Category Archives: Blog

Your blog category

ಪ್ರತಿ ಮತವೂ ಅಮೂಲ್ಯ: ತಿರುಪ್ಪತ್ತೂರಿನಲ್ಲಿ ಒಂದೇ ಒಂದು ಮತದಿಂದ ಡಿಎಂಕೆ ಸಚಿವರನ್ನು ಸೋಲಿಸಿದ ಶ್ರೀನಿವಾಸ ಸೇತುಪತಿ – Kannada News | Tamil Nadu Results: Tiruppattur Shock: DMK Minister Loses by Single Vote, Highlights Power of Every Vote

ಪೆರಿಯಕರುಪ್ಪನ್ -ಶ್ರೀನಿವಾಸImage Credit source: Patrika

ಚೆನ್ನೈ, ಮೇ 05: ಪ್ರಜಾಪ್ರಭುತ್ವದಲ್ಲಿ ಪ್ರತಿ ಮತವೂ ಎಷ್ಟು ನಿರ್ಣಾಯಕ ಎಂಬುದಕ್ಕೆ ತಮಿಳುನಾಡಿ(Tamil Nadu)ನ ತಿರುಪ್ಪತ್ತೂರು ವಿಧಾನಸಭಾ ಕ್ಷೇತ್ರದ ಫಲಿತಾಂಶವು ಒಂದು ಜೀವಂತ ಸಾಕ್ಷಿಯಾಗಿದೆ. ದಶಕಗಳ ಕಾಲದ ರಾಜಕೀಯ ಅನುಭವವಿರುವ ಡಿಎಂಕೆ ಸಚಿವ ಕೆ.ಆರ್. ಪೆರಿಯಕರುಪ್ಪನ್ ಅವರು ನಟ ವಿಜಯ್ ನೇತೃತ್ವದ ಟಿವಿಕೆ (ತಮಿಳಗ ವೆಟ್ರಿ ಕಳಗಂ) ಪಕ್ಷದ ಅಭ್ಯರ್ಥಿ  ಶ್ರೀನಿವಾಸ ಸೇತುಪತಿ ವಿರುದ್ಧ ಕೇವಲ ಒಂದೇ ಒಂದು ಮತದ ಅಂತರದಿಂದ ಸೋಲೊಪ್ಪಿಕೊಂಡಿದ್ದಾರೆ.

ಉಸಿರು ಬಿಗಿಹಿಡಿಯುವಂತಿದ್ದ ಮತ ಎಣಿಕೆ
ಮತ ಎಣಿಕೆಯ ಆರಂಭದಿಂದಲೂ ಪೆರಿಯಕರುಪ್ಪನ್ ಮತ್ತು ಸೀನಿವಾಸ ಸೇತುಪತಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಪ್ರತಿ ಸುತ್ತಿನಲ್ಲೂ ಮುನ್ನಡೆಯು ಕ್ಷಣಕ್ಷಣಕ್ಕೂ ಬದಲಾಗುತ್ತಿತ್ತು. ಅಂತಿಮ ಸುತ್ತಿನ ಎಣಿಕೆ ಮುಗಿದಾಗ ಇಬ್ಬರ ನಡುವಿನ ವ್ಯತ್ಯಾಸ ಕೇವಲ ಒಂದು ಮತವಾಗಿತ್ತು. ಮರು ಎಣಿಕೆಯ ನಂತರವೂ ಫಲಿತಾಂಶದಲ್ಲಿ ಯಾವುದೇ ಬದಲಾವಣೆಯಾಗದ ಕಾರಣ, ಸೀನಿವಾಸ ಸೇತುಪತಿ ಅವರನ್ನು ವಿಜೇತರೆಂದು ಘೋಷಿಸಲಾಯಿತು.

ಟಿವಿಕೆಯ ಚೊಚ್ಚಲ ಚುನಾವಣೆಯಲ್ಲಿ ಐತಿಹಾಸಿಕ ಜಯ
ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷಕ್ಕೆ ಇದು ಮೊದಲ ಚುನಾವಣೆಯಾಗಿದ್ದು, ಆಡಳಿತಾರೂಢ ಡಿಎಂಕೆಯ ಪ್ರಭಾವಿ ಸಚಿವರನ್ನು ಸೋಲಿಸಿರುವುದು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಯುವ ನಾಯಕ ಶ್ರೀನಿವಾಸ ಸೇತುಪತಿ ಅವರ ಈ ‘ಜಾಕ್‌ಪಾಟ್’ ಗೆಲುವು ಹೊಸ ರಾಜಕೀಯ ಸಮೀಕರಣಗಳಿಗೆ ನಾಂದಿ ಹಾಡಿದೆ.

ಮತ್ತಷ್ಟು ಓದಿ: ತಮಿಳುನಾಡು ಚುನಾವಣೆ ಫಲಿತಾಂಶಕ್ಕೂ ಮುನ್ನ ಶಿರಡಿ ಸಾಯಿಬಾಬಾ ದರ್ಶನ ಪಡೆದ ವಿಜಯ್

ಚುನಾವಣಾ ವ್ಯವಸ್ಥೆಯಲ್ಲಿ ಮತದಾರರ ಪಟ್ಟಿಯ ಶುದ್ಧೀಕರಣ ಮತ್ತು ನೈಜ ಮತದಾರರ ಪಾಲ್ಗೊಳ್ಳುವಿಕೆ ಎಷ್ಟು ಮುಖ್ಯ ಎಂಬುದನ್ನು ಈ ಫಲಿತಾಂಶ ತೋರಿಸುತ್ತದೆ. ಒಂದು ಮತದ ಮೌಲ್ಯ ಎಷ್ಟಿರುತ್ತದೆ ಎಂಬುದಕ್ಕೆ ಈ ಅಂತರವೇ ಉತ್ತರವಾಗಿದೆ. ಇತ್ತೀಚೆಗೆ ಜಾರಿಯಾದ ವಿಶೇಷ ತೀವ್ರ ಪರಿಷ್ಕರಣೆಯ (SIR) ನಂತರದ ಪಾರದರ್ಶಕ ವ್ಯವಸ್ಥೆಯು ಇಂತಹ ಅತ್ಯಂತ ನಿಖರ ಮತ್ತು ಆಶ್ಚರ್ಯಕರ ಫಲಿತಾಂಶಗಳಿಗೆ ದಾರಿ ಮಾಡಿಕೊಟ್ಟಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಈ ಸೋಲು ಡಿಎಂಕೆ ಪಾಲಿಗೆ ಆಘಾತಕಾರಿಯಾಗಿದ್ದರೂ, ಪ್ರಜಾಪ್ರಭುತ್ವದ ಶಕ್ತಿಯನ್ನು ಇದು ಮತ್ತೊಮ್ಮೆ ಸಾಬೀತುಪಡಿಸಿದೆ. ನನ್ನ ಒಂದು ಮತದಿಂದ ಏನಾಗಲಿದೆ? ಎಂದು ಭಾವಿಸುವ ಪ್ರತಿಯೊಬ್ಬ ಮತದಾರನಿಗೂ ತಿರುಪ್ಪತ್ತೂರಿನ ಈ ಫಲಿತಾಂಶವು ದೊಡ್ಡ ಪಾಠವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ದಳಪತಿ ವಿಜಯ್ ಅವರಿಗೆ ಸಿಕ್ಕಿದ್ದು ಅರ್ಹ ಗೆಲುವು’; ಶುಭ ಹಾರೈಸಿದ ಶಿವರಾಜ್​​ಕುಮಾರ್ – Kannada News | Thalapathy Vijay’s TVK Wins 108 Seats: Shivarajkumar Congratulates TN’s New Political Force

