ಅಮೆರಿಕ ಏನೇ ಮಾಡಿದರೂ ಛಲ ಬಿಡದ ಚೀನಾ; ಇಯುವಿ ಮೆಷೀನ್ನ ಪ್ರೋಟೋಟೈಪ್ ತಯಾರು; ಮುಂದಿದೆ ಟೆಕ್ನಾಲಜಿ ಜಟಾಪಟಿ – Kannada News | China develops extremely complicated prototype of EUV Lithography machine for AI chip production
ನವದೆಹಲಿ, ಡಿಸೆಂಬರ್ 18: ಹಿಂದೆ ಕೋಲ್ಡ್ ವಾರ್ ಸಂದರ್ಭದಲ್ಲಿ ಪರಮಾಣು ತಂತ್ರಜ್ಞಾನ ಸಿದ್ಧಿಸಿಕೊಳ್ಳಲು ಪೈಪೋಟಿ ನಡೆದಿತ್ತು. ಈಗ ಚಿಪ್ ಟೆಕ್ನಾಲಜಿಗೆ ಜಿದ್ದಾಜಿದ್ದಿ ನಡೆದಿದೆ. ಎಐ ಬಳಕೆಗೆ ಬೇಕಾದ ಬಹಳ ಸೂಕ್ಷ್ಮ ಚಿಪ್ಗಳನ್ನು ತಯಾರಿಸುವ ಇಯುವಿ ಲಿಥೋಗ್ರಫಿ ತಂತ್ರಜ್ಞಾನ ಹೊಂದಿರುವುದು ಯೂರೋಪ್ನ ಎಎಸ್ಎಂಎಲ್ ಕಂಪನಿ ಮಾತ್ರವೇ. ಈ ಟೆಕ್ನಾಲಜಲಿ ಅಪ್ಪಿತಪ್ಪಿಯೂ ಚೀನಾ ಕೈಗೆ ಹೋಗಬಾರದೆಂದು ಅಮೆರಿಕ ಹಲವು ವರ್ಷ ಕಾಲದಿಂದಲೂ ಯತ್ನಿಸುತ್ತಿದೆ. ಇದೇ ಹೊತ್ತಲ್ಲಿ ಅಮೆರಿಕಕ್ಕೆ ಶಾಕ್ ಎನಿಸುವಂತೆ, ಚೀನಾ ಇಯುವಿ ಲಿಥೋಗ್ರಫಿ ಮೆಷೀನ್ನ ಪ್ರೋಟೋಟೈಪ್ ಅಭಿವೃದ್ಧಿಪಡಿಸಿದೆ. ಈ…