Headlines

ಮೇ 20 ರಿಂದ ರಾಜ್ಯಾದ್ಯಂತ ಸಾರಿಗೆ ಬಸ್​ಗಳು ರಸ್ತೆಗಿಳಿಯುವುದು ಡೌಟ್! ಅನಿರ್ದಿಷ್ಟಾವಧಿ ಮುಷ್ಕರಕ್ಕೆ ನೌಕರರ ತೀರ್ಮಾನ – Kannada News | Karnataka Transport Strike: KSRTC and BMTC Buses May Stop from May 20 as Employees Announce Indefinite Protest

ಬೆಂಗಳೂರು, ಮೇ 2: ಕರ್ನಾಟಕದ ಜನಸಾಮಾನ್ಯರ ಜೀವನಾಡಿಯಾಗಿರುವ ಸಾರಿಗೆ ಬಸ್‌ಗಳು ಮೇ 20ರಿಂದ ರಸ್ತೆಗಿಳಿಯುವುದು ಅನುಮಾನವಾಗಿದೆ. ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿಯು ಮೇ 20ರ ಬೆಳಿಗ್ಗೆ 6 ಗಂಟೆಯಿಂದ ಅನಿರ್ದಿಷ್ಟಾವಧಿ ಮುಷ್ಕರ (Karnataka Transport Strike) ನಡೆಸಲು ಮುಂದಾಗಿದೆ. ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ (KSRTC, BMTC, NWKRTC, KKRTC) ಸುಮಾರು 1.25 ಲಕ್ಷ ನೌಕರರು ಈ ಹೋರಾಟದಲ್ಲಿ ಭಾಗಿಯಾಗಲಿದ್ದು, ಸಾರಿಗೆ ಬಸ್​​ಗಳ ಸಂಚಾರ ಅನುಮಾನವಾಗಿದೆ. ಸಾರಿಗೆ ನೌಕರರ ಪ್ರಮುಖ…

Read More

ONGC Scholarship 2026: ಒಎನ್‌ಜಿಸಿ ವಿದ್ಯಾರ್ಥಿವೇತನ; ಅರ್ಹ ವಿದ್ಯಾರ್ಥಿಗಳಿಗೆ ವಾರ್ಷಿಕ 48,000ರೂ. ಆರ್ಥಿಕ ನೆರವು – Kannada News | ONGC Scholarship 2026: Apply Now! Eligibility, Last Date and Benefits for UG/PG Students

ತೈಲ ಮತ್ತು ನೈಸರ್ಗಿಕ ಅನಿಲ ನಿಗಮವು (ONGC) ಆರ್ಥಿಕವಾಗಿ ಹಿಂದುಳಿದ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ 2026ನೇ ಸಾಲಿನ ವಿದ್ಯಾರ್ಥಿವೇತನವನ್ನು ಘೋಷಿಸಿದೆ. ಈ ಯೋಜನೆಯಡಿ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 1000, ಒಬಿಸಿ ಅಭ್ಯರ್ಥಿಗಳಿಗೆ 500 ಮತ್ತು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 500 ವಿದ್ಯಾರ್ಥಿವೇತನಗಳನ್ನು ಮೀಸಲಿಡಲಾಗಿದೆ. ವಿಶೇಷವಾಗಿ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲಾಗಿದ್ದು, ಎಲ್ಲಾ ವಿಭಾಗಗಳಲ್ಲಿ ಶೇಕಡಾ 50 ರಷ್ಟು ವಿದ್ಯಾರ್ಥಿವೇತನವನ್ನು ವಿದ್ಯಾರ್ಥಿನಿಯರಿಗೇ ಹಂಚಿಕೆ ಮಾಡಲಾಗುತ್ತದೆ. ಪ್ರಸ್ತುತ ಸಂಬಂಧಿತ ವಿಭಾಗಗಳಲ್ಲಿ ಯುಜಿ (UG) ಮತ್ತು ಪಿಜಿ (PG) ಕೋರ್ಸ್‌ಗಳನ್ನು ಕಲಿಯುತ್ತಿರುವ ಆಸಕ್ತ…

