Category Archives: Blog

Your blog category

ತಾಯಿ ಹಿಂದೂ, ತಂದೆ ಕ್ರಿಶ್ಚಿಯನ್… ದಳಪತಿ ವಿಜಯ್ ಯಾವ ಧರ್ಮವನ್ನು ಅನುಸರಿಸುತ್ತಾರೆ? – Kannada News | Thalapathy Vijay CM: TVK’s Tamil Nadu Election Triumph and His Religious Identity Explained

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ದಳಪತಿ ವಿಜಯ್ ಅವರ ಗೆಲುವು ಅನೇಕ ರಾಜಕೀಯ ಪಕ್ಷಗಳಿಗೆ ಶಾಕ್ ನೀಡಿದೆ. ದಳಪತಿ ವಿಜಯ್ ಅವರ ಟಿವಿಕೆ ಪಕ್ಷ 108 ಸ್ಥಾನಗಳನ್ನು ಗೆದ್ದಿದೆ. ಹೀಗಾಗಿ, ವಿಜಯ್ ತಮಿಳುನಾಡಿನ ಮುಂದಿನ ಮುಖ್ಯಮಂತ್ರಿಯಾಗೋದು ಖಚಿತ ಎನ್ನಲಾಗುತ್ತಿದೆ. ಚುನಾವಣೆಯಲ್ಲಿ ಟಿವಿಕೆ ಅವರ ವಿಜಯ್ ಅವರ ಕುಟುಂಬವೂ ಸಂತೋಷವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವಿಜಯ್ ಟ್ರೆಂಡಿಂಗ್‌ನಲ್ಲಿದ್ದಾರೆ. ಕೆಲವರು ಇಂಟರ್ನೆಟ್‌ನಲ್ಲಿ ಅವರ ಪೂರ್ಣ ಹೆಸರನ್ನು ಹುಡುಕುತ್ತಿದ್ದರೆ, ಇತರರು ಅವರ ಧರ್ಮದ ಬಗ್ಗೆ ಕೇಳುತ್ತಿದ್ದಾರೆ.

ದಕ್ಷಿಣ ಭಾರತದ ಸಿನಿಮಾ (ಕಾಲಿವುಡ್) ಸೂಪರ್‌ಸ್ಟಾರ್ ದಳಪತಿ ವಿಜಯ್ ಅವರ ಪೂರ್ಣ ಹೆಸರು ಜೋಸೆಫ್ ವಿಜಯ್ ಚಂದ್ರಶೇಖರ್. ಅವರ ಪೂರ್ಣ ಹೆಸರು ಯಾವಾಗಲೂ ಅವರ ಧರ್ಮದ ಬಗ್ಗೆ ಜನರಲ್ಲಿ ಗೊಂದಲವನ್ನುಂಟುಮಾಡಿದೆ. ಈ ಕಾರಣದಿಂದಾಗಿ, ಹೆಚ್ಚಿನ ಅಭಿಮಾನಿಗಳಿಗೆ ಅವರ ಧರ್ಮ ತಿಳಿದಿಲ್ಲ.

ದಳಪತಿ ವಿಜಯ್ ತಮಿಳುನಾಡಿನ ಕ್ಯಾಥೋಲಿಕ್ ಕ್ರಿಶ್ಚಿಯನ್ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಎಸ್.ಎ. ಚಂದ್ರಶೇಖರ್ ತಮಿಳು ಚಿತ್ರರಂಗದ ಪ್ರಸಿದ್ಧ ನಿರ್ದೇಶಕರು. ವಿಜಯ್ ಅವರನ್ನು ಸೂಪರ್ ಸ್ಟಾರ್ ಆಗಿಸುವಲ್ಲಿ ಅವರ ಪಾತ್ರವೂ ಇದೆ. ವಿಜಯ್ ಅವರ ತಾಯಿ ಶೋಭಾ ಚಂದ್ರಶೇಖರ್ ಹಿನ್ನೆಲೆ ಗಾಯಕಿಯಾಗಿದ್ದು, ಹಿಂದೂ ಧರ್ಮಕ್ಕೆ ಸೇರಿದವರು. ತಮ್ಮ ಹೆತ್ತವರು ಪ್ರೇಮ ವಿವಾಹವಾಗಿದ್ದರು ಎಂದು ವಿಜಯ್ ಸಂದರ್ಶನವೊಂದರಲ್ಲಿ ಹೇಳಿದರು.

ವಿಜಯ್ ಅವರ ತಂದೆ-ತಾಯಂದಿರು ಕ್ರಿಶ್ಚಿಯನ್ ಮತ್ತು ಹಿಂದೂ ಧರ್ಮಗಳಿಗೆ ಸೇರಿದವರಾಗಿದ್ದರೂ, ಸಾರ್ವಜನಿಕವಾಗಿ ವಿಜಯ್ ಅವರು ತಮ್ಮ ಧಾರ್ಮಿಕತೆಗಿಂತ ಮಾನವೀಯ ಮತ್ತು ಸಾಮಾಜಿಕ ಮೌಲ್ಯಗಳ ವಿಷಯದಲ್ಲಿ ತಮ್ಮನ್ನು ತಾವು ಹೆಚ್ಚು ಪ್ರಸ್ತುತಪಡಿಸಿಕೊಳ್ಳಲು ಇಷ್ಟಪಡುತ್ತಾರೆ. ಇದನ್ನು ಅವರ ಕುಟುಂಬಗಳ ಸಂಸ್ಕೃತಿ ಮತ್ತು ಧಾರ್ಮಿಕ ಮೌಲ್ಯಗಳಲ್ಲಿ ಕಾಣಬಹುದು. ವಿಜಯ್ ಆಗಾಗ್ಗೆ ತಮ್ಮ ತಾಯಿಯೊಂದಿಗೆ ಹಿಂದೂ ದೇವಾಲಯಗಳಿಗೆ ಹೋಗುತ್ತಾರೆ. ಅವರು ಆಗಾಗ್ಗೆ ಕುತ್ತಿಗೆಗೆ ರುದ್ರಾಕ್ಷಿ ಹಾರವನ್ನು ಧರಿಸಿರುವುದು ಕಂಡುಬರುತ್ತದೆ.