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ದಳಪತಿ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಮ್’ (TVK) ಪಕ್ಷವು 108 ಸ್ಥಾನಗಳನ್ನು ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದೆ.ಮೊದಲ ಚುನಾವಣೆಯಲ್ಲೇ ಇಷ್ಟು ದೊಡ್ಡ ಗೆಲುವು ದಾಖಲಿಸಿದ್ದು ನಿಜಕ್ಕೂ ಸಾಧನೆಯೇ ಸರಿ. ವಿಜಯ್ ಅವರ ರಾಜಕೀಯ ಯಶಸ್ಸಿಗೆ ಭಾರತೀಯ ಚಿತ್ರರಂಗದ ಅನೇಕ ಗಣ್ಯರು ಶುಭ ಹಾರೈಸುತ್ತಿದ್ದಾರೆ. ಕನ್ನಡದ ಹಿರಿಯ ನಟ ಶಿವರಾಜ್‌ಕುಮಾರ್ ಕೂಡ ವಿಜಯ್​ಗೆ ವಿಶ್ ಮಾಡಿದ್ದಾರೆ. ಈ ಗೆಲುವಿಗೆ ನೀವು ಅರ್ಹರು ಎಂದು ಹೇಳಿದ್ದಾರೆ.

ಶಿವರಾಜ್​​ಕುಮಾರ್ ಅವರು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ. ಅವರು ತಮ್ಮ ಟ್ವಿಟರ್ ಖಾತೆ ಮೂಲಕ ವಿಜಯ್​​ಗೆ ಅಭಿನಂದನೆ ತಿಳಿಸಿದ್ದಾರೆ.‘ದಳಪತಿ ವಿಜಯ್ ಅವರಿಗೆ ಸಿಕ್ಕಿದ್ದು ಅರ್ಹ ಗೆಲುವು. ನಿಮ್ಮ ಮೇಲೆ ಕಟುವಾದ ಟೀಕೆಗಳು ಬಂದಾಗಲೂ ಮೌನವಾಗಿದ್ದು, ಕೆಲಸವೇ ಮಾತನಾಡಲಿ ಎಂದು ಬಿಡುವುದು ಅತಿದೊಡ್ಡ ವಿಜಯವಾಗಿದೆ. ಒಮ್ಮೆ ಮಾಧ್ಯಮಗಳ ಜೊತೆಗಿನ ಮಾತುಕತೆಯ ವೇಳೆ ನಾನು ತಮಾಷೆಯಾಗಿ ‘TVK ಎಂದರೆ ಟ್ರೈ ವಿಜಯ್ ಆಸ್ ಕಿಂಗ್’ (Try Vijay As King) ಎಂದು ಹೇಳಿದ್ದೆ. ಇಂದು ನೀವು ರಾಜನಂತೆ ಎತ್ತರವಾಗಿ ನಿಂತಿದ್ದೀರಿ’ ಎಂದು ಶಿವಣ್ಣ ಹೇಳಿದ್ದಾರೆ.

ತಮಿಳುನಾಡು ಜನತೆಗೆ ಅನೇಕ ಆಶ್ವಾಸನೆಗಳನ್ನು ವಿಜಯ್ ನೀಡಿದ್ದಾರೆ. ಇವುಗಳನ್ನು ಈಡೇರಿಸುವಂತೆ ಆಗಲಿ ಎಂಬುದು ಶಿವಣ್ಣನ ಹಾರೈಕೆ. ‘ತಮಿಳುನಾಡಿನ ಜನತೆಗೆ ನೀಡಿರುವ ಎಲ್ಲಾ ಭರವಸೆಗಳನ್ನು ಈಡೇರಿಸುವ ಶಕ್ತಿ ನಿಮಗೆ ಸಿಗಲಿ ಮತ್ತು ರಾಜ್ಯವು ಅಭಿವೃದ್ಧಿಯತ್ತ ಸಾಗಲಿ’ ಎಂದು ಶಿವಣ್ಣ ಆಶಿಸಿದ್ದಾರೆ.

ಇದನ್ನೂ ಓದಿ: ತಾಯಿ ಹಿಂದೂ, ತಂದೆ ಕ್ರಿಶ್ಚಿಯನ್; ದಳಪತಿ ವಿಜಯ್ ಯಾವ ಧರ್ಮವನ್ನು ಅನುಸರಿಸುತ್ತಾರೆ?

ದಳಪತಿ ವಿಜಯ್ ಮತ್ತು ಶಿವರಾಜ್‌ಕುಮಾರ್ ತಮ್ಮ ತಮ್ಮ ಚಿತ್ರರಂಗದಲ್ಲಿ ಹೆಸರು ಮಾಡಿದವರು. ಇಬ್ಬರೂ ಪರಸ್ಪರ ಗೌರವ ಹೊಂದಿರುವ ನಟರು. ಹೀಗಾಗಿ, ವಿಜಯ್ ಅವರಿಗೆ ಶಿವಣ್ಣ ಶುಭ ಹಾರೈಸಿದ್ದಾರೆ. ಇನ್ನು, 2026ರ ಚುನಾವಣೆಯಲ್ಲಿ ವಿಜಯ್ ಅವರ ಪಕ್ಷ 108 ಸ್ಥಾನಗಳನ್ನು ಗೆದ್ದಿರುವುದು ತಮಿಳುನಾಡು ರಾಜಕೀಯದಲ್ಲಿ ಹೊಸ ಬದಲಾವಣೆಗೆ ಮುನ್ನುಡಿ ಬರೆದಿದೆ.

ವಿಜಯ್ ಅವರ ಕೊನೆಯ ಸಿನಿಮಾವನ್ನು ಕನ್ನಡದ ನಿರ್ಮಾಣ ಸಂಸ್ಥೆ ಕೆವಿಎನ್ ನಿರ್ಮಾಣ ಮಾಡಿದೆ. ವಿಜಯ್ ಸಿಎಂ ಆದ ಬಳಿಕ ಈ ಸಿನಿಮಾ ತೆರೆಗೆ ಬರುವ ನಿರೀಕ್ಷೆ ಇದೆ. ಮತ್ತೊಂದೆಡೆ ಅದೇ ಸಂಸ್ಥೆ ನಿರ್ಮಿಸಿರುವ ‘ಕೆಡಿ’ ಸಿನಿಮಾ ಕೂಡ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರಿನ ಬಯೋಕಾನ್​ನಲ್ಲಿ ಆಗುತ್ತಿದೆ ನಾಯಕತ್ವ ಬದಲಾವಣೆ; ಉತ್ತರಾಧಿಕಾರಿ ಹೆಸರಿಸಿದ ಕಿರಣ್ ಮಜುಂದಾರ್ – Kannada News | Kiran Mazumdar Shaw’s niece Claire picked as successor to lead Biocon group

