Headlines

ರಿಲೀಸ್​​ಗೂ ಮೊದಲೇ ಸೇಫ್ ಆದ ಸಮಂತಾ ನಟನೆಯ ‘ಮಾ ಇಂಟಿ ಬಂಗಾರಂ’ – Kannada News | Samantha’s ‘Maa Inti Bangaram’ is a Pre Release Hit! Producers Already in Profit

ಸಮಂತಾ ರುತ್ ಪ್ರಭು (Samantha) ನಟನೆಯ ‘ಮಾ ಇಂಟಿ ಬಂಗಾರಂ’ ಸಿನಿಮಾ ಜೂನ್ 19ರಂದು ತೆರೆಗೆ ಬರುತ್ತಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಹೊಂದಿದ್ದಾರೆ. ಈ ಸಿನಿಮಾ ಬಗ್ಗೆ ಈಗ ಒಂದು ಅಚ್ಚರಿಯ ಮಾಹಿತಿ ರಿವೀಲ್ ಆಗಿದೆ. ಈ ಸಿನಿಮಾ ರಿಲೀಸ್​​ಗೂ ಮೊದಲೇ ಸೇಫ್ ಆಗಿದೆಯಂತೆ. ಈ ಮೂಲಕ ಮುಂದೆ ಬರೋದೆಲ್ಲವೂ ಲಾಭದ ರೂಪದಲ್ಲಿ ನಿರ್ಮಾಪಕರ ಜೇಬಿಗೆ ಇಳಿಯಲಿದೆ. ಸಿನಿಮಾದ ನಿರ್ಮಾಪಕರೇ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ‘ಮಾ ಇಂಟಿ ಬಂಗಾರಂ’ ಆ್ಯಕ್ಷನ್ ಕಾಮಿಡಿ…

Read More

ಬೆಂಗಳೂರಿನ ಸರ್ವಂ ಎಐ ಈಗ ಯುನಿಕಾರ್ನ್ ಕಂಪನಿಗಳ ಸಾಲಿನಲ್ಲಿ; ಹೂಡಿಕೆ ಮಾಡಿದ ಎಚ್​ಸಿಎಲ್​ಗೂ ಷೇರುಪೇಟೆಯಲ್ಲಿ ಸುಗ್ಗಿ – Kannada News | Sarvam AI of Bengaluru becomes unicorn company after series B funding round led by HCLTech

ಬೆಂಗಳೂರು, ಜೂನ್ 16: ಸಿಲಿಕಾನ್ ಸಿಟಿ ಮೂಲದ ಕೃತಕ ಬುದ್ಧಿಮತ್ತೆ (AI) ಸ್ಟಾರ್ಟ್‌ಅಪ್ ಕಂಪನಿಯಾದ ‘ಸರ್ವಮ್ ಐಐ’ (Sarvam AI) ಈಗ ಯೂನಿಕಾರ್ನ್ ಕಂಪನಿಗಳ ಸಾಲಿಗೆ ಸೇರ್ಪಡೆಯಾಗಿದೆ. ಐಟಿ ಕ್ಷೇತ್ರದ ಹೆಚ್‌ಸಿಎಲ್‌ಟೆಕ್ (HCLTech) ನೇತೃತ್ವದ ಸೀರೀಸ್-ಬಿ (Series B) ಫಂಡಿಂಗ್ ರೌಂಡ್‌ನಲ್ಲಿ ಬರೋಬ್ಬರಿ 234 ಮಿಲಿಯನ್ ಡಾಲರ್ (ಸುಮಾರು ₹1,950 ಕೋಟಿ) ಹೂಡಿಕೆಯನ್ನು ಗಳಿಸಿದೆ. ಈ ಭರ್ಜರಿ ಹೂಡಿಕೆಯೊಂದಿಗೆ ಕಂಪನಿಯ ಒಟ್ಟು ಮಾರುಕಟ್ಟೆ ಮೌಲ್ಯವು 1.5 ಬಿಲಿಯನ್ ಡಾಲರ್ (ಸುಮಾರು ₹12,500 ಕೋಟಿ) ದಾಟಿದ್ದು, ಭಾರತದ ಹೊಚ್ಚಹೊಸ…

