Category Archives: Blog

Your blog category

ತಂದೆಯಾದ ಡಾಲಿ; ಧನಂಜಯ್-ಧನ್ಯತಾ ದಂಪತಿಯಿಂದ ಸಿಹಿ ಸುದ್ದಿ – Kannada News | Dolly Dhananjaya Becomes Father Actor and Wife Dhanyatha Welcome Baby Boy

ಸ್ಯಾಂಡಲ್‌ವುಡ್‌ನ ಜನಪ್ರಿಯ ನಟ ‘ಡಾಲಿ’ ಧನಂಜಯ್ ಹಾಗೂ ಧನ್ಯತಾ ದಂಪತಿ ಶೀಘ್ರದಲ್ಲೇ ಪಾಲಕರಾಗಲಿರುವ ಸುದ್ದಿಯನ್ನು ಇತ್ತೀಚೆಗಷ್ಟೇ ಹಂಚಿಕೊಂಡಿದ್ದರು. ಇದೀಗ ಮೇ 2ರಂದು ಈ ದಂಪತಿಗೆ ಮಗು ಜನಿಸಿದ್ದು, ಮನೆಯಲ್ಲಿ ಸಂಭ್ರಮ ಮನೆಮಾಡಿದೆ.

ಗಂಡು ಮಗು ಜನಿಸಿದ ವಿಚಾರವನ್ನು ಧನಂಜಯ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ಶುಭಾಶಯಗಳ ಮಳೆ ಸುರಿಸುತ್ತಿದ್ದಾರೆ.

ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಗುವಿನ ಪುಟ್ಟ ಕೈಗಳ ಫೋಟೋ ಹಂಚಿಕೊಂಡಿರುವ ಧನಂಜಯ್, ತಾವು ತಂದೆಯಾದ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ಮಗುವಿನ ಮುದ್ದಾದ ಮುಖ ನೋಡಲು ಫ್ಯಾನ್ಸ್ ಕಾದಿದ್ದಾರೆ.

ನಟ ಧನಂಜಯ್ ಹಾಗೂ ವೈದ್ಯೆ ಧನ್ಯತಾ ಅವರ ಮಧ್ಯೆ ಪ್ರೀತಿ ಮೂಡಿ, ಇಬ್ಬರೂ ಹಿರಿಯರ ಸಮ್ಮತಿಯೊಂದಿಗೆ 2025ರ ಫೆಬ್ರವರಿ 16ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾದ ಒಂದು ವರ್ಷದ ಸಂಭ್ರಮದ ಬೆನ್ನಲ್ಲೇ ಈ ಜೋಡಿ ಈಗ ಗಂಡು ಮಗುವನ್ನು ಸ್ವಾಗತಿಸಿದೆ.

ಸದ್ಯ ತಾಯಿ ಧನ್ಯತಾ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯಕ್ಕೆ ಮಗುವಿನ ಕೈಗಳ ಫೋಟೋ ಮಾತ್ರ ಹಂಚಿಕೊಂಡಿರುವ ‘ಡಾಲಿ’, ಮುಂದಿನ ದಿನಗಳಲ್ಲಿ ಮಗುವಿನ ಮುಖವನ್ನು ಪರಿಚಯಿಸುವ ಸಾಧ್ಯತೆಯಿದೆ.

ವೃತ್ತಿಜೀವನದಲ್ಲೂ ಧನಂಜಯ್ ಅವರಿಗೆ ಇದು ಯಶಸ್ಸಿನ ಸಮಯ. ಅವರು ನಿರ್ಮಿಸಿರುವ ‘ಜೆರಾಕ್ಸ್’ ವೆಬ್ ಸರಣಿ ಇತ್ತೀಚೆಗಷ್ಟೇ ಜೀ5ನಲ್ಲಿ ಬಿಡುಗಡೆಯಾಗಿ ಎಲ್ಲೆಡೆ ಮೆಚ್ಚುಗೆ ಗಳಿಸುತ್ತಿದೆ. ಇದರ ಬೆನ್ನಲ್ಲೇ ವೈಯಕ್ತಿಕ ಜೀವನದಲ್ಲೂ ಒಳ್ಳೆಯದೇ ಆಗಿದ್ದು ಧನಂಜಯ್ ಅವರ ಬಾಳಲ್ಲಿ ಹೊಸ ಅಧ್ಯಾಯ ಶುರುವಾಗಿದೆ.

Published On – 8:27 am, Sat, 2 May 26

Source link

ತುಮಕೂರಿನಲ್ಲಿ ಹಕ್ಕಿ ಜ್ವರದ ಭೀತಿ: ನವಿಲುಗಳ ಸಾವಿನ ಬೆನ್ನಲ್ಲೇ ಈಗ 30 ಕೋಳಿಗಳ ಸಾವು! ಜಿಲ್ಲೆಯಲ್ಲಿ ಹೈ ಅಲರ್ಟ್​ – Kannada News | Bird Flu Outbreak in Tumakuru: 30 chickens Dead; 5 Villages Declared Containment Zones

ತುಮಕೂರು, ಮೇ 02: ತುಮಕೂರು ಜಿಲ್ಲೆಯಲ್ಲಿ ಹಕ್ಕಿಜ್ವರದ (H5N1) ಭೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಳೆದ ಕೆಲವು ದಿನಗಳಿಂದ ನವಿಲುಗಳ ಸರಣಿ ಸಾವುಗಳು ವರದಿಯಾಗಿದ್ದವು. ಇದೀಗ ಅದೇ ವ್ಯಾಪ್ತಿಯಲ್ಲಿ ಕೋಳಿಗಳ ಸಾವೂ ಸಂಭವಿಸಿರುವುದು ಆತಂಕಕ್ಕೆ ಕಾರಣವಾಗಿದೆ. ಸಾವನ್ನಪ್ಪಿದ ಕೋಳಿಗಳ ಮಾದರಿಗಳನ್ನು ಪರೀಕ್ಷೆಗಾಗಿ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದ್ದು, ಸಾವಿನ ನಿಖರ ಕಾರಣವನ್ನು ಪತ್ತೆಹಚ್ಚಲು ಪರಿಶೀಲನೆ ನಡೆಯುತ್ತಿದೆ. ಹಕ್ಕಿ ಜ್ವರವೇ 44 ನವಿಲುಗಳ ಸಾವಿಗೆ ಕಾರಣ ಎಂದು ಈಗಾಗಲೇ ದೃಢಪಟ್ಟಿದ್ದು, ಈಗ ಕೋಳಿಗಳ ಸಾವಿಗೂ ಅದೇ ಕಾರಣವಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಹಕ್ಕಿ ಜ್ವರವೇ ಇರಬಹುದಾ ಎಂಬ ಶಂಕೆ

