Category Archives: Blog

Your blog category

RCB vs LSG: ಯಾರಿಗೆ ಸಿಗಲಿದೆ ಚಾನ್ಸ್​?

Source link

IPL 2026: ಐಪಿಎಲ್ ಪ್ಲೇಆಫ್ ವೇಳಾಪಟ್ಟಿ ಪ್ರಕಟ – Kannada News | TATA IPL 2026 Playoffs Schedule

ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಪ್ಲೇಆಫ್ ಹಂತದ ಪಂದ್ಯಗಳ ವೇಳಾಪಟ್ಟಿ ಪ್ರಕಟವಾಗಿದೆ. ಈ ಬಾರಿಯ ಟೂರ್ನಿಯ ಅಂತಿಮ ಹಣಾಹಣಿಯು ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾದ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮೇ 31ರಂದು ನಡೆಯಲಿದೆ. ಈ ಹಿಂದೆ ಐಪಿಎಲ್​ನ ಫೈನಲ್ ಪಂದ್ಯವನ್ನು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಯೋಜಿಸಲು ನಿರ್ಧರಿಸಲಾಗಿತ್ತು. ಆದರೆ ಇದೀಗ ಫೈನಲ್ ಪಂದ್ಯವನ್ನು ಅಹಮದಾಬಾದ್​ಗೆ ಸ್ಥಳಾಂತರ ಮಾಡಲಾಗಿದೆ.

3 ನಗರಗಳಲ್ಲಿ 4 ಮ್ಯಾಚ್​:

ಪ್ಲೇಆಫ್ ಹಂತದ ನಾಲ್ಕು ಪಂದ್ಯಗಳನ್ನು ಮೂರು ನಗರಗಳಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಅದರಂತೆ ಧರ್ಮಶಾಲಾ, ಚಂಡೀಗಢ್ ಮತ್ತು ಅಹಮದಾಬಾದ್ ನಗರಗಳಲ್ಲಿ ದ್ವಿತೀಯ ಸುತ್ತಿನ ಪಂದ್ಯಗಳು ನಡೆಯಲಿದೆ. ಮೊದಲ ಕ್ವಾಲಿಫೈಯರ್ ಪಂದ್ಯವು ಧರ್ಮಶಾಲಾದಲ್ಲಿ ನಡೆದರೆ, ಎಲಿಮಿನೇಟರ್ ಹಾಗೂ ಎರಡನೇ ಕ್ವಾಲಿಫೈಯರ್ ಪಂದ್ಯಗಳು ಚಂಡೀಗಢ್​ನಲ್ಲಿ ಜರುಗಲಿದೆ. ಇನ್ನು ಫೈನಲ್ ಪಂದ್ಯಕ್ಕೆ ಅಹಮದಾಬಾದ್​ ನಗರ ಆತಿಥ್ಯವಹಿಸಲಿದೆ.

  • ಕ್ವಾಲಿಫೈಯರ್ 1:  ಮೇ 26 (ಮಂಗಳವಾರ) | HPCA ಸ್ಟೇಡಿಯಂ | ಧರ್ಮಶಾಲಾ |
  • ಎಲಿಮಿನೇಟರ್: ಮೇ 27 (ಬುಧವಾರ) | ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ | ಚಂಡೀಗಢ್ |
  • ಕ್ವಾಲಿಫೈಯರ್ 2: ಮೇ 29 (ಶುಕ್ರವಾರ) | ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ | ಚಂಡೀಗಢ್ |
  • ಫೈನಲ್: ಮೇ 31 (ಭಾನುವಾರ) | ನರೇಂದ್ರ ಮೋದಿ ಸ್ಟೇಡಿಯಂ | ಅಹಮದಾಬಾದ್ |

ಬೆಂಗಳೂರಿನ ಅಭಿಮಾನಿಗಳಿಗೆ ನಿರಾಸೆ:

ಪೂರ್ವ ನಿಗದಿಯಂತೆ ಈ ಬಾರಿಯ ಐಪಿಎಲ್ ಫೈನಲ್ ಪಂದ್ಯವು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಿತ್ತು. ಆದರೆ, ತಾಂತ್ರಿಕ ಮತ್ತು ವ್ಯವಸ್ಥಾಪನಾ ಕಾರಣಗಳಿಂದಾಗಿ ಬಿಸಿಸಿಐ ಕೊನೆಯ ಕ್ಷಣದಲ್ಲಿ ಫೈನಲ್ ಪಂದ್ಯದ ಆತಿಥ್ಯವನ್ನು ಅಹಮದಾಬಾದ್‌ಗೆ ಸ್ಥಳಾಂತರಿಸಿದೆ. ಇದಕ್ಕೆ ಮುಖ್ಯ ಕಾರಣಗಳು ಈ ಕೆಳಗಿನಂತಿವೆ…

  •  ಶಾಸಕರ ಟಿಕೆಟ್ ಹಂಚಿಕೆ ವಿವಾದ: ಬಿಸಿಸಿಐನ ತನ್ನ ನಿರ್ಧಾರ ಬದಲಿಸಲು ಪ್ರಮುಖ ಕಾರಣವೆಂದರೆ ಸ್ಥಳೀಯ ಶಾಸಕರಿಗೆ ನೀಡಲಾಗುವ ಟಿಕೆಟ್‌ಗಳ ಹಂಚಿಕೆ. ವರದಿಗಳ ಪ್ರಕಾರ, ರಾಜ್ಯ ಸರ್ಕಾರ ಮತ್ತು ಕೆಎಸ್‌ಸಿಎ (KSCA) ನಡುವೆ ಟಿಕೆಟ್ ಕೋಟಾದ ಕುರಿತು ಭಿನ್ನಾಭಿಪ್ರಾಯಗಳು ಮೂಡಿವೆ. ಈ ರಾಜಕೀಯ ಹಸ್ತಕ್ಷೇಪ ಮತ್ತು ಟಿಕೆಟ್ ಗೊಂದಲಗಳು ಬಿಸಿಸಿಐಗೆ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ಫೈನಲ್ ಪಂದ್ಯವನ್ನು ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ.
  • ಭದ್ರತಾ ಲೋಪ ಮತ್ತು ಸಿಸಿಟಿವಿ ವಿವಾದ: ಇತ್ತೀಚೆಗೆ ಆರ್‌ಸಿಬಿ ಮತ್ತು ಗುಜರಾತ್ ಟೈಟಾನ್ಸ್ ಪಂದ್ಯದ ವೇಳೆ ನಡೆದ ಭದ್ರತಾ ಲೋಪವು ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿತ್ತು. ಸಿಸಿಟಿವಿ ವ್ಯವಸ್ಥೆ ಮಾಡಿದ್ದ ಕಂಪೆನಿಯ ಸಿಬ್ಬಂದಿಯೇ ಸುಮಾರು 240 ಕ್ಯಾಮೆರಾಗಳ ಸಂಪರ್ಕವನ್ನು ಕಡಿತಗೊಳಿಸಿದ್ದರು ಎಂಬ ಆರೋಪ ಕೇಳಿಬಂದಿದೆ. ಫೈನಲ್‌ನಂತಹ ಹೈ-ಪ್ರೊಫೈಲ್ ಪಂದ್ಯಕ್ಕೆ ಇಂತಹ ಭದ್ರತಾ ಲೋಪಗಳು ದೊಡ್ಡ ಹಿನ್ನಡೆಯಾಗಿವೆ.
  • ಕ್ರೀಡಾಂಗಣದ ಸುರಕ್ಷತೆ ಮತ್ತು ಮೂಲಸೌಕರ್ಯ: ಕಳೆದ ವರ್ಷ ಆರ್‌ಸಿಬಿ ಚಾಂಪಿಯನ್ ಆದಾಗ ಅಭಿಮಾನಿಗಳ ಸಂಭ್ರಮಾಚರಣೆ ವೇಳೆ ನಡೆದ ನೂಕುನುಗ್ಗಲು ಮೈದಾನದ ಸುರಕ್ಷತೆಯ ಬಗ್ಗೆ ಪ್ರಶ್ನೆ ಎತ್ತಿತ್ತು. ನ್ಯಾ. ಜಾನ್ ಮೈಕೆಲ್ ಡಿಕುನ್ಹಾ ಅವರ ವರದಿಯು ಕ್ರೀಡಾಂಗಣದ ಕೆಲವು ವಿನ್ಯಾಸಗಳು “ಹೆಚ್ಚಿನ ಜನಸಂದಣಿಗೆ ಸುರಕ್ಷಿತವಲ್ಲ” ಎಂದು ಉಲ್ಲೇಖಿಸಿದೆ. ಈ ಹಿನ್ನೆಲೆಯಲ್ಲಿ ಪ್ರೇಕ್ಷಕರ ಸುರಕ್ಷತೆಯೂ ಬಿಸಿಸಿಐನ ಪ್ರಮುಖ ಕಾಳಜಿಯಾಗಿದೆ.

