Category Archives: Blog

Your blog category

ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿತ: ಇಬ್ಬರು ಅಧಿಕಾರಿಗಳ ತಲೆಂಡ – Kannada News | Bowring Hospital Wall Collapse: Two BBMP Officials Suspended Following Tragic Death of Seven in Bengaluru

ಬೆಂಗಳೂರು, ಮೇ 2: ಬೆಂಗಳೂರಿನಲ್ಲಿ ಏಪ್ರಿಲ್ 29 ರಂದು ಸುರಿದ ಧಾರಾಕಾರ ಮಳೆಗೆ ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಈ ದುರಂತದಲ್ಲಿ ಏಳು ಮಂದಿ ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡಿದ್ದರು. ಶಿವಾಜಿನಗರ ವಿಭಾಗದ ಕಾರ್ಯಪಾಲಕ ಅಭಿಯಂತರ ಮೊಹಮ್ಮದ್ ಜಾವೇದ್ ಮತ್ತು ವಸಂತನಗರ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ರುದ್ರಮುನಿ ಅಮಾನತಾಗಿದ್ದಾರೆ. ಕರ್ತವ್ಯ ಲೋಪ ಕಂಡುಬಂದ ಹಿನ್ನೆಲೆಯಲ್ಲಿ ಮುಖ್ಯ ಆಯುಕ್ತರು ಈ ಆದೇಶ ಹೊರಡಿಸಿದ್ದಾರೆ. ಘಟನೆಯ ಕುರಿತು ತನಿಖೆಗೂ ಆದೇಶಿಸಲಾಗಿತ್ತು.

ಮಳೆಯಿಂದ ರಕ್ಷಣೆ ಪಡೆಯಲು ಗೋಡೆಯ ಪಕ್ಕದಲ್ಲಿ ನಿಂತಿದ್ದವರ ಮೇಲೆ ಕಾಂಪೌಂಡ್ ಕುಸಿದು ಬಿದ್ದಿತ್ತು. ಕಾಂಪೌಂಡ್ ಬದಿಯಲ್ಲಿ ಹಾಕಿದ್ದ ಮಣ್ಣಿನ ಒತ್ತಡ ತಡೆಯಲಾಗದೆ ಗೋಡೆ ಕುಸಿದಿತ್ತು ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ. ಅಧಿಕಾರಿಗಳ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎಂದು ಆರೋಪಿಸಲಾಗಿದೆ.

ವರದಿ: ಲಕ್ಷ್ಮೀ ನರಸಿಂಹ, ಟಿವಿ9

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಈ ತಿಂಗಳು ಈ ರಾಶಿಯವರು ಮಹಾತ್ಮರ ಅಥವಾ ದೊಡ್ಡವರ ವಿರೋಧವನ್ನು ಎದುರಿಸಬೇಕಾದೀತು

ಮಕರ ರಾಶಿಗೆ ಉತ್ತರಾಷಾಢ, ಶ್ರವಣ, ಧನಿಷ್ಠಾ ನಕ್ಷತ್ರಗಳು ಇರಲಿದ್ದು ಶ್ರವಣಾ ನಕ್ಷತ್ರಕ್ಕೆ ವಿಶೇಷ ಪರಿಣಾಮ ಬೀರಲಿದೆ. ಮೇ 2026ರಲ್ಲಿ ಮಕರ ರಾಶಿಯವರ ಗೋಚಾರ ಫಲ ಹಾಗೂ ಗ್ರಹಗತಿಗಳ ಪ್ರಭಾವದ ಹೀಗಿರಲಿದೆ.

​ಗ್ರಹಗಳ ಸಂಚಾರ:

ಮಕರ ರಾಶಿಯವರಿಗೆ ಈ ತಿಂಗಳು ಗ್ರಹಗತಿಗಳು ಸವಾಲು ಮತ್ತು ಅವಕಾಶಗಳೆರಡನ್ನೂ ನೀಡುತ್ತಿವೆ. ​ಗುರುವು ನಿಮ್ಮ ರಾಶಿಯಿಂದ ಆರನೇ ಮನೆಯಲ್ಲಿರುವುದು ಅಷ್ಟೊಂದು ಶುಭಕರವಲ್ಲ. ಶತ್ರುಗಳ ಕಾಟ ಅಥವಾ ಸಾಲದ ಸುಳಿ ಕಂಡುಬರಬಹುದು.

  • ​ರವಿ ದಶೆ: ನಾಲ್ಕನೇ ಮನೆಯಲ್ಲಿ ರವಿ ಇರುವುದು ಸುಖಸ್ಥಾನಕ್ಕೆ ಕಿರಿಕಿರಿ ಉಂಟುಮಾಡಬಹುದು.
  • ಶುಕ್ರ ದಶೆ: ಐದನೇ ಮನೆಯಲ್ಲಿ ಶುಕ್ರ ಇರುವುದು ಅತ್ಯಂತ ಶುಭ. ಇದು ಪ್ರೇಮ, ಕಲೆ ಮತ್ತು ಸಂತಾನ ಸುಖಕ್ಕೆ ಪೂರಕ.
  • ​ಶನಿ, ಕುಜ, ಬುಧ ದಶೆ: ಮೂರನೇ ಮನೆಯಲ್ಲಿ ಈ ಮೂರು ಗ್ರಹಗಳ ಸಂಯೋಗವು ನಿಮ್ಮ ಶೌರ್ಯ ಮತ್ತು ಧೈರ್ಯವನ್ನು ಹೆಚ್ಚಿಸುತ್ತದೆ.

​ಗ್ರಹಗಳ ಪ್ರಭಾವ:

​ಪರಿಶ್ರಮ ಮತ್ತು ಅಧಿಕಾರ :

ನಿಮ್ಮ ರಾಶ್ಯಾಧಿಪತಿ ಶನಿ ಮೂರನೇ ಮನೆಯಲ್ಲಿ ಬಲಿಷ್ಠನಾಗಿರುವುದರಿಂದ ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಕಚೇರಿಯಲ್ಲಿ ಅಥವಾ ಸಮಾಜದಲ್ಲಿ ನಿಮ್ಮ ಅಧಿಕಾರ ವ್ಯಾಪ್ತಿ ಹೆಚ್ಚಾಗಲಿದೆ. ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಸಕಾಲ. ಎದುರಾಳಿಗಳು ನಿಮ್ಮ ಮುಂದೆ ಮಂಡಿಯೂರುವರು.

​ಕೃಷಿ ಮತ್ತು ಭೂಮಿ:

​ಕೃಷಿಕರಿಗೆ ಈ ತಿಂಗಳು ಲಾಭದಾಯಕವಾಗಿದೆ. ಮೂರನೇ ಮನೆಯಲ್ಲಿರುವ ಕುಜ ಮತ್ತು ಶನಿ ಭೂಮಿಗೆ ಸಂಬಂಧಿಸಿದ ಹಳೆಯ ವಿವಾದಗಳನ್ನು ಬಗೆಹರಿಸುತ್ತಾರೆ. ತೋಟಗಾರಿಕಾ ಬೆಳೆಗಳನ್ನು ವಿಶೇಷವಾಗಿ ದೀರ್ಘಾವಧಿ ಬೆಳೆಗಳನ್ನು ಬೆಳೆಯಲು ಭೂಮಿ ಸಿದ್ಧಪಡಿಸಿಕೊಳ್ಳಬಹುದು. ಆದರೂ, ಶನಿಯ ಪ್ರಭಾವದಿಂದ ಅತಿಯಾದ ದೈಹಿಕ ಶ್ರಮ ಇರಲಿದೆ.

​ಪ್ರೇಮ ಮತ್ತು ವಿವಾಹ:

ಶುಕ್ರನು 5ನೇ ಮನೆಯಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿ ಇರುವುದರಿಂದ ಪ್ರೇಮ ಸಂಬಂಧಗಳು ಗಟ್ಟಿಯಾಗುತ್ತವೆ. ಯಾರನ್ನಾದರೂ ಪ್ರೀತಿಸುತ್ತಿದ್ದರೆ ಅದನ್ನು ಮನೆಯವರಿಗೆ ತಿಳಿಸಲು ಇದು ಸುಸಮಯ. ವಿವಾಹ ಸಂಬಂಧಗಳು ಅಂತಿಮವಾಗಬಹುದು. ಸಣ್ಣಪುಟ್ಟ ವಿಹಾರ ಪ್ರವಾಸಗಳು ಮನಸ್ಸಿಗೆ ಮುದ ನೀಡುತ್ತವೆ.

