Category Archives: Blog

Your blog category

ಬತ್ತಿದ ಬೋರ್​​ವೆಲ್​​ಗಳು: ರಾಜ್ಯದ 652 ಹಳ್ಳಿಗಳಲ್ಲಿ ನೀರಿಗೆ ಬರ; ಯಾವೆಲ್ಲ ಜಿಲ್ಲೆಗಳು ಭಾದಿತ? – Kannada News | Karnataka villages grapple with dry borewells and severe water shortage

ಬೆಂಗಳೂರು, ಮೇ 02: ರಾಜ್ಯದಲ್ಲಿ ಬಿಸಿಲಿನ ಅಬ್ಬರದ ಹಿನ್ನೆಲೆ ನೀರಿಗೆ ಬರ ಆರಂಭವಾಗಿದೆ. ರಾಜ್ಯದಲ್ಲಿರುವ 1.23 ಲಕ್ಷಕ್ಕೂ ಹೆಚ್ಚು ಬೋರ್‌ವೆಲ್​​ಗಳ ಪೈಕಿ, ವಿವಿಧ ಜಿಲ್ಲೆಗಳಲ್ಲಿನ 1,010 ಬೋರ್‌ವೆಲ್‌ಗಳಲ್ಲಿ ನೀರಿನ ಮಟ್ಟ ಭಾರಿ ಕುಸಿದಿದೆ. ರಾಯಚೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಹೆಚ್ಚಿನ ಸಮಸ್ಯೆಯಾಗಿದೆ. ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಕಾರ, ಉತ್ತರ ಕನ್ನಡ, ತುಮಕೂರು ಮತ್ತು ವಿಜಯಪುರ ಜಿಲ್ಲೆಗಳಲ್ಲಿಯೂ ನೀರಿನ ಸಮಸ್ಯೆ ಉಲ್ಬಣವಾಗಿದೆ.

ರಾಯಚೂರು ಜಿಲ್ಲೆಯಲ್ಲಿ 198 ಗ್ರಾಮಗಳು, ಶಿವಮೊಗ್ಗದಲ್ಲಿ 196, ಉತ್ತರ ಕನ್ನಡದಲ್ಲಿ 184, ತುಮಕೂರಿನಲ್ಲಿ 152 ಮತ್ತು ವಿಜಯಪುರದಲ್ಲಿ 148 ಗ್ರಾಮಗಳು ನೀರಿನ ಕೊರತೆಯನ್ನು ಎದುರಿಸುತ್ತಿವೆ. ಕೊಪ್ಪಳ, ಹಾಸನ, ದಾವಣಗೆರೆ, ಮಂಡ್ಯ, ಬಳ್ಳಾರಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿಯೂ 100ಕ್ಕೂ ಹೆಚ್ಚು ಗ್ರಾಮಗಳು ತೊಂದರೆಗೆ ಸಿಲುಕಿವೆ. ಹೀಗಿದ್ದರೂ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳ ಸಂಖ್ಯೆ ಕಡಿಮೆ ಎನ್ನುವುದು ಸಮಾಧಾನಕರ ಸಂಗತಿ.

ಇದನ್ನೂ ಓದಿ: ಸಮುದ್ರ ಇದ್ರೂ ಮಂಗಳೂರಿನಲ್ಲಿ ನೀರಿಗೆ ಬರ; ವಾಹನಗಳನ್ನ ತೊಳೆಯದಂತೆ ಸೂಚನೆ

ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿಯೂ ಕೆಲವು ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಿದ್ದು, ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಮೈಸೂರು ಜಿಲ್ಲೆಯ 1,128 ಗ್ರಾಮಗಳಲ್ಲಿ 708 ಗ್ರಾಮಗಳು ಬೋರ್‌ವೆಲ್‌ಗಳ ಮೇಲೆ ಅವಲಂಬಿತವಾಗಿವೆ. ಜಲ ಜೀವನ್ ಮಿಷನ್ ಅಡಿಯಲ್ಲಿ ಎಲ್ಲಾ ಮನೆಗಳಿಗೆ ನಳ ನೀರು ಒದಗಿಸುವ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಬಹುಗ್ರಾಮ ನೀರಿನ ಯೋಜನೆಯೂ ಜಾರಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೈಸೂರು ಜಿಲ್ಲಾ ಪಂಚಾಯತ್ ಗ್ರಾಮೀಣ ಜಲಪೂರೈಕೆ ವಿಭಾಗದ ಕಾರ್ಯನಿರ್ವಹಣಾ ಇಂಜಿನಿಯರ್ ಜಿ. ರಾಮಸ್ವಾಮಿ ಅವರು, ಬೋರ್‌ವೆಲ್‌ಗಳ ಮೇಲೆ ಅವಲಂಬಿತವಾಗಿರುವ ಗ್ರಾಮಗಳಲ್ಲಿ ನೀರಿನ ಉತ್ಪಾದನೆ ಕಡಿಮೆಯಾದ ಕಾರಣ ಸಮಸ್ಯೆ ಉಂಟಾಗಿದೆ. ಜಲ ಜೀವನ್ ಮಿಷನ್ ಮತ್ತು ಬಹುಗ್ರಾಮ ನೀರಿನ ಯೋಜನೆಗಳ ಕಾಮಗಾರಿ ನಡೆಯುತ್ತಿದ್ದು, ಇನ್ನೂ ಕೆಲವು ಗ್ರಾಮಗಳಿಗೆ ನದಿ ನೀರು ತಲುಪಿಲ್ಲ ಎಂದು ಹೇಳಿರೋದಾಗಿ ಡೆಕ್ಕನ್​​ ಹೆರಾಲ್ಡ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 10:22 am, Sat, 2 May 26

Source link

Birth Date and Marriage: ನಿಮ್ಮ ಜನ್ಮ ದಿನಾಂಕದಲ್ಲೇ ಅಡಗಿದೆ ಮದುವೆಯ ರಹಸ್ಯ; ನಿಮಗಾಗುವುದು ಪ್ರೇಮ ವಿವಾಹವೋ ಅಥವಾ ಅರೇಂಜ್ ಮ್ಯಾರೇಜ್? – Kannada News | Birth Date and Marriage: Understanding Love vs Arranged Marriages Through Numerology

