Headlines

Video: ಮದುವೆ ಸಮಾರಂಭದ ವೇಳೆ ಬ್ಯಾಂಕ್ವೆಟ್​ ಹಾಲ್​ನಲ್ಲಿ ಭಾರಿ ಅಗ್ನಿ ಅವಘಡ – Kannada News | Wedding Turns Chaotic as Fire Engulfs Thane Banquet Hall

ಮುಂಬೈ, ಡಿಸೆಂಬರ್ 19: ಮದುವೆ ಸಮಾರಂಭದ ವೇಳೆ ಬ್ಯಾಂಕ್ವೆಟ್​ ಹಾಲ್​ನಲ್ಲಿ ಅಗ್ನಿ ಅವಘಡ ಸಂಭವಿಸಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಥಾಣೆಯ ಘೋಡ್‌ಬಂದರ್ ಪ್ರದೇಶದ ಮದುವೆ ಮಂಟಪದಲ್ಲಿ ಗುರುವಾರ ನಡೆದ ಸಮಾರಂಭದ ವೇಳೆ ಬೆಂಕಿ ಕಾಣಿಸಿಕೊಂಡಿತ್ತು. ತಕ್ಷಣವೇ ಮಾಹಿತಿ ತಿಳಿದು, ಹಲವು ಅಗ್ನಿಶಾಮಕ ವಾಹನಗಳು ಸ್ಥಳದಲ್ಲಿ ದೌಡಾಯಿಸಿದ್ದವು.  ಅಗ್ನಿ ಶಾಮಕ ಸಿಬ್ಬಂದಿ, ಬೆಂಕಿಯನ್ನು ನಂದಿಸಲು ತೀವ್ರ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದವು. ಬೆಂಕಿಯ ತೀವ್ರತೆ ಹೆಚ್ಚಾಗುವ ಮೊದಲೇ ವಧು, ವರ ಮತ್ತು ಅತಿಥಿಗಳು ಸೇರಿದಂತೆ ಎಲ್ಲರನ್ನು ಸುರಕ್ಷಿತವಾಗಿ ಹೊರಗೆ ಕರೆತರಲಾಯಿತು. ಪ್ರಾಥಮಿಕ…

Read More

ಅರ್ಧ ಲಕ್ಷಕ್ಕೆ ಕುಸಿದ ‘ಡೆವಿಲ್’ ಕಲೆಕ್ಷನ್; ಕೈ ಹಿಡಿಯಬೇಕಿದೆ ಅಭಿಮಾನಿಗಳು – Kannada News | The Devil Movie Collection Day 8 Seen deep Dip: Can Fans Save Darshan’s Film

‘ಡೆವಿಲ್’ ಸಿನಿಮಾ ಕಲೆಕ್ಷನ್ (Devil Movie Collection) ದಿನ ಕಳೆದಂತೆ ಕುಸಿತ ಕಾಣುತ್ತಿದೆ. ಅಭಿಮಾನಿಗಳು ತಾವು ಸಿನಿಮಾನ ಗೆಲ್ಲಿಸೋದಾಗಿ ಹೇಳಿದ್ದರು. ಚಿತ್ರ ಒಳ್ಳೆಯ ಗಳಿಕೆ ಕೂಡ ಮಾಡಿದೆ. ಆದರೆ, ಸಿನಿಮಾದ ಬಜೆಟ್ ಹೆಚ್ಚಿರುವುದರಿಂದ ಗಳಿಕೆ ಏನಕ್ಕೂ ಸಾಲುತ್ತಿಲ್ಲ. ಹಿಗೆಯೇ ಮುಂದುವರಿದರೆ ನಿರ್ಮಾಪಕರು ಕಷ್ಟ ಅನುಭವಿಸಬೇಕಾಗಿ ಬರಬಹುದು. ಇನ್ನು, ಗುರುವಾರ (ಡಿಸೆಂಬರ್ 18) ಸಿನಿಮಾದ ಗಳಿಕೆ ತೀವ್ರವಾಗಿ ಕುಸಿತ ಕಂಡಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಅಭಿಮಾನಿಗಳು ಕೈ ಹಿಡಿಯಬೇಕಾದ ಅನಿವಾರ್ಯತೆ ಇದೆ. ‘ಡೆವಿಲ್’ ಸಿನಿಮಾ ರಿಲೀಸ್ ಆಗಿ 8…

