Category Archives: Blog

Your blog category

ಪೂಜಾ ದತ್ತ ಸಾವಿಗೆ ಕಾರಣ ಇನ್ನೂ ನಿಗೂಢ: ಮರಣೋತ್ತರ ಪರೀಕ್ಷೆ ವರದಿಯಲ್ಲೂ ಇಲ್ಲ ಸ್ಪಷ್ಟತೆ – Kannada News | Pooja Dutta’s Mysterious Death: Bangalore Police Seek Answers After Inconclusive Post Mortem

ಬೆಂಗಳೂರು, ಮೇ 07: ಪ್ರತಿಷ್ಠಿತ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ 34 ವರ್ಷದ ಪೂಜಾ ದತ್ತ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಆಕೆಯ ಸಾವಿನ ಹಿಂದಿನ ಅಸಲೀ ಕಾರಣ ಏನೆಂದು ಪತ್ತೆ ಮಾಡುವುದೇ ಈಗ ಸವಾಲಿನ ಕೆಲಸವಾಗಿದೆ. ಪೂಜಾ ಸಾವು ಹೇಗಾಯ್ತು ಎಂಬುವುದು ಇನ್ನೂ ನಿಗೂಢವಾಗಿಯೇ ಉಳಿದಿದ್ದು, ಮರಣೋತ್ತರ ಪರೀಕ್ಷೆಯ ವರದಿಯಲ್ಲಿಯೂ ಈ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ ಎನ್ನಲಾಗಿದೆ. ಹೀಗಾಗಿ ಪೂಜಾದ್ದು ಆತ್ಮಹತ್ಯೆಯೋ? ಅಥವಾ ಯಾವುದಾದರೂ ಕಾಯಿಲೆಯಿಂದ ಮೃತಪಟ್ಟರಾ ಎಂಬ ಪ್ರಶ್ನೆಗಳೀಗ ಉದ್ಭವಿಸಿವೆ. ಇನ್ನು ಸಾವಿನ ಕಾರಣ ಪತ್ತೆ ಸಂಬಂಧ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ನಿಖರ ಮಾಹಿತಿ ಸಿಗದ ಕಾರಣ, ದೇಹದ ಮಾದರಿಗಳನ್ನು ಎಫ್​​ಎಸ್​​ಎಲ್​​ಗೆ ಕಳುಹಿಸಲಾಗಿದೆ.

  • ಆಡುಗೋಡಿಯಲ್ಲಿ ಪೂಜಾ ದತ್ತ ಅನುಮಾನಾಸ್ಪದ ಸಾವು ಪ್ರಕರಣ
  • ಖಾಸಗಿ ಕಂಪನಿ ಉದ್ಯೋಗಿ ಸಾವಿಗೆ ಕಾರಣ ಏನೆಂಬುದೇ ನಿಗೂಢ
  • ಮರಣೋತ್ತರ ಪರೀಕ್ಷೆ ವರದಿಯಲ್ಲೂ ಸಿಕ್ಕಿಲ್ಲವಂತೆ ಸ್ಪಷ್ಟ ಕಾರಣ

ಇದನ್ನೂ ಓದಿ: ಯುವತಿಯ ಬೆತ್ತಲೆ ಮೃತದೇಹ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! ಮನೆ ಮಾಲಕಿ ಸ್ಫೋಟಕ ಹೇಳಿಕೆ

ಹಣದ ಮೂಲ ಹುಡುಕುತ್ತಿರುವ ಪೊಲೀಸರು

ಇನ್ನು ಪೂಜಾ ದತ್ತ ಮೂರು ತಿಂಗಳಿನಿಂದ ಹೊರಗಡೆ ಅಷ್ಟು ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಏನೂ ಕೆಲಸ ಮಾಡದೇ ಇದ್ದರೂ ಆಕೆ ಖರ್ಚನ್ನು ಹೇಗೆ ನಿಭಾಯಿಸುತ್ತಿದ್ದಳು ಎಂಬ ಪ್ರಶ್ನೆ ಹಿನ್ನೆಲೆ ಆಕೆಯ ಹಣದ ಮೂಲದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಂಪನಿ ಬಿಡುವಾಗ ಅಕೆಗೆ ಬಂದ ಹಣ ಎಷ್ಟು ಎಂಬ ಕುರಿತು ಹೆಚ್​​ಆರ್​​ಗಳ ಮೂಲಕ ಮಾಹಿತಿ ಪಡೆಯಲು ಖಾಕಿ ಮುಂದಾಗಿದೆ. ಆಕೆಯ ಬ್ಯಾಂಕ್ ಖಾತೆಗಳ ಮಾಹಿತಿ ಪಡೆಯುತ್ತಿರುವ ಜೊತೆಗೆ, ಮೊಬೈಲ್​​ನಲ್ಲಿನ ಸರ್ಚ್​​ ಹಿಸ್ಟರಿ ಬಗ್ಗೆಯೂ ಮಾಹಿತಿ ಕಲೆಹಾಕಲಾಗುತ್ತಿದೆ. ಸ್ನೇಹಿತರಿಂದ ಏನಾದರೂ ಆಕೆ ಹಣ ಪಡೆದಿದ್ದಳಾ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಮೂಲತಃ ಜಾರ್ಖಂಡ್‌ನ ಧನಬಾದ್ ಸಮೀಪದ ಹಿರಾಪುರ ನಿವಾಸಿಯಾಗಿದ್ದ ಪೂಜಾ ದತ್ತ ಮೃತದೇಹ ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಕೆ ವಾಸವಿದ್ದ ಬಾಡಿಗೆ ಮನೆಯಲ್ಲಿಯೇ ಪತ್ತೆಯಾಗಿತ್ತು. ಮನೆಯಿಂದ ಭಾರಿ ದುರ್ನಾತ ಬರುತ್ತಿದ್ದ ಹಿನ್ನೆಲೆಯಲ್ಲಿ ಅನುಮಾನಗೊಂಡ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ಬಂದು ಬಾಗಿಲು ಮುರಿದು ನೋಡಿದಾಗ ಸಂಪೂರ್ಣವಾಗಿ ಬೆತ್ತಲೆ ಮತ್ತು ಅರೆಕೊಳೆತ ಸ್ಥಿತಿ ಪೂಜಾ ಮೃತದೇಹ ಕಂಡುಬಂದಿತ್ತು. ಮೃತದೇಹ ಸಂಪೂರ್ಣ ಕೊಳೆತು ಹೋಗಿದ್ದರಿಂದ ಸಾವು ಸಂಭವಿಸಿ ಕನಿಷ್ಠ 2-3 ದಿನಗಳು ಕಳೆದಿರಬಹುದು ಎಂದು ಶಂಕಿಸಲಾಗಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 11:36 am, Thu, 7 May 26