​ಸ್ವ-ಉದ್ಯೋಗ ಮತ್ತು ವ್ಯಾಪಾರ:

​ವ್ಯಾಪಾರದಲ್ಲಿ ಈ ತಿಂಗಳು ವೇಗ ಕಂಡುಬರುತ್ತದೆ. ವಿಶೇಷವಾಗಿ ತಾಂತ್ರಿಕ ಕ್ಷೇತ್ರ, ಕಬ್ಬಿಣ ಅಥವಾ ಸಿವಿಲ್ ಕೆಲಸಗಳಲ್ಲಿ ತೊಡಗಿರುವವರಿಗೆ ಉತ್ತಮ ಆದಾಯವಿದೆ. ಸ್ವ-ಉದ್ಯೋಗಿಗಳಿಗೆ ಹೊಸ ಆರ್ಡರ್‌ಗಳು ಕೈ ಸೇರುತ್ತವೆ. ಆದರೆ, ಆರನೇ ಮನೆಯ ಗುರುವಿನ ಕಾರಣದಿಂದ ಹಣಕಾಸಿನ ವಹಿವಾಟಿನಲ್ಲಿ ಎಚ್ಚರಿಕೆ ಇರಲಿ. ಯಾರನ್ನೂ ಅತಿಯಾಗಿ ನಂಬಬೇಡಿ.

​ಹವ್ಯಾಸ ಮತ್ತು ಕಲೆ:

​ಕಲಾವಿದರಿಗೆ ಇದು ಸುವರ್ಣ ಕಾಲ. ಪಂಚಮ ಸ್ಥಾನದ ಶುಕ್ರ ನಿಮ್ಮ ಸೃಜನಶೀಲತೆಯನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತಾನೆ. ಹೊಸ ಹವ್ಯಾಸಗಳನ್ನು ಬೆಳೆಸಿಕೊಳ್ಳಲು ಅಥವಾ ಪ್ರದರ್ಶನ ನೀಡಲು ಇದು ಯಶಸ್ವಿ ತಿಂಗಳು.

​ಹೂಡಿಕೆ:

ಹೂಡಿಕೆಯ ವಿಷಯದಲ್ಲಿ ಮಿಶ್ರ ಫಲವಿದೆ. ಸ್ಥಿರ ಆಸ್ತಿಯ ಮೇಲೆ ಹೂಡಿಕೆ ಮಾಡಲು ರವಿ ಮತ್ತು ಶನಿಯ ಪ್ರಭಾವ ಪೂರಕವಾಗಿದೆ. ಆದರೆ, ಷೇರು ಮಾರುಕಟ್ಟೆಯಲ್ಲಿ ಹೂಡುವ ಮುನ್ನ ಎಚ್ಚರವಿರಲಿ. 6ನೇ ಮನೆಯಲ್ಲಿರುವ ಗುರುವು ಅನಗತ್ಯ ಸಾಲ ಮಾಡದಂತೆ ಎಚ್ಚರಿಸುತ್ತಾನೆ. ಜೀ​ರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಕಾಡಬಹುದು, ಆಹಾರ ಕ್ರಮದ ಮೇಲೆ ನಿಗಾ ಇರಲಿ.

ಪ್ರತಿದಿನ ವಿಷ್ಣು ಸಹಸ್ರನಾಮ ಪಠಿಸಿ. ಗುರುವಾರದಂದು ದಾನ‌ ಮಾಡಿ. ಶನಿವಾರದಂದು ಅನ್ನದಾನ ಮಾಡುವುದು ನಿಮ್ಮ ಕೆಲಸಗಳಲ್ಲಿರುವ ಅಡೆತಡೆಗಳನ್ನು ನಿವಾರಿಸುತ್ತದೆ.

– ಲೋಹಿತ ಹೆಬ್ಬಾರ್

Source link

ಪತ್ನಿಯ ಅಕ್ರಮ ಸಂಬಂಧದಿಂದ ಬೇಸತ್ತ ಗಂಡ ನೇಣಿಗೆ ಶರಣು, ವರದಕ್ಷಿಣೆ ಆಸೆಗೆ ಗೃಹಿಣಿ ಬದುಕು ಅಂತ್ಯ: ರಾಜ್ಯದಲ್ಲಿ ಕೌಟುಂಬಿಕ ಕಲಹಕ್ಕೆ ಇಬ್ಬರು ಬಲಿ! – Kannada News | Double self harm Shock: Man Ends Life Over Wife’s affair in Dandeli; Dowry Death in Bengaluru

ಪರಪುರುಷನೊಂದಿಗಿರುವ ಫೋಟೋ ವಾಟ್ಸಾಪ್ ಸ್ಟೇಟಸ್ ಹಾಕಿದ ಪತ್ನಿ! ನೊಂದ ಪತಿ ಸಾವಿಗೆ ಶರಣು

ದಾಂಡೇಲಿ/ಬೆಂಗಳೂರು: ರಾಜ್ಯದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕೌಟುಂಬಿಕ ಕಲಹ ಹಾಗೂ ಕಿರುಕುಳಕ್ಕೆ ಇಬ್ಬರು ಬಲಿಯಾಗಿದ್ದಾರೆ. ಉತ್ತರ ಕನ್ನಡ (Uttara Kannada) ಜಿಲ್ಲೆಯ ದಾಂಡೇಲಿಯಲ್ಲಿ ಪತ್ನಿಯ ಅನೈತಿಕ ಸಂಬಂಧ (Affair) ಹಾಗೂ ಮಾನಸಿಕ ಕಿರುಕುಳಕ್ಕೆ ಬೇಸತ್ತು ಪತಿ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಇತ್ತ ರಾಜಧಾನಿ ಬೆಂಗಳೂರಿನಲ್ಲಿ ವರದಕ್ಷಿಣೆ ಕಿರುಕುಳ ತಾಳಲಾರದೆ ಗೃಹಿಣಿಯೊಬ್ಬರು ನೇಣಿಗೆ ಶರಣಾಗಿದ್ದಾರೆ.

ಪತ್ನಿಯ ಟಾರ್ಚರ್‌ಗೆ ಮಲೇಷ್ಯಾ ಉದ್ಯೋಗಿ ಸಾವು

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರದಲ್ಲಿ ರಾಘವೇಂದ್ರ ವಾಡಕರ ಎಂಬುವವರು ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಮೂರು ವರ್ಷಗಳಿಂದ ಮಲೇಷ್ಯಾದಲ್ಲಿ ಕೆಲಸ ಮಾಡುತ್ತಿದ್ದ ರಾಘವೇಂದ್ರ, ಒಂದು ವಾರದ ಹಿಂದಷ್ಟೇ ದಾಂಡೇಲಿಗೆ ಮರಳಿದ್ದರು. ಅವರು ಮರಳುತ್ತಿದ್ದಂತೆಯೇ ಪತ್ನಿ ಮೇಘಾ ಇಬ್ಬರು ಮಕ್ಕಳೊಂದಿಗೆ ಧಾರವಾಡದ ತವರು ಮನೆಗೆ ತೆರಳಿದ್ದರು.

ರಾಘವೇಂದ್ರ ಒಟ್ಟಿಗೆ ಸಂಸಾರ ಮಾಡೋಣ ಬಾ ಎಂದು ಕರೆದರೂ ಪತ್ನಿ ನಿರಾಕರಿಸಿದ್ದಳು. ನಿನ್ನ ಜೊತೆ ಸಂಸಾರ ಮಾಡಲು ಇಷ್ಟವಿಲ್ಲ, ಸತ್ತು ಹೋಗು ಎಂದು ಹೇಳಿದ್ದಲ್ಲದೆ, ಬೇರೊಬ್ಬ ಪುರುಷನ ಜೊತೆಗಿನ ಫೋಟೋಗಳನ್ನು ಸ್ಟೇಟಸ್ ಹಾಕಿಕೊಂಡು ಪತಿಗೆ ಮಾನಸಿಕ ಹಿಂಸೆ ನೀಡುತ್ತಿದ್ದಳು ಎನ್ನಲಾಗಿದೆ. ತನ್ನ ಅನೈತಿಕ ಸಂಬಂಧದ ಬಗ್ಗೆ ಗಂಡನ ಬಳಿ ಬಹಿರಂಗವಾಗಿ ಹೇಳಿಕೊಂಡಿದ್ದ ಮೇಘಾ, ರಾಘವೇಂದ್ರ ಕೈ ಕೊಯ್ದುಕೊಂಡು ಫೋಟೋ ಕಳುಹಿಸಿದಾಗಲೂ ನೀನು ಸತ್ತರೂ ನನಗೆ ತೊಂದರೆಯಿಲ್ಲ ಎಂದು ಕ್ರೂರವಾಗಿ ಪ್ರತಿಕ್ರಿಯಿಸಿದ್ದಳು. ಈ ಎಲ್ಲಾ ಅವಮಾನ ಮತ್ತು ಕಿರುಕುಳದ ಬಗ್ಗೆ ಡೆತ್ ನೋಟ್‌ನಲ್ಲಿ ಉಲ್ಲೇಖಿಸಿ ರಾಘವೇಂದ್ರ ಸಾವನ್ನಪ್ಪಿದ್ದಾರೆ. ದಾಂಡೇಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ

ಬೆಂಗಳೂರಿನ ಹುಳಿಮಾವಿನ ಹಳೆಯ ಪೋಸ್ಟ್ ಆಫೀಸ್ ಬಳಿ ವಂದನಾ (23) ಎಂಬುವವರು ಪತಿ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂರು ವರ್ಷಗಳ ಹಿಂದೆ ವಿಕ್ರಂ ಶೇಷ ಎಂಬುವವರ ಜೊತೆ ಇವರ ವಿವಾಹವಾಗಿತ್ತು. ಈ ದಂಪತಿಗೆ ಮೂರು ತಿಂಗಳ ಮಗುವಿದೆ. ಮದುವೆಯ ಸಮಯದಲ್ಲಿ 4 ಲಕ್ಷ ರೂಪಾಯಿ ಖರ್ಚು ಮಾಡಿ ಬೈಕ್ ಹಾಗೂ ಚಿನ್ನಾಭರಣಗಳನ್ನು ನೀಡಿದ್ದರೂ, ಪತಿ ಹಾಗೂ ಕುಟುಂಬಸ್ಥರು ಪದೇ ಪದೇ ಹೆಚ್ಚಿನ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು ಎಂದು ವಂದನಾ ಪೋಷಕರು ಆರೋಪಿಸಿದ್ದಾರೆ.