Read More

Horoscope Today 19 December: ಇಂದು ಈ ರಾಶಿಯವರಿಗೆ ಮುಖ್ಯ ನಿರ್ಧಾರ ತೆಗೆದುಕೊಳ್ಳುವಲ್ಲಿ ಕಷ್ಟವಾಗುವುದು

ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 2025ರ ಡಿಸೆಂಬರ್ 19, ಶುಕ್ರವಾರದ ಮಹತ್ವವನ್ನು ವಿವರಿಸಿದ್ದಾರೆ. ಈ ದಿನವು ವಿಶ್ವಾ ವಸುನಾಮ ಸಂವತ್ಸರ, ಮಾರ್ಗಶಿರ ಮಾಸ, ಕೃಷ್ಣಪಕ್ಷದ ಅಮಾವಾಸ್ಯಾ ತಿಥಿಯನ್ನು ಒಳಗೊಂಡಿದೆ. ಜೇಷ್ಠ ನಕ್ಷತ್ರದಲ್ಲಿ ಚಂದ್ರನು ಸಂಚರಿಸುತ್ತಾನೆ. ಡಾ. ಗುರೂಜಿ ತಿಳಿಸಿದಂತೆ, ಇಂದು ಸಂಪೂರ್ಣ ಮಹಾ ಅಮಾವಾಸ್ಯೆಯಾಗಿದ್ದು, ಇದರ ಪ್ರಭಾವವು ಮರುದಿನದವರೆಗೂ ಇರುತ್ತದೆ. ಶುಕ್ರವಾರದಂದು ಅಮಾವಾಸ್ಯೆ ಬಂದಿರುವುದು ಮಹಾಲಕ್ಷ್ಮಿ ಮತ್ತು ಶಕ್ತಿ ದೇವತೆಗಳ ಪೂಜೆಗೆ ಅತ್ಯಂತ ಶುಭಪ್ರದವಾಗಿದೆ. ಲಕ್ಷ್ಮಿ ದರ್ಶನ ಮತ್ತು ಕುಂಕುಮಾರ್ಚನೆಗೆ ಇದು ವಿಶೇಷ ದಿನ….

Read More

ಜಾಗದ ವಿಚಾರಕ್ಕೆ ನಡೀತು ಬರ್ಬರ ಕೊಲೆ: ತೋಟದಲ್ಲೇ ಹರಿದ ನೆತ್ತರು – Kannada News | Tumakuru Land Dispute, Brutal Murder Shakes Kallambella Village

ತುಮಕೂರು, ಡಿಸೆಂಬರ್​​ 19: ಜಾಗದ ವಿಚಾರವಗಿ ರಿಯಲ್ ಎಸ್ಟೇಟ್ ಉದ್ಯಮಿ ಯುವಕನೋರ್ವನನ್ನು ಬರ್ಬರ ಹತ್ಯೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಬಳಿ ನಡೆದಿದೆ. ಮಚ್ಚಿನಿಂದ ಕೊಚ್ಚಿ ಮಧುವನ್(25) ಕೊಲೆ ಮಾಡಲಾಗಿದ್ದು, ಪ್ರಕರಣ ಸಂಬಂಧ ರಿಯಲ್ ಎಸ್ಟೇಟ್ ಉದ್ಯಮಿ ಮಹೇಶ್ ಮತ್ತು ಶಫಿವುಲ್ಲಾರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. 2015ರಲ್ಲಿ ಮಧುಸೂದನ್​​ ಅವರ ತಂದೆ ನಾರಾಯಣಸ್ವಾಮಿ ತುಮಕೂರಿನ ಅಮಾನಿಕೆರೆ ಬಳಿಯ 3 ಕೋಟಿ ರೂ. ಮೌಲ್ಯದ 2.2 ಎಕರೆ ಜಮೀನು ಮಾರಾಟಕ್ಕೆ ಚಿಂತನೆ…