Source link

Gold Rates: ಹತ್ತು ಗ್ರಾಮ್ ಚಿನ್ನದ ಬೆಲೆ ಎರಡು ದಿನದಲ್ಲಿ 3,000 ರೂ ಏರಿಕೆ – Kannada News | Gold Price Today on 7th May 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಮೇ 7: ಚಿನ್ನದ ಬೆಲೆ (Gold Rates) ಇವತ್ತೂ ಏರಿಕೆಯಾಗಿದೆ. ನಿನ್ನೆ 195 ರೂನಷ್ಟು ಹೆಚ್ಚಿದ್ದ ಬಂಗಾರದ ದರ ಇವತ್ತು ಗುರುವಾರ 105 ರೂ ಜಿಗಿದಿದೆ. ಎರಡು ದಿನದಲ್ಲಿ ಇದರ ಬೆಲೆಯಲ್ಲಿ ಗ್ರಾಮ್​ಗೆ 300 ರೂನಷ್ಟು ಹೆಚ್ಚಿದೆ. ವಿದೇಶಗಳಲ್ಲೂ ಹೆಚ್ಚಿನ ಕಡೆ ಸ್ವರ್ಣ ಬೆಲೆ ಹೆಚ್ಚಿದೆ. ಬೆಳ್ಳಿ ಬೆಲೆಯೂ ಸತತ ಎರಡನೇ ಬಾರಿ ಹೆಚ್ಚಳ ಕಂಡಿದೆ. ನಿನ್ನೆ ಗ್ರಾಮ್​ಗೆ 10 ರೂ ಹೆಚ್ಚಿದ್ದ ಅದು ಇವತ್ತು 5 ರೂ ಏರಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,39,750 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,52,460 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 27,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,39,750 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 27,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 27,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮೇ 7ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,246 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,975 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,434 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 270 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,246 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,975 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 270 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,975 ರೂ
  • ಚೆನ್ನೈ: 14,101 ರೂ
  • ಮುಂಬೈ: 13,975 ರೂ
  • ದೆಹಲಿ: 13,990 ರೂ
  • ಕೋಲ್ಕತಾ: 13,975 ರೂ
  • ಕೇರಳ: 13,975 ರೂ
  • ಅಹ್ಮದಾಬಾದ್: 13,980 ರೂ
  • ಜೈಪುರ್: 13,990 ರೂ
  • ಲಕ್ನೋ: 13,990 ರೂ
  • ಭುವನೇಶ್ವರ್: 13,975 ರೂ

ಇದನ್ನೂ ಓದಿ: ಜಾಗತಿಕ ಮಟ್ಟದಲ್ಲಿ ಭಾರತದ ಆರ್ಥಿಕತೆಯ ಜಯಭೇರಿ: ದೇಶದ ಜಿಡಿಪಿ ಪ್ರಗತಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ಮೂಡೀಸ್ ಮತ್ತು ಎಡಿಬಿ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 566 ರಿಂಗಿಟ್ (13,710 ರುಪಾಯಿ)
  • ದುಬೈ: 524.50 ಡಿರಾಮ್ (13,548 ರುಪಾಯಿ)
  • ಅಮೆರಿಕ: 146.50 ಡಾಲರ್ (13,898 ರುಪಾಯಿ)
  • ಸಿಂಗಾಪುರ: 185.70 ಸಿಂಗಾಪುರ್ ಡಾಲರ್ (13,899 ರುಪಾಯಿ)
  • ಕತಾರ್: 522.50 ಕತಾರಿ ರಿಯಾಲ್ (13,600 ರೂ)
  • ಸೌದಿ ಅರೇಬಿಯಾ: 534 ಸೌದಿ ರಿಯಾಲ್ (13,505 ರುಪಾಯಿ)
  • ಓಮನ್: 55.40 ಒಮಾನಿ ರಿಯಾಲ್ (13,654 ರುಪಾಯಿ)
  • ಕುವೇತ್: 43.17 ಕುವೇತಿ ದಿನಾರ್ (13,373 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 270 ರೂ
  • ಚೆನ್ನೈ: 275 ರೂ
  • ಮುಂಬೈ: 270 ರೂ
  • ದೆಹಲಿ: 270 ರೂ
  • ಕೋಲ್ಕತಾ: 270 ರೂ
  • ಕೇರಳ: 275 ರೂ
  • ಅಹ್ಮದಾಬಾದ್: 270 ರೂ
  • ಜೈಪುರ್: 270 ರೂ
  • ಲಕ್ನೋ: 270 ರೂ
  • ಭುವನೇಶ್ವರ್: 275 ರೂ
  • ಪುಣೆ: 270

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ದಾಖಲೆ ಮೊತ್ತದ ಒಪ್ಪಂದ: ಪ್ಯಾಟ್ ಕಮ್ಮಿನ್ಸ್‌ಗೆ 27.43 ಕೋಟಿ ರೂ. ಆಫರ್! – Kannada News | Cricket Australia’s 27 Cr ‘Lifeline’ Offer to Pat Cummins

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ (Pat Cummins) ಈಗ ವಿಶ್ವ ಕ್ರಿಕೆಟ್‌ನ ಅತ್ಯಂತ ದುಬಾರಿ ಆಟಗಾರನಾಗುವ ಹಾದಿಯಲ್ಲಿದ್ದಾರೆ. ಕ್ರಿಕೆಟ್ ಆಸ್ಟ್ರೇಲಿಯಾ (CA) ತನ್ನ ನಾಯಕನನ್ನು ಫ್ರಾಂಚೈಸಿ ಕ್ರಿಕೆಟ್‌ನ ಆಕರ್ಷಣೆಯಿಂದ ಉಳಿಸಿಕೊಳ್ಳಲು ಬರೋಬ್ಬರಿ  27.43 ಕೋಟಿ (5 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್) ವಾರ್ಷಿಕ ವೇತನದ ಬೃಹತ್ ಒಪ್ಪಂದವನ್ನು ಮುಂದಿಟ್ಟಿದೆ ಎಂದು ದಿ ಏಜ್ ವರದಿ ಮಾಡಿದೆ.

ಏನಿದು ‘ಲೈಫ್‌ಲೈನ್’ ಒಪ್ಪಂದ?

ಇತ್ತೀಚಿನ ದಿನಗಳಲ್ಲಿ ಐಪಿಎಲ್‌ನಂತಹ ಖಾಸಗಿ ಲೀಗ್‌ಗಳ ಮಾಲೀಕರು ಅಂತಾರಾಷ್ಟ್ರೀಯ ಆಟಗಾರರಿಗೆ ತಮ್ಮ ಫ್ರಾಂಚೈಸಿಗಳ ಪರವಾಗಿ ಮಾತ್ರ ಆಡಲು ಕೋಟಿಗಟ್ಟಲೆ ಹಣದ ಆಫರ್ ನೀಡುತ್ತಿದ್ದಾರೆ. ವರದಿಗಳ ಪ್ರಕಾರ, ಒಂದು ಐಪಿಎಲ್ ಫ್ರಾಂಚೈಸಿ ಕಮ್ಮಿನ್ಸ್ ಮತ್ತು ಟ್ರಾವಿಸ್ ಹೆಡ್‌ಗೆ ವರ್ಷಕ್ಕೆ ಸುಮಾರು ₹58 ಕೋಟಿ ನೀಡಲು ಮುಂದಾಗಿತ್ತು. ಇಂತಹ ಆಮಿಷಗಳನ್ನು ತಡೆಯಲು ಕ್ರಿಕೆಟ್ ಆಸ್ಟ್ರೇಲಿಯಾ ಈ 2029ರವರೆಗಿನ ದೀರ್ಘಾವಧಿಯ ಒಪ್ಪಂದವನ್ನು ರೂಪಿಸಿದೆ.

ಕಮಿನ್ಸ್-ಸಿಎ​ ಒಪ್ಪಂದದ ಮುಖ್ಯಾಂಶಗಳು:

  • ವಾರ್ಷಿಕ ವೇತನ: ಸುಮಾರು ₹27.43 ಕೋಟಿ (ಒಂದು ವೇಳೆ ಅವರು ಒಪ್ಪಂದಕ್ಕೆ ಸಹಿ ಹಾಕಿದರೆ).
  • ಅವಧಿ: 2026 ರಿಂದ 2029 ರವರೆಗೆ ಈ ಒಪ್ಪಂದ ಜಾರಿಯಲ್ಲಿರಲಿದೆ.
  • ಉದ್ದೇಶ: ಆಸ್ಟ್ರೇಲಿಯಾ ರಾಷ್ಟ್ರೀಯ ತಂಡಕ್ಕಾಗಿ ಆಡುವುದನ್ನು ಪ್ರಥಮ ಆದ್ಯತೆಯಾಗಿರಿಸುವುದು.

