Category Archives: Blog

Your blog category

ಮನೆ ಲಾಕ್ ಮಾಡಿಕೊಂಡು ಊರಿಗೆ ಹೋಗುತ್ತಿದ್ದೀರಾ? ಕಳ್ಳತನ ತಪ್ಪಿಸಲು ಈ ಕ್ರಮಗಳನ್ನು ಪಾಲಿಸಿ – Kannada News | Shivamogga police introduce locked house monitoring system

ಶಿವಮೊಗ್ಗ, (ಮೇ 01): ಪ್ರವಾಸ, ಮದುವೆ ಸೇರಿದಂತೆ ಇತರೆ ಕೆಲಸ ಕಾರ್ಯಗಳ ನಿಮಿತ್ತ ಬೇರೆ ಊರಿಗೆ ಹೋಗುವಾಗ ಇನ್ನು ಮುಂದೆ ಪಕ್ಕದ ಮನೆಯವರಿಗೆ ಮನೆ ನೋಡಿಕೊಳ್ಳಿ ಎಂದು ಹೇಳಬೇಕಿಲ್ಲ. ಪೊಲೀಸರಿಗೆ ಮಾಹಿತಿ ನೀಡಿದರೆ ಸಾಕು, ಪೊಲೀಸರ ಕ್ಯಾಮೆರಾ ನಿಮ್ಮ ಮನೆ ಕಾಯಲಿದೆ. ಹೌದು… ಮನೆ ಕಳ್ಳತನ (house theft) ಪ್ರಕರಣಗಳು ಹೆಚ್ಚಳವಾಗಬಾರದು ಎನ್ನುವ ದೃಷ್ಟಿಯಿಂದ ಶಿವಮೊಗ್ಗ (Shivamogga) ಜಿಲ್ಲಾ ಪೊಲೀಸ್ ವತಿಯಿಂದ ಲಾಕ್ಡ್ ಹೌಸ್ ಬೀಟ್ ಸಿಸ್ಟಮ್-ಎಲ್‍ಹೆಚ್‍ಬಿಎಸ್ ಜಾರಿಗೆ ತರಲಾಗಿದ್ದು, ಪೊಲೀಸರೇ ನಿಮ್ಮ ನೋಡಿಕೊಳ್ಳುವ ಮನೆ ಜವಾಬ್ದಾರಿ ತೆಗೆದುಕೊಳ್ಳಲಿದ್ದಾರೆ. ಆದ್ರೆ, ಊರಿಗೆ ಹೋಗುವ ಮುನ್ನ ಕೆಲ ಮಾಹಿತಿಯನ್ನು ಪೊಲೀಸರಿಗೆ ನೀಡಬೇಕು.

ಪೊಲೀಸರಿಗೆ ನೀಡಬೇಕು ಮಾಹಿತಿ

ಬೀಗ ಹಾಕಿದ ಮನೆಗಳ ಸುರಕ್ಷತೆ ಸಂಬಂಧ ಪೊಲೀಸ್ ವತಿಯಿಂದ ನೂತನ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದ್ದು, ಮನೆಯವರೆಲ್ಲಾ ಪ್ರಯಾಣಕ್ಕೆ ಹೊರಟರೆ ಮೂರು ಪ್ರಮುಖ ಅಂಶಗಳನ್ನು ಪೊಲೀಸ್ ಗಮನಕ್ಕೆ ತರಬೇಕು. ಹೊರಗೆ ಹೋಗುವ ಮತ್ತು ಮರಳಿ ಬರುವ ದಿನಾಂಕ, ಮನೆಯ ವಿಳಾಸ ಮತ್ತು ಲೋಕೇಷನ್ ಮತ್ತು ತಮ್ಮದೇ ಮನೆಯ ಮುಂದೆ ನಿಂತು ಸೆಲ್ಫಿ ತೆಗೆದು ವಾಟ್ಸ್ ಅಪ್ ಮೂಲಕ ಎಲ್‍ಹೆಚ್‍ಬಿಎಸ್‍ನ ಕಂಟ್ರೋಲ್ ರೂಂ/ಸಹಾಯ ವಾಣಿ ಸಂಖ್ಯೆ-8277982901ಕ್ಕೆ ಅಪ್‍ಲೋಡ್ ಮಾಡಿದರೆ ಅಥವಾ ಕ್ಯೂಆರ್ ಕೋಡ್ ಸ್ಕ್ಯಾನ್‍ಮಾಡಿ ಮಾಹಿತಿ ನೀಡಿದರೆ ನಿಮ್ಮ ಮನೆಯ ಸುರಕ್ಷತೆಯ ಜವಾಬ್ದಾರಿಯನ್ನು ಪೊಲೀಸರು ತೆಗೆದುಕೊಳ್ಳಲಿದ್ದಾರೆ.

ಇದನ್ನೂ ಓದಿ: ಮನೆ ಬಾಗಿಲು ಹಾಕಲು ಮರೆತು ಹೋದ ಯುವತಿ, ಪಾರ್ಸೆಲ್ ಡೆಲಿವರಿಗೆಂದು ಬಂದ ವ್ಯಕ್ತಿ ಮಾಡಿದ್ದೇನು?

ಕೆಲ ಕಡೆಗಳಲ್ಲಿ ಯಶಸ್ವಿಯಾಗಿ ಜಾರಿಯಾಗಿರುವ ‘ಲಾಕ್ಡ್‌ ಹೌಸ್‌ ಮಾನಿಟರಿಂಗ್‌ ಸಿಸ್ಟಂ’ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಶಿವಮೊಗ್ಗ ಜಿಲ್ಲಾ ಪೊಲೀಸ್‌ ಮುಂದಾಗಿದ್ದು, ಶೀಘ್ರವೇ ಜಿಲ್ಲೆಯಾದ್ಯಂತ ಈ ವ್ಯವಸ್ಥೆ ಅನುಷ್ಠಾನಗೊಳಿಸಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಈಗಾಗಲೇ ಮನೆಕಳ್ಳತನ ಪ್ರಕರಣಗಳ ನಿಯಂತ್ರಣಕ್ಕೆ ಹಲವಾರು ಸುಧಾರಣಾ ಕ್ರಮಗಳನ್ನು ಕೈಗೊಂಡಿರುವ ಜಿಲ್ಲಾಪೊಲೀಸರು, ಸಾರ್ವಜನಿಕರ ನಿರ್ಲಕ್ಷ್ಯದಿಂದಾಗಿ ಆಗುವಂತಹ ಮನೆಕಳ್ಳತನ ಮರುಕಳಿಸದಂತೆ ಕ್ರಮಕೈಗೊಳ್ಳಲು ಎಲ್‌ಎಚ್‌ಎಂಎಸ್‌ ವ್ಯವಸ್ಥೆ ತರಲು ನಿರ್ಧರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 6:30 pm, Fri, 1 May 26

Source link

‘ವಸುದೇವ ಕುಟುಂಬ’ ಧಾರಾವಾಹಿ ನಿರ್ಮಾಪಕರ ಮೇಲೆ ಉರಿದು ಬಿದ್ದ ನಟಿ ಹಂಸ – Kannada News | Actress Hamsa lambasted on Vasudeva Kutumba serial producer

ಬಿಗ್​​ಬಾಸ್ (Bigg Boss) ಮಾಜಿ ಸ್ಪರ್ಧಿ, ನಟಿ ಹಂಸ ‘ವಸುದೇವ ಕುಟುಂಬ’ ಧಾರಾವಾಹಿಯಲ್ಲಿ ನಟಿಸುತ್ತಿದ್ದು, ಇದೀಗ ಧಾರಾವಾಹಿ ನಿರ್ಮಾಪಕರ ಮೇಲೆ ಉರಿದು ಬಿದ್ದಿದ್ದಾರೆ. ಧಾರಾವಾಹಿಯ ನಿರ್ಮಾಪಕರು ತಮ್ಮ ಸಂಭಾವನೆ ಕೊಡದೆ ಸತಾಯಿಸಿದ್ದು, ಯೂನಿಟ್ ಅನ್ನು ಸಹ ಸರಿಯಾಗಿ ನೋಡಿಕೊಂಡಿಲ್ಲ ಎಂದು ಹಂಸ ವಾಗ್ದಾಳಿ ನಡೆಸಿದ್ದಾರೆ. ಇಂದು (ಮೇ 1) ಧಾರಾವಾಹಿ ನಿರ್ಮಾಪಕರು ಇದ್ದ ಸ್ಥಳಕ್ಕೇ ಹೋಗಿ ನಿರ್ಮಾಪಕರನ್ನು ತರಾಟೆಗೆ ತೆಗೆದುಕೊಂಡ ನಟಿ, ಬಳಿಕ ಟಿವಿ9 ಜೊತೆಗೆ ಮಾತನಾಡಿ, ನಿರ್ಮಾಪಕರ ವಿರುದ್ಧ ಬೆಂಕಿ ಉಗುಳಿದ್ದಾರೆ. ‘ನನ್ನ ಹಣ ಹೋದರೆ ಹೋಗಲಿ, ಈ ವ್ಯಕ್ತಿಯ ಮುಖವಾಡ ಬಯಲು ಮಾಡದೇ ಬಿಡೆನು’ ಎಂದು ಅಬ್ಬರಿಸಿದ್ದಾರೆ ನಟಿ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

