Category Archives: Blog

Your blog category

Video: ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಯತ್ನಿಸಿದ ಮಹಿಳೆ; ಕೂದಲೆಳೆ ಅಂತರದಲ್ಲಿ ತಪ್ಪಿದ ಭೀಕರ ದುರಂತ – Kannada News | Kalyan Train Accident: Mother, Child Rescued from Moving Train Gap; Safety Warning Viral

ಮಹಾರಾಷ್ಟ್ರದ ಕಲ್ಯಾಣ್ ರೈಲು ನಿಲ್ದಾಣದಲ್ಲಿ ಚಲಿಸುತ್ತಿರುವ ರೈಲಿನಿಂದ ಇಳಿಯುವಾಗ ಮಹಿಳೆಯೊಬ್ಬರು ಆಕಸ್ಮಿಕವಾಗಿ ಜಾರಿ ಪ್ಲಾಟ್‌ಫಾರ್ಮ್ ಮತ್ತು ರೈಲಿನ ನಡುವಿನ ಅಪಾಯಕಾರಿ ಅಂತರಕ್ಕೆ ಬಿದ್ದಾಗ ದೊಡ್ಡ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ತನ್ನ ಒಂದು ವರ್ಷದ ಮಗುವಿನೊಂದಿಗೆ ರೈಲಿನಿಂದ ಇಳಿಯಲು ಪ್ರಯತ್ನಿಸುತ್ತಿದ್ದಾಗ ಈ ಘಟನೆ ನಡೆದಿದ್ದು, ಸ್ಥಳದಲ್ಲಿದ್ದ ಪ್ರಯಾಣಿಕರು ಮತ್ತು ರೈಲ್ವೇ ಸಿಬ್ಬಂದಿ ಕ್ಷಣಾರ್ಧದಲ್ಲಿ ಕಾರ್ಯಪ್ರವೃತ್ತರಾಗಿ ತಾಯಿ ಮತ್ತು ಮಗುವನ್ನು ಸುರಕ್ಷಿತವಾಗಿ ಹೊರಕ್ಕೆ ಎಳೆಯುವ ಮೂಲಕ ಜೀವ ಉಳಿಸಿದ್ದಾರೆ. ಪ್ರಸ್ತುತ ಮಹಿಳೆ ಮತ್ತು ಮಗು ಇಬ್ಬರೂ ಸುರಕ್ಷಿತವಾಗಿದ್ದು, ಜನರ ಮಾನವೀಯತೆ ಮತ್ತು ಸಮಯಪ್ರಜ್ಞೆಯನ್ನು ಬಿಂಬಿಸುವ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವುದರ ಜೊತೆಗೆ ರೈಲು ನಿಲ್ದಾಣಗಳಲ್ಲಿ ಜಾಗರೂಕರಾಗಿರಬೇಕಾದ ಅಗತ್ಯವನ್ನು ಮತ್ತೊಮ್ಮೆ ನೆನಪಿಸಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕೇದಾರನಾಥ ವಿಐಪಿ ದರ್ಶನ ವಿವಾದ; ಬಿಕೆಟಿಸಿ ಮುಖ್ಯಸ್ಥರ ವಿರುದ್ಧ ದೇವಸ್ಥಾನದ ಅರ್ಚಕರ ಪ್ರತಿಭಟನೆ – Kannada News | Kedarnath VIP darshan row Priests protested and raised slogans against BKTC head

ಕೇದಾರನಾಥ, ಮೇ 1: ಕೇದಾರನಾಥ ದೇವಾಲಯದಲ್ಲಿ ಇಂದು ಪುರೋಹಿತರು ಮತ್ತು ಸ್ಥಳೀಯ ಭಕ್ತರು ವಿಐಪಿ ದರ್ಶನ ವ್ಯವಸ್ಥೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಭಾರೀ ವಿವಾದ ಭುಗಿಲೆದ್ದಿತು. ಬದರೀನಾಥ-ಕೇದಾರನಾಥ (Kedarnath) ದೇವಾಲಯ ಸಮಿತಿ (ಬಿಕೆಟಿಸಿ) ಮುಖ್ಯಸ್ಥ ಹೇಮಂತ್ ದ್ವಿವೇದಿ ಅವರ ವಿರುದ್ಧ ಪ್ರತಿಭಟನೆ ನಡೆಸಲಾಯಿತು. ಅವರ ವಿರುದ್ಧ ಘೋಷಣೆಗಳನ್ನು ಕೂಡ ಕೂಗಲಾಯಿತು.

ಅದಾನಿ ಗ್ರೂಪ್‌ಗೆ ಸಂಬಂಧಿಸಿದ ವ್ಯವಸ್ಥೆಗಳ ಅಡಿಯಲ್ಲಿ ಕಾರ್ಪೊರೇಟ್ ಗುಂಪುಗಳಿಗೆ ಕೇದಾರನಾಥ ದೇವಾಲಯಕ್ಕೆ ವಿಶೇಷ ವಿಐಪಿ ಪ್ರವೇಶವನ್ನು ನೀಡಲಾಗುತ್ತಿದೆ ಎಂಬ ವರದಿಗಳ ನಂತರ ಈ ವಿವಾದ ಪ್ರಾರಂಭವಾಯಿತು. ಈ ಪದ್ಧತಿಯಿಂದ ಗಂಟೆಗಟ್ಟಲೆ ಸಾಲಿನಲ್ಲಿ ಕಾಯುವ ಸಾಮಾನ್ಯ ಭಕ್ತರಿಗೆ ಅನ್ಯಾಯವಾಗಿದೆ ಎಂದು ಅರ್ಚಕರು ಆರೋಪಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

15 ವರ್ಷದ ಬಾಲಕನ ಪಾಲಿಗೆ ಯಮನಾದ ಖಾಸಗಿ ಬಸ್​​: ರಸ್ತೆಯಲ್ಲೇ ಪ್ರಾಣಬಿಟ್ಟ ವಿದ್ಯಾರ್ಥಿ – Kannada News | Bengaluru Bus Accident: 15 Year Old Dies on Hennur Bagaluru Road; White Topping Blamed

ಅಪಘಾತಕ್ಕೆ ಬಲಿಯಾದ ಬಾಲಕImage Credit source: Tv9 Kannada

ಬೆಂಗಳೂರು, ಮೇ 01: ಖಾಸಗಿ ಬಸ್ ಡಿಕ್ಕಿಯಾದ ಪರಿಣಾಮ ಬಾಲಕನೋರ್ವ ದಾರುಣವಾಗಿ ಮೃತಪಟ್ಟಿರುವ ದುರ್ಘಟನೆ ಹೆಣ್ಣೂರು-ಬಾಗಲೂರು ಮುಖ್ಯ ರಸ್ತೆಯಲ್ಲಿ ನಡೆದಿದೆ. 9ನೇ ತರಗತಿ ಪಾಸ್ ಆಗಿದ್ದ ವರುಣ್(15) ಮೃತ ದುರ್ದೈವಿ. ನೀರು ತರಲು ಹೋಗಿದ್ದ ಈತ ಮನೆಗೆ ವಾಪಸ್ ಬರುವಾಗ ಬಸ್​​ ಡಿಕ್ಕಿಯಾಗಿದ್ದು, ಘಟನಾ ಸ್ಥಳದಲ್ಲಿ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಘಟನೆ ಸಂಬಂಧ ಖಾಸಗಿ ಬಸ್​​ನ ಹೆಣ್ಣೂರು ಸಂಚಾರಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರಸ್ತೆ ತಡೆದು ಪ್ರತಿಭಟನೆ

