Headlines

ಬೆಳಗಾವಿ: ವಿಡಿಯೋ ಕಾಲ್‌ನಲ್ಲಿ ಮಗು ತೋರಿಸಿಲ್ಲವೆಂದು ಅತ್ತೆಗೆ ಚಾಕುವಿನಿಂದ ಇರಿದ ಅಳಿಯ, ಕೃತ್ಯ ಎಸಗಿ ಸ್ಟೇಟಸ್ ಹಾಕಿ ವಿಕೃತಿ – Kannada News | Belagavi Crime: Man Stabs Mother in Law for Not Showing Baby on Video Call; Posts WhatsApp Status from Prison

ಬೆಳಗಾವಿ, ಮೇ 5: ಕ್ಷುಲ್ಲಕ ಕಾರಣಕ್ಕಾಗಿ ಅಳಿಯನೊಬ್ಬ ತನ್ನ ಅತ್ತೆಗೆ ಚಾಕುವಿನಿಂದ ಇರಿದ ಘೋರ ಘಟನೆ ಬೆಳಗಾವಿ (Belagavi) ಜಿಲ್ಲೆಯ ಸವದತ್ತಿ ತಾಲೂಕಿನ ಆಲದಕಟ್ಟಿಯಲ್ಲಿ ನಡೆದಿದೆ. ವಿಡಿಯೋ ಕಾಲ್‌ನಲ್ಲಿ ಮಗು ತೋರಿಸಿಲ್ಲ ಎನ್ನುವ ಕಾರಣಕ್ಕೆ ಆಕ್ರೋಶಗೊಂಡ ಅರವಿಂದ ಗವಳಿ ಎಂಬಾತ ಅತ್ತೆ ಮಹಾದೇವಿ (45) ಅವರಿಗೆ ಚಾಕು ಇರಿದಿದ್ದಾನೆ. ಸದ್ಯ ಮಹಾದೇವಿ ಅವರಿಗೆ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಪಿ ಅರವಿಂದ ಗವಳಿಯನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯ ಹಿನ್ನೆಲೆ ಅರವಿಂದ ಗವಳಿಯ ಪತ್ನಿಗೆ ಎರಡು ತಿಂಗಳ ಹಿಂದೆಯಷ್ಟೇ ಹೆರಿಗೆಯಾಗಿದ್ದು,…

Read More

ಹಾವೇರಿ: ಧಗಧಗನೆ ಹೊತ್ತಿ ಉರಿದ ಕೆಎಸ್​ಆರ್​ಟಿಸಿ ಬಸ್, ಚಾಲಕನ ಸಮಯಪ್ರಜ್ಞೆಯಿಂದ 17 ಪ್ರಯಾಣಿಕರು ಜಸ್ಟ್ ಮಿಸ್ – Kannada News | Haveri Bus Fire Accident: 17 Passengers Escaped Narrowly as KSRTC Pallakki Bus Caught Fire Near Ranebennur

ಹಾವೇರಿ, ಮೇ 5: ಬೆಂಗಳೂರಿನಿಂದ ಗದಗಕ್ಕೆ ಪ್ರಯಾಣಿಸುತ್ತಿದ್ದ ಸಾರಿಗೆ ಬಸ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು, ಬಸ್ ಹೊತ್ತಿ ಉರಿದ ಭೀಕರ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನ ದೇವರಗುಡ್ಡ ಗ್ರಾಮದ ಬಳಿ ನಡೆದಿದೆ. ಅದೃಷ್ಟವಶಾತ್ ಬಸ್ ಚಾಲಕನ ಸಮಯಪ್ರಜ್ಞೆಯಿಂದಾಗಿ ಬಸ್ಸಿನಲ್ಲಿದ್ದ 17 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಗಳೂರಿನಿಂದ ಗದಗಕ್ಕೆ ಹೊರಟಿದ್ದ ಈ ಪಲ್ಲಕ್ಕಿ ಬಸ್ ರಾಜ್ಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದಾಗ ದೇವರಗುಡ್ಡದ ಬಳಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಎಚ್ಚೆತ್ತುಕೊಂಡ ಚಾಲಕ ಪಕ್ಕೀರಪ್ಪ, ಬಸ್ಸನ್ನು ರಸ್ತೆ ಬದಿಗೆ ನಿಲ್ಲಿಸಿ…