‘ರಾಜ ಶಿವಾಜಿ’ ಸಿನಿಮಾದಲ್ಲಿ ಸಲ್ಮಾನ್ ಖಾನ್ ಅಬ್ಬರ: ಜೀವಾ ಮಹಾಲಾ ಪಾತ್ರ ಕಂಡು ಫ್ಯಾನ್ಸ್ ಫಿದಾ – Kannada News | Salman Khan cameo as Jiva Mahala in Raja Shivaji movie fans reaction

ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ (Salman Khan) ಮತ್ತೊಮ್ಮೆ ದೊಡ್ಡ ಪರದೆ ಮೇಲೆ ಮಿಂಚಿದ್ದಾರೆ. ರಿತೇಶ್ ದೇಶ್ಮುಖ್ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ‘ರಾಜ ಶಿವಾಜಿ’ (Raja Shivaji) ಬಿಡುಗಡೆ ಆಗಿದ್ದು, ಇದರಲ್ಲಿ ಸಲ್ಮಾನ್ ಖಾನ್ ಅವರ ಸರ್ಪ್ರೈಸ್ ಎಂಟ್ರಿ ಕಂಡು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಐತಿಹಾಸಿಕ ಕಥಾಹಂದರ ಇರುವ ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ಅವರು ಜೀವಾ ಮಹಾಲಾ ಎಂಬ ವೀರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಫೋಟೋ ಮತ್ತು ವಿಡಿಯೋಗಳು ಎಕ್ಸ್ (ಟ್ವಿಟರ್) ಹಾಗೂ ಇನ್ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿವೆ.

ಕೇಸರಿ ಪೇಟ, ಕುರ್ತಾ ಧರಿಸಿ, ಕೈಯಲ್ಲಿ ಮರಾಠಾ ಖಡ್ಗ ಹಿಡಿದು ಸಲ್ಮಾನ್ ಖಾನ್ ಸ್ಕ್ರೀನ್ ಮೇಲೆ ಬರುತ್ತಿದ್ದಂತೆಯೇ ಚಿತ್ರಮಂದಿರಗಳಲ್ಲಿ ಶಿಳ್ಳೆ-ಚಪ್ಪಾಳೆಗಳ ಸುರಿಮಳೆಯಾಗಿದೆ. ಸಲ್ಮಾನ್ ಅವರ ಈ ಲುಕ್ ಸಿನಿಮಾದ ಹೈಲೈಟ್ ಎನ್ನಲಾಗುತ್ತಿದೆ. ‘ಇಡೀ ಸಿನಿಮಾ ಒಂದು ಕಡೆಯಾದರೆ, ಸಲ್ಮಾನ್ ಖಾನ್ ಅವರ ಎಂಟ್ರಿಯೇ ಒಂದು ಕಡೆ’ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಸಲ್ಮಾನ್ ಅವರ ಈ ಲುಕ್ ನೋಡಿ ಅವರ ಹಳೆಯ ‘ವೀರ್’ ಸಿನಿಮಾವನ್ನು ನೆನಪಿಸಿಕೊಳ್ಳುತ್ತಿದ್ದಾರೆ.

ಈ ವಿಶೇಷ ಪಾತ್ರ ಸಲ್ಮಾನ್ ಅವರಿಗೆ ಸಿಕ್ಕಿದ್ದರ ಹಿಂದೆ ಒಂದು ಕುತೂಹಲಕಾರಿ ಕಥೆಯಿದೆ. ನಿರ್ದೇಶಕ ರಿತೇಶ್ ದೇಶ್ಮುಖ್ ಇತ್ತೀಚೆಗೆ ಇದನ್ನು ಹಂಚಿಕೊಂಡಿದ್ದರು.

‘ಹೊಸ ವರ್ಷದ ಸಂಭ್ರಮಾಚರಣೆಯ ವೇಳೆ ಸಲ್ಮಾನ್ ಈ ಸಿನಿಮಾದ ಬಗ್ಗೆ ಕೇಳಿದರು. ಚಿತ್ರದಲ್ಲಿ ತಮಗೇನು ಪಾತ್ರವಿದೆ ಎಂದು ಪ್ರಶ್ನಿಸಿದರು. ನಾನು ಅವರಿಗೆ ಯಾವುದೇ ಪಾತ್ರ ಇನ್ನು ಯೋಚಿಸಿಲ್ಲ ಎಂದಾಗ, ‘ನನ್ನನ್ನು ಬಿಟ್ಟು ನೀನು ಈ ಸಿನಿಮಾ ಮಾಡಲು ಸಾಧ್ಯವಿಲ್ಲ, ನಾನೂ ಇದರಲ್ಲಿ ಇರಲೇಬೇಕು’ ಅಂತ ಸಲ್ಮಾನ್ ಪಟ್ಟು ಹಿಡಿದರು’ ಎಂದು ರಿತೇಶ್ ಸ್ಮರಿಸಿದ್ದಾರೆ. ಸಲ್ಮಾನ್ ಅವರ ಈ ಪ್ರೀತಿ ಮತ್ತು ಸಿನಿಮಾದ ಮೇಲಿರುವ ಗೌರವದಿಂದಾಗಿ ಅವರಿಗಾಗಿ ‘ಜೀವಾ ಮಹಾಲಾ’ ಪಾತ್ರವನ್ನು ಸೃಷ್ಟಿಸಲಾಯಿತು.

ಇದನ್ನೂ ಓದಿ: ಸಲ್ಮಾನ್ ಖಾನ್ ಹೊಸ ಸಿನಿಮಾಗೆ ಸಂಕಷ್ಟ: ಕಥೆ ಬದಲಾದರೂ ತಪ್ಪದ ‘ಮಾತೃಭೂಮಿ’ ವಿವಾದ

‘ಜಿಯೋ ಸ್ಟುಡಿಯೋಸ್’ ಮತ್ತು ‘ಮುಂಬೈ ಫಿಲ್ಮ್ ಕಂಪನಿ’ ಜೊತೆಯಾಗಿ ನಿರ್ಮಾಣದ ‘ರಾಜ ಶಿವಾಜಿ’ ಸಿನಿಮಾವು ಛತ್ರಪತಿ ಶಿವಾಜಿ ಮಹಾರಾಜರ ಆರಂಭಿಕ ಜೀವನ ಮತ್ತು ಸ್ವರಾಜ್ಯ ಸ್ಥಾಪನೆಯ ಹೋರಾಟದ ಮೇಲೆ ಬೆಳಕು ಚೆಲ್ಲುತ್ತದೆ. ರಿತೇಶ್ ದೇಶ್ಮುಖ್ ಅವರು ಶಿವಾಜಿ ಮಹಾರಾಜರ ಪಾತ್ರದಲ್ಲಿ ನಟಿಸಿದ್ದು, ಸಂಜಯ್ ದತ್, ಅಭಿಷೇಕ್ ಬಚ್ಚನ್, ವಿದ್ಯಾ ಬಾಲನ್, ಭಾಗ್ಯಶ್ರೀ, ಮಹೇಶ್ ಮಂಜ್ರೇಕರ್ ಮತ್ತು ಬೋಮನ್ ಇರಾನಿ ಅವರಂತಹ ದೊಡ್ಡ ತಾರಾಗಣವೇ ಈ ಚಿತ್ರದಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕೋಲಾರ ಹಾಲು ಒಕ್ಕೂಟದಲ್ಲಿ ಕೋಟ್ಯಂತರ ರೂ ಹಗರಣ ಆರೋಪ: ರಾಜಕೀಯ ಕೆಸರೆರೆಚಾಟಕ್ಕೆ ವೇದಿಕೆಯಾದ ರೈತರ ಸಂಸ್ಥೆ – Kannada News | KOMUL Faces Multi Crore Scam Allegations; Farmers Body Turns Political Battleground

ಕೋಲಾರ, ಮೇ 01: ರೈತರ ಶ್ರಮದಿಂದ ಕಟ್ಟಿಬೆಳೆಸಿರುವ ಕೋಲಾರ ಹಾಲು ಒಕ್ಕೂಟವು (Kolar Milk Union) ಇಂದು ಕೆಲ ರಾಜಕೀಯ ನಾಯಕರ ಹಗರಣಗಳ (Scam) ಕೇಂದ್ರಬಿಂದುವಾಗಿ ಮಾರ್ಪಟ್ಟಿದೆ. ಒಕ್ಕೂಟದಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ಕೇಂದ್ರ ಮತ್ತು ರಾಜ್ಯದ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿದ್ದು, ಈ ಹಗರಣವೇ ಇದೀಗ ಸ್ಥಳೀಯ ರಾಜಕೀಯ ಕೆಸರೆರೆಚಾಟಕ್ಕೂ ಕಾರಣವಾಗಿದೆ.