ಬೆಂಗಳೂರು, ಮೇ 5: ಭಾರತದ ಪ್ರಮುಖ ಜೈವಿಕ ತಂತ್ರಜ್ಞಾನ ಸಂಸ್ಥೆಯಾದ ‘ಬಯೋಕಾನ್’ (Biocon) ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ ಅವರು ತಮ್ಮ ಸಂಸ್ಥೆಯ ಮುಂದಿನ ಉತ್ತರಾಧಿಕಾರಿಯನ್ನು ಘೋಷಿಸಿದ್ದಾರೆ. ತಮ್ಮ ಸಹೋದರನ ಮಗಳಾದ (Niece) ಕ್ಲೇರ್ ಮಜುಂದಾರ್ (Claire Mazumdar) ಅವರನ್ನು ಬಯೋಕಾನ್ ಸಾಮ್ರಾಜ್ಯವನ್ನು ಮುನ್ನಡೆಸಲು ಆಯ್ಕೆ ಮಾಡಿದ್ದಾರೆ. ಮುಂದುವರಿದ ಜೈವಿಕಶಾಸ್ತ್ರ ಹಾಗೂ ಎಐ ಇನ್ನೋವೇಶನ್​ಗಳಿಗೆ ಹೊಂದಿಕೆಯಾಗಲು ಬಯೋಕಾನ್ ಕಂಪನಿ ಪ್ರಯತ್ನಿಸುತ್ತಿರುವ ಹೊತ್ತಿನಲ್ಲೇ ಈ ಜವಾಬ್ದಾರಿ ಹಸ್ತಾಂತರ ಆಗಲಿರುವುದು ಗಮನಾರ್ಹ. ತಮ್ಮ ಸೋದರತ್ತೆ ಕಟ್ಟಿ ಬೆಳೆಸಿದ ಸಂಸ್ಥೆಯನ್ನು ಕ್ಲೇರ್ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬಲ್ಲರಾ ಎನ್ನುವುದು ಕುತೂಹಲದ ಸಂಗತಿ.

ಕ್ಲೇರ್ ಮಜುಂದಾರ್ ಯಾರು?

37 ವರ್ಷದ ಕ್ಲೇರ್ ಮಜುಂದಾರ್ ಪ್ರಸ್ತುತ ಅಮೆರಿಕ ಮೂಲದ ‘ಬಿಕಾರಾ ಥೆರಪಿಟಿಕ್ಸ್’ (Bicara Therapeutics) ಎಂಬ ಕ್ಯಾನ್ಸರ್ ಸಂಶೋಧನಾ ಸಂಸ್ಥೆಯ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದು ಬಯೋಕಾನ್‌ನಿಂದಲೇ ಆರಂಭವಾದ ಒಂದು ಸಂಸ್ಥೆಯಾಗಿದೆ.

ಮಗೆ ಮಕ್ಕಳಿಲ್ಲದ ಕಾರಣ, ಕಂಪನಿಯ ಭವಿಷ್ಯ ಮತ್ತು ಮಾಲೀಕತ್ವದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲು ಕ್ಲೇರ್ ಅವರೇ ಸೂಕ್ತ ವ್ಯಕ್ತಿ ಎಂದು ಕಿರಣ್ ಅವರು ನಿರ್ಧರಿಸಿದ್ದಾರೆ. ಕ್ಲೇರ್ ಅವರ ನಾಯಕತ್ವ ಮತ್ತು ಜಾಗತಿಕ ಮಟ್ಟದಲ್ಲಿ ಬಯೋಟೆಕ್ ವ್ಯವಹಾರವನ್ನು ಬೆಳೆಸಿದ ರೀತಿಗೆ ಕಿರಣ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಎಐ ಹೆಸರಲ್ಲಿ ಲೇ ಆಫ್; ಉದ್ಯೋಗಿಗಳಿಗೆ ಆಶಾಕಿರಣವಾದ ಚೀನೀ ಕೋರ್ಟ್ ತೀರ್ಪು

ಕ್ಲೇರ್ ಮಜುಂದಾರ್ ಅವರ ಶೈಕ್ಷಣಿಕ ಹಿನ್ನೆಲೆ

ಕ್ಲೇರ್ ಅವರು ಮೆಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ಮತ್ತು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಂತಹ ವಿಶ್ವವಿಖ್ಯಾತ ಸಂಸ್ಥೆಗಳಲ್ಲಿ ಇಂಜಿನಿಯರಿಂಗ್, ವೈದ್ಯಕೀಯ ಮತ್ತು ಬ್ಯುಸಿನೆಸ್ ಮ್ಯಾನೇಜ್ಮೆಂಟ್​ನಲ್ಲಿ ಪದವಿಗಳನ್ನು ಪಡೆದಿದ್ದಾರೆ. ಕ್ಲೇರ್ ಅವರ ಕುಟುಂಬದ ಇತರ ಸದಸ್ಯರೂ ಕೂಡ ಉತ್ತಮ ಸಂಪನ್ಮೂಲ ವ್ಯಕ್ತಿಗಳಾಗಿದ್ದಾರೆ. ಸಹೋದರ ಎರಿಕ್ ಮಜುಂದಾರ್ ಅವರು ಕ್ಯಾಲಿಫೋರ್ನಿಯಾ ಇನ್ಸ್​ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಐ ತಜ್ಞರಾಗಿದ್ದಾರೆ. ಪತಿ ಥಾಮಸ್ ರಾಬರ್ಟ್ಸ್ ಅವರು ಅಮೆರಿಕದ ಪ್ರಮುಖ ಕ್ಯಾನ್ಸರ್ ತಜ್ಞರಲ್ಲಿ ಒಬ್ಬರೆನಿಸಿದ್ದಾರೆ.

ಬಯೋಕಾನ್ ಸಂಸ್ಥೆಯು ಈಗ ಕೃತಕ ಬುದ್ಧಿಮತ್ತೆ (AI) ಮತ್ತು ಸುಧಾರಿತ ಜೈವಿಕ ಔಷಧಗಳ ಸಂಶೋಧನೆಯತ್ತ ಹೆಚ್ಚು ಗಮನಹರಿಸುತ್ತಿದ್ದು, ಕ್ಲೇರ್ ಅವರ ತಾಂತ್ರಿಕ ಜ್ಞಾನವು ಕಂಪನಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಸಹಾಯ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ.

ಕಿರಣ್ ಮಜುಂದಾರ್ ಶಾ (73) ಅವರು ಸುಮಾರು ನಾಲ್ಕು ದಶಕಗಳ ಹಿಂದೆ ಬಯೋಕಾನ್ ಸ್ಥಾಪಿಸಿ ಭಾರತದ ಅತಿದೊಡ್ಡ ಬಯೋಟೆಕ್ ಕಂಪನಿಯಾಗಿ ಬೆಳೆಸಿದ್ದಾರೆ. ಸ್ವರ್ಗಸ್ಥರಾಗಿರುವ ಅವರ ಪತಿ ಜಾನ್ ಶಾ ಅವರು ಈ ಹಿಂದೆ ಸಮೂಹದ ಉಪಾಧ್ಯಕ್ಷರಾಗಿದ್ದರು.

ಇದನ್ನೂ ಓದಿ: ದೆಹಲಿಯಲ್ಲಿ 9 ಮಂದಿ ಬಲಿತೆಗೆದ ಎಸಿ ಸ್ಫೋಟ; ಏರ್ ಕಂಡೀಷನರ್ ಸ್ಫೋಟಕ್ಕೆ ಕಾರಣವೇನು, ನಿಯಂತ್ರಣ ಹೇಗೆ?