Read More

‘ಹಾಗಾಗಿದ್ದರೆ..’; ವಿಜಯ್ ಗೆಲುವಿನಿಂದ ರಜನಿ ಫ್ಯಾನ್ಸ್​​ಗೆ ಭಾರಿ ನಿರಾಸೆ – Kannada News | Thalapathy Vijay’s TVK Sweeps TN Elections: Why Rajinikanth Fans Are Disappointed

ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ದಳಪತಿ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಮ್’ (TVK) ಪಕ್ಷದ ಭರ್ಜರಿ ಜಯ ಹೊಸ ಸಂಚಲನ ಮೂಡಿಸಿದೆ. ಮೊದಲ ಚುನಾವಣೆಯಲ್ಲೇ 108 ಸ್ಥಾನಗಳನ್ನು ಗೆದ್ದು ಅವರು ಇತಿಹಾಸ ಬರೆದಿದ್ದಾರೆ. ಆದರೆ, ವಿಜಯ್ ಅವರ ಈ ಗೆಲುವು ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳಲ್ಲಿ ಮಾತ್ರ ಒಂದು ರೀತಿಯ ನಿರಾಸೆ ಮತ್ತು ಬೇಸರವನ್ನು ಉಂಟುಮಾಡಿದೆ. ಆ ಬಗ್ಗೆ ಇಲ್ಲಿದೆ ವಿವರ. ದಳಪತಿ ವಿಜಯ್ ಅವರು ತಮ್ಮ ಸಿನಿಮಾ ವೃತ್ತಿಜೀವನದ ಉತ್ತುಂಗದಲ್ಲಿರುವಾಗಲೇ ರಾಜಕೀಯ ಪ್ರವೇಶಿಸುವ ಧೈರ್ಯ ಮಾಡಿದರು….

Read More

ಫೈಬರ್ ಕೇಬಲ್‌ಗಳೇ ಕಳ್ಳರ ಟಾರ್ಗೆಟ್: ಲಾಹೋರ್ ಇಂಟರ್ನೆಟ್ ಕಡಿತದ ಹಿಂದೆ ಅಡಗಿದೆ ಸ್ಕ್ರ್ಯಾಪ್ ಮಾಫಿಯಾ – Kannada News | Internet Outages in Lahore Linked to Fiber Cable Theft

ಲಾಹೋರ್, ಮೇ 05: ಪಾಕಿಸ್ತಾನದ ರಾಜಧಾನಿ ಲಾಹೋರ್‌ನ ಅನೇಕ ನಿವಾಸಿಗಳು ಇತ್ತೀಚಿನ ದಿನಗಳಲ್ಲಿ ನಿರಂತರ ಇಂಟರ್ನೆಟ್ ಕಡಿತದ ಸಮಸ್ಯೆಯಿಂದ ಹೈರಾಣಾಗಿದ್ದರು. ಮೊದಲು ಇದನ್ನು ತಾಂತ್ರಿಕ ದೋಷ ಅಥವಾ ವಿದ್ಯುತ್ ವ್ಯತ್ಯಯದ ಪರಿಣಾಮ ಎಂದು ಭಾವಿಸಲಾಗಿತ್ತು. ಆದರೆ, ಈ ವ್ಯವಸ್ಥಿತ ಇಂಟರ್ನೆಟ್ ಸ್ಥಗಿತದ ಹಿಂದೆ ಸ್ಕ್ರ್ಯಾಪ್ ಕಳ್ಳರ ಜಾಲವಿರುವುದು ತನಿಖೆಯ ವೇಳೆ ಬಯಲಾಗಿದೆ.ಲಾಹೋರ್‌ನ ವಿವಿಧ ಬಡಾವಣೆಗಳಲ್ಲಿ ರಾತ್ರೋರಾತ್ರಿ ಇಂಟರ್ನೆಟ್ ಸಂಪರ್ಕ ಕಡಿತಗೊಳ್ಳುತ್ತಿತ್ತು. ಇದರಿಂದಾಗಿ ಸಾವಿರಾರು ಗ್ರಾಹಕರು, ವಿಶೇಷವಾಗಿ ಮನೆಯಿಂದ ಕೆಲಸ ಮಾಡುವವರು ಮತ್ತು ವಿದ್ಯಾರ್ಥಿಗಳು ಭಾರಿ ತೊಂದರೆ ಅನುಭವಿಸಿದ್ದರು….

