Category Archives: Blog

Your blog category

ಡಾಬಸ್ ಪೇಟೆ ಬಳಿ ಸರಣಿ ಅಪಘಾತ: ಇಬ್ಬರ ಸ್ಥಿತಿ ಗಂಭೀರ, 10ಕ್ಕೂ ಹೆಚ್ಚು ಮಂದಿಗೆ ಗಾಯ – Kannada News | Multiple Vehicle Pile Up Near Dabaspet on Bengaluru–Tumakuru Highway; Two Critical, Over 10 Injured

ನೆಲಮಂಗಲ, ಮೇ 06:  ತಾಲೂಕಿನ ಡಾಬಸ್ ಪೇಟೆಯ ಅಂಚೆಮನೆ ಗೇಟ್ ಬಳಿಯ ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ  ಸರಣಿ ಅಪಘಾತ ಸಂಭವಿಸಿದೆ.  ಬೈಕ್, ಎರಡು ಕಾರು, ಲಾರಿ, ಬಸ್,  ಪಿಕಪ್​​ ವಾಹನ ಅಪಘಾತಕ್ಕೀಡಾಗಿದ್ದು, ಡಿಕ್ಕಿಯ ರಭಸಕ್ಕೆ ಹೆದ್ದಾರಿಯಲ್ಲಿ ಪಿಕ್​​ಅಪ್​​ ವಾಹನ ಪಲ್ಟಿಯಾಗಿದೆ. ಅಪಘಾತದಲ್ಲಿ 10ಕ್ಕೂ ಹೆಚ್ಚು ಜನರಿಗೆ ಗಾಯಗಳಾಗುದ್ದು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆದ್ದಾರಿಯಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಸ್ಥಳಕ್ಕೆ ನೆಲಮಂಗಲ ಸಂಚಾರ ಪೊಲೀಸರು ದೌಡಾಯಿಸಿದ್ದಾರೆ. ಗಾಯಾಳುಗಳ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬಡ್ತಿ ಪರೀಕ್ಷೆಯಲ್ಲೂ ಕನ್ನಡಕ್ಕೆ ಅವಕಾಶ ನೀಡದ ರೈಲ್ವೆ ಇಲಾಖೆ: ಸಿಡಿದೆದ್ದೆ ಕರವೇ – Kannada News | Railway Department not allowing Kannada in Railway Promotion Exam: Karnataka Rakshana Vedike sparks

ಬೆಂಗಳೂರು, ಮೇ 06: ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗವು ಇತ್ತೀಚೆಗೆ ಹೊರಡಿಸಿರುವ ಎಲ್​ಡಿಸಿಇ ಪ್ರಮೋಷನ್ ಪರೀಕ್ಷೆಗಳ ಅಧಿಸೂಚನೆಯಲ್ಲಿ ಕನ್ನಡ ಭಾಷೆಯನ್ನು ಸಂಪೂರ್ಣವಾಗಿ ಕಡೆಗಣಿಸಿರುವುದು ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಈ ನೋಟಿಫಿಕೇಶನ್​​ ಕೇವಲ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಮಾತ್ರ ಪರೀಕ್ಷೆಗಳನ್ನು ನಡೆಸುವುದಾಗಿ ತಿಳಿಸಲಾಗಿದೆ. ಇದರಿಂದ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ತೀವ್ರವಾಗಿ ಖಂಡಿಸಿದೆ. ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ ಅಂದರೆ, ರಾಜ್ಯಾದ್ಯಂತ ರೈಲುಗಳನ್ನು ಸಂಚಾರ ‌ಮಾಡಲು ಬಿಡುವುದಿಲ್ಲ. ರಾಜ್ಯದ ಎಲ್ಲಾ ರೈಲ್ವೆ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ಈ ವಿಚಾರವನ್ನು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಮತ್ತು ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರ ಗಮನಕ್ಕೆ ತರಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಸಿಕ್ಕ ಸಿಕ್ಕ ಗೋಡೆ ನೋಡಿ ಮೂತ್ರ ವಿಸರ್ಜನೆ ಮಾಡ್ತೀರಾ? ಹುಷಾರ್! – Kannada News | Mysuru city corporation introduced New Plan For control People Peeing In Public Places

ಮೈಸೂರು, (ಮೇ 06): ಸಿಕ್ಕ ಸಿಕ್ಕ ಗೋಡೆ ಮೇಲೆ ಸೂಸು ಮಾಡೋರಿಗೆ ಬುದ್ದಿಕಲಿಸಲು ಮೈಸೂರಿನ (mysuru) ಸಬರ್ಬ್ ಬಸ್ ಸ್ಟ್ಯಾಂಡ್ ಬಳಿ ಈ ರೀತಿಯ ಮಿರರ್ ಅನ್ನು ಕಾಂಪೌಂಡ್ ಗೆ ಅಳವಡಿಸಲಾಗಿದೆ. ಮೈಸೂರು ಕೇಂದ್ರ ಬಸ್ ನಿಲ್ದಾಣದ ಮುಂಭಾಗದ ಕಾಂಪೌಂಡ್ ಗೆ ಕನ್ನಡಿ ಮಾದರಿ ರಿಫ್ಲೆಕ್ಷನ್ ಅಳವಡಿಕೆ ಮಾಡಲಾಗಿದೆ. ಈ ಮೂಲಕ ಖಾಲಿ ಕಾಂಪೌಂಡ್ ಗಳ ಮುಂದೆ ನಿಂತು ಮೂತ್ರ ವಿಸರ್ಜನೆ ಬ್ರೇಕ್‌ಗೆ ಹಾಕಲು ಪಾಲಿಕೆ (mysuru city corporation)  ಈ ಹೊಸ ಐಡಿಯಾ ಮಾಡಿದೆ. 80 ಮೀಟರ್ ಕಾಂಪೌಂಡ್ ಗೆ ಸ್ಟೇನ್ ಲೆಸ್ ಸ್ಟೀಲ್ ರಿಫ್ಲಕ್ಷನ್ ಅಳವಡಿಕೆ ಮಾಡಲಾಗಿದ್ದು, ಸ್ಟೇನ್ ಲೆಸ್ ಸ್ಟೀಲ್ ಮೂಲಕ ಕನ್ನಡಿ‌ ಮಾದರಿ ಪ್ರತಿಬಿಂಬ ಕಾಣುವಂತೆ ಹಾಕಲಾಗಿದೆ. ಅದರ‌ ಮುಂದೆ ನಿಂತರೆ ಸಂಪೂರ್ಣ ಚಿತ್ರಣ ಹಿಂಬದಿಯವರಿಗೆ ಕಾಣುತ್ತದೆ. ರಾತ್ರಿ ವೇಳೆ ಸ್ಟ್ರೀಟ್ ಲೈಟ್ ಆನ್ ಆಗುತ್ತಿದಂತೆ ಬಲ್ಬ್ ಕೂಡ ಆನ್ ಆಗುತ್ತದೆ. ಸುಮಾರು 9.5 ಲಕ್ಷ ರೂ. ವೆಚ್ಚದಲ್ಲಿ ಈ ಯೋಜನೆ ಜಾರಿಗೆ ತರಲಾಗಿದ್ದು, ಸದ್ಯ ರಾಜ್ಯದಲ್ಲಿ ಮೊದಲ ಬಾರಿಗೆ ಮೈಸೂರಿನಲ್ಲೇ ಈ ಯೋಜನೆಗೊಳಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪ್ರಮಾಣ ವಚನಕ್ಕೆ ಸಿದ್ಧತೆ ನಡೆಸಿದ್ದ ವಿಜಯ್‌ಗೆ ಬಿಗ್‌ ಶಾಕ್‌ ಕೊಟ್ಟ ತಮಿಳುನಾಡು ಗರ್ವನರ್‌! – Kannada News | Tamil Nadu Governor Not Convinced Vijay’s TVK Has Majority, Oath Unlikely Tomorrow