ಇದನ್ನೂ ಓದಿ: DK ಕೋಚ್ ಆಗಲು ಇವರೇ ಕಾರಣ..!

ಈ ಎಲ್ಲಾ ಕಾರಣಗಳಿಂದಾಗಿ ಇದೀಗ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಐಪಿಎಲ್​ನ ಫೈನಲ್ ಪಂದ್ಯವನ್ನು ಅಹಮದಾಬಾದ್​ಗೆ ಸ್ಥಳಾಂತರಿಸಲಾಗಿದೆ. ಅದರಂತೆ ಮೇ 31 ರಂದು ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ಜರುಗಲಿದೆ.

Published On – 1:15 pm, Wed, 6 May 26

Source link

ಆಂಬ್ಯುಲೆನ್ಸ್ ಸಿಗದೆ ಮೃತ ಮಗನ ಶವವನ್ನು ತಳ್ಳುವ ಗಾಡಿಯಲ್ಲಿ ಹೊತ್ತೊಯ್ದ ಪೋಷಕರು – Kannada News | Family in Telangana Uses Pushcart Amid Lack of Ambulance Services

ಕರೀಂನಗರ, ಮೇ 06: ಆಧುನಿಕ ಯುಗದಲ್ಲಿ ನಾವು ಎಷ್ಟೇ ಮುಂದುವರೆದಿದ್ದೇವೆ ಎಂದು ಹೇಳಿಕೊಂಡರೂ, ಬಡವರ ಪಾಲಿಗೆ ಕನಿಷ್ಠ ಸೌಲಭ್ಯಗಳು ಇಂದಿಗೂ ಮರೀಚಿಕೆಯಾಗಿವೆ ಎಂಬುದಕ್ಕೆ ತೆಲಂಗಾಣದ ಕರೀಂನಗರ ಜಿಲ್ಲೆಯಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಅಂತಿಮ ಪ್ರಯಾಣಕ್ಕೆ ಒಂದು ವಾಹನವೂ ಸಿಗದೆ, ಹೆತ್ತ ಮಗನ ಶವವನ್ನು ಪೋಷಕರು ತಳ್ಳುಗಾಡಿಯಲ್ಲಿ ಸಾಗಿಸಿದ ದೃಶ್ಯ ಪ್ರತಿಯೊಬ್ಬರ ಕಣ್ಣನ್ನು ತೇವಗೊಳಿಸುವಂತಿದೆ. ಕರೀಂನಗರ ಜಿಲ್ಲೆಯ ಶಂಕರಪಟ್ಟಣಂ ಮಂಡಲದ ನಿವಾಸಿ ಯಾಕೂಬ್ ಎಂಬ ಯುವಕ ಅನಾರೋಗ್ಯದಿಂದ ಸಾವನ್ನಪ್ಪಿದ್ದ.

ಮಗನನ್ನು ಕಳೆದುಕೊಂಡ ದುಃಖದಲ್ಲಿದ್ದ ಪೋಷಕರಿಗೆ ಆಸ್ಪತ್ರೆಯಿಂದ ಮನೆಗೆ ಮೃತದೇಹವನ್ನು ಸಾಗಿಸಲು ಯಾವುದೇ ಸರ್ಕಾರಿ ವಾಹನ ಅಥವಾ ಆಂಬ್ಯುಲೆನ್ಸ್(Ambulance) ಲಭ್ಯವಾಗಲಿಲ್ಲ. ಅತ್ತ ಖಾಸಗಿ ಆಂಬ್ಯುಲೆನ್ಸ್ ಪಡೆಯಲು ಹಣದ ಬಲವಿಲ್ಲದ ಕಾರಣ, ಅನಿವಾರ್ಯವಾಗಿ ಶವವನ್ನು ನಿಂಬೆಹಣ್ಣು ಮಾರುವ ತಳ್ಳುಗಾಡಿಯ ಮೇಲೆ ಮಲಗಿಸಿ ತಮ್ಮ ನಿವಾಸಕ್ಕೆ ಕೊಂಡೊಯ್ಯಬೇಕಾಯಿತು.

ಮೂಲಭೂತ ಸೌಕರ್ಯಗಳ ಕೊರತೆಯನ್ನು ಬಹಿರಂಗಪಡಿಸುವ ಇಂತಹ ಘಟನೆಗಳು ಇದೇ ಮೊದಲಲ್ಲ. ವ್ಯವಸ್ಥೆಯ ಅಸಡ್ಡೆಗೆ ಸಾಕ್ಷಿಯಾಗಿ ಈ ಹಿಂದೆಯೂ ಇಂತಹ ಕರಾಳ ದೃಶ್ಯಗಳು ವರದಿಯಾಗಿವೆ. ಜನವರಿಯಲ್ಲಿ ಫರಿದಾಬಾದ್‌ನ ಆಸ್ಪತ್ರೆಯಲ್ಲಿ ಕ್ಷಯರೋಗದಿಂದ ಮೃತಪಟ್ಟ 35 ವರ್ಷದ ಮಹಿಳೆಯ ಶವವನ್ನು ಸಾಗಿಸಲು ನೆರವು ಸಿಗದಿದ್ದಾಗ, ಕುಟುಂಬದವರು 12 ಕಿಲೋಮೀಟರ್ ದೂರ ಮೋಟಾರ್‌ಚಾಲಿತ ತಳ್ಳುಗಾಡಿಯಲ್ಲೇ ಶವ ಸಾಗಿಸಿದ್ದರು. ಆನ್‌ಲೈನ್‌ನಲ್ಲಿ ಹರಿದಾಡಿದ ವಿಡಿಯೋದಲ್ಲಿ ಪುಟ್ಟ ಮಗ ತನ್ನ ತಾಯಿಯ ಮುಖವನ್ನು ಬಟ್ಟೆಯಿಂದ ಮುಚ್ಚುತ್ತಿರುವುದು ಕಂಡುಬಂದಿತ್ತು.