ಇದನ್ನೂ ಓದಿ ಮನೆಯಲ್ಲಿದ್ದ ಚಿನ್ನಾಭರಣ ಸಮೇತ ಪತ್ನಿ ಎಸ್ಕೇಪ್: ಮಕ್ಕಳಿಬ್ಬರನ್ನು ಸಾಯಿಸಿ ತಾನೂ ನೇಣಿಗೆ ಶರಣಾದ ಪತಿ!

ಹಲವು ಬಾರಿ ರಾಜಿ ಸಂಧಾನ ಮಾಡಿದ್ದರೂ ಆರೋಪಿಗಳು ಬುದ್ಧಿ ಕಲಿತಿರಲಿಲ್ಲ. ಇದೀಗ ಗಂಡನ ಮನೆಯವರೇ ಹೊಡೆದು ಕೊಲೆ ಮಾಡಿದ್ದಾರೆ ಎಂದು ಪೋಷಕರು ದೂರು ನೀಡಿದ್ದು, ಪತಿ ವಿಕ್ರಂ ಶೇಷ, ಮಾವ ಶ್ರೀನಿವಾಸ್ ಮತ್ತು ಮೈದುನ ವಿನಿಷ್ ವಿರುದ್ಧ ಹುಳಿಮಾವು ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸುಪ್ರೀಂಕೋರ್ಟ್​​ನಲ್ಲೂ ಟಿಎಂಸಿಗೆ ಹಿನ್ನಡೆ: ಚುನಾವಣಾ ಆಯೋಗದ ನಡೆ ಪ್ರಶ್ನಿಸಿದ್ದ ಅರ್ಜಿ ವಜಾ – Kannada News | Supreme Court Dismisses TMC’s Plea Against Election Commission Over West Bengal Vote Counting Staff

ಸುಪ್ರೀಂಕೋರ್ಟ್​​ನಲ್ಲೂ ಟಿಎಂಸಿಗೆ ಹಿನ್ನಡೆ

ನವದೆಹಲಿ, ಮೇ 01: ಪಶ್ಚಿಮ ಬಂಗಾಳದ ಮತ ಎಣಿಕೆಗೆ ಕೇಂದ್ರ ಸರ್ಕಾರದ ಸಿಬ್ಬಂದಿಯನ್ನು ಮಾತ್ರ ಬಳಸಿಕೊಳ್ಳಬೇಕೆಂಬ ಚುನಾವಣಾ ಆಯೋಗದ ಆದೇಶದ ವಿರುದ್ಧ ತೃಣಮೂಲ ಕಾಂಗ್ರೆಸ್ ಸಲ್ಲಿಸಿದ್ದ (ಟಿಎಂಸಿ) ಸಲ್ಲಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಆ ಮೂಲಕ ನ್ಯಾಯಾಲಯದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಗೆ ಹಿನ್ನಡೆಯಾಗಿದೆ. ಈ ಮೊದಲು ಕಲ್ಕತ್ತಾ ಹೈಕೋರ್ಟ್ ಕೂಡ ತೃಣಮೂಲ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿತ್ತು. ಅದನ್ನು ಪ್ರಶ್ನಿಸಿ ಟಿಎಂಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.

ಮತ ಎಣಿಕೆಯ ಸಂದರ್ಭದಲ್ಲಿ ಪಕ್ಷಗಳ ಪ್ರತಿನಿಧಿಗಳು ಹಾಜರಿರುತ್ತಾರೆ ಮತ್ತು ಚುನಾವಣಾ ಆಯೋಗದ ಸರ್ಕ್ಯುಲರ್ ನಿಯಮಗಳಿಗೆ ವಿರುದ್ಧವಾಗಿಲ್ಲ ಎಂದು ಪೀಠ ವಿಚಾರಣೆ ವೇಳೆ ಅಭಿಪ್ರಾಯಪಟ್ಟಿದೆ. ಟಿಎಂಸಿ ಪರ ವಾದಿಸಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಹಾಗೂ ಮೀನಾಕ್ಷಿ ಅರೋರ, ಏಪ್ರಿಲ್ 13ರ ಸರ್ಕ್ಯುಲರ್ ಬಗ್ಗೆ ಏಪ್ರಿಲ್ 29ರವರೆಗೆ ಮಾಹಿತಿ ಸಿಗಲಿಲ್ಲ ಎನ್ನುವ ಮೂಲಕ ಆಯೋಗದ ನಿರ್ಧಾರವನ್ನು ಪ್ರಶ್ನಿಸಿದ್ದರು. ಆದರೆ ಚುನಾವಣಾ ಆಯೋಗ ಪರ ವಾದಿಸಿದ ಹಿರಿಯ ವಕೀಲ ಡಿ.ಎಸ್. ನಾಯ್ಡು, ಮತ ಎಣಿಕೆ ಪ್ರಕ್ರಿಯೆಯ ಮೇಲಿನ ಸಂಪೂರ್ಣ ನಿಯಂತ್ರಣ ರಾಜ್ಯ ಸರ್ಕಾರದ ಅಧಿಕಾರಿಯಾಗಿರುವ ರಿಟರ್ನಿಂಗ್ ಅಧಿಕಾರಿ ಕೈಯಲ್ಲೇ ಇರುತ್ತದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.

ಇದನ್ನೂ ಓದಿ: ಚುನಾವಣಾ ಆಯೋಗದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋದ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ

ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಬಾಗ್ಚಿ ಅವರಿದ್ದ ಪೀಠ, ಕೌಂಟಿಂಗ್ ಅಧಿಕಾರಿ ಕೇಂದ್ರ ಸರ್ಕಾರದ ಪ್ರತಿನಿಧಿ ಎಂದು ಹೇಳುವುದರಿಂದ ವಿಶೇಷ ವ್ಯತ್ಯಾಸವಿಲ್ಲ. ಇಂತಹ ನಿರ್ಧಾರಗಳು ಚುನಾವಣಾ ಆಯೋಗದ ವ್ಯಾಪ್ತಿಗೆ ಸೇರುತ್ತವೆ. ಜೊತೆಗೆ, ಪಕ್ಷಗಳಿಂದ ನೇಮಕಗೊಂಡ ಕೌಂಟಿಂಗ್ ಏಜೆಂಟ್‌ಗಳು, ಮೈಕ್ರೋ ಅಬ್ಸರ್ವರ್‌ಗಳು ಸೇರಿದಂತೆ ಹಲವಾರು ಮೇಲ್ವಿಚಾರಣಾ ವ್ಯವಸ್ಥೆಗಳು ಈಗಾಗಲೇ ಇವೆ ಎಂಬುದನ್ನು ಉಲ್ಲೇಖಿಸಿ ಟಿಎಂಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 11:43 am, Sat, 2 May 26

Source link

Weekly Love Horoscope: ಮೇ 03ರಿಂದ 09ರವರೆಗಿನ ವಾರದ ಪ್ರೇಮ -ಪ್ರೀತಿ ಭವಿಷ್ಯವನ್ನು ಇಲ್ಲಿ ತಿಳಿದುಕೊಳ್ಳಿ – Kannada News | Weekly Love Horoscope: May 3 9 Forecast for All Zodiac Signs

ಮೇ 03ರಿಂದ ಮೇ 09ರವರೆಗೆ ಮೊದಲೇ ವಾರವಾಗಿದ್ದು ಗ್ರಹಗಳ ಗಮನವು ಪ್ರೇಮಕ್ಕೆ ಹೆಚ್ಚು ಪೂರಕವಾಗಿಯೇ ಇವೆ. ಹಳೆಯ ಬೇಸರ, ದುಃಖ, ಕೋಪ ತಾಪಗಳು ಒಂದೊಂದಾಗಿಯೇ ದೂರಾಗುವುದು. ವಿಚ್ಛೇದನಕ್ಕೆ ಪರಸ್ಪರರ ಒಪ್ಪಿಗೆಯನ್ನು ಎದುರು ನೋಡಿವರು.