Read More

MI vs LSG: ಪೋಸ್ಟ್ ಮ್ಯಾಚ್​ನಲ್ಲಿ ಉಲ್ಟಾ ಹೊಡೆದ ರಿಷಭ್ ಪಂತ್: ಸೋಲಿಗೆ ಬೌಲರ್ಸ್ ಅಲ್ಲ ಬ್ಯಾಟರ್ಸ್ ಕಾರಣವಂತೆ – Kannada News | Rishabh Pant shocking statement in the post match Batters are responsible for the defeat

ಬೆಂಗಳೂರು (ಮೇ. 05): ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 ರ 47 ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ 6 ವಿಕೆಟ್‌ಗಳಿಂದ ಸೋತಿತು. ಸೋಲಿನ ನಂತರ, ಲಕ್ನೋ ನಾಯಕ ರಿಷಭ್ ಪಂತ್ (Rishabh Pant) ನೀಡಿದ ಹೇಳಿಕೆ ಎಲ್ಲರನ್ನೂ ಅಚ್ಚರಿಗೊಳಿಸಿತು. ಬ್ಯಾಟರ್​ಗಳ ಕೊಡುಗೆಯಿಂದ ತಂಡ 228 ರನ್ ಗಳಿಸಿದ್ದರೂ, ‘‘ತಮ್ಮ ತಂಡ ಹೆಚ್ಚಿನ ರನ್ ಗಳಿಸಬೇಕಿತ್ತು’’ ಎಂದು ಪಂತ್ ಹೇಳಿದರು. ಲಕ್ನೋ ಬೌಲರ್​ಗಳು ಮುಂಬೈ ಬ್ಯಾಟರ್​ಗಳನ್ನು ಕಟ್ಟಿ ಹಾಕಲು ವಿಫಲವಾಗಿದ್ದರೂ…

Read More

Video: ರಸ್ತೆಯಲ್ಲಿ ತನ್ನಷ್ಟಕ್ಕೆ ಹೋಗುತ್ತಿದ್ದ ಗೂಳಿಗೆ ಹೊಡೆಯಲು ಹೋದವನ ಗತಿ ಏನಾಯ್ತು ನೋಡಿ

ಮಿರ್ಜಾಪುರ, ಮೇ 05: ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯ ಕಚ್ವಾ ಎಂಬಲ್ಲಿ ವ್ಯಕ್ತಿಯ ಮೂರ್ಖತನಕ್ಕೆ ಗೂಳಿಯೊಂದು ತಕ್ಕ ಪಾಠ ಕಲಿಸಿದ ವಿಡಿಯೋ ವೈರಲ್ ಆಗಿದೆ. ಅಲೆದಾಡುತ್ತಿದ್ದ ಹೋರಿಯನ್ನು ವಿನಾಕಾರಣ ಕೆಣಕಿದ ವ್ಯಕ್ತಿಯೊಬ್ಬ ಈಗ ಆಸ್ಪತ್ರೆ ಪಾಲಾಗಿದ್ದಾರೆ. ಸ್ಥಳೀಯ ನಿವಾಸಿಯಾದ ರಾಜು ಸಿಂಗ್ ಎಂಬ ವ್ಯಕ್ತಿ ರಸ್ತೆಯಲ್ಲಿ ಸುಮ್ಮನೆ ಓಡಾಡುತ್ತಿದ್ದ ಹೋರಿಗೆ ಹೊಡೆಯಲು ಹೋಗಿದ್ದಾರೆ. ಮೊದಲು ಇಟ್ಟಿಗೆಗಳನ್ನು ಹೋರಿಯ ಮೇಲೆ ಎಸೆದು ಅದನ್ನು ಓಡಿಸಲು ಪ್ರಯತ್ನಿಸಿದ ಆತ, ನಂತರ ಕೋಲನ್ನು ಹಿಡಿದು ಹೋರಿಗೆ ಮನಬಂದಂತೆ ಹೊಡೆಯಲು ಆರಂಭಿಸಿದ್ದ. ಸತತವಾಗಿ…