ನಿಮ್ಮ ಜನ್ಮ ದಿನಾಂಕವು ನಿಮ್ಮ ಜೀವನದ ಅನೇಕ ಅಂಶಗಳ ಮೇಲೆ ಪ್ರಭಾವ ಬೀರಬಹುದು. ವಿಶೇಷವಾಗಿ, ಮದುವೆಯಂತಹ ಮಹತ್ವದ ವಿಷಯದಲ್ಲಿ ನಿಮ್ಮ ಜನ್ಮ ಸಂಖ್ಯೆಯು ಪ್ರೇಮ ವಿವಾಹ ಅಥವಾ ಅರೇಂಜ್ ಮ್ಯಾರೇಜ್ ಆಯ್ಕೆಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಸಂಖ್ಯಾಶಾಸ್ತ್ರ ವಿವರವಾಗಿ ತಿಳಿಸುತ್ತದೆ. ಈ ವಿಶ್ಲೇಷಣೆಯು ಒಂದು ದಿನಾಂಕದಲ್ಲಿ ಜನಿಸಿದವರ ಸಂಖ್ಯೆಯ ಆಧಾರದ ಮೇಲೆ, ಅವರ ಅದೃಷ್ಟ ಮತ್ತು ದುರಾದೃಷ್ಟದ ಪ್ರಭಾವವನ್ನು ಅರಿಯಲು ಸಹಾಯ ಮಾಡುತ್ತದೆ. ಒಂದು ದಿನಾಂಕವು ಒಂದೇ ಸಂಖ್ಯೆಗೆ ಸೇರಿದ್ದರೂ (ಉದಾಹರಣೆಗೆ 1, 10, 19, 28 ಇವೆಲ್ಲವೂ ಸಂಖ್ಯೆ 1 ಕ್ಕೆ ಸೇರುತ್ತವೆ), ಪ್ರತಿಯೊಂದು ದಿನಾಂಕಕ್ಕೂ ತನ್ನದೇ ಆದ ವೈಶಿಷ್ಟ್ಯಗಳಿರುತ್ತವೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಸಂಖ್ಯೆ 1 (ರವಿ ಅಧಿಪತಿ – ದಿನಾಂಕಗಳು: 1, 10, 19, 28):

ಈ ಸಂಖ್ಯೆಯವರು ಗಾಂಭೀರ್ಯ ಸ್ವಭಾವದವರಾಗಿರುತ್ತಾರೆ ಮತ್ತು ರಾಜಯೋಗದ ಗುಣಗಳನ್ನು ಹೊಂದಿರುತ್ತಾರೆ. ಯಾವುದೇ ವ್ಯವಹಾರದಲ್ಲಿ ಗಂಭೀರವಾಗಿರುತ್ತಾರೆ. ಇವರಿಗೆ ಅರೇಂಜ್ ಮ್ಯಾರೇಜ್‌ಗಳು ಬಹಳಷ್ಟು ಶುಭಕರವಾಗಿರುತ್ತವೆ. ಪ್ರೇಮ ವ್ಯವಹಾರಗಳು ಇವರಿಗೆ ಪರಿಪೂರ್ಣವಾಗಿ ಶುಭಕರವಲ್ಲ. ಪ್ರೇಮ ವಿವಾಹಗಳು ಇವರಿಗೆ ಯಶಸ್ಸನ್ನು ತರುವುದಿಲ್ಲ.

ಸಂಖ್ಯೆ 2 (ಚಂದ್ರ ಅಧಿಪತಿ – ದಿನಾಂಕಗಳು: 2, 11, 20, 29):

ಚಂದ್ರ ಮನಸ್ಸಿನ ಅಧಿಪತಿ. ಈ ಸಂಖ್ಯೆಯವರಿಗೆ ಪ್ರೇಮ ವ್ಯವಹಾರಗಳಿಗೆ ಸ್ವಲ್ಪ ಮಾನ್ಯತೆ ಇದೆ ಮತ್ತು ಅವುಗಳನ್ನು ನಿಭಾಯಿಸುವ ಸಾಮರ್ಥ್ಯವಿದೆ. ಲವ್ ಮ್ಯಾರೇಜ್‌ಗಳು ಇವರಿಗೆ ಅನುಕೂಲಕರವಾಗಿರುವ ಸಾಧ್ಯತೆ ಇದೆ.

ಸಂಖ್ಯೆ 3 (ಗುರು ಅಧಿಪತಿ – ದಿನಾಂಕಗಳು: 3, 12, 21, 30):

ಗುರು ಜ್ಞಾನ ಮತ್ತು ಸಮೃದ್ಧಿಯ ಅಧಿಪತಿ. ಈ ಸಂಖ್ಯೆಯವರಿಗೆ ಪ್ರೇಮ ವ್ಯವಹಾರಗಳು ಸಂಪೂರ್ಣ ಯಶಸ್ಸನ್ನು ನೀಡುವುದಿಲ್ಲ. ಆದರೆ ಅರೇಂಜ್ ಮ್ಯಾರೇಜ್‌ಗಳು ಇವರ ಜೀವನದಲ್ಲಿ ಮಹತ್ತರವಾದ ಪರಿವರ್ತನೆಗಳನ್ನು ತರಬಲ್ಲವು. ಕಷ್ಟದಲ್ಲಿ ಮದುವೆಯಾದವರು ಕೋಟ್ಯಾದೀಶ್ವರರಾದ ಅನೇಕ ನಿದರ್ಶನಗಳು ಇವೆ ಎಂದು ಹೇಳಲಾಗುತ್ತದೆ.

ಸಂಖ್ಯೆ 4 (ರಾಹು ಅಧಿಪತಿ – ದಿನಾಂಕಗಳು: 4, 13, 22, 31):

ರಾಹು ಅಧಿಪತಿಯಾದ ಈ ಸಂಖ್ಯೆಯವರಿಗೆ ಪ್ರೀತಿ ಮತ್ತು ಪ್ರೇಮದ ವ್ಯಾಮೋಹ ಜಾಸ್ತಿ ಇರುತ್ತದೆ. ಪ್ರಥಮವಾಗಿ ಯಶಸ್ಸು ಕಂಡರೂ, ಕೊನೆಯಲ್ಲಿ ಯಶಸ್ಸು ಸಿಗದಿರುವ ಸಾಧ್ಯತೆ ಹೆಚ್ಚು. ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಗತ್ಯವಿರುತ್ತದೆ. ಅರೇಂಜ್ ಮ್ಯಾರೇಜ್‌ಗಳು ಇವರಿಗೆ ಹೆಚ್ಚು ಶುಭಕರ.

ಸಂಖ್ಯೆ 5 (ಬುಧ ಅಧಿಪತಿ – ದಿನಾಂಕಗಳು: 5, 14, 23):

ಬುಧ ಗ್ರಹದ ಅಧಿಪತ್ಯ ಹೊಂದಿರುವ ಈ ಸಂಖ್ಯೆಯವರು ಪ್ರೇಮ ವಿವಾಹ ಅಥವಾ ಅರೇಂಜ್ ಮ್ಯಾರೇಜ್ – ಎರಡನ್ನೂ ಸಮರ್ಥವಾಗಿ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಎರಡೂ ಆಯ್ಕೆಗಳು ಇವರಿಗೆ ಅನುಕೂಲಕರವಾಗಿರುತ್ತವೆ.

ಸಂಖ್ಯೆ 6 (ಶುಕ್ರ ಅಧಿಪತಿ – ದಿನಾಂಕಗಳು: 6, 15, 24):

ಶುಕ್ರ ಸೃಜನಶೀಲತೆ ಮತ್ತು ಪ್ರೀತಿಯ ಅಧಿಪತಿ. ಈ ಸಂಖ್ಯೆಯವರು ಮಲ್ಟಿ ಟ್ಯಾಲೆಂಟ್ ಹೊಂದಿರುತ್ತಾರೆ. ಪ್ರೇಮ ವ್ಯವಹಾರಗಳಲ್ಲಿ ಬದುಕಿರುವ ತನಕ ಪ್ರಯತ್ನಿಸುತ್ತಿದ್ದರೂ, ಅವು ವಿವಾಹಕ್ಕೆ ತಿರುಗುವುದು ಅಪರೂಪ. ಇವರಿಗೆ ಅರೇಂಜ್ ಮ್ಯಾರೇಜ್‌ಗಳು ಬಹಳಷ್ಟು ಉತ್ತಮ ಫಲಿತಾಂಶಗಳನ್ನು ನೀಡುತ್ತವೆ.

