಾಚ್‌ನ ಸ್ಕ್ರೀನ್ ಮೇಲೆ ಕ್ಯೂಆರ್ ಕೋಡ್‌ನ್ನು ಅಳವಡಿಸಿಕೊಂಡಿದ್ದಾನೆ. ಈ ಪೋಸ್ಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಈ ಆಟೋ ಚಾಲಕನ ಬುದ್ಧಿವಂತಿಕೆಯನ್ನು ಮೆಚ್ಚಿಕೊಂಡಿದ್ದಾರೆ.

ಹೇಮಂತ್ (Hemant) ಎಂಬ ಬಳಕೆದಾರರು ತಮ್ಮ ಎಕ್ಸ್ ಖಾತೆಯಲ್ಲಿ ಬೆಂಗಳೂರಿನ ಆಟೋಚಾಲಕ ಸ್ಮಾರ್ಟ್ ಟ್ರಿಕ್ಸ್ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನಲ್ಲಿ ಇಂದು ಇಂದಿರಾ ನಗರದಿಂದ ಕೋರಮಂಗಲಕ್ಕೆ ಆಟೋದಲ್ಲಿ ಬಂದೆ. ಆಟೋದಿಂದ ಇಳಿಯುವ ವೇಳೆಗೆ ಕ್ಯೂಆರ್ ಕೋಡ್ ಕೇಳಿದೆ. ಆಟೋ ಚಾಲಕ ತನ್ನ ಕೈಯನ್ನು ಎತ್ತಿ ಹಿಡಿದ. ಕ್ಯೂಆರ್ ಕೋಡ್ ಆತನ ಸ್ಮಾರ್ಟ್‌ವಾಚ್‌ನಲ್ಲಿದ್ದನ್ನು ಕಂಡು ಶಾಕ್ ಅದೆ. ಚಾಲಕನ ಸ್ಮಾರ್ಟ್‌ ಐಡಿಯಾಕ್ಕೆ ಫಿದಾ ಆದೆ ಎಂದು ಬರೆದುಕೊಂಡಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ

ಇದನ್ನೂ ಓದಿ: ಎಚ್ಎಸ್ಆರ್ ಲೇಔಟ್‌ನ 1BHK ನಲ್ಲಿ ವಾಸಿಸುವ ಮಹಿಳೆಯ ತಿಂಗಳ ಖರ್ಚು ಎಷ್ಟು ಗೊತ್ತಾ?

ಈ ಪೋಸ್ಟ್ ಎಂಟು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಬೆಂಗಳೂರಿನ ಆಟೋ ಚಾಲಕರು ಯಾವುದರಲ್ಲೂ ಕಡಿಮೆಯಿಲ್ಲ ಎಂದಿದ್ದಾರೆ. ಇನ್ನೊಬ್ಬರು, ಸ್ಮಾರ್ಟ್ ವಾಚ್ ಗೆ ಕ್ಯೂ ಆರ್ ಕೋಡ್ ಅಳವಡಿಸಿಕೊಂಡದ್ದನ್ನು ನೋಡಿ ಅಚ್ಚರಿಯಾಯ್ತು. ತಂತ್ರಜ್ಞಾನವನ್ನು ಎಲ್ಲರೂ ಒಳ್ಳೆಯದ್ದಕ್ಕೆ ಬಳಸಿಕೊಳ್ಳಲಿ ಎಂದು ಹೇಳಿದ್ದಾರೆ. ಮತ್ತೊಬ್ಬರು, ಸ್ಮಾರ್ಟ್ ವಾಚ್ ಗೆ ಕ್ಯೂ ಆರ್ ಕೋಡ್ ಅಳವಡಿಸಿಕೊಳ್ಳಲು ಎಷ್ಟು ಖರ್ಚು ಆಯ್ತು ಎಂದು ಕೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೇರೆಯವರ ಖಾಸಗಿ ಚಿತ್ರ,ವಿಡಿಯೋ ಶೇರ್​ ಮಾಡಿದ್ರೆ ಕೇಸ್ ಫಿಕ್ಸ್: ಎಫ್ಐಆರ್ ಮಾರ್ಗಸೂಚಿ ಹೀಗಿದೆ – Kannada News | Karnataka police mandate FIRs in cases of non consensual sharing of intimate images, DG IGP Order Details

Dr. M. A. Saleem

ಬೆಂಗಳೂರು, (ಜೂನ್ 17): ಬೇರೆಯವರ ಖಾಸಗಿ ಚಿತ್ರ, ವಿಡಿಯೋ ವೈರಲ್  ಮಾಡುವವರಿಗೆ ತಕ್ಕ ಶಾಸ್ತಿ ಮಾಡಲು ಗೃಹ ಇಲಾಖೆ ಮುಂದಾಗಿದೆ.  ವ್ಯಕ್ತಿಯ ಅನುಮತಿ ಪಡೆದುಕೊಳ್ಳದೆ ಅವರ ಖಾಸಗಿ ವಿಡಿಯೋ ಹಾಗೂ ಫೋಟೋಗಳನ್ನು ಪ್ರಕಟಿಸುವುದು ಕಾನೂನು ಪ್ರಕಾರ ಅಪರಾಧವಾಗಲಿದೆ. ಈ ಸಂಬಂಧಿಸಿದಂತೆ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ ಡಾ.ಎಂ.ಎ.ಸಲೀಂ ( DG-IGP Dr.M.A.Saleem) ಅವರು ಆದೇಶವನ್ನು ಹೊರಡಿಸಿದ್ದಾರೆ. ಅಲ್ಲದೆ, ವಿಸ್ತತವಾದ ಮಾರ್ಗಸೂಚಿಯನ್ನು ಹೊರಡಿಸಿದ್ದು, ಪೊಲೀಸರು ನಾನಾ ಕಾರಣಗಳನ್ನು ನೀಡಿ ಎಫ್‌ ಐ ಆರ್ ದಾಖಲು ಮಾಡಲು ವಿಳಂಬ ಮಾಡಿದರೆ ಸೂಕ್ತ ರೀತಿಯ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.

ಮುಖ್ಯಾಂಶಗಳು

  • ಬೇರೆಯವರ ಖಾಸಗಿ ಚಿತ್ರ ಶೇರ್​ ಮಾಡಿದ್ರೆ FIR​ ದಾಖಲಿಸಲು ಸೂಚನೆ
  • ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಆದೇಶ
  • ಇಂತಹ ದೂರುಗಳನ್ನು ದಾಖಲಿಸಲು ಪೊಲೀಸರು ನಿರಾಕರಿಸುವಂತಿಲ್ಲ
  • ಖಾಸಗಿ ದೃಶ್ಯ ಚಿತ್ರೀಕರಣಕ್ಕೆ ಮೊದಲು ಒಪ್ಪಿದ್ದರು ಅನ್ನೋ ಕಾರಣ ಕೊಟ್ಟು
    ಪೊಲೀಸರು ದೂರು ಸ್ವೀಕರಿಸದೇ ಇರಬಾರದು

ಸಂತ್ರಸ್ತರು ಮೊದಲು ಖಾಸಗಿ ದೃಶ್ಯ ಚಿತ್ರೀಕರಣಕ್ಕೆ ಒಪ್ಪಿದ್ದರು ಎಂದ ಮಾತ್ರಕ್ಕೆ ಇಂತ ಕಾರಣ ಕೊಟ್ಟು ದೂರು ಸ್ವೀಕರಿಸದೇ ಇರಬಾರದು. ಚಿತ್ರೀಕರಣದ ಒಪ್ಪಿಗೆಗೂ ಮತ್ತು ಹಂಚಿಕೆ ಅಥವಾ ಪ್ರಸಾರದ ಒಪ್ಪಿಗೆಗೂ ವ್ಯತ್ಯಾಸವಿದೆ. ಇದು ಕಾನೂನು ಪ್ರಕಾರ ಸಂಜ್ಞೆಯ ಅಪರಾಧವಾಗುತ್ತದೆ. ಹೀಗಾಗಿ ಬೇರೆಯವರ ಖಾಸಗಿ ಚಿತ್ರ ವೈರಲ್ ಮಾಡುವವರ ವಿರುದ್ಧ ಎಫ್​​​ಐಆರ್ ದಾಖಲಿಸುವಂತೆ ಡಾ.ಎಂ.ಎ.ಸಲೀಂ ಆದೇಶದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಸಿಎಂ ಡಿಕೆಶಿ ಸೂಚನೆ ಬೆನ್ನಲ್ಲೇ ಪ್ರತಿ ಪೊಲೀಸ್ ಠಾಣೆಯಲ್ಲಿ ರೌಡಿ ಸ್ಕ್ವಾಡ್ ರಚನೆಗೆ ಆದೇಶ