Read More

ಪೋಕ್ಸೋ ಕೇಸ್​: ವಚನಾನಂದ ಶ್ರೀಗೆ ನಿರೀಕ್ಷಣಾ ಜಾಮೀನು ಕೊಟ್ಟ ರೀತಿ ಆಘಾತಕಾರಿ ಎಂದ ಹೈಕೋರ್ಟ್ – Kannada News | Vachanananda Swamiji pocso case: Karnataka High Court Unhappy on Davanagere Court Bail

ಬೆಂಗಳೂರು, (ಜೂನ್ 16): ಮಕ್ಕಳ ದುರ್ಬಳಕೆ ಹಾಗೂ ದೌರ್ಜನ್ಯ ಎಸಗಿದ ಆರೋಪದಡಿ ದಾವಣಗೆರೆ (Davanagere) ಹರಿಹರದ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ (Vachanananda Swamiji) ವಿರುದ್ಧ ಫೋಕ್ಸೋ ಪ್ರಕರಣ ದಾಖಲಾಗಿದೆ. ಆದ್ರೆ, ದೂರು ದಾಖಲಾಗುವ ಮುನ್ನವೇ ದಾವಣಗೆರೆ ಜಿಲ್ಲಾ ನ್ಯಾಯಾಲಯವು ನಿರೀಕ್ಷಣಾ ಜಾಮೀನು ನೀಡಿದ್ದು, ಇದಕ್ಕೆ ಕರ್ನಾಟಕ ಹೈಕೋರ್ಟ್ (karnataka High Court) ಅಸಮಾಧನ ವ್ಯಕ್ತಪಡಿಸಿದೆ. ನಿರೀಕ್ಷಣಾ ಜಾಮೀನು ಪ್ರಶ್ನಿಸಿ ಬಾಲಕನ ತಾಯಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ, ದೂರು…

Read More

ಕ್ರಿಕೆಟ್ ಫ್ಯಾನ್ಸ್​ಗೆ ಡಬಲ್ ಧಮಾಕ; ಒಂದೇ ದಿನ ಕಣಕ್ಕಿಳಿಯಲಿವೆ ಭಾರತದ ಎರಡು ತಂಡಗಳು – Kannada News | Indian Cricket Teams Battle: Men’s ODI vs AFG, Women’s T20 World Cup on June 17

ಭಾರತದ ಕ್ರಿಕೆಟ್ ಫ್ಯಾನ್ಸ್​ಗೆ ಬುಧವಾರ ಅಂದರೆ ಜೂನ್ 17 ರಂದು ಡಬಲ್ ಮನರಂಜನೆ ಸಿಗಲಿದೆ. ಏಕೆಂದರೆ ಈ ದಿನದಂದು ಭಾರತದ ಪುರುಷ ಹಾಗೂ ಮಹಿಳಾ ಕ್ರಿಕೆಟ್ ತಂಡಗಳು ಪಂದ್ಯಗಳನ್ನಾಡಲಿವೆ. ಒಂದೆಡೆ ಭಾರತ ಹಾಗೂ ಅಫ್ಘಾನಿಸ್ತಾನ (India vs Afghanistan) ಪುರುಷ ತಂಡಗಳ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯುತ್ತಿದೆ. ಈ ಸರಣಿಯ ಎರಡನೇ ಪಂದ್ಯವನ್ನು ಗೆದ್ದು ಸರಣಿಯನ್ನು ತನ್ನದಾಗಿಸಿಕೊಳ್ಳುವ ಇರಾದೆಯಲ್ಲಿ ಭಾರತದ ಪುರುಷರ ತಂಡವಿದೆ. ಮತ್ತೊಂದೆಡೆ ಭಾರತ ಮಹಿಳಾ ಕ್ರಿಕೆಟ್ ತಂಡ, 2026 ರ ಮಹಿಳಾ…