ಪ್ಯಾಟ್ ಕಮ್ಮಿನ್ಸ್ ಬೇಡಿಕೆ ಹೆಚ್ಚಲು ಕಾರಣವೇನು?

ಪ್ಯಾಟ್ ಕಮ್ಮಿನ್ಸ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ತಂಡವು ಕಳೆದ ಎರಡು ವರ್ಷಗಳಲ್ಲಿ ಅದ್ಭುತ ಸಾಧನೆ ಮಾಡಿದೆ. ಆ ಸಾಧನೆಗಳಾವುವು ಎಂದು ನೋಡುವುದಾದರೆ…

  1. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಜಯ.
  2. ಏಕದಿನ ವಿಶ್ವಕಪ್ 2023 ವಿಜೇತ ನಾಯಕ.
  3. ಆ್ಯಶಸ್ ಸರಣಿ ಉಳಿಸಿಕೊಳ್ಳುವಲ್ಲಿ ಯಶಸ್ಸು.
  4. ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಫೈನಲ್‌ಗೆ ಮುನ್ನಡೆಸಿದ್ದು.

ಇದನ್ನೂ ಓದಿ: RCB ವಿರುದ್ಧದ ಪಂದ್ಯಕ್ಕೆ ಇಬ್ಬರು ಸ್ಟಾರ್ ಆಟಗಾರರು ಡೌಟ್..!

ವಿಶ್ವ ದಾಖಲೆಯ ಒಪ್ಪಂದ:

ಕ್ರಿಕೆಟ್ ಇತಿಹಾಸದಲ್ಲೇ ಯಾವುದೇ ಆಟಗಾರ ವಾರ್ಷಿಕ ವೇತನವಾಗಿ ಇಷ್ಟೊಂದು ಮೊತ್ತ ಪಡೆದಿಲ್ಲ. ಭಾರತೀಯ ಕ್ರಿಕೆಟಿಗರಿಗೆ ಬಿಸಿಸಿಐ ನೀಡುವ ಗರಿಷ್ಠ ವಾರ್ಷಿಕ ಒಪ್ಪಂದ 5 ಕೋಟಿ ರೂ. ಮಾತ್ರ. ಆದರೆ ಇದೀಗ ಪ್ಯಾಟ್ ಕಮಿನ್ಸ್​​ಗೆ ಬರೋಬ್ಬರಿ 27.43 ಕೋಟಿ ರೂ. ನೀಡಲು ಕ್ರಿಕೆಟ್ ಆಸ್ಟ್ರೇಲಿಯಾ ಮುಂದಾಗಿದೆ.

ಐಪಿಎಲ್ ಮತ್ತು ಇತರ ಲೀಗ್‌ಗಳ ಗಳಿಕೆ:

ಪ್ಯಾಟ್ ಕಮ್ಮಿನ್ಸ್ ಈಗಾಗಲೇ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದಿಂದ ₹18 ಕೋಟಿ ಪಡೆಯುತ್ತಿದ್ದಾರೆ. ಇದರ ಜೊತೆಗೆ ಅಮೆರಿಕದ ಮೇಜರ್ ಲೀಗ್ ಕ್ರಿಕೆಟ್ (MLC) ನಲ್ಲೂ ಅವರು ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ಪರ ದೀರ್ಘಾವಧಿಯ ಒಪ್ಪಂದ ಮಾಡಿಕೊಂಡಿದ್ದಾರೆ.  ಇದೀಗ ಕ್ರಿಕೆಟ್ ಆಸ್ಟ್ರೇಲಿಯಾ ಜೊತೆ ಹೊಸ ಒಪ್ಪಂದ ಮಾಡಿದರೆ, ಅವರ ವಾರ್ಷಿಕ ಆದಾಯ 50 ಕೋಟಿ ರೂ. ದಾಟಲಿದೆ.

ಇದರೊಂದಿಗೆ ಕ್ರಿಕೆಟ್ ಇತಿಹಾಸದಲ್ಲೇ ವಾರ್ಷಿಕ ಒಪ್ಪಂದದ ಮೂಲಕ ಅತಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರನಾಗಿ ಪ್ಯಾಟ್ ಕಮಿನ್ಸ್ ಹೊರಹೊಮ್ಮಲಿದ್ದಾರೆ.

Source link

New Clothes: ಹೊಸ ಬಟ್ಟೆ ತಂದ ಕೂಡಲೇ ಧರಿಸುವ ಅಭ್ಯಾಸವಿದೆಯೇ? ವಾಸ್ತು ತಜ್ಞರ ಈ ಎಚ್ಚರಿಕೆ ತಪ್ಪದೇ ಓದಿ! – Kannada News | New Clothes: Wash Before Wearing? Health, Astrology and Traditional Benefits

ಹೊಸ ಬಟ್ಟೆ ತಂದ ಕೂಡಲೇ ಧರಿಸುವ ಅಭ್ಯಾಸವಿದೆಯೇ?Image Credit source: Pinterest

ಇಂದಿನ ವೇಗದ ಜೀವನದಲ್ಲಿ, ಜನರು ಹೊಸ ಬಟ್ಟೆಗಳನ್ನು ಖರೀದಿಸಿ ತಕ್ಷಣ ಧರಿಸಲು ಇಷ್ಟಪಡುತ್ತಾರೆ. ಫ್ಯಾಷನ್ ಮತ್ತು ಪ್ರಚಲಿತ ಪ್ರವೃತ್ತಿಗಳನ್ನು (Trends) ಅನುಸರಿಸುವುದು ಇಂದಿನ ಸಾಮಾನ್ಯ ಅಭ್ಯಾಸವಾಗಿದೆ. ಆದರೆ ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯದ ಪ್ರಕಾರ, ಹೊಸ ಬಟ್ಟೆಗಳನ್ನು ಧರಿಸುವ ಮೊದಲು ಕೆಲವು ಮಹತ್ವದ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಅಗತ್ಯವೆಂದು ಪರಿಗಣಿಸಲಾಗಿದೆ. ಬಟ್ಟೆಗಳು ಕೇವಲ ವಸ್ತ್ರವಲ್ಲ, ಅವು ವಿಭಿನ್ನ ಜನರ ಸ್ಪರ್ಶ ಮತ್ತು ವಿವಿಧ ಸನ್ನಿವೇಶಗಳ ಶಕ್ತಿಯನ್ನು ತನ್ನೊಳಗೆ ಒಳಗೊಂಡಿರಬಹುದು ಎಂಬುದು ಹಿರಿಯರ ನಂಬಿಕೆ.

ಮೊದಲ ಮತ್ತು ಅತ್ಯಂತ ಮುಖ್ಯವಾದ ನಿಯಮವೆಂದರೆ, ಹೊಸ ಬಟ್ಟೆಗಳನ್ನು ತೊಳೆಯದೆ ನೇರವಾಗಿ ಧರಿಸಬಾರದು. ಮಾರುಕಟ್ಟೆಯಲ್ಲಿ ಲಭ್ಯವಿರುವ ಬಟ್ಟೆಗಳು ತಯಾರಿಕೆ, ಪ್ಯಾಕಿಂಗ್ ಮತ್ತು ಸಾಗಣೆಯಂತಹ ಹಲವು ಹಂತಗಳ ಮೂಲಕ ಹಾದುಬರುತ್ತವೆ. ಈ ಪ್ರಕ್ರಿಯೆಯಲ್ಲಿ ಅವು ಧೂಳು, ರಾಸಾಯನಿಕಗಳು ಅಥವಾ ಇತರ ಕಲ್ಮಶಗಳನ್ನು ಹೊಂದಿರಬಹುದು. ಆದ್ದರಿಂದ, ವೈಯಕ್ತಿಕ ನೈರ್ಮಲ್ಯದ ದೃಷ್ಟಿಯಿಂದ ಅವುಗಳನ್ನು ಧರಿಸುವ ಮೊದಲು ಒಮ್ಮೆ ತೊಳೆಯುವುದು ಅತ್ಯಂತ ಸೂಕ್ತ.