ಇನ್ನು ಮನೆಮಗನ ದಾರುಣ ಸಾವಿಗೆ ಆಕ್ರೋಶ ವ್ಯಕ್ತಪಡಿಸಿರುವ ಮೃತ ಬಾಲಕನ ಕುಟುಂಬಸ್ಥರು ಘಟನೆ ಖಂಡಿಸಿ ಹೆಣ್ಣೂರು-ಬಾಗಲೂರು ಮುಖ್ಯ ರಸ್ತೆಯನ್ನು ತಡೆದು ಪ್ರತಿಭಟನೆ ನಡೆಸಿದ ಪ್ರಸಂಗವೂ ನಡೆದಿದೆ. ರಸ್ತೆ ತಡೆ ಹಿನ್ನೆಲೆ ಬಾಗಲೂರು ರಸ್ತೆಯಲ್ಲಿ ಕಿಲೋಮೀಟರ್​ವರೆಗೆ ಟ್ರಾಫಿಕ್​ಜಾಮ್ ಉಂಟಾಗಿ ವಾಹನ ಸವಾರರು ಪರದಾಟ ನಡೆಸಬೇಕಾಯಿತು. ಆ ಬೆನ್ನಲ್ಲೇ ಸ್ಥಳೀಯರು ಮತ್ತೆ ರೋಡ್ ಬಂದ್ ಮಾಡಿ ಪ್ರತಿಭಟನೆ ನಡೆಸುವ ಸಾಧ್ಯತೆ ಇರುವ ಮಾಹಿತಿ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಪೋಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ಹಾಸ್ಟೆಲ್​ನಲ್ಲಿ ವಿದ್ಯಾರ್ಥಿ ಆತ್ಮಹತ್ಯೆ; ಮಾದಕವಸ್ತು ಸೇವನೆ ಕೇಸ್​​​ನಲ್ಲಿ ಫಿಟ್ ಮಾಡಿಸಿದ ಆರೋಪ

ವೈಟ್​​ ಟ್ಯಾಪಿಂಗ್​​ ಕಾಮಗಾರಿಯೇ ಅಪಘಾತಕ್ಕೆ ಕಾರಣ?

ಇನ್ನು ಬಾಲಕ ವರುಣ್​​ ಸಾವಿಗೆ ವೈಟ್ ಟಾಪಿಂಗ್ ಕಾಮಗಾರಿಯೇ ಕಾರಣ ಎಂಬ ಆರೋಪ ಕೇಳಿಬಂದಿದೆ. ವೈಟ್ ಟಾಪಿಂಗ್ ಕಾಮಗಾರಿ ಬೇಕು ಅಂತ ಯಾರು ಕೇಳಿದ್ದು, ನಮಗೆ ಬೇಕಾಗಿರಲಿಲ್ಲ. ಚರಂಡಿ , ರೋಡ್ ಮಾಡಲು ಒಂದು ವರ್ಷ ಬೇಕು. ಅಲ್ಲದೆ ಕುಡಿಯುವ ನೀರಿನ ವ್ಯವಸ್ಥೆ ಊರಿನ ಒಳಗೆ ಇರಬೇಕು. ಅದನ್ನು ಬಿಟ್ಟು ಊರಿನ ಹೊರಗೆ ಮಾಡಲಾಗಿದೆ. ಇದರಿಂದ ಮಕ್ಕಳು ರೋಡ್ ಕ್ರಾಸ್ ಮಾಡಿಕೊಂಡು ನೀರು ತರಲು ಹೋಗ್ತಾರೆ. ಕಾಮಗಾರಿ ಹಿನ್ನೆಲೆ ಟ್ರಾಫಿಕ್​​ ಜಾಮ್​​ ಉಂಟಾಗುತ್ತಿರುವ ಕಾರಣ ವೇಗವಾಗಿ ತೆರಳಲು ವಾಹನಗಳ ಚಾಲರು ಯತ್ನಿಸುತ್ತಿರೋದೇ ಅಪಘಾತಗಳಿಗೆ ಕಾರಣವಾಗುತ್ತಿದೆ. ತಂದೆಗೆ ಆರೋಗ್ಯ ಸರಿಯಿಲ್ಲದ ಕಾರಣ ಮನೆಗೆ ನೀರು ತರಲು ಆರ್ಓ ಪ್ಲಾಂಟ್​​ಗೆ ವರುಣ್ ತೆರಳಿದ್ದ ವರುಣ್​​ ಕೂಡ ಈಗ ಮೃತಪಟ್ಟಿದ್ದಾನೆ ಎಂದು ಪೋಷಕರು ಮತ್ತು ಸ್ಥಳೀಯರು ಆರೋಪಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

IPL 2026: ಮುಂಬೈ ತಂಡದ ಸ್ಟಾರ್ ಆಟಗಾರ ತಿಂಗಳ ಕಾಲ ಕ್ರಿಕೆಟ್​ನಿಂದ ದೂರ – Kannada News | Mitchell santner ipl injury new zealand cricket impact recovery

ಐಪಿಎಲ್ (IPL) ಪಂದ್ಯದ ವೇಳೆ ಫಿಲ್ಡಿಂಗ್ ಮಾಡುವಾಗ ನೆಲಕ್ಕೆ ಬಿದ್ದು ಭುಜಕ್ಕೆ ಗಾಯ ಮಾಡಿಕೊಂಡಿದ್ದ ಮುಂಬೈ ಇಂಡಿಯನ್ಸ್ (Mumbai Indians) ತಂಡದ ಸ್ಟಾರ್ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ (Mitchell Santner) ಐಪಿಎಲ್​ನಿಂದಲೇ ಹೊರಬಿದ್ದಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ತವರಿನ ಪಂದ್ಯದಲ್ಲಿ ಬೌಂಡರಿಯ ಬಳಿ ಕ್ಯಾಚ್ ಹಿಡಿಯಲು ಪ್ರಯತ್ನಿಸುವಾಗ ಸ್ಯಾಂಟ್ನರ್ ಅವರ ಭುಜಕ್ಕೆ ಗಾಯವಾಗಿತ್ತು. ಇದೀಗ ಅವರ ಗಾಯದ ಬಗ್ಗೆ ಪ್ರಮುಖ ಮಾಹಿತಿ ಹೊರಬಿದ್ದಿದ್ದು, ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯಲ್ಲಿ ಕಳವಳವನ್ನು ಹುಟ್ಟುಹಾಕಿದೆ. ವಾಸ್ತವವಾಗಿ ಸ್ಯಾಂಟ್ನರ್ ಅವರ ಗಾಯವು ತುಂಬಾ ಗಂಭೀರವಾಗಿದ್ದು, ಅವರನ್ನು ಕ್ರಿಕೆಟ್​ನಿಂದ ತಿಂಗಳ ಕಾಲ ದೂರವಿಡಲಿದೆ.