​ಮೇಷ ರಾಶಿ:

ಸಂಗಾತಿಯೊಂದಿಗೆ ಸಣ್ಣ ವಿಷಯಕ್ಕೆ ತರ್ಕ ಬೇಡ. ಪ್ರೇಮ ಜೀವನದಲ್ಲಿ ಉತ್ಸಾಹವಿದ್ದರೂ ತಾಳ್ಮೆ ಅಗತ್ಯ. ಅವಿವಾಹಿತರಿಗೆ ಹಿರಿಯರ ಒಪ್ಪಿಗೆ ಸಿಗುವ ಸಾಧ್ಯತೆ ಇದೆ. ಸಂಬಂಧದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಿ.

​ವೃಷಭ ರಾಶಿ:

ಪ್ರೇಮಿಗಳ ನಡುವೆ ಮಧುರ ಬಾಂಧವ್ಯವಿರಲಿದೆ. ಸಂಗಾತಿಯಿಂದ ಅನಿರೀಕ್ಷಿತ ಉಡುಗೊರೆ ಸಿಗಬಹುದು. ದಾಂಪತ್ಯದಲ್ಲಿ ಸುಖ ನೆಮ್ಮದಿ ಇರಲಿದ್ದು, ಹೊಸ ಸಂಬಂಧಗಳಿಗೆ ಇದು ಸಕಾಲ. ವಿಚ್ಛೇದನದ ಭೀತಿ ದೂರವಾಗಲಿದೆ.

​ಮಿಥುನ ರಾಶಿ:

ಸಂವಹನದ ಕೊರತೆಯಿಂದ ಪ್ರೇಮದಲ್ಲಿ ವಿರಸ ಮೂಡಬಹುದು. ಮನಬಿಚ್ಚಿ ಮಾತನಾಡುವುದರಿಂದ ಸಮಸ್ಯೆ ಬಗೆಹರಿಯುತ್ತದೆ. ವಿವಾಹದ ಮಾತುಕತೆಗಳು ಸಕಾರಾತ್ಮಕವಾಗಿ ನಡೆಯಲಿವೆ. ಸಂಗಾತಿಯ ಆರೋಗ್ಯದ ಬಗ್ಗೆ ಗಮನವಿರಲಿ.

​ಕರ್ಕಾಟಕ ರಾಶಿ:

ಹಳೆಯ ಪ್ರೇಮ ಪ್ರಕರಣಗಳು ಮರುಕಳಿಸಬಹುದು. ವೈವಾಹಿಕ ಜೀವನದಲ್ಲಿ ಸಾಮರಸ್ಯ ಹೆಚ್ಚಲಿದೆ. ವಿಚ್ಛೇದನ ಕೋರಿದವರಿಗೆ ರಾಜೀ ಸಂಧಾನದ ಅವಕಾಶವಿದೆ. ಪ್ರೇಮಿಗಳಿಗೆ ಮನೆಯವರ ಬೆಂಬಲ ಸಿಗುವ ಶುಭ ಕಾಲವಿದು.

​ಸಿಂಹ ರಾಶಿ:

ಸಂಬಂಧದಲ್ಲಿ ಅಹಂಕಾರ ಬೇಡ. ಸಂಗಾತಿಯ ಭಾವನೆಗಳಿಗೆ ಗೌರವ ನೀಡಿ. ವಿವಾಹ ಆಕಾಂಕ್ಷಿಗಳಿಗೆ ಸ್ವಲ್ಪ ವಿಳಂಬವಾಗಬಹುದು. ಪ್ರೀತಿಯಲ್ಲಿ ನಂಬಿಕೆ ಮುಖ್ಯವಾಗಿದ್ದು, ಪರಸ್ಪರ ಅರ್ಥಮಾಡಿಕೊಳ್ಳಲು ಸಮಯ ಮೀಸಲಿಡಿ.

​ಕನ್ಯಾ ರಾಶಿ:

ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಇದು ಸೂಕ್ತ ಸಮಯ. ದಾಂಪತ್ಯದಲ್ಲಿ ಪ್ರೀತಿ ಮತ್ತು ಕಾಳಜಿ ಹೆಚ್ಚಲಿದೆ. ಕಾನೂನಾತ್ಮಕ ಕೌಟುಂಬಿಕ ಸಮಸ್ಯೆಗಳಿದ್ದರೆ ಬಗೆಹರಿಯುವ ಹಾದಿಯಲ್ಲಿವೆ. ವಿವಾಹ ಯೋಗಗಳು ಪ್ರಬಲವಾಗಿವೆ.

​ತುಲಾ ರಾಶಿ:

ಪ್ರೇಮಿಗಳ ನಡುವೆ ನವಿರಾದ ಬಾಂಧವ್ಯವಿರಲಿದೆ. ಸಂಗಾತಿಯೊಂದಿಗೆ ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ. ವಿವಾಹ ಸಂಬಂಧಗಳು ಸ್ಥಿರವಾಗಲಿವೆ. ವೈವಾಹಿಕ ಜೀವನದಲ್ಲಿ ಇದ್ದ ಭಿನ್ನಾಭಿಪ್ರಾಯಗಳು ದೂರಾಗಿ ಸಂತಸ ಮನೆ ಮಾಡಲಿದೆ.

​ವೃಶ್ಚಿಕ ರಾಶಿ:

ಸಂಬಂಧದಲ್ಲಿ ಅನುಮಾನಗಳಿಗೆ ಎಡೆಕೊಡಬೇಡಿ. ಪ್ರೇಮ ಜೀವನದಲ್ಲಿ ಕೆಲವು ಸವಾಲುಗಳು ಎದುರಾಗಬಹುದು. ವಿಚ್ಛೇದನದ ಹಂತದಲ್ಲಿರುವವರು ಸಮಾಧಾನದಿಂದ ಯೋಚಿಸುವುದು ಒಳಿತು. ದಾಂಪತ್ಯದಲ್ಲಿ ಸಮಾಧಾನ ಕಾಪಾಡಿಕೊಳ್ಳಿ.

​ಧನುಸ್ಸು ರಾಶಿ:

ಅವಿವಾಹಿತರಿಗೆ ಯೋಗ್ಯ ಸಂಬಂಧಗಳು ಬರಲಿವೆ. ಪ್ರೇಮ ಜೀವನದಲ್ಲಿ ಪ್ರಗತಿ ಕಂಡುಬರಲಿದ್ದು, ವಿವಾಹಕ್ಕೆ ಮುದ್ರೆ ಬೀಳಬಹುದು. ಸಂಗಾತಿಯು ನಿಮ್ಮ ಕೆಲಸಗಳಿಗೆ ಬೆನ್ನೆಲುಬಾಗಿ ನಿಲ್ಲುವರು. ಒಟ್ಟಾರೆ ಸುಖದಿನಗಳು.

​ಮಕರ ರಾಶಿ:

ಪ್ರೀತಿಯಲ್ಲಿ ಗಾಂಭೀರ್ಯವಿರಲಿ. ಸಂಗಾತಿಯ ಜೊತೆ ಮನಸ್ತಾಪವಾಗದಂತೆ ಎಚ್ಚರವಹಿಸಿ. ವಿವಾಹ ಪ್ರಯತ್ನಗಳಲ್ಲಿ ಮಂದಗತಿ ಇರಲಿದೆ. ವಿಚ್ಛೇದನದ ವಿಚಾರದಲ್ಲಿ ತೀರ್ಪು ವಿಳಂಬವಾಗಬಹುದು. ತಾಳ್ಮೆಯಿಂದಿರಿ.

​ಕುಂಭ ರಾಶಿ:

ಹೊಸ ವ್ಯಕ್ತಿಯ ಪರಿಚಯ ಪ್ರೇಮಕ್ಕೆ ತಿರುಗಬಹುದು. ವೈವಾಹಿಕ ಜೀವನದಲ್ಲಿ ಹೊಸ ಚೈತನ್ಯ ಬರಲಿದೆ. ಸಂಬಂಧಗಳಲ್ಲಿನ ಕಹಿ ನೆನಪುಗಳನ್ನು ಮರೆತು ಒಂದಾಗಲು ಶುಭ ಕಾಲ. ಕುಟುಂಬದವರಿಂದ ಬೆಂಬಲ ದೊರೆಯಲಿದೆ.

