Headlines

ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಅಧಿಕಾರ ಸ್ಥಾಪನೆಯತ್ತ ಬಿಜೆಪಿ; ನಿಚ್ಚಳ ಬಹುಮತ ಬಹುತೇಕ ನಿಶ್ಚಿತ – Kannada News | BJP set to form govt in West Bengal for first time, TMC losing the ground

ಕೋಲ್ಕತಾ, ಮೇ 4: ಪಶ್ಚಿಮ ಬಂಗಾಳದ ಒಟ್ಟು 294 ವಿಧಾನಸಭಾ ಕ್ಷೇತ್ರಗಳ (West Bengal assembly elections) ಪೈಕಿ ಚುನಾವಣೆ ಪೂರ್ಣಗೊಂಡ 293 ಕ್ಷೇತ್ರಗಳಲ್ಲಿ ಮತ ಎಣಿಕೆ ಇಂದು ಬೆಳಗ್ಗೆ 8 ಗಂಟೆಯಿಂದ ಆರಂಭವಾಗಿದೆ. ಬಂಗಾಳದಲ್ಲಿ ಮೊತ್ತಮೊದಲ ಬಾರಿಗೆ ಬಿಜೆಪಿ ಅಧಿಕಾರ ಸ್ಥಾಪಿಸುವ ಸನ್ನಾಹದಲ್ಲಿದೆ. ಕಳೆದ ಎರಡು ಚುನಾವಣೆಗಳಿಂದ ಬಂಗಾಳದಲ್ಲಿ ಸಾಕಷ್ಟು ಇದ್ದ ಕೇಸರಿ ಹವಾ ಈ ಬಾರಿ ಬಿಜೆಪಿಯನ್ನು ಗದ್ದುಗೆಗೆ ಏರಿಸುತ್ತಿದೆ. ಇತ್ತೀಚಿನ ಮಾಹಿತಿ ಪ್ರಕಾರ, ಬಹುಮತಕ್ಕೆ ಬೇಕಾದ ಮ್ಯಾಜಿಕ್ ನಂಬರ್ ಆದ 148 ಅನ್ನು…

Read More

ತ್ರಿಷಾ ಹುಟ್ಟುಹಬ್ಬದಂದೇ ವಿಜಯ್‌ಗೆ ರಾಜಕೀಯ ಪಟ್ಟ? ತಮಿಳುನಾಡಿನಲ್ಲಿ ‘ಟಿವಿಕೆ’ ಅಬ್ಬರ – Kannada News | Trisha’s Birthday Joy: Vijay’s TVK in A way to Sweeps TN Elections 2026

ಇಂದು (ಮೇ 4) ದಕ್ಷಿಣ ಭಾರತದ ಖ್ಯಾತ ನಟಿ ತ್ರಿಷಾ ಕೃಷ್ಣನ್ ಅವರ ಜನ್ಮದಿನ. ಆದರೆ ಈ ವರ್ಷದ ಹುಟ್ಟುಹಬ್ಬ ಕೇವಲ ಚಿತ್ರರಂಗಕ್ಕೆ ಮಾತ್ರವಲ್ಲದೆ, ಇಡೀ ತಮಿಳುನಾಡು ರಾಜಕೀಯ ಇತಿಹಾಸದಲ್ಲೇ ಅತ್ಯಂತ ವಿಶೇಷವಾದ ದಿನವಾಗಿ ಮಾರ್ಪಟ್ಟಿದೆ. ಒಂದು ಕಡೆ ತ್ರಿಷಾ ಸಂಭ್ರಮದಲ್ಲಿದ್ದರೆ, ಇನ್ನೊಂದೆಡೆ ಅವರ ಆಪ್ತ ಎನಿಸಿಕೊಂಡಿರುವ ದಳಪತಿ ವಿಜಯ್ ನೇತೃತ್ವದ ಟಿವಿಕೆ (Tamilaga Vettri Kazhagam) ಪಕ್ಷವು ಚುನಾವಣಾ ಫಲಿತಾಂಶದಲ್ಲಿ ಭರ್ಜರಿ ಮುನ್ನಡೆ ಸಾಧಿಸಿ ಅಧಿಕಾರದ ಗದ್ದುಗೆಯತ್ತ ಹೆಜ್ಜೆ ಹಾಕುತ್ತಿದೆ. ಇಂದು 43ನೇ ವಸಂತಕ್ಕೆ ಕಾಲಿಟ್ಟಿರುವ…

Read More

NEET-UG 2026: ನೀಟ್ ಯುಜಿ ಪರೀಕ್ಷೆ; ಹೇಳಿಕೆ ಆಧಾರಿತ ಉದ್ದನೆಯ ಪ್ರಶ್ನೆಗಳಿಂದ ವಿದ್ಯಾರ್ಥಿಗಳು ಹೈರಾಣು! – Kannada News | NEET UG 2026 Karnataka: Statement Questions Challenge Students; Cut Off May Rise

