Category Archives: Blog

Your blog category

ಕೊನೆಗೂ ಎಚ್ಚೆತ್ತ ಪುರಾತತ್ವ ಇಲಾಖೆ: ಸೋರುತ್ತಿದ್ದ ಬನವಾಸಿ ದೇಗುಲದ ದುರಸ್ತಿ ಕಾರ್ಯ ಆರಂಭ – Kannada News | ASI Begins Repair Works at Historic 1,500 Year Old Banavasi Madhukeshwara Temple Following Public Outcry

ಬನವಾಸಿ ದೇಗುಲ ದುರಸ್ತಿ ಕಾರ್ಯ ನಡೆಯುತ್ತಿರುವುದುImage Credit source: Tv9 Kannada

ಶಿರಸಿ, ಜೂನ್​​ 17: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯ ವರದಾ ನದಿ ದಡದಲ್ಲಿರುವ 1500 ವರ್ಷಗಳ ಇತಿಹಾಸಿರುವ ಮಧುಕೇಶ್ವರ ದೇವಸ್ಥಾನ ಕನ್ನಡಿಗರ ಅಸ್ಮಿತೆ ಹಾಗೂ ಸಾಂಸ್ಕೃತಿಕ ಪ್ರತೀಕ. ಹೀಗಾಗಿಯೇ ಇಲ್ಲಿಗೆ ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯಗಳಿಂದಲೂ ಭಕ್ತರು ಭೇಟಿ ನೀಡುತ್ತಾರೆ. ಹೀಗಿದ್ದರೂ ಕಳೆದ ಕೆಲ ವರ್ಷಗಳಿಂದ ದೇವಸ್ಥಾನ ಸೋರುತ್ತಿತ್ತು. ಎಲ್ಲವನ್ನೂ ಕಂಡು ಕಾಣದಂತಿದ್ದ ಪುರಾತತ್ವ ಇಲಾಖೆಯ ವಿರುದ್ಧ ಸಿಡಿದೆದ್ದ ಸಾರ್ವಜನಿಕರು ಅರೆ ಬೆತ್ತಲೆ ಹೋರಾಟಕ್ಕೆ ಮುಂದಾಗಿದ್ದರು. ಈ ಬಗ್ಗೆ ಟಿವಿ9 ಕೂಡ ವರದಿ ಮಾಡಿತ್ತು. ಆ ಬೆನ್ನಲ್ಲೇ ಎಚ್ಚೆತ್ತ ಇಲಾಖೆ ಕೊನೆಗೂ ಕ್ರಮ ಕೈಗೊಂಡಿದೆ.

ಕಳೆದೆರಡು ವರ್ಷಗಳಿಂದ ದೇವಸ್ಥಾನ ನಿರಂತರ ಸೋರುತ್ತಿದ್ದ ಹಿನ್ನೆಲೆ ಟರ್ಪಾಲ್ ಹಾಕಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿತ್ತು. ಆದರಿಂದ ಇದರಿಂದ ದೇಗುಲದ ಅಂದವೇ ಹಾಳಾಗಿದೆ ಎಂದು ಭಕ್ತರು, ಸ್ಥಳೀಯರು ಆಕ್ರೊಶ ಹೊರಹಾಕಿದ್ದರು. ಸದ್ಯ ಇದರ ದುರಸ್ತಿಗೆ ಪುರಾತತ್ವ ಇಲಾಖೆ ಮುಂದಾಗಿದ್ದು, ವಾಟರ್​​ ಪ್ರೂಫ್​​ ಪೇಂಟಿಂಗ್​​ ಕಾರ್ಯಗಳು ನಡೆಯುತ್ತಿವೆ. ಹೀಗಾಗಿ ಇನ್ನಾದರೂ ದೇಗುಲ ಸೋರುವುದು ನಿಲ್ಲಬಹುದೆಂಬ ನಿರೀಕ್ಷೆಯಲ್ಲಿ ಸ್ಥಳೀಯರಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಕರಾವಳಿಯ ಸೌಂದರ್ಯಕ್ಕೆ ಮನಸೋತ ಆನಂದ್ ಮಹೀಂದ್ರಾ! ಶರಾವತಿ ಹಿನ್ನೀರಿನ ಸೌಂದರ್ಯ ಬಣ್ಣಿಸಿ ಪೋಸ್ಟ್

ದಕ್ಷಿಣ ಭಾರತದಲ್ಲಿಯೇ ಅತ್ಯಂತ ಹಳೆಯ ವಾಸ್ತು ಶಿಲ್ಪ ಹೊಂದಿರುವ ಈ ಮಧುಕೇಶ್ವರ ದೇವಸ್ಥಾನ ಸೋರುತ್ತಿದ್ದ ಹಿನ್ನೆಲೆ
ಸೋರಿಕೆ ತಡೆಯಲು ಈ ಹಿಂದೆ ಕೆಮಿಕಲ್ ಹಾಕಲಾಗಿತ್ತು. ಆದರೂ ಸಮಸ್ಯೆ ಪರಿಹಾರವಾಗಿರಲಿಲ್ಲ. ಬಳಿಕ ತಗಡಿನ ಶೇಡ್ ಕೂಡ ಹಾಕಲಾಗಿತ್ತಾದರೂ ಅದು ಕೂಡ ಹೆಚ್ಚು ದಿನ ಉಳಿಯಲಿಲ್ಲ. ಹೀಗಾಗಿ 50 ಲಕ್ಷ ವೆಚ್ಚದಲ್ಲಿ ಇನ್ನೊಂದು ಹೊಸ ಪ್ರಯೋಗ ಮಾಡುವುದಾಗಿ ಕಳೆದ ಮೂರು ವರ್ಷಗಳಿಂದ ಪುರಾತತ್ವ ಇಲಾಖೆ ಹೇಳುತ್ತಲೇ ಬಂದಿತ್ತು. ಆದರೆ ದುರಸ್ತಿಗೆ ಮಾತ್ರ ಮುಂದಾಗಿರಲಿಲ್ಲ. ಹೀಗಾಗಿ ಇಲಾಖೆ ವಿರುದ್ಧ ಸಿಡಿದೆದ್ದಿದ್ದ ಸ್ಥಳೀಯರು ಬನವಾಸಿಯಲ್ಲಿ ಅರೆ ಬೆತ್ತಲೆ ಮೆರವಣಿಗೆ ಮಾಡುವುದಾಗಿ ಎಚ್ಚರಿಸಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪಿಜ್ಜಾ ಹಟ್ 2.7 ಬಿಲಿಯನ್ ಡಾಲರ್​ಗೆ ಮಾರಾಟ; ಚೀನಾಯೇತರ ಮಾರುಕಟ್ಟೆಗಳಲ್ಲಿನ ಬ್ಯುಸಿನೆಸ್ ಲಾಂಗ್​ರೇಂಜ್ ಕ್ಯಾಪಿಟಲ್ ಪಾಲು – Kannada News | Yum Brands sells Pizza Hut for 2.7 billion USD in 2 deals with LongRange Capital and Yum China

ಬೀಜಿಂಗ್, ಜೂನ್ 17: ಯಮ್! ಬ್ರಾಂಡ್ಸ್ (Yum! Brands) ಸಂಸ್ಥೆಯು ತನ್ನ ಅಧೀನದಲ್ಲಿದ್ದ ಪ್ರಸಿದ್ಧ ಪಿಜ್ಜಾ ಹಟ್ (Pizza Hut) ಉದ್ಯಮವನ್ನು ಎರಡು ಪ್ರತ್ಯೇಕ ಒಪ್ಪಂದಗಳ ಮೂಲಕ ಒಟ್ಟು 2.7 ಬಿಲಿಯನ್ ಡಾಲರ್ (ಸುಮಾರು ₹25,400 ಕೋಟಿಗೂ ಅಧಿಕ) ಮೊತ್ತಕ್ಕೆ ಮಾರಾಟ ಮಾಡಲು ನಿರ್ಧರಿಸಿದೆ. ಇದರೊಂದಿಗೆ ಕಂಪನಿಯು 4 ಬಿಲಿಯನ್ ಡಾಲರ್ ಮೌಲ್ಯದ ಷೇರು ಮರುಖರೀದಿ (Share Buyback) ಯೋಜನೆಯನ್ನೂ ಪ್ರಕಟಿಸಿದೆ. ಜಾಗತಿಕ ಮಟ್ಟದಲ್ಲಿ ಫಾಸ್ಟ್‌ಫುಡ್ ಉದ್ಯಮದ ದೈತ್ಯ ಸಂಸ್ಥೆಯಾದ ಯಮ್ ಬ್ರಾಂಡ್ಸ್, ತನ್ನ ಪಿಜ್ಜಾ ಹಟ್ ವ್ಯವಹಾರವನ್ನು ಎರಡು ಭಾಗಗಳಾಗಿ ಮಾರಾಟ ಮಾಡುತ್ತಿದೆ. ಚೀನಾದ ಹೊರಗಿನ ಬ್ಯುಸಿನೆಸ್ ಮತ್ತು ಚೀನಾದೊಳಗಿನ ಬ್ಯುಸಿನೆಸ್ ಆಗಿ ಬೇರ್ಪಡಿಸಿ ಮಾರುತ್ತಿದೆ.

