Category Archives: Blog

Your blog category

ಬೆಳಗಾವಿ: ವಿಡಿಯೋ ಕಾಲ್‌ನಲ್ಲಿ ಮಗು ತೋರಿಸಿಲ್ಲವೆಂದು ಅತ್ತೆಗೆ ಚಾಕುವಿನಿಂದ ಇರಿದ ಅಳಿಯ, ಕೃತ್ಯ ಎಸಗಿ ಸ್ಟೇಟಸ್ ಹಾಕಿ ವಿಕೃತಿ – Kannada News | Belagavi Crime: Man Stabs Mother in Law for Not Showing Baby on Video Call; Posts WhatsApp Status from Prison

ಬೆಳಗಾವಿ, ಮೇ 5: ಕ್ಷುಲ್ಲಕ ಕಾರಣಕ್ಕಾಗಿ ಅಳಿಯನೊಬ್ಬ ತನ್ನ ಅತ್ತೆಗೆ ಚಾಕುವಿನಿಂದ ಇರಿದ ಘೋರ ಘಟನೆ ಬೆಳಗಾವಿ (Belagavi) ಜಿಲ್ಲೆಯ ಸವದತ್ತಿ ತಾಲೂಕಿನ ಆಲದಕಟ್ಟಿಯಲ್ಲಿ ನಡೆದಿದೆ. ವಿಡಿಯೋ ಕಾಲ್‌ನಲ್ಲಿ ಮಗು ತೋರಿಸಿಲ್ಲ ಎನ್ನುವ ಕಾರಣಕ್ಕೆ ಆಕ್ರೋಶಗೊಂಡ ಅರವಿಂದ ಗವಳಿ ಎಂಬಾತ ಅತ್ತೆ ಮಹಾದೇವಿ (45) ಅವರಿಗೆ ಚಾಕು ಇರಿದಿದ್ದಾನೆ. ಸದ್ಯ ಮಹಾದೇವಿ ಅವರಿಗೆ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಪಿ ಅರವಿಂದ ಗವಳಿಯನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಯ ಹಿನ್ನೆಲೆ

ಅರವಿಂದ ಗವಳಿಯ ಪತ್ನಿಗೆ ಎರಡು ತಿಂಗಳ ಹಿಂದೆಯಷ್ಟೇ ಹೆರಿಗೆಯಾಗಿದ್ದು, ಆಕೆ ಸದ್ಯ ತವರು ಮನೆಯಲ್ಲಿದ್ದಳು. ಅಲ್ಲಿಯೂ ಪತ್ನಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದ ಅರವಿಂದ, ಪದೇಪದೆ ವಿಡಿಯೋ ಕಾಲ್ ಮಾಡಿ ಮಗುವನ್ನು ತೋರಿಸುವಂತೆ ಪಟ್ಟು ಹಿಡಿಯುತ್ತಿದ್ದ. ಇದಕ್ಕೆ ಪ್ರತಿಕ್ರಿಯಿಸಿದ್ದ ಅತ್ತೆ ಮಹಾದೇವಿ, ‘ಕೆಲಸ ಬಿಟ್ಟು ಸದಾ ಮೊಬೈಲ್ ಹಿಡಿದು ಕೂರಲು ಸಾಧ್ಯವಿಲ್ಲ, ದಿನಕ್ಕೆ ಒಂದು ಬಾರಿ ಮಾತ್ರ ಕಾಲ್ ಮಾಡು’ ಎಂದು ಬುದ್ಧಿ ಹೇಳಿದ್ದರು.

ಇದರಿಂದ ಸಿಟ್ಟಾದ ಅರವಿಂದ ಅತ್ತೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅತ್ತೆ ಕೂಡ ‘ನನ್ನ ಮನೆ ಬಾಗಿಲಿಗೆ ಬಂದರೆ ಸುಮ್ಮನೆ ಬಿಡಲ್ಲ’ ಎಂದು ಎಚ್ಚರಿಸಿದ್ದರು. ಇದೇ ದ್ವೇಷದಲ್ಲಿ ಆಕೆಯ ಮನೆಗೆ ನುಗ್ಗಿದ ಅರವಿಂದ, ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಸದ್ಯ ತೀವ್ರವಾಗಿ ಗಾಯಗೊಂಡಿರುವ ಮಹಾದೇವಿ ಅವರು ಬೆಳಗಾವಿಯ ಬಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಜೈಲು-ಬೇಲ್’ ಎಂದು ಸ್ಟೇಟಸ್ ಹಾಕಿದ ಆರೋಪಿ

ಅಷ್ಟಕ್ಕೇ ಸುಮ್ಮನಾಗದ ಅರವಿಂದ, ಅತ್ತೆಗೆ ಚಾಕುವಿನಿಂದ ಇರಿದ ಬಳಿಕ ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡಿದ್ದಾನೆ. ‘‘ಇಂದು ಜೈಲು, ನಾಳೆ ಬೇಲ್… ನಿನ್ನನ್ನು ಬಿಡಲ್ಲ’’ ಎಂದು ಬರೆದುಕೊಂಡು ತನ್ನ ವಿಕೃತಿ ಮೆರೆದಿದ್ದಾನೆ. ತಕ್ಷಣ ಕಾರ್ಯಪ್ರವೃತ್ತರಾದ ಮುರಗೋಡ ಪೊಲೀಸರು ಆರೋಪಿ ಅರವಿಂದನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಇದನ್ನೂ ಓದಿ: ಮೆಜೆಸ್ಟಿಕ್​ನಲ್ಲಿ ತನ್ನ 2 ವರ್ಷದ ಮಗುವನ್ನೇ ಮಾರಿದಳಾ ತಾಯಿ? ತಂದೆಯಿಂದಲೇ ಗಂಭೀರ ಆರೋಪ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಾವೇರಿ: ಧಗಧಗನೆ ಹೊತ್ತಿ ಉರಿದ ಕೆಎಸ್​ಆರ್​ಟಿಸಿ ಬಸ್, ಚಾಲಕನ ಸಮಯಪ್ರಜ್ಞೆಯಿಂದ 17 ಪ್ರಯಾಣಿಕರು ಜಸ್ಟ್ ಮಿಸ್ – Kannada News | Haveri Bus Fire Accident: 17 Passengers Escaped Narrowly as KSRTC Pallakki Bus Caught Fire Near Ranebennur