Read More

ಪ್ರಚಾರಕ್ಕೆ ಬಾರದ ನಟಿ ವಿರುದ್ಧ ನಿರ್ದೇಶಕ, ನಿರ್ಮಾಪಕರಿಂದ ದೂರು ದಾಖಲು – Kannada News | Complaint against actress Rajini for not attending Movie promotion

ನಿನ್ನೆಯಷ್ಟೆ ಹಣ ಕೊಡದೆ ಸತಾಯಿಸುತ್ತಿರುವ ನಿರ್ಮಾಪಕನ (Producer) ವಿರುದ್ಧ ‘ವಸುದೇವ ಕುಟುಂಬ’ ಧಾರಾವಾಹಿಯ ನಟ-ನಟಿಯರು ಮತ್ತು ಯೂನಿಟ್ ಸದಸ್ಯರು ದೂರು ನೀಡಿದ್ದಲ್ಲದೆ, ನಿರ್ಮಾಪಕರನ್ನು ನಡು ರಸ್ತೆಯಲ್ಲಿ ಅಡ್ಡ ಹಾಕಿ ಮಂಗಳಾರತಿ ಮಾಡಿದ್ದರು. ಇಂದು ಹಣ ಪಡೆದು ಪ್ರಚಾರಕ್ಕೆ ಬಾರದೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿ ನಟಿಯೊಬ್ಬರ ವಿರುದ್ಧ ಸಿನಿಮಾದ ನಿರ್ಮಾಪಕ ಮತ್ತು ನಿರ್ದೇಶಕ ದೂರು ನೀಡಿದ್ದಾರೆ. ‘ಅಮೃತವರ್ಷಿಣಿ’ ಧಾರಾವಾಹಿ ನಟಿ ರಜನಿ ವಿರುದ್ಧ ಸಿನಿಮಾದ ನಿರ್ದೇಶಕ ಮತ್ತು ನಿರ್ಮಾಪಕರುಗಳು ಫಿಲಂ ಚೇಂಬರ್​​ಗೆ ದೂರು ನೀಡಿದ್ದು, ಸಿನಿಮಾನಲ್ಲಿ ನಟಿಸಿ ಈಗ…

Read More

IPL 2026: ಆರಂಭಿಕನಾಗಿ ರೋಹಿತ್, ಕೊಹ್ಲಿ ದಾಖಲೆ ಮುರಿದ ರಾಹುಲ್

ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆರಂಭಿಕರಾಗಿ ಕಣಕ್ಕಿಳಿಯುವ ಕನ್ನಡಿಗ ಕೆಎಲ್ ರಾಹುಲ್ ಅದ್ಭುತ ಪ್ರದರ್ಶನ ನೀಡಿದರು. 226 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಪರ ಗೆಲುವಿನ ಇನ್ನಿಂಗ್ಸ್ ಆಡಿದ ರಾಹುಲ್ ಕೇವಲ 40 ಎಸೆತಗಳಲ್ಲಿ 75 ರನ್ ಗಳಿಸಿದರು. ಈ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಮತ್ತು 5 ಸಿಕ್ಸರ್‌ಗಳು ಸೇರಿದ್ದವು. ಈ ಇನ್ನಿಂಗ್ಸ್ ಮೂಲಕ ರಾಹುಲ್ ಐಪಿಎಲ್ ಇತಿಹಾಸದಲ್ಲಿ ಅಪರೂಪದ ಸಾಧನೆಯನ್ನು ಮಾಡಿದರು. ಈ ಪಂದ್ಯದಲ್ಲಿ 5 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ…

Read More

ಅಮೆರಿಕ ನಂಬಿಕೆಗೆ ಯೋಗ್ಯವಲ್ಲ, ಮತ್ತೆ ಯುದ್ಧ ಆರಂಭವಾಗಬಹುದು; ಇರಾನ್ ಸ್ಫೋಟಕ ಹೇಳಿಕೆ – Kannada News | War Likely To Resume again Iran makes a big claim Donald trump

