Category Archives: Blog

Your blog category

Video: ಬೃಹತ್ ನೀರಿನ ಟ್ಯಾಂಕ್ ಮೇಲೆ ರೀಲ್ಸ್ ಶೂಟ್, ಆಯತಪ್ಪಿ ಬಿದ್ದು ಯುವಕ ಸಾವು, ಸಿಲುಕಿಕೊಂಡಿದ್ದ ಇಬ್ಬರ ರಕ್ಷಿಸಿದ ವಾಯುಪಡೆ – Kannada News | Reel Attempt Turns Fatal in Uttar Pradesh; One Teen Dies, Two Rescued

ಲಕ್ನೋ, ಮೇ 04: ರೀಲ್ಸ್​ ಮಾಡುವ ಹುಚ್ಚು ಯುವಕನ ಜೀವವನ್ನೇ ಕಸಿದುಕೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ರೀಲ್ಸ್​ ಮಾಡಲು ಮೂವರು ಯುವಕರು ಬೃಹತ್ ನೀರಿನ ಟ್ಯಾಂಕ್(Water Tank) ಏರಿದ್ದರು. ಮೂವರಲ್ಲಿ ಒಬ್ಬಾತ ಮೇಲಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದು, ಇಬ್ಬರನ್ನು ವಾಯುಪಡೆ ರಕ್ಷಿಸಿದೆ. ಶನಿವಾರ ಮಧ್ಯಾಹ್ನ ಐವರು ಮಕ್ಕಳು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಚಿತ್ರೀಕರಿಸುವ ಆಸೆಯಿಂದ 60 ಅಡಿ ಎತ್ತರದ ಹಳೆಯ ನೀರಿನ ಟ್ಯಾಂಕ್ ಹತ್ತಿದ್ದರು. ಆದರೆ, ಈ ಆಟವು ಕ್ಷಣಮಾತ್ರದಲ್ಲಿ ಭೀಕರ ಅವಘಡವಾಗಿ ಬದಲಾಯಿತು.

ಮಕ್ಕಳು ಟ್ಯಾಂಕ್ ಹತ್ತಿ ವೀಡಿಯೊ ಚಿತ್ರೀಕರಿಸಿದ ನಂತರ ಕೆಳಗೆ ಇಳಿಯಲು ಪ್ರಯತ್ನಿಸುತ್ತಿದ್ದಾಗ, ಅವರ ಭಾರಕ್ಕೆ ಏಣಿಯು ಏಕಾಏಕಿ ಕುಸಿದುಬಿದ್ದಿದೆ. ಈ ವೇಳೆ ಮೂವರು ಮಕ್ಕಳು ಸುಮಾರು 50 ಅಡಿ ಎತ್ತರದಿಂದ ನೇರವಾಗಿ ನೆಲಕ್ಕೆ ಬಿದ್ದರು. 13 ವರ್ಷದ ಸಿದ್ಧಾರ್ಥ್ ಎಂಬ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಏಣಿ ಬಿದ್ದ ಕಾರಣ ಉಳಿದ ಇಬ್ಬರು ಮಕ್ಕಳು 60 ಅಡಿ ಎತ್ತರದ ಟ್ಯಾಂಕ್ ಮೇಲೆ ಸಿಲುಕಿಕೊಂಡರು. ಸ್ಥಳೀಯರು ಮತ್ತು ಅಧಿಕಾರಿಗಳು ರಕ್ಷಣೆಗೆ ಮುಂದಾದರೂ ಸವಾಲುಗಳು ಎದುರಾದವು.ಕ್ರೇನ್ ಮತ್ತು ದೊಡ್ಡ ಯಂತ್ರಗಳು ಸ್ಥಳಕ್ಕೆ ತಲುಪಲು ಜೌಗು ಭೂಮಿ ಅಡ್ಡಿಯಾಯಿತು. ಮಳೆಯ ಕಾರಣದಿಂದ ಎಲ್ಲರ ಪ್ರಯತ್ನವೂ ವಿಫಲವಾಗಿತ್ತು.

ಮತ್ತಷ್ಟು ಓದಿ: ಬಿಸಿಲ ತಾಪದಿಂದ ಬಚಾವಾಗಲು ನೀರಿನ ಟ್ಯಾಂಕನ್ನೇ ಸ್ವಿಮ್ಮಿಂಗ್ ಪೂಲ್ ಮಾಡಿಕೊಂಡ ಕೋತಿಗಳು

ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಭಾರತೀಯ ವಾಯುಪಡೆಯ ನೆರವು ಪಡೆಯಲು ಸೂಚಿಸಿದ್ದಾರೆ. ರಾತ್ರೋರಾತ್ರಿ ಆರಂಭವಾದ ಈ ಕಾರ್ಯಾಚರಣೆಗೆ Mi-17 V5 ಹೆಲಿಕಾಪ್ಟರ್ ಅನ್ನು ಬಳಸಲಾಯಿತು. ಕತ್ತಲೆ ಮತ್ತು ಮಳೆಯ ನಡುವೆಯೂ ವಾಯುಪಡೆಯ ಸಿಬ್ಬಂದಿ ಇಬ್ಬರನ್ನು ರಕ್ಷಿಸಿದ್ದಾರೆ.

ಸುಮಾರು 16 ಗಂಟೆಗಳ ನಿರಂತರ ಪ್ರಯತ್ನದ ನಂತರ, ಬೆಳಗ್ಗೆ 5.20 ರ ಸುಮಾರಿಗೆ ಟ್ಯಾಂಕ್ ಮೇಲಿದ್ದ ಇಬ್ಬರು ಯುವಕರನ್ನು ಸುರಕ್ಷಿತವಾಗಿ ಏರ್‌ಲಿಫ್ಟ್ ಮಾಡಲಾಯಿತು. ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಎಸ್‌ಎಸ್‌ಪಿ ಸೇರಿದಂತೆ ಹಿರಿಯ ಅಧಿಕಾರಿಗಳು ರಾತ್ರಿಯಿಡೀ ಸ್ಥಳದಲ್ಲಿದ್ದು ರಕ್ಷಣಾ ಕಾರ್ಯದ ಉಸ್ತುವಾರಿ ವಹಿಸಿದ್ದರು.

ಈ ಘಟನೆಯು ಸಾಮಾಜಿಕ ಮಾಧ್ಯಮಕ್ಕಾಗಿ ಅಪಾಯಕಾರಿ ಸಾಹಸಗಳನ್ನು ಮಾಡುವ ಯುವಜನತೆಗೆ ಒಂದು ಕಠಿಣ ಪಾಠವಾಗಿದೆ. ಕೇವಲ ಕೆಲವು ‘ಲೈಕ್ಸ್’ ಮತ್ತು ‘ಶೇರ್’ಗಳಿಗಾಗಿ ಅಮೂಲ್ಯವಾದ ಜೀವವನ್ನು ಪಣಕ್ಕಿಡುವುದು ಎಷ್ಟು ಅಪಾಯಕಾರಿ ಎಂಬುದನ್ನು ಈ ಘಟನೆಯಿನದ ಅರಿತುಕೊಳ್ಳಬೇಕು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Bengaluru Rains: ಬೆಂಗಳೂರಿನಲ್ಲಿ ಬೆಳಗ್ಗೆಯೇ ಮಳೆ ಅಬ್ಬರ, ಮೆಜೆಸ್ಟಿಕ್-ಶಾಂತಿನಗರ ಸೇರಿ ಹಲವೆಡೆ ವರ್ಷಧಾರೆ – Kannada News | Bengaluru Rain Update: Heavy Morning Showers Lash Majestic, Shantinagar and Other Areas; IMD Predicts 3 More Days of Rain