ಮಿಚೆಲ್ ಸ್ಯಾಂಟ್ನರ್​ಗೆ ಗಂಭೀರ ಗಾಯ

ಗಾಯದಿಂದ ಬಳಲುತ್ತಿರುವ ನ್ಯೂಜಿಲೆಂಡ್ ವೈಟ್-ಬಾಲ್ ನಾಯಕ ಮಿಚೆಲ್ ಸ್ಯಾಂಟ್ನರ್ ಕನಿಷ್ಠ ಒಂದು ತಿಂಗಳ ಕಾಲ ಆಟದಿಂದ ಹೊರಗುಳಿಯಲಿದ್ದಾರೆ. ಗ್ರೇಡ್ 3 ಎಸಿಎಲ್ ಭುಜದ ಗಾಯದಿಂದ ಬಳಲುತ್ತಿರುವ ಸ್ಯಾಂಟ್ನರ್, ಈಗಾಗಲೇ ನ್ಯೂಜಿಲೆಂಡ್‌ಗೆ ಮರಳಿದ್ದು, ಸ್ಕ್ಯಾನ್ನಿಂಗ್​ ಒಳಗಾಗಿದ್ದಾರೆ. ಸ್ಕ್ಯಾನ್ನಿಂಗ್ ವರದಿಯ ಪ್ರಕಾರ ಸ್ಯಾಂಟ್ನರ್​ಗೆ ವೈದ್ಯರು ಕನಿಷ್ಠ ಒಂದು ತಿಂಗಳ ವಿಶ್ರಾಂತಿ ಮತ್ತು ರಿಹ್ಯಾಬ್​ಗೆ ಒಳಗಾಗುವಂತೆ ಸೂಚಿಸಿದ್ದಾರೆ, ಇದರಿಂದಾಗಿ ಅವರು ಮುಂಬರುವ ದಿನಗಳಲ್ಲಿ ಹಲವಾರು ಪ್ರಮುಖ ಪಂದ್ಯಗಳಿಂದ ಹೊರಗುಳಿಯಬೇಕಾಗಬಹುದು.

ಸ್ಯಾಂಟ್ನರ್ ಎಷ್ಟು ಪಂದ್ಯಗಳಿಗೆ ಅಲಭ್ಯ?

ಈ ಗಾಯದಿಂದಾಗಿ ಸ್ಯಾಂಟ್ನರ್ ಮೇ ತಿಂಗಳ ಅಂತ್ಯದಲ್ಲಿ ನಡೆಯಲಿರುವ ಐರ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಮತ್ತು ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ಎರಡನೇ ಮತ್ತು ಮೂರನೇ ಟೆಸ್ಟ್ ಪಂದ್ಯಗಳಿಗೆ ಅವರ ಲಭ್ಯತೆಯನ್ನು ನಂತರ ನಿರ್ಧರಿಸಲಾಗುತ್ತದೆ. ಸಮಯಕ್ಕೆ ಸರಿಯಾಗಿ ಸ್ಯಾಂಟ್ನರ್ ಫಿಟ್ ಆಗದಿದ್ದರೆ, ಅವರು ಇಂಗ್ಲೆಂಡ್ ಸರಣಿಯನ್ನು ಸಹ ತಪ್ಪಿಸಿಕೊಳ್ಳಬಹುದು.
ಟಿ20 ವಿಶ್ವಕಪ್ ನಂತರ ವೈಯಕ್ತಿಕ ಕಾರಣಗಳಿಗಾಗಿ ಕ್ರಿಕೆಟ್​ನಿಂದ ದೂರ ಉಳಿದಿದ್ದ34 ವರ್ಷದ ಸ್ಯಾಂಟ್ನರ್ ಸಾಕಷ್ಟು ತಡವಾಗಿ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡಿದ್ದರು. ಮುಂಬೈ ಪರ ನಾಲ್ಕು ಪಂದ್ಯಗಳನ್ನು ಆಡಿದ್ದ ಸ್ಯಾಂಟ್ನರ್ ಐದು ವಿಕೆಟ್‌ಗಳನ್ನು ಪಡೆದು 26 ರನ್‌ ಕೂಡ ಕಲೆಹಾಕಿದ್ದರು.

18 ಎಸೆತಗಳಲ್ಲಿ 10 ಬೌಂಡರಿ, ಸಿಕ್ಸರ್‌..! ವಿಂಡೀಸ್ ವಿರುದ್ಧ ಸ್ಯಾಂಟ್ನರ್ ಏಕಾಂಗಿ ಹೋರಾಟ ವ್ಯರ್ಥ

ಸ್ಯಾಂಟ್ನರ್ ಗಾಯವು ನ್ಯೂಜಿಲೆಂಡ್ ಕ್ರಿಕೆಟ್‌ಗೆ ದೊಡ್ಡ ಆಘಾತ ನೀಡಿದೆ. ಏಕೆಂದರೆ ಅವರು ವೈಟ್-ಬಾಲ್ ಸ್ವರೂಪದಲ್ಲಿ ಪ್ರಮುಖ ಆಲ್‌ರೌಂಡರ್ ಮತ್ತು ನಾಯಕರಾಗಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ತಂಡವು ಈಗ ತನ್ನ ಯೋಜನೆಯನ್ನು ಬದಲಾಯಿಸಬೇಕಾಗುತ್ತದೆ. ಇತ್ತೀಚೆಗೆ, ಸ್ಯಾಂಟ್ನರ್ ನಾಯಕತ್ವದಲ್ಲಿ ನ್ಯೂಜಿಲೆಂಡ್ ಟಿ20 ವಿಶ್ವಕಪ್‌ನ ಫೈನಲ್ ತಲುಪಿತ್ತು. ಇದೀಗ ಗಾಯದಿಂದ ಬಳಲುತ್ತಿರುವ ಸ್ಯಾಂಟ್ನರ್ ಜುಲೈನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಏಕದಿನ ಮತ್ತು ಟಿ20 ಸರಣಿಗೆ ಲಭ್ಯವಾಗುವ ನಿರೀಕ್ಷೆಯಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಳೆ ಬಂದು ನಿಂತರೂ 2 ದಿನದಿಂದ ನಡೆಯುತ್ತಲೇ ಇದೆ ಅಂಡರ್ ಪಾಸ್ ಕ್ಲೀನ್ ಕಾರ್ಯ – Kannada News | KR Circle underpass Closed from Two days Over heavy Rain in Bengaluru