ಆಗಸ್ಟ್​ನಲ್ಲಿ ತೆಲಂಗಾಣದಲ್ಲಿ ಅಪಘಾತದಲ್ಲಿ ಮೃತಪಟ್ಟ ಮೊಗುಳಯ್ಯ ಎಂಬ 26 ವರ್ಷದ ಯುವಕನ ಶವ ಸಾಗಿಸಲು ಆಂಬ್ಯುಲೆನ್ಸ್ ಬಾರದೆ ಹೋದಾಗ, ಸ್ವತಃ ಪೊಲೀಸ್ ಅಧಿಕಾರಿಯೊಬ್ಬರು ತಳ್ಳುಗಾಡಿಯಲ್ಲೇ ಮರಣೋತ್ತರ ಪರೀಕ್ಷೆಗೆ ಶವವನ್ನು ಸಾಗಿಸಿದ್ದರು. ಯಾಕೂಬ್ ಕುಟುಂಬಕ್ಕೆ ಎದುರಾದ ಈ ದುಸ್ಥಿತಿಯನ್ನು ಕಂಡು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತುರ್ತು ಸಂದರ್ಭಗಳಲ್ಲಿಯೂ ಮೂಲಭೂತ ಸಾರಿಗೆ ಸೌಲಭ್ಯಗಳನ್ನು ಒದಗಿಸಲು ವಿಫಲವಾಗಿರುವ ವ್ಯವಸ್ಥೆಯ ವಿರುದ್ಧ ಜನರು ಕಿಡಿಕಾರಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಇರು ಅಂದ್ರೆ ಇರ್‍ತೀನಿ, ಬಿಡು ಅಂದ್ರೆ ಬಿಡ್ತೀನಿ: ಹೈಕಮಾಂಡ್​​ ನಿರ್ಧಾರವೇ ಫೈನಲ್; ಶಾಕಿಂಗ್ ಹೇಳಿಕೆ ನೀಡಿದ ಸಿದ್ದರಾಮಯ್ಯ – Kannada News | Karnataka CM Siddaramaiah on Cabinet Reshuffle, Local Polls, and Opposition Tactics

ಬೆಂಗಳೂರು, ಮೇ.6: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಐದು ವರ್ಷಗಳ ಮುಖ್ಯಮಂತ್ರಿ ಸ್ಥಾನದ ಅವಧಿಯ ಕುರಿತು ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಸ್ಪಷ್ಟಪಡಿಸಿದ್ದಾರೆ. “ನಮ್ಮ ಪಕ್ಷ ಐದು ವರ್ಷ ಪೂರ್ಣಗೊಳಿಸುತ್ತದೆ, ಆದರೆ ನನ್ನ ಸ್ಥಾನದ ಕುರಿತು ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೆಯೋ ಅದರಂತೆ ನಡೆಯುತ್ತೇನೆ” ಎಂದು ಅವರು ತಿಳಿಸಿದ್ದಾರೆ. ದೆಹಲಿ ಭೇಟಿ ಬಗ್ಗೆ ಕೇಳಿದ ಪ್ರಶ್ನೆಗೆ, ಹೈಕಮಾಂಡ್ ಕರೆದರೆ ಅಥವಾ ರಾಹುಲ್ ಗಾಂಧಿ ಅಪಾಯಿಂಟ್‌ಮೆಂಟ್ ನೀಡಿದರೆ ಸಂಪುಟ ಪುನರಚನೆ ಸೇರಿದಂತೆ ಇತರೆ ವಿಚಾರಗಳ ಕುರಿತು ಚರ್ಚಿಸಲು ತೆರಳುವುದಾಗಿ ಹೇಳಿದ್ದಾರೆ. ಇದುವರೆಗೆ ಯಾವುದೇ ಅಪಾಯಿಂಟ್‌ಮೆಂಟ್ ಕೇಳಿಲ್ಲ ಎಂದರು. ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಪರ ಜನಾಭಿಪ್ರಾಯ ಇರುವುದರಿಂದ ಚುನಾವಣೆಗಳನ್ನು ತಕ್ಷಣದಲ್ಲಿ ನಡೆಸುವುದಾಗಿ ಘೋಷಿಸಿದರು. ವಿರೋಧ ಪಕ್ಷಗಳ ತಂತ್ರಗಳನ್ನು ತಳ್ಳಿಹಾಕಿದ ಅವರು, ವಿರೋಧ ಪಕ್ಷಗಳಿಗೆ ಯಾವುದೇ ತಂತ್ರಗಳಿಲ್ಲ, ಕೇವಲ ಕುತಂತ್ರಗಳು ಮಾತ್ರ ಎಂದು ವ್ಯಂಗ್ಯವಾಡಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಯವಿಟ್ಟು ನನ್ನನ್ನ ಬದುಕಲು ಬಿಡಿ: ಸಿಎಂ, ಡಿಸಿಎಂಗೆ ಕೈಮುಗಿದು ಕೇಳಿಕೊಂಡ ಶೃಂಗೇರಿ ನೂತನ ಶಾಸಕ ಜೀವರಾಜ್ – Kannada News | Let Me Live: Sringeri MLA DN Jeevaraj Appeals to CM Siddaramaiah and DCM DK Shivakumar Over FIR and Oath Delay

ಬೆಂಗಳೂರು, ಮೇ 6: ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನದ ಸುತ್ತಲಿನ ರಾಜಕೀಯ ಜಟಾಪಟಿ ತೀವ್ರಗೊಂಡಿದೆ. ಇದೇ ಸಂದರ್ಭದಲ್ಲಿ, ಅಂಚೆ ಮತ ಮರು ಎಣಿಕೆಯ ನಂತರ ನೂತನ ಶಾಸಕರಾಗಿ ಆಯ್ಕೆಯಾದ ಡಿಎನ್ ಜೀವರಾಜ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ, ‘ದಯವಿಟ್ಟು ನನ್ನನ್ನು ಬದುಕಲು ಬಿಡಿ’ ಎಂದು ಕೈಮುಗಿದು ಮನವಿ ಮಾಡಿದ್ದಾರೆ. ಚುನಾವಣಾ ಆಯೋಗದಿಂದ ಪ್ರಮಾಣಪತ್ರ ಬಂದ ಕೆಲವೇ ಸಮಯದಲ್ಲಿ ತಮ್ಮ ವಿರುದ್ಧ ಎಫ್‌ಐಆರ್ ದಾಖಲಿಸಲಾಯಿತು ಎಂದು ಜೀವರಾಜ್ ತಿಳಿಸಿದ್ದಾರೆ. ಈ ಎಫ್‌ಐಆರ್‌ಗೆ ಸಂಬಂಧಿಸಿದಂತೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ, ಹಾಗೂ ಪ್ರಕರಣದ ವಿಚಾರಣೆ ಜುಲೈ 7ಕ್ಕೆ ಮುಂದೂಡಲ್ಪಟ್ಟಿದೆ.