ಆಪ್ತ ವಿಷಯಗಳನ್ನು ಬಳಸಿಕೊಂಡು ಹಣ, ಲೈಂಗಿಕ ಅನುಕೂಲ ಅಥವಾ ಬೇರೆ ಲಾಭಕ್ಕಾಗಿ ಬೆದರಿಕೆ, ಸುಲಿಕೆ ನಡೆಸುತ್ತಿರುವ ಪ್ರಕರಣಗಳ ಹಿನ್ನೆಲೆಯಲ್ಲಿ ಈ ಮಹತ್ವದ ಆದೇಶ ಮಾಡಲಾಗಿದೆ. ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಬಿಎನ್‌ಎಸ್ -2023ರ ಅಡಿಯಲ್ಲಿ ಸುಲಿಗೆ ಮತ್ತು ಕ್ರಿಮಿನಲ್ ಬೆದರಿಕೆ ಸಂಬಂಧಿತ ಸೆಕ್ಷನ್ ಗಳನ್ನು ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ದಾಖಲು ಮಾಡಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಇಂತಹ ಪ್ರಕರಣಗಲ್ಲಿ ಎಲ್ಲಾ ಡಿಜಿಟಲ್ ಸಾಕ್ಷ್ಯವನ್ನು ಗೌಪ್ಯವಾಗಿ ಸಂರಕ್ಷಿಸಬೇಕು. ಅಷ್ಟೇ ಅಲ್ಲದೆ, ಸಂತ್ರಸ್ತರ ಗುರುತು ಗೌಪ್ಯವಾಗಿ ಇರುವಂತೆ ನೋಡಿಕೊಳ್ಳಬೇಕಾಗಿದೆ. ಜೊತೆಗೆ ದೂರುದಾರರನ್ನು ಸೂಕ್ಷ್ಮವಾಗಿ ನಡೆಸಿಕೊಳ್ಳುವಂತೆಯೂ ಮಾರ್ಗಸೂಚಿಯಲ್ಲಿ ಉಲ್ಲೇಖ ಮಾಡಲಾಗಿದೆ. ದೂರುದಾರರನ್ನು ಅವಮಾನ ಮಾಡುವುದನ್ನು ತಪ್ಪಿಸಬೇಕು ಹಾಗೂ ಸಂತ್ರಸ್ತೆಯ ದೂರನ್ನು ಮಹಿಳಾ ಅಧಿಕಾರಿಯೇ ದಾಖಲಿಸಬೇಕು ಎಂದು ಮಾರ್ಗಸೂಚಿಯಲ್ಲಿ ನಿರ್ದೇಶನ ನೀಡಲಾಗಿದೆ.

ಆದೇಶದಲ್ಲೇನಿದೆ?

ಇತ್ತೀಚಿನ ದಿನಗಳಲ್ಲಿ ದೂರುಗಳನ್ನು ದಾಖಲಿಸುವಲ್ಲಿ ವಿಳಂಬ ಅಥವಾ ನಿರಾಕರಣೆ ಮಾಡಿರುವುದು ಗಮನಕ್ಕೆ ಬಂದ ಹಿನ್ನಲೆಯಲ್ಲಿ, ಈ ಆದೇಶದಲ್ಲಿ ಚಿತ್ರೀಕರಣಕ್ಕೆ ಒಪ್ಪಿಗೆ ನೀಡಿದ್ದರೆ ಪ್ರಸಾರಕ್ಕೂ ಒಪ್ಪಿಗೆ ನೀಡಿದಂತೆ ಅಲ್ಲ ಎಂಬ ಎಂಬುದನ್ನು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಒಬ್ಬ ವ್ಯಕ್ತಿ ಚಿತ್ರ ಸೆರೆಹಿಡಿಯಲು ಒಪ್ಪಿಗೆ ನೀಡಿದ್ದರೂ ಅದನ್ನು ಹಂಚಲು ಅಥವಾ ಪ್ರಸಾರ ಮಾಡಲು ಒಪ್ಪಿಗೆ ನೀಡದಿದ್ದರೆ ಅದು ಕಾಗ್ನಿಜೆನ್ಸ್ ಅಪರಾಧವಾಗಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಭಾರತೀಯ ನ್ಯಾಯ ಸಂಹಿತೆ 2023ರ ಸೆಕ್ಷನ್ 77ರಂತೆ ಗೌಪ್ಯತೆ ಉಲ್ಲಂಘನೆಗೆ ಸಂಬಂಧಿಸಿದ ವಿಧಿಗಳು, ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಸೆಕ್ಷನ್ 66(ಇ), 67 ಮತ್ತು 67(ಎ)ಗಳನ್ನು ಅಳವಡಿಸಬೇಕು ಎಂದು ಸೂಚಿಸಲಾಗಿದೆ. ಮಹಿಳಾ ಸಂತ್ರಸ್ತರಿದ್ದಲ್ಲಿ 77ರ ವಿಧಿಯ ಜೊತೆಗೆ ಐಟಿ ಕಾಯ್ದೆಯ ಸೆಕ್ಷನ್ ಗಳನ್ನು ಸೇರಿಸಿ ಎಫ್‌ಐಆರ್ ಕಡ್ಡಾಯವಾಗಿ ನೋಂದಣಿ ಮಾಡಬೇಕೆಂದು ನಿರ್ದೇಶಿಸಲಾಗಿದೆ.

ಬ್ಲಾಕ್‌ಮೇಲ್ ವೀಡಿಯೊಗಳು, ಸೆಕ್ಸ್ಟೋರ್ಷನ್, ರಿವೆಂಜ್ ಪೋರ್ನೋಗ್ರಫಿ ಮುಂತಾದ ಪ್ರಕರಣಗಳಲ್ಲಿ ತಕ್ಷಣ ಎಫ್‌ಐಆರ್ ದಾಖಲಿಸಬೇಕು. ಪೀಡಿತರು ಮೊದಲು ಚಿತ್ರೀಕರಣಕ್ಕೆ ಒಪ್ಪಿಗೆ ನೀಡಿದ್ದರು ಎಂಬ ಕಾರಣಕ್ಕೆ ದೂರು ನಿರಾಕರಿಸಬಾರದು. ಅಪರಾಧ ಸ್ಥಳೀಯ ವ್ಯಾಪ್ತಿಯ ಹೊರಗೆ ನಡೆದಿದ್ದರೆ ಝೀರೋ ಎಫ್‌ಐಆರ್ ದಾಖಲಿಸಿ ಸಂಬಂಧಿತ ಠಾಣೆಗೆ ವರ್ಗಾಯಿಸಬೇಕು/

ಅಪರಾಧ ವಿಷಯವನ್ನು ತಕ್ಷಣ ತೆಗೆದುಹಾಕಲು ಐಟಿ ನಿಯಮಗಳ ಪ್ರಕಾರ ಸಂಬಂಧಿತ ಸಂಸ್ಥೆಗಳಿಗೆ ನೋಟಿಸ್ ನೀಡಬೇಕು ಮತ್ತು ಎಲ್ಲ ಡಿಜಿಟಲ್ ಸಾಕ್ಷ್ಯಗಳನ್ನು ಕಾನೂನುಬದ್ಧವಾಗಿ ಸಂರಕ್ಷಿಸಬೇಕು. ಪೀಡಿತರ ಗುರುತು ಗೌಪ್ಯವಾಗಿರಬೇಕು, ಮಹಿಳಾ ಸಂತ್ರಸ್ತೆಯ ದೂರುಗಳನ್ನು ಮಹಿಳಾ ಅಧಿಕಾರಿಗಳು ದಾಖಲಿಸುವಂತೆ ಸೂಚಿಸಲಾಗಿದೆ.