ಹಾವೇರಿ, ಮೇ 5: ಬೆಂಗಳೂರಿನಿಂದ ಗದಗಕ್ಕೆ ಪ್ರಯಾಣಿಸುತ್ತಿದ್ದ ಸಾರಿಗೆ ಬಸ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು, ಬಸ್ ಹೊತ್ತಿ ಉರಿದ ಭೀಕರ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನ ದೇವರಗುಡ್ಡ ಗ್ರಾಮದ ಬಳಿ ನಡೆದಿದೆ. ಅದೃಷ್ಟವಶಾತ್ ಬಸ್ ಚಾಲಕನ ಸಮಯಪ್ರಜ್ಞೆಯಿಂದಾಗಿ ಬಸ್ಸಿನಲ್ಲಿದ್ದ 17 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಗಳೂರಿನಿಂದ ಗದಗಕ್ಕೆ ಹೊರಟಿದ್ದ ಈ ಪಲ್ಲಕ್ಕಿ ಬಸ್ ರಾಜ್ಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದಾಗ ದೇವರಗುಡ್ಡದ ಬಳಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಎಚ್ಚೆತ್ತುಕೊಂಡ ಚಾಲಕ ಪಕ್ಕೀರಪ್ಪ, ಬಸ್ಸನ್ನು ರಸ್ತೆ ಬದಿಗೆ ನಿಲ್ಲಿಸಿ ಪ್ರಯಾಣಿಕರನ್ನು ಕೆಳಗಿಳಿಯುವಂತೆ ಸೂಚಿಸಿದ್ದಾರೆ. ಚಾಲಕನ ಈ ಸಮಯಪ್ರಜ್ಞೆಯಿಂದಾಗಿ ಭಾರಿ ದುರಂತವೊಂದು ತಪ್ಪಿದೆ. ಬೆಂಕಿ ಕಾಣಿಸಿಕೊಂಡ ಕೆಲವೇ ನಿಮಿಷಗಳಲ್ಲಿ ಇಡೀ ಬಸ್ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಧಗಧಗನೆ ಉರಿಯಿತು. ಸಾರಿಗೆ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟರಾದರೂ ಪ್ರಯೋಜನವಾಗಲಿಲ್ಲ. ಸ್ಥಳಕ್ಕೆ ರಾಣೇಬೆನ್ನೂರು ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವರದಿ: ಅಣ್ಣಪ್ಪ ಬಾರ್ಕಿ, ಟಿವಿ9 ಹಾವೇರಿ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಹಾಗಾಗಿದ್ದರೆ..’; ವಿಜಯ್ ಗೆಲುವಿನಿಂದ ರಜನಿ ಫ್ಯಾನ್ಸ್​​ಗೆ ಭಾರಿ ನಿರಾಸೆ – Kannada News | Thalapathy Vijay’s TVK Sweeps TN Elections: Why Rajinikanth Fans Are Disappointed

ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ದಳಪತಿ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಮ್’ (TVK) ಪಕ್ಷದ ಭರ್ಜರಿ ಜಯ ಹೊಸ ಸಂಚಲನ ಮೂಡಿಸಿದೆ. ಮೊದಲ ಚುನಾವಣೆಯಲ್ಲೇ 108 ಸ್ಥಾನಗಳನ್ನು ಗೆದ್ದು ಅವರು ಇತಿಹಾಸ ಬರೆದಿದ್ದಾರೆ. ಆದರೆ, ವಿಜಯ್ ಅವರ ಈ ಗೆಲುವು ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳಲ್ಲಿ ಮಾತ್ರ ಒಂದು ರೀತಿಯ ನಿರಾಸೆ ಮತ್ತು ಬೇಸರವನ್ನು ಉಂಟುಮಾಡಿದೆ. ಆ ಬಗ್ಗೆ ಇಲ್ಲಿದೆ ವಿವರ.

ದಳಪತಿ ವಿಜಯ್ ಅವರು ತಮ್ಮ ಸಿನಿಮಾ ವೃತ್ತಿಜೀವನದ ಉತ್ತುಂಗದಲ್ಲಿರುವಾಗಲೇ ರಾಜಕೀಯ ಪ್ರವೇಶಿಸುವ ಧೈರ್ಯ ಮಾಡಿದರು. ಇದಕ್ಕಾಗಿ ಅವರು ಚಿತ್ರರಂಗವನ್ನೇ ತೊರೆಯಲು ನಿರ್ಧರಿಸಿದರು. 2026ರ ಚುನಾವಣೆಯಲ್ಲಿ ಅವರ ಪಕ್ಷ 108 ಸ್ಥಾನಗಳನ್ನು ಗೆದ್ದಿದ್ದು, ವಿಜಯ್ ಮುಖ್ಯಮಂತ್ರಿಯಾಗುವುದು ಈಗ ಬಹುತೇಕ ಖಚಿತವಾಗಿದೆ. ವಿಜಯ್ ಫ್ಯಾನ್ ಬೇಸ್ ಇರುವಾಗಲೇ ರಾಜಕೀಯಕ್ಕೆ ಬಂದಿದ್ದು ಅವರಿಗೆ ಪ್ಲಸ್ ಪಾಯಿಂಟ್ ಆಯಿತು ಎಂಬುದು ವಿಶ್ಲೇಷಕರ ಅಭಿಪ್ರಾಯ.

ರಜನಿ ಅಭಿಮಾನಿಗಳ ನಿರಾಸೆಗೆ ಕಾರಣವೇನು?

ರಜನಿಕಾಂತ್ ಅವರು ರಾಜಕೀಯಕ್ಕೆ ಬರುತ್ತಾರೆ ಎಂಬ ಮಾತು ಕಳೆದ 20-25 ವರ್ಷಗಳಿಂದ ಕೇಳಿಬರುತ್ತಲೇ ಇತ್ತು. ಪ್ರತಿ ಬಾರಿ ಚುನಾವಣೆ ಬಂದಾಗಲೂ ಅಭಿಮಾನಿಗಳು ‘ತಲೈವಾ’ ರಾಜಕೀಯಕ್ಕೆ ಕಾಲಿಡುತ್ತಾರೆ ಎಂದು ಕಾಯುತ್ತಿದ್ದರು. ಆದರೆ, ರಜನಿಕಾಂತ್ ಅವರು ಸುದೀರ್ಘ ಕಾಲ ಆಲೋಚಿಸಿ, ಕೊನೆಯ ಕ್ಷಣದಲ್ಲಿ ಆರೋಗ್ಯದ ಕಾರಣ ನೀಡಿ ಹಿಂದೆ ಸರಿದರು.