ಚೆನ್ನೈ, (ಮೇ 06): ತಮಿಳುನಾಡು (Tamil Nadu) ವಿಧಾನಸಭೆಯಲ್ಲಿ ದಳಪತಿ ವಿಜಯ್ (Vijay) ಅವರ ಟಿವಿಕೆ ಪಕ್ಷ ಮೊದಲ ಪ್ರಯತ್ನದಲ್ಲೇ 108 ಸ್ಥಾನಗಳನ್ನು ಪಡೆದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಮೊದಲ ಬಾರಿ ರಾಜಕೀಯ ಅಖಾಡಕ್ಕೆ ಇಳಿದು ಭರ್ಜರಿ ಜಯಭೇರಿ ಬಾರಿಸಿರುವ ದಳಪತಿ ವಿಜಯ್ ಅವರು ಬುಧವಾರ ತಮಿಳುನಾಡು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅವರನ್ನು ಭೇಟಿ ಮಾಡಿ, ನೂತನ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದು, ಕಾಂಗ್ರೆಸ್ ಹಾಗೂ ಇತರ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸುವುದಾಗಿ ಮನವಿ ಪತ್ರ ಸಲ್ಲಿಸಿದರು. ಇನ್ನೊಂದೆಡೆ ನಾಳೆಯೇ (ಮೇ 07) ದಳಪತಿ ವಿಜಯ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರಕ್ಕೆ ಸಕಲ ಸಿದ್ಧತೆಗಳನ್ನ ಕೈಗೊಂಡಿದ್ದರು. ಇದಕ್ಕೆ ನೆಹರು ಕ್ರೀಡಾಂಗಣದಲ್ಲಿ (Jawaharlal Nehru Stadium) ಭರ್ಜರಿ ಸಿದ್ಧತೆಗಳು ನಡೆದಿವೆ.

ಆದ್ರೆ, ವಿಜಯ್ ನೀಡಿರುವ ನಂಬರ್ (ಬಹುಮತಕ್ಕೆ ಬೇಕಾದ ಸಂಖ್ಯೆ)​​ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ತೃಪ್ತರಾಗಿಲ್ಲ. ಹೀಗಾಗಿ ಪ್ರಮಾಣವಚನಕ್ಕೆ ಅನುಮತಿ ಕೊಟ್ಟಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ. ಆದ್ದರಿಂದ ನಾಳೆ ವಿಜಯ್ ಪ್ರಮಾಣ ವಚನ ಕನಸು ನುಚ್ಚು ನೂರಾಗಿದೆ.

ಇದನ್ನೂ ಓದಿ: ರಾಜ್ಯಪಾಲರನ್ನು ಭೇಟಿಯಾಗಿ ತಮಿಳುನಾಡು ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಟಿವಿಕೆ ಮುಖ್ಯಸ್ಥ ವಿಜಯ್

Source link

SRH vs PBKS IPL 2026 Live Score: ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ಕೆ – Kannada News | Sunrisers Hyderabad vs Punjab Kings IPL 2026 Live Cricket Score SRH vs PBKS Match on 6th May latest news in Kannada

ಐಪಿಎಲ್ 2026 ರ 49 ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು, ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸುತ್ತಿದೆ. ಉಭಯ ತಂಡಗಳ ನಡುವಿನ ಈ ಪಂದ್ಯ ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಇದು ಹೈದರಾಬಾದ್‌ನ 11 ನೇ ಪಂದ್ಯವಾಗಿದ್ದರೆ, ಪಂಜಾಬ್‌ಗೆ 10 ನೇ ಪಂದ್ಯವಾಗಿದೆ. ಎರಡೂ ತಂಡಗಳು ತಲಾ 6 ಪಂದ್ಯಗಳನ್ನು ಗೆದ್ದಿವೆ.

Source link

ಕರ್ನಾಟಕ ಹವಾಮಾನ ವರದಿ: ಮುಂದಿನ 7 ದಿನ ರಾಜ್ಯದಲ್ಲಿ ಬಿಸಿಲಿನ ನಡುವೆ ಅಲ್ಲಲ್ಲಿ ಮಳೆ ಸಾಧ್ಯತೆ – Kannada News | Karnataka Weather Report: Rain Forecast in Parts of the State Till May 12; Dry Conditions Elsewhere

ಬೆಂಗಳೂರು, ಮೇ 06: ಮುಂದಿನ 7 ದಿನಗಳ ಕಾಲ ಕರ್ನಾಟಕದಾದ್ಯಂತ (karnataka) ಒಣ ಹವೆ ಹಾಗೂ ಬಿಸಿಲಿನ ವಾತಾವರಣ ಮುಂದುವರಿಯುವ ಸಾಧ್ಯತೆಯಿದ್ದು, ಮಧ್ಯಾಹ್ನ ನಂತರ, ಅಲ್ಲಲ್ಲಿ ಮೋಡ ಕವಿದ ವಾತಾವರಣ ಕಂಡುಬರಲಿದೆ. ಜೊತೆಗೆ ರಾಜ್ಯದಾದ್ಯಂತ ಅಲ್ಲಲ್ಲಿ ಗುಡುಗು, ಸಿಡಿಲು ಸಹಿತ ಜೋರಾದ ಗಾಳಿಯೊಂದಿಗೆ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮುನ್ಸೂಚನೆ ನೀಡಿವೆ.