ಕಳೆದ ಏಪ್ರಿಲ್ 16ರಿಂದ ತುಮಕೂರು ತಾಲೂಕಿನಾದ್ಯಂತ ನವಿಲುಗಳ ಸರಣಿ ಸಾವು ಆರಂಭವಾಗಿತ್ತು. ಕೇವಲ 11 ದಿನಗಳಲ್ಲಿ ಬರೋಬ್ಬರಿ 44 ನವಿಲುಗಳು ಮೃತಪಟ್ಟಿದ್ದವು. ಆರಂಭದಲ್ಲಿ ಜಿಲ್ಲೆಯಲ್ಲಿ ತಾಪಮಾನ ಏರುತ್ತಿದ್ದ ಕಾರಣ, ಅತಿಯಾದ ಶಾಖ ಮತ್ತು ನಿರ್ಜಲೀಕರಣದಿಂದ ಈ ಸಾವುಗಳು ಸಂಭವಿಸಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕಿಸಿದ್ದರು. ಆದರೆ ನಂತರ ಬಂದ FSL ವರದಿಯಲ್ಲಿ ಹಕ್ಕಿ ಜ್ವರದ ಸೋಂಕಿನಿಂದಲೇ ನವಿಲುಗಳು ಸಾವನ್ನಪ್ಪಿವೆ ಎಂದು ದೃಢಪಟ್ಟಿದೆ. ಇದೀಗ ಜಿಲ್ಲೆಯ ಬೊಮ್ಮನಹಳ್ಳಿ ಗ್ರಾಮದ ಕೋಳಿ ಫಾರಂನಲ್ಲಿ ಏಕಾಕಾಲದಲ್ಲಿ ಸುಮಾರು 30 ಕೋಳಿಗಳು ಸಾವನ್ನಪ್ಪಿದ್ದು, ಈ ಘಟನೆ ಹಕ್ಕಿಜ್ವರದ ಅನುಮಾನಕ್ಕೆ ಕಾರಣವಾಗಿದೆ. ಪಶು ಸಂಗೋಪನಾ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಹೈ ಅಲರ್ಟ್‌ ಘೋಷಿಸಿದ್ದಾರೆ.

ಕಂಟೋನ್ಮೆಂಟ್ ಜೋನ್ ಘೋಷಣೆ

ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ಕಲ್ಲಳ್ಳಿ, ಕೋಡಿಹಳ್ಳಿ, ಹುಣ್ಣೆನಹಳ್ಳಿ, ಬೊಮ್ಮನಹಳ್ಳಿ ಮತ್ತು ಬೈರಸಂದ್ರ ಪ್ರದೇಶದ ಜನರು ಹೆಚ್ಚು ಜಾಗ್ರತೆ ವಹಿಸುವಂತೆ ಸೂಚಿಸಿದ್ದಾರೆ. ಯಾವುದೇ ಕೋಳಿಯ ಸಾವು ಕಂಡುಬಂದಲ್ಲಿ ತಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ತಿಳಿಸಿದ್ದಾರೆ. ಜನರು ಅನಗತ್ಯ ಆತಂಕಪಡಬೇಕಾಗಿಲ್ಲ, ಆದರೆ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಹಕ್ಕಿಜ್ವರ ಸಂಬಂಧಿತ ಮಾಹಿತಿ ನೀಡಲು ಸಹಾಯವಾಣಿ ಕೂಡ ತೆರೆಯಲಾಗಿದೆ.

ಇದನ್ನೂ ಓದಿ ತುಮಕೂರಿನಲ್ಲಿ ಹಕ್ಕಿ ಜ್ವರದ ಆತಂಕ: ನವಿಲುಗಳ ಸಾವಿಗೆ ‘H5N1’ ಸೋಂಕು ಕಾರಣ!

ಇನ್ನೊಂದೆಡೆ, ರಾಜ್ಯದ ತಜ್ಞರ ತಂಡ ಜಿಲ್ಲೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದೆ. ತುಮಕೂರು ಡಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಹಲವು ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಚರ್ಚೆ ನಡೆದಿದೆ. ಆ ಕ್ರಮಗಳ ಭಾಗವಾಗಿ ಕಲ್ಲಳ್ಳಿ ಸೇರಿ ಆ 5 ಗ್ರಾಮಗಳನ್ನು ಕಂಟೋನ್ಮೆಂಟ್ ಜೋನ್ ಆಗಿ ಘೋಷಿಸಲಾಗಿದೆ. ಈ ಪ್ರದೇಶಗಳಲ್ಲಿ ಚಿಕನ್ ಅಂಗಡಿಗಳನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಸೂಚನೆ ನೀಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನ ಪೀಣ್ಯ ಎಲಿವೇಟೆಡ್ ಫ್ಲೈಓವರ್​ 4 ದಿನ ಬಂದ್​​: ಬದಲಿ ಮಾರ್ಗದ ಮಾಹಿತಿ ಇಲ್ಲಿದೆ – Kannada News | Bengaluru’s Peenya Elevated Flyover to Remain Closed for 4 Days from May 5 to 8

ಬೆಂಗಳೂರು, ಮೇ 02: ಫ್ಲೈಓವರ್ ಕೇಬಲ್ ಅಳವಡಿಕೆ ದುರಸ್ತಿ ಕಾಮಗಾರಿ ಹಾಗೂ ಅಂತಿಮ ಲೋಡ್ ಟೆಸ್ಟಿಂಗ್ ಹಿನ್ನೆಲೆ ಬೆಂಗಳೂರಿನ (Bengaluru) ಪೀಣ್ಯ ಎಲಿವೇಟೆಡ್ ಫ್ಲೈಓವರ್​ 4 ದಿನ ಬಂದ್​​ ಆಗಲಿದೆ. ಮೇ 5ರ ಬೆಳಗ್ಗೆ 5ರಿಂದ ಮೇ 8ರ ಬೆಳಗ್ಗೆ 11ರವರೆಗೆ ಪ್ಲೈಓವರ್​​ ಕ್ಲೋಸ್​​ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ. ಹೀಗಾಗಿ ಫ್ಲೈಓವರ್​ನ 2 ಬದಿಯಲ್ಲಿ ವಾಹನ ಸಂಚಾರಗಳಿಗೆ ನಿರ್ಬಂಧ ವಿಧಿಸಲಾಗಿದ್ದು ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಬಳಕೆ ಮಾಡುವಂತೆ ಬೆಂಗಳೂರು ಟ್ರಾಫಿಕ್​​ ಪೊಲೀಸರು ತಿಳಿಸಿದ್ದಾರೆ. ಸುರಕ್ಷತೆ ಮತ್ತು ಸುಗಮ ಸಂಚಾರದ ಹಿತದೃಷ್ಟಿಯಿಂದ ಸೂಚನೆಯನ್ನು ವಾಹನ ಸವಾರರು ಕಟ್ಟುನಿಟ್ಟಾಗಿ ಪಾಲಿಸುವಂತೆ ವಿನಂತಿಯನ್ನೂ ಮಾಡಿದ್ದಾರೆ.