ಚೀನಾದ ಹೊರಗಿನ ವ್ಯವಹಾರ: ಚೀನಾ ದೇಶವನ್ನು ಹೊರತುಪಡಿಸಿ ಜಗತ್ತಿನಾದ್ಯಂತ ಇರುವ ಪಿಜ್ಜಾ ಹಟ್ ಉದ್ಯಮವನ್ನು ಅಮೆರಿಕ ಮೂಲದ ಖಾಸಗಿ ಇಕ್ವಿಟಿ ಸಂಸ್ಥೆಯಾದ ಲಾಂಗ್‌ರೇಂಜ್ ಕ್ಯಾಪಿಟಲ್ (LongRange Capital) ಸುಮಾರು 1.5 ಬಿಲಿಯನ್ ಡಾಲರ್‌ಗೆ ಖರೀದಿಸುತ್ತಿದೆ.

ಚೀನಾದೊಳಗಿನ ವ್ಯವಹಾರ: ಚೀನಾದಲ್ಲಿನ (Mainland China) ಪಿಜ್ಜಾ ಹಟ್ ಉದ್ಯಮವನ್ನು ಅಲ್ಲಿನ ಪ್ರಮುಖ ರೆಸ್ಟೋರೆಂಟ್ ನಿರ್ವಾಹಕ ಸಂಸ್ಥೆಯಾದ ಯಮ್ ಚೀನಾ ಹೋಲ್ಡಿಂಗ್ಸ್ (Yum China Holdings) ಸುಮಾರು 1.2 ಬಿಲಿಯನ್ ಡಾಲರ್‌ಗೆ ಖರೀದಿಸುತ್ತಿದೆ. ಇಲ್ಲಿ ಯಮ್ ಚೀನಾ ಹೋಲ್ಡಿಂಗ್ಸ್ ಸಂಸ್ಥೆಯು ಯಮ್ ಬ್ರ್ಯಾಂಡ್ಸ್​ನ ಎಲ್ಲಾ ಉತ್ಪನ್ನಗಳ ಮಾಸ್ಟರ್ ಫ್ರಾಂಚೈಸಿಯಾಗಿತ್ತು. ಈಗ ಸಂಪೂರ್ಣ ಚೀನಾ ಬ್ಯುಸಿನೆಸ್​ನ ಮಾಲಕತ್ವವನ್ನೇ ಪಡೆದುಕೊಂಡಂತಾಗಿದೆ.

ಇದನ್ನೂ ಓದಿ: ಸಾಫ್ಟ್‌ವೇರ್ ಮತ್ತು ಸೇವೆಗಳ ರಫ್ತಿನಲ್ಲಿ ಕರ್ನಾಟಕವೇ ಅಗ್ರಗಣ್ಯ: 2025-26ನೇ ಹಣಕಾಸು ವರ್ಷದಲ್ಲಿ 173 ಬಿಲಿಯನ್ ಡಾಲರ್‌ ವಹಿವಾಟು

ತೆರಿಗೆಗಳು ಮತ್ತು ಇತರ ಶುಲ್ಕಗಳ ಕಡಿತದ ನಂತರ ಯಮ್ ಬ್ರಾಂಡ್ಸ್ ಸಂಸ್ಥೆಗೆ ಈ ಮಾರಾಟದಿಂದ ಸುಮಾರು 2.3 ಬಿಲಿಯನ್ ಡಾಲರ್ ನಿವ್ವಳ ಹಣ ಸಿಗಲಿದೆ ಎಂದು ಅಂದಾಜಿಸಲಾಗಿದೆ. 2026ರ ಮೂರನೇ ತ್ರೈಮಾಸಿಕದಲ್ಲಿ (ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ) ಈ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಪಿಜ್ಜಾ ಹಟ್ ಮಾರಾಟಕ್ಕೆ ಮುಖ್ಯ ಕಾರಣಗಳೇನು?

ಕಳೆದ ಕೆಲವು ವರ್ಷಗಳಿಂದ ಡೊಮಿನೋಸ್‌ನಂತಹ ಪ್ರತಿಸ್ಪರ್ಧಿಗಳು ಮತ್ತು ಡೆಲಿವರಿ ಆ್ಯಪ್‌ಗಳ (DoorDash, Uber Eats ಇತ್ಯಾದಿ) ತೀವ್ರ ಪೈಪೋಟಿಯಿಂದಾಗಿ ಪಿಜ್ಜಾ ಹಟ್ ಜಾಗತಿಕವಾಗಿ ಮಾರಾಟದ ಕುಸಿತವನ್ನು ಎದುರಿಸುತ್ತಿತ್ತು. ಅದನ್ನು ಮಾರಲು ಇದು ಒಂದು ಕಾರಣ. ಹಾಗೆಯೇ, ಎರಡನೇ ಕಾರಣ ಹೆಚ್ಚುತ್ತಿರುವ ವೆಚ್ಚ. ಜಾಗತಿಕವಾಗಿ ಹಣದುಬ್ಬರ ಮತ್ತು ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದಾಗಿ ಉದ್ಯಮದ ನಿರ್ವಹಣಾ ವೆಚ್ಚ ದುಬಾರಿಯಾಗಿತ್ತು.

ಮಗದೊಂದು ಕಾರಣ ಗ್ರಾಹಕರ ಅಭ್ಯಾಸಗಳ ಬದಲಾವಣೆ. ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚು ಆರೋಗ್ಯಕರ ಆಹಾರ ಪದ್ಧತಿ ಹಾಗೂ ತೂಕ ಇಳಿಸುವ ಔಷಧಿಗಳ (GLP-1 drugs) ಕಡೆಗೆ ಆಕರ್ಷಿತರಾಗುತ್ತಿರುವುದು ಕೂಡ ಫಾಸ್ಟ್‌ಫುಡ್ ಉದ್ಯಮದ ಮೇಲೆ ಪ್ರಭಾವ ಬೀರಿದೆ.

ಪಿಜ್ಜಾ ಹಟ್ ಮಾರಾಟದ ನಂತರ ಯಮ್ ಬ್ರಾಂಡ್ಸ್ ಸಂಸ್ಥೆಯು ತನ್ನ ಹೆಚ್ಚು ಲಾಭದಾಯಕ ಹಾಗೂ ವೇಗವಾಗಿ ಬೆಳೆಯುತ್ತಿರುವ ಕೆಎಫ್‌ಸಿ (KFC) ಮತ್ತು ಟ್ಯಾರೋ ಬೆಲ್ (Taco Bell) ಬ್ರಾಂಡ್‌ಗಳ ಮೇಲೆ ಸಂಪೂರ್ಣ ಗಮನ ಹರಿಸಲು ನಿರ್ಧರಿಸಿದೆ.

ಇದನ್ನೂ ಓದಿ: ಕೆಲವೇ ಎಐ ಮಾಡಲ್​ಗಳು ಇಡೀ ಉದ್ಯಮವನ್ನೇ ನುಂಗಿ ನೀರು ಕುಡಿಯಲು ಬಿಡಬಾರದು; ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ

ಬಿಲಿಯನ್ ಡಾಲರ್ ಷೇರು ಮರುಖರೀದಿ

ಈ ಮಾರಾಟದ ನಿರ್ಧಾರದ ಬೆನ್ನಲ್ಲೇ, ಯಮ್ ಬ್ರಾಂಡ್ಸ್ ಮಂಡಳಿಯು ಹೆಚ್ಚುವರಿಯಾಗಿ 4 ಬಿಲಿಯನ್ ಡಾಲರ್ (ಸುಮಾರು ₹38,000 ಕೋಟಿ) ಮೌಲ್ಯದ ಷೇರುಗಳನ್ನು ಮಾರುಕಟ್ಟೆಯಿಂದ ಮರುಖರೀದಿ ಮಾಡಲು ಅನುಮೋದನೆ ನೀಡಿದೆ. ಈ ಹಣವನ್ನು ಉದ್ಯಮದ ಬೆಳವಣಿಗೆಗೆ ಹೂಡಿಕೆ ಮಾಡಲು ಮತ್ತು ಹೂಡಿಕೆದಾರರಿಗೆ ಲಾಭವನ್ನು ಮರಳಿ ನೀಡಲು ಬಳಸಲಾಗುತ್ತದೆ. ಈ ಧನಾತ್ಮಕ ಸುದ್ದಿಯಿಂದಾಗಿ ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಯಮ್ ಬ್ರಾಂಡ್ಸ್‌ನ ಷೇರುಗಳು ಶೇಕಡಾ 2 ರಷ್ಟು ಏರಿಕೆ ಕಂಡಿವೆ.

ಭಾರತದ ಮೇಲಾಗುವ ಪರಿಣಾಮ?