ತನಿಖಾಧಿಕಾರಿಗಳು ಸೈಬರ್ ಕ್ರೈಂ ಘಟಕಗಳೊಂದಿಗೆ ಸಮನ್ವಯತೆ ಸಾಧಿಸಿ ತಾಂತ್ರಿಕ ತನಿಖೆ ಹಾಗೂ ಫೋರೆನ್ಸಿಕ್ ವಿಶ್ಲೇಷಣೆ ನಡೆಸಬೇಕು. ಎಫ್‌ಐಆರ್ ನೋಂದಣಿ ಮಾಡದಿರುವುದು ಅಥವಾ ಪೂರ್ವಾನುಮತಿ ಎಂಬ ತಪ್ಪು ಕಾರಣದಿಂದ ವಿಳಂಬ ಮಾಡಿದರೆ ಸಂಬಂಧಿತ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಡಿಜಿ-ಐಜಿಪಿ ಡಾ.ಎಂ.ಎ.ಸಲೀಂ ಆದೇಶದಲ್ಲಿ ಎಚ್ಚರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಕಲ್ಕಿ 2’ ಚಿತ್ರದಲ್ಲಿ ಆಲಿಯಾ ಭಟ್, ಸಾಯಿ ಪಲ್ಲವಿ ನಟಿಸ್ತಾರಾ? ಉತ್ತರಿಸಿದ ನಿರ್ದೇಶಕ ನಾಗ್ ಅಶ್ವಿನ್ – Kannada News | Kalki 2898 AD director Nag Ashwin clarifies rumours on Alia Bhatt Sai Pallavi joining Kalki 2

‘ರೆಬೆಲ್ ಸ್ಟಾರ್’ ಪ್ರಭಾಸ್ ನಟನೆಯ, ನಾಗ್ ಅಶ್ವಿನ್ ನಿರ್ದೇಶನದ ‘ಕಲ್ಕಿ 2898 AD’ ಚಿತ್ರದ ಸೀಕ್ವೆಲ್ (Kalki 2) ಕುರಿತು ದಿನಕ್ಕೊಂದು ಹೊಸ ಗಾಸಿಪ್‌ಗಳು ಹುಟ್ಟಿಕೊಳ್ಳುತ್ತಿವೆ. ಚಿತ್ರದಿಂದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹೊರನಡೆದ ಬಳಿಕ ಅವರ ಜಾಗಕ್ಕೆ ಆಲಿಯಾ ಭಟ್ (Alia Bhatt) ಅಥವಾ ಸಾಯಿ ಪಲ್ಲವಿ ಬರಲಿದ್ದಾರೆ ಎಂಬ ಬಲವಾದ ಚರ್ಚೆಗಳು ಸೋಷಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿದ್ದವು. ಇದೀಗ ಈ ಎಲ್ಲಾ ಊಹಾಪೋಹಗಳಿಗೆ ನಿರ್ದೇಶಕ ನಾಗ್ ಅಶ್ವಿನ್ (Nag Ashwin) ಅಧಿಕೃತವಾಗಿ ಪ್ರತಿಕ್ರಿಯಿಸಿದ್ದಾರೆ.

ಕಳೆದ ವರ್ಷ ‘ವೈಜಯಂತಿ ಮೂವೀಸ್’ ಸಂಸ್ಥೆಯು ದೀಪಿಕಾ ಪಡುಕೋಣೆ ಅವರೊಂದಿಗೆ ಒಪ್ಪಂದ ಮುಂದುವರಿಸಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕೃತವಾಗಿ ಪ್ರಕಟಿಸಿತ್ತು. ಚಿತ್ರದ ಕಥೆಯಲ್ಲಿ ದೀಪಿಕಾ ನಿರ್ವಹಿಸಿದ್ದ ಸುಮತಿ ಎಂಬ ಪಾತ್ರವೇ ಅತ್ಯಂತ ಪ್ರಮುಖವಾಗಿದ್ದರಿಂದ, ಮುಂದಿನ ಭಾಗದಲ್ಲಿ ಈ ಪಾತ್ರದ ಗತಿ ಏನು ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿತ್ತು. ಇದೇ ಕಾರಣಕ್ಕೆ ಸುಮತಿ ಪಾತ್ರಕ್ಕೆ ಸಾಯಿ ಪಲ್ಲವಿ ಅವರನ್ನು ಆಯ್ಕೆ ಮಾಡಲಾಗಿದೆ ಎಂಬ ಸುದ್ದಿಗಳು ಹರಿದಾಡಿದ್ದವು. ಮತ್ತೊಂದೆಡೆ ಆಲಿಯಾ ಭಟ್ ಕೂಡ ಚಿತ್ರತಂಡ ಸೇರಿಕೊಂಡಿದ್ದಾರೆ ಎಂಬ ವರದಿಗಳು ಬಂದಿದ್ದವು.

ಈ ಕುರಿತು ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ನಾಗ್ ಅಶ್ವಿನ್, ‘ಕಲ್ಕಿ 2 ಚಿತ್ರದಲ್ಲಿ ಸುಮತಿ ಪಾತ್ರವನ್ನು ಯಾರು ಮಾಡಲಿದ್ದಾರೆ ಎಂಬುದನ್ನು ನಾವು ಅಧಿಕೃತವಾಗಿ ಘೋಷಿಸಬೇಕಿದೆ. ಸದ್ಯಕ್ಕೆ ಕೇಳಿಬರುತ್ತಿರುವ ಸುದ್ದಿಗಳೆಲ್ಲವೂ ಕೇವಲ ಊಹಾಪೋಹಗಳಷ್ಟೇ. ಆದರೆ ಕಥೆಯಲ್ಲಿ ಸುಮತಿ ಪಾತ್ರ ಖಂಡಿತವಾಗಿಯೂ ಇರಲಿದೆ. ಅದು ಅತ್ಯಂತ ಪ್ರಮುಖವಾದ ಪಾತ್ರವಾಗಿರುವುದರಿಂದ ಅದನ್ನು ಕಥೆಯಿಂದ ತೆಗೆದುಹಾಕಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಫ್ಯಾನ್ಸ್ ವಲಯದಲ್ಲಿ ಕೆಲವು ಗಾಸಿಪ್​ಗಳು ಹರಿದಾಡಿವೆ. ನಿರ್ದೇಶಕರ ಹೇಳಿಕೆಯ ಬೆನ್ನಲ್ಲೇ ಅಭಿಮಾನಿಗಳು ತಮ್ಮದೇ ರೀತಿಯಲ್ಲಿ ಲೆಕ್ಕಾಚಾರ ಹಾಕುತ್ತಿದ್ದಾರೆ. ಆಲಿಯಾ ಭಟ್ ಅವರು ದೀಪಿಕಾ ಅವರ ಸುಮತಿ ಪಾತ್ರವನ್ನು ರೀಪ್ಲೇಸ್ ಮಾಡುತ್ತಿಲ್ಲ, ಬದಲಿಗೆ ಕಲ್ಕಿ ಪುರಾಣದಲ್ಲಿ ಬರುವ ವೈಷ್ಣೋದೇವಿ ಎಂಬ ಸಂಪೂರ್ಣ ಹೊಸ ಹಾಗೂ ಶಕ್ತಿಶಾಲಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ‘ಕಲ್ಕಿ 2898 ಎಡಿ’ ಪಾರ್ಟ್ 2 ಪ್ರಭಾಸ್ ಸಿನಿಮಾ ಅಲ್ಲ, ಕಮಲ್ ಹಾಸನ್ ಸಿನಿಮಾ

ಕಲ್ಕಿಯ ತಾಯಿಯಾದ ಸುಮತಿ ಪಾತ್ರಕ್ಕೆ ಸಾಯಿ ಪಲ್ಲವಿ ಅಥವಾ ಆಲಿಯಾ ಭಟ್ ಇಬ್ಬರಲ್ಲಿ ಒಬ್ಬರನ್ನು ನೇರವಾಗಿ ರೀಕಾಸ್ಟ್ ಮಾಡುವ ಸಾಧ್ಯತೆಯೂ ಇದೆ ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ. ಸದ್ಯ ಅಮಿತಾಭ್ ಬಚ್ಚನ್ ಮತ್ತು ಕಮಲ್ ಹಾಸನ್ ಅವರ ಕಾಂಬಿನೇಷನ್‌ನಲ್ಲಿ ಕೆಲವು ಪ್ರಮುಖ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದ್ದು, ನಟಿಯರ ಅಧಿಕೃತ ಆಯ್ಕೆಯ ಬಗ್ಗೆ ಚಿತ್ರತಂಡ ಶೀಘ್ರದಲ್ಲೇ ಸ್ಪಷ್ಟನೆ ನೀಡುವ ನಿರೀಕ್ಷೆಯಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮೇಲ್ಮನೆ ಮೇಲಾಟ: ಕಾಂಗ್ರೆಸ್​​ ಕ್ಯಾಂಪ್​ ಸೇರಿಕೊಂಡ ಬಿಜೆಪಿ ಉಚ್ಛಾಟಿತ ಶಾಸಕರು – Kannada News | bjp expelled MLAs ST Somashekar And Shivaram Hebbar In Congress Camp at Resort ahead of MLC polls