ಗಮನಿಸಬೇಕಾದ ಸಂಗತಿ ಎಂದರೆ, ಕ್ಲೇರ್ ಅವರು ತತ್​ಕ್ಷಣಕ್ಕೆ ಬಯೋಕಾನ್ ಛೇರ್ಮನ್ ಸ್ಥಾನ ಪಡೆಯುವುದಿಲ್ಲ. ಅವರು ಆ ಸ್ಥಾನ ನಿಭಾಯಿಸಲು ಶಕ್ತರಾಗುವವರೆಗೂ ಕಿರಣ್ ಮಜುಂದಾರ್ ಅವರು ಮಾರ್ಗದರ್ಶನ ಮಾಡುತ್ತಾರೆ. ಆ ಬಳಿಕವಷ್ಟೇ ಅಧಿಕೃತವಾಗಿ ಕ್ಲೇರ್ ಅವರು ಬಯೋಕಾನ್ ಛೇರ್ಮನ್ ಆಗಬಹುದು ಎನ್ನಲಾಗಿದೆ. ಕಿರಣ್ ಮಜುಂದಾರ್ ಕೂಡ ಈ ಸಂಬಂಧ ಟ್ವೀಟ್ ಮಾಡಿದ್ದಾರೆ.

‘ಈಗಲೇ ನಾನು ಬಯೋಕಾನ್​ನ ಜವಾಬ್ದಾರಿ ಬಿಡುತ್ತಿಲ್ಲ. ಕ್ಲೇರ್ ಅವರು ನನ್ನ ಸ್ಥಾನಕ್ಕೆ ಸರಿಯಾದ ಸಮಯದಲ್ಲಿ ಬರುತ್ತಾರೆ’ ಎಂದು ಮಜುಂದಾರ್ ಎಕ್ಸ್ ಪೋಸ್ಟ್​ನಲ್ಲಿ ಸ್ಪಷ್ಟಪಡಿಸಿದ್ದಾರೆ.

ಈ ಘೋಷಣೆಯು ಬಯೋಕಾನ್ ಸಂಸ್ಥೆಯಲ್ಲಿ ಹೊಸ ನಾಯಕತ್ವದ ಬದಲಾವಣೆಗೆ ಮುನ್ನುಡಿ ಬರೆದಿದೆ. ಬಯೋಕಾನ್ ಕಂಪನಿ ಮಾತ್ರವಲ್ಲ, ಆ ಗ್ರೂಪ್​ನ ಎಲ್ಲಾ ಕಂಪನಿಗಳಲ್ಲೂ ನಾಯಕತ್ವ ಬದಲಾವಣೆಗಳಾಗುತ್ತಿವೆ ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 12:09 pm, Tue, 5 May 26

Source link

ಮನೆ ಕೆಲಸದಾಕೆ ಈಗ ಪಶ್ಚಿಮ ಬಂಗಾಳದ ಶಾಸಕಿ: ಅತ್ಯಾಚಾರ, ಕೊಲೆ ಸಂತ್ರಸ್ತೆಯ ತಾಯಿಯೂ ಆದ್ರು MLA! – Kannada News | West Bengal Polls: Domestic Worker, Mother of Physical Assault and Murder Victim Win MLA Seats

ಕಲಿತಾ ಮಾಝಿ ಮತ್ತು ರತ್ನಾ ದೇಬನಾಥ್

ಕೋಲ್ಕತ್ತಾ, ಮೇ 05: ಪಶ್ಚಿಮ ಬಂಗಾಳ ವಿಧಾನಸಭಾ ಫಲಿತಾಂಶ ಹೊರಬಿದ್ದಿದ್ದು, ಅಡಳಿತಾರೂಢ ಟಿಎಂಸಿ ಧೂಳೀಪಟವಾಗಿದ್ದರೆ ಬಿಜೆಪಿ 200ಕ್ಕೂ ಅಧಿಕ ಸ್ಥಾನಗಳನ್ನು ಪಡೆದುಕೊಂಡು ಪ್ರಚಂಡ ಗೆಲುವು ಸಾಧಿಸಿದೆ. ಈ ನಡುವೆ ಭಾರತೀಯ ಜನತಾ ಪಕ್ಷದಿಂದ ಗೆದ್ದ ಕೆಲ ಜನ ಸಾಮಾನ್ಯ ಅಭ್ಯರ್ಥಿಗಳು ಗಮನ ಸೆಳೆದಿದ್ದಾರೆ. ಆಸ್ಗ್ರಾಮ ಕ್ಷೇತ್ರದಿಂದ ಸ್ಫರ್ಧಿಸಿದ್ದ ಮನೆ ಕೆಲಸ ಮಾಡುವ ಮಹಿಳೆ ಗೆದ್ದು ಬೀಗಿದ್ದರೆ, ಅತ್ತ ಪಾನಿಹಾಟಿಯಲ್ಲಿ ಕಣಕ್ಕಿಳಿದಿದ್ದ ಆರ್‌ಜಿ ಕಾರ್ ಮೆಡಿಕಲ್ ಕಾಲೇಜಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸಂತ್ರಸ್ತೆಯ ತಾಯಿಯೂ ವಿಜಯಪತಾಕೆ ಹಾರಿಸಿರೋದು ದೇಶದ್ಯಾಂತ ಸುದ್ದಿಯಾಗಿದೆ.

ಶಾಸಕಿಯಾದ ಮನೆ ಕೆಲಸದಾಕೆ

ಮನೆ ಕೆಲಸ ಮಾಡುತ್ತ ತಿಂಗಳಿಗೆ ಕೇವಲ 2,500 ರೂ. ಆದಾಯ ಹೊಂದಿದ್ದ ಕಲಿತಾ ಮಾಝಿ ಆಸ್ಗ್ರಾಮ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇವರು ರಾಜಕೀಯಕ್ಕೆ ಬರಲು ಮುನ್ನ ನಾಲ್ಕು ಮನೆಗಳಲ್ಲಿ ಗೃಹಕಾರ್ಯ ನಿರ್ವಹಿಸುತ್ತಿದ್ದರು. ಜನಾಧಾರಿತ ಅಭ್ಯರ್ಥಿಯಾಗಿ ಗಮನ ಸೆಳೆದಿದ್ದ ಅವರು 1,07,692 ಮತಗಳನ್ನು ಪಡೆದು ಎದುರಾಳಿ ಶ್ಯಾಮ ಪ್ರಸನ್ನ ಲೋಹಾರ್ ಅವರನ್ನು 12,535 ಮತಗಳ ಅಂತರದಿಂದ ಸೋಲಿಸಿದ್ದಾರೆ. 2021ರ ಚುನಾವಣೆಯಲ್ಲಿಯೂ ಸ್ಪರ್ಧಿಸಿದ್ದ ಇವರು, ತೃಣಮೂಲ ಕಾಂಗ್ರೆಸ್‌ನ ಅಭೇದಾನಂದ ಥಾಂಡರ್ ವಿರುದ್ಧ ಸೋತಿದ್ದರು. ಆದರೂ ಬಿಜೆಪಿ ಮತ್ತೆ ಈ ಬಾರಿಯೂ ಅವರಿಗೇ ಟಿಕೆಟ್ ನೀಡಿದ್ದು, ಕಲಿತಾ ಮಾಝಿ ಅವರ ಸ್ಥಳೀಯ ಸಂಪರ್ಕವೇ ಗೆಲುವಿನ ಹಿಂದಿನ ಕಾರಣ ಎನ್ನಲಾಗಿದೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಐತಿಹಾಸಿಕ ಗೆಲುವು; ಯಾರಾಗಲಿದ್ದಾರೆ ಮುಂದಿನ ಮುಖ್ಯಮಂತ್ರಿ?

ಅತ್ಯಾಚಾರ ಮತ್ತು ಕೊಲೆ ಸಂತ್ರಸ್ತೆಯ ತಾಯಿ ಈಗ MLA!