ಬೆಂಗಳೂರು: ದೇಶಾದ್ಯಂತ ವೈದ್ಯಕೀಯ ಶಿಕ್ಷಣ ಪ್ರವೇಶಕ್ಕಾಗಿ ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET-UG 2026) ಭಾನುವಾರ ಮುಕ್ತಾಯಗೊಂಡಿದೆ. ಈ ಬಾರಿ ಕರ್ನಾಟಕದ ಸುಮಾರು 1.45 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, ಪ್ರಶ್ನೆ ಪತ್ರಿಕೆಯಲ್ಲಿದ್ದ ಸುದೀರ್ಘವಾದ ‘ಹೇಳಿಕೆ ಆಧಾರಿತ’ ಪ್ರಶ್ನೆಗಳು ಅಭ್ಯರ್ಥಿಗಳ ಬೆವರಿಸುವಂತೆ ಮಾಡಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸಿದ ಈ ಸ್ಪರ್ಧಾತ್ಮಕ ಪರೀಕ್ಷೆಯು ಒಟ್ಟು 720 ಅಂಕಗಳಿಗೆ ನಡೆದಿದ್ದು, ಬಹುತೇಕ ಪ್ರಶ್ನೆಗಳು ಎನ್‌ಸಿಇಆರ್‌ಟಿ (NCERT) ಪಠ್ಯಕ್ರಮಕ್ಕೆ ಅನುಗುಣವಾಗಿಯೇ ಇತ್ತು. ಆದರೆ, ಪ್ರಶ್ನೆಗಳ ಸ್ವರೂಪವು…

Read More

ಬೆಂಗಳೂರು: ತಾಂತ್ರಿಕ ದೋಷದಿಂದ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣ ತಾತ್ಕಾಲಿಕ ಬಂದ್, ಪ್ರಯಾಣಿಕರಿಗೆ ಸಂಕಷ್ಟ – Kannada News | Bengaluru Metro Alert: Cubbon Park Metro Station Temporarily Closed Due to Power Disruption; Trains Won’t Stop

ನಮ್ಮ ಮೆಟ್ರೋ ರೈಲು (ಸಾಂದರ್ಭಿಕ ಚಿತ್ರ)Image Credit source: tv9 ಬೆಂಗಳೂರು, ಮೇ 4: ನಮ್ಮ ಮೆಟ್ರೋ (Namma Metro) ನೇರಳೆ ಮಾರ್ಗದಲ್ಲಿರುವ ಪ್ರಮುಖ ನಿಲ್ದಾಣಗಳಲ್ಲಿ ಒಂದಾದ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣವನ್ನು (Cubbon Park Metro Station) ಸೋಮವಾರ ಬೆಳಿಗ್ಗೆ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ ಎಂದು ಬಿಎಂಆರ್‌ಸಿಎಲ್ (BMRCL) ತಿಳಿಸಿದೆ. ವಿದ್ಯುತ್ ವ್ಯತ್ಯಯದಿಂದಾಗಿ ಮೆಟ್ರೋ ನಿಲ್ದಾಣದ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಪ್ರಯಾಣಿಕರಿಗೆ…

Read More

ಅಂಚೆ ಮತಗಳ ಮರು ಎಣಿಕೆಯಲ್ಲಿ ಗೆದ್ದ ಜೀವರಾಜ್​​ ಈಗ ಶೃಂಗೇರಿಗೆ ಹೊಸ ಶಾಸಕ: MLA ಪ್ರಮಾಣಪತ್ರ ಪಡೆದ ಬಿಜೆಪಿಗ – Kannada News | D.N. Jeevaraj Emerges Winner in Sringeri After Recount; Official Certificate Issued

MLA ಪ್ರಮಾಣಪತ್ರ ಪಡೆದ ಜೀವರಾಜ್​​Image Credit source: Tv9 Kannada ಚಿಕ್ಕಮಗಳೂರು, ಮೇ 04: ಭಾರಿ ಕುತೂಹಲ ಮೂಡಿಸಿದ್ದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಡಿ.ಎನ್. ಜೀವರಾಜ್ ಚುನಾವಣಾ ಅಧಿಕಾರಿಗಳಿಂದ ಅಂತಿಮವಾಗಿ ಪ್ರಮಾಣಪತ್ರ ಸ್ವೀಕರಿಸಿದ್ದಾರೆ. ಆ ಮೂಲಕ ಮರುಎಣಿಕೆಯಲ್ಲಿಯೂ ಗೆಲುವಿನ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್​​ನ ಟಿ.ಡಿ. ರಾಜೇಗೌಡಗೆ ಸೋಲಾಗಿದೆ. ಅಂಚೆ ಮತಗಳ ಮರು ಎಣಿಕೆ ವೇಳೆ 52 ಮತಗಳಿಂದ ಜೀವರಾಜ್​ ಗೆಲುವು ಸಾಧಿಸಿದ್ದು,  ಚಿಕ್ಕಮಗಳೂರು ಜಿಲ್ಲೆಯ 5 ಕ್ಷೇತ್ರಗಳ ಪೈಕಿ…