ಪರ್ಯಾಯ ಮಾರ್ಗಗಳು

ನೆಲಮಂಗಲದಿಂದ ಬೆಂಗಳೂರು ಕಡೆಗೆ

ಕೆನ್ನಮೆಟಲ್ ಫ್ಯಾಕ್ಟರಿಹತ್ತಿರ ಫೈಓವರ್‌ನ ಫೈಓವರ್‌ ಕೆಳಭಾಗದ ಎನ್.ಹೆಚ್-4 ಮತ್ತು ಸರ್ವಿಸ್ ರಸ್ತೆ ಮೂಲಕ 8ನೇ ಮೈಲಿ ದಾಸರಹಳ್ಳಿ ಪೀಣ್ಯ ಪೊಲೀಸ್‌ ಠಾಣೆ ಜಂಕ್ಷನ್-ಎಸ್.ಆರ್.ಎಸ್ ಜಂಕ್ಷನ್ – ಗೊರಗುಂಟೆಪಾಳ್ಯ- ಜಾಲಹಳ್ಳಿ ಕ್ರಾಸ್ ಮಾರ್ಗ

ಸಿ.ಎಂ.ಟಿ.ಐ- ನೆಲಮಂಗಲ ಕಡೆಗೆ

ಫೈಓವರ್‌ ಕೆಳಭಾಗದ ಎನ್.ಹೆಚ್.-4 ಮತ್ತು ಸರ್ವಿಸ್ ರಸ್ತೆ ಮೂಲಕ ಎಸ್.ಆರ್.ಎಸ್ ಜಂಕ್ಷನ್- ಪೊಲೀಸ್ ಠಾಣೆ ಜಂಕ್ಷನ್ -ಜಾಲಹಳ್ಳಿ ಕ್ರಾಸ್ ದಾಸರಹಳ್ಳಿ -8ನೇ ಮೈಲಿ-ರ್ಲೆಜಿ ಟೋಲ್

ಈ ಮೊದಲು ಫ್ಲೈಓವರ್ ಕೇಬಲ್ ಅಳವಡಿಕೆ ದುರಸ್ತಿ ಕಾಮಗಾರಿ ಹಾಗೂ ಅಂತಿಮ ಲೋಡ್ ಟೆಸ್ಟಿಂಗ್ ಹಿನ್ನೆಲೆ ಪೀಣ್ಯ ಎಲಿವೇಟೆಡ್ ಫ್ಲೈಓವರ್​ ಏಪ್ರಿಲ್​ 13ರಿಂದ 5 ದಿನ ಬಂದ್​ ಆಗಲಿದೆ ಎಂದು ತಿಳಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಪ್ರಕ್ರಿಯೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದೂಡಿದ ಪರಿಣಾಮ ಪ್ಲೈಓವರ್​​ ಮೇಲೆ ವಾಹನಗಳ ಸಂಚಾರಕ್ಕೆ ಎಂದಿನಂತೆ ಅನವುಮಾಡಿಕೊಡಲಾಗಿತ್ತು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಇಂದೂ ಇರಲಿದೆ ವರುಣಾರ್ಭಟ! ಕರಾವಳಿಯಲ್ಲಿ ಹೀಟ್​ ವೇವ್ ಜೊತೆ ಮಳೆಯ ಸಾಧ್ಯತೆ

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 8:09 am, Sat, 2 May 26

Source link

IPL 2026: ಅದು ಕ್ಲಿಯರ್ ಔಟ್… ಅಶ್ವಿನ್ ನೀಡಿದ ಸ್ಪಷ್ಟನೆ ಹೀಗಿದೆ – Kannada News | IPL 2026: Ashwin Backs Holder’s ‘Big Hands’ in Catch Row

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 42ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (GT) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಆರ್​ಸಿಬಿ ನಾಯಕ ರಜತ್ ಪಾಟಿದಾರ್ ಅವರ ಕ್ಯಾಚ್ ಔಟ್ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಈ ಕ್ಯಾಚ್ ಬಗ್ಗೆ ಟೀಮ್ ಇಂಡಿಯಾದ  ಮಾಜಿ ಸ್ಪಿನ್ನರ್ ಆರ್. ಅಶ್ವಿನ್ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಸ್ಪಷ್ಟನೆ ನೀಡಿದ್ದು, ಇದು ‘ಸಂಪೂರ್ಣ ನ್ಯಾಯಸಮ್ಮತವಾದ ಕ್ಯಾಚ್’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಏನಿದು ವಿವಾದ?

ಅಹಮದಾಬಾದ್​ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡದಿ ಆರ್​ಸಿಬಿ ವಿರುದ್ಧ ಅರ್ಷದ್ ಖಾನ್ ಎಸೆದ ಎಸೆತವನ್ನು ರಜತ್ ಪಾಟಿದಾರ್ ಪುಲ್ ಮಾಡಲು ಹೋಗಿ ಟಾಪ್-ಎಡ್ಜ್ ಮಾಡಿದರು. ಡೀಪ್ ಸ್ಕ್ವೇರ್ ಲೆಗ್‌ನಿಂದ ಓಡಿ ಬಂದ ಹೋಲ್ಡರ್ ಮುನ್ನುಗ್ಗಿ ಡೈವ್ ಹೊಡೆದು ಚೆಂಡನ್ನು ಹಿಡಿದರು.

ಈ ಕ್ಯಾಚ್ ವಿಡಿಯೋ ಪರಿಶೀಲಿಸಿದ ಮೂರನೇ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದರು. ಆದರೆ, ಕ್ಯಾಚ್ ಹಿಡಿದ ಬಳಿಕ ಚೆಂಡು ನೆಲಕ್ಕೆ ತಗುಲಿದೆ ಎಂದು ವಿರಾಟ್ ಕೊಹ್ಲಿ ಸೇರಿದಂತೆ ಆರ್‌ಸಿಬಿ ತಂಡದ ಆಟಗಾರರು ಆಕ್ರೋಶ ವ್ಯಕ್ತಪಡಿಸಿದ್ದರು. ಅಂತಿಮವಾಗಿ ಥರ್ಡ್ ಅಂಪೈರ್ ತೀರ್ಪಿನಂತೆ ರಜತ್ ಪಾಟಿದಾರ್ ಔಟಾಗಿ ಹೊರ ನಡೆದಿದ್ದರು.