‘ರಜನಿಕಾಂತ್ ಅವರು 20 ವರ್ಷಗಳ ಹಿಂದೆಯೇ, ರಾಜಕೀಯಕ್ಕೆ ಬಂದಿದ್ದರೆ, ಇವತ್ತು ತಮಿಳುನಾಡಿನ ಚಿತ್ರಣವೇ ಬೇರೆಯಾಗಿರುತ್ತಿತ್ತು. ಅವರು ಸುಲಭವಾಗಿ ಮುಖ್ಯಮಂತ್ರಿಯಾಗುತ್ತಿದ್ದರು’ ಎಂಬುದು ರಜನಿ ಅಭಿಮಾನಿಗಳ ಅಭಿಪ್ರಾಯ.

ಕಮಲ್ ಸೋಲು – ವಿಜಯ್ ಗೆಲುವು:

ರಜನಿಕಾಂತ್ ಅವರಿಗಿಂತ ಮೊದಲೇ ಕಮಲ್ ಹಾಸನ್ ರಾಜಕೀಯಕ್ಕೆ ಬಂದರೂ, ಮತದಾರರು ಅವರನ್ನು ಪೂರ್ಣ ಪ್ರಮಾಣದಲ್ಲಿ ಒಪ್ಪಿಕೊಳ್ಳಲಿಲ್ಲ. ಆದರೆ ವಿಜಯ್ ವಿಷಯದಲ್ಲಿ ಮತದಾರರು ಭರ್ಜರಿ ಬೆಂಬಲ ನೀಡಿದ್ದಾರೆ. ವಿಜಯ್ ಅವರ ಈ ಗೆಲುವನ್ನು ಕಂಡ ರಜನಿ ಅಭಿಮಾನಿಗಳು, ‘ನಮ್ಮ ನೆಚ್ಚಿನ ನಟನಿಗೂ ಇಂತಹ ಸುವರ್ಣ ಅವಕಾಶವಿತ್ತು, ಆದರೆ ಕಾಲ ಮೀರಿ ಹೋಯಿತು’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ‘2026ಕ್ಕೆ ನಾನೇ ಸಿಎಂ’; 2024ರಲ್ಲೇ ಸೂಚನೆ ಕೊಟ್ಟಿದ್ದ ದಳಪತಿ ವಿಜಯ್

ಒಟ್ಟಾರೆಯಾಗಿ, ವಿಜಯ್ ಅವರ ಯಶಸ್ಸು ಒಂದು ಕಡೆ ಸಂಭ್ರಮ ತಂದಿದ್ದರೆ, ಮತ್ತೊಂದೆಡೆ ರಜನಿಕಾಂತ್ ಅವರ ರಾಜಕೀಯ ಪ್ರವೇಶದ ಕನಸು ಭಗ್ನಗೊಂಡಿರುವುದು ಅವರ ಕೋಟ್ಯಂತರ ಅಭಿಮಾನಿಗಳಲ್ಲಿ ಇಂದಿಗೂ ಮರೆಯಲಾಗದ ನೋವಾಗಿ ಉಳಿದಿದೆ. ಅಂದು ರಜನಿ ಮಾಡದ ಸಾಧನೆಯನ್ನು ಇಂದು ವಿಜಯ್ ಮಾಡಿ ತೋರಿಸಿದ್ದಾರೆ ಎಂಬ ಚರ್ಚೆ ಎಲ್ಲೆಡೆ ನಡೆಯುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 9:01 am, Tue, 5 May 26

Source link

ಫೈಬರ್ ಕೇಬಲ್‌ಗಳೇ ಕಳ್ಳರ ಟಾರ್ಗೆಟ್: ಲಾಹೋರ್ ಇಂಟರ್ನೆಟ್ ಕಡಿತದ ಹಿಂದೆ ಅಡಗಿದೆ ಸ್ಕ್ರ್ಯಾಪ್ ಮಾಫಿಯಾ – Kannada News | Internet Outages in Lahore Linked to Fiber Cable Theft

ಲಾಹೋರ್, ಮೇ 05: ಪಾಕಿಸ್ತಾನದ ರಾಜಧಾನಿ ಲಾಹೋರ್‌ನ ಅನೇಕ ನಿವಾಸಿಗಳು ಇತ್ತೀಚಿನ ದಿನಗಳಲ್ಲಿ ನಿರಂತರ ಇಂಟರ್ನೆಟ್ ಕಡಿತದ ಸಮಸ್ಯೆಯಿಂದ ಹೈರಾಣಾಗಿದ್ದರು. ಮೊದಲು ಇದನ್ನು ತಾಂತ್ರಿಕ ದೋಷ ಅಥವಾ ವಿದ್ಯುತ್ ವ್ಯತ್ಯಯದ ಪರಿಣಾಮ ಎಂದು ಭಾವಿಸಲಾಗಿತ್ತು. ಆದರೆ, ಈ ವ್ಯವಸ್ಥಿತ ಇಂಟರ್ನೆಟ್ ಸ್ಥಗಿತದ ಹಿಂದೆ ಸ್ಕ್ರ್ಯಾಪ್ ಕಳ್ಳರ ಜಾಲವಿರುವುದು ತನಿಖೆಯ ವೇಳೆ ಬಯಲಾಗಿದೆ.
ಲಾಹೋರ್‌ನ ವಿವಿಧ ಬಡಾವಣೆಗಳಲ್ಲಿ ರಾತ್ರೋರಾತ್ರಿ ಇಂಟರ್ನೆಟ್ ಸಂಪರ್ಕ ಕಡಿತಗೊಳ್ಳುತ್ತಿತ್ತು.

ಇದರಿಂದಾಗಿ ಸಾವಿರಾರು ಗ್ರಾಹಕರು, ವಿಶೇಷವಾಗಿ ಮನೆಯಿಂದ ಕೆಲಸ ಮಾಡುವವರು ಮತ್ತು ವಿದ್ಯಾರ್ಥಿಗಳು ಭಾರಿ ತೊಂದರೆ ಅನುಭವಿಸಿದ್ದರು. ಇಂಟರ್ನೆಟ್ ಸೇವಾ ಪೂರೈಕೆದಾರರು (ISPs) ಪರಿಶೀಲಿಸಿದಾಗ, ಫೈಬರ್ ಆಪ್ಟಿಕ್ ಕೇಬಲ್‌ಗಳನ್ನು ವ್ಯವಸ್ಥಿತವಾಗಿ ಕತ್ತರಿಸಿ ಕಳವು ಮಾಡಿರುವುದು ಕಂಡುಬಂದಿದೆ.