ಇದನ್ನೂ ಓದಿ: ‘ಹಾಗಾಗಿದ್ದರೆ..’; ವಿಜಯ್ ಗೆಲುವಿನಿಂದ ರಜನಿ ಫ್ಯಾನ್ಸ್​​ಗೆ ಭಾರಿ ನಿರಾಸೆ

ವಿಜಯ್ ಅವರ ತಾಯಿ ಸಾಯಿಬಾಬಾ ಅವರ ದೊಡ್ಡ ಭಕ್ತೆ. ಅವರು ಈ ಹಿಂದೆ ಚೆನ್ನೈನ ಕೊರಟ್ಟೂರಿನಲ್ಲಿ ಸಾಯಿಬಾಬಾ ಅವರ ಭವ್ಯ ದೇವಾಲಯವನ್ನು ನಿರ್ಮಿಸಿದ್ದರು. ಸಾಯಿಬಾಬಾ ಅವರ ದೇವಾಲಯವನ್ನು ನಿರ್ಮಿಸಬೇಕೆಂಬುದು ಅವರ ತಾಯಿಯ ಬಯಕೆಯಾಗಿತ್ತು. ಯಾವುದೇ ಪ್ರಚಾರವಿಲ್ಲದೆ ವಿಜಯ್ ತನ್ನ ತಾಯಿಯ ಆಸೆಯನ್ನು ಪೂರೈಸಿದರು. ಪವಿತ್ರ ಸ್ಥಳವು ಅವರಿಗೆ ದೇವಾಲಯಕ್ಕಿಂತ ಹೆಚ್ಚಿನದಾಗಿದೆ ಎಂದು ವಿಜಯ್ ಅವರ ತಾಯಿ ಹೇಳುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 11:17 am, Tue, 5 May 26

Source link

ಪೀಣ್ಯ ಫ್ಲೈಓವರ್​ ಬಂದ್​ನಿಂದ ವಾಹನ ಸವಾರರು ಕಂಗಾಲು: 10 ನಿಮಿಷದಲ್ಲಿ ಹೋಗೋ ದಾರಿಗೆ 1 ಗಂಟೆ ಬೇಕೆಂದು ಅಳಲು – Kannada News | Peenya Flyover Closure Causes Traffic Chaos: Commuters Spend 1 Hour for a 10 Minute Route

ಬೆಂಗಳೂರು, ಮೇ 5: ಬೆಂಗಳೂರಿನ ಪೀಣ್ಯ ಎಲಿವೇಟೆಡ್ ಫ್ಲೈಓವರ್​ನಲ್ಲಿ ನಾಲ್ಕು ದಿನಗಳ ಕಾಲ ಸಂಚಾರ ನಿರ್ಬಂಧ ಹೇರಲಾಗಿದ್ದು, ಇದು ನಗರದಲ್ಲಿ ತೀವ್ರ ಟ್ರಾಫಿಕ್ ಸಮಸ್ಯೆಗೆ ಕಾರಣವಾಗಿದೆ. ಡಾ. ಶಿವಕುಮಾರ ಸ್ವಾಮೀಜಿ ಫ್ಲೈಓವರ್ ಮೇ 8ರ ಬೆಳಿಗ್ಗೆ 11 ಗಂಟೆಯವರೆಗೆ ಸಂಚಾರಕ್ಕೆ ಲಭ್ಯವಿರುವುದಿಲ್ಲ. ಫ್ಲೈಓವರ್‌ನಲ್ಲಿರುವ 1422 ಕೇಬಲ್‌ಗಳ ದುರಸ್ತಿ ಮತ್ತು ಲೋಡ್ ಪರೀಕ್ಷೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಸಾಮಾನ್ಯವಾಗಿ 15-20 ನಿಮಿಷಗಳಲ್ಲಿ ಸಂಚರಿಸಬಹುದಾದ ಮಾರ್ಗವನ್ನು ಈಗ ಕೆಳರಸ್ತೆಯಲ್ಲಿ ಸಂಚರಿಸಲು ಸುಮಾರು ಒಂದೂವರೆ ಗಂಟೆ ಬೇಕಾಗುತ್ತಿದೆ ಎಂದು ವಾಹನ ಸವಾರರು ಅಳಲು ತೋಡಿಕೊಂಡಿದ್ದಾರೆ. ಇದರಿಂದ ಗೊರಗುಂಟೆಪಾಳ್ಯ, ಪೀಣ್ಯ, ಜಾಲಹಳ್ಳಿ, ಮತ್ತು ಎಸ್‌ಆರ್‌ಎಸ್ ಜಂಕ್ಷನ್‌ಗಳ ಸುತ್ತಮುತ್ತ ವ್ಯಾಪಕ ಟ್ರಾಫಿಕ್ ಜಾಮ್ ಉಂಟಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಂಗಾಳದಲ್ಲಿ ಕೇಸರಿ ಕ್ರಾಂತಿ: ದೀದಿ ಸಾಮ್ರಾಜ್ಯ ಪತನ, ಬಿಜೆಪಿ ಪಟ್ಟಾಭಿಷೇಕಕ್ಕೆ ಕ್ಷಣಗಣನೆ, ಯಾರ ಪಾಲಾಗಲಿದೆ ಮುಖ್ಯಮಂತ್ರಿ ಗದ್ದುಗೆ? – Kannada News | Saffron Surge in Bengal: BJP Forms Govt, Mamata’s Reign Ends, Who is CM