ಇತ್ತ ವಿಡಿಯೋದಲ್ಲಿ ಚೆಂಡು ನೆಲಕ್ಕೆ ತಾಗಿರುವುದು ಸ್ಪಷ್ಟವಾಗಿ ಗೋಚರಿಸಿದರೂ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ಆರ್​ಸಿಬಿ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶಗಳನ್ನು ಹೊರಹಾಕಿದ್ದರು. ಇದೀಗ ಈ ವಿವಾದಕ್ಕೆ ತೆರೆ ಎಳೆಯುವಂತೆ ರವಿಚಂದ್ರನ್ ಅಶ್ವಿನ್ ಸ್ಪಷ್ಟನೆ ನೀಡಿದ್ದಾರೆ.

ಅಶ್ವಿನ್ ಸ್ಪಷ್ಟನೆ!

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಬಗ್ಗೆ ಮಾತನಾಡಿದ ರವಿಚಂದ್ರನ್ ಅಶ್ವಿನ್, ಹೋಲ್ಡರ್ ಅವರನ್ನು ಸಮರ್ಥಿಸಿಕೊಳ್ಳಲು ಕೆಲವು ಪ್ರಮುಖ ಅಂಶಗಳನ್ನು ಮುಂದಿಟ್ಟಿದ್ದಾರೆ:

  •  ಹೋಲ್ಡರ್ ಅವರ ದೊಡ್ಡ ಕೈಗಳು: “ಜೇಸನ್ ಹೋಲ್ಡರ್ ಅವರ ಕೈಗಳು ನನ್ನ ಕೈಗಿಂತ ಎರಡು ಪಟ್ಟು ದೊಡ್ಡದಾಗಿವೆ. ಅವರ ಬೃಹತ್ ಹಸ್ತದೊಳಗೆ ಕ್ರಿಕೆಟ್ ಬಾಲ್ ಸಂಪೂರ್ಣವಾಗಿ ಮರೆಯಾಗಬಲ್ಲದು” ಎಂದು ಅಶ್ವಿನ್ ವಿವರಿಸಿದ್ದಾರೆ.
  •  ದೃಷ್ಟಿ ಭ್ರಮೆ: ಹೋಲ್ಡರ್ ಅವರ ಬೆರಳುಗಳ ನಡುವಿನ ಅಂತರದಿಂದ ಚೆಂಡು ಕಾಣಿಸಿದಾಗ ಅದು ನೆಲಕ್ಕೆ ತಗುಲಿದಂತೆ ಭಾಸವಾಗಬಹುದು. ಆದರೆ, ಅವರ ದೊಡ್ಡ ಬೆರಳುಗಳು ಚೆಂಡಿನ ಕೆಳಭಾಗದಲ್ಲಿದ್ದವು ಎಂಬುದು ಅಶ್ವಿನ್ ವಾದ.
  • ಅಂಪೈರ್ ನಿರ್ಧಾರಕ್ಕೆ ಗೌರವ: ಆನ್-ಫೀಲ್ಡ್ ಅಂಪೈರ್ ‘ಸಾಫ್ಟ್ ಸಿಗ್ನಲ್’ ಔಟ್ ನೀಡಿದ್ದಾಗ, ಅದನ್ನು ಬದಲಿಸಲು ಬಲವಾದ ಪುರಾವೆ ಬೇಕು. ಇಲ್ಲಿ ಅಂತಹ ಯಾವುದೇ ಪುರಾವೆ ಇರಲಿಲ್ಲ ಎಂಬುದು ಅವರ ಅಭಿಪ್ರಾಯ.

ಅಶ್ವಿನ್ ಅವರ ಪ್ರಕಾರ, ಜೇಸನ್ ಹೋಲ್ಡರ್ ಅವರ ಕೈ ಎರಡು ಪಟ್ಟು ದೊಡ್ಡದು. ಆತನ ಕೈಯಲ್ಲಿ ಚೆಂಡು ಬಹುತೇಕ ಕಣ್ಮರೆಯಾಗುತ್ತದೆ. ಹೀಗಾಗಿ ಆತನ ಬೆರಳುಗಳ ನಡುವೆ ಚೆಂಡು ಕಾಣಿಸಿದ್ದರೂ ಬಾಲ್ ನೆಲಕ್ಕೆ ಬಡಿದಿದೆ ಎಂದು ಅರ್ಥವಲ್ಲ. ಬಹುಶಃ ಆತ ಸರಿಯಾಗಿ ಚೆಂಡನ್ನು ಹಿಡಿದಿದ್ದಾರೆ. ನನ್ನ ಪ್ರಕಾರ, ಚೆಂಡು ನೆಲಕ್ಕೆ ತಾಗಿಲ್ಲ. ಹೀಗಾಗಿ ಅದು ಕ್ಲಿಯರ್ ಕ್ಯಾಚ್ ಎಂದಿದ್ದಾರೆ.

ಇದನ್ನೂ ಓದಿ: ಮೊದಲ ಎಸೆತದಲ್ಲೇ ಭರ್ಜರಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್

ಪಂದ್ಯದ ಫಲಿತಾಂಶ:

ಭರ್ಜರಿ ಫಾರ್ಮ್​ನಲ್ಲಿದ್ದ ರಜತ್ ಫಾಟಿದಾರ್ ಅವರ ಈ ವಿಕೆಟ್ ಪಂದ್ಯದ ಗತಿಯನ್ನೇ ಬದಲಿಸಿತು. ಅಲ್ಲದೆ ಆರ್​ಸಿಬಿ ತಂಡವು ಈ ಪಂದ್ಯದಲ್ಲಿ 19.2 ಓವರ್​ಗಳಲ್ಲಿ 155 ರನ್ ಬಾರಿಸಿ ಆಲೌಟ್ ಆಗಿದ್ದರು. ಈ ಗುರಿಯನ್ನು ಬೆನ್ನತ್ತಿದ ಗುಜರಾತ್ ಟೈಟಾನ್ಸ್​ ತಂಡವು 15.5 ಓವರ್​ಗಳಲ್ಲಿ 158 ರನ್ ಬಾರಿಸಿ 4 ವಿಕೆಟ್​ಗಳ ವಿಜಯ ಸಾಧಿಸಿದೆ.