Read More

‘ನಾನಿನ್ನೂ ಆ ಕ್ಷಣವನ್ನೇ ಜೀವಿಸುತ್ತಿದ್ದೇನೆ’; ಫೆಮಿನಾ ಮಿಸ್ ಇಂಡಿಯಾ ಸಾಧ್ವಿ ಸೈಲ್

ಕಾರವಾರ ಶಾಸಕ ಸತೀಶ್ ಸೈಲ್ ಮಗಳು ಸಾಧ್ವಿ ಅವರು 2026ನೇ ಸಾಲಿನ ಫೆಮಿನಾ ಮಿಸ್ ಇಂಡಿಯಾ ಗೆದ್ದಿದ್ದಾರೆ. ಅವರು ಟಿವಿ9 ಪಾಡ್​​ಕಾಸ್ಟ್​​ ಅಲ್ಲಿ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ. ‘ನಾನು ಇನ್ನೂ ಆ ಕ್ಷಣವನ್ನೇ ಜೀವಿಸುತ್ತೇನೆ’ ಎಂದು ಹೇಳಿದ್ದಾರೆ. ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ಅವರು ಗೋವಾ ರಾಜ್ಯವನ್ನು ಪ್ರತಿನಿಧಿಸಿದ್ದರು. ಅಲ್ಲಿತೂ ಅವರಿಗೆ ಭಾರೀ ಸ್ವಾಗತ ಸಿಕ್ಕಿದೆ. ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ. Source link

Read More

IPL 2026 Orange Cap: ಆರೆಂಜ್ ಕ್ಯಾಪ್ ರೇಸ್‌ನಲ್ಲಿ ದೊಡ್ಡ ಬದಲಾವಣೆ: ಕೊಹ್ಲಿಗೆ ಶಾಕ್ ನೀಡಿದ ಸಾಯಿ ಸುದರ್ಶನ್ – Kannada News | Big change in IPL 2026 Orange Cap race Sai Sudarshan gives Virat Kohli a shock

ಬೆಂಗಳೂರು (ಮೇ. 04): ಐಪಿಎಲ್ 2026 ಸೀಸನ್ ರೋಚಕ ಘಟ್ಟದತ್ತ ತಲುಪುತ್ತಿದೆ. ಮೈದಾನದಲ್ಲಿ ತಂಡಗಳ ನಡುವಿನ ಹೋರಾಟ ಒಂದು ವಿಷಯವಾದರೆ, ಆಟಗಾರರಲ್ಲಿ ವೈಯಕ್ತಿಕ ದಾಖಲೆಗಳ ಹುಡುಕಾಟ ಇನ್ನೊಂದು ವಿಷಯ. ವಿಶೇಷವಾಗಿ ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಕ್ಯಾಪ್‌ಗಾಗಿ ಓಟವು ಪ್ರತಿ ಪಂದ್ಯದಿಂದ ಪಂದ್ಯಕ್ಕೆ ಬದಲಾಗುತ್ತಿದೆ. ಇತ್ತೀಚೆಗೆ ಗುಜರಾತ್ ಟೈಟಾನ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದ ನಂತರ, ಈ ರೇಸ್‌ನಲ್ಲಿ ಭಾರಿ ಬದಲಾವಣೆಗಳಾಗಿವೆ. ಯುವ ಆಟಗಾರ ಸಾಯಿ ಸುದರ್ಶನ್ (Sai Sudharshan) ಮಿಂಚಿನ ಅರ್ಧಶತಕದೊಂದಿಗೆ ಮುನ್ನಡೆ ಸಾಧಿಸಿದ್ದು,…

Read More

MI vs LSG, IPL 2026: ರೋಚಕತೆ ಸೃಷ್ಟಿಸಿದ ಇಂದಿನ ಮುಂಬೈ-ಲಕ್ನೋ ಐಪಿಎಲ್ ಪಂದ್ಯ: ಸೋತ ತಂಡ ಟೂರ್ನಿಯಿಂದ ಔಟ್ – Kannada News | MI vs LSG, IPL 2026 Today’s thrilling Match between Mumbai vs Lucknow The losing team is out of the tournament