ಟೆಹ್ರಾನ್, ಮೇ 2: ಕದನವಿರಾಮ ಘೋಷಣೆಯಾಗಿದ್ದರೂ ಇರಾನ್ ಮತ್ತು ಅಮೆರಿಕದ ನಡುವಿನ ಉದ್ವಿಗ್ನತೆ ಇನ್ನೂ ಹೆಚ್ಚಾಗಿದೆ. ಎರಡೂ ದೇಶಗಳ ನಡುವಿನ ಪರಿಸ್ಥಿತಿ ಮತ್ತೆ ಉಲ್ಬಣಗೊಳ್ಳಬಹುದು. ಅಮೆರಿಕ ಮತ್ತು ಇಸ್ರೇಲ್ ಜೊತೆ ಯುದ್ಧ ಮತ್ತೆ ಆರಂಭವಾಗಬಹುದು ಎಂದು ಇರಾನ್ (Iran) ಸೇನೆ ಎಚ್ಚರಿಸಿದೆ. ಇರಾನ್ ಸೇನಾ ಉಪ ಅಧಿಕಾರಿ ಮೊಹಮ್ಮದ್ ಜಾಫರ್ ಅಸಾದಿ ಅಮೆರಿಕ ಯಾವುದೇ ಒಪ್ಪಂದಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂದು ಟೀಕಿಸಿದ್ದಾರೆ. ಅಮೆರಿಕದ ಅಧಿಕಾರಿಗಳ ಹೇಳಿಕೆಗಳು ಕೇವಲ ಪ್ರದರ್ಶನಕ್ಕಾಗಿ ಮಾತ್ರ ಎಂದು ಅಸ್ಸಾದಿ ಆರೋಪಿಸಿದ್ದಾರೆ. ಇರಾನ್ ಸೇನೆಯು…

Read More

Video: ಹಾವಿನ ಜೊತೆ ಸಾಹಸ ಮಾಡಲು ಹೋದ ವ್ಯಕ್ತಿ ಸಾವು; ಬೆಚ್ಚಿಬೀಳಿಸುವ ದೃಶ್ಯ ಕ್ಯಾಮೆರಾದಲ್ಲಿ ಸೆರೆ! – Kannada News | Bihar Snake Catcher Dies After Stunt with Venomous Snake: Danger of Overconfidence

ಬಿಹಾರದಲ್ಲಿ ವೃತ್ತಿಪರ ಸ್ನೇಕ್ ಕ್ಯಾಚರ್ ಒಬ್ಬರು ಹಾವನ್ನು ರಕ್ಷಿಸಿದ ನಂತರ ಅದರೊಂದಿಗೆ ಕ್ಯಾಮೆರಾ ಮುಂದೆ ಸಾಹಸ ಪ್ರದರ್ಶಿಸಲು ಹೋಗಿ ಪ್ರಾಣ ಕಳೆದುಕೊಂಡ ಭೀಕರ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜನವಸತಿ ಪ್ರದೇಶದಲ್ಲಿ ಸಿಕ್ಕ ವಿಷಪೂರಿತ ಹಾವನ್ನು ಹಿಡಿದ ವ್ಯಕ್ತಿ, ಅದನ್ನು ಸುರಕ್ಷಿತವಾಗಿ ಡಬ್ಬಿಗೆ ಹಾಕುವ ಬದಲು ಅದರೊಂದಿಗೆ ಆಟವಾಡಲು ಶುರು ಮಾಡಿದ್ದರಿಂದ ಹಾವು ಏಕಾಏಕಿ ಕಚ್ಚಿದೆ; ವಿಷದ ತೀವ್ರತೆಯಿಂದಾಗಿ ಕೇವಲ ಮೂರೇ ನಿಮಿಷಗಳಲ್ಲಿ ಆತ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಎಷ್ಟೇ…

Read More

Karnataka Heatwave: ರಣಬಿಸಿಲಿಗೆ ಪ್ರಾಣಿ, ಪಕ್ಷಿ, ಮನುಷ್ಯರ ನರಳಾಟ; ರಾಯಚೂರಿನಲ್ಲಿ ಇಬ್ಬರ ಸಾವು – Kannada News | Karnataka Heatwave Crisis: Two Dead in Raichur as Temperatures Cross 40 degree celsius; Severe Water Scarcity