Published On – 8:09 am, Sat, 2 May 26

Source link

ಒಂದು ಹಾಡಿನಿಂದ ನಿರ್ದೇಶಕನ ಜೊತೆ ಶುರುವಾಯ್ತು ರಮ್ಯಾ ಕೃಷ್ಣ ಪ್ರೀತಿ – Kannada News | Krishna Vamsi and Ramya Krishna Love Story: From ‘Gulabi’ Songs to Happy Marriage

ನಿರ್ದೇಶಕ ಕೃಷ್ಣ ವಂಶಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಜನಪ್ರಿಯ ನಟಿ ರಮ್ಯಾ ಕೃಷ್ಣ ಅವರ ಪ್ರೀತಿ ಮತ್ತು ಮದುವೆಯ ಬಗ್ಗೆ ಆಸಕ್ತಿದಾಯಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಅವರ ಪ್ರೇಮಕಥೆ ‘ಗುಲಾಬಿ’ ಚಿತ್ರದ ಹಾಡುಗಳಿಂದ ಪ್ರಾರಂಭವಾಯಿತು ಎಂದು ಅವರು ಹೇಳಿದರು. ಟಿವಿಯಲ್ಲಿ ‘ಗುಲಾಬಿ’ಸಿನಿಮಾದ ಹಾಡುಗಳನ್ನು ನೋಡಿ ರಮ್ಯಾ ಕೃಷ್ಣ ಇಷ್ಟಪಟ್ಟರು. ಆ ಸಮಯದಲ್ಲಿ ಅವರು ಈಗಾಗಲೇ ದೊಡ್ಡ ತಾರೆಯಾಗಿದ್ದರು ಎಂದು ಕೃಷ್ಣ ವಂಶಿ ಹೇಳಿದರು.

‘ನಮಗೆಲ್ಲರಿಗೂ ಅವರ ಬಗ್ಗೆ ಗೌರವವಿತ್ತು, ನನಗೂ ಸಹ’ ಎಂದು ಅವರು ಹೇಳಿದರು.‘ನಿನ್ನೆ ಪೆಲ್ಲಡತ’ ಚಿತ್ರದ ಪಾತ್ರದ ಬಗ್ಗೆ ಲಕ್ಷ್ಮಿ ಅವರೊಂದಿಗೆ ಮಾತನಾಡಲು ಹೋದಾಗ ಇಬ್ಬರ ನಡುವಿನ ಮೊದಲ ಭೇಟಿಯಾಯಿತು ಎಂದು ಕೃಷ್ಣ ವಂಶಿ ಹೇಳಿದರು. ‘ರಮ್ಯಾ ಕೃಷ್ಣ ಸೆಟ್‌ನಲ್ಲಿದ್ದರು. ಜನಸಂದಣಿಯಿಂದಾಗಿ ಸ್ವಲ್ಪ ನಾಚಿಕೆಪಡುತ್ತಾ ಇದ್ದರು. ಅವರ ಜೊತೆ ಬ್ರಹ್ಮಾನಂದಂ ಇದ್ದರು. ನಂತರ ರಮ್ಯಾ ಕೃಷ್ಣ ಅವರು ಬ್ರಹ್ಮಾನಂದಂ ಬಳಿ ‘ದಯವಿಟ್ಟು ವಂಶಿಯನ್ನು ಪರಿಚಯಿಸಿ’ ಎಂದು ಕೇಳಿದರು.

ಪರಿಚಯದ ನಂತರ ರಮ್ಯಾ ಅವರು, ಕೃಷ್ಣ ವಂಶಿ ಬಳಿ ‘ಗುಲಾಬಿ” ಚಿತ್ರದ ಹಾಡುಗಳು ತುಂಬಾ ಚೆನ್ನಾಗಿವೆ, ತೆಲುಗಿನಲ್ಲಿ ಇಂತಹ ಹಾಡು ಹೊರಬರುತ್ತದೆ ಎಂದು ನಾನು ಎಂದಿಗೂ ನಿರೀಕ್ಷಿಸಿರಲಿಲ್ಲ’ ಎಂದು ಹೊಗಳಿದರು. ರಮ್ಯಾ ಕೃಷ್ಣ ಬಳಿ ಸಿನಿಮಾ ನೋಡಿದ್ದೀರಾ ಎಂದು ಕೇಳಿದಾಗ, ‘ಟಿವಿಯಲ್ಲಿ ಮಾತ್ರ ಹಾಡುಗಳನ್ನು ನೋಡಿದ್ದೇನೆ’ ಎಂದು ಹೇಳಿದರು. ಅದೇ ದಿನ ಸಂಜೆ ರಮ್ಯಾಗಾಗಿ ಸಿನಿಮಾದ ವಿಶೇಷ ಶೋ ಆಯೋಜಿಸಲಾಯಿತು. ಅಂದಹಾಗೆ, ‘ಗುಲಾಬಿ’ ಚಿತ್ರವನ್ನು ಕೃಷ್ಣ ವಂಶಿ ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ: ಈ ಕಲಾವಿದನ ಜೊತೆ ನಟಿಸೋದು ಎಂದರೆ ರಮ್ಯಾ ಕೃಷ್ಣಗೆ ಸಖತ್ ಭಯ

ಆ ದಿನಗಳಲ್ಲಿ ಹೆಚ್ಚು ಫೋನ್‌ಗಳು ಇಲ್ಲದ ಕಾರಣ, ಆರಂಭದಲ್ಲಿ ಪೇಜರ್‌ಗಳ ಮೂಲಕ ಸಂಭಾಷಣೆ ನಡೆಯುತ್ತಿತ್ತು ಎಂದು ಕೃಷ್ಣ ವಂಶಿ ನೆನಪಿಸಿಕೊಂಡಿದ್ದಾರೆ. ನಂತರ, ಅವರು ಶೂಟಿಂಗ್ ವೇಳೆ ಭೇಟಿ ಆದರು. ಇಬ್ಬರೂ ಪ್ರಪೋಸ್ ಮಾಡಿಕೊಂಡಿರಲಿಲ್ಲ. ಇಬ್ಬರ ಮಧ್ಯೆ ಏನೋ ಇದೆ ಎಂದು ಇಬ್ಬರಿಗೂ ಅನಿಸುತ್ತಿತ್ತಂತೆ. ಈಗ ಇಬ್ಬರೂ ಮದುವೆ ಆಗಿ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ರಾಜ ಶಿವಾಜಿ’ ಚಿತ್ರಕ್ಕೆ ಕೈ ಕೊಟ್ಟ ಹಿಂದಿ ಭಾಷಿಕರು; ಅದೃಷ್ಟ ಬದಲಿಸಿದ್ದು ಯಾರು? – Kannada News | Raja Shivaji Box Office: Ritesh Deshmukh’s Film Dominates Marathi Market, Struggles in Hindi

ಛತ್ರಪತಿ ಶಿವಾಜಿ ಮಹಾರಾಜರ ಜೀವನ ಆಧಾರಿತ ‘ರಾಜ ಶಿವಾಜಿ’  (Raja Shivaji) ಸಿನಿಮಾ ಮೇ 1ರಂದು ರಿಲೀಸ್ ಆಗಿದೆ. ಈ ಚಿತ್ರದ ಮೂಲಕ ನಟ ರಿತೇಶ್ ದೇಶ್‌ಮುಖ್ ಎರಡನೇ ಬಾರಿಗೆ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಈ ಸಿನಿಮಾದಲ್ಲಿ ರಿತೇಶ್ ಅವರೇ ರಾಜ ಶಿವಾಜಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಮೊದಲ ದಿನ ಎರಡಂಕಿ ಕಲೆಕ್ಷನ್ ಮಾಡಿದೆ. ಆದರೆ, ಹಿಂದಿ ಭಾಷೆಯಿಂದ ಸಿನಿಮಾಗೆ ತುಂಬಾನೇ ಕಡಿಮೆ ಕಲೆಕ್ಷನ್ ಆಗಿದೆ.