ಬೆಂಗಳೂರಿನಲ್ಲಿ ಬೆಳಗ್ಗೆಯೇ ಮಳೆImage Credit source: tv9

ಬೆಂಗಳೂರು, ಮೇ 4: ಬೆಂಗಳೂರಿನ (Bengaluru) ಮೆಜೆಸ್ಟಿಕ್, ಕೆಆರ್ ಮಾರುಕಟ್ಟೆ, ಶಾಂತಿನಗರ, ಯಶವಂತಪುರ, ಮಲ್ಲೇಶ್ವರ, ರಾಜಾಜಿನಗರ, ಮಹಾಲಕ್ಷ್ಮಿ ಲೇಔಟ್, ನಂದಿನಿ ಲೇಔಟ್ ಸುತ್ತಮುತ್ತ ಸೋಮವಾರ (ಮೇ 4) ಬೆಳ್ಳಂ ಬೆಳಗ್ಗೆಯೇ ಭಾರಿ ಮಳೆ (Bangalore Rains) ಸುರಿದಿದೆ. ಕೆಆರ್ ಮಾರುಕಟ್ಟೆಯಲ್ಲಿ ಬೆಳಗ್ಗಿನ ವ್ಯಾಪಾರ ಜೋರಾಗಿದ್ದಲೇ ಏಕಾಏಕಿ ಭಾರಿ ಮಳೆ ಸುರಿದಿದ್ದರಿಂದ ಅವಾಂತರ ಸೃಷ್ಟಿಯಾಯಿತು. ಏತನ್ಮಧ್ಯೆ, ಬೆಂಗಳೂರಿನಲ್ಲಿ ಮುಂದಿನ 3 ದಿನಗಳ ಕಾಲ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರಿಗೆ 3 ದಿನ ಮಳೆ ಅಲರ್ಟ್

ಬೆಂಗಳೂರಿನಲ್ಲಿ ಮುಂದಿನ ಮೂರು ದಿನಗಳ ಕಾಲ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನಗರದ ವಿವಿಧ ಭಾಗಗಳಲ್ಲಿ ಸಂಜೆ ಅಥವಾ ರಾತ್ರಿಯ ಅವಧಿಯಲ್ಲಿ ಮಳೆಯಾಗುವ ನಿರೀಕ್ಷೆಯಿದೆ.

ಮಳೆ ಮುನ್ಸೂಚನೆ ವಿವರ

  • ಮೇ 4 ಮತ್ತು 5 ರಂದು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರಲಿದ್ದು, ಸಂಜೆ ಅಥವಾ ರಾತ್ರಿ ವೇಳೆಗೆ ಗುಡುಗು ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಸಂಭವವಿದೆ.
  • ಮಳೆಯ ಸಮಯದಲ್ಲಿ ಗಂಟೆಗೆ ಸುಮಾರು 30-40 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಕೇಂದ್ರ ತಿಳಿಸಿದೆ.
  • ನಗರದ ಗರಿಷ್ಠ ತಾಪಮಾನವು 35 ಡಿಗ್ರಿ ಸೆಲ್ಶಿಯಸ್​ನಿಂದ 36 ಡಿಗ್ರಿ ಸೆಲ್ಶಿಯಸ್​ ಆಸುಪಾಸಿನಲ್ಲಿರಲಿದ್ದು, ಕನಿಷ್ಠ ತಾಪಮಾನವು 23 ಡಿಗ್ರಿ ಸೆಲ್ಶಿಯಸ್​ ಇರಲಿದೆ.

ದಕ್ಷಿಣ ಒಳನಾಡಿನ ರಾಮನಗರ, ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಮೇ 5 ರಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇದನ್ನೂ ಓದಿ: ಮಳೆ ಅವಾಂತರ: ಮರದ ಕೊಂಬೆ ಬಿದ್ದು ಕಾರು ಜಖಂ

ಮುಂದಿನ ಕೆಲವು ದಿನಗಳಲ್ಲಿ ಮಳೆಯ ತೀವ್ರತೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ನಗರ ಪ್ರದೇಶಗಳಲ್ಲಿ ಜನರು ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ ಎಂದು ಬೆಂಗಳೂರು ಹವಾಮಾನ ಕೇಂದ್ರದ ನಿರ್ದೇಶಕರು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಾಖಲೆಯ ಗಳಿಕೆ ಮಾಡಿದ ‘ಕೆಡಿ’ ಮೂವಿ; 50 ಕೋಟಿ ರೂ. ಕ್ಲಬ್ ಸನಿಹದಲ್ಲಿ ಧ್ರುವ ಸಿನಿಮಾ – Kannada News | KD Movie Box Office Collection Day 4: Nearing 50 Crore Club After Massive Collections

ಪ್ರೇಮ್ ನಿರ್ದೇಶನದ ಹಾಗೂ ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾ ಏಪ್ರಿಲ್ 30ರಂದು ರಿಲೀಸ್ ಆಯಿತು. ಈ ಸಿನಿಮಾ ಈಗ ದಾಖಲೆಯ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್​​​ನಲ್ಲಿ ಮುನ್ನುಗ್ಗುತ್ತಿದೆ. ಈ ಚಿತ್ರದ ಒಟ್ಟಾರೆ ಕಲೆಕ್ಷನ್ ಕೇಳಿದ ಅನೇಕರು ಅಚ್ಚರಿ ಹೊರಹಾಕುತ್ತಿದ್ದಾರೆ. ಸಾಲು ಸಾಲು ಹಿನ್ನಡೆ ಅನುಭವಿಸುತ್ತಿದ್ದ ಕೆವಿಎನ್​​ಗೆ ಮೊದಲ ಬಾರಿಗೆ ಖುಷಿ ಸುದ್ದಿ ಸಿಕ್ಕಿದೆ. ಈ ಬೆಳವಣಿಗೆಯಿಂದ ನಿರ್ಮಾಪಕರು ನಿಟ್ಟುಸಿರು ಬಿಡುವಂತೆ ಆಗಿದೆ.

‘ಕೆಡಿ’ ಸಿನಿಮಾ ಸಾಕಷ್ಟು ಹೈಪ್ ಸೃಷ್ಟಿ ಮಾಡಿತ್ತು. ದೊಡ್ಡ ಬಜೆಟ್​​ನಲ್ಲಿ ಈ ಚಿತ್ರ ಸಿದ್ಧವಾಗಿತ್ತು. ರೆಟ್ರೋ ಕಾಲದ ಕಥೆ ಆಗಿರುವುದರಿಂದ ಇದರಲ್ಲಿ ದೊಡ್ಡ ದೊಡ್ಡ ಸೆಟ್​​ಗಳ ನಿರ್ಮಾಣ ಆಗಿತ್ತು. ಈ ವಿಷಯದಲ್ಲಿ ರಾಜಿ ಆಗದೆ ಕೆವಿಎನ್ ಸಂಸ್ಥೆ ಧಾರಾಳವಾಗಿ ಹಣ ಸುರಿದಿದೆ. ಇದರಿಂದ ಸಿನಿಮಾ ಅದ್ದೂರಿಯಾಗಿ ಮೂಡಿ ಬಂದಿದೆ. ನಾಲ್ಕು ದಿನಗಳಲ್ಲಿ ‘ಕೆಡಿ’ ಚಿತ್ರದ ಕಲೆಕ್ಷನ್ ದೊಡ್ಡ ಮಟ್ಟದಲ್ಲೇ ಆಗಿದೆ.

ಗುರುವಾರ 1 ಕೋಟಿ ರೂಪಾಯಿ, ಶುಕ್ರವಾರ 6.95 ಕೋಟಿ ರೂಪಾಯಿ, ಶನಿವಾರ 5.20 ಕೋಟಿ ರೂಪಾಯಿ, ಭಾನುವಾರ 5 ಕೋಟಿ ರೂಪಾಯಿ ಗಳಿಕೆ ಆಗಿದೆ. ಈ ಮೂಲಕ ಭಾರತದಲ್ಲಿ 23.35 ಕೋಟಿ ರೂಪಾಯಿ ಗಳಿಸಿದೆ. ಭಾರತದಲ್ಲಿ ಗ್ರಾಸ್ ಕಲೆಕ್ಷನ್ 27 ಕೋಟಿ ರೂಪಾಯಿ ಇದೆ ಎಂದು ಬಾಕ್ಸ್ ಆಫೀಸ್ ಟ್ರ್ಯಾಕಿಂಗ್ ಜಾಲತಾಣ ಸ್ಯಾಕ್ನಿಲ್ಕ್​ ವರದಿ ಮಾಡಿದೆ.