ರಾಮನಗರ, (ಜೂನ್ 17): ವಿಧಾನ ಪರಿಷತ್ ಚುನಾವಣೆ (MLC polls) ನಾಳೆ ಅಂದರೆ ಜೂನ್ 18ರಂದು ನಡೆಯಲಿದ್ದು, ಆಡಳಿತಾರೂಢ ಕಾಂಗ್ರೆಸ್ ಶಾಸಕರು ರೆಸಾರ್ಟ್ ಸೇರಿಕೊಂಡಿದ್ದಾರೆ. ಪರಿಷತ್ ಕಣದಲ್ಲಿ ಏಳನೇ ಅಭ್ಯರ್ಥಿ ಅಖಾಡಕ್ಕಿಳಿಸಿರುವುದು ಮೇಲ್ಮನೆ ಚುನಾವಣೆ ರಂಗೇರಿದೆ. 7 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ 5 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಬಿಜೆಪಿ 2 ಹಾಗೂ ಜೆಡಿಎಸ್ ಓರ್ವ ಅಭ್ಯರ್ಥಿ ಕಣಕ್ಕಿಳ ಸಿದೆ. ಕಾಂಗ್ರೆಸ್‌ನ 4 ಹಾಗೂ ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ಸರಾಗವಾಗಿ ಗೆಲುವು ಸಾಧಿಸಲಿದ್ದಾರೆ. ಏಳನೇ ಸ್ಥಾನಕ್ಕೆ ಜಟಾಪಟಿ ಜೋರಾಗಿದೆ. ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕಾರ್ತಿಕ್ ಹಾಗೂ ಜೆಡಿಎಸ್ ಅಭ್ಯರ್ಥಿ ನಡುವೆ ಸ್ಪರ್ಧೆ ಗೋವಿಂದ ಏರ್ಪಟ್ಟಿದೆ. ಇದರ ಮಧ್ಯೆ ಬಿಜೆಪಿಯ ಉಚ್ಛಾಟಿತ ಶಾಸಕರಾದ ಎಸ್​​ಟಿ ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಅವರು ಕಾಂಗ್ರೆಸ್ ಪಾಳೆಯದಲ್ಲಿ ಗುರುತಿಸಿಕೊಂಡಿರುವುದು ಸಂಚಲನಕ್ಕೆ ಕಾರಣವಾಗಿದೆ.

ಹೌದು….ಏಳನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಕಾಂಗ್ರೆಸ್ ಇನ್ನಿಲ್ಲದ ಕಸರತ್ತು ನಡೆಸಿದ್ದು, ಕೆಲ ಜೆಡಿಎಸ್ ಹಾಗೂ ಬಿಜೆಪಿಯಿಂದ ಗೆದ್ದಿರುವ ಶಾಸಕರನ್ನು ಸೆಳೆಯು ಯತ್ನ ನಡೆಸಿದೆ. ಇದರ ನಡುವೆ ಬಿಜೆಪಿಯ ಇಬ್ಬರು ಉಚ್ಛಾಟಿತ ಶಾಸಕರು, ಕಾಂಗ್ರೆಸ್​​​​​ ಶಾಸಕರಿರುವ ವಂಡರ್​​​ ಲಾ ರೆಸಾರ್ಟ್​​​ ನಲ್ಲಿ ಕಾಣಿಸಿಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Vasthu Tips: ಅಡುಗೆಮನೆಗೆ ಯಾವ ಬಣ್ಣ ಬಳಿಯಬೇಕು? ಅದೃಷ್ಟ ಬದಲಾಯಿಸಬಲ್ಲವು ಈ ಕಲರ್ಸ್! – Kannada News | Best Vastu Colors for Kitchen: Design for Harmony and Wellness at Home

ಅಡುಗೆಮನೆಗೆ ಯಾವ ಬಣ್ಣ ಬಳಕೆಯಾಗಬೇಕು?Image Credit source: Pinterest

ಅಡುಗೆಮನೆಯು ಕೇವಲ ಅಡುಗೆ ಮಾಡುವ ಸ್ಥಳವಲ್ಲ, ಬದಲಿಗೆ ಇದು ಇಡೀ ಕುಟುಂಬದ ಆರೋಗ್ಯ ಮತ್ತು ಯೋಗಕ್ಷೇಮವನ್ನು ನಿರ್ಧರಿಸುವ ಪ್ರಮುಖ ಕೋಣೆಯಾಗಿದೆ. ವಾಸ್ತು ಶಾಸ್ತ್ರದಲ್ಲಿ ಅಡುಗೆಮನೆಯನ್ನು ಮನೆಯ ಶಕ್ತಿ ಕೇಂದ್ರವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಅಡುಗೆಮನೆಗೆ ಸರಿಯಾದ ದಿಕ್ಕನ್ನು ಆಯ್ಕೆ ಮಾಡುವುದರ ಜೊತೆಗೆ, ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಕಾಪಾಡಿಕೊಳ್ಳಲು ಬಣ್ಣಗಳ ಆಯ್ಕೆಗೆ ವಿಶೇಷ ಗಮನ ನೀಡುವುದು ಅತ್ಯಗತ್ಯ. ವಾಸ್ತು ನಂಬಿಕೆಗಳ ಪ್ರಕಾರ, ಅಡುಗೆಮನೆಗೆ ಸೂಕ್ತವಾದ ಬಣ್ಣಗಳನ್ನು ಆರಿಸುವುದರಿಂದ ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ.

ಅಡುಗೆಮನೆಯ ಬಣ್ಣಗಳ ಮಹತ್ವ:

ವಾಸ್ತು ಪ್ರಕಾರ, ಬಣ್ಣಗಳು ವ್ಯಕ್ತಿಯ ಮನಸ್ಸು, ನಡವಳಿಕೆ ಮತ್ತು ಮನೆಯ ವಾತಾವರಣದ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ. ಅಡುಗೆಮನೆಯಲ್ಲಿ ಬಳಸುವ ಬಣ್ಣಗಳು ಚೈತನ್ಯದಾಯಕ, ಶಾಂತಗೊಳಿಸುವ ಅಥವಾ ಸ್ಪೂರ್ತಿದಾಯಕ ವಾತಾವರಣವನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಆದ್ದರಿಂದ, ಅಡುಗೆಮನೆಯ ಗೋಡೆಗಳು ಮತ್ತು ಒಳಾಂಗಣ ಅಲಂಕಾರಕ್ಕೆ ಸರಿಯಾದ ಬಣ್ಣಗಳನ್ನು ಆಯ್ಕೆ ಮಾಡುವುದು ಅತ್ಯಗತ್ಯವೆಂದು ಪರಿಗಣಿಸಲಾಗಿದೆ.

ಕೇಸರಿ ಮತ್ತು ಬಿಳಿ ಬಣ್ಣದ ವಿಶೇಷತೆ:

ವಾಸ್ತು ಪ್ರಕಾರ, ಕೇಸರಿ ಬಣ್ಣವು ಶಕ್ತಿ, ಉತ್ಸಾಹ ಮತ್ತು ಆತ್ಮವಿಶ್ವಾಸವನ್ನು ಸಂಕೇತಿಸುತ್ತದೆ. ಇದು ಮನೆಯಲ್ಲಿ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸಲು ಮತ್ತು ಸಂಬಂಧಗಳನ್ನು ಬಲಪಡಿಸಲು ಸಹಾಯಕವಾಗಿದ್ದು, ಪೂರ್ವ ದಿಕ್ಕಿನಲ್ಲಿರುವ ಅಡುಗೆಮನೆಗಳಿಗೆ ಈ ಬಣ್ಣವನ್ನು ವಿಶೇಷವಾಗಿ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಮತ್ತೊಂದೆಡೆ, ಬಿಳಿ ಬಣ್ಣವು ಶುದ್ಧತೆ, ಸರಳತೆ ಮತ್ತು ಶಾಂತಿಯನ್ನು ಸಂಕೇತಿಸುತ್ತದೆ. ಇದು ಅಡುಗೆಮನೆಗೆ ಸ್ವಚ್ಛ ಮತ್ತು ಉತ್ತಮ ನೋಟವನ್ನು ನೀಡುವುದಲ್ಲದೆ, ಮನೆಯಲ್ಲಿ ಶಾಂತಿಯುತ ವಾತಾವರಣವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ವಾಯುವ್ಯ ದಿಕ್ಕಿನಲ್ಲಿರುವ ಅಡುಗೆಮನೆಗಳಿಗೆ ಬಿಳಿ ಬಣ್ಣವು ವಿಶೇಷವಾಗಿ ಉತ್ತಮವಾಗಿದೆ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ಹಸಿರು ಮತ್ತು ಗುಲಾಬಿ ಬಣ್ಣದ ಮಹತ್ವ:

ಹಸಿರು ಬಣ್ಣವು ಪ್ರಕೃತಿ ಮತ್ತು ಸಮತೋಲನದ ಸಂಕೇತವಾಗಿದೆ. ಇದು ಕಣ್ಣುಗಳಿಗೆ ಹಿತಕರವಾಗಿದ್ದು, ಅಡುಗೆಮನೆಗೆ ತಾಜಾತನ ಮತ್ತು ಶಾಂತಿಯನ್ನು ತರುತ್ತದೆ ಹಾಗೂ ಉಲ್ಲಾಸಕರ ವಾತಾವರಣವನ್ನು ಸೃಷ್ಟಿಸುತ್ತದೆ. ಇನ್ನು ಗುಲಾಬಿ ಬಣ್ಣವನ್ನು ಪ್ರೀತಿ, ವಾತ್ಸಲ್ಯ ಮತ್ತು ಕುಟುಂಬ ಸಂಬಂಧಗಳ ಸಂಕೇತವೆಂದು ಪರಿಗಣಿಸಲಾಗುತ್ತದೆ. ವಾಸ್ತು ಪ್ರಕಾರ, ಗುಲಾಬಿ ಬಣ್ಣವು ಕುಟುಂಬ ಸದಸ್ಯರ ನಡುವೆ ಅನ್ಯೋನ್ಯತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದ್ದರಿಂದ ನಿಮ್ಮ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಇಷ್ಟಪಡುವ ಸ್ಥಳಕ್ಕೆ ಈ ಬಣ್ಣವು ಅತ್ಯುತ್ತಮ ಆಯ್ಕೆಯಾಗಿದೆ.