ಬೆಂಗಳೂರು (ಮೇ. 04): ಇಂಡಿಯನ್ ಪ್ರೀಮಿಯರ್ ಲೀಗ್ 2026 ರ 47 ನೇ ಪಂದ್ಯ ಸೋಮವಾರ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ನಡೆಯಲಿದೆ. ಎರಡೂ ತಂಡಗಳು ಪ್ಲೇಆಫ್ ತಲುಪುವ ತಮ್ಮ ಮರೆಯಾಗುತ್ತಿರುವ ಆಸೆಯನ್ನು ಪುನರುಜ್ಜೀವನಗೊಳಿಸಲು ಹೋರಾಡಲಿದೆ. ಈ ಪಂದ್ಯವು ಋತುವಿನಲ್ಲಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ತಂಡಗಳ ನಡುವೆ ನಡೆಯುತ್ತಿದೆ. ಲಕ್ನೋ ಸೂಪರ್ ಜೈಂಟ್ಸ್ ಐಪಿಎಲ್ 2026 ರಲ್ಲಿ 8 ಪಂದ್ಯಗಳಲ್ಲಿ 6 ರಲ್ಲಿ ಸೋತು ಪಾಯಿಂಟ್ ಪಟ್ಟಿಯಲ್ಲಿ…

Read More

ಒಂದೇ ಒಂದು ರನ್​ನಿಂದ ಸಾರ್ವಕಾಲಿಕ ದಾಖಲೆ ತಪ್ಪಿಸಿಕೊಂಡ ಬಾಬರ್ ಆಝಂ – Kannada News | Babar Azam one run short of breaking PSL record

ಇದಾಗ್ಯೂ ಈ ಬಾರಿ ಬಾರಿಸಿದ 588 ರನ್​ಗಳೊಂದಿಗೆ ಬಾಬರ್ ಆಝಂ ಟಿ20 ಕ್ರಿಕೆಟ್​ನಲ್ಲಿ 12 ಸಾವಿರ ರನ್​ಗಳನ್ನು ಪೂರೈಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತೀ ಕಡಿಮೆ ಇನಿಂಗ್ಸ್​ಗಳ ಮೂಲಕ 12000 ರನ್​ಗಳಿಸಿದ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿತ್ತು. ಗೇಲ್ 343 ಇನಿಂಗ್ಸ್​ಗಳ ಮೂಲಕ 12 ಸಾವಿರ ರನ್​ ಪೂರೈಸಿದ್ದರೆ, ಬಾಬರ್ ಆಝಂ 338 ಇನಿಂಗ್ಸ್​ಗಳ ಮೂಲಕ ಈ ಸಾಧನೆ ಮಾಡಿದ್ದಾರೆ. Source link

Read More

Money Attraction Vastu: ಮನೆಯಲ್ಲಿ ಹಣ ಶಾಶ್ವತವಾಗಿ ನೆಲೆಸಲು ಈ ಸರಳ ತಂತ್ರ ಪ್ರಯತ್ನಿಸಿ; ತಿಂಗಳಲ್ಲೇ ಫಲಿತಾಂಶ ಪಡೆಯುವಿರಿ – Kannada News | Achieving Permanent Financial Stability: A Traditional Method for Your Home

ಪ್ರತಿಯೊಂದು ಕುಟುಂಬಕ್ಕೂ ಆರ್ಥಿಕ ಸ್ಥಿರತೆ ಅತ್ಯಗತ್ಯ. ಮನೆಯನ್ನು ಕಟ್ಟಲು, ಮದುವೆ ಮಾಡಲು, ಮಕ್ಕಳ ಶಿಕ್ಷಣ ಶುಲ್ಕ ಪಾವತಿಸಲು, ಕುಟುಂಬ ನಿರ್ವಹಣೆಗೆ, ಮಾಸಿಕ ಇಎಂಐಗಳನ್ನು ತುಂಬಲು ಹಣದ ಅವಶ್ಯಕತೆ ಇರುತ್ತದೆ. ಇಂತಹ ಸಂದರ್ಭಗಳಲ್ಲಿ, ಮನೆಯಲ್ಲಿ ಹಣದ ಕೊರತೆ ಆಗದಂತೆ ನೋಡಿಕೊಳ್ಳಲು ಒಂದು ಸರಳ ಮತ್ತು ಪರಿಣಾಮಕಾರಿ ವಿಧಾನದ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ಸಂಪತ್ತು ಆಕರ್ಷಿಸುವ ಈ ವಿಧಾನವು ಹಣವನ್ನು ಭದ್ರವಾಗಿಡುವ ಕಬ್ಬಿಣದ…

Read More