​ಮೀನ ರಾಶಿ:

ಪ್ರೇಮಿಗಳಿಗೆ ಶುಭ ಫಲಗಳು ದೊರೆಯಲಿವೆ. ಸಂಬಂಧದಲ್ಲಿ ಬದ್ಧತೆ ಹೆಚ್ಚಲಿದೆ. ವಿವಾಹದ ಕನಸು ನನಸಾಗುವ ಕಾಲ ಹತ್ತಿರದಲ್ಲಿದೆ. ಸಂಗಾತಿಯ ನಡುವಿನ ಪ್ರೀತಿ ವೃದ್ಧಿಯಾಗಲಿದ್ದು, ನೆಮ್ಮದಿಯ ಜೀವನ ನಡೆಸುವಿರಿ.


– ಲೋಹಿತ ಹೆಬ್ಬಾರ್

Source link

ಮನೆಯಲ್ಲಿದ್ದ ಚಿನ್ನಾಭರಣ ಸಮೇತ ಪತ್ನಿ ಎಸ್ಕೇಪ್: ಮಕ್ಕಳಿಬ್ಬರನ್ನು ಸಾಯಿಸಿ ತಾನೂ ನೇಣಿಗೆ ಶರಣಾದ ಪತಿ! – Kannada News | Kunigal Tragedy: Father Kills Two Sons and Commits Suicide Over Wife’s affair

ಮಕ್ಕಳಿಬ್ಬರನ್ನು ಸಾಯಿಸಿ ತಾನೂ ನೇಣಿಗೆ ಶರಣಾದ ಪತಿ!
Image Credit source: google Gemini

ತುಮಕೂರು, ಮೇ 02: ಚಿನ್ನಾಭರಣ ಸಹಿತ ಪರಾರಿಯಾದ ಹೆಂಡತಿಯ (Wife) ನಡತೆಯಿಂದ ಬೇಸತ್ತ ವ್ಯಕ್ತಿಯೊಬ್ಬ ತನ್ನಿಬ್ಬರು ಪುಟ್ಟ ಮಕ್ಕಳನ್ನೂ ಕೊಲೆ ಮಾಡಿ, ತಾನೂ ನೇಣಿಗೆ ಶರಣಾಗಿರುವ ಅಮಾನವೀಯ ಘಟನೆ ತುಮಕೂರು (Tumkuru) ಜಿಲ್ಲೆಯ ಕುಣಿಗಲ್ ತಾಲೂಕಿನ ಆಲ್ಕೆರೆ ಗ್ರಾಮದಲ್ಲಿ ನಡೆದಿದೆ. ಶುಕ್ರವಾರ ರಾತ್ರಿ ಈ ಭೀಕರ ಕೃತ್ಯ ನಡೆದಿದ್ದು, ಇಂದು ಬೆಳಗ್ಗೆ ಅಕ್ಕಪಕ್ಕದ ಮನೆಯವರು ಗಮನಿಸಿದಾಗ ವಿಷಯ ಬೆಳಕಿಗೆ ಬಂದಿದೆ. ಈ ಹಿನ್ನೆಲೆ ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಲ್ಕೆರೆ ಗ್ರಾಮದ ಮಲ್ಲೇಶ್ವರಸ್ವಾಮಿ ದೇಗುಲದ ಅರ್ಚಕ ಹಾಗೂ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದ ಶಿವಣ್ಣ (40) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.ಸಾವಿಗೂ ಮುನ್ನ ಆತ ತನ್ನ ಮಕ್ಕಳಾದ ಜೀವನ್ (10) ಮತ್ತು ಪ್ರಾಣೇಶ್ (5) ಎಂಬುವವರನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಸಾವಿಗೆ ಕಾರಣವಾದ ಅಕ್ರಮ ಸಂಬಂಧ

ಶಿವಣ್ಣನ ಪತ್ನಿ ಪರಪುರುಷನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಇದೇ ವಿಚಾರವಾಗಿ ದಂಪತಿಗಳ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. ಕಳೆದ ಒಂದು ವಾರದ ಹಿಂದೆ ಆಕೆ ತನ್ನ ಗಂಡ ಮತ್ತು ಇಬ್ಬರು ಮಕ್ಕಳನ್ನು ಬಿಟ್ಟು ಪ್ರಿಯಕರನ ಜೊತೆ ಓಡಿಹೋಗಿದ್ದಳು. ಈ ಸಂಬಂಧ ಶಿವಣ್ಣ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದ. ಪೊಲೀಸರ ಮಧ್ಯಸ್ಥಿಕೆಯ ನಂತರ ಪತ್ನಿ ಮನೆಗೆ ಮರಳಿ ಬಂದಿದ್ದಳು. ಆದರೆ, ಮರುದಿನವೇ ಶಿವಣ್ಣ ಕೆಲಸಕ್ಕೆ ಹೋದ ಸಮಯ ನೋಡಿಕೊಂಡು, ಮನೆಯಲ್ಲಿದ್ದ ಹಣ ಮತ್ತು ಚಿನ್ನಾಭರಣದೊಂದಿಗೆ ಆಕೆ ಮತ್ತೆ ಪಲಾಯನ ಮಾಡಿದ್ದಾಳೆ. ಪತ್ನಿಯ ಈ ನಡತೆಯಿಂದ ತೀವ್ರವಾಗಿ ಮನನೊಂದ ಶಿವಣ್ಣ, ಜೀವನದಲ್ಲಿ ಜಿಗುಪ್ಸೆಗೊಂಡು ಮಕ್ಕಳೊಂದಿಗೆ ಸಾವಿನ ಹಾದಿ ಹಿಡಿದಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ ತುಮಕೂರಿನಲ್ಲಿ ಹಕ್ಕಿ ಜ್ವರದ ಭೀತಿ: ನವಿಲುಗಳ ಸಾವಿನ ಬೆನ್ನಲ್ಲೇ ಈಗ 30 ಕೋಳಿಗಳ ಸಾವು! ಜಿಲ್ಲೆಯಲ್ಲಿ ಹೈ ಅಲರ್ಟ್​

ಘಟನಾ ಸ್ಥಳಕ್ಕೆ ಕುಣಿಗಲ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಕ್ಕಳನ್ನು ಸಾಯಿಸಿ ತಂದೆಯೂ ಸಾವನ್ನಪ್ಪಿರುವ ಘಟನೆ ಗ್ರಾಮದಲ್ಲಿ ಸೂತಕದ ಛಾಯೆ ಮೂಡಿಸಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಾತನಾದ ಡಿ.ಕೆ. ಶಿವಕುಮಾರ್​​: ಗಮನಸೆಳೆದ BJP ಸಂಸದ ತೇಜಸ್ವಿ ಸೂರ್ಯ ಶುಭಾಶಯದ ಪೋಸ್ಟ್​​ – Kannada News | Tejasvi Surya Congratulates DK Shivakumar on Becoming Grandfather

ತಾತನಾದ ಡಿಕೆಶಿಗೆ ಶುಭಕೋರಿದ ತೇಜಸ್ವಿ ಸೂರ್ಯ

ಬೆಂಗಳೂರು, ಮೇ 02: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​​ ಅವರ ಪುತ್ರಿ ಪುತ್ರಿ ಐಶ್ವರ್ಯ ಹೆಗ್ಡೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ವಿಷಯ ತಿಳಿಯುತ್ತಿದ್ದಂತೆಯೇ ಡಿಕೆಶಿ ಖುಷಿಯಲ್ಲಿ ಆಸ್ಪತ್ರೆಗೆ ಬಂದು ಮೊಮ್ಮಗಳನ್ನು ಮುದ್ದಾಡುವ ಜೊತೆಗೆ ಮಗಳ ಆರೋಗ್ಯ ವಿಚಾರಿಸಿದ್ದರು. ವಿಶೇಷ ಅಂದ್ರೆ ಕಾರ್ಮಿಕ ದಿನಾಚರಣೆ, ಕರ್ನಾಟಕದ ರಾಜಕೀಯ ಮುತ್ಸದ್ಧಿ ಎಸ್.ಎಂ.ಕೃಷ್ಣ ಜನ್ಮದಿನ ಹಾಗೂ ಶುಭ್ರ ಪೂರ್ಣಿಮೆಯ ದಿನವೇ ತಾತನಾಗಿ ಡಿಸಿಎಂ ಭಡ್ತಿ ಪಡೆದಿದ್ದು, ಮಾಧ್ಯಮದವರ ಪ್ರಶ್ನೆಗೆ ಮುಗುಳ್ನಕ್ಕಿ ಸಂತಸ ವ್ಯಕ್ತಪಡಿಸಿದ್ದರು. ಈ ನಡುವೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮಾಡಿರುವ ಎಕ್ಸ್​​ ಪೋಸ್ಟ್​​ ನೆಟ್ಟಿಗರ ಗಮನ ಸೆಳೆದಿದೆ.

