ತಂದೆಯಾದ ಡಾಲಿ; ಧನಂಜಯ್-ಧನ್ಯತಾ ದಂಪತಿಯಿಂದ ಸಿಹಿ ಸುದ್ದಿ – Kannada News | Dolly Dhananjaya Becomes Father Actor and Wife Dhanyatha Welcome Baby Boy
ಸ್ಯಾಂಡಲ್‌ವುಡ್‌ನ ಜನಪ್ರಿಯ ನಟ ‘ಡಾಲಿ’ ಧನಂಜಯ್ ಹಾಗೂ ಧನ್ಯತಾ ದಂಪತಿ ಶೀಘ್ರದಲ್ಲೇ ಪಾಲಕರಾಗಲಿರುವ ಸುದ್ದಿಯನ್ನು ಇತ್ತೀಚೆಗಷ್ಟೇ ಹಂಚಿಕೊಂಡಿದ್ದರು. ಇದೀಗ ಮೇ 2ರಂದು ಈ ದಂಪತಿಗೆ ಮಗು ಜನಿಸಿದ್ದು, ಮನೆಯಲ್ಲಿ ಸಂಭ್ರಮ ಮನೆಮಾಡಿದೆ. ಗಂಡು ಮಗು ಜನಿಸಿದ ವಿಚಾರವನ್ನು ಧನಂಜಯ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ಶುಭಾಶಯಗಳ ಮಳೆ ಸುರಿಸುತ್ತಿದ್ದಾರೆ. ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಗುವಿನ ಪುಟ್ಟ ಕೈಗಳ ಫೋಟೋ ಹಂಚಿಕೊಂಡಿರುವ ಧನಂಜಯ್, ತಾವು ತಂದೆಯಾದ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ಮಗುವಿನ ಮುದ್ದಾದ…