Read More

Nimma Doctor: ಯಾವ ಯಾವ ರೀತಿಯ ಕ್ಯಾನ್ಸರ್​ ಮಕ್ಕಳನ್ನ ಕಾಡುತ್ತೆ? ತಜ್ಞರು ನೀಡಿರುವ ಮಾಹಿತಿ ಇಲ್ಲಿದೆ – Kannada News | Understanding Childrens Cancer Treatment: Insights from HCG Cancer Hospital

ಇಂದಿನ ಒತ್ತಡದ ಜೀವನಶೈಲಿ ಹಾಗೂ ಬದಲಾಗುತ್ತಿರುವ ಪರಿಸರದಿಂದಾಗಿ ಜನರಲ್ಲಿ ನೂರಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಯಾವ ಸಮಸ್ಯೆಗೆ ಯಾವ ಚಿಕಿತ್ಸೆ ಪಡೆಯಬೇಕು ಎಂಬುದು ಒಂದು ದೊಡ್ಡ ಚಿಂತೆಯಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ, ನಿಮ್ಮ ಡಾಕ್ಟರ್ ಕಾರ್ಯಕ್ರಮವು ಎಲ್ಲರಿಗೂ ಒಂದೇ ವೇದಿಕೆಯಲ್ಲಿ ಉತ್ತರಗಳನ್ನು ಒದಗಿಸುವ ಮೂಲಕ ಸಹಾಯ ಮಾಡುತ್ತಿದೆ. ಮನುಷ್ಯನನ್ನು ಮಾರಣಾಂತಿಕವಾಗಿ ಕಾಡುವ ರೋಗಗಳಲ್ಲಿ ಕ್ಯಾನ್ಸರ್ ಪ್ರಮುಖವಾಗಿದೆ. ಕ್ಯಾನ್ಸರ್ ಎಂಬ ಹೆಸರು ಕೇಳಿದ ಕೂಡಲೇ ಜನ ಚಿಕಿತ್ಸೆಯ ಬಗ್ಗೆ ಯೋಚಿಸುವುದಕ್ಕಿಂತ ಹೆಚ್ಚಾಗಿ ಭಯಭೀತರಾಗುತ್ತಾರೆ. ಇಂದಿನ ವೈದ್ಯಕೀಯ ಲೋಕದಲ್ಲಿ ಕ್ರಾಂತಿಕಾರಕ…

Read More

ಹೊಸ ತಂತ್ರ: ಟ್ರಂಪ್ ನಡವಳಿಕೆ ಅಧ್ಯಯನ ಮಾಡಲು ಮನಃಶಾಸ್ತ್ರಜ್ಞರ ನೇಮಿಸಿದ ಇರಾನ್ – Kannada News | Iran’s Diplomatic Breakthrough: Psychologists Analyze Trump for US Iran Peace Talks

ಟೆಹ್ರಾನ್, ಜೂನ್ 16: ಅಮೆರಿಕ ಮತ್ತು ಇರಾನ್ ನಡುವಿನ ಸುದೀರ್ಘ ಸಂಘರ್ಷವನ್ನು ಕೊನೆಗೊಳಿಸಲು ಇರಾನ್ ಸರ್ಕಾರವು ಅತ್ಯಂತ ವಿಭಿನ್ನ ಹಾಗೂ ರಹಸ್ಯ ರಾಜತಾಂತ್ರಿಕ ತಂತ್ರವೊಂದನ್ನು ಬಳಸಿರುವುದು ಬೆಳಕಿಗೆ ಬಂದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅವರ ವಿಶಿಷ್ಟ ನಿರ್ಧಾರಗಳು ಮತ್ತು ವರ್ತನೆಗಳನ್ನು ಸೂಕ್ಷ್ಮವಾಗಿ ಗಮನಿಸಿ, ಅದಕ್ಕೆ ತಕ್ಕಂತೆ ಮಾತುಕತೆಯ ಕಾರ್ಯತಂತ್ರವನ್ನು ರೂಪಿಸಲು ಇರಾನ್ ತನ್ನ ರಾಜತಾಂತ್ರಿಕ ತಂಡಕ್ಕೆ ಇಬ್ಬರು ಹಿರಿಯ ಮನಶ್ಶಾಸ್ತ್ರಜ್ಞರನ್ನು (Psychologists) ಸೇರಿಸಿಕೊಂಡಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಮನಃಶಾಸ್ತ್ರಜ್ಞರ ಸಲಹೆಯಂತೆ ಬದಲಾದ…

