ಚಿಕ್ಕಬಳ್ಳಾಪುರದಲ್ಲೊಂದು ಅಚ್ಚರಿಯ ಘಟನೆ: ಕಳುವಾಗಿದ್ದ ಮಹಿಳೆಯ ಬಂಗಾರದ ಸರ 2 ದಿನಗಳ ಬಳಿಕ ಮನೆ ಬಳಿಯೇ ಪ್ರತ್ಯಕ್ಷ! – Kannada News | Hikkaballapur Mystery: Stolen Gold Chain Miraculously Returns Home After 2 Days
ಕಳವಾಗಿದ್ದ ಚಿನ್ನದ ಸರImage Credit source: Tv9 Kannada ಚಿಕ್ಕಬಳ್ಳಾಪುರ, ಮೇ 06: ಇತ್ತೀಚೆಗೆ ಸರಗಳ್ಳರ ಹಾವಳಿ ಹೆಚ್ಚಾಗಿದ್ದು ಒಂಟಿ ಮಹಿಳೆಯನ್ನೇ ಟಾರ್ಗೆಟ್ ಮಾಡಿ ಕಳ್ಳತನ ನಡೆಸುತ್ತಿರುವ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗುತ್ತಿವೆ. ಇಂತಹುದ್ದೇ ಘಟನೆ ಮೊನ್ನೆ ಮೇ 3ರಂದು ಚಿಕ್ಕಬಳ್ಳಾಪುರ ನಗರದ ವಾರ್ಡ ನಂಬರ್ 23ರ ಚಾಮರಾಜಪೇಟೆಯಲ್ಲಿಯೂ ನಡೆದಿತ್ತು. ಮನೆಯ ಮುಂದಿನ ನೀರಿನ ಸಂಪ್ ನೋಡುತ್ತಿದ್ದ ಗೃಹಿಣಿ ಪ್ರಿಯಾ ಎಂಬವರ ಮಾಂಗಲ್ಯ ಸರವನ್ನು ಕಿತ್ತುಕೊಂಡು ಖದೀಮರು ಎಸ್ಕೇಪ್ ಆಗಿದ್ದರು. ಆದರೆ ವಿಚಿತ್ರ ಎಂಬಂತೆ ಘಟನೆ ನಡೆದು…