‘ರಾಜ ಶಿವಾಜಿ’ಚಿತ್ರ ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಿದೆ. ಶಿವಾಜಿ ಮಹಾರಾಜರ ಬಾಲ್ಯದ ಸಾಹಸಗಳು ಮತ್ತು ಸ್ವರಾಜ್ಯ ಸ್ಥಾಪನೆಯ ಹೋರಾಟವನ್ನು ಅದ್ಧೂರಿಯಾಗಿ ತೆರೆಯ ಮೇಲೆ ತರುವ ಪ್ರಯತ್ನ ನಡೆದಿದೆ. ಈ ಸಿನಿಮಾ ಮೊದಲ ದಿನ 11.35 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಆದರೆ, ಚಿತ್ರಕ್ಕೆ ಹಿಂದಿ ಭಾಷೆಯಿಂದ ಸಿಕ್ಕಿದ್ದು ಕೇವಲ 3.35 ಕೋಟಿ ರೂಪಾಯಿ.

ಹಾಗಾದರೆ, ‘ರಾಜ ಶಿವಾಜಿ’ ಸಿನಿಮಾನ ಕೈ ಹಿಡಿದಿದ್ದು ಯಾರು? ಮರಾಠಿ ಭಾಷಿಕರು. ಶಿವಾಜಿ ಮರಾಠ ರಾಜ. ಮರಾಠ ಸಾಮ್ರಾಜ್ಯ ಸ್ಥಾಪಿಸಿದವರು ಶಿವಾಜಿ. ಹೀಗಾಗಿ, ಮರಾಠಿ ಭಾಷೆಯಲ್ಲಿ ಸಿನಿಮಾ 8 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಆ ಭಾಷೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸಿನಿಮಾ ನೋಡಿದ್ದಾರೆ. ಇಂದು ಹಾಗೂ ನಾಳೆ ಚಿತ್ರಕ್ಕೆ ತುಂಬಾನೇ ಮುಖ್ಯವಾಗಿದೆ. ಅಂದು ಸಿನಿಮಾ ಎಷ್ಟು ಕೋಟಿ ರೂಪಾಯಿ ಗಳಿಕೆ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ‘ರಾಜ ಶಿವಾಜಿ’ ಸಿನಿಮಾದಲ್ಲಿ ಸಲ್ಮಾನ್ ಖಾನ್ ಅಬ್ಬರ: ಜೀವಾ ಮಹಾಲಾ ಪಾತ್ರ ಕಂಡು ಫ್ಯಾನ್ಸ್ ಫಿದಾ

ಜಿಯೋ ಸ್ಟುಡಿಯೋಸ್ ಮತ್ತು ಮುಂಬೈ ಫಿಲ್ಮ್ ಕಂಪನಿ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿವೆ. ಈ ಸಿನಿಮಾ 2024ರಲ್ಲಿ ಘೋಷಣೆ ಮಾಡಲಾಗಿತ್ತು. ಕೇವಲ ಎರಡು ವರ್ಷಗಳಲ್ಲಿ ಸಿನಿಮಾನ ತೆರೆಮೇಲೆ ತರಲಾಗಿದೆ. ಈ ಸಿನಿಮಾದಲ್ಲಿ ಅಭಿಷೇಕ್ ಬಚ್ಚನ್, ರಿತೇಷ್ ಪತ್ನಿ ಜೆನಿಲಿಯಾ ಮೊದಲಾದವರು ನಟಿಸಿದ್ದಾರೆ. ಸಲ್ಮಾನ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:39 am, Sat, 2 May 26

Source link

Bengaluru Air Quality: ಬೆಂಗಳೂರು ಸೇರಿದಂತೆ ಹುಬ್ಬಳ್ಳಿಯ ಏರ್ ಕ್ವಾಲಿಟಿ ಉತ್ತಮ – Kannada News | Bangalore Air Pollution Crisis: Belagavi and Vijayapura Air Quality is better than most cities

ಬೆಂಗಳೂರು ಸೇರಿದಂತೆ ಹುಬ್ಬಳ್ಳಿಯ ಏರ್ ಕ್ವಾಲಿಟಿ ಉತ್ತಮ

ಬೆಂಗಳೂರು, ಮೇ 02: ರಾಜ್ಯದಲ್ಲಿ ಬೆಂಗಳೂರು, ಹುಬ್ಬಳ್ಳಿಯ ಏರ್ ಕ್ವಾಲಿಟಿ (Bengaluru Air Quality) ತಕ್ಕಮಟ್ಟಿಗೆ ಸುಧಾರಿಸಿದೆ. ಆದರೂ ಬೆಂಗಳೂರಿನ ವಾಯು ಗುಣಮಟ್ಟ ಅಪಾಯಕಾರಿ ಮಟ್ಟದಲ್ಲಿಯೇ ಇದೆ ಎಂದು ತಜ್ಞರು ಹೇಳುತ್ತಾರೆ. ಹುಬ್ಬಳ್ಳಿಯ ವಾಯು ಗುಣಮಟ್ಟ ಇಂದು ಭಾರೀ ಸುಧಾರಣೆ ಕಂಡಿದ್ದು, ಉಳಿದೆಡೆಗಿಂತ ಎಷ್ಟೋ ಉತ್ತಮವಾಗಿದೆ ಎನ್ನಲಾಗಿದೆ. ಬೆಂಗಳೂರಿನ AQI ಸಧ್ಯಕ್ಕೆ ಒಳ್ಳೆಯ ಮಟ್ಟದಲ್ಲಿದ್ದು, ಆದರೂ ಬೆಂಗಳೂರಿನ ವಾಯು ಗುಣಮಟ್ಟ ಅನಾರೋಗ್ಯಕರ ಮಟ್ಟದಲ್ಲಿಯೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.