ಕೇವಲ ಭಾರತದಲ್ಲಿ ಮಾತ್ರವಲ್ಲದೆ ವಿಶ್ವ ಮಟ್ಟದಲ್ಲಿಯೂ ಸಿನಿಮಾ ಅದ್ದೂರಿ ಗಳಿಕೆ ಮಾಡುತ್ತಿದೆ. ಈ ಸಿನಿಮಾ ವಿದೇಶದಲ್ಲಿ 9.15 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ವಿಶ್ವ ಮಟ್ಟದಲ್ಲಿ ಚಿತ್ರ 36.16 ಕೋಟಿ ರೂಪಾಯಿ ಗಳಿಸಿದೆ. ಈ ಚಿತ್ರ 50 ಕೋಟಿ ರೂಪಾಯಿ ಗಳಿಸಲು ಬೇಕಿರೋದು ಕೇವಲ 14 ಕೋಟಿ ರೂಪಾಯಿ ಮಾತ್ರ. ಈ ವಾರಾಂತ್ಯದ ವೇಳೆಗೆ ಈ ಸಿನಿಮಾ 50 ಕೋಟಿ ರೂಪಾಯಿ ಗಳಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: ಎರಡನೇ ದಿನವೂ ಭರ್ಜರಿ ಗಳಿಕೆ ಮಾಡಿದ ‘ಕೆಡಿ’; ಧ್ರುವ ಸಿನಿಮಾ ಕಲೆಕ್ಷನ್ ಎಷ್ಟು?

‘ಕೆಡಿ’ ಚಿತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಗುತ್ತಿದೆ. ಹೀಗಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಜನರು ಥಿಯೇಟರ್​​ಗೆ ಬರುತ್ತಿದ್ದಾರೆ. ಇತ್ತೀಚೆಗೆ ಸೆಲೆಬ್ರಿಟಿ ಶೋ ಆಯೋಜನೆ ಮಾಡಲಾಗಿತ್ತು. ಅನೇಕ ಸೆಲೆಬ್ರಿಟಿಗಳು ಸಿನಿಮಾ ವೀಕ್ಷಣೆ ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Assembly Election 2026 LIVE Counting and Results: ಪಂಚರಾಜ್ಯ ಚುನಾವಣೆ ಫಲಿತಾಂಶ 2026, ಮತ ಎಣಿಕೆಗೆ ಕ್ಷಣಗಣನೆ – Kannada News | West Bengal, Tamil Nadu, Kerala, Assam, Puducherry Assembly Election 2026 Live Counting and Results Updates

Bagalkot, Davangere, West Bengal, Tamil Nadu, Kerala, Assam, Puducherry Assembly Election 2026 Live Counting and Results Updates in Kannada: ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ವಿಧಾನಸಭಾ ಚುನಾವಣೆ, ಕರ್ನಾಟಕದ ದಾವಣಗೆರೆ, ಬಾಗಲಕೋಟೆ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಇಂದು (ಮೇ 4) ಪ್ರಕಟವಾಗುತ್ತಿದೆ. ಅಸ್ಸಾಂನ 126 ಸ್ಥಾನಗಳಿಗೆ, ಕೇರಳದ 140 ಸ್ಥಾನಗಳಿಗೆ ಮತ್ತು ಪುದುಚೇರಿಯ 30 ಸ್ಥಾನಗಳಿಗೆ ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ ನಡೆದಿತ್ತು. ತಮಿಳುನಾಡಿನ 234 ಸ್ಥಾನಗಳಿಗೆ ಏಪ್ರಿಲ್ 23 ರಂದು ಒಂದೇ ಹಂತದಲ್ಲಿ ಮತದಾನವೂ ನಡೆದಿತ್ತು. ಪಶ್ಚಿಮ ಬಂಗಾಳದ 294 ಸ್ಥಾನಗಳಿಗೆ ಎರಡು ಹಂತಗಳಲ್ಲಿ ಮತದಾನ ನಡೆದಿತ್ತು. ಮೊದಲ ಹಂತದಲ್ಲಿ 16 ಜಿಲ್ಲೆಗಳ 152 ಸ್ಥಾನಗಳಿಗೆ ಮತದಾನ ನಡೆದಿತ್ತು. ಎರಡನೇ ಹಂತದಲ್ಲಿ ಏಪ್ರಿಲ್ 29 ರಂದು 8 ಜಿಲ್ಲೆಗಳ 142 ಸ್ಥಾನಗಳಿಗೆ ಮತದಾನ ನಡೆದಿತ್ತು.

ಎಕ್ಸಿಟ್ ಪೋಲ್​ಗಳ ಪ್ರಕಾರ, ಬಿಜೆಪಿ ಅಸ್ಸಾಂನಲ್ಲಿ ಹ್ಯಾಟ್ರಿಕ್ ಗೆಲುವಿನ ಸಾಧ್ಯತೆ ಕಾಣುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿ ಸರ್ಕಾರ ರಚಿಸುವತ್ತ ಸಾಗಲಿದೆ. ಇದಲ್ಲದೆ, ಕೇರಳದಲ್ಲಿ ಎಡಪಕ್ಷಗಳು ಅಧಿಕಾರ ಕಳೆದುಕೊಳ್ಳಬಹುದು ಎನ್ನಲಾಗಿದೆ. ಆದಾಗ್ಯೂ, ಇವು ಎಕ್ಸಿಟ್ ಪೋಲ್​ಗಳ ಅಭಿಪ್ರಾಯವಷ್ಟೇ. ಅಧಿಕೃತ ಫಲಿತಾಂಶ ಇಂದು,ಮೇ 4 ರಂದು ಪ್ರಕಟವಾಗಲಿದೆ. ಮತ ಎಣಿಕೆ ಹಾಗೂ ಫಲಿತಾಂಶದ ಕ್ಷಣ ಕ್ಷಣದ ಅಪ್ಡೇಟ್​ಗೆ ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ…

Source link

ದಿನ ಭವಿಷ್ಯ: ಈ ರಾಶಿಯವರು ಇಂದು ಸಿಗುವ ಅಶುಭಸೂಚನೆಯನ್ನು ನಿರ್ಲಕ್ಷಿಸಬೇಡಿ… – Kannada News | Horoscope May 04 Monday 2026; Dina Rashi Bhavishya Today, Checkout the details here

ಮೇಷ ರಾಶಿ:

ನೀವು ಮಾಡುವ ಕಠಿಣ ಪರಿಶ್ರಮವು ನಿಮಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಕೃಷಿ ಕಾರ್ಯದಲ್ಲಿ ನೀವು ತೊಡಗುವಿರಿ. ಇದು ನಿಮ್ಮನ್ನು ನೀವು ಅರ್ಥಮಾಡಿಕೊಳ್ಳುವ ಸಮಯ ಕೂಡ. ಇದರಿಂದ ನೀವು ಯಾವುದೇ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಲು ಸಾಧ್ಯವಾಗುತ್ತದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಉದ್ಯೋಗದಲ್ಲಿ ಮೇಲ್ಮಟ್ಟಕ್ಕೆ ಹೋಗಲಿದ್ದೀರಿ. ದೂರಪ್ರಯಾಣವನ್ನು ಇಂದು ಇಷ್ಟಪಡುವಿರಿ.

ವೃಷಭ ರಾಶಿ :

ಪ್ರಯೋಜನವಾಗದ ಮಾತುಗಳನ್ನು ಹೇಳುವುದು ಬೇಡ. ಸತ್ಯವನ್ನೇ ನಂಬಿ ಬದುಕುವವರು ಎಂದು ಇದುವರೆಗೆ ತಿಳಿದದ್ದು ಸುಳ್ಳು ಮಾಡುವಿರಿ. ಹಣಕಾಸಿನ ವಿಷಯಗಳಲ್ಲಿ ಕೆಲವು ತೊಡಕುಗಳು ಮತ್ತು ಸಮಸ್ಯೆಗಳು ಎದುರಾಗುತ್ತವೆ, ಆದರೆ ನೀವು ಪ್ರತಿಯೊಂದು ಕಷ್ಟವನ್ನು ನಿರ್ಭಯವಾಗಿ ಎದುರಿಸುತ್ತೀರಿ ಮತ್ತು ಪರಿಹಾರವನ್ನೂ ಕಂಡುಕೊಳ್ಳುತ್ತೀರಿ. ಕಲ್ಪನೆಯಲ್ಲಿ ಓಡಾಡುವುದನ್ನು ಕಡಿಮೆ ಮಾಡಿ. ಮಕ್ಕಳಿಂದ ನೀವು ಸ್ವತಂತ್ರರಾಗಲು ಬಯಸುವಿರಿ.