ಆರ್‌ಜಿ ಕಾರ್ ಮೆಡಿಕಲ್ ಕಾಲೇಜಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸಂತ್ರಸ್ತೆ ತಾಯಿ,  ಬಿಜೆಪಿ ಅಭ್ಯರ್ಥಿ ರತ್ನಾ ದೇಬನಾಥ್ ಪಾನಿಹಾಟಿ ಕ್ಷೇತ್ರದಲ್ಲಿ ಭರ್ಜರಿ ಜಯ ಸಾಧಿಸಿದ್ದಾರೆ. ಆ ಮೂಲಕ ತಮ್ಮ ಮೊದಲ ಚುನಾವಣೆಯಲ್ಲೇ ಗೆಲುವಿನ ನಗೆ ಬೀರಿದ್ದಾರೆ. ರತ್ನಾ ದೇಬನಾಥ್ ಅವರು ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ತೀರ್ಥಂಕರ ಘೋಷ್ ಅವರನ್ನು 28,836 ಮತಗಳ ಅಂತರದಿಂದ ಸೋಲಿಸಿದ್ದು, ಒಟ್ಟು 87,977 ಮತಗಳು ಇವರಿಗೆ ಬಿದ್ದಿವೆ. ಪ್ರತಿಸ್ಪರ್ಧಿ ಘೋಷ್ 59,141 ವೋಟ್​​ಗಳನ್ನು ಪಡೆದಿದ್ದಾರೆ.

ಸಂದೇಶಖಾಲಿ ಹಿಂಸಾಚಾರ ಪ್ರಕರಣದ ವೇಳೆ ತಮ್ಮ ಮಗಳನ್ನು ಕೈಯಲ್ಲಿ ಹಿಡಿದು ಪ್ರತಿಭಟನೆ ನಡೆಸಿದ್ದ ರೇಖಾ ಪಾತ್ರಾ ಕೂಡ ಟಿಎಂಸಿ ಅಭ್ಯರ್ಥಿಯನ್ನು ಮಣಿಸಿ ಗೆಲುವಿನ ನಗಾರಿ ಬಾರಿಸಿದ್ದಾರೆ. ಪಾತ್ರಾ 1,00,207 ಮತಗಳನ್ನು ಪಡೆದರೆ, ಸರ್ಕಾರ್ 94,786 ಮತಗಳನ್ನು ಪಡೆದಿದ್ದಾರೆ. ಇವರ ಗೆಲುವಿನ ಅಂತರ 5,421 ಮತಗಳು. ಒಟ್ಟಾರೆಯಾಗಿ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿ 206 ಸ್ಥಾನಗಳನ್ನು ಗೆದ್ದು ಬಹುಮತ ಪಡೆಯುವ ಮೂಲಕ 15 ವರ್ಷಗಳ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಆಡಳಿತಕ್ಕೆ ತೆರೆ ಎಳೆದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 12:10 pm, Tue, 5 May 26

Source link

ಅಸ್ಸಾಂ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲುವಲ್ಲ, ಚುನಾವಣಾ ಆಯೋಗದ ಗೆಲುವೆಂದ ಪ್ರಿಯಾಂಕ್ ಖರ್ಗೆ! – Kannada News | Priyank Kharge Alleges BJP Wins in Assam, West Bengal Due to Election Commission’s Help, Not People’s Mandate

ಬೆಂಗಳೂರು, ಮೇ 5: ಪಶ್ಚಿಮ ಬಂಗಾಳದಲ್ಲಿ 91 ಲಕ್ಷ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿರುವುದೂ ಸೇರಿದಂತೆ ಚುನಾವಣಾ ಆಯೋಗದ ಹಲವು ಕ್ರಮಗಳೇ ಬಿಜೆಪಿ ಗೆಲುವಿಗೆ ಕಾರಣವಾಯಿತು ಎಂದು ಕರ್ನಾಟಕದ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲುವು ಆ ಪಕ್ಷದ ಗೆಲುವಲ್ಲ. ಅದು ಚುನಾವಣಾ ಆಯೋಗದ ಜಯ ಎಂದು ಅವರು ಬಣ್ಣಿಸಿದ್ದಾರೆ. ಚುನಾವಣಾ ಆಯೋಗವನ್ನು ಜೇಬಿನಲ್ಲಿ ಇಟ್ಟುಕೊಂಡು ಚುನಾವಣೆ ನಡೆಸಿದ್ದರು ಎಂದು ಖರ್ಗೆ ಆರೋಪಿಸಿದ್ದಾರೆ.

ಸುಮಾರು ಒಂದು ಕೋಟಿ ಜನರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. 27 ರಿಂದ 28 ಲಕ್ಷ ಅರ್ಹ ಜನರು ಟ್ರಿಬ್ಯುನಲ್‌ಗಳಿಗೆ ಅರ್ಜಿ ಸಲ್ಲಿಸಿದರೂ ಅವರ ವಾದವನ್ನು ಆಲಿಸಲಾಗಿಲ್ಲ ಎಂದು ಖರ್ಗೆ ದೂರಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಶೇ 4ರಷ್ಟು ವ್ಯತ್ಯಾಸದಿಂದ 80 ರಿಂದ 100 ಸ್ಥಾನಗಳ ಮೇಲೆ ಪರಿಣಾಮ ಬೀರಿದೆ. ಮಹಾರಾಷ್ಟ್ರ, ಮಧ್ಯಪ್ರದೇಶ್ ಮತ್ತು ಹರಿಯಾಣದಲ್ಲಿ ಇದೇ ರೀತಿಯಲ್ಲಿ ಬಿಜೆಪಿ ಚುನಾವಣಾ ಪ್ರಕ್ರಿಯೆಯನ್ನು ನಿಯಂತ್ರಿಸಿತ್ತು ಎಂದು ಅವರು ಆರೋಪಿಸಿದ್ದಾರೆ. ಕರ್ನಾಟಕದಲ್ಲೂ ಇದೇ ರೀತಿ ಆಗಬಹುದು ಎಂದು ಖರ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಗು ಮಾರಾಟ ಕೇಸ್​ಗೆ ಬಿಗ್ ಟ್ವಿಸ್ಟ್: ಅಕ್ರಮ ಸಂಬಂಧ ಮುಚ್ಚಿಡಲು ಪತ್ನಿಯ ವಿರುದ್ಧವೇ ಸುಳ್ಳು ದೂರು! – Kannada News | Bengaluru: ‘Child Sale’ Complaint Turns Out False; Husband Exposed for Harassing Wife and his Affair

ಮಗು ಮಾರಾಟ ಕೇಸ್​ಗೆ ಬಿಗ್ ಟ್ವಿಸ್ಟ್Image Credit source: google Gemini

ಬೆಂಗಳೂರು, ಮೇ 05: ತನ್ನ ಜೊತೆ ಜಗಳವಾಡಿ ಮನೆ ಬಿಟ್ಟು ಹೋದ ಪತ್ನಿ ಎರಡೂವರೆ ವರ್ಷದ ಮಗುವನ್ನು 5 ಲಕ್ಷ ರೂಪಾಯಿಗೆ ಮಾರಾಟ  (Child Sale) ಮಾಡಿದ್ದಾಳೆ ಎಂದು ದೂರು ನೀಡಿದ್ದ ರವಿಬಾಬು ಅಸಲಿ ಮುಖವಾಡ ಕಳಚಿದೆ. ಪೊಲೀಸರು ನಡೆಸಿದ ಚುರುಕಿನ ತನಿಖೆಯಲ್ಲಿ ಮಗು ಮಾರಾಟವಾಗಿಲ್ಲ ಮತ್ತು ತಾಯಿ ತನ್ನ ಮೂವರೂ ಮಕ್ಕಳೊಂದಿಗೆ ಸುರಕ್ಷಿತವಾಗಿದ್ದಾರೆ ಎಂಬ ಸತ್ಯಾಂಶ ಬೆಳಕಿಗೆ ಬಂದಿದೆ.