ಸುವೇಂದು ಅಧಿಕಾರಿ-ದಿಲೀಪ್ ಘೋಷ್ Image Credit source: AnandaBazar

ಕೋಲ್ಕತ್ತಾ, ಮೇ 05: ಪಶ್ಚಿಮ ಬಂಗಾಳ(West Bengal)ದ ಚುನಾವಣಾ ಫಲಿತಾಂಶವು ಇಡೀ ದೇಶದ ಗಮನ ಸೆಳೆದಿದೆ. ಸೋಮವಾರ ಪ್ರಕಟವಾದ ಫಲಿತಾಂಶದಲ್ಲಿ ಬಿಜೆಪಿ 206 ಸ್ಥಾನಗಳನ್ನು ಗೆಲ್ಲುವ ಮೂಲಕ 148ರ ಮ್ಯಾಜಿಕ್ ಸಂಖ್ಯೆಯನ್ನು ಸುಲಭವಾಗಿ ದಾಟಿದೆ. ಈ ಮೂಲಕ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಆಳ್ವಿಕೆಗೆ ತೆರೆ ಬಿದ್ದಿದೆ. ಈಗ ಎಲ್ಲರ ಕುತೂಹಲವಿರುವುದು ಒಂದೇ ಪ್ರಶ್ನೆಯ ಮೇಲೆ ಬಂಗಾಳದ ಮೊದಲ ಬಿಜೆಪಿ ಮುಖ್ಯಮಂತ್ರಿ ಯಾರು?

ಸುವೇಂದು ಅಧಿಕಾರಿ

ಒಂದು ಕಾಲದಲ್ಲಿ ಮಮತಾ ಬ್ಯಾನರ್ಜಿಯವರ ಆಪ್ತರಾಗಿದ್ದ ಸುವೇಂದು ಅಧಿಕಾರಿ, ಇಂದು ಅವರ ಪಾಲಿಗೆ ರಾಜಕೀಯ ಸಿಂಹಸ್ವಪ್ನವಾಗಿದ್ದಾರೆ. 2021ರಲ್ಲಿ ನಂದಿಗ್ರಾಮದಲ್ಲಿ ಮಮತಾ ಅವರನ್ನು ಸೋಲಿಸಿದ್ದ ಅವರು, ಈಗ 2026ರಲ್ಲಿ ಭಬಾನಿಪುರದಲ್ಲೂ ತಮ್ಮ ಮಾಜಿ ಬಾಸ್ ವಿರುದ್ಧ ಜಯಭೇರಿ ಬಾರಿಸಿದ್ದಾರೆ. ನುಸುಳುಕೋರರ ಸಮಸ್ಯೆ ಮತ್ತು ಕಾನೂನು ಸುವ್ಯವಸ್ಥೆಯ ವಿಷಯದಲ್ಲಿ ಮಮತಾ ಸರ್ಕಾರವನ್ನು ಕಟ್ಟಿಹಾಕಿದ ಸುವೇಂದು, ಜನರ ನಡುವಿನ ನಾಯಕನಾಗಿ ಗುರುತಿಸಿಕೊಂಡಿದ್ದಾರೆ.

ದಿಲೀಪ್ ಘೋಷ್: ಸಂಘಟನಾ ಚತುರ
ಬಿಜೆಪಿಯನ್ನು ಶೂನ್ಯದಿಂದ ಈ ಮಟ್ಟಕ್ಕೆ ತಂದ ಕೀರ್ತಿ ಮಾಜಿ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ಅವರಿಗೆ ಸಲ್ಲುತ್ತದೆ. ಆರ್‌ಎಸ್‌ಎಸ್‌ನ ಕಟ್ಟಾ ಅನುಯಾಯಿಯಾದ ಇವರು, ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ಸಂಘದ ಜವಾಬ್ದಾರಿ ಹೊತ್ತಿದ್ದರು. ಮಾಜಿ ಆರ್‌ಎಸ್‌ಎಸ್ ಮುಖ್ಯಸ್ಥ ಕೆ.ಎಸ್. ಸುದರ್ಶನ್ ಅವರ ಸಹಾಯಕರಾಗಿಯೂ ಕೆಲಸ ಮಾಡಿದ ಅನುಭವ ಇವರಿಗಿದೆ. 2019ರ ಲೋಕಸಭಾ ಚುನಾವಣೆಯಲ್ಲಿ 18 ಸ್ಥಾನಗಳನ್ನು ಗೆಲ್ಲಿಸುವ ಮೂಲಕ ಬಿಜೆಪಿಯ ಅಡಿಪಾಯವನ್ನು ಬಲಪಡಿಸಿದವರು ಇವರು.

ಮತ್ತಷ್ಟು ಓದಿ: ಬಂಗಾಳ ನೆಲದಲ್ಲಿ ಹೊಸ ಸೂರ್ಯೋದಯವಾಗಿದೆ: ಇದೀಗ ಬದಲಾವಣೆ ಪರ್ವ ಶುರು ಎಂದ ಮೋದಿ

ಸಮಿಕ್ ಭಟ್ಟಾಚಾರ್ಯ: ನಿಷ್ಠಾವಂತ ಹೋರಾಟಗಾರ
ಆರ್‌ಎಸ್‌ಎಸ್ ಹಿನ್ನೆಲೆಯಿಂದ ಬಂದಿರುವ ಸಮಿಕ್ ಭಟ್ಟಾಚಾರ್ಯ, ಬಂಗಾಳದಲ್ಲಿ ಬಿಜೆಪಿ ಅಸ್ತಿತ್ವಕ್ಕಾಗಿ ಹೋರಾಡಿದ ಹಿರಿಯ ನಾಯಕರಲ್ಲಿ ಒಬ್ಬರು. 2014ರ ಉಪಚುನಾವಣೆಯಲ್ಲಿ ಬಸಿರ್ಹತ್ ದಕ್ಷಿಣ ಕ್ಷೇತ್ರದಿಂದ ಗೆಲ್ಲುವ ಮೂಲಕ ಪಶ್ಚಿಮ ಬಂಗಾಳದ ಮೊದಲ ಚುನಾಯಿತ ಬಿಜೆಪಿ ಶಾಸಕ ಎಂಬ ದಾಖಲೆ ಬರೆದವರು. ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿರುವ ಇವರ ಹೆಸರು ಕೂಡ ಸಿಎಂ ರೇಸ್‌ನಲ್ಲಿದೆ.

