Video: ಏಕಾಏಕಿ ರಸ್ತೆಗೆ ಅಡ್ಡಲಾಗಿ ಬಂದ ದನಕ್ಕೆ ಬೈಕ್ ಡಿಕ್ಕಿ; ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ! – Kannada News | Viral CCTV: Bike Cow Crash Highlights Road Safety, Driver Vigilance
ರಸ್ತೆಯಲ್ಲಿ ಸಂಚರಿಸುವಾಗ ಸವಾರರು ಎಷ್ಟು ಜಾಗರೂಕರಾಗಿರಬೇಕು ಎಂಬುದಕ್ಕೆ ಸಾಕ್ಷಿಯಾದ ಅನಿರೀಕ್ಷಿತ ಘಟನೆಯೊಂದು ನಡೆದಿದೆ. ಘಟನೆಗೆ ಸಂಬಂಧಿಸಿದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ವಿಡಿಯೋ ಸೋಶಿಯಲ್ ಮಿಡಿಯಾಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಅದೃಷ್ಟವಶಾತ್, ಅಪಘಾತದ ನಂತರ ಬೈಕ್ ಸವಾರ ತಕ್ಷಣವೇ ಎದ್ದು ನಿಲ್ಲಲು ಪ್ರಯತ್ನಿಸಿದ್ದು, ದನವೂ ಕೂಡ ಎದ್ದು ಓಡಿದೆ, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎನ್ನಲಾಗಿದೆ. ರಸ್ತೆ ಬದಿಯಲ್ಲಿ ಸಂಚರಿಸುವ ಪ್ರಾಣಿಗಳ ಅನಿರೀಕ್ಷಿತ ನುಗ್ಗುವಿಕೆಯ ಬಗ್ಗೆ ವಾಹನ ಸವಾರರು ಸದಾ ಎಚ್ಚರಿಕೆಯಿಂದಿರಬೇಕು ಎಂಬುದಕ್ಕೆ ಈ ಘಟನೆಯು ಎಚ್ಚರಿಕೆಯ ಗಂಟೆಯಾಗಿದೆ….