ಕೋಲಾರ ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಇನ್ನು ಎರಡು ವರ್ಷ ಬಾಕಿ ಇರುವಾಗಲೇ ಮಾಲೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಹಾಲಿ ಶಾಸಕ ಕೆ.ವೈ. ನಂಜೇಗೌಡ ಮತ್ತು ಬಿಜೆಪಿ ಮಾಜಿ ಶಾಸಕ ಕೆ.ಎಸ್. ಮಂಜುನಾಥಗೌಡ ಅವರ ನಡುವಿನ ವಾಕ್ಸಮರ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆಸಿದ್ದ ಮಾಜಿ ಶಾಸಕ ಮಂಜುನಾಥಗೌಡ, ಶಾಸಕ ನಂಜೇಗೌಡ ಒಕ್ಕೂಟದ ಅಧ್ಯಕ್ಷರಾದ ನಂತರ ಸುಮಾರು 300 ಕೋಟಿ ರೂಪಾಯಿಯಷ್ಟು ಹಗರಣ ನಡೆದಿದೆ ಎಂದು ಆರೋಪಿಸಿದ್ದರು.

ಇದನ್ನೂ ಓದಿ: ಕೋಲಾರದಲ್ಲಿ ಕಲಬೆರಕೆ ಹಾಲು: ವರದಿಯಲ್ಲಿ ಆಘಾತಕಾರಿ ಅಂಶ; ಬೆಚ್ಚಿಬಿದ್ದ ಜನ

ಅಲ್ಲದೆ, ನೇಮಕಾತಿ ಪ್ರಕ್ರಿಯೆ, ಸೋಲಾರ್ ಪ್ಲಾಂಟ್ ನಿರ್ಮಾಣ ಮತ್ತು ಎಂವಿಕೆ ಗೋಲ್ಡನ್ ಡೈರಿ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ದೂರಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ತನಿಖೆ ನಡೆಸಿದ್ದು, ಇದೀಗ ಲೋಕಾಯುಕ್ತ ಸಂಸ್ಥೆಯೂ ತನಿಖೆ ಕೈಗೊಂಡಿದೆ ಎಂದು ಅವರು ತಿಳಿಸಿದ್ದರು.

ಆರೋಪ ಸಾಬೀತಾದರೆ ರಾಜಕೀಯದಿಂದಲೇ ನಿವೃತ್ತಿ ಎಂದ ಶಾಸಕ ಕೆ.ವೈ. ನಂಜೇಗೌಡ

ಈ ಆರೋಪಗಳಿಗೆ ತಿರುಗೇಟು ನೀಡಿರುವ ಶಾಸಕ ಕೆ.ವೈ. ನಂಜೇಗೌಡ, ತಮ್ಮ ಅವಧಿಯಲ್ಲಿ ಯಾವುದೇ ಹಗರಣ ನಡೆದಿಲ್ಲ, ಬದಲಾಗಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆದಿವೆ ಎಂದು ಸ್ಪಷ್ಟಪಡಿಸಿದ್ದಾರೆ. ಆ ಮೂಲಕ ಆರೋಪಗಳನ್ನು ತಳ್ಳಿಹಾಕಿರುವ ಅವರು, ತಮ್ಮ ಮೇಲಿರುವ ಹಗರಣದ ಆರೋಪ ಸಾಬೀತಾದರೆ ರಾಜಕೀಯದಿಂದಲೇ ನಿವೃತ್ತಿ ಹೊಂದುವುದಾಗಿ ಸವಾಲು ಹಾಕಿದ್ದಾರೆ.

300 ಕೋಟಿ ಅಲ್ಲ, ಅದು 512 ಕೋಟಿ ರೂ ಹಗರಣ ಎಂದ ದೂರುದಾರ 

ಈ ನಡುವೆ, ಪ್ರಕರಣದ ದೂರುದಾರ ಗೂಳಿಗಾನಹಳ್ಳಿ ನಾಗರಾಜ್ ಪತ್ರಿಕಾಗೋಷ್ಠಿ ನಡೆಸಿ ಹೊಸ ಬಾಂಬ್ ಸಿಡಿಸಿದ್ದಾರೆ. ಕೋಲಾರ ಹಾಲು ಒಕ್ಕೂಟದಲ್ಲಿ ನಡೆದಿರುವ ಹಗರಣದ ಮೊತ್ತ 300 ಕೋಟಿ ಅಲ್ಲ, ಅದು 512 ಕೋಟಿ ರೂ ಎಂದು ಆರೋಪಿಸಿದ್ದಾರೆ. ನೇಮಕಾತಿ ಪ್ರಕ್ರಿಯೆಯಲ್ಲಿಯೇ ಅಧ್ಯಕ್ಷರು 9 ಕೋಟಿ ರೂ ಹಣ ಪಡೆದಿದ್ದಾರೆ ಮತ್ತು ಪರೀಕ್ಷೆಯಲ್ಲಿ ಓಎಂಆರ್ (OMR) ಶೀಟ್‌ಗಳನ್ನು ಅದಲುಬದಲು ಮಾಡುವ ಮೂಲಕ ಅಕ್ರಮ ಎಸಗಲಾಗಿದೆ ಎಂದು ಅವರು ದೂರಿದ್ದಾರೆ.

ಒಟ್ಟು 75 ಹುದ್ದೆಗಳ ಪೈಕಿ 27 ಹುದ್ದೆಗಳಲ್ಲಿ ಅಕ್ರಮ ನಡೆದಿದ್ದು, ಪರೀಕ್ಷಾರ್ಥಿಗಳ ಎರಡೆರಡು ಓಎಂಆರ್ ಶೀಟ್‌ಗಳು ಪತ್ತೆಯಾಗಿವೆ ಎಂಬ ಅಂಶ ಲೋಕಾಯುಕ್ತ ತನಿಖೆಯಿಂದ ಬಹಿರಂಗವಾಗಿದೆ. ಜೊತೆಗೆ, ಒಕ್ಕೂಟದ ನಿರ್ದೇಶಕರುಗಳು ರೈತರ ಹಣದಲ್ಲಿ ಧಾರ್ಮಿಕ ದತ್ತಿ ನಿಧಿಯ ಮೂಲಕ ತಲಾ ಒಂದು ಚಿನ್ನದ ನಾಣ್ಯವನ್ನು ಪಡೆದುಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಹೀಗೆ ಹಾಲು ಒಕ್ಕೂಟದಲ್ಲಿ ನಂಜೇಗೌಡ ಅಧ್ಯಕ್ಷರಾದ ನಂತರ ಹಲವು ಹಗರಣಗಳು ನಡೆದಿವೆ. ಸದ್ಯದಲ್ಲೇ ಲೋಕಾಯುಕ್ತ ಹಾಗೂ ಇ.ಡಿ ತನಿಖೆಯ ವರದಿಗಳು ಬಂದ ಬಳಿಕ ಸತ್ಯಾಸತ್ಯಗಳು ಹೊರಬೀಳಲಿವೆ ಎಂದರು.

ಇದನ್ನೂ ಓದಿ: ನಂದಿನಿ ಸೇರಿ ಹಲವು ಕಂಪನಿಗಳ ನಕಲಿ ಹಾಲು ತಯಾರಿಕಾ ಜಾಲ ಪತ್ತೆ

ಒಟ್ಟಾರೆ ರೈತರ ಶ್ರಮದಲ್ಲಿ ಕಟ್ಟಲಾಗಿರುವ ಹಾಲು ಒಕ್ಕೂಟದಲ್ಲಿ ರಾಜಕೀಯ ನಾಯಕರು ತಮ್ಮ ತಮ್ಮ ಬೇಳೆ ಬೇಯಿಸಿಕೊಳ್ಳಲು ಕೋಟ್ಯಂತರ ರೂ ಹಗರಣದ ಆರೋಪ-ಪ್ರತ್ಯಾರೋಪ ಮಾಡುತ್ತಿದ್ದು, ತನಿಖಾ ಸಂಸ್ಥೆಗಳ ವರದಿ ಹೊರಬಂದ ನಂತರವಷ್ಟೇ ಸತ್ಯಾಸತ್ಯತೆಗಳು ಹೊರಬೀಳಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IPL 2026: ಮುಂಬೈ ತಂಡದ ಸ್ಟಾರ್ ಆಟಗಾರ ತಿಂಗಳ ಕಾಲ ಕ್ರಿಕೆಟ್​ನಿಂದ ದೂರ – Kannada News | Mitchell Santner IPL Injury: Out for Month, Major Blow to New Zealand Cricket

ಐಪಿಎಲ್ (IPL) ಪಂದ್ಯದ ವೇಳೆ ಫಿಲ್ಡಿಂಗ್ ಮಾಡುವಾಗ ನೆಲಕ್ಕೆ ಬಿದ್ದು ಭುಜಕ್ಕೆ ಗಾಯ ಮಾಡಿಕೊಂಡಿದ್ದ ಮುಂಬೈ ಇಂಡಿಯನ್ಸ್ (Mumbai Indians) ತಂಡದ ಸ್ಟಾರ್ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ (Mitchell Santner) ಐಪಿಎಲ್​ನಿಂದಲೇ ಹೊರಬಿದ್ದಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ತವರಿನ ಪಂದ್ಯದಲ್ಲಿ ಬೌಂಡರಿಯ ಬಳಿ ಕ್ಯಾಚ್ ಹಿಡಿಯಲು ಪ್ರಯತ್ನಿಸುವಾಗ ಸ್ಯಾಂಟ್ನರ್ ಅವರ ಭುಜಕ್ಕೆ ಗಾಯವಾಗಿತ್ತು. ಇದೀಗ ಅವರ ಗಾಯದ ಬಗ್ಗೆ ಪ್ರಮುಖ ಮಾಹಿತಿ ಹೊರಬಿದ್ದಿದ್ದು, ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯಲ್ಲಿ ಕಳವಳವನ್ನು ಹುಟ್ಟುಹಾಕಿದೆ. ವಾಸ್ತವವಾಗಿ ಸ್ಯಾಂಟ್ನರ್ ಅವರ ಗಾಯವು ತುಂಬಾ ಗಂಭೀರವಾಗಿದ್ದು, ಅವರನ್ನು ಕ್ರಿಕೆಟ್​ನಿಂದ ತಿಂಗಳ ಕಾಲ ದೂರವಿಡಲಿದೆ.