ಮುಖ್ಯಾಂಶಗಳು

  • ರಾಜ್ಯದಲ್ಲಿ ಇಂದಿನಿಂದ ಮೇ 12ರವರೆಗೆ ಕೆಲವೆಡೆ ಮಳೆ ಮುನ್ಸೂಚನೆ
  • ಕರ್ನಾಟಕದಾದ್ಯಂತ ಒಣ ಹವೆ ಹಾಗೂ ಬಿಸಿಲಿನ ವಾತಾವರಣ ಮುಂದುವರಿಯುವ ಸಾಧ್ಯತೆ
  • ಗರಿಷ್ಠ ತಾಪಮಾನದಲ್ಲಿ ಯಾವುದೇ ಬದಲಾವಣೆ ಇಲ್ಲ

ಕರಾವಳಿ ಕರ್ನಾಟಕದಲ್ಲಿ ಇಂದಿನಿಂ ಮೇ 12ರವರೆಗೆ ಕರಾವಳಿ ಕರ್ನಾಟಕದ ಒಂದೆರಡು ಕಡೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಜೊತೆಗೆ ಗಂಟೆಗೆ 30-40 ಕಿಮೀ ವೇಗದಲ್ಲಿ ಬಲವಾದ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಟ್ವೀಟ್​

ಉತ್ತರ ಒಳನಾಡು ಕರ್ನಾಟಕದ ಒಂದೆರಡು ಕಡೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಈ ಅವಧಿಯಲ್ಲಿ ಗಂಟೆಗೆ 40-50 ಕಿಮೀ ವೇಗದ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಇಂದು ಸಂಜೆ ಭಾರೀ ಮಳೆ: ಬಿಸಿಯಲ್ಲಿ ಬೆಂದು ಹೋಗಿದ್ದ ಮಂಗಳೂರಿಗೆ ವರುಣನ ಸಿಂಚನ

ಇನ್ನು ದಕ್ಷಿಣ ಒಳನಾಡಿನಲ್ಲಿ ಇಂದು ಮತ್ತು ಮೇ 9ರಿಂದ 12ರವರೆಗೆ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಗಂಟೆಗೆ 40-50 ಕಿಮೀ ವೇಗದ ಗಾಳಿಯೊಂದಿಗೆ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಮೇ 7 ಮತ್ತು 8ರಂದು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗು, ಬಲವಾದ ಗಾಳಿ (40-50 ಕಿಮೀ ವೇಗ) ಮತ್ತು ಭಾರೀ ಮಳೆಯಾಗುವ ಸಾಧ್ಯತೆಯಿದೆ.

ತಾಪಮಾನದಲ್ಲಿ ಬದಲಾವಣೆ ಇಲ್ಲ

ಮುಂದಿನ 5 ದಿನಗಳವರೆಗೆ ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಭಾಗಗಳಲ್ಲಿ ಗರಿಷ್ಠ ತಾಪಮಾನದಲ್ಲಿ ಯಾವುದೇ ದೊಡ್ಡ ಬದಲಾವಣೆ ಇರುವುದಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 6:46 pm, Wed, 6 May 26

Source link

ಮಕ್ಕಳ ಆರೋಗ್ಯ ಪದೇ ಪದೇ ಹದಗೆಡುತ್ತಾ? ಹಾಗಿದ್ರೆ ಈ ರೀತಿ ಆರೈಕೆ ಮಾಡಿ! – Kannada News | How Seasonal Shifts Affect Children: Cold, Flu, and Allergy Guide

ಇತ್ತೀಚಿನ ದಿನಗಳಲ್ಲಿ ಹವಾಮಾನದಲ್ಲಿ ಆಗುತ್ತಿರುವ ನಿರಂತರ ಬದಲಾವಣೆಗಳು ಮಕ್ಕಳ ಆರೋಗ್ಯದ (Kids’ Health) ಮೇಲೆ ನೇರ ಪರಿಣಾಮ ಬೀರುತ್ತಿವೆ. ಹೆಚ್ಚು ಬಿಸಿಲು, ಸಂಜೆಯ ಸಮಯ ಬೀಸುವ ತಣ್ಣನೆಯ ಗಾಳಿ ಹಾಗೂ ತಾಪಮಾನದಲ್ಲಿ ಆಗುವ ಏರುಪೇರು ಮಕ್ಕಳಲ್ಲಿ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹಿರಿಯರಿಗಿಂತ ಮಕ್ಕಳ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ, ಇಂತಹ ಬದಲಾವಣೆಗಳಿಗೆ ಅವರು ಬೇಗ ತುತ್ತಾಗುತ್ತಾರೆ. ಹಾಗಾದರೆ ಮಕ್ಕಳಲ್ಲಿ ಕಂಡುಬರುವ ಯಾವ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬಾರದು, ಈ ಸಮಯದಲ್ಲಿ ಅವರ ಆರೈಕೆ ಹೇಗೆ ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಯಾವ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬಾರದು?