ಒಟ್ಟು 206 ಸ್ಥಾನಗಳ ಭರ್ಜರಿ ಜಯದೊಂದಿಗೆ ಬಿಜೆಪಿ ಬಂಗಾಳದಲ್ಲಿ ಹೊಸ ಯುಗ ಆರಂಭಿಸಿದೆ. ಸುವೇಂದು ಅಧಿಕಾರಿಯವರ ಜನಪ್ರಿಯತೆಯೋ ಅಥವಾ ದಿಲೀಪ್ ಘೋಷ್, ಸಮಿಕ್ ಭಟ್ಟಾಚಾರ್ಯ ಅವರ ಸಂಘಟನಾ ನಿಷ್ಠೆಯೋ? ಹೈಕಮಾಂಡ್ ಯಾರಿಗೆ ಮನ್ನಣೆ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ. ಅಂತಿಮವಾಗಿ, ಬಂಗಾಳದ ಮಣ್ಣಿನ ಮಗನೇ ಈ ಐತಿಹಾಸಿಕ ಜವಾಬ್ದಾರಿಯನ್ನು ವಹಿಸಿಕೊಳ್ಳುವುದು ಖಚಿತವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Gold Rates: ಚಿನ್ನದ ಬೆಲೆ ಎರಡು ದಿನದಲ್ಲಿ 160 ರೂ ಇಳಿಕೆ; ಇಲ್ಲಿದೆ ದರಪಟ್ಟಿ – Kannada News | Gold Price Today on 5th May 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಮೇ 5: ಚಿನ್ನದ ಬೆಲೆ ಇವತ್ತೂ ಕುಸಿದಿದೆ. ನಿನ್ನೆ ಗ್ರಾಮ್​ಗೆ 120 ರೂ ಇಳಿದಿದ್ದ ಬಂಗಾರದ ದರ (Gold Rates) ಇವತ್ತು ಮಂಗಳವಾರ 40 ರೂ ತಗ್ಗಿದೆ. ಅಪರಂಜಿ ಚಿನ್ನದ ಬೆಲೆ ಮತ್ತೊಮ್ಮೆ 15,000 ರೂ ಒಳಗೆ ಇಳಿದಿದೆ. ವಿದೇಶಗಳಲ್ಲೂ ಹೆಚ್ಚಿನ ಕಡೆ ಸ್ವರ್ಣ ಬೆಲೆ ಕಡಿಮೆಗೊಂಡಿದೆ. ಬೆಳ್ಳಿ ಬೆಲೆಯಲ್ಲೂ ಇವತ್ತು ಭರ್ಜರಿ ಇಳಿಕೆ ಆಗಿದೆ. ಗ್ರಾಮ್​ಗೆ 10 ರೂನಷ್ಟು ಕಡಿಮೆ ಆಗಿದೆ. ಬೆಂಗಳೂರಿನಲ್ಲಿ ಅದರ ಬೆಲೆ 265 ರೂನಿಂದ 255 ರೂಗೆ ಇಳಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,36,750 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,49,180 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 25,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,36,750 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 25,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 26,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮೇ 5ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,918 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,675 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,189 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 255 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,918 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,675 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 255 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,675 ರೂ
  • ಚೆನ್ನೈ: 13,820 ರೂ
  • ಮುಂಬೈ: 13,675 ರೂ
  • ದೆಹಲಿ: 13,690 ರೂ
  • ಕೋಲ್ಕತಾ: 13,675 ರೂ
  • ಕೇರಳ: 13,675 ರೂ
  • ಅಹ್ಮದಾಬಾದ್: 13,680 ರೂ
  • ಜೈಪುರ್: 13,690 ರೂ
  • ಲಕ್ನೋ: 13,690 ರೂ
  • ಭುವನೇಶ್ವರ್: 13,675 ರೂ

ಇದನ್ನೂ ಓದಿ: ದೆಹಲಿಯಲ್ಲಿ 9 ಮಂದಿ ಬಲಿತೆಗೆದ ಎಸಿ ಸ್ಫೋಟ; ಏರ್ ಕಂಡೀಷನರ್ ಸ್ಫೋಟಕ್ಕೆ ಕಾರಣವೇನು, ನಿಯಂತ್ರಣ ಹೇಗೆ?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 553 ರಿಂಗಿಟ್ (13,303 ರುಪಾಯಿ)
  • ದುಬೈ: 502.25 ಡಿರಾಮ್ (13,041 ರುಪಾಯಿ)
  • ಅಮೆರಿಕ: 142.50 ಡಾಲರ್ (13,590 ರುಪಾಯಿ)
  • ಸಿಂಗಾಪುರ: 180.80 ಸಿಂಗಾಪುರ್ ಡಾಲರ್ (13,501 ರುಪಾಯಿ)
  • ಕತಾರ್: 507.50 ಕತಾರಿ ರಿಯಾಲ್ (13,277 ರೂ)
  • ಸೌದಿ ಅರೇಬಿಯಾ: 512 ಸೌದಿ ರಿಯಾಲ್ (13,018 ರುಪಾಯಿ)
  • ಓಮನ್: 54.05 ಒಮಾನಿ ರಿಯಾಲ್ (13,387 ರುಪಾಯಿ)
  • ಕುವೇತ್: 41.66 ಕುವೇತಿ ದಿನಾರ್ (12,970 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 255 ರೂ
  • ಚೆನ್ನೈ: 265 ರೂ
  • ಮುಂಬೈ: 255 ರೂ
  • ದೆಹಲಿ: 255 ರೂ
  • ಕೋಲ್ಕತಾ: 255 ರೂ
  • ಕೇರಳ: 265 ರೂ
  • ಅಹ್ಮದಾಬಾದ್: 255 ರೂ
  • ಜೈಪುರ್: 255 ರೂ
  • ಲಕ್ನೋ: 255 ರೂ
  • ಭುವನೇಶ್ವರ್: 265 ರೂ
  • ಪುಣೆ: 255

