ಮೋದಿ ಮನವಿಗೆ ಸ್ಪಂದನೆ; ಪೆಟ್ರೋಲ್ ಉಳಿಸಲು ಸೈಕಲ್ನಲ್ಲೇ ನ್ಯಾಯಾಲಯಕ್ಕೆ ಬಂದ ಹೈಕೋರ್ಟ್ ನ್ಯಾಯಮೂರ್ತಿ – Kannada News | Madhya Pradesh High Court judge rides cycle to Court after PM Modi’s appeal to save fuel
ನವದೆಹಲಿ, ಮೇ 12: ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಬಿಕ್ಕಟ್ಟಿನಿಂದಾಗಿ ಇಂಧನ ಉಳಿಸಲು ಪ್ರಧಾನಿ ನರೇಂದ್ರ ಮೋದಿ (PM Narendra Modi) ಮನವಿ ಮಾಡಿದ್ದರು. ಎಲೆಕ್ಟ್ರಿಕ್ ವಾಹನ, ಸರ್ಕಾರಿ ಸಾರಿಗೆಯನ್ನು ಬಳಸಲು ಕರೆನೀಡಿದ್ದರು. ಅವರ ಮನವಿಗೆ ದೇಶಾದ್ಯಂತ ಸಾಕಷ್ಟು ಉತ್ತಮ ಸ್ಪಂದನೆ ಬರುತ್ತಿದೆ. ಮಧ್ಯಪ್ರದೇಶದ ಹೈಕೋರ್ಟ್ ನ್ಯಾಯಾಧೀಶರು ಕೂಡ ಪ್ರಧಾನಿ ಮೋದಿಯ ಮನವಿಗೆ ಸ್ಪಂದಿಸಿ, ನ್ಯಾಯಾಲಯಕ್ಕೆ ಕಾರಿನ ಬದಲು ಸೈಕಲ್ನಲ್ಲಿ ಆಗಮಿಸಿದ್ದಾರೆ. ಈ ವಿಡಿಯೋ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಅಮೆರಿಕ-ಇರಾನ್ ಯುದ್ಧದಿಂದಾಗಿ ನಡೆಯುತ್ತಿರುವ ಜಾಗತಿಕ ಇಂಧನ ಬಿಕ್ಕಟ್ಟಿನ ನಡುವೆ…