ಕಿತ್ತಳೆ, ಇಟ್ಟಿಗೆ ಕೆಂಪು, ಕಂದು ಮತ್ತು ಹಳದಿ ಬಣ್ಣಗಳು:

ಕಿತ್ತಳೆ ಮತ್ತು ಇಟ್ಟಿಗೆ ಕೆಂಪು ಬಣ್ಣಗಳು ಶಕ್ತಿ ಮತ್ತು ಉತ್ಸಾಹವನ್ನು ಸಂಕೇತಿಸುತ್ತವೆ. ಈ ಬಣ್ಣಗಳು ಅಡುಗೆಮನೆಯಲ್ಲಿ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸಲು ಸಹಾಯ ಮಾಡುತ್ತವೆ ಮತ್ತು ಇವು ವಿಶೇಷವಾಗಿ ಆಗ್ನೇಯ ದಿಕ್ಕಿನಲ್ಲಿರುವ (South-East) ಅಡುಗೆಮನೆಗಳಿಗೆ ಹೆಚ್ಚು ಸೂಕ್ತವಾಗಿವೆ. ಅದೇ ರೀತಿ, ಕಂದು ಬಣ್ಣವು ಉಷ್ಣತೆ ಮತ್ತು ಸ್ಥಿರತೆಯನ್ನು ನೀಡಿದರೆ, ಹಳದಿ ಬಣ್ಣವನ್ನು ಸಂತೋಷ ಮತ್ತು ಉತ್ಸಾಹದ ಸಂಕೇತವೆಂದು ಪರಿಗಣಿಸಲಾಗುತ್ತದೆ. ನೈಸರ್ಗಿಕ ಬೆಳಕು ವಿರಳವಾಗಿರುವ ಅಥವಾ ಕತ್ತಲೆಯಾಗಿರುವ ಅಡುಗೆಮನೆಯ ವಾತಾವರಣವನ್ನು ಹಳದಿ ಬಣ್ಣವು ಜೀವಂತಗೊಳಿಸುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಏಕಾಏಕಿ ಕುಸಿದು ಬಿದ್ದು ಬಾಡಿ ಬಿಲ್ಡರ್ ಸಾವು: ಹೆತ್ತ ತಾಯಿ ಕಣ್ಣೆದುರೇ ಮಗನ ದುರಂತ ಅಂತ್ಯ! – Kannada News | Bodybuilder Dies After Suddenly Collapsing; Son Passes Away Before Mother’s Eyes

ದಾವಣಗೆರೆ, ಜೂನ್​ 17: ರಾಷ್ಟ್ರ ಮಟ್ಟದಲ್ಲಿ ನೂರಾರು ಪ್ರಶಸ್ತಿಗಳನ್ನು ಗೆದ್ದು ಹೆಸರು ಮಾಡಿದ್ದ 26 ವರ್ಷದ ಯುವ ಬಾಡಿ ಬಿಲ್ಡರ್ (Bodybuilder) ಜಿಮ್​ನಿಂದ ಮನೆಗೆ ಬಂದ ಕೆಲ ಹೊತ್ತಲ್ಲೇ ದಿಢೀರ್​ ಕುಸಿದು ಬಿದ್ದು ಹೃದಯಾಘಾತದಿಂದ (heart attack) ಸಾವನ್ನಪ್ಪಿರುವಂತಹ ಆತಂಕಕಾರಿ ಘಟನೆ ದಾವಣಗೆರೆಯ ಕೆಟಿಜೆ ನಗರದಲ್ಲಿ ನಡೆದಿದೆ. ಸುಶೀಲಕುಮಾರ್​ ಮೃತ ಬಾಡಿ ಬಿಲ್ಡರ್​. ಸುಶೀಲಕುಮಾರ್​​ ಸಾವು ಸ್ನೇಹಿತರಿಗೆ ಅಚ್ಚರಿ​ ಮೂಡಿಸಿದೆ. ಕುಟುಂಬಸ್ಥರ ಮುಗಿಲು ಆಕ್ರಂದನ ಮುಟ್ಟಿದೆ.

ಮುಖ್ಯಾಂಶಗಳು

  • ರಾಜ್ಯ, ರಾಷ್ಟ್ರ ಪ್ರಶಸ್ತಿ ವಿಜೇತ ಯುವಕ ಹೃದಯಾಘಾತದಿಂದ ಸಾವು
  • ಕುಟುಂಬಸ್ಥರು, ಸ್ನೇಹಿತರಿಗೆ ಅಚ್ಚರಿ ಮೂಡಿಸಿದ ಬಾಡಿ ಬಿಲ್ಡರ್ ಸಾವು
  • ಮುಗಿಲು ಮುಟ್ಟಿದ ಕುಟುಂಬ ಸದಸ್ಯರ ಆಕ್ರಂದನ

ನಡೆದಿದ್ದೇನು?

ಬೆಳಿಗ್ಗೆ ಜಿಮ್‌ನಲ್ಲಿ ವರ್ಕೌಟ್ ಮುಗಿಸಿ ಬಂದಿದ್ದ ಸುಶೀಲಕುಮಾರ್, ಸಂಜೆ ಎಂದಿನಂತೆ ಜಿಮ್‌ಗೆ ಹೊರಡಲು ಸಿದ್ಧರಾಗಿದ್ದರು. ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಸಿಬ್ಬಂದಿಯಾಗಿರುವ ತಾಯಿಯನ್ನ ಕೆಲಸಕ್ಕೆ ಬಿಡಲು ಮುಂದಾಗಿದ್ದಾರೆ. ಈ ವೇಳೆ ಇದ್ದಕ್ಕಿದ್ದಂತೆ ತಲೆಸುತ್ತು ಬಂದಿದೆ. ಬಿಪಿ ಲೋ ಆಗಿರುವುದು ಕಂಡುಬಂದಿದೆ. ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲೇ ಸುಶೀಲಕುಮಾರ್ ಕೊನೆಯುಸಿರೆಳೆದಿದ್ದಾರೆ. ಹೆತ್ತ ತಾಯಿಯ ಕಣ್ಣೆದುರೇ ಮಗನ ಜೀವ ಹೋಗಿರುವುದು ಮಾತ್ರ ಎಂಥವರಿಗಾದರೂ ಕಣ್ಣೀರು ಬರುತ್ತವೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಮುಂದುವರೆದ ಹೃದಯಾಘಾತ: ಇಂದು ಒಂದೇ ದಿನ 8 ಜನ ಸಾವು

ಸುಶೀಲಕುಮಾರ್​ಗೆ ಯಾವುದೇ ಒಂದು ಕೆಟ್ಟ ಹವ್ಯಾಸಗಳಿರಲಿಲ್ಲ. ಕಠಿಣ ಪರಿಶ್ರಮವನ್ನೇ ನಂಬಿದ್ದರು. ರಾಜ್ಯ, ರಾಷ್ಟ್ರೀಯ ಸ್ಪರ್ಧೆಗಳಲ್ಲಿ ನೂರಾರು ಪ್ರಶಸ್ತಿಗಳನ್ನು ಗೆದ್ದಿದ್ದರು. ದಿನಕ್ಕೆ ಎರಡು ಸಲ ಜಿಮ್​ಗೆ ಹೋಗುತ್ತಿದ್ದರು. ತನ್ನ ಬಳಿ ತರಬೇತಿ ಪಡೆಯಲು ಬರುತ್ತಿದ್ದ ಯುವಕರಿಗೆ ಶಿಸ್ತಿನ ಪಾಠ ಮಾಡುತ್ತಿದ್ದರು. ದಾವಣಗೆರೆಯಲ್ಲಿ ಹೆಸರು ಮಾಡಿದ್ದ ಯುವಕ ಇಂದು ನೋಡುನೋಡುತ್ತಿದಂತೆ ಇಲ್ಲವಾಗಿರುವುದು ದುರದೃಷ್ಟಕರ.