ಮಿಚೆಲ್ ಸ್ಯಾಂಟ್ನರ್​ಗೆ ಗಂಭೀರ ಗಾಯ

ಗಾಯದಿಂದ ಬಳಲುತ್ತಿರುವ ನ್ಯೂಜಿಲೆಂಡ್ ವೈಟ್-ಬಾಲ್ ನಾಯಕ ಮಿಚೆಲ್ ಸ್ಯಾಂಟ್ನರ್ ಕನಿಷ್ಠ ಒಂದು ತಿಂಗಳ ಕಾಲ ಆಟದಿಂದ ಹೊರಗುಳಿಯಲಿದ್ದಾರೆ. ಗ್ರೇಡ್ 3 ಎಸಿಎಲ್ ಭುಜದ ಗಾಯದಿಂದ ಬಳಲುತ್ತಿರುವ ಸ್ಯಾಂಟ್ನರ್, ಈಗಾಗಲೇ ನ್ಯೂಜಿಲೆಂಡ್‌ಗೆ ಮರಳಿದ್ದು, ಸ್ಕ್ಯಾನ್ನಿಂಗ್​ ಒಳಗಾಗಿದ್ದಾರೆ. ಸ್ಕ್ಯಾನ್ನಿಂಗ್ ವರದಿಯ ಪ್ರಕಾರ ಸ್ಯಾಂಟ್ನರ್​ಗೆ ವೈದ್ಯರು ಕನಿಷ್ಠ ಒಂದು ತಿಂಗಳ ವಿಶ್ರಾಂತಿ ಮತ್ತು ರಿಹ್ಯಾಬ್​ಗೆ ಒಳಗಾಗುವಂತೆ ಸೂಚಿಸಿದ್ದಾರೆ, ಇದರಿಂದಾಗಿ ಅವರು ಮುಂಬರುವ ದಿನಗಳಲ್ಲಿ ಹಲವಾರು ಪ್ರಮುಖ ಪಂದ್ಯಗಳಿಂದ ಹೊರಗುಳಿಯಬೇಕಾಗಬಹುದು.

ಸ್ಯಾಂಟ್ನರ್ ಎಷ್ಟು ಪಂದ್ಯಗಳಿಗೆ ಅಲಭ್ಯ?

ಈ ಗಾಯದಿಂದಾಗಿ ಸ್ಯಾಂಟ್ನರ್ ಮೇ ತಿಂಗಳ ಅಂತ್ಯದಲ್ಲಿ ನಡೆಯಲಿರುವ ಐರ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಮತ್ತು ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ಎರಡನೇ ಮತ್ತು ಮೂರನೇ ಟೆಸ್ಟ್ ಪಂದ್ಯಗಳಿಗೆ ಅವರ ಲಭ್ಯತೆಯನ್ನು ನಂತರ ನಿರ್ಧರಿಸಲಾಗುತ್ತದೆ. ಸಮಯಕ್ಕೆ ಸರಿಯಾಗಿ ಸ್ಯಾಂಟ್ನರ್ ಫಿಟ್ ಆಗದಿದ್ದರೆ, ಅವರು ಇಂಗ್ಲೆಂಡ್ ಸರಣಿಯನ್ನು ಸಹ ತಪ್ಪಿಸಿಕೊಳ್ಳಬಹುದು.
ಟಿ20 ವಿಶ್ವಕಪ್ ನಂತರ ವೈಯಕ್ತಿಕ ಕಾರಣಗಳಿಗಾಗಿ ಕ್ರಿಕೆಟ್​ನಿಂದ ದೂರ ಉಳಿದಿದ್ದ34 ವರ್ಷದ ಸ್ಯಾಂಟ್ನರ್ ಸಾಕಷ್ಟು ತಡವಾಗಿ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡಿದ್ದರು. ಮುಂಬೈ ಪರ ನಾಲ್ಕು ಪಂದ್ಯಗಳನ್ನು ಆಡಿದ್ದ ಸ್ಯಾಂಟ್ನರ್ ಐದು ವಿಕೆಟ್‌ಗಳನ್ನು ಪಡೆದು 26 ರನ್‌ ಕೂಡ ಕಲೆಹಾಕಿದ್ದರು.

18 ಎಸೆತಗಳಲ್ಲಿ 10 ಬೌಂಡರಿ, ಸಿಕ್ಸರ್‌..! ವಿಂಡೀಸ್ ವಿರುದ್ಧ ಸ್ಯಾಂಟ್ನರ್ ಏಕಾಂಗಿ ಹೋರಾಟ ವ್ಯರ್ಥ

ಸ್ಯಾಂಟ್ನರ್ ಗಾಯವು ನ್ಯೂಜಿಲೆಂಡ್ ಕ್ರಿಕೆಟ್‌ಗೆ ದೊಡ್ಡ ಆಘಾತ ನೀಡಿದೆ. ಏಕೆಂದರೆ ಅವರು ವೈಟ್-ಬಾಲ್ ಸ್ವರೂಪದಲ್ಲಿ ಪ್ರಮುಖ ಆಲ್‌ರೌಂಡರ್ ಮತ್ತು ನಾಯಕರಾಗಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ತಂಡವು ಈಗ ತನ್ನ ಯೋಜನೆಯನ್ನು ಬದಲಾಯಿಸಬೇಕಾಗುತ್ತದೆ. ಇತ್ತೀಚೆಗೆ, ಸ್ಯಾಂಟ್ನರ್ ನಾಯಕತ್ವದಲ್ಲಿ ನ್ಯೂಜಿಲೆಂಡ್ ಟಿ20 ವಿಶ್ವಕಪ್‌ನ ಫೈನಲ್ ತಲುಪಿತ್ತು. ಇದೀಗ ಗಾಯದಿಂದ ಬಳಲುತ್ತಿರುವ ಸ್ಯಾಂಟ್ನರ್ ಜುಲೈನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಏಕದಿನ ಮತ್ತು ಟಿ20 ಸರಣಿಗೆ ಲಭ್ಯವಾಗುವ ನಿರೀಕ್ಷೆಯಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೊಜ್ತಬಾ ಖಮೇನಿ ವಿರುದ್ಧ ಶತ್ರುಗಳು ವದಂತಿ ಹರಡುತ್ತಿದ್ದಾರೆ; ಇರಾನ್​ನಿಂದ ಸುಪ್ರೀಂ ನಾಯಕನ ಆರೋಗ್ಯದ ಬಗ್ಗೆ ಸ್ಪಷ್ಟನೆ – Kannada News | Enemies spreading rumours Mojtaba Khamenei is perfectly healthy Iran Supreme Leaders key aide clarifies

ಟೆಹ್ರಾನ್, ಮೇ 1: ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಅವರ ಆರೋಗ್ಯ ತೀರಾ ಹದಗೆಟ್ಟಿದೆ ಎಂದು ಅಮೆರಿಕ ಆಗಾಗ ಆರೋಪ ಮಾಡುತ್ತಲೇ ಇತ್ತು. ಇದಕ್ಕೆ ಇರಾನ್ ಪ್ರತಿಕ್ರಿಯೆ ನೀಡಿದೆ. ಇರಾನ್​ನ (Iran) ಸುಪ್ರೀಂ ನಾಯಕ ಮೊಜ್ತಬಾ ಖಮೇನಿ ಅವರ ಆಪ್ತ ಅಯತೊಲ್ಲಾ ಮೊಹ್ಸೆನ್ ಕೋಮಿ ಇಂದು ಅಮೆರಿಕದ ಹೇಳಿಕೆಗಳನ್ನು ತಳ್ಳಿಹಾಕಿದ್ದಾರೆ. ಸುಪ್ರೀಂ ನಾಯಕ ಪರಿಪೂರ್ಣವಾಗಿ ಆರೋಗ್ಯವಾಗಿದ್ದಾರೆ, ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶತ್ರು ದೇಶಗಳು ವದಂತಿಗಳನ್ನು ಹರಡಲು ಇಂತಹ ತಂತ್ರಗಳನ್ನು ಬಳಸುತ್ತದೆ ಎಂದು ಕೋಮಿ ಹೇಳಿದ್ದಾರೆ.