ಸಂಖ್ಯೆ 7 (ಕೇತು ಅಧಿಪತಿ – ದಿನಾಂಕಗಳು: 7, 16, 25):

ಕೇತು ಅಧಿಪತಿಯಾದ ಈ ಸಂಖ್ಯೆಯವರು ಸ್ಥಿತಿಗತಿ ಮತ್ತು ಜವಾಬ್ದಾರಿಗಳಿಗೆ ಹೆಚ್ಚು ಗಮನ ನೀಡುತ್ತಾರೆ. ಪ್ರೇಮ ವ್ಯವಹಾರಗಳಲ್ಲಿ ಪ್ರಪ್ರಥಮವಾಗಿ ಪ್ರಯತ್ನಿಸಿದರೂ, ನಂತರ ಅಷ್ಟಾಗಿ ಆಸಕ್ತಿ ಹೊಂದಿರುವುದಿಲ್ಲ. ಇವರಿಗೆ ಅರೇಂಜ್ ಮ್ಯಾರೇಜ್‌ಗಳು ಅತ್ಯಂತ ಯಶಸ್ವಿ ಆಗಿರುತ್ತವೆ. ಇವರು ಸ್ವಲ್ಪ ಕಠಿಣ ಸ್ವಭಾವದವರಾಗಿರುತ್ತಾರೆ ಮತ್ತು ಜೀವನದಲ್ಲಿ ಹೆಚ್ಚು ಜವಾಬ್ದಾರಿಗಳನ್ನು ಹೊಂದಿರುತ್ತಾರೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಸಂಖ್ಯೆ 8 (ಶನಿ ಅಧಿಪತಿ – ದಿನಾಂಕಗಳು: 8, 17, 26):

ಶನಿ ಅಧಿಪತಿಯಾದ ಈ ಸಂಖ್ಯೆಯವರು ಸಂಬಂಧಗಳಲ್ಲಿ ಷರತ್ತುಗಳನ್ನು ಹೊಂದಿರುತ್ತಾರೆ. ಪ್ರೇಮ ವ್ಯವಹಾರಗಳಲ್ಲಿ ಪ್ರಾರಂಭದಲ್ಲಿ ಅತಿಯಾದ ಪ್ರೀತಿ ತೋರಿಸಿ, ಮದುವೆಯ ನಂತರ ಆಸಕ್ತಿ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಇವರ ಜೀವನ ನಿರ್ವಹಣೆಯ ಶೈಲಿಯು ಬದಲಾಗಬಹುದು. ಪ್ರೇಮ ವಿವಾಹದ ಫಲಿತಾಂಶಗಳು ಅನಿಶ್ಚಿತವಾಗಿರುತ್ತವೆ.

ಸಂಖ್ಯೆ 9 (ಕುಜ ಅಧಿಪತಿ – ದಿನಾಂಕಗಳು: 9, 18, 27):

ಕುಜ ಗ್ರಹ ಅಧಿಪತಿಯಾದ ಈ ಸಂಖ್ಯೆಯವರು ಪ್ರೇಮ ವ್ಯವಹಾರಗಳಿಗೆ ಅಷ್ಟಾಗಿ ಗಮನ ಕೊಡುವುದಿಲ್ಲ. ಹಾಗಾಗಿ ಇವರಿಗೆ ಅರೇಂಜ್ ಮ್ಯಾರೇಜ್‌ಗಳೇ ಶುಭಕರ ಎಂದು ಹೇಳಲಾಗುತ್ತದೆ. ಒಂದು ವೇಳೆ ಪ್ರೇಮ ವಿವಾಹವಾದರೂ, ಅದನ್ನು ಗೌಪ್ಯವಾಗಿ ಇಟ್ಟುಕೊಂಡು ಸಮಾಜದಲ್ಲಿ ಅರೇಂಜ್ ಮ್ಯಾರೇಜ್ ಎಂದು ನಡೆಸಿಕೊಂಡು ಹೋಗುವ ಪ್ರಯತ್ನ ಮಾಡುತ್ತಾರೆ. ಇವರು ತಮ್ಮ ಲೆಕ್ಕಾಚಾರಗಳಲ್ಲಿ ಬಹಳ ಕಟ್ಟುನಿಟ್ಟಾಗಿರುತ್ತಾರೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ನಿಮ್ಮ ಜನ್ಮ ದಿನಾಂಕದ ಆಧಾರದ ಮೇಲೆ ಪ್ರೇಮ ವಿವಾಹ ಅಥವಾ ಅರೇಂಜ್ ಮ್ಯಾರೇಜ್‌ನ ಯಶಸ್ಸನ್ನು ನಿರ್ಧರಿಸಬಹುದು. ಈ ಎಲ್ಲ ಮಾಹಿತಿಯು ನಂಬಿಕೆಯ ಆಧಾರದ ಮೇಲೆ ನಿಂತಿದೆ. ತಮ್ಮ ಮದುವೆಯ ಕುರಿತು ಯೋಚಿಸುತ್ತಿರುವವರಿಗೆ ಈ ಸಂಖ್ಯಾಶಾಸ್ತ್ರದ ವಿಶ್ಲೇಷಣೆ ಸಹಾಯಕವಾಗಬಹುದು ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ಬರುವ ಮುನ್ನ ಫ್ಯಾನ್ ಹಿಡಿದುಕೊಂಡೇ ಬನ್ನಿ! ತಿಂಗಳಿಗೆ ಸಾವಿರ ಹೆರಿಗೆಯಾಗುವ ಆಸ್ಪತ್ರೆಯಲ್ಲಿ ಬಾಣಂತಿಯರಿಗಿಲ್ಲ ಎಸಿ ವ್ಯವಸ್ಥೆ – Kannada News | Hosapete Govt Hospital Crisis: No AC or Fans for Newborns and Mothers Amid Heatwave

ತಿಂಗಳಿಗೆ ಸಾವಿರ ಹೆರಿಗೆಯಾಗುವ ಆಸ್ಪತ್ರೆಯಲ್ಲಿ ಬಾಣಂತಿಯರಿಗಿಲ್ಲ ಎಸಿ ವ್ಯವಸ್ಥೆ

ವಿಜಯನಗರ, ಮೇ 02: ಜಿಲ್ಲೆಯಲ್ಲಿ ಬಿಸಿಲಿನ ತಾಪ (Weather) ಹೆಚ್ಚಾಗಿದ್ದು, ಜನರ ಅವಸ್ಥೆ ಹೇಳಲು ಅಸಾಧ್ಯವಾಗಿದೆ. ಇದರ ನಡುವೆ ಹೊಸಪೇಟೆ ನಗರದ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಗಂಭೀರ ಅವ್ಯವಸ್ಥೆ ಬೆಳಕಿಗೆ ಬಂದಿದೆ. ಹೆರಿಗೆ ವಾರ್ಡ್‌ನಲ್ಲಿ ಎಸಿ ಹಾಗೂ ಫ್ಯಾನ್‌ಗಳು ಕಾರ್ಯನಿರ್ವಹಿಸದೆ ಇರುವುದರಿಂದ ಬಾಣಂತಿಯರು ಮತ್ತು ನವಜಾತ ಶಿಶುಗಳು ಬೇಸಿಗೆಯ ಬಿಸಿಗೆ ತತ್ತರಿಸುತ್ತಿದ್ದಾರೆ.