ಇಂಟರ್ನೆಟ್ ಪೂರೈಕೆಗೆ ಬಳಸುವ ಫೈಬರ್ ಆಪ್ಟಿಕ್ ಕೇಬಲ್‌ಗಳು ಸ್ಕ್ರ್ಯಾಪ್ ಮಾರುಕಟ್ಟೆಯಲ್ಲಿ ಅತ್ಯಂತ ದುಬಾರಿ ಬೆಲೆಗೆ ಮಾರಾಟವಾಗುತ್ತಿವೆ ಎಂಬ ಅಂಶ ಕಳ್ಳರ ಗಮನಕ್ಕೆ ಬಂದಿದೆ. ಕೇಬಲ್‌ಗಳ ಒಳಭಾಗದಲ್ಲಿರುವ ಲೋಹದ ಅಂಶಗಳು ಮತ್ತು ವಿಶೇಷ ಸಂಯುಕ್ತಗಳಿಗೆ ಹಳೆಯ ಕಬ್ಬಿಣದ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ. ಈ ಹಣದ ಆಸೆಗೆ ಬಿದ್ದ ಕಳ್ಳರು ಇಡೀ ನಗರದ ಇಂಟರ್ನೆಟ್ ಜಾಲವನ್ನೇ ಹದಗೆಡಿಸುತ್ತಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

MI vs LSG: ಪೋಸ್ಟ್ ಮ್ಯಾಚ್​ನಲ್ಲಿ ಉಲ್ಟಾ ಹೊಡೆದ ರಿಷಭ್ ಪಂತ್: ಸೋಲಿಗೆ ಬೌಲರ್ಸ್ ಅಲ್ಲ ಬ್ಯಾಟರ್ಸ್ ಕಾರಣವಂತೆ – Kannada News | Rishabh Pant shocking statement in the post match Batters are responsible for the defeat

ಬೆಂಗಳೂರು (ಮೇ. 05): ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 ರ 47 ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ 6 ವಿಕೆಟ್‌ಗಳಿಂದ ಸೋತಿತು. ಸೋಲಿನ ನಂತರ, ಲಕ್ನೋ ನಾಯಕ ರಿಷಭ್ ಪಂತ್ (Rishabh Pant) ನೀಡಿದ ಹೇಳಿಕೆ ಎಲ್ಲರನ್ನೂ ಅಚ್ಚರಿಗೊಳಿಸಿತು. ಬ್ಯಾಟರ್​ಗಳ ಕೊಡುಗೆಯಿಂದ ತಂಡ 228 ರನ್ ಗಳಿಸಿದ್ದರೂ, ‘‘ತಮ್ಮ ತಂಡ ಹೆಚ್ಚಿನ ರನ್ ಗಳಿಸಬೇಕಿತ್ತು’’ ಎಂದು ಪಂತ್ ಹೇಳಿದರು. ಲಕ್ನೋ ಬೌಲರ್​ಗಳು ಮುಂಬೈ ಬ್ಯಾಟರ್​ಗಳನ್ನು ಕಟ್ಟಿ ಹಾಕಲು ವಿಫಲವಾಗಿದ್ದರೂ ತಮ್ಮ ಬೌಲರ್​ಗಳನ್ನು ರಿಷಭ್ ಹೊಗಳಿದ್ದಾರೆ.

ಸೋಲಿಗೆ ತಮ್ಮ ಬ್ಯಾಟಿಂಗ್ ಕಾರಣ ಎಂದ ರಿಷಭ್ ಪಂತ್

ಪಂದ್ಯದ ನಂತರ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್​ನಲ್ಲಿ ಮಾತನಾಡಿದ ಎಲ್‌ಎಸ್‌ಜಿ ನಾಯಕ ರಿಷಭ್ ಪಂತ್, “ನಾವು ಆಟ ಆರಂಭಿಸಿದ ರೀತಿ ನೋಡಿದರೆ ಹೆಚ್ಚಿನ ರನ್ ಗಳಿಸಬೇಕಿತ್ತು ಎಂದು ನನಗನ್ನಿಸುತ್ತದೆ. ಕೆಲವು ಒಳ್ಳೆಯ ಲಕ್ಷಣಗಳು ಕಂಡುಬಂದವು. ಅದನ್ನು ನಿರಾಕರಿಸಲಾಗದು. ಹುಡುಗರು ಮುಕ್ತವಾಗಿ ಆಡಿದರು, ಆದರೆ ಕೊನೆಯಲ್ಲಿ, ಈ ಪರಿಸ್ಥಿತಿಗಳಿಗೆ ಒಗ್ಗಿಕೊಂಡಿರುವುದರಿಂದ ಮುಂಬೈ ಚೆನ್ನಾಗಿ ಬೌಲಿಂಗ್ ಮಾಡಿತು ಎಂದು ನಾನು ಭಾವಿಸುತ್ತೇನೆ. ನಾವು ಖಂಡಿತವಾಗಿಯೂ 10-15 ರನ್‌ಗಳಿಂದ ಸೋತಿದ್ದೇವೆ” ಎಂದು ಹೇಳಿದರು.

ಬೌಲರ್‌ಗಳನ್ನು ಸಮರ್ಥಿಸಿಕೊಂಡ ಪಂತ್

ತಮ್ಮ ತಂಡದ ಬೌಲರ್‌ಗಳನ್ನು ಸಮರ್ಥಿಸಿಕೊಳ್ಳುತ್ತಾ, ರಿಷಭ್ ಪಂತ್ ಅವರು ಇಂತಹ ವಿಕೆಟ್‌ಗಳ ಮೇಲೆ ಬೌಲರ್​ಗನ್ನು ದೂಷಿಸಲಾಗುವುದಿಲ್ಲ ಎಂದು ಹೇಳಿದರು. “ಒಂದು ಹಂತದಲ್ಲಿ, ನಾವು ಮುಂಬೈ ವಿರುದ್ಧ ಮೇಲುಗೈ ಸಾಧಿಸಿದ್ದೆವು. ಇಂತಹ ವಿಕೆಟ್‌ಗಳ ಮೇಲೆ ನೀವು ಬೌಲರ್‌ಗಳನ್ನು ದೂಷಿಸಲು ಸಾಧ್ಯವಿಲ್ಲ. ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ನಮಗೆ ಸ್ವಲ್ಪ ಅದೃಷ್ಟ ಬೇಕು” ಎಂದು ಅವರು ಹೇಳಿದರು.