ಮೊಜ್ತಾಬಾ ಖಮೇನಿ ಅಮೆರಿಕದಿಂದ ಬಾಂಬ್ ದಾಳಿಗೊಳಗಾದ ಕಟ್ಟಡದಲ್ಲಿದ್ದರು. ಆದರೆ ಅವರನ್ನು ರಕ್ಷಿಸಲಾಯಿತು ಎಂದು ಕೋಮಿ ದೃಢಪಡಿಸಿದ್ದಾರೆ. “ಅವರು ಬಾಂಬ್ ದಾಳಿಗೊಳಗಾದ ಕಟ್ಟಡದಲ್ಲೇ ಇದ್ದರು ಎಂಬುದು ನಿಜ. ಅಲ್ಲಿದ್ದ ಇತರರು ಹುತಾತ್ಮರಾದರು. ಸ್ಫೋಟಕ್ಕೆ ಕೆಲವೇ ನಿಮಿಷಗಳ ಮೊದಲು ದೇವರ ಇಚ್ಛೆಯಿಂದ ಅವರು ಅಂಗಳಕ್ಕೆ ಹೋಗಿದ್ದರು. ದೇವರು ಅವರನ್ನು ರಕ್ಷಿಸಬೇಕೆಂದು ಬಯಸಿದ್ದರು” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಇರಾನ್​ನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ರಷ್ಯಾದಲ್ಲಿದ್ದಾರಾ? ರಾಯಭಾರಿ ಹೇಳಿದ್ದೇನು?

“ಸದ್ಯಕ್ಕೆ ಅವರು ಪರಿಪೂರ್ಣವಾಗಿ ಆರೋಗ್ಯವಾಗಿದ್ದಾರೆ ಮತ್ತು ಅವರೇ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ, ವಿವಿಧ ಪರಿಸ್ಥಿತಿಗಳಲ್ಲಿ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದರ ಕುರಿತು ಅವರು ನಿರ್ದಿಷ್ಟ ಸೂಚನೆಗಳನ್ನು ಸಹ ನೀಡಿದ್ದಾರೆ. ಅವರು ಪರಿಸ್ಥಿತಿಯ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದ್ದಾರೆ” ಎಂದು ಕೋಮಿ ಹೇಳಿದ್ದಾರೆ ಎಂದು ಫಾರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Video: ಶಾಲಾ ಬಸ್‌ನಿಂದ ಇಳಿದು ರಸ್ತೆ ದಾಟುತ್ತಿದ್ದ ಮಗುವಿಗೆ ಬೈಕ್ ಡಿಕ್ಕಿ; ಭೀಕರ ದೃಶ್ಯ ಸಿಸಿಟಿಯಲ್ಲಿ ಸೆರೆ – Kannada News | Hoshiarpur School Bus Accident: Child Safety Alert, Road Crossing Dangers

ಪಂಜಾಬ್‌ನ ಹೋಶಿಯಾರ್‌ಪುರದ ಬಳಿ ಶಾಲಾ ಬಸ್ಸಿನಿಂದ ಇಳಿದು ರಸ್ತೆ ದಾಟುತ್ತಿದ್ದ ಮಗುವಿಗೆ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದ ಭೀಕರ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಶಾಲಾ ಬಸ್ ಮಗುವಿನ ಮನೆಯ ಸಮೀಪವೇ ನಿಲ್ಲಿಸಿದ್ದರೂ ಸಹ, ಮಗು ಬಸ್ಸಿನ ಹಿಂದಿನಿಂದ ರಸ್ತೆ ದಾಟಲು ಪ್ರಯತ್ನಿಸಿದಾಗ ವೇಗವಾಗಿ ಬಂದ ಬೈಕ್ ಬಲವಾಗಿ ಡಿಕ್ಕಿ ಹೊಡೆದಿದ್ದು, ಅಪಘಾತದ ತೀವ್ರತೆಗೆ ಮಗು ಗಂಭೀರವಾಗಿ ಗಾಯಗೊಂಡಿದೆ. ಸದ್ಯ ಮಗುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಘಟನೆಯು ಶಾಲಾ ವಾಹನ ಚಾಲಕರು, ಸಹಾಯಕರು ಮತ್ತು ಪೋಷಕರು ರಸ್ತೆ ಸುರಕ್ಷತೆಯ ಬಗ್ಗೆ ಮಕ್ಕಳಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕಾದ ಮತ್ತು ರಸ್ತೆ ದಾಟುವಾಗ ಅತೀವ ಎಚ್ಚರಿಕೆ ವಹಿಸಬೇಕಾದ ಅಗತ್ಯವನ್ನು ನೆನಪಿಸಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮಕ್ಕಳಿಗೆ ಮಾತು ತಡವಾಗಿ ಬರುವುದಕ್ಕೆ ಸ್ಕ್ರೀನ್ ಟೈಮ್ ಕಾರಣವೇ? ಸಂಶೋಧನೆಯಿಂದ ಆಘಾತಕಾರಿ ಅಂಶ ಬಹಿರಂಗ – Kannada News | Does Too Much Screen Time Cause Speech Delay? What PGI Research Says

ಇಂದಿನ ಡಿಜಿಟಲ್ ಯುಗದಲ್ಲಿ ಚಿಕ್ಕ ಮಕ್ಕಳ ಕೈಯಲ್ಲಿ ಮೊಬೈಲ್, ಟ್ಯಾಬ್ ಮತ್ತು ಲ್ಯಾಪ್‌ಟಾಪ್ ಎಲ್ಲವನ್ನೂ ನೋಡಬಹುದು. ಅವುಗಳಲ್ಲಿ ದೊಡ್ಡವರಿಗೆ ತಿಳಿಯದ ಎಷ್ಟೋ ವಿಷಯಗಳು ಮಕ್ಕಳಿಗೆ ತಿಳಿದಿರುತ್ತದೆ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಉಪಕರಣಗಳನ್ನು ಬಳಕೆ ಮಾಡುವುದು ಬಹಳ ಸಾಮಾನ್ಯವಾಗಿಬಿಟ್ಟಿವೆ. ಇನ್ನು ಕೆಲವು ಪೋಷಕರು ಮಕ್ಕಳನ್ನು ಜೊತೆಗೆ ಕೂರಿಸಿಕೊಂಡು ಮೊಬೈಲ್ ಬಳಸುತ್ತಾರೆ. ಇವೆಲ್ಲಾ ನೋಡುವುದಕ್ಕೆ ಬಹಳ ಸಾಮಾನ್ಯ ಎನಿಸಬಹುದು. ಆದರೆ ಇತ್ತೀಚಿನ ಸಂಶೋಧನೆಯೊಂದು ಈ ಈ ಅಚ್ಚರಿಯ ಹೇಳಿಕೆ ನೀಡಿದೆ. ಹೌದು, ಮಕ್ಕಳಲ್ಲಿ ಸ್ಕ್ರೀನ್ ಟೈಮ್ (Screen Time) ಅಗತ್ಯಕ್ಕಿಂತ ಹೆಚ್ಚಾಗಿದ್ದು ಈ ರೀತಿಯ ಅಭ್ಯಾಸವು ಮಕ್ಕಳ ಮಾತಿನ ಬೆಳವಣಿಗೆಗೆ ಹಾನಿ ಉಂಟುಮಾಡಬಹುದು ಎಂದಿದೆ. ಹಾಗಾದರೆ ಸ್ಕ್ರೀನ್ ಟೈಮ್ ಮತ್ತು ಮಕ್ಕಳಿಗೆ ಮಾತು ಬರುವುದಕ್ಕೆ ತಡವಾಗುವುದಕ್ಕೂ ಕಾರಣವೇನು, ಪೋಷಕರು ಇದನ್ನು ತಡೆಯಲು ಏನು ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಚಂಡೀಗಢದ ಪೋಸ್ಟ್ ಗ್ರಾಜುವೇಟ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಶನ್ ಅಂಡ್ ರಿಸರ್ಚ್ (PGIMER) ನಡೆಸಿದ ಅಧ್ಯಯನದ ಪ್ರಕಾರ, ದಿನಕ್ಕೆ ಒಂದು ಗಂಟೆಗೂ ಹೆಚ್ಚು ಸ್ಕ್ರೀನ್ ಬಳಸುವ ಮಕ್ಕಳಲ್ಲಿ “ಸ್ಪೀಚ್ ಡಿಲೇ” ಅಂದರೆ ಮಾತನಾಡಲು ವಿಳಂಬವಾಗುವ ಸಾಧ್ಯತೆ ಹೆಚ್ಚಾಗಿದೆ. ಈ ಅಧ್ಯಯನವನ್ನು 18 ರಿಂದ 24 ತಿಂಗಳೊಳಗಿನ 140 ಆರೋಗ್ಯಕರ ಮಕ್ಕಳ ಮೇಲೆ ಈ ಸಂಶೋಧನೆಯನ್ನು ನಡೆಸಲಾಗಿದೆ.

18 ತಿಂಗಳಿಗಿಂತ ಮುಂಚೆ ಸ್ಕ್ರೀನ್ ಏಕೆ ಅಪಾಯಕಾರಿ?