ಬೆಂಗಳೂರು, ಮೇ 2: ಕರ್ನಾಟಕವು ತೀವ್ರ ಬಿಸಿಲಿನ ಬೇಗೆಯಿಂದ ಬಳಲುತ್ತಿದೆ, ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ ದಾಟಿದೆ. ಈ ರಣಬಿಸಿಲು ಪ್ರಾಣಿ, ಪಕ್ಷಿ ಹಾಗೂ ಮನುಷ್ಯರ ಬದುಕನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಕುಡಿಯುವ ನೀರಿಲ್ಲದೆ ಸಾವಿರಾರು ಪ್ರಾಣಿಗಳು ನರಳುತ್ತಿವೆ, ಹಲವು ಸಾಯುತ್ತಿವೆ. ಕೊಪ್ಪಳದಲ್ಲಿ ಮೇವು ಮತ್ತು ನೀರಿನ ಕೊರತೆಯಿಂದ ಹಸುಗಳು ಎಲುಬಾಗಿವೆ. ಗದಗ ಮತ್ತು ಇತರ ಪ್ರದೇಶಗಳಲ್ಲಿ ಕೆರೆಗಳು ಬತ್ತಿ ಹೋಗಿದ್ದು, ಜನರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ರಾಯಚೂರಿನಲ್ಲಿ ತೀವ್ರ ಬಿಸಿಲಿಗೆ ಇಬ್ಬರು ಬಲಿಯಾಗಿದ್ದಾರೆ….

Read More

ವ್ಯಕ್ತಿ ತಪ್ಪು ಮಾಡದಿದ್ದರೂ 3 ತಿಂಗಳು ಜೈಲಿನಲ್ಲಿ ಇಟ್ಟಿದ್ದ ಉತ್ತರ ಪ್ರದೇಶ ಸರ್ಕಾರಕ್ಕೆ 10 ಲಕ್ಷ ರೂ. ದಂಡ! – Kannada News | Allahabad High Court imposes Rs 10 lakh fine on Uttar Pradesh government for mans 3 months illegal jailing

ಅಲಹಾಬಾದ್, ಮೇ 2: ಅಲಹಾಬಾದ್ ಹೈಕೋರ್ಟ್‌ನ (Allahabad High Court) ಲಕ್ನೋ ಪೀಠವು ಉತ್ತರ ಪ್ರದೇಶ ಸರ್ಕಾರವನ್ನು ತೀವ್ರವಾಗಿ ಖಂಡಿಸಿದೆ. ಅಲ್ಲದೆ, ಅದಕ್ಕೆ 10 ಲಕ್ಷ ರೂ. ದಂಡವನ್ನು ವಿಧಿಸಿದೆ. ಕಾರಣಗಳನ್ನು ನೀಡದೆ ವ್ಯಕ್ತಿಯನ್ನು 3 ತಿಂಗಳ ಕಾಲ ಜೈಲಿನಲ್ಲಿ ಇರಿಸಿದ್ದ ರಾಜ್ಯ ಸರ್ಕಾರದ ಕ್ರಮವನ್ನು ನ್ಯಾಯಾಲಯವು ಸಂವಿಧಾನಬಾಹಿರ ಎಂದು ಘೋಷಿಸಿದೆ. ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಬ್ದುಲ್ ಮೊಯಿನ್ ಮತ್ತು ನ್ಯಾಯಮೂರ್ತಿ ಪ್ರಮೋದ್ ಕುಮಾರ್ ಶ್ರೀವಾಸ್ತವ ಅವರ ವಿಭಾಗೀಯ ಪೀಠವು ಈ ಆದೇಶವನ್ನು…