Read More

Horoscope Today 19 December: ಇಂದು ಈ ರಾಶಿಯವರಿಗೆ ನಿರುದ್ಯೋಗದ ಭಯ ಕಾಡಬಹುದು

ಮೇಷ ರಾಶಿ: ಇಂದು ಕಂಡ ಕನಸುಗಳು ಗಾಢವಾಗಿ ನಿಮ್ಮ ಮೇಲೆ ಪರಿಣಾಮ ಬೀರುವುದು. ನೀವಾಗಿಯೇ ನಿಮ್ಮ ಸ್ಥಾನವನ್ನು ಹೇಳಿ, ಮುಗ್ಗರಿಸುವಿರಿ. ನೀವು ಕೊಟ್ಟ ಮಾತನ್ನು ಇಂದು ಉಳಿಸಿಕೊಳ್ಳುವುದು ಕಷ್ಟವಾದೀತು. ಸಮಾನ ಚಿಂತನಶೀಲರ‌ ನಡುವೆ ಸಖ್ಯವಾಗುವುದು. ಇನ್ನೊಬ್ಬರಿಂದ ಸಹಕಾರವನ್ನು ಬಯಸುವುದಿಲ್ಲ. ಅತಿಯಾದ ಕೋಪವನ್ನು ನಿಯಂತ್ರಿಸಿದ್ದು ನಿಮ್ಮ ಅನುಭವಕ್ಕೆ ಬರಬಹುದು. ಸಂಧಾನಕ್ಕೆ ಕರೆದರೆ ಮಾತ್ರ ಹೋಗಿ. ಮನಸ್ಸಿನ ಸೋಮಾರಿತನವು ನಿಮ್ಮ ಕಾರ್ಯವನ್ನು ಹಿಂದಿಕ್ಕುವುದು. ಗ್ರಾಹಕರಿಗೆ ನಿಮ್ಮ‌ ಅಸಮಾಧಾನವೂ ಆಗುವುದು. ಇಂದು ಜ್ಞಾನವೃದ್ಧರ ಸೇವೆಗೆ ಅವಕಾಶ ಸಿಗಲಿದೆ. ಅಪಘಾತದಿಂದ‌ ಉಂಟಾದ ನೋವಿನಿಂದ…

Read More

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 19ರ ದಿನಭವಿಷ್ಯ – Kannada News | December 19 Numerology Prediction: Your Birth Number’s Daily Fortune and Astrology

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1): ಬಹಳ ಚಟುವಟಿಕೆಯಿಂದ ಈ ದಿನ ಕಳೆದು ಹೋಗುತ್ತದೆ. ಸೋಷಿಯಲ್ ಮೀಡಿಯಾ ಇನ್ ಫ್ಲುಯೆನ್ಸರ್ ಗಳಿಗೆ, ಮಾರಾಟ ವಿಭಾಗದಲ್ಲಿ ಕಾರ್ಯ ನಿರ್ವಹಿಸುವವರಿಗೆ, ವ್ಯಾಪಾರ- ವ್ಯವಹಾರ ಮಾಡುತ್ತಾ ಇರುವವರಿಗೆ ಆದಾಯದಲ್ಲಿ ಹೆಚ್ಚಳ ಆಗುವಂಥ ಯೋಗ ಇದೆ. ನಿಮಗೆ ಹೊಸದಾಗಿ ಪರಿಚಯ ಆಗುವ ವ್ಯಕ್ತಿಗಳ ಮೂಲಕವಾಗಿ ಭವಿಷ್ಯದಲ್ಲಿ ದೊಡ್ಡ ಮಟ್ಟದ ಅನುಕೂಲ ಆಗಲಿದೆ. ಲೇವಾದೇವಿ ವ್ಯವಹಾರ ಮಾಡುವವರಿಗೆ ಕೈ ಸೇರಬೇಕಾದ ದೊಡ್ಡ ಮೊತ್ತ ಬರುವಂಥ…