ತಜ್ಞರ ಪ್ರಕಾರ, ಮಕ್ಕಳ ಮೊದಲ ಎರಡು ವರ್ಷಗಳು ಮೆದುಳಿನ ಬೆಳವಣಿಗೆಗೆ ಅತ್ಯಂತ ಮಹತ್ವದ್ದಾಗಿದೆ. ಈ ಅವಧಿಯಲ್ಲಿ ಮಕ್ಕಳು ಸುತ್ತಮುತ್ತಲಿನವರ ಜೊತೆ ಮಾತನಾಡುವ ಮೂಲಕ ಭಾಷೆಯನ್ನು ಕಲಿಯುತ್ತಾರೆ. ಆದರೆ ಸ್ಕ್ರೀನ್ ಬಳಕೆ ಹೆಚ್ಚಾದರೆ, ಮಕ್ಕಳಿಗೆ ನೇರ ಸಂವಹನದ ಅವಕಾಶ ಕಡಿಮೆಯಾಗುತ್ತದೆ. ಇದರ ಪರಿಣಾಮವಾಗಿ ಮಾತನಾಡುವ ಕೌಶಲ್ಯ ನಿಧಾನಗೊಳ್ಳಬಹುದು. ಅಧ್ಯಯನದಲ್ಲಿ ಕಂಡುಬಂದಂತೆ, 18 ತಿಂಗಳಿಗಿಂತ ಮುಂಚೆ ಸ್ಕ್ರೀನ್ ಬಳಕೆ ಮಾಡಿರುವಂತಹ ಮಕ್ಕಳಲ್ಲಿ ಮಾತಿನ ವಿಳಂಬ ಸಮಸ್ಯೆ ಹೆಚ್ಚು ಕಂಡುಬಂದಿದೆ. ಇದರಿಂದ, ಈ ವಯಸ್ಸಿನ ಮಕ್ಕಳಿಗೆ ಸ್ಕ್ರೀನ್ ಬಳಕೆಯನ್ನು ತಪ್ಪಿಸುವುದು ಅತ್ಯಂತ ಮುಖ್ಯವಾಗಿದೆ.

ಇದನ್ನೂ ಓದಿ: ಮಕ್ಕಳಲ್ಲಿ ಡಿಹೈಡ್ರೇಶನ್ ಆಗಿದೆ ಎಂದು ತಿಳಿದುಕೊಳ್ಳುವುದು ಹೇಗೆ? ಇದನ್ನು ತಡೆಗಟ್ಟಲು ಇಲ್ಲಿದೆ ಸಲಹೆ

ಎಷ್ಟು ಸ್ಕ್ರೀನ್ ಟೈಮ್ ಸುರಕ್ಷಿತ?

ತಜ್ಞರು ಹೇಳುವಂತೆ, 2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸ್ಕ್ರೀನ್ ಟೈಮ್ ಸಂಪೂರ್ಣವಾಗಿ ತಪ್ಪಿಸಬೇಕು. ಅಪರೂಪವಾಗಿ ವಿಡಿಯೋ ಕಾಲ್‌ಗಳಿಗೆ ಮಾತ್ರ ಬಳಸಬಹುದು. ಮಕ್ಕಳನ್ನು ಮನರಂಜಿಸಲು ಕಾರ್ಟೂನ್ ಅಥವಾ ವಿಡಿಯೋಗಳ ಮೇಲೆ ಅವಲಂಬಿಸುವುದು ದೀರ್ಘಕಾಲದಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ಹಾಗಾಗಿ ಪೋಷಕರು ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುವುದು, ಮಾತನಾಡುವುದು, ಕಥೆಗಳನ್ನು ಹೇಳುವುದು ಮತ್ತು ಆಟಗಳಲ್ಲಿ ತೊಡಗಿಸಿಕೊಳ್ಳುವುದು ಭಾಷಾ ಬೆಳವಣಿಗೆಗೆ ಸಹಾಯಕವಾಗುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ‌ ಮರು ಎಣಿಕೆ: ಹೇಗಿರಲಿದೆ ಎಣಿಕೆ ವಿಧಾನ? – Kannada News | Sringeri Assembly constituency postal ballot Votes recount on may 2 at Chikkamagaluru, here Is full details

ಚಿಕ್ಕಮಗಳೂರು, (ಮೇ 01): ಶೃಂಗೇರಿ ವಿಧಾನಸಭಾ ಕ್ಷೇತ್ರದ (sringeri assembly constituency) 2023ರ ಚುನಾವಣೆಗೆ ಸಂಬಂಧಿಸಿದ ಅಂಚೆ ಮತಗಳ (postal Ballot) ಮರು ಎಣಿಕೆ ಕಾರ್ಯಕ್ಕೆ ಹೈಕೋರ್ಟ್ ನಿರ್ದೇಶನದಂತೆ ಜಿಲ್ಲಾಡಳಿತವು ಸಂಪೂರ್ಣ ಸಿದ್ಧತೆಗಳನ್ನು ಕೈಗೊಂಡಿದೆ. ಮೇ 2ರಂದು ಬೆಳಗ್ಗೆ 9 ಗಂಟೆಗೆ ಅಭ್ಯರ್ಥಿಗಳು ಹಾಗೂ ಅವರ ಪ್ರತಿನಿಧಿಗಳ ಸಮ್ಮುಖದಲ್ಲಿ ಚಿಕ್ಕಮಗಳೂರಿನ ಐಡಿಎಸ್‌ಜಿ ಸರ್ಕಾರಿ ಕಾಲೇಜಿನ ಮೊದಲ ಮಹಡಿಯಲ್ಲಿ ಅಂಚೆ ಮತಪತ್ರಗಳ ಪರಿಶೀಲನೆ ಮತ್ತು ಮರು ಎಣಿಕೆ ಪ್ರಕ್ರಿಯೆ ನಡೆಯಲಿದ್ದು, ಇದಕ್ಕೆ ಜಿಲ್ಲಾಡಳಿತ ಸಹ ಸಕಲ ಸಿದ್ಧತೆ ಕೈಗೊಂಡಿದೆ.  ಒಟ್ಟು 1822 ಅಂಚೆ ಮತಗಳ ಎಣಿಕೆ ಕಾರ್ಯ ನಡೆಯಲಿದ್ದು, ಮೇ 2ರ ಬೆಳಗ್ಗೆ 6 ಗಂಟೆಯಿಂದ ಸಂಜೆ 5 ಗಂಟೆಯ ವರೆಗೂ ಮತ ಎಣಿಕೆ ಕೇಂದ್ರದ ಸುತ್ತ 200 ಮೀಟರ್​ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ನಿಷೇಧಾಜ್ಞೆ, ಮದ್ಯ ಮಾರಾಟ ಬ್ಯಾನ್

ಚಿಕ್ಕಮಗಳೂರಿನ ಐಡಿಎಸ್‌ಜಿ ಸರ್ಕಾರಿ ಕಾಲೇಜಿನ ಮೊದಲ ಮಹಡಿಯಲ್ಲಿ ಅಂಚೆ ಮತ ಮರು ಎಣಿಕೆ ನಡೆಯಲಿದ್ದು,  ಮತ ಎಣಿಕೆ ಹಿನ್ನೆಲೆಯಲ್ಲಿ ಮತ ಎಣಿಕಾ ಕೇಂದ್ರದ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಕೇಂದ್ರದ ಒಂದು ಕಿಲೋಮೀಟರ್ ವ್ಯಾಪ್ತಿಯೊಳಗೆ ಮದ್ಯ ಮಾರಾಟವನ್ನು ನಿಷೇಧಿಸಲಾಗಿದ್ದು, ಬೆಳಗ್ಗೆ 6ರಿಂದ ರಾತ್ರಿ 11ರವರೆಗೆ ಮದ್ಯ ಮಾರಾಟ ಸಂಪೂರ್ಣ ಬಂದ್ ಇರಲಿದೆ. ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದಕ್ಕೂ ನಿರ್ಬಂಧ ವಿಧಿಸಲಾಗಿದೆ. ಅನಧಿಕೃತ ವ್ಯಕ್ತಿಗಳ ಪ್ರವೇಶಕ್ಕೆ ಸಂಪೂರ್ಣ ತಡೆ ವಿಧಿಸಲಾಗಿದ್ದು, ವಿಜಯೋತ್ಸವ, ಘೋಷಣೆ ಕೂಗು ಹಾಗೂ ಧ್ವನಿವರ್ಧಕಗಳ ಬಳಕೆಗೂ ನಿಷೇಧ ಹೇರಲಾಗಿದೆ. ಸಾರ್ವಜನಿಕ ಶಾಂತಿ ಕಾಪಾಡಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸೈಬರ್ ಕಫೆ ಹಾಗೂ ಝರಾಕ್ಸ್ ಅಂಗಡಿಗಳನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಆದೇಶಿಸಲಾಗಿದೆ.