ಭಾರತದಲ್ಲಿ ಪಿಜ್ಜಾ ಹಟ್ ಫ್ರಾಂಚೈಸಿಯನ್ನು ಪ್ರಮುಖವಾಗಿ ದೇವಯಾನಿ ಇಂಟರ್ನ್ಯಾಷನಲ್ (Devyani International) ಮತ್ತು ಸಫೈರ್ ಫುಡ್ಸ್ (Sapphire Foods) ಸಂಸ್ಥೆಗಳು ನಡೆಸುತ್ತವೆ. ಈ ಜಾಗತಿಕ ಮಾಲೀಕತ್ವದ ಬದಲಾವಣೆಯು ಭಾರತದ ದೈನಂದಿನ ರೆಸ್ಟೋರೆಂಟ್ ನಿರ್ವಹಣೆಯ ಮೇಲೆ ತಕ್ಷಣದ ಯಾವುದೇ ದೊಡ್ಡ ಪರಿಣಾಮ ಬೀರುವುದಿಲ್ಲ. ಆದರೆ ಹೊಸ ಮಾಲೀಕರಾದ ‘ಲಾಂಗ್‌ರೇಂಜ್ ಕ್ಯಾಪಿಟಲ್’ ಭವಿಷ್ಯದಲ್ಲಿ ಜಾಗತಿಕವಾಗಿ ತರಲಿರುವ ಹೊಸ ತಂತ್ರಜ್ಞಾನ ಹಾಗೂ ಬೆಳವಣಿಗೆಯ ಯೋಜನೆಗಳು ಭಾರತದ ಮಾರುಕಟ್ಟೆಗೂ ಅನ್ವಯವಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Video: ಎಚ್ಎಸ್ಆರ್ ಲೇಔಟ್‌ನ 1BHK ನಲ್ಲಿ ವಾಸಿಸುವ ಮಹಿಳೆಯ ತಿಂಗಳ ಖರ್ಚು ಎಷ್ಟು ಗೊತ್ತಾ? – Kannada News | Bengaluru: A woman living in a 1BHK in HSR Layout revealed her monthly expenses.

ಬೆಂಗಳೂರು, ಜೂನ್ 17: ಬೆಂಗಳೂರು (Bengaluru) ಯುವಕ ಯುವತಿಯರಿಗೆ ಕನಸಿನಲೋಕ. ಗುಣಮಟ್ಟದ ಜೀವನ, ಹೆಚ್ಚು ಸಂಬಳ ಸಿಗುವ ಕೆಲಸವೇ ಬೇಕೆಂದು ಓದು ಮುಗಿಯುತ್ತಿದ್ದಂತೆ ಹಳ್ಳಿ ಬಿಟ್ಟು ಬೆಂಗಳೂರಿಗೆ ಬರ್ತಾರೆ. ಆದರೆ ಈ ಸಿಲಿಕಾನ್ ಸಿಟಿಯಲ್ಲಿ ಬೆಂಗಳೂರಿನಲ್ಲಿ ದುಬಾರಿ ಬಾಡಿಗೆ, ದುಪ್ಪಟ್ಟಾದ ಜೀವನ ವೆಚ್ಚಗಳೇ ಹೆಚ್ಚಾಗಿದೆ. ಎಚ್‌ಎಸ್‌ಆರ್ ಲೇಔಟ್‌ನ (HSR Layout) 1ಬಿಹೆಚ್ ಕೆ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿರುವ ಮಹಿಳೆಯೊಬ್ಬರು ತಮ್ಮ ಮಾಸಿಕ ವೆಚ್ಚವನ್ನು ಬಹಿರಂಗಪಡಿಸಿದ್ದಾರೆ. ಈ ಪೋಸ್ಟ್ ಚರ್ಚೆಗೆ ಕಾರಣವಾಗಿದ್ದು ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ.

ಶ್ರುತಿ (Shruti) ಎಂಬ ಮಹಿಳೆ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಶ್ರುತಿ ತನ್ನ ಜೀವನಶೈಲಿಯ ಬಗ್ಗೆ ಹೆಚ್ಚಾಗಿ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ನಾನು ಶ್ರುತಿ,  ನನ್ನ ತಿಂಗಳ ಮನೆ ಬಾಡಿಗೆ ಎಷ್ಟು ಮತ್ತು ನಾನು ಎಲ್ಲಿ ವಾಸಿಸುತ್ತಿರುವುದು?  ನನಗೆ ಈ ಎರಡು ಪ್ರಶ್ನೆಗಳೊಂದಿಗೆ 24/7 ಡಿಎಂಗಳು ಬರುತ್ತವೆ: ಎಂದು ಕ್ಲಿಪ್ ನಲ್ಲಿ ಹೇಳಿದ್ದಾರೆ. ನಾನು ಎಚ್‌ಎಸ್‌ಆರ್‌ನಲ್ಲಿ ವಾಸಿಸುತ್ತಿದ್ದೇನೆ. ನನ್ನ ಮನೆ ಬಾಡಿಗೆ 36,000 ರೂ. ಹೌದು, ನನ್ನ ಬಳಿ ಈ ಫ್ಲಾಟ್‌ನಲ್ಲಿ ಇರುವಷ್ಟು ಹಣವಿದೆ ಎಂದು ಬಹಿರಂಗ ಪಡಿಸಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಈ ವಿಡಿಯೋದ ಶೀರ್ಷಿಕೆಯಲ್ಲಿ, ಎಚ್ ಎಸ್ ಆರ್ ಲೇಔಟ್‌ನಲ್ಲಿರುವ 1BHK ಅಪಾರ್ಟ್‌ಮೆಂಟ್‌ನ ಮಾಸಿಕ ಬಾಡಿಗೆ 36,000 ರೂ, ಬಾಡಿಗೆ ಉಪಕರಣಗಳ ಬೆಲೆ ಸುಮಾರು 5,000 ರೂ, ವಿದ್ಯುತ್ ಮತ್ತು ಗೃಹ ಸಹಾಯ ಸೇವೆಗಳಿಗಾಗಿ ತಾನು ಸುಮಾರು 4,000 ರೂ ಖರ್ಚು ಮಾಡುತ್ತೇನೆ. ತನ್ನ ದಿನಸಿ ಹಾಗೂ ಆಹಾರ ವಿತರಣಾ ವೆಚ್ಚಗಳು ತಿಂಗಳಿಗೆ 7,000 ರಿಂದ 8,000 ರೂ ರವರೆಗೆ ಇರುತ್ತವೆ. ನಾನು ನನ್ನ ಹೆಚ್ಚಿನ ಊಟವನ್ನು ನಾನೇ ತಯಾರಿಸುತ್ತೇನೆ ಹಾಗೂ ಸ್ವಚ್ಛವಾಗಿ ತಿನ್ನಲು ಪ್ರಯತ್ನಿಸುತ್ತೇನೆ ಎಂದು ಬರೆದಿದ್ದಾರೆ.

ಸಾರಿಗೆ ವೆಚ್ಚವು ತಿಂಗಳಿಗೆ 4,000-5,000 ರೂ ತಗಲುತ್ತದೆ. ಪೈಲೇಟ್ಸ್, ಜಿಮ್ ಸದಸ್ಯತ್ವಗಳು ಮತ್ತು ಫಿಟ್‌ನೆಸ್ ತರಗತಿಗಳ ವೆಚ್ಚವು 5,000 ರೂ ಆಗುತ್ತದೆ. ಶಾಪಿಂಗ್ ಮತ್ತು ಇಂಪಲ್ಸ್ ಖರೀದಿಗಳಿಗೆ ಸಂಬಂಧಿಸಿದಂತೆ ನಾವು ಈ ವೆಚ್ಚಗಳ ಬಗ್ಗೆ ಚರ್ಚಿಸುವುದಿಲ್ಲ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ವಯಸ್ಕರಾಗುವುದು ಖುಷಿ ನೀಡುತ್ತದೆ. ನನ್ನ ಬ್ಯಾಂಕ್ ಖಾತೆ ಒಪ್ಪದೇ ಇರಬಹುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಶಾಪಿಂಗ್ – ಸುತ್ತಾಟಕ್ಕೆ 1.1 ಲಕ್ಷ ರೂ; ತಿಂಗಳ ಖರ್ಚು ವೆಚ್ಚದ ಬಗ್ಗೆ ರಿವೀಲ್ ಮಾಡಿದ ಬೆಂಗಳೂರಿನ ಮಹಿಳೆ

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ.. ಒಬ್ಬ ಬಳಕೆದಾರ, ದುಬಾರಿ ಜೀವನಶೈಲಿ ಬದಲಾಯಿಸಿಕೊಂಡರೆ ಖರ್ಚು ಕಡಿಮೆಯಾಗುತ್ತದೆ ಎಂದಿದ್ದಾರೆ. ಇನ್ನೊಬ್ಬರು, ನಾನು ಮಾತ್ರ ಈ ಎಲ್ಲಾ ಸೌಕರ್ಯಕ್ಕಾಗಿ ಹಣವನ್ನು ಖರ್ಚು ಮಾಡುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಮತ್ತೊಬ್ಬರು, ನಾನು HSR ನಲ್ಲಿ ಇರುವೆ. ಇದರ ಬಾಡಿಗೆ 36 ಸಾವಿರ ರೂ ಇದೆ, ಆದರೆ ಈ ಫ್ಲಾಟ್ ಗಾತ್ರ ಚಿಕ್ಕದಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೇರಳದ ಉಚಿತ ಬಸ್ ಪ್ರಯಾಣ ಯೋಜನೆ: ಮಂಗಳೂರಿನ ಕಾರ್ಮಿಕರ ಕೊರತೆ ನೀಗಿಸುವ ನಿರೀಕ್ಷೆ! – Kannada News | Kerala’s Free Bus Scheme For Women to Ease Labour Shortages in Mangaluru