ಅಂಚೆ ಮತ ಮರು ಎಣಿಕೆ ಕುರಿತಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಅದರಂಗೆ ಮರು ಎಣಿಕೆ ನಡೆದು ತಾವು ಶಾಸಕರಾಗಿ ಆಯ್ಕೆಯಾಗಿದ್ದರೂ, ಪ್ರಮಾಣವಚನಕ್ಕೆ ಅವಕಾಶ ನೀಡಲಾಗುತ್ತಿಲ್ಲ ಎಂದು ಜೀವರಾಜ್ ದೂರಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್, ಪ್ರಮಾಣವಚನಕ್ಕೆ ಯಾವುದೇ ಅಡ್ಡಿ ಇಲ್ಲ. ಇದು ತಾಂತ್ರಿಕ ವಿಚಾರವಾಗಿದ್ದು, ನಿಯಮಾನುಸಾರ ಆದಷ್ಟು ಬೇಗ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಅವರ ವೋಟ್ ಕಳ್ಳತನ ಆರೋಪಕ್ಕೆ ಪ್ರತಿಕ್ರಿಯಿಸಿದ ಜೀವರಾಜ್, ರಾಜಕೀಯ ಹಿರಿಯರಿಂದ ಇಂತಹ ಆರೋಪಗಳು ತಮಗೆ ನೋವುಂಟು ಮಾಡಿವೆ ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟಿವಿಕೆಗೆ ಬಂಬಲ ವಿಚಾರದಲ್ಲಿ ಭಿನ್ನಮತ: ಬಂಡಾಯ ಏಳ್ತಾರಾ ಎಐಎಡಿಎಂಕೆಯ ಕೆಲ ಶಾಸಕರು? – Kannada News | AIADMK Divided Over TVK Support: Vijays Pivotal Role in Tamil Nadu Government Formation

ಚೆನ್ನೈ, ಮೇ 06: ತಮಿಳುನಾಡು ಸರ್ಕಾರ ರಚನೆ ಸಂಬಂಧ ಟಿವಿಕೆ ಬೆಂಬಲಿಸುವ ವಿಚಾರದಲ್ಲಿ ಎಐಎಡಿಎಂಕೆ ಪಕ್ಷದಲ್ಲಿ ಗೊಂದಲ ಉಂಟಾಗಿದೆ. ಟಿಪಿಎಸ್ (TPS) ಬಣ ಮತ್ತು ಷಣ್ಮುಗಂ ಬಣಗಳ ನಡುವೆ ಈ ಕುರಿತು ಒಡಕು ಕಾಣಿಸಿಕೊಂಡಿದ್ದು, ಇದು ಎಐಎಡಿಎಂಕೆಗೆ ದೊಡ್ಡ ಆಘಾತ ನೀಡುವ ಸಾಧ್ಯತೆಯಿದೆ. 47 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಎಐಎಡಿಎಂಕೆ ಪಕ್ಷದಲ್ಲಿ 35 ಶಾಸಕರು ಬಂಡಾಯ ಎದ್ದರೆ ಸಂಕಷ್ಟ ಎದುರಾಗಲಿದೆ. ಮಹಾರಾಷ್ಟ್ರದ ಶಿವಸೇನೆ ವಿಭಜನೆಯ ಉದಾಹರಣೆಯ ಆಧಾರದಲ್ಲಿ ಹೊಸ ಲೆಕ್ಕಾಚಾರಗಳು ತಮಿಳುನಾಡಲ್ಲೀಗ ಶುರುವಾಗಿವೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕುಟುಂಬದ ಜೊತೆ ಕಾಡಿನ ಪಿಸಿಮಾತು ಕೇಳಿದ ರಾಧಿಕಾ ಪಂಡಿತ್ – Kannada News | Radhika Pandit Trekking Video with Kids Ayra and Yatharv Goes Viral; Yash Busy with Toxic

ಸ್ಯಾಂಡಲ್‌ವುಡ್‌ ನಟಿ ರಾಧಿಕಾ ಪಂಡಿತ್ (Radhika Pandit) ಸದ್ಯ ಬಣ್ಣದ ಲೋಕದಿಂದ ದೂರವಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಈ ಮೂಲಕ ತಮ್ಮ ವೈಯಕ್ತಿಕ ಬದುಕಿನ ಸುಂದರ ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಈಗ ಅವರು ತಮ್ಮ ಮಕ್ಕಳಾದ ಆಯ್ರಾ, ಯಥರ್ವ್ ಹಾಗೂ ಪೋಷಕರೊಂದಿಗೆ ದಟ್ಟ ಅರಣ್ಯದ ನಡುವೆ ಚಾರಣ ಕೈಗೊಂಡಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಚಾರಣದ ಹಿಂದಿನ ಕಾರಣ ನೀಡಿದ್ದಾರೆ.

ಸದ್ಯ ರಾಧಿಕಾ ಪಂಡಿತ್ ಅವರ ಮಕ್ಕಳಿಗೆ ಶಾಲಾ ರಜೆ ಇರುವುದರಿಂದ, ಈ ಬಿಡುವಿನ ಸಮಯವನ್ನು ಸದುಪಯೋಗಪಡಿಸಿಕೊಳ್ಳಲು ಅವರು ಈ ಪ್ರವಾಸ ಹಮ್ಮಿಕೊಂಡಿದ್ದಾರೆ. ಸುಡುವ ಬೇಸಿಗೆಯ ನಡುವೆಯೂ ಅರಣ್ಯ ಹಾದಿಯಲ್ಲಿ ಸಾಗುವುದು, ಮರ ಹತ್ತುವುದು ಹಾಗೂ ತೊರೆಯ ಬದಿಯ ಜಾರುಬಂಡೆಗಳ ಮೇಲೆ ನಡೆಯುವುದು ಒಂದು ಅದ್ಭುತ ಅನುಭವ ಎಂದು ರಾಧಿಕಾ ಬರೆದುಕೊಂಡಿದ್ದಾರೆ. ‘ಕಾಡಿನ ಹಾದಿಯಲ್ಲಿ ಗಾಳಿಯ ಪಿಸುಮಾತು, ಎಲೆಗಳ ಶಬ್ದ ಮತ್ತು ಹಕ್ಕಿಗಳ ಚಿಲಿಪಿಲಿ ನಾದದ ನಡುವೆ ನಡೆಯುವ ಸುಖವೇ ಬೇರೆ’ ಎಂದು ಅವರು ಪೋಸ್ಟ್ ಮಾಡಿದ್ದಾರೆ.