Read More

ಬೆಂಗಳೂರು ಆಟೋ ಪ್ರಯಾಣಿಕರಿಗೆ ದರ ಏರಿಕೆ ಬಿಸಿ? ಎಲ್.ಪಿ.ಜಿ ದರ ಹೆಚ್ಚಳಕ್ಕೆ ಚಾಲಕರ ಆಕ್ರೋಶ! – Kannada News | Bengaluru Auto Fare Hike: LPG Gas crisis leads to raise in Fuel price, Auto drivers demand Rs 50 Minimum Fare

ಬೆಂಗಳೂರು ಆಟೋ ಪ್ರಯಾಣಿಕರಿಗೆ ದರ ಏರಿಕೆ ಬಿಸಿ? ಬೆಂಗಳೂರು, ಮೇ 05: ರಾಜಧಾನಿಯ ಜನತೆಗೆ ಈಗ ಮತ್ತೊಂದು ಬೆಲೆ ಏರಿಕೆಯ ಭೀತಿ ಎದುರಾಗಿದೆ. ಕೇಂದ್ರ ಸರ್ಕಾರವು ಆಟೋ ಎಲ್.ಪಿ.ಜಿ (LPG) ದರವನ್ನು ಪ್ರತಿ ಲೀಟರ್‌ಗೆ 5.73 ರೂಪಾಯಿ ಏರಿಕೆ ಮಾಡಿರುವುದನ್ನು ವಿರೋಧಿಸಿರುವ ಆಟೋ ಚಾಲಕರು, ಈಗ ಆಟೋ ಪ್ರಯಾಣ ದರವನ್ನು ಹೆಚ್ಚಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಇದರಿಂದಾಗಿ ಬೆಂಗಳೂರಿಗರಿಗೆ ಆಟೋ ಚಾರ್ಜ್​ ಏರಿಕೆಯ ಬಿಸಿ ಮುಟ್ಟುವ ಸಾಧ್ಯತೆ ಇದೆ. ಮಧ್ಯಪ್ರಾಚ್ಯದ ಯುದ್ಧದ ಪರಿಣಾಮವಾಗಿ ಕಳೆದ ಕೆಲವು…

Read More

ವೈಡ್-ನೋಬಾಲ್-ವೈಡ್: ಲಯತಪ್ಪಿದ ಯಾರ್ಕರ್ ಕಿಂಗ್, ನಡೆಯುತ್ತಿಲ್ಲ ಬುಮ್ರಾ ಮ್ಯಾಜಿಕ್ – Kannada News | Jasprit Bumrah Struggles with No Balls: Is the Yorker King Losing His Magic?

ಯಾರ್ಕರ್ ಕಿಂಗ್ ಎಂದೇ ಜನಪ್ರಿಯತೆ ಪಡೆದಿರೋ ಜಸ್ಪ್ರೀತ್ ಬುಮ್ರಾ ಈಗ ಲಯತಪ್ಪಿದ್ದು ಸ್ಪಷ್ಟವಾಗುತ್ತಿದೆ. ಈ ಬಾರಿ ಅವರಿಗೆ ಹೆಚ್ಚಿನ ವಿಕೆಟ್ ಸಿಕ್ಕಿಲ್ಲ ಎಂಬ ಕೊರಗು ಒಂದು ಕಡೆಯಾದರೆ, ನೋಬಾಲ್ ಹಾಕುವ ಮೂಲಕ ದುಬಾರಿ ಆಗುತ್ತಿದ್ದಾರೆ. ಮೇ4 ಎಲ್​​ಎಸ್​​ಜಿ ವಿರುದ್ಧದ ಪಂದ್ಯದಲ್ಲಿ ಬುಮ್ರಾ ಅವರು ಲಯತಪ್ಪಿದ್ದು ಸ್ಪಷ್ಟವಾಗಿದೆ. ಹಿಮ್ಮತ್ ಸಿಂಗ್ ಅವರು ಬುಮ್ರಾ ಬಾಲಿಂಗ್​​ನಲ್ಲಿ ಕೀಪರ್ ಕ್ಯಾಚ್ ಕೊಟ್ಟರು. ದುರಾದೃಷ್ಟ ಎಂದರ ಅದು ನೋಬಾಲ್ ಆಯಿತು. ಆ ಬಳಿಕ ಒಂದು ವೈಡ್ ಹಾಕಿದರು. ಬಳಿಕ ಮತ್ತೆ ನೋಬಾಲ್ ಹಾಕಿದರು….