ಹವಾಮಾನ ಬದಲಾವಣೆಯ ಸಮಯದಲ್ಲಿ ಮಕ್ಕಳಲ್ಲಿ ಪದೇಪದೇ ಜ್ವರ, ಕೆಮ್ಮು ಕಾಣಿಸಿಕೊಂಡರೆ ಅದನ್ನು ನಿರ್ಲಕ್ಷ್ಯ ಮಾಡಬಾರದು. ಜೊತೆಗೆ ದೌರ್ಬಲ್ಯ, ಊಟ, ತಿಂಡಿ ಸರಿಯಾಗಿ ಮಾಡದಿರುವುದು, ಹೆಚ್ಚು ನಿದ್ರೆ ಅಥವಾ ಚಿಡಿಚಿಡಿ ಇತ್ಯಾದಿ ಲಕ್ಷಣಗಳು ಕಾಣಿಸಬಹುದು. ಕೆಲವು ಮಕ್ಕಳಲ್ಲಿ ಅಲರ್ಜಿ, ಉಸಿರಾಟದ ತೊಂದರೆ ಮತ್ತು ಚರ್ಮದ ಮೇಲೆ ರಾಶ್‌ಗಳು ಕಾಣಿಸಬಹುದು. ಈ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸುವುದು ಅತ್ಯಂತ ಅಗತ್ಯ.

ಇದನ್ನೂ ಓದಿ: ಮಕ್ಕಳು ಪದೇಪದೇ ಬೀಳುವುದರಿಂದ ಮೆದುಳಿಗೆ ಅಪಾಯವಾಗುತ್ತದೆಯೇ? ವೈದ್ಯರನ್ನು ಯಾವಾಗ ಸಂಪರ್ಕ ಮಾಡಬೇಕು?

ಮಕ್ಕಳ ಆರೈಕೆ ಹೇಗೆ ಮಾಡಬೇಕು?

ಮಕ್ಕಳಿಗೆ ಸಮತೋಲನ ಮತ್ತು ಪೌಷ್ಟಿಕ ಆಹಾರ ನೀಡುವುದು ಬಹಳ ಮುಖ್ಯ. ಹಣ್ಣು, ತರಕಾರಿ ಮತ್ತು ವಿಟಮಿನ್‌ಗಳುಳ್ಳ ಆಹಾರವನ್ನು ದಿನನಿತ್ಯದ ಆಹಾರದಲ್ಲಿ ಸೇರಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಮಕ್ಕಳಿಗೆ ಸಾಕಷ್ಟು ನೀರು ಕುಡಿಸುವುದು ಮತ್ತು ಹವಾಮಾನಕ್ಕೆ ಅನುಗುಣವಾದ ಉಡುಪುಗಳನ್ನು ಧರಿಸುವುದು ಅಗತ್ಯ. ಸ್ವಚ್ಛತೆಯ ಬಗ್ಗೆ ವಿಶೇಷ ಗಮನ ಹರಿಸಿ, ಕೈ ತೊಳೆಯುವ ಅಭ್ಯಾಸವನ್ನು ಬೆಳೆಸಬೇಕು. ಅದರ ಜೊತೆಗೆ ಮಕ್ಕಳಿಗೆ ಸಾಕಷ್ಟು ವಿಶ್ರಾಂತಿ ಮತ್ತು ನಿದ್ರೆ ಸಿಗುವಂತೆ ನೋಡಿಕೊಳ್ಳಬೇಕು. ತುಂಬಾ ಬಿಸಿ ಅಥವಾ ತಣ್ಣನೆಯ ಆಹಾರಗಳನ್ನು ತಪ್ಪಿಸುವುದು ಉತ್ತಮ. ಹೊರಗಡೆ ಆಟವಾಡುವಾಗ ಧೂಳು, ತೀವ್ರ ಬಿಸಿಲು ಅಥವಾ ತಣ್ಣನೆಯ ಗಾಳಿಯಿಂದ ರಕ್ಷಿಸಬೇಕು. ಮನೆಗೆ ಬಂದ ನಂತರ ಕೈ- ಕಾಲುಗಳನ್ನು ಸ್ವಚ್ಛಗೊಳಿಸುವ ಅಭ್ಯಾಸ ಮಾಡಿಸಬೇಕು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬ್ಯಾಂಕ್​ಗಳಲ್ಲಿ ಕೆಟ್ಟ ಸಾಲಗಳು; ಆರ್​ಬಿಐನಿಂದ ಹೊಸ ನಿಯಮಗಳ ಪ್ರಸ್ತಾಪ; ಏನಿವು ರೂಲ್ಸ್? – Kannada News | RBI’s New NPA Rules 2027: Major Bank & Borrower Impact, ECL Model Explained

ಮುಂಬೈ, ಮೇ 6: ಭಾರತೀಯ ರಿಸರ್ವ್ ಬ್ಯಾಂಕ್ (RBI) ದೇಶದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಜಾಗತಿಕ ಗುಣಮಟ್ಟಕ್ಕೆ ತಕ್ಕಂತೆ ಬಲಪಡಿಸಲು ಮತ್ತು ಸಾಲದ ಅಪಾಯಗಳನ್ನು ಮುಂಚಿತವಾಗಿಯೇ ನಿರ್ವಹಿಸಲು ಅನುತ್ಪಾದಕ ಆಸ್ತಿ (Bad Loans/NPA) ವರ್ಗೀಕರಣ ಹಾಗೂ ಪ್ರಾವಿಷನಿಂಗ್ (Provisions) ನಿಯಮಗಳಲ್ಲಿ ಭಾರಿ ಬದಲಾವಣೆಗಳನ್ನು ತಂದಿದೆ. ಆರ್‌ಬಿಐ ಬಿಡುಗಡೆ ಮಾಡಿರುವ ಹೊಸ ನಿರ್ದೇಶನಗಳು (Master Directions) ಬ್ಯಾಂಕುಗಳು ಹಾಗೂ ಸಾಲ ಪಡೆದ ಗ್ರಾಹಕರ ಮೇಲೆ ನೇರ ಪರಿಣಾಮ ಬೀರಲಿವೆ. ಈ ಹೊಸ ನಿಯಮಗಳು ಏಪ್ರಿಲ್ 1, 2027 ರಿಂದ ಜಾರಿಗೆ ಬರಲಿದ್ದು, ಬ್ಯಾಂಕುಗಳು ಮತ್ತು ಸಾಲಗಾರರು ತಿಳಿದುಕೊಳ್ಳಬೇಕಾದ 5 ಪ್ರಮುಖ ಮುಖ್ಯಾಂಶಗಳು ಇಲ್ಲಿವೆ:

ಒಂದು ಸಾಲ ಮಿಸ್ ಆದರೂ ಎಲ್ಲಾ ಸಾಲಗಳೂ NPA

ಹೊಸ ನಿಯಮಗಳ ಪ್ರಕಾರ, ಒಬ್ಬನೇ ಸಾಲಗಾರ (Borrower) ಒಂದು ಬ್ಯಾಂಕಿನಲ್ಲಿ ಒಂದಕ್ಕಿಂತ ಹೆಚ್ಚು ಸಾಲಗಳನ್ನು (ಉದಾಹರಣೆಗೆ: ಬಿಸಿನೆಸ್ ಲೋನ್, ಹೋಮ್ ಲೋನ್ ಮತ್ತು ಕಾರ್ ಲೋನ್) ಪಡೆದಿದ್ದು, ಅದರಲ್ಲಿ ಯಾವುದಾದರೂ ಒಂದು ಲೋನ್ ಅಕೌಂಟ್ ನಿಗದಿತ 90 ದಿನಗಳ ಅವಧಿಯಲ್ಲಿ ಮರುಪಾವತಿಯಾಗದೆ NPA ಎಂದು ಘೋಷಿಸಲ್ಪಟ್ಟರೆ, ಆತನ ಉಳಿದೆಲ್ಲಾ ಸಾಲದ ಖಾತೆಗಳನ್ನೂ ಬ್ಯಾಂಕುಗಳು ಸ್ವಯಂಚಾಲಿತವಾಗಿ NPA ಎಂದೇ ಪರಿಗಣಿಸಬೇಕಾಗುತ್ತದೆ. ಸಾಲಗಾರರನ್ನು ಹೆಚ್ಚು ಶಿಸ್ತುಬದ್ಧಗೊಳಿಸಲು ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ಕಾಗ್ನಿಜೆಂಟ್​ನಲ್ಲಿ 15,000 ಮಂದಿ ಲೇ ಆಫ್ ಸಾಧ್ಯತೆ; ಫ್ರೆಷ್​ವರ್ಕ್ಸ್​ನಲ್ಲಿ ಶೇ. 11 ಮಂದಿಗೆ ಕಾದಿದೆ ಶಾಕ್

‘ಎಕ್ಸ್‌ಪೆಕ್ಟೆಡ್ ಕ್ರೆಡಿಟ್ ಲಾಸ್’ (ECL) ಮಾದರಿ ಅಳವಡಿಕೆ

ಇಲ್ಲಿಯವರೆಗೆ ಬ್ಯಾಂಕುಗಳು ಸಾಲಗಾರರು ಸುಸ್ತಿ (Default) ಮಾಡಿದ 90 ದಿನಗಳ ನಂತರವಷ್ಟೇ ಆ ನಷ್ಟವನ್ನು ಭರಿಸಲು ಹಣವನ್ನು ಪಕ್ಕಕ್ಕೆ ಎತ್ತಿಡುತ್ತಿದ್ದವು (Incurred Loss Method). ಆದರೆ ಈಗ ಆರ್‌ಬಿಐ ‘ಎಕ್ಸ್‌ಪೆಕ್ಟೆಡ್ ಕ್ರೆಡಿಟ್ ಲಾಸ್’ (ECL) ಎಂಬ ಮುನ್ಸೂಚನಾ ಮಾದರಿಯನ್ನು ಕಡ್ಡಾಯಗೊಳಿಸಿದೆ. ಇದರ ಅಡಿಯಲ್ಲಿ, ಬ್ಯಾಂಕುಗಳು ಗಣಿತದ ಮಾದರಿಗಳನ್ನು (Mathematical model) ಬಳಸಿ ಗ್ರಾಹಕರು ಭವಿಷ್ಯದಲ್ಲಿ ಸಾಲ ಸುಸ್ತಿ ಮಾಡಬಹುದಾದ ಅಪಾಯವನ್ನು ಮುಂಚಿತವಾಗಿಯೇ ಊಹಿಸಿ, ಅದಕ್ಕೆ ತಕ್ಕಂತೆ ಹಣವನ್ನು ಕಾಯ್ದಿರಿಸಬೇಕಾಗುತ್ತದೆ (Provisioning).

ಭದ್ರತೆ (Strong Collateral) ಅಥವಾ ಅಡಮಾನ ಇರುವ ಸಾಲಗಳಿಗೆ ವಿನಾಯಿತಿ

ಲೋನ್ ಪ್ರಾವಿಷನಿಂಗ್ ನಿಯಮಗಳನ್ನು ಕಠಿಣಗೊಳಿಸಿದ್ದರೂ, ಸುರಕ್ಷಿತ ಸಾಲಗಳಿಗೆ ಆರ್‌ಬಿಐ ಸಲ್ಪ ಸಮಾಧಾನಕರ ನಿಯಮ ತಂದಿದೆ. ನಗದು (Cash), ಚಿನ್ನ (Gold) ಅಥವಾ ಸರ್ಕಾರಿ ಸೆಕ್ಯೂರಿಟಿಗಳಂತಹ ಬಲವಾದ ಮತ್ತು ಸುಲಭವಾಗಿ ನಗದೀಕರಿಸಬಹುದಾದ ಭದ್ರತೆಗಳನ್ನು (Collateral) ನೀಡಿ ಪಡೆದಿರುವ ಸಾಲಗಳ ಮೇಲೆ ಬ್ಯಾಂಕುಗಳು ಕಡಿಮೆ ಮೊತ್ತದ ಹಣವನ್ನು ಕಾಯ್ದಿರಿಸಿದರೆ ಸಾಕಾಗುತ್ತದೆ. ಇದರಿಂದಾಗಿ ಇಂತಹ ಸಾಲಗಳ ಮೇಲಿನ ಬ್ಯಾಂಕುಗಳ ವೆಚ್ಚ ಕಡಿಮೆಯಾಗಲಿದೆ.