ಫ್ಯಾನ್​, ಎಸಿಗಳು ಇಲ್ಲಿ ಶೋ ಕೇಸ್ ವಸ್ತುಗಳಷ್ಟೆ!

ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಅಳವಡಿಸಿದ್ದ ಎಸಿಗಳು ಈಗ ಸಂಪೂರ್ಣ ಹಾಳಾಗಿದ್ದು, ರಿಪೇರಿ ಮಾಡುವವರೆ ಇಲ್ಲವೆಂದು ಆಸ್ಪತ್ರೆಗೆ ಬಂದವರು ಬೇಸರ ವ್ಯಕ್ತಪಡಿಸಿದ್ದಾರೆ. ಕೆಲ ಫ್ಯಾನ್‌ಗಳು ನಿಧಾನವಾಗಿ ತಿರುಗುತ್ತಿದ್ದು, ಇನ್ನೂ ಹಲವಾರು ಫ್ಯಾನ್‌ಗಳು ನಿಂತಲ್ಲೇ ನಿಂತಿವೆ. ಇದರ ಪರಿಣಾಮವಾಗಿ ಹೆರಿಗೆಗೆ ಬರುವವರು ಮನೆಯಿಂದಲೇ ಫ್ಯಾನ್ ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ವೇಳೆ ಮನೆಯಿಂದ ಫ್ಯಾನ್ ತರದಿದ್ದರೆ 3 ಸಾವಿರ ರೂಪಾಯಿ ವೆಚ್ಚದಲ್ಲಿ ಹೊಸ ಫ್ಯಾನ್ ಖರೀದಿಸಬೇಕಾಗುತ್ತದೆ ಎಂದು ಜನ ಹೇಳುತ್ತಿದ್ದಾರೆ.

ಇದನ್ನೂ ಓದಿ ತುಮಕೂರಿನಲ್ಲಿ ಹಕ್ಕಿ ಜ್ವರದ ಭೀತಿ: ನವಿಲುಗಳ ಸಾವಿನ ಬೆನ್ನಲ್ಲೇ ಈಗ 30 ಕೋಳಿಗಳ ಸಾವು! ಜಿಲ್ಲೆಯಲ್ಲಿ ಹೈ ಅಲರ್ಟ್​

ತಿಂಗಳಿಗೆ 1000 ರಿಂದ 1500 ಹೆರಿಗೆಗಳು ನಡೆಯುವ ಈ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಕಂಡುಬಂದಿದೆ. ಹಿಂದಿನ ಡಿಸಿ ಎಂಎಸ್ ದಿವಾಕರ್ ಅವಧಿಯಲ್ಲಿ ಅಳವಡಿಸಿದ್ದ ಎಸಿಗಳು ನಿರ್ಲಕ್ಷ್ಯದಿಂದ ಬಳಕೆಗೆ ಅಸಾಧ್ಯವಾಗಿವೆ. ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

GT vs RCB ಪಂದ್ಯದಲ್ಲಿ ಕೃನಾಲ್ ಪಾಂಡ್ಯ ಬೌಲಿಂಗ್ ಮಾಡದಿರಲು ಇದುವೇ ಕಾರಣ! – Kannada News | Why Krunal Pandya Did Not Bowl in GT vs RCB Match

ಇದಾಗ್ಯೂ ಆರ್​ಸಿಬಿ ನಾಯಕ ಸ್ಪಿನ್ನರ್​ ಸುಯಶ್ ಶರ್ಮಾ ಅವರಿಗೆ ಚೆಂಡು ನೀಡಿದ್ದರು. ಇದಕ್ಕೆ ಮುಖ್ಯ ಕಾರಣ ಸುಯಶ್ ಮಿಸ್ಟ್ರಿ ಸ್ಪಿನ್ನರ್ ಆಗಿರುವುದು. ಅದೇ ಕೃನಾಲ್ ಪಾಂಡ್ಯ ರನ್​ ಗತಿಯನ್ನು ನಿಯಂತ್ರಿಸಬಲ್ಲ ಬೌಲರ್​. ಈ ಪಂದ್ಯದಲ್ಲಿ ರನ್ ಗತಿಯನ್ನು ನಿಯಂತ್ರಿಸುವುದಕ್ಕಿಂತ ಹೆಚ್ಚಾಗಿ ಆರ್​ಸಿಬಿ ತಂಡಕ್ಕೆ ವಿಕೆಟ್​ಗಳ ಅಗತ್ಯವಿತ್ತು. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಜೋಶ್ ಹೇಝಲ್​ವುಡ್​, ಭುವನೇಶ್ವರ್ ಕುಮಾರ್, ರೊಮಾರಿಯೊ ಶೆಫರ್ಡ್ ಹಾಗೂ ಸುಯಶ್ ಶರ್ಮಾ ಅವರನ್ನು ಮಾತ್ರ ಬಳಸಿಕೊಂಡಿದ್ದರು. ಇದಾಗ್ಯೂ ಈ ಪಂದ್ಯದಲ್ಲಿ ಆರ್​ಸಿಬಿ ತಂಡ 4 ವಿಕೆಟ್​ಗಳಿಂದ ಸೋಲನುಭವಿಸಿತು.

Source link

ಪಶ್ಚಿಮ ಬಂಗಾಳದ 15 ಬೂತ್​ಗಳಲ್ಲಿ ಬಿಗಿ ಭದ್ರತೆಯಲ್ಲಿ ಮರು ಮತದಾನ – Kannada News | Repolling Underway at 15 West Bengal Booths Amidst Tight Security

ಕೋಲ್ಕತ್ತಾ, ಮೇ 02: ಪಶ್ಚಿಮ ಬಂಗಾಳದ 15 ಬೂತ್​ಗಳಲ್ಲಿ ಬೆಳಗ್ಗೆ ಏಳು ಗಂಟೆಯಿಂದ ಮರು ಮತದಾನ ಪ್ರಕ್ರಿಯೆ ಆರಂಭಗೊಂಡಿದೆ. ಈ ಮತಗಟ್ಟೆಗಳಲ್ಲಿ ಬಿಗಿ ಭದ್ರತಾ ವ್ಯವಸ್ಥೆಗಳನ್ನು ಕಲ್ಪಿಸಲಾಗಿದ್ದು, ಸಾರ್ವಜನಿಕರು ಯಾವುದೇ ಆತಂಕವಿಲ್ಲದೆ ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ. ವಿಶೇಷವಾಗಿ ದಕ್ಷಿಣ 24 ಪರಗಣ ಜಿಲ್ಲೆಯ 15 ಸ್ಥಳಗಳಲ್ಲಿ ಮರು ಮತದಾನ ನಡೆಯುತ್ತಿದ್ದು, ಸರತಿ ಸಾಲಿನಲ್ಲಿ ನಿಂತು ಜನರು ಉತ್ಸಾಹದಿಂದ ಮತ ಚಲಾಯಿಸುತ್ತಿರುವುದು ಕಂಡುಬಂದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