ಇದನ್ನೂ ಓದಿ: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಪತ್ರಗಳ ಮರುಪರಿಶೀಲನೆಗೆ ಹೈಕೋರ್ಟ್ ಆದೇಶ

ಭದ್ರತೆಗೆ ಕಟ್ಟುನಿಟ್ಟಿನ ಕ್ರಮ

ಅಂಚೆ ಮತ ಎಣಿಕೆ ಪ್ರಕ್ರಿಯೆಗಾಗಿ ಒಬ್ಬ ಚುನಾವಣಾಧಿಕಾರಿ, ಒಬ್ಬ ಸಹಾಯಕ ಚುನಾವಣಾಧಿಕಾರಿ, ಇಬ್ಬರು ಎಣಿಕೆ ಸಹಾಯಕರು, ಒಬ್ಬ ಮೇಲ್ವಿಚಾರಕ ಹಾಗೂ ಒಬ್ಬ ಮೈಕ್ರೋ ಅಬ್ಸರ್ವರ್ ಸೇರಿದಂತೆ ಆರು ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಜೊತೆಗೆ, ಸ್ಟ್ರಾಂಗ್ ರೂಂನಿಂದ ಮತಪತ್ರಗಳನ್ನು ಎಣಿಕಾ ಕೇಂದ್ರಕ್ಕೆ ಸಾಗಿಸುವುದು ಹಾಗೂ ಕೇಂದ್ರದ ಭದ್ರತೆಗಾಗಿ ಸುಮಾರು 500ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಅಂಚೆ ಮತಪತ್ರಗಳ ಪರಿಶೀಲನೆ ವಿಧಾನ

ಒಟ್ಟು 1822 ಅಂಚೆ ಮತಪತ್ರಗಳು ಬಂದಿದ್ದು, ಅವುಗಳಲ್ಲಿ 279 ಮತಪತ್ರಗಳನ್ನು ತಿರಸ್ಕರಿಸಲಾಗಿತ್ತು. ಉಳಿದ 1543 ಮತಪತ್ರಗಳನ್ನು ಅರ್ಹವೆಂದು ಪರಿಗಣಿಸಲಾಗಿತ್ತು. ಈಗ ಮರು ಪರಿಶೀಲನೆಯಲ್ಲಿ ತಿರಸ್ಕೃತ ಮತಗಳಲ್ಲಿ ಕೆಲವು ಮಾನ್ಯವಾಗಿರುವುದು ಕಂಡುಬಂದರೆ, ಅವುಗಳನ್ನು ಕೂಡ ಸೇರಿಸಿ ಮರು ಎಣಿಕೆ ನಡೆಸಲಾಗುತ್ತದೆ.

ಅಂಚೆ ಮತಪತ್ರಗಳ ಪರಿಶೀಲನೆ ವೇಳೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ. ಅಂಚೆ ಮತಪತ್ರದ ಲಕೋಟೆಯನ್ನು ಫಾರಂ 13(ಸಿ) ಎಂದು ಕರೆಯಲಾಗುತ್ತದೆ. ಅದರೊಳಗಿನ ಮತದಾರರ ದೃಢೀಕರಣ ಪತ್ರವನ್ನು ಫಾರಂ 13(ಬಿ) ಎಂದು, ಮತ್ತು ಮತಪತ್ರವನ್ನು ಫಾರಂ 13(ಎ) ಎಂದು ಗುರುತಿಸಲಾಗುತ್ತದೆ. ಫಾರಂ 13(ಬಿ) ಕಡ್ಡಾಯವಾಗಿದ್ದು, ಅದು ಇಲ್ಲದಿದ್ದರೆ ಮತಪತ್ರ ತಿರಸ್ಕೃತವಾಗುತ್ತದೆ. ಅದೇ ರೀತಿ, ಫಾರಂ 13(ಎ)ಯಲ್ಲಿ ಮತದಾರರ ಸಹಿ ಹಾಗೂ ಗಜೆಟೆಡ್ ಅಧಿಕಾರಿಯ ದೃಢೀಕರಣ ಇರಬೇಕು. ಇಲ್ಲದಿದ್ದರೆ ಮತಪತ್ರವನ್ನು ಅಮಾನ್ಯವೆಂದು ಘೋಷಿಸಲಾಗುತ್ತದೆ. ಜೊತೆಗೆ, ದೃಢೀಕರಣ ಪತ್ರದ ಕ್ರಮ ಸಂಖ್ಯೆ ಮತ್ತು ಮತಪತ್ರದ ಸಂಖ್ಯೆಗಳು ಹೊಂದಿಕೆಯಾಗಬೇಕು. ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳಿಗೆ ಮತ ಚಲಾಯಿಸಿದರೆ ಅಥವಾ ಸ್ಪಷ್ಟತೆ ಇಲ್ಲದಿದ್ದರೆ, ಅಂತಹ ಮತಪತ್ರಗಳನ್ನೂ ತಿರಸ್ಕರಿಸಲಾಗುತ್ತದೆ.

ಮರು ಎಣಿಕೆಗೆ ಮುನ್ನ ಜಿಲ್ಲಾಧಿಕಾರಿ ಎನ್‌.ಎಂ. ನಾಗರಾಜ್ ಅವರು ಸ್ಪರ್ಧಿಸಿದ್ದ ಅಭ್ಯರ್ಥಿಗಳೊಂದಿಗೆ ಸಭೆ ನಡೆಸಿ ಪ್ರಕ್ರಿಯೆಯ ಬಗ್ಗೆ ವಿವರಿಸಿದರು. ಸಭೆಯಲ್ಲಿ ವಿಜೇತ ಶಾಸಕ ರಾಜೇಗೌಡ, ಪರಾಜಿತ ಅಭ್ಯರ್ಥಿ ಡಿ.ಎನ್. ಜೀವರಾಜ್ ಹಾಗೂ ಜೆಡಿಎಸ್ ಅಭ್ಯರ್ಥಿ ಸುಧಾಕರ ಎಸ್. ಶೆಟ್ಟಿ ಸೇರಿದಂತೆ ಇತರರು ಭಾಗವಹಿಸಿದ್ದು, ಅಭ್ಯರ್ಥಿಗಳ ಎದೆಯಲ್ಲಿ ಢವ ಢವ ಶುರುವಾಗಿದೆ.

ಏನಿದು ಪ್ರಕರಣ?

ಶೃಂಗೇರಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿಒಟ್ಟು 1811 ಅಂಚೆ ಮತ ಚಲಾವಣೆಯಾಗಿದ್ದವು. ಇದರಲ್ಲಿ279 ಮತಗಳು ತಿರಸ್ಕೃತಗೊಂಡಿದ್ದವು. ಬಳಿಕ 201 ಮತದಿಂದ ಕಾಂಗ್ರೆಸ್‌ನ ಟಿ.ಡಿ.ರಾಜೇಗೌಡ ಅವರು ಗೆಲುವು ಸಾಧಿಸಿದ್ದರು. ಪರಾಜಿತಗೊಂಡ ಬಿಜೆಪಿ ಅಭ್ಯರ್ಥಿ ಜೀವರಾಜ್‌ ಅವರು ಮತ ಎಣಿಕೆ ಪ್ರಶ್ನಿಸಿ ಹೈಕೋರ್ಟ್‌ ಮೊರೆ ಹೋಗಿದ್ದರು.

2023 ರಲ್ಲಿ ನಡೆದ ಚುನಾವಣೆಯಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಚಲಾವಣೆಯಾಗಿದ್ದ 1,811 ಅಂಚೆ ಮತಗಳ ಪೈಕಿ ತಿರಸ್ಕೃತಗೊಂಡ 279 ಅಂಚೆ ಮತಗಳನ್ನು ಮರು ಪರಿಶೀಲಿಸಿ ನಂತರ ಎಲ್ಲಅಂಚೆ ಮತಗಳನ್ನು ಎಣಿಕೆ ಮಾಡಿ ಹೊಸದಾಗಿ ಫಲಿತಾಂಶ ಪ್ರಕಟಿಸಬೇಕು ಎಂದು ಹೈಕೋರ್ಟ್‌ ಏ.6ರಂದು ಆದೇಶಿಸಿತ್ತು.

ಶಾಸಕ ಟಿ.ಡಿ.ರಾಜೇಗೌಡ ಅವರ ಮನವಿ ಮೇರೆಗೆ ಆಕ್ಷೇಪಣೆ ಸಲ್ಲಿಸುವುದಕ್ಕೆ ಕೋರ್ಟ್‌ ಎರಡು ವಾರಗಳ ಕಾಲ ಅವಕಾಶ ನೀಡಿತ್ತು. ಆಕ್ಷೇಪಣೆ ಸಲ್ಲಿಸುವ ಅವಧಿ ಏಪ್ರಿಲ್‌ 20 ಕ್ಕೆ ಮುಕ್ತಾಯಗೊಂಡ ಹಿನ್ನೆಲೆಯಲ್ಲಿಇದೀಗ ಜಿಲ್ಲಾ ಚುನಾವಣಾಧಿಕಾರಿ ಮತ ಎಣಿಕೆ ಕಾರ್ಯಕ್ಕೆ ಕ್ರಮ ಕೈಗೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮೇ ತಿಂಗಳಿನಿಂದ ಈ ರಾಶಿಗೆ ಗುರುವಿನ ಅನುಗ್ರಹವಿದ್ದರು, ಶನಿ ನಿಮ್ಮನ್ನು ಬಿಡುವುದಿಲ್ಲ – Kannada News | Dhanu rashi may 2026 horoscope jupiter saturn blessings for career and love

ಆಧಿಪತ್ಯ ರಾಶಿ. ಜೊತೆಗೆ ಅವನ ಪೂರ್ಣ ದೃಷ್ಟಿ. ಶನಿಯ ಪೂರ್ಣ ದೃಷ್ಟಯೂ ಈ ರಾಶಿಗೆ ಕಾಣಿಸಲಿದೆ. ಉದ್ಯೋಗದ ಸವಾಲುಗಳನ್ನು ಎದುರಿಸುವ ಚಾಕಚಕ್ಯತೆ ಬರಲಿದೆ. ತೊಂದರೆಯಲ್ಲಿ ಸಿಕ್ಕಿದರೂ ಅದರಿಂದ ಹೊರಬರುವ ಯೋಜನೆಯನ್ನು ಕೂಡಲೇ ಹಾಕಿಕೊಳ್ಳಬಹುದು. ಮೇ ತಿಂಗಳಲ್ಲಿ ಅದೃಷ್ಟ ಅಧಿಕವಾಗಿರುವ ರಾಶಿ ಇದು. ಮೂಲ, ಪೂರ್ವಾಷಾಢ, ಉತ್ತರಾಷಾಢ ನಕ್ಷತ್ರಗಳಿದ್ದು, ಮೊದಲೆರಡು ನಕ್ಷತ್ರಕ್ಕೆ ಗ್ರಹಗಳ ಪರಿಣಾಮ ಹೆಚ್ಚಿರಲಿದೆ.