ಆರೋಗ್ಯದ ದೃಷ್ಟಿಕೋನದಿಂದ:

ಇದು ಕೇವಲ ಧಾರ್ಮಿಕ ನಂಬಿಕೆಯಲ್ಲ, ಬದಲಿಗೆ ಆರೋಗ್ಯದ ದೃಷ್ಟಿಯಿಂದಲೂ ಬಹಳ ಮುಖ್ಯವಾಗಿದೆ. ಅಂಗಡಿಗಳಲ್ಲಿ ಪ್ರದರ್ಶನಕ್ಕಿರುವ ಬಟ್ಟೆಗಳನ್ನು ಹಲವರು ಧರಿಸಿ ನೋಡಿರುತ್ತಾರೆ (Trial). ಹೀಗಾಗಿ ತೊಳೆಯದ ಬಟ್ಟೆಗಳು ಚರ್ಮದ ಮೇಲೆ ಅಲರ್ಜಿ ಅಥವಾ ಸೋಂಕುಗಳಿಗೆ ಕಾರಣವಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಚರ್ಮದ ಆರೋಗ್ಯ ಕಾಪಾಡಿಕೊಳ್ಳಲು ಶುಚಿಗೊಳಿಸುವಿಕೆ ಅತ್ಯಗತ್ಯ.

ಧಾರ್ಮಿಕ ದೃಷ್ಟಿಕೋನ:

ಧಾರ್ಮಿಕ ದೃಷ್ಟಿಕೋನದಿಂದ ನೋಡುವುದಾದರೆ, ಹೊಸ ಬಟ್ಟೆಗಳನ್ನು ಧರಿಸುವ ಮೊದಲು ದೇವರ ಮುಂದೆ ಇಟ್ಟು ಪೂಜಿಸುವುದು ನಮ್ಮಲ್ಲಿರುವ ಸಂಪ್ರದಾಯವಾಗಿದೆ. ಈ ಕ್ರಿಯೆಯು ಕೇವಲ ನಂಬಿಕೆಯ ಸಂಕೇತ ಮಾತ್ರವಲ್ಲ, ಇದು ಆ ವಸ್ತುವಿನಲ್ಲಿ ಸಕಾರಾತ್ಮಕ ಶಕ್ತಿಯನ್ನು ತುಂಬುತ್ತದೆ ಎಂದು ನಂಬಲಾಗಿದೆ. ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಬಟ್ಟೆಯ ಒಂದು ಮೂಲೆಯಲ್ಲಿ ಅರಿಶಿನ ಅಥವಾ ಶ್ರೀಗಂಧದ ತಿಲಕವನ್ನು ಹಚ್ಚುವ ಮೂಲಕ ಅದನ್ನು ಹೆಚ್ಚು ಪವಿತ್ರಗೊಳಿಸುತ್ತಾರೆ.

ಜ್ಯೋತಿಷ್ಯ ಶಾಸ್ತ್ರ ಹೇಳುವುದೇನು?

ಜ್ಯೋತಿಷ್ಯ ಶಾಸ್ತ್ರದಲ್ಲಿ, ಹೊಸ ಕಾರ್ಯಗಳಿಗೆ ದಿನ ಮತ್ತು ಸಮಯಕ್ಕೆ ವಿಶೇಷ ಮಹತ್ವವಿದೆ. ನಂಬಿಕೆಯ ಪ್ರಕಾರ, ಬುಧವಾರ, ಗುರುವಾರ, ಶುಕ್ರವಾರ ಮತ್ತು ಭಾನುವಾರಗಳು ಹೊಸ ಬಟ್ಟೆಗಳನ್ನು ಧರಿಸಲು ಅತ್ಯಂತ ಶುಭ ದಿನಗಳೆಂದು ಪರಿಗಣಿಸಲ್ಪಟ್ಟಿವೆ. ಈ ದಿನಗಳಲ್ಲಿ ಹೊಸ ವಸ್ತ್ರ ಧರಿಸುವುದರಿಂದ ಸಕಾರಾತ್ಮಕ ಫಲಿತಾಂಶಗಳು ದೊರೆಯುತ್ತವೆ ಎಂಬ ನಂಬಿಕೆ ಜನಜನಿತವಾಗಿದೆ.

ಯಾವ ದಿನ ಹೊಸ ಬಟ್ಟೆ ಧರಿಸಬಾರದು?

ಅದೇ ರೀತಿ, ಮಂಗಳವಾರ ಮತ್ತು ಶನಿವಾರದಂದು ಹೊಸ ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಬೇಕು ಎಂದು ಜ್ಯೋತಿಷ್ಯ ಹೇಳುತ್ತದೆ. ಈ ದಿನಗಳನ್ನು ಗ್ರಹಗಳ ಸ್ಥಾನ ಮತ್ತು ಪ್ರಭಾವದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಮಂಗಳ ಮತ್ತು ಶನಿಯ ಪ್ರಭಾವವಿರುವ ಈ ದಿನಗಳ ಬದಲಿಗೆ ಶುಭ ದಿನಗಳನ್ನು ಆಯ್ಕೆ ಮಾಡಿಕೊಳ್ಳುವುದು ಸಮೃದ್ಧಿಯ ಸಂಕೇತವೆಂದು ಭಾವಿಸಲಾಗುತ್ತದೆ.

ಸರಳ ಪರಿಹಾರ:

ಒಂದು ವೇಳೆ ಯಾವುದೇ ಅನಿವಾರ್ಯ ಪರಿಸ್ಥಿತಿಯಲ್ಲಿ ಹೊಸ ಬಟ್ಟೆಗಳನ್ನು ತೊಳೆಯಲು ಸಾಧ್ಯವಾಗದಿದ್ದರೆ, ಅದಕ್ಕೆ ಸರಳ ಪರಿಹಾರವೆಂದರೆ ಅವುಗಳ ಮೇಲೆ ಸ್ವಲ್ಪ ಶುದ್ಧ ನೀರನ್ನು ಸಿಂಪಡಿಸುವುದು (ಪ್ರೋಕ್ಷಣೆ). ನೀರನ್ನು ಶುದ್ಧತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಸಣ್ಣ ಕ್ರಿಯೆಯು ಬಟ್ಟೆಯಲ್ಲಿರಬಹುದಾದ ನಕಾರಾತ್ಮಕತೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಎಂಬ ನಂಬಿಕೆಯಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಹೊಸ ಬಟ್ಟೆಗಳನ್ನು ಧರಿಸುವ ಪ್ರಕ್ರಿಯೆಯು ಕೇವಲ ಫ್ಯಾಷನ್‌ಗೆ ಸೀಮಿತವಾಗಿಲ್ಲ. ಇದು ಸಂಪ್ರದಾಯ, ಆರೋಗ್ಯ ಮತ್ತು ಮನಸ್ಸಿನ ಶಾಂತಿಯ ಸುಂದರ ಸಂಯೋಜನೆಯಾಗಿದೆ. ಇಂತಹ ಸಣ್ಣ ಕ್ರಮಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ, ನೀವು ನಕಾರಾತ್ಮಕತೆಯನ್ನು ದೂರ ಮಾಡುವುದಲ್ಲದೆ, ನಿಮ್ಮಲ್ಲಿ ಸಕಾರಾತ್ಮಕ ಶಕ್ತಿ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬಹುದು ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

MI, IPL 2026: ಮುಂಬೈ ಮಾಸ್ಟರ್ ಪ್ಲ್ಯಾನ್: ಹಾರ್ದಿಕ್-ಸೂರ್ಯಗೆ ಶಾಕ್.. ನಾಯಕನಾಗಿ ರೋಹಿತ್ ಶರ್ಮಾ ಆಯ್ಕೆ? – Kannada News | Mumbai Indians Master Plan Shock for Hardik and Suriyakumar Rohit Sharma chosen as captain?