ಕುಟುಂಬದ ಈ ಪ್ರವಾಸದಲ್ಲಿ ರಾಕಿಂಗ್ ಸ್ಟಾರ್ ಯಶ್ ಕಾಣಿಸಿಕೊಂಡಿಲ್ಲ. ಯಶ್ ಸದ್ಯ ತಮ್ಮ ಬಹುನಿರೀಕ್ಷಿತ ಸಿನಿಮಾವಾದ ‘ಟಾಕ್ಸಿಕ್’ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದ ಕೆಲಸ ಇರುವುದರಿಂದ ಅವರು ಈ ಪ್ರವಾಸದಿಂದ ದೂರ ಉಳಿದಿದ್ದಾರೆ ಎನ್ನಲಾಗಿದೆ. ಅವರ ಅನುಪಸ್ಥಿತಿಯಲ್ಲಿ ರಾಧಿಕಾ ಅವರು ಮಕ್ಕಳ ಜೊತೆ ಕಾಲ ಕಳೆದು, ಒಂದು ಸಣ್ಣ ವಿರಾಮದ ಖುಷಿ ಅನುಭವಿಸಿದ್ದಾರೆ.

ಇದನ್ನೂ ಓದಿ: ಮಕ್ಕಳ ಜೊತೆ ಕೊಡಗು ಸುತ್ತಿದ ರಾಧಿಕಾ ಪಂಡಿತ್; ಇಲ್ಲಿವೆ ಸುಂದರ ಫೋಟೋಸ್

ರಾಧಿಕಾ ಪಂಡಿತ್ ಅವರ ಈ ವಿಡಿಯೋ ನೋಡಿ ಅಭಿಮಾನಿಗಳು ಅವರು ಮತ್ತೆ ಚಿತ್ರರಂಗಕ್ಕೆ ಮರಳಲಿ ಎಂದು ಆಶಿಸುತ್ತಿದ್ದಾರೆ. ಆದರೆ, ಲಭ್ಯವಿರುವ ಮಾಹಿತಿಯ ಪ್ರಕಾರ ರಾಧಿಕಾ ಸದ್ಯಕ್ಕೆ ಸಿನಿಮಾ ರಂಗಕ್ಕೆ ಮರಳುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಸದ್ಯಕ್ಕೆ ಅವರು ತಮ್ಮ ಪೂರ್ಣ ಸಮಯವನ್ನು ಮಕ್ಕಳ ಪಾಲನೆ ಮತ್ತು ಕುಟುಂಬಕ್ಕಾಗಿ ಮೀಸಲಿಟ್ಟಿದ್ದಾರೆ. ಅವರ ಈ ಅರಣ್ಯ ಪಯಣದ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಭಾರತೀಯರು ವಿಶ್ವದಲ್ಲೇ ಅತ್ಯುತ್ತಮ ಪ್ರತಿಭಾನ್ವಿತರು: ಬುರ್ಜ್ ಖಲೀಫಾ ನಿರ್ಮಾತೃವಿನ ಅಂತರಂಗದ ಅನಿಸಿಕೆ – Kannada News | Burj Khalifa builder Mohamed Alabbar reveals reasons why he prefers Indians in hiring list

ಮೊಹಮ್ಮದ್ ಅಲಾಬ್ಬರ್Image Credit source: AI/Mediaforge/TV9

ಅಬುಧಾಬಿ, ಮೇ 6: ವಿಶ್ವದ ಅತ್ಯಂತ ಎತ್ತರದ ಕಟ್ಟಡವಾದ ‘ಬುರ್ಜ್ ಖಲೀಫಾ’ (Burj Khalifa) ನಿರ್ಮಿಸಿದ, ಯುಎಇ (UAE) ಮೂಲದ ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆ ‘ಎಮಾರ್ ಪ್ರಾಪರ್ಟೀಸ್’ (Emaar Properties) ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಮೊಹಮ್ಮದ್ ಅಲಾಬ್ಬರ್ (Mohamed Alabbar) ಅವರು ಭಾರತೀಯ ಪ್ರತಿಭೆಗಳ ಬಗ್ಗೆ ಅತ್ಯುನ್ನತ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ತಮಗೆ ಭಾರತೀಯರನ್ನು ಕೆಲಸಕ್ಕೆ ತೆಗೆದುಕೊಳ್ಳುವುದು ಏಕೆ ಹೆಚ್ಚು ಇಷ್ಟ ಎಂಬ ರಹಸ್ಯವನ್ನು ಅವರು ಬಿಚ್ಚಿಟ್ಟಿದ್ದಾರೆ. ಅಬುಧಾಬಿಯಲ್ಲಿ ನಡೆದ ‘ಮೇಕ್ ಇಟ್ ಇನ್ ದಿ ಎಮಿರೇಟ್ಸ್’ (Make it in the Emirates) ಶೃಂಗಸಭೆಯಲ್ಲಿ ಮಾತನಾಡುತ್ತಾ ಅವರು ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಭಾರತೀಯರನ್ನು ನೇಮಿಸಿಕೊಳ್ಳಲು ಪ್ರಮುಖ ಕಾರಣ ‘ಅವರ ಕೆಲಸದ ಶ್ರದ್ಧೆ’

ಮೊಹಮ್ಮದ್ ಅಲಾಬ್ಬರ್ ಅವರು ಭಾರತೀಯ ವೃತ್ತಿಪರರ ಕೆಲಸದ ಶ್ರದ್ಧೆ (Work Ethic) ಮತ್ತು ಬದ್ಧತೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

“ರಾತ್ರಿ 1 ಗಂಟೆಗೆ ಫೋನ್ ಮಾಡಿದರೂ ಉತ್ತರಿಸುತ್ತಾರೆ”: ಉದ್ಯಮದಲ್ಲಿ ಯಶಸ್ವಿಯಾಗಲು ಕಠಿಣ ಪರಿಶ್ರಮ ಮತ್ತು ಶಿಸ್ತು ಬಹಳ ಮುಖ್ಯ ಎಂದು ಹೇಳಿದ ಅಲಾಬ್ಬರ್, “ಪ್ರತಿಭೆ ಇದ್ದರೂ ಕಠಿಣ ಪರಿಶ್ರಮ ಇಲ್ಲದಿದ್ದರೆ ಪ್ರಯೋಜನವಿಲ್ಲ. ಆದರೆ ಕಠಿಣ ಪರಿಶ್ರಮವು ಪ್ರತಿಭೆಯನ್ನು ಮೀರಿಸುತ್ತದೆ ಎಂಬ ಮಾತಿದೆ. ಇದೇ ಕಾರಣಕ್ಕೆ ನನಗೆ ಭಾರತೀಯರನ್ನು ಕೆಲಸಕ್ಕೆ ತೆಗೆದುಕೊಳ್ಳುವುದು ಇಷ್ಟ. ಏಕೆಂದರೆ ಅವರು ಮಧ್ಯರಾತ್ರಿ 1 ಗಂಟೆಗೆ ಫೋನ್ ಮಾಡಿದರೂ ಕರೆ ಸ್ವೀಕರಿಸಿ ಜವಾಬ್ದಾರಿಯಿಂದ ಕೆಲಸ ಮಾಡುತ್ತಾರೆ,” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಎಸ್​ಬಿಐ ನೌಕರರ ಎರಡು ದಿನ ಮುಷ್ಕರ; ಏನು ಕಾರಣ, ಅವರ 16 ಬೇಡಿಕೆಗಳೇನು? ಇಲ್ಲಿದೆ ಮಾಹಿತಿ