ಈ ತಿಂಗಳು ನಿಮ್ಮ ರಾಶ್ಯಾಧಿಪತಿ ಗುರು ಮಿಥುನ ರಾಶಿಯಲ್ಲಿ ಕೇಂದ್ರ ಸ್ಥಾನದಲ್ಲಿರುವುದು ನಿಮಗೆ ದೊಡ್ಡ ರಕ್ಷಾ ಕವಚವಿದ್ದಂತೆ. ನಾಲ್ಕನೇ ಮನೆಯಲ್ಲಿ (ಸುಖ ಸ್ಥಾನ) ಶನಿ, ಕುಜ ಮತ್ತು ಬುಧರ ಸಂಘಮವಿರುವುದು ಜೀವನದ ಭೌತಿಕ ಮತ್ತು ಮಾನಸಿಕ ಸ್ಥಿತಿಯ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ.

​ಕೃಷಿ:

ಭೂಮಿ ಮತ್ತು ತೋಟಗಾರಿಕೆ

​ವಿಶೇಷತೆ: ನಾಲ್ಕನೇ ಮನೆಯಲ್ಲಿ ಕುಜನು ಇರುವುದರಿಂದ ಭೂಮಿಯ ಫಲವತ್ತತೆ ಹೆಚ್ಚಿಸಲು ಇದು ಸಕಾಲ. ಅಡಿಕೆ, ತೆಂಗಿನಂತಹ ತೋಟಗಾರಿಕಾ ಬೆಳೆಗಳಿಗೆ ಹೊಸ ರೀತಿಯ ಸಾವಯವ ಗೊಬ್ಬರ ಅಥವಾ ತಂತ್ರಜ್ಞಾನ ಬಳಸಲು ಇದು ಉತ್ತಮ ಸಮಯ. ಶನಿಯ ಪ್ರಭಾವದಿಂದ ಕೆಲಸಗಾರರ ಕೊರತೆ ಎದುರಾಗಬಹುದು ಅಥವಾ ಕೆಲಸಗಳು ನಿಧಾನಗತಿಯಲ್ಲಿ ಸಾಗಬಹುದು. ತಾಳ್ಮೆಯಿಂದ ಕೆಲಸ ಮಾಡಿಸಿಕೊಳ್ಳುವುದು ಉತ್ತಮ.

​ಪ್ರೇಮ ಮತ್ತು ವಿವಾಹ:

ಸಂಬಂಧಗಳ ಬಲವರ್ಧನೆಯಾಗಲಿದೆ. ಸಪ್ತಮ ಸ್ಥಾನದ ಗುರು ನಿಮ್ಮ ವ್ಯಕ್ತಿತ್ವಕ್ಕೆ ಒಂದು ರೀತಿಯ ಆಕರ್ಷಣೆಯನ್ನು ನೀಡುತ್ತಾನೆ. ಸಂಗಾತಿಯ ಕಡೆಯಿಂದ ಆರ್ಥಿಕ ಸಹಾಯ ಅಥವಾ ಆಸ್ತಿ ಲಾಭವಾಗುವ ಯೋಗವಿದೆ.

ಸಂಗಾತಿಯೊಂದಿಗೆ ಧಾರ್ಮಿಕ ಪ್ರವಾಸ ಅಥವಾ ದೇವತಾ ಕಾರ್ಯಗಳಲ್ಲಿ ಭಾಗವಹಿಸುವಿರಿ. ಅವಿವಾಹಿತರಿಗೆ ಪ್ರತಿಷ್ಠಿತ ಕುಟುಂಬದಿಂದ ಸಂಬಂಧಗಳು ಬರುವುದು.

​ಸ್ವ-ಉದ್ಯೋಗ ಮತ್ತು ವ್ಯಾಪಾರ:

ಬುಧನು ಮೀನ ರಾಶಿಯಲ್ಲಿದ್ದರೂ ಕುಜನೊಂದಿಗೆ ಇರುವುದರಿಂದ ನಿಮ್ಮ ಆಲೋಚನಾ ಶಕ್ತಿ ತೀಕ್ಷ್ಣವಾಗಿರುತ್ತದೆ. ಹೊಸ ಉದ್ಯಮ ಆರಂಭಿಸಲು ಅಥವಾ ಇರುವ ಉದ್ಯಮವನ್ನು ವಿಸ್ತರಿಸಲು ಹಣಕಾಸಿನ ನೆರವು ಸುಲಭವಾಗಿ ದೊರೆಯಲಿದೆ. ಕಮಿಷನ್ ಏಜೆಂಟ್ಸ್, ಕಲಾತ್ಮಕ ವಸ್ತುಗಳ ಮಾರಾಟಗಾರರು ಮತ್ತು ಸಮಾಲೋಚಕರಿಗೆ ಈ ತಿಂಗಳು ಹೆಚ್ಚಿನ ಲಾಭಾಂಶ ಸಿಗಲಿದೆ.

​ಅಧಿಕಾರ ಮತ್ತು ಹೂಡಿಕೆ:

ದೀರ್ಘಕಾಲಿಕ ಲಾಭದಿಂದ ಸಂತೃಪ್ತಿ. ರಾಜಕೀಯ ಅಥವಾ ಸಂಘ-ಸಂಸ್ಥೆಗಳಲ್ಲಿ ಇರುವವರಿಗೆ ದೊಡ್ಡ ಜವಾಬ್ದಾರಿಗಳು ಸಿಗಲಿವೆ. ನಿಮ್ಮ ಮಾತು ಇತರರ ಮೇಲೆ ಪ್ರಭಾವ ಬೀರುತ್ತದೆ. ಮೇಷ ರಾಶಿಯ ರವಿ ನಿಮ್ಮನ್ನು ಸಾಹಸಮಯ ಹೂಡಿಕೆಗೆ ಪ್ರೇರೇಪಿಸಬಹುದು. ಆದರೆ, ಹೂಡಿಕೆ ಮಾಡುವಾಗ ಮನೆಯ ಹಿರಿಯರ ಅಥವಾ ತಜ್ಞರ ಸಲಹೆ ಪಡೆಯುವುದು ಅನಿವಾರ್ಯ. ಚಿನ್ನ ಅಥವಾ ಸ್ಥಿರ ಆಸ್ತಿಯ ಮೇಲೆ ಹೂಡಿಕೆ ಮಾಡುವುದು ಹೆಚ್ಚು ಸುರಕ್ಷಿತ.

ಸ್ಥಳ ಬದಲಾವಣೆ:

ಶನಿ ಮತ್ತು ಕುಜ ನಾಲ್ಕನೇ ಮನೆಯಲ್ಲಿರುವುದರಿಂದ ಅನಿವಾರ್ಯವಾಗಿ ಮನೆ ಬದಲಾಯಿಸುವ ಅಥವಾ ಕಛೇರಿಯನ್ನು ಸ್ಥಳಾಂತರಿಸುವ ಪರಿಸ್ಥಿತಿ ಬರಬಹುದು. ರಕ್ತದೊತ್ತಡ ಅಥವಾ ಎದೆಯ ಭಾಗದಲ್ಲಿ ಸಣ್ಣಪುಟ್ಟ ಕಿರಿಕಿರಿ ಉಂಟಾಗಬಹುದು. ಪ್ರತಿದಿನ ಪ್ರಾಣಾಯಾಮ ಮಾಡುವುದು ಅತ್ಯಗತ್ಯ.

​ಸಂಘರ್ಷ:

ಆಸ್ತಿ ವಿಚಾರವಾಗಿ ಹತ್ತಿರದ ಸಂಬಂಧಿಕರೊಂದಿಗೆ ಮನಸ್ತಾಪವಾಗುವ ಸಾಧ್ಯತೆಯಿದೆ. ಮಾತಿನ ಮೇಲೆ ನಿಗಾ ಇರಲಿ.

– ಲೋಹಿತ ಹೆಬ್ಬಾರ್

Source link