ಬೆಂಗಳೂರು, (ಮೇ 01): ಮೊನ್ನೆ ಅಂದರೆ ಏಪ್ರಿಲ್ 29ರಂದು ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆ ಭಾರೀ ಅವಾಂತರ ಸೃಷ್ಟಿಸಿದೆ. ವಿದ್ಯುತ್ ಕಂಬಗಳು, ಗಿಡ-ಮರಗಳು ಮುರಿದು ಬಿದ್ದಿವೆ. ಇನ್ನು ಮಳೆಯಿಂದಾಗಿ ಕೆಸರು ಹಾಗೂ ಬೃಹತ್ ಪ್ರಮಾಣದ ಎಲೆಗಳ ರಾಶಿ ತುಂಬಿಕೊಂಡಿರುವುದರಿಂದ KR ಸರ್ಕಲ್ ಅಂಡರ್ ಪಾಸ್ ವಾಹನಗಳ ಸಂಚಾರಕ್ಕೆ ಮುಕ್ತವಾಗಿಲ್ಲ. ಎರಡು ದಿನಗಳಿಂದ ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಲಾಗಿದ್ದು, ನಿಧಾನಗತಿಯಲ್ಲಿ ಸ್ವಚ್ಛತಾ ಕಾರ್ಯ ನಡೆದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಇದು ಆಡಳಿತವಲ್ಲ, ಸಂಘಟಿತ ಲೂಟಿ: ಸಿಲಿಂಡರ್ ದರ ಏರಿಕೆ ವಿರುದ್ಧ ಸಿದ್ದರಾಮಯ್ಯ ಕಿಡಿ – Kannada News | Cm Siddaramaiah sparks on Central Government Over Commercial LPG Price Hike

ಸಿಎಂ ಸಿದ್ದರಾಮಯ್ಯImage Credit source: x.com/siddaramaiah

ಬೆಂಗಳೂರು, ಮೇ​ 01: ದೇಶಾದ್ಯಂತ ಕಮರ್ಷಿಯಲ್ ಸಿಲಿಂಡರ್ ದರ ಏರಿಕೆ ವಿಚಾರ ಸದ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ರಾಜ್ಯದ ಹೋಟೆಲ್ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೀಗ ಸಿಎಂ ಸಿದ್ದರಾಮಯ್ಯ (Siddaramaiah) ಕೇಂದ್ರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದು ಆಡಳಿತವಲ್ಲ, ಇದು ಸಂಘಟಿತ ಲೂಟಿ. ಚುನಾವಣೆಯ ಸಮಯದಲ್ಲಿ ಜನರನ್ನು ದಾರಿ ತಪ್ಪಿಸುವುದು ಮತ್ತು ನಂತರ ಅವರ ಮೇಲೆ ಹೊರೆ ಹಾಕುವುದು ಪ್ರಧಾನಿ ನರೇಂದ್ರ ಮೋದಿ (Narendra Modi) ಮಾದರಿ ಎಂದು ಸಿಎಂ ವಾಗ್ದಾಳಿ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ನಾವು ಮೊದಲೇ ಎಚ್ಚರಿಸಿದಂತೆ, ಚುನಾವಣೆಗಳು ಮುಗಿಯುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಮತ್ತೊಮ್ಮೆ ಬೆಲೆಯನ್ನು ಏರಿಕೆ ಮಾಡಿದೆ. ಚುನಾವಣೆಗಳ ಅವಧಿಯಲ್ಲಿ ದರ ಏರಿಕೆಯನ್ನು ಉದ್ದೇಶಪೂರ್ವಕವಾಗಿ ತಡೆಹಿಡಿದಿದ್ದ ಸರ್ಕಾರ, ಮೇ 1 ರಂದು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 993 ರೂ ರಷ್ಟು ಹೆಚ್ಚಿಸಿದೆ. ಇದರಿಂದ ಈಗ ಒಂದು ಸಿಲಿಂಡರ್ ಬೆಲೆ 3,071.50 ರೂ.ಕ್ಕೆ ತಲುಪಿದೆ ಎಂದರು.

ಸಿಎಂ ಸಿದ್ದರಾಮಯ್ಯ ಟ್ವೀಟ್​

ಕೇವಲ 4 ತಿಂಗಳಲ್ಲಿ, ಮೋದಿ ಸರ್ಕಾರವು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಆರು ಬಾರಿ ಹೆಚ್ಚಿಸಿದೆ, ಇದರಿಂದ ಸಾಮಾನ್ಯ ಜನರ ಮೇಲೆ 1,518ರೂ ರಷ್ಟು ಹೆಚ್ಚುವರಿ ಹೊರೆ ಬಿದ್ದಿದೆ. ಜಾಗತಿಕವಾಗಿ ಸಮಸ್ಯೆ ಬಂದಾಗ ದೇಶದ ಜನರನ್ನ ರಕ್ಷಿಸುವ ಬದಲು, ಮೋದಿ ದೇಶದ ಜನರ ಮೇಲೆ ಹೊರೆ ಹಾಕುತ್ತಿದ್ದಾರೆ ಎಂದು ಸಿಎಂ ಹರಿಹಾಯ್ದಿದ್ದಾರೆ.

ಇದನ್ನೂ ಓದಿ: ಸಿಲಿಂಡರ್ ಬೆಲೆ ಏರಿಕೆ ವಿರುದ್ಧ ಸಿಡಿದೆದ್ದ ಹೋಟೆಲ್ ಮಾಲೀಕರ ಸಂಘ: ಗ್ರಾಹಕರ ಸಂಖ್ಯೆ ಇಳಿಕೆ ಆತಂಕ

ಟೊಳ್ಳಾದ ವಿದೇಶಾಂಗ ನೀತಿ ನಮ್ಮ ಆರ್ಥಿಕತೆ ರಕ್ಷಿಸಲು ವಿಫಲವಾಗಿದೆ. ಈಗ ಸಾಮಾನ್ಯ ಭಾರತೀಯರು ಅದಕ್ಕೆ ಬೆಲೆಯನ್ನು ಪಾವತಿಸುತ್ತಿದ್ದಾರೆ. ಈ ಹೆಚ್ಚಳವು ಕೇವಲ ವ್ಯವಹಾರಗಳ ಮೇಲೆ ಪರಿಣಾಮ ಬೀರುವುದಿಲ್ಲ, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಸಣ್ಣ ತಿನಿಸುಗಳು ಹಾಗೂ ಅಡುಗೆ ಸೇವೆಗಳು ಬೆಲೆಗಳನ್ನು ಹೆಚ್ಚಿಸಲು ಒತ್ತಾಯಿಸಲ್ಪಡುತ್ತವೆ ಎಂದಿದ್ದಾರೆ.