Read More

ಶ್ರೀಮುರಳಿ, ವಿಜಯ್ ರಾಘವೇಂದ್ರ ತಾಯಿಯ ಅಂತಿಮ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್

ನಟರಾದ ವಿಜಯ್ ರಾಘವೇಂದ್ರ (Vijay Raghavendra) , ಶ್ರೀಮುರಳಿ ಅವರ ತಾಯಿ ಜಯಮ್ಮ ಇಂದು (ಜೂನ್ 16) ನಿಧನ ಹೊಂದಿದ್ದಾರೆ. ಜಯಮ್ಮನವರ ಅಂತಿಮ ದರ್ಶನ ನಡೆಯುತ್ತಿದ್ದು ಚಿತ್ರರಂಗದ ಕೆಲವು ಗಣ್ಯರು, ಶ್ರೀಮುರಳಿ ಮತ್ತು ವಿಜಯ್ ರಾಘವೇಂದ್ರ ಅವರ ಗೆಳೆಯರು ಜಯಮ್ಮನವರ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ದೊಡ್ಮನೆಯ ಸಂಬಂಧಿಕರೂ ಆಗಿರುವ ಕಾರಣ ದೊಡ್ಮನೆಯ ಸದಸ್ಯರು ಸಹ ಆಗಮಿಸಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಪುನೀತ್ ರಾಜ್​ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್​​ಕುಮಾರ್ ಅವರು ಸಹ ಆಗಮಿಸಿ ಜಯಮ್ಮನವರ ಪಾರ್ಥಿವ…

Read More

ಇಬ್ಬರು ಅಲಭ್ಯ: ಟೀಮ್ ಇಂಡಿಯಾದಲ್ಲಿ ಒಂದು ಬದಲಾವಣೆ ಸಾಧ್ಯತೆ – Kannada News | India playing 11 for 2nd odi against afghanistan

ಲಕ್ನೋದ ಏಕನಾ ಕ್ರೀಡಾಂಗಣದಲ್ಲಿ ಬುಧವಾರ (ಜೂನ್ 17) ಭಾರತ ಮತ್ತು ಅಫ್ಘಾನಿಸ್ತಾನ್ ನಡುವೆ ಎರಡನೇ ಏಕದಿನ ಪಂದ್ಯ ನಡೆಯಲಿದೆ. ಧರ್ಮಶಾಲಾದಲ್ಲಿ ನಡೆದ ಮೊದಲ ಪಂದ್ಯದಲ್ಲಿ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿರುವ ಶುಭ್‌ಮನ್ ಗಿಲ್ ನೇತೃತ್ವದ ಟೀಮ್ ಇಂಡಿಯಾ, ಸದ್ಯ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ. ನಾಳೆಯ ಪಂದ್ಯವನ್ನು ಭಾರತ ತಂಡ ಗೆದ್ದರೆ ಸರಣಿ ವಶಪಡಿಸಿಕೊಳ್ಳಬಹುದು. ವಿರಾಟ್ ಕೊಹ್ಲಿ, ಹಾರ್ದಿಕ್ ಅಲಭ್ಯ: ಗಾಯದ ಸಮಸ್ಯೆಯಿಂದಾಗಿ ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಈ ಸರಣಿಯಿಂದ…

Read More

ಟಿವಿ9 ವರದಿಯ ಇಂಪ್ಯಾಕ್ಟ್: ಮಾವಿನ ಹಣ್ಣು ತಿಂದು ಮೃತಪಟ್ಟ ಅಕ್ಕ-ತಂಗಿಯ ಮೂವರು ಸಹೋದರಿಯರನ್ನು ದತ್ತು ಪಡೆದ ಶಾಸಕ ಪ್ರಭು ಚೌಹಾಣ್ – Kannada News | TV9 Kannada Impact: MLA Prabhu Chauhan Adopts 3 Sisters of Two Girls Die of Suspected Food Poisoning after eating Mangos

