ಪ್ರತಿ ಮತವೂ ಅಮೂಲ್ಯ: ತಿರುಪ್ಪತ್ತೂರಿನಲ್ಲಿ ಒಂದೇ ಒಂದು ಮತದಿಂದ ಡಿಎಂಕೆ ಸಚಿವರನ್ನು ಸೋಲಿಸಿದ ಶ್ರೀನಿವಾಸ ಸೇತುಪತಿ – Kannada News | Tamil Nadu Results: Tiruppattur Shock: DMK Minister Loses by Single Vote, Highlights Power of Every Vote
ಪೆರಿಯಕರುಪ್ಪನ್ -ಶ್ರೀನಿವಾಸImage Credit source: Patrika ಚೆನ್ನೈ, ಮೇ 05: ಪ್ರಜಾಪ್ರಭುತ್ವದಲ್ಲಿ ಪ್ರತಿ ಮತವೂ ಎಷ್ಟು ನಿರ್ಣಾಯಕ ಎಂಬುದಕ್ಕೆ ತಮಿಳುನಾಡಿ(Tamil Nadu)ನ ತಿರುಪ್ಪತ್ತೂರು ವಿಧಾನಸಭಾ ಕ್ಷೇತ್ರದ ಫಲಿತಾಂಶವು ಒಂದು ಜೀವಂತ ಸಾಕ್ಷಿಯಾಗಿದೆ. ದಶಕಗಳ ಕಾಲದ ರಾಜಕೀಯ ಅನುಭವವಿರುವ ಡಿಎಂಕೆ ಸಚಿವ ಕೆ.ಆರ್. ಪೆರಿಯಕರುಪ್ಪನ್ ಅವರು ನಟ ವಿಜಯ್ ನೇತೃತ್ವದ ಟಿವಿಕೆ (ತಮಿಳಗ ವೆಟ್ರಿ ಕಳಗಂ) ಪಕ್ಷದ ಅಭ್ಯರ್ಥಿ ಶ್ರೀನಿವಾಸ ಸೇತುಪತಿ ವಿರುದ್ಧ ಕೇವಲ ಒಂದೇ ಒಂದು ಮತದ ಅಂತರದಿಂದ ಸೋಲೊಪ್ಪಿಕೊಂಡಿದ್ದಾರೆ. ಉಸಿರು ಬಿಗಿಹಿಡಿಯುವಂತಿದ್ದ ಮತ ಎಣಿಕೆ ಮತ…