Raghu Sharma: ‘‘ಜೈ ಶ್ರೀ ರಾಮ್’’: ಚೊಚ್ಚಲ ಐಪಿಎಲ್ ವಿಕೆಟ್ ಸಿಕ್ಕ ಕೂಡಲೇ ಜೇಬಿನಿಂದ ಚೀಟಿ ತೆಗೆದು ತೋರಿಸಿದ ರಘು ಶರ್ಮಾ

ರೋಹಿತ್ ಮತ್ತು ರಯಾನ್ ರಿಕಲ್ಟನ್ ಅವರಿಂದ ಬಿರುಗಾಳಿಯ ಇನ್ನಿಂಗ್ಸ್

229 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್, ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದ ರೋಹಿತ್ ಶರ್ಮಾ ಮತ್ತು ರಯಾನ್ ರಿಕಲ್ಟನ್ ನಡುವಿನ 143 ರನ್‌ಗಳ ಆರಂಭಿಕ ಪಾಲುದಾರಿಕೆಯಿಂದಾಗಿ, ಇನ್ನೂ ಎಂಟು ಎಸೆತಗಳು ಬಾಕಿ ಇರುವಾಗ ನಾಲ್ಕು ವಿಕೆಟ್‌ಗಳಿಗೆ 229 ರನ್ ಗಳಿಸುವ ಮೂಲಕ ಆರಾಮದಾಯಕ ಗೆಲುವು ಸಾಧಿಸಿತು. ರೋಹಿತ್ ಶರ್ಮಾ 44 ಎಸೆತಗಳಲ್ಲಿ 84 ರನ್ ಗಳಿಸಿದರೆ, ರಿಕಲ್ಟನ್ ಕೇವಲ 32 ಎಸೆತಗಳಲ್ಲಿ 83 ರನ್ ಗಳಿಸಿದರು.

ಇದಕ್ಕೂ ಮೊದಲು, ಲಕ್ನೋ ಸೂಪರ್ ಜೈಂಟ್ಸ್ ಪರ ನಿಕೋಲಸ್ ಪೂರನ್ ಕೇವಲ 16 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಈ ಋತುವಿನಲ್ಲಿ ಫಾರ್ಮ್‌ನಲ್ಲಿ ಎಡವಿರುವ ಪೂರನ್ 21 ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಎಂಟು ಸಿಕ್ಸರ್‌ಗಳು ಸೇರಿದಂತೆ 63 ರನ್ ಗಳಿಸಿದರು. 25 ಎಸೆತಗಳಲ್ಲಿ 44 ರನ್ ಗಳಿಸಿದ ಆರಂಭಿಕ ಮಿಚೆಲ್ ಮಾರ್ಷ್ ಅವರೊಂದಿಗೆ ಎರಡನೇ ವಿಕೆಟ್‌ಗೆ 94 ರನ್ ಸೇರಿಸುವ ಮೂಲಕ ಸೂಪರ್ ಜೈಂಟ್ಸ್ ತಂಡವು ಐದು ವಿಕೆಟ್‌ಗಳಿಗೆ 228 ರನ್ ಗಳಿಸಲು ಸಹಾಯ ಮಾಡಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ರಸ್ತೆಯಲ್ಲಿ ತನ್ನಷ್ಟಕ್ಕೆ ಹೋಗುತ್ತಿದ್ದ ಗೂಳಿಗೆ ಹೊಡೆಯಲು ಹೋದವನ ಗತಿ ಏನಾಯ್ತು ನೋಡಿ

ಮಿರ್ಜಾಪುರ, ಮೇ 05: ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯ ಕಚ್ವಾ ಎಂಬಲ್ಲಿ ವ್ಯಕ್ತಿಯ ಮೂರ್ಖತನಕ್ಕೆ ಗೂಳಿಯೊಂದು ತಕ್ಕ ಪಾಠ ಕಲಿಸಿದ ವಿಡಿಯೋ ವೈರಲ್ ಆಗಿದೆ. ಅಲೆದಾಡುತ್ತಿದ್ದ ಹೋರಿಯನ್ನು ವಿನಾಕಾರಣ ಕೆಣಕಿದ ವ್ಯಕ್ತಿಯೊಬ್ಬ ಈಗ ಆಸ್ಪತ್ರೆ ಪಾಲಾಗಿದ್ದಾರೆ. ಸ್ಥಳೀಯ ನಿವಾಸಿಯಾದ ರಾಜು ಸಿಂಗ್ ಎಂಬ ವ್ಯಕ್ತಿ ರಸ್ತೆಯಲ್ಲಿ ಸುಮ್ಮನೆ ಓಡಾಡುತ್ತಿದ್ದ ಹೋರಿಗೆ ಹೊಡೆಯಲು ಹೋಗಿದ್ದಾರೆ. ಮೊದಲು ಇಟ್ಟಿಗೆಗಳನ್ನು ಹೋರಿಯ ಮೇಲೆ ಎಸೆದು ಅದನ್ನು ಓಡಿಸಲು ಪ್ರಯತ್ನಿಸಿದ ಆತ, ನಂತರ ಕೋಲನ್ನು ಹಿಡಿದು ಹೋರಿಗೆ ಮನಬಂದಂತೆ ಹೊಡೆಯಲು ಆರಂಭಿಸಿದ್ದ.

ಸತತವಾಗಿ ಏಟು ತಿಂದ ಹೋರಿಯ ತಾಳ್ಮೆ ಕಟ್ಟೆಯೊಡೆದಿದೆ. ರಾಜು ಸಿಂಗ್‌ನ ಹಲ್ಲೆಯಿಂದ ಕೆರಳಿದ ಹೋರಿ, ಕ್ಷಣಾರ್ಧದಲ್ಲಿ ಆತನ ಮೇಲೆರಗಿದೆ. ರಾಜು ತಪ್ಪಿಸಿಕೊಳ್ಳುವ ಮೊದಲೇ ತನ್ನ ಬಲಿಷ್ಠವಾದ ಕೊಂಬುಗಳಿಂದ ಆತನನ್ನು ತಿವಿದು ದೂರಕ್ಕೆ ಎಸೆದಿದೆ.ಸುತ್ತಮುತ್ತಲಿದ್ದ ಜನರು ಹೋರಿಯನ್ನು ಓಡಿಸಿ ರಾಜು ಸಿಂಗ್‌ನನ್ನು ರಕ್ಷಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಆತನನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬೆಂಗಳೂರು ಆಟೋ ಪ್ರಯಾಣಿಕರಿಗೆ ದರ ಏರಿಕೆ ಬಿಸಿ? ಎಲ್.ಪಿ.ಜಿ ದರ ಹೆಚ್ಚಳಕ್ಕೆ ಚಾಲಕರ ಆಕ್ರೋಶ! – Kannada News | Bengaluru Auto Fare Hike: LPG Gas crisis leads to raise in Fuel price, Auto drivers demand Rs 50 Minimum Fare

ಬೆಂಗಳೂರು ಆಟೋ ಪ್ರಯಾಣಿಕರಿಗೆ ದರ ಏರಿಕೆ ಬಿಸಿ?