ಮಂಗಳೂರು, ಜೂನ್ 17: ನೆರೆಯ ಕೇರಳಂ (Keralam) ರಾಜ್ಯ ಸರ್ಕಾರವು ಮಹಿಳೆಯರಿಗಾಗಿ ಜಾರಿಗೆ ತಂದಿರುವ ‘ಪ್ರಿಯದರ್ಶಿನಿ’ ಉಚಿತ ಬಸ್ ಪ್ರಯಾಣ ಯೋಜನೆಯನ್ನು ಗಡಿ ಭಾಗದ ನಿರ್ದಿಷ್ಟ ಪ್ರದೇಶಗಳಿಗೂ ವಿಸ್ತರಿಸಲು ನಿರ್ಧರಿಸಿದೆ. ಕೇರಳ ಸರ್ಕಾರದ ಈ ಮಹತ್ವದ ನಿರ್ಧಾರದಿಂದಾಗಿ ಮಂಗಳೂರು ನಗರ ಮತ್ತು ಸುತ್ತಮುತ್ತಲಿನ ಉದ್ಯಮ ವಲಯಗಳಲ್ಲಿ ದೀರ್ಘಕಾಲದಿಂದ ಕಾಡುತ್ತಿದ್ದ ಮಹಿಳಾ ಕಾರ್ಮಿಕರ ಕೊರತೆ ಶೀಘ್ರದಲ್ಲೇ ನೀಗುವ ನಿರೀಕ್ಷೆಯಿದೆ.

ಮುಖ್ಯಾಂಶಗಳು

  • ಕೇರಳದ ಉಚಿತ ಬಸ್ ಯೋಜನೆ ಗಡಿ ಭಾಗದ ಮಂಗಳೂರಿಗೂ ವಿಸ್ತರಣೆಯಾಗುತ್ತಿದೆ.
  • ಇದರಿಂದ ಮಂಗಳೂರಿನ ಪ್ರಮುಖ ಸೇವಾ ವಲಯಗಳ ಕಾರ್ಮಿಕರ ಕೊರತೆ ನೀಗಲಿದೆ.
  • ಪ್ರಯಾಣ ವೆಚ್ಚ ಉಳಿಯುವುದರಿಂದ ಮಹಿಳಾ ಕಾರ್ಮಿಕರ ಆರ್ಥಿಕ ಸ್ಥಿತಿ ಸುಧಾರಿಸಲಿದೆ.

ಕೇರಳದ ಕಾಸರಗೋಡು ಜಿಲ್ಲೆಯ ಮಹಿಳೆಯರಿಗೆ ಈ ಯೋಜನೆಯಿಂದಾಗಿ ಮಂಗಳೂರಿಗೆ ಬಂದು ಕೆಲಸ ಮಾಡಲು ಉತ್ತಮ ಆರ್ಥಿಕ ನೆರವು ಸಿಗಲಿದೆ. ಇದು ಗಡಿ ಭಾಗದ ಉಭಯ ಜಿಲ್ಲೆಗಳ ನಡುವಿನ ವಾಣಿಜ್ಯ ಮತ್ತು ಆರ್ಥಿಕ ಸಂಬಂಧವನ್ನು ಮತ್ತಷ್ಟು ಬಲಪಡಿಸಲಿದೆ.

ಮಂಗಳೂರು-ಕಾಸರಗೋಡು ಗಡಿ ಭಾಗಕ್ಕೆ ವರದಾನ

ಮಂಗಳೂರು ಮತ್ತು ಕಾಸರಗೋಡು ದಶಕಗಳಿಂದಲೂ ಒಂದಕ್ಕೊಂದು ನಿಕಟ ಸಾಮಾಜಿಕ ಮತ್ತು ಆರ್ಥಿಕ ಸಂಪರ್ಕವನ್ನು ಹೊಂದಿವೆ. ಶಿಕ್ಷಣ, ಆರೋಗ್ಯ, ಉದ್ಯೋಗ ಮತ್ತು ವ್ಯಾಪಾರಕ್ಕಾಗಿ ಪ್ರತಿದಿನ ಸಾವಿರಾರು ಜನರು ಕರ್ನಾಟಕ-ಕೇರಳ ಗಡಿಯನ್ನು ದಾಟಿ ಓಡಾಡುತ್ತಾರೆ. ಕಾಸರಗೋಡು ಜಿಲ್ಲೆಯಲ್ಲಿ ಸ್ಥಳೀಯವಾಗಿ ಉದ್ಯೋಗಾವಕಾಶಗಳು ಸೀಮಿತವಾಗಿರುವುದರಿಂದ, ಅಲ್ಲಿನ ನಿರಾಶ್ರಿತರು ಮತ್ತು ಉದ್ಯೋಗಾಕಾಂಕ್ಷಿಗಳು ಮಂಗಳೂರನ್ನು ಮೆಚ್ಚಿಕೊಂಡಿದ್ದಾರೆ. ವಿಶೇಷವಾಗಿ ಮಂಗಳೂರಿನ ಚಿಲ್ಲರೆ ವ್ಯಾಪಾರ, ಹೋಟೆಲ್ ಉದ್ಯಮ, ಆರೋಗ್ಯ ಕ್ಷೇತ್ರ ಮತ್ತು ಮನೆಗೆಲಸದ ವಲಯಗಳಲ್ಲಿ ಕಾರ್ಮಿಕರ ಭಾರಿ ಬೇಡಿಕೆಯಿದೆ.

ಶೂನ್ಯ ಪ್ರಯಾಣ ವೆಚ್ಚದಿಂದ ಹೆಚ್ಚಲಿರುವ ಆರ್ಥಿಕ ಸ್ವಾವಲಂಬನೆ

ಕಡಿಮೆ ಅಥವಾ ಮಧ್ಯಮ ವೇತನ ಪಡೆಯುವ ಮಹಿಳಾ ಕಾರ್ಮಿಕರಿಗೆ ಪ್ರತಿದಿನದ ಬಸ್ ಪ್ರಯಾಣದ ವೆಚ್ಚವೇ ದೊಡ್ಡ ಹೊರೆಯಾಗಿತ್ತು. ಈಗ ಕೇರಳ ಸಾರಿಗೆ ಸಂಸ್ಥೆಯ (KSRTC) ಆರ್ಡಿನರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ‘ಜೀರೋ ಟಿಕೆಟ್’ ವ್ಯವಸ್ಥೆ ಜಾರಿಗೆ ಬಂದಿರುವುದರಿಂದ ಕಾಸರಗೋಡಿನ ಮಂಜೇಶ್ವರ, ಉಪ್ಪಳ, ಬಂದಿಯೋಡು ಮುಂತಾದ ಗಡಿ ಭಾಗದ ಮಹಿಳೆಯರು ಯಾವುದೇ ಪ್ರಯಾಣ ವೆಚ್ಚವಿಲ್ಲದೆ ಸುಲಭವಾಗಿ ಮಂಗಳೂರಿಗೆ ಬಂದು ಕೆಲಸ ಮಾಡಬಹುದು.

ಇದು ಮಹಿಳೆಯರ ಕೈಯಲ್ಲಿ ಹೆಚ್ಚಿನ ಉಳಿತಾಯವನ್ನು ಉಳಿಸಲಿದ್ದು, ಅವರ ಆರ್ಥಿಕ ಸ್ವಾವಲಂಬನೆಗೆ ಕಾರಣವಾಗಲಿದೆ. ಇದರೊಂದಿಗೆ, ಕಾಸರಗೋಡಿನ ಮಹಿಳೆಯರು ಶಾಪಿಂಗ್ ಮತ್ತು ವಿನೋದ ವಿಹಾರಕ್ಕಾಗಿ ಮಂಗಳೂರಿಗೆ ಬರುವುದು ಹೆಚ್ಚಾಗಲಿದ್ದು, ಮಂಗಳೂರಿನ ಮಾರುಕಟ್ಟೆಗಳಿಗೂ ಭಾರಿ ಆರ್ಥಿಕ ಲಾಭ ತಂದುಕೊಡಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಅವರು ಹೋಮಕ್ಕೆ ಕೋಟಿ ಸುರಿದರೆ, ನಾನು ರಂಗಭೂಮಿಗೆ ವ್ಯಯಿಸುತ್ತೇನೆ’; ಪ್ರಕಾಶ್ ರಾಜ್