CSK ವಿರುದ್ಧ ಮುಂಬೈ ಇಂಡಿಯನ್ಸ್ ಗೆಲ್ಲಲೇಬೇಕು, ಇಲ್ಲದಿದ್ದರೆ..? – Kannada News | Why Mumbai Indians Must Win Against CSK

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 44ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಮುಂಬೈ ಇಂಡಿಯನ್ಸ್ ಪಾಲಿಗೆ ನಿರ್ಣಾಯಕ. ಏಕೆಂದರೆ ಈ ಮ್ಯಾಚ್​ನಲ್ಲಿ ಗೆದ್ದರೆ ಮಾತ್ರ ಮುಂಬೈ ಇಂಡಿಯನ್ಸ್​ ನೇರವಾಗಿ ಪ್ಲೇಆಫ್ ರೇಸ್​ನಲ್ಲಿ ಉಳಿಯಬಹುದು. ಹೀಗಾಗಿ ಈ ಮ್ಯಾಚ್​ನಲ್ಲಿ ಮುಂಬೈ ಇಂಡಿಯನ್ಸ್ ಗೆಲ್ಲಲೇಬೇಕು.

ಮುಂಬೈ ಇಂಡಿಯನ್ಸ್ ಯಾಕೆ ಗೆಲ್ಲಬೇಕು?

  • ಪ್ಲೇಆಫ್ ಆಸೆ ಜೀವಂತವಾಗಿಡಲು: ಮುಂಬೈ ಇಂಡಿಯನ್ಸ್ ಸದ್ಯ ಪಾಯಿಂಟ್ಸ್ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಆಡಿದ 8 ಪಂದ್ಯಗಳಲ್ಲಿ ಕೇವಲ 2 ಮ್ಯಾಚ್​ಗಳಲ್ಲಿ ಮಾತ್ರ ಜಯ ಸಾಧಿಸಿರುವ ಮುಂಬೈಗೆ, ಇನ್ನುಳಿದ ಎಲ್ಲಾ 6 ಪಂದ್ಯಗಳನ್ನು ಗೆಲ್ಲುವುದು ಅನಿವಾರ್ಯವಾಗಿದೆ. ಒಂದೇ ಒಂದು ಸೋಲು ಕೂಡ ಅವರ ಪ್ಲೇಆಫ್ ಹಾದಿಯನ್ನು ಕಠಿಣವಾಗಿಸಬಹುದು. ಮುಚ್ಚಬಹುದು.
  • ನೆಟ್ ರನ್ ರೇಟ್ (NRR) ಸುಧಾರಣೆ: ಸದ್ಯ ಮುಂಬೈ ತಂಡದ ನೆಟ್ ರನ್ ರೇಟ್ -0.784 ರಷ್ಟಿದೆ. ಕೇವಲ ಗೆಲುವು ಮಾತ್ರವಲ್ಲ, ದೊಡ್ಡ ಅಂತರದ ಗೆಲುವು ಅವರಿಗೆ ಅಂಕಪಟ್ಟಿಯ ಟೈ-ಬ್ರೇಕರ್ ಸಂದರ್ಭಗಳಲ್ಲಿ ನೆರವಾಗಲಿದೆ.
  • ಹಳೆಯ ಸೋಲಿಗೆ ಸೇಡು: ಇದೇ ಸೀಸನ್‌ನ ಹಿಂದಿನ ಮುಖಾಮುಖಿಯಲ್ಲಿ CSK ತಂಡವು ಮುಂಬೈ ತಂಡವನ್ನು 103 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿತ್ತು. ಅದು ಮುಂಬೈ ಪಾಲಿಗೆ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ಸೋಲಾಗಿತ್ತು. ಇಂದಿನ ಗೆಲುವು ಆ ಕಹಿ ನೆನಪನ್ನು ಅಳಿಸಿ ತಂಡದಲ್ಲಿ ಆತ್ಮವಿಶ್ವಾಸ ತುಂಬಲು ಅಗತ್ಯವಾಗಿದೆ.
  • ಎಲ್ ಕ್ಲಾಸಿಕೋ ಗೌರವ: ಐಪಿಎಲ್‌ನ ಎರಡು ಬಲಿಷ್ಠ ತಂಡಗಳ ನಡುವಿನ ಈ ಪೈಪೋಟಿಯಲ್ಲಿ ಸೋಲುವುದರಿಂದ ತಂಡದ ನೈತಿಕ ಸ್ಥೈರ್ಯ ಕುಸಿಯಬಹುದು. ಪ್ಲೇಆಫ್ ರೇಸ್‌ನಲ್ಲಿ ಮುನ್ನಡೆಯಲು ಮುಂಬೈಗೆ ಈ ‘ಹೈ-ವೋಲ್ಟೇಜ್’ ಪಂದ್ಯದ ಗೆಲುವು ಸಂಜೀವಿನಿಯಾಗಲಿದೆ.

ಅಂದರೆ ನೇರವಾಗಿ ಪ್ಲೇಆಫ್​ಗೇರಲು ಮುಂಬೈ ಇಂಡಿಯನ್ಸ್​ ಇನ್ನುಳಿದ 6 ಮ್ಯಾಚ್​ಗಳಲ್ಲೂ ಜಯ ಸಾಧಿಸಲಬೇಕು. ಹೀಗೆ ಗೆಲುವು ದಾಖಲಿಸಿದರೆ ಒಟ್ಟು 16 ಅಂಕಗಳೊಂದಿಗೆ ಪ್ಲೇಆಫ್ ಆಡುವುದನ್ನು ಖಚಿತಪಡಿಸಿಕೊಳ್ಳಬಹುದು. ಒಂದು ವೇಳೆ ಇಂದಿನ ಪಂದ್ಯದಲ್ಲಿ ಸಿಎಸ್​ಕೆ  ವಿರುದ್ಧ ಸೋತರೆ?