ಬೆಂಗಳೂರು, ಮೇ 05: ರಾಜಧಾನಿಯ ಜನತೆಗೆ ಈಗ ಮತ್ತೊಂದು ಬೆಲೆ ಏರಿಕೆಯ ಭೀತಿ ಎದುರಾಗಿದೆ. ಕೇಂದ್ರ ಸರ್ಕಾರವು ಆಟೋ ಎಲ್.ಪಿ.ಜಿ (LPG) ದರವನ್ನು ಪ್ರತಿ ಲೀಟರ್‌ಗೆ 5.73 ರೂಪಾಯಿ ಏರಿಕೆ ಮಾಡಿರುವುದನ್ನು ವಿರೋಧಿಸಿರುವ ಆಟೋ ಚಾಲಕರು, ಈಗ ಆಟೋ ಪ್ರಯಾಣ ದರವನ್ನು ಹೆಚ್ಚಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಇದರಿಂದಾಗಿ ಬೆಂಗಳೂರಿಗರಿಗೆ ಆಟೋ ಚಾರ್ಜ್​ ಏರಿಕೆಯ ಬಿಸಿ ಮುಟ್ಟುವ ಸಾಧ್ಯತೆ ಇದೆ.

ಮಧ್ಯಪ್ರಾಚ್ಯದ ಯುದ್ಧದ ಪರಿಣಾಮವಾಗಿ ಕಳೆದ ಕೆಲವು ದಿನಗಳಿಂದ ಎಲ್.ಪಿ.ಜಿ ಕೊರತೆ ಎದುರಾಗಿತ್ತು. ಇದರಿಂದಾಗಿ ಚಾಲಕರು ಗಂಟೆಗಟ್ಟಲೆ ಕ್ಯೂ ನಿಂತು ಕಂಗಾಲಾಗಿದ್ದರು. ಈ ಸಂಕಷ್ಟದ ಬೆನ್ನಲ್ಲೇ ಸರ್ಕಾರಿ ಸ್ವಾಮ್ಯದ ಬಂಕ್‌ಗಳಲ್ಲಿ ಬೆಲೆ ಏರಿಕೆ ಮಾಡಿರುವುದು ಚಾಲಕರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರಿ ಬಂಕ್​ಗಳೆ ಬೆಲೆ ಏರಿಕೆ ಮಾಡಿದಾಗ, ಇದನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಂಕ್‌ಗಳು ಕೂಡ ದರವನ್ನು ದುಪ್ಪಟ್ಟುಗೊಳಿಸಿವೆ. ಇದರಿಂದ ಆಟೋ ಚಾಲಕರು ಕೆಂಡಾಮಂಡಲಾಗಿದ್ದಾರೆ.

ಬೇಡಿಕೆಗಳೇನು?

ಸದ್ಯ ಬೆಂಗಳೂರಿನಲ್ಲಿ ಆಟೋ ಕನಿಷ್ಠ ದರ (2 ಕಿ.ಮೀ ಗೆ) 36 ರೂ. ಹಾಗೂ ನಂತರದ ಪ್ರತಿ ಕಿ.ಮೀ ಗೆ 18 ರೂ. ಇದೆ. ಇದನ್ನು ಕ್ರಮವಾಗಿ 50 ರೂ. ಹಾಗೂ 25 ರೂ. ಏರಿಸಬೇಕೆಂದು ಆಟೋ ಸಂಘಟನೆಗಳು ಒತ್ತಾಯಿಸಿವೆ. ಗ್ಯಾಸ್ ಬೆಲೆ ಏರಿಕೆಯಿಂದ ಜೀವನ ನಡೆಸುವುದೇ ಕಷ್ಟವಾಗಿದೆ. ಸಾರಿಗೆ ಸಚಿವರು ಕೂಡಲೇ ಸಭೆ ನಡೆಸಿ ನಮ್ಮ ಕಷ್ಟ ಆಲಿಸಬೇಕು ಎಂದು ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್ ರಾಜ್ಯಾಧ್ಯಕ್ಷರಾದ ಸಂತೋಷ್ ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ, ಚುನಾವಣೆ ಬೆನ್ನಲ್ಲೇ ಕೇಂದ್ರದ ಈ ಬೆಲೆ ಏರಿಕೆ ನಿರ್ಧಾರವು ಆಟೋ ಚಾಲಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದ್ದು, ಸಾಮಾನ್ಯ ಜನರಿಗೂ ಆಟೋ ದರ ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ಹೆಚ್ಚಿದೆ.

ನಟರಾಜ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವೈಡ್-ನೋಬಾಲ್-ವೈಡ್: ಲಯತಪ್ಪಿದ ಯಾರ್ಕರ್ ಕಿಂಗ್, ನಡೆಯುತ್ತಿಲ್ಲ ಬುಮ್ರಾ ಮ್ಯಾಜಿಕ್ – Kannada News | Jasprit Bumrah Struggles with No Balls: Is the Yorker King Losing His Magic?