ಮೃತ ಬಾಲಕಿಯರ ಭಾವಚಿತ್ರಕ್ಕೆ ನಮನ ಸಲ್ಲಿಸಿದ ಶಾಸಕ ಪ್ರಭು ಚೌಹಾಣ್Image Credit source: tv9 ಬೀದರ್, ಜೂನ್ 16: ಮಾವಿನ ಹಣ್ಣು ಸೇವಿಸಿದ ಬಳಿಕ ಒಂದೇ ಕುಟುಂಬದ ಇಬ್ಬರು ಹೆಣ್ಣು ಮಕ್ಕಳು ಹಠಾತ್ ಮೃತಪಟ್ಟ ಹೃದಯವಿದ್ರಾವಕ ಘಟನೆಗೆ ಸಂಬಂಧಿಸಿದಂತೆ ‘ಟಿವಿ9’ ಕನ್ನಡ ಬಿತ್ತರಿಸಿದ ವರದಿ ದೊಡ್ಡ ಮಟ್ಟದ ಪ್ರಭಾವ ಬೀರಿದೆ. ವರದಿಗೆ ತಕ್ಷಣವೇ ಸ್ಪಂದಿಸಿರುವ ಔರಾದ್ ಕ್ಷೇತ್ರದ ಶಾಸಕ ಪ್ರಭು ಚೌಹಾಣ್, ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಸಂತ್ರಸ್ತ ಕುಟುಂಬದ ಮನೆಗೆ ಖುದ್ದಾಗಿ ಭೇಟಿ ನೀಡಿದ್ದಾರೆ. ಅಲ್ಲದೆ, ತಂಗಿಯರನ್ನು…

Read More

ಒಬ್ಬೊಬ್ರಿಗೆ ಕೊಡ್ತೀನಿ ನೋಡಿ; ಸಮಂತಾ ಎಚ್ಚರಿಕೆ ನೀಡಿದ್ದು ಯಾರಿಗೆ? – Kannada News | Actress Samantha Warns on Maa Inti Bangaram Stage

ಸಮಂತಾ ನಟನೆಯ ‘ಮಾ ಇಂಟಿ ಬಂಗಾರಂ’ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. ಈ ಚಿತ್ರದ ಕಾರ್ಯಕ್ರಮವೊಂದರಲ್ಲಿ ಹಳದಿ ಸೀರೆಯಲ್ಲಿ ಕಂಗೊಳಿಸಿದ ಸಮಂತಾ, ಮೈಕ್ ಕೈಗೆತ್ತಿಕೊಳ್ಳುತ್ತಿದ್ದಂತೆ ಅಭಿಮಾನಿಗಳ ಸೀಟಿ, ಚಪ್ಪಾಳೆ ಮುಗಿಲು ಮುಟ್ಟಿತ್ತು. ಇದೇ ಖುಷಿಯಲ್ಲಿ ಮಾತನಾಡಿದ ಸಮಂತಾ, ತಮ್ಮ ಸಿನಿಮಾದ ಬಗ್ಗೆ ಭರವಸೆಯ ಮಾತುಗಳನ್ನಾಡುತ್ತಾ ತೆಲುಗಿನಲ್ಲಿ ಖಡಕ್ ಡೈಲಾಗ್ ಒಂದನ್ನು ಹೊಡೆದಿದ್ದಾರೆ. ‘ಈ ಸಿನಿಮಾದಿಂದ ನಾವು ಒಬ್ಬೊಬ್ಬರಿಗೂ ಕೊಡ್ತೀವಿ ನೋಡಿ (ಒಕ್ಕೊಕ್ಕರಿನಿ ಕೊಡ್ತಾಮ್ ಚೂಡು)’ ಎಂದು ಸಮಂತಾ ಮಾಸ್ ಶೈಲಿಯಲ್ಲಿ ಡೈಲಾಗ್ ಹೇಳಿದ್ದಾರೆ. ತಕ್ಷಣವೇ ನಗುತ್ತಾ,…

Read More