ಪ್ರಕಾಶ್ ರಾಜ್ ನಾಸ್ತಿಕರು. ಅವರು ದೇವರನ್ನು ನಂಬೋದಿಲ್ಲ. ಆದಾಗ್ಯೂ ಕೆಲವೊಮ್ಮೆ ಅವರು ದೇವಸ್ಥಾನಕ್ಕೆ ತೆರಳಿದ್ದು ಇದೆ. ಇದಕ್ಕೆ ಕಾರಣ ಪತ್ನಿ ಎಂದು ಅವರು ಹೇಳಿದ್ದಾರೆ. ‘ನನ್ನ ಪತ್ನಿಗೆ ದೇವರ ಮೇಲೆ ನಂಬಿಕೆ ಇದೆ. ಅವಳು ಹೋಮ-ಹವನ ಮಾಡಿಸೋಣ ಎಂದಾಗ ನಾನು ಹೋಗುತ್ತೇನೆ. ಅದು ಅವಳ ನಂಬಿಕೆ. ಅದಕ್ಕೆ ಪ್ರತಿಯಾಗಿ ನಾನು ಜಗಳ ಮಾಡೋದಿಲ್ಲ. ನನ್ನ ಅನೇಕ ಗೆಳೆಯರು ಕೋಟಿ ಕೋಟಿ ಖರ್ಚು ಮಾಡಿ ಹೋಮ ಮಾಡಿಸುತ್ತಾರೆ. ಇದರಿಂದ ಅವರಿಗೆ ನೆಮ್ಮದಿ ಸಿಗುತ್ತದೆ. ಅದೇ ಕೋಟಿ ಹಣವನ್ನು ನಾನು ರಂಗಭೂಮಿಗೆ, ಫೀಸ್ ಕಟ್ಟಲು ಕಷ್ಟಪಡುವವರಿಗೆ ನೀಡುತ್ತೇನೆ. ಇದು ನನ್ನ ಮನಸ್ಸಿಗೆ ನೆಮ್ಮದಿ ಕೊಡುತ್ತದೆ’ ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಚಿನ್ನಯ್ಯ ತಮ್ಮ ಬಳಿ ಹೇಳಿದ್ದೇನು? ಬಹಿರಂಗಪಡಿಸಿದ ಪ್ರಕಾಶ್ ರೈ – Kannada News | Prakash Raj reveled about what did Chinnayya said to him

ಧರ್ಮಸ್ಥಳ ಪ್ರಕರಣದಲ್ಲಿ ನಟ ಪ್ರಕಾಶ್ ರೈ (Prakash Raj) ಹೆಸರು ಕೇಳಿ ಬಂದಿದೆ. ಚಿನ್ನಯ್ಯ ಹೈಕೋರ್ಟ್​​ಗೆ ಹಾಕಿರುವ ಅರ್ಜಿಯಲ್ಲಿ ನಟ ಪ್ರಕಾಶ್ ರೈ ಹೆಸರನ್ನೂ ಹೇಳಿದ್ದಾರೆ. ಗಿರೀಶ್ ಮಟ್ಟೆಣ್ಣವರ್ ಹೇಳಿಕೊಟ್ಟಂತೆ ಹೇಳಿದರೆ ನಾನೇ ಬಂದು ನಿನ್ನನ್ನು ತಬ್ಬಿಕೊಳ್ಳುವೆ ಎಂದು ಪ್ರಕಾಶ್ ರೈ ಹೇಳಿದ್ದರು ಎಂದು ಚಿನ್ನಯ್ಯ ಹೇಳಿದ್ದು, ಇದೀಗ ನಟ ಪ್ರಕಾಶ್ ರೈ, ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಪ್ರಕಾಶ್ ರೈ, ತಮ್ಮ ಹಾಗೂ ಚಿನ್ನಯ್ಯನ ನಡುವೆ ತಮಿಳು ಭಾಷೆಯಲ್ಲಿ ನಡೆದಿದ್ದ ಸಂಭಾಷಣೆಯನ್ನು ಹೇಳಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಟಾಸ್ ಗೆದ್ದ ಅಫ್ಘಾನಿಸ್ತಾನ್: ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್​ನಲ್ಲಿ 3 ಬದಲಾವಣೆ – Kannada News | India vs Afghanistan, 2nd ODI: Toss Update and Playing XI

ಭಾರತ ಮತ್ತು ಅಫ್ಘಾನಿಸ್ತಾನ್ ನಡುವಣ 2ನೇ ಏಕದಿನ ಪಂದ್ಯ ಶುರುವಾಗಿದೆ. ಲಕ್ನೋನ ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಅಫ್ಘಾನಿಸ್ತಾನ್ ತಂಡದ ನಾಯಕ ಹಶ್ಮತುಲ್ಲಾ ಶಾಹಿದಿ ಬೌಲಿಂಗ್ ಆಯ್ದುಕೊಂಡಿದ್ದಾರೆ. ಅದರಂತೆ ಟೀಮ್ ಇಂಡಿಯಾ ಮೊದಲು ಬ್ಯಾಟ್ ಮಾಡಲಿದೆ.

ಇನ್ನು ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾ ತನ್ನ ಪ್ಲೇಯಿಂಗ್ ಇಲೆವೆನ್​ನಲ್ಲಿ ಮೂರು ಬದಲಾವಣೆ ಮಾಡಿಕೊಂಡಿದೆ. ಕಳೆದ ಮ್ಯಾಚ್​ನಲ್ಲಿ ಕಣಕ್ಕಿಳಿದಿದ್ದ ನಿತೀಶ್ ಕುಮಾರ್ ರೆಡ್ಡಿ ಅವರನ್ನು ಈ ಪಂದ್ಯದಿಂದ ಕೈ ಬಿಡಲಾಗಿದ್ದು, ಅವರ ಬದಲಿಗೆ ಯಶಸ್ವಿ ಜೈಸ್ವಾಲ್​ಗೆ ಸ್ಥಾನ ಕಲ್ಪಿಸಲಾಗಿದೆ.

ಹಾಗೆಯೇ ಪ್ರಸಿದ್ಧ್ ಕೃಷ್ಣ ಬದಲಿಗೆ ಪ್ರಿನ್ಸ್ ಯಾದವ್​ ಆಡುವ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ಹರ್ಷ್ ದುಬೆ ಅವರ ಸ್ಥಾನದಲ್ಲಿ ಕುಲ್ದೀಪ್ ಯಾದವ್ ಕಣಕ್ಕಿಳಿದಿದ್ದಾರೆ.

ಭಾರತ ಪ್ಲೇಯಿಂಗ್ XI: ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ, ಶುಭ್​ಮನ್ ಗಿಲ್ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಗುರ್ನೂರ್ ಬ್ರಾರ್, ಅರ್ಷದೀಪ್ ಸಿಂಗ್, ಪ್ರಿನ್ಸ್ ಯಾದವ್.

ಅಫ್ಘಾನಿಸ್ತಾನ್ ಪ್ಲೇಯಿಂಗ್ XI: ರಹಮಾನುಲ್ಲಾ ಗುರ್ಬಾಝ್ (ವಿಕೆಟ್ ಕೀಪರ್), ಇಬ್ರಾಹಿಂ ಝದ್ರಾನ್, ಸೇದಿಕುಲ್ಲಾ ಅಟಲ್, ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ (ನಾಯಕ), ದರ್ವಿಶ್ ರಸೂಲಿ, ರಶೀದ್ ಖಾನ್, ನಂಗೆಯಾಲಿಯಾ ಖರೋಟಿ, ಅಲ್ಲಾ ಗಝನ್ಫರ್, ಮೊಹಮ್ಮದ್ ಸಲೀಮ್ ಸಫಿ, ಬಿಲಾಲ್ ಸಮಿ.

3 ಮ್ಯಾಚ್​ಗಳ ಸರಣಿ:

ಮೂರು ಪಂದ್ಯಗಳ ಈ ಸರಣಿಯ ಮೊದಲ ಮ್ಯಾಚ್​ನಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿತ್ತು. ಧರ್ಮಶಾಲಾದಲ್ಲಿ ನಡೆದ ಮೊದಲ ಪಂದ್ಯವು ಮಳೆಯ ಕಾರಣ 25 ಓವರ್​ಗಳಿಗೆ ಸೀಮಿತವಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ್ ತಂಡವು 24.2 ಓವರ್​ಗಳಲ್ಲಿ 194 ರನ್​ಗಳಿಸಿ ಆಲೌಟ್ ಆಗಿತ್ತು.

ಈ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ 22.5 ಓವರ್​ಗಳಲ್ಲಿ 195 ರನ್​ಗಳಿಸಿ 7 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿತು. ಈ ಗೆಲುವಿನೊಂದಿಗೆ ಭಾರತ ತಂಡವು ಮೂರು ಮ್ಯಾಚ್​ಗಳ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆಯಲ್ಲಿದೆ.

ಇಂದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ದಾಖಲಿಸಿದರೆ ಸರಣಿ ವಶಪಡಿಸಿಕೊಳ್ಳಬಹುದು. ಹೀಗಾಗಿಯೇ 2ನೇ ಏಕದಿನ ಪಂದ್ಯವು ಅಫ್ಘಾನಿಸ್ತಾನ್ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿ ಮಾರ್ಪಟ್ಟಿದೆ.