ಇದು ಕಾರ್ಮಿಕ ವರ್ಗಕ್ಕೆ ಪ್ರಧಾನಿ ಮೋದಿ ನೀಡಿರುವ ಉಡುಗೊರೆ ಎಂದ ಸಿಎಂ

ಇದು ದೈನಂದಿನ ಆಹಾರವನ್ನು ಮತ್ತಷ್ಟು ದುಬಾರಿಯನ್ನಾಗಿ ಮಾಡುತ್ತದೆ. ಕಾರ್ಮಿಕ ವರ್ಗ, ಸಣ್ಣ ವ್ಯಾಪಾರಿಗಳು ಹೆಚ್ಚು ತೊಂದರೆ ಅನುಭವಿಸ್ತಾರೆ. 1 ಕಪ್ ಚಹಾದಿಂದ ಹಿಡಿದು ಸಣ್ಣಪುಟ್ಟ ತಿಂಡಿ ಸಹ ದುಬಾರಿಯಾಗುತ್ತೆ, ಎಂತಹ ಕ್ರೂರ ಪರಿಸ್ಥಿತಿ ನೋಡಿ. ಕಾರ್ಮಿಕ ದಿನದಂದು, ಇದು ಕಾರ್ಮಿಕ ವರ್ಗಕ್ಕೆ ಪ್ರಧಾನಿ ಮೋದಿ ನೀಡಿರುವ ಉಡುಗೊರೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಕಮರ್ಷಿಲ್ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಿಂದ ಕಾಫಿ ಬೆಲೆ ಗಗನಕ್ಕೇರುತ್ತಾ?

ಇದು ಕೇವಲ ಆರಂಭವಷ್ಟೇ, ಇಂತಹ ಇನ್ನೂ ಅನೇಕ ಏರಿಕೆಗಳು ಮುಂದಿನ ದಿನಗಳಲ್ಲಿ ಬರಲಿವೆ ಮತ್ತು ಆ ಹೊರೆಯನ್ನು ನಾಗರಿಕರ ಮೇಲೆಯೇ ಹಾಕಲಾಗುತ್ತದೆ. ಇದು ಮೋದಿ ಮಾದರಿ, ಚುನಾವಣೆ ಸಮಯದಲ್ಲಿ ಜನರನ್ನು ದಾರಿ ತಪ್ಪಿಸುವುದು, ಮತ್ತು ನಂತರ ಅವರ ಮೇಲೆ ಹೊರೆ ಹಾಕುವುದು ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ಮಾಡಿದ್ದಾರೆ.

ವರದಿ: ಈರಣ್ಣ ಬಸವ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 4:14 pm, Fri, 1 May 26

Source link

ಎಕ್ಸಿಟ್ ಪೋಲ್ ಬೆನ್ನಲ್ಲೇ ಬಾಂಗ್ಲಾದೇಶಕ್ಕೆ ನಡುಕ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ನಮಗೆ ಉಳಿಗಾಲ ಇಲ್ಲ ಎಂದ ಬಾಂಗ್ಲಾ ಸಂಸದ – Kannada News | Dhaka Warns of Illegal Migrant Influx if BJP Forms Govt in West Bengal Elections

ಢಾಕಾ, ಮೇ.1: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ಬಾಂಗ್ಲಾದೇಶದ ಸಂಸತ್ತಿನಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಢಾಕಾ ದೊಡ್ಡ ಮಟ್ಟದ ನಿರಾಶ್ರಿತರ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ ಎಂದು ಬಾಂಗ್ಲಾದೇಶದ ಎನ್‌ಸಿಪಿ (NCP) ಸದಸ್ಯ ಕಾರ್ಯದರ್ಶಿ ಅಖ್ತರ್ ಹೊಸೈನ್ ಆತಂಕ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚಿಸಿದರೆ, ಅಲ್ಲಿರುವ ಬಾಂಗ್ಲಾದೇಶಿ ನಿವಾಸಿಗಳನ್ನೆಲ್ಲ ಮರಳಿ ಕಳುಹಿಸಲಾಗುತ್ತದೆ ಎಂದು ಹೊಸೈನ್ ಪ್ರತಿಪಾದಿಸಿದ್ದಾರೆ. “ಎಕ್ಸಿಟ್ ಪೋಲ್‌ಗಳಲ್ಲಿ ಬಿಜೆಪಿ ಗೆಲ್ಲುವ ಮುನ್ಸೂಚನೆ ಸಿಕ್ಕರೆ ಅಥವಾ ಅಲ್ಲಿ ಬಿಜೆಪಿ ಸರ್ಕಾರ ರಚನೆಯಾದರೆ, ಅವರು ಎಲ್ಲಾ ಬಾಂಗ್ಲಾದೇಶಿಗಳನ್ನು ಮರಳಿ ನಮ್ಮ ದೇಶಕ್ಕೆ ತಳ್ಳುತ್ತಾರೆ. ಇದು ನಮಗೆ ದೊಡ್ಡ ನಿರಾಶ್ರಿತರ ಬಿಕ್ಕಟ್ಟನ್ನು ಸೃಷ್ಟಿಸಲಿದೆ,” ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಅಕ್ರಮ ವಲಸಿಗರನ್ನು ಢಾಕಾದ ಕಡೆಗೆ ತಳ್ಳುವ ಸಾಧ್ಯತೆ ಇರುವುದರಿಂದ ಎಲ್ಲಾ ಪಕ್ಷಗಳು ಒಗ್ಗೂಡಿ ನಿಲ್ಲಬೇಕು ಎಂದು ಅವರು ಕರೆ ನೀಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಿಧಿ ಆಸೆಗಾಗಿ ಹೆತ್ತ ತಾಯಿಯನ್ನೇ ಬಲಿ ಕೊಡಲು ಹೊರಟ ಪುತ್ರ: ಮಾಟಗಾರ ಎಸ್ಕೇಪ್​​, ಓರ್ವನ ಬಂಧನ – Kannada News | Son Arrested for Attempting to Sacrifice 80 Year Old Mother for Treasure in Chamarajanagar