‘ಸ್ಟ್ಯಾಂಡರ್ಡ್ ಅಸೆಟ್’ ಆಗಲು ಸಂಪೂರ್ಣ ಬಾಕಿ ಪಾವತಿ ಕಡ್ಡಾಯ

ಒಮ್ಮೆ ಸಾಲಗಾರನ ಖಾತೆಯು NPA ಎಂದು ವರ್ಗೀಕರಿಸಲ್ಪಟ್ಟರೆ, ಅದನ್ನು ಮತ್ತೆ ಮೊದಲಿನಂತೆ ಸಾಮಾನ್ಯ ಅಥವಾ ‘ಸ್ಟ್ಯಾಂಡರ್ಡ್ ಅಸೆಟ್’ (Standard Asset) ಎಂದು ಪರಿಗಣಿಸಬೇಕಾದರೆ, ಸಾಲಗಾರನು ಆ ಬ್ಯಾಂಕಿನಲ್ಲಿ ತನಗಿರುವ ಎಲ್ಲಾ ಸಾಲದ ಖಾತೆಗಳ ಸಂಪೂರ್ಣ ಅಸಲು ಮತ್ತು ಬಡ್ಡಿಯ ಬಾಕಿ ಮೊತ್ತವನ್ನು (Entire Arrears) ಪೂರ್ತಿಯಾಗಿ ಪಾವತಿಸಬೇಕಾಗುತ್ತದೆ. ಭಾಗಶಃ ಪಾವತಿಗಳಿಗೆ ಇಲ್ಲಿ ಅವಕಾಶವಿರುವುದಿಲ್ಲ.

ಇದನ್ನೂ ಓದಿ: ಅನುವಾದಿನಿ ಎಐ ಮ್ಯಾಥ್​ಜೋರೋ ಮ್ಯಾಜಿಕ್; ಕುಣಿಕುಣಿಯುತಾ ಕಲಿಯಿರಿ ಗಣಿತ; 22 ಭಾಷೆಗಳಲ್ಲಿ ನಲಿ-ಕಲಿ

ಸ್ವಯಂಚಾಲಿತ ಎನ್‌ಪಿಎ ಪತ್ತೆ ವ್ಯವಸ್ಥೆ (Automated NPA Identification)

ಬ್ಯಾಂಕುಗಳು ತಮಗೆ ಇಷ್ಟಬಂದಂತೆ ಅಥವಾ ಮ್ಯಾನುಯಲ್ ಆಗಿ ಸಾಲಗಳನ್ನು NPA ಎಂದು ಗುರುತಿಸುವುದನ್ನು ತಡೆಯಲು ಆರ್‌ಬಿಐ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಎಲ್ಲಾ ಬ್ಯಾಂಕುಗಳು ತಮ್ಮ ಐಟಿ ವ್ಯವಸ್ಥೆಯಲ್ಲಿ ಸ್ವಯಂಚಾಲಿತ ವ್ಯವಸ್ಥೆಯನ್ನು (Automated System) ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ಇದು ಸಾಲದ ಮರುಪಾವತಿ ತಪ್ಪಿದ ತಕ್ಷಣ ಯಾವುದೇ ಹಸ್ತಕ್ಷೇಪವಿಲ್ಲದೆ ರಿಸ್ಕ್ ಅನ್ನು ಪತ್ತೆ ಮಾಡುತ್ತದೆ.

ಹೊಸ ಸಾಲಗಳಿಗೆ ಈ ನಿಯಮಗಳು ಏಪ್ರಿಲ್ 1, 2027 ರಿಂದ ಅನ್ವಯವಾಗಲಿದ್ದು, ಬ್ಯಾಂಕುಗಳು ತಮ್ಮ ಹಳೆಯ ಸಾಲಗಳನ್ನು (Legacy Loans) ಈ ಹೊಸ ಬಡ್ಡಿ ಮತ್ತು ನಷ್ಟ ಲೆಕ್ಕಾಚಾರದ ಮಾದರಿಗೆ ಬದಲಾಯಿಸಲು ಮಾರ್ಚ್ 31, 2030 ರವರೆಗೆ ಕಾಲಾವಕಾಶ ನೀಡಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ನಾಳೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ವಿಜಯ್ ಕನಸು ಭಗ್ನ; ಶಾಕ್ ಕೊಟ್ಟ ರಾಜ್ಯಪಾಲರು – Kannada News | TVK Chief Vijays Oath taking Ceremony In Doubt Governor Not Convinced with majority Numbers

ಚೆನ್ನೈ, ಮೇ 6: ಹೊಸ ಪಕ್ಷವಾದ ಟಿವಿಕೆ ಕಟ್ಟಿ, ಮೊದಲ ಬಾರಿ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ (Tamil Nadu Assembly Elections) ಸ್ಪರ್ಧಿಸಿದ್ದ ನಟ ಜೋಸೆಫ್ ವಿಜಯ್ (Vijay) ಯಾರೂ ನಿರೀಕ್ಷೆಯೂ ಮಾಡಿರದ ರೀತಿಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದರು. ತಮಿಳುನಾಡಿನ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಟಿವಿಕೆಗೆ ಸರ್ಕಾರ ರಚನೆಗೆ ಬೇಕಾದ ಬಹುಮತವಾದ 118 ಸ್ಥಾನಗಳು ಸಿಕ್ಕಿರಲಿಲ್ಲ. ಹೀಗಾಗಿ, ಅನಿವಾರ್ಯವಾಗಿ ವಿಜಯ್ ಬೇರೆ ಪಕ್ಷಗಳ ಬೆಂಬಲ ಕೋರಿದ್ದರು. ಕಾಂಗ್ರೆಸ್​​ನ ಬೆಂಬಲದಿಂದ ವಿಜಯ್ ನಾಳೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಸಿದ್ಧರಾಗಿದ್ದರು. ಆದರೆ, ತಮಿಳುನಾಡಿನ ರಾಜ್ಯಪಾಲರು ವಿಜಯ್ ನೀಡಿದ ಬಹುಮತದ ಲೆಕ್ಕಾಚಾರದಿಂದ ತೃಪ್ತರಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಈ ಕಾರಣದಿಂದ ವಿಜಯ್ ನಾಳೆ ಪ್ರಮಾಣವಚನ ಸ್ವೀಕರಿಸುವುದು ಅನುಮಾನ ಎನ್ನಲಾಗುತ್ತಿದೆ.


ಸುದ್ದಿ ಅಪ್​ಡೇಟ್ ಆಗುತ್ತಿದೆ….