ಹುಬ್ಬಳ್ಳಿಯ ಏರ್ ಕ್ವಾಲಿಟಿ ಇಂದು ಕೇವಲ 72ರಷ್ಟಿದ್ದು, ಅತ್ಯಂತ ಒಳ್ಳೆಯ ಗುಣಮಟ್ಟದಲ್ಲಿದೆ. ಮಂಗಳೂರಿನಲ್ಲಿ ಕೆಲ ತಿಂಗಳ ಹಿಂದೆ ವಾಯು ಗುಣಮಟ್ಟ ಅಪಾಯಕಾರಿ ಮಟ್ಟಕ್ಕೆ ಇಳಿದಿತ್ತು. ಹಲವು ಬಾರಿ 200ರ ಗಡಿ ತಲುಪಿತ್ತು. ಆದರೆ ಇತ್ತೀಚೆಗೆ AQI ಸುಧಾರಣೆ ಕಂಡುಬಂದಿತ್ತು. ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 109ಕ್ಕೆ ತಲುಪಿದೆ. ಮಂಗಳೂರು ಮತ್ತು ಉಡುಪಿಯ AQI 100ಕ್ಕಿಂತ ಹೆಚ್ಚಿದ್ದು, ಅನಾರೋಗ್ಯಕರ ಮಟ್ಟದಲ್ಲಿದೆ. ಬೆಂಗಳೂರಿನ AQI ಇನ್ನೂ ಆರೋಗ್ಯಕ್ಕೆ ಮಾರಕವಾಗಿಯೇ ಇದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು – 109
  • ಮಂಗಳೂರು-115
  • ಮೈಸೂರು – 117
  • ಬೆಳಗಾವಿ – 46
  • ಕಲಬುರ್ಗಿ-90
  • ಶಿವಮೊಗ್ಗ –112
  • ಬಳ್ಳಾರಿ – 103
  • ಹುಬ್ಬಳ್ಳಿ- 72
  • ಉಡುಪಿ –113
  • ವಿಜಯಪುರ – 75

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡಿ. ಸುಧಾಕರ್​​ ಆರೋಗ್ಯದ ಬಗ್ಗೆ ಸಹೋದರನಿಂದ ಬಿಗ್​​ ಅಪ್ಡೇಟ್​: ಈಗ ಹೇಗಿದ್ದಾರೆ ಸಚಿವರು? – Kannada News | Minister D. Sudhakar’s Health Improves: Brother Confirms Recovery from Lung Infection

ಸಚಿವ ಡಿ. ಸುಧಾಕರ್​​

ಬೆಂಗಳೂರು/ಚಿತ್ರದುರ್ಗ, ಮೇ 02: ಶ್ವಾಸಕೋಶದ ಸೋಂಕಿನಿಂದಾಗಿ ಗಂಭೀರ ಸ್ಥಿತಿಯಲ್ಲಿರುವ ಯೋಜನೆ ಮತ್ತು ಸಾಂಖಿಕ‌ ಇಲಾಖೆ ಸಚಿವ ಡಿ. ಸುಧಾಕರ್ ಆರೋಗ್ಯದ ಬಗ್ಗೆ ಅವರ ಸಹೋದರ ಬಿಗ್​​ ಅಪ್ಡೇಟ್​​ ನೀಡಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಡಿ. ಕುಮಾರ್, ಸುಧಾಕರ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಅವರಿಗೆ ಪ್ರಜ್ಞೆ ಬಂದಿದ್ದು, ಕಣ್ಣುಬಿಟ್ಟು ನೋಡಿದ್ದಾರೆ. ಹೀಗಾಗಿ ನೂರಕ್ಕೆ ನೂರರಷ್ಟು ಅವರು ಗುಣಮುಖರಾಗುವ ವಿಶ್ವಾಸವಿದೆ. ಹಿರಿಯೂರಿಗೆ ಬಂದು ಸುಧಾಕರ್​​ ಮತ್ತೆ ಜನಸೇವೆ ಮಾಡಲಿದ್ದು, ಎಲ್ಲರೂ ಧೈರ್ಯ ಮತ್ತು ಸಮಾದಾನದಿಂದ ಇರಿ ಎಂದು ತಿಳಿಸಿದ್ದಾರೆ.

ಮೊಣಕಾಲು ಆಪರೇಷನ್ ಸಂಬಂಧ ಸಚಿವ ಸುಧಾಕರ್​​ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ, ಆಪರೇಷನ್ ಬಳಿಕ ಶ್ವಾಸಕೋಶದಲ್ಲಿ ಸೋಂಕು ಕಾಣಿಸಿಕೊಂಡ ಪರಿಣಾಮ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಕಿಮ್ಸ್​​ಗೆ ದಾಖಲಿಸಲಾಗಿತ್ತು. ಸಚಿವರ ಆರೋಗ್ಯದ ಬಗ್ಗೆ ಪ್ರತಿಕ್ರಿಯಿಸಿದ್ದ ಕಿಮ್ಸ್ ಆಸ್ಪತ್ರೆ ಶ್ವಾಸಕೋಶ ಕಸಿ ವೈದ್ಯ ಮಂಜುನಾಥ್, ಶ್ವಾಸಕೋಶ ಸೋಂಕು ಹಿನ್ನೆಲೆಯಲ್ಲಿ ಸಚಿವ ಡಿ. ಸುಧಾಕರ್ಗೆ ಚಿಕಿತ್ಸೆ ನೀಡಲಾಗುತ್ತಿದೆ. ತಜ್ಞ ವೈದ್ಯಕೀಯ ತಂಡದಿಂದ ಚಿಕಿತ್ಸೆ ಮುಂದುವರೆದಿದ್ದು, ಸದ್ಯ ವೆಂಟಿಲೇಟರ್ ಮತ್ತು ಎಕ್ಮೋ ನೆರವಿನಿಂದ ಉಸಿರಾಟವಾಡುತ್ತಿದ್ದಾರೆ. ಇನ್ಫೆಕ್ಷನ್ ಆಗಿರುವ ಶ್ವಾಸಕೋಶ ಸರಿಪಡಿಸಲು ಪ್ರಯತ್ನ ಪ್ರಯತ್ನ ನಡೆದಿದೆ. ಅದು ಸಾಧ್ಯವಾಗದಿದ್ದಾಗ ಶ್ವಾಸಕೋಶ ಕಸಿ ಮಾಡಲಾಗುವುದು ಎಂದು ತಿಳಿಸಿದ್ದರು. ಹೀಗಾಗಿ ಅವರ ಅಭಿಮಾನಿಗಳು ಮತ್ತು ಆಪ್ತರಲ್ಲಿ ಆತಂಕ ಮೂಡಿತ್ತು. ಆದರೀಗ ಸಚಿವರ ಸಹೋದರ ನೀಡಿರುವ ಹೇಳಿಕೆ ಕೊಂಚ ನೆಮ್ಮದಿ ನಂದಿದೆ.