ಚಾಮರಾಜನಗರ, ಮೇ 01: ನಿಧಿ ಆಸೆಗಾಗಿ ಹೆತ್ತ ತಾಯಿಯನ್ನೇ ಪಾಪಿ ಪುತ್ರನೋರ್ವ ಬಲಿ ಕೊಡಲು ಮುಂದಾಗಿದ್ದ ಆಘಾತಕಾರಿ ಘಟನೆ ಚಾಮರಾಜನಗರ ತಾಲೂಕಿನ ಸಾಗಡೆ ಗ್ರಾಮದಲ್ಲಿ ನಡೆದಿದೆ. ಇಂದು (ಮೇ 1) ಹುಣ್ಣಿಮೆ ಹಿನ್ನೆಲೆಯಲ್ಲಿ ಬಲಿ ಕೊಟ್ಟರೆ ನಿಧಿ ಸಿಗುತ್ತೆಂದು ಸ್ಕೆಚ್ ಹಾಕಿದ್ದ ಕೊಂಡಯ್ಯನ ಮಾದಶೆಟ್ಟಿ, 80 ವರ್ಷದ ಕಣ್ಣು ಕಾಣದ ಮತ್ತು ಕಿವಿ ಕೇಳದ ತಾಯಿ ಮಾದಮ್ಮಶೆಟ್ಟಿಯನ್ನು ಬಲಿ ಕೊಡಲು ಸಿದ್ಧತೆ ನಡೆಸಿದ್ದ. ಬೆಳಗ್ಗೆ ತನ್ನ ಮನೆಯಲ್ಲೇ 4 ಅಡಿ ಗುಂಡಿ ತೆಗೆದು ಮಾಟದ ಮಡಕೆ ಇಟ್ಟು ಲಿಂಬೆಹಣ್ಣು, ಅರಿಶಿನ ಕುಂಕುಮ ಹಾಗೂ ಕಳಸವಿಟ್ಟು ಪೂಜೆ ಮಾಡಿದ್ದ. ಈ ಬಗ್ಗೆ ಅನುಮಾನಗೊಂಡು ಅಕ್ಕಪಕ್ಕದ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮನೆಗೆ ಪೊಲೀಸರು ಬರ್ತಿದ್ದಂತೆ ಮಾಟಗಾರ ಎಸ್ಕೇಪ್ ಆಗಿದ್ದು, ಮಾದಶೆಟ್ಟಿಯನ್ನು ಬಂಧಿಸಲಾಗಿದೆ. ನಿಧಿಗಾಗಿ ಮಾಟ ಮಾಡಿದ ವಿಚಾರ ತಿಳಿದು ಸಾಗಡೆ ಗ್ರಾಮಸ್ಥರು ಬೆಚ್ಚಿಬಿದ್ದಿದ್ದು, ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಅಂತ್ಯಕ್ರಿಯೆ ನಡೆಯುತ್ತಿದ್ದಾಗ ಬಂದ ಫೋನ್​ನಿಂದ ಬಯಲಾಯ್ತು ಮಹಿಳೆಯ ಸಾವಿನ ರಹಸ್ಯ – Kannada News | Uttar Pradesh Woman’s digital arrest trail revealed after her phone rang during cremation

ನೊಯ್ಡಾ, ಮೇ 1: ಕಾನೂನು ಜಾರಿ ಅಧಿಕಾರಿಗಳಂತೆ ನಟಿಸಿ ಸೈಬರ್ ವಂಚಕರು ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ 28 ವರ್ಷದ ಮಹಿಳೆಯನ್ನು ಕಿರುಕುಳ, ಬ್ಲ್ಯಾಕ್‌ಮೇಲ್ ಮತ್ತು ಡಿಜಿಟಲ್ ಬಂಧನದ (digital arrest) ಬೆದರಿಕೆ ಹಾಕಿದ್ದರು. ಆಕೆ ಇದಾದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದರು. ಆಕೆಯ ಅಂತ್ಯಕ್ರಿಯೆಯ ಸಿದ್ಧತೆಗಳ ಸಮಯದಲ್ಲಿ ಅವರ ಫೋನ್‌ಗೆ ಪದೇ ಪದೇ ವಾಟ್ಸಾಪ್ ಕರೆಗಳು ಬಂದಾಗ ಈ ವಂಚನೆ ಬೆಳಕಿಗೆ ಬಂದಿತು ಎಂದು ಪೊಲೀಸರು ತಿಳಿಸಿದ್ದಾರೆ.

ಫರೀದ್‌ಪುರ ಭೋಗಿ ಗ್ರಾಮದ ನಿವಾಸಿ ಮೋನಿಕಾ ದೇವಿ ಸೋಮವಾರ ರಾತ್ರಿ ತನ್ನ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದು, 9 ಮತ್ತು 11 ವರ್ಷ ವಯಸ್ಸಿನ ಇಬ್ಬರು ಹೆಣ್ಣುಮಕ್ಕಳು ಅವರ ಹತ್ತಿರದಲ್ಲಿಯೇ ಮಲಗಿದ್ದರು. ಮರುದಿನ ಅವರು ಎದ್ದಾಗ ಅಮ್ಮ ನೇಣು ಹಾಕಿಕೊಂಡಿರುವುದನ್ನು ನೋಡಿ ಮಕ್ಕಳು ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಿದರು.

ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ಸೈಬರ್ ಅಪರಾಧದ ಈ ಭಯಾನಕ ಪ್ರಕರಣ ಬೆಳಕಿಗೆ ಬಂದಿದೆ. ಅಲ್ಲಿ ಮಹಿಳೆಯ ಅಂತ್ಯಕ್ರಿಯೆ ನಡೆಯುತ್ತಿದ್ದಾಗಲೂ ಆಕೆಯ ಫೋನ್ ರಿಂಗಣಿಸುತ್ತಲೇ ಇತ್ತು. ಮೋನಿಕಾ ಪ್ರಕರಣವು ಬೆದರಿಕೆ, ಕಿರುಕುಳ, ಆನ್‌ಲೈನ್ ವಂಚನೆ ಮತ್ತು ತಿಂಗಳುಗಳ ಡಿಜಿಟಲ್ ಬಂಧನದ ಗೊಂದಲದ ಹಾದಿಯನ್ನು ಬಹಿರಂಗಪಡಿಸಿದೆ.

ಇದನ್ನೂ ಓದಿ: 2-3 ಗಂಟೆಗಳಲ್ಲಿ ಸಿಮ್ ಕಾರ್ಡ್ ಬ್ಲಾಕ್, ಡಿಜಿಟಲ್ ಅರೆಸ್ಟ್ ತಡೆಯಲು ಸಂಪೂರ್ಣ ಸಿದ್ಧತೆ, ವಾಟ್ಸ್ಆ್ಯಪ್​ನಿಂದಲೂ ಕ್ರಮ

ಏಪ್ರಿಲ್ 27 ಮತ್ತು 28ರ ಮಧ್ಯರಾತ್ರಿ ಮೋನಿಕಾ ಆತ್ಮಹತ್ಯೆ ಮಾಡಿಕೊಂಡರು. 8 ಮತ್ತು 11 ವರ್ಷ ವಯಸ್ಸಿನ ಇಬ್ಬರು ಹೆಣ್ಣುಮಕ್ಕಳು ಪಕ್ಕದಲ್ಲಿ ಮಲಗಿದ್ದಾಗ ಅವರು ತಮ್ಮ ಮನೆಯ ಕೋಣೆಯಲ್ಲಿ ದುಪಟ್ಟಾ ಬಳಸಿ ನೇಣು ಬಿಗಿದುಕೊಂಡಿದ್ದರು. ಮರುದಿನ ಬೆಳಿಗ್ಗೆ, ಅವರ ಮಕ್ಕಳು ಎಚ್ಚರವಾದಾಗ ಅವರ ತಾಯಿ ನೇಣು ಬಿಗಿದುಕೊಂಡಿರುವುದನ್ನು ಕಂಡರು. ಆದರೆ, ಬಿಜ್ನೋರ್‌ನ ಫರೀದ್‌ಪುರ ಭೋಗಿ ಗ್ರಾಮದಲ್ಲಿ 28 ವರ್ಷದ ಮಹಿಳೆಯ ಆತ್ಮಹತ್ಯೆಯನ್ನು ಪೊಲೀಸರಿಗೆ ತಿಳಿಸಿರಲಿಲ್ಲ.