ಸದಾ ಒಂದಿಲ್ಲೊಂದು ರಾಜಕೀಯ ವಿಚಾರಗಳಿಗೆ ಡಿಸಿಎಂ ಡಿ.ಕೆ. ಶಿವಕುಮಾರ್​​ ಮತ್ತು ಸಂಸದ ತೇಜಸ್ವಿಸೂರ್ಯ ನಡುವೆ ಜಟಾಪಟಿ ನಡೆಯುತ್ತಲೇ ಇರುತ್ತವೆ. ಈ ನಡುವೆಯೂ ಅಭಿವೃದ್ಧಿ ವಿಚಾರ ಬಂದಾಗ ಇಬ್ಬರೂ ಒಂದೇ ವೇದಿಕೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿರುವ ಉದಾಹರಣೆಗಳಿವೆ. ಅದರಂತೆ ನಿನ್ನೆಯೂ ವಿವಿಧ ಕಾಮಗಾರಿಗಳಿಗೆ ಚಾಲನೆ, ಶಂಕುಸ್ಥಾಪನೆ ನಿಮಿತ್ತ ಡಿಸಿಎಂ ಭಾಗವಹಿಸಿದ್ದ ಕೆಲ ಕಾರ್ಯಕ್ರಮಗಳಲ್ಲಿ ಸಂಸದರೂ ಭಾಗಿಯಾಗಿದ್ದರು. ಈ ವೇಳೆ ತಾನು ತಾತ ಆಗುತ್ತಿದ್ದೇನೆ ಎಂದು ಡಿಕೆಶಿ ತಮ್ಮ ಬಳಿ ಸಂತಸ ಹಂಚಿಕೊಂಡ ವಿಚಾರವನ್ನು ತೇಜಸ್ವಿ ಸೂರ್ಯ ತಮ್ಮ ಪೋಸ್ಟ್​​ನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ತಾತನಾಗಿ ಬಡ್ತಿ ಪಡೆದ ಡಿಕೆ ಶಿವಕುಮಾರ್ ಫಸ್ಟ್ ರಿಯಾಕ್ಷನ್ ಹೇಗಿತ್ತು ನೋಡಿ

ಸಂಸದ ತೇಜಸ್ವಿ ಸೂರ್ಯ ಪೋಸ್ಟ್​​ನಲ್ಲಿ ಏನಿದೆ?

ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಜೊತೆ ಬೆಂಗಳೂರು ದಕ್ಷಿಣದ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ಕಾರ್ಯಕ್ರಮಗಳ ಮಧ್ಯೆ ಕಾರಿನಲ್ಲಿ ಜೊತೆಗೆ ಪ್ರಯಾಣಿಸುವಾಗ ಅವರಿಗೆ ಮನೆಯಿಂದ ಪದೇ ಪದೇ ಫೋನ್ ಬರುತ್ತಿತ್ತು. ವಿಚಾರಿಸಿದಾಗ, ಇವತ್ತು ನನ್ನ ಮಗಳ ಡೆಲಿವರಿ. ನಾನು ತಾತ ಆಗುತ್ತಿದ್ದೇನೆ ಎಂದರು. ಒಂದು ಕಡೆ ಕುಟುಂಬದ ಅತ್ಯಂತ ಸಂತೋಷದ ಕ್ಷಣ. ಇನ್ನೊಂದು ಕಡೆ ಸಾರ್ವಜನಿಕ ಜವಾಬ್ದಾರಿ. ಆದರೂ ಅವರು ಫ್ಲೈಓವರ್ ಉದ್ಘಾಟನೆ, ಸ್ಕೈವಾಕ್ ಶಂಕುಸ್ಥಾಪನೆ ಸೇರಿದಂತೆ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗಿಯಾದರು. The first casualty of public life is personal life ಅಂತ ಮಾತಿದೆ. ಇಂತಹ ಸಂದರ್ಭಗಳಲ್ಲಿ ಆ ಮಾತಿನ ಅರ್ಥ ಇನ್ನಷ್ಟು ಸ್ಪಷ್ಟವಾಗುತ್ತದೆ. ತಾತನಾದ ಡಿ.ಕೆ. ಶಿವಕುಮಾರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಅವರ ಮಗಳು ಐಶ್ವರ್ಯ ಅವರಿಗೆ, ಮಗುಗೆ ಮತ್ತು ಕುಟುಂಬಕ್ಕೆ ಭಗವಂತ ಆಯುಷ್ಯ, ಆರೋಗ್ಯ ಮತ್ತು ಸಂತೋಷ ಕರುಣಿಸಲಿ ಎಂದು ತೇಜಸ್ವಿ ಸೂರ್ಯ ಎಕ್ಸ್​​ ಪೋಸ್ಟ್​​ನಲ್ಲಿ ಬರೆದುಕೊಂಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

13ನೇ ವಯಸ್ಸಿಗೆ ವಿವಾಹ, ಇಸ್ಲಾಂಗೆ ಮತಾಂತರ: ಸರೋಜ್ ಖಾನ್ ಜೀವನದ ಕರಾಳ ಸತ್ಯ – Kannada News | Saroj Khan: Iconic Choreographer’s Life of Struggle and Triumph

ಬಾಲಿವುಡ್‌ನ ಐಕಾನಿಕ್ ಹಾಡುಗಳಾದ ‘ಏಕ್ ದೋ ತೀನ್’ ಮತ್ತು ‘ಡೋಲಾ ರೇ ಡೋಲಾ’ ಹಾಡುಗಳಿಗೆ ನೃತ್ಯ ಸಂಯೋಜಿಸಿ ಗಮನ ಸೆಳೆದವರು ಸರೋಜ್ ಖಾನ್. ತೆರೆಯ ಮೇಲೆ ಬಣ್ಣದ ಲೋಕವನ್ನು ಸೃಷ್ಟಿಸಿದ ಅವರ ವೈಯಕ್ತಿಕ ಜೀವನ ಮಾತ್ರ ಕಣ್ಣೀರಿನ ಕಥೆಯಂತಿತ್ತು. ಬಾಲ್ಯವಿವಾಹ, ಮೋಸ ಮತ್ತು ಜೀವನದ ಸಂಘರ್ಷಗಳ ನಡುವೆಯೇ ಅವರು ಬೆಳೆದು ಬಂದ ಹಾದಿ ನಿಜಕ್ಕೂ ರೋಚಕ.

1948 ರಲ್ಲಿ ಮುಂಬೈನಲ್ಲಿ ನಿರ್ಮಲಾ ನಾಗಪಾಲ್ ಆಗಿ ಜನಿಸಿದ ಇವರು, ಬಡತನದ ಕಾರಣದಿಂದ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದರು. ಕೇವಲ 13 ವರ್ಷದವರಿದ್ದಾಗ ತಮ್ಮ ನೃತ್ಯ ಗುರುಗಳಾದ 43 ವರ್ಷದ ಬಿ. ಸೋಹನ್‌ಲಾಲ್ ಅವರೊಂದಿಗೆ ವಿವಾಹವಾದರು. ‘ಮದುವೆ ಎಂದರೆ ಏನು ಎಂದು ತಿಳಿಯದ ವಯಸ್ಸಿನಲ್ಲಿ, ಅವರು ನನ್ನ ಕುತ್ತಿಗೆಗೆ ತಾಳಿ ಕಟ್ಟಿದರು. ನಾನು ಮದುವೆಯಾಯಿತು ಎಂದು ನಂಬಿದೆ’ ಎಂದು ಸರೋಜ್ ಖಾನ್ ಸಂದರ್ಶನವೊಂದರಲ್ಲಿ ಹೇಳಿದ್ದರು. ಈ ವಿವಾಹದ ನಂತರ ಅವರು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಸರೋಜ್ ಖಾನ್ ಎಂಬ ಹೆಸರನ್ನು ಪಡೆದರು.

ಸರೋಜ್ ಖಾನ್ 14ನೇ ವಯಸ್ಸಿನಲ್ಲಿ ಗರ್ಭಿಣಿಯಾದಾಗ ಅವರಿಗೆ ದೊಡ್ಡ ಶಾಕ್ ಕಾದಿತ್ತು. ಪತಿ ಸೋಹನ್‌ಲಾಲ್ ಅವರಿಗೆ ಈಗಾಗಲೇ ಮದುವೆಯಾಗಿದ್ದು, ಅವರಿಗೆ ನಾಲ್ವರು ಮಕ್ಕಳಿದ್ದಾರೆ ಎಂಬ ಸತ್ಯ ಬಯಲಾಯಿತು. ಅಷ್ಟೇ ಅಲ್ಲದೆ, ಸೋಹನ್‌ಲಾಲ್ ಅವರು ಸರೋಜ್ ಖಾನ್ ಅವರ ಮಕ್ಕಳಿಗೆ ತಂದೆಯ ಹೆಸರನ್ನು ನೀಡಲು ನಿರಾಕರಿಸಿದರು. ಈ ದ್ರೋಹ ಮತ್ತು ನೋವಿನಿಂದ ಅವರು ಮಾನಸಿಕವಾಗಿ ಕುಗ್ಗಿಹೋದರೂ, ಧೈರ್ಯಗೆಡದೆ ತಮ್ಮ ಮಕ್ಕಳನ್ನು ಒಬ್ಬಂಟಿಯಾಗಿ ಸಾಕಲು ನಿರ್ಧರಿಸಿದರು.