ಇದನ್ನೂ ಓದಿ: ಸಚಿವ ಡಿ ಸುಧಾಕರ್ ಆರೋಗ್ಯದ ಬಗ್ಗೆ ಬಿಗ್ ಅಪ್ಡೇಟ್ ನೀಡಿದ ಡಾಕ್ಟರ್

ಆಸ್ಪತ್ರೆಗೆ ಭೇಟಿ ನೀಡಿದ್ದ ರಾಜ್ಯಪಾಲರು, ಸಿಎಂ

ಡಿ. ಸುಧಾಕರ್​​ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಯುತ್ತಲೇ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್​​ ಕೂಡ ​​ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಸಚಿವರ ಆರೋಗ್ಯ ವಿಚಾರಿಸಿದ್ದರು. ಹಾಗೆಯೇ ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​​, ಗೃಹ ಸಚಿವ ಡಾ.ಜಿ. ಪರಮೇಶ್ವರ್​​, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಸೇರಿದಂತೆ ಹಲವಾರು ಪ್ರಮುಖರು ಆಸ್ಪತ್ರೆಗೆ ತೆರಳಿ ಡಿ. ಸುಧಾಕರ್​​ ಅವರ ಆರೋಗ್ಯ ಸ್ಥಿತಿ ಮತ್ತು ಚಿಕಿತ್ಸೆಯ ಬಗ್ಗೆ ಮಾಹಿತಿ ಪಡೆದಿದ್ದರು. ಸಚಿವರ ಕುಟುಂಬಸ್ಥರಿಗೂ ಧೈರ್ಯ ತುಂಬಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 7:43 am, Sat, 2 May 26

Source link

ಮೊದಲ ಎಸೆತದಲ್ಲೇ ಭರ್ಜರಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್ – Kannada News | Yashasvi jaiswal creates new record in ipl 2026

ಹೌದು, ಐಪಿಎಲ್ ಇತಿಹಾಸದಲ್ಲಿ ಇನಿಂಗ್ಸ್​ನ ಮೊದಲ ಎಸೆತಗಳಲ್ಲಿ ಅತ್ಯಧಿಕ ಬಾರಿ ಸಿಕ್ಸ್ ಸಿಡಿಸಿದ ವಿಶೇಷ ದಾಖಲೆಯೊಂದು ಯಶಸ್ವಿ ಜೈಸ್ವಾಲ್ ಪಾಲಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಮಿಚೆಲ್ ಮಾರ್ಷ್​ ಎಸೆದ ಮೊದಲ ಓವರ್​ನ ಮೊದಲ ಎಸೆತದಲ್ಲೇ ಯಶಸ್ವಿ ಭರ್ಜರಿ ಸಿಕ್ಸರ್​ ಸಿಡಿಸಿದ್ದರು.

Source link

ಕರ್ನಾಟಕ ಹವಾಮಾನ ವರದಿ: ಬೆಂಗಳೂರಿನಲ್ಲಿ ಇಂದೂ ಇರಲಿದೆ ವರುಣಾರ್ಭಟ! ಕರಾವಳಿಯಲ್ಲಿ ಹೀಟ್​ ವೇವ್ ಜೊತೆ ಮಳೆಯ ಸಾಧ್ಯತೆ – Kannada News | Bengaluru temperature: thundershowers in Bengaluru, dry weather elsewhere

ಬೆಂಗಳೂರಿನಲ್ಲೂ ಇಂದೂ ಇರಲಿದೆ ವರುಣಾರ್ಭಟ! Image Credit source: google Gemini

ಬೆಂಗಳೂರು, ಮೇ 02: ರಾಜ್ಯದಲ್ಲಿ ಮೂರು ದಿನಗಳಿಂದ ಆಲಿಕಲ್ಲು ಮಳೆಯಾರ್ಭಟ ಕಾಣಸಿಗುತ್ತಿದೆ. ಇಂದೂ ಸಹ ಬೆಂಗಳೂರು ಸೇರಿ ಹಲವೆಡೆ ಗಾಳಿ ಮಳೆಯಿರಲಿದೆ (Karnataka Weather) ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಲಬುರಗಿ, ರಾಯಚೂರು ಸೇರಿದಂತೆ ಹಲವೆಡೆ ಇಂದು ಗರಿಷ್ಠ 42-42 ಡಿಗ್ರಿ ಸೆಲ್ಸಿಯಸ್​ನಷ್ಟು ತಾಪಮಾನವಿರಲಿದ್ದು, ಇನ್ನೂ 3 ದಿನ ಇದೇ ವಾತಾವರಣ ಇರಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.

ರಾಜಧಾನಿಯಲ್ಲಿ ಮಳೆಯ ಅಲರ್ಟ್​!

ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ. ಉತ್ತರ ಕನ್ನಡ ಜಿಲ್ಲೆಯಲ್ಲೂ ಮಳೆಯಾರ್ಭಟವಿದ್ದು, ಕೆಲವೆಡೆ ಹೀಟ್ ವೇವ್ ಅಲರ್ಟ್​ ಘೋಷಿಸಲಾಗಿದೆ. ಉತ್ತರ ಕರ್ನಾಟಕದ ಕಲ್ಬುರ್ಗಿ, ರಾಯಚೂರು, ಯಾದಗಿರಿ, ಧಾರವಾಡ, ಹಾವೇರಿ ಮತ್ತು ಗದಗ ಜಿಲ್ಲೆಗಳಲ್ಲಿ 30-40 ಕಿ.ಮೀ ವೇಗದ ಗಾಳಿಯೊಂದಿಗೆ ಸಾಧಾರಣ ಮಳೆಯಾಗುವ ಸಂಭವವಿದ್ದು, ಉಳಿದೆಡೆ ಶುಷ್ಕ ವಾತಾವರಣವಿರಲಿದೆ ಎಂದು ಇಲಾಖೆ ತಿಳಿಸಿದೆ.

ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ 30-40 ಕಿ. ಮೀ ವೇಗದ ಗಾಳಿಯೊಂದಿಗೆ ಗುಡುಗು ಸಹಿತ ಜೋರು ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.

ಮಳೆಯ ಅವಾಂತರ!

ಬುಧವಾರ ಸಂಜೆ ಬೆಂಗಳೂರಿನಲ್ಲಿ ಸುರಿದ ಮಳೆ ಹಲವರನ್ನು ಬಲಿ ಪಡೆದಿದೆ. ಜೆ.ಪಿ. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇದಕ್ಕೂ ಮುನ್ನ ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿತದಿಂದ 7 ಜನರು ಸಾವನ್ನಪ್ಪಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link