ಮಿಥುನ ರಾಶಿ:

ಹೆಸರಾಂತ ವ್ಯಕ್ತಿಗಳ ಸಹವಾಸವು ನಿಮಗೆ ಸಿಗಲಿದೆ. ದೂರಪ್ರಯಾಣದಲ್ಲಿ‌ ನಿಮಗೆ ನಾನಾ ತೊಂದರೆಗಳು ಎದುರಾಗಬಹುದು. ಕೆಲಸಗಳು ಪೂರ್ಣಗೊಳ್ಳುತ್ತವೆ, ಅದು ಸಂತೋಷವನ್ನು ತರುತ್ತದೆ. ಹೊಸ ಆಸ್ತಿಯನ್ನು ಖರೀದಿಸುವ ಯೋಜನೆಗಳಿರುತ್ತವೆ ಮತ್ತು ಕೆಲಸ ವಿಸ್ತರಿಸುತ್ತದೆ. ಮುಂದೆ ಅದೇ ದೊಡ್ಡ ಕಂಟಕವಾದೀತು. ನಂಬಿಕೆಯನ್ನು ಕಳೆದುಕೊಳ್ಳಬೇಕಾಗುವುದು. ನಿಮ್ಮಲ್ಲಿ ಎಷ್ಟೇ ಆತ್ಮವಿಶ್ವಾಸವಿದ್ದರೂ ಕೆಲಸಗಳ ಒತ್ತಡದಲ್ಲಿ ಗೊಂದಲದಲ್ಲಿ ಸಿಕ್ಕಿಕೊಳ್ಳುವಿರಿ.

ಕರ್ಕಾಟಕ ರಾಶಿ:

ಲಲಿತಕಲೆಗಳಲ್ಲಿ ಆಸಕ್ತಿ ಇದ್ದರೆ ನಿಮಗೆ ಗೌರವ, ಸಮ್ಮಾನಗಳು ಸಿಗುವುದು. ಮೇಲಿನಿಂದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ. ಕುಟುಂಬದಲ್ಲಿ ಸಂತೋಷ ಇರುತ್ತದೆ ಮತ್ತು ಒಟ್ಟಿಗೆ ಕೆಲವು ಹೊಸ ಕೆಲಸಗಳನ್ನು ಪ್ರಾರಂಭಿಸುವ ಆಲೋಚನೆ ಇರಬಹುದು. ಹಣದ ವಿಷಯದಲ್ಲಿ ದಿನವು ಉತ್ತಮವಾಗಿರುತ್ತದೆ. ಸಮಾಧಾನದಿಂದ ಆಲೋಚಿಸಿ. ಅವಾಚ್ಯ ಶಬ್ದಗಳಿಂದ ಯಾರನ್ನಾದರೂ ನಿಂದಿಸುವಿರಿ. ಅಧಿಕಾರಿಗಳಿಂದ ಆರ್ಥಿಕತೆಯ ಪರಿಶೀಲನೆ ನಡೆಯುವುದು.

ಸಿಂಹ ರಾಶಿ:

ಸಂಗಾತಿಯೊಂದಿಗೆ ಸಂತೋಷದ ಸಮಯ ಕಳೆಯುತ್ತೀರಿ. ಕೆಲವು ಕೆಲಸದ ನಿಮಿತ್ತ ಪ್ರಯಾಣಿಸುವ ಸಾಧ್ಯತೆ ಇದೆ. ನಿಮ್ಮ ಮಕ್ಕಳಿಂದ ನಿಮಗೆ ಲಾಭ ಮತ್ತು ಸಂತೋಷ ಸಿಗುತ್ತದೆ. ನಿಮ್ಮ ವಿರೋಧಿಗಳನ್ನು ಸೋಲಿಸುವಲ್ಲಿಯೂ ನೀವು ಯಶಸ್ಸನ್ನು ಪಡೆಯುತ್ತೀರಿ. ನಿಮ್ಮ ಕಠಿಣ ಪರಿಶ್ರಮದಿಂದ ಮುಂದುವರಿಯುತ್ತೀರಿ. ದುಃಖವನ್ನು ಆಪ್ತರ ಬಳಿ ಮಾತ್ರ ಹಂಚಿಕೊಳ್ಳಿ. ನಿಮ್ಮ ಮಾತಿಗೆ ಕೆಲವರ ಬೆಂಬಲವು ನಿಮಗೆ ಖುಷಿಕೊಡುವುದು. ಶ್ರಮಪಟ್ಟು ಆರಂಭಿಸಿದ ಕಾರ್ಯಗಳಿಗೆ ಪಿತೂರಿ.

ಕನ್ಯಾ ರಾಶಿ:

ಯಾರದೋ ವಸ್ತುವುದು ಕಾಣೆಯಾದ ಕಾರಣ ನಿಮ್ಮ ಮೇಲೆ ಕಳ್ಳತನದ ಅಪವಾದವು ಬರಬಹುದು. ಮನಸ್ಸು ಪ್ರಸನ್ನವಾಗಿರುತ್ತದೆ. ಹಿತಶತ್ರುಗಳ ಮೇಲೆ ಸಂದೇಹ ಬರಬಹುದು. ಕೆಲಸವು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತದೆ ಮತ್ತು ಯೋಜನೆಗಳನ್ನು ಸರಿಯಾಗಿ ಕಾರ್ಯಗತವಾಗುವುದು. ಸಮಯವು ಆರಂಭಿಕ ಯಶಸ್ಸನ್ನು ತರುತ್ತದೆ. ಅನಿರೀಕ್ಷಿತ ಧನಲಾಭವನ್ನು ಅವರ ಕಾರ್ಯಗಳನ್ನು ಅಚ್ಚುಕಟ್ಟಾಗಿ ಮಾಡಿಕೊಡಿ. ನಿಮ್ಮ ಜಾಣ್ಮೆಯಿಂದ ಆದಾಯವನ್ನು ಅಧಿಕ ಮಾಡಿಕೊಳ್ಳುವಿರಿ.

ತುಲಾ ರಾಶಿ:

ಅಧಿಕ ಸುತ್ತಾಟದ ಸುಸ್ತು ನಿಮ್ಮಲ್ಲಿ ಇದ್ದರೂ ಅದನ್ನು ಲೆಕ್ಕಿಸಲಾರಿರಿ. ಹಿರಿಯರ, ಅನುಭವಿಗಳ ಮಾರ್ಗದರ್ಶನವನ್ನು ಪಡೆಯಿರಿ. ಹಲವು ರೀತಿಯ ಕೆಲಸಗಳಿಗೆ ಗಮನ ಕೊಡಬೇಕಾಗುತ್ತದೆ. ವೈಯಕ್ತಿಕ ಕೆಲಸದ ಹೊರೆ ಇರುತ್ತದೆ. ಕುಟುಂಬದ ಹಿರಿಯ ಸದಸ್ಯರ ಆರೋಗ್ಯದ ಬಗ್ಗೆ ಚಿಂತೆ ಇರುತ್ತದೆ. ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಕಷ್ಟವಾದೀತು. ಕೆಲವನ್ನು ನೀವು ಬುದ್ಧಿಪೂರ್ವಕವಾಗಿ ಮಾಡುವಿರಿ.

ವೃಶ್ಚಿಕ ರಾಶಿ:

ಇಂದು ನೀವು ಏನನ್ನಾದರೂ ಪಡೆಯಲು ಹೇಗಾದರೂ ಪ್ರಯತ್ನಿಸಲೇ ಬೇಕು. ಸ್ವಾತಂತ್ರ್ಯವನ್ನು ಪಡೆಯಲು ಹವಣಿಸುವಿರಿ. ಯಶಸ್ಸಿನ ಹೊಸ ಮಾರ್ಗಗಳು ತೆರೆದುಕೊಳ್ಳಬಹುದು. ನಿಮ್ಮ ಕೆಲಸಕ್ಕೆ ಸಂಪೂರ್ಣವಾಗಿ ಸಮರ್ಪಿತರಾಗಿರುತ್ತೀರಿ. ಹಿರಿಯ ಅಧಿಕಾರಿಗಳು ನಿಮ್ಮ ಕಠಿಣ ಪರಿಶ್ರಮವನ್ನು ಮೆಚ್ಚುತ್ತಾರೆ. ತನ್ನವರನ್ನು ಕಳೆದುಕೊಳ್ಳುವ ಹೆದರಿಕೆ ಉಂಟಾಗಲಿದೆ. ಸದಾಚಾರವನ್ನು ರೂಢಿಸಿಕೊಳ್ಳುವ ಪ್ರಯತ್ನವನ್ನು ಮಾಡುವಿರಿ. ಅನಾರೋಗ್ಯವು ನಿಮ್ಮ ನಿಷ್ಕಾಳಜಿಯಿಂದ ಹೆಚ್ಚಾಗಲಿದೆ.