ಭಾರತ ಏಕದಿನ ತಂಡ: ಶುಭ್​ಮನ್ ಗಿಲ್ (ನಾಯಕ) , ಕೆಎಲ್ ರಾಹುಲ್ (ವಿಕೆಟ್ ಕೀಪರ್), ರೋಹಿತ್ ಶರ್ಮಾ , ಯಶಸ್ವಿ ಜೈಸ್ವಾಲ್ , ಇಶಾನ್ ಕಿಶನ್ , ಶ್ರೇಯಸ್ ಅಯ್ಯರ್ , ವಾಷಿಂಗ್ಟನ್ ಸುಂದರ್ , ನಿತೀಶ್ ಕುಮಾರ್ ರೆಡ್ಡಿ , ಹರ್ಷ್ ದುಬೆ , ಕುಲ್ದೀಪ್ ಯಾದವ್ , ಅರ್ಷದೀಪ್ ಸಿಂಗ್ , ಗುರ್ನೂರ್ ಬ್ರಾರ್ , ಪ್ರಸಿದ್ಧ್ ಕೃಷ್ಣ , ಪ್ರಿನ್ಸ್ ಯಾದವ್.

ಇದನ್ನೂ ಓದಿ: ಅದು ಫುಟ್‌ಬಾಲ್‌ಗೆ ಸಂಬಂಧಿಸಿದ್ದಲ್ಲ: ಕಣ್ಣೀರಿಟ್ಟ ಲಿಯೋನೆಲ್ ಮೆಸ್ಸಿ!

ಅಫ್ಘಾನಿಸ್ತಾನ್ ಏಕದಿನ ತಂಡ: ರಹಮಾನುಲ್ಲಾ ಗುರ್ಬಾಝ್, ಇಬ್ರಾಹಿಂ ಝದ್ರಾನ್, ಸೇದಿಕುಲ್ಲಾ ಅಟಲ್, ಹಶ್ಮತುಲ್ಲಾ ಶಾಹಿದಿ (ನಾಯಕ), ರಹಮತ್ ಶಾ, ಇಕ್ರಮ್ ಅಲಿಖಿಲ್ (ವಿಕೆಟ್ ಕೀಪರ್), ಅಝ್ಮತ್​ ಒಮರ್​ಝಾಹಿ, ಮೊಹಮ್ಮದ್ ನಬಿ, ರಶೀದ್ ಖಾನ್, ನಂಗೆಯಾಲಿಯಾ ಖರೋಟಿ, ಅಲ್ಲಾ ಗಝನ್​ಫರ್, ಬಿಲಾಲ್ ಸಮಿ, ದರ್ವೀಶ್ ರಸೂಲಿ, ಫರೀದ್ ಮಲಿಕ್, ಝಿಯಾ ಉರ್ ರೆಹಮಾನ್ ಶರೀಫಿ.

Source link

ಮತದಾರರ ಪಟ್ಟಿ ಪರಿಷ್ಕರಣೆ: ಜವಾಬ್ದಾರಿಯಿಂದ ಮುಕ್ತಿ ಕೋರಿ ಇಂದು ಬೆಂಗಳೂರಿನಲ್ಲಿ BLOಗಳ ಬೃಹತ್ ಪ್ರತಿಭಟನೆ! – Kannada News | Bengaluru BLOs Protest Against SIR Voter Verification Work Pressure

ಬೆಂಗಳೂರಿನಲ್ಲಿ BLOಗಳ ಬೃಹತ್ ಪ್ರತಿಭಟನೆ!Image Credit source: newsonair

ಬೆಂಗಳೂರು, ಜೂನ್ 17: ಶನಿವಾರದಿಂದ(ಜೂನ್ 20) ಕರ್ನಾಟಕದಾದ್ಯಂತ ಭಾರತೀಯ ಚುನಾವಣಾ ಆಯೋಗದ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯ ಮುಂದಿನ ಹಂತ ಅಧಿಕೃತವಾಗಿ ಆರಂಭವಾಗಲಿದೆ. ಇದರ ಬೆನ್ನಲ್ಲೇ ಅತಿಯಾದ ಕೆಲಸದ ಒತ್ತಡದ ವಿರುದ್ಧ ಬೂತ್ ಮಟ್ಟದ ಅಧಿಕಾರಿಗಳು (BLOs) ಬಂಡಾಯವೆದ್ದಿದ್ದಾರೆ. ತಮಗೆ ವಹಿಸಿರುವ ಈ ಚುನಾವಣಾ ಜವಾಬ್ದಾರಿಗಳಿಂದ ಮುಕ್ತಿ ನೀಡುವಂತೆ ಆಗ್ರಹಿಸಿ ಇಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಶೇಷಾದ್ರಿ ರಸ್ತೆಯಲ್ಲಿರುವ ಮುಖ್ಯ ಚುನಾವಣಾಧಿಕಾರಿಗಳ (CEO) ಕಚೇರಿ ಮುಂದೆ ಸುಮಾರು 500 ರಿಂದ 1,000 ಬಿಎಲ್‌ಒಗಳು ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ.

ಮುಖ್ಯಾಂಶಗಳು

  • ಜೂನ್ 20 ರಿಂದ ರಾಜ್ಯಾದ್ಯಂತ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಆರಂಭವಾಗಲಿದೆ.
  • ಅತಿಯಾದ ಕೆಲಸದ ಒತ್ತಡ ವಿರೋಧಿಸಿ ಬಿಎಲ್‌ಒಗಳು ಇಂದು ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ.
  • ಹೊಸ ನಿಯಮಗಳಿಂದ ಅರ್ಹ ಮತದಾರರ ಹೆಸರುಗಳು ಕೈಬಿಡುವ ಆತಂಕ ಎದುರಾಗಿದೆ.

ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ನೀಡಲಾಗಿರುವ ಅವಾಸ್ತವಿಕ ಗಡುವುಗಳು, ವಿಪರೀತ ಕೆಲಸದ ಹೊರೆ ಮತ್ತು ಹಿರಿಯ ಅಧಿಕಾರಿಗಳಿಂದ ಬರುತ್ತಿರುವ ತೀವ್ರ ಒತ್ತಡದ ವಿರುದ್ಧ ಬಿಎಲ್‌ಒ ಸಿಬ್ಬಂದಿ ಜಂಟಿಯಾಗಿ ಈ ನಿರ್ಧಾರಕ್ಕೆ ಬಂದಿದ್ದಾರೆ.

ಅಧಿಕಾರಿಗಳ ಅಳಲು

ಜೂನ್ 20 ರಿಂದ ಕರ್ನಾಟಕದಾದ್ಯಂತ ಈ ಮತದಾರರ ಪರಿಷ್ಕರಣೆಯ ಪೂರ್ವಭಾವಿ ಸಿದ್ಧತೆಗಳು ಆರಂಭವಾಗಲಿದ್ದು, ಜೂನ್ 30 ರಿಂದ ಮನೆ ಮನೆ ಸಮೀಕ್ಷೆ ತೀವ್ರಗೊಳ್ಳಲಿದೆ. ರಾಜ್ಯದ ಸಾವಿರಾರು ಬಿಎಲ್‌ಒಗಳು ಇದರಲ್ಲಿ ಭಾಗಿಯಾಗಬೇಕಿದೆ. ಆದರೆ ಯಾವುದೇ ತಳಮಟ್ಟದ ಸಿದ್ಧತೆ ಇಲ್ಲದೆ ಹೇರಲಾಗಿರುವ ಈ ಯೋಜನೆಯಿಂದಾಗಿ ಕ್ಷೇತ್ರ ಅಧಿಕಾರಿಗಳು ಹೈರಾಣಾಗಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ‘ಎದ್ದೇಳು ಕರ್ನಾಟಕ’ ಸಂಘಟನೆಯ ಟ್ರಸ್ಟಿ ತಾರಾ ರಾವ್ , ಚುನಾವಣಾ ಆಯೋಗದ ಪ್ರಸ್ತುತ ಎಸ್‌ಐಆರ್ (SIR) ಜವಾಬ್ದಾರಿಯಿಂದ ತಮಗೆ ಮುಕ್ತಿ ಬೇಕೆಂದು ಹಲವು ಅಧಿಕಾರಿಗಳು ಆಗ್ರಹಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ನೂರಾರು ಅಧಿಕಾರಿಗಳು ಇಂದು ಸಿಇಒ ಕಚೇರಿ ಮುಂದೆ ಜಮಾಯಿಸಲಿದ್ದಾರೆ ಎಂದು ಖಚಿತಪಡಿಸಿದ್ದಾರೆ.

ಅರ್ಹ ಮತದಾರರ ಹೆಸರು ಕೈಬಿಡುವ ಆತಂಕ

‘ಎದ್ದೇಳು ಕರ್ನಾಟಕ’ ಸೇರಿದಂತೆ ಹಲವು ನಾಗರಿಕ ಸಂಘಟನೆಗಳು ಈ ಅವೈಜ್ಞಾನಿಕ ಪರಿಷ್ಕರಣಾ ಪ್ರಕ್ರಿಯೆಯ ವಿರುದ್ಧ ತೀವ್ರ ಕಳವಳ ವ್ಯಕ್ತಪಡಿಸಿವೆ. ಆತುರಾತುರವಾಗಿ ಜಾರಿಗೊಳಿಸುತ್ತಿರುವ ಈ ನಿಯಮಗಳಿಂದಾಗಿ ರಾಜ್ಯದ ಲಕ್ಷಾಂತರ ಜನ್ಮಸಿದ್ಧ ಅರ್ಹ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗುವ ಅಪಾಯವಿದೆ ಎಂದು ಸಂಘಟನೆಗಳು ಎಚ್ಚರಿಸಿವೆ.