ಬೆಂಗಳೂರು (ಮೇ. 07): ಮುಂಬೈ ಇಂಡಿಯನ್ಸ್ ತಂಡದ ಖಾಯಂ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಪ್ರಸ್ತುತ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಲಕ್ನೋ ವಿರುದ್ಧದ ಕೊನೆಯ ಪಂದ್ಯಕ್ಕೂ ಅವರು ಲಭ್ಯವಿರಲಿಲ್ಲ. ಇತ್ತೀಚಿನ ಮಾಹಿತಿಯ ಪ್ರಕಾರ, ಹಾರ್ದಿಕ್ ಪಾಂಡ್ಯ ಅವರ ಗಾಯ ಇನ್ನೂ ಗುಣವಾಗದ ಕಾರಣ ಮುಂದಿನ ಪಂದ್ಯವನ್ನು ಕೂಡ ಅವರು ತಪ್ಪಿಸಿಕೊಳ್ಳಲಿದ್ದಾರೆ. ಅವರು ತಂಡದೊಂದಿಗೆ ಪ್ರಯಾಣಿಸುತ್ತಿಲ್ಲ ಎಂಬ ಸುದ್ದಿ ಇದೆ. ರಾಯ್‌ಪುರದಲ್ಲಿ ನಡೆಯಲಿರುವ ನಿರ್ಣಾಯಕ ಪಂದ್ಯಕ್ಕೆ ಹಾರ್ದಿಕ್ ಅವರ ಅನುಪಸ್ಥಿತಿಯು ತಂಡಕ್ಕೆ ದೊಡ್ಡ ನಷ್ಟ ಎಂದು ಹೇಳಬಹುದು.

ವೈಯಕ್ತಿಕ ಕಾರಣಗಳಿಂದ ಸೂರ್ಯಕುಮಾರ್ ಯಾದವ್ ಹೊರಕ್ಕೆ

ಹಾರ್ದಿಕ್ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ್ದ ಸೂರ್ಯಕುಮಾರ್ ಯಾದವ್ ಕೂಡ ಮುಂದಿನ ಪಂದ್ಯದಲ್ಲಿ ಆಡುವ ಸಾಧ್ಯತೆ ಕಡಿಮೆ. ಸೂರ್ಯಕುಮಾರ್ ಅವರ ಪತ್ನಿ ದೇವಿಶಾ ಶೆಟ್ಟಿ ಶೀಘ್ರದಲ್ಲೇ ತಾಯಿಯಾಗಲಿದ್ದಾರೆ. ಸೂರ್ಯಕುಮಾರ್ ತಮ್ಮ ಕುಟುಂಬದೊಂದಿಗೆ ಈ ಸಂತೋಷದ ಸಮಯವನ್ನು ಕಳೆಯಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಈ ಕಾರಣಕ್ಕಾಗಿ ಅವರು ಮೇ 10 ರಂದು ಬೆಂಗಳೂರು ವಿರುದ್ಧದ ಪಂದ್ಯಕ್ಕೆ ಲಭ್ಯವಿರುವುದಿಲ್ಲ. ಆದರೆ, ಈ ಬಗ್ಗೆ ತಂಡದ ಆಡಳಿತ ಮಂಡಳಿ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ.

ರೋಹಿತ್ ಶರ್ಮಾ ಹೆಗಲಿಗೆ ಕ್ಯಾಪ್ಟನ್ ಜವಾಬ್ದಾರಿ?

ನಾಯಕ ಮತ್ತು ಉಪನಾಯಕ ಇಬ್ಬರ ಅನುಪಸ್ಥಿತಿಯಲ್ಲಿ, ತಂಡದ ಜವಾಬ್ದಾರಿಯನ್ನು ಯಾರು ವಹಿಸಿಕೊಳ್ಳುತ್ತಾರೆ ಎಂಬುದು ಈಗ ಕುತೂಹಲಕಾರಿಯಾಗಿದೆ. ತಂಡಕ್ಕೆ ಐದು ಬಾರಿ ಟ್ರೋಫಿಯನ್ನು ಗೆದ್ದುಕೊಟ್ಟ ರೋಹಿತ್ ಶರ್ಮಾ ಅವರತ್ತ ಮ್ಯಾನೇಜ್‌ಮೆಂಟ್ ಒಲವು ತೋರುತ್ತಿದೆ ಎಂಬ ವರದಿಗಳಿವೆ. ತಂಡವು ಪ್ಲೇಆಫ್ ರೇಸ್‌ನಿಂದ ಬಹುತೇಕ ಹೊರಬಿದ್ದಿರುವುದರಿಂದ, ಅನುಭವಿ ರೋಹಿತ್ ತಂಡವನ್ನು ಮುನ್ನಡೆಸುತ್ತಾರೆ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ. ರೋಹಿತ್ ಸಿದ್ಧವಾಗಿಲ್ಲದಿದ್ದರೆ, ಯುವ ಆಟಗಾರ ತಿಲಕ್ ವರ್ಮಾಗೆ ಅವಕಾಶ ನೀಡುವ ಆಲೋಚನೆಯೂ ಇದೆ.

LSG vs RCB: ಐಪಿಎಲ್​ನಲ್ಲಿಂದು ಆರ್‌ಸಿಬಿ-ಲಕ್ನೋ ಮುಖಾಮುಖಿ: ಬೆಂಗಳೂರು ಗೆದ್ದರೆ ಪಾಯಿಂಟ್ಸ್ ಪಟ್ಟಿಯಲ್ಲಿ ಏನೆಲ್ಲ ಆಗಲಿದೆ?

ಪ್ರಸಕ್ತ ಋತುವಿನಲ್ಲಿ ಮುಂಬೈ ತಂಡದ ಪ್ರದರ್ಶನ ತೀರಾ ನಿರಾಶಾದಾಯಕವಾಗಿದೆ. ಇದರ ಜೊತೆಗೆ, ತಂಡದ ಹಿರಿಯ ಆಟಗಾರರಲ್ಲಿ ಭಿನ್ನಾಭಿಪ್ರಾಯಗಳಿವೆ ಮತ್ತು ಡ್ರೆಸ್ಸಿಂಗ್ ಕೋಣೆಯಲ್ಲಿ ವಾತಾವರಣ ಸುಗಮವಾಗಿಲ್ಲ ಎಂದು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಗಳಿವೆ. ರಾಯ್‌ಪುರದಲ್ಲಿ ಬೆಂಗಳೂರು ವಿರುದ್ಧ ನಡೆಯಲಿರುವ ಪಂದ್ಯ ಮುಂಬೈ ತಂಡದ ಸ್ವಾಭಿಮಾನದ ಪರೀಕ್ಷೆಯಾಗಿ ಮಾರ್ಪಟ್ಟಿದೆ. ಹೊಸ ನಾಯಕನ ನಾಯಕತ್ವದಲ್ಲಾದರೂ ತಂಡ ಯಶಸ್ಸಿನ ಹಾದಿಗೆ ಮರಳುತ್ತದೆಯೇ ಎಂದು ಕಾದು ನೋಡಬೇಕಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

RCB ವಿರುದ್ಧದ ಪಂದ್ಯಕ್ಕೆ ಇಬ್ಬರು ಸ್ಟಾರ್ ಆಟಗಾರರು ಡೌಟ್..!