ಇನ್ನು ಸುಶೀಲಕುಮಾರ್​ಗೆ ತಾಯಿ ಎಂದರೆ ಬಹಳ ಇಷ್ಟ. ಅವರ ಇನ್ಸ್ಟಾಗ್ರಾಂ ಖಾತೆಯಲ್ಲಿ ತಾಯಿ ಬಗ್ಗೆ ಅಪಾರ ಪ್ರೀತಿ ತೋರುವ ನೂರಾರು ವಿಡಿಯೋಗಳು ಇವೆ. ಆದರೆ ಎದೆಯೆತ್ತರಕ್ಕೆ ಬೆಳೆದ ಮಗ ತಮ್ಮ ಕಣ್ಣ ಮುಂದೆ ಸಾವನ್ನಪ್ಪಿರುವುದು ಕಂಡು ತಾಯಿ ಕಂಗಾಲಾಗಿದ್ದಾರೆ.

ಇದನ್ನೂ ಓದಿ: ಹಾಸನದ ಹೃದಯಾಘಾತದ ಪ್ರಾಥಮಿಕ ವರದಿ ಸಿದ್ಧ: ಇದುವೇ ಮುಖ್ಯ ಕಾರಣ ಅಂತಿದ್ದಾರೆ ತಜ್ಞರು!

ಇತ್ತೀಚಿನ ದಿನಗಳಲ್ಲಿ ಯುವಕರು ಹೀಗೆ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಇತ್ತೀಚೆಗಷ್ಟೇ ಜಗಳೂರಿನಲ್ಲಿ 9 ವರ್ಷದ ಶಾಲಾ ಬಾಲಕನೊಬ್ಬ ಹೃದಯಾಘಾತದಿಂದ ಮೃತಪಟ್ಟಿದ್ದ. ಸುಶೀಲಕುಮಾರ್ ಅವರಂತಹ ಸದೃಢ ಯುವಕರ ಸಾವಿಗೆ ನಿಖರ ಕಾರಣ ಏನೆಂಬುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 4:09 pm, Wed, 17 June 26

Source link

IND vs AFG: 14 ಬೌಂಡರಿ, 4 ಸಿಕ್ಸರ್ ಸಹಿತ 2ನೇ ಏಕದಿನ ಶತಕ ಚಚ್ಚಿದ ಇಶಾನ್ ಕಿಶನ್ – Kannada News | Ishan Kishan’s Second ODI Century: India vs Afghanistan Thriller at Lucknow’s Ekana Stadium

ಲಕ್ನೋದ ಏಕನಾ ಕ್ರಿಕೆಟ್ ಮೈದಾನದಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಕೂಡ ಶತಕದ ಇನ್ನಿಂಗ್ಸ್ ಆಡಿದ್ದಾರೆ. ಈ ಪಂದ್ಯದಲ್ಲಿ ಭಾರತದ ಪಾಳಯದಿಂದ ಸಿಡಿದ ಎರಡನೇ ಶತಕ ಇದಾಗಿದೆ. ಕಿಶನ್​ಗೂ ಮೊದಲು ನಾಯಕ ಶುಭ್​ಮನ್ ಗಿಲ್ ತಮ್ಮ ಏಕದಿನ ವೃತ್ತಜೀವನದ 9ನೇ ಶತಕ ಸಿಡಿಸಿದರೆ, ಇದೀಗ ಇಶಾನ್ ಕಿಶನ್ ಕೂಡ ತಮ್ಮ ಏಕದಿನ ವೃತ್ತಜೀವನದ ಎರಡನೇ ಶತಕವನ್ನು ಬಾರಿಸಿದರು. ಕಿಶನ್ ಕೇವಲ 71 ಎಸೆತಗಳಲ್ಲಿ 14 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ತಮ್ಮ ಶತಕ ಪೂರೈಸಿದರು.

Published On – 3:56 pm, Wed, 17 June 26

Source link

ಒಂದು ಇನ್​​ಸ್ಟಾಗ್ರಾಂ ರೀಲ್​ ಹಾಕಿದರೆ ಓರಿಗೆ ಬರುವ ಹಣ ಎಷ್ಟು ಲಕ್ಷ ಗೊತ್ತೆ? – Kannada News | Orry reveled his income source says he earn 76 lakh rs just for one reel

ಓರಿ, ಸಾಮಾಜಿಕ ಜಾಲತಾಣದಲ್ಲಿ (Social Media) ಬಲು ವೈರಲ್ ವ್ಯಕ್ತಿ. ಚಿತ್ರ ವಿಚಿತ್ರ ಬಟ್ಟೆಗಳನ್ನು ಹಾಕಿಕೊಂಡು, ಸಿನಿಮಾ ಸೆಲೆಬ್ರಿಟಿಗಳ ಎದೆಯ ಮೇಲೆ ಕೈಇಟ್ಟು ಫೋಟೊ, ವಿಡಿಯೋ ಮಾಡಿ ಅಪ್​​ಲೋಡ್ ಮಾಡುವ ಓರಿ ತನ್ನ ಭಿನ್ನ ವ್ಯಕ್ತಿತ್ವ, ವಿಚಿತ್ರತನದಿಂದಲೇ ಬಲು ಜನಪ್ರಿಯರು. ಬಲು ಜನಪ್ರಿಯ ಇನ್​​ಫ್ಲ್ಯುಯೆನ್ಸರ್ ಎನಿಸಿಕೊಂಡಿರುವ ಈ ಓರಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಚಿತ್ರಗಳನ್ನು ಹಾಕಿಕೊಂಡೇ ತಿಂಗಳಿಗೆ ಕೋಟ್ಯಂತರ ರೂಪಾಯಿ ಹಣ ಗಳಿಕೆ ಮಾಡುತ್ತಿದ್ದಾರೆ. ಈ ಬಗ್ಗೆ ಖುದ್ದು ಓರಿಯೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ‘ಲರ್ನ್ ಬೈ ಕೆಕೆ ಕ್ರಿಯೇಟ್’ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿದ್ದ ಓರಿ, ತಮ್ಮ ಆದಾಯದ ಬಗ್ಗೆ ಮಾತನಾಡಿದ್ದಾರೆ. ತಮ್ಮ ಆದಾಯದ ಬಹುಪಾಲು ಬ್ರ್ಯಾಂಡ್ ಪ್ರೊಮೋಷನ್ ಮತ್ತು ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗಿ ಆಗುವುದರಿಂದ ಬರುತ್ತದೆ ಎಂದು ಓರಿ ಹೇಳಿದ್ದಾರೆ. ‘ಕಳೆದ ತಿಂಗಳು ನಾನು ಕೇವಲ ಒಂದು ಡೀಲ್‌ನಿಂದ, ಅಂದರೆ ಒಂದೇ ಒಂದು ರೀಲ್ ಹಾಕಿ 76 ಲಕ್ಷ ರೂಪಾಯಿಗಳನ್ನು ಗಳಿಸಿದ್ದೇನೆ’ ಎಂದು ಅವರು ಈ ವೇಳೆ ತಿಳಿಸಿದ್ದಾರೆ.

ಓರಿ ತಮ್ಮ ಆನ್‌ಲೈನ್ ಜನಪ್ರಿಯತೆಯನ್ನು ವ್ಯಾಪಾರವನ್ನಾಗಿ ಪರಿವರ್ತನೆ ಮಾಡಿಕೊಂಡಿದ್ದಾರೆ. ಮಧ್ಯಾಹ್ನದ ಊಟ, ರಾತ್ರಿಯ ಊಟ, ಹುಟ್ಟುಹಬ್ಬದ ಪಾರ್ಟಿಗಳು, ಮದುವೆಗಳು ಮತ್ತು ಇತರ ಸಾಮಾಜಿಕ ಸಮಾರಂಭಗಳಲ್ಲಿ ಭಾಗವಹಿಸಲು ಅವರು 15 ಲಕ್ಷದಿಂದ 25 ಲಕ್ಷ ರೂಪಾಯಿವರೆಗೆ ಶುಲ್ಕ ವಿಧಿಸುತ್ತಾರಂತೆ ಈ ಬಗ್ಗೆ ಖುದ್ದು ಅವರೇ ಹೇಳಿಕೊಂಡಿದ್ದಾರೆ. ‘15 ರಿಂದ 25 ಲಕ್ಷ ರೂಪಾಯಿಗಳಿಗೆ ನೀವು ನನ್ನನ್ನು ಮಧ್ಯಾಹ್ನದ ಊಟಕ್ಕೆ ಅಥವಾ ರಾತ್ರಿಯ ಊಟಕ್ಕೆ ಖರೀದಿಸಬಹುದು. ನಾನು ನಿಮ್ಮ ಮದುವೆಗೆ ಬರುತ್ತೇನೆ, ಹುಟ್ಟುಹಬ್ಬಕ್ಕೆ ಬರುತ್ತೇನೆ. ನಾವು ಬಾಲ್ಯದ ಸ್ನೇಹಿತರಂತೆ ವರ್ತಿಸುತ್ತೇನೆ, ನಿಮ್ಮೊಂದಿಗೆ ಸಮಯ ಕಳೆಯುತ್ತೇನೆ, ನಿಮ್ಮ ಪೋಷಕರೊಂದಿಗೆ ಕುಳಿತು ಮಾತನಾಡುತ್ತೇನೆ, ಮತ್ತು ನೀವು ಬಯಸಿದಂತೆ ಎಲ್ಲರೊಂದಿಗೆ ಬೆರೆಯುತ್ತೇನೆ. ನನ್ನನ್ನು ‘ಖರೀದಿಸಿದವರಿಗೆ’ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಜನಪ್ರಿಯತೆ ಸಿಗುತ್ತದೆ’ ಎಂದು ಓರಿ ತಮ್ಮ ಬ್ಯುಸಿನೆಸ್ ವಿವರಿಸಿದ್ದಾರೆ.