ಕಠಿಣ ಪರಿಶ್ರಮದ ಬಗ್ಗೆ ಅಲಾಬ್ಬರ್ ಅವರ ದೃಷ್ಟಿಕೋನ

ತಮ್ಮದೇ ಉದಾಹರಣೆ ನೀಡಿದ ಅವರು, “ನನ್ನ ಐಕ್ಯೂ (IQ) ಸಾಮಾನ್ಯ ಮಟ್ಟದ್ದಾಗಿರಬಹುದು, ಆದರೆ ನನ್ನ ಕಠಿಣ ಪರಿಶ್ರಮ ಅತ್ಯುತ್ತಮವಾಗಿದೆ. ನಾನು ಕಠಿಣ ಪರಿಶ್ರಮವನ್ನು ನಂಬುತ್ತೇನೆ,” ಎಂದಿದ್ದಾರೆ.

ಕಠಿಣ ಪರಿಶ್ರಮ ಎಂದರೆ ಕೇವಲ ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡುವುದಲ್ಲ; ಪ್ರತಿಯೊಂದು ಅವಕಾಶವನ್ನು ಸರಿಯಾಗಿ ಅಧ್ಯಯನ ಮಾಡುವುದು, ಯಾವಾಗ ರಿಸ್ಕ್ ತೆಗೆದುಕೊಳ್ಳಬೇಕು ಎಂದು ತಿಳಿಯುವುದು, ಸರಿಯಾದ ಜನರನ್ನು ಉದ್ಯೋಗಕ್ಕೆ ಆರಿಸಿಕೊಳ್ಳುವುದು ಮತ್ತು ಕೆಲಸದ ಪ್ರಗತಿಯನ್ನು ಸೂಕ್ಷ್ಮವಾಗಿ ಗಮನಿಸುವುದು ಎಂದು ಮೊಹಮ್ಮದ್ ಅಲಾಬ್ಬರ್ ಅವರು ವಿವರಿಸಿದ್ದಾರೆ.

“ಭಾರತವೇ ಜಗತ್ತಿನ ಭವಿಷ್ಯ”

ಬ್ಲೂಮ್‌ಬರ್ಗ್ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಭಾರತದ ಮಾರುಕಟ್ಟೆಯ ಬಗ್ಗೆ ಅಲಾಬ್ಬರ್ ಅಪಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

“ನಾನು ಇತ್ತೀಚೆಗೆ ಮುಂಬೈನಲ್ಲಿ ಎರಡು ವಾರಗಳ ಕಾಲ ಕಳೆದಿದ್ದೇನೆ. ಭಾರತ ನಿಜಕ್ಕೂ ಅದ್ಭುತವಾಗಿದೆ. ಭಾರತವೇ ಈ ಜಗತ್ತಿನ ಭವಿಷ್ಯ ಎಂದು ನಾನು ಖಚಿತವಾಗಿ ಹೇಳಬಲ್ಲೆ. ಭಾರತದಲ್ಲಿ ಆಗುತ್ತಿರುವ ಅಭೂತಪೂರ್ವ ಬೆಳವಣಿಗೆಯನ್ನು ಕಣ್ಣಾರೆ ನೋಡಲು, ನಮ್ಮ ಕಂಪನಿಯ ಮುಂದಿನ ಬೋರ್ಡ್ ಮೀಟಿಂಗ್ ಅನ್ನು ಭಾರತದಲ್ಲೇ ಆಯೋಜಿಸುವಂತೆ ನಾನು ನನ್ನ ಆಡಳಿತ ಮಂಡಳಿಗೆ ಆಹ್ವಾನ ನೀಡುತ್ತಿದ್ದೇನೆ,” ಎಂದು ಹೆಮ್ಮೆಯಿಂದ ಹೇಳಿದ್ದಾರೆ.

ಇದನ್ನೂ ಓದಿ: ಮುಂದಿನ 9 ವರ್ಷದಲ್ಲಿ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುವ ನಗರ ಬೆಂಗಳೂರು; ಸಾವಿಲ್ಸ್ ವರದಿ

ಸಂಕಷ್ಟಗಳನ್ನು ಎದುರಿಸುವ ಶಕ್ತಿ (Crisis Resilience)

ಪ್ರಸ್ತುತ ಜಾಗತಿಕ ಮತ್ತು ಪ್ರಾದೇಶಿಕ ಆರ್ಥಿಕ ಸವಾಲುಗಳ ಕುರಿತು ಮಾತನಾಡಿದ ಅಲಾಬ್ಬರ್ ಅವರು, 2008ರ ಆರ್ಥಿಕ ಹಿಂಜರಿತ ಹಾಗೂ ಕೋವಿಡ್-19 ಸಾಂಕ್ರಾಮಿಕದಂತಹ ಬಿಕ್ಕಟ್ಟುಗಳಿಂದ ತಮ್ಮ ಸಂಸ್ಥೆ ಸಾಕಷ್ಟು ಪಾಠ ಕಲಿತಿದೆ ಎಂದಿದ್ದಾರೆ. ಇಂತಹ ಸವಾಲುಗಳ ನಡುವೆಯೂ ಸಂಸ್ಥೆಯನ್ನು ಮುನ್ನಡೆಸಲು ನಿರಂತರ ಎಚ್ಚರಿಕೆ, ವೆಚ್ಚದ ನಿರ್ವಹಣೆ ಮತ್ತು ಭಾರತೀಯರಂತಹ ಬದ್ಧತೆಯುಳ್ಳ ಉದ್ಯೋಗಿಗಳ ಶಕ್ತಿ ಅತ್ಯಂತ ಅಗತ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮೊಹಮ್ಮದ್ ಅಲಾಬ್ಬರ್ ಸಾರಥ್ಯದ ‘ಎಮಾರ್ ಪ್ರಾಪರ್ಟೀಸ್’ ಸಂಸ್ಥೆಯು ದುಬೈ ಮರೀನಾ, ಡೌನ್‌ಟೌನ್ ದುಬೈ ಮತ್ತು ಜಗತ್ಪ್ರಸಿದ್ಧ ಬುರ್ಜ್ ಖಲೀಫಾದಂತಹ ಬೃಹತ್ ಯೋಜನೆಗಳನ್ನು ನಿರ್ಮಿಸಿದೆ. ಈ ಸಂಸ್ಥೆಯಲ್ಲಿ ಸಾವಿರಾರು ಭಾರತೀಯರು ಪ್ರಮುಖ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಚಿಕ್ಕಬಳ್ಳಾಪುರದಲ್ಲೊಂದು ಅಚ್ಚರಿಯ ಘಟನೆ: ಕಳುವಾಗಿದ್ದ ಮಹಿಳೆಯ ಬಂಗಾರದ ಸರ 2 ದಿನಗಳ ಬಳಿಕ ಮನೆ ಬಳಿಯೇ ಪ್ರತ್ಯಕ್ಷ! – Kannada News | Hikkaballapur Mystery: Stolen Gold Chain Miraculously Returns Home After 2 Days