ತನಿಖೆಯಲ್ಲಿ ಬಯಲಾದ ಅಚ್ಚರಿಯ ಸತ್ಯ

ಪತಿ ರವಿಬಾಬು ನೀಡಿದ್ದ ದೂರಿನ ಮೇರೆಗೆ ಸತ್ಯದ ಬೆನ್ನತ್ತಿದ ಪೊಲೀಸರು ಮಹಿಳೆ ಮತ್ತು ಮಕ್ಕಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಾರಣೆ ನಡೆಸಿದಾಗ, ಪತ್ನಿ ಮಗುವನ್ನು ಮಾರಾಟ ಮಾಡಿಲ್ಲ, ಬದಲಾಗಿ ಪತಿಯ ದೈಹಿಕ ಮತ್ತು ಮಾನಸಿಕ ಕಿರುಕುಳ ತಾಳಲಾರದೆ ಮಕ್ಕಳೊಂದಿಗೆ ಮನೆ ಬಿಟ್ಟಿರುವುದು ತಿಳಿದುಬಂದಿದೆ. 16 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದರೂ ಪತಿ ರವಿಬಾಬುಗೆ ಇತರ ಮಹಿಳೆಯರೊಂದಿಗೆ ಅಕ್ರಮ ಸಂಬಂಧವಿತ್ತು ಹಾಗೂ ಎರೆಡೆರಡು ಮೊಬೈಲ್‌ಗಳನ್ನು ಬಳಸಿ ತನಗೆ ವಂಚಿಸುತ್ತಿದ್ದ ಎಂದು ಪತ್ನಿ ಪೊಲೀಸರ ಮುಂದೆ ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ ಮೆಜೆಸ್ಟಿಕ್​ನಲ್ಲಿ ತನ್ನ 2 ವರ್ಷದ ಮಗುವನ್ನೇ ಮಾರಿದಳಾ ತಾಯಿ? ತಂದೆಯಿಂದಲೇ ಗಂಭೀರ ಆರೋಪ

ಸುಳ್ಳು ದೂರು

ಪತಿಯ ನಿರಂತರ ಕಿರುಕುಳ ಮತ್ತು ಅಕ್ರಮ ಸಂಬಂಧದ ಬಗ್ಗೆ ಪ್ರಶ್ನಿಸಿದ್ದಕ್ಕೆ ಮನೆಯಲ್ಲಿ ಗಲಾಟೆ ನಡೆದಿತ್ತು. ತನ್ನ ತವರು ಮನೆಯಲ್ಲೂ ಜಗಳವಾಗಿದ್ದರಿಂದ ಯಾರ ಸಹಾಯವೂ ಇಲ್ಲದೆ ಕಂಗಾಲಾಗಿದ್ದ ಮಹಿಳೆ, ಮಕ್ಕಳೊಂದಿಗೆ ಸುರಕ್ಷಿತವಾಗಿರಲು ನಿರ್ಧರಿಸಿ ಮನೆ ಬಿಟ್ಟು ಹೋಗಿದ್ದರು. ಆದರೆ, ತನ್ನ ತಪ್ಪುಗಳನ್ನು ಮುಚ್ಚಿ ಹಾಕಲು ಮತ್ತು ಪತ್ನಿಯನ್ನು ಸಿಲುಕಿಸಲು ಪತಿ ರವಿಬಾಬು ಮಗು ಮಾರಾಟದ ಕಟ್ಟುಕಥೆ ಕಟ್ಟಿ ಪೊಲೀಸರಿಗೆ ದೂರು ನೀಡಿದ್ದ ಎಂಬುದು ತನಿಖೆಯಲ್ಲಿ ಸಾಬೀತಾಗಿದೆ.

ವಿವೇಕನಗರ ಪೊಲೀಸರು ತಾಯಿ ಮತ್ತು ಮೂವರು ಮಕ್ಕಳನ್ನು ಪತ್ತೆ ಹಚ್ಚಿ ಅವರಿಗೆ ಸೂಕ್ತ ರಕ್ಷಣೆ ನೀಡಿದ್ದಾರೆ. ಮಗುವನ್ನು ಮಾರಾಟ ಮಾಡಿದ್ದಾಳೆಂಬ ಗಂಭೀರ ಆರೋಪ ಹೊರಿಸಿದ್ದ ಪತಿಯನ್ನೇ ಈಗ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ವರದಿ: ವಿಕಾಸ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ ಲೈವ್ – Kannada News | CM Siddaramaiah Press Meet Live: Reaction on Bypoll Victory 5 State Election Results Live Updates

ಬೆಂಗಳೂರು, ಮೇ 05: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಲವೇ ಹೊತ್ತಿನಲ್ಲಿ ಬೆಂಗಳೂರಿನ ತಮ್ಮ ಗೃಹಕಚೇರಿ ‘ಕೃಷ್ಣಾ’ದಲ್ಲಿ ಮಹತ್ವದ ಸುದ್ದಿಗೋಷ್ಠಿಯನ್ನು ನಡೆಸುತ್ತಿದ್ದಾರೆ. ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಮತ್ತು ದೇಶದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಸಿಎಂ ಹಮ್ಮಿಕೊಂಡಿರುವ ಈ ಸುದ್ದಿಗೋಷ್ಠಿ ಮಹತ್ವದ್ದಾಗಿದೆ.

ರಾಜ್ಯದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಬಾಗಲಕೋಟೆಯ ಸಂಡೂರು ಮತ್ತು ದಾವಣಗೆರೆಯ ಚನ್ನಗಿರಿ ಕ್ಷೇತ್ರಗಳಲ್ಲಿ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ಸಂಭ್ರಮವನ್ನು ಸಿಎಂ ಸುದ್ದಿಗಾರರೊಂದಿಗೆ ಹಂಚಿಕೊಳ್ಳುತ್ತಿದ್ದು, ರಾಷ್ಟ್ರ ರಾಜಕೀಯದ ದಿಕ್ಸೂಚಿ ಎನ್ನಲಾಗುತ್ತಿದ್ದ ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಕುರಿತು ಸಿದ್ದರಾಮಯ್ಯ ಅವರು ತಮ್ಮ ವಿಶ್ಲೇಷಣೆಯನ್ನು ಮಂಡಿಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಥಿಯೇಟರ್​​​ನಲ್ಲಿ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುವಾಗಲೇ ನಿಧನ ಹೊಂದಿದ ಖ್ಯಾತ ನಟ – Kannada News | Santhosh K. Nair Demise: Malayalam Actor, 65, Passes Away in Tragic Kerala Road Crash

ಮಲಯಾಳಂ ಚಿತ್ರರಂಗದ ಹಿರಿಯ ನಟ ಸಂತೋಷ್ ಕೆ. ನಾಯರ್ (65) ಅವರು ಮಂಗಳವಾರ (ಮೇ 5) ಮುಂಜಾನೆ ಕೇರಳದ ಪಥನಂತಿಟ್ಟದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಅವರು ಪ್ರಯಾಣಿಸುತ್ತಿದ್ದ ಕಾರು ವ್ಯಾನ್ ಒಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಅಪಘಾತದ ಸಮಯದಲ್ಲಿ ಅವರ ಜೊತೆಗಿದ್ದ ಪತ್ನಿ ಗಂಭೀರವಾಗಿ ಗಾಯಗೊಂಡಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

1982ರಲ್ಲಿ ತೆರೆಕಂಡ ‘ಇದು ನಂಗಳುಡೆ ಕಥಾ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಸಂತೋಷ್ ಅವರು, ಸುಮಾರು 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮ್ಮ ವಿಭಿನ್ನ ಅಭಿನಯದ ಮೂಲಕ ಗುರುತಿಸಿಕೊಂಡಿದ್ದ ಇವರು, ವಿಶೇಷವಾಗಿ ಖಳನಟನಾಗಿ ಮತ್ತು ಹಾಸ್ಯ ನಟನಾಗಿ ಪ್ರೇಕ್ಷಕರ ಮನ ಗೆದ್ದಿದ್ದರು.