  • ಪ್ಲೇಆಫ್ ಹಾದಿ ಕಠಿಣ: ಮುಂಬೈ ಇಂಡಿಯನ್ಸ್ ತಂಡವು ಸಿಎಸ್​ಕೆ ವಿರುದ್ಧ ಸೋತರೆ ಪ್ಲೇಆಫ್ ಹಾದಿ ಮತ್ತಷ್ಟು ಕಠಿಣವಾಗಲಿದೆ. ಅಂದರೆ ಉಳಿದ ಐದು ಮ್ಯಾಚ್​ಗಳನ್ನು ಗೆದ್ದರೂ 14 ಅಂಕಗಳನ್ನು ಮಾತ್ರ ಪಡೆಯಲಿದೆ.
  • ನೆಟ್​ರನ್ ರೇಟ್ ಕುಸಿತ: ಈ ಸೋಲಿನೊಂದಿಗೆ ಮುಂಬೈ ಇಂಡಿಯನ್ಸ್ ತಂಡದ ನೆಟ್ ರನ್​ ರೇಟ್ ಕೂಡ ಮತ್ತಷ್ಟು ಇಳಿಕೆಯಾಗಲಿದೆ. ಇದರಿಂದ 14 ಅಂಕಗಳೊಂದಿಗೆ ಪ್ಲೇಆಫ್​ಗೇರುವುದು ಕಷ್ಟಸಾಧ್ಯ.
  • ಇತರೆ ತಂಡಗಳ ಫಲಿತಾಂಶ: ಪ್ರಸ್ತುತ ಅಂಕ ಪಟ್ಟಿಯಲ್ಲಿ ಪಂಜಾಬ್ ಕಿಂಗ್ಸ್ 13 ಅಂಕಗಳನ್ನು ಹೊಂದಿದ್ದರೆ, ಆರ್​ಸಿಬಿ, ಆರ್​ಆರ್​, ಎಸ್​ಆರ್​ಹೆಚ್ 12 ಅಂಕಗಳನ್ನು ಹೊಂದಿದೆ. ಈ ತಂಡಗಳು ಮುಂದಿನ ಪಂದ್ಯದಲ್ಲಿ 2 ಅಥವಾ ಒಂದು ಮ್ಯಾಚ್ ಗೆದ್ದರೆ ಮುಂಬೈ ಇಂಡಿಯನ್ಸ್ ತಂಡ ಹೊರಬೀಳುವುದು ಬಹುತೇಕ ಖಚಿತವಾಗಲಿದೆ.

ಇದನ್ನೂ ಓದಿ: KL Rahul: ಒಂದು ಗೆಲುವು ಎಲ್ಲವನ್ನೂ ಮರೆಸುತ್ತದೆ..!

ಈ ಎಲ್ಲಾ ಕಾರಣಗಳಿಂದಾಗಿ ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಪಾಲಿಗೆ ಗೆಲುವು ಅನಿವಾರ್ಯ. ಒಂದು ವೇಳೆ ಸೋತರೆ ಉಳಿದ 5 ಪಂದ್ಯಗಳಲ್ಲಿ ಗೆದ್ದರೂ ಇತರೆ ತಂಡಗಳ ಫಲಿತಾಂಶದ ಆಧಾರದ ಮೇಲೆ ತನ್ನ ಪ್ಲೇಆಫ್ ಹಾದಿ ನಿರ್ಧಾರವಾಗಲಿದೆ. ಹೀಗಾಗಿ ಇಂದಿನ ಪಂದ್ಯವು ಮುಂಬೈ ಇಂಡಿಯನ್ಸ್ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ ಎನ್ನಬಹುದು.

Source link

ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಗೂ ಮೊದಲೇ ಮತಗಳಿರುವ ಬಾಕ್ಸ್​ ಸೀಲ್ ಓಪನ್ ಆರೋಪ – Kannada News | Sringeri Constituency: Recount of 1,822 Postal Votes Following Court Order

ಚಿಕ್ಕಮಗಳೂರು, ಮೇ 02: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಇಂದು (ಮೇ 2) ಚಿಕ್ಕಮಗಳೂರಿನ ಐಡಿಎಸ್‌ಜಿ ಕಾಲೇಜಿನಲ್ಲಿ ನಡೆಯುತ್ತಿದೆ. ಕ್ಷೇತ್ರದಲ್ಲಿ ಚಲಾವಣೆಯಾಗಿದ್ದ ಒಟ್ಟು 1,822 ಅಂಚೆ ಮತಗಳನ್ನು ಮರು ಎಣಿಕೆಗೆ ಒಳಪಡಿಸಲಾಗುತ್ತಿದೆ. ಈ ಮರು ಎಣಿಕೆಯು ಕ್ಷೇತ್ರದ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಈ ಹಿಂದೆ ನಡೆದ ಚುನಾವಣೆಯಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜೇಗೌಡ ಅವರು ಬಿಜೆಪಿಯ ಜೀವರಾಜ್ ಅವರ ವಿರುದ್ಧ ಜಯಗಳಿಸಿದ್ದರು. ಅವರ ಗೆಲುವಿನ ಅಂತರ ಕೇವಲ 201 ಮತಗಳಾಗಿತ್ತು. ಅತಿ ಕಡಿಮೆ ಮತಗಳ ಅಂತರದಿಂದ ಜಯಗಳಿಸಿದ್ದರಿಂದ, ಬಿಜೆಪಿಯ ಜೀವರಾಜ್ ಅವರು ಅಂಚೆ ಮತಗಳ ಮರು ಎಣಿಕೆಗೆ ಕೋರ್ಟ್ ಮೊರೆ ಹೋಗಿದ್ದರು. ನ್ಯಾಯಾಲಯದ ಆದೇಶದ ಮೇರೆಗೆ ಈ ಮರು ಎಣಿಕೆ ಪ್ರಕ್ರಿಯೆ ನಡೆಯುತ್ತಿದೆ. ಆದರೆ ಅಂಚೆ ಮತಗಳ ಮರು ಎಣಿಕೆಗೂ ಮೊದಲೇ ಮತಗಳಿರುವ ಬಾಕ್ಸ್​ ಸೀಲ್ ಓಪನ್ ಮಾಡಲಾಗಿರುವ ಆರೋಪ ಕೇಳಿಬಂದಿದೆ. ಹೀಗಾಗಿ ಮರು ಮತ ಎಣಿಕೆಗೆ ನನ್ನ ವಿರೋಧವಿದೆ ಎಂದು ಹಾಲಿ ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದ್ದಾರೆ. ಟ್ಯಾಂಪರ್ ಮಾಡಲಾಗಿದೆ ಎಂಬ ಅನುಮಾನವಿದ್ದು, ಮತಗಳಿರುವ ಬಾಕ್ಸ್​ ಓಪನ್ ಆಗಿರುವುದನ್ನು ಹೈಕೋರ್ಟ್ ಗಮನಕ್ಕೆ ತಂದು ಎಣಿಕೆ ಮಾಡಲಿ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಛಾಯಾ ಸಿಂಗ್ ಹುಡುಗನಾಗಿ, ರಾಜೇಶ್ ಹುಡುಗಿಯಾಗಿ ಬದಲಾದ್ರೆ ಹೇಗಿರ್ತಾರೆ?