ಯಾರ್ಕರ್ ಕಿಂಗ್ ಎಂದೇ ಜನಪ್ರಿಯತೆ ಪಡೆದಿರೋ ಜಸ್ಪ್ರೀತ್ ಬುಮ್ರಾ ಈಗ ಲಯತಪ್ಪಿದ್ದು ಸ್ಪಷ್ಟವಾಗುತ್ತಿದೆ. ಈ ಬಾರಿ ಅವರಿಗೆ ಹೆಚ್ಚಿನ ವಿಕೆಟ್ ಸಿಕ್ಕಿಲ್ಲ ಎಂಬ ಕೊರಗು ಒಂದು ಕಡೆಯಾದರೆ, ನೋಬಾಲ್ ಹಾಕುವ ಮೂಲಕ ದುಬಾರಿ ಆಗುತ್ತಿದ್ದಾರೆ. ಮೇ4 ಎಲ್​​ಎಸ್​​ಜಿ ವಿರುದ್ಧದ ಪಂದ್ಯದಲ್ಲಿ ಬುಮ್ರಾ ಅವರು ಲಯತಪ್ಪಿದ್ದು ಸ್ಪಷ್ಟವಾಗಿದೆ. ಹಿಮ್ಮತ್ ಸಿಂಗ್ ಅವರು ಬುಮ್ರಾ ಬಾಲಿಂಗ್​​ನಲ್ಲಿ ಕೀಪರ್ ಕ್ಯಾಚ್ ಕೊಟ್ಟರು. ದುರಾದೃಷ್ಟ ಎಂದರ ಅದು ನೋಬಾಲ್ ಆಯಿತು. ಆ ಬಳಿಕ ಒಂದು ವೈಡ್ ಹಾಕಿದರು. ಬಳಿಕ ಮತ್ತೆ ನೋಬಾಲ್ ಹಾಕಿದರು. ನಿನ್ನೆಯ ಪಂದ್ಯದಲ್ಲಿ ಮೂರು ಹಾಗೂ ಈ ಸೀಸನ್ ಅಲ್ಲಿ 9 ನೋಬಾಲ್​​ಗಳನ್ನು ಬುಮ್ರಾ ಎಸೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Raghu Sharma: ‘‘ಜೈ ಶ್ರೀ ರಾಮ್’’: ಚೊಚ್ಚಲ ಐಪಿಎಲ್ ವಿಕೆಟ್ ಸಿಕ್ಕ ಕೂಡಲೇ ಜೇಬಿನಿಂದ ಚೀಟಿ ತೆಗೆದು ತೋರಿಸಿದ ರಘು ಶರ್ಮಾ – Kannada News | Mumbai Indians bowler Raghu Sharma shows Jai Shri Ram note after taking his first IPL wicket

ಬೆಂಗಳೂರು (ಮೇ. 05): ಇಂಡಿಯನ್ ಪ್ರೀಮಿಯರ್ ಲೀಗ್ 2026 ರ 47 ನೇ ಪಂದ್ಯದಲ್ಲಿ ಬೃಹತ್ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ (Mumbai Indians) ತಂಡ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ, ಮುಂಬೈ ತಮ್ಮ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿತು. ಮುಂಬೈ 10 ಪಂದ್ಯಗಳಲ್ಲಿ 3 ರಲ್ಲಿ ಗೆದ್ದ ನಂತರ ಪಾಯಿಂಟ್ ಪಟ್ಟಿಯಲ್ಲಿ 9 ನೇ ಸ್ಥಾನದಲ್ಲಿದೆ, ಅತ್ತ ಲಕ್ನೋ ಸೂಪರ್ ಜೈಂಟ್ಸ್ 9 ಪಂದ್ಯಗಳಲ್ಲಿ 7 ರಲ್ಲಿ ಸೋತಿದ್ದು ಕೊನೆಯ ಸ್ಥಾನದಲ್ಲಿದೆ.

ರಘು ಶರ್ಮಾಗೆ ಚೊಚ್ಚಲ ವಿಕೆಟ್- ವಿಶೇಷ ಸೆಲೆಬ್ರೇಷನ್

33 ವರ್ಷದ ಸ್ಪಿನ್ನರ್ ರಘು ಶರ್ಮಾ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿದರು. ಅತ್ಯುತ್ತಮ ಬೌಲಿಂಗ್ ಪ್ರದರ್ಶನ ಕೂಡ ನೀಡಿದರು. 4 ಓವರ್‌ಗಳಲ್ಲಿ 36 ರನ್‌ಗಳಿಗೆ 1 ವಿಕೆಟ್ ಪಡೆದರು. ಅವರು ತಮ್ಮ ಸ್ಪಿನ್‌ನಿಂದ ಲಕ್ನೋ ಬ್ಯಾಟ್ಸ್‌ಮನ್‌ಗಳನ್ನು ಪರದಾಡಿದರು. ಮಧ್ಯಮ ಓವರ್‌ಗಳಲ್ಲಿ ರನ್ ದರವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಇದರ ಜೊತೆಗೆ ಈ ಪಂದ್ಯದಲ್ಲಿ ತಮ್ಮ ಮೊದಲ ಐಪಿಎಲ್ ವಿಕೆಟ್ ಪಡೆದು ಅದನ್ನು ವಿಶೇಷ ರೀತಿಯಲ್ಲಿ ಆಚರಿಸಿದರು. ಇದರ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಮೊದಲ ವಿಕೆಟ್ ಪಡೆದ ನಂತರ, ರಘು ಶರ್ಮಾ ತಮ್ಮ ಜೇಬಿನಿಂದ ಒಂದು ಚೀಟಿಯನ್ನು ಹೊರತೆಗೆದರು, ಅದರಲ್ಲಿ “ರಾಧೆ-ರಾಧೆ. ಗುರುದೇವರ ಕೃಪೆಯಿಂದ, 15 ವರ್ಷಗಳ ನೋವಿನ ಅವಧಿ ಇಂದು ಕೊನೆಗೊಂಡಿದೆ. ಈ ಅವಕಾಶವನ್ನು ನೀಡಿದ್ದಕ್ಕಾಗಿ ಮುಂಬೈ ಇಂಡಿಯನ್ಸ್ (ಬ್ಲೂ ಮತ್ತು ಗೋಲ್ಡ್) ತಂಡಕ್ಕೆ ಹೃತ್ಪೂರ್ವಕ ಧನ್ಯವಾದಗಳು. ನಾನು ಯಾವಾಗಲೂ ಕೃತಜ್ಞನಾಗಿರುತ್ತೇನೆ. ಜೈ ಶ್ರೀ ರಾಮ್.” ಎಂದು ಬರೆದಿದ್ದರು.

MI vs LSG: ಕಮ್​ಬ್ಯಾಕ್ ಅಂದ್ರೆ ಇದು: ರೋಹಿತ್ ಶರ್ಮಾ ಬಿರುಗಾಳಿಯ ಬ್ಯಾಟಿಂಗ್​ಗೆ ಉದಯವಾಯಿತು ಮೂರು ಬೃಹತ್ ದಾಖಲೆಗಳು

ರಘು ಶರ್ಮಾ ಯಾರು?

