Headlines

DigiLocker: ನಿಮ್ಮ ಡಿಜಿಲಾಕರ್ ಅಕೌಂಟ್‌ ಹ್ಯಾಕ್ ಆಗಿದೆ ಎಂದು ಹೀಗೆ ತಿಳಿಯಿರಿ – Kannada News | Know how do you know if your DigiLocker account has been hacked

ಭಾರತ ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆಯಡಿಯಲ್ಲಿ ಡಿಜಿಲಾಕರ್ (DigiLocker) ಡಿಜಿಟಲ್ ಇಂಡಿಯಾ ಪರಿಚಯಿಸಲಾದ ಸುರಕ್ಷಿತ ಕ್ಲೌಡ್ ಆಧಾರಿತ ವೇದಿಕೆಯಾಗಿದೆ. ಇದೊಂದು ಡಿಜಿಟಲ್‌ ದಾಖಲೆಗಳ ಲಾಕರ್. ಈ ಖಾತೆ ಮೂಲಕ ನೀವು ಡ್ರೈವಿಂಗ್ ಲೈಸೆನ್ಸ್, ವಾಹನ ನೋಂದಣಿ ಪತ್ರ, ಅಂಕಪಟ್ಟಿಗಳು ಮತ್ತು ಪ್ಯಾನ್ ಕಾರ್ಡ್‌ಗಳನ್ನು ಡಿಜಿಟಲ್ ರೂಪದಲ್ಲಿ ಸುರಕ್ಷಿತವಾಗಿ ಸಂಗ್ರಹಿಸಬಹುದಾಗಿದೆ. ಒಂದು ವೇಳೆ ನಿಮ್ಮ ಡಿಜಿಲಾಕರ್ ಹ್ಯಾಕ್ ಆಗಿದೆ ಎಂದು ಈ ಕೆಲವು ಸಣ್ಣ ಬದಲಾವಣೆಯಿಂದ ತಿಳಿಯಬಹುದು. ಒಂದು ವೇಳೆ ನೀವು ಈ ಕೆಲಸ ಮೊದ್ಲು ಮಾಡಿದ್ರೆ ಹ್ಯಾಕ್ ಆದ ಖಾತೆ ಸುರಕ್ಷಿತವಾಗಿರುತ್ತದೆ.

ಡಿಜಿಲಾಕರ್ ಹ್ಯಾಕ್ ಆಗಿದೆ ಎಂದು ತಿಳಿಯುವುದು ಹೇಗೆ?

  • ನೀವು ಡಿಜಿಲಾಕರ್‌ಗೆ ಲಾಗಿನ್ ಆಗದಿದ್ರೂ ನಿಮ್ಮ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ.
  • ಡಿಜಿ ಲಾಕರ್ ಪ್ರೊಫೈಲ್‌ನಲ್ಲಿನ ಹೆಸರು, ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿ ಬದಲಾಗಿರುತ್ತದೆ.
  • ಡಿಜಿ ಲಾಕರ್ ಖಾತೆಗೆ ಲಾಗಿನ್ ಆಗಲು ಪಾಸ್‌ವರ್ಡ್ ಬಳಸಿದ್ರೂ ಲಾಗಿನ್ ಆಗಲು ಆಗಲ್ಲ.
  • ಡಿಜಿ ಲಾಕರ್ ನಲ್ಲಿ ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್ ಅಥವಾ ಇತರ ದಾಖಲೆಗಳನ್ನು ಡೌನ್‌ಲೋಡ್ ಮಾಡಲಾಗಿರುತ್ತದೆ.

ಡಿಜಿಲಾಕರ್ ಹ್ಯಾಕ್ ಆಗಿದ್ರೆ ನೀವು ಮೊದಲು ಏನು ಮಾಡಬೇಕು?

ಪಾಸ್‌ವರ್ಡ್ ಬದಲಾಯಿಸುವುದನ್ನು ಮರೆಯದಿರಿ: ನಿಮ್ಮ ಡಿಜಿಲಾಕರ್ ಖಾತೆಗೆ ಲಾಗಿನ್ ಆಗಿ ತಕ್ಷಣವೇ ನಿಮ್ಮ ಪಾಸ್‌ವರ್ಡ್ ಬದಲಾಯಿಸಿ.

ನಕಲಿ ಆಪ್‌ಗಳನ್ನು ಬಳಸುವುದನ್ನು ತಪ್ಪಿಸಿ: ಈಗ ನಕಲಿ ಆ್ಯಪ್ ಗಳ ಸಂಖ್ಯೆ ಹೆಚ್ಚಾಗಿದೆ. ನೀವೇನಾದ್ರೂ ನಕಲಿ ಡಿಜಿಲಾಕರ್ ಆ್ಯಪ್ ಡೌನ್‌ಲೋಡ್ ಅದನ್ನು ಡಿಲೀಟ್ ಮಾಡಿ . ನ್ಯಾಷನಲ್‌ ಇ- ಗವರ್ನೆನ್ಸ್‌ ಡಿವಿಷನ್‌  ವತಿಯಿಂದ ಮಾತ್ರ ಡಿಜಿ ಲಾಕರ್ ಡೌನ್‌ಲೋಡ್ ಮಾಡಿ ಬಳಸಿಕೊಂಡು ಖಾತೆ ತೆರೆಯಿರಿ.

ಇತರ ಸಾಧನಗಳಲ್ಲಿ ನೀವು ಲಾಗಿನ್‌ ಆಗಿದ್ದರೆ ತಪ್ಪದೇ ಪರಿಶೀಲಿಸಿ: ನಿಮ್ಮ ಖಾತೆಯ ಸೆಟ್ಟಿಂಗ್‌ಗಳಿಗೆ ಹೋಗಿ, ಅಲ್ಲಿ ನೀವು ಇನ್ಯಾವುದೇ ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ ಲಾಗಿನ್ ಆಗಿದ್ದರೆ, ಅವುಗಳನ್ನು ತಕ್ಷಣವೇ ಲಾಗ್ ಔಟ್ ಮಾಡುವುದು ಉತ್ತಮ.

ಇದನ್ನೂ ಓದಿ: Ration Card: ಕಳೆದುಹೋದ ರೇಷನ್ ಕಾರ್ಡ್ ಸಂಖ್ಯೆಯನ್ನು ಮೊಬೈಲ್‌ನಲ್ಲಿ ಹೀಗೆ ಕಂಡು ಹಿಡಿಯಿರಿ

ಹ್ಯಾಕ್ ಆದದ್ದು ತಿಳಿದರೆ ಸೈಬರ್ ಕ್ರೈಮ್‌ಗೆ ದೂರು ನೀಡಿ: ಡಿಜಿ ಲಾಕರ್ ಹ್ಯಾಕ್ ಆಗಿದೆ ಎಂದು ತಿಳಿದರೆ, ನ್ಯಾಷನಲ್ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್‌ನಲ್ಲಿ ದೂರು ದಾಖಲಿಸಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 5:32 pm, Thu, 9 July 26

Source link

Leave a Reply

Your email address will not be published. Required fields are marked *