‘ಅಮೃತಧಾರೆ’ ಧಾರಾವಾಹಿ ಮೂಲಕ ಛಾಯಾ ಸಿಂಗ್ ಹಾಗೂ ರಾಜೇಶ್ ನಟನರಂಗ ಜೋಡಿ  ಗಮನ ಸೆಳೆದಿದೆ. . ಇಬ್ಬರೂ ಧಾರಾವಾಹಿಯಲ್ಲಿ ಉತ್ತಮವಾಗಿ ಪಾತ್ರ ನಿರ್ವಿಸಿಕೊಂಡು ಹೋಗುತ್ತಾ ಇದ್ದಾರೆ. ಅವರು ಜೀ ಕನ್ನಡದಲ್ಲಿ ಪ್ರಸಾರ ಆಗುವ ಜೋಡಿ ನಂಬರ್ 1’ ಶೋಗೆ ಜಡ್ಜ್ ಆಗಿದ್ದಾರೆ. ಈ ಶೋನಲ್ಲಿ ಛಾಯಾ ಸಿಂಗ್ ಹುಡುಗನಾಗಿದ್ದರೆ ಹಾಗೂ ರಾಜೇಶ್ ನಟರಂಗ ಅವರು ಹುಡುಗಿ ಆಗಿದ್ದರೆ ಹೇಗೆ ಕಾಣಿಸುತ್ತಿದ್ದರು ಎಂಬುದನ್ನು ತೋರಿಸಲಾಗಿದೆ. ಈ ವಿಡಿಯೋ ಗಮನ ಸೆಳೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

KL Rahul: ಒಂದು ಗೆಲುವು ಎಲ್ಲವನ್ನೂ ಮರೆಸುತ್ತದೆ..! – Kannada News | Kl rahul post match interview after RR vs DC Match

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 43ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಜಯ ಸಾಧಿಸಿದೆ. ಜೈಪುರದ ಸವಾಯಿ ಮಾನ್​ಸಿಂಗ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡವು 20 ಓವರ್​ಗಳಲ್ಲಿ 225 ರನ್​ ಕಲೆಹಾಕಿದ್ದರು. ಈ ಕಠಿಣ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಪರ ಆರಂಭಿಕ ದಾಂಡಿಗ ಕೆಎಲ್ ರಾಹುಲ್ 40 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 6 ಫೋರ್​ಗಳೊಂದಿಗೆ 75 ರನ್ ಬಾರಿಸಿದ್ದರು. ಈ ಭರ್ಜರಿ ಬ್ಯಾಟಿಂಗ್ ನೆರವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ 19.1 ಓವರ್​ಗಳಲ್ಲಿ 226 ರನ್​ ಬಾರಿಸಿ 7 ವಿಕೆಟ್​ಗಳ ಜಯ ಸಾಧಿಸಿತು.

ಇತ್ತ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಕೆಎಲ್ ರಾಃಉಲ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಈ ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ರಾಹುಲ್,  ಬಹಳ ವರ್ಷಗಳ ಕಾಲ ಕ್ರಿಕೆಟ್ ಆಡಿದ ಮೇಲೆ ಅಂಕಿ-ಅಂಶಗಳು ಮುಖ್ಯವಾಗುತ್ತವೆ. ವೈಯಕ್ತಿಕವಾಗಿ ದೊಡ್ಡ ಮೊತ್ತ ದಾಖಲಿಸುವುದು ಮತ್ತು ದಾಖಲೆ ಮುರಿಯುವುದು ಸಂತೋಷ ನೀಡುತ್ತದೆ ನಿಜ. ಆದರೆ, ದಿನದ ಅಂತ್ಯಕ್ಕೆ ತಂಡಕ್ಕೆ ಗೆಲುವು ಸಿಗದಿದ್ದರೆ ಆ ರನ್‌ಗಳಿಗೆ ಯಾವುದೇ ಅರ್ಥವಿರುವುದಿಲ್ಲ. ಇದೀಗ ಗೆಲುವು ಸಿಕ್ಕಿದೆ. ಈ ಗೆಲುವು ಎಲ್ಲವನ್ನೂ ಮರೆಸುತ್ತದೆ ಎಂದು ಕೆಎಲ್ ರಾಹುಲ್ ಹೇಳಿದ್ದಾರೆ.

ಇದೇ ವೇಳೆ ಸ್ಟ್ರೈಕ್ ರೇಟ್  ಬಗ್ಗೆ ಮಾತನಾಡಿದ ರಾಹುಲ್, “ನನ್ನ ಸ್ಟ್ರೈಕ್ ರೇಟ್ ಬಗ್ಗೆ ಕಳೆದ ಕೆಲವು ವರ್ಷಗಳಿಂದ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿದ್ದವು. ಈ ಸೀಸನ್​ನಲ್ಲಿ ನಾನು ಅದರ ಮೇಲೆ ಹೆಚ್ಚು ಗಮನ ಹರಿಸಿದ್ದೇನೆ. ಆಧುನಿಕ ಟಿ20 ಕ್ರಿಕೆಟ್ ಏನು ನಿರೀಕ್ಷಿಸುತ್ತದೆಯೋ ಮತ್ತು ತಂಡಕ್ಕೆ ಏನು ಅಗತ್ಯವಿದೆಯೋ ಅದನ್ನು ಮಾಡುತ್ತಿರುವುದು ನನಗೆ ತೃಪ್ತಿ ನೀಡಿದೆ ಎಂದಿದ್ದಾರೆ.

ಪವರ್‌ಪ್ಲೇನಲ್ಲಿ ಪಾತುಮ್ ನಿಸ್ಸಂಕಾ ನೀಡಿದ ಸ್ಫೋಟಕ ಆರಂಭವನ್ನು ಕೊಂಡಾಡಿದ ರಾಹುಲ್, ನಾನು ಪವರ್‌ಪ್ಲೇನಲ್ಲಿ ಹೆಚ್ಚು ಎಸೆತಗಳನ್ನು ಎದುರಿಸಬೇಕೆಂದು ಅಂದುಕೊಂಡಿದ್ದೆ. ಆದರೆ ಪಾತುಮ್ ಬ್ಯಾಟ್ ಮಾಡುತ್ತಿದ್ದ ರೀತಿ ಅದ್ಭುತವಾಗಿತ್ತು. ನಾನು ಕೇವಲ ನಾನ್-ಸ್ಟ್ರೈಕರ್ ತುದಿಯಲ್ಲಿ ನಿಂತು ಅವರು ಚೆಂಡನ್ನು ಸಿಕ್ಸರ್‌ಗೆ ಅಟ್ಟುವುದನ್ನು ನೋಡುವುದೇ ಆನಂದವಾಗಿತ್ತು. 220 ರನ್‌ಗಳ ಗುರಿ ಬೆನ್ನಟ್ಟುವಾಗ ಅಂತಹ ಆರಂಭ ನಮಗೆ ಅನಿವಾರ್ಯವಾಗಿತ್ತು ಎಂದು ತಮ್ಮ ಆರಂಭಿಕ ಜೊತೆಗಾರನ ಬ್ಯಾಟಿಂಗ್ ಶ್ಲಾಘಿಸಿದರು.