Source link

ವಿಜಯ್ ಸರ್ಕಾರ ರಚಿಸಲಿ, ಜನಾದೇಶಕ್ಕೆ ಗೌರವ ಕೊಡೋಣ, ರಾಜಕೀಯ ಮುತ್ಸದ್ದಿತನ ಮೆರೆದ ಎಂ.ಕೆ. ಸ್ಟಾಲಿನ್ – Kannada News | Stalin Backs Actor Vijay: TVK Forms Tamil Nadu Government, Averts Crisis

ಚೆನ್ನೈ, ಮೇ 07: ತಮಿಳುನಾಡು ರಾಜಕೀಯದ ದೈತ್ಯ ಶಕ್ತಿ ಎಂ.ಕೆ. ಸ್ಟಾಲಿನ್(MK Stalin) ಅವರು ತೆಗೆದುಕೊಂಡಿರುವ ಒಂದು ದಿಟ್ಟ ನಿರ್ಧಾರ, ರಾಜ್ಯದಲ್ಲಿ ಎದುರಾಗಿದ್ದ ಸಾಂವಿಧಾನಿಕ ಬಿಕ್ಕಟ್ಟನ್ನು ಕ್ಷಣಾರ್ಧದಲ್ಲಿ ತಿಳಿಗೊಳಿಸಿದೆ. ಬಹುಮತದ ಕೊರತೆಯಿಂದ ಸರ್ಕಾರ ರಚಿಸಲು ಪರದಾಡುತ್ತಿದ್ದ ನಟ ವಿಜಯ್ ಅವರ ‘ತಮಿಳುಗ ವೆಟ್ರಿ ಕಳಗಂ’ (TVK) ಗೆ ಸ್ಟಾಲಿನ್ ಅಭಯ ನೀಡಿದ್ದು, ವಿಜಯ್ ಸರ್ಕಾರ ರಚಿಸಲಿ ಎಂದು ಹೇಳುವ ಮೂಲಕ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದ್ದಾರೆ.

ಬಹುಮತಕ್ಕೆ 11 ಸ್ಥಾನಗಳ ಕೊರತೆಯಿದ್ದರೂ, ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಟಿವಿಕೆಗೆ ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಯಾವುದೇ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗುವುದು ನಮಗೆ ಇಷ್ಟವಿಲ್ಲ. ಜನರ ತೀರ್ಪನ್ನು ಗೌರವಿಸಿ ವಿಜಯ್ ಅವರು ಸರ್ಕಾರ ರಚಿಸಲಿ ಎಂದು ಸ್ಪಷ್ಟಪಡಿಸಿದರು.

ಬುಧವಾರ ರಾತ್ರಿಯವರೆಗೆ ಡಿಎಂಕೆ ಮತ್ತು ಎಐಎಡಿಎಂಕೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಬಹುದು ಎಂಬ ಲೆಕ್ಕಾಚಾರಗಳಿದ್ದವು. ಆದರೆ ಸ್ಟಾಲಿನ್ ಅವರ ಈ ನಡೆಯು ಆ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದೆ.

ಮತ್ತಷ್ಟು ಓದಿ: ರಾಹುಲ್​​ ಮಾತು ಕೇಳದೆ ತಮಿಳುನಾಡಲ್ಲಿ ಕೆಟ್ಟಿತಾ ಕಾಂಗ್ರೆಸ್​​? ಅಸಲಿಗೆ ಆಗಿದ್ದೇನು?

ವಿಜಯ್ ಸರ್ಕಾರಕ್ಕೆ ಸ್ಟಾಲಿನ್ ಕಿವಿಮಾತು
ಅಧಿಕಾರ ಬಿಟ್ಟುಕೊಡಲು ಸಮ್ಮತಿಸಿರುವ ಸ್ಟಾಲಿನ್, ತಮ್ಮ ಆಡಳಿತ ಅವಧಿಯಲ್ಲಿ ಜಾರಿಗೆ ತಂದಿದ್ದ ಜನಪ್ರಿಯ ಯೋಜನೆಗಳನ್ನು ಹೊಸ ಸರ್ಕಾರವು ಮುಂದುವರಿಸಬೇಕೆಂದು ಆಶಿಸಿದ್ದಾರೆ: ಶಾಲಾ ಮಕ್ಕಳ ಹಸಿವು ನೀಗಿಸುವ ಈ ಯೋಜನೆ ನಿಲ್ಲಬಾರದು, ಮಹಿಳೆಯರಿಗೆ ನೀಡಲಾಗುತ್ತಿರುವ 1,000 ರೂ. ಮಾಸಿಕ ಆರ್ಥಿಕ ನೆರವಿನ ಯೋಜನೆಯನ್ನು ಉಳಿಸಿಕೊಳ್ಳಬೇಕು.

ವಿಜಯ್ ಅವರು ತಮ್ಮ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ 2,500 ರೂ. ನೀಡುವುದಾಗಿ ಭರವಸೆ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಸ್ಟಾಲಿನ್, ಇಷ್ಟು ದೊಡ್ಡ ಮೊತ್ತವನ್ನು ನೀಡುವುದು ಆರ್ಥಿಕವಾಗಿ ಸವಾಲಿನ ಕೆಲಸ. ಆದರೆ ಕನಿಷ್ಠ ಈಗಿರುವ 1,000 ರೂ. ಯೋಜನೆಯನ್ನಾದರೂ ಹೊಸ ಸರ್ಕಾರ ಮುಂದುವರಿಸಲಿ ಎಂದು ಸಲಹೆ ನೀಡಿದರು.

ಸ್ಟಾಲಿನ್ ಅವರ ಈ ಬಹಿರಂಗ ಬೆಂಬಲದ ನಂತರ, ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರಿಗೆ ವಿಜಯ್ ಅವರ ಸಂಖ್ಯಾಬಲದ ಬಗ್ಗೆ ಇದ್ದ ಆತಂಕ ದೂರವಾದಂತಾಗಿದೆ. ಡಿಎಂಕೆ ಬೆಂಬಲ ಸೂಚಿಸಿರುವುದರಿಂದ, ವಿಜಯ್ ಅವರು ಶೀಘ್ರದಲ್ಲೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ರಾಜಭವನದಿಂದ ಅಧಿಕೃತ ಆಮಂತ್ರಣ ಬರುವ ಸಾಧ್ಯತೆ ದಟ್ಟವಾಗಿದೆ.