ಕಳವಾಗಿದ್ದ ಚಿನ್ನದ ಸರImage Credit source: Tv9 Kannada

ಚಿಕ್ಕಬಳ್ಳಾಪುರ, ಮೇ 06: ಇತ್ತೀಚೆಗೆ ಸರಗಳ್ಳರ ಹಾವಳಿ ಹೆಚ್ಚಾಗಿದ್ದು ಒಂಟಿ ಮಹಿಳೆಯನ್ನೇ ಟಾರ್ಗೆಟ್​ ಮಾಡಿ ಕಳ್ಳತನ ನಡೆಸುತ್ತಿರುವ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗುತ್ತಿವೆ. ಇಂತಹುದ್ದೇ ಘಟನೆ ಮೊನ್ನೆ ಮೇ 3ರಂದು ಚಿಕ್ಕಬಳ್ಳಾಪುರ ನಗರದ ವಾರ್ಡ ನಂಬರ್​​ 23ರ ಚಾಮರಾಜಪೇಟೆಯಲ್ಲಿಯೂ ನಡೆದಿತ್ತು. ಮನೆಯ ಮುಂದಿನ ನೀರಿನ ಸಂಪ್ ನೋಡುತ್ತಿದ್ದ ಗೃಹಿಣಿ ಪ್ರಿಯಾ ಎಂಬವರ ಮಾಂಗಲ್ಯ ಸರವನ್ನು ಕಿತ್ತುಕೊಂಡು ಖದೀಮರು ಎಸ್ಕೇಪ್​​ ಆಗಿದ್ದರು. ಆದರೆ ವಿಚಿತ್ರ ಎಂಬಂತೆ ಘಟನೆ ನಡೆದು ಎರಡು ದಿನಗಳ ಬಳಿಕ ಅದೇ ಚಿನ್ನದ ಸರ ಮನೆ ಮುಂದಿನ ಬಾಗಿಲಲ್ಲಿ ಪ್ರತ್ಯಕ್ಷವಾಗಿದೆ.

  • ಚಿಕ್ಕಬಳ್ಳಾಪುರದ ಚಾಮರಾಜಪೇಟೆಯಲ್ಲಿ ಅಚ್ಚರಿಯ ಘಟನೆ
  • ಕದ್ದ ಸರವನ್ನು ಪುನಃ ಮನೆ ಬಳಿಯೇ ಇಟ್ಟುಹೋಗಿರುವ ಕಳ್ಳರು
  • ಕಳ್ಳತನ ನಡೆದ 2 ದಿನಗಳ ಬಳಿಕ ಮನೆ ಬಳಿಯೇ ಸರ ಪ್ರತ್ಯಕ್ಷ!

ಇದನ್ನೂ ಓದಿ: 20ರ ಯುವತಿ-46ರ ಅಂಕಲ್ ಲವ್; ಪ್ರೇಯಸಿ ಬೇಕು ಹೆಂಡ್ತಿನೂ ಬೇಕೆಂದ ಟೇಲರ್

ನೀರು ಬಿಟ್ಟಿದ್ದಾರಾ ಎಂದು ನೋಡಲು ಬಂದಿದ್ದ ಗೃಹಿಣಿ ಪ್ರಿಯಾ, ಸಂಪ್​​ ತೆರೆದು ನೋಡಿ ಹಿಂದೆ ತಿರುಗುವಷ್ಟರಲ್ಲಿ ಬೈಕ್​​ನಲ್ಲಿ ಬಂದಿದ್ದ ಇಬ್ಬರು ಆರೋಪಿಗಳು ಅವರ ಮಾಂಗಲ್ಯ ಸರ ಕಿತ್ತುಕೊಂಡು ಎಸ್ಕೇಪ್​​ ಆಗಿದ್ದರು. ಖದೀಮರು ಪಲ್ಸರ್​​ 220 ಬೈಕ್​​ನಲ್ಲಿ ಬಂದಿದ್ದು, ಇಬ್ಬರ ಪೈಕಿ ಓರ್ವ ಮಾತ್ರ ಬೈಕ್​​ನಿಂದ ಇಳಿದಿದ್ದ. ಮತ್ತೋರ್ವ ಬೈಕ್​​ ಆನ್​​ನಲ್ಲಿಯೇ ಇಟ್ಟುಕೊಂಡು ನಿಂತಿದ್ದ. ಆರೋಪಿಗಳ ಬಳಿ ಚಾಕುವಿನಂತಹ ಮಾರಕ ಆಯುಧಗಳೂ ಇತ್ತು ಎನ್ನಲಾಗಿತ್ತು. ಕುತ್ತಿಗೆಯನ್ನು ಆರೋಪಿಗಳು ಲಾಕ್​​ ಮಾಡಿದ್ದ ಕಾರಣ ಆ ವೇಳೆ ಕಿರುಚಿಕೊಳ್ಳಲೂ ತನೆ ಸಾಧ್ಯವಾಗಲಿಲ್ಲ.  ಮಾಂಗಲ್ಯವನ್ನು ತಾನು ಗಟ್ಟಿಯಾಗಿ ಹಿಡಿದುಕೊಂಡಿದ್ದ ಕಾರಣ ಆರೋಪಿಗಳು ಚೈನ್​​ ಮಾತ್ರ ಕದ್ದಿರೋದಾಗಿ ಪ್ರಿಯಾ ತಿಳಿಸಿದ್ದರು.

ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು, ತಂಡ ರಚಿಸಿಕೊಂಡು ತನಿಖೆ ಕೂಡ ಕೈಗೊಂಡಿದ್ದರು. ಬೈಕ್​​ನಲ್ಲಿ ಬಂದವರಿಂದ ಕೃತ್ಯ ಎಂದು ಗೃಹಿಣಿ ತಿಳಿಸಿದ್ದ ಕಾರಣ ಚಿಕ್ಕಬಳ್ಳಾಪುರದಿಂದ ದೇವನಹಳ್ಳಿವರೆಗೂ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಸಿದ್ದರು. ಈ ನಡುವೆ ಮಂಗಳವಾರ ಅಂದರೆ ಮೇ 5ರ ಬೆಳಿಗ್ಗೆ ಗೃಹಿಣಿ ಪ್ರಿಯಾರ ಪತಿ ವಾಶ್​​ ರೂಂಗೆಂದು ತೆರಳಿದ್ದ ವೇಳೆ ಬಾತ್​​ ರೂಂನ ಮೆಟ್ಟಿಲಿನ ಸಮೀಪ ಚೈನ್​​ ಬಿದ್ದಿರೋದು ಕಂಡಿದೆ. ಕೂಡಲೇ ಅವರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ಸಂಬಂಧ ಪೊಲೀಸರೂ ಮನೆಗೆ ಬಂದು ಪರಿಶೀಲಿಸಿ ಹೋಗಿದ್ದು, ಘಟನೆ ಭಾರಿ ಆಶ್ಚರ್ಯಕ್ಕೆ ಕಾರಣವಾಗಿದೆ. ಮಾಂಗಲ್ಯ ಸರ ಕದ್ದವರು ಯಾರು? ಈಗ ಅವರೇ ಅದನ್ನು ಮನೆಬಳಿ ಇಟ್ಟು ಹೋಗಿದ್ದೇಕೆ ಎಂಬ ಪ್ರಶ್ನೆ ಉದ್ಭವಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 1:03 pm, Wed, 6 May 26