ಇದನ್ನೂ ಓದಿ: IPL 2026: ಅದು ಕ್ಲಿಯರ್ ಔಟ್… ಅಶ್ವಿನ್ ನೀಡಿದ ಸ್ಪಷ್ಟನೆ ಹೀಗಿದೆ

ಇನ್ನು ಕಳೆದ ಎರಡು ಪಂದ್ಯಗಳಲ್ಲಿ ಸೋತಿದ್ದರೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಡ್ರೆಸ್ಸಿಂಗ್ ರೂಮ್ ವಾತಾವರಣ ಸಮತೋಲನದಿಂದ ಕೂಡಿತ್ತು. ತಂಡವು ದೊಡ್ಡ ತಪ್ಪುಗಳನ್ನೇನೂ ಮಾಡುತ್ತಿರಲಿಲ್ಲ, ಬದಲಾಗಿ ಪಂದ್ಯದ ನಿರ್ಣಾಯಕ ಕ್ಷಣಗಳನ್ನು ಕೈವಶ ಮಾಡಿಕೊಳ್ಳುವಲ್ಲಿ ವಿಫಲವಾಗುತ್ತಿತ್ತು. ಈಗ ಸಿಕ್ಕಿರುವ ಲಯವನ್ನು ಮುಂದಿನ ಪಂದ್ಯಗಳಲ್ಲೂ ಮುಂದುವರಿಸುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

Source link

ಏಕಾಏಕಿ ಎಂಟ್ರಿ ಕೊಟ್ಟ ‘ಪೆದ್ದಿ’ ಸಿನಿಮಾ; ಅಭಿಮಾನಿಗಳಿಗೆ ಶುರುವಾಗಿದೆ ಆತಂಕ – Kannada News | Peddi Release: Ram Charan Janhvi Kapoor Film Hits Screens June 4 Amid Buzz and Hurdles

ರಾಮ್ ಚರಣ್ ಮತ್ತು ಜಾನ್ವಿ ಕಪೂರ್ ಅಭಿನಯದ, ಬುಚಿಬಾಬು ಸನಾ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ‘ಪೆದ್ದಿ’ ಜೂನ್ 4ರಂದು ಬಿಡುಗಡೆಯಾಗಲಿದೆ. ಈ ಸಮಯದಲ್ಲಿ ‘ಟಾಕ್ಸಿಕ್’ ಚಿತ್ರ ತೆರೆಗೆ ಬರಬೇಕಿತ್ತು. ಅದು ಮುಂದಕ್ಕೆ ಹೋಗಿರುವುದುರಿಂದ ‘ಪೆದ್ದಿ’ ಸಿನಿಮಾ ತೆರೆಗೆ ಬರುತ್ತಿದೆ. ಈ ಘೋಷಣೆಯ ಬೆನ್ನಲ್ಲೇ ಸಿನಿಮಾ ವಲಯದಲ್ಲಿ ಹಲವು ಚರ್ಚೆಗಳು ಶುರುವಾಗಿವೆ.

ಮೊದಲು ಏಪ್ರಿಲ್ 30ಕ್ಕೆ ನಿಗದಿಯಾಗಿದ್ದ ಈ ಚಿತ್ರ, ಈಗ ಜೂನ್ 4ಕ್ಕೆ ಮುಂದೂಡಲ್ಪಟ್ಟಿದೆ. ಈ ಕುರಿತು ಮಾತನಾಡಿದ ನಿರ್ದೇಶಕ ಬುಚಿಬಾಬು ಸನಾ, ‘ಏಪ್ರಿಲ್ 30ರಂದು ಬರಲಾಗದಿದ್ದಕ್ಕೆ ಕ್ಷಮಿಸಿ. ಜೂನ್ 4ರಂದು ಬರುತ್ತಿದ್ದೇವೆ, ಹರಸಿ” ಎಂದು ವಿನಂತಿಸಿದ್ದಾರೆ. ನಿರ್ಮಾಪಕ ವೆಂಕಟ ಸತೀಶ್ ಕಿಲಾರು ಅವರು ಜೂನ್ 3ರಂದೇ ದೇಶಾದ್ಯಂತ ಪ್ರೀಮಿಯರ್ ಶೋಗಳನ್ನು ನಡೆಸುವುದಾಗಿ ತಿಳಿಸಿದ್ದಾರೆ.

ಸಾಮಾನ್ಯವಾಗಿ ಪ್ರೀಮಿಯರ್ ಶೋಗಳ ದರ ಹೆಚ್ಚಿಸಲು ಸರ್ಕಾರಕ್ಕೆ (ಆಂಧ್ರ-ತೆಲಂಗಾಣ ಭಾಗದಲ್ಲಿ ಮಾತ್ರ) ಮೊದಲೇ ಅರ್ಜಿ ಸಲ್ಲಿಸಬೇಕು. ಜೂನ್ 3 ಹತ್ತಿರವಿರುವುದರಿಂದ, ಕಡಿಮೆ ಸಮಯದಲ್ಲಿ ಅರ್ಜಿ ಸಲ್ಲಿಸಿ ಅನುಮತಿ ಪಡೆಯುವುದು ಸಾಧ್ಯವೇ? ಅಥವಾ ಸಾಮಾನ್ಯ ದರದಲ್ಲೇ ಪ್ರೀಮಿಯರ್ ಲಭ್ಯವಿರುತ್ತದೆಯೇ? ಎಂಬುದು ಸದ್ಯದ ಕುತೂಹಲ.

ತೆಲಂಗಾಣದ ನಿಜಾಮ್ ಭಾಗದಲ್ಲಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ಮಾಲೀಕರು ಮತ್ತು ವಿತರಕರ ನಡುವೆ ‘ಕಲೆಕ್ಷನ್ ಶೇರಿಂಗ್’ ವಿಚಾರವಾಗಿ ವಿವಾದ ನಡೆಯುತ್ತಿದೆ. ಇದು ಸಿನಿಮಾ ಮೇಲೆ ನೇರವಾಗಿ ಪ್ರಭಾವ ಬೀರಹುದು. ಇತ್ತೀಚೆಗೆ ಪ್ರಮಾಣ ಪತ್ರ ನೀಡಲು ಸೆನ್ಸಾರ್ ಮಂಡಳಿಯವರು ಸಾಕಷ್ಟು ತೊಂದರೆ ಮಾಡುತ್ತಿದ್ದಾರೆ. ಈ ಚಿತ್ರಕ್ಕೂ ಹಾಗೆಯೇ ಆಗುತ್ತಾ? ಅದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಜೂ.4ಕ್ಕೆ ‘ಪೆದ್ದಿ’ ರಿಲೀಸ್; ‘ಟಾಕ್ಸಿಕ್’ ಬಿಟ್ಟುಕೊಟ್ಟ ದಿನಾಂಕದಲ್ಲಿ ರಾಮ್ ಚರಣ್ ಸಿನಿಮಾ ತೆರೆಗೆ

‘ಪೆದ್ದಿ’ ಚಿತ್ರವು ಒಟ್ಟು ಐದು ಭಾಷೆಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದ್ದು, ಹಿಂದಿ ಮಾರುಕಟ್ಟೆಯಲ್ಲೂ ದೊಡ್ಡ ಮಟ್ಟದ ಹೈಪ್ ಸೃಷ್ಟಿಸಿದೆ. ಜೂನ್ ಮೊದಲ ವಾರದಲ್ಲಿ ‘ಮೆಗಾ’ ಅಬ್ಬರ ಶುರುವಾಗುವುದನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಈ ಚಿತ್ರಕ್ಕೆ ಜಾನ್ವಿ ಕಪೂರ್ ನಾಯಕಿ. ಹೀಗಾಗಿ, ಹಿಂದಿ ಭಾಗದಲ್ಲೂ ಸಾಕಷ್ಟು ನಿರೀಕ್ಷೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link