ತಮಿಳುನಾಡಿನ ಇತಿಹಾಸದಲ್ಲಿ ಬದ್ಧ ರಾಜಕೀಯ ವೈರಿಗಳ ನಡುವೆ ಇಂತಹದೊಂದು ‘ಸಾಂವಿಧಾನಿಕ ಸೌಹಾರ್ದತೆ’ ಕಂಡುಬಂದಿರುವುದು ರಾಜಕೀಯ ಮುತ್ಸದ್ದಿತನಕ್ಕೆ ಸಾಕ್ಷಿಯಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Video: ಪಾಕಿಸ್ತಾನಿ ಭಯೋತ್ಪಾದಕರ ವಿರುದ್ಧದ ಆಪರೇಷನ್ ಸಿಂಧೂರ್​ಗೆ ಒಂದು ವರ್ಷ: ವೀಡಿಯೊ ಹಂಚಿಕೊಂಡ ಭಾರತೀಯ ಸೇನೆ – Kannada News | Indian Armed Forces Marks Anniversary of Operation Sindoor With New Video Release

ನವದೆಹಲಿ, ಮೇ 07: ಭಾರತೀಯ ಸೇನೆಯ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಲ್ಪಟ್ಟ ಕ್ಷಣವೊಂದಕ್ಕೆ ಇಂದು ಒಂದು ವರ್ಷ ಸಂದಿದೆ. ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಅಡಗಿದ್ದ ಉಗ್ರರು ಮತ್ತು ಅವರಿಗೆ ಬೆಂಬಲ ನೀಡುತ್ತಿದ್ದ ಶಕ್ತಿಗಳ ವಿರುದ್ಧ ನಡೆದಿದ್ದ ‘ಆಪರೇಷನ್ ಸಿಂಧೂರ್’ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದ್ದು, ಈ ಹಿನ್ನೆಲೆಯಲ್ಲಿ ಭಾರತೀಯ ಸೇನೆಯು ಅಂದಿನ ಭೀಕರ ಕಾರ್ಯಾಚರಣೆಯ ವಿಶೇಷ ವೀಡಿಯೊವನ್ನು ಬಿಡುಗಡೆ ಮಾಡಿದೆ.

ಸರಿಯಾಗಿ ಒಂದು ವರ್ಷದ ಹಿಂದೆ, ಭಾರತದ ಭದ್ರತೆಗೆ ಸವಾಲಾಗಿದ್ದ ಭಯೋತ್ಪಾದಕ ತಾಣಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಸೇನೆಯು ರಾವಲ್ಪಿಂಡಿಯ ಆಯಕಟ್ಟಿನ ಪ್ರದೇಶಗಳಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿತ್ತು. ಅತ್ಯಂತ ರಹಸ್ಯವಾಗಿ ರೂಪಿಸಲಾಗಿದ್ದ ಈ ಪ್ಲಾನ್ ಮುಖಾಂತರ ಗಡಿಯಾಚೆಗಿನ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಲಾಗಿತ್ತು. ಶತ್ರುಪಡೆಗಳು ಚೇತರಿಸಿಕೊಳ್ಳುವ ಮುನ್ನವೇ ಭಾರತೀಯ ವೀರರು ಕಾರ್ಯಾಚರಣೆ ಮುಗಿಸಿ ಹಿಂದಿರುಗಿದ್ದರು.

ಈ ವೀಡಿಯೊ ಬಿಡುಗಡೆ ಮಾಡುವುದರ ಹಿಂದೆ ಭಾರತೀಯ ಸೇನೆಯು ಸ್ಪಷ್ಟ ಸಂದೇಶವನ್ನು ನೀಡಿದೆ. ಭಾರತದ ಮೇಲೆ ಕಣ್ಣು ಹಾಕುವ ಅಥವಾ ಭಯೋತ್ಪಾದನೆಗೆ ನೀರೆರೆಯುವ ಶಕ್ತಿಗಳು ಜಗತ್ತಿನ ಯಾವುದೇ ಮೂಲೆಯಲ್ಲಿ ಅಡಗಿದ್ದರೂ ಸರಿ, ಭಾರತೀಯ ಸೇನೆ ಅವರನ್ನು ಹುಡುಕಿ ಶಿಕ್ಷಿಸುತ್ತದೆ ಎಂಬುದು ಈ ವೀಡಿಯೊದ ಸಾರಾಂಶವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ವೀಡಿಯೊ ಸದ್ದು ಮಾಡುತ್ತಿದ್ದು, ಭಾರತೀಯ ಸೈನಿಕರ ಧೈರ್ಯ ಮತ್ತು ಶೌರ್ಯಕ್ಕೆ ನೆಟ್ಟಿಗರು ಸಲಾಂ ಎನ್ನುತ್ತಿದ್ದಾರೆ. ದೇಶದ ಗಡಿ ಸುರಕ್ಷಿತ ಕೈಗಳಲ್ಲಿದೆ ಎಂಬುದಕ್ಕೆ ಆಪರೇಷನ್ ಸಿಂಧೂರ್ ಸಾಕ್ಷಿ ಎಂದು ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಕಾರ್ಯಾಚರಣೆಯು ಭಾರತದ ಸೇನಾ ಶಕ್ತಿಯನ್ನು ಜಾಗತಿಕ ಮಟ್ಟದಲ್ಲಿ ಸಾಬೀತುಪಡಿಸಿದ್ದು ಮಾತ್ರವಲ್ಲದೆ, ನೆರೆಯ ರಾಷ್ಟ್ರಕ್ಕೆ ಭಯೋತ್ಪಾದನೆಯನ್ನು ಸಹಿಸುವುದಿಲ್ಲ ಎಂಬ ಕಠಿಣ ಎಚ್ಚರಿಕೆಯನ್ನೂ ನೀಡಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮಾವು, ಹಲಸು ಪ್ರಿಯರಿಗೆ ಈ ಬಾರಿ ಹಬ್ಬ! ಲಾಲ್​ಬಾಗ್, ಕಬ್ಬನ್ ಪಾರ್ಕ್​ನಲ್ಲಿ ‘ಮಾವು ಮತ್ತು ಹಲಸಿನ ಮೇಳ’ – Kannada News | Double Mango Treat: Cubbon Park to Host Mango Mela from May 8

ಬೆಂಗಳೂರು, ಮೇ 07: ಬೆಂಗಳೂರಿನ ಮಾವು (Mango) ಮತ್ತು ಹಲಸಿನ ಹಣ್ಣಿನ ಪ್ರಿಯರಿಗೆ ಈ ಬಾರಿ ಸಿಹಿ ಸುದ್ದಿ ಸಿಕ್ಕಿದೆ. ಇದೇ ಮೊದಲ ಬಾರಿಗೆ ನಗರದ ಎರಡು ಪ್ರಮುಖ ಉದ್ಯಾನವನಗಳಾದ ಕಬ್ಬನ್ ಪಾರ್ಕ್ ಮತ್ತು ಲಾಲ್‌ಬಾಗ್‌ನಲ್ಲಿ ‘ಮಾವು ಮತ್ತು ಹಲಸಿನ ಮೇಳ’ ಆಯೋಜಿಸಲು ತೋಟಗಾರಿಕೆ ಇಲಾಖೆ ನಿರ್ಧರಿಸಿದೆ. ಮೊದಲಿಗೆ ಕಬ್ಬನ್ ಪಾರ್ಕ್​ನಲ್ಲಿ ಮೇಳ ಶುರುವಾಗಲಿದ್ದು, ಮೇ 20ರ ನಂತರ ಲಾಲ್​ ಬಾಗ್​ನಲ್ಲೂ ಮೇಳ ಜರುಗಲಿದೆ. ಹೊರರಾಜ್ಯದ ಗುಣಮಟ್ಟವಿಲ್ಲದ ಮಾವಿನ ಹಣ್ಣನ್ನು ಖರೀಸುವ ಬದಲು, ನಮ್ಮ ರಾಜ್ಯದ ರೈತರನ್ನು ಪ್ರೋತ್ಸಾಹಿಸುವ ಸಲುವಾಗಿ ಈ ಮೇಳವನ್ನು ಆಯೋಜಿಸಲಾಗಿದೆ.