1960 ನವೆಂಬರ್ 12 ರಂದು ತಿರುವನಂತಪುರಂನಲ್ಲಿ ಜನಿಸಿದ ಸಂತೋಷ್, ಸುಶಿಕ್ಷಿತ ಕುಟುಂಬದಿಂದ ಬಂದವರು. ಅವರ ತಂದೆ ಸಿ.ಎನ್. ಕೇಶವನ್ ನಾಯರ್ ನಿವೃತ್ತ ಮುಖ್ಯೋಪಾಧ್ಯಾಯರಾಗಿದ್ದರೆ, ತಾಯಿ ಪಿ. ರಾಜಲಕ್ಷ್ಮಿಯಮ್ಮ ನಿವೃತ್ತ ಶಿಕ್ಷಕಿಯಾಗಿದ್ದರು. ಸಂತೋಷ್ ಅವರ ಇಬ್ಬರು ಸಹೋದರಿಯರು ವೈದ್ಯಕೀಯ ಕ್ಷೇತ್ರ ಆಯ್ದುಕೊಂಡರೆ, ಇವರು ರಾಜಕೀಯ ಮತ್ತು ನಟನೆಯತ್ತ ಒಲವು ತೋರಿದರು.

ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅವರೊಂದಿಗೆ ಸಂತೋಷ್ ಅವರಿಗೆ ಕಾಲೇಜು ದಿನಗಳಿಂದಲೇ ಒಡನಾಟವಿತ್ತು. ಇಬ್ಬರೂ ಎಂ.ಜಿ ಕಾಲೇಜಿನಲ್ಲಿ ಓದುವಾಗ ಸಮಕಾಲೀನರಾಗಿದ್ದರು. ಸಂತೋಷ್ ಗಣಿತ ವಿಷಯದಲ್ಲಿ ಪದವಿ ಪಡೆದರೆ, ಮೋಹನ್‌ಲಾಲ್ ವಾಣಿಜ್ಯ ವಿಷಯದಲ್ಲಿ ಶಿಕ್ಷಣ ಪೂರೈಸಿದ್ದರು.

ಸಂತೋಷ್ ಅವರ ಅಭಿನಯದ ಕೊನೆಯ ಚಿತ್ರ ‘ಭರತನಾಟ್ಯಮ್ 2 ಮೋಹಿನಿಯಾಟ್ಟಂ’. ಈ ಸಿನಿಮಾ ಥಿಯೇಟರ್​​ನಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಏಪ್ರಿಲ್ 10ರಂದು ಬಿಡುಗಡೆಯಾದ ಈ ಸಿನಿಮಾ 2024ರ ‘ಭರತನಾಟ್ಯಂ’ ಸಿನಿಮಾದ ಮುಂದುವರಿದ ಭಾಗವಾಗಿದೆ. ಕೃಷ್ಣದಾಸ್ ಮುರಳಿ ನಿರ್ದೇಶನದ ಈ ಚಿತ್ರವು ಮೇ 8 ರಿಂದ ಓಟಿಟಿ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಲಿದೆ. ಸುರಜ್ ವೆಂಜಾರಮೂಡು ಮತ್ತು ವಿನಯ್ ಫೋರ್ಟ್ ಅವರಂತಹ ಪ್ರಮುಖ ನಟರು ಈ ಚಿತ್ರದಲ್ಲಿ ತಾರಾಗಣದಲ್ಲಿದ್ದಾರೆ.

ಇದನ್ನೂ ಓದಿ: ಮಲಯಾಳಂನ ‘ಪಳ್ಳಿ ಚಟ್ಟಂಬಿ’ ಚಿತ್ರದಲ್ಲಿ ಬಳಕೆ ಆಯ್ತು ಯಕ್ಷಗಾನ; ಇದೆ ಕನ್ನಡದ ಡೈಲಾಗ್

ಹಿರಿಯ ನಟನ ಅನಿರೀಕ್ಷಿತ ಸಾವು ಮಲಯಾಳಂ ಚಿತ್ರರಂಗಕ್ಕೆ ದೊಡ್ಡ ನಷ್ಟವನ್ನುಂಟು ಮಾಡಿದೆ. ಹಲವು ಗಣ್ಯರು ಸಂತೋಷ್ ಕೆ. ನಾಯರ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅಸ್ಸಾಂ ಸಿಎಂ ಪುತ್ರನಿಗಿದೆ ಬೆಂಗಳೂರು ನಂಟು: ಪ್ರತಿಷ್ಠಿತ ಕಾನೂನು ಕಾಲೇಜಿನಲ್ಲಿ ನಂದಿಲ್ ಶರ್ಮಾ ವ್ಯಾಸಂಗ – Kannada News | Assam CM Himanta Biswa Sarma’s Son Builds Academic Path in Bengaluru

ಬೆಂಗಳೂರು/ಗುವಾಹಟಿ, ಮೇ 05: ರಾಜಕೀಯ ರಂಗದಲ್ಲಿ ಅಸ್ಸಾಂನ ಶಕ್ತಿಯಾಗಿ ಬೆಳೆದಿರುವ ಹಿಮಂತ ಬಿಸ್ವಾ ಶರ್ಮಾ(Himanta Biswa Sarma) ಅವರ ಪುತ್ರ ನಂದಿಲ್ ಬಿಸ್ವಾ ಶರ್ಮಾ, ಬೆಂಗಳೂರಿನಲ್ಲಿ ತಮ್ಮ ವೃತ್ತಿಜೀವನದ ಅಡಿಪಾಯ ಹಾಕುತ್ತಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಕಾನೂನು ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ಇವರು, ಕೇವಲ ಓದಿನಲ್ಲಿ ಮಾತ್ರವಲ್ಲದೆ ಕ್ರೀಡೆಯಲ್ಲೂ ಅಸಾಮಾನ್ಯ ಸಾಧನೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ನಂದಿಲ್ ಅವರು ಬೆಂಗಳೂರಿನಲ್ಲಿರುವ ವಿಶ್ವಪ್ರಸಿದ್ಧ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ (NLSIU) ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.  2021ರ ಅಖಿಲ ಭಾರತ ಮಟ್ಟದ CLAT ಪರೀಕ್ಷೆಯಲ್ಲಿ  ಉತ್ತಮ ಅಂಕ ಗಳಿಸುವ ಮೂಲಕ ಅರ್ಹತೆಯ ಆಧಾರದ ಮೇಲೆ ಈ ಸಂಸ್ಥೆಗೆ ಪ್ರವೇಶ ಪಡೆದಿದ್ದರು. ಪ್ರಸ್ತುತ ಅವರು ಐದು ವರ್ಷಗಳ ಸಮಗ್ರ ಬಿ.ಎ., ಎಲ್.ಎಲ್.ಬಿ. ಪದವಿಯ ಅಂತಿಮ ವರ್ಷದಲ್ಲಿದ್ದಾರೆ.