ಧನು ರಾಶಿ:

ಹೊಸ ಅಭ್ಯಾಸವನ್ನು ಕಲಿಯಲು ಪ್ರಯತ್ನಿಸುವಿರಿ. ನಿಮ್ಮ ಬೆಂಬಲದಿಂದ ಮನೆಯ ವಾತಾವರಣ ಇನ್ನಷ್ಟು ಸುಂದರವಾಗುತ್ತದೆ. ಹಣದ ವಿಷಯದಲ್ಲಿ ದಿನವು ಉತ್ತಮವಾಗಿದೆ, ಈ ದಿನ ವ್ಯವಹಾರದಲ್ಲಿ ಯಶಸ್ಸಿನ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ನಿಮ್ಮ ಕೆಲಸದಲ್ಲಿ ದಕ್ಷತೆಯನ್ನು ಪ್ರದರ್ಶಿಸುವಿರಿ. ನಿಮ್ಮ ಕಷ್ಟಕ್ಕೆ ಬಂದವರು ನಿಮ್ಮ ಆಪ್ತರಾಗಲಿದ್ದಾರೆ. ನೀರಿನ ವಿಚಾರದಲ್ಲಿ ಜಾಗರೂಕತೆ ಬೇಕು. ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಪ್ರಯತ್ನವು ನಡೆಯುವುದು.

ಮಕರ ರಾಶಿ:

ಹಳೆಯ ಕಾರ್ಯವನ್ನು ಮಾಡಲು ಯೋಜನೆಯನ್ನು ಹೊಸ ಉತ್ಸಾಹದಿಂದ ರೂಪಿಸಿ. ಆಹಾರದ ಅಭಾವವು ನಿಮಗೆ ಆಗಲಿದೆ. ಸಂಯಮದಿಂದ ನಿಮ್ಮ ಮನಸ್ಸನ್ನು ಶಾಂತವಾಗಿರಿಸಿಕೊಳ್ಳಿ. ಇತರ ಕೆಲಸಗಳಲ್ಲಿ ನಿರತರಾಗಿರುವುದರಿಂದ ನಿಮ್ಮ ವೈಯಕ್ತಿಕ ಕೆಲಸದ ಬಗ್ಗೆ ಹೆಚ್ಚು ಗಮನ ಹರಿಸಲು ಸಾಧ್ಯವಾಗುವುದಿಲ್ಲ. ನಿಮ್ಮ ಭಾವನೆಗಳನ್ನು ನಿಯಂತ್ರಿಸಿ, ತುಂಬಾ ಭಾವನಾತ್ಮಕವಾಗಿರುವುದು ಒಳ್ಳೆಯದಲ್ಲ. ಅಲ್ಪ ಆದಾಯದಲ್ಲಿ ತೃಪ್ತಿ ಹೊಂದಬೇಕಾದೀತು. ಹೆಚ್ಚಿನ ಆದಾಯದಿಂದ ದುರಭ್ಯಾಸವು ಹೆಚ್ಚಾಗಬಹುದು.

ಕುಂಭ ರಾಶಿ:

ಅತಿಯಾದ ನಿದ್ರೆಯಯನ್ನು ಮಾಡುವ ಮನಸ್ಸು ಮಾಡುವಿರಿ. ನಿಕಟ ಸಂಬಂಧಿಯ ಸಹಾಯದಿಂದ, ನಿಮ್ಮ ಯೋಜನೆಗಳನ್ನು ಪೂರೈಸಲು ನಿಮಗೆ ಸಾಧ್ಯವಾಗುತ್ತದೆ. ನಿಮ್ಮ ದಕ್ಷತೆಯಿಂದ ನೀವು ತೊಂದರೆಗಳನ್ನು ಎದುರಿಸಲು ಸಾಧ್ಯವಾಗುತ್ತದೆ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ನೆಲೆಸಲಿದೆ. ಶುಭ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶಗಳಿದ್ದರೂ ಕಾರ್ಯದ ಒತ್ತಡದಿಂದ ಸಾಧ್ಯ.

ಮೀನ ರಾಶಿ:

ತಪ್ಪುಗಳ ನಡೆಯದಿದ್ದಾಗ ಅದಕ್ಕೆ ಹೆದರಬೇಕಾದ ಅವಶ್ಯಕತೆಯಿರದು. ನಿಮ್ಮ ವ್ಯವಹಾರದಲ್ಲಿ ಪ್ರಸ್ತುತ ನಡೆಯುತ್ತಿರುವ ಕೆಲಸವನ್ನು ಸರಿಯಾಗಿ ಮಾಡಿ. ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಲು ಆತುರಪಡಬೇಡಿ. ಹೊಸ ಕೆಲಸವನ್ನು ಯೋಚಿಸಲು ಮತ್ತು ಅರ್ಥಮಾಡಿಕೊಳ್ಳಲು ಹೆಚ್ಚು ಸಮಯ ಕಳೆಯಿರಿ. ಕೆಲವು ಸಂಗತಿಗಳನ್ನು ನಿರೀಕ್ಷಿಸದೇ ಬರಬಹುದು. ನಿಮ್ಮನ್ನು ಕೆಲವರು ಅನಾದರ ಮಾಡಿದಂತೆ ಕಾಣಿಸೀತು. ನೀವು ವರ್ಗಾವಣೆಗೆ ಒತ್ತಡವನ್ನು ತರುವಿರಿ.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ವೈಶಾಖ, ಸೌರ ಮಾಸ : ಮೇಷ, ಮಹಾನಕ್ಷತ್ರ : ಭರಣೀ, ವಾರ : ಸೋಮ, ಪಕ್ಷ : ಕೃಷ್ಣ, ತಿಥಿ : ತೃತೀಯಾ, ನಿತ್ಯನಕ್ಷತ್ರ : ಜ್ಯೇಷ್ಠಾ, ಯೋಗ : ಪರಿಘ, ಕರಣ : ವಣಿಜ, ಸೂರ್ಯೋದಯ – 06 – 02 am, ಸೂರ್ಯಾಸ್ತ – 06 – 40 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 07:37 – 09:12, ಯಮಗಂಡ ಕಾಲ 10:47 – 12:21, ಗುಳಿಕ ಕಾಲ 13:56 – 15:31

-ಲೋಹಿತ ಹೆಬ್ಬಾರ್ – 8762924271 (what’s app only)

Source link

GT vs PBKS: ಪಂಜಾಬ್ ವಿರುದ್ಧ ಕೊನೆಯ ಓವರ್​ನಲ್ಲಿ ಗೆದ್ದ ಗುಜರಾತ್ – Kannada News | IPL 2026: Gujarat Secures Hat trick Win vs Punjab in Thrilling Ahmedabad Clash

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 ರ 46ನೇ ಪಂದ್ಯದಲ್ಲಿ ಗುಜರಾತ್ ಹಾಗೂ ಪಂಜಾಬ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಬಲಿಷ್ಠ ಪಂಜಾಬ್ ತಂಡವನ್ನು ಕೊನೆಯ ಓವರ್​ನಲ್ಲಿ ಸೋಲಿಸಿದ ಗುಜರಾತ್ ಹ್ಯಾಟ್ರಿಕ್ ಗೆಲುವು ದಾಖಲಿಸಿತು. ಇತ್ತ ಪಂಜಾಬ್ ಈ ಆವೃತ್ತಿಯಲ್ಲಿ ತನ್ನ ಎರಡನೇ ಸೋಲನ್ನು ಎದುರಿಸಿತು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬ್ 163 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಗುಜರಾತ್ 20ನೇ ಓವರ್​ನ 5ನೇ ಎಸೆತದಲ್ಲಿ ವಾಷಿಂಗ್ಟನ್ ಸುಂದರ್ ಬಾರಿಸಿದ ಸಿಕ್ಸರ್ ಮೂಲಕ ಗೆಲುವಿನ ದಡ ಮುಟ್ಟಿತು.