ಮುಖ್ಯಾಂಶಗಳು

  • ಕಬ್ಬನ್​ ಪಾರ್ಕ್​ ಮತ್ತು ಲಾಲ್ ಬಾಗ್​ನಲ್ಲಿ ಮಾವು ಮತ್ತು ಹಲಸಿನ ಮೇಳ
  • ಮೇ 8 ರಿಂದ ಮೇಳ ಆರಂಭ
  • ನಮ್ಮ ರಾಜ್ಯದ ರೈತರನ್ನು ಪ್ರೋತ್ಸಾಹಿಸುವ ಉದ್ದೇಶ

ಕಬ್ಬನ್ ಪಾರ್ಕ್‌ನಲ್ಲಿ ಮೊದಲ ಮೇಳ

ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಟಿ.ಆರ್. ವೇದಮೂರ್ತಿ ಅವರು ನೀಡಿರುವ ಮಾಹಿತಿಯಂತೆ, ಮೇ 8ರಿಂದ ಮೇ 18ರವರೆಗೆ ಕಬ್ಬನ್ ಪಾರ್ಕ್‌ನಲ್ಲಿ ಮೊದಲ ಹಂತದ ಮೇಳ ನಡೆಯಲಿದೆ. ಈ ಮೇಳವು ಮುಖ್ಯವಾಗಿ ಧಾರವಾಡ, ಮಂಡ್ಯ, ಮೈಸೂರು, ದಕ್ಷಿಣ ಬೆಂಗಳೂರು ಮತ್ತು ದಕ್ಷಿಣ ಕರ್ನಾಟಕದ ರೈತರಿಗೆ ಅನುಕೂಲವಾಗಲಿದೆ. ಸುಮಾರು 70 ಸ್ಟಾಲ್‌ಗಳನ್ನು ಇಲ್ಲಿ ಹಾಕಲಾಗುತ್ತಿದ್ದು, ಗ್ರಾಹಕರು ನೇರವಾಗಿ ರೈತರಿಂದಲೇ ಕೆಮಿಕಲ್ ಮುಕ್ತ ಹಣ್ಣುಗಳನ್ನು ಖರೀದಿಸಬಹುದಾಗಿದೆ.

ಮತ್ತೊಂದು ಸುತ್ತಿನ ಮೇಳವು ಇದೇ ಕಬ್ಬನ್ ಪಾರ್ಕ್‌ನಲ್ಲಿ ಮೇ ತಿಂಗಳ ಅಂತ್ಯದಲ್ಲಿ ನಡೆಯಲಿದ್ದು, ಅಲ್ಲಿ 100ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಲು ಯೋಜಿಸಲಾಗಿದೆ. ಇದರ ದಿನಾಂಕಗಳನ್ನು ಶೀಘ್ರದಲ್ಲೇ ಅಂತಿಮಗೊಳಿಸಲಾಗುವುದು ಎಂದು ಇಲಾಖೆ ತಿಳಿಸಿದೆ.

ಇಳುವರಿ ಕುಸಿತದ ಆತಂಕ

ಈ ಬಾರಿ ರಾಜ್ಯದಲ್ಲಿ ಮಾವಿನ ಇಳುವರಿ ಗಣನೀಯವಾಗಿ ಕುಸಿದಿದೆ. ಕಳೆದ ವರ್ಷ ಸುಮಾರು 15 ಲಕ್ಷ ಟನ್ ಇಳುವರಿ ಬಂದಿದ್ದರೆ, ಈ ಬಾರಿ ಕೇವಲ 10 ಲಕ್ಷ ಟನ್ ಇಳುವರು ಬರಬಹುದೆಂದು ಅಂದಾಜಿಸಲಾಗಿದೆ. ಅತೀವ ಶಾಖ ಮತ್ತು ವಾತಾವರಣದಲ್ಲಿನ ಕಡಿಮೆ ತೇವಾಂಶದ ಕಾರಣದಿಂದ ಹಣ್ಣುಗಳು ಗಿಡದಿಂದ ಉದುರಿರುವುದು ಇಳುವರಿ ಕುಂಠಿತಗೊಳ್ಳಲು ಪ್ರಮುಖ ಕಾರಣವಾಗಿದೆ. ಜೊತೆಗೆ ರಫ್ತು ಪ್ರಮಾಣದಲ್ಲೂ ಭಾರಿ ಇಳಿಕೆಯಾಗಿದೆ. ಕಳೆದ ವರ್ಷ 1,000 ಟನ್ ಮಾವು ರಫ್ತು ಮಾಡಲಾಗಿತ್ತು. ಆದರೆ ಈ ವರ್ಷ ಈವರೆಗೆ ಕೇವಲ 50 ರಿಂದ 100 ಟನ್ ಮಾತ್ರ ರಫ್ತು ಮಾಡಲು ಸಾಧ್ಯವಾಗಿದೆ ಎಂದು ವೇದಮೂರ್ತಿ ತಿಳಿಸಿದ್ದಾರೆ.

ಇದನ್ನೂ ಓದಿ ಮಾವು ಬೇಕೇ ಮಾವು! ಒಂದೇ ಸೂರಿನಡಿ ಬಗೆಬಗೆಯ ಮಾವಿನ ಹಣ್ಣುಗಳ ಮಾರಾಟ ಹೇಗಿದೆ ನೋಡಿ

ರೈತರಿಗೆ ಮಾರುಕಟ್ಟೆ ವ್ಯವಸ್ಥೆ

ಸದ್ಯ ಮಾರುಕಟ್ಟೆಯಲ್ಲಿ ಸಿಗುತ್ತಿರುವ ಮಾವಿನ ಹಣ್ಣುಗಳು ಹೊರ ರಾಜ್ಯಗಳಿಂದ ಬರುತ್ತಿರುವುದರಿಂದ ಅವುಗಳ ಗುಣಮಟ್ಟ ಕಡಿಮೆ ಇದೆ ಮತ್ತು ಬೆಲೆ ಹೆಚ್ಚಿದೆ. ಕೋಲಾರ ಮತ್ತು ರಾಮನಗರದ ಮಾವುಗಳು ಕ್ರಮವಾಗಿ ಮೇ 8 ಮತ್ತು ಮೇ 27ರ ವೇಳೆಗೆ ಮಾರುಕಟ್ಟೆಗೆ ಬರಲಿವೆ. ರೈತರು ತಾವು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಸಿಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಈ ಮೇಳದ ಮೂಲಕ ಅವರಿಗೆ ನೇರ ಮಾರುಕಟ್ಟೆ ಒದಗಿಸಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಸೆಟ್​​ನಲ್ಲಿ ಮೋನಿಷಾನ ಮಗಳು ಅಂತ ನಾನು ಯಾವಾಗಲೂ ನೋಡಿಲ್ಲ’; ದುನಿಯಾ ವಿಜಯ್ – Kannada News | Duniya Vijay on Directing Daughter Monisha in City Lights: Never Treated Her as a Daughter on Set

‘ಸಲಗ’ ಮತ್ತು ‘ಭೀಮ’ ಸಿನಿಮಾಗಳ ನಿರ್ದೇಶನ ಮಾಡಿದವರು ದುನಿಯಾ ವಿಜಯ್. ಅವರು ಮೂರನೇ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಹೆಸರು ‘ಸಿಟಿ ಲೈಟ್ಸ್’. ಈ ಚಿತ್ರದಲ್ಲಿ ವಿನಯ್ ರಾಜ್​ಕುಮಾರ್ ನಾಯಕನಾದರೆ, ದುನಿಯಾ ವಿಜಿ ಅವರ ಮಗಳು ಮೋನಿಷಾ ನಾಯಕಿ. ಅವರು ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದಾರೆ. ‘ನಾನು ಸೆಟ್​​ನಲ್ಲಿ ಮೋನಿಷಾಳ ಮಗಳು ಅಂತ ನೋಡಿಲ್ಲ’ ಎಂದಿದ್ದಾರೆ. ಅವರು ಓರ್ವ ನಿರ್ದೇಶಕನಾಗಿ ಮೋನಿಷಾನ ನೋಡುತ್ತಿದ್ದರಂತೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link