ಆಕೆಯ ಅಂತ್ಯಕ್ರಿಯೆಯ ಸಮಯದಲ್ಲಿ ಮೋನಿಕಾ ಅವರ ಫೋನ್ ರಿಂಗ್ ಆಗಿತ್ತು. ಇದಾದ ನಂತರ ಅವರ ಕುಟುಂಬದ ಸದಸ್ಯರಿಗೆ ಮೋನಿಕಾ ಅವರನ್ನು ಬಲವಂತವಾಗಿ ಸಾಯಿಸಲಾಗಿದೆ ಮತ್ತು ಮಹಿಳೆಗೆ ಕರೆ ಮಾಡುತ್ತಲೇ ಇದ್ದ ವ್ಯಕ್ತಿಯೊಬ್ಬರು ಅವರನ್ನು ಡಿಜಿಟಲ್ ರೂಪದಲ್ಲಿ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಡಿಜಿಟಲ್ ಅರೆಸ್ಟ್ ಎಂದು ಯಾಮಾರಿಸಿ ವೃದ್ಧ ಉದ್ಯಮಿಯ 15 ಕೋಟಿ ರೂ. ಎಗರಿಸಿದ್ರು!

ಮೋನಿಕಾ ಆತ್ಮಹತ್ಯೆಯ ನಂತರ, ಅವರ ಕುಟುಂಬವು ಏನೋ ಅಸಾಮಾನ್ಯವಾದುದನ್ನು ಅನುಮಾನಿಸಿತ್ತು. ಆದರೂ ಅದನ್ನು ಎಲ್ಲೂ ಹೇಳಲಾಗದೆ ಕುಟುಂಬವು ಮೋನಿಕಾ ಅವರ ಅಂತ್ಯಕ್ರಿಯೆಯೊಂದಿಗೆ ಮುಂದಾಯಿತು. ಪೊಲೀಸರಿಗೆ ಸಹ ಮಾಹಿತಿ ನೀಡಿರಲಿಲ್ಲ. ಆದರೆ, ಅಂತ್ಯಕ್ರಿಯೆಯ ಸಮಯದಲ್ಲಿ ಮೋನಿಕಾ ಅವರ ಮೊಬೈಲ್ ಫೋನ್ ಪದೇ ಪದೇ ರಿಂಗ್ ಆದ ನಂತರ ಹೊಸ ನಿಗೂಢ ವಿವರಗಳು ಹೊರಬಿದ್ದವು.

ಮೋನಿಕಾ ಸಾವಿನ ಬಳಿಕವೂ ವಾಟ್ಸಾಪ್​ನಲ್ಲಿ ಫೋನ್ ಬಂದ ನಂತರ ಮೋನಿಕಾ ಅವರ ಸೋದರಳಿಯ ಸನ್ಯೋಗ್ ಒಂದು ಕಾಲ್ ಎತ್ತಿದ್ದರು. ಆಗ ಪೊಲೀಸ್ ಯೂನಿಫಾರಂ ಧರಿಸಿದ ಒಬ್ಬ ವ್ಯಕ್ತಿ ವಿಡಿಯೋ ಕಾಲ್ ಮಾಡಿದ್ದ. ಆತ ತಾನು ಕ್ರೈಮ್ ಬ್ರಾಂಚ್ ಅಧಿಕಾರಿ ಎಂದು ಹೇಳಿಕೊಂಡು, ಮೋನಿಕಾ ಅವರೊಂದಿಗೆ ಮಾತನಾಡಬೇಕು ಎಂದಿದ್ದ. ಆಕೆ ಇಲ್ಲ ಎಂದು ಹೇಳಿದಾಗ ಬೆದರಿಕೆ ಹಾಕಿದ್ದ. ಮೋನಿಕಾ ಸಾವನ್ನಪ್ಪಿದ್ದಾಳೆ ಎಂದು ಆ ವ್ಯಕ್ತಿಗೆ ತಿಳಿಸಿದ ನಂತರ ನಂತರ, ಆ ವ್ಯಕ್ತಿ ಮೋನಿಕಾ ಅವರ ಪತಿಗೆ ಬೆದರಿಕೆ ಹಾಕಿದ್ದ. ಇದು ಅನುಮಾನ ಹುಟ್ಟುಹಾಕಿತ್ತು. ಬಳಿಕ ಪೊಲೀಸರು ತನಿಖೆ ನಡೆಸತೊಡಗಿದರು.

ಆಗ ಮೋನಿಕಾ ತಮ್ಮ ಡೈರಿಯಲ್ಲಿ ಬರೆದ ಸೂಸೈಡ್ ನೋಟ್​​​ನಲ್ಲಿ ತಮ್ಮನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಮತ್ತು ಬೆದರಿಕೆ ಹಾಕುತ್ತಿದ್ದ ಅಪರಿಚಿತರಿಂದ ಆಗುತ್ತಿದ್ದ ನಿರಂತರ ಕಿರುಕುಳದ ಬಗ್ಗೆ ಮೋನಿಕಾ ಬರೆದಿದ್ದರು. ಆ ಕುಟುಂಬವು ಮೋನಿಕಾಳ ಫೋನ್ ಅನ್ನು ಸ್ಕ್ಯಾನ್ ಮಾಡಿದಾಗ ಹಲವಾರು ವಾಟ್ಸಾಪ್ ಕರೆಗಳು, ಮೆಸೇಜ್​ಗಳು ಮತ್ತು ಆಡಿಯೊ ಕ್ಲಿಪ್‌ಗಳು ಹೊರಬಂದವು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸ್ಟಾರ್ ನಟಿಯರ ಜೊತೆ ‘ತುಂಬಾಡ್ 2’ ಚಿತ್ರತಂಡದ ಮಾತುಕಥೆ; ಹೆಚ್ಚಾಗಿದೆ ನಿರೀಕ್ಷೆ – Kannada News | Who is the lead actress in Tumbbad 2 Priyanka Chopra Katrina Kaif Alia Bhatt Nayanthara