Source link

ತೋಂಟದಾರ್ಯ ಮಠದ ಜಾತ್ರೆಯಲ್ಲಿ ಅವಘಡ: ಕಳಚಿ ಬಿದ್ದ ಜೋಕಾಲಿ, 20ಕ್ಕೂ ಹೆಚ್ಚು ಜನರಿಗೆ ಗಾಯ – Kannada News | Gadag: Tontadarya Math Fair Incident; many people injured as Breakdance Ride Collapses

ಗದಗ, ಮೇ 03: ತೋಂಟದಾರ್ಯ ಮಠದ ಜಾತ್ರೆಯಲ್ಲಿ ಭೀಕರ ಅವಘಡವೊಂದು ಸಂಭವಿಸಿದೆ. ಡ್ಯಾನ್ಸಿಂಗ್ ಫ್ಲೈ ಜೋಕಾಲಿಯ 20ಕ್ಕೂ ಹೆಚ್ಚು ತೊಟ್ಟಿಲುಗಳು ಏಕಾಏಕಿ ಕಳಚಿ ಬಿದ್ದಿದ್ದು, ಬ್ರೇಕ್​ಡ್ಯಾನ್ಸ್ ಆಡುತ್ತಿದ್ದ 20ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಮಕ್ಕಳು, ಮಹಿಳೆಯರು ಮತ್ತು ಪುರುಷರಿಗೆ ಗಂಭೀರ ಗಾಯಗಳಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಸದ್ಯ ಗಾಯಾಳುಗಳನ್ನ ಗದಗದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆಪೆ ಗುಣಮಟ್ಟದ ಬ್ರೇಕ್​ಡ್ಯಾನ್ಸ್ ಅಳವಡಿಕೆ ಆರೋಪ ಕೇಳಿಬಂದಿದೆ. ಸ್ಥಳಕ್ಕೆ ಗದಗ ಶಹರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

 

Source link

IPL 2026: ಚೊಚ್ಚಲ ಪಂದ್ಯದಲ್ಲಿ ಸೂರ್ಯನ ವಿಕೆಟ್ ಕಿತ್ತ ಸಿಎಸ್​ಕೆ ವೇಗಿ ಐಪಿಎಲ್‌ನಿಂದ ಔಟ್ – Kannada News | CSK Injury Crisis Deepens: Ramakrishna Ghosh Out of IPL 2026 with Leg Fracture

ಸ್ಟಾರ್ ಆಟಗಾರರ ಗಾಯದ ಸಮಸ್ಯೆಯಿಂದ ತತ್ತರಿಸಿ ಹೋಗಿರುವ ಚೆನ್ನೈ ಸೂಪರ್ ಕಿಂಗ್ಸ್‌ (CSK) ತಂಡಕ್ಕೆ ಮತ್ತೊಂದು ಘಾತ ಎದುರಾಗಿದೆ. ಸತತ ಸೋಲುಗಳಿಂದ ಕಂಗೆಟ್ಟು, ಇತ್ತೀಚೆಗಷ್ಟೇ ಗೆಲುವಿನ ಲಯಕ್ಕೆ ಮರಳಿದ್ದ ಸಿಎಸ್​ಕೆ ತಂಡದಿಂದ ಯುವ ವೇಗಿಯೊಬ್ಬ ಹೊರಬಿದ್ದಿದ್ದಾನೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸಿಎಸ್​ಕೆ ಪರ ಐಪಿಎಲ್​ಗೆ ಪಾದಾರ್ಪಣೆ ಮಾಡಿದ್ದ ಯುವ ವೇಗಿ ರಾಮಕೃಷ್ಣ ಘೋಷ್ (Ramakrishna Ghosh) ಗಂಭೀರ ಗಾಯಕ್ಕೆ ತುತ್ತಾಗಿದ್ದಾರೆ. ಇದರ ಪರಿಣಾಮವಾಗಿ ಅವರು ಇಡೀ ಐಪಿಎಲ್‌ನಿಂದಲೇ ಹೊರಬಿದ್ದಿದ್ದಾರೆ. ಈ ವಿಚಾರವನ್ನು ಸಿಎಸ್​ಕೆ ಫ್ರಾಂಚೈಸಿ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.

ಸಿಎಸ್​ಕೆಗೆ ಗಾಯದ ಸಮಸ್ಯೆ

ಗಾಯದ ಕಾರಣದಿಂದಾಗಿ ಐಪಿಎಲ್​ನಿಂದ ಹೊರಬಿದ್ದ ಮೊದಲ ಸಿಎಸ್​ಕೆ ಆಟಗಾರ ರಾಮಕೃಷ್ಣ ಘೋಷ್ ಅಲ್ಲ. ಅವರಿಗೂ ಮೊದಲು ನಾಥನ್ ಎಲ್ಲಿಸ್, ಆಯುಷ್ ಮ್ಹಾತ್ರೆ ಮತ್ತು ಖಲೀಲ್ ಅಹ್ಮದ್ ಗಾಯದಿಂದಾಗಿ ಐಪಿಎಲ್​ನಿಂದ ಹೊರಬಿದ್ದಿದ್ದಾರೆ. ಇವರುಗಳ ಜೊತೆಗೆ ಅನುಭವಿ ಬ್ಯಾಟ್ಸ್‌ಮನ್ ಎಂಎಸ್ ಧೋನಿ ಕೂಡ ಗಾಯದಿಂದಾಗಿ ಇದುವರೆಗೆ ಒಂದೇ ಒಂದು ಪಂದ್ಯವನ್ನು ಆಡಿಲ್ಲ. ಧೋನಿ ಐಪಿಎಲ್​ನಿಂದ ಹೊರಬಿದ್ದಿಲ್ಲವಾದರೂ ಅವರು ಆಡುವುದು ಕೂಡ ಅನುಮಾನವಾಗಿದೆ. ಇದೆಲ್ಲದರ ನಡುವೆ ರಾಮಕೃಷ್ಣ ಗಾಯದಿಂದ ಐಪಿಎಲ್ ತೊರೆದಿರುವುದು ಸಿಎಸ್​ಕೆಗೆ ನುಂಗಲಾರದ ತುತ್ತಾಗಿದೆ.

ಚೊಚ್ಚಲ ಪಂದ್ಯದ ಬಳಿಕ ಔಟ್

ವಾಸ್ತವವಾಗಿ ಐಪಿಎಲ್ 2026 ರ 45ನೇ ಪಂದ್ಯ ಚೆಪಾಕ್ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಸಿಎಸ್​ಕೆ ನಡುವೆ ನಡೆದಿತ್ತು. ಈ ಪಂದ್ಯದಲ್ಲಿ ರಾಮಕೃಷ್ಣ ಘೋಷ್, ಮುಂಬೈ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಅವರ ವಿಕೆಟ್ ಪಡೆದಿದ್ದರು. ಇದು ರಾಮಕೃಷ್ಣ ಅವರ ಮೊದಲ ಐಪಿಎಲ್ ಪಂದ್ಯವಾಗಿತ್ತು. ಮೊದಲ ಪಂದ್ಯದಲ್ಲೇ ಸ್ಟಾರ್ ಬ್ಯಾಟರ್​ನ ವಿಕೆಟ್​ ಕಿತ್ತು ಸಂಭ್ರಮಿಸಿದ್ದ ರಾಮಕೃಷ್ಣ ಅದೇ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದಾರೆ. ಈ ಪಂದ್ಯದ ಸಮಯದಲ್ಲಿ ರಾಮಕೃಷ್ಣ ಘೋಷ್ ಅವರ ಬಲಗಾಲಿನ ಮೂಳೆ ಮುರಿತಗೊಂಡಿದೆ ಎಂದು ಸಿಎಸ್​ಕೆ ಫ್ರಾಂಚೈಸಿ, ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದೆ. ಈ ಗಾಯದಿಂದಾಗಿ ಅವರು ಈ ಆವೃತ್ತಿಯಲ್ಲಿ ಉಳಿದ ಪಂದ್ಯಗಳನ್ನು ಆಡಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದೆ.