33 ವರ್ಷದ ರಘು ಶರ್ಮಾ ಜಲಂಧರ್‌ನಲ್ಲಿ ಜನಿಸಿದರು. ಅವರು ಲೆಗ್ ಸ್ಪಿನ್ನರ್. ಇಲ್ಲಿಯವರೆಗೆ ತಮ್ಮ ದೇಶೀಯ ವೃತ್ತಿಜೀವನದಲ್ಲಿ ಒಟ್ಟು 30 ಪಂದ್ಯಗಳನ್ನು ಆಡಿದ್ದಾರೆ. ಅವರು 12 ಪ್ರಥಮ ದರ್ಜೆ ಪಂದ್ಯಗಳು, 12 ಲಿಸ್ಟ್ ಎ ಪಂದ್ಯಗಳು ಮತ್ತು 6 ಟಿ 20 ಪಂದ್ಯಗಳನ್ನು ಆಡಿದ್ದಾರೆ. ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 57 ವಿಕೆಟ್‌ಗಳು, ಲಿಸ್ಟ್ ಎ ಪಂದ್ಯಗಳಲ್ಲಿ 18 ಮತ್ತು ಟಿ 20 ಪಂದ್ಯಗಳಲ್ಲಿ 5 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಪಂಜಾಬ್ ಮತ್ತು ಪುದುಚೇರಿ ಪರ ಆಡಿದ್ದಾರೆ. 2017-18 ಋತುವಿನಲ್ಲಿ ರಣಜಿ ಟ್ರೋಫಿಗೆ ಪಾದಾರ್ಪಣೆ ಮಾಡಿದರು. ಲಕ್ನೋ ವಿರುದ್ಧದ ಪಂದ್ಯವು ರಘು ಶರ್ಮಾ ಅವರ ಎರಡನೇ ಐಪಿಎಲ್ ಪಂದ್ಯವಾಗಿತ್ತು. ಅವರು ಕಳೆದ ವರ್ಷ, ಅಂದರೆ 2025 ರಲ್ಲಿ ಮಧ್ಯ-ಋತುವಿನ ಬದಲಿ ಆಟಗಾರನಾಗಿ ತಂಡವನ್ನು ಸೇರಿದರು. ರಘು ಮುಂಬೈ ಇಂಡಿಯನ್ಸ್ ಪರ ನೆಟ್ ಬೌಲರ್ ಕೂಡ ಆಗಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video:ಚುಚ್ಚಿದ್ದ ಮಚ್ಚು ತಲೆಯಲ್ಲೇ ಇದ್ದರೂ, ಆಸ್ಪತ್ರೆಯ ಆವರಣದಲ್ಲಿ ಏನೂ ಆಗಿಲ್ಲವೆಂಬಂತೆ ಮೊಬೈಲ್ ಹಿಡಿದು ಓಡಾಡಿದ ಯುವಕ – Kannada News | Man Reaches Hospital After Assault in Vikhroli, Probe Underway

ಮುಂಬೈ, ಮೇ 05: ತಲೆಗೆ ಮಚ್ಚು ಚುಚ್ಚಿದ್ದರೂ ಯುವಕನೊಬ್ಬ ಆಸ್ಪತ್ರೆಯ ಆವರಣದಲ್ಲಿ ಮೊಬೈಲ್ ಹಿಡಿದು ಏನೂ ಆಗಿಲ್ಲವೆಂಬಂತೆ ಓಡಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಮುಂಬೈನ ವಿಕ್ರೋಲಿ ಪ್ರದೇಶದಲ್ಲಿ ನಡೆದಿದೆ. ಆ ಆಯುಧವು ಆತನ ತಲೆಯಲ್ಲೇ ಸಿಲುಕಿಕೊಂಡಿತ್ತು. ಆದರೆ, ಇಂತಹ ಗಂಭೀರ ಸ್ಥಿತಿಯಲ್ಲೂ ಆತ ಮೊಬೈಲ್ ಬಳಸುತ್ತಾ ಆಸ್ಪತ್ರೆಗೆ ನಡೆದು ಬಂದಿರುವ ದೃಶ್ಯವು ನೋಡುಗರನ್ನು ಬೆಚ್ಚಿಬೀಳಿಸಿದೆ.

ಮೇ 4, 2026 ರಂದು ಮುಂಜಾನೆ ವಿಕ್ರೋಲಿಯ ಕಣ್ಣಂವರ್ ನಗರದಲ್ಲಿ ಇಸ್ಮಾ ಎಂಬ ಯುವಕನ ಮೇಲೆ ದುಷ್ಕರ್ಮಿಗಳು ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ದಾಳಿಯ ತೀವ್ರತೆಗೆ ಮಚ್ಚು ಆತನ ತಲೆಯೊಳಗೆ ಆಳವಾಗಿ ಇಳಿದಿತ್ತು. ತಲೆಗೆ ತೀವ್ರ ಗಾಯವಾಗಿದ್ದರೂ ಧೃತಿಗೆಡದ ಇಸ್ಮಾ, ಲೋಕಮಾನ್ಯ ತಿಲಕ್ ಮುನ್ಸಿಪಲ್ ಜನರಲ್ ಆಸ್ಪತ್ರೆಗೆ (ಸಿಯಾನ್ ಆಸ್ಪತ್ರೆ) ತಾನಾಗಿಯೇ ನಡೆದುಕೊಂಡು ಬಂದಿದ್ದಾರೆ.

ಆಸ್ಪತ್ರೆಯ ಟ್ರಾಮಾ ಐಸಿಯು ಹೊರಗೆ ಕಾಯುತ್ತಿದ್ದಾಗ, ತಲೆಯಲ್ಲಿ ಕುಡುಗೋಲು ಸಿಲುಕಿದ್ದರೂ ಆತ ಆಕಸ್ಮಿಕವಾಗಿ ತನ್ನ ಮೊಬೈಲ್ ಫೋನ್ ಬಳಸುತ್ತಿರುವುದು ಕಂಡುಬಂದಿದೆ. ಅತೀವ ರಕ್ತಸ್ರಾವವಾಗುತ್ತಿದ್ದರೂ ಆತ ಪೂರ್ಣ ಪ್ರಜ್ಞಾವಸ್ಥೆಯಲ್ಲಿದ್ದುದು ವೈದ್ಯಕೀಯ ಸಿಬ್ಬಂದಿಗೂ ಅಚ್ಚರಿ ಮೂಡಿಸಿದೆ.

ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮುಂಬೈನಲ್ಲಿ ಹೆಚ್ಚುತ್ತಿರುವ ಬೀದಿ ಹಿಂಸಾಚಾರ ಮತ್ತು ಕಾನೂನು ಸುವ್ಯವಸ್ಥೆಯ ಬಗ್ಗೆ ಸಾರ್ವಜನಿಕರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.ವಿಕ್ರೋಲಿ ಪೊಲೀಸರು ಈಗಾಗಲೇ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link