ವಿಶೇಷವಾಗಿ ಸಮಾಜದ ಹಿಂದುಳಿದ ವರ್ಗಗಳಾದ ವಲಸೆ ಕಾರ್ಮಿಕರು, ದಲಿತರು ಮತ್ತು ಆದಿವಾಸಿಗಳು ಹಾಗೂ ಶೇ 50 ಕ್ಕಿಂತಲೂ ಹೆಚ್ಚು ಮಹಿಳಾ ಮತದಾರರ ಹೆಸರುಗಳು ತಾಂತ್ರಿಕ ಕಾರಣಗಳಿಂದ ಪಟ್ಟಿಯಿಂದ ಡಿಲೀಟ್ ಆಗುವ ಸಾಧ್ಯತೆ ಹೆಚ್ಚಿದೆ ಎಂದು ತಜ್ಞರು ಆಪಾದಿಸಿದ್ದಾರೆ. ನೆಲದ ಮೇಲಿನ ವಾಸ್ತವ ಪರಿಸ್ಥಿತಿಯನ್ನು ಅರಿಯದೆ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿರುವ ಚುನಾವಣಾ ಆಯೋಗದ ವಿರುದ್ಧ ಇಂದಿನ ಪ್ರತಿಭಟನೆಯಲ್ಲಿ ಬಿಎಲ್‌ಒಗಳು ಧ್ವನಿ ಎತ್ತಲಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೇಗನೆ ಔಟಾದರೂ, 117 ರನ್​ ಪೂರೈಸಿದ ವೈಭವ್ ಸೂರ್ಯವಂಶಿ..! – Kannada News | Vaibhav Sooryavanshi Out For 38 Runs Against Afghanistan A

ಶ್ರೀಲಂಕಾದ ರಂಗಿರಿ ದಂಬುಲ್ಲಾ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯ 5ನೇ ಪಂದ್ಯದಲ್ಲೂ ಭಾರತ ‘ಎ’ ತಂಡದ ಯುವ ಆರಂಭಿಕ ದಾಂಡಿಗ ವೈಭವ್ ಸೂರ್ಯವಂಶಿ ನಿರಾಸೆ ಮೂಡಿಸಿದ್ದಾರೆ. ಈ ಪಂದ್ಯದಲ್ಲೂ ಓಪನರ್ ಆಗಿ ಕಣಕ್ಕಿಳಿದ ವೈಭವ್ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನಿಡಿದ್ದರು. ಅದರಂತೆ ಕೇವಲ 27 ಎಸೆತಗಳಲ್ಲಿ 38 ರನ್ ಬಾರಿಸಿದ್ದರು. ಆದರೆ 28ನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಔಟಾಗಿದ್ದಾರೆ.

ಔಟ್ ಆಗಿದ್ದು ಹೇಗೆ?

ಇನ್ನಿಂಗ್ಸ್‌ನ 8ನೇ ಓವರ್‌ನಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸುತ್ತಿದ್ದ ವೈಭವ್ ಸೂರ್ಯವಂಶಿ, ಬೌಲರ್ ಫರಿದೂನ್ ಎಸೆದ ಶಾರ್ಟ್ ಪಿಚ್ ಚೆಂಡನ್ನು ಪುಲ್ ಶಾಟ್ ಆಡಲು ಪ್ರಯತ್ನಿಸಿದರು. ಆದರೆ, ಚೆಂಡು ಬ್ಯಾಟ್‌ನ ಮೇಲ್ಭಾಗದ ತುದಿಗೆ ತಗುಲಿ ಗಾಳಿಯಲ್ಲಿ ಚಿಮ್ಮಿತು. ಪಾಯಿಂಟ್ ಭಾಗದಲ್ಲಿ ನಿಂತಿದ್ದ ಅಫ್ಘಾನಿಸ್ತಾನ್ ಫೀಲ್ಡರ್ ಖಾಲಿದ್ ತನಿವಾಲ್ ಸುಲಭವಾಗಿ ಕ್ಯಾಚ್ ಹಿಡಿದರು. ಇದರೊಂದಿಗೆ ವೈಭವ್ ಸೂರ್ಯವಂಶಿ ಇನಿಂಗ್ಸ್ ಅಂತ್ಯಗೊಂಡಿತು.

ಆರಂಭದಲ್ಲೇ ಜೀವದಾನ:

ಟೀಮ್ ಇಂಡಿಯಾ ಇನ್ನಿಂಗ್ಸ್‌ನ ಆರಂಭದಲ್ಲೇ ಕಟ್ ಶಾಟ್ ಹೊಡೆಯಲು ಹೋಗಿ ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿ ವೈಭವ್ ಸೂರ್ಯವಂಶಿ ಕ್ಯಾಚ್ ನೀಡಿದ್ದರು. ಆನ್-ಫೀಲ್ಡ್ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದರೂ, ಥರ್ಡ್ ಅಂಪೈರ್ ಮರುಪರಿಶೀಲಿಸಿದಾಗ ಫೀಲ್ಡರ್ ಚೆಂಡನ್ನು ನೆಲಕ್ಕೆ ಮುಟ್ಟಿಸಿರುವುದು ಕಂಡು ಬಂತು. ಇದರಿಂದಾಗಿ ವೈಭವ್​ಗೆ ಆರಂಭದಲ್ಲೇ  ಜೀವದಾನ ಸಿಕ್ಕಿತ್ತು. ಝೀರೋ ರನ್​ಗೆ ಸಿಕ್ಕ ಈ ಜೀವದಾನದ ಸದುಪಯೋಗ ಪಡೆದು 38 ರನ್ ಬಾರಿಸಿದರೂ, ಚೊಚ್ಚಲ ಅರ್ಧಶತಕ ಬಾರಿಸುವಲ್ಲಿ ವೈಭವ್ ವಿಫಲರಾಗಿದ್ದಾರೆ.

117 ರನ್ ಪೂರೈಸಿದ ವೈಭವ್:

ವೈಭವ್ ಸೂರ್ಯವಂಶಿ ಅವರು ಸರಣಿಯ ನಾಲ್ಕು ಪಂದ್ಯಗಳ ಮೂಲಕ ಒಟ್ಟು 117 ರನ್ ಕಲೆಹಾಕಿದ್ದಾರೆ.

  • ಮೊದಲ ಪಂದ್ಯ (vs ಶ್ರೀಲಂಕಾ ‘ಎ’ ): 14 ರನ್ (12 ಎಸೆತಗಳು, 3 ಫೋರ್)
  • ಎರಡನೇ ಪಂದ್ಯ (vs ಅಫ್ಘಾನಿಸ್ತಾನ್ ‘ಎ’): 44 ರನ್ (22 ಎಸೆತಗಳು, 9 ಫೋರ್)
  • ಮೂರನೇ ಪಂದ್ಯ (vs ಶ್ರೀಲಂಕಾ ‘ಎ’): 21 ರನ್ (14 ಎಸೆತಗಳು, 1 ಸಿಕ್ಸ್, 3 ಫೋರ್)
  • ನಾಲ್ಕನೇ ಪಂದ್ಯ (vs ಅಫ್ಘಾನಿಸ್ತಾನ್ ‘ಎ’): 38 ರನ್​ (27 ಎಸೆತಗಳು, 2 ಸಿಕ್ಸ್, 4 ಫೋರ್)

ಈ ನಾಲ್ಕು ಇನಿಂಗ್ಸ್​ಗಳ ಮೂಲಕ ವೈಭವ್ ಸೂರ್ಯವಂಶಿ ತಮ್ಮ ಕೆರಿಯರ್​ನ ಮೊದಲ ತಿಕ್ರೋನ ಸರಣಿಯಲ್ಲಿ ನೂರು ರನ್​ಗಳ ಗಡಿದಾಟಿದ್ದಾರೆ.

ಟೀಮ್ ಇಂಡಿಯಾ ಸ್ಕೋರ್:

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುತ್ತಿರುವ ಟೀಮ್ ಇಂಡಿಯಾ 15 ಓವರ್​ಗಳ ಮುಕ್ತಾಯದ ವೇಳೆಗೆ ವೈಭವ್ ಸೂರ್ಯವಂಶಿ (38) ಹಾಗೂ ಪ್ರಿಯಾಂಶ್ ಆರ್ಯಾ (58) ವಿಕೆಟ್ ಕಳೆದುಕೊಂಡು 115 ರನ್ ಕಲೆಹಾಕಿದೆ. ಸದ್ಯ ಕ್ರೀಸ್​ನಲ್ಲಿ ತಿಲಕ್ ವರ್ಮಾ ಹಾಗೂ ರುತುರಾಜ್ ಗಾಯಕ್ವಾಡ್ ಬ್ಯಾಟಿಂಗ್ ಮುಂದುವರೆಸಿದ್ದಾರೆ.