CSK vs GT: ತವರಿನಲ್ಲೇ ಮಂಕಾದ ಸಿಎಸ್​ಕೆ; ಗುಜರಾತ್​ಗೆ 8 ವಿಕೆಟ್​ ಜಯ

ಸೂರ್ಯನ ವಿಕೆಟ್ ಪಡೆದಿದ್ದ ರಾಮಕೃಷ್ಣ

ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮೇ 2 ರಂದು ಈ ಪಂದ್ಯವನ್ನು ಆಡಿತ್ತು. ಈ ಪಂದ್ಯದಲ್ಲಿ ರಾಮಕೃಷ್ಣ ಘೋಷ್ ಮೂರು ಓವರ್‌ಗಳನ್ನು ಬೌಲಿಂಗ್ ಮಾಡಿ ಒಟ್ಟು 24 ರನ್‌ಗಳನ್ನು ನೀಡಿ ಸೂರ್ಯಕುಮಾರ್ ಯಾದವ್ ರೂಪದಲ್ಲಿ ಏಕೈಕ ವಿಕೆಟ್ ಪಡೆದಿದ್ದರು. ಮುಂಬರುವ ಪಂದ್ಯಗಳಲ್ಲಿ ಅವರು ಸಿಎಸ್‌ಕೆ ಬೌಲಿಂಗ್ ದಾಳಿಯನ್ನು ಬಲಪಡಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದಾಗ್ಯೂ, ಅವರ ಚೊಚ್ಚಲ ಪಂದ್ಯದ ಒಂದು ದಿನದ ನಂತರ ಈ ಗಾಯವು ಅವರಿಗೆ ಮತ್ತು ತಂಡಕ್ಕೆ ಭಾರಿ ನಿರಾಶೆಯನ್ನುಂಟುಮಾಡಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:50 pm, Sun, 3 May 26

Source link

ಕೋಲಾರದ ರೇಷ್ಮೆ ಬೆಳೆಗಾರರಿಗೆ ತಟ್ಟಿದ ಬಿಸಿಲ ಧಗೆ: ಗೂಡು ಕಟ್ಟದ ಹುಳುಗಳು; ತಾಪಮಾನ ನಿಯಂತ್ರಣಕ್ಕೆ ಹರಸಾಹಸ – Kannada News | Kolar Silk Farmers Battle Heatwave: Cocoon Production and Income Hit Hard

ಕೋಲಾರ, ಮೇ 03: ರಾಜ್ಯದಲ್ಲಿ ಈ ವರ್ಷ ಏರಿಕೆಯಾಗುತ್ತಿರುವ ಭೀಕರ ಬಿಸಿಲಿನ (Heatwave) ತಾಪಮಾನವು ಕೇವಲ ಜನಸಾಮಾನ್ಯರನ್ನಷ್ಟೇ ಅಲ್ಲ, ರೇಷ್ಮೆ (Silk) ಬೆಳೆಗಾರರ ಬದುಕಿನ ಮೇಲೂ ಬರೆ ಎಳೆದಿದೆ. ಹಗಲಿನಲ್ಲಿ 37 ರಿಂದ 38 ಡಿಗ್ರಿ ಸೆಲ್ಸಿಯಸ್‌ವರೆಗೆ ತಲುಪಿರುವ ತಾಪಮಾನ, ಸೂಕ್ಷ್ಮವಾದ ರೇಷ್ಮೆ ಹುಳುಗಳ ಪಾಲಿಗೆ ಮಾರಕವಾಗಿ ಪರಿಣಮಿಸಿದೆ. ರೇಷ್ಮೆ ಹುಳುಗಳು ಆರೋಗ್ಯವಾಗಿ ಬೆಳೆದು ಗೂಡು ಕಟ್ಟಲು ಕೊಠಡಿಯ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿರಬಾರದು. ಆದರೆ, ಹೊರಗಿನ ಉಷ್ಣಾಂಶ ಮಿತಿ ಮೀರುತ್ತಿರುವುದು ರೈತರನ್ನು ತೀವ್ರ ಆತಂಕಕ್ಕೆ ದೂಡಿದೆ.

ಕೋಲಾರ ಜಿಲ್ಲೆಯಲ್ಲಿ ತಾಪಮಾನ ಏರಿಕೆಯಿಂದಾಗಿ ರೇಷ್ಮೆ ಬೆಳೆಗಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮಿತಿಮೀರಿದ ತಾಪಮಾನದಿಂದಾಗಿ ರೇಷ್ಮೆ ಹುಳುಗಳು ಗೂಡು ಕಟ್ಟುತ್ತಿಲ್ಲ. ಹುಳು ಮನೆಯ ಕೊಠಡಿ ಉಷ್ಣಾಂಶ 27 ಡಿಗ್ರಿಗಿಂತ ಏರಿಕೆಯಾದರೆ ಹುಳುಗಳ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಜೊತೆಗೆ ತಾಪಮಾನ ಏರಿಕೆಯಿಂದ ಹುಳುಗಳು ಗೂಡು ಕಟ್ಟುವುದನ್ನು ಮರೆತುಬಿಡುತ್ತವೆ.

ತಾಪಮಾನ ನಿಯಂತ್ರಣಕ್ಕೆ ರೈತರ ಹರಸಾಹಸ

ಸದ್ಯ ಕೋಲಾರ ಜಿಲ್ಲೆಯಲ್ಲಿ ದಾಖಲಾಗಿರುವ ಸುಮಾರು 37 ರಿಂದ 38 ಡಿಗ್ರಿ ತಾಪಮಾನವನ್ನು ನಿಯಂತ್ರಣಕ್ಕೆ ತರಲು ರೇಷ್ಮೆ ಹುಳು ಸಾಕಾಣೆ ಮಾಡುವ ಕೊಠಡಿಯ ಸುತ್ತ ಉಷ್ಣಾಂಶವನ್ನು ನಿಯಂತ್ರಣ ಮಾಡಲು ರೇಷ್ಮೆ ಬೆಳೆಗಾರರು ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. ರೇಷ್ಮೆ ಹುಳು ಮನೆಯ ಸುತ್ತಲೂ ನೆನೆಸಿದ ಗೋಣಿ ಚೀಲಗಳನ್ನು ಹಾಕುವುದು, ಹುಳು ಮನೆಯ ಮೇಲೆ ತಾಪಮಾನ​ ನಿಯಂತ್ರಣ ಮಾಡಲು ತೆಂಗಿನ ಗರಿಗಳ ಚಪ್ಪರ ಹಾಕುತ್ತಿದ್ದಾರೆ.

ಇದನ್ನೂ ಓದಿ: ಕೊರೊನಾ ಬಳಿಕ ಮೊದಲ ಬಾರಿಗೆ ರೇಷ್ಮೆ ಗೂಡಿಗೆ ಬಂಗಾರದ ಬೆಲೆ: ದಾಖಲೆ ದರಕ್ಕೆ ರೈತರು ಫುಲ್ ಖುಷ್

ಇನ್ನು ಕೊಠಡಿಯ ಒಳಗಡೆ ಎರಡು-ಮೂರು ಏರ್ ಕೂಲರ್​ ಇರಿಸಿ ದಿನ 24 ಗಂಟೆ ಕೂಡ ಚಾಲನೆಯಲ್ಲಿಡಲಾಗುತ್ತಿದೆ. ಜೊತೆಗೆ ಯಾವುದೇ ಕಾರಣಕ್ಕೂ ಕೊಠಡಿಯ ತಾಪಮಾನ ಏರಿಕೆಯಾಗದಂತೆ ಟೆಂಪರೇಚರ್ ಮೀಟರ್​ಗಳನ್ನು ಹಾಕಿ ಯಾವುದೇ ಕಾರಣಕ್ಕೆ ಹುಳು ಮನೆಯ ಒಳಗೆ 27 ಡಿಗ್ರಿಗಿಂತ ಹೆಚ್ಚಿನ ಉಷ್ಣಾಂಶ ಏರಿಕೆಯಾಗದಂತೆ ಕ್ರಮವಹಿಸಲಾಗುತ್ತಿದೆ.

ಸಂಕಷ್ಟದ ಸುಳಿಯಲ್ಲಿ ರೇಷ್ಮೆ ಉದ್ಯಮ

ಕೋಲಾರ ಜಿಲ್ಲೆಯು ರೇಷ್ಮೆ ಕೃಷಿಗೆ ಜೀವನಾಡಿಯಾಗಿದೆ. ಸುಮಾರು 1,477 ಗ್ರಾಮಗಳ 19,739 ರೈತರು ರೇಷ್ಮೆಯನ್ನು ನಂಬಿ ಜೀವನ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 20,134 ಹೆಕ್ಟೇರ್ ಪ್ರದೇಶದಲ್ಲಿ ಹಿಪ್ಪುನೇರಳೆ ಕೃಷಿ ನಡೆಯುತ್ತಿದ್ದು, ವಾರ್ಷಿಕ 11,500 ಮೆಟ್ರಿಕ್ ಟನ್ ರೇಷ್ಮೆ ಉತ್ಪಾದನೆಯಾಗುತ್ತದೆ. ಇಷ್ಟೊಂದು ಬೃಹತ್ ಮಟ್ಟದಲ್ಲಿ ಕುಟುಂಬಗಳು ಅವಲಂಬಿತವಾಗಿರುವ ಈ ಉದ್ಯಮಕ್ಕೆ, ಈಗ ಬಿಸಿಲು ಮತ್ತು ದರ ಕುಸಿತ ಎಂಬ ಎರಡು ದೊಡ್ಡ ಸವಾಲುಗಳು ಎದುರಾಗಿವೆ.