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಪೀಣ್ಯ ಫ್ಲೈಓವರ್ ಬಂದ್; ಗೊರಗುಂಟೆಪಾಳ್ಯದಲ್ಲಿ ಫುಲ್ ಟ್ರಾಫಿಕ್ ಜಾಮ್! – Kannada News | Peenya Elevated Flyover Closed for 4 Days, Tumakuru Road Faces Major Traffic Jams in Goraguntepalya

ಬೆಂಗಳೂರು, ಮೇ 05: ಬೆಂಗಳೂರಿನ ಪೀಣ್ಯ ಎಲಿವೇಟೆಡ್ ಫ್ಲೈಓವರ್ ಅನ್ನು ಇಂದಿನಿಂದ ಮೇ 8ರವರೆಗೆ ಒಟ್ಟು 4 ದಿನಗಳ ಕಾಲ ಬಂದ್ ಮಾಡಲಾಗಿದೆ. ಫ್ಲೈಓವರ್‌ನ ಕೇಬಲ್ ಅಳವಡಿಕೆ ದುರಸ್ತಿ ಕಾಮಗಾರಿ ಮತ್ತು ಲೋಡ್ ಟೆಸ್ಟ್ ನಡೆಸುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪೀಣ್ಯ ಫ್ಲೈಓವರ್ ಬಂದ್ ಆಗಿರುವ ಕಾರಣ ತುಮಕೂರು ರಸ್ತೆಯಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದೆ. ಗೊರಗುಂಟೆಪಾಳ್ಯದವರೆಗೆ ವಾಹನಗಳು ಸಾಲುಗಟ್ಟಿ ನಿಂತಿವೆ. ಈ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದ ವಾಹನ ಸವಾರರು ತಮ್ಮ ಗಮ್ಯಸ್ಥಾನ ತಲುಪಲು ಪರದಾಡುತ್ತಿದ್ದಾರೆ. ಸಂಚಾರ ದಟ್ಟಣೆಯಿಂದಾಗಿ ಪ್ರಯಾಣಿಕರು ಅನಗತ್ಯ ವಿಳಂಬ ಮತ್ತು ಅನಾನುಕೂಲತೆಯನ್ನು ಎದುರಿಸುತ್ತಿದ್ದಾರೆ. ಸಾರ್ವಜನಿಕರು ಸಹಕರಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬೆಂಗಳೂರಿನ ಪೀಣ್ಯ ಎಲಿವೇಟೆಡ್ ಫ್ಲೈಓವರ್​ 4 ದಿನ ಬಂದ್: ತುಮಕೂರು ರಸ್ತೆಯಲ್ಲಿ ಭಾರಿ ಟ್ರಾಫಿಕ್ ಜಾಮ್ – Kannada News | Peenya Flyover Closure: Massive Traffic Jam on Tumkur Road, Bengaluru as Flyover Shuts for 4 Days

ಬೆಂಗಳೂರು, ಮೇ 5: ಬೆಂಗಳೂರಿನ ಪೀಣ್ಯ ಎಲಿವೇಟೆಡ್ ಫ್ಲೈಓವರ್ ಅನ್ನು ಇಂದಿನಿಂದ ಮೇ 8ರವರೆಗೆ ಒಟ್ಟು 4 ದಿನಗಳ ಕಾಲ ಬಂದ್ ಮಾಡಲಾಗಿದೆ. ಫ್ಲೈಓವರ್‌ನ ಕೇಬಲ್ ಅಳವಡಿಕೆ ದುರಸ್ತಿ ಕಾಮಗಾರಿ ಮತ್ತು ಲೋಡ್ ಟೆಸ್ಟ್ ನಡೆಸುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ. ಪೀಣ್ಯ ಫ್ಲೈಓವರ್ ಬಂದ್ ಆಗಿರುವ ಕಾರಣ ತುಮಕೂರು ರಸ್ತೆಯಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದೆ. ಗೊರಗುಂಟೆಪಾಳ್ಯದವರೆಗೆ ವಾಹನಗಳು ಸಾಲುಗಟ್ಟಿ ನಿಂತಿವೆ. ಈ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದ ವಾಹನ ಸವಾರರು ತಮ್ಮ ಗಮ್ಯಸ್ಥಾನ ತಲುಪಲು ಪರದಾಡುತ್ತಿದ್ದಾರೆ. ಸಂಚಾರ ದಟ್ಟಣೆಯಿಂದಾಗಿ ಪ್ರಯಾಣಿಕರು ಅನಗತ್ಯ ವಿಳಂಬ ಮತ್ತು ಅನಾನುಕೂಲತೆಯನ್ನು ಎದುರಿಸುತ್ತಿದ್ದಾರೆ. ಸಾರ್ವಜನಿಕರು ಸಹಕರಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಬ್ರೆಜಿಲ್​ನ ಕಟ್ಟಡಕ್ಕೆ ಅಪ್ಪಳಿಸಿದ ವಿಮಾನ, ಮೂವರು ಸಾವು – Kannada News | Small Aircraft Crashes into Building in Belo Horizonte, Three Dead