Read More

ಕಾಂಗ್ರೆಸ್​​ನಲ್ಲಿ ಮುಂದುವರಿದ ಡಿನ್ನರ್ ಮೀಟಿಂಗ್: ಅನಾರೋಗ್ಯದ ನಡುವೆಯೂ ಸಿಎಂ ಭಾಗಿ – Kannada News | Minister Satish Jarkiholi hosts dinner meeting In His House at Belagavi, here Is menu

ಬೆಳಗಾವಿ, (ಡಿಸೆಂಬರ್ 18): ಕರ್ನಾಟಕ ಕಾಂಗ್ರೆಸ್​​​ನಲ್ಲಿನ (Karnataka Congress) ಬಣ ರಾಜಕೀಯ ಬ್ರೇಕ್ ಫಾಸ್ಟ್​​ನಿಂದ ಡಿನ್ನರ್ ವರೆಗೂ (dinner meeting) ಬಂದು ನಿಂತಿದೆ. ಹೌದು.. ಸಿಎಂ ಕುರ್ಚಿಗಾಗಿ ಸಿಎಂ -ಡಿಸಿಎಂ ನಡುವೆ ಮುಸುಕಿನ ಗುದ್ದಾಟ ನಡೆದಿದ್ದು, ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ (Siddaramaiah) ಬಣದ ಡಿನ್ನರ್ ಪಾಲಿಟಿಕ್ಸ್​​ ಮುಂದುವರೆದಿದೆ. ಬೆಳಗಾವಿ ಅಧಿವೇಶದ ಸಂದರ್ಭದಲ್ಲೂ ಸಹ ಜಿದ್ದಿಗೆ ಬಿದ್ದವರಂತೆ ಉಭಯ ನಾಯಕರ ಬಣದಿಂದ ಒಬ್ಬರಾದ ಮೇಲೆ ಒಬ್ಬರಿಂದ ಡಿನ್ನರ್ ಮೀಟಿಂಗ್ ಆಯೋಜನೆಗೊಳ್ಳುತ್ತಿವೆ. ಇದಕ್ಕೆ ಪೂರಕವೆಂಬಂತೆ ಇಂದು (ಡಿಸೆಂಬರ್ 18)…

Read More

IND vs SA: ಕೊನೆಯ ಟಿ20 ಪಂದ್ಯಕ್ಕೆ ಮಳೆ ಅಡ್ಡಿ? ಹೇಗಿರಲಿದೆ ಭಾರತದ ಪ್ಲೇಯಿಂಗ್ 11? – Kannada News | India vs SA 5th T20: Ahmedabad Decider, Preview, Pitch and Playing XI

ಭಾರತ ಮತ್ತು ದಕ್ಷಿಣ ಆಫ್ರಿಕಾ (India vs South Africa) ನಡುವಿನ ಟಿ20 ಸರಣಿಯ ಐದನೇ ಮತ್ತು ಅಂತಿಮ ಪಂದ್ಯವು ಡಿಸೆಂಬರ್ 19, ಶುಕ್ರವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ (Narendra Modi Stadium) ನಡೆಯಲಿದೆ. ಪಂದ್ಯವು ಭಾರತೀಯ ಕಾಲಮಾನ ಸಂಜೆ 7:00 ಗಂಟೆಗೆ ಪ್ರಾರಂಭವಾಗಲಿದೆ. ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಪ್ರಸ್ತುತ ಸರಣಿಯ 4ನೇ ಪಂದ್ಯವು ಭಾರೀ ಮಂಜಿನಿಂದಾಗಿ ರದ್ದಾಗಿತ್ತು. ಈ ಟಿ20 ಸರಣಿಯಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ 2-1 ಮುನ್ನಡೆ ಸಾಧಿಸಿದೆ….