1975 ರಲ್ಲಿ ಸರ್ದಾರ್ ರೋಷನ್ ಖಾನ್ ಅವರು ಸರೋಜ್ ಅವರನ್ನು ಮದುವೆಯಾಗಲು ಪ್ರಸ್ತಾಪಿಸಿದರು. ‘ನನ್ನ ಮಕ್ಕಳನ್ನು ಸ್ವೀಕರಿಸುವುದಾದರೆ ಮಾತ್ರ ನಾನು ಮದುವೆಯಾಗುತ್ತೇನೆ’ ಎಂಬ ಸರೋಜ್ ಅವರ ಷರತ್ತಿಗೆ ರೋಷನ್ ಒಪ್ಪಿದರು. ಈ ದಂಪತಿಗೆ ಸುಕೈನಾ ಎಂಬ ಮಗಳಿದ್ದಾಳೆ. ವೈಯಕ್ತಿಕವಾಗಿ ನೋವುಗಳನ್ನು ಕಂಡರೂ ಸರೋಜ್ ಖಾನ್ ವೃತ್ತಿಜೀವನದಲ್ಲಿ ಸೋಲಲಿಲ್ಲ.

ಇದನ್ನೂ ಓದಿ: ‘ಸರ್ಸೆ ಸೆರಗು’ ಹಾಡಿಗೆ ಅಶ್ಲೀಲ ನೃತ್ಯ, ನೋರಾ ಫತೇಹಿ ವಿರುದ್ಧ ಫತ್ವಾ

ಸಂಜಯ್ ಲೀಲಾ ಭನ್ಸಾಲಿ ಅವರ ಪ್ರಕಾರ, ಸರೋಜ್ ಖಾನ್ ಅವರಿಗೆ ನೃತ್ಯವೆಂದರೆ ಪ್ರಾಣವಾಗಿತ್ತು. ಆಸ್ಪತ್ರೆಯ ಹಾಸಿಗೆಯಲ್ಲಿದ್ದಾಗಲೂ ಅವರು ಕೇಳುತ್ತಿದ್ದ ಮೊದಲ ಪ್ರಶ್ನೆ, ‘ಡೋಲಾ ರೇ ಡೋಲಾ ಹಾಡಿಗೆ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿ ನಾಣ್ಯಗಳನ್ನು ಎಸೆದರೇ?’ ಎಂಬುದಾಗಿತ್ತು. ನೋವಿನಲ್ಲೂ ನಗು ಮೂಡಿಸುತ್ತಾ, ಸಾವಿರಾರು ಜನರಿಗೆ ನೃತ್ಯ ಕಲಿಸಿದ ಈ ಮಹಾನ್ ಚೇತನದ ಬದುಕು ಇಂದಿಗೂ ಅನೇಕರಿಗೆ ಸ್ಫೂರ್ತಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕುಟುಂಬದ ತಂಟೆಗೆ ಹೊಡೆದುರುಳಿಸ್ತೀನಿ: ಹೆನ್ರಿಕ್ ಕ್ಲಾಸೆನ್ ಧಮ್ಕಿ! – Kannada News | Heinrich Klaasen Warns Fan for Breaching Family Privacy

ಮೈದಾನದಲ್ಲಿ ಸಿಕ್ಸರ್‌ಗಳ ಸುರಿಮಳೆಗೈಯುವ ಸನ್ ರೈಸರ್ಸ್ ಹೈದರಾಬಾದ್ (SRH) ತಂಡದ ಸ್ಟಾರ್ ಆಟಗಾರ ಹೆನ್ರಿಕ್ ಕ್ಲಾಸೆನ್ (Heinrich Klaasen), ರಿಯಲ್ ಲೈಫ್‌ನಲ್ಲಿ ಕೆಂಡಾಮಂಡಲವಾಗಿದ್ದಾರೆ. ತಮ್ಮ ಪತ್ನಿ ಮತ್ತು ಮಗುವಿನ ಖಾಸಗಿತನಕ್ಕೆ ಧಕ್ಕೆ ತಂದ ಅಭಿಮಾನಿಯೊಬ್ಬನಿಗೆ, “ಕುಟುಂಬದ ತಂಟೆಗೆ ಬಂದರೆ, ಹೊಡೆದುರುಳಿಸ್ತೀನಿ” ಎಂದು ನೇರವಾಗಿಯೇ ಧಮ್ಕಿ ಹಾಕಿದ್ದಾರೆ!

ಏನಿದು ಘಟನೆ?

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯ ಮುಗಿಸಿ ಸನ್​ರೈಸರ್ಸ್​ ಹೈದರಾಬಾದ್ ತಂಡ ಹೋಟೆಲ್‌ನಿಂದ ವಿಮಾನ ನಿಲ್ದಾಣಕ್ಕೆ ಹೊರಡುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಕ್ಲಾಸೆನ್ ತಮ್ಮ ಪತ್ನಿ ಮತ್ತು ಮಗುವಿನೊಂದಿಗೆ ನಡೆದು ಬರುತ್ತಿದ್ದಾಗ, ಅಭಿಮಾನಿಯೊಬ್ಬರು ಅತೀ ಸಮೀಪಕ್ಕೆ ಬಂದು ವಿಡಿಯೋ ಚಿತ್ರೀಕರಿಸಲು ಆರಂಭಿಸಿದ್ದಾರೆ.

ಕ್ಲಾಸೆನ್ ಆಕ್ರೋಶಕ್ಕೆ ಕಾರಣವೇನು?

ಆರಂಭದಲ್ಲಿ ಸಂಯಮದಿಂದಲೇ ವರ್ತಿಸಿದ ಹೆನ್ರಿಕ್ ಕ್ಲಾಸೆನ್, “ದಯವಿಟ್ಟು ವಿಡಿಯೋ ಮಾಡಬೇಡಿ, ನಮಗೆ ಸ್ವಲ್ಪ ಏಕಾಂತ ಬೇಕು” ಎಂದು ಮನವಿ ಮಾಡಿದ್ದರು. ಆದರೆ ಆ ಅಭಿಮಾನಿ ‘ನಾನು ನಿಮ್ಮ ದೊಡ್ಡ ಫ್ಯಾನ್’ ಎನ್ನುತ್ತಲೇ ಕ್ಯಾಮೆರಾವನ್ನು ಕ್ಲಾಸೆನ್ ಕುಟುಂಬದತ್ತ ತಿರುಗಿಸಿದ್ದಾನೆ. ಇದರಿಂದ ತೀವ್ರ ಆಕ್ರೋಶಗೊಂಡ ಕ್ಲಾಸೆನ್, ಕುಟುಂಬದ ವಿಡಿಯೋ ಮಾಡದಂತೆ ಸೂಚಿಸಿದ್ದಾರೆ.

ಕ್ಲಾಸೆನ್ ಧಮ್ಕಿ:

ಕುಟುಂಬದ ವಿಡಿಯೋ ಮಾಡಬೇಡಿ ಎಂದು ಸೂಚಿಸಿದರೂ ಅಭಿಮಾನಿ ಮಾತ್ರ ಕ್ಯಾಮೆರಾವನ್ನು ಕ್ಲಾಸೆನ್ ಅವರ ಪತ್ನಿ ಹಾಗೂ ಮಗುವಿನತ್ತ ಹಿಡಿದಿದ್ದ. ಇದರಿಂದ ಕೋಪಗೊಂಡ ಕ್ಲಾಸೆನ್  “ನಾನು ನಿನಗೆ ಮೊದಲೇ ಬೇಡ ಎಂದು ಹೇಳಿದ್ದೇನೆ. ಈಗ ನಾನು ಅಲ್ಲಿಗೆ ಹೋಗಿ ವಾಪಸ್ ಬರುವಷ್ಟರಲ್ಲಿ ನೀನೇನಾದರೂ ಫೋಟೋ ಅಥವಾ ವಿಡಿಯೋ ತೆಗೆದರೆ, ನಿಜವಾಗಲೂ ಹೊಡೆದುರುಳಿಸುತ್ತೀನಿ” ಎಂದು ಧಮ್ಕಿ ಹಾಕಿದ್ದಾರೆ.  ತಕ್ಷಣವೇ ಎಚ್ಚೆತ್ತುಕೊಂಡ ಪಕ್ಕದಲ್ಲಿದ್ದ ಭದ್ರತಾ ಸಿಬ್ಬಂದಿ ಆತನನ್ನು ದೂರ ಕಳುಹಿಸಿದ್ದಾರೆ.