ಬ್ರೆಜಿಲ್, ಮೇ 05: ಐದು ಜನರನ್ನು ಹೊತ್ತೊಯ್ಯುತ್ತಿದ್ದ ಸಣ್ಣ ವಿಮಾನವೊಂದು ಆಗ್ನೇಯ ಬ್ರೆಜಿಲ್‌ನ ಬೆಲೊ ಹೊರಿಜಾಂಟೆಯಲ್ಲಿ ಸೋಮವಾರ ವಸತಿ ಕಟ್ಟಡಕ್ಕೆ ಅಪ್ಪಳಿಸಿದ ಪರಿಣಾಮ ಮೂವರು ಸಾವನ್ನಪ್ಪಿ, ಇಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ವಿಮಾನವು ಕಟ್ಟಡಕ್ಕೆ ಡಿಕ್ಕಿ ಹೊಡೆದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತೀವ್ರವಾಗಿ ಗಾಯಗೊಂಡ ವ್ಯಕ್ತಿ ಕಟ್ಟಡದೊಳಗಿನ ಮೆಟ್ಟಿಲುಗಳ ಮೇಲೆ ಕುಳಿತಿರುವುದನ್ನು ದೃಶ್ಯಗಳಲ್ಲಿ ಕಾಣಬಹುದು.ನಗರ ಕೇಂದ್ರದಿಂದ ಸುಮಾರು 8 ಕಿ.ಮೀ ದೂರದಲ್ಲಿರುವ ಪಂಪುಲ್ಹಾ ವಿಮಾನ ನಿಲ್ದಾಣದಿಂದ ವಿಮಾನ ಹಾರಿದ ಸ್ವಲ್ಪ ಸಮಯದ ನಂತರ ಈ ಘಟನೆ ಸಂಭವಿಸಿದೆ. ಸಾವೊ ಪಾಲೊಗೆ ತೆರಳುತ್ತಿದ್ದ ವಿಮಾನವು ಪತನಗೊಂಡಿತ್ತು. ಅಪಘಾತದಲ್ಲಿ ಪೈಲಟ್ ಮತ್ತು ಸಹ-ಪೈಲಟ್ ಇಬ್ಬರೂ ತಕ್ಷಣವೇ ಸಾವನ್ನಪ್ಪಿದ್ದಾರೆ. ಮೂವರ ಸ್ಥಿತಿ ಗಂಭೀರವಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಜಯದೇವ ಆಯ್ತು, ಈಗ ಬೆಂಗಳೂರಿನ ಮತ್ತೊಂದು ಫ್ಲೈ ಓವರ್ ಧರೆಗೆ: ಏನಿದು ಬಿ-ಸ್ಮೈಲ್ ಹೊಸ ಪ್ಲಾನ್? – Kannada News | Bengaluru to Raze IOC Junction Flyover: Rs 436 Cr Elevated Rotary Plan for SMVT Connectivity

ಜಯದೇವ ಆಯ್ತು, ಈಗ ಬೆಂಗಳೂರಿನ ಮತ್ತೊಂದು ಫ್ಲೈ ಓವರ್ ಧರೆಗೆ

ಬೆಂಗಳೂರು, ಮೇ 05: ಜಯದೇವ ಮತ್ತು ಡಾಲ್ಮಿಯಾ ಫ್ಲೈ ಓವರ್‌ಗಳ ತೆರವು ಕಾರ್ಯಾಚರಣೆಯ ಬೆನ್ನಲ್ಲೇ, ಈಗ ಪೂರ್ವ ಬೆಂಗಳೂರಿನ ಮತ್ತೊಂದು ಪ್ರಮುಖ ಮೇಲ್ಸೇತುವೆ (Flyover) ಇತಿಹಾಸ ಸೇರಲು ಸಿದ್ಧವಾಗಿದೆ. ಐಒಸಿ ಜಂಕ್ಷನ್‌ನಲ್ಲಿರುವ ಹಳೆಯ ಫ್ಲೈ ಓವರ್ ಅನ್ನು ಕೆಡವಿ, ಅಲ್ಲಿ 436 ಕೋಟಿ ರೂಪಾಯಿ ವೆಚ್ಚದಲ್ಲಿ ಬೃಹತ್ ಎಲಿವೇಟೆಡ್ ರೋಟರಿ ಫ್ಲೈ ಓವರ್ ನಿರ್ಮಿಸಲು ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಬಿ-ಸ್ಮೈಲ್) ಯೋಜನೆ ರೂಪಿಸಿದೆ. 2001-02ರ ಅವಧಿಯಲ್ಲಿ ರೈಲ್ವೇ ಇಲಾಖೆಯಿಂದ ನಿರ್ಮಾಣವಾಗಿದ್ದ ಈ ಹಳೆಯ ಸೇತುವೆಯು ಹೊಸ ವಿನ್ಯಾಸದ ಸುಗಮ ಸಂಚಾರಕ್ಕೆ ಅಡ್ಡಿಯಾಗಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಯೋಜನೆಯ ವೆಚ್ಚ ಮತ್ತು ವಿನ್ಯಾಸದ ಬದಲಾವಣೆ

ಆರಂಭದಲ್ಲಿ ಈ ರೋಟರಿ ಫ್ಲೈ ಓವರ್ ಯೋಜನೆಯನ್ನು 263 ಕೋಟಿ ರೂ. ವೆಚ್ಚದಲ್ಲಿ ಅಂದಾಜಿಸಲಾಗಿತ್ತು. ಆದರೆ ಕಾಮಗಾರಿ ವಿಳಂಬ ಮತ್ತು ಯೋಜನೆಯ ವಿನ್ಯಾಸದಲ್ಲಿ ಮಾಡಲಾದ ಮಹತ್ವದ ಬದಲಾವಣೆಗಳಿಂದಾಗಿ ಈಗ ಇದರ ವೆಚ್ಚ 436 ಕೋಟಿ ರೂ.ಗೆ ಏರಿಕೆಯಾಗಿದೆ. ಮಾರುತಿ ಸೇವಾನಗರ ರಸ್ತೆಯಿಂದ ಸುಮಾರು 1.5 ಕಿಲೋಮೀಟರ್ ಉದ್ದದ ಹೆಚ್ಚುವರಿ ಫ್ಲೈ ಓವರ್ ಅನ್ನು ಈ ಯೋಜನೆಗೆ ಸೇರ್ಪಡೆಗೊಳಿಸಿರುವುದು ಈ ದುಬಾರಿ ವೆಚ್ಚಕ್ಕೆ ಪ್ರಮುಖ ಕಾರಣವಾಗಿದೆ. ಜಿಎಸ್‌ಟಿ ಮತ್ತು ಇತರ ತಾಂತ್ರಿಕ ಘಟಕಗಳ ಸೇರ್ಪಡೆಯೂ ಅಂತಿಮ ಅಂದಾಜು ಮೊತ್ತದ ಮೇಲೆ ಪ್ರಭಾವ ಬೀರಿದೆ ಎಂದು ಬಿ-ಸ್ಮೈಲ್ ಅಧಿಕಾರಿಗಳು ತಿಳಿಸಿದ್ದಾರೆ.

ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ಗೆ ಸುಗಮ ಕನೆಕ್ಟಿವಿಟಿ

2022ರಲ್ಲಿ ಉದ್ಘಾಟನೆಗೊಂಡ ಸರ್ ಎಂ. ವಿಶ್ವೇಶ್ವರಯ್ಯ ರೈಲ್ವೇ ಟರ್ಮಿನಲ್ (SMVT) ಸದ್ಯ ಕಿರಿದಾದ ರಸ್ತೆಗಳು ಮತ್ತು ಸಂಪರ್ಕದ ಕೊರತೆಯಿಂದಾಗಿ ಪ್ರಯಾಣಿಕರಿಗೆ ತಲೆನೋವಾಗಿ ಪರಿಣಮಿಸಿದೆ. ಹೊಸ ಎಲಿವೇಟೆಡ್ ರೋಟರಿ ಫ್ಲೈ ಓವರ್ ನಿರ್ಮಾಣವಾದರೆ, ಹಳೆ ಮದ್ರಾಸ್ ರಸ್ತೆ, ಕಮ್ಮನಹಳ್ಳಿ, ಬಾಣಸವಾಡಿ ಮತ್ತು ಬೈಯಪ್ಪನಹಳ್ಳಿ ಭಾಗಗಳಿಂದ ಬರುವ ಜನರಿಗೆ ಯಾವುದೇ ಅಡೆತಡೆಯಿಲ್ಲದೆ ರೈಲ್ವೇ ನಿಲ್ದಾಣ ತಲುಪಲು ಸಾಧ್ಯವಾಗುತ್ತದೆ. ಇದರ ಜೊತೆಗೆ ಬೈಯಪ್ಪನಹಳ್ಳಿ ರಸ್ತೆಯಲ್ಲಿ ಹೊಸ ರೈಲ್ವೇ ಮೇಲ್ಸೇತುವೆಯನ್ನು ಕೂಡ ನಿರ್ಮಿಸಲು ಉದ್ದೇಶಿಸಲಾಗಿದ್ದು, ಇದು ಎಸ್.ವಿ. ರಸ್ತೆ ಮೆಟ್ರೋ ನಿಲ್ದಾಣದ ಕಡೆಯಿಂದ ಬರುವವರಿಗೂ ಸಹಕಾರಿಯಾಗಲಿದೆ.

ಇದನ್ನೂ ಓದಿ ವಾಹನ ಸವಾರರೇ ಗಮನಿಸಿ: ಇಂದಿನಿಂದ 4 ದಿನ ಪೀಣ್ಯ ಫ್ಲೈಓವರ್ ಬಂದ್! ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ

ಸಂಚಾರ ದಟ್ಟಣೆ ಮತ್ತು ಪರ್ಯಾಯ ಮಾರ್ಗಗಳ ಸವಾಲು

ಈ ಬೃಹತ್ ಕಾಮಗಾರಿ ಆರಂಭವಾದರೆ ದೊಡ್ಡ ಬಾಣಸವಾಡಿ ರಸ್ತೆ, ಕಮ್ಮನಹಳ್ಳಿ ಮುಖ್ಯ ರಸ್ತೆ ಮತ್ತು ಬೈಯಪ್ಪನಹಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗುವ ಆತಂಕವಿದೆ. ಈಗಾಗಲೇ ಟ್ರಾಫಿಕ್ ಸಮಸ್ಯೆಯಿಂದ ಕಂಗೆಟ್ಟಿರುವ ಈ ಭಾಗದ ಜನರಿಗೆ ಕಾಮಗಾರಿಯ ಅವಧಿಯಲ್ಲಿ ಮತ್ತಷ್ಟು ಸಂಕಷ್ಟ ಎದುರಾಗಲಿದೆ. ಈ ಸವಾಲನ್ನು ಎದುರಿಸಲು ಬಿ-ಸ್ಮೈಲ್ ಸಂಸ್ಥೆಯು ಸಂಚಾರಿ ಪೊಲೀಸರೊಂದಿಗೆ ಸಭೆ ನಡೆಸಿ, ಕಾಮಗಾರಿ ಆರಂಭವಾಗುವ ಮುನ್ನವೇ ವೈಜ್ಞಾನಿಕವಾದ ಟ್ರಾಫಿಕ್ ಡೈವರ್ಷನ್ ಪ್ಲಾನ್ ಸಿದ್ಧಪಡಿಸಲು ಮುಂದಾಗಿದೆ. ಸ್ಥಳೀಯ ವಾಹನಗಳು ಮತ್ತು ಟರ್ಮಿನಲ್‌ಗೆ ಹೋಗುವ ವಾಹನಗಳನ್ನು ಪ್ರತ್ಯೇಕಿಸುವ ಮೂಲಕ ದಟ್ಟಣೆ ಕಡಿಮೆ ಮಾಡುವುದು ಯೋಜನೆಯ ಮುಖ್ಯ ಗುರಿಯಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೆಟ್ ಗಾಲಾ ವೇದಿಕೆ ಮೇಲೆ ಮಿಂಚಿದ ಕರಣ್​ ಜೋಹರ್-ಇಶಾ ಅಂಬಾನಿ