ಇದನ್ನೂ ಓದಿ:‘ಕಲ್ಕಿ 2898 ಎಡಿ’ ಪಾರ್ಟ್ 2 ಪ್ರಭಾಸ್ ಸಿನಿಮಾ ಅಲ್ಲ, ಕಮಲ್ ಹಾಸನ್ ಸಿನಿಮಾ

ಓರಿಯ ನಿಜವಾದ ಹೆಸರು ಓರ್ಹಾನ್ ಅವತ್ರಾಮಣಿ, ಇನ್‌ಸ್ಟಾಗ್ರಾಮ್‌ನಲ್ಲಿ 25 ಲಕ್ಷಕ್ಕೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿದ್ದಾರೆ. ಅವರು ಬಾಲಿವುಡ್ ಸೆಲೆಬ್ರಿಟಿಗಳೊಂದಿಗೆ ಪಾರ್ಟಿ ಮಾಡುವುದರಲ್ಲಿ ಮತ್ತು ಹೈ-ಪ್ರೊಫೈಲ್ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. ಜಾನ್ಹವಿ ಕಪೂರ್, ಖುಷಿ ಕಪೂರ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳೊಂದಿಗೆ ಓರಿ ಫೋಟೋಗಳಿಗೆ ಪೋಸ್ ನೀಡುತ್ತಿರುತ್ತಾರೆ. ವಿಶೇಷವಾಗಿ ಸೆಲೆಬ್ರಿಟಿಗಳ ಎದೆಯ ಮೇಲೆ ಕೈ ಇಟ್ಟು ಅವರು ನೀಡುವ ಸಿಗ್ನೇಚರ್ ಪೋಸ್‌ನಿಂದ ಅವರು ಹೆಚ್ಚು ಖ್ಯಾತಿ ಗಳಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 3:58 pm, Wed, 17 June 26

Source link

IND vs AFG: ನಾಯಕನಾಗಿ ಮೊದಲ ಏಕದಿನ ಶತಕ ಸಿಡಿಸಿದ ಶುಭ್​ಮನ್ ಗಿಲ್ – Kannada News | Shubman Gill Blazes Maiden Captain’s ODI Ton vs Afghanistan: 9th Career Century

ಟೀಂ ಇಂಡಿಯಾದ ನಾಯಕತ್ವದ ಜವಾಬ್ದಾರಿ ಹೊತ್ತ ಬಳಿಕ ರನ್​ಗಳ ಶಿಖರ ಕಟ್ಟುತ್ತಿರುವ ಶುಭ್​ಮನ್ ಗಿಲ್ ಪ್ರಸ್ತುತ ನಡೆಯುತ್ತಿರುವ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿ ಮಿಂಚಿದ್ದಾರೆ. ಲಕ್ನೋದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಗಿಲ್, ಅಫ್ಘನ್ ಬೌಲರ್​ಗಳ ಬೆವರಿಳಿಸಿ ಕೇವಲ 38 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು. ಅರ್ಧಶತಕದ ಬಳಿಕವೂ ಒಂದೇ ಗೇರ್​ನಲ್ಲಿ ಬ್ಯಾಟಿಂಗ್‌ ಮುಂದುವರೆಸಿದ ಗಿಲ್ 77 ಎಸೆತಗಳಲ್ಲಿ ತಮ್ಮ ಏಕದಿನ ವೃತ್ತಜೀವನದ 9ನೇ ಶತಕವನ್ನು ಪೂರ್ಣಗೊಳಿಸಿದರು. ಮಾತ್ರವಲ್ಲದೆ ಇದು ನಾಯಕನಾದ ಬಳಿಕ ಗಿಲ್ ಅವರ ಮೊದಲ ಏಕದಿನ ಶತಕವೂ ಆಗಿದೆ.

Source link

ಜಿ7 ಸಭೆಯಲ್ಲಿ ನಾವಿಕರ ರಕ್ಷಣೆ ಬಗ್ಗೆ ಮೋದಿ ಮಾತನಾಡಿದ್ದು ಸುಮ್ಮನೆ ಅಲ್ಲ; ಜೀವದ ಹಂಗು ತೊರೆದು ದುಡಿಯುತ್ತಿದ್ದಾರೆ ಭಾರತೀಯ ನಾವಿಕರು – Kannada News | Indian Sailors at Risk: West Asia Conflict & Global Shipping Impact

ನವದೆಹಲಿ, ಜೂನ್ 17: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಜ್ವಾಲೆ ಈಗ ಜಾಗತಿಕ ಹಡಗು ಸಂಚಾರ ಮಾರ್ಗಗಳಿಗೆ ವ್ಯಾಪಿಸಿದೆ. ಈ ಯುದ್ಧದಲ್ಲಿ ಯಾವುದೇ ಸಂಬಂಧವಿಲ್ಲದ ಭಾರತೀಯ ವಾಣಿಜ್ಯ ಹಡುಗಳ (Merchant Navy) ನಾವಿಕರು ಸಿಲುಕಿಕೊಂಡು ಬಲಿಯಾಗುತ್ತಿದ್ದಾರೆ. ಇತ್ತೀಚೆಗೆ ಓಮನ್ ಕರಾವಳಿಯ ಹಾರ್ಮುಜ್ ಜಲಸಂಧಿ (Strait of Hormuz) ಬಳಿ ನಡೆದ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳಲ್ಲಿ ಹಲವು ಭಾರತೀಯ ನಾವಿಕರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ನೂರಾರು ಜನರು ಸಿಲುಕಿಕೊಂಡಿದ್ದಾರೆ. ಜಿ7 ಸಭೆಯಲ್ಲಿ ಖುದ್ದು ಪ್ರಧಾನಿ ಅವರೇ ಭಾರತೀಯ ನಾವಿಕರ ರಕ್ಷಣೆಗೆ ಆದ್ಯತೆ ಕೊಡಲಾಗುತ್ತದೆ ಎಂದಿದ್ದಾರೆ.

ಜಗತ್ತಿನಾದ್ಯಂತ ಸಾಗುವ ವಾಣಿಜ್ಯ ಹಡಗುಗಳಲ್ಲಿ (Merchant Ships) ಕೆಲಸ ಮಾಡುವ ಪ್ರತಿ ಐದು ನಾವಿಕರಲ್ಲಿ ಒಬ್ಬರು ಭಾರತೀಯರಾಗಿದ್ದಾರೆ. ಭಾರತೀಯ ಹಡಗು ಸಚಿವಾಲಯದ ಅಂಕಿ-ಅಂಶಗಳ ಪ್ರಕಾರ, ಪ್ರಸ್ತುತ 3,20,000ಕ್ಕೂ ಹೆಚ್ಚು ಸಕ್ರಿಯ ಭಾರತೀಯ ನಾವಿಕರು ಜಾಗತಿಕ ಸಮುದ್ರ ಮಾರ್ಗಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ನಾವಿಕರು ಜಾಗತಿಕ ವ್ಯಾಪಾರದ ಪ್ರಮುಖ ಕೊಂಡಿ ಎನಿಸಿದ್ದಾರೆ. ಅಷ್ಟಕ್ಕೂ ಜಾಗತಿಕವಾಗಿ ಇರುವ ನಾವಿಕರಲ್ಲಿ ಭಾರತೀಯರ ಸಂಖ್ಯೆ ಯಾಕೆ ಹೆಚ್ಚು ಇದೆ?