ಭಾರತ ಎ ಪ್ಲೇಯಿಂಗ್ 11: ಪ್ರಿಯಾಂಶ್ ಆರ್ಯ , ವೈಭವ್ ಸೂರ್ಯವಂಶಿ , ರುತುರಾಜ್ ಗಾಯಕ್ವಾಡ್ , ತಿಲಕ್ ವರ್ಮಾ (ನಾಯಕ) , ಕುಮಾರ್ ಕುಶಾಗ್ರ (ವಿಕೆಟ್ ಕೀಪರ್) , ನಿಶಾಂತ್ ಸಿಂಧು , ಸೂರ್ಯಾಂಶ್ ಶೆಡ್ಗೆ , ವಿಪ್ರಾಜ್ ನಿಗಮ್ , ಅನ್ಕೂಲ್ ರಾಯ್ , ಅನ್ಶುಲ್ ಕಂಬೋಜ್ , ಯಶ್ ಠಾಕೂರ್.

ಇದನ್ನೂ ಓದಿ: ಗೋಲು ಬಾರಿಸಿ ಕ್ಷಮೆಯಾಚಿಸಿದ ಯಾಸಿನ್ ಅಯಾರಿ..!

ಅಫ್ಘಾನಿಸ್ತಾನ್ ಎ ಪ್ಲೇಯಿಂಗ್ 11: ಇಮ್ರಾನ್ ಮೀರ್ (ನಾಯಕ) , ಹಸನ್ ಐಸಾಖಿಲ್ , ಖಾಲಿದ್ ತನಿವಾಲ್ , ಫೈಸಲ್ ಶಿನೋಜಾಡಾ , ಬಹೀರ್ ಶಾ , ಫರ್ಮಾನುಲ್ಲಾ ಸಫಿ , ಶಮ್ಸ್ ಉರ್ ರೆಹಮಾನ್ , ಮೊಹಮ್ಮದ್ ಇಶಾಕ್ (ವಿಕೆಟ್ ಕೀಪರ್) , ಝಹೀರ್ ಖಾನ್ , ಅಬ್ದುಲ್ಲಾ ಅಹ್ಮದ್‌ಝಾಹಿ , ಫರಿದೂನ್ ದಾವೂದ್‌.

Source link

ಶಿವಣ್ಣನ ಎನರ್ಜಿಗೆ ತಮಿಳು ಸಿನಿಮಾ ತಂಡ ಫಿದಾ, ವಿಡಿಯೋ ನೋಡಿ – Kannada News | Shiva Rajkumar bring energy to Tamil movie set watch video

ಶಿವರಾಜ್ ಕುಮಾರ್ (Shiva Rajkumar) ಅವರ ವಯಸ್ಸಿಗೂ ಅವರ ಎನರ್ಜಿಗೂ ಸಂಬಂಧವೇ ಇಲ್ಲ. ಎಲ್ಲೇ ಹೋದರೂ ಶಿವಣ್ಣ ತಮ್ಮ ಎನರ್ಜಿಯಿಂದ ಆ ಸ್ಥಳದ ವಾತಾವರಣವನ್ನೇ ಬದಲಾಯಿಸಿಬಿಡುತ್ತಾರೆ. ಶಿವರಾಜ್ ಕುಮಾರ್ ಅವರು ಕನ್ನಡ ಮಾತ್ರವಲ್ಲದೆ ಕೆಲ ಪರ ಭಾಷೆ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಅವರು ರಾಮ್ ಚರಣ್ ಜೊತೆ ನಟಿಸಿದ ‘ಪೆದ್ದಿ’ ಸಿನಿಮಾ ರಿಲೀಸ್ ಆಗಿ ಹಿಟ್ ಆಗಿದೆ. ಇದೀಗ ಅವರು ಹೊಸದೊಂದು ತಮಿಳು ಸಿನಿಮಾನಲ್ಲಿ ನಟಿಸುತ್ತಿದ್ದು, ಅಲ್ಲಿಯೂ ಸಹ ಶಿವಣ್ಣ ತಮ್ಮ ಎನರ್ಜಿಯಿಂದ ಇಡೀ ಸೆಟ್​​ಗೆ ಹೊಸ ಕಳೆ ತಂದಿದ್ದಾರೆ.

ಶಿವರಾಜ್ ಕುಮಾರ್ ಅವರು ಇನ್ನೂ ಹೆಸರಿಡದ ಹೊಸ ತಮಿಳು ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಡ್ರಾಮಾ ಕಂಪೆನಿ ಹೆಸರಿನ ನಿರ್ಮಾಣ ಸಂಸ್ಥೆ ನಿರ್ಮಿಸುತ್ತಿರುವ ಮೊದಲ ಸಿನಿಮಾ ಇದಾಗಿದ್ದು, ಸಿನಿಮಾ ತಂಡ ಇತ್ತೀಚೆಗಷ್ಟೆ ಶಿವಣ್ಣನವರ ವಿಡಿಯೋ ಒಂದನ್ನು ಬಿಡುಗಡೆ ಮಾಡಿದೆ. ವಿಡಿಯೋನಲ್ಲಿ ಶಿವಣ್ಣ ತಮ್ಮ ಎಂದಿನ ಜೋಶ್​​ನಲ್ಲಿ ಸೆಟ್​​ನಲ್ಲಿ ನಗುತ್ತಾ, ಎಲ್ಲರನ್ನೂ ನಗಿಸುತ್ತಾ, ಕಾಲೆಳೆಯುತ್ತಾ, ಯುವಕರಿಗೆ ಪಾಠ ಮಾಡುತ್ತಾ ಕಂಡು ಬಂದಿದ್ದಾರೆ. ಶಿವರಾಜ್ ಕುಮಾರ್ ಅವರು ಸೆಟ್​​ನಲ್ಲಿ ತಮಿಳಿಗರೊಬ್ಬರಿಗೆ ಕನ್ನಡದ ‘ಜೊತೆಯಲಿ, ಜೊತೆಯಲಿ’ ಹಾಡು ಸಹ ಹೇಳಿಕೊಟ್ಟಿದ್ದಾರೆ.

ವಿಡಿಯೋ ನೋಡಿದರೆ ಶಿವರಾಜ್ ಕುಮಾರ್ ಅವರು ಮಧ್ಯಮ ವರ್ಗದ ವ್ಯಕ್ತಿಯೊಬ್ಬನ ಪಾತ್ರದಲ್ಲಿ ನಟಿಸಿದಂತಿದೆ. ಹೀರೋ ತಂದೆಯ ಪಾತ್ರ ಇರಬಹುದೆಂಬ ಅನುಮಾನವೂ ಮೂಡುತ್ತಿದೆ. ಆದರೆ ಶಿವಣ್ಣನ ಪಾತ್ರ ಪವರ್​​ಫುಲ್ ಆಗಿಯೂ ಇರಬಹುದೆಂಬ ಸುಳಿವು ವಿಡಿಯೋನಲ್ಲಿದೆ. ವಿಡಿಯೋನಲ್ಲಿ ತೋರಿಸಿರುವಂತೆ, ಸೆಟ್​​ನಲ್ಲಿಯೇ ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಅವರ ವಿವಾಹ ವಾರ್ಷಿಕೋತ್ಸವದ ಸೆಲೆಬ್ರೇಷನ್ ಸಹ ನಡೆದಿದೆ. ಬನಿಯನ್ನು-ಪಂಚೆ ತೊಟ್ಟುಕೊಂಡು ಶಿವಣ್ಣ ಕೇಕ್ ಕತ್ತರಿಸಿದ್ದಾರೆ.

ವಿಡಿಯೋ ಅನ್ನು 65 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಕಮೆಂಟ್ ಸೆಕ್ಷನ್​​ನಲ್ಲಿ ಶಿವರಾಜ್ ಕುಮಾರ್ ಅವರ ಸರಳತೆಯನ್ನು, ಸೆಟ್​​ನಲ್ಲಿ ಅವರು ಬೆರೆಯುವ ರೀತಿ, ಅವರ ಎನರ್ಜಿ, ಜೋಶ್​ ಅನ್ನು ನೆಟ್ಟಿಗರು ಕೊಂಡಾಡಿದ್ದಾರೆ. ಶಿವರಾಜ್ ಕುಮಾರ್ ಅವರು ಎಲ್ಲಿಯೇ ಹೋದರು ಸೆಟ್​​ಗೆ ಒಂದು ಎನರ್ಜಿ ತಂದುಕೊಡುತ್ತಾರೆ. ಶಿವರಾಜ್ ಕುಮಾರ್ ಅವರಿಗೆ ಈಗ 63 ವರ್ಷ ವಯಸ್ಸು. ಆದರೆ ಈಗಲೂ ನವ ಯುವಕನಂತೆ ಹಾಡುತ್ತಾ, ಕುಣಿಯುತ್ತಾ ಇರುತ್ತಾರೆ.

ಶಿವರಾಜ್ ಕುಮಾರ್ ಅವರು ಪ್ರಸ್ತುತ ಕನ್ನಡದ ‘666 ಆಪರೇಷನ್ ಡ್ರೀಮ್ ಪ್ರಾಜೆಕ್ಟ್’ ಸಿನಿಮಾನಲ್ಲಿ ನಟಿಸುತ್ತಿದ್ದಾ. ಜೊತೆಗೆ ‘ಎ ಫಾರ್ ಆನಂದ್’ ಹೆಸರಿನ ಹೊಸ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ‘ಬೇಲ್’ ಹೆಸರಿನ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ತಮಿಳಿನ ‘ಜೈಲರ್ 2’ ಸಿನಿಮಾನಲ್ಲಿಯೂ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link