ಕೋಲಾರದ ರೇಷ್ಮೆ ಬೆಳೆಗಾರರಿಗೆ ತಟ್ಟಿದ ಬಿಸಿಲ ಧಗೆ: ಗೂಡು ಕಟ್ಟದ ಹುಳುಗಳು; ತಾಪಮಾನ ನಿಯಂತ್ರಣಕ್ಕೆ ಹರಸಾಹಸ – Kannada News | Kolar Silk Farmers Battle Heatwave: Cocoon Production and Income Hit Hard
ಕೋಲಾರ, ಮೇ 03: ರಾಜ್ಯದಲ್ಲಿ ಈ ವರ್ಷ ಏರಿಕೆಯಾಗುತ್ತಿರುವ ಭೀಕರ ಬಿಸಿಲಿನ (Heatwave) ತಾಪಮಾನವು ಕೇವಲ ಜನಸಾಮಾನ್ಯರನ್ನಷ್ಟೇ ಅಲ್ಲ, ರೇಷ್ಮೆ (Silk) ಬೆಳೆಗಾರರ ಬದುಕಿನ ಮೇಲೂ ಬರೆ ಎಳೆದಿದೆ. ಹಗಲಿನಲ್ಲಿ 37 ರಿಂದ 38 ಡಿಗ್ರಿ ಸೆಲ್ಸಿಯಸ್‌ವರೆಗೆ ತಲುಪಿರುವ ತಾಪಮಾನ, ಸೂಕ್ಷ್ಮವಾದ ರೇಷ್ಮೆ ಹುಳುಗಳ ಪಾಲಿಗೆ ಮಾರಕವಾಗಿ ಪರಿಣಮಿಸಿದೆ. ರೇಷ್ಮೆ ಹುಳುಗಳು ಆರೋಗ್ಯವಾಗಿ ಬೆಳೆದು ಗೂಡು ಕಟ್ಟಲು ಕೊಠಡಿಯ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿರಬಾರದು. ಆದರೆ, ಹೊರಗಿನ ಉಷ್ಣಾಂಶ ಮಿತಿ ಮೀರುತ್ತಿರುವುದು ರೈತರನ್ನು ತೀವ್ರ ಆತಂಕಕ್ಕೆ…