Published On – 6:30 pm, Wed, 6 May 26

Source link

ಕಾಗ್ನಿಜೆಂಟ್​ನಲ್ಲಿ 15,000 ಮಂದಿ ಲೇ ಆಫ್ ಸಾಧ್ಯತೆ; ಫ್ರೆಷ್​ವರ್ಕ್ಸ್​ನಲ್ಲಿ ಶೇ. 11 ಮಂದಿಗೆ ಕಾದಿದೆ ಶಾಕ್ – Kannada News | IT Job Crisis: AI Automation Leads to Massive Layoffs at Cognizant, Freshworks

ಕಾಗ್ನಿಜೆಂಟ್ ಲೇಆಫ್Image Credit source: AI/Mediaforge/TV9

ಬೆಂಗಳೂರು/ನವದೆಹಲಿ, ಮೇ 6: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಮತ್ತು ಜನರೇಟಿವ್ ಎಐ (GenAI) ತಂತ್ರಜ್ಞಾನಗಳ ತ್ವರಿತ ಬೆಳವಣಿಗೆಯು ಜಾಗತಿಕ ಮಾಹಿತಿ ತಂತ್ರಜ್ಞಾನ (IT) ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸುತ್ತಿದೆ. ಇದರ ನೇರ ಪರಿಣಾಮವಾಗಿ, ಪ್ರಮುಖ ಐಟಿ ದೈತ್ಯ ಸಂಸ್ಥೆಯಾದ ಕಾಗ್ನಿಜೆಂಟ್ ಟೆಕ್ನಾಲಜಿ ಸೊಲ್ಯೂಷನ್ಸ್ (Cognizant) ಸಂಸ್ಥೆ ತನ್ನ ಒಟ್ಟು ಉದ್ಯೋಗಿಗಳಲ್ಲಿ ಬರೋಬ್ಬರಿ 12,000 ದಿಂದ 15,000 ಉದ್ಯೋಗಗಳನ್ನು ಕಡಿತಗೊಳಿಸಲು ಗಂಭೀರ ಚಿಂತನೆ ನಡೆಸಿದೆ. ಅತ್ಯಂತ ಕಳವಳಕಾರಿ ಸಂಗತಿಯೆಂದರೆ, ಈ ಲೇ-ಆಫ್‌ (Job Cuts) ಪ್ರಕ್ರಿಯೆಯಲ್ಲಿ ಸಿಂಹಪಾಲು, ಅಂದರೆ ಬಹುಪಾಲು ಉದ್ಯೋಗ ನಷ್ಟವು ಭಾರತದಲ್ಲಿರುವ ಕಾಗ್ನಿಜೆಂಟ್ ಕಚೇರಿಗಳಲ್ಲೇ ನಡೆಯಲಿದೆ ಎಂದು ವರದಿಗಳು ತಿಳಿಸಿವೆ.

ಇನ್ನೊಂದೆಡೆ, ಭಾರತದ ಸಾಸ್ (SaaS) ಸಾಫ್ಟ್​ವೇರ್ ಸಂಸ್ಥೆ ಫ್ರೆಷ್​ವರ್ಕ್ಸ್ (FreshWorks) ಶೇ. 11ಕ್ಕೂ ಹೆಚ್ಚು ಉದ್ಯೋಗಿಗಳನ್ನು ಲೇ ಆಫ್ ಮಾಡಲು ಯೋಜಿಸಿದೆ. ಅಂದರೆ, ಈ ಕಂಪನಿಯ 500ಕ್ಕೂ ಹೆಚ್ಚು ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆ. ಈ ವಿಚಾರವನ್ನು ಫ್ರೆಷ್​ವರ್ಕ್ಸ್ ಸಿಇಒ ಡೆನಿಸ್ ವುಡ್​ಸೈಡ್ (Denis Woodside) ಅವರೇ ಖಚಿತಪಡಿಸಿದ್ದಾರೆ. ಕಂಪನಿಯ ಹೆಚ್ಚಿನ ಕೋಡಿಂಗ್ ಕೆಲಸವನ್ನು ಎಐನಿಂದಲೇ ಮಾಡಲಾಗುತ್ತಿರುವುದರಿಂದ ಮಾನವ ಸಂಪನ್ಮೂಲಗಳನ್ನು ಕಡಿತಗೊಳಿಸಲಾಗುತ್ತಿದೆ.

ಕಾಗ್ನಿಜೆಂಟ್​ನಲ್ಲಿ ಉದ್ಯೋಗ ಕಡಿತಕ್ಕೆ ಪ್ರಮುಖ ಕಾರಣಗಳೇನು?

ಎಐ ಮತ್ತು ಆಟೊಮೇಷನ್ ಹೂಡಿಕೆ: ಸಾಂಪ್ರದಾಯಿಕ ಐಟಿ ಕೆಲಸಗಳನ್ನು ಈಗ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನಗಳು ಅತ್ಯಂತ ವೇಗವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ಮಾಡುತ್ತಿವೆ. ಹೀಗಾಗಿ ಕಂಪನಿಯು ತನ್ನ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಮತ್ತು ವೆಚ್ಚವನ್ನು ಕಡಿಮೆ ಮಾಡಲು ಎಐ ತಂತ್ರಜ್ಞಾನಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ.

ಇದನ್ನೂ ಓದಿ: ಅನುವಾದಿನಿ ಎಐ ಮ್ಯಾಥ್​ಜೋರೋ ಮ್ಯಾಜಿಕ್; ಕುಣಿಕುಣಿಯುತಾ ಕಲಿಯಿರಿ ಗಣಿತ; 22 ಭಾಷೆಗಳಲ್ಲಿ ನಲಿ-ಕಲಿ

ವೆಚ್ಚ ಮರುಹಂಚಿಕೆ (Cost Realignment): ಕಂಪನಿಯು ತನ್ನ ಸಾಂಪ್ರದಾಯಿಕ ಸೇವೆಗಳ ವಿಭಾಗದಲ್ಲಾಗುವ ವೆಚ್ಚವನ್ನು ಉಳಿಸಿ, ಆ ಹಣವನ್ನು ಉನ್ನತ ಮಟ್ಟದ ಎಐ ತಂತ್ರಜ್ಞಾನ ಮತ್ತು ಅತ್ಯಾಧುನಿಕ ಡಿಜಿಟಲ್ ಮೂಲಸೌಕರ್ಯಗಳ ಅಭಿವೃದ್ಧಿಗೆ ಮರುಹೂಡಿಕೆ ಮಾಡಲು ಈ ಕಠಿಣ ನಿರ್ಧಾರಕ್ಕೆ ಮುಂದಾಗಿದೆ.