Source link

ವಧುವಿನ ಖತರ್ನಾಕ್ ವಂಚನೆ ಜಾಲ: 9 ಬಾರಿ ಮದುವೆಯಾಗಿ ವರರಿಗೆ ಪಂಗನಾಮ, ಹಣ-ಒಡವೆಯೊಂದಿಗೆ ಎಸ್ಕೇಪ್ – Kannada News | Maharashtra: Woman Accused of Repeated Marriage Fraud Across Multiple Cases

ಬೀಡ್, ಮೇ 06: ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಅವಿವಾಹಿತ ಪುರುಷರನ್ನು ಗುರಿಯಾಗಿಸಿಕೊಂಡು ನಕಲಿ ವಿವಾಹಗಳ ಮೂಲಕ ಹಣ ಮತ್ತು ಆಭರಣ ದೋಚುತ್ತಿದ್ದ ಶಂಕಿತ ವಧು(Bride)ವಿನ ಜಾಲವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಮಹಿಳೆಯೊಬ್ಬರು ಏಜೆಂಟ್‌ಗಳ ಸಹಾಯದಿಂದ ಹಲವು ಪುರುಷರನ್ನು ಮದುವೆಯಾಗಿ, ಕೆಲವೇ ದಿನಗಳಲ್ಲಿ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗುತ್ತಿದ್ದ ಆರೋಪ ಕೇಳಿಬಂದಿದೆ.

ಯೋಗೇಶ್ ಶಿಂಧೆ ಎಂಬ ಮಧ್ಯವರ್ತಿಗಳ ಮೂಲಕ ಈ ಮಹಿಳೆಯನ್ನು ಪರಿಚಯ ಮಾಡಿಕೊಂಡು ಮದುವೆಯಾಗಿದ್ದರು. ಏಜೆಂಟರು ಮದುವೆ ಏರ್ಪಡಿಸಲು ಅವರಿಂದ ದೊಡ್ಡ ಮೊತ್ತದ ಹಣ ಪಡೆದಿದ್ದರು. ಶಾಸ್ತ್ರೋಕ್ತವಾಗಿ ಮದುವೆಯಾದ ಕೆಲವೇ ದಿನಗಳಲ್ಲಿ ವಧು ಮತ್ತು ಏಜೆಂಟರು ಕಣ್ಮರೆಯಾದಾಗ ವಂಚನೆಯ ಅಸಲಿ ಮುಖವಾಡ ಕಳಚಿದೆ. ನಂತರದ ವಿಚಾರಣೆಯಲ್ಲಿ ಯೋಗೇಶ್‌ಗೆ ಬೆಚ್ಚಿಬೀಳಿಸುವ ಸತ್ಯವೊಂದು ತಿಳಿದುಬಂದಿದೆ.

ಈ ಮಹಿಳೆ ತನಗಿಂತ ಮೊದಲು ಈಗಾಗಲೇ ಎಂಟು ಪುರುಷರನ್ನು ಇದೇ ರೀತಿ ಮದುವೆಯಾಗಿದ್ದು, ಪ್ರತಿ ಬಾರಿಯೂ ಹಣ ಮತ್ತು ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದಳು. ಮದುವೆಗೆ ಮುನ್ನ ಆಕೆಯ ಹಿಂದಿನ ವಿವಾಹಗಳ ಬಗ್ಗೆ ಯೋಗೇಶ್‌ರನ್ನು ಸಂಪೂರ್ಣವಾಗಿ ಕತ್ತಲೆಯಲ್ಲಿ ಇಡಲಾಗಿತ್ತು.

ದೂರಿನ ಪ್ರಕಾರ, ಈ ಜಾಲವು ಬೀಡ್ ಜಿಲ್ಲೆಯ ಗ್ರಾಮೀಣ ಭಾಗದ ಅವಿವಾಹಿತ ಪದವಿಧರ ಪುರುಷರನ್ನು ಗುರಿಯಾಗಿಸಿಕೊಂಡಿದೆ. ವಧು ಸಿಗದೆ ಹೆಣಗಾಡುತ್ತಿರುವ ಕುಟುಂಬಗಳ ದೌರ್ಬಲ್ಯವನ್ನು ಬಳಸಿಕೊಳ್ಳುವ ಈ ಗ್ಯಾಂಗ್, ಮದುವೆ ಮಾಡಿಸುವ ನೆಪದಲ್ಲಿ ಭಾರಿ ಮೊತ್ತವನ್ನು ವಸೂಲಿ ಮಾಡುತ್ತಿತ್ತು.

ಮತ್ತಷ್ಟು ಓದಿ: ಮದ್ವೆಗೆ ಕೆಲವೇ ಗಂಟೆಗಳಿರುವಾಗಲೇ ವಧು ನಾಪತ್ತೆ: ಪೋಷಕರಲ್ಲಿ ಅದೊಂದು ಅನುಮಾನ

ತೀವ್ರ ಮಾನಸಿಕ ಅಘಾತಕ್ಕೊಳಗಾದ ಯೋಗೇಶ್  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದು, ತಮಗೆ ನ್ಯಾಯ ಬೇಕೆಂದು ಒತ್ತಾಯಿಸಿದ್ದಾರೆ. ಲಕ್ಷಾಂತರ ರೂಪಾಯಿ ವಂಚನೆಯಿಂದ ನಾನು ಆತ್ಮಹತ್ಯೆಯ ಆಲೋಚನೆಯಲ್ಲಿದ್ದೇನೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಪ್ರಸ್ತುತ ಚಕ್ಲಾಂಬಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಜಾಲದ ಇತರ ಸದಸ್ಯರ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದಾರೆ. ಜಿಲ್ಲೆಯಾದ್ಯಂತ ಈ ಘಟನೆ ಭಾರೀ ಆತಂಕ ಮೂಡಿಸಿದ್ದು, ಇನ್ನು ಎಷ್ಟು ಮಂದಿ ಇವರ ಜಾಲಕ್ಕೆ ಬಲಿಯಾಗಿದ್ದಾರೆ ಎಂಬ ಸತ್ಯ ತನಿಖೆಯಿಂದ ಹೊರಬರಬೇಕಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link