Read More

Raghu Sharma: ‘‘ಜೈ ಶ್ರೀ ರಾಮ್’’: ಚೊಚ್ಚಲ ಐಪಿಎಲ್ ವಿಕೆಟ್ ಸಿಕ್ಕ ಕೂಡಲೇ ಜೇಬಿನಿಂದ ಚೀಟಿ ತೆಗೆದು ತೋರಿಸಿದ ರಘು ಶರ್ಮಾ – Kannada News | Mumbai Indians bowler Raghu Sharma shows Jai Shri Ram note after taking his first IPL wicket

ಬೆಂಗಳೂರು (ಮೇ. 05): ಇಂಡಿಯನ್ ಪ್ರೀಮಿಯರ್ ಲೀಗ್ 2026 ರ 47 ನೇ ಪಂದ್ಯದಲ್ಲಿ ಬೃಹತ್ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ (Mumbai Indians) ತಂಡ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ, ಮುಂಬೈ ತಮ್ಮ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿತು. ಮುಂಬೈ 10 ಪಂದ್ಯಗಳಲ್ಲಿ 3 ರಲ್ಲಿ ಗೆದ್ದ ನಂತರ ಪಾಯಿಂಟ್ ಪಟ್ಟಿಯಲ್ಲಿ 9 ನೇ ಸ್ಥಾನದಲ್ಲಿದೆ, ಅತ್ತ ಲಕ್ನೋ ಸೂಪರ್ ಜೈಂಟ್ಸ್ 9 ಪಂದ್ಯಗಳಲ್ಲಿ 7 ರಲ್ಲಿ…

Read More

Video:ಚುಚ್ಚಿದ್ದ ಮಚ್ಚು ತಲೆಯಲ್ಲೇ ಇದ್ದರೂ, ಆಸ್ಪತ್ರೆಯ ಆವರಣದಲ್ಲಿ ಏನೂ ಆಗಿಲ್ಲವೆಂಬಂತೆ ಮೊಬೈಲ್ ಹಿಡಿದು ಓಡಾಡಿದ ಯುವಕ – Kannada News | Man Reaches Hospital After Assault in Vikhroli, Probe Underway

ಮುಂಬೈ, ಮೇ 05: ತಲೆಗೆ ಮಚ್ಚು ಚುಚ್ಚಿದ್ದರೂ ಯುವಕನೊಬ್ಬ ಆಸ್ಪತ್ರೆಯ ಆವರಣದಲ್ಲಿ ಮೊಬೈಲ್ ಹಿಡಿದು ಏನೂ ಆಗಿಲ್ಲವೆಂಬಂತೆ ಓಡಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಮುಂಬೈನ ವಿಕ್ರೋಲಿ ಪ್ರದೇಶದಲ್ಲಿ ನಡೆದಿದೆ. ಆ ಆಯುಧವು ಆತನ ತಲೆಯಲ್ಲೇ ಸಿಲುಕಿಕೊಂಡಿತ್ತು. ಆದರೆ, ಇಂತಹ ಗಂಭೀರ ಸ್ಥಿತಿಯಲ್ಲೂ ಆತ ಮೊಬೈಲ್ ಬಳಸುತ್ತಾ ಆಸ್ಪತ್ರೆಗೆ ನಡೆದು ಬಂದಿರುವ ದೃಶ್ಯವು ನೋಡುಗರನ್ನು ಬೆಚ್ಚಿಬೀಳಿಸಿದೆ. ಮೇ 4, 2026 ರಂದು ಮುಂಜಾನೆ ವಿಕ್ರೋಲಿಯ ಕಣ್ಣಂವರ್ ನಗರದಲ್ಲಿ ಇಸ್ಮಾ ಎಂಬ ಯುವಕನ ಮೇಲೆ ದುಷ್ಕರ್ಮಿಗಳು ಮಚ್ಚಿನಿಂದ…

Read More