Read More

OTT Release this week: ಈ ವಾರ ಒಟಿಟಿಗೆ ಬಂದಿವೆ ಬ್ಲಾಕ್ ಬಸ್ಟರ್ ಸಿನಿಮಾಗಳು

ಮಲಯಾಳಂ ಸಿನಿಮಾಗಳು ಬಾಕ್ಸ್ ಆಫೀಸ್​​ನಲ್ಲಿ ಕೇವಲ ಕಂಟೆಂಟ್ ಇಂದಲೇ ಗೆಲ್ಲುತ್ತಿವೆ. ಅಂಥಹಾ ಸಿನಿಮಾಗಳ ಸಾಲಿಗೆ ಸೇರುತ್ತದೆ ‘ಆಡು 3’. ಈ ಮಲಯಾಳಂ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಹಿಟ್ ಆಗಿತ್ತು. ಇದೀಗ ಒಟಿಟಿಗೆ ಬಂದಿದ್ದು, ಜೀ5ನಲ್ಲಿ ಸ್ಟ್ರೀಮ್ ಆಗುತ್ತಿದೆ. ಶರ್ವಾನಂದ ಅವರ ಬಹು ನಿರೀಕ್ಷಿತ ಸಿನಿಮಾ ‘ಬೈಕರ್’ ಕೆಲ ವಾರಗಳ ಹಿಂದಷ್ಟೆ ಈ ಸಿನಿಮಾ ಬಿಡುಗಡೆ ಆಗಿತ್ತು. ‘ಬೈಕರ್’ ಸಿನಿಮಾದ ಮೇಲೆ ಶರ್ವಾನಂದಗೆ ಭಾರಿ ನಂಬಿಕೆ ಇತ್ತು. ಸಿನಿಮಾ ಸಾಧಾರಣ ಯಶಸ್ಸನ್ನಷ್ಟೆ ಕಂಡಿತು. ಸಿನಿಮಾ ಇದೀಗ ನೆಟ್​​ಫ್ಲಿಕ್ಸ್​ನಲ್ಲಿ ವೀಕ್ಷಣೆಗೆ…

Read More

ಮಕ್ಕಳಲ್ಲಿ ರಕ್ತಹೀನತೆ ಹೆಚ್ಚುತ್ತಿರುವುದಕ್ಕೆ ಕಾರಣಗಳೇನು? ಪೋಷಕರೇ ಈ ರೀತಿಯ ಲಕ್ಷಣ ಕಂಡುಬಂದಾಗ ನಿರ್ಲಕ್ಷಿಸಬೇಡಿ – Kannada News | Why Do Kids Get Anemia? Signs Every Parent Should Know

ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಲ್ಲಿ ರಕ್ತಹೀನತೆ (Anemia) ಸಮಸ್ಯೆ ಹೆಚ್ಚಾಗುತ್ತಿರುವುದು ವೈದ್ಯರನ್ನೇ ಚಿಂತೆಗೀಡುಮಾಡಿದೆ. ಏಕೆಂದರೆ ಈ ಸಮಸ್ಯೆ ಕೇವಲ ದೌರ್ಬಲ್ಯಕ್ಕೆ ಮಾತ್ರ ಸೀಮಿತವಾಗದೆ, ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ಮೇಲೂ ಪರಿಣಾಮ ಬೀರುತ್ತದೆ. ತಜ್ಞರ ಪ್ರಕಾರ, ಮಕ್ಕಳಲ್ಲಿ ರಕ್ತಹೀನತೆಗೆ ಪ್ರಮುಖ ಕಾರಣ ಐರನ್ ಕೊರತೆ. ಹೀಮೋಗ್ಲೋಬಿನ್ ಉತ್ಪಾದನೆಗೆ ಐರನ್ ಅಗತ್ಯವಾಗಿದ್ದು, ಮಕ್ಕಳ ಆಹಾರದಲ್ಲಿ ಇದು ಕಡಿಮೆಯಾಗಿದ್ರೆ ಸಮಸ್ಯೆ ಉಂಟಾಗುತ್ತದೆ. ಜೊತೆಗೆ ವಿಟಮಿನ್ ಬಿ 12 ಮತ್ತು ಫೋಲಿಕ್ ಆಸಿಡ್ ಕೊರತೆಯೂ ಅನಿಮಿಯಾಗೆ ಕಾರಣವಾಗಬಹುದು. ಸರಿಯಾದ ಪೌಷ್ಟಿಕಾಂಶವಿಲ್ಲದ…

Read More