ವಿಡಿಯೋ ವೈರಲ್:

ಹೆನ್ರಿಕ್ ಕ್ಲಾಸೆನ್ ಅವರ ಈ ಆಕ್ರೋಶಭರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೆ “ಆಟಗಾರರಿಗೂ ಕುಟುಂಬದೊಂದಿಗೆ ಇರಲು ಖಾಸಗಿತನ ಬೇಕು, ಅಭಿಮಾನಿಗಳು ಮಿತಿ ಮೀರುವುದು ಸರಿಯಲ್ಲ” ಎಂದು ಬಹುತೇಕರು ಕ್ಲಾಸೆನ್ ನಡೆಯನ್ನು ಬೆಂಬಲಿಸಿದ್ದಾರೆ.

ಇದನ್ನೂ ಓದಿ: GT vs RCB ಪಂದ್ಯದಲ್ಲಿ ಕೃನಾಲ್ ಪಾಂಡ್ಯ ಬೌಲಿಂಗ್ ಮಾಡದಿರಲು ಇದುವೇ ಕಾರಣ!

ಒಟ್ಟಾರೆಯಾಗಿ, ಮೈದಾನದಲ್ಲಿ ಬೌಲರ್‌ಗಳ ಪಾಲಿಗೆ ಸಿಂಹಸ್ವಪ್ನವಾಗಿರುವ ಹೆನ್ರಿಕ್ ಕ್ಲಾಸೆನ್, ಮೈದಾನದ ಹೊರಗೂ ಅಷ್ಟೇ ಖಡಕ್ ವ್ಯಕ್ತಿತ್ವದವರು ಎಂಬುದು ಈ ಘಟನೆಯಿಂದ ಸಾಬೀತಾಗಿದೆ. ಅಭಿಮಾನದ ಹೆಸರಿನಲ್ಲಿ ಆಟಗಾರರ ಖಾಸಗಿ ಬದುಕಿಗೆ ಇಣುಕುವವರಿಗೆ ಕ್ಲಾಸೆನ್ ನೀಡಿರುವ ಈ ಎಚ್ಚರಿಕೆ ಇದೀಗ ದೊಡ್ಡ ಮಟ್ಟದ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಆಟಗಾರರ ಪ್ರದರ್ಶನವನ್ನು ಮೆಚ್ಚುವ ಅಭಿಮಾನಿಗಳು, ಅವರ ವೈಯಕ್ತಿಕ ಬದುಕಿಗೂ ಅಷ್ಟೇ ಗೌರವ ನೀಡಬೇಕಿರುವುದು ಇಂದಿನ ಅಗತ್ಯವಾಗಿದೆ.

Published On – 10:32 am, Sat, 2 May 26

Source link

ಬಾಲಿವುಡ್​​ನಲ್ಲಿ ನಡೆಯದ ಸಾಯಿ ಪಲ್ಲವಿ ಕಮಾಲ್; ತಪ್ಪು ಮಾಡಿದ್ರಾ ಆಮಿರ್ ಖಾನ್? – Kannada News | Sai Pallavi’s ‘Ek Din’ Bollywood Debut: Poor Box Office Collection and Future Impact

ಸಾಯಿ ಪಲ್ಲವಿ (Sai Pallavi) ಅವರಿಗೆ ದಕ್ಷಿಣ ಭಾರತದಲ್ಲಿ ಸಾಕಷ್ಟು ಬೇಡಿಕೆ ಇದೆ. ಅವರ ಸಿನಿಮಾಗಳು ಇಲ್ಲಿ ಅದ್ಭುತ ಕಲೆಕ್ಷನ್ ಮಾಡುತ್ತವೆ. ಈಗ ಅವರು ಬಾಲಿವುಡ್​​ಗೆ ಕಾಲಿಟ್ಟಿದ್ದಾರೆ. ಆಮಿರ್ ಖಾನ್ ಮಗ ಜುನೈದ್ ಖಾನ್ ಅವರ ‘ಏಕ್ ದಿನ್’ ಚಿತ್ರಕ್ಕೆ ಅವರು ನಾಯಕಿ. ಈ ಸಿನಿಮಾ ಮೇ 1ರಂದು ರಿಲೀಸ್ ಆಯಿತು. ಈ ಸಿನಿಮಾ ಕಮಾಲ್ ಮಾಡಲು ವಿಫಲವಾಗಿದೆ. ಈ ಚಿತ್ರ ಡಲ್​ ಓಪನಿಂಗ್ ಕಂಡಿದೆ.

‘ಏಕ್ ದಿನ್’ ರೊಮ್ಯಾಂಟಿಕ್ ಡ್ರಾಮಾ ಶೈಲಿಯ ಸಿನಿಮಾವಾಗಿದ್ದು, ಜಪಾನ್‌ ಅಲ್ಲಿ ಶೂಟ್ ಮಾಡಲಾಗಿದೆ. ಸಿನಿಮಾದ ಶೀರ್ಷಿಕೆ ಸೂಚಿಸುವಂತೆ, ಇದು ಇಬ್ಬರು ಅಪರಿಚಿತ ವ್ಯಕ್ತಿಗಳು ಭೇಟಿಯಾಗಿ ಒಂದೇ ದಿನದಲ್ಲಿ ನಡೆಯುವ ಕಥೆ. ಈ ಚಿತ್ರವನ್ನು ಸುನಿಲ್ ಪಾಂಡೆ ನಿರ್ದೇಶಿಸಿದ್ದಾರೆ. ಆಮಿರ್ ಖಾನ್ ಈ ಚಿತ್ರ ನಿರ್ಮಾಣ ಮಾಡಿದ್ದರೆ.

‘ಏಕ್ ದಿನ್’ ಸಿನಿಮಾ ಮೊದಲ ದಿನ 1 ಕೋಟಿ ರೂಪಾಯಿ ಮಾತ್ರ ಗಳಿಸಿದೆ. ಈ ಚಿತ್ರಕ್ಕೆ ದೇಶಾದ್ಯಂತ ಸಿಕ್ಕಿದ್ದು ಬರೋಬ್ಬರಿ 1,710 ಶೋ. ಆದರೂ ಸಿನಿಮಾ ಗಳಿಸಿದ್ದು ಕೇವಲ 1 ಕೋಟಿ ರೂಪಾಯಿ. ಈ ಚಿತ್ರ ಅಕ್ಯುಪೆನ್ಸಿ ಕೇವಲ 14 ಪರ್ಸೆಂಟ್ ಇತ್ತು. ಅಂದರೆ, 100 ಸೀಟ್ ಇರುವ​ ಚಿತ್ರಮಂದಿರದಲ್ಲಿ ತುಂಬಿದ್ದು ಕೇವಲ 14 ಸೀಟ್ ಮಾತ್ರ. ಹೀಗಾಗಿ, ಕೇವಲ 1 ಕೋಟಿ ರೂಪಾಯಿ ಮಾತ್ರ ಗಳಿಸಿದೆ.

ಇದನ್ನೂ ಓದಿ: ಸಾಯಿ ಪಲ್ಲವಿ ಹೆಗಲಮೇಲೆ ಕೈ ಹಾಕಲು ಮುಂದಾದ ಆಮಿರ್ ಮಗ; ಮುಂದಾಯ್ತು ಯಾರು ಊಹಿಸದ ಘಟನೆ

ಸಾಯಿ ಪಲ್ಲವಿ ಅವರು ಸಾಮಾನ್ಯವಾಗಿ ಗ್ಲಾಮರ್ ಪಾತ್ರಗಳಿಗಿಂತ ಕಥೆಗೆ ಪ್ರಾಮುಖ್ಯತೆ ಇರುವ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ‘ಏಕ್ ದಿನ್’ ಕೂಡ ಅದೇ ಸಾಲಿಗೆ ಸೇರುವ ಚಿತ್ರವಾಗಿದೆ. ಸಾಯಿ ಪಲ್ಲವಿ ಪರಿಚಯ ಬಾಲಿವುಡ್​​ನವರಿಗೆ ಇಲ್ಲ. ಅವರು ‘ರಾಮಾಯಣ’ದಲ್ಲಿ ಸೀತೆ ಪಾತ್ರ ಮಾಡುತ್ತಿದ್ದಾರೆ. ಈ ಸಿನಿಮಾ ರಿಲೀಸ್ ಆದ ಬಳಿಕ ‘ಏಕ್ ದಿನ್’ ತೆರೆಗೆ ಬಂದಿದ್ದರೆ ಸಿನಿಮಾಗೆ ಹೆಚ್ಚು ಲಾಭ ಆಗುತ್ತಿತ್ತು. ಆದರೆ, ಆಮಿರ್ ಖಾನ್ ಅವರಿಗೆ ಅಷ್ಟು ಸಮಯ ಕಾಯುವ ತಾಳ್ಮೆ ಇರಲಿಲ್ಲ. ಹೀಗಾಗಿ, ಅವರು ಈ ನಿರ್ಧಾರ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಸಿನಿಮಾ ಎಷ್ಟು ಕೋಟಿ ರೂಪಾಯಿ ಗಳಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link