Source link

TV9 Kannada News Live: ಪೀಣ್ಯ ಫ್ಲೈಓವರ್ ಬಂದ್, ಹೋಟೆಲ್ ತಿಂಡಿ ದುಬಾರಿ! ಇಲ್ಲಿವೆ ಇಂದಿನ ಪ್ರಮುಖ ಅಪ್​ಡೇಟ್ಸ್ – Kannada News | TV9 Kannada News live: Bengaluru Peenya Flyover Closed, Hotel Food Prices Hike by 20 percent, Demand for Auto Fare Increase

ಬೆಂಗಳೂರು, ಮೇ 5: ಬೆಂಗಳೂರು (Bengaluru) ಇನ್ನಷ್ಟು ದುಬಾರಿ ದುನಿಯಾ ಆಗುತ್ತಿದೆಯಾ? ಇಂಥದ್ದೊಂದು ಪ್ರಶ್ನೆ ಇದೀಗ ಬಲವಾಗಲು ಕಾರಣ ಇದೆ. ಕಮರ್ಷಿಯಲ್ ಎಲ್​ಪಿಜಿ ಸಿಲಿಂಡರ್ ದರ ಏರಿಕೆಯ ಕಾರಣ ಹೋಟೆಲ್​ಗಳು ಊಟ-ತಿಂಡಿ, ಕಾಪಿ-ಚಹಾ ದರ ಏರಿಕೆ ಮಾಡಿವೆ. ಮತ್ತೊಂದೆಡೆ, ಆಟೋ ದರ ಹೆಚ್ಚಳಕ್ಕೆ ಆಗ್ರಹ ವ್ಯಕ್ತವಾಗಿದೆ. ಈ ಎಲ್ಲದರ ಮಧ್ಯೆ, ಪೀಣ್ಯ ಫ್ಲೈಓವರ್​ನಲ್ಲಿ ಇಂದಿನಿಂದ (ಮೇ 5) 4 ದಿನ ಸಂಚಾರ ನಿರ್ಬಂಧ ಇದ್ದು, ಗೊರಗುಂಟೆ ಪಾಳ್ಯ ಸಹಿತ ತುಮಕೂರು ರಸ್ತೆಯಲ್ಲಿ ಸಂಚಾರ ದಟ್ಟಣೆ ಸಾಧ್ಯತೆ ಇದೆ.

ಹೋಟೆಲ್ ಗ್ರಾಹಕರಿಗೆ ದರ ಏರಿಕೆಯ ಶಾಕ್

ಬೆಂಗಳೂರಿನ ಹೋಟೆಲ್‌ಗಳಲ್ಲಿ ಆಹಾರ ಪದಾರ್ಥಗಳ ದರ ಶೇ 20ರಷ್ಟು ಹೆಚ್ಚಳವಾಗಿದೆ. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ 3,154 ರೂ.ಗೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಹೋಟೆಲ್ ಮಾಲೀಕರು ಮುಂದಾಗಿದ್ದಾರೆ. ಊಟ, ದೋಸೆ ಹಾಗೂ ಕಾಫಿ-ಟೀ ಬೆಲೆಗಳಲ್ಲಿ 5 ರಿಂದ 20 ರೂಪಾಯಿಗಳವರೆಗೆ ಏರಿಕೆ ಮಾಡಲಾಗಿದೆ. ಅನಿವಾರ್ಯವಾಗಿ ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಹೋಟೆಲ್ ಉದ್ಯಮಿಗಳು ತಿಳಿಸಿದ್ದಾರೆ.

ಇಂದಿನಿಂದ 4 ದಿನ ಪೀಣ್ಯ ಫ್ಲೈಓವರ್ ಬಂದ್!

ಕೇಬಲ್ ದುರಸ್ತಿ ಮತ್ತು ಲೋಡ್ ಟೆಸ್ಟಿಂಗ್ ಕಾಮಗಾರಿಯ ಕಾರಣ ಪೀಣ್ಯ ಎಲಿವೇಟೆಡ್ ಫ್ಲೈಓವರ್‌ನಲ್ಲಿ ಮೇ 8ರ ವರೆಗೆ ಸಂಚಾರ ನಿಷೇಧಿಸಲಾಗಿದೆ. ಇದರ ಪರಿಣಾಮವಾಗಿ ಗೊರಗುಂಟೆ ಪಾಳ್ಯ ಸೇರಿದಂತೆ ತುಮಕೂರು, ನೆಲಮಂಗಲ ಕಡೆ ತೆರಳುವ ಸರ್ವಿಸ್ ರಸ್ತೆಯಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದೆ.

ಆಟೋ ಪ್ರಯಾಣಿಕರಿಗೆ ತಟ್ಟಲಿದೆ ದರ ಏರಿಕೆ ಬಿಸಿ

ಆಟೋ LPG ದರ ಪ್ರತಿ ಲೀಟರ್‌ಗೆ 5.73 ರೂಪಾಯಿ ಏರಿಕೆಯಾಗಿರುವುದರಿಂದ ಆಟೋ ಚಾಲಕರು ಪ್ರಯಾಣ ದರ ಹೆಚ್ಚಿಸುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ಆಟೋ ಕನಿಷ್ಠ ದರ (2 ಕಿ.ಮೀ ಗೆ) 36 ರೂ. ಹಾಗೂ ನಂತರದ ಪ್ರತಿ ಕಿ.ಮೀ ಗೆ 18 ರೂ. ಇದೆ. ಇದನ್ನು ಕ್ರಮವಾಗಿ 50 ರೂ. ಹಾಗೂ 25 ರೂ. ಏರಿಸಬೇಕೆಂದು ಆಟೋ ಸಂಘಟನೆಗಳು ಒತ್ತಾಯಿಸಿವೆ.

ಇದನ್ನೂ ಓದಿ: ವಾಹನ ಸವಾರರೇ ಗಮನಿಸಿ: ಇಂದಿನಿಂದ 4 ದಿನ ಪೀಣ್ಯ ಫ್ಲೈಓವರ್ ಬಂದ್! ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link