2018ರಲ್ಲಿ ಬಿಡುಗಡೆಯಾದ ‘ತುಂಬಾಡ್’ (Tumbbad) ಸಿನಿಮಾ ಬಾಲಿವುಡ್ ಚಿತ್ರರಂಗದಲ್ಲೇ ಒಂದು ವಿಶಿಷ್ಟ ಪ್ರಯೋಗವಾಗಿತ್ತು. ರಾಹಿ ಅನಿಲ್ ಬಾರ್ವೆ ಮತ್ತು ಆನಂದ್ ಗಾಂಧಿ ನಿರ್ದೇಶನದ ಈ ಜಾನಪದ ಹಿನ್ನೆಲೆಯ ಹಾರರ್ ಥ್ರಿಲ್ಲರ್ ಸಿನಿಮಾ ಮೊದಲು ಬಿಡುಗಡೆಯಾದಾಗ ಬಾಕ್ಸ್ ಆಫೀಸ್‌ನಲ್ಲಿ ಅಷ್ಟಾಗಿ ಸದ್ದು ಮಾಡಿರಲಿಲ್ಲ. ಆದರೆ, 2024ರಲ್ಲಿ ಮರು ಬಿಡುಗಡೆ ಆದಾಗ ಈ ಸಿನಿಮಾ ದಾಖಲೆ ಮಟ್ಟದ ಕಲೆಕ್ಷನ್ ಮಾಡಿ ಎಲ್ಲರನ್ನೂ ಅಚ್ಚರಿಗೊಳಿಸಿತು. ಈ ಭರ್ಜರಿ ಯಶಸ್ಸಿನ ಬೆನ್ನಲ್ಲೇ ಈಗ ಚಿತ್ರತಂಡ ಸೀಕ್ವೆಲ್ (Tumbbad 2) ತಯಾರಿಗೆ ಸಜ್ಜಾಗಿದೆ.

‘ತುಂಬಾಡ್’ ಮೊದಲ ಭಾಗದಲ್ಲಿ ಬಹುತೇಕ ಹೊಸ ಮುಖಗಳೇ ಕಾಣಿಸಿಕೊಂಡಿದ್ದವು. ಆದರೆ ಎರಡನೇ ಭಾಗದ ಮೇಲೆ ನಿರೀಕ್ಷೆಗಳು ಹೆಚ್ಚಿರುವುದರಿಂದ, ಈ ಬಾರಿ ದೊಡ್ಡ ತಾರಾಗಣವನ್ನು ಕರೆತರಲು ನಿರ್ಮಾಪಕರು ನಿರ್ಧರಿಸಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ, ಚಿತ್ರದ ಪ್ರಮುಖ ಪಾತ್ರಕ್ಕಾಗಿ ಬಾಲಿವುಡ್‌ನ ಟಾಪ್ ನಟಿಯರಾದ ಪ್ರಿಯಾಂಕಾ ಚೋಪ್ರಾ, ಕತ್ರಿನಾ ಕೈಫ್, ಆಲಿಯಾ ಭಟ್ ಅಥವಾ ದಕ್ಷಿಣದ ಲೇಡಿ ಸೂಪರ್ ಸ್ಟಾರ್ ನಯನತಾರಾ ಅವರ ಹೆಸರುಗಳನ್ನು ಪರಿಗಣಿಸಲಾಗುತ್ತಿದೆ ಎನ್ನಲಾಗಿದೆ.

ಈ ಸ್ಟಾರ್ ನಟಿಯರಲ್ಲಿ ಯಾರಾದರೂ ಒಬ್ಬರು ಚಿತ್ರತಂಡಕ್ಕೆ ಸೇರಿದರೆ, ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡ ಕ್ರೇಜ್ ಸೃಷ್ಟಿಸುವುದರಲ್ಲಿ ಸಂಶಯವಿಲ್ಲ. ಆದರೆ ಈ ನಾಲ್ವರಲ್ಲಿ ಯಾರು ಈ ಚಾನ್ಸ್ ಗಿಟ್ಟಿಸಿಕೊಳ್ಳಲಿದ್ದಾರೆ ಎಂಬುದು ಇನ್ನು ಕುತೂಹಲವಾಗಿಯೇ ಉಳಿದಿದೆ. ಈಗಾಗಲೇ ಸೀಕ್ವೆಲ್‌ನಲ್ಲಿ ಪ್ರತಿಭಾವಂತ ನಟ ನವಾಜುದ್ದೀನ್ ಸಿದ್ದಿಕಿ ಅವರು ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿರುವುದು ಖಚಿತವಾಗಿದೆ.

ಮೊದಲ ಭಾಗದ ಚಿತ್ರಕಥೆಯಲ್ಲಿ ಕೆಲಸ ಮಾಡಿದ್ದ ಆದೇಶ್ ಪ್ರಸಾದ್ ಈ ಬಾರಿ ಸೀಕ್ವೆಲ್ ಅನ್ನು ನಿರ್ದೇಶಿಸಲಿದ್ದಾರೆ. ‘ಮೊದಲ ಭಾಗದ ಆತ್ಮ ಮತ್ತು ಕಥೆಯ ಮೂಲವನ್ನು ಹಾಗೆಯೇ ಉಳಿಸಿಕೊಂಡು, ಸೀಕ್ವೆಲ್ ಅನ್ನು ಮತ್ತಷ್ಟು ರೋಚಕವಾಗಿ ಮತ್ತು ಭಯಾನಕವಾಗಿ ರೂಪಿಸಲಾಗುವುದು’ ಎಂದು ಅವರು ಭರವಸೆ ನೀಡಿದ್ದಾರೆ. ಆ ಕಾರಣದಿಂದಾಗಿ ‘ತುಂಬಾಡ್ 2’ ಮೇಲೆ ನಿರೀಕ್ಷೆ ಹೆಚ್ಚಿದೆ.

ಇದನ್ನೂ ಓದಿ: ಬರ್ತಿದೆ ‘ತುಂಬಾಡ್ 2’ ಸಿನಿಮಾ; ಖಳನಾಗಿ ಅಕ್ಷಯ್ ಖನ್ನಾ ಎಂಟ್ರಿ?

ಒಟ್ಟಿನಲ್ಲಿ, ‘ತುಂಬಾಡ್’ ಸೀಕ್ವೆಲ್ ದೊಡ್ಡ ಕ್ಯಾನ್ವಾಸ್‌ನಲ್ಲಿ ನಿರ್ಮಾಣವಾಗುತ್ತಿದ್ದು, ಯಾವ ನಟಿ ಈ ಹಾರರ್ ಲೋಕಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ಸದ್ಯಕ್ಕೆ ಈ ಸ್ಟಾರ್ ನಟಿಯರ ಆಯ್ಕೆ ಪ್ರಕ್ರಿಯೆ ಚಾಲ್ತಿಯಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link