ಭಾರತವು ವಿಶಾಲವಾದ ಸಮುದ್ರ ತೀರವನ್ನು ಹೊಂದಿದ್ದು, ನಾವಿಕ ವೃತ್ತಿ ಇಲ್ಲಿ ತಲೆಮಾರುಗಳಿಂದ ಹಾಸುಹೊಕ್ಕಾಗಿದೆ. ಭಾರತದಲ್ಲಿ ವಿಶ್ವದರ್ಜೆಯ ಕಡಲ ತರಬೇತಿ ವ್ಯವಸ್ಥೆ (Maritime Training Ecosystem) ಇದ್ದು, ಜಾಗತಿಕ ಗುಣಮಟ್ಟದ ನುರಿತ ಸಿಬ್ಬಂದಿಯನ್ನು ಸಿದ್ಧಪಡಿಸುತ್ತವೆ. ಭಾರತದ ಸ್ಥಳೀಯ ಉದ್ಯೋಗ ಮಾರುಕಟ್ಟೆಗೆ ಹೋಲಿಸಿದರೆ ಮರ್ಚೆಂಟ್ ನೇವಿಯಲ್ಲಿ ಸಿಗುವ ಸಂಬಳ ಅತ್ಯಂತ ಆಕರ್ಷಕವಾಗಿರುತ್ತದೆ. ಹೀಗಾಗಿ, ಜಾಗತಿಕ ನಾವಿಕರಲ್ಲಿ ಭಾರತೀಯರ ಸಂಖ್ಯೆ ಹೆಚ್ಚಿರುವುದು.

ಇದನ್ನೂ ಓದಿ: ಪಿಜ್ಜಾ ಹಟ್ 2.7 ಬಿಲಿಯನ್ ಡಾಲರ್​ಗೆ ಮಾರಾಟ; ಚೀನಾಯೇತರ ಮಾರುಕಟ್ಟೆಗಳಲ್ಲಿನ ಬ್ಯುಸಿನೆಸ್ ಲಾಂಗ್​ರೇಂಜ್ ಕ್ಯಾಪಿಟಲ್ ಪಾಲು

ಪ್ರಾಣದ ಹಂಗು ತೊರೆದು ಭಾರತೀಯರು ಮರ್ಚೆಂಟ್ ನೇವಿ ಸೇರುವುದೇಕೆ?

ಯುದ್ಧ ಪೀಡಿತ ಸಮುದ್ರ ಮಾರ್ಗಗಳಲ್ಲಿ ಜೀವಕ್ಕೆ ಅಪಾಯವಿದೆ ಎಂದು ಗೊತ್ತಿದ್ದರೂ ಸಾವಿರಾರು ಭಾರತೀಯ ಯುವಕರು ಈ ವೃತ್ತಿಯನ್ನು ಆಯ್ದುಕೊಳ್ಳಲು ಕೆಲವು ಪ್ರಮುಖ ಸಾಮಾಜಿಕ ಮತ್ತು ಆರ್ಥಿಕ ಕಾರಣಗಳಿವೆ. ಈ ಉದ್ಯಮಕ್ಕೆ ಸೇರುವ ಬಹುತೇಕ ಯುವಕರು ಭಾರತದ ಗ್ರಾಮೀಣ ಭಾಗದ, ಕೃಷಿ ಹಿನ್ನೆಲೆಯ ಅಥವಾ ಮಧ್ಯಮ ವರ್ಗದ ಕುಟುಂಬಗಳಿಂದ ಬಂದವರಾಗಿರುತ್ತಾರೆ. ಸಾಲದ ಸುಳಿಯಿಂದ ಹೊರಬರಲು ಮತ್ತು ಕುಟುಂಬವನ್ನು ಆರ್ಥಿಕವಾಗಿ ಸಬಲಗೊಳಿಸಲು ಇದನ್ನು ಸುಲಭ ಮಾರ್ಗವಾಗಿ ಕಾಣುತ್ತಾರೆ.

ಕಡಿಮೆ ವಿದ್ಯಾರ್ಹತೆಗೆ ಹೆಚ್ಚಿನ ಸಂಬಳ: ಸಾಮಾನ್ಯ ಪದವಿ ಅಥವಾ ಹೈಸ್ಕೂಲ್ ಮುಗಿಸಿದ ಯುವಕರಿಗೆ ಭಾರತದ ಇತರೆಡೆ ಸಿಗುವ ಸಂಬಳಕ್ಕಿಂತ 3 ರಿಂದ 4 ಪಟ್ಟು ಹೆಚ್ಚು ಸಂಬಳ (ತಿಂಗಳಿಗೆ ಸುಮಾರು 450 ರಿಂದ 1,000 ಡಾಲರ್ ಅಥವಾ ಅದಕ್ಕಿಂತ ಹೆಚ್ಚು) ಇಲ್ಲಿ ಆರಂಭದಲ್ಲೇ ಸಿಗುತ್ತದೆ. ಹೀಗಾಗಿ, ಬಹಳಷ್ಟು ಯುವಕರು ಈ ಉದ್ಯೋಗಕ್ಕೆ ಮುಂದೆ ಬರುತ್ತಾರೆ.

G7 ಶೃಂಗಸಭೆಯಲ್ಲಿ ಭಾರತೀಯ ನಾವಿಕರ ರಕ್ಷಣೆಗೆ ಪಿಎಂ ಮೋದಿ ಆದ್ಯತೆ

ಭಾರತೀಯ ನಾವಿಕರು ಜಾಗತಿಕ ಆರ್ಥಿಕತೆಯ ಸಪ್ಲೈ ಚೈನ್ (ಪೂರೈಕೆ ಸರಪಳಿ) ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಆದರೆ ಇತ್ತೀಚಿನ ಅಮೆರಿಕ-ಇರಾನ್ ಸಂಘರ್ಷದ ಹಿನ್ನೆಲೆಯಲ್ಲಿ ಅಮೆರಿಕ ನೌಕಾಪಡೆ ವಿಧಿಸಿರುವ ದಿಗ್ಬಂಧನ ಹಾಗೂ ಇರಾನ್‌ನ ಪ್ರತಿದಾಳಿಗಳ ನಡುವೆ ಭಾರತೀಯ ಸಿಬ್ಬಂದಿ ಇರುವ ವಾಣಿಜ್ಯ ಹಡಗುಗಳು ಜಖಂಗೊಳ್ಳುತ್ತಿವೆ.

ಇದನ್ನೂ ಓದಿ: ಸಾಫ್ಟ್‌ವೇರ್ ಮತ್ತು ಸೇವೆಗಳ ರಫ್ತಿನಲ್ಲಿ ಕರ್ನಾಟಕವೇ ಅಗ್ರಗಣ್ಯ: 2025-26ನೇ ಹಣಕಾಸು ವರ್ಷದಲ್ಲಿ 173 ಬಿಲಿಯನ್ ಡಾಲರ್‌ ವಹಿವಾಟು

ಇದೇ ಕಾರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಜಿ-7 ಶೃಂಗಸಭೆಯಲ್ಲಿ ಭಾಗವಹಿಸಿದಾಗ, ಅಂತಾರಾಷ್ಟ್ರೀಯ ಜಲಮಾರ್ಗಗಳಲ್ಲಿ ಸಂಚರಿಸುವ ವಾಣಿಜ್ಯ ಹಡಗುಗಳ ರಕ್ಷಣೆ ಮತ್ತು ಭಾರತೀಯ ನಾವಿಕರ (Seafare Workers) ಸುರಕ್ಷತೆಗೆ ಅತ್ಯುನ್ನತ ಆದ್ಯತೆ ನೀಡಬೇಕು ಎಂದು ಜಾಗತಿಕ ನಾಯಕರ ಮುಂದೆ ಪ್ರತಿಪಾದಿಸಿದ್ದರು. ನಾಗರಿಕ ಹಡಗುಗಳ ಮೇಲೆ ನಡೆಯುವ ಇಂತಹ ಮಾರಕ ದಾಳಿಗಳನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ ಮತ್ತು ಅಮೆರಿಕ ಹಾಗೂ ಇರಾನ್ ರಾಯಭಾರಿಗಳಿಗೆ ತನ್ನ ಕಳವಳವನ್ನು ಅಧಿಕೃತವಾಗಿ ರವಾನಿಸಿದೆ.

“ಅಪಾಯದ ಮುನ್ಸೂಚನೆ ಇದ್ದರೂ ಈ ಕ್ಷೇತ್ರದಲ್ಲಿ ದುಡಿಯುತ್ತಿರುವ ಭಾರತೀಯ ನಾವಿಕರು, ಕೇವಲ ಹಣ ಗಳಿಸುತ್ತಿಲ್ಲ, ಜಾಗತಿಕ ವಾಣಿಜ್ಯವನ್ನು ಜೀವಂತವಾಗಿಟ್ಟಿದ್ದಾರೆ. ಇವರ ರಕ್ಷಣೆ ಜಾಗತಿಕ ಮಟ್ಟದಲ್ಲಿ ಅತ್ಯಗತ್ಯವಾಗಿದೆ” ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link