Read More

ರಘು ಬಳಿಕ ಕಾವ್ಯಾಗೂ ಗೊತ್ತಾಗಿದೆ ಬಿಗ್ ಬಾಸ್ ಸೀಕ್ರೆಟ್ ರೂಮ್ ರಹಸ್ಯ – Kannada News | Kavya Shaiva talks about Bigg Boss Kannada Season 12 secret room Rakshitha Shetty and Dhruvanth

‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಶೋನಲ್ಲಿ ರಕ್ಷಿತಾ ಶೆಟ್ಟಿ (Rakshitha Shetty) ಮತ್ತು ಧ್ರುವಂತ್ ಅವರನ್ನು ಸೀಕ್ರೆಟ್ ರೂಮ್​​ನಲ್ಲಿ ಇಡಲಾಗಿದೆ. ಕಳೆದ ವಾರ ಅವರಿಬ್ಬರು ಎಲಿಮಿನೇಟ್ ಆಗಿದ್ದಾರೆ ಎಂದು ತೋರಿಸಲಾಯಿತು. ಆದರೆ ಅವರು ಸೀಕ್ರೆಟ್ ರೂಮ್​​ಗೆ ತೆರಳಿರುವ ವಿಷಯವನ್ನು ಬಿಗ್ ಬಾಸ್ ಮನೆಯೊಳಗಿನ ಸದಸ್ಯರಿಗೆ ತಿಳಿಸಿಲ್ಲ. ಆದರೂ ಕೂಡ ಆ ರಹಸ್ಯ ಲೀಕ್ ಆಗಿದೆ. ಅದಕ್ಕೆ ಕಾರಣ ಇದೆ. ಎಲ್ಲ ಸಂಗತಿಗಳನ್ನು ಸೂಕ್ಷ್ಮವಾಗಿ ಗಮನಿಸುವ ಮೂಲಕ ರಘು ಮತ್ತು ಕಾವ್ಯ ಶೈವ (Kavya…

Read More

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!

ವಿಶಾಖಪಟ್ಟಣಂ, ಡಿಸೆಂಬರ್ 18: ವಿಶಾಖಪಟ್ಟಣಂ ಜಿಲ್ಲೆಯ ಯಾರಡಾ ಬೀಚ್‌ನಲ್ಲಿ ಮೀನುಗಾರರಿಗೆ ದೊಡ್ಡ ಶಾಕ್ ಕಾದಿತ್ತು. ಇಲ್ಲಿ ಬೃಹತ್ ತಿಮಿಂಗಿಲವೊಂದು ತೀರಕ್ಕೆ ಬಂದು ಸಾವನ್ನಪ್ಪಿದೆ. ಸುಮಾರು 15 ಅಡಿ ಉದ್ದದ ತಿಮಿಂಗಿಲವು ಉಸಿರುಗಟ್ಟಿಸುತ್ತಿರುವುದನ್ನು ಕಂಡು ಮೀನುಗಾರರು ಅದನ್ನು ಸಮುದ್ರಕ್ಕೆ ಬಿಡಲು ಪ್ರಯತ್ನಿಸಿದರು. ಆದರೂ ಯಾವುದೇ ಪ್ರಯೋಜನವಾಗಲಿಲ್ಲ. ಆ ತಿಮಿಂಗಿಲವು ದಡದಲ್ಲಿಯೇ ಸತ್ತುಹೋಯಿತು. ಅದು ಗಾಯಗೊಂಡಿರಬಹುದು ಅಥವಾ ಬಲೆಯಲ್ಲಿ ಸಿಲುಕಿ ಸತ್ತಿರಬಹುದು ಎಂದು ಶಂಕಿಸಲಾಗಿದೆ. ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Source link

Read More