ದರ ಕುಸಿತದಿಂದ ಆರ್ಥಿಕ ಹೊಡೆತ

ಇನ್ನು ಕೇವಲ ಬಿಸಿಲ ತಾಪಮಾನವಷ್ಟೇ ಅಲ್ಲ, ರೇಷ್ಮೆ ದರದಲ್ಲಿ ಆಗಿರುವ ಕುಸಿತ ರೈತರನ್ನು ಇನ್ನಷ್ಟು ಕಂಗಾಲಾಗಿಸಿದೆ. ಕಳೆದ ತಿಂಗಳು ಕೆಜಿ ರೇಷ್ಮೆಗೆ 800 ರಿಂದ 900 ರೂ. ಬೆಲೆ ಇತ್ತು. ಪ್ರಸ್ತುತ ಬೆಲೆ 600 ರಿಂದ 700 ರೂ.ಗೆ ಕುಸಿದಿದೆ. ರೇಷ್ಮೆ ಬೆಲೆ ಏರಿಕೆಯಾದರೆ ಬೆಳೆಗಾರರು ಪಡುವ ಕಷ್ಟಕ್ಕೆ ಒಂದಷ್ಟು ತೃಪ್ತಿಯಾದರು ಸಿಗುತ್ತದೆ ಎನ್ನುವುದು ರೇಷ್ಮೆ ಬೆಳೆಗಾರರಾದ ಮುರಳಿ ಅವರ ಮಾತು.

ಇದನ್ನೂ ಓದಿ: ರಣಬಿಸಿಲಲ್ಲೂ ನಳನಳಿಸಿದ ‘ದಿಲ್ ಖುಷ್’: ವಿಶಿಷ್ಟ ತಳಿಯ ದ್ರಾಕ್ಷಿಗೆ ಭಾರೀ ಡಿಮ್ಯಾಂಡ್; ರೈತರು ಖುಷಿಯೋ ಖುಷಿ

ಬಿಸಿಲಿನ ತಾಪಮಾನದಿಂದ ರೇಷ್ಮೆ ಹುಳುಗಳನ್ನು ರಕ್ಷಿಸಲು ಮಾಡಬೇಕಾದ ಏರ್ ಕೂಲರ್ ವ್ಯವಸ್ಥೆ ಮತ್ತು ನಿರ್ವಹಣಾ ವೆಚ್ಚ ಹೆಚ್ಚಾಗುತ್ತಿದ್ದರೆ, ಇನ್ನೊಂದೆಡೆ ಮಾರುಕಟ್ಟೆಯಲ್ಲಿ ಬೆಲೆ ಕುಸಿಯುತ್ತಿರುವುದು ರೈತರನ್ನು ತೀವ್ರ ನಷ್ಟಕ್ಕೆ ತಳ್ಳಿದೆ. ಇಂತಹ ದುಬಾರಿ ನಿರ್ವಹಣಾ ವೆಚ್ಚ ಭರಿಸಲಾಗದ ಸಣ್ಣ ರೈತರು, ಹಾಕಿದ ಬಂಡವಾಳ ಬಾರದೆ ಕೈಚೆಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಕೂಡಲೇ ಬೆಲೆ ಸ್ಥಿರೀಕರಣಕ್ಕೆ ಕ್ರಮಕೈಗೊಳ್ಳಬೇಕು ಎಂಬುದು ರೇಷ್ಮೆ ಬೆಳೆಗಾರರ ಒಕ್ಕೊರಲ ಬೇಡಿಕೆಯಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Karnataka Power Tussle: ರಾಜ್ಯ ಕಾಂಗ್ರೆಸ್ ನಲ್ಲಿ ಕುರ್ಚಿ ಕದನಕ್ಕೆ ಮತ್ತೊಂದು ತಿರುವು – Kannada News | Karnataka Power Tussle: Siddaramaiah Team Hits back at DK Shivakumar Gang to CM Post

ಬೆಂಗಳೂರು (ಮೇ.3): ರಾಜ್ಯ ಕಾಂಗ್ರೆಸ್​ನಲ್ಲಿ ನಾಯಕತ್ವ ಬದಲಾವಣೆ (Karnataka Power Tussle) ವಿಚಾರ ಕೋಲಾಹಲವನ್ನೇ ಸೃಷ್ಟಿಸಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ವೇಳೆ ಹೈಕಮಾಂಡ್ (High Command)​​ ಜೊತೆ ಪವರ್ ಶೇರಿಂಗ್ ಚರ್ಚೆ ನಡೆದಿತ್ತು ಎನ್ನಲಾಗ್ತಿದ್ದು, ಮೇ ತಿಂಗಳಲ್ಲೇ ಮುಖ್ಯಮಂತ್ರಿ ಬದಲಾವಣೆ ಎಂದು ಕಾಂಗ್ರೆಸ್​ ಒಂದು ಬಣದ ಟೀಮ್​ ಹೇಳ್ತಿದೆ. ಸಿಎಂ ಕುರ್ಚಿ ಕಚ್ಚಾಟದ ಗೊಂದಲನ ನಡುವೆ ಸಿಎಂ ಪಟ್ಟಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹೆಸರು ತೇಲಿಬಂದಿದೆ.

ಪಟ್ಟದಾಟದಲ್ಲಿ ಕಳೆದ ನಾಲ್ಕು ದಿನದಿಂದ ಉರುಳಿದ ದಾಳಗಳಿವು. ಅದ್ಯಾವಾಗ ಡಿಕೆ ದೆಹಲಿಗೆ ಹೋಗಿ ವಾಪಾಸ್ ಆಗ್ತಿದ್ದಂತೆ ಬಂಡೆ ಬಣದ ನಾಯಕರು ಪಟ್ಟಾಭಿಷೇಕಕ್ಕೆ ಮುಹೂರ್ತ ಫಿಕ್ಸ್ ಮಾಡ್ಕೊಂಡಿದ್ರು. ಮೇ 15ಕ್ಕೆ ಡಿಕೆ ಬರ್ತ್‌ಡೇ ಇದೆ. ಅಂದೇ ಶುಭ ಸುದ್ದಿ ಸಿಗುತ್ತೆಂಬ ವಿಶ್ವಾಸದಲ್ಲಿದರು. ಆಗ್ಲೇ ನೋಡಿ ಸಿಎಂ ಬಣದ ನಾಯಕರು ದೆಹಲಿಗೆ ಫ್ಲೈಟ್ ಹತ್ತಿದ್ರು. ಅಷ್ಟೇ ಅಲ್ಲ, ಹಿರಿಯರು ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗ್ಬೇಕು ಅನ್ನೋ ಹೆಸರನ್ನ ತೇಲಿಬಿಟ್ರು. ಅದೇ ಸಾಲಿನಲ್ಲಿ ದೆಹಲಿಗೆ ಹೋಗಿದ್ದ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ದೆಹಲಿಗೆ ಹೋಗಿದ್ರು. ಖರ್ಗೆ ಜೊತೆ ಮಾತುಕತೆ ನಡೆಸಿದ್ರು. ಖರ್ಗೆ ಜೊತೆ ಏನು ಮಾತನಾಡಿದೆ ಅನ್ನೋದನ್ನ ಟಿವಿ9 ಜೊತೆ ಎಕ್ಸ್‌ಕ್ಲೂಸಿವ್ ಆಗಿ ತೆರೆದಿಟ್ರು. ಸಿದ್ದರಾಮಯ್ಯರನ್ನ ಬಿಟ್ರೆ ಖರ್ಗೆಯವ್ರೇ ಸಿಎಂ ಆಗ್ಬೇಕು ಅಂತಾ ದಾಳ ಉರುಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link