‘ದಿ ಡೈಲಿ ಡ್ರಾಪ್’ ಕೋರ್ಟ್ ರೂಮ್ ಸೀರೀಸ್ಗೆ ಟಿಎನ್ ಸೀತಾರಾಮ್ ಪುತ್ರಿ ಅಶ್ವಿನಿ ನಿರ್ದೇಶನ
ಕನ್ನಡ ಕಿರುತೆರೆ ಲೋಕದಲ್ಲಿ ಟಿ.ಎನ್. ಸೀತಾರಾಮ್ ಅವರ ಧಾರಾವಾಹಿಗಳಿಗೆ ಬೇರೆಯದ್ದೇ ಆದ ಪ್ರೇಕ್ಷಕ ವರ್ಗವಿದೆ. ಈಗ ಅವರ ಮಗಳು ಕೂಡ ನಿರ್ದೇಶನದ ಹಾದಿಯಲ್ಲಿ ಸಾಗುತ್ತಿದ್ದಾರೆ ಎಂಬುದು ವಿಶೇಷ. ಟಿ.ಎನ್. ಸೀತಾರಾಮ್ ಅವರ ಪುತ್ರಿ ಅಶ್ವಿನಿ ಅನೀಶ್ ಅವರು ‘ದಿ ಡೈಲಿ ಡ್ರಾಪ್’ ಎಂಬ ಕೋರ್ಟ್ ರೂಮ್ ಸೀರೀಸ್ ನಿರ್ದೇಶನ ಮಾಡಿ ಬಿಡುಗಡೆ ಮಾಡಿದ್ದಾರೆ. ಈ ಸೀರಿಸ್ನಲ್ಲಿ ಆರು ಸಂಚಿಕೆಗಳು ಇವೆ. ‘ತಪಸ್ವಿ ಪ್ರೊಡಕ್ಷನ್’ ಮೂಲಕ ‘ದಿ ಡೈಲಿ ಡ್ರಾಪ್’ ನಿರ್ಮಾಣ ಆಗಿದೆ. ಶ್ರೀನಿವಾಸ ಪ್ರಭು, ಅಶ್ವಿನಿ ಅನೀಶ್,…