ಡೆಹ್ರಾಡೂನ್‌ನ ಪ್ರಸಿದ್ಧ ದೂನ್ ಶಾಲೆಯಲ್ಲಿ ಶಾಲಾ ಶಿಕ್ಷಣ ಪೂರೈಸಿದ ಅವರು, 2019 ರಲ್ಲಿ ಶಾಲಾ ನಾಯಕನಾಗಿಯೂ ಜವಾಬ್ದಾರಿ ನಿರ್ವಹಿಸಿದ್ದರು. ಇದು ಅವರಲ್ಲಿರುವ ನಾಯಕತ್ವದ ಗುಣಕ್ಕೆ ಸಾಕ್ಷಿಯಾಗಿದೆ. ಕಾನೂನು ಓದಿನ ಕಠಿಣ ಪರಿಶ್ರಮದ ನಡುವೆಯೂ ನಂದಿಲ್ ಕ್ರೀಡೆಯಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ.

ಮತ್ತಷ್ಟು ಓದಿ: ನನ್ನ ಪತ್ನಿ ಮೇಲೆ ಸುಳ್ಳು ಆರೋಪ ಮಾಡ್ಬೇಡಿ ಎನ್ನುತ್ತಾ ಕಾಂಗ್ರೆಸ್ ಬಂಡವಾಳ ಬಿಚ್ಚಿಟ್ಟ ಅಸ್ಸಾಂ ಸಿಎಂ ಹಿಮಂತ ಶರ್ಮಾ

2025ರ ಡಿಸೆಂಬರ್‌ನಲ್ಲಿ ಬಹ್ರೇನ್‌ನಲ್ಲಿ ನಡೆದ ಅತ್ಯಂತ ಕಠಿಣ ಕ್ರೀಡಾಕೂಟಗಳಲ್ಲಿ ಒಂದಾದ IRONMAN 70.3 ಟ್ರಯಾಥ್ಲಾನ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ತಮ್ಮ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಹೆಚ್ಚಿನ ರಾಜಕಾರಣಿಗಳ ಮಕ್ಕಳು ರಾಜಕೀಯಕ್ಕೆ ಪ್ರವೇಶಿಸಲು ಬಯಸುತ್ತಾರೆ. ಆದರೆ ನಂದಿಲ್ ಅವರ ಗುರಿ ವಿಭಿನ್ನವಾಗಿದೆ.

ಪದವಿ ಮುಗಿಸಿದ ನಂತರ ಅವರು ನೇರವಾಗಿ ನ್ಯಾಯಾಲಯದಲ್ಲಿ ವಕೀಲರಾಗಿ ವೃತ್ತಿಜೀವನವನ್ನು ಆರಂಭಿಸುವ ಆಕಾಂಕ್ಷೆ ಹೊಂದಿದ್ದಾರೆ. ನಂದಿಲ್ ಅವರು ರಾಜಕೀಯಕ್ಕಿಂತ ಹೆಚ್ಚಾಗಿ ಕಾನೂನು ಕ್ಷೇತ್ರದಲ್ಲೇ ತಮ್ಮ ಸ್ವಂತ ಗುರುತು ಮೂಡಿಸಬೇಕೆಂದು ತಂದೆ ಹಿಮಂತ ಬಿಸ್ವಾ ಶರ್ಮಾ ಅವರು ಕೂಡ ಆಶಿಸಿದ್ದಾರೆ.

ಒಟ್ಟಾರೆಯಾಗಿ, ನಂದಿಲ್ ಬಿಸ್ವಾ ಶರ್ಮಾ ಅವರು ಬೆಂಗಳೂರಿನಲ್ಲಿ ತಮ್ಮ ಶೈಕ್ಷಣಿಕ ಪಯಣವನ್ನು ಅತ್ಯಂತ ಯಶಸ್ವಿಯಾಗಿ ಮುಂದುವರಿಸುತ್ತಿದ್ದು, ಯುವಜನತೆಗೆ ಮಾದರಿಯಾಗಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 11:34 am, Tue, 5 May 26

Source link

ಟಿವಿಕೆ ಮುಖ್ಯಸ್ಥ ವಿಜಯ್‌ಗೆ ರಾಹುಲ್​​ ಗಾಂಧಿ ಕರೆ: ಟಿವಿಕೆ ಜೊತೆ ಕಾಂಗ್ರೆಸ್​​​​ ಮೈತ್ರಿ?

ಚೆನ್ನೈ, ಮೇ 05: ತಮಿಳುನಾಡು ವಿಧಾನಸಭೆ ಚುನಾವಣೆ 2026ರ ಫಲಿತಾಂಶದ ಬಳಿಕ ವಿಜಯ್ ಅವರ TVK ಪಕ್ಷ ರಾಜ್ಯದಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. 108 ಸ್ಥಾನಗಳನ್ನು ಗೆಲ್ಲುವ ಮೂಲಕ ಏಕೈಕ ದೊಡ್ಡ ಪಕ್ಷ ಎನಿಸಿಕೊಂಡಿದ್ದರೂ, ಸರ್ಕಾರ ರಚನೆಗೆ ಅಗತ್ಯವಿರುವ 118 ಸ್ಥಾನಗಳ ಮ್ಯಾಜಿಕ್ ಸಂಖ್ಯೆಗೆ 10 ಸ್ಥಾನಗಳ ಕೊರತೆ ಇದೆ. ಈ ಹಿನ್ನೆಲೆಯಲ್ಲಿ, TVK ಸರ್ಕಾರ ರಚನೆಗೆ ತನ್ನ ಹಕ್ಕನ್ನು ಮಂಡಿಸಲು ಸಣ್ಣ ಪಕ್ಷಗಳ ಬೆಂಬಲವನ್ನು ಕೋರಿದೆ. TVK ಪ್ರಧಾನ ಕಾರ್ಯದರ್ಶಿಗಳು ಮತ್ತು ಪದಾಧಿಕಾರಿಗಳು ಈಗಾಗಲೇ ರಾಜಭವನಕ್ಕೆ ತೆರಳಿ ಸರ್ಕಾರ ರಚನೆಗೆ ಮನವಿ ಸಲ್ಲಿಸಿದ್ದಾರೆ. ವಿಜಯ್ ಅವರು ರಾಜ್ಯಪಾಲರ ಭೇಟಿಗೆ ಸಮಯವನ್ನೂ ಕೇಳಿದ್ದಾರೆ. ಈ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ವಿಜಯ್‌ಗೆ ಕರೆ ಮಾಡಿ ಅಭೂತಪೂರ್ವ ಗೆಲುವಿಗೆ ಅಭಿನಂದನೆ ಸಲ್ಲಿಸಿದ್ದು, ಇದು ಮೈತ್ರಿಯ ಹೊಸ ಸಾಧ್ಯತೆಗಳಿಗೆ ಮುನ್ಸೂಚನೆ ನೀಡಿದೆ. ಕಾಂಗ್ರೆಸ್ 5 ಸ್ಥಾನಗಳನ್ನು ಗೆದ್ದಿದ್ದು, TVKಗೆ ಬೆಂಬಲ ನೀಡುವ ಕುರಿತು ಚರ್ಚೆಗಳು ನಡೆಯುತ್ತಿವೆ. PMK ಸಹ 4 ಸ್ಥಾನಗಳನ್ನು ಗೆದ್ದಿದ್ದು, ಇವರ ಬೆಂಬಲವೂ ನಿರ್ಣಾಯಕವಾಗಬಲ್ಲದು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link