ಬದಲಾಗುತ್ತಿರುವ ಜಾಗತಿಕ ಬೇಡಿಕೆ: ಜಾಗತಿಕ ಮಾರುಕಟ್ಟೆಯಲ್ಲಿ ಗ್ರಾಹಕರು ಈಗ ಸಾಂಪ್ರದಾಯಿಕ ಸಾಫ್ಟ್‌ವೇರ್ ಕೋಡಿಂಗ್ ಮತ್ತು ನಿರ್ವಹಣೆಗಿಂತ ಹೆಚ್ಚಾಗಿ ಎಐ ಆಧಾರಿತ ಪರಿಹಾರಗಳನ್ನು (AI-driven solutions) ಬಯಸುತ್ತಿದ್ದಾರೆ.

ಭಾರತದ ಮೇಲಾಗುವ ಪರಿಣಾಮ ಎಷ್ಟು?

ಕಾಗ್ನಿಜೆಂಟ್ ಸಂಸ್ಥೆಯು ಜಾಗತಿಕವಾಗಿ ಸುಮಾರು 3,40,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಈ ಪೈಕಿ ಶೇಕಡಾ 70 ಕ್ಕಿಂತ ಹೆಚ್ಚು ಅಂದರೆ ಸುಮಾರು 2,50,000 ಕ್ಕೂ ಅಧಿಕ ಉದ್ಯೋಗಿಗಳು ಭಾರತದಲ್ಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಕಂಪನಿಯು ಕೈಗೊಳ್ಳಲಿರುವ ಉದ್ಯೋಗ ಕಡಿತವು ಪ್ರಮುಖವಾಗಿ ಮಧ್ಯಮ ಹಂತದ (Middle-level) ವ್ಯವಸ್ಥಾಪಕರು, ಸಾಂಪ್ರದಾಯಿಕ ಅಪ್ಲಿಕೇಶನ್ ಡೆವಲಪ್‌ಮೆಂಟ್ ಮತ್ತು ನಿರ್ವಹಣಾ ವಿಭಾಗಗಳಲ್ಲಿರುವ ಉದ್ಯೋಗಿಗಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ. ಭಾರತದಲ್ಲಿ ಈ ವಿಭಾಗಗಳಲ್ಲಿ ದೊಡ್ಡ ಸಂಖ್ಯೆಯ ಉದ್ಯೋಗಿಗಳು ಇರುವುದರಿಂದ, ಪ್ರಸ್ತಾವಿತ 15,000 ಉದ್ಯೋಗ ಕಡಿತದಲ್ಲಿ ಬಹುತೇಕ ಉದ್ಯೋಗ ನಷ್ಟ ಭಾರತೀಯ ಐಟಿ ವೃತ್ತಿಪರರಿಗೇ ಆಗಲಿದೆ ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ.

ಕಂಪನಿಯ ಮುಂದಿನ ಹೆಜ್ಜೆ ಮತ್ತು ಮರುತರಬೇತಿ (Reskilling)

ಉದ್ಯೋಗ ಕಡಿತದ ಆತಂಕದ ನಡುವೆಯೂ, ಕಾಗ್ನಿಜೆಂಟ್ ತನ್ನ ಪ್ರಸ್ತುತ ಉದ್ಯೋಗಿಗಳಿಗೆ ಹೊಸ ತಂತ್ರಜ್ಞಾನದ ಮರುತರಬೇತಿ (Reskilling) ನೀಡಲು ಮುಂದಾಗಿದೆ. ಕಂಪನಿಯು ಮುಂದಿನ ದಿನಗಳಲ್ಲಿ ತಂತ್ರಜ್ಞಾನ ಕ್ಷೇತ್ರಕ್ಕೆ ಅಗತ್ಯವಿರುವ ಡೇಟಾ ಸೈನ್ಸ್, ಕ್ಲೌಡ್ ಕಂಪ್ಯೂಟಿಂಗ್ ಮತ್ತು ಜನರೇಟಿವ್ ಎಐ ಕ್ಷೇತ್ರಗಳಲ್ಲಿ ಉದ್ಯೋಗಿಗಳನ್ನು ಸಜ್ಜುಗೊಳಿಸಲು ದೊಡ್ಡ ಮಟ್ಟದ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಆದರೆ, ಈ ಹೊಸ ತಂತ್ರಜ್ಞಾನಗಳಿಗೆ ಹೊಂದಿಕೊಳ್ಳದ ಉದ್ಯೋಗಿಗಳಿಗೆ ಮುಂಬರುವ ದಿನಗಳಲ್ಲಿ ಕಠಿಣ ಸವಾಲು ಎದುರಾಗಲಿದೆ.

ಇದನ್ನೂ ಓದಿ: ಕ್ಲೋಡ್​ನ ಈ ಎಐ ಮಾಡಲ್​ಗೆ ಬೆಚ್ಚಿಬಿದ್ದ ಬ್ಯಾಂಕುಗಳು; ಉನ್ನತ ಮಟ್ಟದ ಸಭೆ ಕರೆದ ನಿರ್ಮಲಾ ಸೀತಾರಾಮನ್

ಐಟಿ ವಲಯದಲ್ಲಿ ಮೂಡಿರುವ ಆತಂಕ

ಕಾಗ್ನಿಜೆಂಟ್ ಸಂಸ್ಥೆಯ ಈ ಬೃಹತ್ ಉದ್ಯೋಗ ಕಡಿತದ ನಿರ್ಧಾರವು ಕೇವಲ ಒಂದು ಕಂಪನಿಗೆ ಸೀಮಿತವಾಗಿರದೆ, ಇಡೀ ಭಾರತೀಯ ಐಟಿ ವಲಯಕ್ಕೆ ಒಂದು ಮುನ್ಸೂಚನೆಯಾಗಿದೆ. ಮುಂಬರುವ ದಿನಗಳಲ್ಲಿ ಇತರ ಪ್ರಮುಖ ಐಟಿ ಕಂಪನಿಗಳೂ ಸಹ ಎಐ ತಂತ್ರಜ್ಞಾನದ ಅಳವಡಿಕೆಯಿಂದಾಗಿ ತಮ್ಮ ಉದ್ಯೋಗಿಗಳ ಸಂಖ್ಯೆಯನ್ನು ಮರುಪರಿಶೀಲಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಇದು ಐಟಿ ಉದ್ಯೋಗಿಗಳಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link